ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ ಸ್ಥಾನ – Kannada News | Sringeri postal vote controversy: supreme Court Stays On Karnataka Hight Recount Order

ನವದೆಹಲಿ, (ಮೇ 11): ಶೃಂಗೇರಿ (sringeri) ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಿಂದ ಶಾಸಕ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರಿಗೆ ಸುಪ್ರಿಂ ಕೋರ್ಟ್‌ (supreme Court) ಬಿಗ್‌ ರಿಲೀಫ್‌ ನೀಡಿದ್ದು, ಹೈಕೋರ್ಟ್‌ನ (Karnataka High Court) ಆದೇಶಕ್ಕೆ ಮಧ್ಯಂತರ ತಡೆ ನೀಡಿ ಶಾಸಕ ಸ್ಥಾನವನ್ನು ಮುಂದುವರೆಸುವಂತೆ ಆದೇಶಿಸಿ, ಚುನಾವಣಾ ಆಯೋಗಕ್ಕೆ ನೋಟೀಸ್‌ ನೀಡಿ ವಿಚಾರಣೆಯನ್ನು ಮೇ.21 ಕ್ಕೆ ಮುಂದೂಡಿದೆ. ಇದರೊಂದಿಗೆ ಕಾಂಗ್ರೆಸ್​​​ನ ರಾಜೇಗೌಡ ಅವರಿಗೆ ಮತ್ತೆ ಶಾಸಕ ಸ್ಥಾನ ದಕ್ಕಿದಂತಾಗಿದ್ದು, ಇನ್ನೊಂದೆಡೆ ಮೊನ್ನೆ ಅಷ್ಟೇ ಮರು ಮತ ಎಣಿಕೆಯಲ್ಲಿ ಗೆದ್ದು ಶಾಸಕರಾಗಿ ಪ್ರಮಾಣ ವಚನ ಸ್ವೀರಿಕರಿಸಿದ್ದ ಬಿಜೆಪಿಯ ಜೀವರಾಜ್​​ಗೆ ತಾತ್ಕಾಲಿಕ ಹಿನ್ನಡೆಯಾದಂತಾಗಿದೆ.

Published On – 4:51 pm, Mon, 11 May 26

Source link

ಕನ್ನಡದ ಕಲಾವಿದರು ನಟಿಸಿದ ‘ಕೃಷ್ಣಾವತಾರಂ’ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ – Kannada News | Sushmitha Bhat Karthik Jayaram starrer Krishnavataram movie declared Tax Free in Uttar Pradesh

ಪೌರಾಣಿಕ ಕಥಾಹಂದರ ಹೊಂದಿರುವ ‘ಕೃಷ್ಣಾವತಾರಂ’ (Krishnavataram) ಚಿತ್ರಕ್ಕೆ ಈಗ ದೊಡ್ಡ ಮನ್ನಣೆ ಸಿಕ್ಕಿದೆ. ಚಿತ್ರದ ಸಾಂಸ್ಕೃತಿಕ ಮಹತ್ವ ಮತ್ತು ಜನಪ್ರಿಯತೆಯನ್ನು ಪರಿಗಣಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಚಿತ್ರವನ್ನು ರಾಜ್ಯದಲ್ಲಿ ತೆರಿಗೆ ಮುಕ್ತ (Tax-Free) ಎಂದು ಘೋಷಿಸಿದ್ದಾರೆ. ಇದರಿಂದಾಗಿ ಚಿತ್ರತಂಡಕ್ಕೆ ದೊಡ್ಡ ಬೆಂಬಲ ಸಿಕ್ಕಂತೆ ಆಗಿದೆ. ಹಿಂದಿ, ತೆಲುಗು, ತಮಿಳಿನಲ್ಲಿ ಬಿಡುಗಡೆ ಆಗಿರುವ ಈ ಸಿನಿಮಾದಲ್ಲಿ ಕನ್ನಡದ ಕಲಾವಿದರಾದ ಕಾರ್ತಿಕ್ ಜಯರಾಮ್ (ಜೆಕೆ), ಸುಷ್ಮಿತಾ ಭಟ್ (Sushmitha Bhat) ಕೂಡ ನಟಿಸಿದ್ದಾರೆ ಎಂಬುದು ವಿಶೇಷ.

ಕೇವಲ ತೆರಿಗೆ ಮುಕ್ತಗೊಳಿಸುವುದು ಮಾತ್ರವಲ್ಲದೆ, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಈ ಚಿತ್ರದ ವಿಶೇಷ ಪ್ರದರ್ಶನಗಳನ್ನು ಆಯೋಜಿಸುವಂತೆ ಮುಖ್ಯಮಂತ್ರಿಗಳು ಮಾಹಿತಿ ಇಲಾಖೆಗೆ ಸೂಚನೆ ನೀಡಿದ್ದಾರೆ. ಇಂದಿನ ಮಕ್ಕಳು ಮತ್ತು ಯುವಜನತೆ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯೊಂದಿಗೆ ಬೆರೆಯುವಂತಾಗಲಿ ಎಂಬುದು ಅವರ ಈ ಆದೇಶದ ಹಿಂದಿನ ಉದ್ದೇಶವಾಗಿದೆ.

ಈ ಘೋಷಣೆಯ ಸಂದರ್ಭದಲ್ಲಿ ‘ಕೃಷ್ಣಾವತಾರಂ’ ಚಿತ್ರತಂಡದವರು ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದರು. ನಿರ್ಮಾಪಕರಾದ ಸಜ್ಜನ್ ರಾಜ್ ಕುರುಪ್, ಶೋಭಾ ಸಂತ ಹಾಗೂ ಪೂನಂ ಶ್ರಾಫ್ ಗಜ್ಜರ್, ನಿರ್ದೇಶಕ ಹಾರ್ದಿಕ್ ಗಜ್ಜರ್ ಮತ್ತು ಮುಖ್ಯ ಭೂಮಿಕೆಯ ನಟರಾದ ಸಿದ್ಧಾರ್ಥ್ ಗುಪ್ತಾ ಮತ್ತು ಸಂಸ್ಕೃತಿ ಜಯಾನ ಈ ವೇಳೆ ಉಪಸ್ಥಿತರಿದ್ದರು.

