Bengaluru Air Quality: ಬೆಂಗಳೂರಿನ ಜೊತೆ ಬೆಳಗಾವಿಯ ವಾಯುಗುಣಮಟ್ಟದಲ್ಲೂ ಭಾರೀ ಸುಧಾರಣೆ – Kannada News | Bangalore Air Pollution Crisis: Bengaluru and Belagavi Air Quality gets better

ಬೆಂಗಳೂರಿನ ಜೊತೆ ಬೆಳಗಾವಿಯ ವಾಯುಗುಣಮಟ್ಟದಲ್ಲೂ ಭಾರೀ ಸುಧಾರಣೆ

ಬೆಂಗಳೂರು, ಮೇ 11: ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿಯ ಏರ್ ಕ್ವಾಲಿಟಿ (Bengaluru Air Quality) ಭಾರಿ ಸುಧಾರಣೆ ಕಂಡಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿಯೇ ಇದೆ ಎಂದು ತಜ್ಞರು ಹೇಳುತ್ತಾರೆ. ಬೆಳಗಾವಿಯ ವಾಯು ಗುಣಮಟ್ಟ ಇಂದು ಭಾರೀ ಸುಧಾರಣೆ ಕಂಡಿದ್ದು, ಉಳಿದೆಡೆಗಿಂತ ಎಷ್ಟೋ ಉತ್ತಮವಾಗಿದೆ ಎನ್ನಲಾಗಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರಿನ ಏರ್ ಕ್ವಾಲಿಟಿ ಇಂದು ಕೇವಲ 114ರಷ್ಟಿದ್ದು, ಅತ್ಯಂತ ಒಳ್ಳೆಯ ಗುಣಮಟ್ಟದಲ್ಲಿದೆ. ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ಹಲವು ಬಾರಿ 200ರ ಗಡಿ ತಲುಪಿತ್ತು. ಆದರೆ ಇತ್ತೀಚೆಗೆ AQI ಸುಧಾರಣೆ ಕಂಡುಬಂದಿತ್ತು. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಳಗಾವಿಯ ಏರ್ ಕ್ವಾಲಿಟಿ ಇಂದು 62ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 114
  • ಮಂಗಳೂರು-138
  • ಮೈಸೂರು – 101
  • ಬೆಳಗಾವಿ – 62
  • ಕಲಬುರ್ಗಿ-82
  • ಶಿವಮೊಗ್ಗ –88
  • ಬಳ್ಳಾರಿ – 82
  • ಹುಬ್ಬಳ್ಳಿ- 62
  • ಉಡುಪಿ –118
  • ವಿಜಯಪುರ – 67

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾನ್ವಿ ಸುದೀಪ್ ಬೆನ್ನಿನ ಮೇಲೆ ಮೂಡಿತು ಗಣೇಶನ ಟ್ಯಾಟೂ; ಎಷ್ಟು ಅದ್ಭುತವಾಗಿದೆ ನೋಡಿ – Kannada News | Shanvi Sudeep’s Stunning Ganesh Back Tattoo: Art, Music and Her Journey

ಸುದೀಪ್ ಮಗಳು ಶಾನ್ವಿ ಸುದೀಪ್ (Shanvi Sudeep) ಯಾವಾಗಲೂ ತಮ್ಮ ಸರಳತೆಯಿಂದ ಗುರುತಿಸಿಕೊಂಡವರು. ಅವರು ಹೆಚ್ಚು ಹೈಲೈಟ್ ಆಗೋಕೆ ಇಷ್ಟಪಡಲ್ಲ. ಇತ್ತೀಚೆಗೆ ಶಾನ್ವಿ ಅವರು ತಮ್ಮ ಬೆನ್ನಿನ ಮೇಲೆ ಹಾಕಿಸಿಕೊಂಡಿರುವ ಭವ್ಯವಾದ ಗಣೇಶನ ಟ್ಯಾಟೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಹೈದರಾಬಾದ್‌ನ ಜನಪ್ರಿಯ ಟ್ಯಾಟೂ ಸ್ಟುಡಿಯೋದಲ್ಲಿ ಸುಮಾರು 8 ಗಂಟೆಗಳ ಕಾಲ ತಾಳ್ಮೆಯಿಂದ ಕುಳಿತು ಈ ಕಲಾಕೃತಿಯನ್ನು ರಚಿಸಿಕೊಂಡಿದ್ದಾರೆ. ಕೆಂಪು ಮತ್ತು ಕಪ್ಪು ಬಣ್ಣದ ಮಿಶ್ರಣವಿರುವ ಈ ಟ್ಯಾಟೂ ಭವ್ಯವಾಗಿ ಮೂಡಿ ಬಂದಿದೆ.

ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಟ್ಯಾಟೂ ಕ್ರೇಜ್ ಇದ್ದೇ ಇದೆ. ಇದಕ್ಕೆ ಶಾನ್ವಿ ಕೂಡ ಹೊರತಾಗಿಲ್ಲ. ‘ನಾನು ಟ್ಯಾಟೂ ಹಾಕಿಸಿಕೊಳ್ಳೋಕೆ ಹೋಗ್ತಾ ಇದೀನಿ’ ಎಂದು ಶಾನ್ವಿ ವಿಡಿಯೋ ಹಂಚಿಕೊಂಡಿದ್ದಾರೆ. ನಂತರ ಟ್ಯಾಟೂ ಹಾಕಿಸಿಕೊಂಡ ಜರ್ನಿ ವಿವರಿಸಿದ್ದಾರೆ. ಅವರು ಹೈದರಾಬಾದ್​​ಗೆ ತೆರಳಿ ಟ್ಯಾಟೂ ಹಾಕಿಸಿಕೊಂಡರು. 8 ಗಂಟೆ ಇದಕ್ಕೆ ಬೇಕಾದರೂ ಮಧ್ಯದಲ್ಲಿ ಬ್ರೇಕ್​​ಗಳನ್ನು ಅವರು ಪಡೆದಿದ್ದರು. ಟ್ಯಾಟೂ ಮೂಡಿಬಂದ ರೀತಿ ನೋಡಿ ಅವರೇ ಬೆರಗಾದರು. ಅಭಿಮಾನಿಗಳು ಅವರ ಟ್ಯಾಟೂ ನೋಡಿ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ಗೆಳತಿಯರೊಟ್ಟಿಗೆ ವಿದೇಶಿ ಪ್ರವಾಸದಲ್ಲಿ ನಟಿ ಶಾನ್ವಿ ಶ್ರೀವಾಸ್ತವ್

