Video: ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ; ಮೈ ಜುಂ ಎನ್ನಿಸುವ ವಿಡಿಯೋ ವೈರಲ್

ಉತ್ತರ ಪ್ರದೇಶ: ಬರೇಲಿಯಲ್ಲಿ ಮಾನ್ಸೂನ್ ಪೂರ್ವ ಮಳೆಯ ಆರ್ಭಟಕ್ಕೆ ಜನರು ಬೆಚ್ಚಿಬಿದ್ದಿದ್ದು, ಭೀಕರ ಬಿರುಗಾಳಿಯ ರಭಸಕ್ಕೆ ವ್ಯಕ್ತಿಯೊಬ್ಬರು ಶೆಡ್ ಸಮೇತ ಗಾಳಿಯಲ್ಲಿ ಹಾರಿ ಹೋದ ಆಘಾತಕಾರಿ ಘಟನೆ ನಡೆದಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಅಥವಾ ಶೀಟ್ ಹಾರಿಹೋಗದಂತೆ ತಡೆಯಲು ಆ ವ್ಯಕ್ತಿ ಟಿನ್ ಶೆಡ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಗ, ಗಾಳಿಯ ತೀವ್ರತೆಯು ಆತನನ್ನು ಮೇಲಕ್ಕೆತ್ತಿ ದೂರಕ್ಕೆ ಎಸೆದಿದೆ. ಈ ಇಡೀ ಭೀಕರ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಇದನ್ನೂ ಓದಿ: ಅರೆಬರೆ ಬಟ್ಟೆ ತೊಟ್ಟು ರೀಲ್ಸ್​ ಮಾಡುತ್ತಿದ್ದ ಹೆಂಡತಿ; ಅವಮಾನ ತಾಳಲಾರದೇ ಆಕೆಗೆ ‘ಪಿಂಡದಾನ’ ಮಾಡಿದ ಗಂಡ!

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಆರ್​​ಸಿಬಿಯ ಉಳಿದೆರಡು ಲೀಗ್ ಪಂದ್ಯಗಳು ಯಾರ ವಿರುದ್ಧ? ಆ 2 ತಂಡಗಳ ಪ್ಲೇಆಫ್ ಲೆಕ್ಕಾಚಾರವೇನು? – Kannada News | RCB’s IPL 2026 Playoff Path: After KKR Win, Decisive Battles Await Against PBKS and SRH

ಐಪಿಎಲ್ 2026 ರ 57 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಆರ್​​ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದಲ್ಲದೆ 16 ಪಾಯಿಂಟ್​ಗಳೊಂದಿಗೆ ಪ್ಲೇಆಫ್​ಗೆ ಮತ್ತಷ್ಟು ಹತ್ತಿರವಾಗಿದೆ. ಪ್ಲೇಆಫ್ ದೃಷ್ಟಿಯಿಂದ ಉಭಯ ತಂಡಗಳಿಗೂ ಈ ಪಂದ್ಯ ಬಹಳ ಮುಖ್ಯವಾಗಿತ್ತು. ಅದರಲ್ಲೂ ಕೆಕೆಆರ್​​ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಆದರೆ ಈ ಪಂದ್ಯದಲ್ಲಿ ಆರ್​​ಸಿಬಿ ಎದುರು ಶರಣಾದ ಕೆಕೆಆರ್ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ. ಇತ್ತ ಆರ್​ಸಿಬಿ 16 ಅಂಕಗಳನ್ನು ಹೊಂದಿದ್ದರೂ ಪ್ಲೇಆಫ್​ಗೆ ತನ್ನ ಸ್ಥಾನವನ್ನು ಇನ್ನು ಖಚಿತಪಡಿಸಿಕೊಂಡಿಲ್ಲ. ಹೀಗಾಗಿ ಲೀಗ್ ಹಂತದಲ್ಲಿ ಉಳಿದಿರುವ ಎರಡೂ ಪಂದ್ಯಗಳು ಆರ್​​ಸಿಬಿ ಪಾಲಿಗೆ ನಿರ್ಣಾಯಕವಾಗಿವೆ. ಈ ಎರಡು ಪಂದ್ಯಗಳಲ್ಲಿ ಆರ್​ಸಿಬಿ ಗೆದ್ದರಷ್ಟೇ ಟಾಪ್ 2 ರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಸೋತರೆ ಪ್ಲೇಆಫ್​ನಿಂದಲೇ ಹೊರಬೀಳಲಿದೆ.

ಆರ್​ಸಿಬಿ ತನ್ನ ಮುಂದಿನ ಎರಡು ಲೀಗ್ ಪಂದ್ಯಗಳನ್ನು ತವರಿನಿಂದ ಹೊರಗೆ ಆಡಲಿದೆ. ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ಫೈನಲ್ ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನು ಮೇ 17 ರಂದು ಎದುರಿಸಿದರೆ, ಕೊನೆಯ ಲೀಗ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮೇ 22 ರಂದು ಎದುರಿಸಲಿದೆ. ಈ ಎರಡು ತಂಡಗಳು ಪ್ರಸ್ತುತ ಅದ್ಭುತ ಫಾರ್ಮ್​ನಲ್ಲಿದ್ದು ಈ ತಂಡಗಳನ್ನು ಮಣಿಸುವುದು ಆರ್​ಸಿಬಿಗೆ ಸವಾಲಿನ ಕೆಲಸವಾಗಿದೆ. ಇದರ ಜೊತೆಗೆ ಎದುರಾಳಿ ತಂಡಗಳಿಗೆ ತವರಿನ ಲಾಭ ಬೇರೆ ಸಿಗುವುದರಿಂದ ಆರ್​ಸಿಬಿ ವಿಭಿನ್ನ ತಂತ್ರದೊಂದಿಗೆ ಕಣಕ್ಕಿಳಿಯಬೇಕಾಗುತ್ತದೆ.

ಆರ್​ಸಿಬಿ ಈ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದು ಪಂದ್ಯವನ್ನಾದರೂ ಗೆಲ್ಲಬೇಕು. ಆಗ ಮಾತ್ರ ಅದಕ್ಕೆ ಪ್ಲೇಆಫ್ ಹಾದಿ ತೆರೆಯಲಿದೆ. ಒಂದು ವೇಳೆ ಆರ್​ಸಿಬಿ ಎರಡೂ ಪಂದ್ಯಗಳಲ್ಲಿ ಸೋತರೆ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಹೀಗಾಗಿ ಆರ್​ಸಿಬಿ ಯಾವುದೇ ಅಡೆತಡೆಗಳಿಲ್ಲದೆ ಪ್ಲೇಆಫ್​ಗೇರಬೇಕೆಂದರೆ ಈ ಎರಡೂ ತಂಡಗಳನ್ನು ಮಣಿಸಿದರೆ ಒಳಿತು. ಇತ್ತ ಆರ್​​ಸಿಬಿಗೆ ಎದುರಾಳಿಗಳಾಗಿರುವ ಆ ಎರಡು ತಂಡಗಳಿಗೂ ಆರ್​ಸಿಬಿ ವಿರುದ್ಧದ ಗೆಲುವು ಪ್ಲೇಆಫ್ ದೃಷ್ಟಿಯಿಂದ ಅತ್ಯವಶ್ಯಕವಾಗಿದೆ.

ಆರ್​ಸಿಬಿಗೆ ಮುಂದಿನ ಎದುರಾಳಿಯಾಗಿರುವ ಪಂಜಾಬ್ ಕಿಂಗ್ಸ್​ಗೆ ಲೀಗ್ ಹಂತದಲ್ಲಿ ಇನ್ನ 3 ಪಂದ್ಯಗಳು ಬಾಕಿ ಉಳಿದಿವೆ. ಪ್ರಸ್ತುತ 6 ಗೆಲುವುಗಳೊಂದಿಗೆ 13 ಅಂಕಗಳನ್ನು ಹೊಂದಿರುವ ಪಂಜಾಬ್ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಹೀಗಾಗಿ ಪಂಜಾಬ್ ಪ್ಲೇಆಫ್​ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಉಳಿದಿರುವ 3 ಪಂದ್ಯಗಳನ್ನು ಗೆಲ್ಲಬೇಕಿದೆ. ಆದರೆ ಪಂಜಾಬ್ ತಂಡ ಕಳೆದ ಐದು ಪಂದ್ಯಗಳಲ್ಲಿ ಸೋತು ಸೋಲಿನ ಸುಳಿಗೆ ಸಿಲುಕಿದೆ. ಹೀಗಾಗಿ ಪಂಜಾಬ್ ಪ್ಲೇಆಫ್​ ರೇಸ್​ನಲ್ಲಿ ಉಳಿಯಬೇಕೆಂದರೆ ಆರ್​ಸಿಬಿ ವಿರುದ್ಧ ಹೈವೋಲ್ಟೇಜ್ ಕದನವನ್ನು ಗೆಲ್ಲಲೇಬೇಕಿದೆ.

