‘ಪತಿಯನ್ನು ಮತ್ತೆ ನೋಡುವವರೆಗೆ ನನ್ನ ಆತ್ಮಕ್ಕೆ ಶಾಂತಿ ಇಲ್ಲ’; ದಿಲೀಪ್ ರಾಜ್ ಪತ್ನಿಯ ಭಾವುಕ ಪೋಸ್ಟ್ – Kannada News | Dileep Raj Demise: Wife Sreevidya’s Emotional Tribute Post, No Peace Until I See Him Again

ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ವಾರ್ತೆ ಅಭಿಮಾನಿಗಳಿಗೆ ಶಾಕ್ ನೀಡಿದೆ. ಪತಿಯ ಜೊತೆ ಕಳೆದ 25 ವರ್ಷಗಳಿಂದ ಸಂಸಾರ ನಡೆಸಿಕೊಂಡು ಬರುತ್ತಿದ್ದ ಪತ್ನಿ ಶ್ರೀವಿದ್ಯಾ ಅವರ ಮನಸ್ಸು ಒಡೆದುಹೋಗಿದೆ. ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಪತಿಯನ್ನು ಕಳೆದುಕೊಂಡ ನೋವಿನಲ್ಲೂ ಬೆಂಬಲವಾಗಿ ನಿಂತವರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ದಿಲೀಪ್ ನೆನಪಿನ ಬಗ್ಗೆ ಭಾವುಕ ಸಾಲುಗಳನ್ನು ಬರೆದಿದ್ದಾರೆ.

ಪತ್ನಿ ಶ್ರೀವಿದ್ಯಾ ಅವರ ಪೋಸ್ಟ್‌ನಲ್ಲಿ ಏನಿದೆ?

‘ನನಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಚಿರಋಣಿಯಾಗಿದ್ದೇನೆ. ದಿಲೀಪ್ ಅವರು ಕಲೆ, ಸಿನಿಮಾ ಮತ್ತು ನಾವು ಇನ್ನು ಮುಂದೆ ಅನುಭವಿಸುವ ಪ್ರತಿಯೊಂದು ದಯೆಯ ರೂಪದಲ್ಲಿ ನಮ್ಮೊಂದಿಗೇ ಇರುತ್ತಾರೆ’ ಎಂದು ಅವರು ಬರೆದುಕೊಂಡಿದ್ದಾರೆ.

‘ಮತ್ತೆ ನೋಡುವವರೆಗೂ ಶಾಂತಿ ಇಲ್ಲ’:

ಪತಿಯನ್ನು ಕಳೆದುಕೊಂಡ ದುಃಖವನ್ನು ವ್ಯಕ್ತಪಡಿಸುತ್ತಾ, ‘ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರಿಗೆ ಹೊಸ ಜೀವನ ಸಿಗಲಿ. ಆದರೆ ಒಂದು ವಿಷಯ ಮಾತ್ರ ಖಚಿತ – ನಾನು ಅವರನ್ನು ಮತ್ತೆ ನೋಡುವವರೆಗೆ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ’ ಎಂದು ಬರೆಯುವ ಮೂಲಕ ಪತಿಯ ಮೇಲಿರುವ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದಿಲೀಪ್ ರಾಜ್ ಕೊನೆಯ ಕ್ಷಣಗಳು ಹೇಗಿತ್ತು? ಪತ್ನಿಯ ಹೋರಾಟ ಹೀಗಿತ್ತು

ಮನೆಮಾತಾಗಿದ್ದ ಜೋಡಿ:

ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಕೇವಲ ದಂಪತಿಗಳಾಗಿ ಮಾತ್ರವಲ್ಲದೆ, ವೃತ್ತಿಜೀವನದಲ್ಲೂ ಪರಸ್ಪರ ಬೆಂಬಲವಾಗಿ ನಿಂತಿದ್ದರು. ಇತ್ತೀಚಿನ ‘ಕೃಷ್ಣ ರುಕ್ಕು’ ಧಾರಾವಾಹಿ ಸೇರಿದಂತೆ ಹಲವು ಯಶಸ್ವಿ ಧಾರಾವಾಹಿಗಳನ್ನು ಈ ಜೋಡಿ ಜೊತೆಯಾಗಿ ನಿರ್ಮಿಸಿತ್ತು. ದಿಲೀಪ್ ನಿಧನದ ನಂತರ ಅವರ ಪತ್ನಿಯ ಈ ಪೋಸ್ಟ್ ಕಂಡು ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹುಬ್ಬಳ್ಳಿಯಲ್ಲಿ ಶುರುವಾಯ್ತು ಹಿಜಾಬ್ ಕಿಚ್ಚು: ಮುತಾಲಿಕ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ – Kannada News | Hijab Row Resurfaces: Hubballi Protest, Muthalik Urges Saffron Shawls in Schools

ಪ್ರಮೋದ್​​ ಮುತಾಲಿಕ್​ ನೇತೃತ್ವದಲ್ಲಿ ಪ್ರತಿಭಟನೆ​ Image Credit source: tv9 kannada

ಹುಬ್ಬಳ್ಳಿ, ಮೇ 14: ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಹಿಜಾಬ್ ವಿವಾದ (Hijab Controversy) ದೊಡ್ಡ ಗದ್ದಲಕ್ಕೆ ಕಾರಣವಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಹಿಜಾಬ್ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಸರ್ಕಾರ ಅವಕಾಶ ನೀಡಿರುವುದು, ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರದ ನಿರ್ಧಾರವನ್ನು ಖಂಡಿಸಿ ಇಂದು ಹುಬ್ಬಳ್ಳಿಯಲ್ಲಿ (Hubballi) ಶ್ರೀರಾಮಸೇನೆಯಿಂದ ಪ್ರತಿಭಟನೆ ಮಾಡಲಾಗಿದೆ. ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಕೇಸರಿ ಶಾಲು ಹಾಕಿಕೊಂಡು ಹೋಗುವಂತೆ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ಹಿಜಾಬ್ ವಿವಾದ ಮತ್ತೆ ಮುನ್ನಲೆಗೆ: ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ
  • ಹುಬ್ಬಳ್ಳಿಯಲ್ಲಿ ಪ್ರಮೋದ್​ ಮುತಾಲಿಕ್ ನೇತೃತ್ವದಲ್ಲಿ ಶ್ರೀರಾಮಸೇನೆ ಬೃಹತ್ ಪ್ರತಿಭಟನೆ
  • ಸರ್ಕಾರದ ನಿರ್ಧಾರವನ್ನು ಕೋರ್ಟ್​ನಲ್ಲಿ ಪ್ರಶ್ನಿಸುತ್ತೇವೆ ಎಂದ ಪ್ರಮೋದ್​ ಮುತಾಲಿಕ್

