16 ಅಂಕಗಳಿದ್ದರೂ ಗುಜರಾತ್ ಟೈಟಾನ್ಸ್​ ಇನ್ನೂ ಪ್ಲೇಆಫ್‌ಗೆ ಕ್ವಾಲಿಫೈ ಆಗಿಲ್ಲವೇಕೆ? – Kannada News | IPL 2026: Why Gujarat Titans’s 16 Points Don’t Guarantee a Playoff Spot

ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಪ್ರಸಕ್ತ ಸೀಸನ್ ರೋಚಕ ಘಟ್ಟವನ್ನು ತಲುಪಿದ್ದು, ಪ್ಲೇಆಫ್ ರೇಸ್ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ಸಾಮಾನ್ಯವಾಗಿ ಯಾವುದೇ ಐಪಿಎಲ್ ಟೂರ್ನಿಯಲ್ಲಿ 16 ಅಂಕಗಳನ್ನು ಗಳಿಸಿದ ತಂಡವು ಅತ್ಯಂತ ಸುಲಭವಾಗಿ ಪ್ಲೇಆಫ್​ ಹಂತಕ್ಕೆ ಅರ್ಹತೆ ಪಡೆಯುತ್ತದೆ. ಆದರೆ, ಈ ಬಾರಿ ಗುಜರಾತ್ ಟೈಟಾನ್ಸ್ (GT) ಈಗಾಗಲೇ 16 ಅಂಕಗಳನ್ನು ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದರೂ, ಅಧಿಕೃತವಾಗಿ ಇನ್ನೂ ಸಹ ಪ್ಲೇಆಫ್ ಸ್ಥಾನವನ್ನು ಖಚಿತ ಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಅಂಕ ಪಟ್ಟಿಯಲ್ಲಿ ಸೃಷ್ಟಿಯಾಗಿರುವ ತೀವ್ರ ಪೈಪೋಟಿ. ಇದಕ್ಕೆ ಕಾರಣವಾಗಿರುವ ಗಣಿತದ ಲೆಕ್ಕಾಚಾರಗಳು ಮತ್ತು ಸಮೀಕರಣಗಳ ವಿವರ ಇಲ್ಲಿದೆ:

ಗುಜರಾತ್ ಟೈಟಾನ್ಸ್​ ತಂಡಕ್ಕೆ ಇನ್ನು 2 ಪಂದ್ಯಗಳು ಬಾಕಿ ಇವೆ. ಆದರೆ ಅವರ ಹಿಂದೆ ಇರುವ ಇತರೆ ತಂಡಗಳು ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸುವ ಅವಕಾಶವನ್ನು ಹೊಂದಿವೆ:

  •  ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಗರಿಷ್ಠ 20 ಅಂಕಗಳನ್ನು ತಲುಪಬಲ್ಲದು.
  • ಪಂಜಾಬ್ ಕಿಂಗ್ಸ್ (PBKS): ಗರಿಷ್ಠ 19 ಅಂಕಗಳನ್ನು ಗಳಿಸಬಲ್ಲದು.
  • ಸನ್‌ರೈಸರ್ಸ್ ಹೈದರಾಬಾದ್, ಸಿಎಸ್‌ಕೆ ಮತ್ತು ರಾಜಸ್ಥಾನ್ ರಾಯಲ್ಸ್: ಈ ತಂಡಗಳು ಗರಿಷ್ಠ 18 ಅಂಕಗಳನ್ನು ಪಡೆಯುವ ಅವಕಾಶ ಹೊಂದಿವೆ.

ಅಂಕ ಪಟ್ಟಿಯಲ್ಲಿ ಇಷ್ಟೊಂದು ತೀವ್ರ ಪೈಪೋಟಿ ಇರುವುದರಿಂದ, 6 ತಂಡಗಳು 16 ಅಥವಾ ಅದಕ್ಕಿಂತ ಹೆಚ್ಚು ಅಂಕಗಳೊಂದಿಗೆ ಲೀಗ್ ಹಂತವನ್ನು ಮುಗಿಸುವ ಸಾಧ್ಯತೆಯಿದೆ.

ನೆಟ್ ರನ್ ರೇಟ್ (NRR) ಆತಂಕ:

ಗುಜರಾತ್ ಟೈqಆನ್ಸ್ ತನ್ನ ಮುಂದಿನ ಎರಡೂ ಪಂದ್ಯಗಳಲ್ಲಿ (ಕೋಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ) ಸೋತರೆ, ಅದು 16 ಅಂಕಗಳಲ್ಲೇ ಉಳಿಯುತ್ತದೆ. ಒಂದು ವೇಳೆ ಇತರ 4-5 ತಂಡಗಳು ಸಹ 16 ಅಂಕಗಳೊಂದಿಗೆ ಸಮಬಲ ಸಾಧಿಸಿದರೆ, ಅಗ್ರ 4 ತಂಡಗಳನ್ನು ಆಯ್ಕೆ ಮಾಡಲು ನೆಟ್ ರನ್ ರೇಟ್ (NRR) ಅನ್ನು ಪರಿಗಣಿಸಲಾಗುತ್ತದೆ. ಈ ಪರಿಸ್ಥಿತಿಯಲ್ಲಿ ಜಿಟಿ ತಂಡದ ರನ್ ರೇಟ್ ಕಡಿಮೆಯಾದರೆ, ಅವರು ಟೂರ್ನಿಯಿಂದ ಹೊರಬೀಳಬಹುದು.

18 ಅಂಕಗಳ ಸುರಕ್ಷತಾ ಕವಚ:

10 ತಂಡಗಳ ಐಪಿಎಲ್ ಮಾದರಿಯಲ್ಲಿ, ಯಾವುದೇ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗದೆ ನೇರವಾಗಿ ಪ್ಲೇಆಫ್ ತಲುಪಲು 18 ಅಂಕಗಳು ಅತ್ಯಗತ್ಯ. ಗುಜರಾತ್ ಟೈಟಾನ್ಸ್ ತಂಡ ಸದ್ಯ ಈ ಸುರಕ್ಷಿತ ರೇಖೆಗಿಂತ ಒಂದು ಹೆಜ್ಜೆ ಹಿಂದೆಯಷ್ಟೇ ಇದೆ.

ಇದನ್ನೂ ಓದಿ: RCB vs KKR: ಫಿಲ್ ಸಾಲ್ಟ್ ಆಡ್ತಾರಾ? ಆಡಲ್ವಾ? ಇಲ್ಲಿದೆ ಮಾಹಿತಿ

ಪ್ಲೇಆಫ್ ತಲುಪಲು ಮುಂದೇನು ಮಾಡಬೇಕು?

  • ಒಂದು ಗೆಲುವು: ಗುಜರಾತ್ ಟೈಟಾನ್ಸ್ ತಂಡ ತನ್ನ ಉಳಿದ 2 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದರೂ 18 ಅಂಕಗಳನ್ನು ಪಡೆದು ಅಧಿಕೃತವಾಗಿ ಕ್ವಾಲಿಫೈ ಆಗುತ್ತದೆ.
  • ಮಳೆ ಅಥವಾ ರದ್ದತಿ: ಒಂದು ವೇಳೆ ಮುಂದಿನ ಯಾವುದೇ ಪಂದ್ಯ ಮಳೆಯಿಂದಾಗಿ ರದ್ದಾಗಿ 1 ಅಂಕ ಸಿಕ್ಕರೂ, ಒಟ್ಟು 17 ಅಂಕಗಳೊಂದಿಗೆ ಗುಜರಾತ್ ಪ್ಲೇಆಫ್ ಸ್ಥಾನ ಭದ್ರಪಡಿಸಿಕೊಳ್ಳುತ್ತದೆ.
  • ಇತರ ತಂಡಗಳ ಸೋಲು: ಗುಜರಾತ್ಟಿ ಟೈಟಾನ್ಸ್​ ತಂಡ ತನ್ನ ಎರಡೂ ಪಂದ್ಯಗಳನ್ನು ಸೋತರೂ,  ಆರ್‌ಸಿಬಿ, ಪಂಜಾಬ್ ಕಿಂಗ್ಸ್ ಅಥವಾ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಸೋತರೆ, ಗುಜರಾತ್ ಟೈಟಾನ್ಸ್​  ಸ್ವಯಂಚಾಲಿತವಾಗಿ ಮುಂದಿನ ಹಂತಕ್ಕೇರಲಿದೆ.