‘ಕೃಷ್ಣಾವತಾರಂ’ ಚಿತ್ರದ ಟ್ರೇಲರ್:

ಮೂರು ಭಾಗಗಳ ಸಿನಿಮಾ ಸರಣಿಯ ಮೊದಲ ಭಾಗವಾಗಿರುವ ‘ಕೃಷ್ಣಾವತಾರಂ: ಪಾರ್ಟ್ 1’ (ಹೃದಯ) ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಅದ್ದೂರಿ ದೃಶ್ಯವೈಭವ, ಸುಮಧುರ ಸಂಗೀತ ಮತ್ತು ಕಲಾವಿದರ ನಟನೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರದಲ್ಲಿ ಸಿದ್ಧಾರ್ಥ್ ಗುಪ್ತಾ, ಸಂಸ್ಕೃತಿ ಜಯಾನ, ಸುಷ್ಮಿತಾ ಭಟ್ ಮತ್ತು ನಿವಾಶಿನಿ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ತ್ರಿಶಾಗೆ ಒಲಿದು ಬಂದ ಬಿಗ್ ಆಫರ್; ರಜನಿ-ಕಮಲ್ ಹೊಸ ಸಿನಿಮಾಗೆ ನಾಯಕಿ?

‘ಕೃಷ್ಣಾವತಾರಂ ಪಾರ್ಟ್ 1’ ಚಿತ್ರವು ಭಾನುವಾರ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 3.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಮೊದಲ ವಾರಾಂತ್ಯದ ಒಟ್ಟು ಕಲೆಕ್ಷನ್ ಸುಮಾರು 6.75 ಕೋಟಿ ರೂಪಾಯಿ ತಲುಪಿದೆ. ಈ ಚಿತ್ರದ ತೆಲುಗು ಮತ್ತು ತಮಿಳು ಆವೃತ್ತಿಗಳು ಕೂಡ ಬಿಡುಗಡೆಯಾಗಿದ್ದು, ಅವುಗಳಿಂದ ಸುಮಾರು 50 ಲಕ್ಷ ರೂಪಾಯಿ ಗಳಿಕೆಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಆರ್​ಸಿಬಿ ಮುಂದಿನ ಪಂದ್ಯ ಯಾವಾಗ? ಎದುರಾಳಿ ಯಾರು? – Kannada News | IPL 2026: RCB vs KKR Playoff Battle – Date, Time, Venue, Live Stream and Squads for Top Spot

ಆರ್​​ಸಿಬಿಯ (RCB) ಎರಡನೇ ತವರು ಮೈದಾನದವಾದ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎರಡು ವಿಕೆಟ್‌ಗಳಿಂದ ಸೋಲಿಸಿದ ಆರ್​ಸಿಬಿ ಪ್ಲೇಆಫ್​ಗೆ ಮತ್ತಷ್ಟು ಹತ್ತಿರವಾಗಿದಲ್ಲದೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೂ ಏರಿತು. ಇದೀಗ ಈ ಅಗ್ರಸ್ಥಾನದಲ್ಲಿ ಮುಂದುವರೆಯಬೇಕಾದರೆ ಆರ್​ಸಿಬಿ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕು. ಲೀಗ್ ಹಂತದಲ್ಲಿ ಆರ್​​ಸಿಬಿ ಈಗಾಗಲೇ 11 ಪಂದ್ಯಗಳನ್ನಾಡಿದ್ದು, ಇದರಲ್ಲಿ 7 ಪಂದ್ಯಗಳನ್ನು ಗೆದ್ದು ಐದು ಪಂದ್ಯಗಳಲ್ಲಿ ಸೋತಿದೆ. ಆರ್​​ಸಿಬಿ ಬಳಿ ಪ್ರಸ್ತುತ 14 ಅಂಕಗಳಿವೆ. ಲೀಗ್ ಹಂತದಲ್ಲಿ ಉಳಿದಿರುವ 3 ಪಂದ್ಯಗಳನ್ನು ಗೆದ್ದರೆ ಆರ್​ಸಿಬಿ ಬಳಿ 20 ಅಂಕಗಳು ಇರಲಿದ್ದು ಖಚಿತವಾಗಿ ಟಾಪ್ 2 ಸ್ಥಾನ ಪಡೆಯಲಿದೆ. ಹೀಗಿರುವಾಗ ಆರ್​ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಕೆಕೆಆರ್ (KKR) ತಂಡವನ್ನು ಎದುರಿಸಲಿದ್ದು, ಈ ಪಂದ್ಯವನ್ನು ಶತಾಯಗತಾಯ ಗೆಲ್ಲಲೇಬೇಕಿದೆ.

ಆರ್​​ಸಿಬಿ ಹಾಗೂ ಕೆಕೆಆರ್ ನಡುವಿನ ಐಪಿಎಲ್ 2026 ರ 57ನೇ ಪಂದ್ಯ ಯಾವಾಗ ನಡೆಯಲಿದೆ?

ಆರ್​​ಸಿಬಿ ಹಾಗೂ ಕೆಕೆಆರ್ ನಡುವಿನ ಐಪಿಎಲ್ 2026 ರ 57ನೇ ಪಂದ್ಯ ಮೇ 13 ರಂದು ನಡೆಯಲಿದೆ.

ಆರ್​​ಸಿಬಿ ಹಾಗೂ ಕೆಕೆಆರ್ ನಡುವಿನ ಐಪಿಎಲ್ 2026 ರ 57ನೇ ಪಂದ್ಯ ಎಲ್ಲಿ ನಡೆಯಲಿದೆ?

ಆರ್​​ಸಿಬಿ ಹಾಗೂ ಕೆಕೆಆರ್ ನಡುವಿನ ಐಪಿಎಲ್ 2026 ರ 57ನೇ ಪಂದ್ಯ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದಲ್ಲಿ ನಡೆಯಲಿದೆ.

ಆರ್​​ಸಿಬಿ ಹಾಗೂ ಕೆಕೆಆರ್ ನಡುವಿನ ಐಪಿಎಲ್ 2026 ರ 57ನೇ ಪಂದ್ಯ ಎಷ್ಟು ಗಂಟೆಗೆ ಆರಂಭ?

ಆರ್​​ಸಿಬಿ ಹಾಗೂ ಕೆಕೆಆರ್ ನಡುವಿನ ಐಪಿಎಲ್ 2026 ರ 57ನೇ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.