2022ರಲ್ಲಿ ಬಿಜೆಪಿ ಸರ್ಕಾರವಿದ್ದಾಗ, ರಾಜ್ಯದಲ್ಲಿ ಹಿಜಾಬ್ ವಿವಾದ ಜೋರಾಗಿತ್ತು. ಪರ-ವಿರೋಧ ಹೋರಾಟಗಳು, ಆರೋಪ, ಪ್ರತ್ಯಾರೋಪಗಳು ನಡೆದಿದ್ದವು. ನಂತರ ಆ ವಿವಾದ ತಣ್ಣಗಾಗಿತ್ತು. ಆದರೆ ಇದೀಗ ಮತ್ತೆ ಹಿಜಾಬ್ ವಿವಾದ ಸದ್ದು ಮಾಡುತ್ತಿದೆ. ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಲಾಗಿದೆ ಅನ್ನೋ ಅಧಿಸೂಚನೆ ಹೊರಡಿಸಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ಬೆನ್ನಲ್ಲೇ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ: ಸಮವಸ್ತ್ರ ಸಮರ: ವಿಪಕ್ಷದ ವಿರೋಧದ ನಡುವೆಯೂ ಸರ್ಕಾರದ ನಡೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ

ಅದರಲ್ಲೂ ಶ್ರೀರಾಮಸೇನೆ ಸಂಘಟನೆ ಸರ್ಕಾರದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ. ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು, ಸರ್ಕಾರದ ವಿರುದ್ಧ ಧಿಕ್ಕಾರ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ, ಡಿಸಿಎಂ, ಶಿಕ್ಷಣ ಸಚಿವರಿಗೆ ಹಿಜಾಬ್ ಹಾಕಿದ ಫೋಟೋಗಳನ್ನು ಹಿಡಿದು ನಂತರ ಅವುಗಳಿಗೆ ಬೆಂಕಿ ಹಚ್ಚಿದ್ದರು. ಇನ್ನು ಸರ್ಕಾರದ ಆದೇಶ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕೇಸರಿ ಶಾಲು ಧರಿಸಿಕೊಂಡು ಹೋಗುವಂತೆ ವಿದ್ಯಾರ್ಥಿಗಳಿಗೆ ಪ್ರಮೋದ್ ಮುತಾಲಿಕ್​​ ಕರೆ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಮೋದ್ ಮುತಾಲಿಕ್​​​, ಎಲ್ಲೆಲ್ಲಿ ಮುಸ್ಲಿಂರು ಹಿಜಾಬ್ ಧರಿಸಿ ಬರುತ್ತಾರೋ, ಅಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಹೋಗಿ, ನಿಮ್ಮ ರಕ್ಷಣೆಗೆ ನಾವು ಇರುತ್ತೇವೆ. ಸರ್ಕಾರ ಎಷ್ಟು ಜನರ ಮೇಲೆ ಕೇಸ್ ಹಾಕುತ್ತೆ ಹಾಕಲಿ, ನಾವು ಎದುರಿಸುತ್ತೇವೆ ಅಂತ ಹೇಳಿದ್ದಾರೆ.

ಸರ್ಕಾರದ ನಿರ್ಧಾರವನ್ನು ಕೋರ್ಟ್​ನಲ್ಲಿ ಪ್ರಶ್ನಿಸುತ್ತೇವೆ. ಆದಷ್ಟು ಬೇಗ ಪಿಐಎಲ್ ಹಾಕುತ್ತೇವೆ ಅಂತ ಹೇಳಿದ್ದಾರೆ. ಇಂದಿರಾ ಗಾಂಧಿ ಅವರು ಮಕ್ಕಳಲ್ಲಿ ಬೇಧಭಾವ ಇರಬಾರದು ಅಂತ ಸಮವಸ್ತ್ರ ನಿಯಮ ಜಾರಿಗೆ ತಂದಿದ್ದರು. ಆದರೆ ಅವರದೇ ಪಕ್ಷದವರು ಇದೀಗ ಹಿಜಾಬ್​ಗೆ ಅವಕಾಶ ನೀಡಿದ್ದಾರೆ. ಹಿಜಾಬ್ ಹಾಕಿಕೊಂಡು ಬಂದರೆ ಮುಸ್ಲಿಂ ಅನ್ನೋದು ಎಲ್ಲರಿಗೂ ಗೊತ್ತಾಗುತ್ತದೆ. ಏಕತೆ ಮೂಡಿಸಬೇಕಿದ್ದ ಸರ್ಕಾರವೇ ಮಕ್ಕಳ ಮನಸು ಒಡೆಯುವ ಕೆಲಸ ಮಾಡುತ್ತಿದೆ ಎಂದು ಪ್ರಮೋದ್ ಮುತಾಲಿಕ್​​ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಿಜಾಬ್​​​ ವಿವಾದ ಮತ್ತೆ ಮುನ್ನೆಲೆಗೆ: ಸರ್ಕಾರದ ನಡೆಗೆ ಸಿಡಿದೆದ್ದ ವಿಪಕ್ಷ ಬಿಜೆಪಿ

ರಾಜ್ಯದಲ್ಲಿ ತಣ್ಣಗಾಗಿದ್ದ ಹಿಜಾಬ್ ವಿವಾದ ಇದೀಗ ಮತ್ತೆ ಆರಂಭವಾಗಿದೆ. ಪರ-ವಿರೋಧ ಚರ್ಚೆಗಳು, ಆರೋಪ-ಪ್ರತ್ಯಾರೋಪಗಳು ಆರಂಭವಾಗಿವೆ. ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತೈವಾನ್ ವಿಚಾರದಲ್ಲಿ ತಪ್ಪು ಮಾಡಿದರೆ ಅಮೆರಿಕ-ಚೀನಾ ಮಧ್ಯೆ ನೇರ ಸಂಘರ್ಷವಾದೀತು: ಷಿ ಜಿನ್​ಪಿಂಗ್ ಎಚ್ಚರಿಕೆ – Kannada News | Xi Warns Trump: Taiwan Issue Could Lead to “Very Dangerous Situation” for US China

