ಆಸ್ಪತ್ರೆಯಲ್ಲಿ ಚೆನ್ನಮ್ಮರ ಕೊನೆ ಕ್ಷಣದ ಸನ್ನಿವೇಶ ಹೇಳಿ ಗದ್ಗದಿತರಾದ ದೇವೇಗೌಡ್ರು – Kannada News | HD Devegowda emotional after Pooja to Wife Chennamma burial at Hassan

ಹಾಸನ, (ಆಗಸ್ಟ್ 10): ಮಾಜಿ ಪ್ರಧಾನಿ ಹೆಚ್​​​​​ಡಿ ದೇವೇಗೌಡ (HD Devegowda)ಅವರು ಪತ್ನಿ ಸಾವಿನ ನೋವಿನಿಂದ ಆಚೆ ಬಂದಂತಿಲ್ಲ. ಇಂದು (ಆಗಸ್ಟ್ 10) ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿರುವ ಪತ್ನಿ ಸಮಾಧಿಗೆ ಪೂಜೆ ನೆರವೇರಿಸಿದರು. ಹೂ, ಅರಿಸಿಣ ಕುಂಕುಮ ಸಮರ್ಪಣೆ ಮಾಡಿ ಭಾವುಕರಾದರು. ಪೂಜೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದೇವೇಗೌಡ್ರು, ನನ್ನ ಜೀವನದ ಬೆನ್ನೆಲುಬು ಈಕೆ. ಈಗ ಭೂದೇವಿಯ ಗರ್ಭದಲ್ಲಿ ಚಿರನಿದ್ರೆಯಲ್ಲಿ ಇದ್ದಾಳೆ. ಸದಾ ನನ್ನ ಬೆನ್ನ ಹಿಂದೆ ನಿಂತು ನನ್ನ ಏಳಿಗೆಗಾಗಿ ದುಡಿದವಳು. ನಾನು ಜುಲೈ 14 ರ ಮಂಗಳವಾರ ಕೈಯ್ಯಾರೆ ಹಣ್ಣು ತಿನ್ನಿಸಿದ್ದೆ. ಬುಧವಾರ ನನಗೆ ಡಯಾಲಿಸಿಸ್ ಇತ್ತು ಆಸ್ಪತ್ರೆಗೆ ಹೋಗಿದ್ದೆ. ಅಷ್ಟೊತ್ತಿಗೆ ಅವರನ್ನು ಆಸ್ಪತ್ರೆಗೆ ಸೇರಿಸಿದ್ರು, ಬುಧವಾರ ಮುಚ್ಚಿದ ಕಣ್ಣು ಮತ್ತೆ ತೆರೆಯಲಿಲ್ಲ. ನನ್ನ ಕಿರಿಯ ಮಗ ದೇವರಿಗೆ ಪೂಜೆ ಮಾಡಿಸಿ ಪ್ರಸಾದ ತಂದಿದ್ದರು. ಚಂದನ ಹಣೆಗಿಟ್ಟು ಹೂ ಮುಡಿಸಿದೆ ಅಷ್ಟೇ. 108 ಇದ್ದ ಪಲ್ಸ್ ರೇಟ್ 20ಕ್ಕೆ ಬಿತ್ತು. ಯಂತ್ರಗಳು ಸದ್ದು ಮಾಡಲು ಶುರು ಮಾಡಿದವು. ವೈದ್ಯರು ಓಡಿ ಬಂದರು. ಅವರು ನಿಮಗಾಗಿ ಕಾದಿದ್ದರು . ನೀವು ಬಂದ ಬಳಿಕ ಹೊರಟಿದ್ದಾರೆ ಎಂದು ಹೇಳಿದ್ರು ಎಂದು ಪತ್ನಿಯ ಕೊನೆಯ ಕ್ಷಣದ ಸನ್ನಿವೇಶವನ್ನು ಹೇಳಿ ಭಾವುಕರಾದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

AUS vs BAN: ಟೆಸ್ಟ್ ಕ್ರಿಕೆಟ್​ನಲ್ಲಿ ವಿಶೇಷ ತ್ರಿಶತಕ ಬಾರಿಸುವ ಸನಿಹದಲ್ಲಿ ಜೋಶ್ ಹೇಜಲ್​ವುಡ್ – Kannada News | Australia vs Bangladesh Test: Hazlewood Eyes 300 Wickets, Starc Chases Home Record

ಆಸ್ಟ್ರೇಲಿಯಾ ಪರ ಇಲ್ಲಿಯವರೆಗೆ 300 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಶೇನ್ ವಾರ್ನ್ (708), ನಾಥನ್ ಲಿಯಾನ್ (567), ಗ್ಲೆನ್ ಮೆಕ್‌ಗ್ರಾತ್ (563), ಮಿಚೆಲ್ ಸ್ಟಾರ್ಕ್ (433), ಡೆನ್ನಿಸ್ ಲಿಲ್ಲಿ (355), ಪ್ಯಾಟ್ ಕಮ್ಮಿನ್ಸ್ (315), ಮಿಚೆಲ್ ಜಾನ್ಸನ್ (313), ಮತ್ತು ಬ್ರೆಟ್ ಲೀ (310) ಸೇರಿದ್ದಾರೆ. ಹೇಜಲ್‌ವುಡ್ ಈಗ ಈ ವಿಶೇಷ ಕ್ಲಬ್‌ಗೆ ಸೇರುವ ಹತ್ತಿರದಲ್ಲಿದ್ದಾರೆ(PC-PTI).

Source link

ನಿದ್ರೆಯ ಕೊರತೆ ಮಹಿಳೆಯರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ತಜ್ಞರಿಂದ ಮಹತ್ವದ ಮಾಹಿತಿ – Kannada News | Women May Need 11 Minutes More Sleep Than Men: What Experts Say

ಆರೋಗ್ಯಕ್ಕೆ ಆಹಾರ ಮತ್ತು ವ್ಯಾಯಾಮ ಎಷ್ಟು ಮುಖ್ಯವೋ, ಒಳ್ಳೆಯ ನಿದ್ರೆ ಕೂಡ ಅಷ್ಟೇ ಮುಖ್ಯ. ಆದರೆ ಮಹಿಳೆಯರು ಮತ್ತು ಪುರುಷರ ನಿದ್ರೆಯ ಅಗತ್ಯ ಒಂದೇ ರೀತಿಯಾಗಿರುವುದಿಲ್ಲ. ಸಾಮಾನ್ಯವಾಗಿ ಮಹಿಳೆಯರಿಗೆ ಪುರುಷರಿಗಿಂತ ಸ್ವಲ್ಪ ಹೆಚ್ಚು ನಿದ್ರೆ ಬೇಕಾಗಬಹುದು. ಇದಕ್ಕೆ ಕೇವಲ ದೈಹಿಕ ಶ್ರಮವಲ್ಲ, ಹಾರ್ಮೋನ್‌ಗಳ ಬದಲಾವಣೆ, ಮಾನಸಿಕ ಒತ್ತಡ, ಗರ್ಭಾವಸ್ಥೆ, ಮುಟ್ಟಿನ ಅವಧಿ ಮತ್ತು ಮೆನೋಪಾಸ್‌ನಂತಹ ಹಲವು ಕಾರಣಗಳಿವೆ. ಸಾಕಷ್ಟು ಗಂಟೆ ಹಾಸಿಗೆಯಲ್ಲಿ ಮಲಗುವುದಷ್ಟೇ ನಿದ್ರೆಯ ಆರೋಗ್ಯಕ್ಕೆ ಸಾಕಾಗುವುದಿಲ್ಲ. ನಿದ್ರೆ ಪದೇಪದೇ ಕದಡುತ್ತಿದ್ದರೆ ಅಥವಾ ನಿದ್ರೆಯ ಗುಣಮಟ್ಟ ಕಡಿಮೆಯಾಗಿದ್ದರೆ, ಬೆಳಗ್ಗೆ ಎದ್ದ ನಂತರವೂ ಆಯಾಸ ಕಂಡುಬರಬಹುದು. ಹಾಗಾದರೆ ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ನಿದ್ರೆ ಬೇಕು ಎನ್ನುವುದಕ್ಕೆ ಕಾರಣವೇನು, ಮಹಿಳೆಯರ ನಿದ್ರೆಯ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ನಿದ್ರೆ ಏಕೆ ಬೇಕು?

