3 ದಿನಗಳಲ್ಲಿ ಬೆಂಗಳೂರಿನ 60 ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ: 1 ವರ್ಷಕ್ಕೂ ಹಳೆಯ ಮಾಂಸ ಪತ್ತೆ! – Kannada News | Bengaluru Star Hotel Raids: 60 Hotels Inspected in 3 Days, Over One Year Old Meat Found

ಬೆಂಗಳೂರಿನ ಸ್ಟಾರ್ ಹೋಟೆಲ್​ಗಳ ಮೇಲೆ ದಾಳಿ ಸಂದರ್ಭದ ಚಿತ್ರImage Credit source: tv9

ಬೆಂಗಳೂರು, ಆಗಸ್ಟ್ 10: ಬೆಂಗಳೂರಿನ (Bengaluru) ಸ್ಟಾರ್ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದ್ದು, ಮೂರು ದಿನಗಳಲ್ಲಿ ಬರೋಬ್ಬರಿ 60 ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ ನಡೆಸಲಾಗಿದೆ. ತಪಾಸಣೆ ವೇಳೆ ಕೊಳೆತ ಮಾಂಸ, ಅವಧಿ ಮೀರಿದ ಆಹಾರ ಪದಾರ್ಥಗಳು, ಕೊಳೆತ ತರಕಾರಿಗಳು, ಬಳಸಿದ ಅಡುಗೆ ಎಣ್ಣೆ ಸೇರಿದಂತೆ ಹಲವು ಆಹಾರ ಸುರಕ್ಷತಾ ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ. ಅಚ್ಚರಿ ಎಂದರೆ, ಒಂದು ವರ್ಷಕ್ಕೂ ಹೆಚ್ಚು ಅವಧಿ ಮೀರಿರುವ ಮಾಂಸಾಹಾರ ಉತ್ಪನ್ನಗಳೂ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

77 ಆಹಾರ ಮಾದರಿ ಸಂಗ್ರಹ

ದಾಳಿ ವೇಳೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಒಟ್ಟು 77 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ತಪಾಸಣೆಯಲ್ಲಿ 640 ಕೆ.ಜಿ. ಚಿಕನ್, ಮಟನ್ ಮತ್ತು ಮೀನು, 276 ಕೆ.ಜಿ. ಕೊಳೆತ ತರಕಾರಿ, 45 ಲೀಟರ್ ಅವಧಿ ಮೀರಿದ ಹಾಲು ಮತ್ತು ಮೊಸರು, 12 ಕೆ.ಜಿ. ಬೇಕರಿ ಉತ್ಪನ್ನಗಳು ಹಾಗೂ 67 ಕೆ.ಜಿ. ಅವಧಿ ಮೀರಿದ ಮತ್ತು ತಪ್ಪು ಲೇಬಲಿಂಗ್ ಹೊಂದಿದ್ದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.

ಇದರ ಜೊತೆಗೆ 49 ಲೀಟರ್ ಬಳಸಿದ ಹಾಗೂ ನಿಯಮಬಾಹಿರ ಅಡುಗೆ ಎಣ್ಣೆ ಕೂಡ ವಶಕ್ಕೆ ಪಡೆಯಲಾಗಿದೆ. ಎಕ್ಸ್‌ಪೈರಿ ದಿನಾಂಕವಿಲ್ಲದ ಮತ್ತು ಒಂದು ವರ್ಷಕ್ಕೂ ಹೆಚ್ಚು ಅವಧಿ ಮೀರಿರುವ ಮಾಂಸಾಹಾರ ಉತ್ಪನ್ನಗಳು ಪತ್ತೆಯಾಗಿರುವುದು ಅಧಿಕಾರಿಗಳಿಗೂ ಆಘಾತ ಮೂಡಿಸಿದೆ. ಅವಧಿ ಮೀರಿದ ಆಹಾರವನ್ನು ಮತ್ತೆ ಪ್ಯಾಕ್ ಮಾಡಿ ಬಳಸಲು ಸಿದ್ಧಪಡಿಸಿರುವುದು ಕೂಡ ತಪಾಸಣೆ ವೇಳೆ ಬೆಳಕಿಗೆ ಬಂದಿದೆ.

ಹೋಟೆಲ್‌ಗಳಲ್ಲಿ ಏನೆಲ್ಲ ಪತ್ತೆ?

ಯುಬಿ ಸಿಟಿ, ಎಂಜಿ ರೋಡ್, ಬ್ರಿಗೇಡ್ ರೋಡ್ ಸೇರಿದಂತೆ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿರುವ ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳ ಅಡುಗೆಮನೆ ಮತ್ತು ಆಹಾರ ಸಂಗ್ರಹಣಾ ಸ್ಥಳಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅಲ್ಲಿ ಪತ್ತೆಯಾಗಿರುವ ಕಳಪೆ ಆಹಾರವಸ್ತುಗಳ ವಿವರ ಇಲ್ಲಿದೆ;

ಹೋಟೆಲ್ ಸ್ಕೈ, ಯುಬಿ ಸಿಟಿ

  • 45 ಕೆ.ಜಿ. ಕೊಳೆತ ಕೋಳಿ ಮತ್ತು ಬೀಫ್
  • 6 ಕೆ.ಜಿ. ವೆಜಿಟೇಬಲ್ ಕಟ್ಲೆಟ್
  • 15 ಲೀಟರ್ ಬಳಸಿದ ಅಡುಗೆ ಎಣ್ಣೆ.

ರಾಯಲ್ ಚೈನ್ ಹೋಟೆಲ್

  • 50 ಕೆ.ಜಿ. ಡಕ್ ಮಾಂಸ ವಶ
  • 5 ಕೆ.ಜಿ. ಮೀನು ವಶಕ್ಕೆ

ಮದ್ರಾಸ್ ಕಿಚನ್

  • 5 ಕೆ.ಜಿ. ಹಸಿ ಬಟಾಣಿ ಜಪ್ತಿ

ಟೆಸ್ಕಾನ್ ಹೋಟೆಲ್

  • 5 ಕೆ.ಜಿ. ಕಳಪೆ ಮಶ್ರೂಮ್ ಪತ್ತೆ, ಆಹಾರ ಸುರಕ್ಷತೆ ಕುರಿತು ಪರಿಶೀಲನೆ

ಸೆಂಚೆಜ್ ಹೋಟೆಲ್

  • 3 ಕೆ.ಜಿ. ಮೀನು
  • 7 ಕೆ.ಜಿ. ಕೇಕ್
  • ಆಲೂಗಡ್ಡೆ ಸೇರಿದಂತೆ ಇತರೆ ಆಹಾರ ಪದಾರ್ಥಗಳ ಜಪ್ತಿ

ಚೀಸ್‌ನಲ್ಲಿ ಸತ್ತ ಜಿರಳೆ, ಮಶ್ರೂಮ್‌ಗೆ ಫಂಗಸ್!

ತಪಾಸಣೆ ವೇಳೆ ಕೆಲವು ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಸ್ಥಿತಿ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ಚೀಸ್ ಪ್ಯಾಕೆಟ್‌ನಲ್ಲಿ ಸತ್ತ ಜಿರಳೆ, ಮಶ್ರೂಮ್‌ನಲ್ಲಿ ಫಂಗಸ್ ಹಾಗೂ ಬೇಬಿ ಕಾರ್ನ್‌ನಲ್ಲಿ ಕೀಟಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫ್ರೀಜರ್‌ಗಳಲ್ಲಿ ಸೂಕ್ತ ರೀತಿಯಲ್ಲಿ ಸಂಗ್ರಹಿಸದ ಮಾಂಸಾಹಾರ ಪದಾರ್ಥಗಳೂ ಪತ್ತೆಯಾಗಿವೆ.

ಯುಬಿ ಸಿಟಿಯಲ್ಲಿರುವ ಹೋಟೆಲ್ ಸ್ಕೈನಲ್ಲಿ ದೊಡ್ಡ ಪ್ರಮಾಣದ ಮಾಂಸ ಮತ್ತು ಇತರೆ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಅಡುಗೆಮನೆಗೆ ಬೀಗ ಹಾಕಿ ಸೀಲ್ ಮಾಡಲಾಗಿದೆ.