ಷಿ ಜಿನ್​ಪಿಂಗ್ ಮತ್ತು ಡೊನಾಲ್ಡ್ ಟ್ರಂಪ್Image Credit source: AP

ಬೀಜಿಂಗ್, ಮೇ 14: ತೈವಾನ್ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸದಿದ್ದರೆ ಚೀನಾ ಮತ್ತು ಅಮೆರಿಕ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ (US-China Bilateral relation) ಬಹಳ ಅಪಾಯಕಾರಿ ಪರಿಸ್ಥಿತಿಗೆ ತಳ್ಳಲ್ಪಡಬಹುದು ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ (Xi Jinping) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಬೀಜಿಂಗ್‌ನಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಶೃಂಗಸಭೆಯಲ್ಲಿ ಉಭಯ ನಾಯಕರ ಮಾತುಕತೆಯ ವೇಳೆ ಈ ವಿಷಯ ಮುಂಚೂಣಿಗೆ ಬಂದಿದೆ. ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ‘ಕ್ಸಿನ್ಹುವಾ’ ಪ್ರಕಾರ, ಚೀನಾ-ಅಮೆರಿಕ ಸಂಬಂಧಗಳಲ್ಲಿ ತೈವಾನ್ ಅತ್ಯಂತ ಪ್ರಮುಖ ಮತ್ತು ಸೂಕ್ಷ್ಮವಾದ ವಿಷಯವಾಗಿದೆ ಎಂಬುದನ್ನು ಜಿನ್‌ಪಿಂಗ್ ಸ್ಪಷ್ಟಪಡಿಸಿದ್ದಾರೆ.

ಅತ್ಯಂತ ಅಪಾಯಕಾರಿ ಪರಿಸ್ಥಿತಿ ಎಂದ ಚೀನೀ ಮುಖ್ಯಸ್ಥ

“ಒಂದು ವೇಳೆ ತೈವಾನ್ ವಿಷಯವನ್ನು ಸರಿಯಾಗಿ ನಿಭಾಯಿಸಿದರೆ, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳು ಸ್ಥಿರವಾಗಿರುತ್ತವೆ. ಇಲ್ಲದಿದ್ದರೆ, ಎರಡು ದೇಶಗಳ ನಡುವೆ ಘರ್ಷಣೆಗಳು ನಡೆದು ಇಡೀ ಸಂಬಂಧವೇ ಅತ್ಯಂತ ಅಪಾಯಕಾರಿ ಪರಿಸ್ಥಿತಿಗೆ (Very Dangerous Situation) ಸಿಲುಕಲಿದೆ,” ಎಂದು ಷಿ ಜಿನ್‌ಪಿಂಗ್ ಹೇಳಿದ್ದಾರೆ. ಅಲ್ಲದೆ, ‘ತೈವಾನ್ ಸ್ವಾತಂತ್ರ್ಯ’ ಮತ್ತು ‘ತೈವಾನ್ ಜಲಸಂಧಿಯಲ್ಲಿ ಶಾಂತಿ’ ಇವೆರಡೂ “ಬೆಂಕಿ ಮತ್ತು ನೀರಿನಂತೆ” ಎಂದಿಗೂ ಒಂದಾಗಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಆದಾಯ 11 ಕೋಟಿ, ಖರ್ಚು 60 ಕೋಟಿ ರೂ; ರಾಹುಲ್ ಗಾಂಧಿ ವಿದೇಶೀ ಪ್ರವಾಸಗಳಿಗೆ ಫಂಡಿಂಗ್ ಯಾರದು? ಬಿಜೆಪಿ ಪ್ರಶ್ನೆ

ಶತ್ರುಗಳಲ್ಲ, ಪಾಲುದಾರರಾಗೋಣ

ಜಾಗತಿಕವಾಗಿ ವ್ಯಾಪಾರ, ತಂತ್ರಜ್ಞಾನ ಮತ್ತು ಪ್ರಾದೇಶಿಕ ಭದ್ರತೆಯ ವಿಷಯದಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಟ್ರಂಪ್ ಅವರ ಎರಡು ದಿನಗಳ ಚೀನಾ ಪ್ರವಾಸ ಆರಂಭವಾಗಿದೆ. ಮಾತುಕತೆಯ ವೇಳೆ ಷಿ ಜಿನ್‌ಪಿಂಗ್, ವಿಶ್ವದ ಎರಡು ದೊಡ್ಡ ಆರ್ಥಿಕತೆಗಳು ಪರಸ್ಪರ ಸಂಘರ್ಷಕ್ಕಿಳಿಯುವ ಬದಲು ಸಹಕರಿಸಬೇಕು ಮತ್ತು “ಶತ್ರುಗಳಾಗುವ ಬದಲು ಪಾಲುದಾರರಾಗಬೇಕು” ಎಂದು ಕರೆ ನೀಡಿದರು. “ಇಡೀ ಜಗತ್ತು ನಮ್ಮ ಭೇಟಿಯನ್ನು ಗಮನಿಸುತ್ತಿದೆ. ಜಗತ್ತು ಈಗ ಹೊಸ ಕವಲುದಾರಿಯಲ್ಲಿದೆ,” ಎಂದು ಅವರು ತಿಳಿಸಿದರು.

‘ನೀವು ನನ್ನ ಸ್ನೇಹಿತ’ ಎಂದ ಟ್ರಂಪ್

ಇದಕ್ಕೂ ಮುನ್ನ ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅದ್ಧೂರಿ ಕೆಂಪು ಹಾಸಿನ ಸ್ವಾಗತ ಕೋರಲಾಯಿತು. ಚೀನಾ ಅಧ್ಯಕ್ಷರನ್ನು ಶ್ಲಾಘಿಸಿದ ಟ್ರಂಪ್, ಜಿನ್‌ಪಿಂಗ್ ಅವರನ್ನು ‘ಮಹಾನ್ ನಾಯಕ’ ಮತ್ತು ‘ಆಪ್ತ ಸ್ನೇಹಿತ’ ಎಂದು ಕರೆದರು. “ನಿಮ್ಮ ಸ್ನೇಹಿತನಾಗಿರುವುದು ನನಗೆ ಸಂದ ಗೌರವ. ಅಮೆರಿಕ ಮತ್ತು ಚೀನಾ ಭವಿಷ್ಯದಲ್ಲಿ ಒಟ್ಟಿಗೆ ಅದ್ಭುತ ದಿನಗಳನ್ನು ಕಾಣಲಿವೆ ಮತ್ತು ನಮ್ಮ ಸಂಬಂಧ ಎಂದಿಗಿಂತಲೂ ಉತ್ತಮವಾಗಲಿದೆ,” ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆಮದು ಮಾಡಿಕೊಳ್ಳದೆ ಚಿನ್ನದ ಬೇಡಿಕೆ ಈಡೇರಿಸುವ ಉಪಾಯಗಳನ್ನು ಮುಂದಿಟ್ಟ ಆಭರಣ ಉದ್ಯಮಿಗಳು

