Headlines

ಮಂಚದ ಕೆಳಗೆ ಈ ಕೆಲವು ವಸ್ತುಗಳನ್ನು ಇಡಲೇಬಾರದು; ಯಾಕೆ ಗೊತ್ತಾ? – Kannada News | These items should not be stored under the bed

ಹಾಸಿಗೆಯ (bed) ಕೆಳಗಿರುವ ಖಾಲಿ ಜಾಗವನ್ನು  ಯಾಕೆ ಸುಮ್ಮನೆ ಬಿಡೋದು ಎಂದು ಅನೇಕರು ಆ ಜಾಗದಲ್ಲಿ ಒಂದಷ್ಟು ವಸ್ತುಗಳನ್ನು  ಸಂಗ್ರಹಿಸಿಡಲು ಬಳಸುತ್ತಾರೆ. ಹೆಚ್ಚುವರಿ ಬೆಡ್‌ಶೀಟ್‌, ದಿಂಬು, ಬಟ್ಟೆಗಳು, ಪುಸ್ತಕಗಳು, ಆಟಿಕೆಗಳು ಮತ್ತು ರಟ್ಟಿನ ಪೆಟ್ಟಿಗೆಗಳಂತಹ ವಸ್ತುಗಳನ್ನು ಹೆಚ್ಚಾಗಿ ಮಂಚದ ಕೆಳಗೆಯೇ ಇಡಲಾಗುತ್ತದೆ. ಆದರೆ ಹೀಗೆ ವಸ್ತುಗಳನ್ನು ಸಂಗ್ರಹಿಸಿದಾಗ ಮಂಚದ ಕೆಳಗೆ ಧೂಳು, ತೇವಾಂಶ ಮತ್ತು ಜೇಡರ ಬಲೆಗಳು ಸಂಗ್ರಹವಾಗಬಹುದು. ಇದು ಕೀಟಗಳನ್ನು ಆಕರ್ಷಿಸುವುದಲ್ಲದೆ, ಈ ಧೂಳು, ತೇವಾಂಶ ಆರೋಗ್ಯದ ಮೇಲೂ ಋಣಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು. ಆದ್ದರಿಂದ…

Read More

ಈ ಸಾಧನೆ ಮಾಡಿದ ಮೊದಲ ಆಸೀಸ್ ಕ್ರಿಕೆಟಿಗ ಮಿಚೆಲ್ ಮಾರ್ಷ್​ – Kannada News | The Hundred: Mitchell Marsh Achieves 7000 T20 Runs, Becomes Top Scorer and Aussie Record Breaker

ಮಿಚೆಲ್ ಮಾರ್ಷ್​ಗಿಂತ ಮೊದಲು, ಟಿಮ್ ಡೇವಿಡ್ 2022 ರಲ್ಲಿ ಆಡಿದ 68 ಇನ್ನಿಂಗ್ಸ್‌ಗಳಲ್ಲಿ 27.67 ಸರಾಸರಿಯಲ್ಲಿ 1,461 ರನ್ ಗಳಿಸಿದ್ದರು. ಇದೀಗ ಮಾರ್ಷ್ 35 ಪಂದ್ಯಗಳಲ್ಲಿ 44.17 ಸರಾಸರಿಯಲ್ಲಿ 1502 ರನ್ ಗಳಿಸಿದ್ದಾರೆ. 160 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿರುವ ಮಾರ್ಷ್​ ಇಲ್ಲಿಯವರೆಗೆ ಎರಡು ಶತಕಗಳು ಮತ್ತು 11 ಅರ್ಧಶತಕಗಳನ್ನು ಬಾರಿಸಿದ್ದಾರೆ. Source link

Read More

ಕ್ರೆಡಿಟ್ ಸ್ಕೋರ್ ಕಡಿಮೆಯಿದ್ರೂ ನೀವು ಬ್ಯಾಂಕ್‌ನಿಂದ ಹೀಗೆ ಸಾಲ ಪಡೆಯಿರಿ – Kannada News | Credit Scores: Will the bank grant a loan even if the credit score is low?

