ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೀಕರ ಭೂಕಂಪ; 47 ಜನ ಮಂದಿ ಸಾವು – Kannada News | 47 people killed several buildings collapsed as massive earthquake of 7.4 magnitude jolts Colombia

ಕೊಲಂಬಿಯಾ, ಆಗಸ್ಟ್ 10: ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ಸಂಭವಿಸಿದ 7.4 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ (Earthquake) 47 ಜನರು ಮೃತಪಟ್ಟಿದ್ದಾರೆ. ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಸ್ಥಿತಿ ತೀವ್ರ ಆತಂಕಕಾರಿಯಾಗಿದೆ. ಭೂಕಂಪದ ಕೇಂದ್ರಬಿಂದು ಕೊಲಂಬಿಯಾದ ಚೊಕೊ ಪ್ರದೇಶದ ‘ಸ್ಯಾನ್ ಜೋಸ್ ಡೆಲ್ ಪಾಲ್ಮಾರ್’ ಬಳಿ ದಾಖಲಾಗಿದೆ. ಇದರ ತೀವ್ರತೆ ರಾಜಧಾನಿ ಬೊಗೋಟಾ ಹಾಗೂ ನೆರೆರಾಷ್ಟ್ರಗಳಿಗೂ ಹಬ್ಬಿದೆ.

ಅಮೆರಿಕದ ಸ್ಥಳೀಯ ಸಮಯ ಬೆಳಿಗ್ಗೆ 7.34ಕ್ಕೆ ಸಂಭವಿಸಿದ ಈ ಭೂಕಂಪದ ಕೇಂದ್ರಬಿಂದು ಸ್ಯಾನ್ ಜೋಸ್ ಡೆಲ್ ಪಾಲ್ಮಾರ್‌ನಿಂದ ಪೂರ್ವಕ್ಕೆ ಸುಮಾರು 3 ಮೈಲಿ ದೂರದಲ್ಲಿದೆ. ಈ ಪ್ರಬಲ ಭೂಕಂಪಕ್ಕೆ ಕನಿಷ್ಠ 47 ಜನರು ಪ್ರಾಣ ಕಳೆದುಕೊಂಡಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಹತ್ತಾರು ಕಟ್ಟಡಗಳು ನೆಲಸಮಗೊಂಡಿದ್ದು, ಸಿಲುಕಿರುವವರನ್ನು ಹೊರತೆಗೆಯಲು ರಕ್ಷಣಾ ಕಾರ್ಯಪಡೆಗಳು ಶ್ರಮಿಸುತ್ತಿವೆ.

ಇದನ್ನೂ ಓದಿ: Japan Earthquake: ಜಪಾನ್‌ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ, ಕಟ್ಟಡಗಳು ನೆಲಸಮ

ಈ ಭೂಕಂಪವು ಕೊಲಂಬಿಯಾದ ಚೊಕೊ ಪ್ರದೇಶದ ಸ್ಯಾನ್ ಜೋಸ್ ಡೆಲ್ ಪಾಲ್ಮಾರ್ ಎಂಬ ಸಣ್ಣ ಪಟ್ಟಣದಲ್ಲಿ ಸಂಭವಿಸಿದೆ. ಇದು ರಾಜಧಾನಿ ಬೊಗೋಟಾದಿಂದ ಪಶ್ಚಿಮಕ್ಕೆ ಸುಮಾರು 400 ಕಿಲೋಮೀಟರ್ ದೂರದಲ್ಲಿದೆ. ಇದು ಸುಮಾರು 4,800 ಜನಸಂಖ್ಯೆಯನ್ನು ಹೊಂದಿದೆ. ಯುಎಸ್ ಜಿಯೋಲಾಜಿಕಲ್ ಸರ್ವೇ (USGS) ಮತ್ತು ಕೊಲಂಬಿಯಾದ ಭೂಕಂಪಶಾಸ್ತ್ರ ಸಂಸ್ಥೆಯ ಪ್ರಕಾರ, ಭೂಕಂಪವು ಭೂಮಿಯ ಅಡಿಯಲ್ಲಿ ಸುಮಾರು 107 ಕಿಲೋಮೀಟರ್ (66 ಮೈಲಿ) ಆಳದಲ್ಲಿ ಸಂಭವಿಸಿದೆ. ಈ ಭಾರಿ ಕಂಪನ ನೆರೆಯ ರಾಷ್ಟ್ರ ಎಕ್ವಡಾರ್‌ನಲ್ಲೂ ವರದಿಯಾಗಿದೆ.

ವಿಮಾನ ನಿಲ್ದಾಣಗಳ ಸ್ಥಗಿತ:

ಕಟ್ಟಡಗಳು ಮತ್ತು ಮೂಲಸೌಕರ್ಯಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಪಶ್ಚಿಮ ಕೊಲಂಬಿಯಾದ 6 ಪ್ರಮುಖ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: Peru Earthquake: ಪೆರುವಿನಲ್ಲಿ ಅವಳಿ ಭೂಕಂಪ: 6 ಮಂದಿ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ,ಐತಿಹಾಸಿಕ ಚರ್ಚ್ ನೆಲಸಮ

ತುರ್ತು ರಕ್ಷಣಾ ಕಾರ್ಯಾಚರಣೆ:

‘ಕಾಲಿ’ ಸೇರಿದಂತೆ ವಿವಿಧ ನಗರಗಳಲ್ಲಿ ಕಟ್ಟಡಗಳ ಅಡಿಯಲ್ಲಿ ಜನರು ಸಿಲುಕಿರುವ ಶಂಕೆಯಿದ್ದು, ಸೇನೆ ಹಾಗೂ ದುರಂತ ನಿರ್ವಹಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪರಿಸ್ಥಿತಿ ತೀವ್ರ ಗಂಭೀರವಾಗಿದ್ದು, ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Happy Life Tips: ಜೀವನದಲ್ಲಿ ಸಂತೋಷವಾಗಿರಲು ಈ ಸಿಂಪಲ್‌ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ – Kannada News | These good habits will bring happiness into your life

ಇಂದಿನ ಈ ಕಾರ್ಯನಿರತ ಜೀವನದಲ್ಲಿ ಹೆಚ್ಚಿನವರು ಒತ್ತಡಕ್ಕೊಳಗಾಗಿದ್ದಾರೆ. ಕೆಲಸ, ಕುಟುಂಬದ ಜವಾಬ್ದಾರಿಯ ಚಿಂತೆಯಿಂದಾಗಿ ಸಂತೋಷವಾಗಿರುವುದನ್ನೇ (Happy) ಮರೆತುಬಿಟ್ಟಿದ್ದಾರೆ. ಇನ್ನೂ ಅನೇಕರು ಸಂತೋಷವವನ್ನು ಕಂಡುಕೊಳ್ಳುವುದು ಸವಾಲಿನ ಕೆಲಸವೇ ಸರಿ ಎಂಬು ಭಾವಿಸುತ್ತಾರೆ. ಆದರೆ ಹ್ಯಾಪಿ ಆಗಿರೋದು ಅಷ್ಟು ಕಷ್ಟದ ಕೆಲಸವೇನಲ್ಲ, ಕೆಲವು ಸರಳ ಅಭ್ಯಾಸಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂತೋಷವಾಗಿರಬಹುದು. ಸಂತೋಷದಾಯಕ ಜೀವನಕ್ಕೆ ಸಹಕಾರಿಯಾದ ಆ ಅಭ್ಯಾಸಗಳು ಯಾವುವು ಎಂಬ ಸಂಪೂರ್ಣ ವಿವರ ಇಲ್ಲಿದೆ.

ಸಂತೋಷವಾಗಿರಲು ಏನು ಮಾಡಬೇಕು?

