CBSE 12th Results 2026: ಸಿಬಿಎಸ್‌ಇ 12ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ; ಡಿಜಿಲಾಕರ್‌ನಲ್ಲಿ ಮಹತ್ವದ ಅಪ್‌ಡೇಟ್! – Kannada News | CBSE 12th Results 2026: DigiLocker Update, Expected Date and Pass Criteria

CBSE 12ನೇ ತರಗತಿ ಫಲಿತಾಂಶImage Credit source: Ai generated

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) 2026ರ ಸಾಲಿನ 12ನೇ ತರಗತಿಯ ಬೋರ್ಡ್ ಪರೀಕ್ಷಾ ಫಲಿತಾಂಶಗಳನ್ನು ಪ್ರಕಟಿಸಲು ಸಕಲ ಸಿದ್ಧತೆ ನಡೆಸುತ್ತಿದೆ. ಈ ಕುರಿತಾದ ಮಹತ್ವದ ಸೂಚನೆಯು ಡಿಜಿಲಾಕರ್ (DigiLocker) ಪೋರ್ಟಲ್‌ನಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದು, “ಶೀಘ್ರದಲ್ಲೇ ಬರಲಿದೆ” (Coming Soon) ಎಂದು ತೋರಿಸುತ್ತಿದೆ. ಮಂಡಳಿಯು ಅಧಿಕೃತ ದಿನಾಂಕವನ್ನು ಇನ್ನೂ ಘೋಷಿಸದಿದ್ದರೂ, ಕಳೆದ ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ ಮೇ 12 ಅಥವಾ 13ರಂದು ಫಲಿತಾಂಶ ಹೊರಬರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಫಲಿತಾಂಶ ವೀಕ್ಷಿಸುವುದು ಹೇಗೆ?

ಫಲಿತಾಂಶಗಳು ಅಧಿಕೃತವಾಗಿ ಬಿಡುಗಡೆಯಾದ ತಕ್ಷಣ, ವಿದ್ಯಾರ್ಥಿಗಳು ಈ ಕೆಳಗಿನ ವೆಬ್‌ಸೈಟ್‌ಗಳ ಮೂಲಕ ತಮ್ಮ ಅಂಕಗಳನ್ನು ಪರಿಶೀಲಿಸಬಹುದು:

ಅಷ್ಟೇ ಅಲ್ಲದೆ, ಡಿಜಿಲಾಕರ್ ಮೂಲಕ ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಅಂಕಪಟ್ಟಿ (Marksheet) ಮತ್ತು ಪ್ರಮಾಣಪತ್ರದ ಮೂಲ ಪ್ರತಿಯನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಉತ್ತೀರ್ಣರಾಗಲು ಬೇಕಾದ ಕನಿಷ್ಠ ಅಂಕಗಳು:

CBSE ನಿಯಮಗಳ ಪ್ರಕಾರ, 12ನೇ ತರಗತಿಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಸಿದ್ಧಾಂತ (Theory) ಮತ್ತು ಪ್ರಾಯೋಗಿಕ (Practical) ಪರೀಕ್ಷೆಗಳೆರಡರಲ್ಲೂ ಕನಿಷ್ಠ ಶೇಕಡಾ 33ರಷ್ಟು ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ವಿದ್ಯಾರ್ಥಿಯು ಯಾವುದೇ ವಿಷಯದಲ್ಲಿ ಈ ನಿಗದಿತ ಅಂಕಗಳನ್ನು ಪಡೆಯಲು ವಿಫಲವಾದರೆ, ಅವರನ್ನು ‘ಅನುತ್ತೀರ್ಣ’ ಎಂದು ಪರಿಗಣಿಸಲಾಗುತ್ತದೆ.

ಅನುತ್ತೀರ್ಣರಾದವರಿಗೆ ಎರಡನೇ ಅವಕಾಶ:

ಒಂದು ವೇಳೆ ವಿದ್ಯಾರ್ಥಿಗಳು ಕನಿಷ್ಠ ಅಂಕಗಳನ್ನು ಪಡೆಯಲು ವಿಫಲವಾದರೆ ಚಿಂತಿಸುವ ಅಗತ್ಯವಿಲ್ಲ. ಮಂಡಳಿಯು ಅಂತಹ ವಿದ್ಯಾರ್ಥಿಗಳಿಗೆ ತಮ್ಮ ಫಲಿತಾಂಶವನ್ನು ಸುಧಾರಿಸಿಕೊಳ್ಳಲು ‘ಕಂಪಾರ್ಟ್‌ಮೆಂಟ್ ಪರೀಕ್ಷೆ’ (Compartment Exam) ಬರೆಯುವ ಎರಡನೇ ಅವಕಾಶವನ್ನು ನೀಡುತ್ತದೆ. ಇದರ ಮೂಲಕ ವಿದ್ಯಾರ್ಥಿಗಳು ಮರುಪರೀಕ್ಷೆ ಬರೆದು ಅದೇ ವರ್ಷ ಉತ್ತೀರ್ಣರಾಗಬಹುದು.

ಶಿಕ್ಷಣಕ್ಕೆಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅನಾರೋಗ್ಯದಿಂದ ಸಚಿವ ಡಿ. ಸುಧಾಕರ್ ವಿಧಿವಶ: ಚಿತ್ರದುರ್ಗದಲ್ಲಿ ನಾಳೆ ಸಾರ್ವಜನಿಕ ರಜೆ; ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ – Kannada News | Minister D. Sudhakar Passes Away Due to Illness: Public Holiday in Chitradurga Tomorrow

ರಾಜ್ಯಾದ್ಯಂತ 3 ದಿನಗಳ ಕಾಲ ಶೋಕಾಚರಣೆಯನ್ನೂ ಆಚರಿಸುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು, ನಾಳೆ ಸಂಜೆ 4 ಗಂಟೆಗೆ ಡಿ.ಸುಧಾಕರ್ ಅಂತ್ಯಕ್ರಿಯೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್​​ ನಾಯಕ ಸುರ್ಜೇವಾಲ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿರಲಿದ್ದಾರೆ.