ಪಂಜಾಬ್ ಜೊತೆಗೆ ಸನ್‌ರೈಸರ್ಸ್ ಹೈದರಾಬಾದ್ ಕೂಡ ಪ್ಲೇಆಫ್​ ರೇಸ್​ನಲ್ಲಿದೆ. ಪ್ರಸ್ತುತ ಆಡಿರುವ 12 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿರುವ ಸನ್‌ರೈಸರ್ಸ್ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್​ಗೆ ಲೀಗ್ ಹಂತದಲ್ಲಿ ಇನ್ನ 2 ಪಂದ್ಯಗಳು ಬಾಕಿ ಉಳಿದಿದ್ದು ಅದರಲ್ಲಿ ಒಂದು ಪಂದ್ಯವನ್ನು ಆರ್​ಸಿಬಿ ವಿರುದ್ಧ ಆಡಲಿದೆ. ಆರ್​ಸಿಬಿ ವಿರುದ್ಧ ಗೆಲ್ಲುವುದರ ಜೊತೆಗೆ ಇನ್ನೊಂದು ಪಂದ್ಯದಲ್ಲೂ ಸನ್‌ರೈಸರ್ಸ್ ಗೆಲ್ಲಬೇಕಿದೆ. ಅದರಲ್ಲೂ ಆರ್​ಸಿಬಿ ವಿರುದ್ಧ ಲೀಗ್​ನ ಉದ್ಘಾಟನಾ ಪಂದ್ಯದಲ್ಲೇ ಸೋತಿರುವ ಸನ್‌ರೈಸರ್ಸ್​ಗೆ ಇದು ಸೇಡಿನ ಸಮರವಾಗಿದೆ.

Source link

Shani Amavasya: ಮೇ 16ರ ಶನಿ ಅಮಾವಾಸ್ಯೆಯಂದು ಬುಧಾದಿತ್ಯ ರಾಜಯೋಗದಿಂದ ಈ 4 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! – Kannada News | Budhaditya Rajayoga on Shani Amavasya: These 4 Zodiac Signs Will Get Huge Gains

ಹಿಂದೂ ಧರ್ಮದಲ್ಲಿ ಶನಿ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಮೇ 16ರಂದು ಬರಲಿರುವ ಈ ಅಮಾವಾಸ್ಯೆಯ ಸಂದರ್ಭದಲ್ಲಿ ಗ್ರಹಗಳ ರಾಜ ಸೂರ್ಯ ಮತ್ತು ಬುದ್ಧಿವಂತಿಕೆಯ ಕಾರಕ ಬುಧ ಒಂದೇ ರಾಶಿಯಲ್ಲಿ ಸಂಧಿಸುತ್ತಿದ್ದಾರೆ. ಈ ಅಪರೂಪದ ಸಂಯೋಗದಿಂದ ‘ಬುಧಾದಿತ್ಯ ರಾಜಯೋಗ’ ನಿರ್ಮಾಣವಾಗುತ್ತಿದ್ದು, ಇದು ಕೆಲವು ರಾಶಿಗಳ ಪಾಲಿಗೆ ಬಂಪರ್ ಲಾಭ ತರಲಿದೆ.

ಬುಧಾದಿತ್ಯ ರಾಜಯೋಗದ ಪ್ರಭಾವ ಹೇಗಿರುತ್ತೆ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ಮತ್ತು ಬುಧ ಒಟ್ಟಿಗೆ ಸೇರಿದಾಗ ವ್ಯಕ್ತಿಗೆ ಬುದ್ಧಿಶಕ್ತಿ, ಗೌರವ, ಸಂಪತ್ತು ಮತ್ತು ಉದ್ಯೋಗದಲ್ಲಿ ಉನ್ನತ ಸ್ಥಾನ ಲಭಿಸುತ್ತದೆ. ಶನಿ ಅಮಾವಾಸ್ಯೆಯ ಪುಣ್ಯಕಾಲದಲ್ಲಿ ಈ ಯೋಗವು ಕಾರ್ಯರೂಪಕ್ಕೆ ಬರುತ್ತಿರುವುದು ಮತ್ತಷ್ಟು ಶಕ್ತಿಯನ್ನು ತುಂಬಿದೆ.

ಅದೃಷ್ಟ ಪಡೆಯಲಿರುವ 4 ಪ್ರಮುಖ ರಾಶಿಗಳು:

ಮೇಷ ರಾಶಿ (Aries):

ಮೇಷ ರಾಶಿಯವರಿಗೆ ಈ ಸಮಯವು ಅತ್ಯಂತ ಫಲಪ್ರದವಾಗಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಭಾರಿ ಸುಧಾರಣೆ ಕಂಡುಬರಲಿದೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಹಣ ನಿಮ್ಮ ಕೈ ಸೇರಲಿದೆ. ಹೊಸ ಕೆಲಸ ಅಥವಾ ವ್ಯವಹಾರ ಆರಂಭಿಸಲು ಇದು ಸಕಾಲ.

ಮಿಥುನ ರಾಶಿ (Gemini):

ಬುಧಾದಿತ್ಯ ರಾಜಯೋಗವು ಮಿಥುನ ರಾಶಿಯವರಿಗೆ ವೃತ್ತಿಜೀವನದಲ್ಲಿ ಉನ್ನತ ಮಟ್ಟವನ್ನು ತಂದುಕೊಡಲಿದೆ. ಉದ್ಯೋಗದಲ್ಲಿ ಬಡ್ತಿ (Promotion) ಸಿಗುವ ಸಾಧ್ಯತೆ ಹೆಚ್ಚಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದ್ದು, ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಲಿದೆ.

ಸಿಂಹ ರಾಶಿ (Leo):

ಸಿಂಹ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಹೂಡಿಕೆ ಮಾಡಿದ ಹಣದಿಂದ ಲಾಭಾಂಶ ದೊರೆಯಲಿದೆ. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ ಈ ಅವಧಿಯಲ್ಲಿ ಮುಕ್ತಿ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗುವುದರಿಂದ ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಧನು ರಾಶಿ (Sagittarius):

ಧನು ರಾಶಿಯವರಿಗೆ ಆರ್ಥಿಕವಾಗಿ ಸುವರ್ಣ ಕಾಲ ಆರಂಭವಾಗಲಿದೆ. ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗುವ ಸಂಭವವಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಪ್ರೇಮ ಜೀವನ ಹಾಗೂ ವೈವಾಹಿಕ ಜೀವನ ಸುಖಮಯವಾಗಿರಲಿದೆ.

ಶನಿ ಅಮಾವಾಸ್ಯೆಯಂದು ಏನು ಮಾಡಬೇಕು?

ಈ ರಾಜಯೋಗದ ಸಂಪೂರ್ಣ ಫಲ ಪಡೆಯಲು ಶನಿ ಅಮಾವಾಸ್ಯೆಯಂದು ಶನಿದೇವನಿಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ಅಸಹಾಯಕರಿಗೆ ಅಥವಾ ಹಸಿದ ಪ್ರಾಣಿಗಳಿಗೆ ಆಹಾರ ನೀಡುವುದರಿಂದ ನಿಮ್ಮ ಜಾತಕದಲ್ಲಿರುವ ದೋಷಗಳು ನಿವಾರಣೆಯಾಗಿ ಸೌಭಾಗ್ಯ ಲಭಿಸುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಕೇಸ್: ಸುಲಭವಾಗಿ ಜಾಮೀನು ಪರಿಗಣಿಸಲಾಗದು ಎಂದ ಕೋರ್ಟ್ – Kannada News | Yogeesh Gowda Case: Karnataka High Court Adjourns Bail Hearing of Ex Cop Chennakeshav Tingrikar

ಹೈಕೋರ್ಟ್, ಚನ್ನಕೇಶವ ಟಿಂಗರಿಕರ್Image Credit source: google

ಧಾರವಾಡ, ಮೇ 14: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ (Yogesh Gowda murder case) 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಪೊಲೀಸ್ ಅಧಿಕಾರಿ ಚನ್ನಕೇಶವ ಟಿಂಗರಿಕರ್ (chennakeshava tingrikar), ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಜಾಮೀನು ಮಂಜೂರು ಮಾಡುವಂತೆ ಅವರ ಪರ ವಕೀಲರು ಮನವಿ ಮಾಡಿದ್ದು, ಸುಲಭವಾಗಿ ಜಾಮೀನು ಪರಿಗಣಿಸಲಾಗದು ಎಂದಿರುವ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಮತ್ತು ನ್ಯಾಯಮೂರ್ತಿ ಪಿ. ಶ್ರೀಸುಧಾ ಅವರಿದ್ದ ವಿಭಾಗೀಯ ಪೀಠ ಅರ್ಜಿ ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಿದೆ.