ಶಾನ್ವಿ ಕೇವಲ ಟ್ಯಾಟೂ ಪ್ರೇಮಿಯಲ್ಲ, ಅವರು ಪ್ರತಿಭಾವಂತ ಗಾಯಕಿ ಕೂಡ ಹೌದು. ಬಾಲ್ಯದಿಂದಲೇ ಸಂಗೀತದ ಕಡೆಗೆ ಹೆಚ್ಚಿನ ಒಲವು ಹೊಂದಿರುವ ಇವರು, ಸುದೀಪ್ ನಟನೆಯ ಸಿನಿಮಾಗಳಲ್ಲಿ ಈಗಾಗಲೇ ಹಾಡುವ ಮೂಲಕ ತಮ್ಮ ಕಂಠಸಿರಿಯನ್ನು ಪ್ರದರ್ಶಿಸಿದ್ದಾರೆ. ಪಾಶ್ಚಾತ್ಯ ಸಂಗೀತವಿರಲಿ ಅಥವಾ ದೇಶೀಯ ರಾಗವಿರಲಿ, ಶಾನ್ವಿ ಅದ್ಭುತವಾಗಿ ಹಾಡುತ್ತಾರೆ. ‘ಮಸ್ತ್ ಮಲೈಕಾ..’ ಹಾಡು ಅವರ ಕಂಠದಲ್ಲೇ ಮೂಡಿ ಬಂದಿತ್ತು. ಈ ಹಾಡು ಗಮನ ಸೆಳೆದಿತ್ತು.

ಒಬ್ಬ ಸ್ಟಾರ್ ನಟನ ಮಗಳಾಗಿದ್ದರೂ, ಶಾನ್ವಿ ಅವರು ಎಂದೂ ಕೂಡ ಹಮ್ಮು-ಬಿಮ್ಮು ತೋರಿಸಿದವರಲ್ಲ. ತಮ್ಮದೇ ಆದ ಸ್ವತಂತ್ರ ಹಾದಿಯನ್ನು ರೂಪಿಸಿಕೊಳ್ಳುತ್ತಿರುವ ಅವರು, ಕಲೆ ಮತ್ತು ಸಂಗೀತದ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:38 am, Mon, 11 May 26

Source link

RCB ಗೆಲುವಿನ ಬೆನ್ನಲ್ಲೇ ಐಪಿಎಲ್​​ನಿಂದ 2 ತಂಡಗಳು ಔಟ್! – Kannada News | RCB’s win has eliminated MI and LSG from the playoff race

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​​ನ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ರೋಚಕ ಜಯ ಸಾಧಿಸಿದೆ. ರಾಯ್​ಪುರ್​ನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದರು. (PC: IPL)

ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿದ್ದರು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20ನೇ ಓವರ್​ನ ಕೊನೆಯ ಎಸೆತದಲ್ಲಿ ಬೆನ್ನತ್ತಿ 2 ವಿಕೆಟ್​​ಗಳ ರೋಚಕ ಜಯ ಸಾಧಿಸಿದೆ. (PC: IPL)

ಈ ಗೆಲುವಿನೊಂದಿಗೆ ಆರ್​ಸಿಬಿ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಾಯಿಂಟ್ಸಸ್​ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರುತ್ತಿದ್ದಂತೆ ಐಪಿಎಲ್ ಪ್ಲೇಆಫ್​ ರೇಸ್​​ನಿಂದ ಎರಡು ತಂಡಗಳು ಹೊರಬಿದ್ದಿವೆ. ಆ ತಂಡಗಳೆಂದರೆ… (PC: IPL)

ಲಕ್ನೋ ಸೂಪರ್ ಜೈಂಟ್ಸ್​: ಈ ಬಾರಿ ಐಪಿಎಲ್​ನಲ್ಲಿ ಈವರೆಗೆ 11 ಪಂದ್ಯಗಳನ್ನಾಡಿರುವ ಲಕ್ನೋ ಸೂಪರ್ ಜೈಂಟ್ಸ್​ ತಂಡವು ಕೇವಲ 3 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಎಲ್​ಎಸ್​​ಜಿ ಗೆದ್ದರೂ 12 ಅಂಕಗಳನ್ನು ಮಾತ್ರ ಪಡೆಯಲಿದೆ. ಇತ್ತ ಟಾಪ್-4 ನಲ್ಲಿರುವ ತಂಡಗಳು 13 ಕ್ಕಿಂತ ಹೆಚ್ಚಿನ ಅಂಕಗಳನ್ನು ಹೊಂದಿದ್ದು, ಹೀಗಾಗಿ ಎಲ್​ಎಸ್​ಜಿಗೆ ಪ್ಲೇಆಫ್​ಗೇರಲು ಅವಕಾಶ ಇರುವುದಿಲ್ಲ. (PC: IPL)

ಮುಂಬೈ ಇಂಡಿಯನ್ಸ್​: ಮುಂಬೈ ಪಡೆಯು ಈವರೆಗೆ 11 ಪಂದ್ಯಗಳನ್ನಾಡಿದ್ದು, ಈ ವೇಳೆ ಕೇವಲ 3 ಮ್ಯಾಚ್​ಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದರೂ 12 ಅಂಕಗಳನ್ನು ಮಾತ್ರ ಪಡೆಯಬಹುದು. ಇತ್ತ ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲಿರುವ ತಂಡಗಳು 13 ಕ್ಕಿಂತ ಹೆಚ್ಚಿನ ಅಂಕಗಳನ್ನು ಹೊಂದಿರುವ ಕಾರಣ ಮುಂಬೈ ಇಂಡಿಯನ್ಸ್​​ಗೆ ಪ್ಲೇಆಫ್​ಗೇರಲು ಸಾಧ್ಯವಾಗುವುದಿಲ್ಲ. (PC: IPL)

ಅದರಂತೆ 12 ಅಂಕಗಳನ್ನು ಹೊಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುವುದರೊಂದಿಗೆ ಒಟ್ಟು 14 ಅಂಕಗಳನ್ನು ಪಡೆದುಕೊಂಡಿದೆ. ಇತ್ತ ಆರ್​ಸಿಬಿ 14 ಅಂಕಗಳನ್ನು ಪಡೆಯುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಅಧಿಕೃತವಾಗಿ ಪ್ಲೇಆಫ್​ ರೇಸ್​ನಿಂದ ಹೊರಬಿದ್ದಿದೆ. (PC: IPL)