Cleveland Clinic ಪ್ರಕಾರ, ಮಹಿಳೆಯರಿಗೆ ಪುರುಷರಿಗಿಂತ ಸ್ವಲ್ಪ ಹೆಚ್ಚು ನಿದ್ರೆ ಬೇಕಾಗಲು ಹಾರ್ಮೋನ್‌ಗಳ ಬದಲಾವಣೆ ಮತ್ತು ನಿದ್ರೆಯ ಮಾದರಿಯಲ್ಲಿನ ವ್ಯತ್ಯಾಸ ಪ್ರಮುಖ ಕಾರಣಗಳಾಗಿರಬಹುದು. ಮಹಿಳೆಯರಲ್ಲಿ ಮುಟ್ಟಿನ ಅವಧಿ, ಗರ್ಭಾವಸ್ಥೆ ಮತ್ತು ಮೆನೋಪಾಸ್ ಸಂದರ್ಭದಲ್ಲಿ ಹಾರ್ಮೋನ್‌ಗಳಲ್ಲಿ ಗಮನಾರ್ಹ ಬದಲಾವಣೆಗಳು ಸಂಭವಿಸುತ್ತವೆ. ಇವು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಇದರ ಜೊತೆಗೆ ಮಕ್ಕಳ ಆರೈಕೆ, ರಾತ್ರಿ ಪದೇಪದೇ ಎಚ್ಚರಗೊಳ್ಳುವುದು ಮತ್ತು ದಿನನಿತ್ಯದ ಜವಾಬ್ದಾರಿಗಳೂ ನಿದ್ರೆಯ ಅವಧಿಯನ್ನು ಕಡಿಮೆ ಮಾಡಬಹುದು. ಕೆಲವು ಅಂದಾಜುಗಳ ಪ್ರಕಾರ, ಮಹಿಳೆಯರಿಗೆ ಪುರುಷರಿಗಿಂತ ಸರಾಸರಿ ಸುಮಾರು 11 ನಿಮಿಷ ಹೆಚ್ಚು ನಿದ್ರೆ ಬೇಕಾಗಬಹುದು.

ಹಾರ್ಮೋನ್‌ಗಳು ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ?

ಮುಟ್ಟಿನ ಸಮಯದಲ್ಲಿ ಹಾರ್ಮೋನ್‌ಗಳ ಬದಲಾವಣೆಯಿಂದ ಕೆಲ ಮಹಿಳೆಯರಿಗೆ ನಿದ್ರೆ ಸರಿಯಾಗಿ ಬಾರದಿರಬಹುದು. ಗರ್ಭಾವಸ್ಥೆಯಲ್ಲಿಯೂ ಪದೇಪದೇ ಮೂತ್ರ ವಿಸರ್ಜನೆ ಮತ್ತು ಇತರ ಬದಲಾವಣೆಗಳಿಂದ ನಿದ್ರೆ ಹಾಳಾಗಬಹುದು. ಮೆನೋಪಾಸ್ ಸಮಯದಲ್ಲಿ ಹಾಟ್ ಫ್ಲ್ಯಾಶ್, ರಾತ್ರಿ ಬೆವರುವುದು ಮತ್ತು ಹಾರ್ಮೋನ್‌ಗಳ ಬದಲಾವಣೆಗಳಿಂದಾಗಿ ನಿದ್ರೆ ಪದೇಪದೇ ಹಾಳಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ನಿದ್ರೆ ಮಾಡುವಾಗ ಈ ಸ್ಲೀಪಿಂಗ್ ಪೊಸಿಷನ್ ಆಯ್ಕೆ ಮಾಡಿಕೊಳ್ಳಿ! ಗೊತ್ತಿರಬೇಕಾದ ಆರೋಗ್ಯದ ಮಾಹಿತಿ

ನಿದ್ರೆ ಕಡಿಮೆಯಾದರೆ ಏನಾಗಬಹುದು?

ಸರಿಯಾಗಿ ನಿದ್ರೆ ಆಗದಿದ್ದರೆ ದಿನವಿಡೀ ಆಯಾಸ, ಗಮನ ಕೇಂದ್ರೀಕರಿಸಲು ಕಷ್ಟ, ಮೂಡ್ ಬದಲಾವಣೆ ಮತ್ತು ಕೆಲಸದ ಸಾಮರ್ಥ್ಯದಲ್ಲಿ ಇಳಿಕೆ ಕಾಣಿಸಿಕೊಳ್ಳಬಹುದು. ನಿದ್ರೆಯ ಗುಣಮಟ್ಟ ಸರಿಯಾಗಿ ಆಗದಿದ್ದರೆ ಅದರ ಮೂಲ ಕಾರಣವನ್ನು ಗುರುತಿಸುವುದು ಮುಖ್ಯ. ಕೇವಲ ಹೆಚ್ಚು ಸಮಯ ಹಾಸಿಗೆಯಲ್ಲಿ ಕಳೆಯುವುದಕ್ಕಿಂತ ನಿರಂತರ ಮತ್ತು ಗುಣಮಟ್ಟದ ನಿದ್ರೆಗೆ ಆದ್ಯತೆ ನೀಡಬೇಕು.

ಮಹಿಳೆಯರು ಚೆನ್ನಾಗಿ ನಿದ್ರೆ ಮಾಡಲು ಏನು ಮಾಡಬೇಕು?

ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸ ಮಾಡಿಕೊಳ್ಳಿ. ಮಲಗುವ ಮುನ್ನ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇತರ ಸ್ಕ್ರೀನ್‌ಗಳ ಬಳಕೆಯನ್ನು ಕಡಿಮೆ ಮಾಡಿ. ಮಲಗುವ ಕೋಣೆಯಲ್ಲಿ ಹೆಚ್ಚು ಬೆಳಕು ಮತ್ತು ಶಬ್ದ ಇರದಂತೆ ನೋಡಿಕೊಳ್ಳಿ. ಸಂಜೆಯ ನಂತರ ಚಹಾ, ಕಾಫಿ ಸೇರಿದಂತೆ ಹೆಚ್ಚು ಕ್ಯಾಫೀನ್ ಇರುವ ಪಾನೀಯಗಳನ್ನು ಕಡಿಮೆ ಮಾಡುವುದು ಉತ್ತಮ. ಹಗಲಿನಲ್ಲಿ ನಿಯಮಿತವಾಗಿ ದೈಹಿಕ ಚಟುವಟಿಕೆ ನಡೆಸಿ. ಆದರೆ ಮಲಗುವ ಸಮಯಕ್ಕೆ ಮುನ್ನ ಅತಿಯಾದ ವ್ಯಾಯಾಮ ಮಾಡಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

AUS vs BAN: ಟೆಸ್ಟ್ ಕ್ರಿಕೆಟ್​ನಲ್ಲಿ ವಿಶೇಷ ತ್ರಿಶತಕ ಬಾರಿಸುವ ಸನಿಹದಲ್ಲಿ ಜೋಶ್ ಹೇಜಲ್​ವುಡ್ – Kannada News | Australia vs Bangladesh Test: Hazlewood Eyes 300 Wickets, Starc Chases Home Record

ಆಸ್ಟ್ರೇಲಿಯಾ ಪರ ಇಲ್ಲಿಯವರೆಗೆ 300 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಶೇನ್ ವಾರ್ನ್ (708), ನಾಥನ್ ಲಿಯಾನ್ (567), ಗ್ಲೆನ್ ಮೆಕ್‌ಗ್ರಾತ್ (563), ಮಿಚೆಲ್ ಸ್ಟಾರ್ಕ್ (433), ಡೆನ್ನಿಸ್ ಲಿಲ್ಲಿ (355), ಪ್ಯಾಟ್ ಕಮ್ಮಿನ್ಸ್ (315), ಮಿಚೆಲ್ ಜಾನ್ಸನ್ (313), ಮತ್ತು ಬ್ರೆಟ್ ಲೀ (310) ಸೇರಿದ್ದಾರೆ. ಹೇಜಲ್‌ವುಡ್ ಈಗ ಈ ವಿಶೇಷ ಕ್ಲಬ್‌ಗೆ ಸೇರುವ ಹತ್ತಿರದಲ್ಲಿದ್ದಾರೆ(PC-PTI).