Source link

Video: ವಂದೇ ಭಾರತ್ ರೈಲು ಟಿಕೆಟ್‌ ಹಾಫ್ ರೇಟ್‌ಗೆ ಮಾರಾಟ, ಟಿಟಿಇ ಅಮಾನತು – Kannada News | Vande Bharat train tickets sold at half rate, Railways suspends TTE

ದುಡ್ಡು ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ, ದುಡ್ಡಿನ ಮಹಿಮೆಯೇ ಅಂತಹದ್ದು. ಕೆಲವರು ಹಣ ಮಾಡಲು ಕಳ್ಳ ದಾರಿಯನ್ನು ಹಿಡಿಯುವುದನ್ನು ನೀವು ನೋಡಿರುತ್ತೀರಿ. ಆದರೆ ಇದೀಗ ‘ವಂದೇ ಭಾರತ್ ಎಕ್ಸ್‌ಪ್ರೆಸ್’ (Vande Bharath Express) ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಅಧಿಕೃತ ದರಕ್ಕಿಂತ ಕಡಿಮೆ ದರಕ್ಕೆ ಟಿಕೆಟ್ ಮಾರುತ್ತಿದ್ದ ವೇಳೆ ಟಿಟಿಇ ಸಿಕ್ಕಿ ಬಿದ್ದಿದ್ದಾನೆ. ತಕ್ಷಣವೇ ಕ್ರಮ ಕೈಗೊಂಡ ರೈಲ್ವೆ ಇಲಾಖೆಯೂ ಟಿಟಿಇಯನ್ನು (TTE) ಕೆಲಸದಿಂದ ಅಮಾನತುಗೊಳಿಸಿದೆ.

ಘರ್ ಕೆ ಕಲೇಷ್ (Ghar Ke Kalesh) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಟಿಟಿಇ ಹಾಗೂ ಪ್ರಯಾಣಿಕರ ನಡುವಿನ ಸಂಭಾಷಣೆ ನೀವು ಗಮನಿಸಬಹುದು. 700 ರೂಪಾಯಿ ವಂದೇ ಭಾರತ್ ಟಿಕೆಟ್ ನ್ನು ಕೇವಲ 380 ರೂಪಾಯಿಗಳಿಗೆ ಕೊಡುವುದಾಗಿ ಟಿಟಿಇ ಹೇಳುತ್ತಿರುವುದನ್ನು ಕಾಣಬಹುದು. ಟಿಟಿಇ ಇದು ನಿಯಮಕ್ಕೆ ವಿರುದ್ಧ ಎಂದು ಹೇಳುತ್ತಲೇ, ಕಡಿಮೆ ಹಣಕ್ಕೆ ಪ್ರಯಾಣದ ವ್ಯವಸ್ಥೆ ಮಾಡುವುದಾಗಿ ಹೇಳುತ್ತಿರುವುದನ್ನು ನೀವು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. ದಾನಾಪುರ ವಿಭಾಗದ ರೈಲ್ವೆ ವ್ಯವಸ್ಥಾಪಕರು, ಸಂಬಂಧಿತ ಟಿಟಿಇಯನ್ನು ತನಿಖೆ ಮುಗಿಯುವವರೆಗೆ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರೈಲಿನ ಸೀಟುಗಳ ಹರಿದು ಯುವಕರ ಪುಂಡಾಟ

ಈ ವಿಡಿಯೋ ನಲವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡುಕೊಂಡಿದ್ದು, ಒಬ್ಬ ಬಳಕೆದಾರ, ಭ್ರಷ್ಟಾಚಾರದ ಪರಮಾವಧಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನಮ್ಮ ದೇಶದ ವ್ಯವಸ್ಥೆಯನ್ನು ಹಾಳು ಮಾಡುವವರು ಇಂತಹವರೇ ಎಂದು ಹೇಳಿದ್ದಾರೆ. ಮತ್ತೊಬ್ಬರು, ಟಿಟಿಇ ಸಹಾಯ ಮಾಡುವ ಮನೋಭಾವ ತುಂಬಾನೇ ಇದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೋದಿ ಕರೆಗೆ ಓಗೊಟ್ಟ ವಿವಿಧ ರಾಜ್ಯಗಳ ನಾಯಕರು; ಯೋಗಿಯಿಂದ ಹಿಡಿದು ರೇಖಾವರೆಗೆ ಯಾರಿಂದೇನು ಕ್ರಮ? – Kannada News | Fuel Conservation: State Leaders Adopt PM Modi’s Call; Cost Cutting Measures Implemented

ನವದೆಹಲಿ, ಮೇ 13: ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ಇಂಧನ ಸಂರಕ್ಷಣೆ ಮತ್ತು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವಂತೆ (Austerity measures) ನೀಡಿದ ಕರೆಯ ಬೆನ್ನಲ್ಲೇ, ದೇಶದ ವಿವಿಧ ರಾಜ್ಯಗಳಲ್ಲಿ ಆಡಳಿತಾರೂಢ ನಾಯಕರು ಮಾದರಿ ಕ್ರಮಗಳನ್ನು ಘೋಷಿಸಿದ್ದಾರೆ. ಅದರಲ್ಲೂ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿನ ಸಿಎಂ ಮತ್ತಿತರ ನಾಯಕರು ಮೋದಿ ಅವರ ಮಾತಿಗೆ ಬೆಲೆ ನೀಡಿ, ಇಂಧನ ಬಳಕೆ ತಗ್ಗಿಸಲು ಕ್ರಮ ತೆಗೆದುಕೊಂಡಿದ್ದಾರೆ. ಸಲಹೆ ಪಾಲನೆಯನ್ನು ತಮ್ಮಿಂದಲೇ ಶುರು ಮಾಡಿದ್ದಾರೆ. ವಿವಿಧ ರಾಜ್ಯಗಳ ನಾಯಕರು ಇಂಧನ ಉಳಿತಾಯಕ್ಕೆ ತೆಗೆದುಕೊಂಡಿರುವ ಕ್ರಮಗಳ ವಿವರ ಈ ಕೆಳಕಾಣಿಸಿದಂತಿದೆ:

ಉತ್ತರ ಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಹಾಗೂ ಸಚಿವರ ವಾಹನಗಳ ಸಂಖ್ಯೆಯಲ್ಲಿ ತಕ್ಷಣವೇ 50% ಕಡಿತ ಮಾಡುವಂತೆ ಆದೇಶಿಸಿದ್ದಾರೆ. ಅಲ್ಲದೆ, ಸಚಿವರು ಮತ್ತು ಶಾಸಕರು ವಾರಕ್ಕೊಮ್ಮೆ ಕಡ್ಡಾಯವಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸೂಚಿಸಿದ್ದಾರೆ. ರಾಜ್ಯದಲ್ಲಿ ವರ್ಕ್ ಫ್ರಂ ಹೋಮ್ ವ್ಯವಸ್ಥೆಗೆ ಉತ್ತೇಜನ ಕೊಡಲು, ಮತ್ತು ಹೆಚ್ಚು ಸಿಬ್ಬಂದಿ ಇರುವ ಸಂಸ್ಥೆಗಳಲ್ಲಿ ವಾರಕ್ಕೆ ಎರಡು ದಿನ ವರ್ಕ್ ಫ್ರಂ ಮಾಡಲು ಶಿಫಾರಸು ಮಾಡುವಂತೆ ಸಿಎಂ ತಿಳಿಸಿದ್ದಾರೆ.

