Headlines

ರಾಜಕೀಯ ನಾಯಕನ ಮನೆಗೆ ಬೆಂಕಿ ಇಟ್ಟ ದುರುಳರು; 7 ವರ್ಷದ ಬಾಲಕಿ ಸಜೀವ ದಹನ; ಮೂವರಿಗೆ ಸುಟ್ಟಗಾಯ – Kannada News | Bangladesh violence, mob torches political leader’s house, 7 yr old daughter burnt alive

ಢಾಕಾ, ಡಿಸೆಂಬರ್ 21: ಷರೀಫ್ ಉಸ್ಮಾನ್ ಹದಿ ಹತ್ಯೆ ಬಳಿಕ ಬಾಂಗ್ಲಾದೇಶದಾದ್ಯಂತ ಉದ್ಭವಿಸಿರುವ ಹಿಂಸಾಚಾರ ಹಲವರನ್ನು ಬಲಿತೆಗೆದುಕೊಂಡಿದೆ. ಪ್ರತಿಭಟನಾಕಾರರ ಗುಂಪೊಂದು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿಯ ಮುಖಂಡ ಬಿಲಾನ್ ಹುಸೇನ್ (Belal Hossain) ಅವರ ಮನೆಗೆ ಕೊಳ್ಳಿ ಇಟ್ಟಿದ್ದಾರೆ. ಲಕ್ಷ್ಮೀಪುರ್​ನಲ್ಲಿರುವ ಅವರ ಮನೆಗೆ ಬೆಂಕಿ ಇಟ್ಟ ಪರಿಣಾಮ, ಮನೆಯೊಳಗಿದ್ದ 7 ವರ್ಷದ ಬಾಲಕಿಯೊಬ್ಬಳು ಸಜೀವವಾಗಿ ಸುಟ್ಟುಹೋಗಿದ್ದಾಳೆ. ಬಿಲಾಲ್ ಹುಸೇನ್ ಹಾಗೂ ಅವರ ಇನ್ನಿಬ್ಬರು ಮಕ್ಕಳು ಪಾರಾದರೂ ಸುಟ್ಟ ಗಾಯಗಳಾಗಿವೆ. ಶನಿವಾರ ಬೆಳಗಿನ ಜಾವ ಈ ಘಟನೆ ನಡೆದಿರುವುದು ತಿಳಿದುಬಂದಿದೆ….

Read More

ಬಿಗ್​​ಬಾಸ್ ಕನ್ನಡ 12: ವೋಟಿಂಗ್ ಇಲ್ಲದೆ ಇಬ್ಬರು ಹೊರಕ್ಕೆ: ಯಾರದು? – Kannada News | Chaithra Kundapur and Rajath came out of Bigg Boss Kannada house

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss) ಮನೆಯಲ್ಲಿ ಕಳೆದ ವಾರ ಎಲಿಮಿನೇಷನ್ ನಡೆದಿಲ್ಲ. ಎಲಿಮಿನೇಷನ್ ಹೆಸರಲ್ಲಿ ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಹೊರಗೆ ಕಳಿಸಿದ್ದ ಬಿಗ್​​ಬಾಸ್ ಅವರಿಬ್ಬರನ್ನೂ ಸೀಕ್ರೆಟ್ ರೂಂನಲ್ಲಿ ಇರಿಸಿ, ಅವರನ್ನೂ ಸಹ ಟಾಸ್ಕ್​​ನ ಒಂದು ಭಾಗವಾಗಿಸಿದ್ದರು. ನಿನ್ನೆ (ಶನಿವಾರ) ಎಪಿಸೋಡ್​​ನಲ್ಲಿ ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಮರಳಿ ಮನೆಗೆ ಕರೆಸಿಕೊಂಡ ಬಿಗ್​​ಬಾಸ್ ಇದೀಗ ಈ ವಾರವೂ ಯಾವುದೇ ಎಲಿಮಿನೇಷನ್ ಮಾಡಿಲ್ಲ. ಬದಲಿಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದಿದ್ದವರನ್ನು ಮನೆಯಿಂದ ಹೊರಗೆ ಕಳಿಸಿದ್ದಾರೆ….

