ಚರ್ಚೆಯಿಲ್ಲದೆ ಲೋಕಸಭೆಯಲ್ಲಿ ಟ್ರಿಬ್ಯೂನಲ್ ಸುಧಾರಣಾ ಮಸೂದೆ ಅಂಗೀಕಾರ; ಏನಿದರ ವಿಶೇಷತೆ? – Kannada News | Parliament Monsoon Session Lok Sabha passes Tribunals Reforms Bill 2026 without debate; Why Is It Important?
ನವದೆಹಲಿ, ಆಗಸ್ಟ್ 10: ಟ್ರಿಬ್ಯೂನಲ್‌ಗಳ ನಿರ್ವಹಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ ರಚಿಸಲು ಮತ್ತು ಉಸ್ತುವಾರಿಗಾಗಿ ‘ರಾಷ್ಟ್ರೀಯ ಟ್ರಿಬ್ಯೂನಲ್ ಆಯೋಗ (NTC)’ ಎಂಬ ಹೊಸ ಸಂಸ್ಥೆಯನ್ನು ಸ್ಥಾಪಿಸಲು ಪ್ರಸ್ತಾಪಿಸುವ ಟ್ರಿಬ್ಯೂನಲ್ ಸುಧಾರಣಾ ಮಸೂದೆ, 2026 (Tribunals Reforms Bill) ಇಂದು ಲೋಕಸಭೆಯಲ್ಲಿ (Lok Sabha Session) ಅಂಗೀಕಾರಗೊಂಡಿದೆ. ಭಾರತದ 16 ಟ್ರಿಬ್ಯೂನಲ್‌ಗಳಲ್ಲಿ ಕಾರ್ಯಕ್ಷಮತೆಯ ಕೊರತೆ ಮತ್ತು ಸ್ವಾತಂತ್ರ್ಯದ ಅಭಾವವಿದೆ ಎಂಬ ಸುಪ್ರೀಂ ಕೋರ್ಟ್ನ ಕಳವಳಗಳನ್ನು ಪರಿಹರಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ. ಇದು ಕಾಯ್ದೆಯಾಗಿ ಜಾರಿಗೆ ಬಂದರೆ ಭಾರತದ…