ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ನಡುಗಿದ ಮಲೆನಾಡು: ಕುಸಿದ ಧರೆ, ರಸ್ತೆಗೆ ಉರುಳಿದ ಮರಗಳು – Kannada News | Chikkamagaluru: Malnad Shivers as Intermittent Rain Triggers Landslides, Trees Fall on Roads

ಚಿಕ್ಕಮಗಳೂರು, ಆಗಸ್ಟ್​​ 10: ಮಳೆಯನಾಡು ಎಂದೇ ಪ್ರಸಿದ್ಧವಾಗಿರುವ ಕಾಫಿನಾಡು ಚಿಕ್ಕಮಗಳೂರು (chikkamagaluru) ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೊಂಚ ವಿರಾಮ ನೀಡಿದ್ದ ಮಳೆ (Rain) ಮತ್ತೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಕೊಪ್ಪ, ಶೃಂಗೇರಿ, ಕಳಸ ಹಾಗೂ ಮೂಡಿಗೆರೆ ತಾಲೂಕಿನ ಹಲವು ಭಾಗಗಳಲ್ಲಿ ರಣಮಳೆಯಾಗುತ್ತಿದ್ದು, ವಾಡಿಕೆ ಪ್ರಮಾಣದಷ್ಟು ಮಳೆಯಾಗದಿದ್ದರೂ ಬಿಟ್ಟು ಬಿಟ್ಟು ಸುರಿಯುತ್ತಿರುವ ನಿರಂತರ ಗಾಳಿ-ಮಳೆಯಿಂದಾಗಿ ಭೂಮಿಯ ತೇವಾಂಶ ಹೆಚ್ಚಾಗಿ ನಾನಾ ಅವಾಂತರಗಳು ಸಂಭವಿಸುತ್ತಿವೆ.

ಮಳೆಗೆ ಧರೆ ಕುಸಿತ: ಮನೆ ನುಗ್ಗಿದ ಮಣ್ಣು ಮಿಶ್ರಿತ ನೀರು

ಕೊಪ್ಪ ತಾಲೂಕಿನ ಅಂಬಳಿಕೆ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಗೆ ಪವನ್ ಎಂಬುವವರ ಮನೆಯ ಬಳಿ ಇರುವ ಧರೆ ಕುಸಿಯುತ್ತಿದೆ. ಧರೆ ಕುಸಿದು ಮನೆಯ ಹಿಂಭಾಗಕ್ಕೆ ಬಂದಿದ್ದು. ಮಳೆ ಹೆಚ್ಚಾದರೆ ಸಂಪೂರ್ಣ ಧರೆ ಕುಸಿಯುವ ಆತಂಕ ಎದುರಾಗಿದೆ. ಮನೆಯೊಳಗು ಮಣ್ಣು ಮಿಶ್ರಿತ ನೀರು ನುಗ್ಗಿದ್ದು, ಸದ್ಯ ಮನೆ ಖಾಲಿ ಮಾಡಿದ್ದಾರೆ. ಇನ್ನಷ್ಟು ಮಳೆಯಾದರೆ 100 ಅಡಿಗಳ ಎತ್ತರದಿಂದ ಧರೆ ಕುಸಿದು ಮನೆ ಮೇಲೆ ಬೀಳುವ ಆತಂಕ ಎದುರಾಗಿದೆ.

ಇದನ್ನೂ ಓದಿ: ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿ ಭೂಕುಸಿತ: ಪೊಲೀಸ್ ವಸತಿಗೃಹಗಳತ್ತ ಕೊಚ್ಚಿಬಂತು ನೂರಾರು ಟನ್ ಕಸದ ರಾಶಿ!

ಕಾಫಿನಾಡ ಮಲೆನಾಡು ಭಾಗದಲ್ಲಿ ಗಾಳಿ-ಮಳೆ ಅಬ್ಬರ ಮುಂದುವರೆದಿದ್ದು, ನಿರಂತರ ಮಳೆಗೆ ಭೂಮಿಯ ತೇವಾಂಶ ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ-ಪದೇ ಗುಡ್ಡ ಕುಸಿಯುತ್ತಿದೆ. ಶೃಂಗೇರಿ ತಾಲೂಕಿನ ಸುತ್ತಮುತ್ತ ನಿರಂತರ ಮಳೆಯಿಂದ ನಾನಾ ಅವಾಂತರಗಳು ಸೃಷ್ಠಿಯಾಗಿವೆ. ಶೃಂಗೇರಿ ತಾಲೂಕಿನ ಕಡೇಮನೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಬೃಹತ್ ಗುಡ್ಡ ಕುಸಿದಿದೆ.

ಶೃಂಗೇರಿ-ಮಂಗಳೂರು ಹೆದ್ದಾರಿ ನಡುವೆ ಸಂಚಾರಕ್ಕೆ ಅಡಚಣೆ!

ಗಾಳಿ-ಮಳೆ ಹೆಚ್ಚಾದಂತೆ ರಸ್ತೆ ಬದಿಯ ಗುಡ್ಡವು ಮರಗಳ ಸಮೇತ ಧರೆಗೆ ಉರುಳಿದ್ದು, ರಾಷ್ಟ್ರೀಯ ಹೆದ್ದಾರಿ 169ರ ಕಾರ್ಕಳ-ಮಂಗಳೂರು- ಶೃಂಗೇರಿ ನಡುವಿನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ರಸ್ತೆಗೆ ಬಿದ್ದಿರುವ ಭಾರೀ ಪ್ರಮಾಣದ ಮಣ್ಣು ಮತ್ತು ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ. ಆದರೆ, ಮಳೆಯಿಂದಾಗಿ ಸ್ವಲ್ಪ ಸ್ವಲ್ಪ ಮಣ್ಣು ಜಾರುತ್ತಿದ್ದು, ತೆರವು ಕಾರ್ಯ ಸವಾಲಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಪ್ರಯಾಣಿಸುವ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಮಾರ್ಗದಲ್ಲಿ ಮಳೆ ಹೆಚ್ಚಾದಂತೆಲ್ಲ ಭೂಮಿಯ ತೇವಾಂಶ ಹೆಚ್ಚಾಗಿ ಧರೆ ಕುಸಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಹುಟ್ಟಿಸಿದೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ತುಂಗಾ, ಭದ್ರಾ ಅಬ್ಬರಕ್ಕೆ ಹೊಲ-ಗದ್ದೆಗಳು ಜಲಾವೃತ

ಕೊಂಚ ವಿರಾಮ ನೀಡಿದ್ದ ಮಳೆ ಮತ್ತೆ ಮಲೆನಾಡು ಭಾಗದಲ್ಲಿ ಆರ್ಭಟ ಮುಂದುವರೆಸಿದೆ. ಕೊಪ್ಪ, ಶೃಂಗೇರಿ ಭಾಗದಲ್ಲಿ ಧರೆ ಕುಸಿಯುವ ಆತಂಕ ಸೃಷ್ಟಿಯಾಗಿದೆ. ವಾಡಿಕೆ ಪ್ರಮಾಣದಷ್ಟು ಮಳೆಯಾಗದೆ ಇದ್ದರು ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಅನಾಹುತಗಳು‌ ಸಂಭವಿಸುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಾಣಿಕ ಪ್ರಭು ದೇವಸ್ಥಾನಕ್ಕೆ ಮೂಗು ಮುಚ್ಚಿಕೊಂಡು ಬರ್ತಿದ್ದ ಭಕ್ತರು: ಫ್ಯಾಕ್ಟರಿ ಮುಚ್ಚಲು ಈಶ್ವರ ಖಂಡ್ರೆ ಸೂಚನೆ – Kannada News | TV9 Impact: Minister Eshwar Khandre Orders To Close Chemical Factory Polluting Water In Bidar

