ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು – Kannada News | Karibasappa talks about what changed in his after Bigg boss

ಬಾಡಿಬಿಲ್ಡರ್ ಕರಿಬಸಪ್ಪ ಕಳೆದ ಬಿಗ್​​ಬಾಸ್ (Bigg Boss) ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆದರೆ ಆರಂಭದಲ್ಲೇ ಅವರು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋದರು. ಬಿಗ್​​ಬಾಸ್​​ನಲ್ಲಿ ಬಂದ ಹೋದುದ್ದಕ್ಕೆ ಅವರಿಗೆ ಸಹಜವಾಗಿಯೇ ಜನಪ್ರಿಯತೆ ಹೆಚ್ಚಾಯ್ತು. ಕೆಲವು ಖಾಸಗಿ ಕಾರ್ಯಕ್ರಮಗಳು, ಟಿವಿ ಶೋಗಳಲ್ಲಿಯೂ ಕರಿಬಸಪ್ಪ ಕಾಣಿಸಿಕೊಂಡರು. ಅವರನ್ನು ಬಹುತೇಕ ಮರೆತೇ ಹೋಗಿದ್ದ ಕನ್ನಡ ಸಿನಿಮಾ ರಂಗ ಮತ್ತೆ ನೆನಪು ಮಾಡಿಕೊಂಡಿತು. ಇದೀಗ ಅವರು ಹೊಸ ಕುಕಿಂಗ್ ಶೋಗೆ ಬರುತ್ತಿದ್ದಾರೆ. ಅಂದಹಾಗೆ ಬಿಗ್​​ಬಾಸ್​​ನಿಂದ ಅವರ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಖುದ್ದು ಅವರೇ ಮಾತನಾಡಿದ್ದಾರೆ ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಪಾಟ್ನಾಗೆ ಪಾಟಲಿಪುತ್ರ ಎಂದು ಮರುನಾಮಕರಣ; ಬಿಹಾರದ ಸಿಎಂ ಘೋಷಣೆ – Kannada News | Patna To Be Renamed as Pataliputra Bihar CM Samrat Choudhary Proposes

ಪಾಟ್ನಾ, ಜೂನ್ 17: ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ (Samrat Choudhary) ಇಂದು ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಪಾಟ್ನಾದಲ್ಲಿ ನಿರ್ಮಾಣವಾಗಲಿರುವ ನೂತನ ಉಪನಗರಕ್ಕೆ ರಾಜ್ಯದ ರಾಜಧಾನಿಯ ಪ್ರಾಚೀನ ಹೆಸರನ್ನು ನೆನಪಿಸುವಂತೆ ‘ಪಾಟಲಿಪುತ್ರ’ ಎಂದು ಹೆಸರಿಸಲಾಗುವುದು ಎಂದು ತಿಳಿಸಿದ್ದಾರೆ. ಬಿಹಾರದ ಪಾಟ್ನಾ ನಗರಕ್ಕೆ ಸುದೀರ್ಘವಾದ ಮತ್ತು ಸಮೃದ್ಧವಾದ ಇತಿಹಾಸವಿದೆ. ಪ್ರಾಚೀನ ಭಾರತದಲ್ಲಿ ಮೌರ್ಯ ಮತ್ತು ಗುಪ್ತ ಸಾಮ್ರಾಜ್ಯಗಳ ರಾಜಧಾನಿಯಾಗಿದ್ದ ಈ ನಗರವನ್ನು ‘ಪಾಟಲಿಪುತ್ರ’ ಎಂದು ಕರೆಯಲಾಗುತ್ತಿತ್ತು. ಹೀಗಾಗಿ, ಪ್ರಸ್ತುತ ಇರುವ ‘ಪಾಟ್ನಾ’ ಎಂಬ ಹೆಸರನ್ನು ತೆಗೆದುಹಾಕಿ, ಅದಕ್ಕೆ ಅದರ ಭವ್ಯ ಇತಿಹಾಸವನ್ನು ನೆನಪಿಸುವ ಬಲಿಷ್ಠ ಹೆಸರಾದ ‘ಪಾಟಲಿಪುತ್ರ’ ಎಂದು ಮರುನಾಮಕರಣ ಮಾಡಬೇಕು ಎಂಬುದು ಹಲವು ಸಂಘಟನೆಗಳು ಮತ್ತು ರಾಜಕೀಯ ನಾಯಕರ ದೀರ್ಘಕಾಲದ ಬೇಡಿಕೆಯಾಗಿದೆ.

ಬಿಹಾರದ ಹಲವು ಪ್ರಮುಖ ಬಿಜೆಪಿ (BJP) ನಾಯಕರು ಮತ್ತು ಹಿಂದೂಪರ ಸಂಘಟನೆಗಳು ಪಾಟ್ನಾ ಸೇರಿದಂತೆ ಬಿಹಾರದ ಮುಸ್ಲಿಂ ರಾಜರ ಕಾಲದ ಹೆಸರನ್ನು ಹೊಂದಿರುವ ನಗರಗಳ ಹೆಸರನ್ನು ಬದಲಾಯಿಸಬೇಕು ಎಂದು ಆಗಾಗ ಒತ್ತಾಯಿಸುತ್ತಾ ಬಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಅಲಹಾಬಾದ್ ಅನ್ನು ‘ಪ್ರಯಾಗ್‌ರಾಜ್’ ಎಂದು ಬದಲಾಯಿಸಿದ ಮಾದರಿಯಲ್ಲೇ ಇಲ್ಲೂ ಕ್ರಮ ಕೈಗೊಳ್ಳಬೇಕು ಎಂಬುದು ಅವರ ವಾದವಾಗಿದೆ.

ಇದನ್ನೂ ಓದಿ: ಪಾಟ್ನಾದಲ್ಲಿ ತಿರುಪತಿ ತಿರುಮಲ ದೇವಸ್ಥಾನ ನಿರ್ಮಾಣ; ಬಿಹಾರ ಸರ್ಕಾರದಿಂದ 10.11 ಎಕರೆ ಭೂಮಿ ಮಂಜೂರು

ಹೆಸರು ಬದಲಾವಣೆಯ ವದಂತಿಗಳು ಅಥವಾ ಬೇಡಿಕೆಗಳು ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದರೂ, ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಪಾಟ್ನಾ ನಗರದ ಹೆಸರು ಬದಲಾವಣೆಯ ಕುರಿತು ಯಾವುದೇ ಅಧಿಕೃತ ನಿರ್ಧಾರ ಅಥವಾ ಕಾನೂನಾತ್ಮಕ ಪ್ರಕಟಣೆಯನ್ನು ಹೊರಡಿಸಿಲ್ಲ.

ಯಾವುದೇ ಒಂದು ಪ್ರಮುಖ ನಗರದ ಹೆಸರು ಬದಲಾಗಬೇಕಾದರೆ, ಮೊದಲು ರಾಜ್ಯ ಸರ್ಕಾರವು ಅದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಬೇಕು. ನಂತರ ಆ ಪ್ರಸ್ತಾವನೆಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಬೇಕು. ಕೇಂದ್ರ ಸರ್ಕಾರ, ರೈಲ್ವೆ ಇಲಾಖೆ, ಪೋಸ್ಟ್ ಮಾಸ್ಟರ್ ಜನರಲ್ ಮತ್ತು ಸರ್ವೇ ಆಫ್ ಇಂಡಿಯಾದಿಂದ ‘ಯಾವುದೇ ಆಕ್ಷೇಪಣೆ ಇಲ್ಲ’ (NOC) ಎಂಬ ಪತ್ರ ಸಿಕ್ಕಿದ ಬಳಿಕವಷ್ಟೇ ಹೆಸರು ಅಧಿಕೃತವಾಗಿ ಬದಲಾಗುತ್ತದೆ.

