ವಿಜಯ್ ಫಿಟ್​​ನೆಸ್​​ ಗುಟ್ಟೇನು? ಖಾಸಗಿ ಟ್ರೈನರ್ ಹಂಚಿಕೊಂಡ ಕುತೂಹಲಕಾರಿ ಮಾಹಿತಿ – Kannada News | Thalapathy Vijay’s personal trainer talks about Vijay’s food and workout

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ (Thalapathy Vijay) ಈಗ ತಮಿಳುನಾಡಿನ ಸಿಎಂ ಆಗಿದ್ದಾರೆ. ಸಿನಿಮಾ ನಟನಾಗಿ ಅದ್ಧೂರಿ ಯಶಸ್ಸು ಅವರಿಗೆ ದೊರೆತಿದೆ. ವಿಜಯ್ ಅವರು ತಮಿಳುನಾಡಿನ ಸಾಂಪ್ರದಾಯಿಕ ರಾಜಕಾರಣಿಗಳಂತೆ ಅಲ್ಲದೆ, ಸಾಕಷ್ಟು ಫಿಟ್ ಆಗಿರುವ, ವಯಸ್ಸೂ ಇರುವ ಸಿಎಂ ಆಗಿದ್ದಾರೆ. ವಿಜಯ್ ಅವರಿಗೆ ಈಗ 50ರ ವಯಸ್ಸು, ಜಯಲಲಿತಾ ಬಿಟ್ಟರೆ ಅತಿ ಕಡಿಮೆ ವಯಸ್ಸಿಗೆ ತಮಿಳುನಾಡು ಸಿಎಂ ಆದವರು ವಿಜಯ್. 50ರ ಹರೆಯದಲ್ಲೂ ಅವರು 30ರ ಹರೆಯದವರಂತೆ ವಿಜಯ್ ಕಾಣುತ್ತಾರೆ. ಸಿನಿಮಾನಲ್ಲಿ ಫಿಟ್​​ನೆಸ್ ಬಹಳ ಮುಖ್ಯ, ಹಾಗೆಯೇ ರಾಜಕಾರಣಕ್ಕೂ ಸಹ. ವಿಜಯ್ ತಮ್ಮ ಫಿಟ್​​ನೆಸ್ ಹೇಗೆ ಮೇಂಟೇನ್ ಮಾಡುತ್ತಾರೆ, ಪ್ರತಿದಿನ ಅವರು ತಿನ್ನುವ ಆಹಾರ ಏನು? ಮಾಡುವ ವ್ಯಾಯಾಮಗಳೇನು? ಅವರ ಖಾಸಗಿ ಟ್ರೈನರ್ ನರೇಶ್ ಕುಮಾರ್ ಈ ಬಗ್ಗೆ ಮಾತನಾಡಿದ್ದಾರೆ.

ವಿಜಯ್ ಅವರ ಖಾಸಗಿ ಟ್ರೈನರ್ ನರೇಶ್ ಕುಮಾರ್ ಹೇಳಿರುವಂತೆ, ವಿಜಯ್ ಅವರು ತಮ್ಮ ಆಹಾರದ ವಿಷಯದಲ್ಲಿ ಅತೀ ಹೆಚ್ಚು ಶಿಸ್ತು ಪಾಲಿಸುತ್ತಾರೆ. ಅವರು ಅತಿಯಾಗಿ ತಿನ್ನುವುದಿಲ್ಲ, ಬಹಳ ಹಿತವಾಗಿ ಮಿತವಾಗಿ ತಿನ್ನುತ್ತಾರೆ. ವಿಶೇಷವಾಗಿ ಕರಿದ ಪದಾರ್ಥಗಳಿಂದ ದೂರವಿರುತ್ತಾರೆ. ಪ್ರೋಟೀನ್ ಸಮೃದ್ಧವಾಗಿರುವ ಆಹಾರ ಮತ್ತು ತಾಜಾ ತರಕಾರಿಗಳಿಗೆ ಅವರು ಹೆಚ್ಚಿನ ಆದ್ಯತೆ ನೀಡುತ್ತಾರಂತೆ. ರಾತ್ರಿ 7 ಗಂಟೆಯೊಳಗೆ ತಮ್ಮ ಊಟವನ್ನು ಮುಗಿಸುವುದು ಅವರ ಪ್ರಮುಖ ಆರೋಗ್ಯ ಸೂತ್ರಗಳಲ್ಲಿ ಒಂದು ಎಂದಿದ್ದಾರೆ ಅವರು.

ವಿಜಯ್ ಅವರಿಗೆ ಬಲ್ಕ್ ಬಾಡಿ ಬಿಲ್ಡಿಂಗ್​​ನಲ್ಲಿ ವಿಶ್ವಾಸವಿಲ್ಲವಂತೆ. ಅವರು ಆರೋಗ್ಯಕ್ಕಾಗಿ ಜಿಮ್ ಮಾಡುತ್ತಾರಂತೆ. ವಿಜಯ್ ಗಂಟೆಗಟ್ಟಲೆ ಜಿಮ್​​ನಲ್ಲಿ ಕಳೆಯುವುದಿಲ್ಲ ಬದಲಿಗೆ ವ್ಯವಸ್ಥಿತವಾಗಿ ತಮ್ಮ ದೇಹದ ಆರೋಗ್ಯ ಮತ್ತು ಫ್ಲೆಕ್ಸಿಬಿಲಿಟಿಗೆ ಬೇಕಾದ ವ್ಯಾಯಾಮಗಳನ್ನಷ್ಟೆ ಮಾಡುತ್ತಾರೆ. ಪ್ರತಿದಿನ ಕಾರ್ಡಿಯೋ ವ್ಯಾಯಾಮಗಳು ಮತ್ತು ವೇಯ್ಟ್ ಲಿಫ್ಟಿಂಗ್ ತಪ್ಪದೇ ಮಾಡುತ್ತಾರಂತೆ ವಿಜಯ್. ಶೂಟಿಂಗ್ ಎಷ್ಟೇ ತಡವಾದರೂ ಅಥವಾ ಎಷ್ಟೇ ದಣಿದಿದ್ದರೂ, ಅವರು ವ್ಯಾಯಾಮವನ್ನು ಮಾತ್ರ ಕೈಬಿಡುವುದಿಲ್ಲವಂತೆ.

