CBSE 12ನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ: ಅಂಕಗಳ ಮರುಪರಿಶೀಲನೆ, ಮರುಮೌಲ್ಯಮಾಪನ ಪ್ರಕ್ರಿಯೆ ಆರಂಭ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

CBSE 12ನೇ ತರಗತಿ ಮರುಮೌಲ್ಯಮಾಪನ ಪೋರ್ಟಲ್Image Credit source: Pinterest

ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಮುಖ ಸುದ್ದಿಯೊಂದನ್ನು ನೀಡಿದೆ. 2026ರ ಬೋರ್ಡ್ ಪರೀಕ್ಷೆಯ ಅಂಕಗಳ ಮರುಪರಿಶೀಲನೆ (Verification of Marks) ಮತ್ತು ಪ್ರಶ್ನೆವಾರು ಮರುಮೌಲ್ಯಮಾಪನ (Re-evaluation) ಪ್ರಕ್ರಿಯೆಯ ಪೋರ್ಟಲ್ ಇಂದು ಅಧಿಕೃತವಾಗಿ ಆರಂಭವಾಗಿದೆ. ತಾಂತ್ರಿಕ ನವೀಕರಣಗಳ ನಂತರ ಸದ್ಯ ಪೋರ್ಟಲ್ ಸುಗಮವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಜೂನ್ 6 ರವರೆಗೆ ಕಾಲಾವಕಾಶ:

ಸಿಬಿಎಸ್‌ಇ ಪ್ರಕಟಣೆಯ ಪ್ರಕಾರ, ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜೂನ್ 6 ಮಧ್ಯರಾತ್ರಿಯವರೆಗೆ ಅವಕಾಶ ಕಲ್ಪಿಸಲಾಗಿದೆ. ಕೊನೆಯ ದಿನದಂದು ಸರ್ವರ್ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ, ವಿದ್ಯಾರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ನೆರವಾಗಲು ಸಿಬಿಎಸ್‌ಇ ಹಂತ-ಹಂತವಾಗಿ ಅರ್ಜಿ ಸಲ್ಲಿಸುವ ವೀಡಿಯೊ ಮಾರ್ಗದರ್ಶನವನ್ನೂ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.

ಪರಿಷ್ಕೃತ ಶುಲ್ಕ ಪಟ್ಟಿ ಮತ್ತು ಹಣ ವಾಪಸಾತಿ ನಿಯಮ:

ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಈ ಬಾರಿ ಸಿಬಿಎಸ್‌ಇ ತನ್ನ ಶುಲ್ಕದಲ್ಲಿ ಭಾರಿ ಕಡಿತ ಮಾಡಿದೆ. ಅಂಕಗಳ ಮರುಪರಿಶೀಲನೆಗೆ (Verification) ಪ್ರತಿ ಉತ್ತರ ಪತ್ರಿಕೆಗೆ 100 ರೂಪಾಯಿ ಹಾಗೂ ಮರುಮೌಲ್ಯಮಾಪನಕ್ಕೆ (Re-evaluation) ಪ್ರತಿ ಪ್ರಶ್ನೆಗೆ 25 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲದೆ, ಒಂದು ವೇಳೆ ಮರುಮೌಲ್ಯಮಾಪನದಲ್ಲಿ ಅಂಕಗಳು ಹೆಚ್ಚಾದರೆ ವಿದ್ಯಾರ್ಥಿಗಳು ಪಾವತಿಸಿದ ಈ ಶುಲ್ಕವನ್ನು ಪೂರ್ತಿಯಾಗಿ ರೀಫಂಡ್ (ಹಣ ವಾಪಸ್) ಮಾಡಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.

ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು?

ಈ ಹಂತದಲ್ಲಿ ಅರ್ಜಿ ಸಲ್ಲಿಸಲು ಒಂದು ಪ್ರಮುಖ ನಿಯಮವನ್ನು ಅನ್ವಯಿಸಲಾಗಿದೆ. ಈಗಾಗಲೇ ತಮ್ಮ ಉತ್ತರ ಪತ್ರಿಕೆಯ ಡಿಜಿಟಲ್ ಸ್ಕ್ಯಾನ್ಡ್ ಪ್ರತಿಯನ್ನು (Stage 1) ಪಡೆದುಕೊಂಡ ವಿದ್ಯಾರ್ಥಿಗಳು ಮಾತ್ರ ಈಗ ಈ ಹಂತದಲ್ಲಿ (Stage 2) ನಿರ್ದಿಷ್ಟ ಪ್ರಶ್ನೆಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ನೇರವಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಪೋರ್ಟಲ್‌ನಲ್ಲಿ ಅವಕಾಶವಿರುವುದಿಲ್ಲ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸರಳ ವಿಧಾನ:

ವಿದ್ಯಾರ್ಥಿಗಳು ಮೊದಲಿಗೆ ಸಿಬಿಎಸ್‌ಇಯ ಅಧಿಕೃತ ಪೋರ್ಟಲ್ postresult.cbseit.in/pvr/ ಗೆ ಭೇಟಿ ನೀಡಬೇಕು. ಅಲ್ಲಿ ನಿಮ್ಮ ಅಡ್ಮಿಟ್ ಕಾರ್ಡ್‌ನಲ್ಲಿರುವ 12ನೇ ತರಗತಿಯ ರೋಲ್ ನಂಬರ್ (Roll Number), ಸ್ಕೂಲ್ ನಂಬರ್ (School No.) ಮತ್ತು ಸೆಂಟರ್ ನಂಬರ್ (Center No.) ವಿವರಗಳನ್ನು ದಾಖಲಿಸಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ, ನೀವು ಮರುಮೌಲ್ಯಮಾಪನ ಬಯಸುವ ಪ್ರಶ್ನೆ ಸಂಖ್ಯೆಗಳನ್ನು ನಿಖರವಾಗಿ ಆಯ್ಕೆ ಮಾಡಿ, ಡೆಬಿಟ್/ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ (UPI) ಮೂಲಕ ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿ ಅಪ್ಲಿಕೇಶನ್ ಸಬ್ಮಿಟ್ ಮಾಡಬಹುದು.

ವಿದ್ಯಾರ್ಥಿಗಳ ಸಹಾಯಕ್ಕಾಗಿ ಹೆಲ್ಪ್‌ಲೈನ್ ವಿವರಗಳು:

ಅರ್ಜಿ ಸಲ್ಲಿಸುವಾಗ ಲಾಗಿನ್ ಸಮಸ್ಯೆ ಅಥವಾ ಆನ್‌ಲೈನ್ ಹಣ ಪಾವತಿ ವಿಫಲವಾದರೆ ವಿದ್ಯಾರ್ಥಿಗಳು ಆತಂಕ ಪಡಬೇಕಾಗಿಲ್ಲ. ವಿದ್ಯಾರ್ಥಿಗಳ ನೆರವಿಗಾಗಿ ಮಂಡಳಿಯು ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1800 11 8004 ಅನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ resultcbse2026@cbseshiksha.in ಇಮೇಲ್ ಐಡಿ ಮೂಲಕವೂ ವಿದ್ಯಾರ್ಥಿಗಳು ತಮ್ಮ ದೂರುಗಳನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭುವನೇಶ್ವರ್ ಕುಮಾರ್​ ಯಶಸ್ಸಿನ ಗುಟ್ಟು ರಟ್ಟು ಮಾಡಿದ ಸಚಿನ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಈ ಬಾರಿಯ ಐಪಿಎಲ್​ನಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದರು. ಪ್ರತಿ ಪಂದ್ಯದಲ್ಲೂ ಅತ್ಯುತ್ತಮ ದಾಳಿ ಸಂಘಟಿಸಿದ್ದ ಭುವಿ ರನ್​ ನಿಯಂತ್ರಿಸುವುದರೊಂದಿಗೆ 28 ವಿಕೆಟ್​ಗಳನ್ನೂ ಸಹ ಪಡೆದಿದ್ದರು. ಭುವನೇಶ್ವರ್ ಕುಮಾರ್ ಅವರ ಈ ಭರ್ಜರಿ ಯಶಸ್ಸಿಗೆ ಕಾರಣ ವೋಬ್ಲಿ ಸೀಮ್ ಕೌಶಲ್ಯವೇ ಎಂದಿದ್ದಾರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಶ್ಲೇಷಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡಿರುವ ಸಚಿನ್ ತೆಂಡೂಲ್ಕರ್, “ಭುವನೇಶ್ವರ್ ಕುಮಾರ್ ಈ ಬಾರಿ ವೋಬ್ಲಿ ಸೀಮ್ ಬೌಲಿಂಗ್​ನೊಂದಿಗೆ ಅತ್ಯುತ್ತಮ ದಾಳಿ ನಡೆಸಿದ್ದಾರೆ. ಸಾಮಾನ್ಯವಾಗಿ ಸ್ವಿಂಗ್ ಮಾಡಲು ಬೌಲರ್​ಗಳು ಚೆಂಡಿನ ಸೀಮ್​ (ಚೆಂಡಿನ ಸ್ಟಿಚ್) ಮೇಲೆ ಹಿಡಿತ ಹೊಂದಿರುತ್ತಾರೆ. ಇದನ್ನು ಬ್ಯಾಟರ್​ಗಳು ಸುಲಭವಾಗಿ ಗ್ರಹಿಸಿ ರನ್​ಗಳಿಸುತ್ತಾರೆ”.

“ಆದರೆ ಭುವನೇಶ್ವರ್ ಕುಮಾರ್ ಈ ಬಾರಿ ವೋಬ್ಲಿ ಸೀಮ್ ಕೌಶಲ್ಯದ ಮೂಲಕ ದಾಳಿ ಸಂಘಟಿಸಿದ್ದಾರೆ. ಅಂದರೆ ಭುವಿ ಚೆಂಡಿನ ಸೀಮ್​ ಮೇಲೆ ತುಸು ವಕ್ರವಾಗಿ ಬೆರಳನ್ನಿಟ್ಟು ಬೌಲಿಂಗ್ ಮಾಡಿದ್ದಾರೆ. ಇದರಿಂದ ಚೆಂಡು ಬಿದ್ದ ಮೇಲೆ ಎತ್ತ ಸಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಕೆಲವೊಮ್ಮೆ ಅದು ಇನ್​ ಸ್ವಿಂಗ್ ಆಗಬಹುದು, ಇಲ್ಲಾ ಔಟ್ ಸ್ವಿಂಗ್ ಆಗಬಹುದು. ಹೀಗೆ ಬರುವ ಚೆಂಡನ್ನು ಗುರುತಿಸಿ ಬ್ಯಾಟಿಂಗ್ ಮಾಡುವುದು ತುಸು ಕಷ್ಟ”.

“ಏಕೆಂದರೆ ಬಾಲ್​ ಪಿಚ್ ಆದ ನಂತರ ಬ್ಯಾಟರ್‌ಗಳಿಗೆ ತಿಳಿಯದಂತೆ ದಿಕ್ಕು ಬದಲಾಯಿಸುತ್ತದೆ. ಇಂತಹದೊಂದು ಕೌಶಲ್ಯದೊಂದಿಗೆ ಈ ಬಾರಿ ಭುವನೇಶ್ವರ್​ ಕುಮಾರ್​ಗೆ ದಾಳಿ ಸಂಘಟಿಸಿದ್ದಾರೆ. ಅಲ್ಲದೆ ಆಫ್-ಸ್ಟಂಪ್ ಲೈನ್‌ಗೆ ಸತತವಾಗಿ ಬೌಲಿಂಗ್ ಮಾಡುವ ಮೂಲಕ ಬ್ಯಾಟರ್‌ಗಳನ್ನು ಕಟ್ಟಿಹಾಕಿದ್ದಾರೆ. ಇದುವೇ ಭುವನೇಶ್ವರ್ ಕುಮಾರ್ ಅವರ ಯಶಸ್ಸಿನ ಸಿಕ್ರೇಟ್” ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.

ವೋಬ್ಲಿ ಸೀಮ್ ದಾಳಿಯೊಂದಿಗೆ ಈ ಬಾರಿ ಭುವನೇಶ್ವರ್ ಕುಮಾರ್ ಪಡೆದಿರುವುದು ಬರೋಬ್ಬರಿ 28 ವಿಕೆಟ್​ಗಳು. ಹಾಗೆಯೇ 16 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 378 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ ನೀಡಿರುವುದು ಕೇವಲ 501 ರನ್​ಗಳು ಮಾತ್ರ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ 12 ಕೋಟಿ ರೂ. ಆಫರ್..!

ಅಂದರೆ ಪ್ರತಿ ಓವರ್​ನಲ್ಲಿ 7.95 ಸರಾಸರಿಯಲ್ಲಿ ಮಾತ್ರ ರನ್ ನೀಡಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್​ನಲ್ಲಿ ಕನಿಷ್ಠ 100 ಎಸೆತಗಳನ್ನು ಎಸೆದು ಅತೀ ಕಡಿಮೆ ಸರಾಸರಿಯಲ್ಲಿ ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ 28 ವಿಕೆಟ್​ಗಳೊಂದಿಗೆ ಅತ್ಯಧಿಕ ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

Source link

ಸಿಬಿಎಸ್​ಇ ಮರುಮೌಲ್ಯಮಾಪನ ಪೋರ್ಟಲ್ ತಾಂತ್ರಿಕ ದೋಷ ನಿವಾರಣೆ: ಅಂಕ ಪರಿಶೀಲನೆಗೆ ಜೂನ್ 6 ಕೊನೆಯ ದಿನಾಂಕ

ನವದೆಹಲಿ, ಜೂನ್ 02: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅತ್ಯಂತ ವೇಗದ ಕ್ರಮ ಕೈಗೊಂಡಿದೆ. ಮರುಮೌಲ್ಯಮಾಪನ ಪೋರ್ಟಲ್ ಆರಂಭವಾದ ಮೊದಲ ದಿನ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಲಾಗಿನ್ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಮಂಡಳಿಯು ತಕ್ಷಣವೇ ಪರಿಹರಿಸಿದ್ದು, ಪ್ರಸ್ತುತ ಪೋರ್ಟಲ್ ಅತ್ಯಂತ ಸರಾಗವಾಗಿ ಹಾಗೂ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ.