ಸಕಾರಾತ್ಮಕ ಮನಸ್ಥಿತಿಯನ್ನು ಇಟ್ಟುಕೊಳ್ಳಿ: ಸಂತೋಷದ ಮೊದಲ ಹೆಜ್ಜೆ ನಿಮ್ಮ ಆಲೋಚನೆಯಲ್ಲಿ ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳುವುದು. ಪ್ರತಿಯೊಂದು ಸನ್ನಿವೇಶದಲ್ಲೂ ನಿಮಗೆ ಏನಾದರೂ ಒಳ್ಳೆಯದೇ ಆಗುತ್ತದೆ ಎಂದು ನೀವು ನಂಬಿದಾಗ, ನೀವು ಸಂತೋಷವಾಗಿರುತ್ತೀರಿ. ಆಗ ನಿಮ್ಮ ತಲೆಯಲ್ಲಿ ಚಿಂತೆಗಳು ಓಡಾಡುವುದಿಲ್ಲ. ಅದೇ ನೀವು ಎಲ್ಲದರ ಬಗ್ಗೆಯೂ ಅತಿಯಾಗಿ ಯೋಚಿಸಲು ಪ್ರಾರಂಭಿಸಿದಾಗ ಒತ್ತಡ ಹೆಚ್ಚಾಗುತ್ತದೆ.

ನೃತ್ಯ ಮಾಡಿ: ನೃತ್ಯವು ಕೇವಲ ವ್ಯಾಯಾಮದ ಒಂದು ರೂಪವಲ್ಲ, ಅದು ನಿಮ್ಮ ಮನಸ್ಥಿತಿಯನ್ನು ಸಹ ಸುಧಾರಿಸುತ್ತದೆ. ನಿಮ್ಮನ್ನು ಸಂತೋಷವಾಗಿರಿಸುವುದರ ಜೊತೆಗೆ, ನೃತ್ಯವು ನಿಮ್ಮ ದೇಹದ ನಮ್ಯತೆಯನ್ನು ಹೆಚ್ಚಿಸುತ್ತದೆ, ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ. ಇದು ನಿಮ್ಮ ಹೃದಯವನ್ನು ಸಹ ಆರೋಗ್ಯವಾಗಿಡುತ್ತದೆ. ಹಾಗಾಗಿ ಪ್ರತಿನಿತ್ಯ ಸ್ವಲ್ಪ ಹೊತ್ತು ಡಾನ್ಸ್‌ ಮಾಡಿ.

ಸಂಬಂಧಗಳನ್ನು ಬಲಪಡಿಸಿ: ಸಂತೋಷವಾಗಿರಲು, ಬಲವಾದ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಿರಿ, ನಿಮ್ಮ ಆಲೋಚನೆಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಹೀಗೆ ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳುವ ಮೂಲಕ ನೀವು ಸಂತೋಷವಾಗಿರುತ್ತೀರಿ.

ಹೊಸ ಚಟುವಟಿಕೆಗಳನ್ನು ಮಾಡುತ್ತಿರಿ: ನಾವೆಲ್ಲರೂ ಪ್ರತಿದಿನ ಹೊಸದನ್ನು ಕಲಿಯಬೇಕು. ಹೊಸ ಅನುಭವಗಳು ಮನಸ್ಸನ್ನು ಸಂತೋಷಗೊಳಿಸುತ್ತದೆ ಮತ್ತು ಜೀವನಕ್ಕೆ ತಾಜಾತನವನ್ನು ತರುತ್ತವೆ. ಹೊಸ ಪುಸ್ತಕಗಳನ್ನು ಓದುವುದು, ಹೊಸ ಸ್ಥಳಗಳಿಗೆ ಭೇಟಿ ನೀಡುವುದು, ಹೊಸ ಕೌಶಲ್ಯಗಳನ್ನು ಕಲಿಯುವುದು ಈ ಎಲ್ಲಾ ಚಟುವಟಿಕೆಗಳು  ನಿಮ್ಮ ಜೀವನದಲ್ಲಿ ಸಂತೋಷವನ್ನು ತರುತ್ತವೆ.

ನಿಮಗೆ ನೀವು ಸಮಯ ಕೊಡಿ: ನೀವು ಎಷ್ಟೇ ಕಾರ್ಯನಿರತರಾಗಿದ್ದರೂ ಸಹ, ನಿಮಗಾಗಿ ನೀವು ಸಮಯವನ್ನು ಮೀಸಲಿಡುವುದು ಬಹಳ ಮುಖ್ಯ. ನಿಮ್ಮ ಹವ್ಯಾಸಗಳತ್ತ ಗಮನಹರಿಸಿ, ಧ್ಯಾನ ಮಾಡಿ ಅಥವಾ ಸ್ವಲ್ಪ ಸಮಯ ಒಂಟಿಯಾಗಿ ಪ್ರಕೃತಿಯೊಂದಿಗೆ ಸಮಯ  ಕಳೆಯಿರಿ. ಇದು, ಹೆಚ್ಚು ಶಾಂತಿಯಿಂದಿರಲು ಮತ್ತು ಸಂತೋಷವಾಗಿರಲು ಸಹಾಯ ಮಾಡುತ್ತದೆ.‌

ಇದನ್ನೂ ಓದಿ: ಮಹಿಳೆಯರು ತಮ್ಮ ಪರ್ಸನಲ್‌ ವಿಷಯಗಳನ್ನು ಯಾರ ಬಳಿಯೂ ಶೇರ್‌ ಮಾಡಬಾರದು

ವ್ಯಾಯಾಮ ಮಾಡಿ: ವ್ಯಾಯಾಮವು ನಿಮ್ಮ ದೇಹಕ್ಕೆ ಮಾತ್ರವಲ್ಲ, ನಿಮ್ಮ ಮಾನಸಿಕ ಆರೋಗ್ಯಕ್ಕೂ ಮುಖ್ಯವಾಗಿದೆ. ವ್ಯಾಯಾಮ ಮಾಡುವುದರಿಂದ ನೀವು ಒತ್ತಡ ಮುಕ್ತರಾಗುತ್ತೀರಿ. ಅಲ್ಲದೆ  ವ್ಯಾಯಾಮವು ಸಂತೋಷವನ್ನು ಹೆಚ್ಚಿಸುತ್ತದೆ, ಇದು ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ: ನಿಮ್ಮನ್ನು ನೀವು ಯಾವತ್ತಿಗೂ ಇತರರೊಂದಿಗೆ ಹೋಲಿಸಿಕೊಳ್ಳಬೇಡಿ. ನೀವು ನಿಮ್ಮನ್ನು ಹೋಲಿಸಿಕೊಳ್ಳಲು ಪ್ರಾರಂಭಿಸಿದಾಗ, ನೀವು ಸ್ವಯಂಚಾಲಿತವಾಗಿ ಅತೃಪ್ತರಾಗುತ್ತೀರಿ ಮತ್ತು ಚಿಂತೆ ನಿಮ್ಮನ್ನು ಆವರಿಸುತ್ತದೆ. ಅದೇ ನಿಮ್ಮಲ್ಲಿ ಏನಿದೆಯೋ ಅದರಲ್ಲಿಯೇ ತೃಪ್ತಿಪಟ್ಟಾಗ ನಿಮ್ಮ ಜೀವನದಲ್ಲಿ ಸಂತೋಷ ನೆಲೆಸುತ್ತದೆ. ಮುಖ್ಯವಾಗಿ ಆಗಿ ಹೋದ ವಿಚಾರಗಳಿಗೆ ಚಿಂತಿಸುವ ಬದಲು ವರ್ತಮಾನದಲ್ಲಿ ಬದುಕಲು ಪ್ರಯತ್ನಿಸಿ.