ಆರ್​​ಸಿಬಿ ಹಾಗೂ ಕೆಕೆಆರ್ ನಡುವಿನ ಐಪಿಎಲ್ 2026 ರ 57ನೇ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಆರ್​​ಸಿಬಿ ಹಾಗೂ ಕೆಕೆಆರ್ ನಡುವಿನ ಐಪಿಎಲ್ 2026 ರ 57ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಪಂದ್ಯವನ್ನು ವೀಕ್ಷಿಸಲು ಇಷ್ಟಪಡುವ ವೀಕ್ಷಕರಿಗೆ, ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಟಿಮ್ ಡೇವಿಡ್, ಜಾಕೋಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಜೋಶ್ ಹ್ಯಾಜಲ್‌ವುಡ್, ನುವಾನ್ ತುಷಾರ, ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ರಸಿಖ್ ದಾರ್, ಭುವನೇಶ್ವರ್ ಕುಮಾರ್, ಜೋರ್ಡಾನ್ ಕಾಕ್ಸ್, ವೆಂಕಟ್ ಸಿಂಗ್, ಸುಯಶ್ ಲ್ಯೂನ್ ಕಾಕ್ಸ್, ವೆಂಕಟ್ ಸಿಂಗ್ ಶರ್ಮಾ, ಭುವನೇಶ್ವರ್ ಕುಮಾರ್ ಕಾನಿಷ್ಕ್ ಚೌಹಾಣ್, ಅಭಿನಂದನ್ ಸಿಂಗ್, ಮಂಗೇಶ್ ಯಾದವ್, ಫಿಲ್ ಸಾಲ್ಟ್, ಸಾತ್ವಿಕ್ ದೇಸ್ವಾಲ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ.

RCB vs MI: ಮುಂಬೈ ವಿರುದ್ಧ ಕೃನಾಲ್, ಭುವಿ ಕೆಚ್ಚೆದೆಯ ಆಟಕ್ಕೆ ಆರ್​​ಸಿಬಿಗೆ ಒಲಿದ ಜಯ

ಕೋಲ್ಕತ್ತಾ ನೈಟ್ ರೈಡರ್ಸ್​: ಅಜಿಂಕ್ಯ ರಹಾನೆ(ನಾಯಕ), ಫಿನ್ ಅಲೆನ್, ಆಂಗ್ಕ್ರಿಶ್ ರಘುವಂಶಿ(ವಿಕೆಟ್ ಕೀಪರ್), ರಿಂಕು ಸಿಂಗ್, ಕ್ಯಾಮರೂನ್ ಗ್ರೀನ್, ರೋವ್ಮನ್ ಪೊವೆಲ್, ಮನೀಶ್ ಪಾಂಡೆ, ಅನುಕುಲ್ ರಾಯ್, ಸುನಿಲ್ ನರೈನ್, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ, ವರುಣ್ ಚಕ್ರವರ್ತಿ, ರಮಣದೀಪ್ ಸಿಂಗ್, ತೇಜಸ್ವಿ ದಹಿಯಾ, ನವದೀಪ್ ಸೈನಿ, ಟಿಮ್ ಸೀಫರ್ಟ್, ರಚಿನ್ ರವೀಂದ್ರ, ಬ್ಲೆಸಿಂಗ್ ಮುಜರಬಾನಿ, ಮಥೀಶ ಪತಿರಾನ, ರಾಹುಲ್ ತ್ರಿಪಾಠಿ, ಸಾರ್ಥಕ್ ರಂಜನ್, ಪ್ರಶಾಂತ್ ಸೋಲಂಕಿ, ಸೌರಭ್ ದುಬೆ, ಉಮ್ರಾನ್ ಮಲಿಕ್, ದಕ್ಷ್ ಕಮ್ರಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ; ಮೋದಿ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ ಹಾಕಿದ್ಯಾರು? – Kannada News | TV9 Kannada News Live: Dearness Allowance Hike for State Government Employees; Bomb Threat to PM Modi Event Investigated

ಬೆಂಗಳೂರು, ಮೇ 11: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕಾರ್ಯಕ್ರಮದ ವೇಳೆ ಬಾಂಬ್ ಬೆದರಿಕೆ (Bomb Threat) ಹಾಕಿದ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಲೋಹಿತ್​​ ಎಂಬಾತ ಬಾಂಬ್ ಬೆದರಿಕೆ ಹಾಕಿದ್ದ. ಬಳಿಕ ಪರಿಶೀಲನೆ ನಡೆಸಿ ಆತನನ್ನು ಬಂಧಿಸಿದ್ದಾರೆ. ಬಂಧಿತ ಲೋಹಿತ್ ಮನೆಯಲ್ಲಿ ಇಂದು ಕೋರಮಂಗಲ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಜಂಟಿಯಾಗಿ ಶೋಧ ಮಾಡಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ,  ಲೋಹಿತ್ ಸದಾ ನಶೆಯಲ್ಲಿರುತ್ತಿದ್ದ ಮತ್ತು ಮನೆಯಲ್ಲಿ ಒಬ್ಬೊಬ್ಬನೇ ಕಿರುಚಾಡುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಆರೋಪಿಯ ಡೈರಿ ಹಾಗೂ ಮೊಬೈಲ್ ಫೋನ್‌ ಅನ್ನು ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಮುಖ್ಯಾಂಶಗಳು

  • ಪ್ರಧಾನಿ ಮೋದಿ ಕಾರ್ಯಕ್ರಮದ ವೇಳೆ ಬಾಂಬ್ ಬೆದರಿಕೆ ಪ್ರಕರಣದ ತನಿಖೆ ಚುರುಕು​​
  • ಕರ್ನಾಟಕ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ 1.5ರಷ್ಟು ಹೆಚ್ಚಿದ ಸರ್ಕಾರ
  • ದಳಪತಿ ವಿಜಯ್ ಸಂಭಾವನೆ ಎಷ್ಟು ಗೊತ್ತಾ?

ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದ ಸರ್ಕಾರ: ತುಟ್ಟಿಭತ್ಯೆ ಶೇ.1.5ರಷ್ಟು ಹೆಚ್ಚಳ

ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದ್ದು, ತುಟ್ಟಿಭತ್ಯೆಯನ್ನು ಶೇ.1.5ರಷ್ಟು ಹೆಚ್ಚಿಸಿ ಸೋಮವಾರ ಆದೇಶ ಹೊರಡಿಸಿದೆ. ಪ್ರಸ್ತುತ ಶೇ.14.25ರಷ್ಟಿರುವ ತುಟ್ಟಿಭತ್ಯೆಯನ್ನು ಶೇ.15.75ಕ್ಕೆ ಹೆಚ್ಚಿಸಲಾಗಿದೆ. ಈ ಹೆಚ್ಚಳವು 2026ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. 2024ರ ಪರಿಷ್ಕೃತ ವೇತನ ಶ್ರೇಣಿಯನ್ನು ಪಡೆಯುತ್ತಿರುವ ಸರ್ಕಾರಿ ನೌಕರರಿಗೆ ಈ ಪರಿಷ್ಕೃತ ತುಟ್ಟಿಭತ್ಯೆ ಅನ್ವಯವಾಗಲಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಅಡುಗೆ ಎಣ್ಣೆ ದರ ಪ್ರತಿ ಲೀಟರ್‌ಗೆ 3 ರೂ ಏರಿಕೆ: ಕಡಿಮೆ ಬಳಕೆ ಮೋದಿ ಕರೆ

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ & ಜಾಗತಿಕ ತೈಲ ಮಾರ್ಗವಾದ ಹೊರ್ಮುಜ್ ಬಂದ್ ಆಗಿ ಜಗತ್ತೇ ಸಂಕಷ್ಟದ ಸುಳಿಗೆ ಸಿಲುಕಿದೆ.. ಭಾರತಕ್ಕೂ ಕೂಡ ತೈಲ ಅಭಾವದ ಹೊಡೆತ ಬಿದ್ದಿದೆ. ಈ ಮಧ್ಯೆ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ದರವು ಪ್ರತಿ ಲೀಟರ್‌ಗೆ 3 ರೂಪಾಯಿಗಳಷ್ಟು ಏರಿಕೆಯಾಗಿದೆ. ಈ ಹಿಂದೆ ಲೀಟರ್‌ಗೆ 138 ರೂಪಾಯಿ ಇದ್ದ ಅಡುಗೆ ಎಣ್ಣೆಯ ಬೆಲೆ ಇದೀಗ 141 ರೂಪಾಯಿಗೆ ತಲುಪಿದೆ. ಇತ್ತ ಪ್ರಧಾನಿ ಮೋದಿ ಕೂಡ ಅಡುಗೆ ಎಣ್ಣೆ ಕಡಿಮೆ ಬಳಸುವಂತೆ ಸಲಹೆ ನೀಡಿದ್ದಾರೆ.

ಸಿಎಂ ಆದ ಬಳಿಕ ದಳಪತಿ ವಿಜಯ್ ಸಂಭಾವನೆ ಎಷ್ಟು ಗೊತ್ತಾ?

ನಟ ದಳಪತಿ ವಿಜಯ್ ಅವರು ತಮಿಳುನಾಡಿನ ಸಿಎಂ ಆಗಿ ಅಧಿಕಾರ ಸ್ವೀಕರಿಸುವ ಮೂಲಕ ಚಿತ್ರರಂಗದಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಪ್ರತಿ ಸಿನಿಮಾಗೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಿದ್ದ ಅವರು, ಇದೀಗ ಜನರ ಸೇವೆಗಾಗಿ ಬಣ್ಣದ ಪ್ರಪಂಚವನ್ನು ತೊರೆದಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಸಾಗೋ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಕೇಸ್​ಗೆ ತಮಿಳುನಾಡು ಲಿಂಕ್​​? ಸ್ಫೋಟಕ ಸುಳಿವು ಪತ್ತೆ

ಸದ್ಯ ಸಿಎಂ ಆಗಿರುವ ವಿಜಯ್ ಅವರ ಮಾಸಿಕ ಮೂಲ ವೇತನ 2,05,000 ರೂ.ಗಳಾಗಿದ್ದು, ವಿವಿಧ ಭತ್ಯೆಗಳನ್ನು ಸೇರಿಸಿದರೆ ಒಟ್ಟು ವೇತನ ಸುಮಾರು 2,85,000 ರೂ. ಆಗಲಿದೆ. ಅಂದರೆ ವಾರ್ಷಿಕವಾಗಿ ಅವರು 34.20 ಲಕ್ಷ ರೂ. ಪಡೆಯಲಿದ್ದಾರೆ. ಇದರೊಂದಿಗೆ ಅವರಿಗೆ ಸರ್ಕಾರಿ ಬಂಗಲೆ, ಬುಲೆಟ್ ಪ್ರೂಫ್ ಎಸ್‌ಯುವಿ ಕಾರು, Z+ ದರ್ಜೆಯ ಭದ್ರತೆ ಮತ್ತು ಉಚಿತ ಪ್ರಯಾಣ ಸೌಲಭ್ಯಗಳು ದೊರೆಯಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:15 pm, Mon, 11 May 26

Source link

ಪ್ರಧಾನಿ ಮೋದಿ ಸಲಹೆ ಪಾಲಿಸದಿದ್ರೆ ದೇಶಕ್ಕೆ ಸಂಕಷ್ಟ ಎಂದ ರುದ್ರಮೂರ್ತಿ – Kannada News | Finance Expert Rudramurthy Talks about PM Narendra Modi advised save fuel

ಬೆಂಗಳೂರು, (ಮೇ 11): ಯುದ್ಧದಿಂದ ಮತ್ತೆ ಇಂಧನ (fuel) ಸರಬರಾಜು ಕೊರತೆ ಎದುರಾಗಿದೆ. ಹಣದುಬ್ಬರ, ವಿದೇಶಿ ವಿನಿಮಯ, ಆರ್ಥಿಕತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಮೋದಿ ಮಹತ್ವದ ಕರೆ ನೀಡಿದ್ದಾರೆ. ಸಾರ್ವಜನಿಕ ಸಾರಿಗೆ ಬಳಕೆ, ಇವಿ ವಾಹನಗಳ ಬಳಕೆ, ಅನಗತ್ಯ ಪ್ರವಾಸ ಕಡಿತ, ಮನೆಯಿಂದ ಕೆಲಸಗಳಿಂದ ಇಂಧನ ಉಳಿತಾಯಕ್ಕೆ  ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸಾರ್ವಜನಿಕರಲ್ಲಿ ನಾನಾ ಚರ್ಚೆಗಳು ಆಗುತ್ತಿವೆ. ಪೆಟ್ರೋಲ್, ಡೀಸೆಲ್ ಏರಿಕೆಯಾಗುತ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದು, ಇನ್ನು ಮೋದಿ ಹೇಳೀಕೆ ಬಗ್ಗೆ ಆರ್ಥಿಕ ತಜ್ಞ ರುದ್ರಮೂರ್ತಿ ಮಾತನಾಡಿದ್ದು, ಇಂಧನ ದರ ಏರಿಕೆಯಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