ಜೂನ್ 6 ರವರೆಗೆ ಅರ್ಜಿ ಸಲ್ಲಿಸಲು ಸುವರ್ಣಾವಕಾಶ
ಸಿಬಿಎಸ್‌ಇ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳ ಮರುಪರಿಶೀಲನೆ ಹಾಗೂ ಮರುಮೌಲ್ಯಮಾಪನಕ್ಕಾಗಿ (Revaluation) ಪೋರ್ಟಲ್ ಜೂನ್ 2 ರಿಂದ ಜೂನ್ 6 ರವರೆಗೆ ಸಾರ್ವಜನಿಕವಾಗಿ ತೆರೆದಿರುತ್ತದೆ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಇಚ್ಛಿಸುವ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ cbse.gov.in ಗೆ ಭೇಟಿ ನೀಡಿ ಸುಲಭವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ: ಈಗಾಗಲೇ ತಮ್ಮ ಉತ್ತರ ಪತ್ರಿಕೆಗಳ ಛಾಯಾಪ್ರತಿಗಾಗಿ (Photocopy) ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮಾತ್ರ ಈ ಮರುಮೌಲ್ಯಮಾಪನಕ್ಕೆ ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಆಯಾ ವಿಷಯದ ಅಂಕಪಟ್ಟಿ ಯೋಜನೆಯನ್ನು (Marking Scheme) ಉಲ್ಲೇಖಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಮತ್ತಷ್ಟು ಓದಿ: ಇನ್ಮುಂದೆ SSLC, PUCಯಲ್ಲಿ ಶೇ.33 ಅಂಕ ಬಂದ್ರೂ ಪಾಸ್: ಆಕ್ಷೇಪಣೆ ಸಲ್ಲಿಸಲು ಅವಕಾಶ

ಪಾರದರ್ಶಕತೆಗೆ ಶಿಕ್ಷಣ ಸಚಿವಾಲಯದ ಒತ್ತು
ಇದೇ ವೇಳೆ, ಮಂಡಳಿಯ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ವ್ಯವಸ್ಥೆಯಲ್ಲಿ ಉಂಟಾಗಿದ್ದ ಕೆಲವು ವ್ಯತ್ಯಾಸಗಳ ಕುರಿತು ವಿದ್ಯಾರ್ಥಿಗಳು ತಂದಿದ್ದ ಗಮನವನ್ನು ಶಿಕ್ಷಣ ಸಚಿವಾಲಯವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಈ ಸೇವೆ ಒದಗಿಸುತ್ತಿರುವ ‘COEMPT’ ಸಂಸ್ಥೆಯ ಟೆಂಡರ್ ಪ್ರಕ್ರಿಯೆಯ ಸಂಪೂರ್ಣ ವಿವರ ಹಾಗೂ ದಾಖಲೆಗಳನ್ನು ಒದಗಿಸುವಂತೆ ಸಚಿವಾಲಯವು ಸಿಬಿಎಸ್‌ಇಗೆ ಸೂಚಿಸಿದೆ.

ಸೇವಾ ಪೂರೈಕೆದಾರರ ಆಯ್ಕೆಯಲ್ಲಿ ಎಲ್ಲಾ ನಿಗದಿತ ಮಾನದಂಡಗಳನ್ನು ಪಾಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಈ ಪರಿಶೀಲನೆ ನಡೆಸಲಾಗುತ್ತಿದ್ದು, ಇದು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಇನ್ನಷ್ಟು ದೋಷಮುಕ್ತ ಮತ್ತು ನಂಬಿಕಸ್ಥ ಮೌಲ್ಯಮಾಪನ ವ್ಯವಸ್ಥೆಯನ್ನು ಖಾತರಿಪಡಿಸಲಿದೆ. ಸದ್ಯ ಪೋರ್ಟಲ್ ಸುಸ್ಥಿತಿಗೆ ಬಂದಿರುವುದರಿಂದ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ತಮ್ಮ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಅಂದೇ ಹೇಳಿದ್ವಿ ಡಿ. ಕೆ ಶಿವಕುಮಾರ್ ಸಿಎಂ ಆಗ್ತಾರೆ ಅಂತಾ’: ಪಂಚಮುಖಿ ಆಂಜನೇಯ ದೇವಸ್ಥಾನದ ಅರ್ಚಕರ ಸಂತಸ

ರಾಯಚೂರು, ಜೂನ್ 02: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ನಿಯೋಜನೆಗೊಂಡಿರುವ ಬೆನ್ನಲ್ಲೇ, ರಾಯಚೂರು ತಾಲೂಕಿನ ಪ್ರಸಿದ್ಧ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಸಡಗರ ಮನೆಮಾಡಿದೆ. ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಲಿದ್ದಾರೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದ ದೇವಸ್ಥಾನದ ಮೂಲ ಅರ್ಚಕ ಶಾಮಾಚಾರ್ಯರು ಟಿವಿ9 ಎದುರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಮುಖ್ಯಾಂಶಗಳು

  • ಡಿ.ಕೆ. ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದಿದ್ದ ರಾಯಚೂರು ಅರ್ಚಕರ ಭವಿಷ್ಯ ನಿಜವಾಗಿದೆ.
  • ಪಂಚಮುಖಿ ಸನ್ನಿಧಿಯಲ್ಲಿ ಈ ಹಿಂದೆ ಪೂಜೆ ಸಲ್ಲಿಸಿದ್ದ ನಾಲ್ವರು ಮುಖ್ಯಮಂತ್ರಿಯಾಗಿದ್ದರು.
  • ಡಿಸಿಎಂ ಆಗಿದ್ದಾಗ ಡಿಕೆಶಿ ದಂಪತಿ ಇಷ್ಟಾರ್ಥ ಸಿದ್ಧಿಗೆ ಮಧು ಅಭಿಷೇಕ ಮಾಡಿಸಿದ್ದರು.

ಇಲ್ಲಿ ಪೂಜೆ ಮಾಡಿಸಿದ ಐದನೇ ಸಿಎಂ ಆದ್ರು ಡಿ.ಕೆ. ಶಿವಕುಮಾರ್!

ಈ ದೇವಸ್ಥಾನಕ್ಕೆ ಒಂದು ವಿಶಿಷ್ಟ ಇತಿಹಾಸವಿದೆ. ಹಿಂದೆ ಇಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದ ಗುಂಡೂರಾವ್, ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಇದೀಗ ಪಂಚಮುಖಿ ಪ್ರಾಣದೇವರ ಮಹಿಮೆಯಿಂದ ಸಿಎಂ ಆಗಿ ಆಯ್ಕೆಯಾಗಿರುವ ಐದನೇ ನಾಯಕ ಡಿ.ಕೆ. ಶಿವಕುಮಾರ್ ಆಗಿದ್ದಾರೆ.

2025ರ ಅಕ್ಟೋಬರ್‌ನಲ್ಲಿ ಡಿಸಿಎಂ ಆಗಿದ್ದ ವೇಳೆ ಡಿ.ಕೆ. ಶಿವಕುಮಾರ್ ಅವರು ಪತ್ನಿ ಸಮೇತ ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪಂಚಮುಖಿ ದೇವರಿಗೆ ವಿಶೇಷವಾದ ‘ಮಧು ಅಭಿಷೇಕ’ ಹಾಗೂ 42 ಶ್ಲೋಕಗಳ ಪೂಜೆ ಮಾಡಿಸಿದ್ದರು.

