ಚಿತ್ರರಂಗಕ್ಕೆ ಕಾಲಿಟ್ಟು 14 ವರ್ಷ, ‘ಬುಲ್-ಬುಲ್’ ಚೆಲುವೆಗೆ ನಿಲ್ಲದ ಬೇಡಿಕೆ – Kannada News | Rachita Ram completed 14 years in Movie Industry

ಸಿನಿಮಾ (Cinema) ರಂಗದಲ್ಲಿ ಸ್ಟಾರ್ ನಟರಿಗಿರುವ ಅರ್ಧದಷ್ಟು ಸಹ ನಟಿಯರಿಗೆ ಶೆಲ್ಫ್ ಇರುವುದಿಲ್ಲ. ನಾಯಕಿಯರು ಹೀಗೆ ಬಂದು ಹಾಗೆ ಮರೆ ಆಗಿ ಬಿಡುತ್ತಾರೆ. ಒಂದು ದಶಕದ ಕಾಲ ಉಳಿವುದು ಮಹಾನ್ ಸಾಧನೆ. ಅದರಲ್ಲೂ ಹೊಸ ಜಮಾನಾನಲ್ಲಿ ಅಂತೂ ಬಹುತೇಕ ಅಸಾಧ್ಯ. ಪ್ರತಿಭೆ, ವ್ಯಕ್ತಿತ್ವ, ಸೌಂದರ್ಯ ಎಲ್ಲವೂ ಜೊತೆಗಿದ್ದರಷ್ಟೆ ನಟಿಯರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯ. ಅಂಥಹಾ ಕೆಲವೇ ಕೆಲವು ನಟಿಯರಲ್ಲಿ ಕನ್ನಡದ ನಟಿ ರಚಿತಾ ರಾಮ್ ಸಹ ಒಬ್ಬರು.

ಡಿಂಪಲ್ ಚೆಲುವೆ ರಚಿತಾ ರಾಮ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿ 14 ವರ್ಷಗಳಾಗಿವೆ. ರಚಿತಾ ರಾಮ್ ಮೊದಲು ನಟಿಸಿದ್ದ ಸಿನಿಮಾ ‘ಬುಲ್ ಬುಲ್’ ಬಿಡುಗಡೆ ಆಗಿ ಇಂದಿಗೆ ಬರೋಬ್ಬರಿ 14 ವರ್ಷ. 2013 ರ ಮೇ 10 ರಂದು ಬಿಡುಗಡೆ ಆಗಿದ್ದ ಆ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಅದಕ್ಕೆ ಮುನ್ನ ಒಂದೆರಡು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ನಟಿ ರಚಿತಾ ರಾಮ್, ‘ಬುಲ್ ಬುಲ್’ ಸಿನಿಮಾಕ್ಕೆ ಆಡಿಷನ್ ನೀಡಿ, ಸಾವಿರಾರು ಯುವತಿಯರ ನಡುವೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಮೊದಲ ಸಿನಿಮಾನಲ್ಲೇ ಸ್ಟಾರ್ ನಟ ದರ್ಶನ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು.

ಇದನ್ನೂ ಓದಿ:ಸಿನಿಮಾ ಶೂಟ್​​ನಲ್ಲಿ ರಚಿತಾ ರಾಮ್ ಸಖತ್ ಬ್ಯುಸಿ

‘ಬುಲ್ ಬುಲ್’ ಬಳಿಕ ಒಂದರ ಹಿಂದೊಂದು ಹಿಟ್ ಸಿನಿಮಾಗಳಲ್ಲಿ ರಚಿತಾ ರಾಮ್ ನಟಿಸಿದ್ದು, ದರ್ಶನ್, ಸುದೀಪ್, ಪುನೀತ್ ರಾಜ್​​ಕುಮಾರ್, ಶಿವರಾಜ್ ಕುಮಾರ್ ಇನ್ನೂ ಕೆಲವು ಸ್ಟಾರ್ ನಟರುಗಳ ಜೊತೆಗೆ ನಾಯಕಿಯಾಗಿ ನಟಿಸಿದರು. ಸ್ಟಾರ್ ನಟರು ಮಾತ್ರವೇ ಅಲ್ಲದೆ ಹಲವು ಸಮಕಾಲೀನ ನಟರು, ಕೆಲ ಕಿರಿಯ ನಟರ ಜೊತೆಗೂ ನಟಿಸಿದ ರಚಿತಾ ರಾಮ್, ಹಳ್ಳಿ ಹುಡುಗಿ, ಮಾಡರ್ನ್ ಹುಡುಗಿ, ಗೌರಮ್ಮ, ಬಜಾರಿ ಎಲ್ಲ ರೀತಿಯ ಪಾತ್ರಗಳನ್ನೂ ಲೀಲಾ ಜಾಲವಾಗಿ ನಟಿಸಿದ್ದಾರೆ.

ಕನ್ನಡದ ಸಿನಿಮಾಗಳು ಮಾತ್ರವೇ ಅಲ್ಲದೆ ಪರ ಭಾಷೆ ಸಿನಿಮಾಗಳಲ್ಲಿಯೂ ರಚಿತಾ ರಾಮ್ ನಟಿಸಿದ್ದಾರೆ. ಕಳೆದ ವರ್ಷ ಬಿಡುಗಡೆ ಆದ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾನಲ್ಲಿ ಪವರ್​​ಫುಲ್ ಪಾತ್ರದಲ್ಲಿ ರಚಿತಾ ರಾಮ್ ನಟಿಸಿದ್ದರು. ಈಗಲೂ ಸಹ ತಮಿಳಿನ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಜೊತೆಗೆ ರಚಿತಾ ರಾಮ್ ಹೊಸ ಸಿನಿಮಾದ ಚರ್ಚೆಯಲ್ಲಿದ್ದಾರಂತೆ. ಅದರ ಜೊತೆಗೆ ಧ್ರುವ ಜೊತೆ ‘ಕ್ರಿಮಿನಲ್’, ಸತೀಶ್ ನೀನಾಸಂ ಜೊತೆ ‘ಅಯೋಗ್ಯ 2’ ನಟಿಸುತ್ತಿದ್ದು, ತೆಲುಗಿನಲ್ಲಿ ಎರಡು ಸಿನಿಮಾಗಳು ಈ ತಿಂಗಳಲ್ಲಿ ಅನೌನ್ಸ್ ಆಗಲಿದೆಯಂತೆ.