ಸಣ್ಣ ವಿಷಯಗಳನ್ನು ಸಹ ಆಚರಿಸಿ: ಜನ ಜೀವನದಲ್ಲಿ ಪ್ರತಿಯೊಂದು ಸಣ್ಣ ವಿಷಯದ ಬಗ್ಗೆಯೂ ಚಿಂತಿಸುತ್ತಾರೆ, ಆದರೆ ಸಣ್ಣ ಸಂತೋಷಗಳನ್ನು ಆಚರಿಸುವುದಿಲ್ಲ. ಜೀವನದಲ್ಲಿ ಪ್ರತಿಯೊಂದು ಸಣ್ಣ ಸಂತೋಷವನ್ನು ಹಬ್ಬದಂತೆ ಆಚರಿಸಿ. ಇದು ದೇಹದಲ್ಲಿ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದರಿಂದ ಒತ್ತಡವೂ ನಿವಾರಣೆಯಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:11 pm, Mon, 10 August 26

Source link

ಶಾರುಖ್ ನಟಿಸಿದ ಆ ಸಿನಿಮಾ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಸ್ಪಷ್ಟನೆ – Kannada News | Kabhi Alvida Naa Kehna 20 Years Karan Johar says film did not endorse infidelity

ಕರಣ್ ಜೋಹರ್ ನಿರ್ದೇಶನದ 2006ರ ಹಿಟ್ ಸಿನಿಮಾ ‘ಕಭಿ ಅಲ್ವಿದಾ ನಾ ಕೆಹನಾ’ (Kabhi Alvida Naa Kehna) ಬಿಡುಗಡೆಯಾಗಿ ಈಗ ಎರಡು ದಶಕಗಳನ್ನು ಪೂರೈಸಿದೆ. ಬಿಡುಗಡೆಯ ಸಮಯದಲ್ಲಿ ವಿಭಿನ್ನ ಹಾಗೂ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದ ಈ ಚಿತ್ರ, ಕಾಲಕ್ರಮೇಣ ಪ್ರೇಕ್ಷಕರ ನೆಚ್ಚಿನ ಕ್ಲಾಸಿಕ್ ಸಿನಿಮಾವಾಗಿ ಹೊರಹೊಮ್ಮಿತು. 20 ವರ್ಷ ಕಳೆದಿರುವ ಈ ಸಂದರ್ಭದಲ್ಲಿ ನಿರ್ದೇಶಕ ಕರಣ್ ಜೋಹರ್ (Karan Johar) ಅವರು ಇನ್‌ಸ್ಟಾಗ್ರಾಮ್‌ನಲ್ಲಿ ದೀರ್ಘವಾದ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಂದು ತಮಗೆ ಎದುರಾದ ವಿಚಿತ್ರ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ.

‘ಕಭಿ ಅಲ್ವಿದಾ ನಾ ಕೆಹನಾ’ ಸಿನಿಮಾದಲ್ಲಿ ಶಾರುಖ್ ಖಾನ್ ಮತ್ತು ರಾಣಿ ಮುಖರ್ಜಿ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದರು. ಈಗ ಚಿತ್ರದ ಬಿಡುಗಡೆಯ ದಿನಗಳ ಅನುಭವವನ್ನು ಹಂಚಿಕೊಂಡ ಕರಣ್, ‘ಕಭಿ ಅಲ್ವಿದಾ ನಾ ಕೆಹನಾ ಚಿತ್ರಕ್ಕೆ 20 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ, ಈ ಸಿನಿಮಾದಿಂದ ನನಗೆ ಸಿಕ್ಕ ವಿಶಿಷ್ಟ ಅನುಭವಗಳು ಮತ್ತು ಅನುಭವಿಸಿದ ವಾಸ್ತವಗಳನ್ನು ಬರೆದಿಡುತ್ತಿದ್ದೇನೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಚಿತ್ರಮಂದಿರವೊಂದರಲ್ಲಿ ಪ್ರಿವ್ಯೂ ವೀಕ್ಷಿಸುತ್ತಿದ್ದಾಗ ನಡೆದ ಘಟನೆಯನ್ನು ಕರಣ್ ಜೋಹರ್ ನೆನಪಿಸಿಕೊಂಡಿದ್ದಾರೆ. ಶಾರುಖ್ ಖಾನ್ ಮತ್ತು ರಾಣಿ ಮುಖರ್ಜಿ ಅಭಿನಯದ ದೃಶ್ಯವೊಂದನ್ನು ನೋಡಿ ಪ್ರೇಕ್ಷಕರು ದಿಗ್ಭ್ರಮೆಗೊಂಡಿದ್ದರು ಎಂದು ಅವರು ತಿಳಿಸಿದ್ದಾರೆ. ‘ನನ್ನ ಮುಂದೆ ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಮಧ್ಯಮ ವಯಸ್ಸಿನ ದಂಪತಿ ಕುಳಿತಿದ್ದರು. ಆ ದೃಶ್ಯವು ಯಾವುದೇ ಕನಸಿನ ಸನ್ನಿವೇಶವಲ್ಲ, ಬದಲಿಗೆ ನೈಜ ದೃಶ್ಯ ಎಂದು ತಿಳಿಯುತ್ತಿದ್ದಂತೆ ಆ ವ್ಯಕ್ತಿ ಕೋಪದಿಂದ ಹೆಂಡತಿಯನ್ನು ನೋಡುತ್ತಾ ತಕ್ಷಣವೇ ಚಿತ್ರಮಂದಿರದಿಂದ ಹೊರನಡೆದರು. ಅದನ್ನು ನೋಡಿ ನನ್ನ ಹೃದಯವೇ ನಿಂತಂತಾಯಿತು’ ಎಂದಿದ್ದಾರೆ ಕರಣ್ ಜೋಹರ್.

ಇನ್ನೊಂದು ಘಟನೆಯಲ್ಲಿ, ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ಬಂದು ಕರಣ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ‘ನಿಮ್ಮ ಸಿನಿಮಾ ಎಂದರೆ ಹಾಡು, ನೃತ್ಯ ಮತ್ತು ಕುಟುಂಬದ ಮೌಲ್ಯಗಳಿರುವ ಸಂತೋಷದ ಸಿನಿಮಾ ಎಂದು ಭಾವಿಸಿ ನನ್ನ ಮಗಳನ್ನು ಕರೆದುಕೊಂಡು ಬಂದಿದ್ದೆ. ಆದರೆ ಇಂದು ಆಕೆಗೆ ವಿಚ್ಛೇದನವಾಗಿದೆ, ಇಂತಹ ಸಮಯದಲ್ಲಿ ನಾನು ಇದನ್ನು ನೋಡಬೇಕಾಯಿತೇ? ನಿಮಗೇನು ನಾಚಿಕೆಯಾಗುವುದಿಲ್ಲವೇ ಅಂತ ಕಿರುಚಾಡಿದ್ದರು’ ಎಂದು ಆ ಘಟನೆಯನ್ನು ಕರಣ್ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ:ರಾಮಾಯಣ ಚಿತ್ರಕ್ಕೆ ಕರಣ್ ಜೋಹರ್ ಡಿಸ್ಟ್ರಿಬ್ಯೂಟರ್; ಕೇವಲ 250 ಕೋಟಿ ರೂ.ಗೆ ಡೀಲ್