Read More

ಆ ನಿಮ್ಮ ದೇವರಿಗಿಂತ ಮೋದಿಯೇ ಉತ್ತಮ: ಮುಫ್ತಿ ಷಮಾಯಿಲ್ ನದ್ವಿಗೆ ಕುಟುಕಿದ ಜಾವೇದ್ ಅಖ್ತರ್ – Kannada News | Javed Akhtar and Mufti Shamail Nadwi debate on existence of The God

ನವದೆಹಲಿ, ಡಿಸೆಂಬರ್ 21: ಜಗತ್ತಿನ ಎಲ್ಲಾ ಧರ್ಮಗಳನ್ನು ಯಾವುದೇ ಭೇದವಿಲ್ಲದೇ ಕುಟುಕುವ ಬಾಲಿವುಡ್ ಚಿತ್ರ ಸಾಹಿತಿ, ಕವಿ ಹಾಗೂ ವಿಚಾರವಂತರಾದ ಜಾವೇದ್ ಅಖ್ತರ್ (Javed Akhtar), ಮತ್ತೊಮ್ಮೆ ದೇವರ ಅಸ್ತಿತ್ವವನ್ನು ಪ್ರಶ್ನೆ ಮಾಡಿದ್ದಾರೆ. ದಿ ಲಲ್ಲನ್​ಟಾಪ್ ಎನ್ನುವ ಯೂಟ್ಯೂಬ್ ಪೋಡ್​ಕ್ಯಾಸ್ಟ್​ನಲ್ಲಿ ಇಸ್ಲಾಮೀ ವಿದ್ವಾಂಸ ಮುಫ್ತಿ ಷಮಾಯಿಲ್ ನದ್ವಿ (Mufti Shamail Nadwi) ಮತ್ತು ಜಾವೇದ್ ಅಖ್ತರ್ ನಡುವೆ ದೇವರ ಅಸ್ತಿತ್ವ ವಿಚಾರ ಕುರಿತು ನಡೆದ ಚರ್ಚೆ ಸಾಕಷ್ಟು ಪ್ರತಿಕ್ರಿಯೆ ಪಡೆಯುತ್ತಿದೆ. ಈ ವೇಳೆ, ಅಖ್ತರ್ ಅವರು ಪ್ಯಾಲೆಸ್ಟೀನ್…

Read More

ಬಿಗ್​​ಬಾಸ್: ಕೊನೆಯಲ್ಲಿ ಕೈಕೊಟ್ಟ ಅದೃಷ್ಟ, ರನ್ನರ್ ಅಪ್ ಆದ ಕನ್ನಡತಿ ತನುಜಾ – Kannada News | Bigg Boss Telugu Tanuja Puttaswamy became runner up, Kalyan is winner

ತೆಲುಗು ಬಿಗ್​​ಬಾಸ್ (Bigg Boss) ಫಿನಾಲೆ ಇಂದು (ಡಿಸೆಂಬರ್ 21) ನಡೆದಿದೆ. ಬರೋಬ್ಬರಿ 106 ದಿನಗಳ ಶೋ ಇದಾಗಿದ್ದು, ಫಿನಾಲೆಗೆ ಕರ್ನಾಟಕದ ಇಬ್ಬರು ಸ್ಪರ್ಧಿಯರು ಬಂದಿದ್ದರು. ಈ ಕಾರಣಕ್ಕೆ ಈ ಬಾರಿಯ ತೆಲುಗು ಬಿಗ್​​ಬಾಸ್ ಗಮನ ಸೆಳೆದಿತ್ತು. ನಟಿ ಸಂಜನಾ ಗಲ್ರಾನಿ ಮತ್ತು ಕನ್ನಡ ಸಿನಿಮಾ ಮೂಲಕ ನಟನೆ ಆರಂಭಿಸಿದ ಈಗ ತೆಲುಗು ಧಾರಾವಾಹಿಗಳಲ್ಲಿ ಮಿಂಚುತ್ತಿರುವ ಕರ್ನಾಟಕದ ಹುಡುಗಿ ತನುಜಾ ಪುಟ್ಟಸ್ವಾಮಿ ಇಬ್ಬರೂ ಸಹ ತೆಲುಗು ಬಿಗ್​​ಬಾಸ್ ಫಿನಾಲೆಗೆ ಬಂದಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರಿಗೂ ಅದೃಷ್ಟ…

Read More

IND-W vs SL-W: ಲಂಕಾ ವಿರುದ್ಧ ಭಾರತ ಮಹಿಳಾ ಪಡೆಗೆ 8 ವಿಕೆಟ್ ಜಯ – Kannada News | India Women Dominate Sri Lanka in Vizag T20: Jemimah Rodrigues Shines

