ನೇಪಾಳಿ ಕುಟುಂಬ ನಂಬಿ ಕೆಟ್ಟ ಮಾಲೀಕ: ಉಂಡ ಮನೆಗೇ ಕನ್ನ ಹಾಕಿದ ಕೆಲಸಗಾರರು – Kannada News | Hoskote Shock: Newly Hired Nepali Domestic Help and Guard Rob Employer’s House

ಮನೆಯಲ್ಲಿ ಕಳ್ಳತನ ನಡೆದಿರುವುದುImage Credit source: Tv9 Kannada

ದೇವನಹಳ್ಳಿ, ಆಗಸ್ಟ್​​ 10: 2 ತಿಂಗಳಿಂದ ಮನೆ ಮಂದಿಯಂತ್ತಿದ್ದ ಕೆಲಸದವರೇ ಮಾಲೀಕ ಊರಿಗೆ ಹೋಗ್ತಿದ್ದಂತೆ ಮನೆಯನ್ನೆ ಗುಡಿಸಿ ಗುಂಡಾಂತರ ಮಾಡಿ ಎಸ್ಕೇಪ್​​ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹೊರವಲಯದಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲ ಎಂಬ ಮಾಹಿತಿ ಗೊತ್ತಿದ್ದ ಹಿನ್ನೆಲೆ ಮಧ್ಯರಾತ್ರಿ ಮನೆಗೆ ನುಗ್ಗಿದ ಆರೋಪಿಗಳು ಚಿನ್ನಾಭರಣ, ಬೆಳ್ಳಿ ಹಾಗೂ ನಗದನ್ನು ದೋಚಿ ಎಸ್ಕೇಪ್ ಆಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹೊಸಕೋಟೆ ಹೊರವಲಯದ ಹೆದ್ದಾರಿ ಬದಿಯ 40 ಎಕರೆ ಪ್ರದೇಶದಲ್ಲಿರುವ ಪಾಲಮ್ ವಿಲ್ಲಾ ಬಡಾವಣೆಯಲ್ಲಿ ಕುಟುಂಬ ಸಮೇತ ಹಲವು ವರ್ಷಗಳಿಂದ ವಾಸವಿದ್ದ ರವಿ ರಾಜನ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಇತ್ತೀಚೆಗೆ ಬಡಾವಣೆಗೆ ಬಂದಿದ್ದ ನೇಪಾಳಿ ಮೂಲದ ಸೆಕ್ಯೂರಿಟಿ ಗಾರ್ಡ್ ಒಬ್ಬ ಪತ್ನಿಗೆ ಮನೆಯಲ್ಲಿ ಕೆಲಸವಿದ್ದರೆ ಕೊಡಿ. ನಿತ್ಯ ಕಾರುಗಳನ್ನ ತೊಳೆದು ಮನೆ ಕ್ಲೀನ್ ಮಾಡಿಕೊಡ್ತಾರೆ ಎಂದು ಕೇಳಿಕೊಂಡಿದ್ದ. ಆತನ ಮಾತು ಕೇಳಿ ರವಿ ರಾಜನ್ ಕೂಡ ಕೆಲಸ ನೀಡಿದ್ದರು. ಈ ನಡುವೆ ನಾವು ಊರಿಗೆ ಹೋಗಿಬರುತ್ತೇಬೆ. ಮನೆಕಡೆ ಹುಷಾರು ಎಂದು ಹೇಳಿ ಕುಟುಂಬ ತೆರಳಿತ್ತು. ಇದೇ ಸರಿಯಾದ ಸಮಯ ಎಂದು ಅಲರ್ಟ್​​ ಆದ ಆರೋಪಿಗಳು, ಮಧ್ಯರಾತ್ರಿ ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಖಾಕಿ ಬಿಗ್‌ ಬೇಟೆ: 55.8 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ, 39 ಡ್ರಗ್ ಪೆಡ್ಲರ್‌ಗಳ ಸೆರೆ!

ಕುಟುಂಬಸ್ಥರಿಗೆ ಕಾದಿತ್ತು ಆಘಾತ

ಊರಿಂದ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದ ಕುಟುಂಬಸ್ಥರಿಗೆ ಬಡಾವಣೆಯ ನೆರೆ ಹೊರೆಯವರು ಸೆಕ್ಯೂರಿಟಿ ಗಾರ್ಡ್ ಒಬ್ಬ ನಾಪತ್ತೆಯಾಗಿದ್ದು ಮನೆಯಲ್ಲಿ ಒಮ್ಮೆ ಚೆಕ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಹೀಗಾಗೆ ಮನೆ ಒಳಗಡೆ ಹೋಗಿ ನೋಡಿದಾಗ ಬಾಗಿಲು ಒಡೆದು ಕಳ್ಳರು ಕಳ್ಳತನ ಮಾಡಿರುವ ದೃಶ್ಯ ಕಂಡು ಬಂದಿದೆ. ಜೊತೆಗೆ ಸಿಸಿ ಟಿವಿ ಪರಿಶೀಲನೆ ನಡೆಸಿದಾಗ ಇಬ್ಬರು ವ್ಯಕ್ತಿಗಳು ಮನೆ ಒಳಗಡೆ ರಾಡ್ ಹಿಡಿದು ನುಗ್ಗಿ ಒಡಾಡಿ ಕಳ್ಳತನ ಮಾಡಿರುವ ದೃಶ್ಯಗಳು ಅದರಲ್ಲಿ ಸೆರೆಯಾಗಿವೆ. ಇದರ ಆಧಾರದಲ್ಲಿ ಕುಟುಂಬಸ್ಥರು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ​​ ದೂರು ದಾಖಲಿಸಿದ್ದು, ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮತ್ತೆ ಬಂದ ಲಾಯರ್ ‘ಸಿಎಸ್‌ಪಿ’: ಡಿಜಿಟಲ್ ಅಂಗಳಕ್ಕೆ ಸೀತಾರಾಮ್ ಪಾದಾರ್ಪಣೆ – Kannada News | TN Seetharam Returns with New Web Series Mundina Adhyaya on YouTube

ಕನ್ನಡ ಕಿರುತೆರೆಯ ಟ್ರೆಂಡ್ ಸೆಟ್ಟರ್, ಖ್ಯಾತ ನಿರ್ದೇಶಕ ಹಾಗೂ ನಟ ಟಿ. ಎನ್. ಸೀತಾರಾಮ್ (TN Seetharam) ತಮ್ಮ ನೆಚ್ಚಿನ ವೀಕ್ಷಕರಿಗಾಗಿ ‘ಮುಂದಿನ ಅಧ್ಯಾಯ’ ಎಂಬ ನೂತನ ವೆಬ್ ಸರಣಿಯೊಂದಿಗೆ ಬರಲು ಸಜ್ಜಾಗಿದ್ದಾರೆ. ಇದು ಯಾವ ಒಟಿಟಿಯಲ್ಲಿ ಸಿಗುತ್ತದೆ ಎಂಬ ಪ್ರಶ್ನೆ ನಿಮ್ಮದಾಗಿದ್ದರೆ ಒಂದು ಖುಷಿ ಸುದ್ದಿ ಇದೆ. ಇದು ಯೂಟ್ಯೂಬ್​​ನಲ್ಲಿ ಉಚಿತವಾಗಿ ಸಿಗಲಿದೆ. ‘ಮಾಯಾಮೃಗ’, ‘ಮುಕ್ತ’, ‘ಮನ್ವಂತರ’, ‘ಮಹಾ ಪರ್ವ’ ಹಾಗೂ ‘ಮಗಳು ಜಾನಕಿ’ಯಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಅವರ ‘ಸಿಎಸ್‌ಪಿ’ ಪಾತ್ರ ಈ ಹೊಸ ವೆಬ್ ಸರಣಿಯ ಪ್ರಮುಖ ಆಕರ್ಷಣೆಯಾಗಿದೆ.