ಕ್ರೆಡಿಟ್‌ ಸ್ಕೋರ್‌Image Credit source: Illustration by Thomas Fuller/SOPA Images/LightRocket via Getty Images ಆರ್ಥಿಕ ಸಮಸ್ಯೆ ಎದುರಾದಾಗ ಬ್ಯಾಂಕ್ (Bank Loan) ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತೇವೆ. ಆದರೆ ಸಾಲ ಪಡೆಯುವ ಮುಂಚೆ ಕಡಿಮೆ ಬಡ್ಡಿದರದಲ್ಲಿ ಎಲ್ಲಿ ಸಾಲ ಸಿಗುತ್ತದೆ ಎಂದು ನೋಡುತ್ತೇವೆ. ಅದೇ ರೀತಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಕೂಡ ಸಾಲ ಪಡೆಯುವ ವ್ಯಕ್ತಿಯ ಸಿಬಿಲ್ ಸ್ಕೋರ್ (CIBIL Score) ಎಷ್ಟಿದೆ ಎಂದು ಪರಿಶೀಲಿಸುತ್ತದೆ. ಸಿಬಿಲ್ ಸ್ಕೋರ್ 750 ಕ್ಕಿಂತ…

Read More

ಕರ್ನಾಟಕದಲ್ಲಿ ಮುಂದುವರಿದ ಮಳೆಯ ಕೊರತೆ: ಶೇ.21ರಷ್ಟು ಕಡಿಮೆ ಸುರಿದ ವರ್ಷಧಾರೆ – Kannada News | Karnataka Monsoon Deficit Persists: State Records 21 Percent Rainfall Shortfall; Bengaluru and Malnad Severely Hit

ಬೆಂಗಳೂರು, ಆಗಸ್ಟ್​​ 10: ಕಳೆದ ಒಂದು ವಾರದಿಂದ ಕರ್ನಾಟಕದ ಕೆಲವೆಡೆ ಭಾರಿ ಮಳೆಯಾಗುತ್ತಿದ್ದರೂ ರಾಜ್ಯದ ಮಳೆ ಕೊರತೆ ಮಾತ್ರ ಕಡಿಮೆಯಾಗಿಲ್ಲ. ಜೂನ್‌ 1ರಿಂದ ಆರಂಭವಾದ ಮುಂಗಾರು ಅವಧಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಬೆಂಗಳೂರು ನಗರ ಜಿಲ್ಲೆ ಅತ್ಯಂತ ಹೆಚ್ಚು ಮಳೆ ಕೊರತೆ ಎದುರಿಸುತ್ತಿರುವ ಜಿಲ್ಲೆಗಳ ಪೈಕಿ ಒಂದಾಗಿದ್ದು, ಶೇ.34ರಷ್ಟು ಕೊರತೆ ದಾಖಲಾಗಿದೆ. ಆಗಸ್ಟ್‌ 9ರವರೆಗೆ ಜಿಲ್ಲೆಯಲ್ಲಿ 127 ಮಿ.ಮೀ ಮಳೆಯಾಗಿದ್ದು, ಈ ಅವಧಿಯಲ್ಲಿ ವಾಡಿಕೆಯಂತೆ 197 ಮಿ.ಮೀ ಮಳೆಯಾಗಬೇಕಿತ್ತು. ರಾಜ್ಯದಲ್ಲಿ ಶೇ.21ರಷ್ಟು ಮಳೆ…

Read More

ಶವಸಂಸ್ಕಾರದ ಬಟ್ಟೆ ಜೊತೆಯಲ್ಲೇ ಪ್ರಯಾಣ ಮಾಡುವ ಗಾಯಕ ಲಕ್ಕಿ ಅಲಿ; ಕಾರಣ ಏನು? – Kannada News | Lucky Ali Reveals he carries Ihram Burial Cloth while travelling says prepared for death