ಮ್ಯಾಕ್‌ಡೊನಾಲ್ಡ್ಸ್ ಸೇರಿ ಇತರೆ ಸಂಸ್ಥೆಗಳಲ್ಲೂ ತಪಾಸಣೆ

ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಸ್ಟಾರ್ ಹೋಟೆಲ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. KFC, ಮ್ಯಾಕ್‌ಡೊನಾಲ್ಡ್ಸ್ ಮತ್ತು ಸಬ್‌ವೇ ಸೇರಿದಂತೆ ಹಲವು ಆಹಾರ ಮಳಿಗೆಗಳಲ್ಲೂ ತಪಾಸಣೆ ಮುಂದುವರಿದಿದೆ. ಆಹಾರ ಸಂಗ್ರಹಿಸುವ ಗೋದಾಮುಗಳಲ್ಲೂ ನಿಯಮಗಳ ಪಾಲನೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಅಡುಗೆ ಎಣ್ಣೆ ಶುದ್ಧೀಕರಿಸಲು ಮೆಗ್ನೀಸಿಯಂ ಸಲ್ಫೈಟ್ ಬಳಕೆ

ಬ್ರಿಗೇಡ್ ರಸ್ತೆಯಲ್ಲಿರುವ ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಶುದ್ಧೀಕರಿಸಲು ಮೆಗ್ನೀಸಿಯಂ ಸಲ್ಫೈಟ್ ಬಳಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಆಹಾರ ಸುರಕ್ಷತಾ ನಿಯಮಗಳ ದೃಷ್ಟಿಯಿಂದ ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಯುಬಿ ಸಿಟಿ ಫೈವ್ ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ: 45 ಕೆಜಿ ಕೊಳೆತ ಮಾಂಸ, 15 ಲೀ. ಕರಿದ ಅಡುಗೆ ಎಣ್ಣೆ ಪತ್ತೆ

ಸದ್ಯ ಜಪ್ತಿ ಮಾಡಿರುವ ಆಹಾರ ಪದಾರ್ಥಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಲ್ಯಾಬ್ ವರದಿ ಬಂದ ಬಳಿಕ ನಿಯಮ ಉಲ್ಲಂಘಿಸಿರುವ ಹೋಟೆಲ್‌ಗಳು ಮತ್ತು ಆಹಾರ ಸಂಸ್ಥೆಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಾಯಗೊಂಡರೂ ಶೂಟಿಂಗ್‌ಗೆ ಮರಳಲು ರಶ್ಮಿಕಾ ಮಂದಣ್ಣ ಉತ್ಸುಕ: ‘ರಣಬಾಲಿ’ ಚಿತ್ರತಂಡಕ್ಕೆ ಆಸರೆ – Kannada News | Rashmika Mandanna Ready to Resume Ranabaali Shoot After Injury

ಚಿತ್ರೀಕರಣದ ವೇಳೆ ಗಂಭೀರವಾಗಿ ಗಾಯಗೊಂಡಿದ್ದರೂ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ವೃತ್ತಿಪರತೆಗೆ ಸಾಟಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತೀವ್ರ ಗಾಯದ ನಡುವೆಯೂ ತಮ್ಮ ಬಹುನಿರೀಕ್ಷಿತ ‘ರಣಬಾಲಿ’ ಸಿನಿಮಾದ ಶೂಟಿಂಗ್ ಸೆಟ್‌ಗೆ ಬೇಗನೇ ಮರಳಿ, ಬಾಕಿ ಇರುವ ದೃಶ್ಯಗಳ ಚಿತ್ರೀಕರಣವನ್ನು ಪೂರ್ಣಗೊಳಿಸಲು ಅವರು ತೀವ್ರ ಆಸಕ್ತಿ ತೋರಿದ್ದಾರೆ. ಈ ಮೂಲಕ ಅಂದುಕೊಂಡ ದಿನಾಂಕದಂದು ಸಿನಿಮಾ ರಿಲೀಸ್​​ ಮಾಡಲು ಮುಂದಾಗಿದ್ದಾರೆ.

ರಶ್ಮಿಕಾಗೆ ಗಾಯ

ಇತ್ತೀಚೆಗೆ ಅವರು ಚಿತ್ರ ‘ಮೈಸಾ’ ಶೂಟಿಂಗ್‌ನಲ್ಲಿ ನಿರತರಾಗಿದ್ದಾಗ ರಶ್ಮಿಕಾ ತೀವ್ರ ಸ್ವರೂಪದ ಅಪಘಾತಕ್ಕೆ ಈಡಾಗಿದ್ದರು. ಡ್ಯಾನ್ಸ್ ದೃಶ್ಯದ ಚಿತ್ರೀಕರಣದ ವೇಳೆ ಅವರ ಬಲ ಸೊಂಟದ ಸ್ನಾಯುಖಂಡಕ್ಕೆ ಗಾಯವಾಗಿತ್ತು. ವೈದ್ಯರು ಅವರಿಗೆ ಸುಮಾರು ಆರು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಮತ್ತು ಫಿಸಿಯೋಥೆರಪಿ ಚಿಕಿತ್ಸೆ ಪಡೆಯುವಂತೆ ಕಟ್ಟುನಿಟ್ಟಿನ ಸಲಹೆ ನೀಡಿದ್ದಾರೆ. ಈ ಆಕಸ್ಮಿಕ ಗಾಯದಿಂದಾಗಿ ‘ಮೈಸಾ’ ಹಾಗೂ ‘ರಣಬಾಲಿ’ ಎರಡೂ ದೊಡ್ಡ ಬಜೆಟ್ ಚಿತ್ರಗಳ ಶೂಟಿಂಗ್ ವೇಳಾಪಟ್ಟಿಗೆ ತಾತ್ಕಾಲಿಕವಾಗಿ ತಡೆ ಬಿದ್ದಿತ್ತು.

ಶೂಟಿಂಗ್ ಮಾಡಲು ಪಣ

ಪ್ರಸ್ತುತ ರಶ್ಮಿಕಾ ಅವರ ಚೇತರಿಕೆ ವೇಗವಾಗಿ ಮತ್ತು ಉತ್ತಮವಾಗಿ ಸಾಗುತ್ತಿದ್ದು, ಚಿತ್ರತಂಡದಲ್ಲಿ ಹೊಸ ಭರವಸೆ ಮೂಡಿದೆ. ಇತ್ತ ‘ರಣಬಾಲಿ’ ನಿರ್ಮಾಪಕರು ಚಿತ್ರವನ್ನು ಅಕ್ಟೋಬರ್ 30ರಂದು ಅದ್ಧೂರಿಯಾಗಿ ಪ್ರದರ್ಶನಕ್ಕೆ ತರಲು ಯೋಜನೆ ರೂಪಿಸಿದ್ದಾರೆ. ಸಿನಿಮಾ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿರುವುದರಿಂದ, ಯಾವುದೇ ವಿಳಂಬವಿಲ್ಲದೆ ತಮಗೆ ನಿಗದಿಪಡಿಸಿದ ಭಾಗದ ಶೂಟಿಂಗ್ ಮುಗಿಸಿಕೊಡಲು ರಶ್ಮಿಕಾ ಪಣ ತೊಟ್ಟಿದ್ದಾರೆ.
ವಿಜಯ್​ಗೆ ಮುಖ್ಯ

‘ರಣಬಾಲಿ’ ಸಿನಿಮಾ ನಟ ವಿಜಯ್ ದೇವರಕೊಂಡ ಅವರಿಗೆ ಅತ್ಯಂತ ನಿರ್ಣಾಯಕವಾಗಿದೆ. ಇತ್ತೀಚಿನ ಅವರ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ. ಜೊತೆಗೆ, ಪತಿ ವಿಜಯ್ ದೇವರಕೊಂಡ ನಾಯಕನಾಗಿ ನಟಿಸುತ್ತಿರುವ ಚಿತ್ರವಾದ್ದರಿಂದ ರಶ್ಮಿಕಾ ಅವರಿಗೂ ಇದು ಭಾವನಾತ್ಮಕವಾಗಿ ಅತ್ಯಂತ ವಿಶೇಷವಾದ ಯೋಜನೆಯಾಗಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಸೊಂಟಕ್ಕೆ ಪೆಟ್ಟಾಗಿದ್ದು ಹೇಗೆ? ಎಲ್ಲವನ್ನೂ ವಿವರಿಸಿದ ನಟಿ