Published On – 7:25 am, Mon, 11 May 26

Source link

ಉದ್ಯೋಗಿಗಳೋ ಅಥವಾ ರೋಬೋಟ್‌ಗಳೋ?: ಕಂಪನಿಯ ವಿಚಿತ್ರ ನಿಯಮಕ್ಕೆ ‘ನೋ’ ಎಂದ ಯುವತಿ – Kannada News | Employee or Robot? WFH Job Offer Rejected Due to Strict Surveillance Policy

ಕಂಪನಿಯ ನಿಯಮದ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ ಯುವತಿ Image Credit source: social Media

ದೆಹಲಿ. ಮೇ.11; ಮನೆಯಿಂದ ಕೆಲಸ ಎಂದರೆ ಯಾವ ಐಟಿ ಉದ್ಯೋಗಿಗಳಿಗೆ ಇಷ್ಟವಿಲ್ಲ ಹೇಳಿ. ಆದರೆ ಅದರಿಂದ ಆಗುವ ಹಿಂಸೆ ಯಾರಿಗೂ ಬೇಡ. ವರ್ಕ್ ಫ್ರಮ್ ಹೋಮ್ ನೀಡಿ ಅದಕ್ಕೆ ಒಂದಿಷ್ಟು ನಿಮಯಗಳನ್ನು ಮಾಡಿ ಪ್ರಾಣ ತೆಗೆಯುತ್ತಾರೆ. ಒಂದು ಕಡೆ ವರ್ಕ್ ಫ್ರಮ್ ಹೋಮ್ ಸಿಕ್ಕಿ ಖುಷಿಯಾದರೆ, ಇನ್ನೊಂದು ಕಡೆ ಅದರ ನಿಯಮಗಳನ್ನು ನೋಡಿ ವರ್ಕ್ ಫ್ರಮ್ ಹೋಮ್ ಬೇಡ ಎನ್ನುವ ಸ್ಥಿತಿ ಇದೀಗ ಅಂತಹದೇ ಒಂದು ನಿಯಮದ ಸಂಕಷ್ಟದಲ್ಲಿ ಯುವತಿಯೊಬ್ಬಳು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವರ್ಕ್ ಫ್ರಮ್ ಹೋಮ್ ಕೆಲಸದ ಆಫರ್ ಸಿಕ್ಕರೂ ಕಂಪನಿಯ ಕಠಿಣ ನಿಬಂಧನೆಗಳಿಂದಾಗಿ ಅದನ್ನು ತಿರಸ್ಕರಿಸಿದ ಗುರ್ಲೀನ್ ಎಂಬ ಯುವತಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಸಂದರ್ಶನದ ಸಮಯದಲ್ಲಿ ಕಂಪನಿಯು ಗುರ್ಲೀನ್‌ಗೆ ಎರಡು ಪ್ರಮುಖ ಷರತ್ತುಗಳನ್ನು ವಿಧಿಸಿತ್ತು. ಒಂದು ಕೆಲಸದ ಸಮಯದಲ್ಲಿ ಉದ್ಯೋಗಿಗಳು ತಮ್ಮ ವೆಬ್‌ಕ್ಯಾಮ್ (Webcam) ಅನ್ನು ಯಾವಾಗಲೂ ಆನ್‌ನಲ್ಲಿ ಇಟ್ಟಿರಬೇಕು. ಉದ್ಯೋಗಿಯ ಉತ್ಪಾದಕತೆಯನ್ನು ಅಳೆಯಲು ಕಂಪನಿಯ ಸಾಫ್ಟ್‌ವೇರ್ ಪ್ರತಿ 10 ನಿಮಿಷಕ್ಕೊಮ್ಮೆ ಕಂಪ್ಯೂಟರ್ ಸ್ಕ್ರೀನ್‌ನ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುತ್ತದೆ.

ಇಲ್ಲಿದೆ ನೋಡಿ ವಿಡಿಯೋ:

ಈ ನೀತಿಯನ್ನು ಕೇಳಿ ಬೆಚ್ಚಿಬಿದ್ದ ಗುರ್ಲೀನ್, ಇದು ಕೆಲಸವಲ್ಲ ಬದಲಾಗಿ ‘ಹಿಂಸೆ’ ಎಂದು ಕರೆದಿದ್ದಾರೆ. “ಮನೆಯಿಂದ ಕೆಲಸ ಮಾಡುವುದು ಅಂದರೆ ಅಲ್ಲಿ ನಮಗೆ ನಮ್ಯತೆ ಮತ್ತು ಸ್ವಾಯತ್ತತೆ ಇರಬೇಕು. ಆದರೆ ಪ್ರತಿ 10 ನಿಮಿಷಕ್ಕೊಮ್ಮೆ ಸ್ಕ್ರೀನ್‌ಶಾಟ್ ತೆಗೆಯುವುದು ಮತ್ತು ಸದಾ ಕ್ಯಾಮೆರಾ ಮುಂದೆ ಇರಬೇಕೆನ್ನುವುದು ಮನುಷ್ಯರನ್ನು ರೋಬೋಟ್‌ಗಳಂತೆ ನಡೆಸಿಕೊಂಡಂತೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಎರಗಿ ಬಂದ ಚಿರತೆಯ ಕುತ್ತಿಗೆ ಹಿಡಿದು ಪ್ರಾಣ ಉಳಿಸಿಕೊಂಡ 13 ವರ್ಷದ ಬಾಲಕ

ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ. ಹೆಚ್ಚಿನವರು ಯುವತಿಯ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಇಂತಹ ಕಣ್ಗಾವಲು ಉದ್ಯೋಗಿಗಳಲ್ಲಿ ಆತಂಕ ಮತ್ತು ಅಪನಂಬಿಕೆಯನ್ನು ಸೃಷ್ಟಿಸುತ್ತದೆ ಹೊರತು ಕೆಲಸದ ಗುಣಮಟ್ಟವನ್ನಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಕಂಪನಿಯ ಪರವಾಗಿ ವಾದಿಸಿದ್ದು, ಮನೆಯಿಂದ ಕೆಲಸ ಮಾಡುವಾಗ ಉದ್ಯೋಗಿಗಳು ಏಕಕಾಲಕ್ಕೆ ಎರಡು ಕೆಲಸ ಮಾಡುವುದನ್ನು ತಡೆಯಲು ಮತ್ತು ಹೊಣೆಗಾರಿಕೆ ಹೆಚ್ಚಿಸಲು ಇಂತಹ ಕ್ರಮಗಳು ಅನಿವಾರ್ಯ ಎಂದು ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗುವ ಸಾಧ್ಯತೆ! – Kannada News | Karnataka Rain Update: Heavy Rainfall in Bengaluru and South Interior Districts, Dry weather elsewhere

ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗುವ ಸಾಧ್ಯತೆ!