ಅರ್ಚಕರು ಹೇಳಿದ್ದೇನು?

ಈ ಬಗ್ಗೆ ಮಾತನಾಡಿರುವ ಅರ್ಚಕ ಶಾಮಾಚಾರ್ಯರು, ಪಂಚಮುಖಿ ಪ್ರಾಣದೇವರಲ್ಲಿ ಕಷ್ಟ ನಿವಾರಣೆಗಾಗಿ ಹಾಗೂ ಇಷ್ಟಾರ್ಥಗಳ ಈಡೇರಿಕೆಗಾಗಿ ಮಧು ಅಭಿಷೇಕ ಮಾಡಿಸಿದರೆ ಆ ಕೆಲಸ ಖಂಡಿತ ಆಗುತ್ತದೆ. ಅಂದು ಪೂಜೆ ಮುಗಿದ ಬಳಿಕ ಡಿಕೆಶಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದೆವು. ಇಂದು ರಾಯರ ಹಾಗೂ ಪಂಚಮುಖಿ ಆಂಜನೇಯನ ಆಶೀರ್ವಾದದಿಂದ ಅದು ನಿಜವಾಗಿದೆ ಎಂದು ಭಕ್ತಿಪೂರ್ವಕವಾಗಿ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:02 am, Tue, 2 June 26

Source link

ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಭಾರಿ ಸಮಸ್ಯೆ

ಮೈಸೂರು, ಜೂನ್ 2: ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ವ್ಯಾಪ್ತಿಯ ಕಬಿನಿ ಜಲಾಶಯದ ಹಿನ್ನೀರಿನ ಪ್ರಮಾಣ ದಿನೇ ದಿನೇ ಕುಸಿಯುತ್ತಿರುವುದು ಆತಂಕ ಮೂಡಿಸಿದೆ. ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ತೀವ್ರ ಆಹಾರದ ಕೊರತೆ ಎದುರಾಗಿದೆ. ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಹಸಿರು ಸಂಪೂರ್ಣವಾಗಿ ಮಾಯವಾಗಿದ್ದು, ತಿನ್ನಲು ಹಸಿರು ಹುಲ್ಲು ಸಿಗದೆ ಕಾಡಾನೆಗಳು ಪರದಾಡುತ್ತಿವೆ. ಅಲ್ಪ ಪ್ರಮಾಣದ ಮಳೆಯಿಂದಾಗಿ ಅಲ್ಲಲ್ಲಿ ಮಾತ್ರ ಗರಿಕೆ ಬೆಳೆದಿದ್ದು, ಆನೆಗಳು ಕಾಲಿನಿಂದ ಒಣಗಿದ ಮಣ್ಣನ್ನು ಒದ್ದು, ಹುಲ್ಲಿನ ಬೇರುಗಳನ್ನು ಬೇರ್ಪಡಿಸಿ ತಿನ್ನುತ್ತಿರುವ ದೃಶ್ಯ ಕಾಣಿಸಿದೆ. ನೀರಿಲ್ಲದ ಬಣಗುಡುತ್ತಿರುವ ನೆಲದಲ್ಲಿ ಆಹಾರಕ್ಕಾಗಿ ಕಾಡಾನೆಗಳು ಪರದಾಡುತ್ತಿರುವ ಅಪರೂಪದ ದೃಶ್ಯ ಜಿ.ಎಸ್. ರವಿಶಂಕರ್ ಎಂಬುವವರ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅವರೇ ನನ್ನ ಮೇಲೆ ಹಣ ಖರ್ಚು ಮಾಡುತ್ತಿದ್ದರು’; ಸುಷ್ಮಿತಾ ಸೇನ್ ಬಗ್ಗೆ ಲಲಿತ್ ಮೋದಿ ಮಾತು

ನಾಲ್ಕು ವರ್ಷಗಳ ಹಿಂದೆ (2022ರಲ್ಲಿ), ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ಅವರ ರೋಮ್ಯಾಂಟಿಕ್ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆದಾಗ ಇಡೀ ದೇಶವೇ ಆಘಾತಕ್ಕೊಳಗಾಗಿತ್ತು. ಉದ್ಯಮಿ ಹಾಗೂ ಐಪಿಎಲ್‌ನ ಮಾಜಿ ಮುಖ್ಯಸ್ಥರಾದ ಲಲಿತ್ ಮೋದಿ ಮತ್ತು ಬಾಲಿವುಡ್‌ನ ಯಶಸ್ವಿ ನಟಿ ಸುಶ್ಮಿತಾ ಸೇನ್ ಅವರ ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವಿವಾದ ಹಾಗೂ ಚರ್ಚೆಗೆ ಕಾರಣವಾಗಿತ್ತು. ದೇಶದಿಂದ ದೂರ ಉಳಿದಿದ್ದ ಲಲಿತ್ ಮೋದಿ ಮತ್ತು ಸುಶ್ಮಿತಾ ಒಟ್ಟಿಗೆ ಬಂದಿದ್ದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಈ ನಡುವೆ ಸುಶ್ಮಿತಾ ಸೇನ್ ಅವರನ್ನು ಹಣದ ಆಸೆಗಾಗಿ ಪ್ರೀತಿಸುವ ‘ಗೋಲ್ಡ್ ಡಿಗ್ಗರ್’ ಎಂದು ನೆಟ್ಟಿಗರು ತೀವ್ರವಾಗಿ ಟೀಕಿಸಿದ್ದರು. ಆದರೆ, ಈಗ ಲಲಿತ್ ಮೋದಿ ಅವರು ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವ ಮೂಲಕ ಸುಶ್ಮಿತಾ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಇತ್ತೀಚೆಗೆ ‘ಹ್ಯೂಮನ್ಸ್ ಆಫ್ ಬಾಂಬೆ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಲಲಿತ್ ಮೋದಿ ತಮ್ಮ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ‘ನಾನು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಪ್ರೀತಿಯ ವಿಷಯವನ್ನು ಪ್ರಕಟಿಸಿದ ನಂತರ ಇಂಟರ್ನೆಟ್‌ನಲ್ಲಿ ಹರಿದಾಡಿದ ನೆಗೆಟಿವ್ ಕಮೆಂಟ್‌ಗಳು ನನಗೆ ತೀವ್ರ ನಿರಾಶೆ ಉಂಟುಮಾಡಿದ್ದವು’ ಎಂದು ಲಲಿತ್ ಮೋದಿ ಹೇಳಿದ್ದಾರೆ. ಸುಶ್ಮಿತಾ ಸೇನ್ ಮೇಲಿನ ಹಣದ ಆಸೆಯ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ ಅವರು, ‘ಸುಶ್ಮಿತಾ ಸೇನ್ ಆರ್ಥಿಕವಾಗಿ ಸಂಪೂರ್ಣ ಸ್ವತಂತ್ರ ಮಹಿಳೆ. ಅವರು ತಮ್ಮ ಸ್ವಂತ ಪರಿಶ್ರಮದಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ. ಹಣಕ್ಕಾಗಿ ಅವರು ಯಾರನ್ನೂ ಅವಲಂಬಿಸಿಲ್ಲ. ಅವರು ಅತ್ಯಂತ ಸುಂದರ, ಯಶಸ್ವಿ ಮತ್ತು ಬಲಿಷ್ಠ ಮಹಿಳೆಯಾಗಿದ್ದಾರೆ’ ಎಂದು ಗುಣಗಾನ ಮಾಡಿದ್ದಾರೆ.