ತೈವಾನ್ ಅನ್ನು ಚೀನಾ ತನ್ನದೇ ಭೂಪ್ರದೇಶ ಎಂದು ಪ್ರತಿಪಾದಿಸುತ್ತಾ ಬಂದಿದೆ. ಎರಡೂ ದೇಶಗಳ ಮಧ್ಯೆ ಸಮಾನ ಇತಿಹಾಸ, ಸಂಸ್ಕೃತಿ ಇದೆ. ಚೀನಾ ಕಮ್ಯೂನಿಸ್ಟ್ ದೇಶವಾದರೆ, ತೈವಾನ್ ಪ್ರಜಾತಂತ್ರ ಆಡಳಿತ ವ್ಯವಸ್ಥೆ ಹೊಂದಿದೆ. ತಾನು ಚೀನಾದ ಭಾಗವಲ್ಲ ಎಂಬುದು ತೈವಾನ್​ನ ನಿಲುವು. ತೈವಾನ್ ಸ್ವತಂತ್ರವಾಗಿ ಉಳಿಯಲು ಅಮೆರಿಕದ ನೆರವು ನಿರಂತರವಾಗಿ ಇದೆ. ಇದು ಚೀನಾದ ಅಸಮಾಧಾನಕ್ಕೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜಿನ್‌ಪಿಂಗ್ ಅವರ ಈ ಹೇಳಿಕೆ ಜಾಗತಿಕ ರಾಜಕಾರಣದಲ್ಲಿ ಭಾರಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಾಯಂಡಹಳ್ಳಿ ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅನಾಹುತ: ಸುತ್ತಮುತ್ತ ಕವಿದ ದಟ್ಟ ಹೊಗೆ – Kannada News | Fire Breaks Out at Plastic Godown in Nayandahalli, Bengaluru

ಬೆಂಗಳೂರು, ಮೇ 14: ನಾಯಂಡಹಳ್ಳಿ ಪ್ಲಾಸ್ಟಿಕ್ ಗೋದಾಮಿನಲ್ಲಿ ಭೀಕರ ಅಗ್ನಿ ಅನಾಹುತ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟ ಪ್ರಸಂಗ ನಡೆದಿದೆ. ವೃಷಭಾವತಿ ನದಿ ಪಕ್ಕದಲ್ಲಿರುವ ಈ ಗೋದಾಮಿನಲ್ಲಿ ಟನ್‌ಗಟ್ಟಲೆ ಸ್ಕ್ರಾಪ್ ಪ್ಲಾಸ್ಟಿಕ್, ಹಳೆಯ ಪೈಪ್‌ಗಳು ಹಾಗೂ ಇತರೆ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಇದು ಬೆಂಕಿ ಹರಡಲು ಮುಖ್ಯ ಕಾರಣವಾಗಿದೆ. ಪ್ಲಾಸ್ಟಿಕ್‌ನಿಂದಾಗಿ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ದಟ್ಟ ಹೊಗೆ ಇಡೀ ನಾಯಂಡಹಳ್ಳಿ ಪ್ರದೇಶವನ್ನು ಆವರಿಸಿತ್ತು. ಈ ಅಗ್ನಿ ಅನಾಹುತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕಿಡಿಗೇಡಿಗಳ ಕೃತ್ಯದಿಂದ ಅಥವಾ ಬಿಸಿಲಿನ ತಾಪಕ್ಕೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರಧಾನಿ ಮೋದಿ ರೀತಿ ಬೆಂಗಾವಲು ಪಡೆ ವಾಹನಗಳನ್ನು ಕಡಿಮೆ ಮಾಡುತ್ತಾರಾ ಸಿಎಂ? ಸಿದ್ದರಾಮಯ್ಯ ಹೇಳಿದ್ದೇನು ನೋಡಿ – Kannada News | CM Siddaramaiah on Reducing Convoy Vehicles: Permanent Solution Needed for Fuel Crisis, Not Temporary Measures

ಮೈಸೂರು, ಮೇ 14: ಇಂಧನ ಮಿತ ವ್ಯಯಕ್ಕೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಖುದ್ದು ತಾವೇ ಬೆಂಗಾವಲು ಪಡೆ ವಾಹನಗಳನ್ನು ಕಡಿಮೆ ಮಾಡಿದ್ದಾರೆ. ಅದರಂತೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಕೂಡ ಬೆಂಗಾವಲು ಪಡೆಗಳ ವಾಹನ ಕಡಿಮೆ ಮಾಡುತ್ತಾರಾ? ಈ ಪ್ರಶ್ನೆಗೆ ಖುದ್ದು ಸಿಎಂ ಅವರೇ ಉತ್ತರಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿಯವರು ಕೈಗೊಂಡಿರುವ ನಿರ್ಧಾರ ತಾತ್ಕಾಲಿಕ ಕ್ರಮವಷ್ಟೇ. ಅದರ ಬದಲು ಬೇರೆ ದೇಶಗಳೊಂದಿಗೆ ಸಮಾಲೋಚಿಸಿ ಇಂಧನ ಬಿಕ್ಕಟ್ಟು ಬಗೆಹರಿಸಲು ಶಾಶ್ವತ ಕ್ರಮ ಅಗತ್ಯ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ; ವಿಡಿಯೋ ವೈರಲ್ – Kannada News | Viral Video: Burqa Woman’s Chili Powder Robbery Bid at Jewelry Store Caught on CCTV