ಇದನ್ನೂ ಓದಿ:ವಿಜಯ್ ಸೂಟು-ಸ್ಟಾಲಿನ್ ಪಂಚೆ: ಅಣ್ಣಾಮಲೈ ಸಖತ್ ಟಾಂಗ್

ಫಿಟ್‌ನೆಸ್ ಎನ್ನುವುದು ಕೇವಲ ದೈಹಿಕವಷ್ಟೇ ಅಲ್ಲ, ಅದು ಮಾನಸಿಕ ಶಿಸ್ತಿನಿಂದ ಬರುತ್ತದೆ ಎಂದು ನರೇಶ್ ವಿವರಿಸಿದ್ದಾರೆ. ವಿಜಯ್ ಅವರಿಗೆ ತಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇದೆ. ಸಕ್ಕರೆ ಅಂಶವಿರುವ ಪದಾರ್ಥಗಳನ್ನು ಮತ್ತು ಜಂಕ್ ಫುಡ್‌ಗಳನ್ನು ಅವರು ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಸಿನಿಮಾ ಪಾತ್ರಗಳಿಗೆ ತಕ್ಕಂತೆ ತಮ್ಮ ದೇಹವನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ.

ವಿಜಯ್ ನಟನೆಯ ‘ಮಾಸ್ಟರ್’ ಸಿನಿಮಾ ಕೆಲ ವರ್ಷಗಳ ಹಿಂದಷ್ಟೆ ಬಂದಿತ್ತು. ಆ ಸಿನಿಮಾನಲ್ಲಿ ಅವರು ಶರ್ಟ್​​ಲೆಸ್ ಆಗಿ ಸಹ ಕಾಣಿಸಿಕೊಂಡಿದ್ದರು. ವಿಜಯ್ ಅವರು ಸಿಕ್ಸ್ ಪ್ಯಾಕ್ ಮಾಡಿಲ್ಲವಾದರೂ ಬೊಜ್ಜು ರಹಿತದವಾದ ಫಿಟ್ ಆಗಿರುವ ದೇಹವನ್ನು ಮೇಂಟೇನ್ ಮಾಡಿದ್ದಾರೆ. ದಿನಪೂರ್ತಿ ದಣಿಯದೆ, ಉತ್ಸಾಹ, ಉಲ್ಲಾಸದಿಂದ ಓಡಾಡುತ್ತಿರಲು ಫಿಟ್​​ನೆಸ್​​ನ ಅವಶ್ಯಕತೆ ಇದೆ. ಸಿನಿಮಾಕ್ಕಾಗಿ ಮಾಡಿದ ವ್ಯಾಯಾಮ, ಕಸರತ್ತು ವಿಜಯ್ ಅವರಿಗೆ ರಾಜಕೀಯದಲ್ಲಿ ಖಂಡಿತ ನೆರವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Office Desk Vastu: ವೃತ್ತಿಜೀವನದ ಯಶಸ್ಸಿಗೆ ಆಫೀಸ್ ಡೆಸ್ಕ್ ಮೇಲೆ ಈ ವಸ್ತುಗಳನ್ನಿಡಿ – Kannada News | Office Desk Vastu: Boost Career Growth and Positive Energy at Your Workplace

ವೃತ್ತಿಜೀವನದ ಯಶಸ್ಸಿಗೆ ವಾಸ್ತುImage Credit source: Pinterest

ಮನೆ ನಿರ್ಮಾಣದಲ್ಲಿ ವಾಸ್ತು ಶಾಸ್ತ್ರ ಎಷ್ಟು ಮುಖ್ಯವೋ ಹಾಗೆಯೇ ನಿಮ್ಮ ಕೆಲಸದ ಸ್ಥಳಗಳಲ್ಲಿಯೂ ಕೂಡ ವಾಸ್ತು ಅಷ್ಟೇ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ, ನಾವು ಕೆಲಸ ಮಾಡುವ ಸ್ಥಳವು ನಮ್ಮ ಏಳಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಆಫೀಸ್ ಡೆಸ್ಕ್ ಮೇಲೆ ಈ ಕೆಲವು ವಸ್ತುಗಳನ್ನು ಇರಿಸುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಗಣೇಶ ಅಥವಾ ಲಕ್ಷ್ಮಿಯ ಸಣ್ಣ ವಿಗ್ರಹ:

ಕೆಲಸದ ಸ್ಥಳದಲ್ಲಿ ವಿಘ್ನನಿವಾರಕ ಗಣೇಶನ ಸಣ್ಣ ವಿಗ್ರಹವನ್ನು ಇಡುವುದು ಅತ್ಯಂತ ಶುಭ. ಇದು ಅಡೆತಡೆಗಳನ್ನು ನಿವಾರಿಸಿ ಹೊಸ ಅವಕಾಶಗಳನ್ನು ತರುತ್ತದೆ. ಹಾಗೆಯೇ ಲಕ್ಷ್ಮಿಯ ಕೃಪೆಯಿಂದ ಆರ್ಥಿಕ ಲಾಭವಾಗುತ್ತದೆ ಎಂದು ನಂಬಲಾಗಿದೆ.

ಬಿದಿರಿನ ಗಿಡ (Bamboo Plant):

ಆಫೀಸ್ ಟೇಬಲ್ ಮೇಲೆ ಸಣ್ಣ ಬಿದಿರಿನ ಗಿಡವನ್ನು ಇಡುವುದು ವಾಸ್ತುವಿನಲ್ಲಿ ಬಹಳ ಜನಪ್ರಿಯ. ಇದು ಅದೃಷ್ಟದ ಸಂಕೇತವಾಗಿದ್ದು, ಸುತ್ತಮುತ್ತಲಿನ ನಕಾರಾತ್ಮಕತೆಯನ್ನು ಹೋಗಲಾಡಿಸಿ ಕೆಲಸದಲ್ಲಿ ಏಕಾಗ್ರತೆ ಹೆಚ್ಚಿಸಲು ಸಹಾಯ ಮಾಡುತ್ತದೆ.

ಸ್ಫಟಿಕದ ಪಿರಮಿಡ್ (Crystal Pyramid):

ಮೇಜಿನ ಮೇಲೆ ಸ್ಫಟಿಕದ (Crystal) ಪಿರಮಿಡ್ ಇಡುವುದರಿಂದ ಧನಾತ್ಮಕ ಶಕ್ತಿಯು ಕೇಂದ್ರೀಕೃತವಾಗುತ್ತದೆ. ಇದು ನಿಮ್ಮಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಸವಾಲುಗಳನ್ನು ಎದುರಿಸುವ ಶಕ್ತಿ ನೀಡುತ್ತದೆ.

ಓಡುವ ಕುದುರೆಗಳ ಚಿತ್ರ ಅಥವಾ ಪ್ರತಿಮೆ:

ಓಡುತ್ತಿರುವ ಕುದುರೆಗಳು ವೇಗ ಮತ್ತು ಪ್ರಗತಿಯ ಸಂಕೇತ. ಮೇಜಿನ ಮೇಲೆ ಅಥವಾ ಎದುರಿನ ಗೋಡೆಯ ಮೇಲೆ ಏಳು ಓಡುವ ಕುದುರೆಗಳ ಚಿತ್ರವನ್ನು ಇಡುವುದರಿಂದ ವೃತ್ತಿಜೀವನದಲ್ಲಿ ವೇಗವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ.