ಬೆಂಗಳೂರು, ಮೇ 11: ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ (Weather)  ಇಲಾಖೆ ತಿಳಿಸಿದೆ. ಕೊಡಗು, ಶಿವಮೊಗ್ಗ ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಇಂದು ಭಾರೀ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಖ್ಯಾಂಶಗಳು

  • ಮುಂದಿನ 2 ದಿನಗಳವರೆಗೆ ಬೆಂಗಳೂರಿನಲ್ಲಿ ಮಳೆ
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ
  • ಕೊಡಗು ಸೇರಿದಂತೆ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಎಲ್ಲೆಲ್ಲಿ ಮಳೆ?

ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಷ್ಕ ವಾತಾವರಣ ಇರಲಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್​

ಮೇ 9, 10ರಂದು ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. 64.5 ಮಿ.ಮೀ ಇಂದ 115.5 ಮಿ.ಮೀ ಮಳೆಯಾಗಲಿದ್ದು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುನ್ಸೂಚನೆ ನೀಡಿದೆ. ಹೀಗಾಗಿ ದಕ್ಷಿಣ ಒಳನಾಡಿಗೆ ಈ ಎರಡು ದಿನ ಯೆಲ್ಲೋ ಅಲರ್ಟ್​ ನೀಡಲಾಗಿದ್ದು, ಪ್ರಾಧಿಕಾರ ತನ್ನ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಕೋರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇನ್ನೆರಡೇ ವಾರದಲ್ಲಿ ‘ಜನ ನಾಯಗನ್’ ರಿಲೀಸ್; ವಿಜಯ್ ಸಿಎಂ ಆಗ್ತಿದ್ದಂತೆ ಅಪ್​​​ಡೇಟ್ ಕೊಟ್ಟ ವೆಂಕಟ್ ಪ್ರಭು – Kannada News | Thalapathy Vijay CM: ‘Jana Nayagan’ Movie Releasing in 2 Weeks – Venkat Prabhu Confirms

ದಳಪತಿ ವಿಜಯ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಅವರ ನಟನೆಯ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ತೆರೆಗೆ ಬರಲು ಕೌಂಟ್​ಡೌನ್ ಶುರುವಾಗಿದೆ. ಚಿತ್ರದ ಬಿಡುಗಡೆ ತಡವಾಗುತ್ತಿರುವ ಬಗ್ಗೆ ಅಭಿಮಾನಿಗಳಲ್ಲಿ ಆತಂಕವಿತ್ತು. ಆದರೆ ಈಗ ಸಿನಿಮಾದ ನಿರ್ಮಾಪಕ ಕೆ ವೆಂಕಟ್ ಪ್ರಭು ಬಿಡುಗಡೆಯ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದ್ದಾರೆ.

ಸೆನ್ಸಾರ್ ಮಂಡಳಿ ಜೊತೆ ಮಾತುಕತೆ

ಸಿನಿಮಾದ ವಿಳಂಬದ ಬಗ್ಗೆ ಮಾತನಾಡಿದ ವೆಂಕಟ್ ಪ್ರಭು, ‘ಚಿತ್ರವು ಸೆನ್ಸಾರ್ ಮಂಡಳಿಯಲ್ಲಿ ಕೊನೆಯ ಹಂತದ ಪ್ರಕ್ರಿಯೆಯಲ್ಲಿದೆ. ನಾವು ನಿರಂತರವಾಗಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇನ್ನು ಕೇವಲ ಎರಡೇ ವಾರಗಳಲ್ಲಿ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲಿದೆ’ ಎಂದು ಖಚಿತಪಡಿಸಿದ್ದಾರೆ. ಈ ಸುದ್ದಿಯು ಕಳೆದ ಕೆಲವು ದಿನಗಳಿಂದ ಸಿನಿಮಾ ರಿಲೀಸ್ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದೆ. ಟೈಟಲ್ ಕಾರ್ಡ್​​ ಅಲ್ಲಿ ‘ಸಿಎಂ ದಳಪತಿ ವಿಜಯ್’ ಎಂದು ಇರಲಿದೆಯಂತೆ.

ಇದೇ ಸಂದರ್ಭದಲ್ಲಿ ವಿಜಯ್ ಅವರ ರಾಜಕೀಯ ಜೀವನದ ಬಗ್ಗೆಯೂ ವೆಂಕಟ್ ಪ್ರಭು ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ‘ತಮಿಳುನಾಡಿನಲ್ಲಿ ಹೊಸ ನಾಯಕತ್ವದೊಂದಿಗೆ ಹೊಸ ಯುಗ ಆರಂಭವಾಗಿದೆ. ನಾನು ಅವರನ್ನು ವೈಯಕ್ತಿಕವಾಗಿ ಹತ್ತಿರದಿಂದ ಬಲ್ಲೆ. ಅವರ ಶ್ರದ್ಧೆ ಮತ್ತು ಜನಪರ ಕಾಳಜಿಯಿಂದಾಗಿ ತಮಿಳುನಾಡು ಇನ್ನು ಮುಂದೆ ಉತ್ತಮವಾಗಲಿದೆ ಎಂಬ ಭರವಸೆ ನನಗಿದೆ. ಅವರು ಬೆಳ್ಳಿತೆರೆಯ ನಾಯಕನಾಗಿ ಮಾತ್ರವಲ್ಲದೆ, ಈಗ ಜನರ ನಿಜವಾದ ಜನ ನಾಯಕ ಆಗಿದ್ದಾರೆ’ ಎಂದು ಪ್ರಭು ತಿಳಿಸಿದ್ದಾರೆ. ತಮಿಳುನಾಡಿನ ರಾಜಕೀಯ ಚಿತ್ರಣ ಬದಲಾಗಿದ್ದು, ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ.