ಗಾಯದ ನೋವಿದ್ದರೂ ರಶ್ಮಿಕಾ ತೋರಿಸುತ್ತಿರುವ ಈ ಕಮಿಟ್‌ಮೆಂಟ್ ಕಂಡು ‘ರಣಬಾಲಿ’ ಚಿತ್ರತಂಡ ಅಚ್ಚರಿಗೊಂಡಿದ್ದು, ಯೋಜಿಸಿದಂತೆ ಶೂಟಿಂಗ್ ಪೂರ್ಣಗೊಳಿಸಿ ಅಕ್ಟೋಬರ್ 30ಕ್ಕೆ ತೆರೆಗೆ ತರಲು ಭರದ ಸಿದ್ಧತೆ ನಡೆಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬೆಂಗಳೂರಿನ ಪ್ರಮುಖ ನಗರಗಳಲ್ಲಿ ಸುಧಾರಿಸಿದ ಏರ್ ಕ್ವಾಲಿಟಿ – Kannada News | Bengaluru AQI Today: Karnataka Air Quality Report for August 11

ಬೆಂಗಳೂರಿನ ಪ್ರಮುಖ ನಗರಗಳಲ್ಲಿ ಸುಧಾರಿಸಿದ ಏರ್ ಕ್ವಾಲಿಟಿ

ಬೆಂಗಳೂರು, ಆಗಸ್ಟ್ 11: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟವು (AQI) ಸಾಧಾರಣ ಮಟ್ಟದಲ್ಲಿದೆ. ಇತ್ತೀಚಿನ ಮಳೆ ಮತ್ತು ಗಾಳಿಯ ಮುನ್ಸೂಚನೆಯಿಂದಾಗಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ನಿರಾಳವಾಗಿ ಉಸಿರಾಡುವಂತಾಗಿದೆ. ಬೆಂಗಳೂರು ನಗರದ ಸರಾಸರಿ AQI ಪ್ರಮಾಣ 55 ರಿಂದ 67 ರ ಆಸುಪಾಸಿನಲ್ಲಿದ್ದು, ಇದು ಉತ್ತಮ ವಿಭಾಗಕ್ಕೆ ಒಳಪಡುತ್ತದೆ.

ನಗರದ ವಿವಿಧ ಭಾಗಗಳ ವಿವರ ಇಲ್ಲಿದೆ

  • ಪೀಣ್ಯ: ಕೈಗಾರಿಕಾ ಪ್ರದೇಶವಾಗಿದ್ದರೂ ಇಂದು ಇಲ್ಲಿ ಅತ್ಯಂತ ಕಡಿಮೆ ಅಂದರೆ ಸುಮಾರು 42 ರಿಂದ 45 ರಷ್ಟು ಉತ್ತಮ AQI ದಾಖಲಾಗಿದೆ.
  • ಬಿಟಿಎಂ ಲೇಔಟ್ ಮತ್ತು ಬನಶಂಕರಿ: ಈ ಭಾಗಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ AQI ಮಟ್ಟ 60 ರಿಂದ 80 ರಷ್ಟಿದ್ದು, ‘ಸಾಧಾರಣ’ ಮಟ್ಟದಲ್ಲಿದೆ.
  • MG ರೋಡ್/ಮೆಜೆಸ್ಟಿಕ್: ಇಲ್ಲಿ ಮಾಲಿನ್ಯದ ಕಣಗಳಾದ PM2.5 ಮತ್ತು PM10 ಪ್ರಮಾಣ ನಿಯಂತ್ರಣದಲ್ಲಿದ್ದು, AQI 65 ರ ಆಸುಪಾಸಿನಲ್ಲಿದೆ.

ಸಾಮಾನ್ಯವಾಗಿ 0-50 ರವರೆಗಿನ AQI ಅನ್ನು ‘ಉತ್ತಮ’ ಮತ್ತು 51-100 ರಷ್ಟಿದ್ದರೆ ‘ಸಾಧಾರಣ’ ಎಂದು ಪರಿಗಣಿಸಲಾಗುತ್ತದೆ. ಅದರಂತೆ ಬೆಂಗಳೂರಿನ ಗಾಳಿ ಸದ್ಯಕ್ಕೆ ಆರೋಗ್ಯಕ್ಕೆ ಸುರಕ್ಷಿತವಾಗಿದೆ.

ರಾಜ್ಯದ ಇತರ ಪ್ರಮುಖ ನಗರಗಳ ಸ್ಥಿತಿಗತಿ

ಬೆಂಗಳೂರನ್ನು ಹೊರತುಪಡಿಸಿ ಕರ್ನಾಟಕದ ಇತರ ಪ್ರಮುಖ ನಗರಗಳಲ್ಲೂ ವಾಯು ಗುಣಮಟ್ಟ ಉತ್ತಮ ಸ್ಥಿತಿಯಲ್ಲಿದೆ. ಕರಾವಳಿ ಮತ್ತು ಸಾಂಸ್ಕೃತಿಕ ನಗರಿಗಳಲ್ಲಿ ಮಾಲಿನ್ಯ ಅತ್ಯಂತ ಕ್ಷೀಣಿಸಿದ್ದು, AQI 35 ರಿಂದ 48 ರಷ್ಟರೊಂದಿಗೆ ‘ಉತ್ತಮ’ ವಾತಾವರಣವಿದೆ. ಬಳ್ಳಾರಿ ಮತ್ತು ಕೋಲಾರ ಭಾಗಗಳಲ್ಲಿ ಇತ್ತೀಚಿನ ವರದಿಗಳ ಪ್ರಕಾರ ವಾಯು ಮಾಲಿನ್ಯ ಸೂಚ್ಯಂಕವು ಕೇವಲ 12 ರಿಂದ 15 ರಷ್ಟಿದ್ದು, ದೇಶದಲ್ಲೇ ಅತ್ಯಂತ ಕಡಿಮೆ ಮಾಲಿನ್ಯ ಹೊಂದಿದ ನಗರಗಳ ಪಟ್ಟಿಗೆ ಸೇರಿವೆ. ಉತ್ತರ ಕರ್ನಾಟಕದ ಈ ಅವಳಿ ನಗರಗಳಲ್ಲಿ ಕೈಗಾರಿಕಾ ಚಟುವಟಿಕೆಗಳಿದ್ದರೂ AQI 52 ರಷ್ಟರೊಂದಿಗೆ ‘ಸಾಧಾರಣ’ ಪರಿಸ್ಥಿತಿಯಲ್ಲಿದೆ.

ಇಂದು ಗಾಳಿಯ ಗುಣಮಟ್ಟ ತೃಪ್ತಿಕರವಾಗಿದ್ದರೂ, ಉಸಿರಾಟದ ತೊಂದರೆ ಅಥವಾ ಆಸ್ತಮಾ ಇರುವ ಸೂಕ್ಷ್ಮ ಆರೋಗ್ಯದ ವ್ಯಕ್ತಿಗಳು ಮುಂಜಾನೆ ಮತ್ತು ಸಂಜೆ ಹೆಚ್ಚು ದಟ್ಟಣೆ ಇರುವ ರಸ್ತೆಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು ಸೂಕ್ತ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ನೈಋತ್ಯ ಮುಂಗಾರು ತುಸು ದುರ್ಬಲ, ಕರಾವಳಿ-ಒಳನಾಡಿನ ಕೆಲ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ – Kannada News | Karnataka Weather Forecast: Rain Likely Across Coastal and Interior Districts on August 11 12

ಬೆಂಗಳೂರಿನಲ್ಲಿ ಸೋಮವಾರ ಸಂಜೆ ಸುರಿದ ಮಳೆImage Credit source: tv9

ಬೆಂಗಳೂರು, ಆಗಸ್ಟ್ 11: ಕರ್ನಾಟಕದಲ್ಲಿ ನೈರುತ್ಯ ಮುಂಗಾರು ಇದೀಗ ತುಸು ದುರ್ಬಲವಾಗಿದ್ದರೂ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯಂತೆ (Weather Forecast), ಇಂದು (ಆಗಸ್ಟ್ 11) ಕರಾವಳಿ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯೊಂದಿಗೆ ಗಂಟೆಗೆ 30–40 ಕಿ.ಮೀ ವೇಗದ ನಿರಂತರ ಗಾಳಿ ಬೀಸುವ ಸಾಧ್ಯತೆಯಿದೆ.