ಮುಂದುವರಿದು ಮಾತನಾಡಿದ ಲಲಿತ್ ಮೋದಿ, ‘ನನಗೆ ತಿಳಿದಿರುವ ಎಲ್ಲಾ ಜನರಿಗಿಂತ ಸುಶ್ಮಿತಾ ಅವರ ಬಳಿಯೇ ಅತಿ ಹೆಚ್ಚು ವಜ್ರದ ಆಭರಣಗಳಿವೆ. ಅವೆಲ್ಲವನ್ನೂ ಅವರು ಸ್ವತಃ ತಮ್ಮ ಸ್ವಂತ ಹಣದಿಂದಲೇ ಸಂಪಾದಿಸಿದ್ದಾರೆ. ಅಷ್ಟೇ ಅಲ್ಲ, ಅವರಿಗೆ ತಮ್ಮದೇ ಆದ ಸ್ವಂತ ವಜ್ರದ ಉದ್ಯಮವೂ ಇದೆ’ ಎಂದು ತಿಳಿಸಿದ್ದಾರೆ.
ಇಬ್ಬರೂ ಒಟ್ಟಿಗೆ ಕಳೆದ ಪ್ರವಾಸದ ದಿನಗಳನ್ನು ನೆನಪಿಸಿಕೊಂಡ ಅವರು, ‘ನಾವು ಒಟ್ಟಿಗೆ ಸುತ್ತಾಡಲು ಹೋದಾಗ ನಾನು ಯಾವುದಕ್ಕೂ ಹಣ ನೀಡಬೇಕಾದ ಪರಿಸ್ಥಿತಿ ಎಂದಿಗೂ ಬರಲಿಲ್ಲ. ಅವರ ಖರ್ಚನ್ನು ಅವರೇ ನೋಡಿಕೊಳ್ಳುತ್ತಿದ್ದರು. ಕೆಲವೊಮ್ಮೆ ನನ್ನದೇ ಖರ್ಚನ್ನು ಅವರೇ ಭರಿಸುತ್ತಿದ್ದರು. ನಾನು ಕೇವಲ ಅವರ ಜೊತೆಗಾರನಂತೆ ಇದ್ದೆ ಅಷ್ಟೇ’ ಎಂದು ಹೇಳುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಇದನ್ನೂ ಓದಿ: 49ನೇ ವಯಸ್ಸಿಗೆ ಸುಶ್ಮಿತಾ ಸೇನ್​ಗೆ ಬಂತು ಮದುವೆ ಆಗೋ ಆಸೆ

ಮಾಜಿ ವಿಶ್ವ ಸುಂದರಿಯಾಗಿರುವ ಸುಶ್ಮಿತಾ ಸೇನ್ ಅವರು ಬಾಲಿವುಡ್‌ನಲ್ಲಿ ಸಕ್ರಿಯವಾಗಿದ್ದಾಗ ಅವರ ಹೆಸರು ಹಲವರ ಜೊತೆ ಕೇಳಿಬಂದಿತ್ತು. ಆದರೆ ಲಲಿತ್ ಮೋದಿ ಜೊತೆಗಿನ ಅವರ ಸಂಬಂಧ ಇಂದಿಗೂ ವಿಭಿನ್ನ ಹಾಗೂ ವಿಶೇಷವಾಗಿ ಉಳಿದಿದೆ. ಸುಶ್ಮಿತಾ ಅವರ ವ್ಯಕ್ತಿತ್ವವನ್ನು ಮನಸಾರೆ ಹೊಗಳಿರುವ ಲಲಿತ್ ಮೋದಿ, ‘ಅವರು ಯಾರಿಂದಲೂ ಉಚಿತವಾಗಿ ಏನನ್ನೂ ಸ್ವೀಕರಿಸುವ ಮಹಿಳೆಯಲ್ಲ. ಜನರು ಅವರನ್ನು ಗೋಲ್ಡ್ ಡಿಗ್ಗರ್ ಎಂದು ಕರೆಯುವುದು ಸಂಪೂರ್ಣ ತಪ್ಪು. ಒಂದು ವೇಳೆ ಹಣದ ಆಸೆಯ ವಿಷಯವೇ ಬರುವುದಾದರೆ, ಇಲ್ಲಿ ಲಲಿತ್ ಮೋದಿ ಅವರೇ ವಜ್ರವನ್ನು ಹುಡುಕಿಕೊಂಡು ಹೋದಂತೆ. ಏಕೆಂದರೆ ಸುಶ್ಮಿತಾ ಸೇನ್ ಅವರೇ ಒಂದು ನಿಜವಾದ ಅಮೂಲ್ಯ ವಜ್ರ’ ಎಂದು ಹೇಳಿದ್ದಾರೆ. ಅಲ್ಲದೆ ಸುಶ್ಮಿತಾ ತಮ್ಮ ಜೀವನದ ಅತ್ಯಂತ ಪ್ರಮುಖ ವ್ಯಕ್ತಿ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Gold Rate: ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ದರ ಇಳಿಕೆ; ಭಾರತದಲ್ಲಿ ಎಷ್ಟಿದೆ ಬೆಲೆ?

ನವದೆಹಲಿ, ಜೂನ್ 2: ಇಂದು ಮಂಗಳವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver rates) ಯಥಾಸ್ಥಿತಿಯಲ್ಲಿ ಇದೆ. ಭಾರತದಲ್ಲಿ ಸತತ ಇಳಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇವತ್ತು ಬದಲಾವಣೆ ಆಗಿಲ್ಲ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಬಂಗಾರದ ದರ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,56,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,43,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 2ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,622 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,320 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,717 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,622 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,320 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,320 ರೂ
  • ಚೆನ್ನೈ: 14,500 ರೂ
  • ಮುಂಬೈ: 14,320 ರೂ
  • ದೆಹಲಿ: 14,335 ರೂ
  • ಕೋಲ್ಕತಾ: 14,320 ರೂ
  • ಕೇರಳ: 14,320 ರೂ
  • ಅಹ್ಮದಾಬಾದ್: 14,325 ರೂ
  • ಜೈಪುರ್: 14,335 ರೂ
  • ಲಕ್ನೋ: 14,335 ರೂ
  • ಭುವನೇಶ್ವರ್: 14,320 ರೂ