Source link

ರಾಹುಲ್ ಗಾಂಧಿ ಮಾಡಿದ ಸಾಲು ಸಾಲು ತಪ್ಪುಗಳು… ಅಸ್ಸಾಂ, ಆಂಧ್ರದಂತೆ ತಮಿಳುನಾಡನ್ನೂ ಕಾಂಗ್ರೆಸ್ ಕಳೆದುಕೊಂಡಿತಾ? – Kannada News | Congress Blunder: Vijay’s Entry & Rahul Gandhi’s Missed Political Opportunities

ರಾಹುಲ್ ಗಾಂಧಿ ಜೊತೆ ತಮಿಳುನಾಡು ಸಿಎಂ ವಿಜಯ್Image Credit source: PTI

ಚೆನ್ನೈ, ಮೇ 10: ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷ (TVK) ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) ಅತಿದೊಡ್ಡ ಪಕ್ಷವಾಗಿ ಹೊಮ್ಮಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಬೆಂಬಲ ಪ್ರಕಟಿಸಲು ಹೆಚ್ಚು ತಡ ಮಾಡಲಿಲ್ಲ. ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಲೆಕ್ಕಿಸದೆ ಟಿವಿಕೆಗೆ ಕಾಂಗ್ರೆಸ್ ಬೆಂಬಲ ಘೋಷಿಸಿತು. ರಾಹುಲ್ ಗಾಂಧಿ ಈ ಹಿಂದೆ ಮಾಡಿದ ತಪ್ಪನ್ನು ಪುನರಾವರ್ತಿಸಬಾರದು ಎಂದು ನಿರ್ಧರಿಸಿದಂತಿತ್ತು ಈ ಬೆಳವಣಿಗೆ.

ರಾಹುಲ್ ಗಾಂಧಿ 2009ರಲ್ಲಿ ಆ ತಪ್ಪು ಮಾಡಿರದಿದ್ದಿದ್ದರೆ?

ರಾಹುಲ್ ಗಾಂಧಿ 2009ರಲ್ಲಿ ವಿಜಯ್ ವಿಚಾರದಲ್ಲಿ ತಪ್ಪು ನಿರ್ಧಾರ ಮಾಡಿದ್ದು ಇವತ್ತು ಅದು ದುಬಾರಿ ಎನಿಸಿದೆ. 17 ವರ್ಷದ ಹಿಂದೆ ವಿಜಯ್ ಅವರು ಕಾಂಗ್ರೆಸ್ ಪಕ್ಷ ಸೇರಲು ಬಯಸಿದ್ದರು. ಯಾವುದೇ ಹುದ್ದೆ ಅಥವಾ ಟಿಕೆಟ್ ಬೇಡಿಕೆ ಮುಂದಿಡದೆ ಕೇವಲ ಕಾಂಗ್ರೆಸ್ ಪಕ್ಷದ ಸದಸ್ಯನಾಗುವುದಾಗಿ ವಿಜಯ್ ಅವರು ಕೇಳಿಕೊಂಡಿದ್ದರು. ಆದರೆ, ಅಂದು ರಾಹುಲ್ ಗಾಂಧಿ ಈ ಮನವಿಗೆ ಸೂಕ್ತವಾಗಿ ಸ್ಪಂದಿಸಲಿಲ್ಲ.

ಇದನ್ನೂ ಓದಿ: ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ಜೋಸೆಫ್​​ ವಿಜಯ್​​

ವಿಜಯ್ ಅವರಿಗೆ ಕಾಂಗ್ರೆಸ್ ಸೇರಲು ರಾಹುಲ್ ನಿರಾಕರಿಸಲಿಲ್ಲ. ಆದರೆ, ಯುವ ಕಾಂಗ್ರೆಸ್ ಚುನಾವಣೆಗಳಲ್ಲಿ ಸ್ಪರ್ಧಿಸಬೇಕೆಂದು ವಿಜಯ್​ಗೆ ರಾಹುಲ್ ಗಾಂಧಿ ಸಲಹೆ ನೀಡಿದ್ದರು. ಕಾಂಗ್ರೆಸ್​ನ ವಿದ್ಯಾರ್ಥಿ ಘಟಕವಾದ ಎನ್​ಎಸ್​ಯುಐನ ಅಂದಿನ ಮುಖ್ಯಸ್ಥ ಹೀಬಿ ಈಡನ್ ಸೇರಿದಂತೆ ಕೆಲ ರಾಷ್ಟ್ರೀಯ ಪದಾಧಿಕಾರಿಗಳನ್ನು ವಿಜಯ್ ಭೇಟಿ ಕೂಡ ಮಾಡಿದ್ದರು. ಆದರೆ, ವಿಜಯ್ ಅದೇಕೋ ಕಾಂಗ್ರೆಸ್ ಸೇರಲು ಹಿಂದೇಟು ಹಾಕಿದ್ದರು.

ವಿಜಯ್ ಅದಾಗಲೇ ಜನಪ್ರಿಯತೆಯ ಉತ್ತುಂಗದಲ್ಲೇ ಇದ್ದರು. ರಾಹುಲ್ ಗಾಂಧಿ ಅಂದೇ ವಿಜಯ್ ಅವರನ್ನು ಮುಕ್ತವಾಗಿ ಬರಮಾಡಿಕೊಂಡಿದ್ದರೆ ಇವತ್ತು ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತೆ ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತಿದ್ದಿರಬಹುದು.