ತಾಜಾ ಹೂವುಗಳು:

ಯಾವಾಗಲೂ ಮೇಜಿನ ಮೇಲೆ ತಾಜಾ ಹೂವುಗಳನ್ನು (ವಿಶೇಷವಾಗಿ ಹಳದಿ ಅಥವಾ ಬಿಳಿ ಬಣ್ಣದ ಹೂವುಗಳು) ಇಡುವುದರಿಂದ ಮನಸ್ಸು ಪ್ರಫುಲ್ಲವಾಗಿರುತ್ತದೆ. ಆದರೆ ಹೂವುಗಳು ಬಾಡಿಹೋದ ತಕ್ಷಣ ಅವುಗಳನ್ನು ತೆಗೆದುಹಾಕಬೇಕು.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ದಿಕ್ಸೂಚಿ (Compass):

ನಿಮ್ಮ ಮೇಜಿನ ಉತ್ತರ ದಿಕ್ಕಿನಲ್ಲಿ ಸಣ್ಣ ದಿಕ್ಸೂಚಿಯನ್ನು ಇಡುವುದು ವೃತ್ತಿಜೀವನದ ಬೆಳವಣಿಗೆಗೆ ಪೂರಕವಾಗಿದೆ. ಇದು ನಿಮಗೆ ಹೊಸ ದಾರಿಗಳನ್ನು ತೋರಿಸುತ್ತದೆ ಎಂದು ನಂಬಲಾಗಿದೆ.

ಕೆಲವು ಪ್ರಮುಖ ನಿಯಮಗಳು:

ನಿಮ್ಮ ಮೇಜು ಯಾವಾಗಲೂ ಅಚ್ಚುಕಟ್ಟಾಗಿರಲಿ. ಅನಗತ್ಯ ಕಾಗದಪತ್ರಗಳು ಅಥವಾ ಹಳೆಯ ಫೈಲ್‌ಗಳನ್ನು ರಾಶಿ ಹಾಕಬೇಡಿ. ಕೆಲಸ ಮಾಡುವಾಗ ನಿಮ್ಮ ಮುಖವು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿರುವುದು ವಾಸ್ತು ಪ್ರಕಾರ ಅತ್ಯಂತ ಶ್ರೇಷ್ಠ. ಪೆನ್ ಸ್ಟ್ಯಾಂಡ್ ಅಥವಾ ಕನ್ನಡಿ ಒಡೆದಿದ್ದರೆ ತಕ್ಷಣ ಬದಲಾಯಿಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:19 am, Tue, 12 May 26

Source link

ಆಡಳಿತ ವೈಫಲ್ಯ: ಪ್ರಧಾನಿ ಮೋದಿಯ ಟೀಕಿಸಿದ ಸಿಎಂ ಸಿದ್ದರಾಮಯ್ಯಗೆ ಅಂಕಿಅಂಶ ಸಮೇತ ತಿರುಗೇಟು ಕೊಟ್ಟ ಪ್ರಲ್ಹಾದ್ ಜೋಶಿ – Kannada News | Pralhad Joshi Slams CM Siddaramaiah Over PM Modi’s Bengaluru Speech Criticism; Highlights Karnataka’s Debt Crisis

ಪ್ರಧಾನಿ ಮೋದಿ, ಪ್ರಲ್ಹಾದ್ ಜೋಶಿ ಹಾಗೂ ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)Image Credit source: TV9 Network

ಬೆಂಗಳೂರು, ಮೇ 12: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಬೆಂಗಳೂರಿಗೆ ಭೇಟಿ ನೀಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ನಡುವೆ ವಾಕ್ಸಮರ ತಾರಕಕ್ಕೇರಿದೆ. ಪ್ರಧಾನಿ ಮೋದಿ ಭಾಷಣವು ‘ಸುಳ್ಳು ಮತ್ತು ದ್ವೇಷದಿಂದ ಕೂಡಿದೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದರೆ, ಇದಕ್ಕೆ ಪ್ರತಿಯಾಗಿ ಪ್ರಲ್ಹಾದ್ ಜೋಶಿ ಅವರು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಪಟ್ಟಿ ಮಾಡುವ ಮೂಲಕ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಜಾಹೀರಾತುಗಳ ಹಿಂದೆ ಅಡಗಿರುವ ಕಾಂಗ್ರೆಸ್ ಸರ್ಕಾರದ ಅಸಲಿಯತ್ತು ಈಗ ಬಯಲಾಗಿದೆ ಎಂದು ಜೋಶಿ ಲೇವಡಿ ಮಾಡಿದ್ದಾರೆ.

ಮುಖ್ಯಾಂಶಗಳು

  • ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ‘ಗ್ಯಾರಂಟಿ ಆಧಾರಿತ ಸಾಲದ ಬಲೆ’ಗೆ ತಳ್ಳಿದೆ: ಪ್ರಲ್ಹಾದ್ ಜೋಶಿ ಆರೋಪ.
  • ರಾಜ್ಯದ ಸಾಲದ ಹೊರೆ ಹೆಚ್ಚುತ್ತಿದೆ, ರಸ್ತೆಗಳು ಗುಂಡಿಮಯವಾಗಿವೆ, ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಯಾಗಿಲ್ಲ: ಕೇಂದ್ರ ಸಚಿವ ಟೀಕೆ.
  • ಸಿದ್ದರಾಮಯ್ಯ ಸರ್ಕಾರವು ಜನರ ಮೇಲೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ಹೊರೆ ಹೊರಿಸುತ್ತಿದೆ: ಜೋಶಿ ಕಿಡಿ