ಈ ವೆಬ್ ಸರಣಿಗೆ ನಿರ್ದೇಶನವನ್ನು ಚಂದನ್ ಶಂಕರ್ ಮಾಡುತ್ತಿದ್ದು, ಟಿ.ಎನ್. ಸೀತಾರಾಮ್ ಅವರೇ ಪ್ರಧಾನ ನಿರ್ದೇಶಕರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ‘ಮಗಳು ಜಾನಕಿ’ ಧಾರಾವಾಹಿ ಅರ್ಧಕ್ಕೆ ನಿಂತುಹೋಗಿದ್ದರಿಂದ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಅದೇ ಅಭಿಮಾನಿಗಳ ಒತ್ತಾಯ ಹಾಗೂ ಬೇಡಿಕೆಯನ್ನು ಪರಿಗಣಿಸಿ, ಸೀತಾರಾಮ್ ಅವರು ಸಿಎಸ್‌ಪಿ ಪಾತ್ರದ ಜೊತೆಗೆ ಹಲವು ಹೊಸ ಹಾಗೂ ಹಳೆಯ ಪಾತ್ರಗಳನ್ನು ಜೋಡಿಸಿಕೊಂಡು ಈ ಹೊಸ ಪ್ರಯತ್ನ ಮಾಡುತ್ತಿದ್ದಾರೆ.

‘ಮುಂದಿನ ಅಧ್ಯಾಯ’ ಸರಣಿಯು ಕಿರುತೆರೆಯ ಧಾರಾವಾಹಿಗಳಂತೆಯೇ ದಿನನಿತ್ಯ ನಿಗದಿತ ಸಮಯಕ್ಕೆ ಯೂಟ್ಯೂಬ್‌ನಲ್ಲಿ ಪ್ರಸಾರವಾಗಲಿದೆ. ಪ್ರತಿ ಸೀಸನ್ ಮುಗಿದ ನಂತರ ವೀಕ್ಷಕರು ಎಲ್ಲಾ ಸಂಚಿಕೆಗಳನ್ನು ಒಟ್ಟಿಗೇ ವೀಕ್ಷಿಸಬಹುದಾಗಿದೆ. ಈ ಹೊಸ ಅಧ್ಯಾಯದಲ್ಲಿ ಶ್ಯಾಮಲತ್ತೆ, ಭಾರ್ಗಿ, ಶಂಕರ್ ಮೂರ್ತಿ, ಶಾರ್ದೂಲ್ ಹಾಗೂ ಗುರುದಾಸ್ ಅಂತಹ ಪಾತ್ರ ಇರಲಿದೆ.
ಭಾಗಿ ಪಾತ್ರ ಮಾಡುತ್ತಿದ್ದ ಹಿರಿಯ ನಟ ಮಂಡ್ಯ ರವಿ ನಿಧನ ಹೊಂದಿದ್ದು ಅವರ ಜಾಗದಲ್ಲಿ ಹನುಮಂತೇಗೌಡ ಅವರು ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಶೂಟಿಂಗ್ ಕಾರ್ಯಗಳು ಆರಂಭವಾಗಿದ್ದು, ಶೀಘ್ರದಲ್ಲೇ ಪ್ರಸಾರ ದಿನಾಂಕ ಹೊರಬೀಳಲಿದೆ.

ಇದನ್ನೂ ಓದಿ: ‘ದಿ ಡೈಲಿ ಡ್ರಾಪ್’ ಕೋರ್ಟ್ ರೂಮ್ ಸೀರೀಸ್​ಗೆ ಟಿಎನ್‌ ಸೀತಾರಾಮ್‌ ಪುತ್ರಿ ಅಶ್ವಿನಿ ನಿರ್ದೇಶನ

ಒಂದು ಸೀಸನ್​ನಿಂದ ಮತ್ತೊಂದು ಸೀಸನ್​ಗೆ ಕನೆಕ್ಷನ್ ಇರಲಿದೆ. ಕಥೆಯಲ್ಲಿ ಹೆಚ್ಚು ಬದಲಾವಣೆ ಇರೋದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪಾತ್ರಗಳು ವಾಸ್ತವಕ್ಕೆ ಹತ್ತಿರವಾಗಿರುತ್ತವೆ. ಸದ್ಯಕ್ಕೆ ಶೂಟಿಂಗ್ ಆರಂಭ ಆಗಿದ್ದು, ಮೊದಲ ಸೀಸನ್ ಪ್ರಸಾರ ಕಾಣಲಿದೆ. ಆ ಬಳಿಕ ಎರಡನೇ ಸೀಸನ್ ಪ್ರಸಾರ ಆಗಲಿದೆ.

ಮತ್ತಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ವಿಪಕ್ಷಗಳು ಗದ್ದಲ ಎಬ್ಬಿಸಬಾರದು’; ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಸಂಸತ್​ನಲ್ಲಿ ಭಾಷಣಕ್ಕೆ ಅಮಿತ್ ಶಾ ಸಿದ್ಧ – Kannada News | Amit Shah to speak on Student Protest in Parliament Government says Opposition should Listen

ನವದೆಹಲಿ, ಆಗಸ್ಟ್ 10: ದೆಹಲಿ ಪೊಲೀಸ್ ಕಾರ್ಯಾಚರಣೆ ಕುರಿತು ಸಂಸತ್ತಿನಲ್ಲಿ ಪ್ರಸ್ತಾಪವಾಗಲಿರುವ ಪ್ರಶ್ನೆಗಳಿಗೆ ಉತ್ತರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸಿದ್ಧರಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಆ ಸಂದರ್ಭದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ವಿಚಾರಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇಂದು ತಿಳಿಸಿದ್ದಾರೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ವೇಳೆ ದೆಹಲಿಯಲ್ಲಿ ಪೆಲೆಟ್ ಗನ್‌ಗಳ ಬಳಕೆ ಮತ್ತು ಬಿಹಾರದಲ್ಲಿ ಎಕೆ-47 ಬಳಕೆಯ ಕುರಿತು ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿಗೆ ಆಗಮಿಸಿ ವಿವರಣೆ ನೀಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿದ್ದವು.

ಇಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಬಿಸಿನೆಸ್ ಅಡ್ವೈಸರಿ ಕಮಿಟಿ’ (BAC) ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಸರ್ಕಾರದ ಪ್ರತಿನಿಧಿಗಳು ವಿದ್ಯಾರ್ಥಿಗಳ ವಿಚಾರದ ಕುರಿತು ಚರ್ಚೆಗೆ ಆಹ್ವಾನ ನೀಡಿದರು. “ಕೇಂದ್ರ ಗೃಹ ಸಚಿವರು ಈ ಚರ್ಚೆಗೆ ಪ್ರತ್ಯುತ್ತರ ನೀಡಲಿದ್ದಾರೆ” ಎಂದು ಕಿರಣ್ ರಿಜಿಜು ಸಭೆಯಲ್ಲಿ ತಿಳಿಸಿದರು.