ಉತ್ತರ ಒಳನಾಡಿನಲ್ಲಿ ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಕೊಪ್ಪಳ, ಬಾಗಲಕೋಟೆ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದೇ ವೇಳೆ 30–40 ಕಿ.ಮೀ ವೇಗದ ಗಾಳಿಯೂ ಬೀಸಬಹುದು.

ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ ಸಾಧ್ಯತೆ

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಈ ಭಾಗಗಳಲ್ಲೂ 30–40 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ.

ಆಗಸ್ಟ್ 12ರ ಮಳೆ ಮುನ್ಸೂಚನೆ

ನಾಳೆ (ಆಗಸ್ಟ್ 12) ಕೂಡ ಕರಾವಳಿ ಕರ್ನಾಟಕದಲ್ಲಿ ಮಳೆ ಮುಂದುವರಿಯಲಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಕೊಪ್ಪಳ, ಬಾಗಲಕೋಟೆ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗಬಹುದು.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಕರಾವಳಿಯಲ್ಲಿ ಹೆಚ್ಚು ಮಳೆ

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಸೋಮವಾರ ಸಂಜೆಗೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ ನೈರುತ್ಯ ಮುಂಗಾರು ದುರ್ಬಲವಾಗಿತ್ತು. ಕರಾವಳಿ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ದಕ್ಷಿಣ ಒಳನಾಡಿನ ಕೆಲವೆಡೆ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ 5 ಸೆಂ.ಮೀ, ಕೊಪ್ಪಳ ಜಿಲ್ಲೆಯ ಮುನಿರಾಬಾದ್​ನಲ್ಲಿ 4 ಸೆಂ.ಮೀ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲೂ 3 ಸೆಂ.ಮೀ ಮಳೆ ದಾಖಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದುವರಿದ ಮಳೆಯ ಕೊರತೆ: ಶೇ 21ರಷ್ಟು ಕಡಿಮೆ ಸುರಿದ ವರ್ಷಧಾರೆ

ಒಟ್ಟಾರೆ, ಮುಂದಿನ ಎರಡು ದಿನಗಳಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಒಳನಾಡಿನ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ ಮುಂದುವರಿಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ – Kannada News | Masa Shivaratri 2026: Today’s Horoscope for All 12 Zodiac Signs fro Basavaraja Guruji

ಇಂದು 2026ರ ಆಗಸ್ಟ್ 11, ಪರಾಭವ ನಾಮ ಸಂವತ್ಸರ, ಆಷಾಢ ಮಾಸ, ಕೃಷ್ಣ ಪಕ್ಷ ಚತುರ್ದಶಿ ಹಾಗೂ ಪುನರ್ವಸು ನಕ್ಷತ್ರ ಇದೆ. ಮಂಗಳವಾರದಂದು ಸುಬ್ರಮಣ್ಯ ಸ್ವಾಮಿ ಮತ್ತು ಹನುಮನ ಕೃಪೆಗೆ ಪಾತ್ರರಾಗಲು ಅವಕಾಶವಿದೆ. ಇಂದು ಮಾಸ ಶಿವರಾತ್ರಿ ಹಾಗೂ ಚಡಚಣ ಸಂಗಮೇಶ್ವರ ಉತ್ಸವವೂ ಜರುಗಲಿದೆ. ರವಿ ಮತ್ತು ಚಂದ್ರ ಕರ್ಕಾಟಕ ರಾಶಿಯಲ್ಲಿ ಪುನರ್ವಸು ನಕ್ಷತ್ರದಲ್ಲಿ ಸಂಚರಿಸುತ್ತಿದ್ದು, ಗುರು ಸಹ ಅಲ್ಲಿಯೇ ಇರುವುದರಿಂದ ಇದು ಗಜಕೇಸರಿ ಮಹಾಯೋಗವನ್ನು ಸೃಷ್ಟಿಸಿದೆ. ರಾಹುಕಾಲ ಮಧ್ಯಾಹ್ನ 3 ಗಂಟೆ 23 ನಿಮಿಷದಿಂದ 5 ಗಂಟೆ 4 ನಿಮಿಷದ ತನಕ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭ ಕಾಲವು ಬೆಳಗ್ಗೆ 10 ಗಂಟೆ 50 ನಿಮಿಷದಿಂದ ಮಧ್ಯಾಹ್ನ 12 ಗಂಟೆ 24 ನಿಮಿಷದ ತನಕ ಇದೆ. ಇಂದಿನ ದಿನ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Source link

ನಿತ್ಯ ಭವಿಷ್ಯ : ಇಂದು ಈ ರಾಶಿಯವರಿಂದ ಕೆಲವು ಅಸಾಧ್ಯ ಕಾರ್ಯಗಳು ಸಾಧ್ಯವಾಗಲಿವೆ, ನಿಃಸ್ಪೃಹತೆ ಇರಲಿ… – Kannada News | Daily Horoscope 11 August 2026: Zodiac Predictions and Success Tips for All Signs

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಗ್ರೀಷ್ಮ ಋತುವಿನ ಆಷಾಢ ಮಾಸದ ಕೃಷ್ಣ ಪಕ್ಷದ ತ್ರಯೋದಶೀ ತಿಥಿಯ ಮಂಗಳವಾರದಂದು ಅನಿರೀಕ್ಷಿತ ಖ್ಯಾತಿ, ಖಾಸಗಿ ತನಕ್ಕೆ ಅಡ್ಡಿ, ಸ್ವಾವಲಂಬನೆ, ಇಷ್ಟದವರ ಭೇಟಿ, ಸಂಸ್ಥೆಯ ಜೊತೆ ಒಪ್ಪಂದ, ವಾಕ್ಸಮರ, ಆಹಾರ ಅಲಭ್ಯ ಇವೆಲ್ಲ ಈ ದಿನದ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಪುಷ್ಯಾ, ಯೋಗ : ಸಿದ್ಧಿ , ಕರಣ : ಭದ್ರ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 41 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:33 – 17:07, ಯಮಗಂಡ ಕಾಲ 09:16 – 10:51, ಗುಳಿಕ ಕಾಲ 12:25 – 13:59

ಮೇಷ ರಾಶಿ :

ಯಾರನ್ನೂ ನೇರವಾಗಿ ಖಂಡಿಸಲು ಸಾಧ್ಯವಾಗದು. ಎಲ್ಲವೂ ಏಕಕಾಲಕ್ಕೆ ಪ್ರಕಟವಾಗದು. ಇಂದು ನೀವು ವೃತ್ತಿಜೀವನದ ಪ್ರಯೋಜನವನ್ನು ಪಡೆಯುವಿರಿ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ ಆದರೆ ಮಾನಸಿಕ ಗೊಂದಲದಿಂದಾಗಿ ನೀವು ಪ್ರಯೋಜನಗಳಿಂದ ವಂಚಿತರಾಗಬಹುದು. ಸಂಗಾತಿಯು ನಿಮ್ಮ ಗುಟ್ಟನ್ನು ಹೊರಹಾಕಬಹುದು. ಬಹಳ ದಿನಗಳಿಂದ ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸುವಿರಿ.

ವೃಷಭ ರಾಶಿ :

ನಿಮ್ಮ ಆಶಯಗಳು ಈ ದಿನ ಈಡೇರಬಹುದು.‌ ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳಲ್ಲಿ ಸೈದ್ಧಾಂತಿಕ ಯಶಸ್ಸು ಇರುತ್ತದೆ. ಮಕ್ಕಳ ಕಡೆಯಿಂದ ಸಮಾಧಾನಕರ ಸುದ್ದಿ ಸಿಗಲಿದೆ. ಕೆಲಸಕ್ಕೆ ಕೊಡುವ ಸಲಹೆಯಿಂದ ನಿಮಗೇ ಜವಾಬ್ದಾರಿ ಬರಲಿದೆ. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇದೆ. ನಿಮ್ಮ ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡಬಹುದು.