ಕಾಂಗ್ರೆಸ್ ಆಡಳಿತಕ್ಕೆ ಜೋಶಿ ಚಾಟಿ

ಸಿದ್ದರಾಮಯ್ಯ ಟೀಕೆಗಳಿಗೆ ತಿರುಗೇಟು ನೀಡಿದ ಪ್ರಲ್ಹಾದ್ ಜೋಶಿ, ‘ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ಕಾಂಗ್ರೆಸ್ ಹದಗೆಡಿಸಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಕಾಂಗ್ರೆಸ್ ಸಚಿವರು ಶಾಸಕರನ್ನು ಎಣಿಸುವುದರಲ್ಲೇ (ಪಕ್ಷದೊಳಗಿನ ಅಧಿಕಾರ ಹಂಚಿಕೆ ಕಿತ್ತಾಟ ಉಲ್ಲೇಖಿಸಿ) ನಿರತರಾಗಿದ್ದಾರೆ’ ಎಂದು ಕಿಡಿಕಾರಿದ್ದಾರೆ. ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ಹದಗೆಟ್ಟಿವೆ ಮತ್ತು ಗುತ್ತಿಗೆದಾರರು ಬಿಲ್ ಪಾವತಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ಆಡಳಿತ ಹಳಿ ತಪ್ಪಿರುವುದಕ್ಕೆ ಸಾಕ್ಷಿ ಎಂದು ಜೋಶಿ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರದಿಂದ 48 ಅಗತ್ಯ ವಸ್ತುಗಳ ಬೆಲೆ ಏರಿಕೆ: ಜೋಶಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾಲು, ಇಂಧನ, ವಿದ್ಯುತ್ ಸೇರಿದಂತೆ ಸುಮಾರು 48 ಅಗತ್ಯ ವಸ್ತುಗಳು ಮತ್ತು ಸೇವೆಗಳ ಬೆಲೆ ಏರಿಕೆಯಾಗಿದೆ ಎಂದು ಜೋಶಿ ಆರೋಪಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತದೆ, ಆದರೆ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಭಾರಿ ಹೊರೆ ಹೊರಿಸುತ್ತಿದೆ. ಇದು ಜನರಿಗೆ ಮಾಡಿದ ದ್ರೋಹ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿಯವರು ದೇಶದ ಹಿತದೃಷ್ಟಿಯಿಂದ ನೀಡಿದ ಕರೆಗಳನ್ನು ಸಿದ್ದರಾಮಯ್ಯ ಅವರು ಲೇವಡಿ ಮಾಡುತ್ತಿರುವುದು ಅವರ ಜವಾಬ್ದಾರಿಯಿಲ್ಲದ ನಾಯಕತ್ವವನ್ನು ತೋರಿಸುತ್ತದೆ ಎಂದು ಜೋಶಿ ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದ ಖಜಾನೆ ಲೂಟಿ ಮಾಡುತ್ತಿದೆ ಕಾಂಗ್ರೆಸ್, ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ: ಮೋದಿ ವ್ಯಂಗ್ಯ!

ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತದ ಆರ್ಥಿಕತೆ ಕುಸಿತ ಕಂಡಿದ್ದನ್ನು ನೆನಪಿಸಿದ ಜೋಶಿ, ಮೋದಿ ಅವರ ನಾಯಕತ್ವದಲ್ಲಿ ಭಾರತವು ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ. ಬೇರೆಯವರನ್ನು ಪ್ರಶ್ನೆ ಮಾಡುವ ಮುನ್ನ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಒಳಗಿನ ಅಧಿಕಾರ ದಾಹ, ಕಿತ್ತಾಟ ಮತ್ತು ಆಡಳಿತದ ಪಾರ್ಶ್ವವಾಯುವಿಗೆ ಉತ್ತರ ನೀಡಲಿ ಎಂದು ಅವರು ಸವಾಲು ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಾನು, ವಿಜಯ್, ಸ್ಪೀಕರ್ ಒಂದೇ ಕಾಲೇಜಲ್ಲಿ ಓದಿದವರು’: ಕಾಲೇಜು ದಿನಗಳ ವಿಧಾನಸಭೆಯಲ್ಲಿ ನೆನಪಿಸಿದ ಉದಯನಿಧಿ ಹೇಳಿದ್ದೇನು ನೋಡಿ!

ಚೆನ್ನೈ, ಮೇ 12: ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಹಳೆಯ ಸ್ನೇಹದ ನೆನಪುಗಳನ್ನು ಮೆಲುಕು ಹಾಕಿದ್ದು ಗಮನ ಸೆಳೆದಿದೆ. ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಮುಖ್ಯಮಂತ್ರಿ ವಿಜಯ್ ಅವರ ಕಾಲೆಳೆಯುತ್ತಲೇ, ತಮಿಳುನಾಡು ರಾಜಕೀಯದಲ್ಲಿ ಡಿಎಂಕೆ ಎಷ್ಟು ಅನುಭವಿ ಪಕ್ಷ ಎಂಬ ಸಂದೇಶವನ್ನೂ ರವಾನಿಸಿದರು.

‘ನಾನು, ಸಿಎಂ ವಿಜಯ್ ಮತ್ತು ಸ್ಪೀಕರ್ ಪ್ರಭಾಕರ್ ಎಲ್ಲರೂ ಒಂದೇ ಕಾಲೇಜಿನಲ್ಲಿ ಓದಿದವರು. ಆದರೆ ಆಡಳಿತದ ವಿಷಯಕ್ಕೆ ಬಂದರೆ ಡಿಎಂಕೆ ‘ಸೀನಿಯರ್ ಬ್ಯಾಚ್’. ಆಡಳಿತ ಹೇಗೆ ನಡೆಸಬೇಕು ಎಂಬುದನ್ನು ನಾವು ನಿಮಗೆ ಕಲಿಸಲು ಸಿದ್ಧರಿದ್ದೇವೆ’ ಎಂದು ಉದಯನಿಧಿ ಸ್ಟಾಲಿನ್ ಸಿಎಂ ವಿಜಯ್ ಉದ್ದೇಶಿಸಿ ಹೇಳಿದರು. ಇದೇ ವೇಳೆ, ವಿಜಯ್ ತುಟಿಯಂಚಿನಲ್ಲಿ ಕಿರು ನಗು ಮೂಡಿದ್ದು ಕಾಣಿಸಿತು. ಈ ಮಾತಿನ ಮೂಲಕ ವಿಜಯ್ ಅವರು ರಾಜಕೀಯಕ್ಕೆ ಹೊಸಬರು ಮತ್ತು ಡಿಎಂಕೆ ಅನುಭವದ ಮುಂದೆ ಇನ್ನೂ ಕಲಿಯುವುದು ಸಾಕಷ್ಟಿದೆ ಎಂದು ಉದಯನಿಧಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ! – Kannada News | Public Positively Responds To PM Modi’s Appeal To Save Fuel, Uses Public Transport

ಬೆಂಗಳೂರು, ಮೇ 12: ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಮಿತವಾಗಿ ಬಳಸುವಂತೆ ಹಾಗೂ ಸಾರ್ವಜನಿಕ ಸಾರಿಗೆಯಾದ ಮೆಟ್ರೋ ಮತ್ತು ಬಸ್‌ಗಳನ್ನು ಹೆಚ್ಚಾಗಿ ಉಪಯೋಗಿಸುವಂತೆ ಕರೆ ನೀಡಿದ್ದರು. ಈ ಕರೆಗೆ ಬೆಂಗಳೂರಿನ ಜನತೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ.