ರಚಿತಾ ರಾಮ್ ಅವರು ಚಿತ್ರರಂಗದಲ್ಲಿ 14 ವರ್ಷಗಳನ್ನು ಪೂರೈಸಿದ್ದನ್ನು ಅವರ ಅಭಿಮಾನಿಗಳು ಸಂಭ್ರಮಿಸಿದ್ದು, ಅನಾಥಾಶ್ರಮಗಳಿಗೆ ತೆರಳಿ ಸೇವೆ ಮಾಡಿದ್ದಾರೆ. ರಚಿತಾ ರಾಮ್ ಫೋಟೊಗಳನ್ನು ಹಿಡಿದುಕೊಂಡು ಕೇಕ್ ಕತ್ತರಿಸಿ, ನಟಿಯ ಪರವಾಗಿ ಘೋಷಣೆಗಳನ್ನು ಸಹ ಕೂಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎರಗಿ ಬಂದ ಚಿರತೆಯ ಕುತ್ತಿಗೆ ಹಿಡಿದು ಪ್ರಾಣ ಉಳಿಸಿಕೊಂಡ 13 ವರ್ಷದ ಬಾಲಕ – Kannada News | Madhya Pradesh boy saves his life from leopard attack by holding its neck

ಚಿತ್ರದಲ್ಲಿರುವುದು ಸತ್ಯಂ ಠಾಕೂರ್. ಚಿರತೆಯ ಫೋಟೋ ಸಾಂದರ್ಭಿಕ.Image Credit source: PTI

ಭೋಪಾಲ್, ಮೇ 10: ಅನಿರೀಕ್ಷಿತವಾಗಿ ಎರಗಿ ಬರುವ ಅಪಾಯಗಳನ್ನು ಎದುರಿಸಲು ಸಮಯಪ್ರಜ್ಞೆ, ಧೈರ್ಯ ಬೇಕು. ಮಧ್ಯಪ್ರದೇಶದ 13 ವರ್ಷದ ಬಾಲಕನೊಬ್ಬ ಸಮಯಪ್ರಜ್ಞೆ ಮತ್ತು ಧೈರ್ಯ ತೋರಿ ಚಿರತೆ ಬಾಯಿಗೆ (Leopard Attack) ಆಹಾರವಾಗುವುದರಿಂದ ತಪ್ಪಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಹೋಶಂಗಾಬಾದ್​ನ ಪಿಪರಿಯಾ ಅರಣ್ಯ ಪ್ರದೇಶಕ್ಕೆ ಸೇರಿದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. 8ನೇ ತರಗತಿಯ ಬಾಲಕ ಸತ್ಯಂ ಠಾಕೂರ್ ಈ ಸಾಹಸ ತೋರಿದವ.

ತನ್ನ ಮನೆಯ ಬಳಿ ಇರುವ ಜಮೀನಿನಲ್ಲಿ ಸತ್ಯಂ ಆಟವಾಡುತ್ತಿರುವಾಗ ಹತ್ತಿರದಲ್ಲೇ ಪೊದೆಯೊಂದರಲ್ಲಿ ಅಡಗಿದ್ದ ಚಿರತೆ ದಿಢೀರನೇ ಬಾಲಕನ ಮೇಲೆ ಎರಗಿದೆ. ಕೊಡಲಿ, ಮಚ್ಚು, ದೊಣ್ಣೆ ಇತ್ಯಾದಿ ಯಾವುದೇ ಆಯುಧ ಇಲ್ಲದ ಬಾಲಕ ಬರಿಗೈಯಲ್ಲೇ ಚಿರತೆಯನ್ನು ಎದುರಿಸಿದ್ದಾರೆ. ಎರಗಿ ಬಂದ ಆ ಕ್ರೂರ ಪ್ರಾಣಿಯ ಕತ್ತನ್ನು ಹಿಡಿದು ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ. ಚಿರತೆಯ ಉಗುರು ಪರಚಿ ಬಾಲಕನಿಗೆ ವಿವಿಧೆಡೆ ಗಾಯಗಳಾಗಿವೆ. ಆದರೆ, ಪ್ರಾಣ ಉಳಿದಿದೆ.

ಇದನ್ನೂ ಓದಿ: ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ

‘ನಾನು ಬಾವಿ ಸಮೀಪ ಆಡುತ್ತಿದ್ದಾಗ ದಿಢೀರನೇ ಚಿರತೆ ದಾಳಿ ಮಾಡಿತು. ನಾನು ಅದರ ಕತ್ತನ್ನು ಹಿಡಿದುಕೊಂಡೆ. ಅದು ನನ್ನ ಹೊಟ್ಟೆ ಮತ್ತು ಕಾಲನ್ನು ಪರಚಿತು. ನಾನು ಜೋರಾಗಿ ಕಿರುಚಿ ಅದನ್ನು ತಳ್ಳಿದೆ,’ ಎಂದು ಈ 13 ವರ್ಷದ ಬಾಲಕ ಸತ್ಯಂ ಠಾಕೂರ್ ಆ ಭೀಕರ ಘಟನೆಯ ವಿವರ ನೀಡುತ್ತಾನೆ.

ಸಂಜೆ 7ಕ್ಕೆ ಈ ಬಾಲಕನ ಕಿರುಚಾಟ ಕೇಳಿ ಆತನ ತಂದೆ ಮಹೇಂದ್ರ ಸಿಂಗ್ ಠಾಕೂರ್ ಹಾಗೂ ಇತರ ಕುಟುಂಬ ಸದಸ್ಯರು ಬಡಿಗೆಗಳನ್ನು ಹಿಡಿದುಕೊಂಡು ಸ್ಥಳಕ್ಕೆ ಧಾವಿಸುತ್ತಾರೆ. ಅಲ್ಲಿ ಬಾಲಕ ಆ ಚಿರತೆಯ ಕತ್ತು ಹಿಡಿಕೊಂಡು ತಡೆದು ನಿಲ್ಲಿಸಿರುತ್ತಾನೆ. ಜನರು ಕಿರಿಚುತ್ತಾ ಬಂದಾಗ ಚಿರತೆ ಹೆದರಿ ಕಾಡಿಗೆ ಓಡಿ ಹೋಗುತ್ತದೆ.