ಮಿಥುನ ರಾಶಿ :

ಇಂದು ನಿಮ್ಮ ಕಾರಣದಿಂದ ಕುಟುಂಬದಲ್ಲಿ ಸಂತೋಷ ಇರಲಿದೆ. ಮಕ್ಕಳ ಜವಾಬ್ದಾರಿಯನ್ನು ಪೂರೈಸಬಹುದು. ಪ್ರಯಾಣವು ಆಹ್ಲಾದಕರ ಮತ್ತು ಪ್ರಯೋಜನಕಾರಿ. ನೀವು ಆತ್ಮೀಯರ ದರ್ಶನ ಮತ್ತು ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ. ನಿಮ್ಮ ವಿರುದ್ಧ ಮಾತನಾಡಿದವರಿಗೆ ಇಂದು ಕಾಲವೇ ಉತ್ತರಿಸುವುದು. ನಿಮ್ಮ ಏಕಾಗ್ರತೆಯ ಕಾರ್ಯಕ್ಕೆ ಭಂಗವಾಗುವ ಸಾಧ್ಯತೆ ಇದೆ. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು.

ಕರ್ಕಾಟಕ ರಾಶಿ :

ನೀರೀಕ್ಷಿಸಿದ ವಸ್ತುಗಳು ಕೆಲವು ಅನಿರೀಕ್ಷಿತವಾಗಿ ಸಿಗಲಿವೆ. ಮನಸ್ಸು ಸ್ವಲ್ಪ ಎಲ್ಲವನ್ನೂ ಮರೆತು ಹಗುರಾಗಬಹುದು. ಇಂದು ಬಹಳ ಸಂತೋಷದಾಯಕವಾಗಿರುತ್ತದೆ. ವ್ಯಾಪಾರದ ಮಾರುಕಟ್ಟೆಯಲ್ಲಿ ನಿಮ್ಮದೇ ಮೇಲ್ಗೈ ಆಗಲಿದೆ. ಕಳೆದುಕೊಂಡದ್ದನ್ನು ಪಡೆಯಬೇಕು ಎಂಬ ಛಲವು ನಿಮ್ಮಲ್ಲಿ ಇರುವುದು. ಮನಸ್ತಾಪವನ್ನು ಮನಸ್ಸಿನೊಳಗೇ ಇಟ್ಟುಕೊಳ್ಳುವಿರಿ. ಆಸ್ತಿಯ ವಿಚಾರಕ್ಕೆ ನೆರೆಹೊರೆಯ ನಡುವೆ ಕಲಹವಾದೀತು.

ಸಿಂಹ ರಾಶಿ :

ವಿದೇಶಕ್ಕೆ ಹೋಗಲು ಆಲೋಚನೆ ಮಾಡಿದ್ದರೆ ಹೊರಡಬಹುದು. ನಿಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ. ಸಿಹಿಯಾದ ಜೇನು ಪಡೆಯಲು ಸಣ್ಣ ನೋವನ್ನು ಸಹಿಸಬೇಕಾಗುವುದು. ಉದ್ಯೋಗ ಮತ್ತು ವ್ಯವಹಾರದ ವಿಷಯದಲ್ಲಿ ದಿನವು ಮಿಶ್ರವಾಗಿರುತ್ತದೆ. ಬುದ್ಧಿವಂತಿಕೆಯಿಂದ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಿ. ಭೂಮಿಯನ್ನು ಮಾರಾಟಮಾಡುವ ಸ್ಥಿತಿಯು ಬರಲಿದೆ. ಉತ್ಸಾಹದಿಂದ ನೀವು ಇಂದಿನ ಕಾರ್ಯವನ್ನು ಮಾಡುತ್ತಿದ್ದರೂ ದಿನದ ಕೊನೆಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು.

ಕನ್ಯಾ ರಾಶಿ :

ನೀವು ಒಂಟಿಯಾಗಿರುವುದನ್ನು ಯಾರಾದರೂ ತಪ್ಪಿಸಬಹುದು.‌ ಇದ್ದಕ್ಕಿದ್ದಂತೆ ನೀವು ಕೆಲವು ಪ್ರತಿಕೂಲವಾದ ಸುದ್ದಿಗಳನ್ನು ಕೇಳಬಹುದು, ಅನಂತರ ನೀವು ಹಠಾತ್ ಪ್ರಯಾಣಕ್ಕೆ ಹೋಗಬೇಕಾಗಬಹುದು. ಸುಲಭದಲ್ಲಿ ಆಗುವ ಕಾರ್ಯವನ್ನು ಕಷ್ಟದಿಂದ ಮಾಡುವಿರಿ. ನಿಮ್ಮ ಮಾತುಗಳು ಯಾರೊಂದಿಗಾದರೂ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳಿಗೆ ಕಾರಣವಾಗಬಹುದು. ನಿಮ್ಮ ಇಷ್ಟದವರು ನಿಮ್ಮ ಭೇಟಿಯಾಗಬಹುದು. ಸಣ್ಣ ಉಳಿತಾಯಕ್ಕೆ ಇಂದು ಬೆಲೆಯು ಬಂದಂತಾಗುವುದು. ಜೀವನದ ಲಕ್ಷ್ಯವು ಬೇರೆ ಕಡೆಗೆ ಬದಲಿಸಬಹುದು.

ತುಲಾ ರಾಶಿ :

ನೀವು ನಿಮ್ಮ ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ. ಮನೆಯವರ ಜೊತೆ ಖುಷಿಯಿಂದ ಕಾಲಕಳೆಯುವಿರಿ. ಈ ವಿವೇಕದಿಂದ ಮಾಡಿದ ಕೆಲಸದ ಬಗ್ಗೆ ನಿಮಗೆ ಮೆಚ್ಚುಗೆ ಸಿಗುತ್ತದೆ. ವೃತ್ತಿಜೀವನದಲ್ಲಿ ಗೌರವ ಸಿಗುತ್ತದೆ. ಹೊಸ ಉದ್ಯಮಗಳು ಅಭಿವೃದ್ಧಿ ಹೊಂದುತ್ತವೆ. ಮಗುವಿಗೆ ಸಂಬಂಧಿಸಿದ ಸುವಾರ್ತೆಯೊಂದಿಗೆ ಮನಸ್ಸು ಸಂತೋಷವಾಗುತ್ತದೆ. ಹಿರಿಯರ ಪ್ರೀತಿಯು ನಿಮಗೆ ಖುಷಿಕೊಡುವುದು.

ವೃಶ್ಚಿಕ ರಾಶಿ :

ನಡೆ, ನುಡಿಗಳಲ್ಲಿ ಬಹಳ ಜಾಗರೂಕರಾಗಿರಿ. ಸಮಯವು ಬಹಳ ಉತ್ಸಾಹ ಮತ್ತು ನೆಮ್ಮದಿಯಿಂದ ಕಳೆದುಹೋಗುತ್ತದೆ. ಅಂತರಂಗದ ಭಾವವನ್ನು ಯಥಾವತ್ತಾಗಿ ತಿಳಿಸಲಾರಿರಿ. ರಾಜಕೀಯ ಕ್ಷೇತ್ರದಲ್ಲಿ ಮಾಡುವ ಪ್ರಯತ್ನಗಳು ನಿಮಗೆ ಯಶಸ್ಸಿನ ಬಾಗಿಲು ತೆರೆಯುತ್ತದೆ. ವೃತ್ತಿಯಲ್ಲಿ ಆತಂಕವು ಇರಲಿದೆ. ಪ್ರಾಣಿಗಳಿಂದ ಭಯಗೊಳ್ಳುವ ಸಾಧ್ಯತೆ ಇದೆ. ಎದುರಿನವರ ಇಂಗಿತವನ್ನು ತಿಳಿದುಕೊಳ್ಳದೇ ಏನನ್ನಾದರೂ ಹೇಳುವಿರಿ.

