Headlines

ಜಾರ್ಖಂಡ್​​ನಲ್ಲಿ ಪರೀಕ್ಷಾ ಅಕ್ರಮ; ಸಿಐಡಿಯಿಂದ ಜೆಪಿಎಸ್‌ಸಿ ಮಾಜಿ ಅಧ್ಯಕ್ಷ ಎಲ್. ಖಿಯಾಂಗ್ತೆ ಬಂಧನ – Kannada News | Jharkhand Exam Row Former JPSC Chairman L Khiyangte arrested by CID amid student protests in Ranchi

ರಾಂಚಿ, ಆಗಸ್ಟ್ 10: ಜಾರ್ಖಂಡ್‌ನ ಉದ್ಯೋಗ ಆಕಾಂಕ್ಷಿ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ನಡುವೆ ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ (JPSC) ಮಾಜಿ ಅಧ್ಯಕ್ಷ ಎಲ್. ಖಿಯಾಂಗ್ತೆ (L. Khiangte) ಅವರನ್ನು ಸಿಐಡಿ (CID) ಅಧಿಕಾರಿಗಳು ಬಂಧಿಸಿದ್ದಾರೆ. ಜೆಪಿಎಸ್‌ಸಿ ಮತ್ತು ಜೆಎಸ್ಎಸ್‍ಸಿ (JSSC) ಉದ್ಯೋಗ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನೇಮಕಾತಿ ಪರೀಕ್ಷೆಗಳ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಐಡಿ ಎಡಿಜಿ ಮನೋಜ್ ಕೌಶಿಕ್ ಅವರು ಖಿಯಾಂಗ್ತೆ ಅವರ ಬಂಧನವನ್ನು ಖಚಿತಪಡಿಸಿದ್ದಾರೆ. “ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ…

Read More

ಆಗಸ್ಟ್ 13ರಂದು ಕರ್ನಾಟಕ ಬಂದ್ ಇರುತ್ತಾ ಇಲ್ವಾ? ವಾಟಾಳ್ ನಾಗರಾಜ್ ಹೇಳಿದ್ದಿಷ್ಟು – Kannada News | Cauvery water Dispute: Karnataka Bandh on August 13: Will It Happen or Not; Here’s What Vatal Nagaraj Said

ಬೆಂಗಳೂರು, ಆಗಸ್ಟ್​​ 10: ಕಾವೇರಿ ನದಿ ನೀರು ಹಂಚಿಕೆ ವಿವಾದ (Cauvery Dispute) ಹಿನ್ನೆಲೆ ಆಗಸ್ಟ್ 13ರಂದು ಕರ್ನಾಟಕ ಬಂದ್​​ಗೆ ಕರೆ ನೀಡಲಾಗಿತ್ತು. ಆದರೆ ಇದೀಗ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಹಲವು ಸಂಘಟನೆಗಳು ಬೆಂಬಲ ಹಿಂಪಡೆಯುತ್ತಿದ್ದು, ಬಂದ್‌ ಬಹುತೇಕ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಪಟ್ಟು ಸಡಿಲಿಸದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್​​ (Vatal Nagaraj), ‘ಬಂದ್ ಕೈಬಿಡುವ ಪ್ರಶ್ನೆಯೇ ಇಲ್ಲ, ಬಂದ್ ಮಾಡೇ ಮಾಡುತ್ತೇವೆ’ ಎಂದು ಹೇಳಿದ್ದಾರೆ. ಕರ್ನಾಟಕದ ಉದ್ದಗಲಕ್ಕೂ ಬಂದ್​ಗೆ…

Read More

ತ್ಯಾಜ್ಯ ಮುಕ್ತ ಅಭಿಯಾನ: ಖಾಲಿ ನಿವೇಶನ ಸ್ವಚ್ಛಗೊಳಿಸದ ಮಾಲೀಕರಿಗೆ ಬೀಳಲಿರುವ ದಂಡ ಎಷ್ಟು? – Kannada News | GBA Issues Strict Warning to Bengaluru Vacant Plot Owners: Clean Up by Aug 15 or Pay Heavy Penalties with Property Tax