ಮುಖ್ಯಾಂಶಗಳು

  • 7 ವರ್ಷ ಜೈಲುವಾಸ ಪ್ರಶ್ನಿಸಿ ಚನ್ನಕೇಶವ ಟಿಂಗರಿಕರ್ ಮೇಲ್ಮನವಿ
  • ಜಾಮೀನು ನೀಡಲು ವಕೀಲರ ಮನವಿ
  • ಮೇ 26ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್ ವಿಭಾಗೀಯ ಪೀಠ

ಅರ್ಜಿದಾರರ ಪರ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿದ್ದು, ಚನ್ನಕೇಶವ ಟಿಂಗರಿಕರ್ ಅವರಿಗೆ ಕೇವಲ 20 ದಿನ ಮಾತ್ರ ತನಿಖೆಯ ಹೊಣೆ ಇತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ವೇಳೆ ಅವರ ವಾದಕ್ಕೆ ಸಹಾಯಕ ಸಾಲಿಸಿಟರ್ ಜನರಲ್ (ASG) ಎಸ್.ವಿ.ರಾಜು ಆಕ್ಷೇಪ ವ್ಯಕ್ತಪಡಿಸಿದರು.

ಪೊಲೀಸ್ ಅಧಿಕಾರಿಯಾಗಿ ನ್ಯಾಯ ಕೊಡಿಸುವ ಕೆಲಸ ಮಾಡಿಲ್ಲ: ಎಸ್.ವಿ. ರಾಜು ವಾದ

ಚನ್ನಕೇಶವ ಟಿಂಗರಿಕರ್ ತನಿಖಾಧಿಕಾರಿಯಾಗಿದ್ದ ಅವಧಿಯಲ್ಲಿ ಕೊಲೆ ಮಾಡಿದ ನಿಜವಾದ ಆರೋಪಿಗಳನ್ನು ಬಂಧಿಸಲಿಲ್ಲ. ಬದಲಿಗೆ, ಕೊಲೆಗೆ ಸಂಬಂಧವಿಲ್ಲದವರನ್ನು ಆರೋಪಿಗಳನ್ನಾಗಿಸುವಲ್ಲಿ ಈತನ ಪಾತ್ರವಿದೆ ಎಂದರು. ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದರೂ ಅವುಗಳನ್ನು ಪರಿಶೀಲಿಸಿಲ್ಲ. ಕೆಲ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪವೂ ಈತನ ಮೇಲಿದೆ. ಪೊಲೀಸ್ ಅಧಿಕಾರಿಯಾಗಿ ನ್ಯಾಯ ಕೊಡಿಸುವ ಕೆಲಸ ಮಾಡಿಲ್ಲವೆಂದು ಎಸ್.ವಿ. ರಾಜು ವಾದಿಸಿದರು.

ವಿಭಾಗೀಯ ಪೀಠ ಹೇಳಿದ್ದೇನು?

ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಮತ್ತು ನ್ಯಾಯಮೂರ್ತಿ ಪಿ. ಶ್ರೀಸುಧಾ ಅವರಿದ್ದ ವಿಭಾಗೀಯ ಪೀಠ, ‘ದೋಷಿ ಎಂದು ಈಗಾಗಲೇ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿರುವುದರಿಂದ ಜಾಮೀನನ್ನು ಸುಲಭವಾಗಿ ಪರಿಗಣಿಸಲಾಗದು. ಪೊಲೀಸ್ ಅಧಿಕಾರಿಯಾಗಿ ಆರೋಪಿಗಳೊಂದಿಗೆ ಶಾಮೀಲಾಗಿರುವ ಗಂಭೀರ ಆರೋಪ ಇವರ ಮೇಲಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅಂತಿಮವಾಗಿ ಅರ್ಜಿದಾರರ ಪರ ವಕೀಲರ ಮನವಿಯ ಮೇರೆಗೆ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಮೇ 26ಕ್ಕೆ ನಿಗದಿಪಡಿಸಿದೆ.

ಇದನ್ನೂ ಓದಿ: ಯೋಗೇಶ್​​ ಗೌಡ ಹತ್ಯೆ ಪ್ರಕರಣವನ್ನು ಸಿಬಿಐ ಭೇದಿಸಿದ್ದೇಗೆ? ಇಲ್ಲಿವೆ ಕೆಲ ಇಂಟರೆಸ್ಟಿಂಗ್​​ ವಿಚಾರಗಳು

2016ರ ಜೂನ್ 15ರಂದು ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರನ್ನು ಅವರದ್ದೇ ಜಿಮ್‌ನಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣವು ರಾಜಕೀಯವಾಗಿ ದೊಡ್ಡ ಮಟ್ಟದ ಸಂಚಲನ ಮೂಡಿಸಿತ್ತು. ಈ ಕೊಲೆ ನಡೆದಾಗ ಚನ್ನಕೇಶವ ಟಿಂಗರಿಕರ್​​ ಧಾರವಾಡ ಉಪನಗರ ಠಾಣೆ ಇನ್ಸ್‌ಪೆಕ್ಟರ್​​ ಆಗಿದ್ದರು. ಇವರ ವಿರುದ್ಧ ಸಾಕ್ಷಿ ನಾಶ ಹಾಗೂ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:15 pm, Thu, 14 May 26

Source link

ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​: ಸ್ವಾಮೀಜಿ ಹೇಳಿದ್ದಿಷ್ಟು – Kannada News | Vachanananda Swamijis First Reaction After Police Inquiry in POCSO Case

ದಾವಣಗೆರೆ, ಮೇ 14: ಪೋಕ್ಸೋ ಕೇಸ್ ವಿಚಾರವಾಗಿ ವಚನಾನಂದ ಸ್ವಾಮೀಜಿಯನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. 5 ಗಂಟೆಗಳಿಗೂ ಹೆಚ್ಚು ಸಮಯ ಶ್ರೀಗಳಿಂದ ಮಾಹಿತಿ ಪಡೆದಿರುವ ಪೊಲೀಸರು, ಮತ್ತೆ ವಿಚಾರಣೆಗೆ ಕರೆದಾಗ ಸಹಕರಿಸುವಂತೆ ಸೂಚಿಸಿದ್ದಾರೆ. ಪೊಲೀಸರ ವಿಚಾರಣೆ ಮುಗಿಸಿ ಹೊರಬಂದ ಸ್ವಾಮೀಜಿ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ಕಾನೂನನ್ನು ಗೌರವಿಸುತ್ತೇವೆ, ಪಾಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Railway Vacancy 2026: ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ; 1,191 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | South East Central Railway ITI Apprentice Vacancy 2026: No Exam, Direct Merit Selection

ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ

ನೀವು ಐಟಿಐ (ITI) ಮುಗಿಸಿ ರೈಲ್ವೆ ಇಲಾಖೆಯಲ್ಲಿ ವೃತ್ತಿಜೀವನ ಆರಂಭಿಸಲು ಬಯಸಿದ್ದರೆ ನಿಮಗೊಂದು ಸುವರ್ಣಾವಕಾಶ ಇಲ್ಲಿದೆ. ದಕ್ಷಿಣ ಪೂರ್ವ ಮಧ್ಯ ರೈಲ್ವೆ (SECR) ವಿವಿಧ ಟ್ರೇಡ್‌ಗಳಲ್ಲಿ ಖಾಲಿ ಇರುವ ಒಟ್ಟು 1,191 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆದ್ದರಿಂದ ಆಸಕ್ತರು ತಡಮಾಡದೇ ಕೂಡಲೇ ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರಗಳು

ರೈಲ್ವೆ ಇಲಾಖೆಯ ಬಿಲಾಸ್‌ಪುರ ಮತ್ತು ರಾಯ್‌ಪುರ ಡಿವಿಷನ್‌ಗಳಲ್ಲಿ ಈ ನೇಮಕಾತಿ ನಡೆಯುತ್ತಿದೆ.