ಬೆಂಗಳೂರು, (ಆಗಸ್ಟ್ 10): ಬೀದರ್ (Bidar) ಜಿಲ್ಲೆಯ ಹುಮನಾಬಾದ್ (Humnabad) ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳು (Factory) ಗುರುಗಂಗಾ, ಮಾಂಜ್ರಾ ನದಿಗೆ ರಾಸಾಯನಿಕ ತ್ಯಾಜ್ಯ ಹರಿಯ ಬಿಡುತ್ತಿರುವ ಬಗ್ಗೆ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಪ್ರಸಿದ್ಧ ಮಾಣಿಕ ಪ್ರಭು ದೇವಸ್ಥಾನಕ್ಕೆ ಬರೋ ಭಕ್ತರು ಮೂಗು ಮುಚ್ಚಿಕೊಂಡು ‌ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನೆಲ್ಲಾ ಅರಿತ ಸಚಿವ ಈಶ್ವರ್ ಖಂಡ್ರೆ, ಈ ಕೂಡಲೇ 3 ಕೈಗಾರಿಕೆ ಮುಚ್ಚಿಸಲು ಸೂಚನೆ ನೀಡಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಯವರಿಗೆ ಲಿಖಿತ ಸೂಚನೆ ನೀಡಿರುವ ಅವರು, ಮೆ.6H ಇಂಡಸ್ಟ್ರೀಸ್, ಮೆ.ಸತ್ಯದೀಪ್ತ ಕೆ. ಇಂಡಸ್ಟ್ರೀ ಮತ್ತು ಮೆ.ಹಿಮಾಲಯ ಕೈಗಾರಿಕೆಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಚ್ಚುವ ಆದೇಶ (ಕ್ಲೋಷರ್ ಆರ್ಡರ್) ಹೊರಡಿಸಿ, ಅನುಸರಣಾ ವರದಿಯನ್ನು 24 ಗಂಟೆಯೊಳಗಾಗಿ ಈ ಕಚೇರಿಗೆ ಸಲ್ಲಿಸಲು ಸೂಚಿಸಿದ್ದಾರೆ. ಹುಮ್ನಾಬಾದ್ ನ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕಾರ್ಖಾನೆಯಿಂದ ಗುರುಗಂಗಾ ಹಳ್ಳಕ್ಕೆ ಕೆಮಿಕಲ್ ಬಿಡಲಾಗುತ್ತಿತ್ತು. ಪ್ರತಿದಿನವೂ ಸಾವಿರಾರು ಲೀಟರ್ ಕೆಮಿಕಲ್ ಕಾರ್ಖಾನೆ ತ್ಯಾಜ್ಯ ಹಳ್ಳಕ್ಕೆ ಸೇರುತ್ತಿತ್ತು. ಇದರಿಂದ ಜಲಚರಗಳು ಪ್ರಾಣಿಗಳು ಮಾರಣಹೋಮಕ್ಕೆ ಕಾರಣವಾಗಿತ್ತು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಶಾಖಪಟ್ಟಣದಲ್ಲಿ ಆಗಸ್ಟ್ 19ರಿಂದ ಆರ್​ಎಸ್​ಎಸ್​ ಅಖಿಲ ಭಾರತ ಸಮನ್ವಯ ಬೈಠಕ್ – Kannada News | RSS All India Coordination Meeting Will be held in Visakhapatnam from August 19

ವಿಶಾಖಪಟ್ಟಣ, ಆಗಸ್ಟ್ 10: ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಗುಡಿಲೋವಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರೇರಣೆಯಿಂದ ಕಾರ್ಯನಿರ್ವಹಿಸುತ್ತಿರುವ ವಿವಿಧ ಅಂಗಸಂಸ್ಥೆಗಳ ಅಖಿಲ ಭಾರತ ಸಮನ್ವಯ ಸಭೆ ನಡೆಯಲಿದೆ. ಆಗಸ್ಟ್ 19ರಿಂದ 21ರವರೆಗೆ 3 ದಿನಗಳ ಕಾಲ ಈ ಪ್ರಮುಖ ಸಭೆಗಳು ನಡೆಯಲಿವೆ ಎಂದು ಆರ್‌ಎಸ್‌ಎಸ್ ಅಖಿಲ ಭಾರತ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಜೀವನ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಸಕ್ರಿಯವಾಗಿರುವ ಸುಮಾರು 32 ಸಂಘ ಪರಿವಾರದ ಅಂಗಸಂಸ್ಥೆಗಳು ಈ ಸಭೆಯಲ್ಲಿ ಭಾಗವಹಿಸಲಿವೆ. ಆಯಾ ಸಂಸ್ಥೆಗಳ ಅಖಿಲ ಭಾರತ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸಂಘಟನ ಸಚಿವರು ಮತ್ತು ಪ್ರಮುಖ ಕಾರ್ಯಕಾರಿ ಸದಸ್ಯರು ಈ ಸಭೆಯನ್ನು ಪ್ರತಿನಿಧಿಸಲಿದ್ದಾರೆ. ಭಾರತೀಯ ಮಜ್ದೂರ್ ಸಂಘ, ಭಾರತೀಯ ಕಿಸಾನ್ ಸಂಘ, ಭಾರತೀಯ ಜನತಾ ಪಕ್ಷ, ವಿಶ್ವ ಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸಕ್ಷಮ್, ರಾಷ್ಟ್ರೀಯ ಸೇವಿಕಾ ಸಮಿತಿ ಮತ್ತು ಇತರ ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ‘ಜೆನ್-ಜಿ ದೇಶವಿರೋಧಿಗಳಲ್ಲ, ಅವರ ಬಗ್ಗೆ ಅತಿಯಾದ ನಂಬಿಕೆಯಿದೆ’; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್

ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳು:

ಪರಸ್ಪರ ಸಮನ್ವಯ: ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅಂಗಸಂಸ್ಥೆಗಳ ನಡುವಿನ ಸಹಕಾರ ಮತ್ತು ಸಮನ್ವಯವನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದು.

ಸಾರ್ವಜನಿಕ ಕಲ್ಯಾಣ ನೀತಿ ನಿರ್ಧಾರಗಳು: ಸಾರ್ವಜನಿಕ ಆರೋಗ್ಯ, ಕಲ್ಯಾಣ ಮತ್ತು ನೀತಿ ವಿಷಯಗಳ ಕುರಿತು ಚರ್ಚೆಗಳು.

ಜನಸಂಖ್ಯಾ ಅಸಮತೋಲನ: ದೇಶದಲ್ಲಿ ಜನಸಂಖ್ಯಾ ಅಸಮತೋಲನದ ಪರಿಣಾಮಗಳ ವಿಮರ್ಶೆ.

ಮಾದಕ ವಸ್ತು ವಿಮೋಚನೆ: ಯುವಕರನ್ನು ವ್ಯಸನಗಳಿಂದ ದೂರವಿಟ್ಟು ಹೊಸ ಸಮಾಜ ನಿರ್ಮಾಣದಲ್ಲಿ ಭಾಗಿಗಳನ್ನಾಗಿ ಮಾಡುವುದು.

ಇದನ್ನೂ ಓದಿ: ಮೀಸಲಾತಿ ವ್ಯವಸ್ಥೆ ಬಗ್ಗೆ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?

ಪಂಚ ಪರಿವರ್ತನ – ಭಾರತೀಯ ಅಭಿವೃದ್ಧಿ ಮಾದರಿ: ಸಮಾಜದಲ್ಲಿನ ಧಾರ್ಮಿಕ ಮತ್ತು ಸಾಮಾಜಿಕ ಬದಲಾವಣೆಗಳು ಮತ್ತು ಸ್ಥಳೀಯ ದೃಷ್ಟಿಕೋನದೊಂದಿಗೆ ಅಭಿವೃದ್ಧಿ ಸಮಸ್ಯೆಗಳಿಗಾಗಿ ಪಂಚ ಪರಿವರ್ತನದ ಅನುಷ್ಠಾನದ ಕುರಿತು ಆಳವಾದ ಚರ್ಚೆಗಳು.

ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಸರ್​ಸಂಘಚಾಲಕ್ ಡಾ. ಮೋಹನ್ ಭಾಗವತ್ ಮತ್ತು ಸರ್​ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಸಾಮಾಜಿಕ ಬದಲಾವಣೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಗುರಿಯಾಗಿಟ್ಟುಕೊಂಡು ದೇಶಾದ್ಯಂತ ನಡೆಸಲಾಗುತ್ತಿರುವ ವಿವಿಧ ಕಾರ್ಯಕ್ರಮಗಳ ಕುರಿತು ಸಭೆಯು ನಿರ್ದೇಶನ ನೀಡಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:07 pm, Mon, 10 August 26

Source link

676 ಸ್ಟಾರ್ಟ್‌ಅಪ್‌ಗಳು, 548 ಒಪ್ಪಂದಗಳು: ಭಾರತದ ರಕ್ಷಣಾ ತಂತ್ರಜ್ಞಾನದ ಕನಸಿಗೆ ‘iDEX’ ಬಲ – Kannada News | 676 startups, 548 contracts: How iDEX is scaling India’s defence tech ambitions

2026ರ ಜುಲೈನಲ್ಲಿ ಹೈದರಾಬಾದ್​ನಲ್ಲಿ ನಡೆದ ಡಿಫೆನ್ಸ್ ನಾವೀನ್ಯತೆಯ ಪ್ರದರ್ಶನದಲ್ಲಿ ಕಂಡ ದೃಶ್ಯImage Credit source: PTI

ನವದೆಹಲಿ, ಆಗಸ್ಟ್ 10: ಭಾರತದ ರಕ್ಷಣಾ ಕ್ಷೇತ್ರದಲ್ಲಿ ನಾವೀನ್ಯತೆ (Defence Innovation) ಮತ್ತು ಸ್ವಾವಲಂಬನೆಯು ಸರ್ಕಾರಿ ಪ್ರಯೋಗಗಳ ಹಂತವನ್ನು ದಾಟಿ ದೊಡ್ಡ ಮಟ್ಟದ ಕ್ರಾಂತಿಗೆ ಕಾರಣವಾಗಿದೆ. ನೂರಾರು ನವೋದ್ಯಮಗಳು (Startups) ಹಾಗೂ ಎಂಎಸ್​ಎಂಇಗಳು (MSMEs) ಭಾರತೀಯ ಸಶಸ್ತ್ರ ಪಡೆಗಳ ತಾಂತ್ರಿಕ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುತ್ತಿವೆ. ಈ ಬೃಹತ್ ಬದಲಾವಣೆಯ ಕೇಂದ್ರಬಿಂದುವಾಗಿ ‘ಐಡಿಇಎಕ್ಸ್’ (Innovations for Defence Excellence – iDEX) ಕಾರ್ಯಾಚರಿಸುತ್ತಿದೆ.

2018ರಲ್ಲಿ ಕೇಂದ್ರ ಸರ್ಕಾರದಿಂದ ಚಾಲನೆ ಪಡೆದ ಈ ಯೋಜನೆಯು ಸ್ಟಾರ್ಟ್‌ಅಪ್‌ಗಳು, ಸಣ್ಣ ಉದ್ದಿಮೆದಾರರು ಹಾಗೂ ಸಂಶೋಧಕರನ್ನು ನೇರವಾಗಿ ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಕರಾವಳಿ ಕಾವಲು ಪಡೆಯ ಅಗತ್ಯತೆಗಳೊಂದಿಗೆ ಜೋಡಿಸುವ ಕಾರ್ಯ ಮಾಡುತ್ತಿದೆ.

iDEX ಯೋಜನೆಯ ಪ್ರಗತಿಯ ಅಂಕಿ-ಅಂಶಗಳು (ಫೆಬ್ರವರಿ 2026ರ ವರೆಗೆ)

  • ಸ್ಟಾರ್ಟ್‌ಅಪ್‌ಗಳ ಭಾಗವಹಿಸುವಿಕೆ: ಆರಂಭದಿಂದ ಇದುವರೆಗೆ ಸುಮಾರು 676 ಸ್ಟಾರ್ಟ್‌ಅಪ್‌ಗಳು, MSMEಗಳು ಹಾಗೂ ವೈಯಕ್ತಿಕ ಇನ್ನೋವೇಟರ್​ಗಳು ಈ ರಕ್ಷಣಾ ನಾವೀನ್ಯತೆ ವ್ಯವಸ್ಥೆಗೆ ಸೇರ್ಪಡೆಗೊಂಡಿದ್ದಾರೆ.
  • ವಿನ್ಯಾಸ ಮತ್ತು ಅಭಿವೃದ್ಧಿ ಒಪ್ಪಂದಗಳು: ಒಟ್ಟು 566 ತಾಂತ್ರಿಕ ಸವಾಲುಗಳನ್ನು (Challenges) ಬಿಡುಗಡೆ ಮಾಡಲಾಗಿದ್ದು, 548 ವಿನ್ಯಾಸ ಮತ್ತು ಅಭಿವೃದ್ಧಿ ಒಪ್ಪಂದಗಳಿಗೆ (Design-and-Development Contracts) ಸಹಿ ಹಾಕಲಾಗಿದೆ.
  • ಖರೀದಿಗೆ ಅನುಮೋದನೆ: ಈ ಯೋಜನೆಗಳ ಮೂಲಕ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳಲ್ಲಿ ಸುಮಾರು ₹3,853 ಕೋಟಿ ಮೌಲ್ಯದ 58 ಪ್ರೋಟೋಟೈಪ್‌ಗಳಿಗೆ (ಮಾದರಿಗಳು) ರಕ್ಷಣಾ ಪಡೆಯ ಖರೀದಿಗೆ ಅನುಮೋದನೆ ದೊರೆತಿದೆ.
  • ಅಂತಿಮ ಖರೀದಿ ಒಪ್ಪಂದಗಳು: ಈಗಾಗಲೇ ಸುಮಾರು ₹2,326 ಕೋಟಿ ಮೌಲ್ಯದ 45 ಖರೀದಿ ಒಪ್ಪಂದಗಳಿಗೆ (Procurement Contracts) ಅಂತಿಮವಾಗಿ ಸಹಿ ಹಾಕಲಾಗಿದೆ.

ಇದನ್ನೂ ಓದಿ: ಅಮೆರಿಕಕ್ಕೆ ಓದಲು ಹೋದವರಲ್ಲಿ ಶೇ. 81 ಮಂದಿ ತಾಯ್ನಾಡಿಗೆ ಬರಲು ಪ್ಲಾನ್; ಏನು ಕಾರಣ?

iDEX ತಂದ ಬದಲಾವಣೆ ಏನು?

ಹಿಂದೆ ರಕ್ಷಣಾ ವಲಯದ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯು ಕೇವಲ ದೊಡ್ಡ ಸರ್ಕಾರಿ ಸಂಸ್ಥೆಗಳು ಹಾಗೂ ಪ್ರಮುಖ ರಕ್ಷಣಾ ಕಂಪನಿಗಳಿಗೆ (DPSU) ಮಾತ್ರ ಸೀಮಿತವಾಗಿತ್ತು. ಆದರೆ iDEX ಮಾದರಿಯು ಸಣ್ಣ ಕಂಪನಿಗಳು ಮತ್ತು ಯುವ ಸಂಶೋಧಕರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ನೇರ ವೇದಿಕೆ ಕಲ್ಪಿಸಿದೆ.