ಇದನ್ನೂ ಓದಿ: ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಪ್ರತಿಪಕ್ಷಗಳ ಮನವಿ ಪರಿಗಣಿಸಲು ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ

ಕಳೆದ 2 ವಾರಗಳಿಂದ ಎರಡೂ ಸದನಗಳ ಕಲಾಪಕ್ಕೆ ಅಡ್ಡಿಯಾಗಿದ್ದ ಮತ್ತು ಗದ್ದಲದ ನಡುವೆಯೇ ಹಲವು ವಿಧೇಯಕಗಳು ಅಂಗೀಕಾರಗೊಳ್ಳಲು ಕಾರಣವಾಗಿದ್ದ ಸಂಸತ್ತಿನ ಬಿಕ್ಕಟ್ಟನ್ನು ಕೊನೆಗೊಳಿಸುವ ಪ್ರಯತ್ನವಾಗಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಜುಲೈ 20ರಂದು ನಡೆದ ‘ಸಂಸದ್ ಚಲೋ’ ಮೆರವಣಿಗೆಯ ಸಂದರ್ಭದಲ್ಲಿ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದಾಳಿ ಹಾಗೂ ಕಾರ್ಯಾಚರಣೆಯ ಕುರಿತು ಅಮಿತ್ ಶಾ ಅವರು ಸದನದಲ್ಲಿ ಹೇಳಿಕೆ ನೀಡಬೇಕೆಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಪಟ್ಟು ಹಿಡಿದಿದ್ದರು.

ಇಂದು ಬೆಳಿಗ್ಗೆ ನಡೆದ ವಿಪಕ್ಷಗಳ ತಂತ್ರಗಾರಿಕೆ ಸಭೆಯಲ್ಲಿ, ಅಮಿತ್ ಶಾ ಅವರಿಂದ ಹೇಳಿಕೆ ಪಡೆಯಲು ಪ್ರತಿಭಟನೆಯನ್ನು ಮುಂದುವರಿಸಲು ವಿರೋಧ ಪಕ್ಷಗಳ ನಾಯಕರು ತೀರ್ಮಾನಿಸಿದ್ದರು. ಅದರ ಬೆನ್ನಲ್ಲೇ ಅಮಿತ್ ಶಾ ಭಾಷಣ ಮಾಡಲಿದ್ದಾರೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಗದ್ದಲ ಸೃಷ್ಟಿಸಬೇಡಿ ಎಂದ ಸರ್ಕಾರ:

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಿರಣ್ ರಿಜಿಜು, “ವಿದ್ಯಾರ್ಥಿ ಚಳವಳಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಕುರಿತು ಪೂರ್ಣ ಪ್ರಮಾಣದ ಸುದೀರ್ಘ ಚರ್ಚೆ ನಡೆಸಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ. ಚರ್ಚೆ ನಡೆದು ಉತ್ತರ ನೀಡುವಾಗ ಗೃಹ ಸಚಿವರ ಹೇಳಿಕೆಗೆ ತಡೆಯೊಡ್ಡುವ ರೀತಿಯಲ್ಲಿ ವಿಪಕ್ಷಗಳು ಗದ್ದಲ ಸೃಷ್ಟಿಸಬಾರದು ಎಂಬುದು ವಿಪಕ್ಷಗಳಿಗೆ ನನ್ನ ಮನವಿ. ಅವರು ಗೃಹ ಸಚಿವರು ಮತ್ತು ಸರ್ಕಾರದ ಉತ್ತರವನ್ನು ಆಲಿಸಬೇಕು. ಒಮ್ಮೆ ಚರ್ಚೆ ಪ್ರಾರಂಭವಾದರೆ, ನಾವು ಕೂಲಂಕುಷವಾಗಿ ಚರ್ಚಿಸಬೇಕಾಗುತ್ತದೆ” ಎಂದು ರಿಜಿಜು ಹೇಳಿದರು.

ಇದನ್ನೂ ಓದಿ: ‘ಕ್ಷಮೆಯಾಚಿಸಿ ರಾಜೀನಾಮೆ ನೀಡಿ’; ಪ್ರತಿಭಟನಾಕಾರರ ಮೇಲಿನ ಹಲ್ಲೆ ಕುರಿತು ಅಮಿತ್ ಶಾ ವಿರುದ್ಧ ಖರ್ಗೆ ವಾಗ್ದಾಳಿ

ಸರ್ಕಾರದ ತಂತ್ರ ಎಂದ ವಿರೋಧ ಪಕ್ಷಗಳು:

ಸರ್ಕಾರದ ಈ ನಿರ್ಧಾರ ವಿರೋಧ ಪಕ್ಷಗಳನ್ನು ಒಡೆಯುವ ತಂತ್ರವಾಗಿದೆ ಎಂದು ಕೆಲವು ವಿಪಕ್ಷ ನಾಯಕರು ಆರೋಪಿಸಿದ್ದಾರೆ. ಏಕೆಂದರೆ ‘ಇಂಡಿಯಾ’ (INDIA) ಕೂಟದ ಎರಡನೇ ಅತಿದೊಡ್ಡ ಮಿತ್ರಪಕ್ಷವಾದ ಸಮಾಜವಾದಿ ಪಕ್ಷವು ಆಯೋಧ್ಯೆಯ ದೇಣಿಗೆ ಕಳವು ಆರೋಪದ ಕುರಿತು ಚರ್ಚಿಸಲು ಉತ್ಸುಕವಾಗಿದೆ. ಆದರೆ, ವಿದ್ಯಾರ್ಥಿಗಳ ಸಮಸ್ಯೆ ಮತ್ತು ಅಯೋಧ್ಯೆಯ ದೇಣಿಗೆ ಕಳವು ಎರಡೂ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರಾದ ಗೌರವ್ ಗೋಗೋಯ್ ಮತ್ತು ಕೆ. ಸುರೇಶ್ ‘ಹಿಂದೂಸ್ತಾನ್ ಟೈಮ್ಸ್’ಗೆ ತಿಳಿಸಿದ್ದಾರೆ.

“ಯಾವುದಾದರೂ ಒಂದು ವಿಷಯವನ್ನು ಕೈಬಿಡಬಹುದು ಎಂದು ನಾವು ಎಂದಿಗೂ ಹೇಳಿಲ್ಲ. ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ರಾಮಮಂದಿರದ ದೇಣಿಗೆ ವಿವಾದದ ವಿಚಾರಗಳು ನಮಗೆ ಪ್ರಮುಖ ವಿಷಯಗಳಾಗಿವೆ ಎಂಬುದನ್ನು ನಾವು ಮೊದಲಿನಿಂದಲೂ ಪ್ರತಿಪಾದಿಸುತ್ತಿದ್ದೇವೆ” ಎಂದು ಕಾಂಗ್ರೆಸ್‌ನ ಮುಖ್ಯ ಸಚೇತಕ ಗೌರವ್ ಗೋಗೋಯ್ ಹೇಳಿದ್ದಾರೆ. ಮಳೆಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದ ವಿಪಕ್ಷಗಳು ಸರಣಿ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಇದು ಕಲಾಪದ ತಡೆ ಹಾಗೂ ಮುಂದೂಡಿಕೆಗೆ ಕಾರಣವಾಗಿದೆ. ಈ ಮುಂಗಾರು ಅಧಿವೇಶನವು ಆಗಸ್ಟ್ 13ರಂದು ಮುಕ್ತಾಯಗೊಳ್ಳಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

2 ತಿಂಗಳ ಮಗು ಬಾವಿಯಲ್ಲಿ ಪತ್ತೆ: ತಾಯಿ ಮೇಲೆಯೇ ಡೌಟ್, ನಿಗೂಢ ಸಾವಿನ ರಹಸ್ಯ ಬೆನ್ನತ್ತಿದ ಪೊಲೀಸ್ರು – Kannada News | 2 Month Old Baby Found Dead in Well: Suspicion Falls on Mother as Police Probe Mysterious Death