ಮಧ್ಯಪ್ರದೇಶ: ಮುಖ್ಯಮಂತ್ರಿ ಮೋಹನ್ ಯಾದವ್ ಅವರು ತಮ್ಮ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದಾಗಿ ಘೋಷಿಸಿದ್ದು, ಇತರ ಸಚಿವರಿಗೂ ಇದೇ ಹಾದಿ ತುಳಿಯಲು ಮನವಿ ಮಾಡಿದ್ದಾರೆ. ಸಾಮಾನ್ಯ ಜನರು ಸಾರ್ವಜನಿಕ ಸಾರಿಗೆ ಬಳಸುವಂತೆಯೂ ಕೇಳಿಕೊಂಡಿದ್ದಾರೆ.

ದೆಹಲಿ: ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಅಧಿಕೃತ ಕೆಲಸಗಳಿಗೆ ಕನಿಷ್ಠ ವಾಹನ ಬಳಸುವುದಾಗಿ ತಿಳಿಸಿದ್ದಾರೆ. ತಮ್ಮನ್ನೂ ಒಳಗೊಂಡಂತೆ ದೆಹಲಿಯ ಎಲ್ಲಾ ಬಿಜೆಪಿ ಶಾಸಕರು ಮತ್ತು ಅಧಿಕಾರಿಗಳು ಕಾರ್-ಪೂಲಿಂಗ್ (ವಾಹನ ಹಂಚಿಕೆ) ಮತ್ತು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರಧಾನಿಗಳ ಸಲಹೆ ಪಾಲಿಸುವಂತೆ ಸಾರ್ವಜನಿಕರಿಗೂ ಅವರು ಮನವಿ ಮಾಡಿದ್ದಾರೆ.

ರಾಜಸ್ಥಾನ: ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಭದ್ರತೆಯ ಹೆಸರಿನಲ್ಲಿ ಬಳಸುವ ಅನಗತ್ಯ ವಾಹನಗಳನ್ನು ನಿಲ್ಲಿಸಲು ಸೂಚಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಈ ನಿಯಮ ಅನ್ವಯವಾಗಲಿದೆ.

ಮಹಾರಾಷ್ಟ್ರ: ಇಲ್ಲಿ ಸರ್ಕಾರಿ ವಿಮಾನ ಮತ್ತು ಹೆಲಿಕಾಪ್ಟರ್ ಬಳಕೆಗೆ ಬ್ರೇಕ್ ಹಾಕಲಾಗಿದೆ. ಸಚಿವರು ತುರ್ತು ಕೆಲಸಗಳಿಗಾಗಿ ವಿಮಾನ ಬಳಸಬೇಕಿದ್ದರೆ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರ ಕಚೇರಿಯಿಂದ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: ಡಿಜಿಲಾಕರ್ ಬಳಕೆಯಲ್ಲಿ ಕರ್ನಾಟಕ ಟಾಪ್! ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಪ್ರಶಸ್ತಿ ಗೌರವ

ಬಿಹಾರ: ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಚೌಧರಿ ಅವರು ತಮ್ಮ ವೈಯಕ್ತಿಕ ಬಳಕೆಯ ವಾಹನಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿತಗೊಳಿಸಿದ್ದು, ಅತ್ಯಗತ್ಯವಿದ್ದಾಗ ಮಾತ್ರ ಅಧಿಕೃತ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.

ಗುಜರಾತ್‌: ಗುಜರಾತ್ ರಾಜ್ಯಪಾಲರು ಹೆಲಿಕಾಪ್ಟರ್ ಅಥವಾ ವಿಮಾನಗಳ ಬದಲಿಗೆ ರಾಜ್ಯದೊಳಗೆ ಪ್ರಯಾಣಿಸಲು ರೈಲು ಮತ್ತು ಎಸ್‌ಟಿ (ST) ಬಸ್‌ಗಳನ್ನು ಬಳಸಲು ನಿರ್ಧರಿಸಿದ್ದಾರೆ. ಇನ್ನು ರಾಜ್ಯದ ಉಪಮುಖ್ಯಮಂತ್ರಿ ಹರ್ಷ ಸಂಘವಿ ಅವರು ತಮ್ಮ ನಿಗದಿತ ಅಮೆರಿಕ ಪ್ರವಾಸವನ್ನು ರದ್ದುಗೊಳಿಸುವ ಮೂಲಕ ವಿದೇಶಿ ಪ್ರಯಾಣದ ವೆಚ್ಚಕ್ಕೆ ಕಡಿವಾಣ ಹಾಕಿದ್ದಾರೆ.

ಇದನ್ನೂ ಓದಿ: ವಿಧಾನಸಭೆಯಲ್ಲೂ ನಿರೀಕ್ಷೆಗೂ ಮೀರಿ ವಿಶ್ವಾಸಮತ ಗೆದ್ದ ಸಿಎಂ ವಿಜಯ್: ಯಾರದ್ದೆಲ್ಲ ಬೆಂಬಲ ಸಿಕ್ತು? ಇಲ್ಲಿದೆ ವಿವರ

ಸರ್ಕಾರದ ಈ ಕ್ರಮಗಳು ಕೇವಲ ಇಂಧನ ಉಳಿತಾಯ ಮಾತ್ರವಲ್ಲದೆ, ಸಾರ್ವಜನಿಕ ಹಣದ ದುಂದುವೆಚ್ಚವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಜನಪ್ರತಿನಿಧಿಗಳೇ ನೇರವಾಗಿ ಸಾರ್ವಜನಿಕ ಸಾರಿಗೆ ಬಳಕೆಗೆ ಮುಂದಾಗಿರುವುದು ಜನಸಾಮಾನ್ಯರಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೊರಗಜ್ಜ ಸರ್ಕಲ್​​ ವಿವಾದ: ಯು.ಟಿ. ಖಾದರ್​​ಗೆ ಘೇರಾವ್​ ಹಾಕಿದ್ದವರ ವಿರುದ್ಧ FIR – Kannada News | Koragajja Circle Row: FIR Against 10 for Gharaoing Speaker UT Khader in Mangaluru

ಯು.ಟಿ. ಖಾದರ್​​

ಮಂಗಳೂರು, ಮೇ 13: ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್​ಗೆ ಘೇರಾವ್ ವಿಚಾರ ಸಂಬಂಧೇ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಖಾದರ್ ಅಂಗರಕ್ಷಕ ಮೊಹಮ್ಮದ್ ಯಾಸಿನ್ ದೂರು ಆಧರಿಸಿ ಘೇರಾವ್ ಹಾಕಿದ ಮದನಿನಗರ ನಿವಾಸಿ ಜುನೈದ್ ಸೇರಿದಂತೆ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಕೊರಗಜ್ಜ ಸರ್ಕಲ್​​ ವಿಚಾರವಾಗಿ ಉಳ್ಳಾಲದಲ್ಲಿ ಯು.ಟಿ.ಖಾದರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕೆಲ ಯುವಕರು ಅವರಿಗೆ ಘೇರಾವ್​​ ಹಾಕಿದ್ದರು. ಸಾಲದ್ದಕ್ಕೆ ವಾಗ್ವಾದವನ್ನೂ ನಡೆಸಿದ್ದರು.