ಇದನ್ನೂ ಓದಿ: Khan Sir: ಬಿಹಾರದ ‘ಖಾನ್ ಸರ್’ಗೆ ದೊಡ್ಡ ರಿಲೀಫ್, ಗುಂಡಿನ ದಾಳಿ ಪ್ರಕರಣದಲ್ಲಿ ಫೈಸಲ್ ಖಾನ್ ಬಂಧನಕ್ಕೆ ಪಾಟ್ನಾ ನ್ಯಾಯಾಲಯ ತಡೆ

‘ಪಾಟಲಿಪುತ್ರ’ ಎಂಬುದು ಇಂದಿನ ಪಾಟ್ನಾ ನಗರದ ಪ್ರಾಚೀನ ಹೆಸರಾಗಿದ್ದು, ಇದು ಐತಿಹಾಸಿಕ ಮಗದ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇತಿಹಾಸಕಾರರ ಪ್ರಕಾರ, ಈ ನಗರವನ್ನು ಆರಂಭದಲ್ಲಿ ‘ಪಾಟಲಿಗ್ರಾಮ’ ಎಂದು ಕರೆಯಲಾಗುತ್ತಿತ್ತು, ನಂತರ ಅದು ಬೆಳೆದು ‘ಪಾಟಲಿಪುತ್ರ’ ಆಯಿತು. ಶತಮಾನಗಳ ಸುದೀರ್ಘ ಇತಿಹಾಸದ ಹಾದಿಯಲ್ಲಿ ಅದು ರೂಪಾಂತರಗೊಂಡು ಇಂದಿನ ‘ಪಾಟ್ನಾ’ ಆಗಿ ಬದಲಾಯಿತು.

ಸುಮಾರು 3,000 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಪಾಟ್ನಾ ನಗರವು ಒಂದು ಕಾಲದಲ್ಲಿ ಜಾಗತಿಕ ಮಟ್ಟದಲ್ಲಿ ರಾಜಕೀಯ, ವ್ಯಾಪಾರ ಮತ್ತು ಶಿಕ್ಷಣದ ಪ್ರಮುಖ ಕೇಂದ್ರವಾಗಿತ್ತು. ಚಂದ್ರಗುಪ್ತ ಮೌರ್ಯ ಮತ್ತು ಸಾಮ್ರಾಟ್ ಅಶೋಕನಂತಹ ಪ್ರಬಲ ಶಾಸಕರು ಇದೇ ಮಣ್ಣಿನಿಂದ ಇಡೀ ದೇಶವನ್ನು ಆಳಿದ್ದರು ಎಂಬುದು ಗಮನಾರ್ಹ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Video: ವೃಂದಾವನದ ಇಸ್ಕಾನ್ ದೇವಾಲಯದ ಹೊರಗೆ ಕೂಲರ್​​ನಲ್ಲಿದ್ದ ಯಮರಾಜ, ಸ್ಪರ್ಶಿಸುತ್ತಿದ್ದಂತೆ ವಿದ್ಯುತ್ ಪ್ರವಹಿಸಿ ಯುವಕ ಸಾವು – Kannada News | Vrindavan ISKCON Electrocution: Youth Dies from Faulty Cooler Due to Municipal Negligence

ವೃಂದಾವನದಲ್ಲಿ ವ್ಯಕ್ತಿ ಸಾವುImage Credit source: X Post, Tatva

ವೃಂದಾವನ, ಜೂನ್ 17: ಉತ್ತರ ಪ್ರದೇಶದ ಪವಿತ್ರ ಯಾತ್ರಾ ಸ್ಥಳವಾದ ವೃಂದಾವನದ ಇಸ್ಕಾನ್(Iskcon) ದೇವಾಲಯದ  ದ್ವಾರದ ಬಳಿ ಪುರಸಭೆಯ ಬೇಜಾವ್ದಾರಿತನಕ್ಕೆ 21 ವರ್ಷದ ಯುವಕ ಬಲಿಯಾಗಿದ್ದಾರೆ. ದೇವಸ್ಥಾನದ ಹೊರಗೆ ಅಳವಡಿಸಲಾಗಿದ್ದ ಕೂಲರ್​ ಮುಟ್ಟಿದ್ದಕ್ಕೆ ಅದರಿಂದ ವಿದ್ಯುತ್ ಪ್ರವಹಿಸಿ ಕೂಡಲೇ ಯುವಕ ಸಾವನ್ನಪ್ಪಿದ್ದಾರೆ.

ಮಧ್ಯಪ್ರದೇಶದ ಛತ್ತರ್‌ಪುರ ನಿವಾಸಿಯಾದ ಅಭಿಗ್ಯಾನ್ ಗುಪ್ತಾ ಎಂಬ ಯುವಕ ಸೋಮವಾರ ಬೆಳಗ್ಗೆ ತನ್ನ ತಂದೆ ಅಮಿತ್ ಕುಮಾರ್ ಗುಪ್ತಾ ಅವರೊಂದಿಗೆ ವೃಂದಾವನ ದರ್ಶನಕ್ಕೆ ಬಂದಿದ್ದರು. ಬೆಳಗ್ಗೆ 10.30 ರ ಸುಮಾರಿಗೆ ಇಸ್ಕಾನ್ ದೇವಾಲಯದ ಶೂ ಸ್ಟ್ಯಾಂಡ್ ಬಳಿ ಅವರಿಬ್ಬರೂ ತಮ್ಮ ಪಾದರಕ್ಷೆಗಳನ್ನು ಬಿಚ್ಚುತ್ತಿದ್ದರು.

ಈ ವೇಳೆ ತೀವ್ರ ಬೇಸಿಗೆಯ ಶಾಖದಿಂದ ಭಕ್ತರಿಗೆ ತಂಪು ನೀಡಲು ನಗರಸಭೆ ಅಲ್ಲಿ ಇರಿಸಿದ್ದ ಶವರ್ ಕೂಲರ್ ಯಂತ್ರವನ್ನು ಅಭಿಗ್ಯಾನ್ ಆಕಸ್ಮಿಕವಾಗಿ ಮುಟ್ಟಿದ್ದಾರೆ. ಆ ಕೂಲರ್‌ನಲ್ಲಿ ತಾಂತ್ರಿಕ ದೋಷವಿದ್ದ ಕಾರಣ ಕೂಡಲೇ ವಿದ್ಯುತ್ ಪ್ರವಹಿಸಿದೆ.

ಅಭಿಗ್ಯಾನ್ ದೇಹದ ಮೂಲಕ ಕರೆಂಟ್ ಹರಿದ ತಕ್ಷಣ ಆತ ಜೋರಾಗಿ ಕಿರುಚಿಕೊಂಡಿದ್ದಾರೆ. ಮಗನ ಕೂಗು ಕೇಳಿ ತಂದೆ ಅಮಿತ್ ಕುಮಾರ್ ಆತನನ್ನು ರಕ್ಷಿಸಲು ಧಾವಿಸಿ ಹಿಂದಕ್ಕೆ ಎಳೆಯಲು ಯತ್ನಿಸಿದರಾದರೂ, ವಿದ್ಯುತ್ ಆಘಾತದ ತೀವ್ರತೆಗೆ ತಂದೆಯೇ ದೂರ ಹೋಗಿ ಬಿದ್ದಿದ್ದಾರೆ. ಯುವಕ ಕೂಲರ್‌ಗೆ ಸಿಲುಕಿ ಒದ್ದಾಡಿದ್ದಾರೆ.

ಮತ್ತಷ್ಟು ಓದಿ: ಚಾಮರಾಜನಗರದಲ್ಲೊಂದು ಹೃದಯ ವಿದ್ರಾವಕ ಘಟನೆ: ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು

ನಂತರ ಸ್ಥಳೀಯರು ಹಾಗೂ ಇತರ ಭಕ್ತರು ಒಟ್ಟಾಗಿ ಆತನನ್ನು ಯಂತ್ರದಿಂದ ಬೇರ್ಪಡಿಸಿ ತಕ್ಷಣವೇ ಜಿಲ್ಲಾ ಜಂಟಿ ಆಸ್ಪತ್ರೆಗೆ ಸಾಗಿಸಿದರಾದರೂ, ಪರೀಕ್ಷಿಸಿದ ವೈದ್ಯರು ಆತ ಈಗಾಗಲೇ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು.