ಅಸ್ಸಾಂ ಮತ್ತು ಆಂಧ್ರದಲ್ಲೂ ಕಾಂಗ್ರೆಸ್ ತಪ್ಪು ಮಾಡಿತ್ತು…

ಅಸ್ಸಾಮ್ ಸಿಎಂ ಹಿಮಂತ ಬಿಸ್ವ ಶರ್ಮಾ ಅವರು ಸದ್ಯ ಬಿಜೆಪಿಯ ಬಲಿಷ್ಠ ಸಿಎಂಗಳಲ್ಲಿ ಒಬ್ಬರೆನಿಸಿದ್ದಾರೆ. ಆದರೆ ಈ ಹಿಂದೆ ಇವರು ಕಾಂಗ್ರೆಸ್​ನಲ್ಲಿದ್ದು ಅಲ್ಲಿಂದ ಬಿಜೆಪಿಗೆ ಬಂದವರು. ಕಾಂಗ್ರೆಸ್​ನಲ್ಲಿ ಸರಿಯಾದ ಸ್ಥಾನಮಾನ ಸಿಗದ ಕಾರಣ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ರಾಹುಲ್ ಗಾಂಧಿ ಆಗ ಹಿಮಂತರ ಬದಲು ತರುಣ್ ಗೊಗೋಯ್ ಅವರಿಗೆ ಮಣೆ ಹಾಕಿದರು. ಹಿಮಂತ ಬಿಸ್ವ ಸರ್ಮಾ ಅಂದು ಕಾಂಗ್ರೆಸ್​ನಲ್ಲೇ ಇರುತ್ತಿದ್ದರೆ ಇವತ್ತು ಅಸ್ಸಾಮ್ ಕೂಡ ಕೈ ಕೋಟೆಯಾಗುತ್ತಿದ್ದಿರಬಹುದು.

ಇದನ್ನೂ ಓದಿ: ತಮಿಳುನಾಡು ಸಾಲದ ಬಗ್ಗೆ ಆರೋಪಿಸಿದ್ದ ಮುಖ್ಯಮಂತ್ರಿ ವಿಜಯ್​​ ಮಾತಿಗೆ ಮಾಜಿ ಸಿಎಂ ಸ್ಟಾಲಿನ್​​ ಆಕ್ರೋಶ

ಆಂಧ್ರದಲ್ಲಿ ಜಗನ್ ವಿಚಾರದಲ್ಲಿ ರಾಹುಲ್ ತಪ್ಪು…

ಅಖಂಡ ಆಂಧ್ರ ಇದ್ದಾಗ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಅವರು ಸಿಎಂ ಆಗಿದ್ದರು. ಅವರು ಕಾಂಗ್ರೆಸ್ ಕಟ್ಟಾಳು. ಅವರು ಅಪಘಾತದಲ್ಲಿ ಮೃತಪಟ್ಟಾಗ ಅವರ ಮಗ ಜಗನ್ ಮೋಹನ್ ರೆಡ್ಡಿ ಅವರು ಮುಖ್ಯಮಂತ್ರಿಯಾಗಲು ಬಯಸಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಇದಕ್ಕೆ ಒಪ್ಪಲಿಲ್ಲ. ವರ್ಷಗಳ ನಂತರ ಜಗನ್ ಅವರು ತಮ್ಮದೇ ಪಕ್ಷ ಸ್ಥಾಪಿಸಿ, ನಂತರ ಚುನಾವಣೆಯಲ್ಲಿ ಗೆದ್ದು ಸಿಎಂ ಕೂಡ ಆದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಿನಿಮಾ ರಂಗದಿಂದ ಸಿಎಂ ಗದ್ದುಗೆಗೆ ಏರಿದ ಸಾಧಕರು ಇವರು – Kannada News | Here is the list of movie stars who became CM

ಎಂ ಕರುಣಾನಿಧಿ ಸಹ ತಮಿಳು ಚಿತ್ರರಂಗದಿಂದಲೇ ಬಂದವರು. ಹಲವಾರು ಸಿನಿಮಾಗಳಿಗೆ ಕತೆ, ಚಿತ್ರಕತೆ, ಹಾಡುಗಳನ್ನು ಕರುಣಾನಿಧಿ ಬರೆದಿದ್ದಾರೆ. ಅಣ್ಣಾದೊರೈ ಅವರ ಬಳಿಕ ಸಿಎಂ ಆದ ಇವರು ಆರು ವರ್ಷಕ್ಕೂ ಹೆಚ್ಚು ಸಮಯ ಸಿಎಂ ಸ್ಥಾನದಲ್ಲಿದ್ದು ಮಾತ್ರವಲ್ಲದೆ ಆ ನಂತರವು ಕೆಲವು ಬಾರಿ ಸಿಎಂ ಆಗಿ ಆಡಳಿತ ನಡೆಸಿದರು.

Source link

ವಿಜಯ್ ಪ್ರಮಾಣವಚನ ನೋಡಲು ಬರಲಿಲ್ಲ ಪತ್ನಿ, ಮಕ್ಕಳು; ಮಿಂಚಿದ್ದು ಮಾತ್ರ ತ್ರಿಶಾ – Kannada News | Absence of Vijay wife Sangeetha and children from swearing in ceremony sparks debate

ನಟ ದಳಪತಿ ವಿಜಯ್ (Vijay) ಅವರು ರಾಜಕಾರಣಿಯಾಗಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಭಾನುವಾರ (ಮೇ 10) ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅವರು ಅಧಿಕಾರ ಸ್ವೀಕರಿಸಿದರು. ಈ ಸಂಭ್ರಮದ ಕ್ಷಣದಲ್ಲಿ ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್ ಮತ್ತು ತಾಯಿ ಶೋಭಾ ಚಂದ್ರಶೇಖರ್ ಅವರು ಮುಂದಿನ ಸಾಲಿನಲ್ಲಿ ಕುಳಿತು ಮಗನ ಸಾಧನೆಯನ್ನು ಕಂಡು ಹೆಮ್ಮೆಪಟ್ಟರು. ಆಪ್ತ ಗೆಳತಿ ತ್ರಿಶಾ ಕೃಷ್ಣನ್ ಕೂಡ ಈ ಕ್ಷಣಕ್ಕೆ ಸಾಕ್ಷಿ ಆದರು. ಆದರೆ, ಇಡೀ ಸಮಾರಂಭದಲ್ಲಿ ವಿಜಯ್ ಪತ್ನಿ ಸಂಗೀತಾ (Vijay wife Sangeetha) ಮತ್ತು ಮಕ್ಕಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ, ಪುತ್ರ ಜೇಸನ್ ಸಂಜಯ್ ಮತ್ತು ಪುತ್ರಿ ದಿವ್ಯಾ ಸಾಶಾ ಈ ಮಹತ್ವದ ಕಾರ್ಯಕ್ರಮಕ್ಕೆ ಬರದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ‘ಇಂತಹ ಐತಿಹಾಸಿಕ ಕ್ಷಣದಲ್ಲಿ ವಿಜಯ್ ಅವರ ಕುಟುಂಬ ಜೊತೆಗಿರಬೇಕಿತ್ತು. ಪತ್ನಿ ಬರದಿದ್ದರೂ ಪರವಾಗಿಲ್ಲ, ಮಕ್ಕಳನ್ನಾದರೂ ಆಹ್ವಾನಿಸಬೇಕಿತ್ತು’ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಸಂಗೀತಾ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ವಿಜಯ್ ಅವರ ಜೀವನದಲ್ಲಿ ಮತ್ತೊಬ್ಬ ನಟಿಯ ಪ್ರವೇಶವಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬೆನ್ನಲ್ಲೇ, ವಿಜಯ್ ಅವರ ಆಪ್ತ ಸ್ನೇಹಿತೆ ಎನ್ನಲಾದ ನಟಿ ತ್ರಿಶಾ ಕೃಷ್ಣನ್ ಅವರು ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿರುವುದು ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಇದು ಅಭಿಮಾನಿಗಳ ವಲಯದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣ ಆಗಿದೆ.