Source link

Chanakya Niti: ಮಹಿಳೆಯರು ತಮ್ಮ ಈ ಪರ್ಸನಲ್‌ ವಿಷಯಗಳನ್ನು ಯಾರ ಬಳಿಯೂ ಶೇರ್‌ ಮಾಡಬಾರದು – Kannada News | Chanakya Niti: Chanakya says women should not share these things with others

ಸಾಮಾನ್ಯವಾಗಿ ಮಹಿಳೆಯರ (women) ಬಳಿ ಯಾವುದೇ ಗುಟ್ಟುಗಳು ನಿಲ್ಲುವುದಿಲ್ಲ, ಏನೇ ವಿಚಾರಗಳಿದ್ದರೂ ತಮ್ಮಿಷ್ಟದವರ ಬಳಿ ಹೇಳಿಕೊಂಡು ಬರುತ್ತಾರೆ. ಆದರೆ ಹೀಗೆ ಎಲ್ಲಾ ಸಂಗತಿಗಳನ್ನು ಎಲ್ಲರೊಂದಿಗೆ ಹೇಳಿಕೊಳ್ಳುವುದು ದೊಡ್ಡ ತಪ್ಪು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಅವರ ಪ್ರಕಾರ ಮುಖ್ಯವಾಗಿ ಈ ಕೆಲವೊಂದು ವೈಯಕ್ತಿಕ ವಿಷಯಗಳನ್ನು ಇತರರ ಬಳಿ ಶೇರ್‌ ಮಾಡಿದಾಗ, ಅನೇಕರು ಅದರ ಲಾಭ ಪಡೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಹಿಳೆಯರು ಈ ಪರ್ಸನಲ್‌ ವಿಷಯಗಳನ್ನು ಯಾರ ಬಳಿಯೂ ಹಂಚಿಕೊಳ್ಳಬಾರದು.

ಮಹಿಳೆಯರು ಈ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು:

ಕೌಟುಂಬಿಕ ವಿವಾದಗಳು ಮತ್ತು ವೈಯಕ್ತಿಕ ವಿಷಯಗಳು:  ಮನೆಯಲ್ಲಿ ಸಣ್ಣಪುಟ್ಟ ವಾದ, ಜಗಳಗಳು ನಡೆಯುವುದು ಸಾಮಾನ್ಯ. ಈ ಸಣ್ಣಪುಟ್ಟ ಸಂಗತಿಗಳನ್ನು ಮಹಿಳೆಯಾದವಳು ಮೂರನೇ ವ್ಯಕ್ತಿಗಳೊಂದಿಗೆ ಶೇರ್‌ ಮಾಡುವುದು ಸರಿಯಲ್ಲ. ಚಾಣಕ್ಯನ ಪ್ರಕಾರ, ನೀವು ಈ ವಿಷಯಗಳನ್ನು ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ಹಂಚಿಕೊಂಡಾಗ, ಅವರು  ಅಯ್ಯೋ ಎಂದು ಮರುಕ ವ್ಯಕ್ತಪಡಿಸಬಹುದು, ಆದರೆ ನಿಮ್ಮ ಬೆನ್ನ ಹಿಂದೆ ನಿಮ್ಮನ್ನು ಹಂಗಿಸುವ ಸಾಧ್ಯತೆ ಇರುತ್ತವೆ. ಕೆಲವರು ಈ ಜಗಳದ ಲಾಭ ಪಡೆದು ನಿಮ್ಮ ಕುಟುಂಬದ ನೆಮ್ಮದಿಯನ್ನೇ ನಾಶ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾವ ಮಹಿಳೆಯೂ ತಮ್ಮ ಮನೆಯಲ್ಲಿ ನಡೆಯುವ ಮನಸ್ತಾಪಗಳನ್ನು ಯಾರಿಗೂ ಹೇಳಬಾರದು.

ಭವಿಷ್ಯದ ಯೋಜನೆಗಳು: ಮುಖ್ಯವಾಗಿ ಮಹಿಳೆಯರು  ಹೊಸ ಉದ್ಯೋಗವನ್ನು ಪ್ರಾರಂಭಿಸುವುದು, ಹೊಸ ಮನೆ ಅಥವಾ ಕಾರು ಖರೀದಿಸುವುದು ಅಥವಾ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಯೋಜನೆಗಳ ಬಗ್ಗೆ ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು. ಚಾಣಕ್ಯನ ಪ್ರಕಾರ, ಈ  ರಹಸ್ಯ ಯೋಜನೆಗಳನ್ನು ಇತರರಿಗೆ ಮುಂಚಿತವಾಗಿ ಹೇಳುವುದರಿಂದ ಅವರು ಆ ಯೋಜನೆಗೆ ಅಡ್ಡಿಪಡಿಸುವ ಸಾಧ್ಯತೆ ಇರುತ್ತದೆ.

ಗಂಡನ ದೌರ್ಬಲ್ಯಗಳ ಬಗ್ಗೆ ಹೇಳಬಾರದು: ಗಂಡ ಹೆಂಡತಿಯ ನಡುವಿನ ಸಂಬಂಧವು ಸಂಪೂರ್ಣವಾಗಿ ಪ್ರೀತಿ ಮತ್ತು ವಿಶ್ವಾಸವನ್ನು ಆಧರಿಸಿದೆ. ಆದ್ದರಿಂದ ಹೆಂಡತಿ ತನ್ನ ಗಂಡನ ವಿಷಯಗಳನ್ನು ಇತರರಿಗೆ ಹೇಳಬಾರದು. ಚಾಣಕ್ಯರು ಹೇಳುವಂತೆ ಜಗತ್ತಿನಲ್ಲಿ ಯಾರೂ ಸಂಪೂರ್ಣವಾಗಿ ಪರಿಪೂರ್ಣರಲ್ಲ,  ಪ್ರತಿಯೊಬ್ಬರಲ್ಲೂ  ನ್ಯೂನತೆಗಳಿರುತ್ತವೆ. ಹಾಗಾಗಿ  ಮಹಿಳೆ ತನ್ನ ಗಂಡನ ಅಭ್ಯಾಸಗಳು, ಅನಾರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗ್ಗೆ  ಸ್ನೇಹಿತರು ಅಥವಾ ಸಂಬಂಧಿಕರಿಗೆ ಹೇಳುವುದನ್ನು ಹೇಳಬಾರದು. ಇದನ್ನೆಲ್ಲಾ ಹೇಳಿದರೆ ಸಮಾಜದಲ್ಲಿ ಗಂಡನ ಗೌರವ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಮಹಿಳೆಯರು ವಯಸ್ಸು, ಪುರುಷರು ಸಂಬಳದ ಬಗ್ಗೆ ನಿಖರವಾಗಿ ಹೇಳೋದಿಲ್ಲ ಏಕೆ ಗೊತ್ತಾ?

ಉಳಿತಾಯದ ಬಗ್ಗೆ ಯಾರಿಗೂ ಹೇಳಬಾರದು:  ಮಹಿಳೆಯರು ತಮ್ಮ ಮನೆಯನ್ನು ನಿರ್ವಹಿಸುವಾಗ ಸಣ್ಣ ಪ್ರಮಾಣದ ಹಣವನ್ನು ಉಳಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಚಾಣಕ್ಯನ ಪ್ರಕಾರ, ಇದು ತುಂಬಾ ಒಳ್ಳೆಯ ಅಭ್ಯಾಸ. ಆದರೆ ಎಷ್ಟು ಹಣವನ್ನು ಉಳಿಸಿದ್ದೀರಿ ಎಂದು ಹೇಳುವುದು ಸರಿಯಲ್ಲ. ನಮ್ಮ ಬಳಿ ಇಷ್ಟು ಚಿನ್ನ, ಬೆಳ್ಳಿಯಿದೆ, ಹಣ ಇಷ್ಟು ಸೇವ್‌ ಮಾಡಿದ್ದೇನೆ ಎಂದು ಮೂರನೇ ವ್ಯಕ್ತಿಯ ಬಳಿ ಹೇಳಿಕೊಂಡಾಗ ಅವರ ಆ ಬಗ್ಗೆ ಅಸೂಯೆಪಡುತ್ತಾರೆ ಮತ್ತು ನಿಮ್ಮ ಬಳಿ ಅನಗತ್ಯ ಸಾಲ ಕೇಳಲು ಬರುತ್ತಾರೆ. ಮತ್ತೊಂದೆಡೆ, ನೀವು ನಿಮ್ಮ ಬಡತನದ ಬಗ್ಗೆ ದುಃಖಿಸುತ್ತಾ ಇತರರ ಬಳಿ ಹೇಳಿದರೆ ಅವರು ದುರ್ಬಲರೆಂದು ಪರಿಗಣಿಸುತ್ತಾರೆ ಮತ್ತು ನಿಮ್ಮನ್ನು ಗೌರವಿಸುವುದನ್ನು ನಿಲ್ಲಿಸುತ್ತಾರೆ.