ಧನು ರಾಶಿ :

ಅನಿರೀಕ್ಷಿತ ಎದುರಾದ ನೀವು ಗಮನ ಕೊಡದಿದ್ದರೆ, ಅನೇಕ ಉತ್ತಮ ಅವಕಾಶಗಳು ಕಳೆದುಹೋಗುತ್ತವೆ. ನಿಮ್ಮ ಕೆಲಸದಿಂದ ಸಂತುಷ್ಟರಾಗಿರುವ ನಿಮ್ಮ ವಿರೋಧಿಗಳು ಸಹ ನಿಮ್ಮನ್ನು ಹೊಗಳುತ್ತಾರೆ. ಸಾಮಾಜಿಕ ಕಾರ್ಯದಿಂದ ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ. ಮಕ್ಕಳೊಂದಿಗೆ ವಿವಾದಗಳು ಉಂಟಾಗಬಹುದು. ಸಣ್ಣ ಸಮಸ್ಯೆಯನ್ನು ದೊಡ್ಡ ಮಾಡಿಕೊಳ್ಳಲಿದ್ದೀರಿ. ಬಂಧುಗಳು ನಿಮ್ಮ ಸಹಾಯಕ್ಕೆ ಬರಬಹುದು. ಯಾರಾದರೂ ನಿಮ್ಮನ್ನು ಚೇಡಿಸಬಹುದು.

ಮಕರ ರಾಶಿ :

ವಿವಾಹಿತರು ತಮ್ಮ ಸಂಗಾತಿಯ ಬೆಂಬಲವನ್ನು ಪಡೆಯುತ್ತಾರೆ. ಪ್ರಯಾಣದ ಆಯಾಸಕ್ಕೆ ವಿಶ್ರಾಂತಿ ಪಡೆದು ಸಾಗಿರಿ. ಮಗುವಿನಿಂದ ನಿರಾಶಾದಾಯಕ ಸುದ್ದಿಗಳನ್ನು ಸ್ವೀಕರಿಸಬಹುದು, ಇದರಿಂದಾಗಿ ಮನಸ್ಸು ಹಾಳಾಗಬಹುದು. ಲಾಭ ಪಡೆಯಲು ಮಾಡಿದ ಪ್ರಯತ್ನಗಳು ಯಶಸ್ವಿಯಾಗುವುದು. ಮಿತ್ರರ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಇಂದು ನಿಮ್ಮ ಸಹಾಯದಿಂದ ಕುಟುಂಬವು ಸಂತೋಷಗೊಳ್ಳುವುದು.

ಕುಂಭ ರಾಶಿ :

ದಾಂಪತ್ಯ ಜೀವನದಲ್ಲಿ ಹಲವು ದಿನಗಳಿಂದ ಇದ್ದ ತೊಂದರೆಗಳು ಕೊನೆಗೊಂಡು ಬಾಂಧವ್ಯ ಮಧುರವಾಗಿರುತ್ತದೆ. ಇಂದು ಸಂಬಂಧಿಕರ ಜೊತೆಗೆ ಅನುಚಿತವಾಗಿ ವರ್ತಿಸಬೇಡಿ. ಸಂಬಂಧದಲ್ಲಿ ಹದಗೆಡುವ ಸಾಧ್ಯತೆಯಿದೆ. ಸಮಾಜದಲ್ಲಿ ನಿಮ್ಮ ಹೆಸರೂ ಕೂಡ ಹಾಳಾಗಬಹುದು. ಕೆಲವು ಉತ್ತಮ ಪ್ರಯೋಜನಗಳ ಯೋಗವಿದೆ. ಭೂಮಿಯ ವ್ಯವಹಾರವನ್ನು ಮಾಡಲು ನಿಮಗೆ ಒತ್ತಡ ಬರಬಹುದು. ಇಂದಿನ ಆದಾಯದಿಂದ ನಿಮ್ಮ ಪಡೆಯಬೇಕಾದುದನ್ನು ಪಡೆಯುವಿರಿ.

ಇದನ್ನೂ ಓದಿ: ಬುಧ ಸಂಚಾರ ಫಲ: ಈ ರಾಶಿಯವರಿಗೆ ಒಲಿಯಲಿದೆ ದಿಢೀರ್ ಧನಯೋಗ ಹಾಗೂ ವೃತ್ತಿ ಪ್ರಗತಿ

ಮೀನ ರಾಶಿ :

ಸ್ವಬುದ್ಧಿಯಿಂದ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಪ್ರೇಮವು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗದು. ಇಂದು ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವಿದ್ಯಾಭ್ಯಾಸಕ್ಕೆ ನಿಮ್ಮವರಿಂದ ಮನೆಯ ಹೊರಗೆ ವಿಚಾರಣೆ ಇರುತ್ತದೆ. ಹಣ ಪಡೆಯುವುದು ಸುಲಭವಾಗುತ್ತದೆ. ಸಂತೋಷ ಇರುತ್ತದೆ. ಬಂಧುಗಳ ಜೊತೆ ವಿವಾದವು ಏರ್ಪಡಲಿದ್ದು ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯವೂ ಬರಬಹುದು.

-ಲೋಹಿತ್ ಹೆಬ್ಬಾರ್ – 8762924271 (what’s app only)

Source link

ತಿಂದ ತಕ್ಷಣ ನಿದ್ರೆ ಬರುತ್ತಿದೆಯೇ? ಕಾರ್ಬೋಹೈಡ್ರೇಟ್‌ನಿಂದ ಹಿಡಿದು ನಿದ್ರೆಯ ಕೊರತೆಯವರೆಗೆ ಕಾರಣಗಳೇನು? – Kannada News | Feeling Sleepy After Meals? These Foods and Habits Could Be the Reason

ಊಟ ಮಾಡಿದ ನಂತರ ಕೆಲವರಿಗೆ ಕಣ್ಣುಗಳು ಭಾರವಾಗುವುದು, ದೇಹದಲ್ಲಿ ಸುಸ್ತು ಕಾಣಿಸಿಕೊಳ್ಳುವುದು ಅಥವಾ ತಕ್ಷಣ ಮಲಗಬೇಕು ಎನ್ನಿಸುವುದು ಸಾಮಾನ್ಯ. ವಿಶೇಷವಾಗಿ ಮಧ್ಯಾಹ್ನದ ಊಟದ ನಂತರ ಅಥವಾ ಹೊಟ್ಟೆ ತುಂಬಾ ಆಹಾರ ಸೇವಿಸಿದಾಗ ಈ ಅನುಭವ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಊಟದ ಬಳಿಕ ನಿದ್ರೆ ಬರುವುದಕ್ಕೆ ಕೇವಲ ಹೊಟ್ಟೆ ತುಂಬಿರುವುದೇ ಕಾರಣವಲ್ಲ. ನಾವು ಸೇವಿಸುವ ಆಹಾರದ ಪ್ರಮಾಣ, ಅದರಲ್ಲಿರುವ ಪೋಷಕಾಂಶಗಳು, ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಬದಲಾವಣೆಗಳು ಹಾಗೂ ರಾತ್ರಿ ಸರಿಯಾಗಿ ನಿದ್ರೆ ಮಾಡದಿರುವುದೂ ಇದಕ್ಕೆ ಕಾರಣವಾಗಬಹುದು. ಒಮ್ಮೊಮ್ಮೆ ಊಟದ ಬಳಿಕ ಸ್ವಲ್ಪ ಸುಸ್ತಾಗುವುದು ಸಾಮಾನ್ಯವಾಗಿರಬಹುದು. ಆದರೆ ಪ್ರತಿದಿನ ಊಟ ಮಾಡಿದ ನಂತರ ತೀವ್ರ ನಿದ್ರೆ, ಆಯಾಸ ಅಥವಾ ಕೆಲಸ ಮಾಡಲು ಕಷ್ಟವಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಹಾಗಾದರೆ ಊಟದ ಬಳಿಕ ನಿದ್ರೆ ಬರುವುದಕ್ಕೆ ಕಾರಣವೇನು, ಯಾವ ಆಹಾರಗಳ ಸೇವನೆಯಿಂದ ಇದು ಹೆಚ್ಚಾಗಬಹುದು ಮತ್ತು ಇದನ್ನು ಕಡಿಮೆ ಮಾಡಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಊಟ ಮಾಡಿದ ಬಳಿಕ ನಿದ್ರೆ ಬರುವುದಕ್ಕೆ ಕಾರಣವೇನು?