ಎದ್ದೇಳು ಮಗನೇ, ನಿನ್ನ ಅಪ್ಪ ಬಂದಿದ್ದೀನಿ, ಆಸ್ಪತ್ರೆಯಲ್ಲಿ ತಂದೆಯ ಆಕ್ರಂದನ
ಆಸ್ಪತ್ರೆಯೊಳಗೆ ನಡೆದ ದೃಶ್ಯಗಳು ಅಲ್ಲಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿದವು. ತನ್ನ ಏಕೈಕ ಮಗ ಇನ್ನಿಲ್ಲ ಎಂಬ ಕಹಿ ಸತ್ಯವನ್ನು ಒಪ್ಪಿಕೊಳ್ಳಲು ತಂದೆ ಅಮಿತ್ ಕುಮಾರ್ ಸಿದ್ಧರಿರಲಿಲ್ಲ. ಮಗನ ಶವವನ್ನು ಅಪ್ಪಿಕೊಂಡು ಪದೇ ಪದೇ, ಏಳು ಮಗಾ ನಿನ್ನ ಸಅಪ್ಪ ಕರೀತಿದೀನಿ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

ವಿಡಿಯೋ:

ಪಾಲಿಕೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ತೀವ್ರ ಆಕ್ರೋಶ
ಮಳೆಗಾಲದ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ವಿದ್ಯುತ್ ಉಪಕರಣಗಳ ಸರಿಯಾದ ನಿರ್ವಹಣೆ ಮಾಡದ ಮುನ್ಸಿಪಲ್ ಕಾರ್ಪೊರೇಷನ್ (ಪುರಸಭೆ) ಅಧಿಕಾರಿಗಳ ಬೇಜವಾಬ್ದಾರಿತನವೇ ಈ ಸಾವಿಗೆ ನೇರ ಕಾರಣ ಎಂದು ಸ್ಥಳೀಯರು ಮತ್ತು ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೊಪ್ಪಳದಲ್ಲಿ ಹೊಸ ನಾಂದಿ ಹಾಡಿದ ಉತ್ಸವಗಳ ವಾರ್​​: ರಾಜಕೀಯ ನಾಯಕರ ಜಿದ್ದಾಜಿದ್ದಿ – Kannada News | Political Tug of War Overshadows Koppal Festivals: Annegondi and Kanakagiri Utsava Spark Controversy

ಕೊಪ್ಪಳ, ಜೂನ್​​ 17: ಜಿಲ್ಲೆಯಲ್ಲಿ ಇದೀಗ ಉತ್ಸವಗಳ ವಾರ್ ಜೋರಾಗಿದೆ. ಒಂದು ಕಡೆ ಜಿಲ್ಲಾಡಳಿತ ಮತ್ತು ಸರ್ಕಾರದ ನಿರ್ಧಾರಕ್ಕೂ ಮುನ್ನವೇ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ಆನೆಗೊಂದಿ ಉತ್ಸವದ ತಿಂಗಳನ್ನು ಘೋಷಣೆ ಮಾಡಿದ್ದು, ಸದ್ಯ ರಾಜಕೀಯ ಸಂಚಲನ ಮೂಡಿಸಿದ್ದಾರೆ. ಮತ್ತೊಂದು ಕಡೆ, ಜಿಲ್ಲೆಯ ಹೆಮ್ಮೆಯ ಕನಕಗಿರಿ ಉತ್ಸವಕ್ಕೆ ಸಿಎಂ ಬದಲಾವಣೆಯ ಗ್ರಹಣ ಹಿಡಿದಿದ್ದು, ಜನರಲ್ಲಿ ತೀವ್ರ ನಿರಾಶೆ ಮೂಡಿಸಿದೆ.

ಮುಖ್ಯಾಂಶಗಳು

  • ಕೊಪ್ಪಳದಲ್ಲಿ ಹೊಸ ರಾಜಕೀಯ ಸಮರ
  • ಅಕ್ಟೋಬರ್​​ನಲ್ಲಿ ಆನೆಗೊಂದಿ ಉತ್ಸವ ಎಂದ ಜನಾರ್ದನ ರೆಡ್ಡಿ
  • ಕೊಪ್ಪಳ ಜನರು ಆಕ್ರೋಶ

ಕೊಪ್ಪಳ ಜಿಲ್ಲೆಯಲ್ಲಿ ಉತ್ಸವಗಳ ರಾಜಕೀಯ ಶುರು

ಐತಿಹಾಸಿಕ ಹಿನ್ನೆಲೆಯುಳ್ಳ ಆನೆಗೊಂದಿ ಉತ್ಸವದ ವಿಚಾರದಲ್ಲಿ ಜಿಲ್ಲಾಡಳಿತಕ್ಕೂ ಮುನ್ನವೇ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಖಾಡಕ್ಕೆ ಧುಮುಕಿದ್ದಾರೆ. ಜಿಲ್ಲಾಡಳಿತ ಅಧಿಕೃತವಾಗಿ ದಿನಾಂಕ ಪ್ರಕಟಿಸುವ ಮುನ್ನವೇ, ಬರುವ ಅಕ್ಟೋಬರ್ ತಿಂಗಳಿನಲ್ಲಿ ಆನೆಗೊಂದಿ ಉತ್ಸವ ಫಿಕ್ಸ್ ಎಂದು ಅವರು ಬಹಿರಂಗವಾಗಿ ಘೋಷಿಸಿದ್ದಾರೆ. ಇದು ಈಗ ಜಿಲ್ಲಾಡಳಿತ ಹಾಗೂ ಆಡಳಿತ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು, ಕೊಪ್ಪಳದಲ್ಲಿ ಹೊಸದೊಂದು ಉತ್ಸವ ವಾರ್‌ಗೆ ನಾಂದಿ ಹಾಡಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಪತ್ತೆಯಾದ ಶಿವಲಿಂಗಕ್ಕೂ ಸಿಎಂ ಡಿಕೆ ಶಿವಕುಮಾರ್​​ಗೂ ಲಿಂಕ್: ಉದ್ಯಮಿ ಕನಸಲ್ಲಿ ಕಂಡಿದ್ದೇನು?

ಈಗಾಗಲೇ 3 ಕೋಟಿ ರೂ ಅನುದಾನ ಬಂದಿದ್ದು, 3 ಕೋಟಿಗೆ ನಾನು ಬೇಡಿಕೆ ಇಟ್ಟಿದ್ದೇನೆ ಎನ್ನುತ್ತಾರೆ ರೆಡ್ಡಿ. ಕನಕಗಿರಿ ಉತ್ಸವ ಘೋಷಣೆಯಾದ ಬಳಿಕ ಮುಂದೂಡಲಾಗಿತ್ತು, ಅದೇ ಕಾರಣಕ್ಕೆ ಜಿಲ್ಲಾಡಳಿತ ಆನೆಗೊಂದಿ ಉತ್ಸವ ದಿನಾಂಕ ಘೋಷಣೆ ಮಾಡಿಲ್ಲ, ಆದರೆ ರೆಡ್ಡಿ ಅಕ್ಟೋಬರ್​​ನಲ್ಲಿ ಉತ್ಸವ ಫಿಕ್ಸ್ ಎನ್ನುತ್ತಿದ್ದಾರೆ.