ಖಾಲಿ ನಿವೇಶನ ಸ್ವಚ್ಛಗೊಳಿಸದ ಮಾಲೀಕರಿಗೆ ಬೀಳಲಿರುವ ದಂಡ ಎಷ್ಟು? ಬೆಂಗಳೂರು, ಆಗಸ್ಟ್​​ 10: ತ್ಯಾಜ್ಯ ಮುಕ್ತ ಅಭಿಯಾನದಡಿ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸದ ಮಾಲೀಕರ ವಿರುದ್ಧ ವಿಧಿಸಲಾಗುವ ದಂಡದ ವಿವರಗಳ ಪಟ್ಟಿಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಬಿಡುಗಡೆ ಮಾಡಿದೆ. ಆಗಸ್ಟ್‌ 15ರ ಒಳಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸದಿದ್ದರೆ, ಜಿಬಿಎ ವತಿಯಿಂದಲೇ ತ್ಯಾಜ್ಯ ಮತ್ತು ಕಟ್ಟಡ ಅವಶೇಷಗಳನ್ನು ತೆರವುಗೊಳಿಸಲಾಗುತ್ತದೆ. ಸ್ವಚ್ಛತಾ ವೆಚ್ಚದ ಜತೆಗೆ ತ್ಯಾಜ್ಯ ಸಾಗಣೆ ವೆಚ್ಚವನ್ನೂ ಸಂಬಂಧಪಟ್ಟ ನಿವೇಶನ ಮಾಲೀಕರಿಂದ ವಸೂಲಿ ಮಾಡಲಾಗುತ್ತದೆ ಎಂದು ಜಿಬಿಎ ಮುಖ್ಯ…

Read More

ದರ್ಶನ್​ಗೆ ದೊಡ್ಡ ಸಂಕಷ್ಟ; ಪ್ರದೋಷ್ ಅರ್ಜಿಗೆ ಆಕ್ಷೇಪಣೆ ಪರಿಗಣಿಸಲು ಕೋರ್ಟ್ ನಕಾರ – Kannada News | Renukaswamy Case Big Shock to Darshan as Court Rejects objection against Pradosh becoming Approver

ನಟ ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಸಂಕಷ್ಟ ಹೆಚ್ಚಾಗಿದೆ. ಈ ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ಅದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಅವಕಾಶ ಕೋರಿದ್ದರು. ಇದರ ವಿಚಾರಣೆ ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್​ನಲ್ಲಿ ನಡೆದಿದೆ. ರೇಣುಕಾಸ್ವಾಮಿ ಕೊಲೆ ಆದ ದಿನ ಏನೆಲ್ಲ ನಡೆಯಿತು ಎಂಬುದನ್ನು ನ್ಯಾಯಾಲಯದ ಮುಂದೆ ತೆರೆದಿಡಲು ಪ್ರದೋಷ್ (Pradosh) ಮುಂದಾಗಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ದರ್ಶನ್ ಪರ ವಾದವನ್ನು ಕೇಳಬೇಕಾ…

Read More

ಮಗಳ PPF ಹಣ ಹಿಂಪಡೆದ ತಂದೆ: ಬಡ್ಡಿ ಸಮೇತ ಮರಳಿಸಲು ಕೋರ್ಟ್ ಆದೇಶ; ಏನಿವೆ ಪಿಪಿಎಫ್ ನಿಯಮಗಳು? – Kannada News | Father withdraws his daughter’s PPF account, court directs him to return the corpus