  • ಸೇನೆಯ ಅಗತ್ಯ ಆಧರಿತ ನಾವೀನ್ಯತೆ: ಸಶಸ್ತ್ರ ಪಡೆಗಳು ತಮ್ಮ ಕಾರ್ಯಾಚರಣೆಗೆ ಅಗತ್ಯವಿರುವ ತಾಂತ್ರಿಕ ಸವಾಲುಗಳನ್ನು ನೀಡುತ್ತವೆ. ಸ್ಟಾರ್ಟ್‌ಅಪ್‌ಗಳು ಇದಕ್ಕೆ ಸೂಕ್ತ ಪರಿಹಾರ ರೂಪಿಸಲು ಪೈಪೋಟಿ ನಡೆಸುತ್ತವೆ.
  • ಆರ್ಥಿಕ ಮತ್ತು ತಾಂತ್ರಿಕ ನೆರವು: ಆಯ್ಕೆಯಾದ ಸಂಸ್ಥೆಗಳಿಗೆ ಆರ್ಥಿಕ ನೆರವಿನ ಜೊತೆಗೆ ಮಿಲಿಟರಿ ತಜ್ಞರ ಮಾರ್ಗದರ್ಶನ, ಪರೀಕ್ಷಾ ಸೌಲಭ್ಯಗಳು (Testing Facilities) ಮತ್ತು ಕಾವುಕೇಂದ್ರಗಳ (Incubation) ಬೆಂಬಲ ಸಿಗುತ್ತದೆ.
  • ಸೇನಾ ಗುಣಮಟ್ಟಕ್ಕೆ ಸಿದ್ಧತೆ: ಸಾಮಾನ್ಯ ಉತ್ಪನ್ನಗಳಿಗಿಂತ ಮಿಲಿಟರಿ ಬಳಕೆಯ ತಂತ್ರಜ್ಞಾನಗಳು ಅತಿಹೆಚ್ಚು ಕಠಿಣ ವಾತಾವರಣದಲ್ಲೂ ಕಾರ್ಯನಿರ್ವಹಿಸಬೇಕಾಗುತ್ತದೆ (Ruggedisation & Reliability). ಸೇನೆಯೊಂದಿಗೆ ನೇರ ಸಂಪರ್ಕ ಇರುವುದರಿಂದ ತಂತ್ರಜ್ಞಾನ ಅಭಿವೃದ್ಧಿ ಮತ್ತು ಅದರ ಪ್ರಾಯೋಗಿಕ ಬಳಕೆಯ ನಡುವಿನ ಅಂತರ ಕಡಿಮೆಯಾಗಿದೆ.

ಇದನ್ನೂ ಓದಿ: ಮಗಳ PPF ಹಣ ಹಿಂಪಡೆದ ತಂದೆ: ಬಡ್ಡಿ ಸಮೇತ ಮರಳಿಸಲು ಕೋರ್ಟ್ ಆದೇಶ; ಏನಿವೆ ಪಿಪಿಎಫ್ ನಿಯಮಗಳು?

ಅನುದಾನದ ಪ್ರಮಾಣ ಹೆಚ್ಚಳ

  • ಆರಂಭಿಕ ಹಂತ: ಮೂಲ iDEX ಯೋಜನೆಯಲ್ಲಿ ₹1.5 ಕೋಟಿಯವರೆಗೆ ಅನುದಾನ ನೀಡಲಾಗುತ್ತಿತ್ತು.
  • iDEX Prime (2022): ಅತ್ಯಾಧುನಿಕ ಹಾಗೂ ಸಂಕೀರ್ಣ ತಂತ್ರಜ್ಞಾನ ಯೋಜನೆಗಳಿಗೆ ಬೆಂಬಲ ನೀಡಲು ‘iDEX Prime’ ಜಾರಿಗೆ ತರಲಾಗಿದ್ದು, ಅನುದಾನವನ್ನು ₹10 ಕೋಟಿಯವರೆಗೆ ಹೆಚ್ಚಿಸಲಾಗಿದೆ.
  • ತಂತ್ರಜ್ಞಾನದ ಕ್ಷೇತ್ರಗಳು: ಕೃತಕ ಬುದ್ಧಿಮತ್ತೆ (Artificial Intelligence), ಅಡ್ವಾನ್ಸ್ಡ್ ಇಮೇಜಿಂಗ್, ಸೆನ್ಸರ್‌ಗಳು, ಬಿಗ್ ಡೇಟಾ ಅನಾಲಿಟಿಕ್ಸ್, ಸ್ವಾಯತ್ತ ಡ್ರೋನ್/ಪ್ಲಾಟ್‌ಫಾರ್ಮ್‌ಗಳು ಮತ್ತು ಸುರಕ್ಷಿತ ಸಂವಹನ ವ್ಯವಸ್ಥೆಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಿಡದಿ ಟೌನ್​​​ಶಿಪ್ ಬಗ್ಗೆ ಪಿಸು ಮಾತು ವೈರಲ್: ಸ್ಪಷ್ಟನೆ ನೀಡಿದ ವಿಜಯೇಂದ್ರ – Kannada News | BY Vijayendra Clarifies on His Conversation With Madhu Bangarappa about Bidadi Township Row And JDS

ಬೆಂಗಳೂರು, (ಆಗಸ್ಟ್ 10): ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಮ್ಮತ ಇದೆ ಎಂದು ಬಹಿರಂಗವಾಗಿ ಹೇಳಲಾಗುತ್ತಿದ್ದರೂ, ಆಂತರಿಕವಾಗಿ ಗೊಂದಲ ಇದೆ ಎಂಬುವುದು ಪದೇ ಪದೇ ಸಾಬೀತಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಿಡದಿ ಟೌನ್ ಶಿಪ್ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಸಚಿವ ಮಧು ಬಂಗಾರಪ್ಪ ನಡುವಿನ ಪಿಸು ಮಾತು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೌದು…. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಅತಿವೃಷ್ಠಿ ಹಾಗೂ ಅನಾವೃಷ್ಟಿ ಪರಿಶೀಲನಾ ಸಭೆಗೂ ಮುನ್ನ ಸಚಿವ ಮಧು ಬಂಗಾರಪ್ಪ ಹಾಗೂ ವಿಜಯೇಂದ್ರ ನಡುವೆ ನಡೆದ ಮಾತುಕತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಿಡದಿ ಟೌನ್ ಶಿಪ್ ಹೋರಾಟದ ವಿಚಾರವಾಗಿ ಉಭಯ ನಾಯಕರು ಪಿಸು ದನಿಯಲ್ಲಿ ಮಾತುಕತೆ ನಡೆಸಿದ್ದಾರೆ. ಹೋರಾಟ ಗಂಭೀರ ಸ್ವರೂಪದಲ್ಲಿಲ್ಲ ಎಂಬ ವಿಚಾರವನ್ನು ಮಧು ಬಂಗಾರಪ್ಪ ಅವರಲ್ಲಿ ವಿಜಯೇಂದ್ರ ಹಂಚಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಡಿಯೋ ಫುಲ್ ವೈರಲ್ ಅಗುತ್ತಿದ್ದಂತೆಯೇ ಸ್ವತಃ ವಿಜಯೇಂದ್ರ ಸ್ಪಷ್ಟನೆ ನೀಡಿ ತೇಪೆ ಹಚ್ಚಲು ಮುಂದಾಗಿದೆ. ಹಾಗಾದ್ರೆ, ವಿಜಯೇಂದ್ರ ಸ್ಪಷ್ಟನೆಯಲ್ಲಿ ಏನಿದೆ ಎನ್ನುವುದನ್ನು ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ನಡುಗಿದ ಮಲೆನಾಡು: ಕುಸಿದ ಧರೆ, ರಸ್ತೆಗೆ ಉರುಳಿದ ಮರಗಳು – Kannada News | Chikkamagaluru malnad shivers as intermittent rain triggers landslides trees fall on roads

ಚಿಕ್ಕಮಗಳೂರು, ಆಗಸ್ಟ್​​ 10: ಮಳೆಯನಾಡು ಎಂದೇ ಪ್ರಸಿದ್ಧವಾಗಿರುವ ಕಾಫಿನಾಡು ಚಿಕ್ಕಮಗಳೂರು (chikkamagaluru) ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೊಂಚ ವಿರಾಮ ನೀಡಿದ್ದ ಮಳೆ (Rain) ಮತ್ತೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಕೊಪ್ಪ, ಶೃಂಗೇರಿ, ಕಳಸ ಹಾಗೂ ಮೂಡಿಗೆರೆ ತಾಲೂಕಿನ ಹಲವು ಭಾಗಗಳಲ್ಲಿ ರಣಮಳೆಯಾಗುತ್ತಿದ್ದು, ವಾಡಿಕೆ ಪ್ರಮಾಣದಷ್ಟು ಮಳೆಯಾಗದಿದ್ದರೂ ಬಿಟ್ಟು ಬಿಟ್ಟು ಸುರಿಯುತ್ತಿರುವ ನಿರಂತರ ಗಾಳಿ-ಮಳೆಯಿಂದಾಗಿ ಭೂಮಿಯ ತೇವಾಂಶ ಹೆಚ್ಚಾಗಿ ನಾನಾ ಅವಾಂತರಗಳು ಸಂಭವಿಸುತ್ತಿವೆ.