ಏನಿದು ಕೊರಗಜ್ಜ ಸರ್ಕಲ್​​ ವಿವಾದ?

ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಿಂದ ಕುತ್ತಾರಿನಲ್ಲಿ ಸರ್ಕಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದರ ನಿರ್ವಹಣೆಯ ಜವಾಬ್ದಾರಿಯನ್ನೂ ಸರ್ಕಾರ ಮೆಡಿಕಲ್ ಕಾಲೇಜಿಗೇ ವಹಿಸಿದೆ. ಆದರೆ ಸರ್ಕಲ್ ನಿರ್ಮಾಣದ ಬಗ್ಗೆ ಅಪಸ್ವರ ಎತ್ತಿ ಖಾದರ್ ವಿರುದ್ದ ಕೆಲ ಮುಸ್ಲಿಮರು ತಿರುಗಿ ಬಿದ್ದಿದ್ದಾರೆ. ಕುತ್ತಾರು ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜನ ಮೂಲ ಕ್ಷೇತ್ರವಾಗಿದ್ದು, ಅಪಾರ ಸಂಖ್ಯೆಯ ಭಕ್ತರು ಕೊರಗಜ್ಜ ದೈವವನ್ನು ನಂಬಿದ್ದಾರೆ. ಹೀಗಾಗಿ ವೃತ್ತ ನಿರ್ಮಾಣಕ್ಕೆ ತಿಂಗಳ ಹಿಂದೆಯೇ ಕೊರಗಜ್ಜ ದೈವದ ಕೆಲ ವಸ್ತುಗಳ ಪ್ರತಿಕೃತಿಯನ್ನು ಈ ಜಾಗದಲ್ಲಿ ವಿಶ್ವಹಿಂದೂ ಪರಿಷತ್​​ ಇಟ್ಟಿತ್ತು. ಸದ್ಯ ಹೊಸದಾಗಿ ನಿರ್ಮಾಣವಾಗ್ತಿರೋ ವೃತ್ತದಲ್ಲೂ ದೈವದ ಪ್ರತಿಕೃತಿ ಇಡಲು ಯೋಜನೆ ರೂಪಿಸಿದ್ದು, ಸರ್ಕಲ್​​ಗೆ ಕೊರಗಜ್ಜ ವೃತ್ತ ಎಂದು ಹೆಸರಿಡಲೂ ಪ್ಲ್ಯಾನ್​​ ಮಾಡಿದೆ. ಆದರೆ ಈ ಸರ್ಕಲ್​​ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿಯೂ ಭಾರೀ ಚರ್ಚೆ ಹುಟ್ಟು ಹಾಕಿದೆ. ಆಕ್ಷೇಪ ಕುತ್ತಾರು ವೃತ್ತಕ್ಕೆ ಕೊರಗಜ್ಜ ಹೆಸರು ಇಡೋದಕ್ಕಾ? ಅಥವಾ ಅವೈಜ್ಞಾನಿಕ ಕಾಮಗಾರಿಗಾ? ಎಂಬ ಗೊಂದಲೂ ಇದೆ. ವೃತ್ತ ದೊಡ್ಡದಾಗಿ ನಿರ್ಮಿಸಿದ್ರೆ ಸಂಚಾರ ಸಮಸ್ಯೆ ಎಂಬ ನೆಪದಲ್ಲಿ ಕೆಲವರ ಅಪಸ್ವರ ತೆಗೆದಿದ್ದರೆ, ಇನ್ನು ಕೆಲವರು ಕೊರಗಜ್ಜ ಹೆಸರಿಗೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತುಗಳೂ ಇವೆ.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದಾಖಲೆಯ ಆದಾಯ, ಸತತ 15 ವರ್ಷಗಳ ಕಾಲ ನಂ.1

ಯು.ಟಿ.ಖಾದರ್ ತಿರುಗೇಟು

ಇನ್ನು ಕೊರಗಜ್ಜ ಸರ್ಕಲ್​​ ವಿರೋಧಿಸುವವರಿಗೆ ಸ್ಪೀಕರ್​​, ಉಳ್ಳಾಲ ಶಾಸಕ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ. ಯಾರೋ ಕೆಲವರು ದಾರಿ ತಪ್ಪಿದವರು ಇದ್ದಾರೆ. ಅವರು ಏನೋ ಹೇಳ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಏನೋ ಮಾಡ್ತಾರೆ ಎಂದು ಅದನ್ನೆಲ್ಲ ಕೇಳ್ಕೊಂಡು ಇರಲು ಸಾಧ್ಯವಿಲ್ಲ.ಅವರೇನು ಮದನಿ ನಗರದವರು ಅಲ್ಲ, ಬೇರೆ ಸಂಘಟನೆಗೆ ಸೇರಿದವರು. ಅಲ್ಲದೇ ಹೊರಗಿನಿಂದ ಬಂದವರು. ಅಲ್ಲಿ ಏನು ಆಗುತ್ತೋ ಒಳ್ಳೆಯದಕ್ಕೇ ಆಗುತ್ತದೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Santana Dosha: ಸಂತಾನವನ್ನು ನಿರ್ಲಕ್ಷಿಸುವುದು ಅಥವಾ ವಿಳಂಬ ಮಾಡುವುದು ದೋಷಕ್ಕೆ ಕಾರಣವಾಗುತ್ತಾ? – Kannada News | Santana Dosha: The Impact of Postponing Children According to Astrology

ಇಂದಿನ ವೇಗದ ಜೀವನಶೈಲಿಯಲ್ಲಿ, ಅನೇಕ ದಂಪತಿಗಳು ಮಕ್ಕಳನ್ನು ಪಡೆಯುವುದನ್ನು ಮುಂದೂಡಲು ನಿರ್ಧರಿಸುತ್ತಾರೆ. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವ ಅಥವಾ ವೈಯಕ್ತಿಕ ಬೆಳವಣಿಗೆಗೆ ಗಮನಹರಿಸುವ ಬಯಕೆಯಿಂದ, ಇನ್ನೊಂದು ಮೂರು ವರ್ಷ ಬೇಡ, ಇನ್ನೊಂದು ಎರಡು ವರ್ಷ ಬೇಡ ಎಂಬಂತಹ ಮಾತುಗಳು ಸರ್ವೇ ಸಾಮಾನ್ಯವಾಗಿವೆ. ಆದರೆ, ಧಾರ್ಮಿಕ ಮತ್ತು ಜ್ಯೋತಿಷ್ಯದ ದೃಷ್ಟಿಕೋನದಿಂದ, ಸಂತಾನವನ್ನು ನಿರ್ಲಕ್ಷಿಸುವುದು ಅಥವಾ ಉದ್ದೇಶಪೂರ್ವಕವಾಗಿ ವಿಳಂಬ ಮಾಡುವುದು ಹಲವು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಸಂತಾನವನ್ನು ವಿಳಂಬಗೊಳಿಸಿದರೆ ವೃದ್ಧಾಪ್ಯದಲ್ಲಿ ಅದರ ಫಲವನ್ನು ಅನುಭವಿಸಬೇಕಾಗುತ್ತದೆ. ಮಕ್ಕಳು ಚಿಕ್ಕವರಿದ್ದಾಗ ತಂದೆ-ತಾಯಿ ವಯಸ್ಸಾಗಿದ್ದರೆ, ಅವರ ಪಾಲನೆ-ಪೋಷಣೆ ಕಷ್ಟವಾಗುತ್ತದೆ. ಇದು ಮಕ್ಕಳಿಗೂ, ಪೋಷಕರಿಗೂ ದ್ರೋಹ ಮಾಡಿದಂತೆ ಆಗುತ್ತದೆ. ಇಂತಹ ನಿರ್ಲಕ್ಷ್ಯದಿಂದ ಮುಖ್ಯವಾಗಿ ಕಾಡತಕ್ಕದ್ದು ಸರ್ಪ ಶಾಪ. ಈ ಶಾಪವು ಬೆನ್ನಿಗೆ ಅಂಟಿಕೊಂಡು ದೇಹಕ್ಕೆ ಹಾನಿ ಮಾಡಬಹುದು. ಕಡೆಯ ಕಾಲದಲ್ಲಿ ಮಕ್ಕಳಿದ್ದರೂ ಸಹ, ಒಂಟಿತನ ಕಾಡಿ ಯಾರೂ ನೋಡಿಕೊಳ್ಳುವವರಿಲ್ಲದೆ ದುರ್ಬರವಾಗಿ, ನರಕ ಸದೃಶ ಜೀವನವನ್ನು ಎದುರಿಸಬೇಕಾಗಬಹುದು, ಏಕೆಂದರೆ ಮಕ್ಕಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದರಿಂದ ಈ ದೋಷವು ಕಾಡುತ್ತಿರುತ್ತದೆ.