ಇದು ಆನೆಗೊಂದಿ ಕಥೆಯಾದರೆ, ಇತ್ತ ಕನಕಗಿರಿ ಉತ್ಸವಕ್ಕೆ ಮಾತ್ರ ರಾಜಕೀಯದ ಗ್ರಹಣ ಹಿಡಿದಿದೆ. ಕಳೆದ ಮೇ 16 ಮತ್ತು 17ರಂದೇ ಅದ್ಧೂರಿಯಾಗಿ ನಡೆಯಬೇಕಿದ್ದ ಕನಕಗಿರಿ ಉತ್ಸವ, ರಾಜ್ಯದಲ್ಲಿ ನಡೆದ ಸಿಎಂ ಬದಲಾವಣೆ ಹಾಗೂ ರಾಜಕೀಯ ಏರುಪೇರು ಹಿನ್ನೆಲೆ ದಿಢೀರ್ ಮುಂದೂಡಲ್ಪಟ್ಟಿತ್ತು. ಆದರೆ ಸುಮಾರು ತಿಂಗಳು ಕಳೆದರೂ ಈವರೆಗೆ ಉತ್ಸವದ ನೆನಪು ಇಲ್ಲದಂತಾಗಿದೆ.

ಕೊಪ್ಪಳದ ಜನತೆ ತೀವ್ರ ಆಕ್ರೋಶ

ಸದ್ಯದ ಪರಿಸ್ಥಿತಿ ನೋಡಿದರೆ ಈ ವರ್ಷ ಕನಕಗಿರಿ ಉತ್ಸವ ನಡೆಯುತ್ತದೆಯಾ ಇಲ್ಲವಾ ಎನ್ನುವ ದೊಡ್ಡ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ರಾಜಕೀಯ ನಾಯಕರ ಈ ಜಿದ್ದಾಜಿದ್ದಿ ಮತ್ತು ಸರ್ಕಾರದ ನಿರ್ಲಕ್ಷ್ಯಕ್ಕೆ ಕೊಪ್ಪಳದ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂದು ಕಡೆ ಕ್ರೆಡಿಟ್ ವಾರ್, ಮತ್ತೊಂದು ಕಡೆ ನಿರ್ಲಕ್ಷ್ಯ. ಸಿಎಂ ಬದಲಾವಣೆ ನೆಪದಲ್ಲಿ ನಮ್ಮ ಜಿಲ್ಲೆಯ ಸಾಂಸ್ಕೃತಿಕ ಉತ್ಸವಗಳನ್ನು ಬಲಿ ಕೊಡಬೇಡಿ, ಕೂಡಲೇ ಕನಕಗಿರಿ ಉತ್ಸವದ ದಿನಾಂಕ ಪ್ರಕಟಿಸಿ, ಉತ್ಸವ ಮಾಡಲೇಬೇಕು ಎಂದು ಜಿಲ್ಲೆಯ ಜನತೆ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ, ಜನಾರ್ದನ ರೆಡ್ಡಿ ನಿರಾಳ

ಒಟ್ಟಿನಲ್ಲಿ, ರಾಜಕೀಯ ನಾಯಕರ ಪ್ರತಿಷ್ಠೆಯ ನಡುವೆ ಕೊಪ್ಪಳದ ಆನೆಗೊಂದಿ ಉತ್ಸವದ ದಿನಾಂಕ ವಿವಾದಕ್ಕೆ ಸಿಲುಕಿದ್ದರೆ, ಇತ್ತ ಕನಕಗಿರಿ ಉತ್ಸವದ ಭವಿಷ್ಯವೇ ಮಂಕಾಗಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಈ ಗೊಂದಲಗಳಿಗೆ ತೆರೆ ಎಳೆದು, ಜಿಲ್ಲೆಯ ಸಾಂಸ್ಕೃತಿಕ ವೈಭವವನ್ನು ಎತ್ತಿಹಿಡಿಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RBI Recruitment 2026: ಆರ್‌ಬಿಐನಲ್ಲಿ ‘ಯುವ ವೃತ್ತಿಪರರ’ ನೇಮಕಾತಿ; ಮಾಸಿಕ 1.5 ಲಕ್ಷ ರೂ. ಸ್ಟೈಫಂಡ್! – Kannada News | RBI Recruitment: Young Professionals in AI, Data Analytics and Finance with 1.5L Rs Salary

ಭಾರತೀಯ ರಿಸರ್ವ್ ಬ್ಯಾಂಕ್Image Credit source: Pinterest

ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಪ್ರತಿಭಾನ್ವಿತ ಯುವಜನರಿಗೆ ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ವಲಯದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಸುವರ್ಣಾವಕಾಶವೊಂದನ್ನು ನೀಡಿದೆ. ಆರ್‌ಬಿಐ ವಿವಿಧ ಪ್ರಮುಖ ಪರಿಣತಿ ಕ್ಷೇತ್ರಗಳಲ್ಲಿ ‘ಯುವ ವೃತ್ತಿಪರರ’ (Young Professionals) ನೇಮಕಾತಿಗಾಗಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಮುಂಬೈನಲ್ಲಿರುವ ಆರ್‌ಬಿಐನ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡಲು ನಿಯೋಜಿಸಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜುಲೈ 6 ರೊಳಗೆ ಇಮೇಲ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಿ.

ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು:

ಹಣಕಾಸು ವಲಯ, ಹೊಸ ತಂತ್ರಜ್ಞಾನಗಳು ಮತ್ತು ನೀತಿ ನಿರೂಪಣೆಯಲ್ಲಿ ಆಸಕ್ತಿ ಹೊಂದಿರುವ ಯುವಕರಿಗೆ ಈ ನೇಮಕಾತಿ ಡ್ರೈವ್ ಅತ್ಯುತ್ತಮ ವೇದಿಕೆಯಾಗಿದೆ. ಈ ಪ್ರಕ್ರಿಯೆಯ ಮೂಲಕ ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್ ತಂತ್ರಜ್ಞಾನ, ಡೇಟಾ ವಿಶ್ಲೇಷಣೆ, ಹವಾಮಾನ ಹಾನಿ ಮತ್ತು ಸುಸ್ಥಿರ ಹಣಕಾಸು, ಹಣಕಾಸು ಮಾರುಕಟ್ಟೆಗಳು, ಪಾವತಿ ಪರಿಸರ ವ್ಯವಸ್ಥೆಗಳು, ಕ್ರೆಡಿಟ್ ಅಪಾಯ ವಿಶ್ಲೇಷಣೆ ಹಾಗೂ ನೀತಿ ಸಂಶೋಧನೆಯಂತಹ ವಿವಿಧ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಹುದ್ದೆಗಳನ್ನು ನೀಡಲಾಗುತ್ತಿದೆ.

ಆಕರ್ಷಕ ಸ್ಟೈಫಂಡ್ ಮತ್ತು ಒಪ್ಪಂದದ ಅವಧಿ:

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 1.5 ಲಕ್ಷ ರೂ. ನಿಗದಿತ ಸ್ಟೈಫಂಡ್ ಸಿಗಲಿದೆ. ಈ ನೇಮಕಾತಿಗಳನ್ನು ಸಂಪೂರ್ಣವಾಗಿ ಪೂರ್ಣಾವಧಿಯ ಒಪ್ಪಂದದ ಆಧಾರದ ಮೇಲೆ ಮಾಡಲಾಗುತ್ತದೆ. ಅಭ್ಯರ್ಥಿಗಳ ಆರಂಭಿಕ ಒಪ್ಪಂದದ ಅವಧಿ ಮೂರು ವರ್ಷಗಳಾಗಿದ್ದು, ಅವರ ಕಾರ್ಯಕ್ಷಮತೆ ಮತ್ತು ಪರಸ್ಪರ ಒಪ್ಪಿಗೆಯ ಆಧಾರದ ಮೇಲೆ ವಿಸ್ತರಿಸಬಹುದಾಗಿದೆ. ಆದರೆ ಆರ್‌ಬಿಐ ನಿಯಮಗಳ ಪ್ರಕಾರ ಒಟ್ಟು ಅಧಿಕಾರಾವಧಿಯು ಐದು ವರ್ಷಗಳನ್ನು ಮೀರುವುದಿಲ್ಲ ಹಾಗೂ ಇವರು ನಿಯಮಿತ ಉದ್ಯೋಗಿ ಸ್ಥಾನಮಾನವನ್ನು ಪಡೆಯುವುದಿಲ್ಲ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ದಾಖಲೆಗಳು:

ಆಸಕ್ತರು ನಿಗದಿತ ಅರ್ಜಿ ನಮೂನೆಯ ಸ್ಕ್ಯಾನ್ ಪ್ರತಿಯೊಂದಿಗೆ ತಮ್ಮ ಸಿವಿ (CV), ಶೈಕ್ಷಣಿಕ ಪ್ರಮಾಣಪತ್ರಗಳು, ಆಸಕ್ತಿಯ ಹೇಳಿಕೆ (Statement of Interest), ಶೈಕ್ಷಣಿಕ ಅಥವಾ ನೀತಿ ಬರವಣಿಗೆಯ ಮಾದರಿಯನ್ನು ಕಳುಹಿಸಬೇಕು. ಇದರೊಂದಿಗೆ ವೃತ್ತಿಪರ ರೆಫರಿಯಿಂದ ಪಡೆದ ಉಲ್ಲೇಖ ಅಥವಾ ಶಿಫಾರಸು ಪತ್ರವನ್ನು ಲಗತ್ತಿಸಿ ಇಮೇಲ್ ಮೂಲಕ ಕಳುಹಿಸಬೇಕಾಗುತ್ತದೆ. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೂ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ಪ್ರಮುಖ ಸೂಚನೆಗಳು:

ಆರ್‌ಬಿಐ ಈ ಹುದ್ದೆಗಳಿಗಾಗಿ ಪ್ರಾಥಮಿಕ ಪರಿಶೀಲನೆ, ದಾಖಲೆಗಳ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಪ್ರಾಥಮಿಕವಾಗಿ ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಅವರ ಸಂದರ್ಶನದ ದಿನಾಂಕ ಮತ್ತು ಸಮಯವನ್ನು ಇಮೇಲ್ ಮೂಲಕ ತಿಳಿಸಲಾಗುತ್ತದೆ. ಅಪೂರ್ಣವಾಗಿರುವ ಅರ್ಜಿಗಳನ್ನು ಹಾಗೂ ಜುಲೈ 6 ರ ಗಡುವಿನ ನಂತರ ಬರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಅರ್ಧಶತಕದಿಂದ ವಂಚಿತರಾದ್ರು ಹೊಸ ಮೈಲಿಗಲ್ಲು ದಾಟಿದ ರೋಹಿತ್ ಶರ್ಮಾ – Kannada News | IND vs AFG 2nd odi Rohit Sharma Joins Elite 14,000 List A Run Club

ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ 2027 ರ ನಡೆಯಲಿರುವ ಏಕದಿನ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯಬೇಕೆಂದರೆ ಪ್ರಸ್ತುತ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಮಿಂಚಲೇಬೇಕಿದೆ. ಮೊದಲ ಏಕದಿನದಲ್ಲಿ ಕೇವಲ 16 ರನ್​​ಗಳಿಗೆ ಸುಸ್ತಾಗಿದ್ದ ರೋಹಿತ್ ಎರಡನೇ ಏಕದಿನ ಪಂದ್ಯದಲ್ಲಿ ಲಯದಲ್ಲಿ ಕಾಣಿಸಿಕೊಂಡರಾದರೂ ಅರ್ಧಶತಕದಂಚಿನಲ್ಲಿ ಎಡವಿದರು (PC-PTI).

ಲಕ್ನೋದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 39 ಎಸೆತಗಳನ್ನು ಎದುರಿಸಿದ ರೋಹಿತ್ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 48 ರನ್ ಬಾರಿಸಿ ಔಟಾದರು. ಅಂದರೆ ರೋಹಿತ್ ಕೇವಲ 2 ರನ್​ಗಳಿಂದ ಈ ವರ್ಷದ ಮೊದಲ ಏಕದಿನ ಅರ್ಧಶತಕದಿಂದ ವಂಚಿತರಾದರು. ವಾಸ್ತವವಾಗಿ ರೋಹಿತ್ ಕಳೆದ ಡಿಸೆಂಬರ್​ನಲ್ಲಿ ಕೊನೆಯದಾಗಿ ಅರ್ಧಶತಕ ಬಾರಿಸಿದ್ದರು (PC-PTI).

ಅದಾದ ಬಳಿಕ ನಡೆದಿದ್ದ ನ್ಯೂಜಿಲೆಂಡ್ ಹಾಗೂ ಈಗ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್​ಗೆ ಅರ್ಧಶತಕದ ಗಡಿ ದಾಟಲು ಸಾಧ್ಯವಾಗಿಲ್ಲ. ಆದಾಗ್ಯೂ ಈ 48 ರನ್​ಗಳ ಇನ್ನಿಂಗ್ಸ್ ಮೂಲಕ ರೋಹಿತ್ 14,000 ಲಿಸ್ಟ್ ಎ ರನ್‌ಗಳನ್ನು ಪೂರ್ಣಗೊಳಿಸುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಧಿಸಿದರು (PC-PTI).

ಸೀಮಿತ ಓವರ್‌ಗಳ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ರೋಹಿತ್ 4 ನೇ ಓವರ್‌ನ ಮೂರನೇ ಎಸೆತದಲ್ಲಿ ಸಿಕ್ಸ್ ಬಾರಿಸುವ ಮೂಲಕ ಈ ಮೈಲಿಗಲ್ಲು ತಲುಪಿದರು. ಈ ಮೂಲಕ ಈ ಸಾಧನೆ ಮಾಡಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು (PC-PTI).

ರೋಹಿತ್​ಗೂ ಮೊದಲು, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 14000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆದಾಗ್ಯೂ ಅತಿ ಕಡಿಮೆ ಇನ್ನಿಂಗ್ಸ್​ಗಳಲ್ಲಿ 14,000 ಲಿಸ್ಟ್ ಎ ರನ್‌ಗಳನ್ನು ಪೂರೈಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ (PC-PTI).

ರೋಹಿತ್ ಶರ್ಮಾ ತಮ್ಮ 345 ನೇ ಇನ್ನಿಂಗ್ಸ್‌ನಲ್ಲಿ 14,000 ಲಿಸ್ಟ್ ಎ ರನ್‌ಗಳನ್ನು ಪೂರೈಸಿದ್ದಾರೆ. 290 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿರುವ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ ಈ ಮೈಲಿಗಲ್ಲು ದಾಟಲು 348 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು (PC-PTI).

Published On – 3:01 pm, Wed, 17 June 26

Source link

ಕಾವೇರಿ ಕೊಳ್ಳದಲ್ಲಿ ಕೈ ಕೊಟ್ಟ ಮುಂಗಾರು, ಈ ಬಾರಿ ಬೆಳೆಗಳಿಗಿಲ್ಲ ಕೆಆರ್‌ಎಸ್ ನೀರು – Kannada News | Deficient rainfall In Karnataka: no water from KRS for Farmers crops