ಮಳೆಗೆ ಧರೆ ಕುಸಿತ: ಮನೆ ನುಗ್ಗಿದ ಮಣ್ಣು ಮಿಶ್ರಿತ ನೀರು

ಕೊಪ್ಪ ತಾಲೂಕಿನ ಅಂಬಳಿಕೆ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಗೆ ಪವನ್ ಎಂಬುವವರ ಮನೆಯ ಬಳಿ ಇರುವ ಧರೆ ಕುಸಿಯುತ್ತಿದೆ. ಧರೆ ಕುಸಿದು ಮನೆಯ ಹಿಂಭಾಗಕ್ಕೆ ಬಂದಿದ್ದು. ಮಳೆ ಹೆಚ್ಚಾದರೆ ಸಂಪೂರ್ಣ ಧರೆ ಕುಸಿಯುವ ಆತಂಕ ಎದುರಾಗಿದೆ. ಮನೆಯೊಳಗು ಮಣ್ಣು ಮಿಶ್ರಿತ ನೀರು ನುಗ್ಗಿದ್ದು, ಸದ್ಯ ಮನೆ ಖಾಲಿ ಮಾಡಿದ್ದಾರೆ. ಇನ್ನಷ್ಟು ಮಳೆಯಾದರೆ 100 ಅಡಿಗಳ ಎತ್ತರದಿಂದ ಧರೆ ಕುಸಿದು ಮನೆ ಮೇಲೆ ಬೀಳುವ ಆತಂಕ ಎದುರಾಗಿದೆ.

ಇದನ್ನೂ ಓದಿ: ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿ ಭೂಕುಸಿತ: ಪೊಲೀಸ್ ವಸತಿಗೃಹಗಳತ್ತ ಕೊಚ್ಚಿಬಂತು ನೂರಾರು ಟನ್ ಕಸದ ರಾಶಿ!

ಕಾಫಿನಾಡ ಮಲೆನಾಡು ಭಾಗದಲ್ಲಿ ಗಾಳಿ-ಮಳೆ ಅಬ್ಬರ ಮುಂದುವರೆದಿದ್ದು, ನಿರಂತರ ಮಳೆಗೆ ಭೂಮಿಯ ತೇವಾಂಶ ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ-ಪದೇ ಗುಡ್ಡ ಕುಸಿಯುತ್ತಿದೆ. ಶೃಂಗೇರಿ ತಾಲೂಕಿನ ಸುತ್ತಮುತ್ತ ನಿರಂತರ ಮಳೆಯಿಂದ ನಾನಾ ಅವಾಂತರಗಳು ಸೃಷ್ಠಿಯಾಗಿವೆ. ಶೃಂಗೇರಿ ತಾಲೂಕಿನ ಕಡೇಮನೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಬೃಹತ್ ಗುಡ್ಡ ಕುಸಿದಿದೆ.

ಶೃಂಗೇರಿ-ಮಂಗಳೂರು ಹೆದ್ದಾರಿ ನಡುವೆ ಸಂಚಾರಕ್ಕೆ ಅಡಚಣೆ!

ಗಾಳಿ-ಮಳೆ ಹೆಚ್ಚಾದಂತೆ ರಸ್ತೆ ಬದಿಯ ಗುಡ್ಡವು ಮರಗಳ ಸಮೇತ ಧರೆಗೆ ಉರುಳಿದ್ದು, ರಾಷ್ಟ್ರೀಯ ಹೆದ್ದಾರಿ 169ರ ಕಾರ್ಕಳ-ಮಂಗಳೂರು- ಶೃಂಗೇರಿ ನಡುವಿನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ರಸ್ತೆಗೆ ಬಿದ್ದಿರುವ ಭಾರೀ ಪ್ರಮಾಣದ ಮಣ್ಣು ಮತ್ತು ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ. ಆದರೆ, ಮಳೆಯಿಂದಾಗಿ ಸ್ವಲ್ಪ ಸ್ವಲ್ಪ ಮಣ್ಣು ಜಾರುತ್ತಿದ್ದು, ತೆರವು ಕಾರ್ಯ ಸವಾಲಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಪ್ರಯಾಣಿಸುವ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಮಾರ್ಗದಲ್ಲಿ ಮಳೆ ಹೆಚ್ಚಾದಂತೆಲ್ಲ ಭೂಮಿಯ ತೇವಾಂಶ ಹೆಚ್ಚಾಗಿ ಧರೆ ಕುಸಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಹುಟ್ಟಿಸಿದೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ತುಂಗಾ, ಭದ್ರಾ ಅಬ್ಬರಕ್ಕೆ ಹೊಲ-ಗದ್ದೆಗಳು ಜಲಾವೃತ

ಕೊಂಚ ವಿರಾಮ ನೀಡಿದ್ದ ಮಳೆ ಮತ್ತೆ ಮಲೆನಾಡು ಭಾಗದಲ್ಲಿ ಆರ್ಭಟ ಮುಂದುವರೆಸಿದೆ. ಕೊಪ್ಪ, ಶೃಂಗೇರಿ ಭಾಗದಲ್ಲಿ ಧರೆ ಕುಸಿಯುವ ಆತಂಕ ಸೃಷ್ಟಿಯಾಗಿದೆ. ವಾಡಿಕೆ ಪ್ರಮಾಣದಷ್ಟು ಮಳೆಯಾಗದೆ ಇದ್ದರು ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಅನಾಹುತಗಳು‌ ಸಂಭವಿಸುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಂಚದ ಕೆಳಗೆ ಈ ಕೆಲವು ವಸ್ತುಗಳನ್ನು ಇಡಲೇಬಾರದು; ಯಾಕೆ ಗೊತ್ತಾ? – Kannada News | These items should not be stored under the bed

ಹಾಸಿಗೆಯ (bed) ಕೆಳಗಿರುವ ಖಾಲಿ ಜಾಗವನ್ನು  ಯಾಕೆ ಸುಮ್ಮನೆ ಬಿಡೋದು ಎಂದು ಅನೇಕರು ಆ ಜಾಗದಲ್ಲಿ ಒಂದಷ್ಟು ವಸ್ತುಗಳನ್ನು  ಸಂಗ್ರಹಿಸಿಡಲು ಬಳಸುತ್ತಾರೆ. ಹೆಚ್ಚುವರಿ ಬೆಡ್‌ಶೀಟ್‌, ದಿಂಬು, ಬಟ್ಟೆಗಳು, ಪುಸ್ತಕಗಳು, ಆಟಿಕೆಗಳು ಮತ್ತು ರಟ್ಟಿನ ಪೆಟ್ಟಿಗೆಗಳಂತಹ ವಸ್ತುಗಳನ್ನು ಹೆಚ್ಚಾಗಿ ಮಂಚದ ಕೆಳಗೆಯೇ ಇಡಲಾಗುತ್ತದೆ. ಆದರೆ ಹೀಗೆ ವಸ್ತುಗಳನ್ನು ಸಂಗ್ರಹಿಸಿದಾಗ ಮಂಚದ ಕೆಳಗೆ ಧೂಳು, ತೇವಾಂಶ ಮತ್ತು ಜೇಡರ ಬಲೆಗಳು ಸಂಗ್ರಹವಾಗಬಹುದು. ಇದು ಕೀಟಗಳನ್ನು ಆಕರ್ಷಿಸುವುದಲ್ಲದೆ, ಈ ಧೂಳು, ತೇವಾಂಶ ಆರೋಗ್ಯದ ಮೇಲೂ ಋಣಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು. ಆದ್ದರಿಂದ ಈ ಕೆಲವೊಂದು ವಸ್ತುಗಳನ್ನು ತಪ್ಪಿಯೂ ಬೆಡ್‌ ಕೆಳಗೆ ಸ್ಟೋರ್‌ ಮಾಡಲು ಹೋಗಬೇಡಿ.

