ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೀಕರ ಭೂಕಂಪ; 47 ಜನ ಮಂದಿ ಸಾವು – Kannada News | 47 people killed several buildings collapsed as massive earthquake of 7.4 magnitude jolts Colombia
ಕೊಲಂಬಿಯಾ, ಆಗಸ್ಟ್ 10: ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ಸಂಭವಿಸಿದ 7.4 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ (Earthquake) 47 ಜನರು ಮೃತಪಟ್ಟಿದ್ದಾರೆ. ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಸ್ಥಿತಿ ತೀವ್ರ ಆತಂಕಕಾರಿಯಾಗಿದೆ. ಭೂಕಂಪದ ಕೇಂದ್ರಬಿಂದು ಕೊಲಂಬಿಯಾದ ಚೊಕೊ ಪ್ರದೇಶದ ‘ಸ್ಯಾನ್ ಜೋಸ್ ಡೆಲ್ ಪಾಲ್ಮಾರ್’ ಬಳಿ ದಾಖಲಾಗಿದೆ. ಇದರ ತೀವ್ರತೆ ರಾಜಧಾನಿ ಬೊಗೋಟಾ ಹಾಗೂ ನೆರೆರಾಷ್ಟ್ರಗಳಿಗೂ ಹಬ್ಬಿದೆ. ಅಮೆರಿಕದ ಸ್ಥಳೀಯ ಸಮಯ ಬೆಳಿಗ್ಗೆ 7.34ಕ್ಕೆ ಸಂಭವಿಸಿದ ಈ ಭೂಕಂಪದ ಕೇಂದ್ರಬಿಂದು ಸ್ಯಾನ್ ಜೋಸ್ ಡೆಲ್ ಪಾಲ್ಮಾರ್‌ನಿಂದ ಪೂರ್ವಕ್ಕೆ ಸುಮಾರು 3 ಮೈಲಿ…