ಪ್ರಾತಿನಿಧಿಕ ಚಿತ್ರImage Credit source: Getty images

ಬೀದರ್​​, ಆಗಸ್ಟ್​​ 10: ಬೀದರ್‌ (bidar) ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ ಗ್ರಾಮದಲ್ಲಿ ಭಾನುವಾರ ಎರಡು ತಿಂಗಳ  ಹಸುಗೂಸಿನ (baby) ಶವ ಬಾವಿಯಲ್ಲಿ ಪತ್ತೆಯಾಗಿತ್ತು. ಸದ್ಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಗುವನ್ನ ತಾಯಿಯೇ ಕೊಂದು ಬಾವಿಯಲ್ಲಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಔರಾದ್ ತಾಲೂಕಿನ ಸಂತಪುರ ಪೊಲೀಸರು ತಾಯಿ ಸೇರಿದಂತೆ ಒಟ್ಟು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ನಡೆದಿದ್ದೇನು?

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಾವಲಗುಡ್ಡ ಗ್ರಾಮದ ಸಂಜಯ್ ಮತ್ತು ವಾಣಿಶ್ರೀ ದಂಪತಿಯ ಎರಡು ತಿಂಗಳ ಗಂಡು ಮಗು ಓಂಕಾರ ಶವ ಬಾವಿಯಲ್ಲಿ ಪತ್ತೆ ಆಗಿದೆ. ಹೆರಿಗೆಗಾಗಿ ವಾಣಿಶ್ರೀ ಅವರು ತವರು ಮನೆಯಾದ ವಡಗಾಂವ್‌ಗೆ ಬಂದಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.

ಇದನ್ನೂ ಓದಿ: ಬೀದರ್‌ ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ: 2 ತಿಂಗಳ ಹಸುಗೂಸನ್ನ ಬಾವಿಗೆ ಬಿಸಾಡಿದ ಕಿರಾತಕರು

ಶನಿವಾರ ರಾತ್ರಿಯಿಂದಲೇ ಮಗು ದಿಢೀರ್ ಕಾಣೆಯಾಗಿದ್ದ ಹಿನ್ನೆಲೆ ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ, ಭಾನುವಾರ ಸಾಯಂಕಾಲ ಗ್ರಾಮದ ಬಾವಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು. ಮೊದಲಿಗೆ ಯಾರೋ ಕಿರಾತಕರು ಮಗುವನ್ನು ಬಾವಿಗೆ ಬಿಸಾಡಿದ್ದಾರೆ ಎನ್ನಲಾಗಿತ್ತು.

ಮಗುವನ್ನ ಕೊಂದು ಬಾವಿಗೆ ಬಿಸಾಕಿದ ತಾಯಿ?

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ತಾಯಿಯೇ ಮಗುವನ್ನ ಕೊಂದು ಬಾವಿಗೆ ಬಿಸಾಕಿರಬಹುದೆಂದು ಪೊಲೀಸರಿಗೆ ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಕೊಲೆ ಆರೋಪದ ಮೇರೆಗೆ ಮಗುವಿನ ತಾಯಿ ವಾಣಿಶ್ರೀ ಸೇರಿದಂತೆ ಸೋದರ ಮಾವ ಸಂತೋಷ್, ಅಜ್ಜ ಬಸಪ್ಪ ಹಾಗೂ ಅಜ್ಜಿ ರತ್ನಮ್ಮ ಅವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ನಂದಿ ಹಿಲ್ಸ್​​ ಮಾನ್ಸೂನ್​ ಮ್ಯಾರಥಾನ್​ ವೇಳೆ ದುರಂತ ಅಂತ್ಯಕಂಡ ಕ್ರೀಡಾಪಟು: ಹೃದಯಾಘಾತದಿಂದ ಸಾವು?

ಈ ಕುರಿತು ಸಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಲ್ವರನ್ನೂ ವಶಕ್ಕೆ ಪಡೆದು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚುತ್ತಿದೆ ‘ಐಬಿಡಿ’ ಜಠರಗಾತ್ರ ಸಮಸ್ಯೆ: ಜಂಕ್ ಫುಡ್‌, ಜೀವನಶೈಲಿಯೇ ಪ್ರಮುಖ ಕಾರಣ – Kannada News | IBD in Bengaluru Children Rises: Diet, Lifestyle, Early Detection and Solutions

ಬೆಂಗಳೂರು, ಆ.10 : ರಾಜಧಾನಿಯಲ್ಲಿ ಆರೋಗ್ಯ ಇಲಾಖೆ ಬೀದಿ ಬದಿ ಆಹಾರಗಳು ಹಾಗೂ 5 ಸ್ಟಾರ್​ ಹೋಟೆಲ್​​​ಗಳ ಮೇಲೆ ದಾಳಿಯನ್ನು ಮಾಡಿರುವ ವೇಳೆ ಮತ್ತೊಂದು ಮಹತ್ವದ ವರದಿಯೊಂದನ್ನು ನೀಡಲಾಗಿದೆ. ಬೆಂಗಳೂರಿನ ಮಕ್ಕಳಲ್ಲಿ ಜಠರಗಾತ್ರ ಉರಿಯೂತ (Inflammatory Bowel Disease – IBD) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ ಒಂದು ದಶಕದಿಂದ ಈ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ತಜ್ಞ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ರೋಗದ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಹಾಗೂ ಸುಧಾರಿತ ತಪಾಸಣಾ ಸೌಲಭ್ಯಗಳು ಈ ಪ್ರಕರಣಗಳನ್ನು ಬೇಗನೇ ಪತ್ತೆ ಹಚ್ಚಲು ನೆರವಾಗುತ್ತಿವೆಯಾದರೂ, ನಿಜವಾದ ರೋಗಿಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಕಳೆದ ಆರು ತಿಂಗಳಲ್ಲಿ ಮಕ್ಕಳ IBD ಪ್ರಕರಣಗಳಲ್ಲಿ 12 ಪ್ರತಿಶತ ಹೆಚ್ಚಳ ದಾಖಲಾಗಿದೆ. ಕಳೆದ ಐದು ವರ್ಷಗಳಲ್ಲಿ ಈ ಒಂದೇ ಸಂಸ್ಥೆಯಲ್ಲಿ 886 ಮಕ್ಕಳಿಗೆ IBD ಇರುವುದು ದೃಢಪಟ್ಟಿದೆ. ರೆನ್ಬೋ ಚಿಲ್ಡ್ರನ್ಸ್ ಆಸ್ಪತ್ರೆಯ ಮಕ್ಕಳ ಜಠರಗಾತ್ರ ತಜ್ಞೆ ಡಾ. ಲಾವೇಣ್ಯ ಆರ್‌ಪಿ ಅವರ ಪ್ರಕಾರ, ದೇಶದಲ್ಲಿ ಕಳೆದ ಎರಡು ದಶಕಗಳಲ್ಲಿ ಮಕ್ಕಳ IBD ಗಮನಾರ್ಹವಾಗಿ ಹೆಚ್ಚಿದ್ದು, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲೂ ಇದು ಪತ್ತೆಯಾಗುತ್ತಿದೆ. ಡಾ. ಶಿವಕುಮಾರ್ ಸಂಬರ್ಗಿ ಅವರ ಪ್ರಕಾರ, ನಗರ ಪ್ರದೇಶದ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತಿದ್ದು, ಅವರು ಪ್ರತಿ ವಾರ 3 ರಿಂದ 4 ಶಂಕಿತ ಪ್ರಕರಣಗಳನ್ನು ನೋಡುತ್ತಿದ್ದಾರೆ.