ಇದನ್ನೂ ಓದಿ: ತಮಿಳುನಾಡು ನೂತನ ಸಿಎಂ ಜೋಸೆಫ್ ವಿಜಯ್​ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ

ವಿಜಯ್ ಸಿಎಂ ಆದ ಮೇಲೆ ತೆರೆಗೆ ಬರುತ್ತಿರುವ ‘ಜನ ನಾಯಗನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಖಚಿತ. ಸಿನಿಮಾದಲ್ಲಿರುವ ರಾಜಕೀಯ ಸಂಭಾಷಣೆಗಳು ಮತ್ತು ವಿಜಯ್ ಅವರ ಹೊಸ ಅವತಾರವನ್ನು ನೋಡಲು ಇಡೀ ದಕ್ಷಿಣ ಭಾರತವೇ ಕಾಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಈ ರಾಶಿಗೆ ಇಂದು ಮಹತ್ವದ ದಿನ: ಕುಜ ಗ್ರಹದ ಪ್ರವೇಶ – Kannada News | Astrological Predictions for All Zodiac Signs: May 11, 2026

ಬೆಂಗಳೂರು, ಮೇ.11: ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸದ ಕೃಷ್ಣ ಪಕ್ಷದ ನವಮಿ ತಿಥಿ ಮತ್ತು ಶತಭಿಷಾ ನಕ್ಷತ್ರದ ಈ ದಿನ, ಹಲವು ಪ್ರಮುಖ ಗ್ರಹಗಳ ಬದಲಾವಣೆಗಳು ಮತ್ತು ವಿಶೇಷ ಯೋಗಗಳು ಇವೆ. ಬೆಳಗ್ಗೆ 7:30 ರಿಂದ 9:05ರ ವರೆಗೆ ರಾಹುಕಾಲವಿದ್ದು, 9:05 ರಿಂದ 10:40ರ ವರೆಗೆ ಶುಭಕಾಲವಿದೆ. ಇಂದು ಕುಜ ಗ್ರಹವು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸುವುದು ಒಂದು ಮಹತ್ವದ ಘಟನೆ. ಸೂರ್ಯ ಮೇಷದಲ್ಲಿ, ಚಂದ್ರ ಕುಂಭ ರಾಶಿಯ ಶತಭಿಷಾ ನಕ್ಷತ್ರದಲ್ಲಿ ಸಂಚರಿಸುತ್ತಾನೆ. ಗೌರವಾಂಬುದೇಶ್ವರ ರಥೋತ್ಸವ, ಮುಕ್ತಾಬಾಯಿಯ ಪುಣ್ಯ ದಿನ ಮತ್ತು ಹುಲಿಗಮ್ಮನ ರಥೋತ್ಸವದಂತಹ ಪರ್ವ ದಿನಗಳನ್ನು ಆಚರಿಸಲಾಗುತ್ತದೆ. ಕುಷ್ಟಗಿಯಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವವೂ ನಡೆಯುತ್ತದೆ. ಈ ದಿನ ದ್ವಾದಶ ರಾಶಿಗಳ ಮೇಲೆ ಗ್ರಹಗತಿಗಳ ಪ್ರಭಾವವು ವಿಭಿನ್ನ ಫಲಗಳನ್ನು ನೀಡಲಿದ್ದು, ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಲಾಗಿದೆ ಎಂದು ಖ್ಯಾತ ಜ್ಯೋತಿಷಿ ಬಸರಾಜ್​​​ ಗುರೂಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಪಾದರಸ ಶಿವಲಿಂಗವನ್ನ ಪೂಜಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? – Kannada News | Benefits of Parad Shivling Puja: Divine Blessings and Remedies by Dr. Basavaraja Guruji

ಪಾದರಸ ಶಿವಲಿಂಗವನ್ನ ಪೂಜಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಸೃಷ್ಟಿ, ಸ್ಥಿತಿ ಮತ್ತು ಲಯಕ್ಕೆ ಅಧಿಪತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವನ ಅನುಗ್ರಹವು ಜೀವನದಲ್ಲಿ ಮಹತ್ವಪೂರ್ಣವಾಗಿದೆ. ಶಿವನು ಅಭಿಷೇಕ ಪ್ರಿಯನಾಗಿದ್ದು, ವಿವಿಧ ಶಿವಲಿಂಗಗಳ ಪೂಜೆಯಿಂದ ಆತನ ಕೃಪೆಗೆ ಪಾತ್ರರಾಗಬಹುದು. ಅಂತಹ ಶಿವಲಿಂಗಗಳಲ್ಲಿ ಪಾದರಸ ಶಿವಲಿಂಗವು ಬಹು ವಿಶೇಷ ಸ್ಥಾನವನ್ನು ಪಡೆದಿದೆ. ಇದು ತಕ್ಷಣವೇ ಪರಿಪೂರ್ಣ ಶಿವಾನುಗ್ರಹವನ್ನು ಕರುಣಿಸುತ್ತದೆ ಎಂದು ಹೇಳಲಾಗುತ್ತದೆ.

ಯಾರು ಸಂಕಷ್ಟದಲ್ಲಿದ್ದಾರೋ, ದಾರಿ ಕಾಣದೆ ಇರುವವರಿಗೆ ಪಾದರಸ ಶಿವಲಿಂಗ ಪೂಜೆಯು ವಿಶೇಷ ಪರಿಹಾರವಾಗಿದೆ. ಸತತವಾಗಿ 48 ದಿನಗಳ ಕಾಲ ಪಾದರಸ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಎಂತಹ ಸಂಕಷ್ಟಗಳೂ ದೂರವಾಗಿ ಶುಭವಾಗುತ್ತದೆ. ಪ್ರತಿ ಸೋಮವಾರ ಸಂಧ್ಯಾಕಾಲದಲ್ಲಿ ಈ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಆ ತೀರ್ಥವನ್ನು ಸೇವಿಸುವುದರಿಂದ ಹಿಂದಿನ ಜನ್ಮದ ಕರ್ಮಗಳು ಮತ್ತು ಪಾಪಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ. ಬಂಗಾರದ ಶಿವಲಿಂಗ ಪೂಜೆಗಿಂತ ಒಂದು ಕೋಟಿ ಪಟ್ಟು ಹೆಚ್ಚಿನ ಫಲವನ್ನು ಪಾದರಸ ಶಿವಲಿಂಗ ಪೂಜೆ ನೀಡುತ್ತದೆ ಎಂದು ಪುರಾಣಗಳು ಹೇಳುತ್ತವೆ. ಈ ಪೂಜೆಯಿಂದ ಸರ್ವ ದೇವತೆಗಳ ಆಶೀರ್ವಾದ, ಲಕ್ಷ್ಮಿ-ಕುಬೇರರ ಅನುಗ್ರಹವೂ ಲಭಿಸುತ್ತದೆ. ಮನೆಯಲ್ಲೂ ಇದನ್ನು ಪ್ರತಿಷ್ಠಾಪಿಸಬಹುದು ಹಾಗೂ ಅಭಿಷೇಕದ ನೀರನ್ನು ಅನಾರೋಗ್ಯ ಇರುವವರು ಸ್ನಾನಕ್ಕೆ ಬಳಸಬಹುದು. ಕೇವಲ ನೀರಿನ ಅಭಿಷೇಕದಿಂದಲೇ ಶಿವನ ಕೃಪೆಗೆ ಪಾತ್ರರಾಗಬಹುದು ಎಂದು ಗುರೂಜಿ ವಿವರಿಸಿದ್ದಾರೆ.