ಚಿತ್ರದಲ್ಲಿ ಕೆಲವು ಲೋಪದೋಷಗಳಿದ್ದವು ಎಂಬುದನ್ನು ಒಪ್ಪಿಕೊಂಡ ಕರಣ್, ‘ಈ ಸಿನಿಮಾ ಎಂದಿಗೂ ಅಕ್ರಮ ಸಂಬಂಧವನ್ನು ಬೆಂಬಲಿಸಲಿಲ್ಲ. ಅದು ನನ್ನ ಉದ್ದೇಶವೂ ಆಗಿರಲಿಲ್ಲ. ಆದರೆ, ಪ್ರೀತಿ ಅಥವಾ ಕಾಮಕ್ಕಾಗಿ ಮದುವೆಯ ಗಡಿ ದಾಟುವುದು ನಿಮ್ಮ ಕುಟುಂಬದ ಅಡಿಪಾಯವನ್ನೇ ಹೇಗೆ ನಾಶಪಡಿಸುತ್ತದೆ ಎಂಬುದನ್ನು ತೋರಿಸುವುದು ನನ್ನ ಉದ್ದೇಶವಾಗಿತ್ತು’ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂಡ್ಯ: ಬಾಂಗ್ಲಾ ವಲಸಿಗರೆಂಬ ಶಂಕೆ; ಕೆಎಸ್‌ಆರ್‌ಟಿಸಿ ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು – Kannada News | Mandya: Hindu Activists Intercept KSRTC Bus Over Suspected Bangladeshi Migrants

ಮಂಡ್ಯ, ಆಗಸ್ಟ್​​​ 10: ಮಂಡ್ಯದ ಬಸ್ ನಿಲ್ದಾಣದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಪ್ರಯಾಣಿಸುತ್ತಿದ್ದಾರೆಂಬ ಶಂಕೆ ಮೇಲೆ ಹಿಂದೂ ಕಾರ್ಯಕರ್ತರು ಕೆಎಸ್‌ಆರ್‌ಟಿಸಿ ಬಸ್‌ ತಡೆದು ಪರಿಶೀಲನೆ ಮಾಡಿದ ಘಟನೆ ನಡೆದಿದೆ. ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಬಸ್​​ನಲ್ಲಿ ಸುಮಾರು 30 ಜನರು ಬಾಂಗ್ಲಾ ಮೂಲದವರೆಂದು ಶಂಕಿಸಿ ಕಾರ್ಯಕರ್ತರು ಅಡ್ಡಗಟ್ಟಿದ್ದರಿಂದ ಸ್ಥಳಕ್ಕೆ ಪೊಲೀಸರು ಹಾಗೂ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ತಪಾಸಣೆ ವೇಳೆ ಇವರು ಕೊಡಗಿನ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕರು ಎಂಬುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸದ್ಯ ಪೊಲೀಸರು ಎಲ್ಲರನ್ನು ನಿರಾಶ್ರಿತ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆ ಮೂಲಕ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಲು ಮುಂದಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

IND vs SL: ಸಚಿನ್ ದಾಖಲೆ ಮೇಲೆ ಗಿಲ್ ಕಣ್ಣು; ಕುಲ್ದೀಪ್, ಜಡೇಜಾಗೂ ಇದು ವಿಶೇಷ ಸರಣಿ – Kannada News | India vs SL Test: Gill’s Captaincy, Jadeja’s Wickets and Kuldeep’s Milestones Await

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ (India vs Sri Lanka ) ಹಲವು ದಾಖಲೆಗಳನ್ನು ಬರೆಯಲಿದೆ. ಇತ್ತ ಆಟಗಾರರು ಕೂಡ ವೈಯಕ್ತಿಕವಾಗಿ ವಿಶೇಷ ಮೈಲಿಗಲ್ಲುಗಳನ್ನು ದಾಟಲಿದ್ದಾರೆ. ಅಂತಹವರಲ್ಲಿ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ (Shubman Gill), ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಕೂಡ ಸೇರಿದ್ದಾರೆ. ಅದರಲ್ಲೂ ನಾಯಕ ಗಿಲ್ ಈ ಸರಣಿಯಲ್ಲಿ 3 ಪ್ರಮುಖ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಗಿಲ್ ಪ್ರಸ್ತುತ ಡಬ್ಲ್ಯೂಟಿಸಿ ಆವೃತ್ತಿಯಲ್ಲಿ ಈಗಾಗಲೇ ಐದು ಶತಕಗಳನ್ನು ಬಾರಿಸಿದ್ದಾರೆ. ಇದೀಗ ಶ್ರೀಲಂಕಾ ವಿರುದ್ಧ ಇನ್ನೊಂದು ಶತಕ ಸಿಡಿಸಿದರೆ, ಈ ಡಬ್ಲ್ಯೂಟಿಸಿ ಆವೃತ್ತಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್​ಗಳ ಪಟ್ಟಿಯಲ್ಲಿ ಜೋ ರೂಟ್ ಅವರನ್ನು ಹಿಂದಿಕ್ಕಲಿದ್ದಾರೆ.

ಹಾಗೆಯೇ ಗಿಲ್ ನಾಯಕನಾಗಿ ಇನ್ನೂ ಎರಡು ಶತಕಗಳನ್ನು ಬಾರಿಸಿದರೆ ಭಾರತ ಟೆಸ್ಟ್ ತಂಡದ ನಾಯಕನಾಗಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ನಾಯಕರ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಸಚಿನ್ ನಾಯಕನಾಗಿ ಏಳು ಟೆಸ್ಟ್ ಶತಕಗಳನ್ನು ಬಾರಿಸಿದ್ದರು. ಗಿಲ್ ಈಗಾಗಲೇ ಆರು ಶತಕಗಳನ್ನು ಸಿಡಿಸಿದ್ದು, ಸಚಿನ್ ದಾಖಲೆಯನ್ನು ಮುರಿಯಲು ಇನ್ನೇರಡು ಶತಕಗಳು ಬೇಕಿವೆ.

ಮತ್ತೊಂದು ನಾಯಕತ್ವದ ದಾಖಲೆ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದರೆ ಶುಭಮನ್ ಗಿಲ್ ನಾಯಕತ್ವದ ದಾಖಲೆಯಲ್ಲಿ ಮತ್ತೊಂದು ಮೈಲಿಗಲ್ಲು ದಾಖಲಾಗಲಿದೆ. ಗಿಲ್ ನಾಯಕತ್ವದಲ್ಲಿ ಭಾರತ ಇದುವರೆಗೆ ಒಂಬತ್ತು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಐದು ಪಂದ್ಯಗಳನ್ನು ಗೆದ್ದಿದೆ. ಎರಡು ಪಂದ್ಯಗಳ ಸರಣಿ ಗೆಲುವು ಭಾರತಕ್ಕೆ ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ಗೆಲುವುಗಳನ್ನು ನೀಡಿದ ನಾಯಕನಾಗಿ ಗಿಲ್ ಬಿಷನ್ ಸಿಂಗ್ ಬೇಡಿ ಅವರನ್ನು ಹಿಂದಿಕ್ಕಲಿದ್ದಾರೆ. ಬೇಡಿ ನೇತೃತ್ವದಲ್ಲಿ ಭಾರತ 22 ಟೆಸ್ಟ್ ಪಂದ್ಯಗಳಲ್ಲಿ ಆರರಲ್ಲಿ ಜಯಗಳಿಸಿತ್ತು.

ಜಡೇಜಾಗೆ 350 ಟೆಸ್ಟ್ ವಿಕೆಟ್‌ಗಳ ಗುರಿ

ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಈ ಸರಣಿಯಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸುವ ಅವಕಾಶ ಹೊಂದಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಜಡೇಜಾ ಇನ್ನೆರಡು ವಿಕೆಟ್ ಪಡೆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳ ಗಡಿಯನ್ನು ಮುಟ್ಟಲಿದ್ದಾರೆ. ಈ ಮೂಲಕ ಜಡೇಜಾ 350 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ, ರವಿಚಂದ್ರನ್ ಅಶ್ವಿನ್, ಕಪಿಲ್ ದೇವ್ ಮತ್ತು ಹರ್ಭಜನ್ ಸಿಂಗ್ ಅವರ ಪಟ್ಟಿಗೆ ಸೇರಲಿದ್ದಾರೆ.