ಏರಿಕೆಗೆ ಪ್ರಮುಖ ಕಾರಣಗಳೇನು?

ಆಹಾರ ಪದ್ಧತಿ ಬದಲಾವಣೆ: ಅಲ್ಟ್ರಾ-ಪ್ರೊಸೆಸ್ಡ್ ಆಹಾರ, ಸಕ್ಕರೆಯುಕ್ತ ಪಾನೀಯಗಳು ಹಾಗೂ ಪ್ಯಾಕ್ ಮಾಡಿದ ಜಂಕ್ ಫುಡ್ ಬಳಕೆಯ ಹೆಚ್ಚಳ.

ದೈಹಿಕ ಚಟುವಟಿಕೆ ಕೊರತೆ: ಮಕ್ಕಳಿಗೆ ದೈಹಿಕ ವ್ಯಾಯಾಮ ಹಾಗೂ ಆಟೋಟಗಳ ಕೊರತೆ ಮತ್ತು ಹೊಟ್ಟೆಯ ಜೀರ್ಣಾಂಗ ಸೂಕ್ಷ್ಮಜೀವಿಗಳಲ್ಲಿ ಉಂಟಾಗುವ ಬದಲಾವಣೆಗಳು.

ನಗರೀಕರಣ ಮತ್ತು ಮಾಲಿನ್ಯ: ಕ್ಷಿಪ್ರ ನಗರೀಕರಣ, ವಾಯು ಮಾಲಿನ್ಯ, ಜೀವನಶೈಲಿ ಬದಲಾವಣೆ ಹಾಗೂ ಪರೋಕ್ಷ ಧೂಮಪಾನ ಅಪಾಯವನ್ನು ಹೆಚ್ಚಿಸುತ್ತಿವೆ.

ಪೋಷಕರಿಗೆ ವೈದ್ಯರ ಎಚ್ಚರಿಕೆ:

ಮಕ್ಕಳಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಸಾಮಾನ್ಯ ಹೊಟ್ಟೆಯ ಸೋಂಕು ಎಂದು ನಿರ್ಲಕ್ಷಿಸದೇ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಲು ಸಲಹೆ ನೀಡಲಾಗಿದೆ:

ಸುದೀರ್ಘ ದಿನಗಳ ಹೊಟ್ಟೆ ನೋವು

ನಿರಂತರ ಅತಿಸಾರ/ಭೇದಿ ಮತ್ತು ಮಲದಲ್ಲಿ ರಕ್ತ ಬೀಳುವುದು

ನಿರೀಕ್ಷಿತ ಎತ್ತರ/ತೂಕ ಹೆಚ್ಚಾಗದಿರುವುದು ಮತ್ತು ತೂಕ ನಷ್ಟ

ಹಸಿವು ಕಡಿಮೆಯಾಗುವುದು.

ಇದನ್ನೂ ಓದಿ: ತಮಿಳುನಾಡು ಕಲಾಪದಲ್ಲಿ ಸರ್ವಾನುಮತದ ತೀರ್ಮಾನ: ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆಯೇ ಮೊದಲು

ಸರ್ಕಾರದ ಕ್ರಮಕ್ಕೆ ಮೆಚ್ಚುಗೆ:

ಶಾಲಾ ಆವರಣಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟ ಹಾಗೂ ಜಾಹೀರಾತುಗಳನ್ನು ನಿರ್ಬಂಧಿಸಲು ಮತ್ತು ಪೌಷ್ಟಿಕ ಆಹಾರ ಹಾಗೂ ದೈಹಿಕ ಚಟುವಟಿಕೆಯನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ವೈದ್ಯರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರೋಬ್ಬರಿ 15 ವಿಕೆಟ್; ಆಂಗ್ಲರ ನಾಡಿನಲ್ಲಿ ಚಾಹಲ್ ಚಮತ್ಕಾರ – Kannada News | Yuzvendra Chahal’s County Cricket Dominance: A Strong Bid for India Recall

ಇತ್ತೀಚೆಗೆ ನಡೆದ ಸೋಮರ್‌ಸೆಟ್ ವಿರುದ್ಧದ ಪಂದ್ಯದಲ್ಲಿ, ಚಾಹಲ್ ಮತ್ತೊಮ್ಮೆ ತಮ್ಮ ಮ್ಯಾಜಿಕ್ ಪ್ರದರ್ಶಿಸಿದರು. ಈ ಪಂದ್ಯದಲ್ಲಿ ತಮ್ಮ ಖೋಟಾದ 10 ಓವರ್‌ಗಳಲ್ಲಿ ಕೇವಲ 35 ರನ್‌ಗಳನ್ನು ನೀಡಿ 3 ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ಚಾಹಲ್ ಅವರ ಈ ಮ್ಯಾಜಿಕ್​ನಿಂದಾಗಿ ನಾರ್ಥಾಂಪ್ಟನ್‌ಶೈರ್, ಸೋಮರ್‌ಸೆಟ್ ತಂಡವನ್ನು ಕೇವಲ 185 ರನ್‌ಗಳಿಗೆ ಆಲೌಟ್ ಮಾಡಿ ಆ ನಂತರ ಏಳು ವಿಕೆಟ್‌ಗಳ ಸುಲಭ ಜಯ ದಾಖಲಿಸಿತು(PC-County).

Source link

ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ, ಲಿಫ್ಟಿಕ್, ಕ್ರಿಮ್ ಎಷ್ಟು ಸೇಫ್?

ಬೆಂಗಳೂರು, (ಆಗಸ್ಟ್ 10): ಬೆಂಗಳೂರಿನಲ್ಲಿ ಸ್ಟಾರ್​​​ ಹೋಟೆಲ್​​​ಗಳ ಮೇಲೆ ಆಹಾರ ಸುರಕ್ಷಾ ಅಧಿಕಾರಿಗಳು ದಾಳಿ ನಡೆಸಿದ್ದು, ಹೋಟೆಲ್​​​ಗಳಲ್ಲಿನ ಆಹಾರ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕಳಪೆ ಗುಣಮಟ್ಟದ ಸೌಮದರ್ಯವರ್ಧಕಗಳನ್ನು ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅಧಿಕಾರಿಗಳು ಬೆಂಗಳುರಿನ 10 ಕಡೆ ಕಾಸ್ಮಟಿಕ್ಸ್​ ಮಾರಾಟ ಮಳಿಗೆಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲಿಫ್ಟಿಕ್, ಸೆರಮ್, ಪೌಡರ್ ಹಾಗೂ ಕ್ರಿಮಗಳನ್ನು ವಶಕ್ಕೆ ಪಡೆದು ಟೆ್ಸ್ಟ್​ ಮಾಡಲು ಲ್ಯಾಬ್​​​ಗೆ ಕಳುಹಿಸಿದ್ದಾರೆ. ಒಂದು ವೇಳೆ ಟೆಸ್ಟಿಂಗ್​​​​ನಲ್ಲಿ ಅನ್​​ ಸೆಫ್ ಅಂತ ವರದಿ ಬಂದರೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜಾರ್ಖಂಡ್​ನಲ್ಲಿ 17ನೇ ದಿನಕ್ಕೆ ಕಾಲಿಟ್ಟ ವಿದ್ಯಾರ್ಥಿಗಳ ಪ್ರತಿಭಟನೆ; ವಿಧಾನಸೌಧ ಮುತ್ತಿಗೆಗೆ ಯತ್ನ; ಜಲಫಿರಂಗಿಗೂ ಬೆದರದ ಯುವಜನರು – Kannada News | Jharkhand students breaks barricades to march towards Assembly building, leader Devendra Mahto join hands