Source link

ಚಿನ್ನದ ಮೇಲೆ ಆಮದು ಸುಂಕ ಏರಿಕೆಯಾಗುತ್ತಾ? ಆಭರಣ ಪ್ರಿಯರಿಗೆ ನಿರಾಳ ತರುವ ಸುದ್ದಿ – Kannada News | No plans to increase import duties on gold and silver: Govt source

ನವದೆಹಲಿ, ಮೇ 11: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಗಗನಕ್ಕೇರುತ್ತಿರುವ ನಡುವೆಯೇ ಕೇಂದ್ರ ಸರ್ಕಾರದ ವತಿಯಿಂದ ಮಹತ್ವದ ಸ್ಪಷ್ಟನೆಯೊಂದು ಬಂದಿದೆ. ಸದ್ಯಕ್ಕೆ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು (Import Duty on Gold) ಹೆಚ್ಚಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಉನ್ನತ ಸರ್ಕಾರಿ ಮೂಲಗಳು ತಿಳಿಸಿದ್ದಾಗಿ ಮನಿಕಂಟ್ರೋಲ್ ವರದಿ ಮಾಡಿದೆ.

ಕಳೆದ ಬಜೆಟ್‌ನಲ್ಲಿ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ. 15ರಿಂದ ಶೇ. 6ಕ್ಕೆ ಗಣನೀಯವಾಗಿ ಇಳಿಸಿತ್ತು. ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿ ಗ್ರಾಹಕರಿಗೆ ಅನುಕೂಲವಾಗಿತ್ತು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಆಮದು ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಸರ್ಕಾರ ಮತ್ತೆ ಸುಂಕ ಏರಿಸಬಹುದು ಎಂಬ ಆತಂಕ ಮಾರುಕಟ್ಟೆಯಲ್ಲಿ ಮನೆಮಾಡಿದೆ.

ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ನಿನ್ನೆ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ, ಚಿನ್ನದ ಖರೀದಿ ಮಾಡಬೇಡಿ ಎಂದು ನೇರವಾಗಿಯೇ ಜನತೆಯಲ್ಲಿ ಕೇಳಿಕೊಂಡಿದ್ದರು. ಇದು ಚಿನ್ನದ ಮೇಲಿನ ಸುಂಕವನ್ನು ಸರ್ಕಾರ ಏರಿಸಬಹುದು ಎನ್ನುವ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವುದು ಹೌದು.

ಅತಿಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತ 72 ಬಿಲಿಯನ್ ಡಾಲರ್​ನಷ್ಟು ಮೌಲ್ಯದ ಚಿನ್ನದ ಆಮದು ಮಾಡಿಕೊಂಡಿದೆ. ಇದರಿಂದ ಫಾರೆಕ್ಸ್ ನಿಧಿ ಸಂಗ್ರಹದ ಮೇಲೆ ಒತ್ತಡ ಬೀರಬಹುದು. ಇದೇ ಹಿನ್ನೆಲೆಯಲ್ಲಿ ಮೋದಿ ಅವರು ಚಿನ್ನದ ಖರೀದಿ ಕಡಿಮೆ ಮಾಡಿ ಎಂದು ಜನರಿಗೆ ಕರೆ ಕೊಟ್ಟಿರುವುದು.

ಇದನ್ನೂ ಓದಿ: ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ

ಆದರೆ, ಚಿನ್ನದ ಮೇಲೆ ಆಮದು ಸುಂಕ ಏರಿಸುವ ಇರಾದೆ ಇಲ್ಲ ಎಂದು ಸರ್ಕಾರದ ಮೂಲಗಳು ಹೇಳಿರುವುದು ಗಮನಾರ್ಹ. ಆದರೆ, ಅಧಿಕೃತವಾಗಿ ಸರ್ಕಾರದಿಂದ ಹೇಳಿಕೆ ಬರುವವರೆಗೂ ಅಂದಾಜಿಸುವುದು ಕಷ್ಟ. ಸರ್ಕಾರ ಈ ಮುಂಚೆ ಇದ್ದ ಮಟ್ಟಕ್ಕೆ ಆಮದು ಸುಂಕ ಏರಿಸಿದರೆ ಅಶ್ಚರ್ಯ ಪಡುವಂಥದ್ದು ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಿನ ಎಐಎಡಿಎಂಕೆಯಲ್ಲಿ ಬಿಕ್ಕಟ್ಟು; ಷಣ್ಮುಗಂ ನೇತೃತ್ವದ ಬಣದಿಂದ ಇಪಿಎಸ್ ರಾಜೀನಾಮೆಗೆ ಒತ್ತಾಯ – Kannada News | Tamil Nadu AIADMK MLAs split into two groups after Tamil Nadu elections Edappadi K Palaniswami

ಚೆನ್ನೈ, ಮೇ 11: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಹೀನಾಯ ಸೋಲಿನಿಂದಾಗಿ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕುವ ಮತ್ತು ಹೊಸ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡುವ ಬಗ್ಗೆ ಭಾರೀ ಚರ್ಚೆ ನಡೆದಿದೆ. ಈ ನಿಟ್ಟಿನಲ್ಲಿ ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧದ ಎಲ್ಲ ಭಿನ್ನಮತೀಯರು ಒಟ್ಟಾಗಿ ಕೆಲಸ ಮಾಡಿ ಸಾಧ್ಯವಾದಷ್ಟು ಬೇಗ ಸಾಮಾನ್ಯ ಸಮಿತಿ ಸಭೆ ಕರೆಯಲು ನಿರ್ಧರಿಸಲಾಗಿದೆ.

ಎಐಎಡಿಎಂಕೆಯ ಉನ್ನತ ಮೂಲಗಳ ಪ್ರಕಾರ, ಪಕ್ಷದ ಹಿರಿಯ ನಾಯಕ ಸಿ.ವಿ ಷಣ್ಮುಗಂ ಅವರೊಂದಿಗೆ ಇರುವ ಶಾಸಕರು, ಹಲವಾರು ಮಾಜಿ ಸಚಿವರು, 4 ಸತತ ಚುನಾವಣಾ ಸೋಲುಗಳ ನಂತರ ಇಪಿಎಸ್ ಅವರ ನಾಯಕತ್ವವನ್ನು ಇನ್ನು ಮುಂದೆ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ವಿಜಯ್​ಗೆ ಸಿಗಲಿದೆಯಾ ವಿಸಿಕೆ ಬೆಂಬಲ; ಸುಳಿವು ನೀಡಿದ ಎಐಎಡಿಎಂಕೆ ನಾಯಕ ಪಳನಿಸ್ವಾಮಿ