ಯಾವುದೇ ಅವಮಾನ ಅಥವಾ ನೋವು: ಆಚಾರ್ಯ ಚಾಣಕ್ಯರ ಪ್ರಕಾರ,  ಮಹಿಳೆಯರು ತಾವು ಎದುರಿಸಿದ ಅವಮಾನ, ನೋವುಗಳನ್ನು ಇತರರ ಬಳಿ ಹಂಚಿಕೊಂಡಾಗ, ಈ ದುಃಖವನ್ನು ನೋಡಿ ಅನೇಕರು ಸಂತೋಷಪಡುತ್ತಾರೆ. ಮತ್ತು ಈ ಅಸಹಾಯಕತೆಯ ಲಾಭವನ್ನು ಪಡೆಯುವ ಸಾಧ್ಯತೆಯೂ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿವಗಂಗೆ ಬೆಟ್ಟದ ತುತ್ತ ತುದಿಯಲ್ಲಿ ಟೆಕ್ಕಿ ಫೋಟೋ ಸೆರೆ: ಆದ್ರೂ ಸಿಗ್ತಿಲ್ಲ ಅದ್ವೈತ್ – Kannada News | Missing Trekker Advait Upadhyaya: Shivagange Search Enters Day 4 as New Photo Clues Emerge

ನೆಲಮಂಗಲ, ಆಗಸ್ಟ್​ 10: ನಾಲ್ಕು ದಿನಗಳ ಹಿಂದೆ ಟ್ರೆಕ್ಕಿಂಗ್‌ಗೆ (Trekking) ಬಂದು ನಾಪತ್ತೆಯಾಗಿರುವ ಟೆಕ್ಕಿ ಅದ್ವೈತ್ ಉಪಾಧ್ಯಾಯ (Advait Upadhyaya) ಹುಡುಕಾಟ ಶೋಧ ಕಾರ್ಯಚರಣೆ ತೀವ್ರಗೊಂಡಿದೆ. ದಿನಕ್ಕೊಂದು ಹೊಸ ಸುಳಿವು ಸಿಗುತ್ತಿದ್ದು, ಇದೀಗ ಮತ್ತೊಂದು ಸುಳಿವು ಪತ್ತೆ ಆಗಿದೆ. ಇಂದಿನ ಕಾರ್ಯಚರಣೆ ವೇಳೆ ಬೆಟ್ಟದ ತುತ್ತ ತುದಿಯಲ್ಲಿ ಚಾರಣಿಗರು ಕ್ಲಿಕ್ಕಿಸಿದ ಫೋಟೋದಲ್ಲಿ ಅದ್ವೈತ್ ಕೂಡ ಇರುವುದು ಪತ್ತೆ ಆಗಿದೆ.

ನೆಲಮಂಗಲ ಡಿವೈಸ್​ಪಿ ಉಮಾರಾಣಿ ನೇತೃತ್ವದಲ್ಲಿ ಶೋಧ

ಉತ್ತರ ಪ್ರದೇಶ ಇಂದೂರ್ ಮೂಲದ ಟೆಕ್ಕಿ ಅದ್ವೈತ್, ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ಹೋಗಿ ನಾಪತ್ತೆಯಾಗಿ ನಾಲ್ಕು ದಿನಗಳು ಕಳೆದಿವೆ. ಇಂದು ನೆಲಮಂಗಲ ಡಿವೈಸ್​ಪಿ ಉಮಾರಾಣಿ ನೇತೃತ್ವದಲ್ಲಿ ಸಿಪಿಐ ಭರತ್ ಗೌಡ ಮತ್ತು ತಂಡ ಶೋಧ ಕಾರ್ಯದಲ್ಲಿ ನಿರತರಾಗಿದ್ದರು.

ಇದನ್ನೂ ಓದಿ: ಶಿವಗಂಗೆ ಬೆಟ್ಟದಲ್ಲಿ ಕಾಣೆಯಾದ ಟೆಕ್ಕಿ; ಅದ್ವೈತ್ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆ!

ಅದ್ವೈತ್ ಉಪಾಧ್ಯಾಯನ ಪತ್ತೆಗೆ ಇಂದು ಕೂಡ ಡ್ರೋನ್ ಕಾರ್ಯಚರಣೆ, ನುರಿತರ ಕಾರ್ಯಚರಣೆ, ಎನ್​ಡಿ ಆರ್​ಎಫ್​ ಜೊತೆಗೆ ನೆಲಮಂಗಲ ವಲಯ ಅರಣ್ಯ ಸಿಬ್ಬಂದಿ ಕಾರ್ಯಚರಣೆ ನಡೆಸಿದರೂ ಆತನ ಸುಳಿವು ಮಾತ್ರ ಇನ್ನೂ ನಿಗೂಢವಾಗಿದೆ.

ಪ್ರಾಣ ಪಣಕ್ಕಿಟ್ಟು ಕಾರ್ಯಚರಣೆ: ಮಳೆ ಅಡ್ಡಿ

ಇಂದಿನ ಕಾರ್ಯಚರಣೆ ವೇಳೆ ಕಡಿದಾದ ಬೆಟ್ಟದ ಮೂಲೆ ಮೂಲೆಯಲ್ಲಿ ತನಿಖಾ ತಂಡ ತಮ್ಮ ಪ್ರಾಣವನ್ನ ಪಣಕ್ಕಿಟ್ಟು ಕಾರ್ಯಚರಣೆ ಮಾಡಿದ್ದು, ಅದ್ವೈತ್ ಆತ್ಮಹತ್ಯೆಗೆ ಶರಣಾಗಿದ್ದಾನಾ ಅಥವಾ ನಾಪತ್ತೆಯಾಗಿದ್ದಾನಾ ಎಂಬುವುದು ಮೇಲ್ನೋಟಕ್ಕೆ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್​​: ಆತ್ಮಹತ್ಯೆಯ ಯೋಚನೆ ಮಾಡಿದ್ದರಾ ಅದ್ವೈತ್ ಉಪಾಧ್ಯಾಯ?

ಒಟ್ಟಾರೆ ಶಿವಗಂಗೆ ಬೆಟ್ಟಕ್ಕೆ ಬಂದ ಟೆಕ್ಕಿ ಪತ್ತೆ ಕಾರ್ಯಚರಣೆ ಮೂರನೇ ದಿನದ ಕೂಡ ಯಶಸ್ವಿಯಾಗದೆ ಧಾರಾಕಾರ ಮಳೆಯಿಂದಾಗಿ ಬ್ರೇಕ್ ಹಾಕಬೇಕಾಯಿತು. ಅದ್ವೈತ್ ನಿಗೂಢ ನಾಪತ್ತೆ ಸದ್ಯ ಕಾರ್ಯಚರಣೆ ತಂಡಕ್ಕೆ ದೊಡ್ಡ ಸವಾಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚರ್ಚೆಯಿಲ್ಲದೆ ಲೋಕಸಭೆಯಲ್ಲಿ ಟ್ರಿಬ್ಯೂನಲ್ ಸುಧಾರಣಾ ಮಸೂದೆ ಅಂಗೀಕಾರ; ಏನಿದರ ವಿಶೇಷತೆ? – Kannada News | Parliament Monsoon Session Lok Sabha passes Tribunals Reforms Bill 2026 without debate; Why Is It Important?

ನವದೆಹಲಿ, ಆಗಸ್ಟ್ 10: ಟ್ರಿಬ್ಯೂನಲ್‌ಗಳ ನಿರ್ವಹಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ ರಚಿಸಲು ಮತ್ತು ಉಸ್ತುವಾರಿಗಾಗಿ ‘ರಾಷ್ಟ್ರೀಯ ಟ್ರಿಬ್ಯೂನಲ್ ಆಯೋಗ (NTC)’ ಎಂಬ ಹೊಸ ಸಂಸ್ಥೆಯನ್ನು ಸ್ಥಾಪಿಸಲು ಪ್ರಸ್ತಾಪಿಸುವ ಟ್ರಿಬ್ಯೂನಲ್ ಸುಧಾರಣಾ ಮಸೂದೆ, 2026 (Tribunals Reforms Bill) ಇಂದು ಲೋಕಸಭೆಯಲ್ಲಿ (Lok Sabha Session) ಅಂಗೀಕಾರಗೊಂಡಿದೆ. ಭಾರತದ 16 ಟ್ರಿಬ್ಯೂನಲ್‌ಗಳಲ್ಲಿ ಕಾರ್ಯಕ್ಷಮತೆಯ ಕೊರತೆ ಮತ್ತು ಸ್ವಾತಂತ್ರ್ಯದ ಅಭಾವವಿದೆ ಎಂಬ ಸುಪ್ರೀಂ ಕೋರ್ಟ್​ನ ಕಳವಳಗಳನ್ನು ಪರಿಹರಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ. ಇದು ಕಾಯ್ದೆಯಾಗಿ ಜಾರಿಗೆ ಬಂದರೆ ಭಾರತದ ಅರೆ-ನ್ಯಾಯಾಂಗ ಸಂಸ್ಥೆಗಳ ಕಾರ್ಯವೈಖರಿಯನ್ನು ಸಂಪೂರ್ಣವಾಗಿ ಬದಲಾಯಿಸಲಿದೆ.