ವಿದ್ಯಾರ್ಥಿಗಳ ಪ್ರತಿಭಟನೆImage Credit source: PTI

ರಾಂಚಿ, ಆಗಸ್ಟ್ 10: ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯನ್ನು ವಿರೋಧಿಸಿ ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ 17ನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರ ಸ್ವರೂಪ ಪಡೆದುಕೊಂಡಿದೆ. ಇಂದು ಸಾವಿರಾರು ವಿದ್ಯಾರ್ಥಿಗಳು ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಜಾರ್ಖಂಡ್ ವಿಧಾನಸಭೆಯತ್ತ ಮೆರವಣಿಗೆಯನ್ನು (Jharkhand Students Protest) ಮುಂದುವರಿಸಿದ್ದಾರೆ. ವಿದ್ಯಾರ್ಥಿಗಳು ಮುನ್ನುಗ್ಗುವುದನ್ನು ತಡೆಯಲು ಪೊಲೀಸರು ನೀರಿನ ಕ್ಯಾನಾನ್​ಗಳನ್ನು ಬಳಸಿ, ಗುಂಪು ಚದುರಿಸಲು ಯತ್ನಿಸುತ್ತಿದ್ಧಾರೆ. ಬೃಹತ್ ವಾಟರ್ ಗನ್​ಗಳಿಂದ ವೇಗವಾಗಿ ರಾಚುತ್ತಿರುವ ನೀರಿನ ಮಧ್ಯದಲ್ಲೇ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.

ಬ್ಯಾರಿಕೇಡ್ ಭೇದಿಸಿ ಮುನ್ನುಗ್ಗಿದ ವಿದ್ಯಾರ್ಥಿಗಳು

ರಾಜ್ಯದ ವಿವಿಧ ಜಿಲ್ಲೆಗಳಿಂದ ರೈಲು, ಬಸ್ ಮತ್ತು ಖಾಸಗಿ ವಾಹನಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳು ರಾಜಧಾನಿ ರಾಂಚಿಗೆ ಆಗಮಿಸಿದ್ದಾರೆ. ಕೈಯಲ್ಲಿ ತ್ರಿವರ್ಣ ಧ್ವಜ ಹಾಗೂ ಬ್ಯಾನರ್‌ಗಳನ್ನು ಹಿಡಿದು ‘ವಿಧಾನಸಭಾ ಚಲೋ’ ನಡೆಸುತ್ತಿರುವ ವಿದ್ಯಾರ್ಥಿಗಳು, ಪೊಲೀಸರ ತಡೆಯನ್ನು ಮೀರಿ ವಿಧಾನಸೌಧದತ್ತ ಹೆಜ್ಜೆ ಹಾಕುತ್ತಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆಗೆ ಕೈಜೋಡಿಸಿದ ದೇವೇಂದ್ರ ಮಹತೋ

ಪರೀಕ್ಷಾ ಅಕ್ರಮಗಳ ವಿರುದ್ಧ ಕಳೆದ 9 ದಿನಗಳಿಂದ ಉಪವಾಸ ನಿರಶನ ಕೂತಿದ್ದ ವಿದ್ಯಾರ್ಥಿ ಮುಖಂಡ ದೇವೇಂದ್ರ ಮಹತೋ ಅವರು ಆಂಬುಲೆನ್ಸ್ ಮೂಲಕ ಪ್ರತಿಭಟನಾ ಸ್ಥಳಕ್ಕೆ ಬಂದು, ವಿದ್ಯಾರ್ಥಿಗಳಿಗೆ ಸ್ಥೈರ್ಯ ತುಂಬಲು ಯತ್ನಿಸಿದ್ದಾರೆ. ಪೊಲೀಸರೊಂದಿಗೆ ವಾದ ಮಾಡಿ ಕಾಲಹರಣ ನಡೆಸದರೆ, ವಿಧಾನಸೌಧ ಪ್ರವೇಶಿಸಲು ಬೇರೆ ಬೇರೆ ಮಾರ್ಗಗಳನ್ನು ಹುಡುಕುವಂತೆ ಹುರಿದುಂಬಿಸುತ್ತಿರುವುದು ಕಂಡು ಬಂದಿತು.

ಇದನ್ನೂ ಓದಿ: ಜಾರ್ಖಂಡ್ ಪರೀಕ್ಷಾ ಅಕ್ರಮಗಳ ವಿರುದ್ಧ ಹೋರಾಟ; ಸರ್ಕಾರ-ವಿದ್ಯಾರ್ಥಿಗಳ ಮಾತುಕತೆ 2ನೇ ಸುತ್ತಿಗೆ; ವಿದ್ಯಾರ್ಥಿಗಳಿಗೆ ಸರ್ಕಾರದ ಭರವಸೆಗಳು

ಸರ್ಕಾರ ಮತ್ತು ವಿದ್ಯಾರ್ಥಿಗಳ ಮಾತುಕತೆ ವಿಫಲ

ಸರ್ಕಾರ ರಚಿಸಿದ ಸಮಿತಿ ಮತ್ತು ವಿದ್ಯಾರ್ಥಿ ಸಂಘಟನೆಗಳ ನಡುವೆ ನಡೆದ 6 ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಸರ್ಕಾರವು ಶೇ. 98 ರಷ್ಟು ಬೇಡಿಕೆಗಳನ್ನು ಈಡೇರಿಸಲು ಸಿದ್ಧವಿದ್ದು, 3 ಪರೀಕ್ಷೆಗಳನ್ನು ರದ್ದುಗೊಳಿಸಲು ಒಪ್ಪಿದೆ ಎಂದು ಹೇಳಿದೆ. ಆದರೆ ವಿದ್ಯಾರ್ಥಿಗಳು 13 ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಮತ್ತು ಅಕ್ರಮದ ಕುರಿತು ಸಿಬಿಐ (CBI) ತನಿಖೆ ನಡೆಸಬೇಕೆಂದು ಪಟ್ಟು ಹಿಡಿದಿದ್ದಾರೆ.

JPSC ಯಲ್ಲಿ ಪ್ರಮುಖ ರಾಜೀನಾಮೆಗಳು

ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಸಿಐಡಿ (CID) ಸಮನ್ಸ್ ನೀಡಿದ ಬೆನ್ನಲ್ಲೇ ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ (JPSC) ಮೂವರು ಸದಸ್ಯರು ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ ಜುಲೈ 22 ರಂದು ಜೆಪಿಎಸ್‌ಸಿ ಅಧ್ಯಕ್ಷ ಎಲ್. ಖಿಯಾಂಗ್ತೆ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ: ಬೆಂಗಳೂರು-ಮುಂಬೈ ಮಾರ್ಗಕ್ಕೆ ವಂದೇ ಭಾರತ್ ಸ್ಲೀಪರ್ ಸಿದ್ಧ: ಬೆಂಗಳೂರಿನಲ್ಲೇ ತಯಾರಾದ ರೈಲಿನ ಪ್ರಾಯೋಗಿಕ ಸಂಚಾರ ಶೀಘ್ರ