ಮಂಚದ ಕೆಳಗೆ ಯಾವೆಲ್ಲಾ ವಸ್ತುಗಳನ್ನು ಸಂಗ್ರಹಿಸಿಡಬಾರದು?

ಹಾಸಿಗೆಯ ಕೆಳಗೆ ತೇವಾಂಶವಿದ್ದರೆ, ಅದರ ಕಾರಣದಿಂದಾಗಿ ಕೆಲವು ವಸ್ತುಗಳು ಕೊಳೆಯಬಹುದು, ಇದರಿಂದ ಕೆಟ್ಟ ವಾಸನೆ, ಬ್ಯಾಕ್ಟೀರಿಯಾ ಬೆಳೆಯಬಹುದು. ಈ ಅಂಶಗಳು ಮನೆಯ ನೈರ್ಮಲ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ಅಲರ್ಜಿಗಳು ಮತ್ತು ಉಸಿರಾಟದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಹಾಸಿಗೆಯ ಕೆಳಗಿರುವ ಜಾಗವನ್ನು ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ನೀವು ಅಲ್ಲಿ ಏನು ಸಂಗ್ರಹಿಸುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರುವುದು ಮುಖ್ಯ.

ಕಾರ್ಡ್‌ಬೋರ್ಡ್ ಪೆಟ್ಟಿಗೆಗಳು: ಅನೇಕ ಜನರು ಬೆಡ್‌ಶೀಟ್‌, ಹಳೆಯ ಬಟ್ಟೆಗಳನ್ನೆಲ್ಲಾ ಕಾರ್ಡ್‌ಬೋರ್ಡ್‌ಗಳಲ್ಲಿ ಸಂಗ್ರಹಿಸಿ, ಅದನ್ನು ಮಂಚದ ಕೆಳಗೆ ಇಟ್ಟುಬಿಡುತ್ತಾರೆ. ಈ ಕಾರ್ಡ್‌ಬೋರ್ಡ್ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳುವ ಕಾರಣ, ಇದು ಪೆಟ್ಟಿಗೆಗಳು ಮೃದುವಾಗಲು, ಅಚ್ಚು ಬೆಳೆಯಲು ಮತ್ತು ವಾಸನೆ ಉಂಟಾಗಲು ಕಾರಣವಾಗಬಹುದು. ಅಲ್ಲದೆ ಜಿರಳೆಗಳಂತಹ ಸಣ್ಣ ಕೀಟಗಳು ಸಹ ಕಾರ್ಡ್‌ಬೋರ್ಡ್‌ ಪೆಟ್ಟಿಗೆಯೊಳಗೆ ಅಡಗಿಕೊಳ್ಳಬಹುದು. ಆದ್ದರಿಂದ, ಸ್ಟೋರೆಜ್‌ಗಾಗಿ ಪ್ಲಾಸ್ಟಿಕ್ ಪೆಟ್ಟಿಗೆಗಳನ್ನು ಬಳಸುವುದು ಉತ್ತಮ.

ಬಟ್ಟೆಗಳು ಮತ್ತು ದಿಂಬುಗಳು:  ಕಂಬಳಿ, ದಿಂಬುಗಳನ್ನು ಹಾಗೆಯೇ ಹಾಸಿಗೆಯ ಕೆಳಗೆ ಇಟ್ಟಯ ಬಿಡುವುದು ಸೂಕ್ತವಲ್ಲ. ಇದು ಧೂಳು, ತೇವಾಂಶ ಸಂಗ್ರಹವಾಗಲು ಕಾರಣವಾಗಬಹುದು. ಆದ್ದರಿಂದ ಇವುಗಳನ್ನು ಗಾಳಿಯಾಡದ ಚೀಲಗಳಲ್ಲಿ ಹಾಕಿ ಸಂಗ್ರಹಿಸಿಡುವುದು ಸೂಕ್ತ.

ಪಾದರಕ್ಷೆಗಳು ಮತ್ತು ಕ್ರೀಡಾ ಸಾಮಗ್ರಿಗಳು:   ಚಪ್ಪಲಿಗಳು, ಬೂಟುಗಳು ಮತ್ತು ಕ್ರೀಡಾ ಸಾಮಗ್ರಿಗಳು ಕೊಳಕು, ಧೂಳು, ತೇವಾಂಶ ಮತ್ತು ಬ್ಯಾಕ್ಟೀರಿಯಾಗಳನ್ನು ಸಂಗ್ರಹಿಸಬಹುದು. ಅವುಗಳನ್ನು ಹಾಸಿಗೆಯ ಕೆಳಗೆ ಸಂಗ್ರಹಿಸುವುದರಿಂದ ಕೆಟ್ಟ ವಾಸನೆ ಬರುವುದಲ್ಲದೆ, ಕೋಣೆಯ ಸ್ವಚ್ಛತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಶೂಗಳು ಮತ್ತು ಚಪ್ಪಲಿಗಳನ್ನು ಪ್ರತ್ಯೇಕ ಶೂ ರ್ಯಾಕ್‌ನಲ್ಲಿ ಸಂಗ್ರಹಿಸುವುದು ಉತ್ತಮ.

ಇದನ್ನೂ ಓದಿ: ಮನೆ ಕ್ಲೀನ್‌ ಮಾಡೋದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಖತ್‌ ಪ್ರಯೋಜನಕಾರಿಯಂತೆ

ಪ್ರಮುಖ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳು: ಆಧಾರ್ ಕಾರ್ಡ್‌ಗಳು, ಪಾಸ್‌ಪೋರ್ಟ್‌ಗಳು ಸೇರಿದಂತೆ ಪ್ರಮುಖ ಪತ್ರಗಳು, ಲ್ಯಾಪ್‌ಟಾಪ್‌ಗಳು ಮತ್ತು ಕ್ಯಾಮೆರಾಗಳಂತಹ ಎಲೆಕ್ಟ್ರಾನಿಕ್‌  ವಸ್ತುಗಳನ್ನು ಹಾಸಿಗೆಯ ಕೆಳಗೆ ಇಡುವುದು ಸೂಕ್ತವಲ್ಲ. ತೇವಾಂಶ ಮತ್ತು ಧೂಳಿಗೆ ಒಡ್ಡಿಕೊಳ್ಳುವುದರಿಂದ ಅವು ಹಾನಿಗೊಳಗಾಗಬಹುದು.