ಟ್ರಿಬ್ಯೂನಲ್ ಸುಧಾರಣಾ ಮಸೂದೆ ಎಂದರೇನು?:

ಟ್ರಿಬ್ಯೂನಲ್ ಸದಸ್ಯರ ನೇಮಕಾತಿ ಪ್ರಕ್ರಿಯೆಯಲ್ಲಿ ಏಕರೂಪತೆ, ಪಾರದರ್ಶಕತೆ ಮತ್ತು ಕ್ಷಮತೆಯನ್ನು ತರುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ. ಇದು ಸದಸ್ಯರ ಅರ್ಹತೆ, ಆಯ್ಕೆ, ನೇಮಕಾತಿ, ವೇತನ, ಭತ್ಯೆಗಳು, ರಾಜೀನಾಮೆ, ವಜಾಗೊಳಿಸುವಿಕೆ ಮತ್ತು ಇತರ ಸೇವಾ ಷರತ್ತುಗಳನ್ನು ಒಳಗೊಂಡ ಸಾಮಾನ್ಯ ನಿಯಮಗಳನ್ನು ನಿಗದಿಪಡಿಸುತ್ತದೆ. ಈ ಮಸೂದೆ ಪ್ರಸ್ತುತ ಇರುವ ಟ್ರಿಬ್ಯೂನಲ್‌ಗಳ ಅಧಿಕಾರ ವ್ಯಾಪ್ತಿ ಅಥವಾ ಕಾರ್ಯಚಟುವಟಿಕೆಗಳನ್ನು ಬದಲಾಯಿಸುವುದಿಲ್ಲ ಎಂದು ಕಾನೂನು ಸಚಿವ ಅರ್ಜುನ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ. ಇದರ ಬದಲಿಗೆ, ನೇಮಕಾತಿಗಳಿಗೆ ಸಂಬಂಧಿಸಿದಂತೆ ಒಂದು ಪ್ರಮಾಣೀಕೃತ ಸಂಸ್ಥಾಗತ ಚೌಕಟ್ಟನ್ನು ರಚಿಸುವುದರ ಮೇಲೆ ಇದು ಗಮನಹರಿಸುತ್ತದೆ.

ಇದನ್ನೂ ಓದಿ: ತೆರಿಗೆ ತಿದ್ದುಪಡಿ ಮಸೂದೆ ಮಂಡನೆ: ತೆರಿಗೆ, ವಿದೇಶಿ ಹೂಡಿಕೆ, ಯುಪಿಐ ಪಾವತಿ ಇತ್ಯಾದಿ ನಿಯಮಗಳ ಪರಿಷ್ಕರಣೆಗೆ ಪ್ರಸ್ತಾಪ

ರಾಷ್ಟ್ರೀಯ ಟ್ರಿಬ್ಯೂನಲ್ ಆಯೋಗ (NTC) ಸ್ಥಾಪನೆ:

ಈ ಮಸೂದೆಯ ಅತ್ಯಂತ ಪ್ರಮುಖ ಅಂಶವೆಂದರೆ, ರಾಷ್ಟ್ರೀಯ ಟ್ರಿಬ್ಯೂನಲ್ ಆಯೋಗ (NTC) ಸ್ಥಾಪನೆ. ನವದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಲಿರುವ ಎನ್‌ಟಿಸಿ, ಟ್ರಿಬ್ಯೂನಲ್‌ಗಳ ಖಾಲಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆಸುವುದು, ಕಾರ್ಯಕ್ಷಮತೆಯನ್ನು ಪರಾಮರ್ಶಿಸುವುದು ಮತ್ತು ಪ್ರಕರಣಗಳ ಮಾಹಿತಿಗಾಗಿ ಹೊಸ ಡಿಜಿಟಲ್ ವ್ಯವಸ್ಥೆಯನ್ನು ನಿರ್ವಹಿಸುವ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.

ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನಕ್ಕೆ ಆಗಮಿಸಿ ಸ್ಪಷ್ಟನೆ ನೀಡಬೇಕೆಂದು ವಿರೋಧ ಪಕ್ಷಗಳು ಆಗ್ರಹಿಸಿದ್ದವು. ಮಸೂದೆಯನ್ನು ಮಂಡನೆ ಹಂತದಲ್ಲೇ ವಿರೋಧಿಸಲು ಹಲವಾರು ವಿಪಕ್ಷ ಸಂಸದರು ನೋಟಿಸ್ ನೀಡಿದ್ದರು. ಆದರೆ ಗದ್ದಲ ಹಾಗೂ ಘೋಷಣೆಗಳ ನಡುವೆ ಅವರಿಗೆ ಮಾತನಾಡಲು ಸಾಧ್ಯವಾಗಲಿಲ್ಲ.

ಟ್ರಿಬ್ಯೂನಲ್ ಸುಧಾರಣಾ ಮಸೂದೆ ನ್ಯಾಯಾಧಿಕರಣಗಳ ಅಧ್ಯಕ್ಷರು ಮತ್ತು ಸದಸ್ಯರ ಅರ್ಹತೆ, ನೇಮಕಾತಿ ಪ್ರಕ್ರಿಯೆ ಮತ್ತು ಸೇವಾ ಷರತ್ತುಗಳಲ್ಲಿ ಹೆಚ್ಚಿನ ಏಕರೂಪತೆಯನ್ನು ತರುವ ಮೂಲಕ ಅವುಗಳ ಕಾರ್ಯಾಚರಣೆಯ ಚೌಕಟ್ಟನ್ನು ಸಂಪೂರ್ಣವಾಗಿ ಪುನ್ ರಚಿಸಲು ಬಯಸುತ್ತದೆ. ಈ ಮಸೂದೆಯ ಪ್ರಮುಖ ಪ್ರಸ್ತಾಪವೆಂದರೆ ‘ರಾಷ್ಟ್ರೀಯ ಟ್ರಿಬ್ಯೂನಲ್ ಆಯೋಗ’ದ ರಚನೆ. ನವದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಲಿರುವ ಈ ಆಯೋಗವು, ವಿವಿಧ ಟ್ರಿಬ್ಯೂನಲ್‌ಗಳ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆ ಹಾಗೂ ನೇಮಕಾತಿಯನ್ನು ಮೇಲ್ವಿಚಾರಣೆ ಮಾಡುವ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.

ಆಯೋಗದ ರಚನೆ:

ಈ ಆಯೋಗವು ಒಬ್ಬರು ಅಧ್ಯಕ್ಷರು ಮತ್ತು ನಾಲ್ವರು ಸದಸ್ಯರನ್ನು (ಇಬ್ಬರು ನ್ಯಾಯಾಂಗ ಸದಸ್ಯರು ಹಾಗೂ ಇಬ್ಬರು ತಾಂತ್ರಿಕ ಸದಸ್ಯರು) ಒಳಗೊಂಡಿರುತ್ತದೆ. ಅಧ್ಯಕ್ಷರಾಗುವವರು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿರಬೇಕು ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯಾಗಿರಬೇಕು. ತಾಂತ್ರಿಕ ಸದಸ್ಯರು ಸಾರ್ವಜನಿಕ ಆಡಳಿತ, ಹಣಕಾಸು, ಕಾನೂನು ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ಕನಿಷ್ಠ 25 ವರ್ಷಗಳ ಅನುಭವ ಹೊಂದಿರಬೇಕು.

ಇದನ್ನೂ ಓದಿ: ಇಂದು ಲೋಕಸಭೆಯಲ್ಲಿ 4 ಪ್ರಮುಖ ಮಸೂದೆ ಮಂಡನೆ: ಗೃಹ ಸಚಿವ ಅಮಿತ್ ಶಾ ಎರಡು ಪ್ರಮುಖ ವಿಧೇಯಕ ಮಂಡನೆ