ಪ್ರಸಿದ್ಧ ಗಾಯಕ ಲಕ್ಕಿ ಅಲಿ (Lucky Ali) ಅವರು ಇತ್ತೀಚೆಗೆ ನಡೆದ ತಮ್ಮ ಸಂಗೀತ ಕಾರ್ಯಕ್ರಮವೊಂದರಲ್ಲಿ ಸಾವಿನ ಕುರಿತು ಭಾವುಕರಾಗಿ ಮಾತನಾಡುವ ಮೂಲಕ ಅಭಿಮಾನಿಗಳ ಕಣ್ಣಾಲಿಗಳನ್ನು ತೇವಗೊಳಿಸಿದ್ದಾರೆ. ತಮ್ಮ ಸಂಗೀತದ ಮೂಲಕ ದಶಕಗಳಿಂದ ಶ್ರೋತೃಗಳ ಮನಗೆದ್ದಿರುವ 67 ವರ್ಷದ ಅವರು, ಅನಿವಾರ್ಯವಾದ ಸಾವಿಗೆ ತಾವು ಸದಾ ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ತಾವು ಪ್ರಯಾಣಿಸುವಾಗಲೆಲ್ಲಾ ಶವಸಂಸ್ಕಾರಕ್ಕೆ ಬಳಸುವ ಬಟ್ಟೆಯನ್ನು (Ihram) ಜೊತೆಯಲ್ಲೇ ಕೊಂಡೊಯ್ಯುವುದಾಗಿ ಬಹಿರಂಗಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಅಭಿಮಾನಿಗಳು ತೋರಿಸಿದ ಅಪಾರ ಪ್ರೀತಿ ಮತ್ತು ಬೆಂಬಲಕ್ಕೆ ಸ್ಪಂದಿಸುತ್ತಾ ಲಕ್ಕಿ ಅಲಿ…

Read More

ಮಕ್ಕಳು ಊಟ ಮಾಡಲ್ಲ ಅಂತ ಟೆನ್ಶನ್ ಮಾಡ್ಕೋಬೇಡಿ! ಡಾ. ಮುರಳೀಧರ ಬಲ್ಲಾಳ್ ನೀಡಿರುವ ಸರಳ ಸಲಹೆ ಅನುಸರಿಸಿ – Kannada News | 2 5 Year Old Child Not Eating Properly? Dr. Muralidhar Ballal Shares Parenting Tips

2-5 Year Old Child Not Eating Properly? Dr. Muralidhar Ballal Shares Parenting TipsImage Credit source: Getty Images ಎರಡರಿಂದ ಐದು ವರ್ಷದ ಒಳಗಿನ ಮಕ್ಕಳಿದ್ದಲ್ಲಿ ಅವರಿಗೆ ಊಟ ಮಾಡಿಸುವುದು ಒಂದು ದೊಡ್ಡ ಸಾಹಸವೇ ಸೈ. ಮಕ್ಕಳು ಊಟ ಮಾಡಲಿಕ್ಕೆ ತೀರಾ ರಗಳೆ ಮಾಡುವಂತದ್ದು ಅಥವಾ ಆಹಾರವನ್ನು ಬಾಯಲ್ಲಿ ತುಂಬಾ ಹೊತ್ತು ಇಟ್ಟುಕೊಂಡು, ಜಗಿಯದೆ ಬಾಯಲ್ಲಿಟ್ಟುಕೊಂಡು ಮತ್ತೆ, ಪೋಷಕರು ಫೋರ್ಸ್ ಮಾಡಿದ ನಂತರ ಜಗಿದು ನುಂಗುವಂತದ್ದು. ಅಥವಾ ಆಹಾರವನ್ನು ತಂದ ಕೂಡಲೇ ಓಡಿಹೋಗುವಂತದ್ದು….

Read More

IND vs SL: ಮೊದಲ ಟೆಸ್ಟ್ ನಡೆಯುವ ಗಾಲೆ ಮೈದಾನದಲ್ಲಿ ಭಾರತದ ಪ್ರದರ್ಶನ ಹೇಗಿದೆ? – Kannada News | India vs Sri Lanka 2026 Test Series – Team India’s Galle Record Analysis

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 15, 2026 ರಿಂದ ಪ್ರಾರಂಭವಾಗಲಿದೆ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯವು ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ (Galle International Cricket Stadium) ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ ರೇಸ್​ನಲ್ಲಿ ಉಳಿಯಬೇಕೆಂದರೆ ಈ ಸರಣಿಯು ಎರಡೂ ತಂಡಗಳಿಗೆ ಬಹಳ ಮುಖ್ಯವಾಗಿದೆ. ಈ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ತಂಡವು ಟಾಪ್ -4 ಗೆ ಪ್ರವೇಶಿಸುವ ಸಾಧ್ಯತೆಯಿದೆ. ಹೀಗಾಗಿ…

Read More

ಅಮೆರಿಕಕ್ಕೆ ಓದಲು ಹೋದವರಲ್ಲಿ ಶೇ. 81 ಮಂದಿ ತಾಯ್ನಾಡಿಗೆ ಬರಲು ಪ್ಲಾನ್; ಏನು ಕಾರಣ? – Kannada News | Most Indian students studying abroad plans to comeback home after studies, says Oxford International’s survey