ಇದನ್ನೂ ಓದಿ: ಬ್ಲಾಸ್ಟ್​​ ಬೆದರಿಕೆ, ಜಿಲೆಟಿನ್​​ ಪತ್ತೆ; ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಖಾಕಿಗೆ ಟೆನ್ಷನ್​​ ತಂದ ಭದ್ರತೆ

ಬಾಲಕನ ಹೊಟ್ಟೆ, ಕೈ ಮತ್ತು ಕಾಲುಗಳಿಗೆ ಚಿರತೆ ಉಗುರು ಪರಿಚಿದ್ದರಿಂದ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಡಳಿತದ ವತಿಯಿಂದ ಚಿಕಿತ್ಸೆಗೆ ತತ್​ಕ್ಷಣವೇ ಒಂದಷ್ಟು ಹಣಸಹಾಯ ಕೊಡಲಾಗಿದೆ.

ಅರಣ್ಯಾಧಿಕಾರಿಗಳು ಈ ಘಟನೆಯನ್ನು ಗಂಭೀರವೆಂದು ಬಣ್ಣಿಸಿದ್ದಾರೆ. ಅರಣ್ಯ ಪ್ರದೇಶಗಳಲ್ಲಿ ಚಿರತೆಗಳ ಓಡಾಟ ಸಾಮಾನ್ಯವೇ ಆಗಿರುತ್ತದೆ. ಆದರೆ, ಮಕ್ಕಳ ಮೇಲೆ ಅವುಗಳು ದಾಳಿ ಮಾಡುವುದು ಅಪರೂಪ ಎನ್ನುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೈ ಬಿಪಿ ಮತ್ತು ಡಯಾಬಿಟಿಸ್ ಕಿಡ್ನಿಗೆ ಹಾನಿ ಮಾಡುತ್ತಾ? ಈ ಬಗ್ಗೆ ವೈದ್ಯರು ಏನ್ ಹೇಳ್ತಾರೆ ನೋಡಿ – Kannada News | Protecting Your Kidneys When You Have BP or Diabetes

ಇತ್ತೀಚಿನ ದಿನಗಳಲ್ಲಿ ಹೈ ಬ್ಲಡ್ ಪ್ರೆಶರ್ (High Blood Pressure) ಮತ್ತು ಮಧುಮೇಹದಂತಹ (Diabetes) ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಎರಡೂ ಕಾಯಿಲೆಗಳು ದೀರ್ಘಕಾಲ ನಿಯಂತ್ರಣದಲ್ಲಿರದಿದ್ದರೆ ದೇಹದ ಪ್ರಮುಖ ಅಂಗಗಳಿಗೆ ಹಾನಿಯಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಅದರಲ್ಲಿಯೂ ಕಿಡ್ನಿ ಆರೋಗ್ಯದ ಮೇಲೆ ಇದರ ಪರಿಣಾಮ ಹೆಚ್ಚು ಕಾಣಿಸಿಕೊಳ್ಳಬಹುದು. ವೈದ್ಯರ ಪ್ರಕಾರ, ಕಿಡ್ನಿ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವುದು ಮತ್ತು ದೇಹದ ದ್ರವ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿರಂತರವಾಗಿ ಹೆಚ್ಚಿದರೆ ಕಿಡ್ನಿಯ ಸೂಕ್ಷ್ಮ ರಕ್ತನಾಳಗಳು ಹಾನಿಗೊಳಗಾಗಬಹುದು. ಇದರಿಂದ ಕಿಡ್ನಿಯ ಶೋಧನಾ ಸಾಮರ್ಥ್ಯ ನಿಧಾನವಾಗಿ ಕುಸಿಯಲು ಆರಂಭವಾಗುತ್ತದೆ. ಹಾಗಾಗಿ ಹೈ ಬಿಪಿ ಮತ್ತು ಮಧುಮೇಹ ಕಿಡ್ನಿಗೆ ಹೇಗೆ ಹಾನಿ ಮಾಡುತ್ತದೆ, ಕಿಡ್ನಿ ಆರೋಗ್ಯ ಕಾಪಾಡಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೈ ಬಿಪಿ ಮತ್ತು ಮಧುಮೇಹ ಕಿಡ್ನಿಗೆ ಹೇಗೆ ಹಾನಿ ಮಾಡುತ್ತದೆ?

ತಜ್ಞರ ಪ್ರಕಾರ, ದೀರ್ಘಕಾಲ ಹೈ ಬಿಪಿ ಮತ್ತು ಡಯಾಬಿಟೀಸ್ ನಿಯಂತ್ರಣದಲ್ಲಿರದಿದ್ದರೆ ಕಿಡ್ನಿಯ ಕಾರ್ಯಕ್ಷಮತೆ ಕುಸಿಯಬಹುದು. ಮಧುಮೇಹವು ಕ್ರಾನಿಕ್ ಕಿಡ್ನಿ ರೋಗಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ರಕ್ತದೊತ್ತಡ ಹೆಚ್ಚಾದಾಗ ಕಿಡ್ನಿಯ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಈ ಸಮಸ್ಯೆ ಗಂಭೀರವಾಗಿ ಡಯಾಲಿಸಿಸ್ ಅಗತ್ಯವಾಗುವ ಮಟ್ಟಕ್ಕೂ ಹೋಗಬಹುದು.

ಕಿಡ್ನಿ ಹಾನಿಯಾದಾಗ ಯಾವ ಲಕ್ಷಣಗಳು ಕಾಣಿಸುತ್ತವೆ?