Cleveland Clinic ಪ್ರಕಾರ, ಊಟದ ನಂತರ ನಿದ್ರೆ ಅಥವಾ ಸುಸ್ತು ಕಾಣಿಸಿಕೊಳ್ಳಲು ನಾವು ಸೇವಿಸುವ ಆಹಾರದ ಪ್ರಮಾಣ ಮತ್ತು ಅದರಲ್ಲಿರುವ ಪೋಷಕಾಂಶಗಳು ಪ್ರಮುಖ ಕಾರಣವಾಗಬಹುದು. ಅಕ್ಕಿ, ಬ್ರೆಡ್, ಪಾಸ್ತಾ ಮತ್ತು ಆಲೂಗಡ್ಡೆಯಂತಹ ಕಾರ್ಬೋಹೈಡ್ರೇಟ್‌ಯುಕ್ತ ಆಹಾರಗಳನ್ನು ಹೆಚ್ಚು ಸೇವಿಸಿದಾಗ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟದಲ್ಲಿ ಬದಲಾವಣೆ ಉಂಟಾಗಬಹುದು. ಇದರಿಂದ ಕೆಲವರಿಗೆ ಊಟದ ನಂತರ ಸುಸ್ತು ಅಥವಾ ನಿದ್ರೆ ಅನುಭವವಾಗಬಹುದು.

ಇದನ್ನೂ ಓದಿ: ನಿದ್ರೆಯ ಕೊರತೆ ಮಹಿಳೆಯರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ತಜ್ಞರಿಂದ ಮಹತ್ವದ ಮಾಹಿತಿ

ಪ್ರೋಟೀನ್ ಆಹಾರವೂ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆಯೇ?

ಮೊಟ್ಟೆ, ಬೇಳೆಕಾಳುಗಳು ಮತ್ತು ಮಾಂಸದಂತಹ ಪ್ರೋಟೀನ್‌ಯುಕ್ತ ಆಹಾರಗಳಲ್ಲಿ ಟ್ರಿಪ್ಟೋಫಾನ್ ಸೇರಿದಂತೆ ಕೆಲವು ಅಮೈನೋ ಆಮ್ಲಗಳು ಇರುತ್ತವೆ. ಇವು ದೇಹದಲ್ಲಿ ವಿಶ್ರಾಂತಿ ಮತ್ತು ನಿದ್ರೆಗೆ ಸಂಬಂಧಿಸಿದ ಕೆಲವು ರಾಸಾಯನಿಕಗಳ ಉತ್ಪಾದನೆಯಲ್ಲಿ ಪಾತ್ರವಹಿಸುತ್ತವೆ. ಆದರೆ ಒಂದು ನಿರ್ದಿಷ್ಟ ಆಹಾರ ಸೇವಿಸಿದ ತಕ್ಷಣವೇ ನಿದ್ರೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಟ್ಟಾರೆ ಆಹಾರ ಪದ್ಧತಿ, ಆಹಾರದ ಪ್ರಮಾಣ ಮತ್ತು ವ್ಯಕ್ತಿಯ ದೇಹದ ಪ್ರತಿಕ್ರಿಯೆಯೂ ಇಲ್ಲಿ ಮುಖ್ಯವಾಗುತ್ತದೆ.

ಹೊಟ್ಟೆ ತುಂಬಾ ತಿಂದರೆ ಸುಸ್ತು ಹೆಚ್ಚಾಗುತ್ತದೆಯೇ?

ಹೌದು, ತುಂಬಾ ಪ್ರಮಾಣದಲ್ಲಿ ಆಹಾರ ಸೇವಿಸಿದಾಗ ಹೊಟ್ಟೆ ಭಾರವಾಗಿರುವ ಅನುಭವವಾಗಬಹುದು. ಜೀರ್ಣಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ದೇಹದ ಶಕ್ತಿಯ ಬಳಕೆಯಲ್ಲೂ ಬದಲಾವಣೆ ಉಂಟಾಗುತ್ತದೆ. ಇದರ ಪರಿಣಾಮವಾಗಿ ಕೆಲವರಿಗೆ ಊಟದ ಬಳಿಕ ಹೆಚ್ಚು ಭಾರ, ಆಲಸ್ಯ ಅಥವಾ ನಿದ್ರೆ ಅನುಭವವಾಗಬಹುದು. ಅದರಲ್ಲಿಯೂ ತುಂಬಾ ಎಣ್ಣೆಯುಕ್ತ, ಸಿಹಿ ಅಥವಾ ಹೆಚ್ಚು ಸಂಸ್ಕರಿಸಿದ ಆಹಾರವನ್ನು ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಈ ಅನುಭವ ಮತ್ತಷ್ಟು ಹೆಚ್ಚಾಗಬಹುದು.

ರಾತ್ರಿ ಸರಿಯಾಗಿ ನಿದ್ರೆ ಮಾಡದಿದ್ದರೆ ಹಗಲಿನಲ್ಲಿ ದೇಹದಲ್ಲಿ ಆಯಾಸ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಊಟದ ಬಳಿಕ ಕಾಣಿಸಿಕೊಳ್ಳುವ ಸಾಮಾನ್ಯ ಸುಸ್ತು ಕೂಡ ಹೆಚ್ಚು ತೀವ್ರವಾಗಿ ಅನುಭವವಾಗಬಹುದು. ಹೀಗಾಗಿ ಊಟದ ನಂತರ ಪ್ರತಿದಿನ ತೀವ್ರ ನಿದ್ರೆ ಬರುತ್ತಿದ್ದರೆ ಆಹಾರ ಪದ್ಧತಿಯ ಜೊತೆಗೆ ನಿಮ್ಮ ರಾತ್ರಿ ನಿದ್ರೆಯ ಗುಣಮಟ್ಟವನ್ನೂ ಗಮನಿಸುವುದು ಮುಖ್ಯ.

ಊಟದ ಬಳಿಕ ನಿದ್ರೆ ಬರದಂತೆ ತಡೆಯಲು ಏನು ಮಾಡಬೇಕು?

ಒಂದೇ ಬಾರಿಗೆ ತುಂಬಾ ಪ್ರಮಾಣದಲ್ಲಿ ಆಹಾರ ಸೇವಿಸುವುದನ್ನು ತಪ್ಪಿಸಿ. ಊಟದಲ್ಲಿ ತರಕಾರಿಗಳು, ಸಂಪೂರ್ಣ ಧಾನ್ಯಗಳು, ಬೇಳೆಕಾಳುಗಳು ಮತ್ತು ಸೂಕ್ತ ಪ್ರಮಾಣದ ಪ್ರೋಟೀನ್‌ಗಳನ್ನು ಸೇರಿಸಿ. ಹೆಚ್ಚು ಸಕ್ಕರೆ ಇರುವ ಆಹಾರಗಳು ಮತ್ತು ಅತಿಯಾಗಿ ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡುವುದು ಉತ್ತಮ. ಊಟ ಮಾಡಿದ ಬಳಿಕ ಕೆಲವು ನಿಮಿಷಗಳ ಕಾಲ ನಿಧಾನವಾಗಿ ವಾಕ್ ಮಾಡುವುದು ಒಳ್ಳೆಯದು. ದಿನವಿಡೀ ಸಾಕಷ್ಟು ನೀರು ಕುಡಿಯಿರಿ ಮತ್ತು ರಾತ್ರಿ ಅಗತ್ಯ ಪ್ರಮಾಣದ ನಿದ್ರೆ ಪಡೆಯಲು ಪ್ರಯತ್ನಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹೇಶ್ ಬಾಬುಗೆ ಸಂದೀಪ್ ರೆಡ್ಡಿ ವಂಗಾ ವಿಶೇಷ ಶುಭಾಶಯ: ‘ಡೆವಿಲ್’ ಮತ್ತೆ ಮುನ್ನೆಲೆಗೆ? – Kannada News | Sandeep Reddy Vanga wishes Mahesh Babu With AI video sparks Devil Movie Combo Rumours

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು (Mahesh Babu) ಅವರ ಹುಟ್ಟುಹಬ್ಬಕ್ಕೆ ‘ಅನಿಮಲ್’ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರು ವಿಶೇಷವಾಗಿ ಶುಭಾಶಯ ತಿಳಿಸಿದ್ದು, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸಾಮಾನ್ಯ ಪೋಸ್ಟ್‌ಗಳ ಮೂಲಕ ಶುಭಾಶಯ ಕೋರುವ ಬದಲಾಗಿ, ಲೆಜೆಂಡರಿ ನಟ ಕೃಷ್ಣ ಅವರ ಪ್ರಸಿದ್ಧ ಡೈಲಾಗ್ ಒಂದನ್ನು ಮಹೇಶ್ ಬಾಬು ಹೇಳುವಂತಹ ಎಐ ನಿರ್ಮಿತ ವಿಡಿಯೋವನ್ನು ವಂಗಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಿಂದಾಗಿ ‘ಡೆವಿಲ್’ (Devil) ಸಿನಿಮಾ ಬಗ್ಗೆ ಅಭಿಮಾನಿಗಳ ಮನದಲ್ಲಿ ಪ್ರಶ್ನೆ ಮೂಡಿದೆ.

