Video: ಮನೆಯಂಗಳಕ್ಕೆ ಬಂದ ನವಿಲಿಗೆ ಕ್ಲಾಸ್ ತೆಗೆದುಕೊಂಡ ಪುಟಾಣಿ, ಮುಂದೇನಾಯ್ತು ನೋಡಿ – Kannada News | A little girl was scolded by a peacock that came into the house

ಪುಟ್ಟ ಮಕ್ಕಳು (little kids) ತಮ್ಮ ಮನೆಯಂಗಳಕ್ಕೆ ಬಂದ ಪ್ರಾಣಿ ಪಕ್ಷಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತವೆ. ಆದರೆ ಈ ಪುಟಾಣಿ ಮನೆಯಂಗಳಕ್ಕೆ ಬಂದ ನವಿಲಿಗೆ ಬೈಯಲು ಶುರು ಮಾಡಿದೆ. ಪುಟಾಣಿ ಹಾಗೂ ನವಿಲಿನ ನಡುವಿನ ಬಾಂಧವ್ಯ ಸಾರುವ ಈ ವಿಡಿಯೋ ವೈರಲ್ ಆಗಿದೆ. ಈ ನೆಟ್ಟಿಗರು ಈ ದೃಶ್ಯವನ್ನು ಕಣ್ತುಂಬಿಸಿಕೊಂಡಿದ್ದಾರೆ.

Lachutti and Kunjutti ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಮನೆಯಂಗಳಕ್ಕೆ ನವಿಲೊಂದು ಬಂದಿದ್ದು, ಅಲ್ಲೇ ಇದ್ದ ಹೂವಿನ ಕುಂಡವನ್ನು ಕೆಳಗೆ ಬೀಳಿಸಿದೆ. ಇದನ್ನು ಗಮನಿಸಿದ ಪುಟ್ಟ ಹುಡುಗಿಯೂ ನವಿಲಿಗೆ ಕ್ಲಾಸ್ ತೆಗೆದುಕೊಂಡಿರುವುದನ್ನು ಕಾಣಬಹುದು. ಆ ಬಳಿಕ ಪುಟಾಣಿ ಹೂವಿನ ಕುಂಡವನ್ನು ಸರಿಪಡಿಸುತ್ತಿರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮರಳಿ ಬಾಲ್ಯವನ್ನು ನೆನಪಿಸುವಂತಿದೆ ಈ ದೃಶ್ಯ; ಪಾಠದ ನಡುವೆ ತಿಂಡಿ ತಿಂದ ಪುಟಾಣಿ

ಈ ವಿಡಿಯೋ ಎಪ್ಪತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನವಿಲಿನ ತಪ್ಪಾಗಿದೆ ಕ್ಷಮಿಸು ಬಿಡು ಪುಟಾಣಿ ಎಂದಿದ್ದಾರೆ. ಮತ್ತೊಬ್ಬರು, ಪುಟಾಣಿ ತುಂಬಾನೇ ಗರಂ ಆಗಿದೆ ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು, ಮುದ್ದಾಗಿದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ ಸಾಗೋ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಕೇಸ್​ಗೆ ತಮಿಳುನಾಡು ಲಿಂಕ್​​? ಸ್ಫೋಟಕ ಸುಳಿವು ಪತ್ತೆ

ಬೆಂಗಳೂರು, ಮೇ 11: ನಿನ್ನೆ ಪ್ರಧಾನಿ ನರೇಂದ್ರ ಮೋದಿ ಸಾಗುವ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣ ಮತ್ತಷ್ಟು ಗಂಭೀರ ಪಡೆದುಕೊಂಡಿದೆ. ನಿರ್ಜನ ಪ್ರದೇಶವೊಂದರ ಕಾಂಪೌಂಡ್ ಹಿಂಭಾಗದಲ್ಲಿ ಈ ಪೆಟ್ಟಿಗೆ ಸಿಕ್ಕಿದ್ದು, ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳಿಲ್ಲ. ಸದ್ಯ ಬೆಂಗಳೂರು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಿಂದ ಸ್ಫೋಟಕಗಳನ್ನು ತಂದು ಇಡಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಪೊಲೀಸ್ ತಂಡವೊಂದು ತಮಿಳುನಾಡಿಗೆ ತೆರಳಿದೆ. ಇನ್ನು ಸಿಸಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಟವರ್ ಲೊಕೇಶನ್‌ಗಳನ್ನು ಪರಿಶೀಲಿಸಲಾಗುತ್ತಿದ್ದು, ಓರ್ವ ವ್ಯಕ್ತಿ ಬಾಕ್ಸ್​ನ್ನು ಇಟ್ಟು ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೋರಮಂಗಲ ಪೊಲೀಸರು ಬಂಧಿಸಿರುವ ಲೋಹಿತ್ ಎಂಬಾತನಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎನ್ನಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಾಂಗ್ಲಾ ಗಡಿಗೆ ಫೆನ್ಸಿಂಗ್​ನಿಂದ ಹಿಡಿದು ಬಿಎನ್​ಎಸ್ ಜಾರಿವರೆಗೆ ಸುವೇಂದು ಕ್ಯಾಬಿನೆಟ್ ಕೈಗೊಂಡ ಪ್ರಮುಖ ನಿರ್ಧಾರಗಳಿವು – Kannada News | Bengal CM Suvendu Adhikari Announces Major Decisions After First Cabinet Meeting

ಕೋಲ್ಕತಾ, ಮೇ 11: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮೊನ್ನೆ ಅಧಿಕಾರ ಸ್ವೀಕರಿಸಿದ ಸುವೇಂದು ಅಧಿಕಾರಿ (Suvendu Adhikari) ಅವರು, ಇಂದು ತಮ್ಮ ಮೊದಲ ಸಚಿವ ಸಂಪುಟ ಸಭೆ ನಡೆಸಿದರು. ಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಮತ್ತು ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಎಲ್ಲರಿಗಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದು, ಬಂಗಾಳ ಚುನಾವಣೆಯಲ್ಲಿ (West Bengal Assembly Elections) ಇದೇ ಮೊದಲ ಬಾರಿಗೆ ಹಿಂಸಾಮುಕ್ತವಾಗಿ ನೆರವೇರಲು ನೆರವಾದ ಚುನಾವಣಾ ಆಯೋಗ, ಪೊಲೀಸ್, ಸಿಎಪಿಎಫ್ ಹಾಗೂ ಸಾರ್ವಜನಿಕರಿಗೆ ಧನ್ಯವಾದ ಕೂಡ ಅರ್ಪಿಸಿದ್ದಾರೆ.

ಬಾಂಗ್ಲಾ ಗಡಿಗೆ ಫೆನ್ಸಿಂಗ್ ಹಾಕುವ ಕಾರ್ಯ

ಸುವೇಂದು ಅಧಿಕಾರಿ ಅವರ ಕ್ಯಾಬಿನೆಟ್ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳಲ್ಲಿ ಬಿಎಸ್​ಎಫ್​ಗೆ 600 ಎಕರೆ ಜಾಗವನ್ನು ಹಸ್ತಾಂತರಿಸಲು ಸಮ್ಮತಿಯೂ ಒಂದು. ‘45 ದಿನದಲ್ಲಿ ಬಿಎಸ್​ಎಫ್​ಗೆ ಜಮೀನು ನೀಡುತ್ತೇವೆ’ ಎಂದು ಅಧಿಕಾರಿ ಹೇಳಿದ್ದಾರೆ. ಬಾಂಗ್ಲಾದೇಶ ಗಡಿಭಾಗದಲ್ಲಿ ಫೆನ್ಸಿಂಗ್ ಹಾಕುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಈ ಕ್ರಮದಿಂದ ಅಕ್ರಮ ಬಾಂಗ್ಲಾದೇಶೀ ವಲಸೆಗಳನ್ನು ತಪ್ಪಿಸಬಹುದು.

ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

ಸುವೇಂದು ಅಧಿಕಾರಿ ಕ್ಯಾಬಿನೆಟ್ ಕೈಗೊಂಡ ಪ್ರಮುಖ ನಿರ್ಧಾರಗಳಿವು

  1. ಆಯುಷ್ಮಾನ್ ಭಾರತ್ ಜಾರಿ: ಕೇಂದ್ರ ಸರ್ಕಾರದ ಪ್ರಮುಖ ಆರೋಗ್ಯ ಯೋಜನೆಯಾದ ‘ಆಯುಷ್ಮಾನ್ ಭಾರತ್’ ಅನ್ನು ಪಶ್ಚಿಮ ಬಂಗಾಳದಲ್ಲಿ ತಕ್ಷಣದಿಂದಲೇ ಜಾರಿಗೆ ತರಲು ನಿರ್ಧರಿಸಲಾಗಿದೆ. ಇದರಿಂದ ರಾಜ್ಯದ ಲಕ್ಷಾಂತರ ಬಡ ಕುಟುಂಬಗಳಿಗೆ ಉಚಿತ ಆರೋಗ್ಯ ಸೇವೆ ಲಭ್ಯವಾಗಲಿದೆ.
  2. ಪಿಎಂ ಕಿಸಾನ್ ಸಮ್ಮಾನ್ ನಿಧಿ: ಬಂಗಾಳದ ರೈತರಿಗೆ ತಲುಪಬೇಕಿದ್ದ ಪಿಎಂ ಕಿಸಾನ್ ಯೋಜನೆಯ ಬಾಕಿ ಹಣ ಮತ್ತು ಮುಂದಿನ ಕಂತುಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುವುದು.
  3. ಅನ್ನಪೂರ್ಣ ಯೋಜನೆ: ರಾಜ್ಯದ ಬಡವರಿಗೆ ಪೌಷ್ಟಿಕ ಆಹಾರ ನೀಡುವ ನಿಟ್ಟಿನಲ್ಲಿ ಹೊಸ ಪಡಿತರ ಯೋಜನೆಯನ್ನು ಘೋಷಿಸಲಾಗಿದೆ.
  4. ಗಡಿ ಭದ್ರತೆ: ಬಾಂಗ್ಲಾದೇಶ ಗಡಿಯಲ್ಲಿ ಒಳನುಸುಳುವಿಕೆಯನ್ನು ತಡೆಯಲು ಫೆನ್ಸಿಂಗ್ ಸೇರಿದಂತೆ ಭದ್ರತೆ ಹೆಚ್ಚಿಸಲು ಕ್ರಮ.
  5. ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ: ಮಹಿಳೆಯರ ರಕ್ಷಣೆಗಾಗಿ ಪ್ರತಿ ಜಿಲ್ಲೆಯಲ್ಲೂ ವಿಶೇಷ ಕಾರ್ಯಪಡೆ ರಚನೆ ಮತ್ತು ಉದ್ಯೋಗಾವಕಾಶಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
  6. ಭ್ರಷ್ಟಾಚಾರ ಮುಕ್ತ ಆಡಳಿತ: ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ನೇಮಕಾತಿ ಹಗರಣಗಳ ಬಗ್ಗೆ ಸಮಗ್ರ ತನಿಖೆ ಮತ್ತು ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲು ಸಂಪುಟ ನಿರ್ಧರಿಸಿದೆ.
  7. ಕೈಗಾರಿಕಾ ಅಭಿವೃದ್ಧಿ: ರಾಜ್ಯಕ್ಕೆ ಹೊಸ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಉದ್ಯೋಗ ಸೃಷ್ಟಿಸಲು ಏಕಗವಾಕ್ಷಿ ಯೋಜನೆಯನ್ನು ಬಲಪಡಿಸುವುದು.
  8. ಸೆನ್ಸಸ್: ಪಶ್ಚಿಮ ಬಂಗಾಳದಲ್ಲಿ ಸೆನ್ಸಸ್ ಆಪರೇಶನ್ಸ್ ಅನ್ನು ಆರಂಭಿಸಲು ಆಡಳಿತಾತ್ಮಕ ಆದೇಶ ನೀಡಲಾಗಿದೆ.
  9. ಅಧಿಕಾರಿಗಳ ತರಬೇತಿ: ಐಎಎಸ್, ಐಪಿಎಸ್, ಡಬ್ಲ್ಯುಬಿಪಿಎಸ್ ಅದಿಕಾರಿಗಳನ್ನು ತರಬೇತಿಗಾಗಿ ಇತರ ರಾಜ್ಯಗಳಿಗೆ ಕಳುಹಿಸುವ ನೀತಿಯನ್ನು ಮರಳಿ ತರಲಾಗಿದೆ. ಹಿಂದಿನ ಸರ್ಕಾರವು ಅಧಿಕಾರಿಗಳನ್ನು ಹೊರರಾಜ್ಯಗಳಲ್ಲಿ ತರಬೇತಿ ನೀಡಲು ಅನುಮತಿಸಿರಲಿಲ್ಲ.
  10. ಉದ್ಯೋಗ ನೇಮಕಾತಿ: ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕಾತಿ ಅವಕಾಶಗಳಿಂದ ವಂಚಿತರಾದ ಅಭ್ಯರ್ಥಿಗಳಿಗೆ ಐದು ವರ್ಷ ವಯಸ್ಸಿನ ವಿನಾಯಿತಿಯನ್ನು ಘೋಷಿಸಲಾಗಿದೆ.
  11. ಬಿಎನ್​ಎಸ್ ಜಾರಿ: ಕೇಂದ್ರ ರೂಪಿಸಿರುವ ಭಾರತೀಯ ನ್ಯಾಯ ಸಂಹಿತೆಯನ್ನು ಹಿಂದಿನ ಸರ್ಕಾರ ಅಳವಡಿಸಿರಲಿಲ್ಲ. ಈಗ ಸುವೇಂದು ಅವರ ಕ್ಯಾಬಿನೆಟ್ ಬಿಎನ್​ಎಸ್ ಜಾರಿಗೆ ನಿರ್ದೇಶನ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಯುವ ವಾಹನ ವಿನ್ಯಾಸಕರಿಗೆ ಭರ್ಜರಿ ಅವಕಾಶ: ‘ಡಿಸೈನ್‌-ಎಕ್ಸ್‌ಥಾನ್‌ 2026’ ಸ್ಪರ್ಧೆ ಘೋಷಿಸಿದ ಮಾರುತಿ ಸುಜುಕಿ – Kannada News | Maruti Suzuki Announces Design X Thon 2026: A Golden Opportunity for Budding Vehicle Designers