ನವದೆಹಲಿ, ಆಗಸ್ಟ್ 10: ತಮ್ಮ ಮಗಳ ಹೆಸರಲ್ಲಿದ್ದ ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆಯಿಂದ ಹಣ ಹಿಂಪಡೆದು ಖಾತೆ ಮುಚ್ಚಿದ್ದ ತಂದೆಗೆ ದೆಹಲಿ ಹೈಕೋರ್ಟ್ ಆಘಾತ ನೀಡಿದೆ. ಹಿಂಪಡೆದ ಸಂಪೂರ್ಣ ಮೊತ್ತವನ್ನು ಮಗಳಿಗೆ ವಾಪಸ್ ನೀಡುವಂತೆ ಕೋರ್ಟ್ ಆದೇಶಿಸಿದೆ. ಈ ಮೊದಲು ಜಿಲ್ಲಾ ನ್ಯಾಯಾಲಯ ನೀಡಿದ ಆದೇಶವನ್ನು ದೆಹಲಿ ಉಚ್ಚನ್ಯಾಯಾಲಯ ಎತ್ತಿಹಿಡಿದಿದೆ. ಮಗಳಿಗಾಗಿ ಮಾಡಿದ ಹೂಡಿಕೆಯನ್ನು ಅಪ್ಪನಾದನವನು ತಾನು ವಿತ್​ಡ್ರಾ ಮಾಡಿ ತನಗಾಗಿ ಬಳಕೆ ಮಾಡುವಂತಿಲ್ಲ ಎಂಬುವಂತಹ ತೀರ್ಪನ್ನು ಕೋರ್ಟ್ ನೀಡಿದೆ. ಏನಿದು ಪ್ರಕರಣ? 1999 ರಲ್ಲಿ…

Read More

ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ – Kannada News | Cauvery water dispute: SC to hear on August 13 pleas urging direction to Karnataka to release water to Tamil Nadu

ನವದೆಹಲಿ, (ಆಗಸ್ಟ್ 10): ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶದಂತೆ ತಕ್ಷಣವೇ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು(Tamil Nadu) ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುರುವಾರ (ಆ.13) ನಡೆಸಲು ಸುಪ್ರೀಂ ಕೋರ್ಟ್ (Supreme Court) ಸಮ್ಮತಿಸಿದೆ. ತಮಿಳುನಾಡು ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ಅವರು ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠದ ಮುನ್ನೆಲೆಗೆ ತಂದು ತುರ್ತು ವಿಚಾರಣೆಗೆ ಮನವಿ ಮಾಡಿದರು. ಈ…

Read More

ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು? ಸಿಎಂ ಡಿಕೆ ಶಿವಕುಮಾರ್​​ಗೆ ದೇವೇಗೌಡ ಪ್ರಶ್ನೆ – Kannada News | Former PM Deve Gowda sparks DK Shivakumar Over Bidadi Township Project

ರಾಮನಗರ, ಆಗಸ್ಟ್​ 10: ‘ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು. ಯಾರಿಗೆ ಅನುಕೂಲ ಮಾಡಲು ಹೊರಟಿದ್ದಾರೆ. ಮುಖ್ಯಮಂತ್ರಿ ಆದ 60 ದಿನದಲ್ಲಿ ಮಾಡಲು ಏಕೆ ಹೊರಟಿದ್ದಾರೆ’ ಎಂದು ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಅವರು ಸಿಎಂ ಡಿಕೆ ಶಿವಕುಮಾರ್​​ಗೆ ಪ್ರಶ್ನೆ ಮಾಡಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿರುವ ಎರಡನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿ ಬಳಿಕ ಟಿವಿ9 ಜೊತೆಗೆ ಮಾತನಾಡಿದ ದೇವೇಗೌಡರು, ‘ಡಿಕೆ ಶಿವಕುಮಾರ್​ ಡಿಸಿಎಂ ಆಗಿದ್ದಾಗ ಅವರೇ ಉಸ್ತುವಾರಿ, ಆಗ ಏಕೆ…

Read More

Video: ಮಗಳ ಹುಟ್ಟುಹಬ್ಬಕ್ಕೆ ಟ್ರಕ್ ಒಳಗೆ ಅಲಂಕರಿಸಿ ಸರ್ಪ್ರೈಸ್ ನೀಡಿದ ತಂದೆ – Kannada News | Father surprises daughter by decorating the inside of a truck for her birthday