ದೈವಾನುಗ್ರಹದಿಂದ ವಿವಾಹ ಸಂಭವಿಸುತ್ತದೆ, ಏಕೆಂದರೆ ಮದುವೆ ಸ್ವರ್ಗದಲ್ಲಿ ನಿಗದಿಯಾಗಿದೆ ಎಂಬ ನಂಬಿಕೆ ಇದೆ. ವಿವಾಹದ ನಂತರ ಸಂತಾನ, ನಂತರ ಜೀವನ, ಮುಕ್ತಿ ಮತ್ತು ಮೋಕ್ಷ – ಇವೆಲ್ಲವೂ ಒಂದಕ್ಕೊಂದು ಸಂಬಂಧಿಸಿವೆ. ಜ್ಯೋತಿಷ್ಯದಲ್ಲಿ, ಐದನೇ ಮನೆ ಸಂತಾನ ಸ್ಥಾನವಾಗಿದೆ. ಗುರು ಗ್ರಹವು ಸಂತಾನದ ಮುಖ್ಯ ಕಾರಕನಾಗಿದ್ದಾನೆ. ಸಂತಾನವನ್ನು ನಿರ್ಲಕ್ಷಿಸಿದಾಗ, ಗುರು ಕೋಪಗೊಳ್ಳುತ್ತಾನೆ. ಈ ಕೋಪವು ಗಂಡ ಮತ್ತು ಹೆಂಡತಿ ಇಬ್ಬರಿಗೂ ಕಷ್ಟಗಳನ್ನು ತರಬಹುದು. ಗುರು ನೀಚನಾಗಿದ್ದಾಗ, ವಕ್ರಿಯಾಗಿದ್ದಾಗ ಅಥವಾ ಗುರುವಿನ ಸ್ಥಿತಿ ಕೆಟ್ಟದಾಗಿದ್ದಾಗ, ಗರ್ಭಸ್ರಾವ ಸಂಭವಿಸಿದರೆ, ಅದು ಸಂಪೂರ್ಣವಾಗಿ ಸರ್ಪ ದೋಷಕ್ಕೆ ಕಾರಣವಾಗುತ್ತದೆ. ಇದನ್ನು ಸಂತಾನ ದೋಷ ಅಥವಾ ಸರ್ಪ ದೋಷ ಎಂದೂ ಕರೆಯುತ್ತಾರೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಇದಲ್ಲದೆ, ಶನಿ ಗ್ರಹವು ಐದನೇ ಮನೆಯನ್ನು ದೃಷ್ಟಿಸಿದರೆ, ಶಾಶ್ವತವಾಗಿ ಸಂತಾನವಿಲ್ಲದ ಪರಿಸ್ಥಿತಿ ಉಂಟಾಗಬಹುದು. ಕೆಲವರು ಇನ್ನು ಕೆಲವು ವರ್ಷಗಳು ಹೋಗಲಿ ಎಂದು ಮಕ್ಕಳನ್ನು ಮುಂದೂಡುತ್ತಾರೆ, ಆದರೆ ಆ ಸಮಯದಲ್ಲಿ ಶನಿ ಐದನೇ ಮನೆಯನ್ನು ನೋಡಿದರೆ ಶಾಶ್ವತವಾಗಿ ಮಕ್ಕಳಿಲ್ಲದಂತೆ ಆಗಬಹುದು. ಒಂದು ಅಬಾರ್ಷನ್ ಅಥವಾ ಮಗು ಬೇಡವೆಂದು ನಿರ್ಧರಿಸಿದ ನಂತರ, ಮಕ್ಕಳಿಲ್ಲದಿರಲು ಇದು ಒಂದು ಕಾರಣವಾಗಿರಬಹುದು. ಗರ್ಭಪಾತಕ್ಕೆ ಮಂಗಳ ಗ್ರಹವು ಕಾರಣನಾಗುತ್ತಾನೆ. ಮಂಗಳನ ಅನುಗ್ರಹ ಕಡಿಮೆಯಾದಾಗ ಗರ್ಭಪಾತವಾಗುತ್ತದೆ. ಮಂಗಳನ ಕೋಪವು ಪಿತೃ ದೋಷಗಳನ್ನು ತರಬಹುದು.

ಹಾಗಾಗಿ, ಮಕ್ಕಳು ಯಾವ ಕಾಲಕ್ಕೆ ಆಗಬೇಕೋ ಆ ಕಾಲಕ್ಕೆ ಆಗುವುದು ಶುಭ. ಒತ್ತಡದಿಂದ ಅಥವಾ ಮನಸ್ಸಿನಿಂದ ಮಕ್ಕಳನ್ನು ಮುಂದೂಡುವುದು ಶುಭವಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

35 ಲಕ್ಷ ರೂ. ಮೌಲ್ಯದ ಹೈಡ್ರೋವಿಡ್ ಗಾಂಜಾ ಸಾಗಿಸುತ್ತಿದ್ದ ವಿದ್ಯಾರ್ಥಿನಿ ಬಂಧನ! – Kannada News | Mangaluru Drug Bust: BCA Student Arrested with Hydroponic Weed Worth rs 35 Lakh

ಮಂಗಳೂರು, ಮೇ 13: ಕರಾವಳಿಯಲ್ಲಿ ಮಾದಕ ದ್ರವ್ಯ ಜಾಲದ ಬೇರುಗಳು ಎಷ್ಟು ಆಳವಾಗಿ ಇಳಿದಿವೆ ಎಂಬುದಕ್ಕೆ ಸಾಕ್ಷಿಯೆಂಬಂತೆ, ಮುಲ್ಕಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕೋಟಿ ಮೊತ್ತದ ಮಾದಕ ವಸ್ತುವನ್ನು (Drugs) ವಶಪಡಿಸಿಕೊಂಡಿದ್ದಾರೆ. ಚೆನ್ನೈನಿಂದ ಮಂಗಳೂರಿಗೆ ಹೈಡ್ರೋವಿಡ್ ಗಾಂಜಾ ಸಾಗಾಟ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮುಖ್ಯಾಂಶಗಳು

  • ಚೆನ್ನೈನಿಂದ ಮಂಗಳೂರಿಗೆ ಮಾದಕ ವಸ್ತು ಸಾಗಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಸುಹಾನ ಬಂಧನ.
  •  ಆರೋಪಿಯಿಂದ 35 ಲಕ್ಷ ರೂಪಾಯಿ ಮೌಲ್ಯದ ಹೈಡ್ರೋವಿಡ್ ಗಾಂಜಾ ಪೊಲೀಸರ ವಶ.
  •  ಬಂಧಿತ ವಿದ್ಯಾರ್ಥಿನಿ ಮೇಲೆ ಈಗಾಗಲೇ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿವೆ.