ಹಾರ್ವರ್ಡ್ ವಿವಿ ಕ್ಯಾಂಪಸ್Image Credit source: Getty Images ವಾಷಿಂಗ್ಟನ್, ಆಗಸ್ಟ್ 10: ವಿದೇಶಗಳಿಗೆ ವ್ಯಾಸಂಗಕ್ಕೆ ಹೋಗಿರುವ ಭಾರತೀಯ ವಿದ್ಯಾರ್ಥಿಗಳ ಆದ್ಯತೆಗಳಲ್ಲಿ ಭಾರೀ ಬದಲಾವಣೆ ಕಂಡು ಬಂದಿದೆ. ಇತ್ತೀಚಿನ ವರದಿಯೊಂದರ ಪ್ರಕಾರ, ವಿದೇಶಗಳಲ್ಲಿರುವ ಶೇ. 81ರಷ್ಟು ಭಾರತೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಗಿದ ನಂತರ ಭಾರತಕ್ಕೇ ಮರಳಲು ನಿರ್ಧರಿಸಿದ್ದಾರೆ. ಆಕ್ಸ್​ಫರ್ಡ್ ಇಂಟರ್ನ್ಯಾಷನಲ್​ನ ಸ್ಟುಡೆಂಟ್ ಗ್ಲೋಬಲ್ ಮೊಬಿಲಿಟಿ ಇಂಡೆಕ್ಸ್ (Oxford International third Student Global Mobility Index) ಈ ಸಮೀಕ್ಷೆಯನ್ನು ನಡೆಸಿ ವರದಿ ಬಿಡುಗಡೆ ಮಾಡಿದೆ. ಅಮೆರಿಕಕ್ಕೆ…

Read More

ರಷ್ಯಾದ ತೈಲ ಕೇಂದ್ರದ ಮೇಲೆ ಉಕ್ರೇನ್ ಡ್ರೋನ್ ದಾಳಿ; ಮಗು ಸೇರಿ 13 ಜನ ಸಾವು – Kannada News | Ukraine drone attack kills 13 people including Child in Russias Nizhnekamsk oil hub

ಮೊಸ್ಕೋ, ಆಗಸ್ಟ್ 10: ರಷ್ಯಾದ ತಾತರ್‌ಸ್ತಾನ್ (Tatarstan) ಪ್ರದೇಶದ ನಿಜ್ನೆಕಾಮ್ಸ್ಕ್ ನಗರದ ಮೇಲೆ ಇಂದು ಉಕ್ರೇನ್ (Ukraine) ನಡೆಸಿದ ಡ್ರೋನ್ ದಾಳಿಯಲ್ಲಿ ಮಗು ಸೇರಿದಂತೆ 13 ಜನರು ಮೃತಪಟ್ಟಿದ್ದು, 75 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ರಷ್ಯಾದ (Russia) ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯ ಕುರಿತು ಉಕ್ರೇನ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾದ ಈ 4 ವರ್ಷಗಳಲ್ಲಿ ರಷ್ಯಾದ ಮೇಲೆ ಉಕ್ರೇನ್ ನಡೆಸಿದ ಅತಿ ಭೀಕರ ದಾಳಿ ಇದು…

Read More

ಕೊಡಗು: ಮಲ್ಲಳ್ಳಿ ಜಲಪಾತಕ್ಕೆ ತೆರಳುತ್ತಿದ್ದ ಪ್ರವಾಸಿಗರ ಬಸ್ ಪಲ್ಟಿ; 22ಕ್ಕೂ ಹೆಚ್ಚು ಜನರಿಗೆ ಗಾಯ – Kannada News | Kodagu: Tourist Bus Overturns Near Kumaralli, Over 22 Injured on Way to Mallalli Falls

ಕೊಡಗು, ಆಗಸ್ಟ್​​ 10: ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರಿದ್ದ ಬಸ್​ ಪಲ್ಟಿ ಆಗಿದ್ದು, 22ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಮಾರಳ್ಳಿ ಬಳಿ ನಡೆದಿದೆ. ಮಲ್ಲಳ್ಳಿ ಜಲಪಾತಕ್ಕೆ ತೆರಳುವ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಗಾಯಗೊಂಡ ಕೆಲವು ಪ್ರಯಾಣಿಕರನ್ನು ತಕ್ಷಣವೇ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. Source link

Read More