ಇಶಾಂತ್ ದಾಖಲೆ ಮೇಲೂ ಜಡೇಜಾ ಕಣ್ಣು

ಶ್ರೀಲಂಕಾ ವಿರುದ್ಧ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಜಡೇಜಾ ಪ್ರಸ್ತುತ ಆರನೇ ಸ್ಥಾನದಲ್ಲಿದ್ದಾರೆ (33 ವಿಕೆಟ್‌ಗಳು). ಈ ಸರಣಿಯಲ್ಲಿ ಅವರು ಇನ್ನೂ ನಾಲ್ಕು ವಿಕೆಟ್‌ಗಳನ್ನು ಪಡೆದರೆ, 36 ವಿಕೆಟ್‌ಗಳನ್ನು ಹೊಂದಿರುವ ಇಶಾಂತ್ ಶರ್ಮಾ ಅವರನ್ನು ಹಿಂದಿಕ್ಕಿ ಟಾಪ್ -5 ರಲ್ಲಿ ಸ್ಥಾನ ಪಡೆಯಲಿದ್ದಾರೆ. ಇದರರ್ಥ ಜಡೇಜಾ ಈ ಸರಣಿಯಲ್ಲಿ ಏಕಕಾಲದಲ್ಲಿ ಎರಡು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸುವ ಅವಕಾಶವನ್ನು ಹೊಂದಿದ್ದಾರೆ.

IND vs SL: ಟೆಸ್ಟ್‌ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಟೀಂ ಇಂಡಿಯಾ

ಕುಲ್ದೀಪ್​ಗೆ ಒಂದು ವಿಕೆಟ್ ಸಾಕು

ಕುಲ್ದೀಪ್ ಯಾದವ್ ಕೂಡ ಅಪರೂಪದ ಮೈಲಿಗಲ್ಲು ತಲುಪಲು ಕೇವಲ ಒಂದು ವಿಕೆಟ್ ದೂರದಲ್ಲಿದ್ದಾರೆ. ಕುಲ್ದೀಪ್ ಇದುವರೆಗೆ ಏಷ್ಯಾದ ನೆಲದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 249 ವಿಕೆಟ್‌ಗಳನ್ನು ಪಡೆದಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಅವರು ಒಂದು ವಿಕೆಟ್ ಪಡೆದರೆ, ಏಷ್ಯಾದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 250 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಬೌಲರ್ ಎನಿಸಿಕೊಳ್ಳಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜಂತರ್ ಮಂತರ್‌ನಲ್ಲಿ ಯಾವ ಗುಂಡಿನ ದಾಳಿಯೂ ನಡೆದಿಲ್ಲ’; ರಾಹುಲ್ ಗಾಂಧಿಗೆ ಸಚಿವ ಜೆ.ಪಿ. ನಡ್ಡಾ ತಿರುಗೇಟು – Kannada News | No firing at Jantar Mantar JP Nadda counters Rahul Gandhi

ನವದೆಹಲಿ, ಆಗಸ್ಟ್ 10: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಯಾವುದೇ ಗುಂಡಿನ ದಾಳಿ ಅಥವಾ ಪೆಲೆಟ್ ಗನ್ ಪ್ರಯೋಗ ನಡೆದಿಲ್ಲ ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ (JP Nadda) ಸ್ಪಷ್ಟಪಡಿಸಿದ್ದು, ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಧಿವೇಶನದ ಆರಂಭದಲ್ಲಿ ರಾಹುಲ್ ಗಾಂಧಿ ನೀಟ್ (NEET) ಕುರಿತು ಚರ್ಚೆಗೆ ಪಟ್ಟು ಹಿಡಿದಿದ್ದರು. ಸರ್ಕಾರ ಅದಕ್ಕೆ ಒಪ್ಪಿಕೊಂಡಾಗ ರಾಮಮಂದಿರ ಟ್ರಸ್ಟ್ ವಿಷಯ ಎತ್ತಿದರು. ನಂತರ ಜಂತರ್ ಮಂತರ್ ಘಟನೆಯ ಕುರಿತು ಪ್ರಸ್ತಾಪಿಸಿ ದಿನಕ್ಕೊಂದು ನಿರೂಪಣೆ ಬದಲಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಷಯಗಳನ್ನು ಬದಲಾಯಿಸುತ್ತಾ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಸದನ ನಡೆಯದಂತೆ ತಡೆಯುವುದೇ ಅವರ ಮುಖ್ಯ ಉದ್ದೇಶವಾಗಿದೆ ಎಂದು ಜೆ.ಪಿ ನಡ್ಡಾ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಆರಂಭದಲ್ಲಿ ನೀಟ್ (NEET) ಕುರಿತು ಚರ್ಚೆಗೆ ಆಗ್ರಹಿಸಿದ್ದರು. ಆದರೆ, ಸರ್ಕಾರ ಅದಕ್ಕೆ ಒಪ್ಪಿಕೊಂಡಾಗ ತಮ್ಮ ಬೇಡಿಕೆಯನ್ನು ಬದಲಾಯಿಸಿ, ರಾಮಮಂದಿರ ಟ್ರಸ್ಟ್ ಮತ್ತು ಜಂತರ್ ಮಂತರ್ ಘಟನೆಯನ್ನು ಪ್ರಸ್ತಾಪಿಸಿದರು ಎಂದು ಆರೋಗ್ಯ ಸಚಿವ ಜೆ.ಪಿ ನಡ್ಡಾ ಹೇಳಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ವಿಧೇಯಕದ ಕುರಿತು ರಾಹುಲ್ ಗಾಂಧಿ- ಸಚಿವ ಕಿರಣ್ ರಿಜಿಜು ನಡುವೆ ತೀವ್ರ ವಾಕ್ಸಮರ

“ರಾಹುಲ್ ಗಾಂಧಿ ಸಂಸತ್ತಿನಲ್ಲಿ ದಿನಕ್ಕೊಂದು ವಿಷಯವನ್ನು ಬದಲಾಯಿಸುತ್ತಿದ್ದಾರೆ. ಮಾತುಕತೆ ನಡೆಸುವುದು ಅವರ ಉದ್ದೇಶವಲ್ಲ; ಗೊಂದಲ ಸೃಷ್ಟಿಸುವುದಾಗಿದೆ. ಅಧಿವೇಶನದ ಆರಂಭದಲ್ಲಿ ಅವರು ನೀಟ್ ಕುರಿತು ಚರ್ಚೆಗೆ ಆಗ್ರಹಿಸಿದರು. ನಾವು ಅದಕ್ಕೆ ಒಪ್ಪಿದಾಗ ರಾಮಮಂದಿರ ಟ್ರಸ್ಟ್ ವಿಷಯ ಎತ್ತಿದರು, ನಂತರ ಜಂತರ್ ಮಂತರ್ ಘಟನೆಯ ಕುರಿತು ಗೃಹ ಸಚಿವರೇ ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿದರು. ಸದನ ನಡೆಯಬಾರದು ಎಂಬುದೇ ಅವರ ಉದ್ದೇಶ” ಎಂದಿದ್ದಾರೆ.