‘ಡಿಸೈನ್‌-ಎಕ್ಸ್‌ಥಾನ್‌ 2026’ ಸ್ಪರ್ಧೆ ಘೋಷಿಸಿದ ಮಾರುತಿ ಸುಜುಕಿ

Image Credit source: google Gemini

ಬೆಂಗಳೂರು, ಮೇ 11: ಭಾರತದಲ್ಲಿ ವಾಹನ ವಿನ್ಯಾಸ ಕ್ಷೇತ್ರದಲ್ಲಿರುವ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಜನಪ್ರಿಯ ವಾಹನ ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki) ಮುಂದಾಗಿದೆ. ಈ ನಿಟ್ಟಿನಲ್ಲಿ ಕಂಪನಿಯು ತನ್ನ ಜನಪ್ರಿಯ ವಿನ್ಯಾಸ ಸ್ಪರ್ಧೆಯ 2ನೇ ಆವೃತ್ತಿಯಾದ ‘ಡಿಸೈನ್‌-ಎಕ್ಸ್‌ಥಾನ್‌ 2026’ ಅನ್ನು ಅಧಿಕೃತವಾಗಿ ಘೋಷಿಸಿದೆ. ಕಳೆದ ವರ್ಷ ನಡೆದ ಮೊದಲ ಆವೃತ್ತಿಯ ಅಭೂತಪೂರ್ವ ಯಶಸ್ಸಿನ ನಂತರ, ಭಾರತದಲ್ಲಿರುವ ವಿವಿಧ ಡಿಸೈನ್ ಇನ್‌ಸ್ಟಿಟ್ಯೂಟ್‌ಗಳ ವಿದ್ಯಾರ್ಥಿಗಳನ್ನು ಈ ಸ್ಪರ್ಧೆಗೆ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಭವಿಷ್ಯದ ವಾಹನಗಳ ವಿನ್ಯಾಸ ಹೇಗಿರಬೇಕು ಎಂಬ ತಮ್ಮ ಕಲ್ಪನೆಯನ್ನು ಸ್ಪರ್ಧೆಯಲ್ಲಿ ಮಂಡಿಸಬಹುದಾಗಿದೆ.

ಮುಖ್ಯಾಂಶಗಳು

  •  ಯುವ ಪ್ರತಿಭೆಗಳಿಗಾಗಿ ಮಾರುತಿ ಸುಜುಕಿ ‘ಡಿಸೈನ್-ಎಕ್ಸ್‌ಥಾನ್ 2026’ ವಿನ್ಯಾಸ ಸ್ಪರ್ಧೆ ಘೋಷಣೆ.
  •  ಭವಿಷ್ಯದ ವಾಹನ ವಿನ್ಯಾಸ ಮಾಡುವ ವಿಜೇತರಿಗೆ 4.5 ಲಕ್ಷ ನಗದು ಬಹುಮಾನ.
  •  ಅರ್ಜಿ ಸಲ್ಲಿಸಲು ಜುಲೈ 13 ಕೊನೆಯ ದಿನ; ಇಂಟರ್ನ್‌ಶಿಪ್ ಮಾಡುವ ಸುವರ್ಣ ಅವಕಾಶ.

ಏನಿದು ಸ್ಪರ್ಧೆಯ ಥೀಮ್?

ಈ ಬಾರಿಯ ಸ್ಪರ್ಧೆಗೆ ಅತ್ಯಂತ ಕುತೂಹಲಕಾರಿ ಥೀಮ್ ನೀಡಲಾಗಿದೆ. “2036ನೇ ಇಸವಿಯಲ್ಲಿ ‘ಜೆನ್ ಜೀ’ ಮತ್ತು ‘ಆಲ್ಫಾ’ ಪೀಳಿಗೆಯ ಯುವಜನರು ಹೊಂದಲು ಬಯಸುವ ಐಕಾನಿಕ್ ವಾಹನ ವಿನ್ಯಾ,” ಎಂಬುದು ಈ ಬಾರಿಯ ಸ್ಪರ್ಧೆಯ ವಿಷಯವಾಗಿದೆ.

2035 ರಿಂದ 2040ರ ಕಾಲಘಟ್ಟಕ್ಕೆ ತಕ್ಕಂತೆ ವಾಹನಗಳು ಹೇಗಿರಬೇಕು, ಇಂದಿನ ಯುವಜನರ ಜೀವನಶೈಲಿಗೆ ಅದು ಹೇಗೆ ಹೊಂದಿಕೊಳ್ಳುತ್ತದೆ, ಪರಿಸರ ಸ್ನೇಹಿ ಅಂಶಗಳನ್ನು ಹೇಗೆ ಅಳವಡಿಸಲಾಗಿದೆ ಹಾಗೂ ವಾಹನದ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದ ನಡುವೆ ಹೇಗೆ ಕೊಂಡಿ ಬೆಸೆಯಲಾಗಿದೆ ಎಂಬುದರ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ಈ ಸ್ಪರ್ಧೆಯ ಕುರಿತು ಹೆಚ್ಚಿನ ವಿವರಗಳನ್ನು ನೀಡಿರುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಹಿಸಾಶಿ ಟೆಕ್ಯುಚಿ “ವಾಹನ ವಿನ್ಯಾಸ ಎಂಬುದು ಕೇವಲ ಸೌಂದರ್ಯಕ್ಕೆ ಸೀಮಿತವಲ್ಲ; ಅದು ಹೊಸ ಆಲೋಚನೆಗಳು, ಸೃಜನಶೀಲತೆ ಮತ್ತು ಗ್ರಾಹಕರ ಆಯ್ಕೆಯನ್ನು ಪ್ರಭಾವಿಸುವ ಒಂದು ಕಲೆಯಾಗಿದೆ. ಮೊದಲ ಆವೃತ್ತಿಯ ಸ್ಪರ್ಧೆಯಲ್ಲಿ ಭಾರತದ ಯುವ ವಿನ್ಯಾಸಕರ ಅದ್ಭುತ ಪ್ರತಿಭೆ ನಮಗೆ ಕಾಣಲು ಸಿಕ್ಕಿತು. ಯುವಕರಿಗೆ ತಮ್ಮ ಕಲ್ಪನೆಗಳನ್ನು ವಾಸ್ತವ ರೂಪಕ್ಕೆ ತರಲು ಹಾಗೂ ಮಾರುತಿ ಸುಜುಕಿಯೊಂದಿಗೆ ಕೆಲಸ ಮಾಡಿ ಪ್ರಾಯೋಗಿಕ ಅನುಭವ ಪಡೆಯಲು ಈ ಸ್ಪರ್ಧೆ ಉತ್ತಮ ವೇದಿಕೆಯಾಗಿದೆ,” ಎಂದರು.

“ಭವಿಷ್ಯದ ವಾಹನಗಳನ್ನು ರೂಪಿಸುವಲ್ಲಿ ಯುವಕರ ಪಾತ್ರ ಬಹಳ ದೊಡ್ಡದು. ಈ ಡಿಸೈನ್‌-ಎಕ್ಸ್-ಥಾನ್ ಸ್ಪರ್ಧೆಯ ಮೂಲಕ ಭಾರತದಲ್ಲಿ ಬಲಿಷ್ಠವಾದ ವಿನ್ಯಾಸ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ,” ಎಂದು ಅವರು ತಿಳಿಸಿದರು.