ಎಐಎಡಿಎಂಕೆ ಏಪ್ರಿಲ್ 23ರ ವಿಧಾನಸಭಾ ಚುನಾವಣೆಯಲ್ಲಿ 234 ಸ್ಥಾನಗಳಲ್ಲಿ 47 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಯಿತು. 2021ರ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟವು ಒಂದು ದಶಕದ ನಂತರ ಪಕ್ಷವನ್ನು ಅಧಿಕಾರದಿಂದ ಹೊರಹಾಕಿ, ಕೇವಲ 75 ಸ್ಥಾನಗಳನ್ನು ಗಳಿಸಿತು. ಅದು 2019ರ ಲೋಕಸಭಾ ಚುನಾವಣೆಯಲ್ಲಿ 39 ಸ್ಥಾನಗಳಲ್ಲಿ ಒಂದನ್ನು ಮಾತ್ರ ಗೆದ್ದಿತು ಮತ್ತು 2024ರ ಸಂಸತ್ ಚುನಾವಣೆಯಲ್ಲಿ ಶೂನ್ಯ ಸ್ಥಾನ ಗಳಿಸಿತು. ಇಪಿಎಸ್ ಪಾಳಯ ಮತ್ತು ಷಣ್ಮುಗಂ ಜೊತೆಗಿನ ನಾಯಕರ ನಡುವೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯವು ಎಐಎಡಿಎಂಕೆಯೊಳಗೆ ವಿಭಜನೆಯ ಭಯವನ್ನು ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ, ಷಣ್ಮುಗಂ ನೇತೃತ್ವದ ಬಣವು ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಜೊತೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ವದಂತಿ ಹೆಚ್ಚುತ್ತಿತ್ತು. ಆದರೆ, ಎಐಎಡಿಎಂಕೆ ಟಿವಿಕೆ ಜೊತೆ ಕೈಜೋಡಿಸಿರಲಿಲ್ಲ. ಆದರೂ ಬೇರೆ ಪಕ್ಷಗಳ ಬೆಂಬಲ ಪಡೆದು ಟಿವಿಕೆ ಸರ್ಕಾರ ರಚಿಸಿತು. ಎಐಎಡಿಎಂಕೆ ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳದಿದ್ದಕ್ಕೆ ಪಕ್ಷದೊಳಗೆ ಹಲವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ ನಾಯಕ ದಿನಕರನ್

ಇದರ ನಡುವೆ, ತಮಿಳುನಾಡು ವಿಧಾನಸಭೆಯಲ್ಲಿ ಶಾಸಕರ ಪ್ರಮಾಣವಚನ ಸಮಾರಂಭದಲ್ಲಿ ಎಐಎಡಿಎಂಕೆ ಶಾಸಕರು 2 ಗುಂಪುಗಳಲ್ಲಿ ಕುಳಿತಿದ್ದಾರೆ. ಅವರನ್ನು ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ 1 ಗುಂಪು ಮತ್ತು ಮಾಜಿ ಸಚಿವ ಎಸ್.ಪಿ. ವೇಲುಮಣಿ ನೇತೃತ್ವದ ಇನ್ನೊಂದು ಗುಂಪು ಎಂದು ವಿಂಗಡಿಸಲಾಗಿದೆ.

ಇದಲ್ಲದೆ, ಎರಡೂ ಗುಂಪುಗಳ ಶಾಸಕರು ವಿಧಾನಸಭೆಯೊಳಗೆ ಪ್ರತ್ಯೇಕವಾಗಿ ಕುಳಿತಿದ್ದರು. ಎಐಎಡಿಎಂಕೆಯಲ್ಲಿ ನಾಯಕತ್ವ ಸ್ಥಾನಕ್ಕಾಗಿ ಪಕ್ಷದ ಸದಸ್ಯರ ನಡುವೆ ಸಂಘರ್ಷ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇಂದು ನಡೆದ ಶಾಸಕರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಅವರ 5 ಬೆಂಬಲಿತ ಶಾಸಕರು ಒಂದು ಗುಂಪಾಗಿ ಭಾಗವಹಿಸಿದ್ದರು. ಮಾಜಿ ಸಚಿವರಾದ ಎಸ್. ಪಿ. ವೇಲುಮಣಿ ಮತ್ತು ಸಿ. ವಿ. ಷಣ್ಮುಗಂ ಶಾಸಕರನ್ನು ಒಂದು ಗುಂಪಾಗಿ ಮುನ್ನಡೆಸಿದರು. ಅವರು ವಿಧಾನಸಭೆಯೊಳಗೆ ಎರಡು ಗುಂಪುಗಳಾಗಿ ಪ್ರತ್ಯೇಕವಾಗಿ ಕುಳಿತಿದ್ದರು.

ಎಐಎಡಿಎಂಕೆಯ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಪಿ. ವೇಲುಮಣಿ ಮತ್ತು ಎಐಎಡಿಎಂಕೆ ಶಾಸಕಾಂಗ ಸಮಿತಿ ಅಧ್ಯಕ್ಷರಾಗಿ ಸಿ.ವಿ. ಷಣ್ಮುಗಂ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸುತ್ತವೆ. ಜಯಲಲಿತಾ ಅವರ ಮರಣದ ನಂತರ, ಎಐಎಡಿಎಂಕೆಯಲ್ಲಿನ ಬಣ ಸಂಘರ್ಷವು ಪರಿಹರಿಸಲಾಗದ ಸಮಸ್ಯೆಯಾಗಿದೆ. ಒ. ಪನ್ನೀರ್‌ಸೆಲ್ವಂ, ಟಿಟಿವಿ ದಿನಕರನ್ ಮತ್ತು ಶಶಿಕಲಾ ಅವರಂತಹ ಅನೇಕರು ಪಕ್ಷವನ್ನು ತೊರೆದ ನಂತರವೂ ಈ ಸಮಸ್ಯೆ ಕೊನೆಗೊಂಡಿಲ್ಲ. ಮುಂದುವರಿದು, ಈಗ ನಾಯಕತ್ವದ ವಿರುದ್ಧದ ಆಂತರಿಕ ಸಂಘರ್ಷ ಮತ್ತೆ ತಲೆ ಎತ್ತುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:38 pm, Mon, 11 May 26

Source link

PM ಮೋದಿ 8 ಸಂದೇಶ ಯಾಕೆ? ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಿಷ್ಟು – Kannada News | Finance Expert Rudramurthy Reacts about PM Modi asked Indian families not to buy gold for a year