ಕಿಡ್ನಿ ಸಮಸ್ಯೆ ಆರಂಭವಾದಾಗ ಕಾಲು ಮತ್ತು ಮುಖದಲ್ಲಿ ಊತ, ದೌರ್ಬಲ್ಯ, ಬೇಗ ದಣಿವು, ಹಸಿವು ಕಡಿಮೆಯಾಗುವುದು ಮೊದಲಾದ ಲಕ್ಷಣಗಳು ಕಾಣಿಸಬಹುದು. ಮೂತ್ರದ ಪ್ರಮಾಣ ಅಥವಾ ಬಣ್ಣದಲ್ಲಿ ಬದಲಾವಣೆ ಆಗುವುದು ಕೂಡ ಪ್ರಮುಖ ಸೂಚನೆ ಆಗಿರಬಹುದು. ಕೆಲವರಿಗೆ ರಾತ್ರಿ ಪದೇಪದೇ ಮೂತ್ರ ವಿಸರ್ಜನೆ, ಉಸಿರಾಟದ ತೊಂದರೆ ಅಥವಾ ದೇಹ ಭಾರವಾಗಿರುವ ಅನುಭವ ಕಾಣಿಸಬಹುದು. ಇಂತಹ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ನಿಮಗೆ ಹೈ ಬಿಪಿ ಇದ್ಯಾ? ಹಾಗಿದ್ರೆ ಸ್ಟ್ರೋಕ್ ಆಗದಂತೆ ತಡೆಯಲು ಈ ರೀತಿ ಮಾಡಿ

ಕಿಡ್ನಿ ಆರೋಗ್ಯ ಕಾಪಾಡಲು ಏನು ಮಾಡಬೇಕು?

ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುವುದು ಅತ್ಯಂತ ಮುಖ್ಯ. ಕಡಿಮೆ ಪ್ರಮಾಣದಲ್ಲಿ ಉಪ್ಪು ಮತ್ತು ಕಡಿಮೆ ಸಕ್ಕರೆ ಇರುವ ಸಮತೋಲನ ಆಹಾರ ಸೇವಿಸಬೇಕು. ನಿಯಮಿತ ವ್ಯಾಯಾಮ, ಸಾಕಷ್ಟು ನೀರು ಕುಡಿಯುವುದು ಹಾಗೂ ಸಮಯಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಕಿಡ್ನಿ ರಕ್ಷಣೆಗೆ ಸಹಕಾರಿ. ವೈದ್ಯರ ಸಲಹೆಯಂತೆ ಔಷಧಿಗಳನ್ನು ನಿಯಮಿತವಾಗಿ ಸೇವಿಸುವುದು ಮತ್ತು ಆರೋಗ್ಯಕರ ಜೀವನಶೈಲಿ ಪಾಲಿಸುವುದು ಕಿಡ್ನಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ಬರುತ್ತಿದ್ದಾರೆ ಮಹಾನ್ ಕಳ್ಳರು, ಮುಗಿದಿಲ್ಲ ‘ಮನಿ ಹೈಸ್ಟ್’ – Kannada News | Netflix Released Money Hiest new teaser says story not ended

‘ಗೇಮ್ ಆಫ್ ಥ್ರೋನ್ಸ್’, ‘ಬ್ರೇಕಿಂಗ್ ಬ್ಯಾಡ್’, ‘ಡಾರ್ಕ್’ ಇನ್ನಿತರೆ ವಿಶ್ವ ವಿಖ್ಯಾತ ವೆಬ್ ಸರಣಿಗಳ ಸಾಲಿಗೆ ಸೇರುತ್ತದೆ ‘ಮನಿ ಹೈಸ್ಟ್’. ನೆಟ್​​ಫ್ಲಿಕ್ಸ್​​ನಲ್ಲಿ ಪ್ರಸಾರವಾಗಿದ್ದ ಈ ಸ್ಪ್ಯಾನಿಷ್ ಶೋ ಕೋವಿಡ್ ಸಮಯದಲ್ಲಿ ಭಾರಿ ಹಿಟ್ ಆಗಿತ್ತು. ಈ ಸರಣಿಯ ಐದು ಸೀಸನ್​​ಗಳು ಈ ವರೆಗೆ ಪ್ರಸಾರ ಆಗಿದ್ದು, ಐದನೇ ಸೀಸನ್ ಅನ್ನು ಈ ವೆಬ್ ಸರಣಿಯ ಕೊನೆಯ ಸರಣಿ ಎನ್ನಲಾಗಿತ್ತು. ಕತೆಯನ್ನು ಸಹ ಮುಗಿಸಲಾಗಿತ್ತು. ಆದರೆ ಇದೀಗ ನೆಟ್​​ಫ್ಲಿಕ್ಸ್​ ಹೊಸದೊಂದು ಟೀಸರ್ ಬಿಡುಗಡೆ ಮಾಡಿದ್ದು, ‘ಮನಿ ಹೈಸ್ಟ್’ ಮತ್ತೆ ಬರುತ್ತಿದೆ ಎಂದಿದೆ. ಇದು ವೆಬ್ ಸರಣಿಯ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

‘ಮನಿ ಹೈಸ್ಟ್’ ಎಂಬುದು ವಿಶ್ವದಾದ್ಯಂತ ಅತ್ಯಂತ ಜನಪ್ರಿಯತೆ ಗಳಿಸಿದ ಒಂದು ಸ್ಪ್ಯಾನಿಷ್ ವೆಬ್ ಸರಣಿ. ಇದರಲ್ಲಿ ‘ಪ್ರೊಫೆಸರ್’ ಎಂಬ ಬುದ್ಧಿವಂತ ವ್ಯಕ್ತಿಯ ನೇತೃತ್ವದಲ್ಲಿ ತಂಡವೊಂದು ದೊಡ್ಡ ಬ್ಯಾಂಕ್‌ಗಳಿಗೆ ನುಗ್ಗಿ, ಅತ್ಯಂತ ಚಾಣಾಕ್ಷತನದಿಂದ ಹಣವನ್ನು ದೋಚುವ ಕತೆ ಇದೆ. ಈ ಸರಣಿಯು ತನ್ನ ರೋಚಕ ತಿರುವುಗಳು ಮತ್ತು ಅದ್ಭುತ ಪಾತ್ರಗಳಿಂದಾಗಿ ಭಾರತ ಸೇರಿದಂತೆ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದೆ. ಈ ಸರಣಿಯ ‘ಬೆಲ್ಲಾ ಚಾವ್’ ಹಾಡು ಕೂಡ ಬಹಳ ಜನಪ್ರಿಯವಾಗಿದೆ.