ಆಹಾರ ಮತ್ತು ಪಾನೀಯಗಳು: ತಿಂಡಿ ಪ್ಯಾಕೆಟ್‌ಗಳು ಮತ್ತು ಸಾಕುಪ್ರಾಣಿಗಳ ಆಹಾರವನ್ನು ಎಂದಿಗೂ ಹಾಸಿಗೆಯ ಕೆಳಗೆ ಸಂಗ್ರಹಿಸಬಾರದು. ಅವುಗಳ ವಾಸನೆಯು ಇರುವೆಗಳು, ಇಲಿಗಳು ಮತ್ತು ಜಿರಳೆಗಳಂತಹ ಕೀಟಗಳನ್ನು ಆಕರ್ಷಿಸುತ್ತದೆ. ಆಹಾರವನ್ನು ಯಾವಾಗಲೂ ಅಡುಗೆಮನೆ ಅಥವಾ ಪ್ಯಾಂಟ್ರಿಯಲ್ಲಿ ಗಾಳಿಯಾಡದ ಪಾತ್ರೆಗಳಲ್ಲಿ ಸಂಗ್ರಹಿಸಬೇಕು.

ಇದರ ಹೊರತಾಗಿ  ಶಾಸ್ತ್ರಗಳ ಪ್ರಕಾರ ಮುರಿದ ಪ್ರತಿಮೆಗಳು, ಒಡೆದ ಗಾಜು, ಕೊಳಕು ಬಟ್ಟೆಗಳು, ಪೊರಕೆ, ಎಲೆಕ್ಟ್ರಾನಿಕ್‌ ಉಪಕರಣ, ಆಭರಣಗಳು, ಹಣ, ಭೂ ಪತ್ರಗಳು, ಶೈಕ್ಷಣಿಕ ದಾಖಲೆಗಳು ಇತ್ಯಾದಿಗಳನ್ನು ಹಾಸಿಗೆಯ ಕೆಳಗೆ ಇಡುವುದರಿಂದ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಸಾಧನೆ ಮಾಡಿದ ಮೊದಲ ಆಸೀಸ್ ಕ್ರಿಕೆಟಿಗ ಮಿಚೆಲ್ ಮಾರ್ಷ್​ – Kannada News | The Hundred: Mitchell Marsh Achieves 7000 T20 Runs, Becomes Top Scorer and Aussie Record Breaker

ಮಿಚೆಲ್ ಮಾರ್ಷ್​ಗಿಂತ ಮೊದಲು, ಟಿಮ್ ಡೇವಿಡ್ 2022 ರಲ್ಲಿ ಆಡಿದ 68 ಇನ್ನಿಂಗ್ಸ್‌ಗಳಲ್ಲಿ 27.67 ಸರಾಸರಿಯಲ್ಲಿ 1,461 ರನ್ ಗಳಿಸಿದ್ದರು. ಇದೀಗ ಮಾರ್ಷ್ 35 ಪಂದ್ಯಗಳಲ್ಲಿ 44.17 ಸರಾಸರಿಯಲ್ಲಿ 1502 ರನ್ ಗಳಿಸಿದ್ದಾರೆ. 160 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿರುವ ಮಾರ್ಷ್​ ಇಲ್ಲಿಯವರೆಗೆ ಎರಡು ಶತಕಗಳು ಮತ್ತು 11 ಅರ್ಧಶತಕಗಳನ್ನು ಬಾರಿಸಿದ್ದಾರೆ.

Source link

ಕ್ರೆಡಿಟ್ ಸ್ಕೋರ್ ಕಡಿಮೆಯಿದ್ರೂ ನೀವು ಬ್ಯಾಂಕ್‌ನಿಂದ ಹೀಗೆ ಸಾಲ ಪಡೆಯಿರಿ – Kannada News | Credit Scores: Will the bank grant a loan even if the credit score is low?

ಕ್ರೆಡಿಟ್‌ ಸ್ಕೋರ್‌Image Credit source: Illustration by Thomas Fuller/SOPA Images/LightRocket via Getty Images

ಆರ್ಥಿಕ ಸಮಸ್ಯೆ ಎದುರಾದಾಗ ಬ್ಯಾಂಕ್ (Bank Loan) ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತೇವೆ. ಆದರೆ ಸಾಲ ಪಡೆಯುವ ಮುಂಚೆ ಕಡಿಮೆ ಬಡ್ಡಿದರದಲ್ಲಿ ಎಲ್ಲಿ ಸಾಲ ಸಿಗುತ್ತದೆ ಎಂದು ನೋಡುತ್ತೇವೆ. ಅದೇ ರೀತಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಕೂಡ ಸಾಲ ಪಡೆಯುವ ವ್ಯಕ್ತಿಯ ಸಿಬಿಲ್ ಸ್ಕೋರ್ (CIBIL Score) ಎಷ್ಟಿದೆ ಎಂದು ಪರಿಶೀಲಿಸುತ್ತದೆ. ಸಿಬಿಲ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ ಬ್ಯಾಂಕ್ ಸಾಲವನ್ನು ಸುಲಭವಾಗಿ ನೀಡುತ್ತವೆ. ಆದರೆ ಕ್ರೆಡಿಟ್ ಸ್ಕೋರ್ ಇಲ್ಲದೇನೆ ಸುಲಭವಾಗಿ ಸಾಲ ಪಡೆಯಬಹುದು. ಇದಕ್ಕೆ ನಿಮ್ಮ ಬಳಿ ಉತ್ತಮ ಆದಾಯವಿರಬೇಕು, ಜತೆಗೆ ಸ್ಥಿರ ಠೇವಣಿ, ಚಿನ್ನ ಅಡಮಾನ, ಆದಾಯ ಆಧಾರಿತ ಸಾಲ ಹಾಗೂ ಆಸ್ತಿ ದಾಖಲೆಗಳನ್ನು ಬ್ಯಾಂಕ್‌ನಲ್ಲಿ ಇಟ್ಟು ಸಾಲ ಪಡೆಯಬಹುದು.

ಕ್ರೆಡಿಟ್‌ ಸ್ಕೋರ್‌ ಕಡಿಮೆಯಿದ್ರೂ ಬ್ಯಾಂಕ್‌ನಲ್ಲಿ ಸಾಲ ಪಡೆಯುವುದು ಹೇಗೆ?

ಎಫ್‌ಡಿ ಮೇಲಿನ ಸಾಲ: ನಿಮ್ಮ ಹೆಸರಿನಲ್ಲಿರುವ ಫಿಕ್ಸೆಡ್ ಡೆಪಾಸಿಟ್ ಮೇಲೆ ಸಾಲ ಪಡೆಯಲು ಅವಕಾಶವಿದೆ. ಈ ಸಾಲಕ್ಕೆ ಯಾವುದೇ ಕ್ರೆಡಿಟ್ ಸ್ಕೋರ್ ಅವಶ್ಯಕತೆ ಇರುವುದಿಲ್ಲ.

ಆಸ್ತಿ ದಾಖಲೆ ಮೇಲಿನ ಸಾಲ: ಮನೆ ಅಥವಾ ಕೃಷಿ ಭೂಮಿಯ ದಾಖಲೆಗಳನ್ನು ಭದ್ರತೆಯಾಗಿಟ್ಟು ಬ್ಯಾಂಕಿನಿಂದ ಸಾಲ ಪಡೆಯಬಹುದು.

ಚಿನ್ನದ ಸಾಲ: ಚಿನ್ನದ ಆಭರಣಗಳನ್ನು ಅಡವಿಟ್ಟು ಸುಲಭವಾಗಿ ಸಾಲ ಪಡೆಯಬಹುದು. ಈ ಸಾಲಕ್ಕೆ ಯಾವುದೇ ಕ್ರೆಡಿಟ್ ಕಾರ್ಡ್ ಅವಶ್ಯಕತೆ ಇರುವುದಿಲ್ಲ.

ಆದಾಯದ ಮೇಲಿನ ಸಾಲ: ನಿಮ್ಮ ತಿಂಗಳ ಸಂಬಳದ ಆದಾಯದ ಮೇಲೆ ಸಾಲ ಪಡೆಯಲು ಅವಕಾಶವಿದೆ. ಇದಕ್ಕೆ ನಿಮ್ಮ ಸ್ಯಾಲರಿ ಸ್ಲಿಪ್, ಆರು ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್‌ ಅಥವಾ ಐಟಿಆರ್ ಬ್ಯಾಂಕ್‌ಗೆ ನೀಡುವುದು ಕಡ್ಡಾಯ.