ಬೆಂಗಳೂರಿನ ಪ್ರಯಾಣಿಕ ಮಂಜುನಾಥ್ ಅವರು ಪ್ರಧಾನಿಯವರ ಸಲಹೆ ಪಾಲಿಸಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿರುವುದಾಗಿ ಹೇಳಿದ್ದಾರೆ. ಮತ್ತೊಬ್ಬ ಪ್ರಯಾಣಿಕರು ತಮ್ಮ ಬೈಕ್ ಬಿಟ್ಟು ಮೆಟ್ರೋದಲ್ಲಿ ಕಚೇರಿಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಸಾರ್ವಜನಿಕ ಸಾರಿಗೆ ಬಳಸುವುದರಿಂದ ವೈಯಕ್ತಿಕವಾಗಿ ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಅಲ್ಲದೆ, ದೇಶದ ಇಂಧನ ಆಮದನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಮತ್ತು ಇಂಧನದ ಬೆಲೆ ಏರಿಕೆಗಳನ್ನು ಗಮನಿಸಿದಾಗ, ಈ ಸಲಹೆ ದೇಶದ ಆರ್ಥಿಕತೆಗೆ ಅತ್ಯಂತ ಮಹತ್ವದ್ದು ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿಯವರ ಸಲಹೆಗಳು ದೇಶಕ್ಕೆ ಮತ್ತು ಜನರಿಗೆ ಒಳ್ಳೆಯದನ್ನೇ ಹೇಳುತ್ತವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಕೆ ಇಂಧನ ಉಳಿತಾಯಕ್ಕೆ ಉತ್ತಮ ಮಾರ್ಗವಾಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದ್ರಾಸ್ ಹೈಕೋರ್ಟ್‌ನಿಂದ TVK ಶಾಸಕ ಶ್ರೀನಿವಾಸ ಸೇತುಪತಿಗೆ ಶಾಕ್: ವಿಶ್ವಾಸ ಮತ ಯಾಚನೆಯಲ್ಲಿ ಭಾಗವಹಿಸದಂತೆ ನಿರ್ಬಂಧ – Kannada News | Madras High Court Restrains TVK MLA Srinivasa Sethupathi From Floor Test Amidst Ballot Irregularity Claims

ಚೆನ್ನೈ, ಮೇ 12: ಅಂಚೆ ಮತಪತ್ರಗಳ ಎಣಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮದ್ರಾಸ್ ಹೈಕೋರ್ಟ್ ತಿರುಪತ್ತೂರು ಕ್ಷೇತ್ರದ ಟಿವಿಕೆ ಶಾಸಕ ಶ್ರೀನಿವಾಸ ಸೇತುಪತಿ ಅವರನ್ನು ವಿಧಾನಸಭೆಯ ವಿಶ್ವಾಸ ಮತ ಯಾಚನೆಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದೆ. ಈ ಆದೇಶವು ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಮಹತ್ವ ಪಡೆದಿದೆ. ಪೆರಿಯಾ ಕೃಪನ್ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಶ್ರೀನಿವಾಸ ಸೇತುಪತಿ ವಿರುದ್ಧ ಅಂಚೆ ಮತಪತ್ರಗಳಲ್ಲಿ ಗೋಲ್ಮಾಲ್ ನಡೆದಿದೆ ಎಂದು ಆರೋಪಿಸಿದ್ದರು. ತಿರುಪತ್ತೂರು ವಿಧಾನಸಭಾ ಕ್ಷೇತ್ರ ಸಂಖ್ಯೆ 185ರ ಮತಗಳನ್ನು ಬೆಲ್ಲೂರು ಜಿಲ್ಲೆಯ ತಿರುಪತ್ತೂರು ಕ್ಷೇತ್ರ ಸಂಖ್ಯೆ 50ಕ್ಕೆ ತಪ್ಪಾಗಿ ವರ್ಗಾಯಿಸಲಾಗಿದೆ ಎಂಬುದು ಅರ್ಜಿಯಲ್ಲಿದ್ದ ಪ್ರಮುಖ ಆಪಾದನೆಯಾಗಿತ್ತು.ಚುನಾವಣಾ ಆಯೋಗವು ಆರಂಭದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಮದ್ರಾಸ್ ಹೈಕೋರ್ಟ್ ಪೆರಿಯಾ ಕೃಪನ್ ಅವರ ದೂರನ್ನು ಬೆಂಬಲಿಸಲು ಸಾಕಷ್ಟು ಪುರಾವೆಗಳಿವೆ ಎಂದು ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ, ಶ್ರೀನಿವಾಸ ಸೇತುಪತಿ ಅವರು ವಿಶ್ವಾಸ ಮತ ಯಾಚನೆಯಲ್ಲಿ ಪಾಲ್ಗೊಳ್ಳಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ, ಎಲ್ಲಾ ಅಂಚೆ ಮತಪತ್ರಗಳನ್ನು ಸುರಕ್ಷಿತವಾಗಿಡಲು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಲು ಸಹ ನ್ಯಾಯಾಲಯ ಸೂಚಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ರಾಜ ಸಾಬ್’ ಸಣ್ಣ ಸಿನಿಮಾ ಎಂದ ಕಾಮಿಡಿಯನ್; ಶುರುವಾಯ್ತು ಟೀಕೆ – Kannada News | Sapthagiri’s ‘Small Film’ Comment on Prabhas’s ‘The Raja Saab’ Sparks Major Fan Outcry

ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯನಟ ಸಪ್ತಗಿರಿ ಅವರು ಇತ್ತೀಚೆಗೆ ತಮ್ಮ ‘ಪುರುಷ’ ಚಿತ್ರದ ಪ್ರಚಾರದ ವೇಳೆ ನೀಡಿದ ಹೇಳಿಕೆಯೊಂದು ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ‘ದಿ ರಾಜಾ ಸಾಬ್’ ಚಿತ್ರವನ್ನು ಸಪ್ತಗಿರಿ ಅವರು ‘ಸಣ್ಣ ಸಿನಿಮಾ’ ಎಂದು ಕರೆದಿದ್ದಾರೆ. ಪ್ರಭಾಸ್ ಅವರಂತಹ ಪ್ಯಾನ್ ಇಂಡಿಯಾ ಸ್ಟಾರ್ ಚಿತ್ರವನ್ನು ಹೀಗೆ ಹಗುರವಾಗಿ ಬಿಂಬಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮಾಧ್ಯಮಗೋಷ್ಠಿಯಲ್ಲಿ ತಮ್ಮ ಸಿನಿಮಾ ಜರ್ನಿ ಬಗ್ಗೆ ಮಾತನಾಡಿದ ಸಪ್ತಗಿರಿ, ‘ನಾನು ಈಗ ಕೇವಲ ಹಣಕ್ಕಾಗಿ ನಟಿಸುತ್ತಿಲ್ಲ, ವೃತ್ತಿಪರ ತೃಪ್ತಿಗಾಗಿ ಪಾತ್ರಗಳನ್ನು ಆರಿಸಿಕೊಳ್ಳುತ್ತಿದ್ದೇನೆ. ಇತ್ತೀಚೆಗೆ ಸರಸ್ವತಿ, ದಿ ರಾಜಾ ಸಾಬ್ ಮತ್ತು ಕೊಕ್ಕರೊಕೊದಂತಹ ಚಿತ್ರಗಳನ್ನು ಮಾಡಿದ್ದೇನೆ. ಇವು ಸಣ್ಣ ಪ್ರಮಾಣದ ಚಿತ್ರಗಳಾದ ಕಾರಣ ಜನರನ್ನು ಸರಿಯಾಗಿ ತಲುಪಲಿಲ್ಲ. ಅದೇ ದೊಡ್ಡ ಚಿತ್ರಗಳಾಗಿದ್ದರೆ ಅವುಗಳ ವ್ಯಾಪ್ತಿ ಚೆನ್ನಾಗಿರುತ್ತಿತ್ತು’ ಎಂದಿದ್ದಾರೆ. ಪ್ರಭಾಸ್ ಅವರ ಬಿಗ್ ಬಜೆಟ್ ಸಿನಿಮಾವನ್ನು ಸಣ್ಣ ಚಿತ್ರಗಳ ಸಾಲಿಗೆ ಸೇರಿಸಿದ ಅವರ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಆಗುತ್ತಿವೆ.