ಇದನ್ನೂ ಓದಿ:ವಿಶ್ವ ದಾಖಲೆ ಬರೆಯುತ್ತದೆಯೇ ‘ಮೈಖಲ್’ ಸಿನಿಮಾ: ಗಳಿಸಿರುವುದೆಷ್ಟು? ಗಳಿಸಬೇಕಾದ್ದೆಷ್ಟು?

ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡಿರುವ ಹೊಸ ಟೀಸರ್‌ನಲ್ಲಿ ‘ಬೆಲ್ಲಾ ಚಾವೊ’ ಹಾಡಿನ ಸಂಗೀತದೊಂದಿಗೆ ಹಳೆಯ ಎಪಿಸೋಡ್​​ಗಳ ದೃಶ್ಯಗಳನ್ನು ತೋರಿಸಲಾಗಿದೆ. ಜೊತೆಗೆ ಕೊನೆಯ ಸೀಸನ್​ನ ಕೊನೆಯ ಎಪಿಸೋಡ್​​ನಲ್ಲಿ ಮನಿ ಹೈಸ್ಟ್ ತಂಡ ಕದ್ದಿದ್ದ ಚಿನ್ನ ಬೇರೆ ಯಾರಿಗೋ ಸಿಕ್ಕಿರುವ ದೃಶ್ಯವನ್ನು ಸಹ ತೋರಿಸಲಾಗಿದೆ. ವೆಬ್ ಸರಣಿಯಲ್ಲಿ ಕಳ್ಳರ ಗುಂಪು ಧರಿಸುತ್ತಿದ್ದ ಚಿತ್ರಕಾರ ಡಾಲಿಯ ಮಾಸ್ಕ್ ಅನ್ನು ಚಿನ್ನದ ಮಾಸ್ಕ್ ಅನ್ನಾಗಿ ತೋರಿಸಲಾಗಿದ್ದು, ‘ಮನಿ ಹೈಸ್ಟ್’ನ ಕತೆ ಮುಂದುವರೆಯಲಿದೆ ಎಂದು ಹೇಳಲಾಗಿದೆ.

ಈಗ ಬರಲಿರುವ ‘ಮನಿ ಹೈಸ್ಟ್’ನಲ್ಲಿ ಹಳೆಯ ಪಾತ್ರಗಳೇ ಇರುತ್ತವೆಯೇ ಅಥವಾ ಹೊಸ ಪಾತ್ರಗಳ ಎಂಟ್ರಿ ಆಗಲಿದೆಯೇ ಎಂಬುದು ಕುತೂಹಲ. ಹಳೆಯ ಪಾತ್ರಗಳು ಪ್ರೇಕ್ಷಕರಿಗೆ ಬಹಳ ಕನೆಕ್ಟ್ ಆಗಿದ್ದವು. ಅಸಲಿಗೆ ‘ಮನಿ ಹೈಸ್ಟ್’ ಕೇವಲ ಒಂದು ದರೋಡೆಯ ಕಥೆಯಲ್ಲ, ಇದರಲ್ಲಿ ಭಾವನೆಗಳು, ಸ್ನೇಹ ಮತ್ತು ವ್ಯವಸ್ಥೆಯ ವಿರುದ್ಧದ ಹೋರಾಟದ ಕಥೆಯೂ ಇದೆ. ಈ ಸರಣಿ ಬಿಡುಗಡೆ ಆದ ಬಳಿಕ ನಡೆದ ಹಲವು ಪ್ರತಿಭಟನೆಗಳಲ್ಲಿ ಜನ ‘ಮನಿ ಹೈಸ್ಟ್’ನ ಕಳ್ಳರ ತಂಡದ ರೀತಿಯೇ ಉಡುಪು ಧರಿಸಿ ಪಾಲ್ಗೊಂಡಿದ್ದು ಸಹ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೇಶಕ್ಕೆ ಮೋದಿ ಕರ್ನಾಟಕಕ್ಕೆ ಜೆಸಿಬಿ: ಹೊಸ ಪಕ್ಷದ ಸುಳಿವು ಕೊಟ್ಟ ವಿಜಯಪುರ ಶಾಸಕ ಯತ್ನಾಳ್​​ – Kannada News | Expelled BJP MLA Basanagouda Patil Yatnal Hints at Launching New Party in Karnataka

ವಿಜಯಪುರ, ಮೇ 10: ಎರಡು ವರ್ಷಗಳ ಹಿಂದೆ ಆರಂಭವಾದ ರಾಜಕೀಯ ಪಕ್ಷ ತಮಿಳುನಾಡಲ್ಲಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ರಾಜ್ಯದಲ್ಲಿ ಪ್ರವಾಸ ಆರಂಭಿಸಲಿದ್ದು, ಜನರು ಒಪ್ಪಿದ್ದರೆ ಕರ್ನಾಟಕದಲ್ಲಿ ಜೆಸಿಬಿ ಪಾರ್ಟಿ ರೆಡಿ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ ತಿಳಿಸಿದ್ದಾರೆ. ಹೊಸ ಪಕ್ಷ ಘೋಷಣೆ ಯಾವಾಗ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲ ಹಂತದಲ್ಲಿ ಪ್ರವಾಸ ನಡೆಯಲಿದೆ. ದೇಶಕ್ಕೆ ಮೋದಿ ಕರ್ನಾಟಕಕ್ಕೆ ಜೆಸಿಬಿ ಎಂದವರು ತಿಳಿಸಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ನಿನ್ನೆ ನಡೆದಿದ್ದು ಬಿಎಸ್​​ವೈ ಅಭಿಮಾನೋತ್ಸವ ಅಲ್ಲ. ಬದಲಾಗಿ ಬೀಳ್ಕೊಡುಗೆ ಸಮಾರಂಭ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