ಭಾರೀ ಯಶಸ್ಸು ಕಂಡಿತ್ತು ಮೊದಲ ಆವೃತ್ತಿ

2025ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ 70ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಂಐಟಿ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್, ವಿಐಟಿ ವೆಲ್ಲೂರು ಮತ್ತು ಸ್ಟ್ರೇಟ್ ಸ್ಕೂಲ್ ಆಫ್ ಡಿಸೈನ್ ವಿದ್ಯಾರ್ಥಿಗಳು ವಿಜೇತರಾಗಿ ಹೊರಹೊಮ್ಮಿದ್ದರು. ಅದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 8 ವಿದ್ಯಾರ್ಥಿಗಳು ಪ್ರಸ್ತುತ ಮಾರುತಿ ಸುಜುಕಿ ವಿನ್ಯಾಸ ತಂಡದಲ್ಲಿ 6 ತಿಂಗಳ ಇಂಟರ್ನ್‌ಶಿಪ್ ಮಾಡುತ್ತಿದ್ದಾರೆ.

ವಿಜೇತರಿಗೆ ಇದೆ ಬಂಪರ್‌ ಬಹುಮಾನ

ವಿಜೇತರಿಗೆ 4.5 ಲಕ್ಷ ರೂ. ನಗದು ಬಹುಮಾನ ಸಿಗಲಿದೆ. ಅಲ್ಲದೆ, ಟಾಪ್ 3 ತಂಡಗಳಿಗೆ ಮಾರುತಿ ಸುಜುಕಿ ವಿನ್ಯಾಸ ತಂಡದೊಂದಿಗೆ 6 ತಿಂಗಳ ಕಾಲ ಕೆಲಸ ಮಾಡುವ (ಇಂಟರ್ನ್‌ಶಿಪ್) ಅವಕಾಶ ಸಿಗಲಿದೆ.

4 ರಿಂದ 10ನೇ ಸ್ಥಾನ ಪಡೆಯುವ ತಂಡಗಳಿಗೂ ಪ್ರಶಂಸನಾ ಪತ್ರ ಹಾಗೂ ಮುಂದೆ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗುತ್ತದೆ. ಇದು ಅವರ ಭವಿಷ್ಯದ ವೃತ್ತಿಜೀವನಕ್ಕೆ ದೊಡ್ಡ ಮೆಟ್ಟಿಲಾಗಲಿದೆ.

ಅರ್ಜಿ ಸಲ್ಲಿಕೆ ಹೇಗೆ?

ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳು ಜುಲೈ 13, 2026 ರೊಳಗೆ ಮಾರುತಿ ಸುಜುಕಿ ಡಿಸೈನ್‌-ಎಕ್ಸ್-ಥಾನ್‌ನ ಅಧಿಕೃತ ಲಿಂಕ್ (https://marutisuzuki.ent.box.com/s/qq6wj8scuf2jbgjjvem3tcnogdlatvs5) ಮೂಲಕ ಅರ್ಜಿ ಸಲ್ಲಿಸಬಹುದು. ಬದಲಾಗುತ್ತಿರುವ ಗ್ರಾಹಕರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಉದಯೋನ್ಮುಖ ಪ್ರತಿಭೆಗಳನ್ನು ಬೆಳೆಸಲು ಮಾರುತಿ ಸುಜುಕಿ ಪ್ರತಿವರ್ಷ ಈ ಸ್ಪರ್ಧೆಯನ್ನು ಆಯೋಜಿಸುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:36 pm, Mon, 11 May 26

Source link

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ ಹೆಚ್ಚಳ, ಎಷ್ಟು ಗೊತ್ತಾ? – Kannada News | Karnataka Governmnet employees dearness allowance hiked By State Govt

ಬೆಂಗಳೂರು, (ಮೇ 11): ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರು (Karnataka Governmnet employee) ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು (Dearness Allowance) ಶೇ. 14.25 ರಿಂದ ಶೇ. 15.75 ಕ್ಕೆ ಏರಿಕೆ ಮಾಡಿದೆ. ಶೇ. 1.50 ರಷ್ಟು ತುಟ್ಟಿಭತ್ಯೆ ಹೆಚ್ಚಳವು 2026ರ ಜನವರಿ 1 ರಿಂದ ಪೂರ್ವಾನ್ವಯ ಆಗಲಿದೆ. ಇದರಿಂದ ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ.

ರಾಜ್ಯ ಸರ್ಕಾರವು ವೇತನದಾರರು,ಕುಟುಂಬ ನಿವೃತ್ತು ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾದದರಿಗೂ ಸಹ 2026ರ ಜನವರಿ 1ರಿಂದ ಜಾರಿಗೆ ಬರುವಂತೆ ಹಾಲಿ ಲಭ್ಯವಿರುವ ತುಟ್ಟಿಭತ್ಯೆಯ ದರಗಳನ್ನು ಮೂಲ ನಿವೃತ್ತಿ ಕುಟುಂಬ ವೇತನದ ಪ್ರಸಕ್ತ ಶೇ.14ರಿಂದ ಶೇ. 15.75ಕ್ಕೆ ಹೆಚ್ಚಿಸಲಾಗಿದೆ.

Source link

ದಶಕದ ಬಳಿಕ ಸಿಡಿಸಿದ ಸಿಕ್ಸ್​ ಮೌಲ್ಯ ’99 ಲಕ್ಷ ರೂ.’ – Kannada News | Swing King to Six King: Bhuvneshwar Kumar’s Last Over Heroics for RCB!

2016 ರಿಂದ 2026… ಅಕ್ಷರಶಃ ಹತ್ತು ವರ್ಷಗಳ ಅಂತರ! ಭುವನೇಶ್ವರ್ ಕುಮಾರ್ ಐಪಿಎಲ್‌ನಲ್ಲಿ ತಮ್ಮ ನಾಲ್ಕನೇ ಸಿಕ್ಸರ್ ಸಿಡಿಸಲು ತೆಗೆದುಕೊಂಡ ಸಮಯವಿದು. ಮುಂಬೈ ಇಂಡಿಯನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ ಅನಿರೀಕ್ಷಿತ ಗೆಲುವು ತಂದುಕೊಟ್ಟ ಆ ಸಿಕ್ಸರ್ ಮೌಲ್ಯ ಬರೋಬ್ಬರಿ 99 ಲಕ್ಷ ರೂ..!

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಗೆ ಗೆಲ್ಲಲು ಕೊನೆಯ ಓವರ್‌ನಲ್ಲಿ ಕಠಿಣ ಸವಾಲಿತ್ತು. ಅದರಲ್ಲೂ ಅಂತಿಮ 3 ಎಸೆತಗಳಲ್ಲಿ 9 ರನ್ ಬೇಕಿದ್ದಾಗ, ಒತ್ತಡದ ಪರಿಸ್ಥಿತಿಯಲ್ಲೂ ಭುವನೇಶ್ವರ್ ಕುಮಾರ್ ಮೈದಾನದ ಆಚೆಗೆ ಚೆಂಡನ್ನು ಅಟ್ಟಿದರು. ಈ ಒಂದು ಸಿಕ್ಸರ್‌ನಿಂದ ಆರ್‌ಸಿಬಿಯ ಗೆಲುವಿನ ಸಾಧ್ಯತೆಯನ್ನು 51% ರಿಂದ ನೇರವಾಗಿ 99% ಕ್ಕೆ ಏರಿಸಿತು. ಅಲ್ಲದೆ ಈ ಸಿಕ್ಸರ್‌ನ ಮೌಲ್ಯ ವಿಶ್ಲೇಷಣಾತ್ಮಕವಾಗಿ ಸುಮಾರು ₹99 ಲಕ್ಷ ಎಂದು ಅಂದಾಜಿಸಲಾಗಿದೆ! ಅಂದರೆ ದಶಕದ ಬಳಿಕ ಭುವಿ ಬ್ಯಾಟ್​ನಿಂದ ಸಿಡಿದ ಸಿಕ್ಸ್ ಇದೀಗ 99 ಲಕ್ಷ ರೂ. ಮೌಲ್ಯದ್ದು ಎಂಬುದು ವಿಶೇಷ.