  • ಒಟ್ಟು ಹುದ್ದೆಗಳು: 1,191

  • ಹುದ್ದೆಯ ಹೆಸರು: ಅಪ್ರೆಂಟಿಸ್ (Apprentice)

ಅರ್ಹತಾ ಮಾನದಂಡಗಳು

  1. ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

  2. ತಾಂತ್ರಿಕ ಅರ್ಹತೆ: ಸಂಬಂಧಿತ ಟ್ರೇಡ್‌ನಲ್ಲಿ NCVT/SCVT ಮಾನ್ಯತೆ ಪಡೆದ ITI ಪ್ರಮಾಣಪತ್ರವನ್ನು ಹೊಂದಿರಬೇಕು.

  3. ವಯೋಮಿತಿ:

  • ಕನಿಷ್ಠ 15 ವರ್ಷಗಳು ತುಂಬಿರಬೇಕು.
  • ಗರಿಷ್ಠ 24 ವರ್ಷ ಮೀರಿರಬಾರದು.
  • (ಸರ್ಕಾರದ ನಿಯಮಗಳ ಪ್ರಕಾರ SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ).

ಆಯ್ಕೆ ಪ್ರಕ್ರಿಯೆ ಹೇಗೆ?

ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ನಿಮ್ಮ 10ನೇ ತರಗತಿಯ ಅಂಕಗಳು ಮತ್ತು ಐಟಿಐನಲ್ಲಿ ಪಡೆದ ಅಂಕಗಳ ಸರಾಸರಿಯನ್ನು ಆಧರಿಸಿ ಮೆರಿಟ್ ಪಟ್ಟಿಯ (Merit List) ಮೂಲಕ ನೇರ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಅರ್ಜಿ ಸಲ್ಲಿಸುವ ವಿಧಾನ

  • ಆಸಕ್ತ ಅಭ್ಯರ್ಥಿಗಳು ರೈಲ್ವೆ ಇಲಾಖೆಯ ಅಧಿಕೃತ ಪೋರ್ಟಲ್ apprenticeshipindia.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

  • ಅರ್ಜಿ ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ಶೈಕ್ಷಣಿಕ ದಾಖಲೆಗಳು ಮತ್ತು ಫೋಟೋಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು

ಅಧಿಸೂಚನೆಯಲ್ಲಿ ತಿಳಿಸಿರುವಂತೆ ಅರ್ಜಿ ಸಲ್ಲಿಸಲು ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಕೊನೆಯ ಕ್ಷಣದ ಗಡಿಬಿಡಿ ತಪ್ಪಿಸಲು ಇಂದೇ ಅರ್ಜಿ ಸಲ್ಲಿಸಿ. ಇದು ಅಪ್ರೆಂಟಿಸ್‌ಶಿಪ್ ತರಬೇತಿಯಾಗಿದ್ದು, ಇದನ್ನು ಯಶಸ್ವಿಯಾಗಿ ಮುಗಿಸಿದವರಿಗೆ ರೈಲ್ವೆಯ ಮುಂಬರುವ ಕಾಯಂ ಉದ್ಯೋಗ ನೇಮಕಾತಿಯಲ್ಲಿ ಶೇ. 20ರಷ್ಟು ಮೀಸಲಾತಿ ಮತ್ತು ಆದ್ಯತೆ ನೀಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್​ ಪಕ್ಷದ ಆಪದ್ಭಾಂಧವ ಸತೀಶನ್ ಈಗ ಕೇರಳದ ಸಿಎಂ; ಹೇಗಿತ್ತು ಅವರ ರಾಜಕೀಯ ಜೀವನ? – Kannada News | Kerala CM VD Satheesan Political Journey Saviour of Congress 6 time MLA and grassroots worker

ತಿರುವನಂತಪುರಂ, ಮೇ 14: 10 ದಿನಗಳ ಕುತೂಹಲ, ಆಂತರಿಕ ಕಲಹ, ಲಾಬಿ, ವಿಪಕ್ಷಗಳ ಟೀಕೆಯ ನಡುವೆ ಕೇರಳಕ್ಕೆ ಕೊನೆಗೂ ಓರ್ವ ನಾಯಕ ಸಿಕ್ಕಿದ್ದಾರೆ. ಕಾಂಗ್ರೆಸ್ ಇಂದು ವಿ.ಡಿ. ಸತೀಶನ್ (VD Satheesan) ಅವರನ್ನು ಕೇರಳ ಸಿಎಂ ಎಂದು ಘೋಷಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಯುಡಿಎಫ್​ ಭರ್ಜರಿ ಗೆಲುವು ಸಾಧಿಸಿದ್ದರೂ ಕಾಂಗ್ರೆಸ್​​ನಲ್ಲಿ ಮುಖ್ಯಮಂತ್ರಿಯ ಆಯ್ಕೆ ಅಂತಿಮವಾಗಿರಲಿಲ್ಲ. ಕೇರಳದ ಕಾಂಗ್ರೆಸ್​​ನಲ್ಲೇ ಸತೀಶನ್ ಮತ್ತು ಕೆ.ಸಿ. ವೇಣುಗೋಪಾಲ್ ಬೆಂಬಲಿಗರ ನಡುವೆ ಲಾಬಿ ಶುರುವಾಗಿತ್ತು. ಕಾಂಗ್ರೆಸ್ ಹೈಕಮಾಂಡ್​​ಗೆ ತೀರಾ ಆಪ್ತರಾಗಿರುವ ಕೆ.ಸಿ. ವೇಣುಗೋಪಾಲ್ ಅವರೇ ಈ ಬಾರಿ ಸಿಎಂ ಆಗಲಿದ್ದಾರೆ ಎಂಬ ವದಂತಿಗಳ ನಡುವೆಯೂ ಸತೀಶನ್ ತನ್ನ ಬೆಂಬಲಿಗರನ್ನು ಮುಂದಿಟ್ಟುಕೊಂಡು ಸಿಎಂ ಸ್ಥಾನವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ನಂತರ, ಕಾಂಗ್ರೆಸ್ ಗುರುವಾರ ವಿ.ಡಿ. ಸತೀಶನ್ ಅವರನ್ನು ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಪಕ್ಷದ ಹೈಕಮಾಂಡ್, ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ನಾಯಕರು ಮತ್ತು ಯುಡಿಎಫ್ ಮಿತ್ರಪಕ್ಷಗಳನ್ನು ಒಳಗೊಂಡ ದೀರ್ಘ ಸುತ್ತಿನ ಚರ್ಚೆಯ ನಂತರ ಸತೀಶನ್ ಅವರ ಹೆಸರು ಘೋಷಿಸಲಾಯಿತು.

ಹಿರಿಯ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಕೂಡ ರೇಸ್​​ನಲ್ಲಿದ್ದರೂ ಹಲವು ರಾಜಕೀಯ ಅಂಶಗಳು ಅಂತಿಮವಾಗಿ ಸತೀಶನ್ ಪರವಾಗಿ ಕೆಲಸ ಮಾಡಿದವು. ಕಳೆದ 5 ವರ್ಷಗಳಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡಪಂಥೀಯ ಸರ್ಕಾರದ ವಿರುದ್ಧ ಯುಡಿಎಫ್ ನಡೆಸಿದ ಅಭಿಯಾನದ ಪ್ರಮುಖ ನಾಯಕರಾಗಿದ್ದ ಸತೀಶನ್ ಅವರಿಗೆ ಅದೇ ಪ್ಲಸ್ ಪಾಯಿಂಟ್ ಆಯಿತು. ಅವರನ್ನು ಸಿಎಂ ಆಗಿ ಆಯ್ಕೆ ಮಾಡಲು ಅದೂ ಮುಖ್ಯ ಕಾರಣ.