ನಡೆದಿದ್ದೇನು?

ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಿವಾಸಿ ಸುಹಾನ (21) ಎಂದು ಗುರುತಿಸಲಾಗಿದೆ. ಈಕೆ ಕುಂದಾಪುರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಅಂತಿಮ ವರ್ಷದ BCA ವಿದ್ಯಾರ್ಥಿನಿಯಾಗಿದ್ದಾಳೆ. ಮಂಗಳವಾರ (ಮೇ 12) ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಮಾದಕ ದ್ರವ್ಯ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಈಕೆಯನ್ನು ಬಂಧಿಸಿದ್ದಾರೆ.

ಏನೆಲ್ಲಾ ವಶಕ್ಕೆ?

ಬಂಧಿತ ವಿದ್ಯಾರ್ಥಿನಿಯಿಂದ ಸುಮಾರು 35 ಲಕ್ಷ ರೂ. ಮೌಲ್ಯದ 1 ಕೆಜಿ 42 ಗ್ರಾಂ ಹೈಡ್ರೋವಿಡ್ ಗಾಂಜಾ ಎಂಬ ಅತೀ ದುಬಾರಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಮತ್ತು ಇತರ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಸುಹಾನ ಈ ಮಾದಕ ವಸ್ತುವನ್ನು ಚೆನ್ನೈನಿಂದ ಮಂಗಳೂರಿಗೆ ತರಿಸಿಕೊಂಡಿದ್ದಳು. ಇಲ್ಲಿನ ಕಾಲೇಜು ವಿದ್ಯಾರ್ಥಿಗಳು ಹಾಗೂ ಶ್ರೀಮಂತ ಗ್ರಾಹಕರಿಗೆ ಇದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುವ ಸಂಚು ರೂಪಿಸಿದ್ದಳು ಎನ್ನಲಾಗಿದೆ.

ಇದನ್ನೂ ಓದಿ ಬೆಂಗಳೂರಿನ ಡ್ರಗ್ಸ್ ಮಾಫಿಯಾಗೆ ಪೊಲೀಸರ ಬಿಗ್ ಶಾಕ್: 13 ಕೆಜಿಗೂ ಹೆಚ್ಚು ಮಾದಕ ವಸ್ತುಗಳು ಸೀಜ್!

ಹಳೆ ಪ್ರಕರಣಗಳ ನಂಟು

ಕೇವಲ 21 ವರ್ಷದ ಈ ವಿದ್ಯಾರ್ಥಿನಿ ಈಗಾಗಲೇ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಈಕೆಯ ಮೇಲೆ ಈ ಹಿಂದೆ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಲ್ಲದೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆಯಲ್ಲೂ ಈಕೆಯ ವಿರುದ್ಧ ಮಾದಕ ದ್ರವ್ಯ ಸಾಗಾಟದ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಪ್ರಸ್ತುತ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಜಾಲದ ಹಿಂದೆ ಇರುವ ದೊಡ್ಡ ತಲೆಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:49 am, Wed, 13 May 26

Source link

ನನ್ನನ್ನು ಯಾರೂ ಕಣ್ಣೆತ್ತಿ ನೋಡಲಿಲ್ಲ: ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಅನುಭವ ಬಿಚ್ಚಿಟ್ಟ ರಜನಿಕಾಂತ್ – Kannada News | Rajinikanth shares profound experience at Art Of Living Ashram Bengaluru

ಆರ್ಟ್ ಆಫ್ ಲಿವಿಂಗ್ (Art Of Living) ಸಂಸ್ಥೆಯ 45ನೇ ವರ್ಷಾಚರಣೆ ಮತ್ತು ಶ್ರೀ ಶ್ರೀ ರವಿಶಂಕರ್ ಗುರೂಜಿ (Sri Sri Ravi Shankar) ಅವರ 70ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೂಪರ್‌ ಸ್ಟಾರ್ ರಜನಿಕಾಂತ್ (Rajinikanth) ಅವರು ಆಶ್ರಮದಲ್ಲಿ ತಮಗಾದ ಒಂದು ಮರೆಯಲಾಗದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಆ ಘಟನೆಯು ತಮ್ಮ ಅಹಂಕಾರವನ್ನು ಹೇಗೆ ಮಣ್ಣುಪಾಲಾಗಿಸಿತು ಎಂಬುದನ್ನು ಅವರು ಹಾಸ್ಯಭರಿತವಾಗಿ ವಿವರಿಸಿದ್ದಾರೆ. ವೇದಿಕೆಯಲ್ಲಿ ಅವರು ಮಾತನಾಡಿದ ವಿಡಿಯೋ ವೈರಲ್ ಆಗಿದೆ.

ಆರಂಭದಲ್ಲಿ ಕೇವಲ ಎರಡು ದಿನಗಳ ಕಾಲ ಆಶ್ರಮದಲ್ಲಿ ಇರಲು ಯೋಜಿಸಿದ್ದ ರಜನಿಕಾಂತ್, ಅಲ್ಲಿನ ಸುಂದರ ಪರಿಸರಕ್ಕೆ ಮಾರುಹೋಗಿ ಬರೋಬ್ಬರಿ 15 ದಿನಗಳ ಕಾಲ ಅಲ್ಲೇ ಉಳಿದುಕೊಂಡರಂತೆ. ‘ಸುತ್ತಲೂ ಹಸಿರು, ಕೆರೆ, ನಗುಮುಖದ ಜನರನ್ನು ನೋಡಿ ನನಗೆ ಆಶ್ಚರ್ಯವಾಯಿತು. ಅಲ್ಲಿ ಆನೆ, ಕುದುರೆಗಳು ಮತ್ತು ನೂರಾರು ಹಸುಗಳಿದ್ದವು. ವಿಶೇಷವೆಂದರೆ ಅಲ್ಲಿನ ಒಂದು ಕುದುರೆಯ ಹೆಸರು ರಜಿನಿ ಎಂದಿತ್ತು’ ಎನ್ನುವ ಮೂಲಕ ಪ್ರೇಕ್ಷಕರಲ್ಲಿ ನಗೆಹೊನಲು ಹರಿಸಿದರು.

ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಆಶ್ರಮಕ್ಕೆ ಭೇಟಿ ನೀಡಿದ್ದ ರಜನಿಕಾಂತ್ ಅವರಿಗೆ ಗುರೂಜಿ ಒಮ್ಮೆ ಆಶ್ರಮದ ಸುತ್ತ ಒಂದು ರೌಂಡ್ ಹಾಕೋಣವೇ ಎಂದು ಕೇಳಿದರಂತೆ. ‘ನಾನು ದೊಡ್ಡ ನಟನಾಗಿರುವುದರಿಂದ ಅಲ್ಲಿನ ಜನ ನನ್ನನ್ನು ಗುರುತಿಸಿ ಮುತ್ತಿಕೊಳ್ಳಬಹುದು, ಆಟೋಗ್ರಾಫ್‌ಗಾಗಿ ಮುಗಿಬೀಳಬಹುದು ಎಂದು ನಾನು ಸ್ವಲ್ಪ ಹಿಂಜರಿದೆ. ಅಲ್ಲಿ ತಮಿಳುನಾಡಿನ ನೂರಾರು ಜನರಿದ್ದರು. ಆದರೆ ಸತ್ಯ ಏನೆಂದರೆ, ಒಬ್ಬನೇ ಒಬ್ಬ ವ್ಯಕ್ತಿ ಕೂಡ ನನ್ನನ್ನು ಕಣ್ಣೆತ್ತಿಯೂ ನೋಡಲಿಲ್ಲ’ ಎಂದು ರಜನಿಕಾಂತ್ ಹೇಳಿದರು.