ವಿಶಾಖಪಟ್ಟಣಂನಲ್ಲಿ ನಡೆದ ಶ್ರೀಲಂಕಾ ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ಜೆಮಿಮಾ ರೊಡ್ರಿಗಸ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಭಾರತೀಯ ಮಹಿಳಾ ತಂಡವು ಶ್ರೀಲಂಕಾವನ್ನು ಏಕಪಕ್ಷೀಯವಾಗಿ ಸೋಲಿಸಿತು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಡಿದ ಶ್ರೀಲಂಕಾ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 120 ರನ್‌ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಭಾರತ ಜೆಮಿಮಾ ಅವರ ಪ್ರಬಲ ಪ್ರದರ್ಶನದ ನೆರವಿನಿಂದ 14.4 ಓವರ್‌ಗಳಲ್ಲಿ ಎರಡು…

Read More

U19 Asia Cup 2025: ಮೊಹ್ಸಿನ್ ನಖ್ವಿಗೆ ಮತ್ತೆ ಮುಖಭಂಗ; ಪದಕ ಸ್ವೀಕರಿಸದ ಟೀಂ ಇಂಡಿಯಾ – Kannada News | BCCI PCB Standoff: India Teams Decline Awards from Naqvi Amidst Trophy Row

ಸೆಪ್ಟೆಂಬರ್ 28 ರಂದು ನಡೆದಿದ್ದ ಏಷ್ಯಾಕಪ್ (Asia Cup) ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಂ ಇಂಡಿಯಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಹಾಗೂ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಕೈನಿಂದ ಟ್ರೋಫಿ ಪಡೆಯಲು ನಿರಾಕರಿಸಿತು. ಇದರ ಪರಿಣಾಮವಾಗಿ ಇದುವರೆಗೂ ಟೀಂ ಇಂಡಿಯಾಗೆ ಏಷ್ಯಾಕಪ್ ಟ್ರೋಫಿ ಸಿಕ್ಕಿಲ್ಲ. ಈಗಲೂ ನಖ್ವಿ ಹಾಗೂ ಬಿಸಿಸಿಐ ನಡುವೆ ಈ ಬಗ್ಗೆ ಪ್ರತಿಷ್ಠಯೆ ಹೋರಾಟ ಮುಂದುವರೆದಿದೆ. ಇದೀಗ ಅಂಡರ್-19 ಏಷ್ಯಾಕಪ್‌ನಲ್ಲೂ (U19 Asia Cup) ಭಾರತದ…

Read More

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್ ​ ಲಕ್ಷ್ಮೀ ಬರ್ತಾಳೆ

ಬೆಂಗಳೂರು, (ಡಿಸೆಂಬರ್ 21): ವಿಪಕ್ಷ ಬಿಜೆಪಿ-ಜೆಡಿಎಸ್‌ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಗೃಹಲಕ್ಷ್ಮಿ ಯೋಜನೆ 24ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರ ಮುಂದಾಗಿದೆ. ಬರುವ ಶನಿವಾರದೊಳಗೆ 24ನೇ ಕಂತಿನ ದುಡ್ಡು ಫಲಾನುಭವಿಗಳ ಖಾತೆಗೆ ಸೇರಲಿ.ಇದು ಸಹಜವಾಗಿಯೇ ಫಲಾನುಭವಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಪಂಚ ಗ್ಯಾರಂಟಿಯಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಗ್ರಹಣ ಹಿಡಿದಿತ್ತು. ಚಳಿಗಾಲ ಅಧಿವೇಶನದಲ್ಲಿ ಫೆಬ್ರವರಿ, ಮಾರ್ಚ್ ತಿಂಗಳ ಹಣ ಬಿಟ್ಟು ಬೇರೆ ತಿಂಗಳಿನ ಹಣ ಹಾಕಿದ್ದಾರೆ ಎಂದು ಬಿಜೆಪಿ ಹೋರಾಟ ನಡೆಸಿತ್ತು. 5 ಸಾವಿರ ಕೋಟಿ ರೂಪಾಯಿ…

Read More

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು? – Kannada News | Darshan wife Vijayalakshmi give indirect reply to Sudeep

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದ್ದು, ನಿನ್ನೆ (ಡಿಸೆಂಬರ್ 20) ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, ತಮ್ಮ ಸಿನಿಮಾದ ವಿರುದ್ಧ ನೆಗೆಟಿವ್ ಪ್ರಚಾರ ಮಾಡುತ್ತಿರುವ ದರ್ಶನ್ ಅಭಿಮಾನಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದರು. ಇದೀಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ದಾವಣಗೆರೆಯಲ್ಲಿ ಮಾತನಾಡಿ ಸುದೀಪ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ದರ್ಶನ್ ಜೈಲಿನಲ್ಲಿದ್ದಾಗ ಕೆಲವರು ಅವರ ಬಗ್ಗೆ, ಅವರ ಫ್ಯಾನ್ಸ್‌ ಬಗ್ಗೆ, ಹೊರಗಡೆ ಹಾಗೂ ಮಾಧ್ಯಮಗಳಿಗೆ…