ಇದನ್ನೂ ಓದಿ: ಕೊನೆಗೂ ಕೇರಳದ ಸಿಎಂ ಹೆಸರು ಘೋಷಿಸಿದ AICC: ವಿ.ಡಿ.ಸತೀಶನ್​ ದೇವರನಾಡಿನ ನೂತನ ಮುಖ್ಯಮಂತ್ರಿ

2021ರಿಂದ ವಿರೋಧ ಪಕ್ಷದ ನಾಯಕರಾಗಿ, ವಿಧಾನಸಭೆಯ ಒಳಗೆ ಮತ್ತು ಹೊರಗೆ ಪಿಣರಾಯಿ ವಿಜಯನ್ ಸರ್ಕಾರದ ಮೇಲೆ ಕಾಂಗ್ರೆಸ್ ಪರವಾಗಿ ಸತೀಶನ್ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ, ತಮ್ಮ ಇಮೇಜ್ ಸೃಷ್ಟಿಸಿಕೊಂಡಿದ್ದರು. ಹಾಗೇ, 2026ರ ಕೇರಳ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸತೀಶನ್ ಭವಿಷ್ಯ ನುಡಿದಿದ್ದರು. ಅದರಂತೆ ಯುಡಿಎಫ್ 102 ಸ್ಥಾನಗಳನ್ನು ಗಳಿಸಿ, ಅದರಲ್ಲಿ ಕಾಂಗ್ರೆಸ್ 63 ಸ್ಥಾನಗಳನ್ನು ಗಳಿಸಿ ಕೇರಳದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) 22 ಸ್ಥಾನಗಳನ್ನು ಪಡೆದರೆ, ಕೇರಳ ಕಾಂಗ್ರೆಸ್ (ಜೋಸೆಫ್) 7 ಸ್ಥಾನಗಳನ್ನು ಗೆದ್ದಿದೆ. ಕ್ರಾಂತಿಕಾರಿ ಸಮಾಜವಾದಿ ಪಕ್ಷ ಮೂರು ಸ್ಥಾನಗಳನ್ನು ಮತ್ತು ಕೇರಳ ಕಾಂಗ್ರೆಸ್ (ಜಾಕೋಬ್) 1 ಸ್ಥಾನವನ್ನು ಗೆದ್ದಿದೆ.

ಸತೀಶನ್ ಅವರ ರಾಜಕೀಯ ಪ್ರಯಾಣವು ಕಾಲೇಜು ಕ್ಯಾಂಪಸ್‌ಗಳಲ್ಲಿಯೇ ಪ್ರಾರಂಭವಾಯಿತು. ಅವರು 1986-87ರಲ್ಲಿ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನಂತರ ಅವರು ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆಯಾದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಕಾರ್ಯದರ್ಶಿಯಾದರು. ಆರಂಭದಲ್ಲಿಯೇ ನುರಿತ ಸಂಘಟಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡರು.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಉಪಾಧ್ಯಕ್ಷರಾಗಿ ಮತ್ತು ನಂತರ ಕೇರಳ ವಿಧಾನಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸುವ ಮೂಲಕ ಕಾಂಗ್ರೆಸ್‌ನೊಳಗಿನ ಅವರ ವೃತ್ತಿಜೀವನವು ಉನ್ನತ ಮಟ್ಟಕ್ಕೆ ಏರಿತು. ಕಾನೂನು ಪದವೀಧರರಾದ ಸತೀಶನ್, ರಾಜಕೀಯಕ್ಕೆ ಸೇರುವ ಮೊದಲು ಕೇರಳ ಹೈಕೋರ್ಟ್‌ನಲ್ಲಿ ಕಾನೂನು ಅಭ್ಯಾಸ ಮಾಡಿದ್ದರು.

ಇದನ್ನೂ ಓದಿ: ಕೇರಳಂ ಸಿಎಂ: ರಾಹುಲ್, ಸೋನಿಯಾ ಗಾಂಧಿ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣಗಳೇನು?

2021ರಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಭಾರೀ ಸೋಲಿನ ನಂತರ ವಿ.ಡಿ. ಸತೀಶನ್ ವಿರೋಧ ಪಕ್ಷದ ನಾಯಕರಾದರು. ಆದರೆ, ವಿಪಕ್ಷ ನಾಯಕರಾದರೂ ಅವರು ಆಗಿನಿಂದಲೇ ಮತ್ತೆ ಕೇರಳದಲ್ಲಿ ಪಕ್ಷ ಕಟ್ಟುವ ಕೆಲಸ ಶುರು ಮಾಡಿದ್ದರು. ಸತೀಶನ್ ಅವರ ನೆಹರೂ ಅವರ ವಿಚಾರಗಳಿಗೆ ಅನುಗುಣವಾಗಿ ಕಾಂಗ್ರೆಸ್ ಪಕ್ಷವನ್ನು ಪುನರ್ನಿರ್ಮಿಸಲು ಬಯಸಿದ್ದರು.

2021ರಲ್ಲಿ ಎಡ ಸರ್ಕಾರ ಅಧಿಕಾರಕ್ಕೆ ಮರಳಿದ ನಂತರ, ಅನೇಕ ಕಾಂಗ್ರೆಸ್ ಕಾರ್ಯಕರ್ತರು ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಕತೆ ಮುಗಿಯುತು ಎಂದು ಭಯಪಟ್ಟರು. ಈ ಸೋಲು ಅವರ ಆತ್ಮವಿಶ್ವಾಸವನ್ನು ಕುಗ್ಗಿಸಿತು. ಇದರಿಂದಾಗಿ ಕಾಂಗ್ರೆಸ್ ಪಕ್ಷ ವಿಭಜನೆಯಾಗಿ, ಆಂತರಿಕ ಹೋರಾಟಗಳಲ್ಲಿ ಸಿಲುಕಿಕೊಂಡಂತೆ ಕಾಣುತ್ತಿತ್ತು. ಆದರೆ, ಸತೀಶನ್ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತೆ ಪಕ್ಷದ ಚಟುವಟಿಕೆಗಳನ್ನು ಆರಂಭಿಸಿದರು. ಪಕ್ಷದೊಳಗಿನ ಬಣ ರಾಜಕೀಯದಿಂದ ಪಕ್ಷದ ಸಂಘಟನೆಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು.

ಉಮ್ಮನ್ ಚಾಂಡಿ ಮತ್ತು ರಮೇಶ್ ಚೆನ್ನಿತ್ತಲರಂತಹ ಹಿರಿಯ ನಾಯಕರೊಂದಿಗೆ ಸಂಬಂಧ ಹೊಂದಿರುವ ಗುಂಪುಗಳ ಪ್ರಾಬಲ್ಯವನ್ನು ಸತೀಶನ್ ಬಹಿರಂಗವಾಗಿ ಪ್ರಶ್ನಿಸಿದರು. ಆಂತರಿಕ ಪೈಪೋಟಿಯು ವಿರೋಧ ಪಕ್ಷಗಳಿಗಿಂತ ಕಾಂಗ್ರೆಸ್‌ಗೆ ಹೆಚ್ಚು ಹಾನಿ ಮಾಡುತ್ತಿದೆ ಎಂದು ಅವರು ವಾದಿಸಿದರು. ಸತೀಶನ್ ಸ್ವತಃ ಯಾವುದೇ ಪ್ರಮುಖ ಕಾಂಗ್ರೆಸ್ ಬಣದ ಭಾಗವಾಗಿರಲಿಲ್ಲ. ಅವರು ಪಕ್ಷದ ಇಮೇಜ್ ಕಟ್ಟುವುದರ ಜೊತೆಗೆ ಪಕ್ಷದೊಳಗೆ ತಮ್ಮ ಇಮೇಜನ್ನು ಗಟ್ಟಿಗೊಳಿಸಿಕೊಳ್ಳುವುದರತ್ತ ಗಮನವಿಟ್ಟಿದ್ದರು. ಅದರ ಪರಿಣಾಮವೇ ಈಗ ಅವರು ಸಿಎಂ ಆಗಿರುವುದು.
ಕೇರಳದಲ್ಲಿ ಕಾಂಗ್ರೆಸ್ ಆಪತ್ತಿನಲ್ಲಿ ಇದ್ದ ಸಂದರ್ಭದಲ್ಲಿ ಆಪದ್ಭಾಂದವನಂತೆ ಬಂದು ಪಕ್ಷವನ್ನು ಕಟ್ಟಿ, ಬೆಳೆಸಿ, ಕಾರ್ಯಕರ್ತರನ್ನು ಒಗ್ಗೂಡಿಸಿದ ಸತೀಶನ್ ಅವರೇ ಸಿಎಂ ಆಗಬೇಕೆಂದು ಅನೇಕ ಕಾರ್ಯಕರ್ತರು ಹೈಕಮಾಂಡ್​ ಮೇಲೆ ಒತ್ತಡ ಹೇರಿದ್ದರು. ಇದೇ ಕಾರಣಕ್ಕೆ ಹೈಕಮಾಂಡ್ ಕೆ.ಸಿ. ವೇಣುಗೋಪಾಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಕಾರ್ಯಕರ್ತರ ವಿರೋಧ ಕಟ್ಟಿಕೊಳ್ಳಬೇಕಾದೀತು ಎಂದು ಸತೀಶನ್ ಅವರ ಹೆಸರನ್ನೇ ಅಂತಿಮಗೊಳಿಸಿದೆ ಎನ್ನಲಾಗುತ್ತಿದೆ.