ಹೈಕೋರ್ಟ್ (ಆರ್ಟಿಕಲ್ 226/227) ಮತ್ತು ಸುಪ್ರೀಂ ಕೋರ್ಟ್ (ಆರ್ಟಿಕಲ್ 32) ಹೊಂದಿರುವ ನ್ಯಾಯಾಂಗ ಪರಾಮರ್ಶೆಯ ಅಧಿಕಾರವು ಸಂವಿಧಾನದ ಮೂಲ ರಚನೆಯ ಅವಿಭಾಜ್ಯ ಅಂಗ ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು. “ಹೊಸ ಕಾಯ್ದೆಯಿಂದ ಎನ್‌ಜಿಟಿ (ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ) ಸೇರಿದಂತೆ ವಿವಿಧ ಟ್ರಿಬ್ಯೂನಲ್‌ಗಳು ತಮ್ಮ ಧ್ವನಿ ಮತ್ತು ಅಧಿಕಾರವನ್ನು ಮರಳಿ ಪಡೆಯಲಿವೆ. 2021ರ ಚರ್ಚಾಸ್ಪದ ಕಾನೂನನ್ನು ಸುಪ್ರೀಂ ಕೋರ್ಟ್‌ವರೆಗೆ ಸಮರ್ಥಿಸಿಕೊಂಡಿದ್ದ ಮೋದಿ ಸರ್ಕಾರ, ಈಗ ತಾನು ತೀವ್ರವಾಗಿ ವಿರೋಧಿಸಿದ್ದ ಸುಧಾರಣೆಗಳನ್ನೇ ಜಾರಿಗೆ ತರಲು ಬದ್ಧವಾಗಿದೆ” ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಕೇಂದ್ರೀಕೃತ ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆನೇಮಕಾತಿಗಳಲ್ಲಿ ಪಾರದರ್ಶಕತೆ ತರಲು NTC ಪ್ರತಿಯೊಂದು ಟ್ರಿಬ್ಯೂನಲ್‌ಗೂ ‘ಶೋಧನಾ ಮತ್ತು ಆಯ್ಕೆ ಸಮಿತಿ’ಗಳನ್ನು ರೂಪಿಸಲಿದೆ. ಈ ಸಮಿತಿಯಲ್ಲಿ ಆಯೋಗದ ಸದಸ್ಯರು, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಮತ್ತು ಹಿರಿಯ ಸರ್ಕಾರಿ ಕಾರ್ಯದರ್ಶಿಗಳು ಇರುತ್ತಾರೆ. ಆಯ್ಕೆ ಸಮಿತಿಗಳ ಶಿಫಾರಸುಗಳನ್ನು ಸ್ವೀಕರಿಸಿದ 3 ತಿಂಗಳ ಒಳಗೆ ಕೇಂದ್ರ ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಮಸೂದೆ ಕಡ್ಡಾಯಗೊಳಿಸಿದೆ. ಅಧ್ಯಕ್ಷರ ಅಧಿಕಾರಾವಧಿ 5 ವರ್ಷಗಳು ಅಥವಾ 70 ವರ್ಷ ವಯಸ್ಸಾಗುವವರೆಗೆ (ಯಾವುದು ಮೊದಲೋ ಅದು) ಹಾಗೂ ಸದಸ್ಯರ ಅಧಿಕಾರಾವಧಿ 5 ವರ್ಷಗಳು ಅಥವಾ 67 ವರ್ಷ ವಯಸ್ಸಾಗುವವರೆಗೆ ಇರಲಿದೆ.

ಟ್ರಿಬ್ಯೂನಲ್ ಸುಧಾರಣಾ ಮಸೂದೆಯ ಮುಖ್ಯಾಂಶಗಳು:

– ಟ್ರಿಬ್ಯೂನಲ್‌ಗಳ (ನ್ಯಾಯಾಧಿಕರಣಗಳ) ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ ತರುವುದು ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು.

– ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವುದು.

– ಅನಗತ್ಯ ಟ್ರಿಬ್ಯೂನಲ್‌ಗಳನ್ನು ರದ್ದುಗೊಳಿಸಿ, ಅವುಗಳ ಅಧಿಕಾರವನ್ನು ನೇರವಾಗಿ ಹೈಕೋರ್ಟ್ ಅಥವಾ ಇತರ ಚಾಲ್ತಿಯಲ್ಲಿರುವ ನ್ಯಾಯಾಲಯಗಳಿಗೆ ಹಸ್ತಾಂತರಿಸುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿದ್ರೆ ಮಾಡುವಾಗ ಈ ಸ್ಲೀಪಿಂಗ್ ಪೊಸಿಷನ್ ಆಯ್ಕೆ ಮಾಡಿಕೊಳ್ಳಿ! ಗೊತ್ತಿರಬೇಕಾದ ಆರೋಗ್ಯದ ಮಾಹಿತಿ – Kannada News | Is Sleeping on Your Side Better? Know How Your Sleeping Position Affects Health

ಉತ್ತಮ ಆರೋಗ್ಯಕ್ಕೆ ಸಾಕಷ್ಟು ನಿದ್ರೆ ಎಷ್ಟು ಮುಖ್ಯವೋ, ಮಲಗುವ ಭಂಗಿಯೂ ಅಷ್ಟೇ ಮುಖ್ಯವಾಗುತ್ತದೆ. ಕೆಲವರು ಒಂದೇ ಮಗ್ಗಲಿನಲ್ಲಿ ಮಲಗಲು ಇಷ್ಟಪಡುತ್ತಾರೆ, ಇನ್ನೂ ಕೆಲವರು ಬೆನ್ನಿನ ಮೇಲೆ ಅಥವಾ ಹೊಟ್ಟೆಯ ಮೇಲೆ ಮಲಗುತ್ತಾರೆ. ಆದರೆ ಯಾವ ಭಂಗಿಯಲ್ಲಿ ಮಲಗಿದರೆ ದೇಹಕ್ಕೆ ಹೆಚ್ಚು ಆರಾಮ ಸಿಗುತ್ತದೆ ಎಂಬ ಬಗ್ಗೆ ಹಲವರಿಗೆ ಗೊಂದಲವಿರುತ್ತದೆ. ವಾಸ್ತವವಾಗಿ, ಎಲ್ಲರಿಗೂ ಒಂದೇ ಸ್ಲೀಪಿಂಗ್ ಪೊಸಿಷನ್ ಸೂಕ್ತವಾಗಿರಬೇಕೆಂದಿಲ್ಲ. ವ್ಯಕ್ತಿಯ ವಯಸ್ಸು, ದೇಹದ ಸ್ಥಿತಿ, ಗರ್ಭಾವಸ್ಥೆ, ಬೆನ್ನು ಅಥವಾ ಕುತ್ತಿಗೆ ನೋವು, ಗೊರಕೆ ಮತ್ತು ಸ್ಲೀಪ್ ಅಪ್ನಿಯಾ ಸೇರಿದಂತೆ ಹಲವು ಅಂಶಗಳ ಮೇಲೆ ಮಲಗುವ ಭಂಗಿ ಬದಲಾಗಬಹುದು. ಹಾಗಾದರೆ ಯಾವ ಭಂಗಿಯಲ್ಲಿ ಮಲಗುವುದು ಒಳ್ಳೆಯದು ಮತ್ತು ಚೆನ್ನಾಗಿ ನಿದ್ರೆ ಮಾಡಲು ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು ಎಂದು ಸ್ಟೋರಿ ಓದಿ.

ಹೆಚ್ಚಿನ ಆರೋಗ್ಯವಂತ ವಯಸ್ಕರಿಗೆ ಯಾವುದಾದರೂ ಒಂದು ಮಗ್ಗಲಲ್ಲಿ ಮಲಗುವುದು ಅಂದರೆ ಎಡಬದಿಯಲ್ಲಿ ಮಲಗುವುದು ಆರಾಮದಾಯಕ ಆಯ್ಕೆಯಾಗಿರುತ್ತದೆ. ವಿಶೇಷವಾಗಿ ಕೆಲವರಲ್ಲಿ ಈ ರೀತಿ ಮಲಗುವುದರಿಂದ ಚೆನ್ನಾಗಿ ಉಸಿರಾಡುವುದಕ್ಕೆ ಸಹಾಯವಾಗಬಹುದು. ಇದರಿಂದ ಗೊರಕೆ ಮತ್ತು ಸ್ಲೀಪ್ ಅಪ್ನಿಯಾ ಸಮಸ್ಯೆಯ ಲಕ್ಷಣಗಳು ಕಡಿಮೆಯಾಗುವ ಸಾಧ್ಯತೆ ಇದೆ. ಯಾರಿಗೆ ಬೆನ್ನಿನ ಮೇಲೆ ಅಂದರೆ ಅಂಗಾತ ಮಲಗಿದಾಗ ಗೊರಕೆ ಹೆಚ್ಚಾಗುತ್ತದೆಯೋ, ಅವರಿಗೆ ಮಗ್ಗುಲು ಬದಲಿಸಿ ಮಲಗುವುದು ಹೆಚ್ಚು ಅನುಕೂಲಕರವಾಗಿರಬಹುದು.

ಗರ್ಭಿಣಿಯರು ಯಾವ ಭಂಗಿಯಲ್ಲಿ ಮಲಗಬೇಕು?