‘ಒಬ್ಬ ಅಭಿಮಾನಿಯಾಗಿ ನನಗೆ ಇದು ಪರ್ಸನಲ್ ಆಗಿ ನೋವುಂಟು ಮಾಡಿದೆ. ವಿಜಯ್ ಅವರ ವೈಯಕ್ತಿಕ ಜೀವನ ಏನೇ ಇರಲಿ, ಮಕ್ಕಳಾದರೂ ಅವರ ಯಶಸ್ಸಿನ ಭಾಗವಾಗಬೇಕಿತ್ತು’ ಎಂದು ಅಭಿಮಾನಿಯೊಬ್ಬರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ವಿಜಯ್ ಬೆಂಬಲಕ್ಕೆ ನಿಂತಿದ್ದು, ‘ಅವರು ಪ್ರಬುದ್ಧ ವ್ಯಕ್ತಿಗಳು. ಅವರ ನಿರ್ಧಾರ ಅವರಿಗೆ ಬಿಟ್ಟಿದ್ದು. ನಮಗೆ ಬೇಕಿರುವುದು ಒಬ್ಬ ಒಳ್ಳೆಯ ಮುಖ್ಯಮಂತ್ರಿ ಅಷ್ಟೇ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ವಿಜಯ್ ಪ್ರಮಾಣವಚನ ಸಮಾರಂಭಕ್ಕೆ ಬಂದು ಮೊದಲ ಸಾಲಿನಲ್ಲೇ ಕುಳಿತ ತ್ರಿಶಾ

ಒಟ್ಟಾರೆಯಾಗಿ, ರಾಜಕೀಯವಾಗಿ ವಿಜಯ್ ಅವರಿಗೆ ಇದು ದೊಡ್ಡ ಗೆಲುವಾಗಿದ್ದರೂ, ಕುಟುಂಬದ ಈ ಅಂತರವು ಅವರ ಅಭಿಮಾನಿಗಳಲ್ಲಿ ಸಣ್ಣದೊಂದು ನೋವು ಉಳಿಸಿದೆ. ಶೀಘ್ರದಲ್ಲೇ ವಿಜಯ್ ಅವರ ವಿಚ್ಛೇದನದ ಅರ್ಜಿ ವಿಚಾರಣೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Flipkart Sasa Lele Sale 2026: ಐಫೋನ್ 17 ಮೇಲೆ ಇದುವರೆಗಿನ ಅತಿದೊಡ್ಡ ಬೆಲೆ ಕಡಿತ: ಈ ಆಫರ್ ಮಿಸ್ ಮಾಡ್ಬೇಡಿ – Kannada News | Biggest price cut ever on iPhone 17 in Flipkart Sasa Lele Sale 2026 Don’t miss this offer

ಬೆಂಗಳೂರು (ಮೇ. 10): ಕಳೆದ ವರ್ಷ ಆಪಲ್ (Apple) ಕಂಪನಿ ಬಿಡುಗಡೆ ಮಾಡಿದ ಐಫೋನ್ 17 ಇದುವರೆಗಿನ ಅತಿದೊಡ್ಡ ಬೆಲೆ ಕಡಿತವನ್ನು ಪಡೆದಿದೆ. ಮೇ 9 ಕ್ಕೆ ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿರುವ ಸಾಸಾ ಲೇಲೆ ಸೇಲ್​ನಲ್ಲಿ ಐಫೋನ್ 17 ಮೇಲೆ ಬಂಪರ್ ರಿಯಾಯಿತಿ ಘೋಷಿಸಲಾಗಿದೆ. ಈ ಐಫೋನ್ 256GB, 512GB ಮತ್ತು 1TB ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಫ್ಲಿಪ್‌ಕಾರ್ಟ್‌ನ ಮಾರಾಟದಲ್ಲಿ ಈ ಫೋನ್ ಅನ್ನು ಅದರ ಬಿಡುಗಡೆ ಬೆಲೆಗಿಂತ ₹11,000 ಕಡಿಮೆ ಬೆಲೆಗೆ ಖರೀದಿಸಬಹುದು.

ಐಫೋನ್ 17 ಬೆಲೆ ಇಳಿಕೆ

ಆಪಲ್ ಈ ಐಫೋನ್ ಅನ್ನು 82,900 ರೂ. ಗಳ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿತು. ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಪ್ರಾರಂಭವಾಗುವ ಮೊದಲು, ಈ ಐಫೋನ್ ಅನ್ನು 71,900 ರೂ. ಗಳ ಆರಂಭಿಕ ಬೆಲೆಗೆ ಪಟ್ಟಿ ಮಾಡಲಾಗಿತ್ತು. ಇದಲ್ಲದೆ, ಐಫೋನ್ ಏರ್‌ನಲ್ಲೂ ದೊಡ್ಡ ಬೆಲೆ ಕಡಿತವಾಗಿದೆ. 1,19,900 ರೂ. ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾದ ಈ ಐಫೋನ್ ಅನ್ನು ಫ್ಲಿಪ್‌ಕಾರ್ಟ್ ಮಾರಾಟದಲ್ಲಿ 99,900 ರೂ. ಗಳ ಆರಂಭಿಕ ಬೆಲೆಗೆ ಪಟ್ಟಿ ಮಾಡಲಾಗಿದೆ. ಈ ಐಫೋನ್ ಅನ್ನು 20,000 ರೂ. ಗಳ ದೊಡ್ಡ ಬೆಲೆ ಕಡಿತಗೊಳಿಸಲಾಗಿದೆ.