4 ಸಿಕ್ಸರ್​ಗಳು:

ಕ್ರಿಕೆಟ್ ಲೋಕದಲ್ಲಿ ಭುವನೇಶ್ವರ್ ಕುಮಾರ್ ಒಬ್ಬ ಪರಿಣಿತ ಬೌಲರ್ ಎಂಬುದು ಎಲ್ಲರಿಗೂ ಗೊತ್ತು. ಆದರೆ ಐಪಿಎಲ್ ಇತಿಹಾಸದಲ್ಲಿ ಅವರು ಸಿಕ್ಸರ್ ಸಿಡಿಸುವುದು ಒಂದು ಅಪರೂಪದ ವಿದ್ಯಮಾನ. 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವಾಗ ಕೊನೆಯ ಬಾರಿಗೆ ಸಿಕ್ಸರ್ ಬಾರಿಸಿದ್ದ ಭುವಿ, ಆ ಬಳಿಕ ಬೌಂಡರಿಗಳನ್ನಷ್ಟೇ ನಂಬಿದ್ದರು. ಆದರೆ ಮೇ 10, 2026 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ, ಬರೊಬ್ಬರಿ 10 ವರ್ಷಗಳ ನಂತರ ಭುವಿ ಸಿಕ್ಸರ್ ಸಿಡಿಸಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಅಲ್ಲದೆ ಈವರೆಗೆ ಅವರು ಐಪಿಎಲ್​ನಲ್ಲಿ ಬಾರಿಸಿರುವುದು ಕೇವಲ 4 ಸಿಕ್ಸರ್​ಗಳು ಮಾತ್ರ. ಆ ಸಿಕ್ಸರ್​ಗಳ ವಿವರ ಈ ಕೆಳಗಿನಂತಿದೆ…

    • 2013: ಪುಣೆ ವಾರಿಯರ್ಸ್ ಪರ (1 ಸಿಕ್ಸರ್)
    • 2015: ಸನ್‌ರೈಸರ್ಸ್ ಹೈದರಾಬಾದ್ ಪರ (1 ಸಿಕ್ಸರ್)
    • 2016: ಸನ್‌ರೈಸರ್ಸ್ ಹೈದರಾಬಾದ್ ಪರ (1 ಸಿಕ್ಸರ್)
    • 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ (1 ಸಿಕ್ಸರ್)

‘ಪರ್ಪಲ್’ ಮಿಂಚು:

ಬ್ಯಾಟಿಂಗ್‌ನಲ್ಲಿ ಮಿಂಚುವುದಕ್ಕೂ ಮುನ್ನ, ಭುವನೇಶ್ವರ್ ತಮ್ಮ ಪ್ರಧಾನ ಕೆಲಸವಾದ ಬೌಲಿಂಗ್‌ನಲ್ಲೂ ಕಿಚ್ಚು ಹಚ್ಚಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದಿದ್ದ ಭುವಿ ಕೇವಲ 23 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಈ ಮೂಲಕ ಒಟ್ಟು  21 ವಿಕೆಟ್‌ಗಳೊಂದಿಗೆ ಅವರು ಈ ಸೀಸನ್‌ನ ‘ಪರ್ಪಲ್ ಕ್ಯಾಪ್’ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ.

Source link

ತ್ರಿಶಾಗೆ ಒಲಿದು ಬಂದ ಬಿಗ್ ಆಫರ್; ರಜನಿ-ಕಮಲ್ ಹೊಸ ಸಿನಿಮಾಗೆ ನಾಯಕಿ? – Kannada News | Trisha Krishnan likely to play female lead in Rajinikanth Kamal Haasan movie

ತಮಿಳು ಚಿತ್ರರಂಗದ ಸ್ಟಾರ್ ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ದಶಕಗಳ ನಂತರ ಮತ್ತೆ ಬೆಳ್ಳಿತೆರೆಯ ಮೇಲೆ ಒಂದಾಗುತ್ತಿರುವುದು ಈಗಾಗಲೇ ಅಭಿಮಾನಿಗಳಿಗೆ ಖುಷಿ ನೀಡಿದೆ. ಈಗ ಈ ಬೃಹತ್ ಚಿತ್ರಕ್ಕೆ (KHxRK) ಸೌತ್ ಕ್ವೀನ್ ತ್ರಿಶಾ ಕೃಷ್ಣನ್ ಕೂಡ ಸೇರ್ಪಡೆ ಆಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ತ್ರಿಶಾ (Trisha Krishnan) ಅವರ ಹೆಸರು ಈಗ ಎಲ್ಲ ಕಡೆಗಳಲ್ಲಿ ಚರ್ಚೆಯಲ್ಲಿದೆ. ದಳಪತಿ ವಿಜಯ್ ಜೊತೆಗಿನ ಸ್ನೇಹದ ಕಾರಣದಿಂದಲೂ ಅವರು ಸುದ್ದಿ ಆಗುತ್ತಿದ್ದಾರೆ. ಈ ನಡುವೆ ‘KHxRK’ ಚಿತ್ರಕ್ಕೂ ಅವರೇ ನಾಯಕಿ ಎಂಬ ಸುದ್ದಿ ಹರಿದಾಡುತ್ತಿದೆ.

‘ಜೈಲರ್’ ಖ್ಯಾತಿಯ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಲಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಅನೌನ್ಸ್‌ಮೆಂಟ್ ವಿಡಿಯೋದಲ್ಲಿ ರಜನಿ ಮತ್ತು ಕಮಲ್ ಸ್ಟೈಲಿಶ್ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ವಿಡಿಯೋದ ಕೊನೆಯಲ್ಲಿ ಬರುವ ‘ಹೀರೋ ಯಾರು?’ ಎಂಬ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗಿತ್ತು.

ಕಳೆದ 22 ವರ್ಷಗಳಿಂದ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿರುವ ತ್ರಿಶಾ, ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ತ್ರಿಶಾ ಈ ಪ್ರಾಜೆಕ್ಟ್‌ಗೆ ಒಪ್ಪಿಗೆ ನೀಡಿದ್ದು, ಇದಕ್ಕಾಗಿ ಅವರಿಗೆ ಭಾರಿ ಮೊತ್ತದ ಸಂಭಾವನೆ ನೀಡಲಾಗುತ್ತಿದೆ ಎನ್ನಲಾಗಿದೆ. ಇದು ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಬಜೆಟ್‌ನ ಚಿತ್ರವಾಗಲಿದೆ.