“ಅವರಿಗೆ ಸದನ ನಡೆಯುವುದು ಬೇಕಾಗಿಲ್ಲ. ಅದಕ್ಕಾಗಿಯೇ ಅವರು ಕಳೆದ 15 ದಿನಗಳಿಂದ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ” ಎಂದು ಹೇಳಿದ ಜೆಪಿ ನಡ್ಡಾ, ಜಂತರ್ ಮಂತರ್ ವಿಷಯದ ಬಗ್ಗೆ ಚರ್ಚಿಸಲು ಸರ್ಕಾರ ಒಪ್ಪಿಕೊಂಡಾಗ, ರಾಹುಲ್ ಗಾಂಧಿ ಅಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸಲು ಪ್ರಾರಂಭಿಸಿದರು ಎಂದು ಆರೋಪಿಸಿದರು.

ಇದನ್ನೂ ಓದಿ: ‘ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ’; ತಮ್ಮದೇ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಟೀಕೆ

“ಇಂದು ಜಂತರ್ ಮಂತರ್ ವಿಷಯದ ಬಗ್ಗೆ ಚರ್ಚಿಸಲು ನಿರ್ಧರಿಸಿದಾಗ ಅಲ್ಲಿ ಯಾವುದೇ ಅಂತಹ ಘಟನೆ ನಡೆಯದಿದ್ದರೂ, ಗುಂಡಿನ ದಾಳಿ ನಡೆದಿದೆ ಎಂದು ಹೇಳುವ ಮೂಲಕ ಅವರು ಜನರನ್ನು ಮತ್ತು ದೇಶವನ್ನು ದಾರಿ ತಪ್ಪಿಸಲು ತೊಡಗಿದರು” ಎಂದು ಅವರು ಹೇಳಿದರು.

ಸಂಸತ್ತಿನಲ್ಲಿ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಲು ಗೃಹ ಸಚಿವರು ಸಿದ್ಧರಿದ್ದಾರೆ ಎಂದು ಹೇಳಿದ ಜೆಪಿ ನಡ್ಡಾ, “ನಾನು ರಾಹುಲ್ ಗಾಂಧಿಯವರಿಗೆ ಮತ್ತೊಮ್ಮೆ ಸವಾಲು ಹಾಕುತ್ತೇನೆ. ಸದನಕ್ಕೆ ಬನ್ನಿ. ನಾವು ಚರ್ಚೆಗೆ ಸಿದ್ಧರಿದ್ದೇವೆ ಮತ್ತು ನಿಮಗೆ ತಕ್ಕ ಉತ್ತರ ಸಿಗಲಿದೆ. ಅಪಪ್ರಚಾರ ಹರಡಬೇಡಿ. ಜಂತರ್ ಮಂತರ್‌ನಲ್ಲಿ ಯಾವುದೇ ಗುಂಡು ಹಾರಿಸಿಲ್ಲ ಅಥವಾ ಅಲ್ಲಿ ಗುಂಡು ಹಾರಿಸಲು ಯಾವುದೇ ಆದೇಶ ನೀಡಿರಲಿಲ್ಲ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾಯಿ ಕಣ್ಣೆದುರೇ ಹತ್ಯೆ: ಒಂದು ಎಕರೆ ಜಮೀನಿಗಾಗಿ ಅಣ್ಣನನ್ನೇ ಕೊಂದು ಜೈಲು ಸೇರಿದ ತಮ್ಮ – Kannada News | Haveri Land Dispute: Brother Allegedly Kills Sibling Over One Acre Property

ಹಾವೇರಿ, ಆಗಸ್ಟ್​​ 10: ದೂರದ ಊರಿಗೆ ಕೂಲಿ ಕೆಲಸ ಮಾಡಲು ಹೋಗಿದ್ದ ಅಣ್ಣ ಮನೆಗೆ ಬರುತ್ತಿದ್ದಂತೆ ತಮ್ಮನ ಪಿತ್ತ ನೆತ್ತಿಗೇರಿತ್ತು. ಪ್ರಯಾಣ ಮಾಡಿ ಸುಸ್ತಾಗಿದ್ದ ಅಣ್ಣ, ಅಮ್ಮನ ಕೈ ತುತ್ತು ತಿಂದು ಮಲಗಿದ್ದ. ಆತ ಮಲಗುವುದನ್ನೇ ಕಾಯುತ್ತಿದ್ದ ತಮ್ಮ, ತಾಯಿ ಎದುರೇ ಕಲ್ಲು ಎತ್ತಿಹಾಕಿ ಅಣ್ಣನನ್ನು ಕೊಲೆ ಮಾಡಿದ್ದಾನೆ. ಆ ಮೂಲಕ ಒಂದು ಎಕರೆ ಜಮೀನು ವಿವಾದ ಕೊಲೆಯಲ್ಲಿ (kill) ಅಂತ್ಯವಾಗಿದೆ. ಹಾವೇರಿ (haveri) ಜಿಲ್ಲೆಯ ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು?

ಹತ್ಯೆಯಾದ ವ್ಯಕ್ತಿಯನ್ನು ಸಂತೋಷ ಸವಣೂರು (31) ಎಂದು ಗುರುತಿಸಲಾಗಿದ್ದು, ಆತನ ಕಿರಿಯ ಸಹೋದರ ಕುಮಾರ ಸವಣೂರು ನನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಬ್ಬರು ಒಂದೇ ತಾಯಿಯ ಮಕ್ಕಳು. ಆದರೆ ಒಂದು ಎಕರೆ ಜಮೀನು ಇವರಿಬ್ಬರ ನಡುವೆ ದ್ವೇಷದ ಗೋಡೆ ಕಟ್ಟಿತ್ತು. ಆಗಾಗ ಇಬ್ಬರ ಮಧ್ಯೆ ನಡೆಯುತ್ತಿದ್ದ ಜಗಳ, ಕುಡಿದ ಮತ್ತಿನಲ್ಲಿ ಮತ್ತೊಮ್ಮೆ ಸ್ಫೋಟಗೊಂಡಿದೆ.‌ ಕಿರಿಯ ಸಹೋದರನೇ ಅಣ್ಣನನ್ನು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಗಂಡನ ಕೊಂದು ಗದ್ದೆಯಲ್ಲಿ ಶವ ಹೂತ ಪತ್ನಿ: 6 ತಿಂಗಳ ಬಳಿಕ ಆರೋಪಿಗಳು ಸಿಕ್ಕಿಬಿದ್ದಿದ್ದೇ ರೋಚಕ!

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಗ್ರಾಮದ ನಿವಾಸಿಗಳು. ಮೃತನ ಸೋದರಮಾವ (ತಾಯಿಯ ತಮ್ಮ) ತನ್ನ ಅಕ್ಕ ಹಾಗೂ ಆಕೆಯ ಮಕ್ಕಳಿಗಾಗಿ ಒಂದು ಎಕರೆ ಜಮೀನು ನೀಡಿದ್ದು, ತಾಯಿಯನ್ನು ಯಾರು ನೋಡಿಕೊಳ್ಳುತ್ತಾರೋ ಅವರಿಗೆ ಈ ಜಮೀನು ಸೇರುತ್ತದೆ ಎಂದು ಹೇಳಿದ್ದರು.

ಕುಡಿತದ ಚಟ: ಜಮೀನಿಗಾಗಿ ಗಲಾಟೆ

ಮೃತ ಸಂತೋಷ ಊರಲ್ಲೇ ಕೂಲಿ ಕೆಲಸ ಮಾಡುತ್ತಾ ಜಮೀನನ್ನೂ ನೋಡಿಕೊಳ್ಳುತ್ತಿದ್ದ. ಹೊರಗೆ ಕೆಲಸ ಮಾಡುತ್ತಿದ್ದ ತಮ್ಮ ಕುಮಾರ ಮಾತ್ರ ಸ್ನೇಹಿತರೊಂದಿಗೆ ಸೇರಿ ಕುಡಿತದ ಚಟಕ್ಕೆ ಬಿದ್ದು, ಆ ಜಮೀನನ್ನು ತನಗೆ ಬಿಟ್ಟುಕೊಡುವಂತೆ ಅಣ್ಣನ ಬಳಿ ಪದೇಪದೇ ಜಗಳ ತೆಗೆಯುತ್ತಿದ್ದ.