ಇದನ್ನೂ ಓದಿ: ಜೂನ್​ನಲ್ಲಿ ಪ್ಯಾನ್ ಕಾರ್ಡ್, ಯುಪಿಐ, ಅಡ್ವಾನ್ಸ್ ಟ್ಯಾಕ್ಸ್ ಇತ್ಯಾದಿ ಪ್ರಮುಖ ಬದಲಾವಣೆಗಳನ್ನು ಗಮನಿಸಿ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 587 ರಿಂಗಿಟ್ (14,080 ರುಪಾಯಿ)
  • ದುಬೈ: 539.75 ಡಿರಾಮ್ (13,980 ರುಪಾಯಿ)
  • ಅಮೆರಿಕ: 147 ಡಾಲರ್ (13,986 ರುಪಾಯಿ)
  • ಸಿಂಗಾಪುರ: 195.80 ಸಿಂಗಾಪುರ್ ಡಾಲರ್ (14,569 ರುಪಾಯಿ)
  • ಕತಾರ್: 537 ಕತಾರಿ ರಿಯಾಲ್ (14,016 ರೂ)
  • ಸೌದಿ ಅರೇಬಿಯಾ: 555 ಸೌದಿ ರಿಯಾಲ್ (14,069 ರುಪಾಯಿ)
  • ಓಮನ್: 57.05 ಒಮಾನಿ ರಿಯಾಲ್ (14,096 ರುಪಾಯಿ)
  • ಕುವೇತ್: 45.43 ಕುವೇತಿ ದಿನಾರ್ (14,092 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 280 ರೂ
  • ಚೆನ್ನೈ: 290 ರೂ
  • ಮುಂಬೈ: 280 ರೂ
  • ದೆಹಲಿ: 280 ರೂ
  • ಕೋಲ್ಕತಾ: 280 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 280 ರೂ
  • ಜೈಪುರ್: 280 ರೂ
  • ಲಕ್ನೋ: 280 ರೂ
  • ಭುವನೇಶ್ವರ್: 290 ರೂ
  • ಪುಣೆ: 280

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್ ಸೂರ್ಯವಂಶಿಗೆ 12 ಕೋಟಿ ರೂ. ಆಫರ್..!

ಭಾರತೀಯ ಕ್ರಿಕೆಟ್​ನ ಮುಂದಿನ ಸೂಪರ್ ಸ್ಟಾರ್ ಎಂದೇ ಬಿಂಬಿತನಾಗಿರುವ 15 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಬಿಗ್ ಆಫರ್ ನೀಡಲಾಗಿದೆ. ಅದು ಕೂಡ ಬರೋಬ್ಬರಿ 12 ಕೋಟಿ ರೂ. ಭರ್ಜರಿ ಆಫರ್. ಪ್ರಮುಖ ಕಾರ್ಪೊರೇಟ್ ಟೈರ್​ ಕಂಪೆನಿಯೊಂದು ತಮ್ಮ ಬ್ರ್ಯಾಂಡ್ ಲೋಗೊವನ್ನು ಬ್ಯಾಟ್ ಮೇಲೆ ಪ್ರದರ್ಶಿಸಲು ವೈಭವ್​ಗೆ ಬರೋಬ್ಬರಿ 12 ಕೋಟಿ ರೂಪಾಯಿಗಳ ವಾರ್ಷಿಕ ಸ್ಪಾನ್ಸರ್​ಶಿಪ್ ಆಫರ್ ನೀಡಿದೆ ಎಂದು ವರದಿಯಾಗಿದೆ.

ಇದರ ಜೊತೆಗೆ ಮತ್ತೊಂದು ಟೈರ್ ಕಂಪೆನಿ ಕೂಡ ವೈಭವ್ ಸೂರ್ಯವಂಶಿಯ ಬ್ಯಾಟ್​ ಸ್ಪಾನ್ಸರ್​ಶಿಪ್​ಗಾಗಿ ತೆರೆಮರೆಯ ಪ್ರಯತ್ನ ನಡೆಸುತ್ತಿದ್ದಾರೆ. ಅಂದರೆ ಎರಡು ಪ್ರಮುಖ ಕಂಪೆನಿಗಳು ವೈಭವ್ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಬ್ಯಾಟ್ ಸ್ಪಾನ್ಸರ್​ಶಿಪ್​ನಿಂದಾಗಿ ಯುವ ದಾಂಡಿಗ ಕೋಟಿ ರೂ. ಎನಿಸುವುದು ಖಚಿತ ಎಂದೇ ಹೇಳಬಹುದು.

ಸದ್ಯ ವೈಭವ್ ಸೂರ್ಯವಂಶಿ ಸದ್ಯ ‘SS’ (ಸರೀನ್ ಸ್ಪೋರ್ಟ್ಸ್​) ಕಂಪನಿಯೊಂದಿಗೆ ವಾರ್ಷಿಕ 50 ಲಕ್ಷ ರೂಪಾಯಿಗಳ ಬ್ಯಾಟ್ ಒಪ್ಪಂದವನ್ನು ಹೊಂದಿದ್ದಾರೆ. 3 ವರ್ಷಗಳ ಹಳೆಯ ಈ ಒಪ್ಪಂದವು ಮುಕ್ತಾಯದ ಹಂತದಲ್ಲಿದೆ. ಈ ಒಪ್ಪಂದವು ಮುಗಿಯುತ್ತಿದ್ದಂತೆ ವೈಭವ್ ಸೂರ್ಯವಂಶಿಯ ಬ್ಯಾಟ್ ಮೇಲೆ ಹೊಸ ಕಂಪೆನಿಯ ಹೆಸರು ಕಾಣಿಸಿಕೊಳ್ಳಲಿದೆ.

ಆದರೆ ಆ ಕಂಪೆನಿ ಯಾವುದು ಎಂಬುದು ಇನ್ನೂ ಕೂಡ ಬಹಿರಂಗವಾಗಿಲ್ಲ. ಇದಾಗ್ಯೂ ಭಾರತ ಸ್ಟಾರ್ ಆಟಗಾರರ ಬ್ಯಾಟ್ ಸ್ಪಾನ್ಸರ್​ ಮಾಡುತ್ತಿರುವ ಎರಡು ಕಂಪೆನಿಗಳೇ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿದು ಬಂದಿದೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರ ಬ್ಯಾಟ್ ಸ್ಪಾನ್ಸರ್‌ಗಳು ಮತ್ತು ಅವರ ವಾರ್ಷಿಕ ಒಪ್ಪಂದದ ಮೊತ್ತದ ವಿವರಗಳು ಈ ಕೆಳಗಿನಂತಿವೆ…

  • ವಿರಾಟ್ ಕೊಹ್ಲಿ (MRF): ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಮೊತ್ತದ ಬ್ಯಾಟ್ ಸ್ಪಾನ್ಸರ್‌ಶಿಪ್ ಹೊಂದಿರುವುದು ವಿರಾಟ್ ಕೊಹ್ಲಿ. 2017ರಲ್ಲಿ ಎಂಆರ್​ಎಫ್ ಕಂಪೆನಿ ಜೊತೆ ಈ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದ ಕೊಹ್ಲಿ  ವಾರ್ಷಿಕವಾಗಿ 12.5 ಕೋಟಿ ರೂ. ಪಡೆಯುತ್ತಿದ್ದಾರೆ.
  • ಶುಭ್​ಮನ್ ಗಿಲ್ (MRF): ಭಾರತ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭ್​ಮನ್​ ಗಿಲ್ ಅವರು ಈ ಹಿಂದೆ ‘CEAT’ ಕಂಪನಿಯ ಒಪ್ಪಂದದಲ್ಲಿದ್ದರು. ಆದರೆ ಅವರ ಅದ್ಭುತ ಫಾರ್ಮ್ ಹಾಗೂ ಮಾರುಕಟ್ಟೆ ಮೌಲ್ಯವನ್ನು ನೋಡಿ MRF ಸಂಸ್ಥೆಯು ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಅದರಂತೆ ಗಿಲ್ ಈಗ ಎಂಆರ್​ಎಫ್ ಸ್ಪಾನ್ಸರ್​ಶಿಪ್​ನೊಂದಿಗೆ ವಾರ್ಷಿಕ 10 ಕೋಟಿ ರೂ. ಪಡೆಯುತ್ತಿದ್ದಾರೆ.
  • ರೋಹಿತ್ ಶರ್ಮಾ (CEAT): ಟೀಮ್ ಇಂಡಿಯಾದ ಹಿರಿಯ ಆಟಗಾರ ರೋಹಿತ್ ಶರ್ಮಾ ಅವರು ದೀರ್ಘಕಾಲದಿಂದ ಸಿಯೆಟ್ ಟೈರ್ಸ್​ ಬ್ರ್ಯಾಂಡ್‌ನ ಲೋಗೋವನ್ನು ತಮ್ಮ ಬ್ಯಾಟ್ ಮೇಲೆ ಬಳಸುತ್ತಿದ್ದು, ಇದಕ್ಕಾಗಿ ಹಿಟ್​ಮ್ಯಾನ್ ಪಡೆಯುತ್ತಿರುವ ವಾರ್ಷಿಕ ಮೊತ್ತ 4 ಕೋಟಿ ರೂ.