ತ್ರಿಶಾ ಈ ಹಿಂದೆ ಕಮಲ್ ಹಾಸನ್ ಅವರೊಂದಿಗೆ ‘ಮನ್ಮದನ್ ಅಂಬು’, ‘ತೂಂಗಾ ವನಂ’ ಮತ್ತು ‘ಥಗ್ ಲೈಫ್’ ಚಿತ್ರಗಳಲ್ಲಿ ನಟಿಸಿದ್ದರೆ, ರಜನಿಕಾಂತ್ ಅವರೊಂದಿಗೆ ‘ಪೇಟ್ಟಾ’ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದರು. ಸೂರ್ಯ ಅಭಿನಯದ ‘ಕರುಪ್ಪು’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು, ಅದರಲ್ಲಿಯೂ ತ್ರಿಶಾ ಮಿಂಚಿದ್ದಾರೆ.

ಇದನ್ನೂ ಓದಿ: ವಿಜಯ್ ಪ್ರಮಾಣವಚನ ನೋಡಲು ಬರಲಿಲ್ಲ ಪತ್ನಿ, ಮಕ್ಕಳು; ಮಿಂಚಿದ್ದು ಮಾತ್ರ ತ್ರಿಶಾ

ನಿರ್ದೇಶಕ ನೆಲ್ಸನ್ ಸದ್ಯ ‘KHxRK’ ಸ್ಕ್ರಿಪ್ಟ್ ಮತ್ತು ತಾಂತ್ರಿಕ ವರ್ಗದ ಆಯ್ಕೆಯಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ರಜನಿ, ಕಮಲ್, ನೆಲ್ಸನ್ ಮತ್ತು ಅನಿರುದ್ಧ್ ಅವರ ಈ ಕಾಂಬಿನೇಷನ್ ಬಾಕ್ಸ್ ಆಫೀಸ್ ಇತಿಹಾಸವನ್ನೇ ಸೃಷ್ಟಿಸಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಚಿತ್ರವು 1000 ಕೋಟಿ ರೂಪಾಯಿ ಗಳಿಕೆ ಮಾಡುವ ಮೊದಲ ತಮಿಳು ಸಿನಿಮಾ ಆಗಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಡುಗೆ ಎಣ್ಣೆ ಬೆಲೆ 3 ರೂ. ಏರಿಕೆ; ಪ್ರಧಾನಿ ಮೋದಿಯವರ ‘ಮಿತ ಬಳಕೆ’ ಕರೆಗೆ ವ್ಯಾಪಾರಿಗಳ ಸಾಥ್! – Kannada News | Mysuru Public Reacts to rs3 Cooking Oil Price Jump and PM Modis Conservation Advice

ಮೈಸೂರು, ಮೇ.11: ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳವಾಗಿದೆ. ಈ ಹಿಂದೆ 138 ರೂಪಾಯಿ ಇದ್ದ ಅಡುಗೆ ಎಣ್ಣೆಯು ಈಗ 141 ರೂಪಾಯಿ ತಲುಪಿದೆ. ಈ ಕುರಿತು ವ್ಯಾಪಾರಿ ಅಣ್ಣೋಜಿ ರಾವ್ ಅವರು ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಡುಗೆ ಎಣ್ಣೆ ಕಡಿಮೆ ಬಳಸುವಂತೆ ನೀಡಿರುವ ಸಲಹೆಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ತಮ್ಮ ವ್ಯಾಪಾರದ ದೃಷ್ಟಿಯಿಂದ ಎಣ್ಣೆ ಕಡಿಮೆ ಬಳಸಿ ಎಂದು ಹೇಳುವುದು ತಪ್ಪಾದರೂ, ದೇಶದ ಹಿತದೃಷ್ಟಿ, ಜನರ ಆರೋಗ್ಯ ಹಾಗೂ ಯುದ್ಧದ ಪರಿಸ್ಥಿತಿಯ ಕಾರಣದಿಂದ ಮೋದಿ ಅವರ ಸಲಹೆ ಸರಿಯಾಗಿದೆ ಎಂದು ಅಣ್ಣೋಜಿ ರಾವ್ ಅಭಿಪ್ರಾಯಪಟ್ಟಿದ್ದಾರೆ. ಟಿವಿ9 ಕನ್ನಡದ ಪ್ರತಿನಿಧಿ ರಾಮ್ ಅವರು ಮೈಸೂರಿನಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಸಂಗ್ರಹಿಸಿದ್ದಾರೆ. ಪ್ರಧಾನಿಯವರ ಈ ಹೇಳಿಕೆಯು ಕೆಲವರಲ್ಲಿ ಆತಂಕ ಮೂಡಿಸಿದ್ದರೆ, ಮತ್ತೆ ಕೆಲವರು ಇದು ಮುಂದಿನ ಪೀಳಿಗೆಗೆ ಸಂಪನ್ಮೂಲಗಳನ್ನು ಉಳಿಸಲು ಮತ್ತು ಪರಿಸರ ಸಂರಕ್ಷಣೆಗೆ ಸಹಕಾರಿ ಎಂಬ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅನಗತ್ಯವಾಗಿ ವಾಹನಗಳನ್ನು ಬಳಸುವುದು, ಟ್ರಿಪ್‌ಗಳಿಗೆ ಹೋಗುವುದು ಮತ್ತು ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಖರೀದಿಸುವುದನ್ನು ಕಡಿಮೆ ಮಾಡಬೇಕು ಎಂಬ ಅಂಶಕ್ಕೆ ಸಾರ್ವಜನಿಕರು ಒಪ್ಪಿಗೆ ಸೂಚಿಸಿದ್ದಾರೆ.

ವಿಡಿಯೋ ಸುದ್ದಿಗಖನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ಮೋದಿ ಮಾರ್ಗದಲ್ಲಿ ಜಿಲೆಟಿನ್ ಪತ್ತೆ ಪ್ರಕರಣ; ಹಿರಿಯ ಅಧಿಕಾರಿಗಳ ಹೆಸರು ಹೇಳಿದ ಆರೋಪಿ, ಈ ಜಿಲೆಟಿನ್​ ಕಡ್ಡಿಗಳು ಎಲ್ಲಿಂದ ಬಂತು ಗೊತ್ತಾ? – Kannada News | Bengaluru Security Breach, Modi Gold Appeal and Trump Xi Meet: Latest News

ಬೆಂಗಳೂರು, ಮೇ,11: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ವೇಳೆ ಭದ್ರತಾ ಲೋಪ ಉಂಟಾಗಿದ್ದು, ಅವರು ಸಂಚರಿಸುವ ಮಾರ್ಗದ ಪಕ್ಕದಲ್ಲೇ ಸ್ಫೋಟಕಗಳಿದ್ದ ಬಾಕ್ಸ್ ಪತ್ತೆಯಾಗಿತ್ತು. ಇದೀಗ ಈ ಬಗ್ಗೆ ಮಹತ್ವ ಬೆಳವಣಿಗಳು ನಡೆದಿದೆ. ಈ ಪ್ರಕರಣಕ್ಕೆ ಎನ್​​ಐಎ ಎಂಟ್ರಿಯಾಗಿದೆ. ಇದರ ಜತೆಗೆ ಈ ಪ್ರಕರಣದಲ್ಲಿ ವ್ಯಕ್ತಿಯೊಬ್ಬನ್ನು ಬಂಧನ ಮಾಡಲಾಗಿದೆ. ಇದೀಗ ಆತ ತನಿಖೆ ವೇಳೆ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾನೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ ಇತಿಹಾಸ ನಿರ್ಮಿಸಿರುವ ಟಿವಿಕೆ (TVK) ಪಕ್ಷದ ನಾಯಕ, ನಟ ಜೋಸೆಫ್ ವಿಜಯ್ ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಜಗತ್ತು ಬಿಕ್ಕಟ್ಟಿನಲ್ಲಿದ್ದು, ದೇಶದ ಹಿತಕ್ಕಾಗಿ ತ್ಯಾಗಗಳನ್ನು ಮಾಡಲು ಸಿದ್ಧರಾಗಿ ಎಂದು ಅವರು ಹೇಳಿದ್ದಾರೆ. ಕಚ್ಚಾ ತೈಲ ಮತ್ತು ಚಿನ್ನದ ಬೆಲೆಗಳು ಗಣನೀಯವಾಗಿ ಹೆಚ್ಚಾಗಿರುವುದರಿಂದ, ವಿದೇಶಿ ವಿನಿಮಯವನ್ನು ಉಳಿಸುವುದು ಅತ್ಯಗತ್ಯ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಈ ನಿಟ್ಟಿನಲ್ಲಿ, ನಾಗರಿಕರು ಮುಂದಿನ ಒಂದು ವರ್ಷದವರೆಗೆ ಚಿನ್ನ ಖರೀದಿಸುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೇ 13 ರಿಂದ 15 ರವರೆಗೆ ಚೀನಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.