ಕೇರಳದ ರಾಜಕೀಯ ಸಂಸ್ಕೃತಿಯು ಇನ್ನೂ ನೆಹರೂ ಸಮಾಜವಾದದ ಬಲವಾದ ಅಂಶಗಳನ್ನು ಹೊಂದಿದೆ ಎಂಬುದನ್ನು ಸಂಪೂರ್ಣವಾಗಿ ಅರಿತಿದ್ದ ಸತೀಶನ್, ಕಾಂಗ್ರೆಸ್ ಅನ್ನು ನಿಜವಾದ ಎಡಪಂಥೀಯ ಎಂದು ಪದೇ ಪದೇ ಬಿಂಬಿಸಿದರು. ಇದು ಕೆಲವು ಸಾಂಪ್ರದಾಯಿಕ ಎಡಪಂಥೀಯ ಬೆಂಬಲಿಗರಲ್ಲಿಯೂ ಸಹ ಭರವಸೆಯ ಭಾವನೆಯನ್ನು ಮೂಡಿಸಿತು. ಸತೀಶನ್ ವಿರೋಧ ಪಕ್ಷದ ಪ್ರಚಾರದ ವಿಧಾನವನ್ನು ಸಹ ಬದಲಾಯಿಸಿದರು. ಚುನಾವಣಾ ಪ್ರಚಾರದ ವೇಳೆ ಆಯಾ ಭಾಗಗಳಲ್ಲಿ ಇರುವ ಜ್ವಲ.ತ ಸಮಸ್ಯೆಗಳ ಬಗ್ಗೆ ಸತೀಶನ್ ಅವರ ಟೀಂ ಅಧ್ಯಯನ ಮಾಡುತ್ತಿತ್ತು. ನಂತರ ಅದೇ ವಿಷಯವನ್ನು ಅಲ್ಲಿ ಪ್ರಸ್ತಾಪಿಸಿ ಜನರ ಗಮನಸೆಳೆಯುತ್ತಿದ್ದರು. ಚುನಾವಣಾ ಪ್ರಚಾರದ ವೇಳೆ ತಾವು ಮೈಕ್ ಹಿಡಿದು ಭಾಷಣ ಮಾಡುವುದಕ್ಕಿಂತ ಹೆಚ್ಚಾಗಿ ಸತೀಶನ್ ಜನರ ಕಷ್ಟ, ಸಮಸ್ಯೆಗಳನ್ನು ಆಲಿಸಲು ಆದ್ಯತೆ ನೀಡುತ್ತಿದ್ದರು. ಇದು ಆ ಭಾಗದ ಜನರಿಗೆ ಇವ ನಮ್ಮವನು ಎಂಬ ಭಾವನೆ ಮೂಡಿಸುತ್ತಿತ್ತು. ಇದೆಲ್ಲವೂ ಸತೀಶನ್ ಎಂಬ ತಳಮಟ್ಟದ ಕಾರ್ಯಕರ್ತ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಲು ಹಾದಿಯನ್ನು ಸುಗಮಗೊಳಿಸಿದವು ಎನ್ನಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:53 pm, Thu, 14 May 26

Source link

‘ಜನ ನಾಯಗನ್’ ಸಿನಿಮಾ ಬಿಡುಗಡೆ ತಡೆದಿದ್ದು ಯಾರು? ಮಾಹಿತಿ ನೀಡಿದ ನಿರ್ಮಾಪಕ – Kannada News | What really happened to Jana Nayagan movie why it is not released yet

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ತಮಿಳುನಾಡು ರಾಜಕೀಯದಲ್ಲಿ ಇತಿಹಾಸ ಬರೆದಿದ್ದು, ಇದೀಗ ರಾಜ್ಯದ ಸಿಎಂ ಆಗಿದ್ದಾರೆ. ಆದರೆ ಕೆಲವು ತಿಂಗಳುಗಳ ಮುಂಚೆ ಪರಿಸ್ಥಿತಿ ಭಿನ್ನವಾಗಿತ್ತು. ಅವರ ರಾಜಕೀಯ ಪಯಣಕ್ಕೆ ಹಲವು ಅಡ್ಡಗಾಲುಗಳು ಎದುರಾಗಿದ್ದವು. ಅವರ ಮೇಲೆ ಸತತ ವಾಗ್ದಾಳಿ, ಚಾರಿತ್ರ್ಯ ವಧೆಯ ಪ್ರಯತ್ನಗಳು ನಡೆದಿದ್ದವು, ಮಾತ್ರವಲ್ಲದೆ, ಅವರ ಸಿನಿಮಾ ‘ಜನ ನಾಯಗನ್’ ಬಿಡುಗಡೆಯನ್ನು ರಾಜಕೀಯ ಪ್ರಭಾವ ಬಳಸಿ ತಡೆಯಲಾಗಿತ್ತು. ಇದು ತಮ್ಮ ಕೊನೆಯ ಸಿನಿಮಾ ಎಂದು ವಿಜಯ್ ಹೇಳಿದ್ದರು, ಅಭಿಮಾನಿಗಳು ಸಹ ‘ಜನ ನಾಯಗನ್’ ನೋಡಲು ಕಾತರರಾಗಿದ್ದರು. ಆದರೆ ಸಿನಿಮಾ ಬಿಡುಗಡೆ ಆಗದಂತೆ ತಡೆಯಲಾಯ್ತು. ಈ ಸಿನಿಮಾದ ನಿರ್ಮಾಪಕ ವೆಂಕಟೇಶ್ ಕೆ ನಾರಾಯಣ್ (ಕೆವಿಎನ್ ಪ್ರೊಡಕ್ಷನ್) ಇದೀಗ ತಮ್ಮ ಸಿನಿಮಾದ ಬಿಡುಗಡೆ ನಿಲ್ಲಲು ಕಾರಣವೇನು? ಕಾರಣ ಯಾರು ಎಂದು ತಿಳಿಸಿದ್ದಾರೆ.

ಇಂಗ್ಲೀಷ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಕೆವಿಎನ್, ‘2025ರ ಡಿಸೆಂಬರ್​​ನಲ್ಲಿಯೇ ನಾವು ಸಿಬಿಎಫ್​​ಸಿಗೆ ನಮ್ಮ ಸಿನಿಮಾವನ್ನು ಸಲ್ಲಿಕೆ ಮಾಡಿದ್ದೆವು. ಸಿಬಿಎಫ್​​ಸಿ ಸಮಿತಿಯು ಸಿನಿಮಾವನ್ನು ವೀಕ್ಷಿಸಿ ಯು/ಎ ಪ್ರಮಾಣ ಪತ್ರ ನೀಡಿತ್ತು. ಆದರೆ ಅದಾದ ಬಳಿಕ ವ್ಯಕ್ತಿಯೊಬ್ಬರ ದೂರಿನ ಆಧಾರದ ಮೇಲೆ ಸಿನಿಮಾವನ್ನು ರಿವಿಷನ್ ಕಮಿಟಿಗೆ ಕಳಿಸಲು ಮುಂದಾದರು. ಇದು ಸರಿಯಲ್ಲ, ಖಾಸಗಿ ವ್ಯಕ್ತಿಗಳ ದೂರುಗಳನ್ನು ಸಿಬಿಎಫ್​​ಸಿ ಪರಿಗಣಿಸುವಂತಿಲ್ಲ ಮತ್ತು ಸಿನಿಮಾ ಬಿಡುಗಡೆಗೆ ಮುಂಚೆ ಸಲ್ಲಿಕೆ ಆದ ದೂರುಗಳನ್ನು ಮಾನ್ಯ ಮಾಡುವಂತಿಲ್ಲ. ಇದರ ಬಗ್ಗೆ ಈಗಾಗಲೇ ಸಾಕಷ್ಟು ಉದಾಹರಣೆಗಳು ನ್ಯಾಯಾಂಗದಲ್ಲಿವೆ. ಹಾಗಾಗಿ ನಾವು ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆವು’ ಎಂದಿದ್ದಾರೆ ಕೆವಿಎನ್.