ಐಫೋನ್ 17 ವೈಶಿಷ್ಟ್ಯಗಳು

ಈ ಆಪಲ್ ಐಫೋನ್ 6.1-ಇಂಚಿನ ಪ್ರೊಮೋಷನ್ ಸೂಪರ್ ಎಕ್ಸ್‌ಡಿಆರ್ ಡಿಸ್ಪ್ಲೇಯೊಂದಿಗೆ ಬರುತ್ತದೆ. 120Hz ರಿಫ್ರೆಶ್ ದರವನ್ನು ಬೆಂಬಲಿಸುವ OLED ಡಿಸ್​ಪ್ಲೇ ಪ್ಯಾನೆಲ್ ಅನ್ನು ಹೊಂದಿದೆ. ಈ ಐಫೋನ್ ಆಪಲ್‌ನ ಇತ್ತೀಚಿನ A19 ಬಯೋನಿಕ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು ಆಪಲ್ ಇಂಟೆಲಿಜೆನ್ಸ್ ಅಥವಾ AI ಅನ್ನು ಸಹ ಒಳಗೊಂಡಿದೆ. ಡ್ಯುಯಲ್ 5G ಸಿಮ್ ಕಾರ್ಡ್‌ಗಳನ್ನು ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್-ಸಿ ಸೇರಿವೆ.

Amazon Summer Sale: ಅಮೆಜಾನ್​ನಲ್ಲಿ ಶುರುವಾಯಿತು ಸಮ್ಮರ್ ಸೇಲ್: ಸ್ಮಾರ್ಟ್‌ಫೋನ್‌ಗಳಿಂದ ಟಿವಿಗಳವರೆಗೆ ಎಲ್ಲವೂ ಅಗ್ಗ

ಐಫೋನ್ 17 ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ 48MP ಪ್ರಾಥಮಿಕ ಕ್ಯಾಮೆರಾ ಮತ್ತು 48MP ದ್ವಿತೀಯ ಕ್ಯಾಮೆರಾ ಸೇರಿವೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ, ಈ ಐಫೋನ್ 18MP ಸೆಂಟರ್ ಸ್ಟೇಜ್ ಕ್ಯಾಮೆರಾವನ್ನು ಹೊಂದಿದೆ. 40W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಹ ಹೊಂದಿದೆ. iOS 26 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಅಮೆಜಾನ್​ ಸಮ್ಮರ್ ಸೇಲ್​ನಲ್ಲಿ ಸ್ಯಾಮ್‌ಸಂಗ್ ಫೋನ್‌ಗಳು ಅಗ್ಗ

ಇತ್ತೀಚೆಗೆ ಬಿಡುಗಡೆಯಾದ ಗ್ಯಾಲಕ್ಸಿ ಎಸ್ 26 ಅಲ್ಟ್ರಾ ಮತ್ತು ಕಳೆದ ವರ್ಷ ಬಿಡುಗಡೆಯಾದ ಗ್ಯಾಲಕ್ಸಿ ಎಸ್ 25 ಅಲ್ಟ್ರಾ ಸೇರಿದಂತೆ ಸ್ಯಾಮ್‌ಸಂಗ್ ತನ್ನ ಹಲವಾರು ಫೋನ್‌ಗಳ ಬೆಲೆಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಈ ದಕ್ಷಿಣ ಕೊರಿಯಾದ ಫೋನ್‌ಗಳು ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನ ಗ್ರೇಟ್ ಸಮ್ಮರ್ ಸೇಲ್​ನಲ್ಲಿ ಬಹಳ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಗ್ಯಾಲಕ್ಸಿ ಎಸ್ 26 ಅಲ್ಟ್ರಾವನ್ನು ಅದರ ಬಿಡುಗಡೆ ಬೆಲೆಯಲ್ಲಿ ₹9,000 ವರೆಗೆ ರಿಯಾಯಿತಿಗೆ ಖರೀದಿಸಬಹುದು. ಸ್ಯಾಮ್‌ಸಂಗ್ ಈ ಫ್ಲ್ಯಾಗ್‌ಶಿಪ್ ಫೋನ್ ಅನ್ನು ₹1,39,999 ಆರಂಭಿಕ ಬೆಲೆಗೆ ಬಿಡುಗಡೆ ಮಾಡಿತ್ತು. ಈ ಸ್ಯಾಮ್‌ಸಂಗ್ ಫೋನ್ ಅನ್ನು ಅಮೆಜಾನ್ ಮಾರಾಟದ ಸಮಯದಲ್ಲಿ ₹1,30,999 ಆರಂಭಿಕ ಬೆಲೆಗೆ ಖರೀದಿಸಬಹುದು. ಫೋನ್ ಖರೀದಿಯೊಂದಿಗೆ ಹೆಚ್ಚುವರಿ ಬ್ಯಾಂಕ್ ಮತ್ತು ಕೂಪನ್ ರಿಯಾಯಿತಿಗಳು ಸಹ ಲಭ್ಯವಿದೆ.