ಅಂದರೆ ಇಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಬ್ಯಾಟ್​ಗಳ ಮೇಲೆ ಜಾಹೀರಾತು ನೀಡಿರುವುದು MRF ಮತ್ತು CEAT ಕಂಪೆನಿಗಳು. ಈ ದೈತ್ಯ ಟೈರ್ ಕಂಪೆನಿಗಳೇ ಈಗ ವೈಭವ್ ಸೂರ್ಯವಂಶಿಯ ಬ್ಯಾಟ್ ಮೇಲೂ ಕಣ್ಣಿಟ್ಟಿರುವ ಸಾಧ್ಯತೆಯಿದೆ.

ಸದ್ಯ ಮಾಹಿತಿ ಪ್ರಕಾರ ವೈಭವ್ ಸೂರ್ಯವಂಶಿ ಹಾಗೂ SS ಕಂಪೆನಿ ನಡುವಣ ಒಪ್ಪಂದ ಇನ್ನು ಕೆಲವೇ ತಿಂಗಳಲ್ಲಿ ಮುಗಿಯಲಿದೆ. ಅದಕ್ಕೂ ಮುನ್ನ ಎರಡು ಕಂಪೆನಿಗಳು ವೈಭವ್ ಸ್ಪಾನ್ಸರ್​ಶಿಪ್​ಗಾಗಿ ಕೋಟಿ ಸುರಿಯಲು ಮುಂದಾಗಿದ್ದಾರೆ.

ಇದನ್ನೂ ಓದಿ: RCB ಪರ ಈ ಬಾರಿ ಒಂದೇ ಒಂದು ಪಂದ್ಯವಾಡದ 9 ಆಟಗಾರರು ಇವರೇ!

ಹೀಗೆ ಕೋಟಿ ಪೈಪೋಟಿಯೊಂದಿಗೆ ವೈಭವ್ ಸೂರ್ಯವಂಶಿ 12 ಕೋಟಿ ರೂ.ಗೆ ಡೀಲ್ ಕುದುರಿಸಿಕೊಳ್ಳಲಿದ್ದಾರಾ ಅಥವಾ 12 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಆಫರ್​ ಪಡೆದು ವಿರಾಟ್ ಕೊಹ್ಲಿಯ (12.5 ಕೋಟಿ ರೂ.) ಬ್ಯಾಟ್ ಸ್ಪಾನ್ಸರ್​ಶಿಪ್​ ದಾಖಲೆ ಮುರಿಯಲಿದ್ದಾರಾ ಕಾದು ನೋಡಬೇಕಿದೆ.

Source link

Shani Retrograde: ಮೇಷ ರಾಶಿಯವರೇ ಎಚ್ಚರ! ಜು. 27 ರಿಂದ ಶನಿ ವಕ್ರಿ ನಡೆ; ನಿಮ್ಮ ಜೀವನದಲ್ಲಾಗಲಿದೆ ಭಾರಿ ಬದಲಾವಣೆ

ಮೇಷ ರಾಶಿಯವರ ಮೇಲೆ ಶನಿ ವಕ್ರಿ ಪ್ರಭಾವImage Credit source: Pinterest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿದೇವನನ್ನು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಎಂದು ಪರಿಗಣಿಸಲಾಗಿದೆ. ಕರ್ಮಫಲ ದಾತನಾದ ಶನಿಯು ಜುಲೈ 27 ರಂದು ಹಿಮ್ಮುಖ ಚಲನೆಯನ್ನು (Retrograde/ವಕ್ರಿ ನಡೆ) ಪ್ರಾರಂಭಿಸಲಿದ್ದಾನೆ. ಪ್ರಸ್ತುತ ಮೇಷ ರಾಶಿಯವರಿಗೆ ಶನಿಯ ಸಾಡೇ ಸಾತಿಯ ಮೊದಲ ಹಂತ ನಡೆಯುತ್ತಿರುವುದರಿಂದ, ಈ ವಕ್ರಿ ಚಲನೆಯ ಪ್ರಭಾವವು ಅವರ ಜೀವನದ ಮೇಲೆ ಅತ್ಯಂತ ಆಳವಾಗಿರಲಿದೆ. ಜುಲೈ 27 ರ ನಂತರ ಮೇಷ ರಾಶಿಯವರ ವೃತ್ತಿ, ಸಂಪತ್ತು, ಪ್ರೇಮ ಜೀವನ ಮತ್ತು ಆರೋಗ್ಯದಲ್ಲಿ ಯಾವ ರೀತಿಯ ಪ್ರಮುಖ ಬದಲಾವಣೆಗಳು ಬರಲಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಪ್ರೇಮ ಮತ್ತು ಕೌಟುಂಬಿಕ ಜೀವನ:

ಶನಿಯ ಹಿಮ್ಮುಖ ಚಲನೆಯಿಂದಾಗಿ ನಿಮ್ಮ ಸ್ವಭಾವದಲ್ಲಿ ಕಿರಿಕಿರಿ ಮತ್ತು ಹಠಾತ್ ಕೋಪ ಹೆಚ್ಚಾಗಬಹುದು. ಇದು ನಿಮ್ಮ ಕೌಟುಂಬಿಕ ಜೀವನ ಮತ್ತು ಪ್ರೇಮ ಸಂಬಂಧಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ಹಳೆಯ ವಿಷಯಗಳು ಮತ್ತೆ ಮುನ್ನೆಲೆಗೆ ಬಂದು ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆಯಿದೆ. ಆದ್ದರಿಂದ, ನಿಮ್ಮ ಮಾತಿನ ಮೇಲೆ ನಿಗಾ ಇರಲಿ. ಅಹಂಕಾರವನ್ನು ಬದಿಗಿಟ್ಟು, ಶಾಂತಿಯುತವಾಗಿ ಸಂವಹನ ನಡೆಸಿದರೆ ಮಾತ್ರ ನಿಮ್ಮ ಸಂಬಂಧಗಳನ್ನು ಉಳಿಸಿಕೊಳ್ಳಲು ಮತ್ತು ಬಲಪಡಿಸಲು ಸಾಧ್ಯವಾಗುತ್ತದೆ.