ರಾಂಚಿ ನಗರದಲ್ಲಿ ಬಿಗಿ ಭದ್ರತೆ

  • ಸಂಚಾರ ಮತ್ತು ಶಾಲಾ ಬಂದ್: ಮುನ್ನೆಚ್ಚರಿಕಾ ಕ್ರಮವಾಗಿ ರಾಂಚಿಯ ಪ್ರಮುಖ ಶಾಲೆಗಳನ್ನು ಮುಚ್ಚಲಾಗಿದೆ. ಜಿಲ್ಲಾ ಗಡಿಗಳಲ್ಲಿ ಮತ್ತು ಹೆದ್ದಾರಿಗಳಲ್ಲಿ ಪೊಲೀಸರು ವಾಹನಗಳನ್ನು ತೀವ್ರ ತನಿಖೆಗೆ ಒಳಪಡಿಸುತ್ತಿದ್ದಾರೆ.
  • ಸತ್ಯಾಗ್ರಹ ಮತ್ತು ಉಪವಾಸ: ಪ್ರತಿಭಟನೆಯ ಭಾಗವಾಗಿ ಆರು ಪ್ರಮುಖ ವಿದ್ಯಾರ್ಥಿ ನಾಯಕರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ.
  • ಬಿಜೆಪಿ ಪ್ರತಿಭಟನೆ: ಇತ್ತ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಅಧಿಕೃತ ನಿವಾಸದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಭರವಸೆ ನೀಡಿದ್ದರೂ, ಸಿಬಿಐ ತನಿಖೆಗೆ ಆದೇಶಿಸುವವರೆಗೆ ಹೋರಾಟ ಹಿಂಪಡೆಯುವುದಿಲ್ಲ ಎಂದು ‘JPSC-JSSC ಸುಧಾರಣಾ ಮಂಚ್’ ನಾಯಕ ರವೀಂದ್ರ ಪಾಸ್ವಾನ್ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಖಾಕಿ ಬಿಗ್‌ ಬೇಟೆ: 55.8 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ, 39 ಡ್ರಗ್ ಪೆಡ್ಲರ್‌ಗಳ ಸೆರೆ! – Kannada News | Bengaluru Drug Bust: Police Seize Rs 55.8 Crore Drugs Under Mission RISE, 39 Arrested

ಬೆಂಗಳೂರು, ಆಗಸ್ಟ್ 10: ನಗರದಲ್ಲಿ (Bengaluru) ಮಾದಕ ವಸ್ತುಗಳ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ನಗರ ಪೊಲೀಸರು ಕೈಗೊಂಡಿರುವ ‘ಮಿಷನ್ RISE’ ಹಾಗೂ ‘ಬೇಡ ಬ್ರೋ’ ಅಭಿಯಾನದಡಿ ಭಾರಿ ಯಶಸ್ಸು ಸಿಕ್ಕಿದೆ. ಸಿಸಿಬಿ ಸೇರಿದಂತೆ ಒಟ್ಟು 16 ಪೊಲೀಸ್ ಯೂನಿಟ್‌ಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 55.8 ಕೋಟಿ ರೂಪಾಯಿ ಮೌಲ್ಯದ 200 ಕೆಜಿಗೂ ಅಧಿಕ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, 8 ಮಂದಿ ವಿದೇಶಿಯರು ಹಾಗೂ 21 ಅನ್ಯರಾಜ್ಯದವರು ಸೇರಿದಂತೆ ಒಟ್ಟು 39 ಆರೋಪಿಗಳನ್ನು ಬಂಧಿಸಲಾಗಿದೆ.

16 ಠಾಣಾ ವ್ಯಾಪ್ತಿಯಲ್ಲಿ ಖಾಕಿ ಕಾರ್ಯಾಚರಣೆ

ಕಳೆದ ಹತ್ತು ದಿನಗಳಿಂದ ಸತತ ಕಾರ್ಯಾಚರಣೆ ನಡೆಸಿದ ಪೊಲೀಸರು ಅಮೃತಹಳ್ಳಿ, ಗಿರಿನಗರ, ಕೆಐಎ (ವಿಮಾನ ನಿಲ್ದಾಣ), ಯಶವಂತಪುರ, ಯಲಹಂಕ, ಹೆಬ್ಬಾಳ, ನಂದಿನಿ ಲೇಔಟ್, ಕಾಡುಗೋಡಿ, ಮಲ್ಲೇಶ್ವರಂ, ಗೋವಿಂದಪುರ, ಬಾಗಲೂರು, ಮಹದೇವಪುರ, ಮಹಾಲಕ್ಷ್ಮೀ ಲೇಔಟ್, ಬೇಗೂರು ಹಾಗೂ ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ಮಾದಕ ದಂಧೆಕೋರರ ಜಾಲವನ್ನು ಭೇದಿಸಿದ್ದಾರೆ. ಬಂಧಿತರಿಂದ 17 ಲಕ್ಷ ರೂಪಾಯಿ ನಗದು, 22 ಮೊಬೈಲ್ ಫೋನ್‌ಗಳು ಹಾಗೂ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೃಹತ್ ಪ್ರಮಾಣದ ಡ್ರಗ್ಸ್ ಜಪ್ತಿ

ಎಂಡಿಎಂಎ: 21 ಕೆಜಿ 641 ಗ್ರಾಂ
ಗಾಂಜಾ: 184 ಕೆಜಿ 625 ಗ್ರಾಂ
ಹೈಡ್ರೋ ಗಾಂಜಾ: 4 ಕೆಜಿ 493 ಗ್ರಾಂ
ಅಫೀಮು: 1 ಕೆಜಿ 65 ಗ್ರಾಂ
ಕೊಕೇನ್: 738 ಗ್ರಾಂ
ಮಾರ್ಫಿನ್: 25 ಗ್ರಾಂ

ದೆಹಲಿಯಲ್ಲಿ ತಯಾರಾಗುತ್ತಿತ್ತು MDMA!

ಈ ಇಡೀ ಕಾರ್ಯಾಚರಣೆಯಲ್ಲಿ ಅಮೃತಹಳ್ಳಿ ಪೊಲೀಸರು ಅತ್ಯಂತ ದೊಡ್ಡ ಮೊತ್ತದ ಡ್ರಗ್ಸ್ ಜಾಲವನ್ನು ಭೇದಿಸಿದ್ದಾರೆ. ಬರೋಬ್ಬರಿ 28.8 ಕೋಟಿ ರೂಪಾಯಿ ಮೌಲ್ಯದ MDMA ವಶಪಡಿಸಿಕೊಂಡಿರುವ ಪೊಲೀಸರು, ದೆಹಲಿ ಮೂಲದ ಆಮ್ನಿ ಸಿಂಗ್ ಹಾಗೂ ನೈಜೀರಿಯಾ ಮೂಲದ ಓಬಮ್ ಎಂಬಿಬ್ಬರನ್ನು ದೆಹಲಿಯಲ್ಲೇ ಬಂಧಿಸಿದ್ದಾರೆ. ಆರೋಪಿಗಳು ದೆಹಲಿಯಲ್ಲೇ ಮಾದಕ ವಸ್ತುವನ್ನು ತಯಾರಿಸಿ, ಬೆಂಗಳೂರಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇಶಪ್ರೇಮ ಮೆರೆಯುವುದು ಎಂದಿಗೂ ಅಪರಾಧವಲ್ಲ; ಆರ್ ಮಾಧವನ್ – Kannada News | R Madhavan Responds to Propaganda Allegations Against Dhurandhar and Rocketry

ಭಾರತೀಯನಾಗಿರುವುದು ತಪ್ಪು ಎನ್ನುವುದು ಹೇಗೆ? ಹೀಗಂತ ಹಿರಿಯ ನಟ ಹಾಗೂ ನಿರ್ದೇಶಕ ಆರ್. ಮಾಧವನ್ ಖಡಕ್ ಪ್ರಶ್ನೆ ಎತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಧುರಂಧರ್’ ಹಾಗೂ ಅವರ ನಿರ್ದೇಶನದ ‘ರಾಕೆಟ್ರಿ’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಯಶಸ್ಸು ಕಂಡವು. ಆದರೆ ಈ ಚಿತ್ರಗಳ ವಿರುದ್ಧ ಪ್ರೊಪಗಾಂಡಾ ಅಥವಾ ರಾಜಕೀಯ ಪ್ರಚಾರದ ಆರೋಪಗಳು ಕೇಳಿಬಂದಿದ್ದವು. ಈ ಎಲ್ಲಾ ವಿಮರ್ಶೆಗಳಿಗೆ ಮಾಧವನ್ ಈಗ ನೇರವಾಗಿ ಉತ್ತರ ನೀಡಿದ್ದಾರೆ.