ಸಂದೀಪ್ ರೆಡ್ಡಿ ವಂಗಾ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಮಹೇಶ್ ಬಾಬು ಅವರನ್ನು ಈ ರೀತಿ ರಗಡ್ ಆಗಿ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದು ಸಂದೀಪ್ ವಂಗಾ ಅವರ ಸಿನಿಮಾ ಶೈಲಿಗೆ ಹೇಳಿ ಮಾಡಿಸಿದಂತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಕ್ಲಿಪ್ ಅಭಿಮಾನಿಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಹುಟ್ಟುಹಬ್ಬದ ದಿನದಂದು ಅತ್ಯಂತ ಹೆಚ್ಚು ಚರ್ಚೆಯಾದ ಪೋಸ್ಟ್‌ಗಳಲ್ಲಿ ಒಂದಾಗಿ ಮಾರ್ಪಟ್ಟಿತು.

ಅಚ್ಚರಿಯೆಂದರೆ, ಮಹೇಶ್ ಅವರ ಮುಂಬರುವ ಬಹುನಿರೀಕ್ಷಿತ ‘ವಾರಣಾಸಿ’ ಸಿನಿಮಾದ ಅಪ್‌ಡೇಟ್ ಅಭಿಮಾನಿಗಳಿಗೆ ಅಷ್ಟಾಗಿ ತೃಪ್ತಿ ನೀಡಲಿಲ್ಲ. ಚಿತ್ರತಂಡದಿಂದ ಯಾವುದಾದರೂ ದೊಡ್ಡ ಘೋಷಣೆ ಅಥವಾ ಗ್ಲಿಂಪ್ಸ್ ವಿಡಿಯೋ ಬರುತ್ತದೆ ಎಂದು ಅನೇಕರು ನಿರೀಕ್ಷಿಸಿದ್ದರು. ಹೀಗಾಗಿ ಅಭಿಮಾನಿಗಳ ಗಮನ ಸಹಜವಾಗಿಯೇ ಸಂದೀಪ್ ವಂಗಾ ಅವರ ಪೋಸ್ಟ್‌ನತ್ತ ತಿರುಗಿತು ಹಾಗೂ ಇದು ಹೆಚ್ಚು ಚರ್ಚೆಗೆ ಗ್ರಾಸವಾಯಿತು.

ಈ ಬೆಳವಣಿಗೆಯು ಮಹೇಶ್ ಬಾಬು ಮತ್ತು ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿದೆಯೇ ಎಂಬ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಕೆಲವು ವರ್ಷಗಳ ಹಿಂದೆ, ಮಹೇಶ್ ಅವರೊಂದಿಗೆ ‘ಡೆವಿಲ್’ ಎಂಬ ಪ್ರಾಜೆಕ್ಟ್ ಮಾಡಲು ಯೋಜಿಸಿದ್ದಾಗಿ ಸಂದೀಪ್ ರೆಡ್ಡಿ ವಂಗಾ ಬಹಿರಂಗಪಡಿಸಿದ್ದರು. ಕಾರಣಾಂತರಗಳಿಂದ ಆ ಸಿನಿಮಾ ಕಾರ್ಯರೂಪಕ್ಕೆ ಬರಲಿಲ್ಲ. ಆದರೂ ಅಭಿಮಾನಿಗಳು ಆ ಕಾಂಬಿನೇಷನ್ ಅನ್ನು ಮರೆತಿರಲಿಲ್ಲ.

ಇದನ್ನೂ ಓದಿ: ‘ವಾರಣಾಸಿ’ ದೃಶ್ಯಕ್ಕಾಗಿ ಮಹೇಶ್ ಬಾಬುಗೆ 100 ಟೇಕ್; ಸಿಟ್ಟು ಬಂದು ಪ್ಯಾಕಪ್​ ಎಂದ ರಾಜಮೌಳಿ

ಇದೀಗ ನಿರ್ದೇಶಕರ ಈ ಬರ್ತ್‌ಡೇ ಪೋಸ್ಟ್ ಬಳಿಕ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಊಹಾಪೋಹಗಳು ಮತ್ತು ಥಿಯರಿಗಳು ಹೆಚ್ಚಾಗಿವೆ. ‘ವಾರಣಾಸಿ’ ಪ್ರಾಜೆಕ್ಟ್ ಪೂರ್ಣಗೊಂಡ ನಂತರ ಮಹೇಶ್ ಬಾಬು ಅವರು ಸಂದೀಪ್ ರೆಡ್ಡಿ ವಂಗಾ ಜೊತೆ ಕೈಜೋಡಿಸುವ ಸಾಧ್ಯತೆಯಿದೆ. ಈ ಮೂಲಕ ಒಂದು ಸೆನ್ಸೇಷನಲ್ ಸಿನಿಮಾ ಬರಬಹುದು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs SL: ಕಾಶ್ಮೀರದಲ್ಲಿ ತರಬೇತಿ; 17 ಕೆಜಿ ತೂಕ ಇಳಿಸಿಕೊಂಡ ಸರ್ಫರಾಜ್ ಖಾನ್

Source link

ಭಾರತ-ಚೀನಾ ಗಡಿ ಬಳಿ ಮೇಘಸ್ಫೋಟ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ – Kannada News | Uttarakhand BRO bridge swept away after heavy flood near India China border

ನವದೆಹಲಿ, ಆಗಸ್ಟ್ 10: ಉತ್ತರಾಖಂಡದ ನೀತಿ ಕಣಿವೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ನದಿಯಲ್ಲಿ ಪ್ರವಾಹದ (Flood) ಮಟ್ಟ ಏರಿಕೆಯಾಗಿದ್ದು, ಪ್ರಬಲ ನೀರಿನ ರಭಸಕ್ಕೆ ಸೇತುವೆಯೊಂದು ಕ್ಷಣಾರ್ಧದಲ್ಲಿ ಕೊಚ್ಚಿಹೋಗಿದೆ. ಇದರಿಂದಾಗಿ ಈ ಗಡಿ ಪ್ರದೇಶವು ಮುಖ್ಯ ನಗರದಿಂದ ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿದೆ. ಚಮೋಲಿ ಜಿಲ್ಲೆಯಲ್ಲಿ ಕೆಸರು ಮಿಶ್ರಿತ ನೀರು ರಭಸವಾಗಿ ಹರಿದುಬಂದು ಲೋಹದ ಸೇತುವೆಗೆ ಅಪ್ಪಳಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ನೀರಿನ ತೀವ್ರತೆಗೆ ಸೇತುವೆಯು ಕೆಲವೇ ಸೆಕೆಂಡುಗಳಲ್ಲಿ ಬುಡಮೇಲಾಗಿ ನದಿಯ ದಂಡೆಯತ್ತ ಕೊಚ್ಚಿಕೊಂಡು ಹೋಗಿದೆ.

ನದಿಯ ಪಕ್ಕದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಟ್ರಕ್ ಮತ್ತು ಕಾರು (SUV) ಒಂದರ ದೃಶ್ಯವೂ ವಿಡಿಯೋದಲ್ಲಿದ್ದು, ಸೇತುವೆ ಕೊಚ್ಚಿಹೋಗುವ ಕೆಲವೇ ಕ್ಷಣಗಳ ಮೊದಲು ಎರಡೂ ವಾಹನಗಳು ಚಾಣಾಕ್ಷತನದಿಂದ ಹಿಂತಿರುಗಿ ಪ್ರಾಣಾಪಾಯದಿಂದ ಪಾರಾಗಿವೆ. ಸೇತುವೆ ಕೊಚ್ಚಿಹೋದ ಹಿನ್ನೆಲೆಯಲ್ಲಿ ಮುಖ್ಯ ಪಟ್ಟಣದೊಂದಿಗಿನ ರಸ್ತೆ ಸಂಪರ್ಕ ವ್ಯತ್ಯಯಗೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version