ವೃತ್ತಿಜೀವನ ಮತ್ತು ಉದ್ಯೋಗ:

ಉದ್ಯೋಗಿಗಳಿಗೆ ಈ ಅವಧಿಯಲ್ಲಿ ವೃತ್ತಿಜೀವನದಲ್ಲಿ ಕೆಲವು ಹಿನ್ನಡೆಗಳು ಅಥವಾ ಕೆಲಸಗಳಲ್ಲಿ ವಿಳಂಬ ಉಂಟಾಗಬಹುದು. ನೀವು ನಿರೀಕ್ಷಿಸುತ್ತಿರುವ ಹೊಸ ಕೆಲಸ, ಪ್ರಮೋಷನ್ (ಬಡ್ತಿ) ಅಥವಾ ಪ್ರಮುಖ ಪ್ರಾಜೆಕ್ಟ್‌ಗಳ ವಿಷಯದಲ್ಲಿ ತಾಳ್ಮೆಯಿಂದ ಇರಬೇಕಾಗುತ್ತದೆ. ಕೆಲಸದ ಹೊರೆ ಹೆಚ್ಚಾಗುವುದರಿಂದ ಮಾನಸಿಕ ಒತ್ತಡ ಎದುರಾಗಬಹುದು. ಆದರೆ, ಇದು ನಿಮ್ಮ ಶಿಸ್ತು ಮತ್ತು ಕಠಿಣ ಪರಿಶ್ರಮವನ್ನು ಪರೀಕ್ಷಿಸುವ ಸಮಯ. ಸದ್ಯಕ್ಕೆ ಹೊಸ ಸಾಹಸಗಳಿಗೆ ಕೈ ಹಾಕದೆ, ಬಾಕಿ ಉಳಿದಿರುವ ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸುವತ್ತ ಗಮನ ಹರಿಸಿ; ಇದು ಭವಿಷ್ಯದಲ್ಲಿ ಉತ್ತಮ ಫಲ ನೀಡುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಆರ್ಥಿಕ ಸ್ಥಿತಿ:

ಶನಿಯ ವಕ್ರಿ ಹಂತದಲ್ಲಿ ಹಣಕಾಸಿನ ವಿಷಯಗಳಲ್ಲಿ ಅತಿಯಾದ ಜಾಗರೂಕತೆ ಅಗತ್ಯ. ನಿಮ್ಮ ಆದಾಯದಲ್ಲಿ ಯಾವುದೇ ಕೊರತೆಯಾಗದಿದ್ದರೂ, ಅನಿರೀಕ್ಷಿತ ಖರ್ಚುಗಳು ಹೆಚ್ಚಾಗುವುದರಿಂದ ಉಳಿತಾಯ ಮಾಡುವುದು ಕಷ್ಟವಾಗಬಹುದು. ಇದು ನಿಮ್ಮ ತಿಂಗಳ ಬಜೆಟ್ ಅನ್ನು ಏರುಪೇರು ಮಾಡಬಹುದು. ಆದ್ದರಿಂದ, ಈ ಸಮಯದಲ್ಲಿ ಯಾವುದೇ ರೀತಿಯ ಅಪಾಯಕಾರಿ (Risky) ಹೂಡಿಕೆಗಳಿಂದ ದೂರವಿರಿ. ಧಾವಂತದಲ್ಲಿ ಯಾರಿಗಾದರೂ ಸಾಲ ನೀಡುವ ಮುನ್ನ ನೂರು ಬಾರಿ ಯೋಚಿಸಿ, ಏಕೆಂದರೆ ಈ ಅವಧಿಯಲ್ಲಿ ಕೊಟ್ಟ ಹಣವು ಮರಳಿ ಬರುವುದು ಅತ್ಯಂತ ವಿಳಂಬವಾಗಬಹುದು.

ಆರೋಗ್ಯ ಮತ್ತು ಶಕ್ತಿ:

ಮೇಷ ರಾಶಿಯವರು ಮೂಲತಃ ಸದಾ ಉತ್ಸಾಹ ಮತ್ತು ಕ್ರಿಯಾಶೀಲತೆಯಿಂದ ಕಂಗೊಳಿಸುವವರು. ಆದರೆ ಶನಿಯ ಹಿಮ್ಮುಖ ಚಲನೆಯು ನಿಮ್ಮ ಶಕ್ತಿಯ ಮಟ್ಟವನ್ನು (Energy levels) ಕುಗ್ಗಿಸಬಹುದು. ಅತಿಯಾದ ಆಯಾಸ, ಆತಂಕ ಮತ್ತು ಮಾನಸಿಕ ಒತ್ತಡ ನಿಮ್ಮನ್ನು ಕಾಡಬಹುದು. ಇದರೊಂದಿಗೆ, ನಿಮ್ಮ ಹಳೆಯ ಆರೋಗ್ಯ ಸಮಸ್ಯೆಗಳು ಮತ್ತೆ ಮರುಕಳಿಸುವ ಸಾಧ್ಯತೆಯಿದೆ. ಇದನ್ನು ತಡೆಯಲು ಸಾಕಷ್ಟು ವಿಶ್ರಾಂತಿ ಪಡೆಯಿರಿ, ಸಮಯಕ್ಕೆ ಸರಿಯಾಗಿ ಊಟ-ನಿದ್ರೆಯ ದಿನಚರಿಯನ್ನು ಪಾಲಿಸಿ ಹಾಗೂ ದಿನನಿತ್ಯ ಯೋಗ ಮತ್ತು ಪ್ರಾಣಾಯಾಮವನ್ನು ತಪ್ಪದೇ ರೂಢಿಸಿಕೊಳ್ಳಿ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!

ದೇವನಹಳ್ಳಿ, ಜೂನ್ 2: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಕಣ್ಣೂರಹಳ್ಳಿ ರಸ್ತೆಯಲ್ಲಿ ಅಚ್ಚರಿಯ ಹಾಗೂ ಆತಂಕದ ಘಟನೆಯೊಂದು ನಡೆದಿದೆ. ಇಲ್ಲಿ ಒಂದೇ ಸ್ಥಳದಲ್ಲಿ ಬರೋಬ್ಬರಿ 23 ನಾಗರಹಾವಿನ ಮರಿಗಳು ಒಟ್ಟಿಗೆ ಪತ್ತೆಯಾಗಿವೆ. ಒಂದೇ ಕಡೆ ಇಷ್ಟೊಂದು ಸಂಖ್ಯೆಯ ಹಾವಿನ ಮರಿಗಳನ್ನು ಕಂಡ ಸ್ಥಳೀಯರು ಕೆಲ ಕಾಲ ತೀವ್ರ ಆತಂಕಕ್ಕೆ ಒಳಗಾಗಿ ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಜಾಗೃತರಾದ ಸಾರ್ವಜನಿಕರು ಸ್ಥಳೀಯ ಉರಗ ತಜ್ಞರಾದ ಸಿ.ಎಸ್. ನಾಗಭೂಷಣ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞರು ಹಾವಿನ ಮರಿಗಳನ್ನು ಅತ್ಯಂತ ರಕ್ಷಣೆ ಮಾಡಿದ್ದು, ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಡಲು ನಿರ್ಧರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version