ಮೋದಿ ಬೆಂಗಳೂರು ಭೇಟಿ ವೇಳೆ ಭದ್ರತಾ ಲೋಪ: ಬಂಧಿತ ವಯಕ್ತಿಯಿಂದ ಸ್ಫೋಟಕ ಹೇಳಿಕೆ:

ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ವೇಳೆ ಭದ್ರತಾ ಲೋಪ ಉಂಟಾಗಿದ್ದು, ಅವರು ಸಂಚರಿಸುವ ಮಾರ್ಗದ ಪಕ್ಕದಲ್ಲೇ ಸ್ಫೋಟಕಗಳಿದ್ದ ಬಾಕ್ಸ್ ಪತ್ತೆಯಾಗಿತ್ತು. ಇದೀಗ ಈ ಬಗ್ಗೆ ಮಹತ್ವ ಬೆಳವಣಿಗಳು ನಡೆದಿದೆ. ಈ ಪ್ರಕರಣಕ್ಕೆ ಎನ್​​ಐಎ ಎಂಟ್ರಿಯಾಗಿದೆ. ಈ ಪ್ರಕರಣದಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ಇನ್ನು ಈ ವ್ಯಕ್ತಿಯ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಹೇಳಿದ್ದಾರೆ. ಈ ವ್ಯಕ್ತಿಯ ಹೆಸರು ಲೋಹಿತ್​​ ಎಂದು ಗುರುತಿಸಲಾಗಿದೆ. ಲೋಹಿತ್​​
ಆರೋಪಿ ಬಳಿ ಪೊಲೀಸ್ ಇಲಾಖೆ, ತನಿಖಾ ಸಂಸ್ಥೆಗಳ ನಂಬರ್ ಇದೆ. ಸುಖಾಸುಮ್ಮನೆ ಹುಸಿ ಬೆದರಿಕೆ ಕರೆ ಮಾಡಿದ್ದ ಮಾಹಿತಿ ಬಹಿರಂಗವಾಗಿದೆ. ವಿಚಾರಣೆ ವೇಳೆ ಆರೋಪಿ ದೊಡ್ಡ ದೊಡ್ಡವರ ಹೆಸರು ಹೇಳುತ್ತಾನೆ. ನನಗೆ ಅಜಿತ್ ದೋವಲ್ ಗೊತ್ತು, ಎನ್​ಐಎ ನಿರ್ದೇಶಕ ಗೊತ್ತು, ಸಿಬಿಐ ಡೈರೆಕ್ಟರ್ ಗೊತ್ತು, ಡಿಜಿ-ಐಜಿಪಿ, ಕಮಿಷನರ್ ಹೆಸರು ಹೇಳ್ತಾನೆ. ಎಲ್ಲಾ ತನಿಖಾ ಸಂಸ್ಥೆಗಳ ಕಂಟ್ರೊಲ್ ರೂಂ ನಂಬರ್ ಇಟ್ಟುಕೊಂಡಿದ್ದಾನೆ. ಮನಸ್ಸಿಗೆ ಬಂದ ಹಾಗೆ ಕರೆ ಮಾಡಿ ಬೆದರಿಕೆ ಸಂದೇಶಗಳನ್ನು ಹಾಕ್ತಾನೆ ಎಂದು ಹೇಳಲಾಗಿದೆ.

ಇತಿಹಾಸ ನಿರ್ಮಿಸಿದ ದಳಪತಿಗೆ ಸಿಎಂ ಸಿದ್ದರಾಮಯ್ಯ ವಿಶೇಷ ಆಹ್ವಾನ!:

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ (TVK) ನಾಯಕ ಜೋಸೆಫ್ ವಿಜಯ್ ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಕರೆ ಮಾಡಿ ಅಭಿನಂದಿಸಿದ್ದಾರೆ. ಈ ಸುದೀರ್ಘ ಸಂಭಾಷಣೆಯ ತುಣುಕುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿವೆ.

ಇದನ್ನೂ ಓದಿ: ಸುವೇಂದು ಅಧಿಕಾರಿ ಪಿಎ ಕೊಲೆ ಪ್ರಕರಣ: ಶಂಕಿತರ ಪತ್ತೆಗೆ ನೆರವಾದ ‘UPI’ ಪೇಮೆಂಟ್

ದೇಶದ ಹಿತಕ್ಕಾಗಿ ಒಂದು ವರ್ಷ ಚಿನ್ನ ಖರೀದಿಸಬೇಡಿ:

ಜಾಗತಿಕ ಇಂಧನ ಬಿಕ್ಕಟ್ಟು ಮತ್ತು ಆರ್ಥಿಕ ಏರಿಳಿತಗಳ ನಡುವೆ ಭಾರತದ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕೆಲವು ಮಹತ್ವದ ಮತ್ತು ಕಟ್ಟುನಿಟ್ಟಾದ ಸಲಹೆಗಳನ್ನು ನೀಡಿದ್ದಾರೆ. ವಿದೇಶಿ ವಿನಿಮಯವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನು ಸಣ್ಣ ತ್ಯಾಗಗಳಿಗೆ ಸಿದ್ಧರಾಗಬೇಕೆಂದು ಅವರು ವಿನಂತಿಸಿದ್ದಾರೆ.

ಟ್ರಂಪ್-ಕ್ಸಿ ಜಿನ್‌ಪಿಂಗ್ ಭೇಟಿಯ ಮೇಲೆ ಜಗತ್ತಿನ ಕಣ್ಣು!:

ಜಾಗತಿಕ ರಾಜತಾಂತ್ರಿಕತೆಯಲ್ಲಿ ಮಹತ್ವದ ಬದಲಾವಣೆಯಾಗುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೇ 13 ರಿಂದ 15 ರವರೆಗೆ ಚೀನಾಕ್ಕೆ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ವಿಶೇಷ ಆಹ್ವಾನದ ಮೇರೆಗೆ ಈ ಭೇಟಿ ನಡೆಯುತ್ತಿದ್ದು, ಕಳೆದ ಒಂಬತ್ತು ವರ್ಷಗಳಲ್ಲಿ ಅಮೆರಿಕದ ಅಧ್ಯಕ್ಷರೊಬ್ಬರು ಚೀನಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:28 pm, Mon, 11 May 26

Source link

ಸಿನಿಮಾಗೆ 100 ಕೋಟಿ ರೂ. ಸಂಭಾವನೆ ಪಡೆಯೋ ದಳಪತಿ ವಿಜಯ್ ಈಗಿನ ಸ್ಯಾಲರಿ ಎಷ್ಟು? – Kannada News | Thalapathy Vijay’s CM Salary: From 100 Cr Films to Public Service – What’s His Pay Now?