ಹಾಗೆಯೆ ಕಳೆದ ವರ್ಷ ಬಿಡುಗಡೆಯಾದ ಗ್ಯಾಲಕ್ಸಿ S25 ಆಲ್ಟ್ರಾ ಅದರ ಬಿಡುಗಡೆ ಬೆಲೆಗಿಂತ ₹35,000 ಕಡಿಮೆ ಬೆಲೆಗೆ ಲಭ್ಯವಿದೆ. ದಕ್ಷಿಣ ಕೊರಿಯಾದ ಕಂಪನಿಯು ಈ ಫೋನ್ ಅನ್ನು ₹129,999 ಆರಂಭಿಕ ಬೆಲೆಗೆ ಬಿಡುಗಡೆ ಮಾಡಿತು. ಅಮೆಜಾನ್‌ನಲ್ಲಿ ನಡೆಯುತ್ತಿರುವ ಮಾರಾಟದಲ್ಲಿ, ಈ ಫೋನ್ ಕೇವಲ ₹94,999 ಗೆ ಲಭ್ಯವಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ಸಾಲದ ಬಗ್ಗೆ ಆರೋಪಿಸಿದ್ದ ಮುಖ್ಯಮಂತ್ರಿ ವಿಜಯ್​​ ಮಾತಿಗೆ ಮಾಜಿ ಸಿಎಂ ಸ್ಟಾಲಿನ್​​ ಆಕ್ರೋಶ – Kannada News | Tamil nadu debt row cm vijays claims ignite stalins fury on state finances

ವಿಜಯ್​​ ಮಾತಿಗೆ ಸ್ಟಾಲಿನ್​​ ಆಕ್ರೋಶ

ಚೆನ್ನೈ, ಮೇ 10: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸಿ. ಜೋಸೇಫ್​​ ವಿಜಯ್​​ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಹಿಂದಿನ ಸರ್ಕಾರದ ವಿರುದ್ಧ ಸಾಲದ ಆರೋಪ ಮಾಡಿದ್ದರು. ರಾಜ್ಯವು 10 ಲಕ್ಷ ಕೋಟಿಗೂ ಹೆಚ್ಚು ಸಾಲದಲ್ಲಿದ್ದು, ಖಜಾನೆ ಸಂಪೂರ್ಣ ಬರಿದಾಗಿದೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡಿರುವುದಾಗಿ ತಿಳಿಸಿದ್ದರು. ಆದರೆ ಈ ವಿಚಾರವೀಗ ಮಾಜಿ ಸಿಎಂ, ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್​​ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಎಕ್ಸ್​​ ಪೋಸ್ಟ್​​ ಮಾಡಿ ಕಿಡಿ ಕಾರಿರುವ ಅವರು, ಜನರನ್ನು ತಪ್ಪು ದಾರಿಗೆಳೆಯಲು ಯತ್ನಿಸಬೇಡಿ ಎಂದಿದ್ದಾರೆ.

ಎಂ.ಕೆ. ಸ್ಟಾಲಿನ್​​ ಹೇಳಿದ್ದೇನು?

ತಮಿಳುನಾಡಿನ ನೂತನ ಮುಖ್ಯಮಂತ್ರಿ, ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್​​ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ. ಅಧಿಕಾರ ಸ್ವೀಕರಿಸಿದ ತಕ್ಷಣವೇ ನೀವು ಸಹಿ ಹಾಕಿರುವ ಘೋಷಣೆಗಳನ್ನೂ ಸ್ವಾಗತಿಸುತ್ತೇನೆ. ಆದರೆ ಸರ್ಕಾರದ ಬಳಿ ಹಣವೇ ಇಲ್ಲ ಎಂದು ಆರಂಭದಲ್ಲೇ ಹೇಳಬೇಡಿ. ಹಣ ಇದೆ. ಜನರಿಗೆ ಅದನ್ನು ತಲುಪಿಸುವ ಮನಸ್ಸು ಮತ್ತು ಆಡಳಿತ ನಡೆಸುವ ಸಾಮರ್ಥ್ಯ ಬೇಕಷ್ಟೇ. ಕೋವಿಡ್, ಪ್ರವಾಹ ಸೇರಿದಂತೆ ಅನೇಕ ಸಂಕಷ್ಟಗಳು ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ನಿರ್ಲಕ್ಷ್ಯದ ನಡುವೆಯೂ ನಾವು ಐದು ವರ್ಷಗಳ ಕಾಲ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನೀವು ನಿಮ್ಮ ಮೊದಲ ಭಾಷಣದಲ್ಲೇ “ಹಿಂದಿನ ಸರ್ಕಾರ ₹10 ಲಕ್ಷ ಕೋಟಿ ಸಾಲ ಬಿಟ್ಟು ಖಜಾನೆ ಖಾಲಿ ಮಾಡಿದೆ” ಎಂದು ಆರೋಪಿಸಿದ್ದೀರಿ. ಆದರೆ ತಮಿಳುನಾಡಿನ ಸಾಲದ ಮಟ್ಟ ಅನುಮತಿಸಲಾದ ಮಿತಿಯೊಳಗೇ ಇದೆ ಎಂದು ಸ್ಟಾಲಿನ್​​ ತಿಳಿಸಿದ್ದಾರೆ.

ಇದನ್ನೂ ಓದಿ: ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ಜೋಸೆಫ್​​ ವಿಜಯ್​​