RCB vs MI: ಒಂದೇ ಪಂದ್ಯದಲ್ಲಿ ಒಟ್ಟಿಗೆ ಧೋನಿ ದಾಖಲೆ ಮುರಿದ ರೋಹಿತ್, ಕೊಹ್ಲಿ

Source link

ಡಾಗ್ ಸತೀಶ್​​ಗೆ ಟಾಂಗ್ ಕೊಟ್ಟ ಮಾಜಿ ಬಿಗ್​​ಬಾಸ್ ಸ್ಪರ್ಧಿ ರಿಷಿಕಾ ಸಿಂಗ್

ಬಿಗ್​​ಬಾಸ್ (Bigg Boss) ಮೊದಲ ಸೀಸನ್​​ನಲ್ಲಿ ನಟಿ ರಿಷಿಕಾ ಸಿಂಗ್ ಸ್ಪರ್ಧಿ ಆಗಿದ್ದರು. ವಿಜಯ್ ರಾಘವೇಂದ್ರ, ಅನುಶ್ರಿ, ಅರುಣ್ ಸಾಗರ್ ಅವರುಗಳ ಜೊತೆ ಸೇರಿ ಸಾಕಷ್ಟು ಎಂಟರ್ಟೈನ್ ಸಹ ಮಾಡಿದ್ದರು. ರಿಷಿಕಾ ಸಿಂಗ್ ಅವರು, ಖ್ಯಾತ ನಿರ್ದೇಶಕ ಬಾಬು ರಾಜೇಂದ್ರ ಸಿಂಗ್ ಅವರ ಪುತ್ರಿಯೂ ಹೌದು. ಇದೀಗ ಹಲವು ವರ್ಷಗಳ ಬಳಿಕ ರಿಷಿಕಾ ಸಿಂಗ್ ಅವರು ಹಾಡಿನೊಂದಿಗೆ ವಾಪಸ್ ಬಂದಿದ್ದಾರೆ. ಆ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ರಿಷಿಕಾ ಸಿಂಗ್, ಬಿಗ್​​ಬಾಸ್​​ಗೆ ಹೋಗಿ ಬಂದು, ಬಿಗ್​​ಬಾಸ್ ಅನ್ನು, ಸುದೀಪ್ ಅವರನ್ನೂ ಟೀಕೆ ಮಾಡಿದ ಡಾಗ್ ಸತೀಶ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ನೂತನ ಸಿಎಂ ಜೋಸೆಫ್ ವಿಜಯ್​ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ – Kannada News | PM Modi calls Joseph Vijay over phone, greets him for becoming Tamil Nadu CM

ಚೆನ್ನೈ, ಮೇ 10: ಭಾನುವಾರ ಬೆಳಗ್ಗೆ ತಮಿಳುನಾಡಿನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಜೋಸೆಫ್ ವಿಜಯ್ (Joseph Vijay) ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿನಂದಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು ಸಂಜೆ ದೂರವಾಣಿ ಕರೆ ಮಾಡಿ ವಿಜಯ್ ಜೊತೆ ಮಾತನಾಡಿದರು. ಹಾಗೆಯೇ, ನೂತನ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿ, ಉತ್ತಮ ಆಡಳಿತಕ್ಕೆ ಶುಭ ಕೋರಿದರು ಎನ್ನಲಾಗಿದೆ.

ಪ್ರಧಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಲ್ಲಿಸಿದ ಅಭಿನಂದನೆಗೆ ಜೋಸೆಫ್ ವಿಜಯ್ ಪ್ರತಿಕ್ರಿಯಿಸಿದ್ದು, ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ. ತಮ್ಮ ಜನತೆಯ ಕಲ್ಯಾಣ ಮತ್ತು ಪ್ರಗತಿಯು ತನ್ನ ಏಕೈಕ ಗುರಿಯಾಗಿದೆ. ತಮಿಳುನಾಡಿನ ಪ್ರಗತಿಗೆ ಕೇಂದ್ರ ಸರ್ಕಾರ ಸಹಕಾರ ಮತ್ತು ಬೆಂಬಲ ನೀಡುವ ಅಪೇಕ್ಷೆಯಲ್ಲಿದ್ದೇವೆ ಎಂದು ಮಾಜಿ ನಟ ವಿಜಯ್ ತಿಳಿಸಿದ್ದಾರೆ.

ಜೋಸೆಫ್ ವಿಜಯ್ ಅವರ ಟ್ವೀಟ್

ಇದನ್ನೂ ಓದಿ: ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೊದಲು ವಂದೇ ಮಾತರಂ, ನಂತರ ಜನಗಣಮನ, ತಮಿಳು ಗೀತೆ; ಇದು ಹೊಸ ಮೆಸೇಜಾ?

ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಜೋಸೆಫ್ ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳು ಬೇಕಿತ್ತು. ಕಾಂಗ್ರೆಸ್ ಹಾಗು ಇತರ ಕೆಲ ಪಕ್ಷಗಳ ಬೆಂಬಲದೊಂದಿಗೆ ಟಿವಿಕೆ ಸರ್ಕಾರ ರಚಿಸಿದೆ. ಭಾನುವಾರ ವಿಜಯ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಜೊತೆ 9 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ಮಾಡಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಹುಲ್ ಗಾಂಧಿ ಮೊದಲಾದ ನಾಯಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಕ್ಕೆ ರಾಹುಲ್ ಗಾಂಧಿ ಅವರಿಗೆ ಜೋಸೆಫ್ ವಿಜಯ್ ಧನ್ಯವಾದ ಕೂಡ ಹೇಳಿದ್ದಾರೆ.