 

 

 

Source link

ದಿನ ಭವಿಷ್ಯ: ಈ ರಾಶಿಯವರನ್ನು ಇಂದು ಅಧಿಕಾರದ ಸ್ಥಾನದಲ್ಲಿ ನೋಡಬಹುದು.. – Kannada News | Horoscope May 11 Monday 2026; Dina Rashi Bhavishya Today, Checkout the details here

ಮೇಷ ರಾಶಿ:

ಆದಾಯ ಮತ್ತು ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ಹೆಚ್ಚಿನ ಸಮಸ್ಯೆಗಳು ಉಂಟಾಗುತ್ತವೆ. ಆಯುಧದ ನಷ್ಟವಾಗಲಿದೆ. ಅನೇಕ ಕೆಲಸಗಳು ಏಕಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಹಾಳಾದ ಕೆಲಸಗಳಲ್ಲಿ ಸುಧಾರಣೆ ಮತ್ತು ತೊಂದರೆಗಳಿಂದ ಪರಿಹಾರ ಸಿಗುತ್ತದೆ. ಎಲ್ಲದರಿಂದ ದೂರಾಗಿ ಹೊಸತನ್ನು ಹುಡುಕುವ ಆಸಕ್ತಿ ಇರುವುದು. ನಿರೀಕ್ಷಿತ ಕಾರ್ಯವನ್ನು ಸಾಧಿಸುವ ತನಕ ನಿಮಗೆ ನೆಮ್ಮದಿ ಸಿಗದು. ಅಧಿಕಾರಿಗಳ ಜೊತೆ ಯೋಜನೆಯ ವಿವರಗಳನ್ನು ಹಂಚಿಕೊಳ್ಳುವಿರಿ.

ವೃಷಭ ರಾಶಿ:

ಉದ್ಯೋಗದಲ್ಲಿ ನಿಮ್ಮ ಹಣವೂ ಖರ್ಚಾಗಬಹುದು. ನಿಮ್ಮ ಸುತ್ತಮುತ್ತಲಿನ ಜನರ ಬಗ್ಗೆ ಜಾಗರೂಕರಾಗಿರಿ ಮತ್ತು ಹಣಕಾಸಿನ ವಹಿವಾಟುಗಳಲ್ಲಿ ಕೂಡ ಜಾಗರೂಕರಾಗಿರಿ. ನಿಮಗೆ ಸುವರ್ಣಾವಕಾಶಗಳು ಸಿಗುತ್ತವೆ. ಆದರೆ ದುರಾಸೆಯಿಂದಾಗಿ ನೀವು ಅವಕಾಶವನ್ನು ಕಳೆದುಕೊಳ್ಳಬಹುದು. ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ‌. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮಗೆ ಬೇಸರವಾದೀತು. ಹೊಸ ಮನೆಯನ್ನು ಖರೀದಿಸುವ ಬಗ್ಗೆ ಸಂಗಾತಿಯ ಜೊತೆ ಚರ್ಚಿಸುವಿರಿ.

ಮಿಥುನ ರಾಶಿ:

ಅಧ್ಯಯನದಲ್ಲಿ ನೀವು ಮಾಡುವ ಪ್ರಯತ್ನಗಳು ಲಾಭದಾಯಕವೆಂದು ಸಾಬೀತುಪಡಿಸುತ್ತದೆ ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ನಿಮ್ಮನ್ನು ಹತ್ತಿರಕ್ಕೆ ತರುತ್ತದೆ. ಅಪೇಕ್ಷಿತ ಕಾರ್ಯದ ಸಾಧನೆಯು ಪವಾಡದಂತೆ ಸಾಧ್ಯ. ನೀವು ನಿಮ್ಮ ಗುರಿಯನ್ನು ಸಾಧಿಸುವಿರಿ ಮತ್ತು ವಿವಾದಗಳನ್ನು ಗೆಲ್ಲುವಿರಿ. ಕಛೇರಿಯಲ್ಲಿ ನಿಮಗೆ ಆರಾಮಾಗಿ ಇರುವ ಯೋಚನೆ ಇರುವುದು. ಸ್ನೇಹಿರಿಂದ ನಿಮಗೆ ಬಹುಮಾನ ಸಿಗಬಹುದು. ಯಾರಾದರೂ ನಿಮ್ಮ ಮಾತನ್ನು ನಂಬುವರು.

ಕರ್ಕಾಟಕ ರಾಶಿ:

ದಿನವನ್ನು ಇರಿಸಿಕೊಳ್ಳಲು ಪ್ರಯತ್ನಿಸಿ ಆರೋಗ್ಯದ ಬಗ್ಗೆ ತೃಪ್ತಿಕರವಾಗಿರುತ್ತದೆ. ನಿಮ್ಮ ಪರವಾಗಿ ಮಾತನಾಡಲು ಯಾರಾದರೂ ಬೇಕಾಗುತ್ತಾರೆ. ಕಷ್ಟಪಟ್ಟು ದುಡಿದು ಫಲವನ್ನು ಆನಂದಿಸುವ ಸಮಯ. ಮಕ್ಕಳ ಯಶಸ್ಸಿಗೆ ಹೆಮ್ಮೆಪಡುವಿರಿ. ಕೃತಜ್ಞತೆಯು ಅನಿವಾರ್ಯವಾಗಿ ಬೇಕಾಗುವುದು. ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ನೆಮ್ಮದಿ‌ ಮಾತ್ರ ಇರದು. ಚಂಚಲ ಸ್ವಭಾವವು ತಾನಾಗಿಯೇ ಕಡಿಮೆಯಾಗಲಿದೆ.