ಫೆಬ್ರವರಿ ಬಜೆಟ್‌ನಲ್ಲೇ ರಾಜ್ಯದ ಆರ್ಥಿಕ ಸ್ಥಿತಿಯನ್ನು ನಾವು ಸ್ಪಷ್ಟವಾಗಿ ವಿವರಿಸಿದ್ದೇವೆ. ಅದು ನಿಮಗೆ ತಿಳಿದಿರಲಿಲ್ಲವೇ? ಅದಾದ ಬಳಿಕವೇ ನೀವು ಜನರಿಗೆ ಹಲವು ಭರವಸೆಗಳನ್ನು ನೀಡಿದ್ದೀರಲ್ಲಾ? ಹೀಗಾಗಿ ಈಗ ಜನರನ್ನು ತಪ್ಪು ದಾರಿಗೆಳೆಯಲು ಯತ್ನಿಸಬೇಡಿ. ಪ್ರಾಯೋಗಿಕವಾಗಿ ಸಾಧ್ಯವಿರುವ ಭರವಸೆಗಳನ್ನಷ್ಟೇ ನೀಡುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದ ನೀವು ಈಗಷ್ಟೇ ಆಡಳಿತಕ್ಕೆ ಕಾಲಿಟ್ಟಿದ್ದೀರಿ. ಜನರಿಗೆ ನೀಡಿದ ಭರವಸೆಗಳನ್ನು ಹೇಗೆ ಈಡೇರಿಸಬೇಕು ಎಂಬ ಆಡಳಿತದ ಸೂಕ್ಷ್ಮತೆಗಳನ್ನು ನಮ್ಮಂತೆಯೇ ನೀವು ಕೂಡ ಬೇಗನೆ ಅರಿತುಕೊಳ್ಳುವಿರಿ ಎಂಬ ನಂಬಿಕೆ ಇದೆ. ನಿಮ್ಮ ಮೇಲೆ ವಿಶ್ವಾಸವಿಟ್ಟು ಮತಹಾಕಿದ ಜನರಂತೆ ನಾನೂ ಅದನ್ನೇ ನಿರೀಕ್ಷಿಸುತ್ತೇನೆ.ನಿಮ್ಮ ಆಡಳಿತದಲ್ಲಿ ತಮಿಳುನಾಡಿನ ಅಭಿವೃದ್ಧಿಯ ಪಯಣ ಮುಂದುವರಿಯಲಿ ಎಂಬ ಶುಭಾಶಯಗಳು ಎಂದು ಸ್ಟಾಲಿನ್​​ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ಜೋಸೆಫ್​​ ವಿಜಯ್​​ – Kannada News | CM Vijay Highlights Tamil Nadu’s Current Debt in His First Speech

ಚೆನ್ನೈ, ಮೇ 10: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ನಟ ದಳಪತಿ ವಿಜಯ್​​ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ತಮ್ಮ ಮೊದಲ ಭಾಷಣದಲ್ಲೇ ಅಬ್ಬರಿಸಿದ ‘ಜನನಾಯಗನ್’ ಹಿಂದಿನ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ತಮಿಳುನಾಡಿನ ಪ್ರಸ್ತುತ ಆರ್ಥಿಕ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಜಯ್​​, ರಾಜ್ಯವು 10 ಲಕ್ಷ ಕೋಟಿಗೂ ಹೆಚ್ಚು ಸಾಲದಲ್ಲಿದ್ದು, ಖಜಾನೆ ಸಂಪೂರ್ಣ ಬರಿದಾಗಿದೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಪಾರದರ್ಶಕ ಆಡಳಿತವನ್ನು ನೀಡುವ ಗುರಿ ಹೊಂದಿದ್ದು, ಯಾವುದೇ ಮುಚ್ಚುಮರೆಯಿಲ್ಲದೆ, ಸಾರ್ವಜನಿಕವಾಗಿ ಆಡಳಿತ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ರವಿಶಂಕರ್ ಗುರೂಜಿ ಮಾತಿಗೆ ಪ್ರಧಾನಿ ಮೋದಿಗೂ ನಗು! – Kannada News | Bengaluru: PM Modi Joins Sri Sri Ravi Shankar’s 70th B’day, Hails India’s Growth

ಬೆಂಗಳೂರು, ಮೇ10: ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಇಂದು ನಡೆದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನಾಚರಣೆ ಹಾಗೂ ಸಂಸ್ಥೆಯ 45ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ, ಗುರೂಜಿಯವರು ಕಳೆದ ದಶಕದಲ್ಲಿ ಭಾರತ ಕಂಡ ಅಭೂತಪೂರ್ವ ಬದಲಾವಣೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ದೇಶವು ಬಡತನ ಮತ್ತು ಅಸ್ತವ್ಯಸ್ತತೆಯಿಂದ ಹೊರಬಂದು ಸ್ವಚ್ಛ ಭಾರತದ ಮೂಲಕ ಹೊಸ ಗುರುತು ಪಡೆದಿದೆ ಎಂದು ಬಣ್ಣಿಸಿದ ಅವರು, ರೆಡ್ ಟೆರರ್ ಅಂತ್ಯವಾಗಿ ಭದ್ರತೆ ಸುಧಾರಿಸಿರುವುದು ಹಾಗೂ ಭಾರತವು ಜಾಗತಿಕ ಆರ್ಥಿಕತೆಯಲ್ಲಿ 14ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಏರಿರುವುದು ಮೋದಿಯವರ ನೇತೃತ್ವದ ದೊಡ್ಡ ಸಾಧನೆ ಎಂದು ಸ್ಮರಿಸಿದರು. ಇದೇ ವೇಳೆ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಕರ್ನಾಟಕದ ಶಿಲೆಗಳ ಬಳಕೆಯನ್ನು ಹೆಮ್ಮೆಯಿಂದ ಉಲ್ಲೇಖಿಸುತ್ತಾ, ಯೋಗ ಮತ್ತು ಆಯುರ್ವೇದಕ್ಕೆ ಜಾಗತಿಕ ಮಾನ್ಯತೆ ಸಿಕ್ಕಿದ್ದನ್ನು ಅವರು ಕೊಂಡಾಡಿದಾಗ ಪ್ರಧಾನಿಯವರ ಮುಖದಲ್ಲಿಯೂ ಮಂದಹಾಸ ಮೂಡಿತು.

ಇದನ್ನೂ ಓದಿ: ವಿಜಯ್ ಪ್ರಮಾಣವಚನ: ನಗುನಗುತ್ತಾ ಆಗಮಿಸಿದ ನಟಿ ತ್ರಿಶಾ ವಿಡಿಯೋ ವೈರಲ್

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ: 

Source link

ಮಹಾ ಎಡವಟ್ಟು… ಪಾಕ್ ತಂಡದಲ್ಲಿ ಟೀಮ್ ಇಂಡಿಯಾ ಆಟಗಾರರು! – Kannada News | Indian XI Shown on Pakistan Scorecard

ಬಾಂಗ್ಲಾದೇಶ್ ಮತ್ತು ಪಾಕಿಸ್ತಾನ್ ತಂಡಗಳ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯವು ಮೈದಾನದ ಆಟಕ್ಕಿಂತ ಹೆಚ್ಚಾಗಿ ಬ್ರಾಡ್‌ಕಾಸ್ಟರ್‌ಗಳ ಬೃಹತ್ ಪ್ರಮಾದದಿಂದಾಗಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಪಂದ್ಯದ ಆರಂಭಿಕ ಹಂತದಲ್ಲಿ ಪಾಕಿಸ್ತಾನದ ಆಡುವ ಬಳಗವನ್ನು (Playing XI) ಪ್ರದರ್ಶಿಸುವ ಸಂದರ್ಭದಲ್ಲಿ, ತಾಂತ್ರಿಕ ದೋಷದಿಂದಾಗಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಪಟ್ಟಿ ಪರದೆಯ ಮೇಲೆ ಮೂಡಿಬಂದಿದೆ.