ಇದನ್ನೂ ಓದಿ: ವಿಜಯ್ ಮಂತ್ರಿಮಂಡಲ; ಎಂಜಿಆರ್ ಒಡನಾಡಿ, ವೈದ್ಯ, ಸಂಘಟನಾ ಚತುರ, ಯುವತಿ, ಚಿತ್ರ ನಟ ಮೊದಲಾದವರು…

ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ವಿಪಕ್ಷ ನಾಯಕರಾಗಿದ್ದಾರೆ. ಜೋಸೆಫ್ ವಿಜಯ್ ಅವರು ತಮ್ಮ ಸರ್ಕಾರದಲ್ಲಿ ತಾನೊಬ್ಬನೇ ಏಕೈಕ ಪವರ್ ಸೆಂಟರ್ ಆಗಿದ್ದು ಎಂದು ಹೇಳುವ ಮೂಲಕ ತಾನು ಸರ್ವೋಚ್ಚ ನಾಯಕ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಭರಪೂರ ಭರವಸೆಗಳನ್ನು ಕೊಟ್ಟಿದ್ದು, ಅದನ್ನು ಈಡೇರಿಸುವ ದೊಡ್ಡ ಸವಾಲು ವಿಜಯ್ ಎದುರಿಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ವಿಧಾನಸಭೆಯಲ್ಲಿನ್ನು ವಿಜಯ್​​ vs ಉದಯನಿಧಿ: ವಿಪಕ್ಷ ನಾಯಕನಾಗಿ ಮಾಜಿ ಡಿಸಿಎಂ ಆಯ್ಕೆ – Kannada News | DMK’s Udhayanidhi Stalin Elected Tamil Nadu Leader of Opposition

ಉದಯನಿಧಿ ಸ್ಟಾಲಿನ್​​Image Credit source: dinamalar.com

ಚೆನ್ನೈ, ಮೇ 10: ತಮಿಳುನಾಡು ಸಿಎಂ ಆಗಿ ತಮಿಳಗ ವೆಟ್ರಿ ಕಳಗಂ (TVK) ಸ್ಥಾಪಕ ಮತ್ತು ಅಧ್ಯಕ್ಷ ಸಿ. ಜೋಸೇಫ್​​ ವಿಜಯ್ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ವಿಧಾನಸಭೆಯ ವಿಪಕ್ಷ ನಾಯಕನ ಆಯ್ಕೆಯೂ ನಡೆದಿದೆ. ಚುನಾವಣಾ ಫಲಿತಾಂಶದಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿರುವ ಡಿಎಂಕೆ ಈ ಬಗ್ಗೆ ಮಾಹಿತಿ ನೀಡಿದ್ದು, ಮಾಜಿ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್​​ ಪ್ರತಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.

ಎಂ.ಕೆ. ಸ್ಟಾಲಿನ್ ನೇತೃತ್ವದ ಸಭೆಯಲ್ಲಿ ತೀರ್ಮಾನ

ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್​​ ಅವರ ನೇತೃತ್ವದಲ್ಲಿ ಮೇ 7ರಂದು ಚೆನ್ನೈನಲ್ಲಿರುವ ಪಕ್ಷದ ಮುಖ್ಯ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಕೆ.ಎನ್.​​ ನೆಹರು ಅವರನ್ನು ಪ್ರತಿಪಕ್ಷ ಉಪ ನಾಯಕ ಮತ್ತು ಇ.ವಿ. ವೇಲು ಅವರನ್ನು ಪಕ್ಷದ ವಿಪ್​​ ಆಗಿ ಆಯ್ಕೆ ಮಾಡಲಾಗಿದೆ ಎಂದು ಡಿಎಂಕೆ ತಿಳಿಸಿದೆ.

ಇದನ್ನೂ ಓದಿ: ತಮಿಳುನಾಡು ಸಾಲದ ಬಗ್ಗೆ ಆರೋಪಿಸಿದ್ದ ಮುಖ್ಯಮಂತ್ರಿ ವಿಜಯ್​​ ಮಾತಿಗೆ ಮಾಜಿ ಸಿಎಂ ಸ್ಟಾಲಿನ್​​ ಆಕ್ರೋಶ 

ತಂದೆಯ ಸ್ಥಾನ ತುಂಬಲಿರುವ ಉದಯನಿಧಿ

ಕೊಲತ್ತೂರು ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಸೋತಿರುವ ಹಿನ್ನೆಲೆ, ತಂದೆಯ ಸ್ಥಾನವನ್ನು ಉದಯನಿಧಿ ತುಂಬಲಿದ್ದಾರೆ. ಡಿಎಂಕೆ ಯುವ ಘಟಕದ ನಾಯಕನಾಗಿ ನೇಮಕವಾದ ನಂತರ ಉದಯನಿಧಿ ಸ್ಟಾಲಿನ್ ಪಕ್ಷದಲ್ಲಿ ವೇಗವಾಗಿ ಪ್ರಭಾವ ಹೆಚ್ಚಿಸಿಕೊಂಡಿದ್ದರು. 2021ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದ ಬಳಿಕ ಮೊದಲು ಸಚಿವರಾಗಿ, ನಂತರ ಉಪ ಮುಖ್ಯಮಂತ್ರಿಯಾಗಿ ಪದೋನ್ನತಿ ಪಡೆದದಿದ್ದರು. ತಂದೆಯ ನಂತರ ಪಕ್ಷದ ಪ್ರಮುಖ ಶಕ್ತಿಕೇಂದ್ರವಾಗಿ ಹೊರಹೊಮ್ಮಿದ್ದ ಅವರಿಗೀಗ ಪ್ರತಿಪಕ್ಷ ನಾಯಕನ ಸ್ಥಾನವೂ ಸಿಕ್ಕಿದೆ. ಚೆಪಾಕ್-ತಿರುವಲ್ಲಿಕೆಣಿ ಕ್ಷೇತ್ರದಿಂದ ಎರಡನೇ ಬಾರಿ ಗೆದ್ದಿರುವ ಉದಯನಿಧಿ ಈಗ ವಿಧಾನಸಭೆಯಲ್ಲಿ ಡಿಎಂಕೆಯ ಪರ ಹೋರಾಟವನ್ನು ಮುನ್ನಡೆಸಬೇಕಾಗಿದೆ. ವಿಶೇಷವಾಗಿ ಹೊಸ ಸರ್ಕಾರವು ಹಿಂದಿನ ಆಡಳಿತದ ವಿರುದ್ಧ ವಿವಿಧ ಆಡಳಿತಾತ್ಮಕ ವೈಫಲ್ಯಗಳ ಹೊಣೆಗಾರಿಕೆಯನ್ನು ಬೊಟ್ಟು ಮಾಡಲು ಯತ್ನಿಸುವ ಸಂದರ್ಭದಲ್ಲೂ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಸವಾಲು ಎದುರಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:47 pm, Sun, 10 May 26