ತಮಿಳುನಾಡು ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಅಧಿಕಾರ ಸ್ವೀಕರಿಸಿದ್ದಾರೆ. ಪ್ರತಿ ಸಿನಿಮಾಗೆ ನೂರಾರು ಕೋಟಿ ಸಂಭಾವನೆ ಪಡೆಯುತ್ತಿದ್ದ ಅವರು, ಈಗ ಚಿತ್ರರಂಗ ತೊರೆದು ಜನರ ಸೇವೆ ಮಾಡಲು ಮುಂದಾಗಿದ್ದಾರೆ. ಮೇ 10ರಂದು ನಡೆದ ಕಾರ್ಯಕ್ರಮದಲ್ಲಿ ವಿಜಯ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಹಾಗಾದರೆ, ವಿಜಯ್ ಅವರಿಗೆ ಸಿಗುವ ಸಂಬಳ ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.

ದೇಶದಲ್ಲಿ ಹಲವು ರಾಜ್ಯಗಳಿದ್ದು, ಎಲ್ಲಾ ರಾಜ್ಯಗಳಲ್ಲೂ ಮುಖ್ಯಮಂತ್ರಿಗೆ ನೀಡುವ ಸಂಭಾವನೆ ಏಕರೂಪದಲ್ಲಿ ಇಲ್ಲ. ತಮಿಳುನಾಡು ಮುಖ್ಯಮಂತ್ರಿ ಆಗಿರೋ ವಿಜಯ್​​ಗೆ ಈಗ ಮೂಲ ಮಾಸಿಕ ವೇತನ 2,05,000 ರೂಪಾಯಿ. ಇತರ ರಾಜ್ಯಗಳಿಗೆ ಹೋಲಿಸಿದರೆ ಇದು ತುಸು ಕಡಿಮೆಯೇ. ಆದರೆ, ವಿವಿಧ ಭತ್ಯೆಗಳನ್ನೂ ಸೇರಿಸಿದರೆ ಸಿಎಂ ವಿಜಯ್ ಅವರ ಒಟ್ಟು ಮಾಸಿಕ ವೇತನ ಸುಮಾರು 2,85,000 ರೂಪಾಯಿ ಆಗಲಿದೆ.

ಅಂದರೆ, ದಳಪತಿ ವಿಜಯ್ ಅವರ ವಾರ್ಷಿಕ ಸಂಭಾವನೆ ಸುಮಾರು 34,20,000 ರೂಪಾಯಿ. ವಿಜಯ್ ಅವರು ನೂರಾರು ಕೋಟಿ ರೂಪಾಯಿ ಸಂಭಾವನೆ ಬಿಟ್ಟು ಈಗ ಸಿಎಂ ಆಗಿದ್ದಾರೆ. ಸಂಭಾವನೆ ಕಡಿಮೆ ಇದ್ದರೂ, ಸಿಎಂಗೆ ಅಧಿಕಾರ ಹೆಚ್ಚಿರುತ್ತದೆ. ಹೀಗಾಗಿ, ಎರಡೂ ಸಂಭಾವನೆಯನ್ನು ಹೋಲಿಕೆ ಮಾಡೋದು ಸರಿಯಲ್ಲ ಎಂಬ ಮಾತು ವ್ಯಕ್ತವಾಗಿದೆ.

ಇನ್ನು, ಚೆನ್ನೈನ ಪ್ರತಿಷ್ಠಿತ ಪ್ರದೇಶದಲ್ಲಿ ಸುಸಜ್ಜಿತ ಸರ್ಕಾರಿ ಬಂಗಲೆಯನ್ನು ವಿಜಯ್​​ಗೆ ನೀಡಲಾಗುತ್ತದೆ. ಇದರಲ್ಲಿ ಕ್ಯಾಂಪ್ ಆಫೀಸ್ ಮತ್ತು ಸಿಬ್ಬಂದಿ ವರ್ಗಕ್ಕೆ ಬೇಕಾದ ಎಲ್ಲಾ ಸೌಕರ್ಯಗಳಿರುತ್ತವೆ. ವಿಜಯ್ ಚೆನ್ನೈನಲ್ಲಿ ಮನೆ ಹೊಂದಿರುವುದರಿಂದ ಸರ್ಕಾರಿ ಬಂಗಲೆಯಲ್ಲಿ ಮುಂದುವರಿಯುತ್ತಾರೋ ಅಥವಾ ಇಲ್ಲವೋ ಗೊತ್ತಿಲ್ಲ.
ಇನ್ನು, ವಿಜಯ್ ಅವರಿಗೆ ಸರ್ಕಾರದಿಂದ ಬುಲೆಟ್ ಪ್ರೂಫ್ ಎಸ್‌ಯುವಿ ಸಿಗುತ್ತದೆ. ಪೂರ್ಣ ಪ್ರಮಾಣದ ಬೆಂಗಾವಲು ವಾಹನ ಸದಾ ವಿಜಯ್ ಜೊತೆ ಇರುತ್ತದೆ. ಅಧಿಕೃತ ಪ್ರವಾಸಗಳ ವೇಳೆ ವಿಮಾನ, ರೈಲು ಅಥವಾ ರಸ್ತೆ ಸಂಚಾರದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಸರ್ಕಾರವೇ ಮಾಡಲಿದೆ.

ಇದನ್ನೂ ಓದಿ: ವಿಜಯ್ ಪ್ರಮಾಣವಚನ ಸ್ವೀಕರಿಸುವಾಗ ಭಾವುಕರಾದ ತ್ರಿಷಾ ಕೃಷ್ಣನ್

ವಿಜಯ್ ಅವರಿಗೆ Z+ ದರ್ಜೆಯ ಭದ್ರತೆ ನೀಡಲಾಗುತ್ತದೆ. ಮುಖ್ಯಮಂತ್ರಿಯವರ ನಿವಾಸ ಮತ್ತು ಅವರು ಪ್ರಯಾಣಿಸುವ ಮಾರ್ಗಗಳಲ್ಲಿ 24 ಗಂಟೆಗಳ ಕಾಲ ಶಸ್ತ್ರಸಜ್ಜಿತ ಪೊಲೀಸರು ಕಾವಲು ಕಾಯುತ್ತಾರೆ. ನಿವೃತ್ತಿಯ ನಂತರವೂ ಹಲವು ಸೌಲಭ್ಯ ವಿಜಯ್​​ಗೆ ಸಿಗುತ್ತದೆ. ಪಿಂಚಣಿ, ಉಚಿತ ವೈದ್ಯಕೀಯ ಸೌಲಭ್ಯ, ರೈಲು ಪ್ರಯಾಣ ಮತ್ತು ಕಚೇರಿ ನಿರ್ವಹಣೆಗೆ ಸಿಬ್ಬಂದಿ ಸೇರಿದಂತೆ ಹಲವು ಸೌಲಭ್ಯಗಳು ಮುಂದುವರಿಯಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version