ಗರ್ಭಾವಸ್ಥೆಯ ಕೊನೆಯ ಹಂತಗಳಲ್ಲಿ ಎಡಬದಿಯಲ್ಲಿ ಮಲಗುವುದು ಅಥವಾ ಮಗ್ಗಲು ಬದಲಿಸಿ ಒಂದೇ ಬದಿಯಲ್ಲಿ ಮಲಗುವುದು ಸಾಮಾನ್ಯವಾಗಿ ಹೆಚ್ಚು ಆರಾಮದಾಯಕವಾಗಿರುತ್ತದೆ. ವಿಶೇಷವಾಗಿ ದೇಹದ ಮೇಲೆ ಹೆಚ್ಚಾಗುವ ಒತ್ತಡವನ್ನು ಕಡಿಮೆ ಮಾಡಲು ಮತ್ತು ಆರಾಮವಾಗಿ ನಿದ್ರೆ ಮಾಡಲು ಇದು ಸಹಾಯ ಮಾಡಬಹುದು. ಆದರೆ ಗರ್ಭಾವಸ್ಥೆಯಲ್ಲಿ ನಿದ್ರೆ ಅಥವಾ ಮಲಗುವ ಭಂಗಿಗೆ ಸಂಬಂಧಿಸಿದ ಯಾವುದೇ ನಿರ್ದಿಷ್ಟ ಸಮಸ್ಯೆ ಇದ್ದರೆ, ವೈದ್ಯರ ಸಲಹೆ ಪಡೆಯುವುದು ಉತ್ತಮ.

ಬೆನ್ನಿನ ಮೇಲೆ ಮಲಗುವುದರಿಂದ ಏನಾಗಬಹುದು?

ಸಾಮಾನ್ಯವಾಗಿ ನೇರವಾಗಿ ಅಥವಾ ಬೆನ್ನಿನ ಮೇಲೆ ಮಲಗುವುದು ಕೆಲವರಿಗೆ ಬೆನ್ನು ಮತ್ತು ಕುತ್ತಿಗೆಗೆ ಆರಾಮ ನೀಡಬಹುದು. ಸರಿಯಾದ ದಿಂಬು ಮತ್ತು ಹಾಸಿಗೆಯನ್ನು ಬಳಸಿದರೆ ದೇಹವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು. ಆದರೆ ಕೆಲವರಿಗೆ ಬೆನ್ನಿನ ಮೇಲೆ ಅಂದರೆ ನೇರವಾಗಿ ಮಲಗಿದಾಗ ಗೊರಕೆ ಅಥವಾ ಸ್ಲೀಪ್ ಅಪ್ನಿಯಾ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ತಲೆನೋವು ಕಡಿಮೆ ಮಾಡಲು ಕಾಫಿ ಸಹಾಯ ಮಾಡುತ್ತದೆಯೇ? ಈ ಬಗ್ಗೆ ವೈದ್ಯರ ಅಭಿಪ್ರಾಯವೇನು?

ಹೊಟ್ಟೆ ಮೇಲೆ ಮಲಗುವುದು ಯಾಕೆ ಸೂಕ್ತವಲ್ಲ?

ಸಾಮಾನ್ಯವಾಗಿ ಹೊಟ್ಟೆಯ ಮೇಲೆ ಮಲಗುವಾಗ ಕುತ್ತಿಗೆಯನ್ನು ಒಂದು ಬದಿಗೆ ತಿರುಗಿಸಬೇಕಾಗುತ್ತದೆ. ಇದರಿಂದ ಕುತ್ತಿಗೆ ಮತ್ತು ಬೆನ್ನುಮೂಳೆಯ ಮೇಲೆ ಹೆಚ್ಚುವರಿ ಒತ್ತಡ ಬೀಳಬಹುದು. ದೀರ್ಘಕಾಲ ಈ ಭಂಗಿಯಲ್ಲಿ ಮಲಗುವ ಕೆಲವರಿಗೆ ಬೆಳಗ್ಗೆ ಎದ್ದಾಗ ಕುತ್ತಿಗೆ, ಭುಜ ಅಥವಾ ಬೆನ್ನಿನಲ್ಲಿ ನೋವು ಮತ್ತು ಬಿಗಿತದ ಅನುಭವವಾಗಬಹುದು. ಹೀಗಾಗಿ ಹೊಟ್ಟೆಯ ಮೇಲೆ ಮಲಗುವುದಕ್ಕಿಂತ ಬೇರೆ ಭಂಗಿಯನ್ನು ಆಯ್ಕೆ ಮಾಡುವುದು ಸೂಕ್ತ.

ಸರಿಯಾದ ದಿಂಬು ಮತ್ತು ಹಾಸಿಗೆ ಕೂಡ ಮುಖ್ಯ

ಕೇವಲ ಮಲಗುವ ಭಂಗಿಯಷ್ಟೇ ಅಲ್ಲ, ದಿಂಬು ಮತ್ತು ಹಾಸಿಗೆಯ ಆಯ್ಕೆಯೂ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಅತಿಯಾಗಿ ಮೃದುವಾದ ಅಥವಾ ಅತಿಯಾಗಿ ಗಟ್ಟಿಯಾದ ಹಾಸಿಗೆ ಕೆಲವರಿಗೆ ಬೆನ್ನು ಮತ್ತು ಕೀಲು ನೋವನ್ನು ಉಂಟುಮಾಡಬಹುದು. ಆದ್ದರಿಂದ ದೇಹಕ್ಕೆ ಆರಾಮ ನೀಡುವ ಹಾಸಿಗೆ ಆಯ್ಕೆ ಮಾಡುವುದು ಉತ್ತಮ.

ಉತ್ತಮ ನಿದ್ರೆಗಾಗಿ ಈ ಅಭ್ಯಾಸ ರೂಢಿಸಿಕೊಳ್ಳಿ

  • ಪ್ರತಿದಿನ ಒಂದೇ ಸಮಯಕ್ಕೆ ಮಲಗಲು ಮತ್ತು ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
  • ಮಲಗುವ ಕೋಣೆಯನ್ನು ಶಾಂತ ಮತ್ತು ಆರಾಮದಾಯಕವಾಗಿರಿಸಿ.
  • ಮಲಗುವ ಮುನ್ನ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇತರ ಸ್ಕ್ರೀನ್‌ಗಳ ಬಳಕೆಯನ್ನು ಕಡಿಮೆ ಮಾಡಿ.
  • ರಾತ್ರಿ ತುಂಬಾ ಭಾರವಾದ ಆಹಾರ ಸೇವಿಸುವುದನ್ನು ತಪ್ಪಿಸಿ.
  • ಸಂಜೆ ಮತ್ತು ರಾತ್ರಿ ಹೆಚ್ಚು ಕ್ಯಾಫೀನ್ ಸೇವಿಸುವುದನ್ನು ಕಡಿಮೆ ಮಾಡಿ.
  • ದೇಹಕ್ಕೆ ಸೂಕ್ತವಾದ ದಿಂಬು ಮತ್ತು ಹಾಸಿಗೆಯನ್ನು ಬಳಸಿ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ನಿದ್ರೆಯ ವೇಳೆ ಉಸಿರಾಟ ನಿಲ್ಲುವಂತೆ ಆಗುವುದು, ತುಂಬಾ ಜೋರಾಗಿ ಗೊರಕೆ ಹೊಡೆಯುವುದು, ರಾತ್ರಿ ಪದೇಪದೇ ಎಚ್ಚರಗೊಳ್ಳುವುದು, ಬೆಳಗ್ಗೆ ಎದ್ದಾಗ ತೀವ್ರ ತಲೆನೋವು ಅಥವಾ ದಿನವಿಡೀ ಅತಿಯಾದ ನಿದ್ರೆ ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಟೀಂ ಇಂಡಿಯಾದ 12 ಆಟಗಾರರಿಗೆ ಇದು ಚೊಚ್ಚಲ ಲಂಕಾ ಪ್ರವಾಸ – Kannada News | India’s Young Squad Faces Sri Lanka Test: Only 3 Experienced Players on Island Soil

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಟೆಸ್ಟ್ ಸರಣಿ ಆಗಸ್ಟ್ 15 ರಿಂದ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಗಾಲೆ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ಆಗಸ್ಟ್ 23 ರಿಂದ ಕೊಲಂಬೊದಲ್ಲಿ ನಡೆಯಲಿದೆ. ಒಂಬತ್ತು ವರ್ಷಗಳ ನಂತರ ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಪಂದ್ಯ ಆಡಲು ಟೀಂ ಇಂಡಿಯಾ (Team India) ಸಜ್ಜಾಗಿದೆ. ಈ ಪ್ರವಾಸಕ್ಕೆ ಬಿಸಿಸಿಐ 15 ಸದಸ್ಯರ ಭಾರತ ತಂಡವನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಟ್ಟಿದೆ. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಟೀಂ ಇಂಡಿಯಾದಲ್ಲಿರುವ 15 ಆಟಗಾರರಲ್ಲಿ ಕೇವಲ ಮೂವರೇ ಮೂವರು ಆಟಗಾರರು ಈ ಹಿಂದೆ ಶ್ರೀಲಂಕಾ ನೆಲದಲ್ಲಿ ಆಡಿದ್ದಾರೆ. ಇದರರ್ಥ ಉಳಿದ 12 ಆಟಗಾರರಿಗೆ ಶ್ರೀಲಂಕಾ ನೆಲದಲ್ಲಿ ಇದು ಚೊಚ್ಚಲ ಟೆಸ್ಟ್ ಸರಣಿಯಾಗಿರಲಿದೆ.