ಇನ್ನು ಸಪ್ತಗಿರಿ ಅವರ ವೃತ್ತಿಜೀವನದ ಬಗ್ಗೆ ನೋಡುವುದಾದರೆ, ‘ಜಬರ್ದಸ್ತ್’ ಕಾರ್ಯಕ್ರಮದ ಮೂಲಕ ಜನಪ್ರಿಯರಾದ ಇವರು, ನಂತರ ಹಾಸ್ಯನಟರಾಗಿ ‘ವೆಂಕಟಾದ್ರಿ ಎಕ್ಸ್‌ಪ್ರೆಸ್’, ‘ದೃಶ್ಯಂ’ನಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು. ನಾಯಕನಾಗಿ ‘ಸಪ್ತಗಿರಿ ಎಲ್‌ಎಲ್‌ಬಿ’ಯಂತಹ ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆ ನಡೆಸಿದರೂ ಅವು ಕೈ ಹಿಡಿಯಲಿಲ್ಲ. ಹೀಗಾಗಿ ಮತ್ತೆ ಪೋಷಕ ನಟ ಮತ್ತು ಹಾಸ್ಯನಟನಾಗಿ ಬ್ಯುಸಿಯಾಗಿದ್ದಾರೆ. ಚಿತ್ರರಂಗಕ್ಕೆ ಬಂದು 18 ವರ್ಷ ಕಳೆದರೂ ತಮಗೆ ಇನ್ನೂ ಸರಿಯಾದ ಬ್ರೇಕ್ ಸಿಕ್ಕಿಲ್ಲ ಎಂಬ ಅಸಮಾಧಾನ ಅವರ ಮಾತಿನಲ್ಲಿ ವ್ಯಕ್ತವಾಯಿತು.

ಇದನ್ನೂ ಓದಿ: ‘ದಿ ರಾಜಾ ಸಾಬ್’ ಸೋಲಿನ ಬಳಿಕ ಹೊಸ ಸಿನಿಮಾ ಘೋಷಿಸಿದ ನಿರ್ದೇಶಕ ಮಾರುತಿ

ಸದ್ಯ ಸಪ್ತಗಿರಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಪುರುಷ’ ಸಿನಿಮಾ ಮೇ 22 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಯಶಸ್ಸಿನ ನಿರೀಕ್ಷೆಯಲ್ಲಿರುವ ಅವರು, ಹೊಸ ರೀತಿಯ ಭಾವನಾತ್ಮಕ ಪಾತ್ರಗಳನ್ನು ಮಾಡಲು ಬಯಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ರಾಜಾ ಸಾಬ್ ಚಿತ್ರದ ಬಗ್ಗೆ ಅವರು ನೀಡಿದ ಹೇಳಿಕೆ ಮಾತ್ರ ಪ್ರಭಾಸ್ ಅಭಿಮಾನಿಗಳನ್ನು ಕೆರಳಿಸಿದ್ದು, ಸಪ್ತಗಿರಿ ಈ ಬಗ್ಗೆ ಸ್ಪಷ್ಟನೆ ನೀಡುತ್ತಾರೆಯೇ ಎಂದು ಕಾದು ನೋಡಬೇಕಿದೆ. ಅವರ ಕ್ಷಮೆಗೆ ಆಗ್ರಹ ಕೇಳಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಸ್ಸಾಂ ಮುಖ್ಯಮಂತ್ರಿಯಾಗಿ ಹಿಮಂತ್​​ ಪ್ರಮಾಣ: ಸತತ ಎರಡು ಅವಧಿಗೆ ಕಾಂಗ್ರೆಸೇತರ ಮೊದಲ ಸಿಎಂ ಎಂಬ ಹೆಗ್ಗಳಿಕೆ – Kannada News | Himanta biswa sarma sworn in as assam cm for second term

ಗುವಾಹಟಿ, ಮೇ 12: ಬಿಜೆಪಿ ನಾಯಕ ಹಿಮಂತ್​​ ಬಿಸ್ವಾ ಶರ್ಮಾ ಅವರು ಅಸ್ಸಾಂ ಮುಖ್ಯಮಂತ್ರಿಯಾಗಿ ಸತತ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗುವಾಹಟಿಯ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಅಸ್ಸಾಂ ರಾಜ್ಯಪಾಲ ಲಕ್ಷ್ಮಣ್​ ಪ್ರಸಾದ್ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಸಿಎಂ ಹಿಮಂತ್ ಜೊತೆ ಸಚಿವರಾಗಿ ನಾಲ್ವರು ಶಾಸಕರು ಕೂಡ ಇದೇ ವೇಳೆ ಪ್ರಮಾಣವಚನ ಸ್ವೀಕರಿಸಿದ್ದಾರೆ.

ದಾಖಲೆ ಬರೆದ ಹಿಮಂತ್​​

ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ 126 ಸ್ಥಾನಗಳ ಪೈಕಿ 82 ಸ್ಥಾನಗಳನ್ನು ಗೆದ್ದು ಬಿಜೆಪಿ ಭರ್ಜರಿ ವಿಜಯ ಗಳಿಸಿತ್ತು. ಸರ್ಕಾರ ರಚನೆಗೆ 64 ಶಾಸಕರ ಬೆಂಬಲ ಅಗತ್ಯವಿದ್ದು 18 ಹೆಚ್ಚುವರಿ ಶಾಸಕರನ್ನು ಗೆದ್ದು ಬಿಜೆಪಿ ಬೀಗಿತ್ತು. ಹೀಗಾಗಿ ಜಲಕ್ಬರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಹಿಮಂತ್​ ಬಿಸ್ವಾಗೆ ಸತತ ಎರಡನೇ ಬಾರಿ ಮುಖ್ಯಂತ್ರಿ ಗದ್ದುಗೆ ದೊರೆತಿದೆ. ಈ ಮೂಲಕ ಹಿಮಂತ ಬಿಸ್ವ ಶರ್ಮಾ ಅಸ್ಸಾಂನಲ್ಲಿ ಸತತ ಎರಡು ಅವಧಿಗೆ ಮುಖ್ಯಮಂತ್ರಿ ಆದ ಮೊದಲ ಕಾಂಗ್ರೆಸೇತರ ನಾಯಕ ಎಂಬ ದಾಖಲೆ ನಿರ್ಮಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ; ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ, ಟಿವಿಕೆಗೆ ಷಣ್ಮುಗಂ ನೇತೃತ್ವದ 30 ಶಾಸಕರ ಬೆಂಬಲ