ಸಿಂಹ ರಾಶಿ:

ತಪ್ಪು ಸಲಹೆಯು ನಿಮ್ಮ ಗುರಿಯಿಂದ ನಿಮ್ಮನ್ನು ಬೇರೆಡೆಗೆ ಸೆಳೆಯಬಹುದು. ಮನೆಯ ಹಿರಿಯರ ಸಲಹೆ ಮತ್ತು ಮಾರ್ಗದರ್ಶನವನ್ನು ನಿರ್ಲಕ್ಷಿಸಬೇಡಿ. ಆದಾಯ ಬರುವ ಯಾವ ಸಣ್ಣ ಕೆಲಸವನ್ನೂ ಬಿಡಲಾರಿರಿ. ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ನೀವು ಕೆಲವು ವಿಶೇಷ ಜನರನ್ನು ಭೇಟಿಯಾಗುತ್ತೀರಿ. ಮಾತಿನ‌ ಮೇಲೆ ಹಿಡಿತ ತಪ್ಪಬಹುದು. ಸರ್ಕಾರದ ಸೌಲಭ್ಯವು ನಿಮಗೆ ಸಿಗದೇ ಹೋಗಬಹುದು. ನಿಮ್ಮ ಕೆಲಸವು ಸಂದೇಹಕ್ಕೆ ಆಸ್ಪದ ಕೊಡುವುದು ಬೇಡ.

ಕನ್ಯಾ ರಾಶಿ:

ಇಂದಿನ ಕೆಲವು ಸಂದರ್ಭಗಳಿಂದಾಗಿ ನಿಮ್ಮ ಕೆಲಸದ ಪ್ರಯತ್ನಗಳು ವಿಳಂಬವಾಗುವ ಸಾಧ್ಯತೆಯಿದೆ. ಅನಂತರ ತೊಂದರೆ ತಪ್ಪಿಸಲು, ಯಾವುದೇ ಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮೊದಲು ಯೋಚಿಸಿ. ನಿಮಗೆ ಪ್ರತಿಫಲ ಅಥವಾ ಬಡ್ತಿ ಸಿಗಬಹುದು. ವ್ಯಾವಹಾರಿಕ ಸಂಬಂಧವು ಅಂತ್ಯವಾಗಲಿದೆ. ಅಕಾಲದಲ್ಲಿ ಸೇವಿಸಿದ ಆಹಾರದಿಂದ ನಿಮಗೆ ಆರೋಗ್ಯವು ಹಾಳಾಗುವುದು. ಮನೆಯಲ್ಲಿ ನೌಕರರ ಕಾರಣಕ್ಕೆ ಸಿಟ್ಟಾಗುವಿರಿ. ನಿಮ್ಮನ್ನು ಬೇರೆ ಕಾರ್ಯಗಳಿಗೆ ಕರೆದುಕೊಂಡು ಹೋಗುವಿರಿ.

ತುಲಾ ರಾಶಿ:

ನಿಮಗೆ ಉತ್ತೇಜನ ನೀಡುವವರ ಕೊರತೆ ಇರುವುದು. ಸಮರ್ಪಣೆಯನ್ನು ಕಾಪಾಡಿಕೊಳ್ಳುವುದರಿಂದ ಕೆಲಸವು ಸಮಯಕ್ಕೆ ಪೂರ್ಣಗೊಳ್ಳುತ್ತದೆ. ಇದು ಹಣದ ವಿಷಯದಲ್ಲಿ ಪ್ರಗತಿಯ ಸಮಯ, ನಿಮ್ಮ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ನಿಮ್ಮ ವೇತನದ ಬಗ್ಗೆ ಹೇಳಬೇಕಾಗಿಬರಬಹುದು. ಬಂದ ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಉತ್ತಮ.

ವೃಶ್ಚಿಕ ರಾಶಿ:

ನೀವು ಪ್ರೇಮ ಸಂಬಂಧದಲ್ಲಿ ಬೇಸರವನ್ನು ಅನುಭವಿಸಬಹುದು, ಕೆಲಸವನ್ನು ಪೂರ್ಣಗೊಳಿಸುವ ಸಮಯ ಬಂದಿದೆ. ಆಸ್ತಿ ವಿವಾದ ದಿಡೀರನೆ ಏಳುವುದು. ಕುಟುಂಬದ ಅಗತ್ಯಗಳನ್ನು ಪೂರೈಸುವಲ್ಲಿ ನೀವು ಸಂತೋಷವನ್ನು ಕಾಣುವಿರಿ. ವೈಯಕ್ತಿಕ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಿ, ತಪ್ಪಿಸಿಕೊಳ್ಳಬೇಡಿ. ವೈರಿಗಳನ್ನು ನೀವೇ ಸ್ವತಃ ಸೃಷ್ಟಿಸಿಕೊಳ್ಳುವಿರಿ. ಆದಾಯದಿಂದ ಬಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ. ಇಲ್ಲವಾದರೆ ಸಂಪತ್ತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು.

ಧನು ರಾಶಿ:

ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಆರ್ಥಿಕ ವ್ಯವಹಾರ ಮಾಡಲು ನಿಖರತೆಯನ್ನು ಇಟ್ಟುಕೊಳ್ಳಿ. ಅತಿಯಾದ ಉತ್ಸಾಹವು ನಷ್ಟಗಳಿಗೆ ಕಾರಣವಾಗಬಹುದು. ಎಚ್ಚರಿಕೆಯಿಂದ ಮುಂದುವರಿಯಿರಿ. ಆತ್ಮವಿಶ್ವಾಸ ಮತ್ತು ಉತ್ಸಾಹವು ವೃತ್ತಿಪರ ಅವಕಾಶಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಪರಿಚಿತ ಜನರನ್ನು ಭೇಟಿಯಾಗುವ ಸಂತೋಷವನ್ನು ಹಂಚಿಕೊಳ್ಳುವಿರಿ. ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಭವಿದೆ.‌ ಅಧಿಕೃತ ಮಾಡಿಕೊಳ್ಳದೇ ಯಾವುದನ್ನೂ ಹೇಳುವುದು ಬೇಡ.