‘ನಾನು ಅಲ್ಲಿದ್ದ ಜನರಿಗೆ ಕೈಬೀಸುತ್ತಿದ್ದರೂ ಯಾರೂ ನನ್ನ ಕಡೆ ಗಮನ ಹರಿಸಲಿಲ್ಲ. ಫೋಟೋ, ಆಟೋಗ್ರಾಫ್ ಬಿಡಿ, ನನ್ನ ಜೊತೆ ಮಾತನಾಡಲೂ ಯಾರೂ ಬರಲಿಲ್ಲ. ನಾನು ಅನೇಕ ರಾಜಕಾರಣಿಗಳು ಮತ್ತು ಉದ್ಯಮಿಗಳನ್ನು ಭೇಟಿ ಮಾಡಿದ್ದೇನೆ, ಆದರೆ ಈ ಅನುಭವ ನನ್ನ ಅಹಂಕಾರವನ್ನು ಸಂಪೂರ್ಣವಾಗಿ ಮುರಿಯಿತು. ಅಧ್ಯಾತ್ಮದ ಶಕ್ತಿಯ ಮುಂದೆ ನನ್ನ ಸ್ಟಾರ್‌ಡಮ್ ಏನೂ ಅಲ್ಲ ಎಂಬುದು ಅಂದು ನನಗೆ ಅರ್ಥವಾಯಿತು’ ಎಂದು ಅವರು ಮನಬಿಚ್ಚಿ ಮಾತನಾಡಿದರು.

ಇದನ್ನೂ ಓದಿ: ಪ್ರತಿಯೊಬ್ಬ ಭಾರತೀಯ ನೋಡಬೇಕಾದ ಸಿನಿಮಾ: ‘ಧುರಂಧರ್ 2’ ಬಗ್ಗೆ ರಜನಿಕಾಂತ್ ಮೆಚ್ಚುಗೆ

ಸಿನಿಮಾದ ಪ್ರಸಿದ್ಧಿ ತಾತ್ಕಾಲಿಕ, ಆದರೆ ಆಧ್ಯಾತ್ಮಿಕ ಶಕ್ತಿ ಶಾಶ್ವತ ಎಂದು ರಜನಿಕಾಂತ್ ಅಭಿಪ್ರಾಯಪಟ್ಟರು. ‘ಸಿನಿಮಾದ ಸ್ಟಾರ್‌ಡಮ್ ಬರುತ್ತದೆ ಮತ್ತು ಹೋಗುತ್ತದೆ. ಆದರೆ ಆಧ್ಯಾತ್ಮಿಕ ಸ್ಟಾರ್‌ಡಮ್ ಅತ್ಯುನ್ನತವಾದುದು. ಅದು ಸಾವಿನ ನಂತರವೂ ಶಾಶ್ವತವಾಗಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Sonia Gandhi Hospitalised: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ನವದೆಹಲಿ, ಮೇ 13: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬುಧವಾರ ಗುರುಗಾಂವ್‌ನ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ನಿಯಮಿತ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಐಸಿಸಿ ಮಾಜಿ ಅಧ್ಯಕ್ಷೆ ಆಸ್ಪತ್ರೆಯಲ್ಲಿದ್ದಾರೆ ಮತ್ತು ಶೀಘ್ರದಲ್ಲೇ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ‘ಪಿಟಿಐ’ ಸುದ್ದಿಸಂಸ್ಥೆ ವರದಿ ಮಾಡಿದೆ. ಸೋನಿಯಾ ಗಾಂಧಿ ಅವರು ದಾಖಲಾಗಿರುವ ಬಗ್ಗೆ ಆಸ್ಪತ್ರೆ ಆಡಳಿತದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

(ಮಾಹಿತಿ ಅಪ್​ಡೇಟ್ ಆಗುತ್ತಿದೆ)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rates: ಆಮದು ಸುಂಕ ಎಫೆಕ್ಟ್; 10 ಗ್ರಾಂ ಚಿನ್ನದ ಬೆಲೆ 12,750 ರೂ ಏರಿಕೆ – Kannada News | Gold Price Today on 13th May 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಮೇ 13: ಚಿನ್ನ, ಬೆಳ್ಳಿ ಮೇಲೆ ಸರ್ಕಾರ ದಿಢೀರನೇ ಆಮದು ಸುಂಕ (Customs Duty) ಏರಿಕೆ ಮಾಡಿದ ಬೆನ್ನಲ್ಲೇ ಇವುಗಳ ಬೆಲೆ (Gold and Silver Rates) ಭರ್ಜರಿ ಏರಿಕೆ ಕಂಡಿವೆ. ಸರ್ಕಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಆಮದು ಸುಂಕವನ್ನು ಶೇ. 6ರಿಂದ ಶೇ. 15ಕ್ಕೆ ಏರಿಸಿತು. ಇದರಿಂದ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಈ ಅಮೂಲ್ಯ ವಸ್ತುಗಳ ಬೆಲೆಯಲ್ಲಿ ಶೇ. 6ರಷ್ಟು ಹೆಚ್ಚಳವಾಗಿದೆ. ಜ್ಯುವೆಲರಿ ಅಸೋಸಿಯೇಶನ್​ನ ಬೆಲೆ ಪಟ್ಟಿ ಪ್ರಕಾರ ಆಭರಣ ಚಿನ್ನದ ಬೆಲೆಯಲ್ಲಿ ಒಂದು ಗ್ರಾಮ್​ಗೆ ಬರೋಬ್ಬರಿ 1,275 ರೂ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯಲ್ಲಿ 20 ರೂ ಜಂಪ್ ಆಗಿದೆ. ವಿದೇಶಗಳಲ್ಲಿ ಬಹುತೇಕ ಕಡೆ ಚಿನ್ನದ ಬೆಲೆ ಕಡಿಮೆ ಆದರೂ, ಭಾರತದಲ್ಲಿ ಆಮದು ಸಂಕ ಹೆಚ್ಚಳದಿಂದಾಗಿ ಬೆಲೆಗಳು ಭಾರೀ ಏರಿಕೆ ಪಡೆದಿವೆ.

ಎರಡು ವರ್ಷದ ಹಿಂದೆ, 2024-25ರ ಬಜೆಟ್​ನಲ್ಲಿ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ. 15ರಿಂದ ಶೇ. 6ಕ್ಕೆ ಇಳಿಸಲಾಗಿತ್ತು. ಈ ಅದೇ ಮಟ್ಟಕ್ಕೆ ಏರಿಸಲಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,53,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,67,890 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 31,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,53,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 31,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 33,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 13ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,789 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,390 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,592 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 310 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,789 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,390 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 310 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 15,390 ರೂ
  • ಚೆನ್ನೈ: 15,400 ರೂ
  • ಮುಂಬೈ: 15,390 ರೂ
  • ದೆಹಲಿ: 15,405 ರೂ
  • ಕೋಲ್ಕತಾ: 15,390 ರೂ
  • ಕೇರಳ: 15,390 ರೂ
  • ಅಹ್ಮದಾಬಾದ್: 15,395 ರೂ
  • ಜೈಪುರ್: 15,405 ರೂ
  • ಲಕ್ನೋ: 15,405 ರೂ
  • ಭುವನೇಶ್ವರ್: 15,395 ರೂ

