ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ನಡುಗಿದ ಮಲೆನಾಡು: ಕುಸಿದ ಧರೆ, ರಸ್ತೆಗೆ ಉರುಳಿದ ಮರಗಳು – Kannada News | Chikkamagaluru: Malnad Shivers as Intermittent Rain Triggers Landslides, Trees Fall on Roads
ಚಿಕ್ಕಮಗಳೂರು, ಆಗಸ್ಟ್ 10: ಮಳೆಯನಾಡು ಎಂದೇ ಪ್ರಸಿದ್ಧವಾಗಿರುವ ಕಾಫಿನಾಡು ಚಿಕ್ಕಮಗಳೂರು (chikkamagaluru) ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೊಂಚ ವಿರಾಮ ನೀಡಿದ್ದ ಮಳೆ (Rain) ಮತ್ತೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಕೊಪ್ಪ, ಶೃಂಗೇರಿ, ಕಳಸ ಹಾಗೂ ಮೂಡಿಗೆರೆ ತಾಲೂಕಿನ ಹಲವು ಭಾಗಗಳಲ್ಲಿ ರಣಮಳೆಯಾಗುತ್ತಿದ್ದು, ವಾಡಿಕೆ ಪ್ರಮಾಣದಷ್ಟು ಮಳೆಯಾಗದಿದ್ದರೂ ಬಿಟ್ಟು ಬಿಟ್ಟು ಸುರಿಯುತ್ತಿರುವ ನಿರಂತರ ಗಾಳಿ-ಮಳೆಯಿಂದಾಗಿ ಭೂಮಿಯ ತೇವಾಂಶ ಹೆಚ್ಚಾಗಿ ನಾನಾ ಅವಾಂತರಗಳು ಸಂಭವಿಸುತ್ತಿವೆ. ಮಳೆಗೆ ಧರೆ ಕುಸಿತ: ಮನೆ ನುಗ್ಗಿದ ಮಣ್ಣು ಮಿಶ್ರಿತ ನೀರು ಕೊಪ್ಪ ತಾಲೂಕಿನ ಅಂಬಳಿಕೆ…