ಇನ್ನು ಹಿಮಂತ್​​ ಬಿಸ್ವಾ ಶರ್ಮಾ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಕಿರಣ್ ರಿಜಿಜು, ಜ್ಯೋತಿರಾದಿತ್ಯ ಸಿಂಧ್ಯಾ, ಶಿವರಾಜ್ ಸಿಂಗ್ ಚೌಹಾಣ್, ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್​ ನಬಿನ್​​, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಒಡಿಶಾ ಸಿಎಂ ಮೋಹನ್ ಮಾಝಿ, ಮಹಾರಾಷ್ಟ್ರ ಸಿಎಂ ಫಡ್ನವೀಸ್, ಛತ್ತೀಸಗಢ ಸಿಎಂ ವಿಷ್ಣುದೇವ ಸಾಯಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಸೇರಿ ಹಲವರು ಉಪಸ್ಥಿತರಿದ್ದರು.

ಹಿಮಂತ್​​ ರಾಜಕೀಯ ಹಾದಿ

2001ರಲ್ಲಿ ಅಸ್ಸಾಂ ಗಣ ಪರಿಷತ್ ನಾಯಕ ಭೃಗು ಕುಮಾರ್ ಫುಕಾನ್ ಅವರನ್ನು ಸೋಲಿಸುವ ಮೂಲಕ ಶರ್ಮಾ ಮೊದಲ ಬಾರಿಗೆ ಜಲುಕ್ಬರಿಯಿಂದ ಅಸ್ಸಾಂ ವಿಧಾನಸಭೆಗೆ ಆಯ್ಕೆಯಾಗಿದ್ದರು. 2006ರಲ್ಲಿ ಮರು ಆಯ್ಕೆಯಾದ ಅವರು, ನಂತರ 2011ರಲ್ಲಿ ಸತತ ಮೂರನೇ ಬಾರಿಗೆ 78,000 ಮತಗಳ ಅಂತರದಿಂದ ಗೆದ್ದಿದ್ದರು. 2002ರಿಂದ 2014ರ ವರೆಗೆ ಶರ್ಮಾ ಕೃಷಿ, ಯೋಜನೆ ಮತ್ತು ಅಭಿವೃದ್ಧಿ, ಹಣಕಾಸು, ಆರೋಗ್ಯ, ಶಿಕ್ಷಣ ಸಚಿವರಾಗಿದ್ದರು. ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರೊಂದಿಗಿನ ರಾಜಕೀಯ ಭಿನ್ನಾಭಿಪ್ರಾಯಗಳ ನಂತರ, ಶರ್ಮಾ ಜುಲೈ 21, 2014ರಂದು ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಬಳಿಕ ಆಗಸ್ಟ್ 23, 2015ರಂದು ನವದೆಹಲಿಯಲ್ಲಿರುವ ಅಮಿತ್ ಶಾ ಅವರ ನಿವಾಸದಲ್ಲಿ ಭಾರತೀಯ ಜನತಾ ಪಕ್ಷವನ್ನು ಶರ್ಮಾ ಸೇರಿದ್ದರು. ಮೇ 2016ರಲ್ಲಿ, ಶರ್ಮಾ ಸತತ ನಾಲ್ಕನೇ ಅವಧಿಗೆ ಜಲುಕ್ಬರಿ ಕ್ಷೇತ್ರದಲ್ಲಿ ಗೆದ್ದರು ಮತ್ತು ಮೇ 24ರಂದು ಈಶಾನ್ಯ ಭಾರತದ ಮೊದಲ ಬಿಜೆಪಿ ಸರ್ಕಾರದಲ್ಲಿ ಸೋನೋವಾಲ್ ಸಚಿವಾಲಯದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು . ಅವರಿಗೆ ಹಣಕಾಸು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ಯೋಜನೆ ಮತ್ತು ಅಭಿವೃದ್ಧಿ, ಪ್ರವಾಸೋದ್ಯಮ, ಖಾತೆಗಳನ್ನು ನೀಡಲಾಗಿತ್ತು. 2021ರಲ್ಲಿ ರಿಂದ ಅಸ್ಸಾಂನ 15ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈಗ ಎರಡನೇ ಅವಧಿಗೆ ಸಿಎಂ ಆಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:28 pm, Tue, 12 May 26

Source link

NEET Exam 2026 Cancelled: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಮೇ 3 ರಂದು ನಡೆದಿದ್ದ NEET ಪರೀಕ್ಷೆ ರದ್ದು! – Kannada News | NEET Exam Cancelled Over Paper Leak: CBI Probe Ordered for Rajasthan Paper Leak Case

ನವದೆಹಲಿ, ಮೇ 12: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆಯನ್ನು ಸಂಸ್ಥೆ ರದ್ದು ಮಾಡಿದೆ. ರಾಜಸ್ಥಾನದ ಸೀಕರ್​ನಲ್ಲಿ ಕೈ ಬರಹದಲ್ಲಿದ್ದ 140 ಪ್ರಶ್ನೆಗಳಿದ್ದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು. ಇದೇ ಹಿನ್ನೆಲೆ ಈಗ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ನಿರ್ಧಾರ ಮಾಡಲಾಗಿದೆ.

(ಮಾಹಿತಿ ಅಪ್ಡೇಟ್ ಆಗುತ್ತಿದೆ)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:29 pm, Tue, 12 May 26

Source link

ವಿಜಯ್ ಸೂಟು-ಸ್ಟಾಲಿನ್ ಪಂಚೆ: ಅಣ್ಣಾಮಲೈ ಸಖತ್ ಟಾಂಗ್ – Kannada News | K Annamalai constructive criticism about DMK’s family politics and Vijay’s suit