ಬೆಂಗಳೂರು, (ಜೂನ್ 17):   ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಯಂತೆ ಮುಂಗಾರು ಮಳೆಯಾಗದೆ (Monsoon Rain) ಬೇಸಿಗೆ ಬಿಸಿಲಿಗೆ ಕೆಆರ್‌ಎಸ್ ಜಲಾಶಯದ (Krishna Raja Sagar (KRS) reservoir) ಒಳ ಹರಿವಿನ ಪ್ರಮಾಣ ದಿನೇ ದಿನೇ ಕಡಿಮೆಯಾಗಿ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿದೆ. ಹೀಗಾಗಿ ಈ ಬಾರಿ ಬೆಳೆಗಳಿಗೆ ನೀರು ಹರಿಸದಿರಲು ನಿರ್ಧರಿಸಲಾಗಿದೆ. ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕರ್ನಾಟಕ ನೀರಾವರಿ ನಿಗಮ ಮತ್ತು ಕಾವೇರಿ ನೀರಾವರಿ ನಿಗಮಗಳ ಪ್ರಗತಿ ಪರಿಶೀಲನಾ ಸಭೆ ನಡೆದಿದ್ದು, ಈ ವೇಳೆ ಮುಂಗಾರು ಕೊರತೆ, ನೀರಿನ ಅಭಾವದ ಕುರಿತಂತ ತೀವ್ರ ಚರ್ಚೆ ನಡೆದಿದೆ. ಇನ್ನು ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕೆಆರ್ ಎಸ್ ಡ್ಯಾಂನ ನೀರು ಕುಡಿಯಲು ಮಾತ್ರ ಉಪಯೋಗಿಸಲು  ತೀರ್ಮಾನಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆ
  • ಒಳಹರಿವು ಇಲ್ಲದ ಕಾರಣ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಕುಸಿತ
  • ಕೆಆರ್ ಎಸ್ ನೀರು ಬೆಳೆಗಳಿಗೆ ಬದಲು ಕುಡಿಯಲು ಮಾತ್ರ ಬಳಕೆಗೆ ತೀರ್ಮಾನ
  • ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆಯಲ್ಲಿ ನಿರ್ಧಾರ

ಸುಪ್ರೀಂಕೋರ್ಟ್‌ ತೀರ್ಪಿನಂತೆ ಜೂನ್‌ ತಿಂಗಳಲ್ಲಿ ತಮಿಳುನಾಡಿಗೆ ಕಾವೇರಿ ನದಿಯಿಂದ ೯.೧೯ ಟಿಎಂಸಿ ಅಡಿಗಳಷ್ಟು ನೀರು ಬಿಡುಗಡೆ ಮಾಡಬೇಕು. ಆದರೆ, ಮಳೆ ಕೊರತೆ ಕಾರಣದಿಂದಾಗಿ ಈವರೆಗೆ 1.778 ಟಿಎಂಸಿ ಮಾತ್ರ ಬಿಡುಗಡೆ ಮಾಡಲಾಗಿದೆ. ಮಳೆ ಕೊರತೆ ಹೀಗೆಯೇ ಮುಂದುವರಿದರೆ ಇನ್ನೆರಡು ತಿಂಗಳಲ್ಲಿ ಜಲಾಶಯ ಸಂಪೂರ್ಣ ಖಾಲಿಯಾಗಲಿದೆ. ಮುಂದಿನ 2 ತಿಂಗಳಾದ ನಂತರ ಬೆಂಗಳೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಪೂರೈಕೆಯಾಗುವ ಕುಡಿಯುವ ನೀರಿಗೂ ತತ್ವಾರ ಉಂಟಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಳೆ ಇಲ್ಲದೆ ಬರಿದಾದ ಹೇಮಾವತಿ ಒಡಲು: ಡ್ಯಾಂನಲ್ಲಿ ಲಭ್ಯವಿರೋದು ಕೇವಲ 14 ಟಿಎಂಸಿ ನೀರು!

ಸುಪ್ರೀಂಕೋರ್ಟ್‌ ನಿಗದಿ ಮಾಡಿದಂತೆ ನೀರು ಪೂರೈಸದಿದ್ದರೆ ತಮಿಳುನಾಡು ಮತ್ತೆ ಖ್ಯಾತೆ ತೆಗೆಯಲಿದೆ. ಅದಕ್ಕಾಗಿ ನೀರಿನ ಮಟ್ಟ ಎಷ್ಟಿರಲಿದೆ, ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವುದು ಸೇರಿದಂತೆ ಇನ್ನಿತರ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಜತೆಗೆ ಈಗಿರುವ ನೀರನ್ನು ಕುಡಿಯುವ ನೀರಿಗೆ ನ್ಯಾಯಯುತ ಬಳಕೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಕೈಕೊಟ್ಟ ಮುಂಗಾರು, ರೈತರಲ್ಲಿ ಆತಂಕ

ಕೆಆರ್‌ಎಸ್ ಹಿನ್ನೀರಿನಲ್ಲಿ ದೇಗುಲ ಗೋಚರಗೊಂಡು ಪ್ರವಾಸಿಗರಿಗೆ ಸಂಭ್ರಮ ತಂದರೆ, ಇತ್ತ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಯಂತೆ ಮುಂಗಾರು ಮಳೆಯಾಗದೆ ಬೇಸಿಗೆ ಬಿಸಿಲಿಗೆ ಕೆಆರ್‌ಎಸ್ ಜಲಾಶಯದ ಒಳ ಹರಿವಿನ ಪ್ರಮಾಣ ದಿನೇ ದಿನೇ ಕಡಿಮೆಯಾಗಿ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ. ಮುಂಗಾರು ಮಳೆಗಾಗಿ ರೈತರ ಮೊಗದಲ್ಲಿ ಆಶಾ ಭಾವನೆ ಕಂಡು ಬಂದರೂ ಜೂನ್ ಎರಡನೇ ವಾರ ಕಳೆಯುತ್ತಿದ್ದರೂ ನಿರೀಕ್ಷಿತ ಪ್ರಮಾಣದ ಮಳೆ ಬೀಳದೆ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ರೈತರಲ್ಲಿ ಆತಂಕ ಹೆಚ್ಚು ಮಾಡಿದೆ. ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿದ್ದರೆ ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಇದರಿಂದ ರೈತರ ಕೃಷಿ ಚಟುವಟಿಕೆ ಜೊತೆಗೆ ಕುಡಿಯುವ ನೀರಿಗೆ ತೊಂದರೆಯಾಗುವ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

124.80 ಗರಿಷ್ಠ ಮಟ್ಟದ ಕೆಆರ್ ಎಸ್ ಜಲಾಶಯದಲ್ಲಿ ಜೂ.16ರ ಬೆಳಗ್ಗೆ 8 ಗಂಟೆ ವೇಳೆಗೆ 81.35 ಅಡಿ ನೀರು ಸಂಗ್ರಹವಾಗಿತ್ತು. ಅಣೆಕಟ್ಟೆಯಲ್ಲಿ ಕೇವಲ 11.394 ಟಿಎಂಸಿ ನೀರು ಸಂಗ್ರಹವಾಗಿದ್ದು, ಅಣೆಕಟ್ಟೆಗೆ 581 ಕ್ಯುಸೆಕ್ ನೀರು ಹರಿದು ಬರುತ್ತಿದೆ. ನದಿ, ಕಾಲುವೆಗಳು ಹಾಗೂ ಕುಡಿಯುವ ನೀರಿನ ಸರಬರಾಜು ಸೇರಿದಂತೆ ಒಟ್ಟು 436 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ – Kannada News | Prakash Raj reveled about what did Chinnayya said to him

ಧರ್ಮಸ್ಥಳ ಪ್ರಕರಣದಲ್ಲಿ ನಟ ಪ್ರಕಾಶ್ ರೈ (Prakash Raj) ಹೆಸರು ಕೇಳಿ ಬಂದಿದೆ. ಚಿನ್ನಯ್ಯ ಹೈಕೋರ್ಟ್​​ಗೆ ಹಾಕಿರುವ ಅರ್ಜಿಯಲ್ಲಿ ನಟ ಪ್ರಕಾಶ್ ರೈ ಹೆಸರನ್ನೂ ಹೇಳಿದ್ದಾರೆ. ಗಿರೀಶ್ ಮಟ್ಟೆಣ್ಣವರ್ ಹೇಳಿಕೊಟ್ಟಂತೆ ಹೇಳಿದರೆ ನಾನೇ ಬಂದು ನಿನ್ನನ್ನು ತಬ್ಬಿಕೊಳ್ಳುವೆ ಎಂದು ಪ್ರಕಾಶ್ ರೈ ಹೇಳಿದ್ದರು ಎಂದು ಚಿನ್ನಯ್ಯ ಹೇಳಿದ್ದು, ಇದೀಗ ನಟ ಪ್ರಕಾಶ್ ರೈ, ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪ್ರಕಾಶ್ ರೈ, ತಮ್ಮ ಹಾಗೂ ಚಿನ್ನಯ್ಯನ ನಡುವೆ ತಮಿಳು ಭಾಷೆಯಲ್ಲಿ ನಡೆದಿದ್ದ ಸಂಭಾಷಣೆಯನ್ನು ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