ಬೆಂಗಳೂರು, (ಮೇ 11): ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ನಿನ್ನೆ(ಮೇ 10) ಕಾರ್ಯಕ್ರಮವೊಂದರಲ್ಲಿ ಒಂದು ವರ್ಷದವರೆಗೆ ಚಿನ್ನವನ್ನು ಖರೀದಿಸದಂತೆ ನಾಗರಿಕರಲ್ಲಿ ಮನವಿ ಮಾಡಿದ್ದರು. ಅವರ ಈ ಮನವಿ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಪ್ರಧಾನಿ ಮೋದಿ ಮನವಿ ಹಿಂದಿನ ಕಾರಣವೇನು? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಇನ್ನು ಈ ಬಗ್ಗೆ ಆರ್ಥಿಕ ತಜ್ಞ ರುದ್ರಮೂರ್ತಿ ಪತ್ರಿಕ್ರಿಯಿಸಿದ್ದು, ಮೋದಿ ಮುಂದಾಲೋಚನೆ ಮಾಡಿ ಹೇಳಿದ್ದಾರೆ. ಅದರಲ್ಲೂ ತಪ್ಪು ಕಂಡು ಹಿಡಿಬೇಡಿ. ಎಲ್ಲರೂ ಎಚ್ಚತ್ತುಕೊಳ್ಳಬೇಕು, ಕೈ ಜೋಡಿಸಬೇಕು. ವಿರೋಧ ಪಕ್ಷ ಅಥವಾ ಜನ ಸಾಮಾನ್ಯರು ಇದಕ್ಕೆ ಟೀಕೆ ವ್ಯಕ್ತಪಡಿಸೋದನ್ನ ಬಿಟ್ಟು ಅವರ ಜೊತೆ ಕೈ ಜೋಡಿಸಿ ಎಂದಿದ್ದಾರೆ.

ಕಚ್ಚಾ ತೈಲ ಮತ್ತು ಗೋಲ್ಡ್ ವಿದೇಶದಿಂದ ಆಮದು ಆಗುತ್ತಿರುವುದು. ಹೀಗಾಗಿ ಇಲ್ಲಿನ ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸೋಕೆ ಗಮನದಲ್ಲಿ ಇಟ್ಟುಕೊಂಡು ಈ ರೀತಿ ಹೇಳಿದ್ದಾರೆ. ತೈಲ ಬೆಲೆ ಸದ್ಯದಲ್ಲೇ ಅಧಿಕವಾಗುತ್ತೆ . ಆಗ ಹೊರೆ ಆಗುತ್ತೆ. 7 ಸಾವಿರ ಕೋಟಿ ರೂಪಾಯಿಯ ಚಿನ್ನವನ್ನ ರಫ್ತು ಮಾಡ್ಕೊಂಡಿದ್ದೀವಿ . ಇದೆಲ್ಲವನ್ನ ಕಡಿತ ಗೊಳಿಸೋದ್ರಿಂದ ರೂಪಾಯಿ ಮೌಲ್ಯ ಕಡಿತವಾಗುತ್ತೆ ಎಂದು ಹೇಳಿದರು.

ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

Source link

ಸಿಎಂ ಆಗಾಯ್ತು, ಚಿತ್ರರಂಗದ ಈ ಸಂಪ್ರದಾಯ ಬದಲಿಸ್ತಾರಾ ದಳಪತಿ ವಿಜಯ್? – Kannada News | CM Vijay: Will Thalapathy Revive Early Morning Shows for Tamil Cinema?

ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಮೇ 10ರಂದು ನಟ ದಳಪತಿ ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬೆಳವಣಿಗೆಯಿಂದ ತಮಿಳು ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿದ್ದು, ವಿಶೇಷವಾಗಿ ಚಿತ್ರಮಂದಿರಗಳ ಮಾಲೀಕರಲ್ಲಿ ದೊಡ್ಡ ಆಸೆ ಚಿಗುರೊಡೆದಿದೆ. ವಿಜಯ್ ಕೂಡ ಸಿನಿಮಾ ರಂಗದ ಹಿನ್ನೆಲೆ ಹೊಂದಿರುವುದರಿಂದ, ಒಂದು ದೊಡ್ಡ ಬದಲಾವಣೆ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.

ತಮಿಳುನಾಡಿನಲ್ಲಿ ದೊಡ್ಡ ನಟರ ಸಿನಿಮಾಗಳಿಗೆ ಮುಂಜಾನೆ 4 ಅಥವಾ 5 ಗಂಟೆಗೆ ಶೋ ನೀಡುವ ಸಂಪ್ರದಾಯವಿತ್ತು. ಆದರೆ, 2023ರ ಪೊಂಗಲ್ ಸಮಯದಲ್ಲಿ ಅಜಿತ್ ಕುಮಾರ್ ಅವರ ‘ತುನಿವು’ ಚಿತ್ರದ ಸಂಭ್ರಮಾಚರಣೆ ವೇಳೆ ಅಭಿಮಾನಿಯೊಬ್ಬರು ಮೃತಪಟ್ಟ ಕಾರಣ, ಸರ್ಕಾರವು ಮುಂಜಾನೆ ಪ್ರದರ್ಶನಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಿತ್ತು.

ಸದ್ಯ ತಮಿಳುನಾಡಿನಲ್ಲಿ ಮೊದಲ ಶೋ ಆರಂಭ ಆಗೋದು ಬೆಳಿಗ್ಗೆ 9 ಗಂಟೆಯಿಂದ. ಆದರೆ ಕರ್ನಾಟಕದಲ್ಲಿ ಮುಂಜಾನೆ 6.30 ಗಂಟೆಯಿಂದ ಸಿನಿಮಾ ಪ್ರದರ್ಶನ ಮಾಡಲು ಅವಕಾಶ ಇದೆ. ಕೆಲವು ರಾಜ್ಯಗಳಲ್ಲಿ ಮಧ್ಯರಾತ್ರಿಯೂ ಶೋ ನೀಡಬಹುದು. ಆದರೆ, ಈ ಅವಕಾಶ ತಮಿಳುನಾಡಿನವರಿಗೆ ಇಲ್ಲ.