ಬುರ್ಖಾ ಧರಿಸಿ ಗ್ರಾಹಕಿಯಂತೆ ಚಿನ್ನದ ಅಂಗಡಿಗೆ ನುಗ್ಗಿದ ಮಹಿಳೆಯೊಬ್ಬಳು, ಮಾಲೀಕ ಮತ್ತು ಸಿಬ್ಬಂದಿಯ ಕಣ್ಣಿಗೆ ಖಾರಪುಡಿ ಎರಚಿ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ. ಆಭರಣಗಳನ್ನು ನೋಡುವ ನೆಪದಲ್ಲಿ ಹೊಂಚು ಹಾಕಿದ್ದ ಈ ಕಿರಾತಕಿ, ತನ್ನ ಬಳಿಯಿದ್ದ ಖಾರದಪುಡಿಯನ್ನು ಅವರ ಕಣ್ಣಿಗೆ ಎಸೆದು ಆಭರಣಗಳನ್ನು ಎಗರಿಸಲು ಯತ್ನಿಸಿದ್ದಾಳೆ. ಈ ಇಡೀ ದರೋಡೆ ಯತ್ನದ ದೃಶ್ಯಾವಳಿಗಳು ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಪೊಲೀಸರು ಸಿಸಿಟಿವಿ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಅರೆಬರೆ ಬಟ್ಟೆ ತೊಟ್ಟು ರೀಲ್ಸ್​ ಮಾಡುತ್ತಿದ್ದ ಹೆಂಡತಿ; ಅವಮಾನ ತಾಳಲಾರದೇ ಆಕೆಗೆ ‘ಪಿಂಡದಾನ’ ಮಾಡಿದ ಗಂಡ!

 

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪುದುಚೆರಿ ಪ್ರಯಾಣದ ವೇಳೆ ಬಸ್​​ನಲ್ಲಿ ಗಿಳಿ ಕಳವು: ಪೊಲೀಸರಿಗೆ ಬೆಂಗಳೂರು ಮಹಿಳೆಯಿಂದ ದೂರು – Kannada News | Bengaluru Woman’s Pet Parakeet Stolen on Puducherry Bus Journey: Complaint Filed

ಬೆಂಗಳೂರು, ಮೇ 14: ಆನೇಕಲ್​​ನಿಂದ ಪುದುಚೆರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತನ್ನ ಸಾಕು ಗಿಳಿಯನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ 48 ವರ್ಷದ ಮಹಿಳೆ ಪೊಲೀಸರ ಮೊರೆ ಹೋಗಿರುವ ಘಟನೆ ನಡೆದಿದೆ. ಚಂದಾಪುರದ VBHC ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಖಾಸಗಿ ಕಂಪನಿಯ ಉದ್ಯೋಗಿ ಎಂ. ಲಿಜಿ ಅವರು ತಮ್ಮ ಅಸ್ವಸ್ಥ ತಂದೆಯನ್ನು ಭೇಟಿಯಾಗಲುಪುದುಚೆರಿಗೆ ತೆರಳುತ್ತಿದ್ದ ವೇಳೆ ಅವರ ಸಾಕು ಗಿಳಿ ಕಳುವಾಗಿದ್ದು, ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಮಾಹಿತಿಯ ಪ್ರಕಾರ ಆನೇಕಲ್​​ ರಸ್ತೆಯಲ್ಲಿ ಅವರು ಬಸ್​​ ಹತ್ತಿದ್ದು, ತಮ್ಮ ಸಾಕು ಗಿಳಿಯನ್ನು ಚಾಲಕನ ಕ್ಯಾಬಿನ್​​ ಸಮೀಪ ಪಂಜರದಲ್ಲಿ ಇಟ್ಟಿದ್ದರು. ಆದರೆ ಆನೇಕಲ್​​ ಮತ್ತು ಅತ್ತಿಬೆಲೆ ಟೋಲ್​​ ಪ್ಲಾಜಾಗಳ ನಡುವೆ ಯಾರೋ ಪಂಜರದ ಸಮೇತ ಗಿಳಿಯನ್ನು ಕದ್ದು ಎಸ್ಕೇಪ್​​ ಆಗಿದ್ದಾರೆ ಎನ್ನಲಾಗಿದೆ. ಅತ್ತಿಬೆಲೆ ಟೋಲ್ ಬಳಿ ಬಸ್ ತಲುಪಿದಾಗ ಗಿಳಿಯನ್ನು ನೋಡಲು ಲಿಜಿ ಅವರು ತೆರಳಿದ್ದ ವೇಳೆ ಘಟನೆ ಬೆಳಕಿಗೆ ಬಂದಿದೆ. ಕ್ಷಣ ಚಾಲಕ ಮತ್ತು ಬಸ್ ಸಿಬ್ಬಂದಿಗೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಬಸ್​​ ಅನ್ನು ಸಂಪೂರ್ಣವಾಗಿ ಪರಿಶೀಲಿಸಿದರೂ ಗಿಳಿ ಪತ್ತೆಯಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು, ಸಿಸಿಟಿವಿಲಿ ಸೆರೆಯಾಯ್ತು ಖದೀಮರ ಕೈಚಳಕ

ತುರ್ತು ಪರಿಸ್ಥಿತಿಯಿಂದ ಪ್ರಯಾಣ ಮುಂದುವರಿಸಿದ್ದ ಮಹಿಳೆ, ಬಸ್ ಸಿಬ್ಬಂದಿಯಿಂದ ಠಾಣೆಯ ಸಂಪರ್ಕ ಸಂಖ್ಯೆ ಪಡೆದು ಬಳಿಕ ವಾಟ್ಸಾಪ್ ಮೂಲಕ ಅತ್ತಿಬೆಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಸ್‌ನಲ್ಲಿದ್ದ ಸಹ ಪ್ರಯಾಣಿಕರು ಗಿಳಿಯನ್ನು ಕದ್ದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಶಂಕಿತನ ಬಗ್ಗೆ ಕೆಲವು ಮಹತ್ವದ ಸುಳಿವುಗಳು ಲಭ್ಯವಾಗಿವೆ. ಆದರೆ ಆರೋಪಿಯು ಯಾವ ಸ್ಥಳದಲ್ಲಿ ಬಸ್‌ನಿಂದ ಇಳಿದಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆನೇಕಲ್ ಮತ್ತು ಅತ್ತಿಬೆಲೆ ನಡುವೆ ಹಲವು ಕಡೆ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗಿದೆ. ಹೀಗಾಗಿ ಬಸ್ ನಿರ್ವಹಣಾ ಸಂಸ್ಥೆ ನೀಡಿದ ಪ್ರಯಾಣಿಕರ ವಿವರಗಳನ್ನು ಪರಿಶೀಲಿಸಲಾಗುತ್ತಿದ್ದು, ಬಸ್‌ನ ಸಿಸಿಟಿವಿ ದೃಶ್ಯಾವಳಿಯನ್ನೂ ವೀಕ್ಷಿಸಲಾಗುತ್ತಿದೆ. ಮನೆಯಲ್ಲಿ ಗಿಳಿಯನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಅದನ್ನು ಜೊತೆಗೆ ಕರೆದುಕೊಂಡು ಹೋಗಿದ್ದಾಗಿ ಲಿಜಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿಳೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ಲೇಆಫ್​ಗೇರಿಲ್ಲ… ಹೀಗಾದ್ರೆ RCB ಟೂರ್ನಿಯಿಂದಲೇ ಔಟ್..! – Kannada News | How RCB Can Be Eliminated from IPL 2026