Read More

ಅಸ್ಸಾಮ್​ನಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದರೂ ಎಲ್ಲಾ ಸಮಸ್ಯೆಗಳಿಗೆ ವಿಪಕ್ಷಗಳನ್ನೇ ಹೊಣೆ ಮಾಡುವುದೇಕೆ? ಖರ್ಗೆ ಪ್ರಶ್ನೆ – Kannada News | Blames opposition if he fails, Mallikarjuna Kharge lashes out against PM Modi on Assam statement

ನವದೆಹಲಿ, ಡಿಸೆಂಬರ್ 21: ಸುದೀರ್ಘ ಕಾಲ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಪಕ್ಷ ಅಸ್ಸಾಂ ಹಾಗೂ ಈಶಾನ್ಯ ಪ್ರದೇಶಗಳನ್ನು ಕಡೆಗಣಿಸಿದೆ. ವಲಸಿಗರನ್ನು ಬರಲು ಬಿಟ್ಟು ಪ್ರಾದೇಶೀಕ ಭದ್ರತೆಗೆ ಧಕ್ಕೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಭಾನುವಾರ ತಿರುಗೇಟು ನೀಡಿದ್ದಾರೆ. ಅಸ್ಸಾಮ್​ನಲ್ಲಿ ಡಬಲ್ ಎಂಜಿನ್ ಸರ್ಕಾರ ಹೊಂದಿರುವ ಬಿಜೆಪಿ, ಆ ರಾಜ್ಯದಲ್ಲಿ ಆಗಿರುವ ತನ್ನ ವೈಫಲ್ಯಗಳಿಗೆ ಜವಾಬ್ದಾರಿ ಹೊರುವುದು ಬಿಟ್ಟು ವಿಪಕ್ಷಗಳತ್ತಲೇ ಬೊಟ್ಟು ಮಾಡುತ್ತಿದೆ…

Read More

ಎರಡೆರಡು ವಿಶ್ವಕಪ್‌; ಟೀಂ ಇಂಡಿಯಾಗೆ ನಾಯಕರೇ ದೊಡ್ಡ ತಲೆನೋವು – Kannada News | ICC World Cup 2026: India Captains Suryakumar, Ayush Mhatre’s Form Concerns

2026 ರಲ್ಲಿ ಕ್ರಿಕೆಟ್ ಲೋಕದಲ್ಲಿ ಪ್ರಮುಖ ಐಸಿಸಿ (ICC) ಈವೆಂಟ್​ಗಳು ನಡೆಯಲಿವೆ. ಈ ಪಂದ್ಯಾವಳಿಗಳು ಜನವರಿಯಿಂದಲೇ ಪ್ರಾರಂಭವಾಗುತ್ತಿದ್ದು, ಅಂಡರ್-19 ಪುರುಷರ ವಿಶ್ವಕಪ್ ಮತ್ತು ಆ ನಂತರ 2026 ರ ಪುರುಷರ ಟಿ20 ವಿಶ್ವಕಪ್ (ICC World Cup 2026) ಪ್ರಮುಖ ಪಂದ್ಯಾವಳಿಗಳಾಗಿವೆ. ಭಾರತ ತಂಡವು ಎರಡೂ ಪಂದ್ಯಾವಳಿಗಳಲ್ಲಿ ಪ್ರಶಸ್ತಿ ಸ್ಪರ್ಧಿಗಳಾಗಿ ಪ್ರವೇಶಿಸಲಿದೆ. ಈ ಎರಡೂ ತಂಡಗಳಲ್ಲೂ ಪ್ರತಿಭಾವಂತೆ ಆಟಗಾರರಿದ್ದಾರೆ. ಆದಾಗ್ಯೂ, ಈ ವಿಶ್ವಕಪ್‌ಗಳ ಆರಂಭಕ್ಕೂ ಮೊದಲು, ಈ ಎರಡೂ ತಂಡಗಳ ನಾಯಕರು ತಂಡಕ್ಕೆ ದೊಡ್ಡ ಸಮಸ್ಯೆಯಾಗಿದ್ದಾರೆ. ಒಂದೆಡೆ…

Read More