ಮಕರ ರಾಶಿ:

ನಿಮ್ಮ ಸಂಗಾತಿಗೆ ಈ ವಾರ ಸ್ಥಳಾವಕಾಶ ಬೇಕಾಗುತ್ತದೆ, ಅವರ ಅಭಿಪ್ರಾಯವನ್ನು ಗೌರವಿಸಿ. ನಿಮ್ಮ ಪ್ರಮುಖ ಕೆಲಸವನ್ನು ಯೋಜಿಸಿ. ಅನಂತರ ಪರಿಸ್ಥಿತಿ ತುಂಬಾ ಚೆನ್ನಾಗಿರುತ್ತದೆ ಮತ್ತು ಈ ಒಳ್ಳೆಯ ಸಮಯದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ. ಪಾಲುದಾರಿಕೆಯಲ್ಲಿ ನಿಮ್ಮ ಪಾಲುದಾರಿಕೆಯೇ ಅಧಿಕವಾಗಿರುವುದು. ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಲು ಅಧಿಕ ಖರ್ಚನ್ನು ಮಾಡಬೇಕಾದೀತು. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ.

ಕುಂಭ ರಾಶಿ:

ಮನೆಯ ನವೀಕರಣದ ಬಗ್ಗೆ ಯಾರನ್ನಾದರೂ ಸರಿಯಾದವರನ್ನು ಸಂಪರ್ಕಿಸಿ ಮುಂದುವರಿಯುವಿರಿ. ಮನೆಯ ದುರಸ್ತಿಗೆ ಹಣ ಕಡಿಮೆಯಾಗಲಿದೆ. ನಿಮ್ಮವರು ನಿಮ್ಮ ಬಗ್ಗೆ ಹೆಚ್ಚು ಕಾಳಜಿಯನ್ನು ತೋರಿಸಲಿದ್ದಾರೆ. ಕೆಲಸಗಳಲ್ಲಿನ ಅಡೆತಡೆಗಳು ಕೊನೆಗೊಳ್ಳುತ್ತವೆ. ಭೂ ಸಂಬಂಧಿತ ಕೆಲಸ ಮಾಡುವ ಜನರಿಗೆ ಲಾಭವಾಗುತ್ತದೆ. ಓಡಾಟದ ಕೆಲಸಕ್ಕೆ ನಿಮ್ಮನ್ನು ಬಳಸಿಕೊಳ್ಳಬಹುದು. ಉತ್ಸಾಹವೂ ಇರಲಿದೆ. ಯಾರನ್ನೋ ನಿಂದಿಸುವುದು ಅಭ್ಯಾಸ ಮಾಡಿಕೊಳ್ಳುವುದು ಬೇಡ.‌

ಮೀನ ರಾಶಿ:

ಕೆಲಸದಲ್ಲಿ ಪೂರ್ವಭಾವಿಯಾಗಿ ತಿಳಿದುಕೊಳ್ಳಲು ಹೋದರೆ, ಕೆಲಸಗಳನ್ನು ಅನಾಯಸವಾಗಿ ನಡೆಸಬಹುದು. ಸ್ವಂತ ಸಾಮರ್ಥ್ಯ ಪರಿಣಾಮಕಾರಿಯಾಗುವುದು. ಇತರರಿಂದ ಪಡೆಯುವ ಸಹಾಯವೂ ಫಲಪ್ರದವಾಗುತ್ತದೆ. ಅಡೆತಡೆಗಳು ನಿವಾರಣೆಯಾಗಿ, ಗೌರವ ಸಿಗುತ್ತದೆ. ದೂರದೂರಿಗೆ ಪ್ರವಾಸಕ್ಕೆ ಹೋಗುವ ಮನಸ್ಸು ಮಾಡಲಿದ್ದೀರಿ. ನಿಮ್ಮನ್ನು ನೀವು ದುರ್ಬಲ ಮಾಡಿಕೊಳ್ಳುವುದು ಬೇಡ. ನಿಮ್ಮ ಬಗ್ಗೆ ಪ್ರಶಂಸೆಯ ನುಡಿಗಳು ಕೇಳಿಬರಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಐಂದ್ರ, ಕರಣ : ವಣಿಜ, ಸೂರ್ಯೋದಯ – 05 – 59 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:35 – 09:10, ಯಮಗಂಡ ಕಾಲ 10:46 – 12:21, ಗುಳಿಕ ಕಾಲ 13:56 – 15:31

-ಲೋಹಿತ ಹೆಬ್ಬಾರ್ – 8762924271 (what’s app only)

Source link

RCB vs MI: ಮುಂಬೈ ವಿರುದ್ಧ ಕೃನಾಲ್, ಭುವಿ ಕೆಚ್ಚೆದೆಯ ಆಟಕ್ಕೆ ಆರ್​​ಸಿಬಿಗೆ ಒಲಿದ ಜಯ – Kannada News | IPL 2026: RCB’s Thrilling Last Ball Win Over MI; Bhuvneshwar and Krunal Shine, Tops Table

ಕೋಟ್ಯಾಂತರ ಆರ್​​ಸಿಬಿ ಅಭಿಮಾನಿಗಳ ಹೃದಯ ಬಡಿತವನ್ನು ಹೆಚ್ಚಿಸಿದ್ದ ಐಪಿಎಲ್ 2026 ರ 54ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 20ನೇ ಓವರ್​ನ ಕೊನೆಯ ಎಸೆತದಲ್ಲಿ ಮಣಿಸುವ ಮೂಲಕ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಣರೋಚಕ ಗೆಲುವು ದಾಖಲಿಸಿತು. ಆರ್​ಸಿಬಿಯ ಈ ಗೆಲುವಿನ ರೂವಾರಿಗಳೆಂದರೆ ಅದು ಭುವನೇಶ್ವರ್ ಕುಮಾರ್ ಹಾಗೂ ಕೃನಾಲ್ ಪಾಂಡ್ಯ. ಕೃನಾಲ್ ಬ್ಯಾಟಿಂಗ್​ನಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದರೆ, ಇತ್ತ ಭುವನೇಶ್ವರ್ ಬೌಲಿಂಗ್‌ನಲ್ಲಿ 4 ವಿಕೆಟ್ ಪಡೆಯುವುದರ ಜೊತೆಗೆ ಬ್ಯಾಟಿಂಗ್​ನಲ್ಲಿ ಗೆಲುವಿನ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಂಬೈ 166 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಆರ್​ಸಿಬಿ 2 ವಿಕೆಟ್​ಗಳ ಜಯ ಸಾಧಸಿತು. ಈ ಗೆಲುವಿನೊಂದಿಗೆ ಆರ್​ಸಿಬಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಇತ್ತ ಮುಂಬೈ ಇಂಡಿಯನ್ಸ್ ಪ್ಲೇ ಆಫ್​ನಿಂದ ಅಧಿಕೃತವಾಗಿ ಹೊರಬಿದ್ದಿತು.

Published On – 11:53 pm, Sun, 10 May 26

Source link

Exit mobile version