‘ಕಲ್ಕಿ 2898 ಎಡಿ’ ಪಾರ್ಟ್ 2 ಪ್ರಭಾಸ್ ಸಿನಿಮಾ ಅಲ್ಲ, ಕಮಲ್ ಹಾಸನ್ ಸಿನಿಮಾ – Kannada News | Kalki 2898 AD Part 2 will be Kamal Haasan’s movie says fans

ಪ್ರಭಾಸ್ (Prabhas) ಮುಖ್ಯ ಪಾತ್ರದಲ್ಲಿ ನಟಿಸಿದ್ದ ‘ಕಲ್ಕಿ 2898 ಎಡಿ’ ಸಿನಿಮಾ 2024 ರಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. 2898 ರ ಪ್ರಪಂಚದಲ್ಲಿ ಸಿನಿಮಾದ ಕತೆ ಸ್ಥಿತಗೊಂಡಿದೆ. ಸಿನಿಮಾನಲ್ಲಿ ಪ್ರಭಾಸ್ ಮಾತ್ರವಲ್ಲದೆ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಇನ್ನೂ ಕೆಲವು ಖ್ಯಾತನಾಮ ನಟರಿದ್ದರು. ಆದರೆ ಮುಖ್ಯ ಪಾತ್ರಗಳಿದ್ದಿದ್ದು ಪ್ರಭಾಸ್, ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಮಾತ್ರವೇ. ಕಮಲ್ ಹಾಸನ್ ಅವರೂ ಸಿನಿಮಾನಲ್ಲಿದ್ದರಾದರೂ ಅವರ ಪಾತ್ರಕ್ಕೆ ಮೊದಲ ಭಾಗದಲ್ಲಿ ಹೆಚ್ಚು ಪ್ರಾಮುಖ್ಯತೆ ಇರಲಿಲ್ಲ. ಇದೀಗ ಸಿನಿಮಾದ ಎರಡನೇ ಭಾಗ ಚಿತ್ರೀಕರಣಗೊಳ್ಳುತ್ತಿದ್ದು, ಈ ಸಿನಿಮಾನಲ್ಲಿ ಪ್ರಭಾಸ್​​ಗಿಂತಲೂ ಕಮಲ್ ಹಾಸನ್ ಪಾತ್ರವೇ ಹೆಚ್ಚು ಹೈಲೆಟ್ ಆಗಲಿದೆಯಂತೆ.

ಕಮಲ್ ಹಾಸನ್ ಅವರು ಯಾಸ್ಕಿನ್ ಹೆಸರಿನ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಭಾಗದಲ್ಲಿ ವಯಸ್ಸಾದ, ಮೂಳೆ-ಚಕ್ಕಳೆಗಳೇ ಎದ್ದು ಕಾಣುವ ಕಡು ಮುದುಕನ ರೀತಿ ಕಮಲ್ ಪಾತ್ರವನ್ನು ತೋರಿಸಲಾಗಿತ್ತು. ಆದರೆ ಈಗ ಬರಲಿರುವ ‘ಕಲ್ಕಿ 2898 ಎಡಿ’ ಎರಡನೇ ಭಾಗದಲ್ಲಿ ಕಮಲ್ ಹಾಸನ್ ಅವರನ್ನು ಭಾರಿ ಬಲಿಷ್ಠ ಮತ್ತು ಸರ್ವ ಶಕ್ತಿಶಾಲಿ ಪಾತ್ರದಲ್ಲಿ ತೋರಿಸಲಾಗುತ್ತಿದೆಯಂತೆ. ಮೊದಲ ಭಾಗದ ಅಂತ್ಯದಲ್ಲಿ ಈ ಬಗ್ಗೆ ಸುಳಿವನ್ನು ನಿರ್ದೇಶಕ ನಾಗ್ ಅಶ್ವಿನ್ ನೀಡಿದ್ದರು.

ಮೊದಲ ಭಾಗದ ಕೊನೆಯಲ್ಲಿ ಕಮಲ್ ಪಾತ್ರವಾದ ಯಾಸ್ಕಿನ್​​, ಸುಮತಿಯ ಗರ್ಭದಿಂದ ತೆಗೆಯಲಾಗಿದ್ದ ಸಿರಮ್ ಒಂದನ್ನು ಕುಡಿದು ಚೈತನ್ಯ ಪಡೆಯುತ್ತಾನೆ. ಎಷ್ಟು ಬಲಶಾಲಿ ಆಗುತ್ತಾನೆಂದರೆ ಅರ್ಜುನನ ಗಾಂಢೀವವನ್ನು ಮೇಲೆತ್ತಿ, ತಾನು ಪ್ರಪಂಚವನ್ನು ಬದಲಾಯಿಸುವ ಶಪತ ಮಾಡುತ್ತಾನೆ. ಇದೀಗ ಎರಡನೇ ಭಾಗದಲ್ಲಿ ಕಮಲ್ ಹಾಸನ್ ಪಾತ್ರ ಇನ್ನಷ್ಟು ಶಕ್ತಿ ಗಳಿಸಿಕೊಂಡಿದ್ದು, ಇನ್ನಷ್ಟು ದೈತ್ಯವಾಗಿಯೂ ಧೃಡ ದೇಹಿಯಾಗಿಯೂ ಕಮಲ್ ಅವರನ್ನು ಚಿತ್ರಿಸಲಾಗಿದೆ.

ಇದನ್ನೂ ಓದಿ:ಈಗ ಸಿನಿಮಾ ಆಗಿದೆ 47 ವರ್ಷ ಹಿಂದಿನ ಕತೆ, ಕಮಲ್ ಹಾಸನ್ ನಟಿಸಬೇಕಿತ್ತು

ಕಮಲ್ ಅವರ ಪಾತ್ರದ ಕೆಲವು ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಾಲಿವುಡ್​​ನ ‘ದಿ ಮಮ್ಮಿ’ ಸಿನಿಮಾದ ವಿಲನ್ ರೀತಿ ಬಲು ದೈತ್ಯವಾಗಿ, ಅದ್ಧೂರಿಯಾಗಿ ಕಮಲ್ ಹಾಸನ್ ಕಾಣುತ್ತಿದ್ದಾರೆ. ಕಮಲ್ ಹಾಸನ್ ಪಾತ್ರದ ಪೋಸ್ಟರ್ ಅನ್ನು ಚಿತ್ರತಂಡ ಅಧಿಕೃತವಾಗಿ ಹಂಚಿಕೊಂಡಿಲ್ಲವಾದರೂ ಕೆಲ ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

‘ಕಲ್ಕಿ 2898 ಎಡಿ’ ಸಿನಿಮಾವು 2898ರ ವರ್ಷದಲ್ಲಿ ಸ್ಥಿತವಾಗಿರುವ ಕತೆಯಾಗಿದೆ. ಅಮಿತಾಬ್ ಬಚ್ಚನ್ ಅವರು ಅಶ್ವತ್ಥಾಮನ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ಭಾಗದಲ್ಲಿ ಮಹಾಭಾರತದ ಕತೆಯನ್ನು ಸಹ ಹೇಳಲಾಗಿತ್ತು. ಈಗ ಪಾರ್ಟ್ 2 ನಲ್ಲೂ ಕತೆ ಮುಂದುವರೆಯಲಿದೆ. ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೆಂಡಾಯಾ ಜೊತೆಗಿನ ಮದುವೆ ನಿಜವೆಂದ ‘ಸ್ಪೈಡರ್ ಮ್ಯಾನ್’ ನಟ ಟಾಮ್ ಹಾಲೆಂಡ್ – Kannada News | Tom Holland Confirms Zendaya Marriage: ‘Spider Man’ Star Reveals Wedding Details