ಸಿನಿಮಾ ಹಾಗೂ ಪಾತ್ರಗಳ ಆಯ್ಕೆಯ ಕುರಿತು ಮಾಧವನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬಾಲ್ಯದ ವಾತಾವರಣದಿಂದ ರೂಪುಗೊಳ್ಳುತ್ತಾನೆ. ಚಿಕ್ಕಂದಿನಿಂದಲೂ ನನಗೆ ದೇಶದ ಹಿತವೇ ಮುಖ್ಯ ಎಂಬುದನ್ನು ಕಲಿಸಲಾಗಿದೆ. ದೇಶಕ್ಕಾಗಿ ನಾವು ಮಾಡುವ ಕೆಲಸಗಳು ಬಹಳ ಮುಖ್ಯವಾಗಿವೆ. ನಾನು ಎಂದಿಗೂ ಯಾವುದೇ ರಾಜಕೀಯ ಪಕ್ಷದ ವಿರುದ್ಧ ಮಾತನಾಡಿಲ್ಲ. ಯಾವುದೇ ನಾಯಕರನ್ನು ವೈಯಕ್ತಿಕವಾಗಿ ನಿಂದಿಸುವ ಕೆಲಸ ಮಾಡಿಲ್ಲ. ಒಳ್ಳೆಯ ಕೆಲಸ ಮಾಡಿದಾಗ ಮುಕ್ತವಾಗಿ ಶ್ಲಾಘಿಸುವುದು ನನ್ನ ಅಭ್ಯಾಸ.

ಆಯ್ಕೆಯಾದ ಪ್ರಧಾನಿ ಅಥವಾ ಮುಖ್ಯಮಂತ್ರಿಗೆ ಬೆಂಬಲ ನೀಡುವುದು ನಾಗರಿಕನ ಕರ್ತವ್ಯ. ನಾನು ಎಂದಿಗೂ ಯಾವುದೇ ಪಕ್ಷದ ಪರ ಪ್ರಚಾರ ಮಾಡಿಲ್ಲ. ರಾಜಕೀಯ ಸೇರುವಂತೆ ನನಗೆ ಯಾರೂ ಆಹ್ವಾನ ನೀಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಬರುವ ನಕಾರಾತ್ಮಕ ಕಮೆಂಟ್‌ಗಳು ನನ್ನ ಮೇಲೆ ಪ್ರಭಾವ ಬೀರಲ್ಲ. ಅವು ಕೇವಲ ಜನರ ವೈಯಕ್ತಿಕ ಅಸಮಾಧಾನದ ಅಭಿವ್ಯಕ್ತಿಯಷ್ಟೇ. ಕ್ರೀಡಾಪಟುಗಳು ದೇಶಕ್ಕೆ ತರುವ ಕೀರ್ತಿಯನ್ನು ನಾನು ಸಂಭ್ರಮಿಸುತ್ತೇನೆ. ಅದನ್ನೂ ಕೆಲವರು ತಪ್ಪಾಗಿ ನೋಡಿದರೆ ಅವರ ಉದ್ದೇಶವನ್ನೇ ಪ್ರಶ್ನಿಸಬೇಕಾಗುತ್ತದೆ.

ದೇಶಪ್ರೇಮವನ್ನು ತೋರುವುದು ಎಂದಿಗೂ ತಪ್ಪಾಗಲು ಸಾಧ್ಯವಿಲ್ಲ. ರಾಕೆಟ್ರಿ ಸಿನಿಮಾದಲ್ಲಿ ನಂಬಿ ನಾರಾಯಣನ್ ಅವರ ನೈಜ ಜೀವನವನ್ನು ತೋರಿಸಿದ್ದೇನೆ. ಅವರು ದೇವರನ್ನು ನಂಬುವ ವ್ಯಕ್ತಿಯಾಗಿದ್ದರು. ಅದನ್ನೇ ಸಿನಿಮಾದಲ್ಲಿ ನೈಜವಾಗಿ ಚಿತ್ರಿಸಲಾಗಿದೆ. ಅದೇ ರೀತಿ ಜಿ.ಡಿ. ನಾಯ್ಡು ಅವರು ದೇವರಿಲ್ಲ ಎನ್ನುವ ಸಿದ್ಧಾಂತ ಹೊಂದಿದ್ದರು. ಪ್ರತಿಯೊಂದು ಪಾತ್ರಕ್ಕೂ ಸತ್ಯಸಂಧವಾಗಿರುವುದು ನಟನ ಜವಾಬ್ದಾರಿಯಾಗಿದೆ. ನಟನಾಗಿ ನೈಜತೆಯನ್ನು ಪ್ರಸ್ತುತಪಡಿಸುವುದು ನನ್ನ ಮುಖ್ಯ ಕೆಲಸ.

ಇದನ್ನೂ ಓದಿ: ‘ಸಂಘಿ’ ಎಂದು ಟ್ರೋಲ್ ಮಾಡಿದವರಿಗೆ ‘ಧುರಂಧರ್’ ನಟ ಆರ್‌. ಮಾಧವನ್ ತಿರುಗೇಟು

ಭಾರತದ ಹೆಮ್ಮೆಯ ವಿಷಯಗಳನ್ನು ಎತ್ತಿಹಿಡಿಯುವುದು ಎಂದಿಗೂ ಅಪರಾಧವಾಗುವುದಿಲ್ಲ. ಇಂಟರ್ನೆಟ್‌ನಲ್ಲಿ ಬರುವ ಟ್ರೋಲ್‌ಗಳನ್ನು ಗುರುತಿಸುವುದು ತುಂಬಾ ಸುಲಭ. ಕಮೆಂಟ್ ಮಾಡುವ ಅಕೌಂಟ್ ಯಾವಾಗ ಶುರುವಾಗಿದೆ ಎಂದು ನೋಡಬೇಕು. ಅವರ ಫಾಲೋವರ್ಸ್ ಸಂಖ್ಯೆಯನ್ನು ಗಮನಿಸಿದರೆ ಸಾಕು. ಇದರಿಂದಲೇ ಅವರು ನಕಲಿ ಬಾಟ್‌ಗಳೇ ಅಥವಾ ಹಣ ಪಡೆದು ಟ್ರೋಲ್ ಮಾಡುವವರೇ ಎಂಬುದು ತಿಳಿಯುತ್ತದೆ. ಮಾಧವನ್ ಪ್ರಸ್ತುತ ‘ಜಿಡಿಎನ್’ ಸಿನಿಮಾದಲ್ಲಿ ಜಿ.ಡಿ. ನಾಯ್ಡು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version