ಅಪ್ಪ (father) ಅಂದ್ರೆ ಹೆಣ್ಣು ಮಕ್ಕಳಿಗೆ ಪ್ರಾಣಕ್ಕಿಂತ ಹೆಚ್ಚು. ಅಪ್ಪಂದಿರು ಕೂಡ ತಮ್ಮ ಮಗಳ ಖುಷಿಗಾಗಿ ಏನು ಬೇಕಾದ್ರೂ ಮಾಡಲು ಸಿದ್ಧವಿರುತ್ತಾನೆ. ಈ ತಂದೆ ಮಗಳ ಸಂಬಂಧವನ್ನು ವಿವರಿಸಲು ಪದಗಳಿಲ್ಲ. ಇದೀಗ ಟ್ರಕ್ ಓಡಿಸಿ ಜೀವನ ನಡೆಸುವ  ವ್ಯಕ್ತಿಯೊಬ್ಬ ತನ್ನ ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದಾನೆ. ತನ್ನ ಟ್ರಕ ಒಳಗೆ ಸುಂದರವಾಗಿ ಅಲಂಕರಿಸಿ ಮಗಳಿಗೆ ಸರ್ಪ್ರೈಸ್ ನೀಡಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಂದೆಯ ಪ್ರೀತಿ ಸಾರುವ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಚೀನಾ ಟ್ರಾವೆಲ್…

Read More

ನರೇಂದ್ರ, ನರೇಂದ್ರ, ನರೇಂದ್ರ..; ಈ ಹೆಸರು ನನಗೆ ಸ್ವಲ್ಪನೂ ಇಷ್ಟವಿಲ್ಲ ಎಂದ ಪಾಕ್ ಬಾಕ್ಸರ್ – Kannada News | PM Modi Meets CWG Medalists; Boxer Narender Berwal Shares Hilarious Pakistani Boxer Story

2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games) ಭಾರತದ ಸ್ಪರ್ಧಿಗಳು ಅದ್ಭುತ ಪ್ರದರ್ಶನ ನೀಡಿದರು. ಅನೇಕ ಪ್ರಮುಖ ಕ್ರೀಡೆಗಳ ಅನುಪಸ್ಥಿತಿಯ ಹೊರತಾಗಿಯೂ, ಭಾರತೀಯ ಆಟಗಾರರು 39 ಪದಕಗಳನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದರು. ಪದಕ ವಿಜೇತರಿಗೆ ದೇಶದಲ್ಲಿ ಅದ್ಧೂರಿ ಸ್ವಾಗತ ಕೂಡ ನೀಡಲಾಯಿತು. ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದವರನ್ನು ದೇಶದ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಭೇಟಿ ಮಾಡಿದರು. ಈ…

Read More

ಸಂಪುಟದಿಂದ ವಜಾಕ್ಕೆ ಆಗ್ರಹಗಳ ಮಧ್ಯೆ ಸಚಿವ ನಾಗೇಂದ್ರಗೆ ಕೋರ್ಟ್ ಬಿಗ್ ರಿಲೀಫ್ – Kannada News | Karnataka High Court Stay On Minister Nagendra Bail condition In Valmiki Corporation Scam Case

ಬೆಂಗಳೂರು, (ಆಗಸ್ಟ್ 10):  ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.  ಅನುಮತಿಯಿಲ್ಲದೆ ರಾಜ್ಯ (ಕರ್ನಾಟಕ) ಬಿಟ್ಟು ತೆರಳದಂತೆ ವಿಧಿಸಿದ್ದ ಷರತ್ತಿಗೆ ಕರ್ನಾಟಕ ಹೈಕೋರ್ಟ್ (Karnataka High Court) ತಡೆ ನೀಡಿದೆ. ದೆಹಲಿಗೆ ತೆರಳಲು ಅನುಮತಿ ಕೋರಿದ್ದ ಬಿ.ನಾಗೇಂದ್ರ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾಗೊಳಿಸಿತ್ತು. ಬಳಿಕ ಇದನ್ನು ಪ್ರಶ್ನಿಸಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ರಾಜ್ಯ ಬಿಟ್ಟು ತೆರಳದಂತೆ ಇದ್ದ ಷರತ್ತಿಗೆ ತಡೆ…

Read More