ಪಾಕಿಸ್ತಾನದ ಟೆಸ್ಟ್ ಇತಿಹಾಸದ ಅಂಕಿಅಂಶಗಳ ಗ್ರಾಫಿಕ್ಸ್ ಅಡಿಯಲ್ಲಿ ರೋಹಿತ್ ಶರ್ಮಾ, ಶುಭ್​ಮನ್ ಗಿಲ್ ಮತ್ತು ರಿಂಕು ಸಿಂಗ್ ಅವರಂತಹ ಭಾರತೀಯ ಆಟಗಾರರ ಹೆಸರುಗಳು ರಾರಾಜಿಸಿದ್ದು, ಕ್ರಿಕೆಟ್ ವಲಯದಲ್ಲಿ ಭಾರಿ ಅಚ್ಚರಿಗೆ ಕಾರಣವಾಯಿತು. ಕ್ರೀಡಾ ಪ್ರಸಾರ ಇತಿಹಾಸದಲ್ಲೇ ಇಂತಹ ದೊಡ್ಡ ಮಟ್ಟದ ಪ್ಲೇಯಿಂಗ್ ಇಲೆವೆನ್ ಎಡವಟ್ಟು ಸಂಭವಿಸಿರುವುದು ಅಪರೂಪವಾಗಿದ್ದು, ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ…

ಏನಿದು ಘಟನೆ?

ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ಪಂದ್ಯ ಆರಂಭಕ್ಕೂ ಮುನ್ನ, ಅಂದರೆ ಟಾಸ್ ಪ್ರಕ್ರಿಯೆ ಮುಗಿದ ನಂತರ ಬ್ರಾಡ್‌ಕಾಸ್ಟರ್‌ಗಳು ಪಾಕಿಸ್ತಾನ್ ತಂಡದ ಪ್ಲೇಯಿಂಗ್ ಇಲೆವೆನ್ ಪಟ್ಟಿಯನ್ನು ಪರದೆಯ ಮೇಲೆ ತೋರಿಸಬೇಕಿತ್ತು. ಆದರೆ, ಇಲ್ಲಿ ದೊಡ್ಡ ಎಡವಟ್ಟು ಸಂಭವಿಸಿತು. “ಪಾಕಿಸ್ತಾನ ಟೆಸ್ಟ್ ಕೆರಿಯರ್” ಎಂಬ ಶೀರ್ಷಿಕೆಯ ಅಡಿಯಲ್ಲಿ ಪಾಕ್ ಆಟಗಾರರ ಬದಲು ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಹೆಸರುಗಳು ಮೂಡಿಬಂದವು!

ಪರದೆಯ ಮೇಲೆ ಕಂಡ ಭಾರತೀಯ ಆಟಗಾರರು:

ರೋಹಿತ್ ಶರ್ಮಾ ನಾಯಕತ್ವದ ಭಾರತದ ಟಿ20 ಮತ್ತು ಏಕದಿನ ಮಾದರಿಯ ಆಟಗಾರರ ಪಟ್ಟಿ ಅಲ್ಲಿ ಕಾಣಿಸಿಕೊಂಡಿತು.

  • ರೋಹಿತ್ ಶರ್ಮಾ (ನಾಯಕ)
  •  ಶುಭ್​​ಮನ್ ಗೊಲ್
  • ತಿಲಕ್ ವರ್ಮಾ
  • ಶಿವಂ ದುಬೆ
  • ಜಿತೇಶ್ ಶರ್ಮಾ
  •  ರಿಂಕು ಸಿಂಗ್
  • ಅಕ್ಷರ್ ಪಟೇಲ್
  • ವಾಷಿಂಗ್ಟನ್ ಸುಂದರ್
  • ರವಿ ಬಿಷ್ಣೋಯ್
  • ಅರ್ಷದೀಪ್ ಸಿಂಗ್
  • ಮುಖೇಶ್ ಕುಮಾರ್.

ಈ ಹನ್ನೊಂದು ಭಾರತೀಯ ಆಟಗಾರರ ಹೆಸರುಗಳು ಸ್ಕೋರ್‌ಕಾರ್ಡ್‌ನಲ್ಲಿ ರಾರಾಜಿಸಿದವು. ತಕ್ಷಣವೇ ಬ್ರಾಡ್​ಕಾಸ್ಟರ್ ತಾಂತ್ರಿಕ ದೋಷವನ್ನು ಸರಿಪಡಿಸಿಕೊಂಡರೂ, ಅಷ್ಟರಲ್ಲಾಗಲೇ ಈ ಸ್ಕೋರ್​ ಕಾರ್ಡ್​ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಇದೀಗ ಈ ವೈರಲ್ ಫೋಟೋ ನೋಡಿ,  “ಪಾಕಿಸ್ತಾನ್ ತಂಡದಲ್ಲಿ ಭಾರತದ ಆಟಗಾರರೇ?” ಎಂದು ನೆಟ್ಟಿಗರು ಪ್ರಶ್ನಿಸುತ್ತಾ ಟ್ರೋಲ್ ಮಾಡುತ್ತಿದ್ದಾರೆ. “ಬ್ರಾಡ್‌ಕಾಸ್ಟರ್‌ಗಳಿಗೆ ಟೀಮ್ ಇಂಡಿಯಾದ ಮೇಲಿರುವ ಪ್ರೀತಿಯನ್ನು ಮರೆಯಲು ಸಾಧ್ಯವಾಗುತ್ತಿಲ್ಲ” ಎಂದು ಅನೇಕರು ಕಿಚಾಯಿಸಿದ್ದಾರೆ.

Source link

Exit mobile version