12 ಆಟಗಾರರಿಗೆ ಇದು ಚೊಚ್ಚಲ ಟೆಸ್ಟ್

ಮೇಲೆ ಹೇಳಿದಂತೆ ಭಾರತೀಯ ಟೆಸ್ಟ್ ತಂಡದಲ್ಲಿರುವ 15 ಆಟಗಾರರಲ್ಲಿ 12 ಮಂದಿ ಶ್ರೀಲಂಕಾದಲ್ಲಿ ಎಂದಿಗೂ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಕೆಲವರು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ, ಆದರೆ ಯಾರೂ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ತಂಡದ ನಾಯಕ ಶುಭ್​ಮನ್ ಗಿಲ್ ಕೂಡ ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಪಂದ್ಯವನ್ನು ಆಡಿದ ಅನುಭವವನ್ನು ಹೊಂದಿಲ್ಲ. 50 ಟೆಸ್ಟ್ ಪಂದ್ಯಗಳನ್ನು ಪೂರ್ಣಗೊಳಿಸಿರುವ ವಿಕೆಟ್ ಕೀಪರ್ ರಿಷಭ್ ಪಂತ್, ಇದುವರೆಗೆ ಶ್ರೀಲಂಕಾದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡಿಲ್ಲ.

ಈ ಮೂವರು ಮಾತ್ರ ಆಡಿದ್ದಾರೆ

  • ಪ್ರಸ್ತುತ ಭಾರತೀಯ ತಂಡದಲ್ಲಿ ಕೇವಲ ಮೂವರು ಆಟಗಾರರಿಗೆ ಮಾತ್ರ ಶ್ರೀಲಂಕಾದಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವವಿದೆ. ಕೆಎಲ್ ರಾಹುಲ್, ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಮಾತ್ರ ಈ ಹಿಂದೆ ಲಂಕಾದಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
  • ಕೆಎಲ್ ರಾಹುಲ್: ಶ್ರೀಲಂಕಾದಲ್ಲಿ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 8 ಇನ್ನಿಂಗ್ಸ್‌ಗಳಲ್ಲಿ 268 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 2 ಅರ್ಧಶತಕಗಳು ಸೇರಿವೆ.
  • ರವೀಂದ್ರ ಜಡೇಜಾ: 2 ಟೆಸ್ಟ್‌ಗಳಲ್ಲಿ 2 ಇನ್ನಿಂಗ್ಸ್​ಗಳನ್ನು ಆಡಿರುವ ಜಡೇಜಾ 85 ರನ್ ಗಳಿಸಿದ್ದಾರೆ. ಅಲ್ಲದೆ 4 ಇನ್ನಿಂಗ್ಸ್‌ಗಳಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದಾರೆ (ಒಂದು ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಗೊಂಚಲು ಕೂಡ ಪಡೆದಿದ್ದಾರೆ).
  • ಕುಲ್ದೀಪ್ ಯಾದವ್: ಕೇವಲ ಒಂದು ಟೆಸ್ಟ್ ಪಂದ್ಯವನ್ನು ಆಡಿರುವ ಕುಲ್ದೀಪ್ ಒಟ್ಟು 5 ವಿಕೆಟ್‌ಗಳನ್ನು ಪಡೆದಿದ್ದಾರೆ.

IND vs SL: 16 ವರ್ಷಗಳ ಬಳಿಕ ಈತನಿಲ್ಲದೆ ಟೆಸ್ಟ್ ಆಡಲಿದೆ ಟೀಂ ಇಂಡಿಯಾ

ಟೆಸ್ಟ್ ಸರಣಿಗೆ ಭಾರತ ತಂಡ: ಶುಭ್​ಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ದೇವದತ್ ಪಡಿಕ್ಕಲ್, ಸರನ್ಶ್ ಜೈನ್, ಔಕಿಬ್ ನಬಿ, ಸರ್ಫರಾಜ್ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎ.ಆರ್. ರೆಹಮಾನ್ ಪುತ್ರ ಅಮೀನ್ ಚಲಿಸುತ್ತಿದ್ದ ಕಾರು ಅಪಘಾತ; ಹೇಗಿದೆ ಆರೋಗ್ಯ ಸ್ಥಿತಿ? – Kannada News | AR Rahman son Ameen escapes unhurt in Car Accident in Chennai

ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ (AR Rahman) ಅವರ ಪುತ್ರ ಎ.ಆರ್. ಅಮೀನ್ ಅವರು ಚೆನ್ನೈನಲ್ಲಿ ಭಾನುವಾರ (ಆಗಸ್ಟ್ 9) ಸಾಯಂಕಾಲ ನಡೆದ ಕಾರು ಅಪಘಾತದಲ್ಲಿ (Car Accident) ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಿಂಡಿಯ ಕತ್ತಿಪಾರಾ ಫ್ಲೈಓವರ್ ಬಳಿ ಎ.ಆರ್. ಅಮೀನ್ (AR Ameen) ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಅಡ್ಯಾರ್ ಸಂಚಾರ ತನಿಖಾ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎರಡೂ ವಾಹನಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

‘ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ಅಮೀನ್ ಅವರು ತಮ್ಮ ಸ್ನೇಹಿತನೊಂದಿಗೆ ಕೋಯಂಬೇಡಿನಿಂದ ನಗರದತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ಪಕ್ಕದ ರಸ್ತೆಯಿಂದ ಬಂದ ವ್ಯಾಗನ್-ಆರ್ ಕಾರು, ಅಮೀನ್ ಪ್ರಯಾಣಿಸುತ್ತಿದ್ದ ಪೋರ್ಷೆ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಅಮೀನ್ ಹಾಗೂ ಅವರ ಸ್ನೇಹಿತ ದೊಡ್ಡ ಅನಾಹುತದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

ಅಪಘಾತದ ತಕ್ಷಣವೇ ಅಮೀನ್ ಹಾಗೂ ಅವರ ಸ್ನೇಹಿತನನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಅವರು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಇನ್ನು ವ್ಯಾಗನ್-ಆರ್ ಕಾರಿನಲ್ಲಿದ್ದ ಗಾಯಾಳುವನ್ನು ಕಲೈಂಜರ್ ಶತಮಾನೋತ್ಸವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆಯ ನಂತರ ಡಿಸ್ಚಾರ್ಜ್ ಮಾಡಲಾಗಿದೆ.

ಇದನ್ನೂ ಓದಿ: ಭಾರತದ ಇನ್ಯಾವ ಸಂಗೀತ ನಿರ್ದೇಶಕನಿಗೂ ಸಿಗದಷ್ಟು ಸಂಭಾವನೆ ಪಡೆದ ಎಆರ್ ರೆಹಮಾನ್

ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಮಗನಾಗಿದ್ದರೂ, ಅಮೀನ್ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸುತ್ತಿದ್ದಾರೆ. 2015ರಲ್ಲಿ ಮಣಿರತ್ನಂ ನಿರ್ದೇಶನದ ‘ಓ ಕಾದಲ್ ಕಣ್ಮಣಿ’ ಚಿತ್ರದ ‘ಮೌಲಾ ಸಲ್ಲಿ ವಸಲ್ಲಿಮ್’ ಹಾಡಿನ ಮೂಲಕ ಹಿನ್ನೆಲೆ ಗಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಆ ಹಾಡು ಅವರಿಗೆ ಖ್ಯಾತಿ ತಂದುಕೊಟ್ಟಿತು.

ನಂತರ ಹಲವು ಭಾಷೆಗಳಲ್ಲಿ ಹಾಡಿರುವ ಅಮೀನ್ ಅವರು ತಮ್ಮ ತಂದೆಯವರ ಅಂತರರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಇತ್ತೀಚೆಗೆ ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ತಮಿಳು ಆವೃತ್ತಿಯ ‘ಚಿಕಿರಿ ಚಿಕಿರಿ’ ಹಾಡಿಗೆ ಧ್ವನಿಯಾಗಿದ್ದರು. ಅಲ್ಲದೆ, ಜಸ್ಲೀನ್ ರಾಯಲ್ ಅವರೊಂದಿಗೆ ಸೇರಿ ‘ಭೀಗಿ ಭೀಗಿ’ ಆಲ್ಬಂ ಹಾಡನ್ನು ಹಾಡಿದ್ದು, ಅದರ ಮ್ಯೂಸಿಕ್ ವೀಡಿಯೋದಲ್ಲಿ ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version