Source link

400 ಜನರಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ್ದರು ದಳಪತಿ ವಿಜಯ್ – Kannada News | Thalapathy Vijay once gifted 400 gold rings to his movie team

ದಳಪತಿ ವಿಜಯ್ (Thalapathy Vijay) ಈಗ ತಮಿಳುನಾಡಿನ ಸಿಎಂ. ಮೊದಲ ರಾಜಕೀಯ ಪ್ರಯತ್ನದಲ್ಲಿಯೇ ಯಶಸ್ವಿಯಾಗಿರುವ ವಿಜಯ್ ಇಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಜಯ್ ರಾಜಕೀಯ ಪಕ್ಷ ಸ್ಥಾಪಿಸಿ ಎರಡೇ ವರ್ಷಗಳಾಗಿದ್ದರೂ, ಅವರು ಸಾಮಾಜಿಕ ಕಾರ್ಯವನ್ನು ಎರಡು ದಶಕದಿಂದಲೂ ಮಾಡುತ್ತಲೇ ಬಂದಿದ್ದಾರೆ. ಅದರಲ್ಲೂ ಉದಾರವಾಗಿ ದಾನಗಳನ್ನು ಮಾಡುತ್ತಲೇ ಇರುತ್ತಾರೆ. ಹಿಂದೊಮ್ಮೆ ಒಂದೇ ಬಾರಿಗೆ 400 ಮಂದಿಗೆ ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡಿದ್ದರು ವಿಜಯ್.

ವಿಜಯ್ ಅವರು ವಿಶೇಷ ಸಂದರ್ಭಗಳಲ್ಲಿ ಚಿನ್ನದ ಆಭರಣಗಳನ್ನು ನೀಡುತ್ತಾರೆ. ತಮ್ಮ ಹುಟ್ಟಿದ ದಿನದಂದು ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ಚಿನ್ನದ ಉಂಗುರಗಳನ್ನು ಕೆಲ ವರ್ಷ ನೀಡಿದ್ದರು. ತಮ್ಮ ಅಭಿಮಾನಿ ಸಂಘದ ಪ್ರಮುಖರ ಹುಟ್ಟುಹಬ್ಬಗಳಿಗೆ ಚಿನ್ನದ ಆಭರಣಗಳನ್ನು ಅವರು ನೀಡುತ್ತಿದ್ದರು. ಆದರೆ ಒಮ್ಮೆ ಏಕಕಾಲಕ್ಕೆ ಒಟ್ಟಿಗೆ 400 ಮಂದಿಗೆ ಚಿನ್ನದ ಉಂಗುರ ನೀಡಿದ್ದರು.

ಇದನ್ನೂ ಓದಿ:ವಿಜಯ್ ಬಗ್ಗೆ ಸ್ಟಾಲಿನ್ ಮಾತು, ವೈರಲ್ ಆಗುತ್ತಿದೆ ಹಳೆ ವಿಡಿಯೋ

ವಿಜಯ್ ನಟಿಸಿದ್ದ ‘ಬಿಗಿಲ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಯಶಸ್ಸಾಗಿತ್ತು. ಆ ಸಂದರ್ಭದಲ್ಲಿ ವಿಜಯ್ ಅವರು ‘ಬಿಗಿಲ್’ ಹೆಸರು ಅಚ್ಚು ಹಾಕಿಸಿ, ಸಿನಿಮಾಕ್ಕಾಗಿ ಕೆಲಸ ಮಾಡಿದ ಎಲ್ಲ ತಂತ್ರಜ್ಞರು, ನಟ-ನಟಿಯರು ಮತ್ತು ಇತರೆ ಸಿಬ್ಬಂದಿಗಳಿಗೆ ಚಿನ್ನದ ಉಂಗುರ ಕೊಟ್ಟಿದ್ದರು. ಸಾಮಾನ್ಯ ಲೈಟ್ ಬಾಯ್ ಇಂದ ಹಿಡಿದು ಎಲ್ಲರಿಗೂ ಚಿನ್ನದ ಉಂಗುರಗಳನ್ನು ವಿಜಯ್ ಅವರು ಕೊಟ್ಟಿದ್ದರು. ಆ ಚಿನ್ನದ ಉಂಗುರಗಳ ಚಿತ್ರಗಳನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಗ ಹಂಚಿಕೊಂಡಿದ್ದರು.

ಈಗ ವಿಜಯ್ ಸಿಎಂ ಆಗಿದ್ದಾರೆ. ಚುನಾವಣೆಗೆ ಮುಂಚೆ ಅವರ ಟಿವಿಕೆ ಪಕ್ಷದಿಂದ ಹೊರತಂದಿದ್ದ ಪ್ರಣಾಳಿಕೆಯಲ್ಲೂ ಸಹ ಅವರು ಮಹಿಳೆಯರಿಗೆ ಚಿನ್ನದ ಆಭರಣಗಳನ್ನು ನೀಡುವ ಭರವಸೆಯನ್ನು ನೀಡಿದ್ದಾರೆ. ಮದುವೆ ಆಗುವ ಪ್ರತಿ ಮಹಿಳೆಗೆ 8 ಗ್ರಾಂ ಚಿನ್ನವನ್ನು ನೀಡುವುದಾಗಿ ವಿಜಯ್ ಅವರು ಭರವಸೆ ನೀಡಿದ್ದಾರೆ. ಇದರ ಜೊತೆಗೆ ವರ್ಷಕ್ಕೆ ಆರು ಉಚಿತ ಸಿಲಿಂಡರ್, ತಿಂಗಳಿಗೆ 2500 ರೂಪಾಯಿ ಹಣ. ಮಹಿಳಾ ಸುರಕ್ಷತೆಗಾಗಿ ವಿಶೇಷ ದಳ ಹೀಗೆ ಹಲವು ಭರವಸೆಗಳನ್ನು ಅವರು ನೀಡಿದ್ದಾರೆ. ಇದೆಲ್ಲವನ್ನೂ ಈಡೇರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version