ಹಾಲಿವುಡ್‌ನ ಸ್ಟಾರ್ ಜೋಡಿಗಳಾದ ಟಾಮ್ ಹಾಲೆಂಡ್ ಮತ್ತು ಜೆಂಡಾಯಾ ಈಗಾಗಲೇ ಗುಟ್ಟಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು ತಿಂಗಳುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಆದರೆ ಈ ಬಗ್ಗೆ ಇಬ್ಬರೂ ಎಲ್ಲೂ ತುಟಿ ಬಿಚ್ಚಿರಲಿಲ್ಲ. ಇದೀಗ ತಮ್ಮ ಹೊಸ ಚಿತ್ರದ ಪ್ರಚಾರದ ವೇಳೆ ಟಾಮ್ ಹಾಲೆಂಡ್ ನೀಡಿದ ಉತ್ತರ, ಅವರಿಬ್ಬರ ಮದುವೆ ನಿಜವಾಗಿರುವುದನ್ನು ಬಹುತೇಕ ಖಚಿತಪಡಿಸಿದೆ.

ಟಾಮ್ ಹಾಲೆಂಡ್ ಮತ್ತು ಜೆಂಡಾಯಾ ನಟನೆಯ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಇದರ ಪ್ರಚಾರ ಕಾರ್ಯಗಳು ಜೋರಾಗಿ ನಡೆಯುತ್ತಿವೆ. ಈ ವೇಳೆ ಬ್ರಿಟನ್‌ನ ಮ್ಯಾಗಜೀನ್ ಜೊತೆ ಮಾತನಾಡುತ್ತಾ ಟಾಮ್‌ಗೆ ಒಂದು ಆಸಕ್ತಿದಾಯಕ ಪ್ರಶ್ನೆ ಎದುರಾಯಿತು.

ಇವರಿಬ್ಬರ ಮದುವೆ ನಡೆದ ರೀತಿಯ ಕೃತಕ ಬುದ್ಧಿಮತ್ತೆ (AI) ಸೃಷ್ಟಿತ ಫೋಟೋಗಳು ಭಾರಿ ವೈರಲ್ ಆಗಿದ್ದವು. ಈ ಬಗ್ಗೆ ಕೇಳಲಾಯಿತು. ‘ನಿಮ್ಮ ಮದುವೆಯ ಎಐ ಫೋಟೋಗಳ ಬಗ್ಗೆ ನಿಮ್ಮ ಕುಟುಂಬದವರಿಗೆ ಮೊದಲೇ ಸ್ಪಷ್ಟನೆ ನೀಡಬೇಕಾಗಿ ಬಂತೇ?’ ಎಂದು ಟಾಮ್‌ರನ್ನು ಪ್ರಶ್ನಿಸಲಾಯಿತು. ಇದಕ್ಕೆ ನಗುತ್ತಲೇ ಉತ್ತರಿಸಿದ ಟಾಮ್ ಹಾಲೆಂಡ್, ‘ಅಗತ್ಯವೇ ಇರಲಿಲ್ಲ, ಏಕೆಂದರೆ ಅವರೆಲ್ಲರೂ ಆ ಮದುವೆಯಲ್ಲಿ ಹಾಜರಿದ್ದರು’ ಎಂದು ಹೇಳುವ ಮೂಲಕ ನಿಜವಾಗಿಯೂ ಮದುವೆ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ‘ಇದರ ಬಗ್ಗೆ ನಿಮಗೆ ಇಷ್ಟೇ ಮಾಹಿತಿ ಸಿಗುತ್ತದೆ’ ಎಂದು ಹೇಳಿ ಮದುವೆಯ ಸಸ್ಪೆನ್ಸ್ ಮುಂದುವರಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಲ್ಲೇ ಜೆಂಡಾಯಾ ಅವರ ಸ್ಟೈಲಿಸ್ಟ್ ಲಾ ರೋಚ್ ಅವರು ಈ ಜೋಡಿ ಈಗಾಗಲೇ ಮದುವೆಯಾಗಿದೆ ಎಂದು ಸುಳಿವು ನೀಡಿದ್ದರು. ಈಗ ಅದು ಸಂಪೂರ್ಣ ನಿಜವಾದಂತಾಗಿದೆ.

‘ಜೆಂಡಾಯಾ ನನ್ನ ಬೆಸ್ಟ್ ಫ್ರೆಂಡ್’ ಎಂದ ನಟ

ಇದೇ ಸಂದರ್ಶನದಲ್ಲಿ ತಮ್ಮ ಸಂಬಂಧದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಟಾಮ್, ‘ಸಿನಿಮಾ ರಂಗದಲ್ಲಿ ತುಂಬಾ ಒತ್ತಡದ ಪರಿಸ್ಥಿತಿಗಳು ಎದುರಾಗುತ್ತವೆ. ಇಂತಹ ಸಮಯದಲ್ಲಿ ನಮಗೆ ಸದಾ ಬೆಂಬಲವಾಗಿ ನಿಲ್ಲುವ ಒಳ್ಳೆಯ ಸಂಗಾತಿ ಇರುವುದು ಅದೃಷ್ಟ. ನನ್ನ ಜೀವನದ ಆ ಸ್ಪೆಷಲ್ ವ್ಯಕ್ತಿ ನನಗೆ ಸಿಕ್ಕಿದ್ದಾರೆ. ಆಕೆ ನನ್ನ ಬೆಸ್ಟ್ ಫ್ರೆಂಡ್. ಆಕೆಯ ಜೊತೆಗಿದ್ದಾಗ ನಾನು ಜಗತ್ತಿನ ಅತ್ಯಂತ ಸಂತೋಷದ ಮನುಷ್ಯನಾಗಿರುತ್ತೇನೆ. ಆಕೆ  ನೀಡುವ ಬೆಂಬಲ ಬೇರೆಲ್ಲೂ ಸಿಗುವುದಿಲ್ಲ’ ಎಂದು ಜೆಂಡಾಯಾ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

2026 ರಲ್ಲಿ ಈ ಜೋಡಿಯ ಡಬಲ್ ಧಮಾಕಾ!

2017ರ ‘ಸ್ಪೈಡರ್ ಮ್ಯಾನ್: ಹೋಮ್ ಕಮಿಂಗ್’ ಚಿತ್ರದ ಶೂಟಿಂಗ್ ವೇಳೆ ಮೊದಲ ಬಾರಿಗೆ ಭೇಟಿಯಾಗಿದ್ದ ಈ ಜೋಡಿ, ಪ್ರಸ್ತುತ ಜಾಗತಿಕವಾಗಿ ಭಾರಿ ಜನಪ್ರಿಯತೆ ಗಳಿಸಿದೆ. ಈ ವರ್ಷ (2026) ಅಭಿಮಾನಿಗಳಿಗೆ ಇವರಿಬ್ಬರು ಒಂದೇ ಬಾರಿಗೆ ಎರಡು ಸಿನಿಮಾಗಳ ಮೂಲಕ ದರ್ಶನ ನೀಡಲಿದ್ದಾರೆ.

ಮೊದಲನೆಯದಾಗಿ, ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದು, ಈ ಚಿತ್ರ ಜುಲೈ 17 ರಂದು ಬಿಡುಗಡೆಯಾಗುತ್ತಿದೆ. ಇದರ ಬೆನ್ನಲ್ಲೇ, ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಭಾರತದಲ್ಲಿ ಜುಲೈ 30ರಂದು (ವಿಶ್ವಾದ್ಯಂತ ಬಿಡುಗಡೆಗಿಂತ ಒಂದು ದಿನ ಮುಂಚಿತವಾಗಿ) ಅದ್ಧೂರಿಯಾಗಿ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version