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ರಚಂಡ ಪ್ರದರ್ಶನ ನೀಡಿದೆ. ಈ ಪ್ರದರ್ಶನದೊಂದಿಗೆ ಆರ್​ಸಿಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಈ ಅಗ್ರಸ್ಥಾನದ ಹೊರತಾಗಿಯೂ ಆರ್​ಸಿಬಿ ತಂಡದ ಪ್ಲೇಆಫ್ ಪ್ರವೇಶ ಇನ್ನೂ ಸಹ ಖಾತರಿಯಾಗಿಲ್ಲ!

ಏಕೆಂದರೆ ಪ್ರಸ್ತುತ ಅಂಕ ಪಟ್ಟಿಯಲ್ಲಿರುವ 7 ತಂಡಗಳಿಗೆ 16+ ಅಂಕಗಳನ್ನು ಗಳಿಸಲು ಅವಕಾಶವಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಆರ್​ಸಿಬಿ ಎಡವಿದರೆ ಟೂರ್ನಿಯಿಂದಲೇ ಹೊರಬೀಳಬಹುದು. ಹೀಗೆ ಆಘಾತಕಾರಿಯಾಗಿ ಹೊರಬೀಳಲು ಕಾರಣವಾಗುವ ಸಮೀಕರಣಗಳು ಈ ಕೆಳಗಿನಂತಿವೆ…

ಗುಜರಾತ್ ಟೈಟಾನ್ಸ್: ಗುಜರಾತ್ ಟೈಟಾನ್ಸ್ ತಂಡವು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಶುಭ್​ಮನ್ ಗಿಲ್ ಪಡೆಯು ಮುಂದಿನ ಎರಡು ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ ಒಟ್ಟು 20 ಅಂಕಗಳೊಂದಿಗೆ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ. ಇಲ್ಲಿ ಗುಜರಾತ್ ಟೈಟಾನ್ಸ್ ತಂಡದ ಮುಂದಿನ ಮ್ಯಾಚ್​ಗಳು ಸಿಎಸ್​ಕೆ ಮತ್ತು ಕೆಕೆಆರ್ ವಿರುದ್ಧ. ಈ ಗೆಲುವುಗಳೊಂದಿಗೆ ಗುಜರಾತ್ ಟೈಟಾನ್ಸ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿ ಮೊದಲ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಬಹುದು.

ಸನ್​ರೈಸರ್ಸ್ ಹೈದರಾಬಾದ್: ಪ್ರಸ್ತುತ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಸನ್​ರೈಸರ್ಸ್ ಹೈದರಾಬಾದ್ ಒಟ್ಟು 14 ಅಂಕಗಳನ್ನು ಹೊಂದಿದೆ. ಮುಂದಿನ ಎರಡು ಮ್ಯಾಚ್​ಗಳಲ್ಲಿ ಎಸ್​ಆರ್​ಹೆಚ್ ಗೆದ್ದರೆ ಒಟ್ಟು 18 ಅಂಕಗಳನ್ನು ಪಡೆಯಲಿದೆ. ಇಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಎದುರಾಳಿಗಳು ಸಿಎಸ್​ಕೆ ಮತ್ತು ಆರ್​ಸಿಬಿ. ಎಸ್​ಆರ್​ಹೆಚ್ ವಿರುದ್ಧ ಆರ್​ಸಿಬಿ ಸೋತರೆ 16 ಅಂಕಗಳಲ್ಲೇ ಉಳಿಯಲಿದೆ. ಇದರಿಂದ ಸನ್​ರೈಸರ್ಸ್ ಹೈದರಾಬಾದ್ ತಂಡವು ಉತ್ತಮ ನೆಟ್ ರನ್ ಹಾಗೂ 16 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಲಿದೆ.

ಪಂಜಾಬ್ ಕಿಂಗ್ಸ್​: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಎದುರಾಳಿ ಪಂಜಾಬ್ ಕಿಂಗ್ಸ್​. ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ವಿರುದ್ಧ ಗೆದ್ದರೆ ಶ್ರೇಯಸ್ ಅಯ್ಯರ್ ಪಡೆ ಗೆದ್ದರೆ ಒಟ್ಟು 17 ಅಂಕಗಳನ್ನು ಪಡೆಯಲಿದೆ. ಇದರಿಂದಾಗಿ ಆರ್​ಸಿಬಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಇನ್ನು ಕೊನೆಯ ಮ್ಯಾಚ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲ್ಲುವ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಒಟ್ಟು 19 ಅಂಕಗಳನ್ನು ಪಡೆಯಲು ಅವಕಾಶವಿದೆ.

ರಾಜಸ್ಥಾನ್ ರಾಯಲ್ಸ್: ರಿಯಾನ್ ಪರಾಗ್ ಮುಂದಾಳತ್ವದ ರಾಜಸ್ಥಾನ್ ರಾಯಲ್ಸ್​ ಒಟ್ಟು 12 ಅಂಕಗಳನ್ನು ಹೊಂದಿದೆ. ಅಲ್ಲದೆ ಇನ್ನೂ ಮೂರು ಮ್ಯಾಚ್​ಗಳಿವೆ. ಈ ಮೂರು ಪಂದ್ಯಗಳಲ್ಲಿ ಆರ್​ಆರ್​ ತಂಡವು ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಎದುರಿಸಲಿದೆ. ಈ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಒಟ್ಟು 18 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಬಹುದು.