‘ಆದರೆ ನ್ಯಾಯಾಲಯಕ್ಕೆ ಹೋದ ಬಳಿಕ ನಮಗೆ ಗೊತ್ತಾಗಿದ್ದು, ಸಿನಿಮಾದ ವಿರುದ್ಧ ದೂರು ನೀಡಿರುವುದು ಸಿಬಿಎಫ್​​ಸಿಯ ಸದಸ್ಯನೇ ಒಬ್ಬಾತ ಎಂದು. ಮೊದಲಿಗೆ ಸಿನಿಮಾಕ್ಕೆ ಯು/ಎ ಪ್ರಮಾಣ ಪತ್ರ ನೀಡಿದ ತಂಡದಲ್ಲಿ ಇದ್ದ ವ್ಯಕ್ತಿಯೇ ಆ ಬಳಿಕ ಸಿನಿಮಾದ ವಿರುದ್ಧ ದೂರು ಸಲ್ಲಿಸಿದ್ದ. ಬಳಿಕ ನಾವು ರಿವಿಷನ್ ಕಮಿಟಿಗೆ ಸಿನಿಮಾವನ್ನು ಕಳಿಸಲು ಒಪ್ಪಿಗೆ ಸೂಚಿಸಿದವು. ಆದರೆ ಆಗಿನಿಂದಲೂ ಸಿನಿಮಾ ಅಲ್ಲಿಯೇ ಸಿಲುಕಿಕೊಂಡಿದೆ. ಎಲ್ಲ ಫಾರ್ಮಾಲಿಟಿಗಳು ಪೂರ್ಣಗೊಂಡ ಬಳಿಕವಷ್ಟೆ ನಾವು ಸಿನಿಮಾ ಬಿಡುಗಡೆ ಮಾಡಬಹುದಾಗಿದೆ’ ಎಂದಿದ್ದಾರೆ ನಿರ್ಮಾಪಕ ವೆಂಕಟ್.

ಇದನ್ನೂ ಓದಿ:ಸಿಎಂ ಆಗಾಯ್ತು, ಚಿತ್ರರಂಗದ ಈ ಸಂಪ್ರದಾಯ ಬದಲಿಸ್ತಾರಾ ದಳಪತಿ ವಿಜಯ್?

‘ನಾವು ಸಿನಿಮಾ ಶುರು ಮಾಡಿದಾಗ, ಇದನ್ನೆಲ್ಲಾ ಎದುರಿಸಬೇಕಾಗುತ್ತದೆ ಅಂತ ನಮಗೆ ಗೊತ್ತಿರಲಿಲ್ಲ. ಈಗ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಾರೆ. ಮತ್ತು ನಿಜವಾಗಿಯೂ ತಮಿಳುನಾಡಿನ ಜನನಾಯಕ ಆಗಿರುವುದು ನಮಗೆ ಅತೀವ ಸಂತೋಷ ತಂದಿದೆ. ಬಹುಶಃ ಅವರು ಮುಖ್ಯಮಂತ್ರಿಯಾದ ನಂತರ ಈ ಸಿನಿಮಾ ಬಿಡುಗಡೆಯಾಗಬೇಕೆಂಬುದು ವಿಧಿಯಾಗಿರಬಹುದು’ ಎಂದು ವೆಂಕಟ್ ಹೇಳಿದ್ದಾರೆ. ಆ ಮೂಲಕ ಶೀಘ್ರವೇ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಸೂಚನೆಯನ್ನು ಅವರು ನೀಡಿದ್ದಾರೆ.

‘ಜನ ನಾಯಗನ್’ ಸಿನಿಮಾವನ್ನು ಎಚ್ ವಿನೋದ್ ನಿರ್ದೇಶಿಸಿದ್ದು, ಸಿನಿಮಾನಲ್ಲಿ ಪೂಜಾ ಹೆಗ್ಡೆ, ಮಲಯಾಳಂನ ಮಮಿತಾ ಬಿಜು ನಟಿಸಿದ್ದಾರೆ. ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಬೇಕಿತ್ತು, ಆದರೆ ಬಿಡುಗಡೆ ತಡವಾಗುತ್ತಲೇ ಬರುತ್ತಿದೆ. ಇತ್ತೀಚೆಗಷ್ಟೆ ‘ಜನ ನಾಯಗನ್’ ಸಿನಿಮಾ ಆನ್​ಲೈನ್​​ನಲ್ಲಿ ಪೂರ್ಣವಾಗಿ ಲೀಕ್ ಸಹ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Union Bank Recruitment 2026: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಸುವರ್ಣಾವಕಾಶ; ಯೂನಿಯನ್ ಬ್ಯಾಂಕ್‌ನಲ್ಲಿ 1,865 ಹುದ್ದೆಗಳಿಗೆ ನೇಮಕಾತಿ – Kannada News | Union Bank Apprentice Recruitment 2026: 1865 Posts – Apply Now for Banking Careers

ಯೂನಿಯನ್ ಬ್ಯಾಂಕ್‌ನಲ್ಲಿ ಉದ್ಯೋಗವಕಾಶImage Credit source: Pinterest

ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನದ ಕನಸು ಕಾಣುತ್ತಿದ್ದರೆ, ಇದು ಒಂದು ಉತ್ತಮ ಅವಕಾಶವಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ ಒಟ್ಟು 1,865 ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಅಭಿಯಾನವು ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಕಾರ್ಯವೈಖರಿಯ ಬಗ್ಗೆ ಆಳವಾದ ಪ್ರಾಯೋಗಿಕ ಅನುಭವವನ್ನು ಒದಗಿಸಲು ವೇದಿಕೆಯಾಗಲಿದೆ.

ಈ ನೇಮಕಾತಿ ಅಭಿಯಾನದಡಿಯಲ್ಲಿ ಒಟ್ಟು 1,865 ಹುದ್ದೆಗಳನ್ನು ವಿವಿಧ ರಾಜ್ಯಗಳ ನಡುವೆ ಹಂಚಿಕೆ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 335 ಹುದ್ದೆಗಳು ಖಾಲಿ ಇವೆ. ಉಳಿದಂತೆ ಮಹಾರಾಷ್ಟ್ರದಲ್ಲಿ 196, ತೆಲಂಗಾಣದಲ್ಲಿ 164, ಕರ್ನಾಟಕದಲ್ಲಿ 131, ಮಧ್ಯಪ್ರದೇಶದಲ್ಲಿ 116 ಮತ್ತು ತಮಿಳುನಾಡಿನಲ್ಲಿ 95 ಹುದ್ದೆಗಳು ಲಭ್ಯವಿವೆ. ಇನ್ನುಳಿದಂತೆ ಬಿಹಾರ, ದೆಹಲಿ, ಗುಜರಾತ್, ಒಡಿಶಾ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿಯೂ ಗಮನಾರ್ಹ ಸಂಖ್ಯೆಯ ಹುದ್ದೆಗಳು ಲಭ್ಯವಿದ್ದು, ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಡಿಮೆ ಸಂಖ್ಯೆಯ ಹುದ್ದೆಗಳನ್ನು ನಿಗದಿಪಡಿಸಲಾಗಿದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು. ವಿಶೇಷವಾಗಿ, ಅವರ ಪದವಿಯು ಏಪ್ರಿಲ್ 1, 2022 ರ ನಂತರವೇ ಪೂರ್ಣಗೊಂಡಿರಬೇಕು ಎಂಬ ನಿಯಮವಿದೆ. ಇದರ ಜೊತೆಗೆ, ಅಭ್ಯರ್ಥಿಯು ಯಾವ ರಾಜ್ಯಕ್ಕೆ ಅರ್ಜಿ ಸಲ್ಲಿಸುತ್ತಾರೋ ಆ ರಾಜ್ಯದ ಸ್ಥಳೀಯ ಭಾಷೆಯ ಜ್ಞಾನವನ್ನು (ಓದಲು, ಬರೆಯಲು ಮತ್ತು ಮಾತನಾಡಲು) ಹೊಂದಿರುವುದು ಕಡ್ಡಾಯವಾಗಿದೆ.