ಇದನ್ನೂ ಓದಿ: ಚಿನ್ನ, ಬೆಳ್ಳಿ ದರ ಇನ್ನಷ್ಟು ಏರಿಕೆಯಾಗೋದು ಫಿಕ್ಸ್: ಆಮದು ಸುಂಕ ಭರ್ಜರಿ ಹೆಚ್ಚಿಸಿದ ಕೇಂದ್ರ ಸರ್ಕಾರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 569 ರಿಂಗಿಟ್ (13,853 ರುಪಾಯಿ)
  • ದುಬೈ: 522 ಡಿರಾಮ್ (13,586 ರುಪಾಯಿ)
  • ಅಮೆರಿಕ: 146 ಡಾಲರ್ (13,966 ರುಪಾಯಿ)
  • ಸಿಂಗಾಪುರ: 185.90 ಸಿಂಗಾಪುರ್ ಡಾಲರ್ (13,972 ರುಪಾಯಿ)
  • ಕತಾರ್: 519.50 ಕತಾರಿ ರಿಯಾಲ್ (13,625 ರೂ)
  • ಸೌದಿ ಅರೇಬಿಯಾ: 531 ಸೌದಿ ರಿಯಾಲ್ (13,529 ರುಪಾಯಿ)
  • ಓಮನ್: 55.55 ಒಮಾನಿ ರಿಯಾಲ್ (13,794 ರುಪಾಯಿ)
  • ಕುವೇತ್: 42.93 ಕುವೇತಿ ದಿನಾರ್ (13,402 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 310 ರೂ
  • ಚೆನ್ನೈ: 330 ರೂ
  • ಮುಂಬೈ: 310 ರೂ
  • ದೆಹಲಿ: 310 ರೂ
  • ಕೋಲ್ಕತಾ: 310 ರೂ
  • ಕೇರಳ: 330 ರೂ
  • ಅಹ್ಮದಾಬಾದ್: 310 ರೂ
  • ಜೈಪುರ್: 310 ರೂ
  • ಲಕ್ನೋ: 310 ರೂ
  • ಭುವನೇಶ್ವರ್: 330 ರೂ
  • ಪುಣೆ: 310

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಒಂದು ಸೋಲಿನಿಂದ ನಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಅಳೆಯಬೇಡಿ! – Kannada News | Pat Cummins Post Match Interview After GTvs SRH Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 56ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ತಂಡವು ಹೀನಾಯವಾಗಿ ಸೋಲನುಭವಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 168 ರನ್​ಗಳನ್ನು ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸನ್​ರೈಸರ್ಸ್ ಹೈದರಾಬಾದ್ ತಂಡ 14.5 ಓವರ್​ಗಳಲ್ಲಿ 86 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಎಸ್​ಆರ್​ಹೆಚ್ ತಂಡ ಬರೋಬ್ಬರಿ 82 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಎಸ್​ಆರ್​ಹೆಚ್ ತಂಡದ ನಾಯಕ ಪ್ಯಾಟ್ ಕಮಿನ್ಸ್,  ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಬ್ಯಾಟಿಂಗ್ ಮಾಡಲು ಸಾಕಷ್ಟು ಕಷ್ಟಕರವಾಗಿತ್ತು. ವಿಶೇಷವಾಗಿ ಎದುರಾಳಿ ಬೌಲರ್‌ಗಳು ‘ಬ್ಯಾಕ್ ಆಫ್ ದಿ ಲೆಂತ್’  ಎಸೆತಗಳನ್ನು ನಿರಂತರವಾಗಿ ಹಾಕಿ ನಮಗೆ ರನ್ ಗಳಿಸಲು ಯಾವುದೇ ಅವಕಾಶ ನೀಡಲಿಲ್ಲ. ಇದು ಟಿ20 ಕ್ರಿಕೆಟ್‌ನಲ್ಲಿ ಕಂಡುಬಂದ ಅತ್ಯುತ್ತಮ ಬೌಲಿಂಗ್ ಪ್ರದರ್ಶನಗಳಲ್ಲಿ ಒಂದಾಗಿದೆ ಎಂದರು.

ಎದುರಾಳಿಗಳ ಬೌಲಿಂಗ್ ಶೈಲಿಯನ್ನು ಗಮನಿಸಿದಾಗ, ನಮ್ಮ ಬೌಲಿಂಗ್ ಅವಧಿಯಲ್ಲಿ ನಾವೂ ಕೂಡ ಲೈನ್ ಮತ್ತು ಲೆಂತ್ ಅನ್ನು ಇನ್ನು ಸ್ವಲ್ಪ ದೀರ್ಘಕಾಲ ಕಾಯ್ದುಕೊಳ್ಳಬೇಕಿತ್ತೇನೋ ಎನಿಸುತ್ತದೆ. ಈ ತಪ್ಪುಗಳಿಂದ ನಾವು ಪಾಠ ಕಲಿಯಲಿದ್ದೇವೆ ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.

ಈ ಸೋಲಿನ ಹೊರತಾಗಿಯೂ ನಮ್ಮ ಅಗ್ರ ಕ್ರಮಾಂಕದ ಬ್ಯಾಟಿಂಗ್ ಅತ್ಯುತ್ತಮವಾಗಿದೆ. ಅಗ್ರ ನಾಲ್ಕು ಬ್ಯಾಟರ್‌ಗಳಲ್ಲಿ ಪ್ರತಿಯೊಬ್ಬರೂ ಈಗಾಗಲೇ 400ಕ್ಕೂ ಹೆಚ್ಚು ರನ್‌ಗಳನ್ನು ಕಲೆಹಾಕಿದ್ದಾರೆ. ಆದ್ದರಿಂದ ಈ ಒಂದು ಪಂದ್ಯದ ಪ್ರದರ್ಶನವನ್ನು ಅತಿಯಾಗಿ ವಿಶ್ಲೇಷಿಸುವ ಅಗತ್ಯವಿಲ್ಲ. ಟಿ20 ಕ್ರಿಕೆಟ್‌ನಲ್ಲಿ ಇಂತಹ ಏರಿಳಿತಗಳು ಸಹಜ ಎಂದು ಕಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: IPL 2026: 4+2+6 ಸಂಯೋಜನೆಯಲ್ಲಿ ಕಣಕ್ಕಿಳಿಯಲಿದೆ RCB

ಇನ್ನು ಪ್ಲೇಆಫ್ ಹಾದಿ ಬಗ್ಗೆ ಮಾತನಾಡಿದ ಪ್ಯಾಟ್ ಕಮಿನ್ಸ್, ಕಳೆದ ಏಳು ಪಂದ್ಯಗಳಲ್ಲಿ ನಾವು 5 ಅಥವಾ 6 ಪಂದ್ಯಗಳನ್ನು ಗೆದ್ದಿರುವುದರಿಂದ ಸದ್ಯಕ್ಕೆ ನಮ್ಮ ತಂಡ ಸುಸ್ಥಿತಿಯಲ್ಲಿದೆ. ಪ್ಲೇಆಫ್ ತಲುಪಲು ಇನ್ನು ಎರಡು ಪಂದ್ಯಗಳು ಬಾಕಿ ಇವೆ. ನಮಗೆ ಪರಿಚಿತವಿರುವ ಕ್ರೀಡಾಂಗಣಗಳಲ್ಲಿ ಮುಂದಿನ ಪಂದ್ಯಗಳು ನಡೆಯಲಿದ್ದು, ಹಳೆಯ ಗೆಲುವಿನ ಸೂತ್ರಕ್ಕೆ ಮರಳಿ, ಈ ಸೋಲನ್ನು ಮರೆತು ಮುನ್ನಡೆಯಲಿದ್ದೇವೆ ಎಂದಿದ್ದಾರೆ.

ಈ ಮೂಲಕ ಮುಂಬರುವ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಸನ್​ರೈಸರ್ಸ್ ಹೈದರಾಬಾದ್ ತಂಡವು ಪ್ಲೇಆಫ್​ಗೇರಲಿದೆ ಎಂದು ಪ್ಯಾಟ್ ಕಮಿನ್ಸ್​ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Source link

Exit mobile version