ಕಲ್ಲು ಎತ್ತಿಹಾಕಿ ಹತ್ಯೆ

ದೂರದ ಊರಿನಿಂದ ಪ್ರಯಾಣ ಮಾಡಿ ಸುಸ್ತಾಗಿ ಬಂದಿದ್ದ ಅಣ್ಣ ಸಂತೋಷ ಮತ್ತು ತಮ್ಮ ಕುಮಾರ ಇಬ್ಬರೂ ನಿನ್ನೆ ತಡರಾತ್ರಿ ಸಮೀಪದ ಬಾರ್‌ಗೆ ತೆರಳಿ ಮದ್ಯ ಸೇವಿಸಿ ಮನೆಗೆ ಬಂದಿದ್ದರು. ಅಮ್ಮನ ಕೈತುತ್ತು ತಿಂದ ನಂತರ ಸಂತೋಷ ಮನೆಯ ಕಟ್ಟೆಯ ಮೇಲೆ ಮಲಗಿದ್ದಾಗ, ಅಲ್ಲಿಗೆ ಬಂದ ಕುಮಾರ ಕೆದಕಿ ಜಗಳಕ್ಕೆ ನಿಂತಿದ್ದಾನೆ. ತಾಯಿ ಇಬ್ಬರಿಗೂ ಜಗಳ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದರೂ ಲೆಕ್ಕಿಸದ ಕುಮಾರ, ಮನೆ ಅಂಗಳದಲ್ಲೇ ತಾಯಿಯ ಕಣ್ಣೆದುರೇ ಕಟ್ಟೆಯ ಮೇಲೆ ಮಲಗಿದ್ದ ಅಣ್ಣ ಸಂತೋಷನ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: ಶಿವಮೊಗ್ಗ ಸರ್ಕಾರಿ ಶಾಲೆಯಲ್ಲಿ ದುರಂತ: ಎಸ್​​​​ಎಸ್​​​​​ಎಲ್​​​ಸಿ ವಿದ್ಯಾರ್ಥಿ ನಿಗೂಢ ಸಾವು

ತೀವ್ರ ಗಾಯಗೊಂಡ ಸಂತೋಷ ಸ್ಥಳದಲ್ಲೇ ಮೃತಪಟ್ಟಿದ್ದು, ಅಣ್ಣನನ್ನು ಕೊಂದ ತಮ್ಮ ಇದೀಗ ಜೈಲು ಪಾಲಾಗಿದ್ದಾನೆ. ಜಮೀನಿಗಾಗಿ ನಡೆದ ರಕ್ತಪಾತದಿಂದಾಗಿ ಒಬ್ಬ ಮಗ ಹೆಣವಾಗಿ, ಇನ್ನೊಬ್ಬ ಮಗ ಜೈಲುಪಾಲಾಗಿದ್ದು, ಇತ್ತ ತಾಯಿಯ ಬದುಕು ಕತ್ತಲೆಯಂತಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆರ್​ಬಿಐ ಅಂದಾಜಿಗಿಂತಲೂ ಹೆಚ್ಚು ವೇಗದಲ್ಲಿ ಭಾರತದ ಆರ್ಥಿಕತೆ ಬೆಳೆಯಲಿದೆ: ಅರವಿಂದ್ ಪನಗರಿಯಾ – Kannada News | Indian economy to grow by atleast 7pc says arvind panagariya

ನವದೆಹಲಿ, ಆಗಸ್ಟ್ 10: ಭಾರತದ ಆರ್ಥಿಕತೆಯ ಬೆಳವಣಿಗೆಯ ವೇಗದ ವಿಚಾರದಲ್ಲಿ ಅರವಿಂದ್ ಪನಗರಿಯಾ (Arvind Panagariya) ಹೆಚ್ಚು ಆಶಾವಾದಿಯಾಗಿದ್ದಾರೆ. ಭಾರತದ ಜಿಡಿಪಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 6.7ರಷ್ಟು ಬೆಳೆಯಬಹುದು ಎಂದು ಆರ್​ಬಿಐ ತನ್ನ ಇತ್ತೀಚಿನ ಎಂಪಿಸಿ ಸಭೆಯಲ್ಲಿ ಅಂದಾಜು ಮಾಡಿದೆ. ಆದರೆ, ಭಾರತದ ನೀತಿ ಆಯೋಗ್​ನ ಮಾಜಿ ಉಪಾಧ್ಯಕ್ಷ ಹಾಗೂ ಈಗಿನ 16ನೇ ಹಣಕಾಸು ಆಯೋಗದ ಅಧ್ಯಕ್ಷರೂ ಆಗಿರುವ ಅರವಿಂದ್ ಪನಗರಿಯಾ ಅವರು ಭಾರತದ ಜಿಡಿಪಿಯ ಬೆಳವಣಿಗೆ ಶೇ. 7ಕ್ಕಿಂತ ಹೆಚ್ಚಿನ ದರದಲ್ಲಿ ಮುಂದುವರಿಯುತ್ತದೆ ಎಂದಿದ್ದಾರೆ. ಆರ್​ಬಿಐ ಮಾಡಿರುವ ಅಂದಾಜು ತುಸು ಜಾಗರೂಕತೆಯಿಂದ ಕೂಡಿರಬಹುದು. ಆದರೆ, ವಾಸ್ತವಿಕ ಬೆಳವಣಿಗೆಯು ಅದಕ್ಕಿಂತ ಹೆಚ್ಚಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ಮನಿಕಂಟ್ರೋಲ್ ಎಕ್ಸ್​ಕ್ಲೂಸಿವ್ ವರದಿಯಲ್ಲಿ ತಿಳಿಸಲಾಗಿದೆ.

ಶೇ. 7ಕ್ಕಿಂತ ಹೆಚ್ಚಿನ ಪ್ರಗತಿಯ ಭರವಸೆ

ಭಾರತದ ಆರ್ಥಿಕ ತಳಹದಿ ಬಲವಾಗಿದೆ. ಮೂಲಸೌಕರ್ಯ ವಿಸ್ತರಣೆ, ಜಿಎಸ್‌ಟಿ ವ್ಯವಸ್ಥೆಯ ಸುಧಾರಣೆ ಹಾಗೂ ಆದಾಯ ತೆರಿಗೆ ಹಂತಗಳ ಸರಳೀಕರಣದ ಪರಿಣಾಮವಾಗಿ ಭಾರತದ ಜಿಡಿಪಿ (GDP) ಪ್ರಗತಿಯು ಆರ್‌ಬಿಐ ಅಂದಾಜಿಸಿರುವುದಕ್ಕಿಂತ ಉತ್ತಮವಾಗಿರಲಿದೆ ಎಂದು ಪನಗರಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಣಕಾಸು ಸಂಸ್ಥೆಗಳು ಮತ್ತು ಆರ್‌ಬಿಐ ಸಾಮಾನ್ಯವಾಗಿ ಮುನ್ನೆಚ್ಚರಿಕೆಯಾಗಿ ಕೊಂಚ ಕಡಿಮೆ ಬೆಳವಣಿಗೆಯ ದರವನ್ನು ಪ್ರಕ್ಷೇಪಿಸುತ್ತವೆ (Underestimate). ಆದರೆ ಭಾರತವು ಇತ್ತೀಚಿನ ತ್ರೈಮಾಸಿಕಗಳಲ್ಲಿ ಸಾಧಿಸುತ್ತಿರುವ ವೇಗವನ್ನು ಗಮನಿಸಿದರೆ ಶೇ. 7 ರ ಗಡಿಯನ್ನು ಸುಲಭವಾಗಿ ದಾಟಲಿದೆ ಎಂದಿದ್ದಾರೆ.