ಅಂದರೆ ಗುಜರಾತ್ ಟೈಟಾನ್ಸ್ ತಂಡವು ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಲಿದೆ. ಇನ್ನು ಸನ್​ರೈಸರ್ಸ್ ಹೈದರಾಬಾದ್ ತಂಡವು ಮುಂದಿನ 2 ಪಂದ್ಯಗಳಲ್ಲಿ ಗೆದ್ದರೆ ಒಟ್ಟು 18 ಅಂಕಗಳನ್ನು ಪಡೆಯಲಿದೆ. ಅತ್ತ ಪಂಜಾಬ್ ಕಿಂಗ್ಸ್ ಮುಂದಿನ ಮೂರು ಮ್ಯಾಚ್​ಗಳಲ್ಲೂ ಜಯ ಸಾಧಿಸಿದರೆ 19 ಅಂಕಗಳನ್ನು ತನ್ನದಾಗಿಸಿಕೊಳ್ಳಲಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ತಂಡವು ಮುಂದಿನ ಮೂರು ಪಂದ್ಯಗಳ ಮೂಲಕ ಒಟ್ಟು 18 ಅಂಕಗಳನ್ನು ಪಡೆಯಲು ಅವಕಾಶವಿದೆ.

ಇಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಕೊನೆಯ ಎರಡು ಪಂದ್ಯಗಳನ್ನಾಡಲಿರುವುದು ಪ್ಲೇಆಫ್ ರೇಸ್​ನಲ್ಲಿರುವ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ಎಂಬುದು ಉಲ್ಲೇಖಾರ್ಹ. ಈ ಎರಡು ಮ್ಯಾಚ್​ಗಳಲ್ಲಿ ಆರ್​ಸಿಬಿ ಸೋತರೆ 16 ಅಂಕಗಳಲ್ಲೇ ಉಳಿಯಲಿದೆ. ಅದೇ ವೇಳೆ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಮುಂದಿನ 2 ಗೆಲುವುಗಳೊಂದಿಗೆ 18 ಅಂಕಗಳನ್ನು ಪಡೆಯಲು ಅವಕಾಶವಿದೆ. ಇತ್ತ ಪಂಜಾಬ್ ಕಿಂಗ್ಸ್ ತಂಡವು ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಅಥವಾ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದರೆ 17 ಅಂಕಗಳನ್ನು ಪಡೆಯಬಹುದು. ಹಾಗೆಯೇ ರಾಜಸ್ಥಾನ್ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ವಿರುದ್ಧ ಗೆದ್ದರೆ 18 ಅಂಕಗಳನ್ನು ಪಡೆಯಲಿದೆ.

ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಮುಂದಿನ ಎರಡು ಮ್ಯಾಚ್​ಗಳು ನಿರ್ಣಾಯಕ. ಏಕೆಂದರೆ ಆರ್​ಸಿಬಿ ತಂಡವು ತನ್ನ ಕೊನೆಯ ಎರಡು ಲೀಗ್ ಪಂದ್ಯಗಳನ್ನು ಆಡಲಿರುವುದು ಪ್ಲೇಆಫ್ ರೇಸ್​ನಲ್ಲಿರುವ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ. ಈ ಎರಡು ತಂಡಗಳು ಜಯ ಸಾಧಿಸಿದರೆ ಆರ್​ಸಿಬಿ ತಂಡದ ಪಾಯಿಂಟ್ಸ್ 16 ರಲ್ಲೇ ಉಳಿಯಲಿದೆ. ಅತ್ತ ಪಂಜಾಬ್ ಕಿಂಗ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್​ ಮುಂದಿನ ಎಲ್ಲಾ ಮ್ಯಾಚ್​ಗಳನ್ನು ಗೆದ್ದರೆ, ರಾಜಸ್ಥಾನ್ ರಾಯಲ್ಸ್ ಮುಂಬರುವ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಆರ್​ಸಿಬಿ ತಂಡ ಮೊದಲ ಸುತ್ತಿನಲ್ಲೇ ಹೊರಬೀಳಲಿದೆ.

Published On – 2:21 pm, Thu, 14 May 26

Source link

ಅಜ್ಜನ ಕ್ಷೇತ್ರದಿಂದ ಗೆದ್ದು ಅವರ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್​ – Kannada News | Samarth takes Oath as MLA On His grandfather Shamanur shivashankarappa Name

ಬೆಂಗಳೂರು, (ಮೇ 14): ಬಾಗಲಕೋಟೆ (Bagalkot) ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ ಗೆದ್ದಿರುವ ಕಾಂಗ್ರೆಸ್​​ನ (Congress) ಉಮೇಶ್ ಮೇಟಿ ಮತ್ತು ದಾವಣಗೆರೆ (Davanagere) ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸಮರ್ಥ್ ಮಲ್ಲಿಕಾರ್ಜುನ್ ಇಂದು(ಮೇ 14) ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಮೇಶ್ ಮೇಟಿ ಮತ್ತು ಸಮರ್ಥ ಮಲ್ಲಿಕಾರ್ಜುನ್ ಅವರಿಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ಇನ್ನು ಸಮರ್ಥ್​, ಮೃತ ತಮ್ಮ ಅಜ್ಜ ಶಾಮನೂರು ಶಿವಶಂಕರಪ್ಪ (Shamanur shivashankarappa) ಅವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿರುವುದು ವಿಶೇಷ. ಯಾಕಂದ್ರೆ, ದೇವರು, ರೈತರು, ಸಂವಿಧಾನದ ಹೆಸರಿನ ಮೇಲೆ ಪ್ರಮಾಣವಚನ ಸ್ವೀಕರಿಸುವುದು ನೋಡಿದ್ದೇವೆ. ಆದ್ರೆ, ಸಮರ್ಥ್ ತಮ್ಮ ತಾತನ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Virat Kohli: ವಿರಾಟ್ ಕೊಹ್ಲಿಯ 1 ಶತಕಕ್ಕೆ, 11 ದಾಖಲೆಗಳು ಉಡೀಸ್! – Kannada News | Virat Kohli Century Shatters Cricket Records

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 57ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಭರ್ಜರಿ ಶತಕ ಸಿಡಿಸಿದ್ದಾರೆ. ಕೆಕೆಆರ್ ವಿರುದ್ಧದ ಈ ಶತಕದೊಂದಿಗೆ ಕಿಂಗ್ ಕೊಹ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ದಾಖಲೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