ಖಾತರಿದಾರರು: ನೀವು ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿಯನ್ನು ಖಾತರಿದಾರರಾಗಿ ಸೇರಿಸಿ ಅದರ ಮುಖೇನ ಸಾಲ ಪಡೆಯಬಹುದು. ಬ್ಯಾಂಕ್ ಸಾಲ ನೀಡುವಾಗ ನಿಮ್ಮ ಕ್ರೆಡಿಟ್ ಸ್ಕೋರ್ ಬದಲು ಖಾತರಿದಾರರ ಕ್ರೆಡಿಟ್ ಸ್ಕೋರ್ ಪರಿಶೀಲಿಸುತ್ತವೆ.

ಇದನ್ನೂ ಓದಿ: ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಬ್ಯಾಂಕ್ ಅಕೌಂಟ್ ತೆರೆಯಲು ಅವಕಾಶವಿದೆ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಕ್ರೆಡಿಟ್ ಸ್ಕೋರ್ ಕಡಿಮೆಯಿದ್ರೂ ಬ್ಯಾಂಕ್‌ನಿಂದ ಸಾಲ ಪಡೆಯುವುದು ಹೇಗೆ?

ಉತ್ತರ: ಸ್ಥಿರ ಠೇವಣಿ, ಚಿನ್ನ ಅಡಮಾನ, ಆದಾಯ, ಆಸ್ತಿ ದಾಖಲೆಗಳನ್ನು ಬ್ಯಾಂಕ್‌ನಲ್ಲಿ ಇಟ್ಟು ಸಾಲ ಪಡೆಯಬಹುದು.

ಪ್ರಶ್ನೆ: ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗ್ಬೇಕು ಅಂತಾದ್ರೆ ಸಿಬಿಲ್ ಸ್ಕೋರ್ ಎಷ್ಟಿರಬೇಕು?

ಉತ್ತರ: ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗ್ಬೇಕು ಅಂದ್ರೆ ಸಿಬಿಲ್ ಸ್ಕೋರ್ 750 ಕ್ಕಿಂತ ಹೆಚ್ಚಿರಬೇಕು.

ಪ್ರಶ್ನೆ: ಬ್ಯಾಂಕ್ ಸಾಲ ಪಡೆಯಲು ಸಿಬಿಲ್ ಸ್ಕೋರ್ ಯಾಕೆ ಮುಖ್ಯ?

ಉತ್ತರ: ಬ್ಯಾಂಕ್‌ಗಳು ನಿಮಗೆ ಸಾಲ ಅಥವಾ ಕ್ರೆಡಿಟ್ ಕಾರ್ಡ್ ನೀಡಬೇಕೇ ಎಂಬುವುದನ್ನು ನಿರ್ಧರಿಸಲು ಸಿಬಿಲ್ ಸ್ಕೋರ್ ಮುಖ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಮುಂದುವರಿದ ಮಳೆಯ ಕೊರತೆ: ಶೇ.21ರಷ್ಟು ಕಡಿಮೆ ಸುರಿದ ವರ್ಷಧಾರೆ – Kannada News | Karnataka Monsoon Deficit Persists: State Records 21 Percent Rainfall Shortfall; Bengaluru and Malnad Severely Hit

ಬೆಂಗಳೂರು, ಆಗಸ್ಟ್​​ 10: ಕಳೆದ ಒಂದು ವಾರದಿಂದ ಕರ್ನಾಟಕದ ಕೆಲವೆಡೆ ಭಾರಿ ಮಳೆಯಾಗುತ್ತಿದ್ದರೂ ರಾಜ್ಯದ ಮಳೆ ಕೊರತೆ ಮಾತ್ರ ಕಡಿಮೆಯಾಗಿಲ್ಲ. ಜೂನ್‌ 1ರಿಂದ ಆರಂಭವಾದ ಮುಂಗಾರು ಅವಧಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಬೆಂಗಳೂರು ನಗರ ಜಿಲ್ಲೆ ಅತ್ಯಂತ ಹೆಚ್ಚು ಮಳೆ ಕೊರತೆ ಎದುರಿಸುತ್ತಿರುವ ಜಿಲ್ಲೆಗಳ ಪೈಕಿ ಒಂದಾಗಿದ್ದು, ಶೇ.34ರಷ್ಟು ಕೊರತೆ ದಾಖಲಾಗಿದೆ. ಆಗಸ್ಟ್‌ 9ರವರೆಗೆ ಜಿಲ್ಲೆಯಲ್ಲಿ 127 ಮಿ.ಮೀ ಮಳೆಯಾಗಿದ್ದು, ಈ ಅವಧಿಯಲ್ಲಿ ವಾಡಿಕೆಯಂತೆ 197 ಮಿ.ಮೀ ಮಳೆಯಾಗಬೇಕಿತ್ತು.

ರಾಜ್ಯದಲ್ಲಿ ಶೇ.21ರಷ್ಟು ಮಳೆ ಕೊರತೆ

ವಿಜಯನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ವಾಡಿಕೆ ಮಳೆಯ ಅರ್ಧಕ್ಕಿಂತಲೂ ಕಡಿಮೆ ಮಳೆಯಾಗಿದೆ. ವಿಜಯನಗರದಲ್ಲಿ ಶೇ.58 ಮತ್ತು ಮೈಸೂರಿನಲ್ಲಿ ಶೇ.51ರಷ್ಟು ಮಳೆ ಕೊರತೆ ದಾಖಲಾಗಿದೆ. ಚಾಮರಾಜನಗರದಲ್ಲಿ ಶೇ.47, ಕೋಲಾರದಲ್ಲಿ ಶೇ.42 ಹಾಗೂ ಬಳ್ಳಾರಿಯಲ್ಲಿ ಶೇ.41ರಷ್ಟು ಮಳೆ ಕೊರತೆ ದಾಖಲಾಗಿದ್ದು, ಈ ಜಿಲ್ಲೆಗಳೂ ತೀವ್ರ ಮಳೆ ಕೊರತೆ ಎದುರಿಸುತ್ತಿವೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಶೇ.21ರಷ್ಟು ಮಳೆ ಕೊರತೆ ಇದೆ. ರಾಜ್ಯವು 656.7 ಮಿ.ಮೀ ವಾಡಿಕೆ ಮಳೆಯ ಎದುರು 517.8 ಮಿ.ಮೀ ಮಳೆಯನ್ನು ಮಾತ್ರ ಪಡೆದಿದೆ. ಮುಂಗಾರು ಆರಂಭವಾದಾಗಿನಿಂದ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಮಳೆ ಕೊರತೆ ದಾಖಲಾಗಿದೆ. ಆದರೆ, ಈ ಮಳೆಯಿಂದ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಕೊಂಚ ಏರಿಕೆಯಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಅಬ್ಬರಿಸಿದ ವರುಣ: ಕೆರೆಗಳಂತಾದ ರಸ್ತೆಗಳು; ಸವಾರರು ಪರದಾಟ

ಮಲೆನಾಡಿನಲ್ಲೂ ಪರಿಸ್ಥಿತಿ ಕಳವಳಕಾರಿ

ರಾಜ್ಯದ ಪ್ರಮುಖ ನದಿಗಳ ಜಲಾನಯನ ಪ್ರದೇಶಗಳಾಗಿರುವ ಮಲೆನಾಡು ಜಿಲ್ಲೆಗಳಲ್ಲೂ ಪರಿಸ್ಥಿತಿ ಕಳವಳಕಾರಿಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಸುಮಾರು ಶೇ.31ರಿಂದ 34ರಷ್ಟು ಕಡಿಮೆ ಮಳೆಯಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version