ಇದನ್ನೂ ಓದಿ: ಮಗಳ PPF ಹಣ ಹಿಂಪಡೆದ ತಂದೆ: ಬಡ್ಡಿ ಸಮೇತ ಮರಳಿಸಲು ಕೋರ್ಟ್ ಆದೇಶ; ಏನಿವೆ ಪಿಪಿಎಫ್ ನಿಯಮಗಳು?

ಇತ್ತೀಚಿನ ವರ್ಷಗಳಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಆರ್​ಬಿಐ ಹಾಗೂ ಇತರ ದೇಶ ವಿದೇಶಗಳ ಏಜೆನ್ಸಿಗಳ ಲೆಕ್ಕಾಚಾರಕ್ಕಿಂತಲೂ ಹೆಚ್ಚೇ ದಾಖಲು ಮಾಡಿದೆ. ಹೀಗಾಗಿ, ಪನಗರಿಯಾ ವ್ಯಕ್ತಪಡಿಸಿರುವ ಅಭಿಪ್ರಾಯ ಸಂದರ್ಭೋಚಿತ ಎನಿಸಬಹುದು.

ಸುಧಾರಣೆಗಳ ಬಲ: ಕೇಂದ್ರ ಸರ್ಕಾರ ಮಾತ್ರವಲ್ಲದೆ ರಾಜ್ಯ ಸರ್ಕಾರಗಳೂ ಸಹ ಕೈಗಾರಿಕಾ, ಕಾರ್ಮಿಕ ಮತ್ತು ಮೂಲಸೌಕರ್ಯ ವಲಯಗಳಲ್ಲಿ ತರುತ್ತಿರುವ ಸುಧಾರಣೆಗಳು ಆರ್ಥಿಕತೆಗೆ ದೊಡ್ಡ ಶಕ್ತಿ ನೀಡುತ್ತಿವೆ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷರು ಹೇಳಿದ್ದಾರೆ.

ಪ್ರಗತಿಗೆ ಎದುರಾಗಬಹುದಾದ ಸವಾಲುಗಳು ಮತ್ತು ಸಲಹೆಗಳು

ಆರ್ಥಿಕತೆಯು ದೀರ್ಘಾವಧಿಯಲ್ಲಿ ಹೆಚ್ಚಿನ ವೇಗದಲ್ಲಿ ಸಾಗಲು ಪನಗರಿಯಾ ಅವರು ಕೆಲ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ:

  • ಉದ್ಯೋಗ ಸೃಷ್ಟಿ: ಕೇವಲ ಜಿಡಿಪಿ ಬೆಳೆದರೆ ಸಾಲದು, ಹೆಚ್ಚಿನ ಕೌಶಲ ಮತ್ತು ಉತ್ತಮ ವೇತನ ನೀಡುವ ಉದ್ಯೋಗಗಳನ್ನು ಸೃಷ್ಟಿಸುವುದು ಪ್ರಸ್ತುತ ಭಾರತದ ಮುಂದಿರುವ ಪ್ರಮುಖ ಆಕಾಂಕ್ಷೆಯಾಗಿದೆ.
  • ಕಾರ್ಮಿಕ ಕಾಯ್ದೆಗಳ ಅನುಷ್ಠಾನ: ರಾಜ್ಯಗಳು ನಾಲ್ಕು ಪ್ರಮುಖ ಕಾರ್ಮಿಕ ಸಂಹಿತೆಗಳನ್ನು (Labour Codes) ಶೀಘ್ರವೇ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು.
  • ಖಾಸಗೀಕರಣ ಮತ್ತು ವ್ಯಾಪಾರ: ತಂತ್ರಜ್ಞಾನೇತರ ಮತ್ತು ನಾನ್-ಸ್ಟ್ರಾಟೆಜಿಕ್ ರಂಗಗಳಲ್ಲಿ ಖಾಸಗೀಕರಣಕ್ಕೆ ಚುರುಕು ಮುಟ್ಟಿಸುವುದು ಹಾಗೂ ಜಾಗತಿಕ ಮಟ್ಟದಲ್ಲಿ (ಅಮೆರಿಕ ಮತ್ತು ಇಯು ಜೊತೆ) ಪ್ರಮುಖ ಮುಕ್ತ ವ್ಯಾಪಾರ ಒಪ್ಪಂದಗಳನ್ನು (FTA) ಜಾರಿಗೆ ತರುವುದು ಅಗತ್ಯವಾಗಿದೆ.

ಇದನ್ನೂ ಓದಿ: ‘ಈ ದಿನ ಬರುತ್ತೆಂದು ಭಾವಿಸಿರಲಿಲ್ಲ’- ಸೌರಶಕ್ತಿ ಕ್ಷೇತ್ರದಲ್ಲಿ ಭಾರತದ ಹವಾ ಕಂಡು ಬೆಚ್ಚಿಬಿದ್ದ ಚೀನೀಯರು

ಒಟ್ಟಾರೆಯಾಗಿ, ಜಾಗತಿಕ ಮಟ್ಟದ ಸವಾಲುಗಳ ನಡುವೆಯೂ ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಕಾಯ್ದುಕೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್​ದಾಸ್ ಹಿನ್ನೆಲೆ ಏನು? ಈ ವಿಡಿಯೋದಲ್ಲಿದೆ ಪೂರ್ತಿ ವಿವರ – Kannada News | Geetu Mohandas background and Biography Yash starrer Toxic Movie Director career details

‘ಟಾಕ್ಸಿಕ್’ ಸಿನಿಮಾಗೆ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡಿದ್ದಾರೆ. ಅವರ ಹಿನ್ನೆಲೆ ಏನು ಎಂಬ ಕುತೂಹಲ ಹಲವರಿಗೆ ಇದೆ. ಆ ಪ್ರಶ್ನೆಗೆ ಈ ವಿಡಿಯೋದಲ್ಲಿದೆ ಉತ್ತರ. ಗೀತು ಮೋಹನ್​ದಾಸ್ (Geetu Mohandas) ಅವರಿಗೆ ಚಿತ್ರರಂಗದ ನಂಟು ಬಾಲ್ಯದಿಂದಲೇ ಇದೆ. ಮೊದಲು ಅವರು ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆಗ ಅವರಿಗೆ ಕೇವಲ 5 ವರ್ಷ ವಯಸ್ಸು. ಬಳಿಕ ಅವರು ಹೀರೋಯಿನ್ ಆಗಿ ಮಿಂಚಿದರು. ನಂತರ ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಈಗ ಅವರು ‘ಟಾಕ್ಸಿಕ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ನೋಡಿದ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಈ ಸಿನಿಮಾದಲ್ಲಿ ಯಶ್, ರುಕ್ಮಿಣಿ ವಸಂತ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಅವರಂತಹ ಸ್ಟಾರ್ ಕಲಾವಿದರಿಗೆ ಗೀತು ಮೋಹನ್​ದಾಸ್ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಆಗಸ್ಟ್ 26ರಂದು ವಿಶ್ವಾದ್ಯಂತ ಈ ಚಿತ್ರ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs SL: ಟೆಸ್ಟ್‌ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಟೀಂ ಇಂಡಿಯಾ

Source link

Exit mobile version