  1. ಅತಿ ಹೆಚ್ಚು ಐಪಿಎಲ್ ಶತಕಗಳು: ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದ 9ನೇ ಶತಕ ಪೂರೈಸುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಜೋಸ್ ಬಟ್ಲರ್ (7) ಮತ್ತು ಕ್ರಿಸ್ ಗೇಲ್ (6) ನಂತರದ ಸ್ಥಾನಗಳಲ್ಲಿದ್ದಾರೆ.
  2. 14,000 ರನ್: ಟಿ20 ಕ್ರಿಕೆಟ್ ಇತಿಹಾಸದಲ್ಲಿ 14,000 ರನ್ ಗಡಿಯನ್ನು ದಾಟಿದ ವಿಶ್ವದ 6ನೇ ಮತ್ತು ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  3. ವಿಶ್ವ ದಾಖಲೆ: ಕೇವಲ 409 ಇನ್ನಿಂಗ್ಸ್‌ಗಳಲ್ಲಿ 14 ಸಾವಿರ ರನ್​ ಪೂರೈಸಿ ವಿರಾಟ್ ಕೊಹ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ (423 ಇನ್ನಿಂಗ್ಸ್) ಹೆಸರಿನಲ್ಲಿತ್ತು.
  4. ಐಪಿಎಲ್ ಪಂದ್ಯಗಳ ದಾಖಲೆ: ಇದು ವಿರಾಟ್ ಕೊಹ್ಲಿ ಆಡಿದ 279ನೇ ಐಪಿಎಲ್ ಪಂದ್ಯವಾಗಿದ್ದು, ಎಂ.ಎಸ್. ಧೋನಿ ಮತ್ತು ರೋಹಿತ್ ಶರ್ಮಾ (ತಲಾ 278 ಪಂದ್ಯ) ಅವರ ದಾಖಲೆಯನ್ನು ಮೀರಿ ಅತಿ ಹೆಚ್ಚು ಐಪಿಎಲ್ ಪಂದ್ಯ ಆಡಿದ ಆಟಗಾರ ಎನಿಸಿಕೊಂಡಿದ್ದಾರೆ.
  5. 400+ ರನ್ಸ್​: ಐಪಿಎಲ್ ಇತಿಹಾಸದಲ್ಲಿ ಬರೋಬ್ಬರಿ 12 ಸೀಸನ್‌ಗಳಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ಕಿಂಗ್ ಕೊಹ್ಲಿ ಬರೆದಿದ್ದಾರೆ.
  6. ಪಂದ್ಯ ಶ್ರೇಷ್ಠ ದಾಖಲೆ: ಐಪಿಎಲ್‌ನಲ್ಲಿ ತಮ್ಮ 21ನೇ ಪಂದ್ಯ ಶ್ರೇಷ್ಠ (POTM) ಪ್ರಶಸ್ತಿ ಗೆಲ್ಲುವ ಮೂಲಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ.
  7. ಚೇಸ್ ಮಾಸ್ಟರ್: ಐಪಿಎಲ್​ನ ಸೆಕೆಂಡ್ ಇನಿಂಗ್ಸ್​ನಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ 3ನೇ ಶತಕ ಇದಾಗಿದ್ದು, ಈ ಮೂಲಕ ಜೋಸ್ ಬಟ್ಲರ್ ಅವರ ದಾಖಲೆಯನ್ನು ಸಮಗಟ್ಟಿದ್ದಾರೆ.
  8. 10 ಟಿ20 ಶತಕ: ಒಟ್ಟಾರೆ ಟಿ20 ಮಾದರಿಯಲ್ಲಿ ಇದು ವಿರಾಟ್ ಕೊಹ್ಲಿಯ 10 ಸೆಂಚುರಿ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎರಡಂಕಿ ಸೆಂಚುರಿ ಸಿಡಿಸಿದ ಏಕೈಕ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
  9.  ಅತಿ ಹೆಚ್ಚು 50+ ಸ್ಕೋರ್: ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ವಿರುದ್ಧ ಐಪಿಎಲ್‌ನಲ್ಲಿ 9ನೇ ಬಾರಿಗೆ 50ಕ್ಕೂ ಹೆಚ್ಚು ರನ್ ಗಳಿಸಿ ರೋಹಿತ್ ಶರ್ಮಾ ಹಾಗೂ ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
  10. ಗರಿಷ್ಠ ವೈಯಕ್ತಿಕ ಸ್ಕೋರ್: ಈ ಪಂದ್ಯದಲ್ಲಿ ಅಜೇಯ 105 ರನ್ ಬಾರಿಸಿ ರಾಯ್‌ಪುರದ ಮೈದಾನದಲ್ಲಿ ಟಿ20 ಪಂದ್ಯವೊಂದರಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್​ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.
  11. ಡಕ್ ಟು ಸೆಂಚುರಿ: ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ (0) ಔಟಾದ ಬೆನ್ನಲ್ಲೇ ಮುಂದಿನ ಪಂದ್ಯದಲ್ಲಿ ಶತಕ ಬಾರಿಸಿದ ಐಪಿಎಲ್‌ನ ಮೊದಲ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ವಿರಾಟ್ ಕೊಹ್ಲಿ ಮುಡಿಗೇರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮೈದಾನದಲ್ಲಿ ದೇವದತ್ ಪಡಿಕ್ಕಲ್​ಗೆ ಸಿಕ್ಕಿದ ಚಿನ್ನದ ಸರ ಯಾರದ್ದು ಗೊತ್ತಾ?

ಒಟ್ಟಾರೆಯಾಗಿ ಹೇಳುವುದಾದರೆ, ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರೂ, ಕಂ‌ಬ್ಯಾಕ್ ಮಾಡಿ ಒಂದೇ ಇನ್ನಿಂಗ್ಸ್‌ನಲ್ಲಿ ವಿಶ್ವದ ಘಟಾನುಘಟಿ ದಾಖಲೆಗಳನ್ನು ಧೂಳೀಪಟ ಮಾಡಿರುವುದು ‘ಕಿಂಗ್ ಕೊಹ್ಲಿ’ ಸಾಮರ್ಥ್ಯಕ್ಕೆ ಸಾಕ್ಷಿ. ಈ ಐತಿಹಾಸಿಕ ಶತಕ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಉಳಿಯುವುದರಲ್ಲಿ ಅನುಮಾನವಿಲ್ಲ.

Published On – 2:04 pm, Thu, 14 May 26

Source link

Exit mobile version