ದಳಪತಿ ವಿಜಯ್ (Thalapathy Vijay) ತಮಿಳುನಾಡು ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. 60 ವರ್ಷಗಳ ಡಿಎಂಕೆ ಮತ್ತು ಎಐಎಡಿಎಂಕೆಯ ಸತತ ಪ್ರಾಬಲ್ಯವನ್ನು ವಿಜಯ್ ಮುರಿದಿದ್ದಾರೆ. ವಿಜಯ್ ಅವರು ತಮ್ಮ ಪ್ರಮಾಣ ವಚನಕ್ಕೆ ಕಪ್ಪು ಬಣ್ಣದ ಸೂಟು ಧರಿಸಿ ಆಗಮಿಸಿದ್ದರು. ಸಾಮಾನ್ಯವಾಗಿ ರಾಜಕಾರಣಿಗಳು, ಬಿಳಿ ಬಣ್ಣದ ಶರ್ಟ್ ಪಂಚೆ ಅಥವಾ ಧೋತಿಗಳನ್ನು ಉಡುವುದು ರೂಢಿ ಆದರೆ ವಿಜಯ್ ಅವರ ಸಂಪ್ರದಾಯ ಮರಿದು ಕಪ್ಪು ಬಣ್ಣದ ಸೂಟು, ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟು ಧರಿಸಿ ಬಂದಿದ್ದರು. ಈ ಬಗ್ಗೆ ತಮಿಳುನಾಡು ರಾಜಕಾರಣದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಇದೀಗ ತಮಿಳುನಾಡಿ ಬಿಜೆಪಿ ಮುಖಂಡ ಅಣ್ಣಾಮಲೈ ವಿಜಯ್ ಸೂಟನ್ನು ಸ್ಟಾಲಿನ್ ಅವರ ಪಂಚೆಯೊಂದಿಗೆ ಹೋಲಿಸಿ ತಮಾಷೆ ಮಾಡಿದ್ದು, ಅಣ್ಣಾಮಲೈ ಅವರ ಟೀಕೆ ಬಹಳ ರಚನಾತ್ಮಕವಾಗಿದೆ.

ಅಣ್ಣಾಮಲೈ ಅವರು ಯುಎಸ್​​ನಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಒಂದೇ ವಾಕ್ಯದಲ್ಲಿ ತಮಿಳುನಾಡಿನ ಕುಟುಂಬ ರಾಜಕಾರಣ ಮತ್ತು ವಿಜಯ್ ಅವರ ಮುಂದಿರುವ ಸವಾಲುಗಳ ಬಗ್ಗೆ ತಮಾಷೆಯ ಧಾಟಿಯಲ್ಲಿ ವಿವರಿಸಿದರು. ‘1970ರಲ್ಲಿ ತಮಿಳುನಾಡಿನ ಪ್ರವಾಹದ ಒಂದು ಜನಪ್ರಿಯ ಫೊಟೊ ಇದೆ, ಫೋಟೊನಲ್ಲಿ ಕರುಣಾನಿಧಿ ಅವರು ಪ್ರವಾಹದ ನೀರಿನಲ್ಲಿ ತಮ್ಮ ಪಂಚೆಯನ್ನು ಮೊಳಕಾಲಿನ ವರೆಗೆ ಎತ್ತಿಕೊಂಡು ನಡೆಯುತ್ತಿದ್ದಾರೆ. ಬಳಿಕ 2000 ರಲ್ಲಿ ಪ್ರಹಾವದಲ್ಲಿ ಅವರ ಮಗ ಸ್ಟಾಲಿನ್ (ಮಾಜಿ ಸಿಎಂ) ಅವರು ಪ್ರವಾಹದ ನೀರಿನಲ್ಲಿ ಪಂಚೆ ಎತ್ತಿ ನಡೆಯುತ್ತಿರುವ ಫೋಟೊ ಸಹ ಇದೆ. ಇತ್ತೀಚೆಗೆ ಬಂದ ಪ್ರವಾಹದಲ್ಲಿ ಸ್ಟಾಲಿನ್ ಅವರ ಮಗ ಉದಯನಿಧಿ (ಮಾಜಿ ಡಿಸಿಎಂ) ಪ್ರವಾಹದ ನೀರಿನಲ್ಲಿ ನಿಂತಿರುವ ಫೋಟೊ ಇದೆ. ಈಗ ವಿಜಯ್ ಅವರ ಸೂಟು ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಪ್ರವಾಹದ ನೀರಿನಲ್ಲಿ ಹೇಗೆ ನಡೆಯುತ್ತಾರೆಯೋ ನೋಡಬೇಕು’ ಎಂದಿದ್ದಾರೆ.

ಇದನ್ನೂ ಓದಿ:‘ದ್ರಾವಿಡ’ ರಾಜಕಾರಣದ ‘ಯೂನಿಫಾರ್ಮ್’ ಬದಲಿಸಿದ ವಿಜಯ್

ಮೇಲ್ನೋಟಕ್ಕೆ ಇದು ವಿಜಯ್ ಅವರು ಸೂಟು ಧರಿಸಿ ಸಿಎಂ ಆಗಿದ್ದಾರೆ ಅವರು ಪ್ರವಾಹದ ಸಮಯದಲ್ಲಿ ನೀರಿಗಿಳಿಯುವುದು ಕಷ್ಟವಾಗುತ್ತದೆ ಅಥವಾ ನೀರಿಗೆ ಇಳಿಯಲಾರರೇನೋ ಎಂದು ಅಣ್ಣಾಮಲೈ ಹೇಳಿದಂತೆ ತೋರುತ್ತಿದೆ. ಆದರೆ ಅಣ್ಣಾಮಲೈ ಅವರು ತಮಿಳುನಾಡಿನ ಕುಟುಂಬ ರಾಜಕಾರಣ ಮತ್ತು ಅವರು ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಿರುವ ರೀತಿ ಹಾಗೂ ವಿಜಯ್ ಅವರ ಮುಂದಿರುವ ಸವಾಲುಗಳ ಬಗ್ಗೆ ಹೇಳಿದ್ದಾರೆ.

ಕಳೆದ 50 ವರ್ಷದಿಂದಲೂ ಚೆನ್ನೈನಲ್ಲಿ ಪ್ರವಾಹಗಳು ಬರುತ್ತಲೇ ಇವೆ. ಕರುಣಾನಿಧಿ, ಅವರ ಬಳಿಕ ಸ್ಟಾಲಿನ್, ಅವರ ಜೊತೆಗೆ ಉದಯನಿಧಿ ಸ್ಟಾಲಿನ್ ಅವರುಗಳು ಪ್ರವಾಹದ ಸಮಯದಲ್ಲಿ ಫೋಟೊ ತೆಗೆಸಿಕೊಳ್ಳುತ್ತಿದ್ದಾರೆಯೇ ಹೊರತು ಆ ಪ್ರವಾಹದಿಂದ ಆಗುತ್ತಿರುವ ಹಾನಿಯನ್ನು ತಡೆಯಲು ಅವರಿಗೆ ಸಾಧ್ಯವಾಗಿಲ್ಲ. ಈಗ ವಿಜಯ್ ಅವರ ಮುಂದೆ ಅದೇ ಸವಾಲು ಇದೆ, ಅದನ್ನು ಅವರು ಹೇಗೆ ಎದುರಿಸುತ್ತಾರೋ ನೋಡಬೇಕಿದೆ ಎಂಬ ಒಳ ಅರ್ಥ ಅಣ್ಣಾಮಲೈ ಅವರ ಮಾತುಗಳಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version