ವಯೋಮಿತಿಗೆ ಸಂಬಂಧಿಸಿದಂತೆ, ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷಗಳು ತುಂಬಿರಬೇಕು ಮತ್ತು ಗರಿಷ್ಠ ವಯಸ್ಸು 28 ವರ್ಷಗಳ ಮಿತಿಯೊಳಗೆ ಇರಬೇಕು. ಸರ್ಕಾರದ ಮೀಸಲಾತಿ ನಿಯಮಗಳ ಪ್ರಕಾರ, ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ನಿಗದಿತ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಅರ್ಜಿ ಶುಲ್ಕವನ್ನು ವಿವಿಧ ವರ್ಗಗಳಿಗೆ ವಿಭಿನ್ನವಾಗಿ ನಿಗದಿಪಡಿಸಲಾಗಿದೆ. ಸಾಮಾನ್ಯ ಮತ್ತು ಒಬಿಸಿ ವರ್ಗಗಳ ಪುರುಷ ಅಭ್ಯರ್ಥಿಗಳು 944ರೂ. ಶುಲ್ಕ ಪಾವತಿಸಬೇಕಿದ್ದರೆ, ಅದೇ ವರ್ಗದ ಮಹಿಳಾ ಅಭ್ಯರ್ಥಿಗಳು 708ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 236ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಮೂರು ಹಂತಗಳನ್ನು ಒಳಗೊಂಡಿದೆ. ಮೊದಲನೆಯದಾಗಿ, ಅಭ್ಯರ್ಥಿಗಳ ಜ್ಞಾನ ಮತ್ತು ಸಾಮರ್ಥ್ಯಗಳನ್ನು ಪರೀಕ್ಷಿಸಲು ಆನ್‌ಲೈನ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಉತ್ತೀರ್ಣರಾದವರಿಗೆ ಸ್ಥಳೀಯ ಭಾಷಾ ಪರೀಕ್ಷೆಯನ್ನು ನಡೆಸಿ, ಅವರಿಗೆ ಆ ಭಾಷೆಯ ಮೇಲೆ ಹಿಡಿತವಿದೆಯೇ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ. ಅಂತಿಮವಾಗಿ, ವೈದ್ಯಕೀಯ ಪರೀಕ್ಷೆಯ ವರದಿಯ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆಯನ್ನು ನಿರ್ಧರಿಸಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕರಿಕೋಟ್ ಧರಿಸಿ ಕಣ್ ಕುಕ್ಕಿದ ಮಮತಾ; ಬಂಗಾಳ ಹಿಂಸಾಚಾರ ಪ್ರಕರಣದಲ್ಲಿ ಕೋರ್ಟ್​ನಲ್ಲಿ ದೀದಿ ವಕೀಲಿಕೆ – Kannada News | Mamata Banerjee Appears as Lawyer in Calcutta HC for West Bengal Post Election Violence PIL

ಕೋಲ್ಕತ್ತಾ, ಮೇ 14: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (TMC) ಅಧಿನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಅವರು ಇಂದು ಗುರುವಾರ ವಕೀಲರ ಕಪ್ಪು ಕೋಟ್ ಧರಿಸಿ ಮೊದಲ ಬಾರಿಗೆ ಕಲ್ಕತ್ತಾ ಹೈಕೋರ್ಟ್‌ಗೆ ಹಾಜರಾಗಿ ಎಲ್ಲರ ಗಮನ ಸೆಳೆದರು. ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೋತ್ತರ ಹಿಂಸಾಚಾರದ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ಪರವಾಗಿ ವಾದ ಮಂಡಿಸಲು ಅವರು ಖುದ್ದಾಗಿ ನ್ಯಾಯಾಲಯಕ್ಕೆ ಆಗಮಿಸಿದ್ದರು. ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ ಮಮತಾ ಬ್ಯಾನರ್ಜಿ, “ನಾನು ಇಲ್ಲಿ ವಕೀಲೆಯಾಗಿ ಈ ಪ್ರಕರಣದಲ್ಲಿ ಹೋರಾಡುತ್ತಿದ್ದೇನೆ. ಹೈಕೋರ್ಟ್‌ನಲ್ಲಿ ಇದು ನನ್ನ ಮೊದಲ ಹಾಜರಾತಿಯಾಗಿದ್ದು, ಗೌರವಾನ್ವಿತ ನ್ಯಾಯಾಧೀಶರಿಗೆ ನನ್ನ ನಮನಗಳು” ಎಂದು ಮಾತು ಆರಂಭಿಸಿದರು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಟಿಎಂಸಿ ಕಾರ್ಯಕರ್ತರ ಮೇಲೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಅವರು ಆರೋಪಿಸಿ, ತಮ್ಮ ವಾದ ಮಂಡಿಸಿದರು.

ಬುಲ್ಡೋಜರ್ ಸಂಸ್ಕೃತಿಗೆ ಮಮತಾ ವಿರೋಧ

“ಪಶ್ಚಿಮ ಬಂಗಾಳವು ಬುಲ್ಡೋಜರ್ ರಾಜ್ಯವಲ್ಲ. ಇಲ್ಲಿ ಕಾನೂನಿನ ಆಡಳಿತವಿದೆ. ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸುತ್ತಿರುವುದು ಖಂಡನೀಯ. ಹಿಂಸಾಚಾರದಲ್ಲಿ ಮಕ್ಕಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನೂ ಬಿಡುತ್ತಿಲ್ಲ. ಕೊಲೆಯಾದ 10 ಜನರ ಪಟ್ಟಿಯನ್ನು ನಾನು ನೀಡುತ್ತಿದ್ದೇನೆ, ಇದರಲ್ಲಿ ಆರು ಮಂದಿ ಹಿಂದೂಗಳಾಗಿದ್ದಾರೆ” ಎಂದು ಮಾಜಿ ಸಿಎಂ ಆದ ಅವರು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನೂ ಓದಿ: ತೈವಾನ್ ವಿಚಾರದಲ್ಲಿ ತಪ್ಪು ಮಾಡಿದರೆ ಅಮೆರಿಕ-ಚೀನಾ ಮಧ್ಯೆ ನೇರ ಸಂಘರ್ಷವಾದೀತು: ಷಿ ಜಿನ್​ಪಿಂಗ್ ಎಚ್ಚರಿಕೆ

ಪೊಲೀಸರ ವಿರುದ್ಧ ಕಿಡಿ: ಹಿಂಸಾಚಾರ ನಡೆಯುತ್ತಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ ಅವರು, “ಪೊಲೀಸರು ಮಲಗಿದ್ದಾರೆಯೇ? ಅಪರಾಧ ನಡೆದ ಮೇಲೆ ತನಿಖೆ ಮಾಡುವುದು ಅವರ ಕರ್ತವ್ಯವಲ್ಲವೇ?” ಎಂದು ಪ್ರಶ್ನಿಸಿದರು.

92 ವರ್ಷದ ವಿಧವೆ ಸೇರಿದಂತೆ ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ದೂರಿದ ಮಮತಾ, ಬಂಗಾಳದ ಜನರಿಗೆ ತಕ್ಷಣದ ರಕ್ಷಣೆ ನೀಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಜಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥಸಾರಥಿ ಸೇನ್ ಅವರಿದ್ದ ಪೀಠಕ್ಕೆ ಮನವಿ ಮಾಡಿದರು.

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲನ್ನನುಭವಿಸಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂಸಾಚಾರ ವರದಿಯಾಗಿದೆ. ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರ ಪುತ್ರ ಶೀರ್ಷಣ್ಯ ಬ್ಯಾನರ್ಜಿ ಅವರು ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ತಮ್ಮ ಪಕ್ಷದ ಕಾರ್ಯಕರ್ತರ ಪರವಾಗಿ ಧ್ವನಿ ಎತ್ತಲು ಮಮತಾ ಬ್ಯಾನರ್ಜಿ ಅವರೇ ನೇರವಾಗಿ ನ್ಯಾಯಾಲಯಕ್ಕೆ ಇಳಿದಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಆದಾಯ 11 ಕೋಟಿ, ಖರ್ಚು 60 ಕೋಟಿ ರೂ; ರಾಹುಲ್ ಗಾಂಧಿ ವಿದೇಶೀ ಪ್ರವಾಸಗಳಿಗೆ ಫಂಡಿಂಗ್ ಯಾರದು? ಬಿಜೆಪಿ ಪ್ರಶ್ನೆ

“ಮಮತಾ ಬ್ಯಾನರ್ಜಿ ಅವರು ಬಂಗಾಳದ ಜನರನ್ನು ಸಂಕಷ್ಟದ ಸಮಯದಲ್ಲಿ ಎಂದಿಗೂ ಕೈಬಿಡುವುದಿಲ್ಲ ಎಂಬುದನ್ನು ಇಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ” ಎಂದು ತೃಣಮೂಲ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದೆ.

ಮಮತಾ ಬ್ಯಾನರ್ಜಿ ಕಾನೂನು ಓದಿದ್ದಾರಾ?

ಕೋಲ್ಕತಾದಲ್ಲಿ ಜನಿಸಿದ ಮಮತಾ ಬ್ಯಾನರ್ಜಿ ಅವರು ಬಹುಪದವಿಗಳನ್ನು ಗಳಿಸಿದ್ದಾರೆ. ಬಿಎ, ಎಂಎ, ಬಿಎಡ್, ಎಲ್​ಎಲ್​ಬಿ ಓದಿದ್ದಾರೆ. ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಕೋಲ್ಕತಾದ ಜೋಗೇಶ್ ಚಂದ್ರ ಚೌಧುರಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಕಲ್ಕತ್ತಾ ಯೂನಿವರ್ಸಿಟಿಯಲ್ಲಿ ಇಸ್ಲಾಮಿಕ್ ಇತಿಹಾಸದ ಮೇಲೆ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version