ದೊಡ್ಡ ಸಿನಿಮಾಗಳಿಗೆ ಮುಂಜಾನೆ 4 ಅಥವಾ 5 ಗಂಟೆಗೆ ಶೋಗಳನ್ನು ಆಯೋಜನೆ ಮಾಡಿದರೆ ಅವುಗಳು ಹೌಸ್​ಫುಲ್ ಆಗೋದು ಪಕ್ಕಾ. ಹೀಗಾಗಿ, ಇದು ನಿರ್ಮಾಪಕರಿಗೆ ಲಾಭ. ಸಿನಿಮಾ ರಿಲೀಸ್ ದಿನ ಥಿಯೇಟರ್​ನಲ್ಲಿ ಐದು ಶೋಗಳು ಪ್ರದರ್ಶನ ಕಂಡರೆ, ಅದರಲ್ಲೂ ಹೌಸಫುಲ್ ಆದರೆ ಥಿಯೇಟರ್ ಮಾಲೀಕರು ಕೂಡ ಖುಷಿ ಪಡುತ್ತಾರೆ. ಈ ನಿಯಮ ಮತ್ತೆ ಜಾರಿಗೆ ತರಬೇಕು ಎಂಬ ಕೋರಿಕೆ ಅನೇಕರದ್ದು.

ತಮಿಳುನಾಡು ಥಿಯೇಟರ್ ಮಾಲೀಕರು ಈ ಬಗ್ಗೆ ನಿರೀಕ್ಷೆ ಹೊರಹಾಕಿದ್ದಾರೆ. ‘ವಿಜಯ್ ಅವರು ಚಿತ್ರರಂಗದಿಂದ ಬಂದವರಾದ್ದರಿಂದ ಚಿತ್ರಮಂದಿರಗಳ ಕಷ್ಟ ಅವರಿಗೆ ಗೊತ್ತು. ಮುಂಜಾನೆ ಪ್ರದರ್ಶನಗಳು ಕೇವಲ ವ್ಯಾಪಾರವಲ್ಲ, ಅದು ಚಿತ್ರಮಂದಿರದ ಜೀವನಾಡಿ. ಓಟಿಟಿ ಪೈಪೋಟಿಯ ನಡುವೆ ಚಿತ್ರಮಂದಿರಗಳನ್ನು ಉಳಿಸಿಕೊಳ್ಳಲು ಇದು ಸಹಕಾರಿ’ ಎಂದು ಚೆನ್ನೈನ ಜಿಕೆ ಸಿನಿಮಾಸ್‌ನ ರುಬನ್ ಮಥಿವಾನನ್ ಹೇಳಿದ್ದಾರೆ.

ಇದನ್ನೂ ಓದಿ: ಸಿನಿಮಾಗೆ 100 ಕೋಟಿ ರೂ. ಸಂಭಾವನೆ ಪಡೆಯೋ ದಳಪತಿ ವಿಜಯ್ ಈಗಿನ ಸ್ಯಾಲರಿ ಎಷ್ಟು?

ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾದ ‘ಜನ ನಾಯಗನ್’ ಮೇ 21 ಅಥವಾ 28ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಸಿನಿಮಾ ಸೋರಿಕೆಯಾಗಿದ್ದರೂ, ಅವರ ಅಭಿಮಾನಿಗಳಲ್ಲಿ ಕ್ರೇಜ್ ಕಿಂಚಿತ್ತೂ ಕಡಿಮೆಯಾಗಿಲ್ಲ. ಈ ಸಿನಿಮಾ ರಿಲೀಸ್ ವೇಳೆ ಚೆನ್ನೈನಲ್ಲಿ ಮುಂಜಾಗೃತ ಕ್ರಮ ಕೈಗೊಂಡು ಮುಂಜಾನೆಯ ಶೋಗಳನ್ನು ಆಯೋಜನೆ ಮಾಡಲಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಮನೆಯಂಗಳಕ್ಕೆ ಬಂದ ನವಿಲಿಗೆ ಕ್ಲಾಸ್ ತೆಗೆದುಕೊಂಡ ಪುಟಾಣಿ, ಮುಂದೇನಾಯ್ತು ನೋಡಿ – Kannada News | A little girl was scolded by a peacock that came into the house

ಪುಟ್ಟ ಮಕ್ಕಳು (little kids) ತಮ್ಮ ಮನೆಯಂಗಳಕ್ಕೆ ಬಂದ ಪ್ರಾಣಿ ಪಕ್ಷಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತವೆ. ಆದರೆ ಈ ಪುಟಾಣಿ ಮನೆಯಂಗಳಕ್ಕೆ ಬಂದ ನವಿಲಿಗೆ ಬೈಯಲು ಶುರು ಮಾಡಿದೆ. ಪುಟಾಣಿ ಹಾಗೂ ನವಿಲಿನ ನಡುವಿನ ಬಾಂಧವ್ಯ ಸಾರುವ ಈ ವಿಡಿಯೋ ವೈರಲ್ ಆಗಿದೆ. ಈ ನೆಟ್ಟಿಗರು ಈ ದೃಶ್ಯವನ್ನು ಕಣ್ತುಂಬಿಸಿಕೊಂಡಿದ್ದಾರೆ.

Lachutti and Kunjutti ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಮನೆಯಂಗಳಕ್ಕೆ ನವಿಲೊಂದು ಬಂದಿದ್ದು, ಅಲ್ಲೇ ಇದ್ದ ಹೂವಿನ ಕುಂಡವನ್ನು ಕೆಳಗೆ ಬೀಳಿಸಿದೆ. ಇದನ್ನು ಗಮನಿಸಿದ ಪುಟ್ಟ ಹುಡುಗಿಯೂ ನವಿಲಿಗೆ ಕ್ಲಾಸ್ ತೆಗೆದುಕೊಂಡಿರುವುದನ್ನು ಕಾಣಬಹುದು. ಆ ಬಳಿಕ ಪುಟಾಣಿ ಹೂವಿನ ಕುಂಡವನ್ನು ಸರಿಪಡಿಸುತ್ತಿರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮರಳಿ ಬಾಲ್ಯವನ್ನು ನೆನಪಿಸುವಂತಿದೆ ಈ ದೃಶ್ಯ; ಪಾಠದ ನಡುವೆ ತಿಂಡಿ ತಿಂದ ಪುಟಾಣಿ

ಈ ವಿಡಿಯೋ ಎಪ್ಪತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನವಿಲಿನ ತಪ್ಪಾಗಿದೆ ಕ್ಷಮಿಸು ಬಿಡು ಪುಟಾಣಿ ಎಂದಿದ್ದಾರೆ. ಮತ್ತೊಬ್ಬರು, ಪುಟಾಣಿ ತುಂಬಾನೇ ಗರಂ ಆಗಿದೆ ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು, ಮುದ್ದಾಗಿದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version