ಚಲಿಸುತ್ತಿದ್ದಾಗಲೇ ಟೈರ್ ಬ್ಲಾಸ್ಟ್: ಗದ್ದೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್; ತಪ್ಪಿದ ಅನಾಹುತ – Kannada News | KSRTC Bus Tyre Bursts in Koppal: Over 30 Passengers Escape Unhurt

ಕೊಪ್ಪಳ, ಆಗಸ್ಟ್​ 09: ಜಿಲ್ಲೆಯ ಕೊಪ್ಪಳ ತಾಲೂಕಿನ ಚಿಕ್ಕಬಗನಾಳ ಗ್ರಾಮದ ಬಳಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ನ ಟೈರ್ ಏಕಾಏಕಿ ಸ್ಫೋಟವಾಗಿದ್ದು, ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗದ್ದೆಗೆ ನುಗ್ಗಿದ ಘಟನೆ ನಡೆದಿದೆ. ಬಸ್‌ನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಪ್ಪಳದಿಂದ ಕಕೇಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಟೈರ್ ಸ್ಫೋಟಗೊಳ್ಳುತ್ತಿದ್ದಂತೆಯೇ ಚಾಲಕನ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಟ್ರಂಪ್ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್; ಎಲ್ಲಾ ಸೇನಾ ರಜೆಗಳು ರದ್ದು; ಇರಾನ್ ಮೇಲೆ ನಡೆಯುತ್ತಾ ದೊಡ್ಡ ದಾಳಿ? – Kannada News | Israel rejects Trump’s 15 point Gaza peace plan, cancels all military leaves

ಟೆಲ್ ಅವಿವ್, ಆಗಸ್ಟ್ 9: ಗಾಜಾದಲ್ಲಿ ಶಾಂತಿ ನೆಲಸುವಂತೆ ಮಾಡಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೂಪಿಸಿರುವ 15 ಅಂಶಗಳ ಯೋಜನೆಯನ್ನು (Trump’s Gaza peace plan) ಇಸ್ರೇಲ್ ತಿರಸ್ಕರಿಸಿದೆ. ಹಮಾಸ್ ಸಂಪೂರ್ಣ ಶಸ್ತ್ರ ತ್ಯಜಿಸುವವರೆಗೂ ಗಾಜಾದಿಂದ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದು ಇಸ್ರೇಲ್ ಹೇಳಿದೆ. ಹಾಗೆಯೇ, ತನ್ನ ಸೈನಿಕರ ಎಲ್ಲಾ ರಜೆಗಳನ್ನು ರದ್ದುಗೊಳಿಸಿ ತೀವ್ರ ಕಟ್ಟೆಚ್ಚರ ವಹಿಸಿದೆ. ಇದರೊಂದಿಗೆ ಪಶ್ಚಿಮ ಏಷ್ಯಾದಲ್ಲಿ (ಮಧ್ಯಪ್ರಾಚ್ಯ) ಮತ್ತೊಮ್ಮೆ ಯುದ್ಧದ ಭೀತಿ ಎದುರಾಗಿದೆ. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಹಾಗೂ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಇರಾನ್ ಮೇಲಿನ ಹೊಸ ದಾಳಿಗೆ ಯೋಜನೆ ರೂಪಿಸುತ್ತಿದ್ದಾರೆ ಎಂಬ ವರದಿಗಳು ಬಂದಿವೆ.

ಸೈನಿಕರ ರಜೆ ರದ್ದು: ಇಸ್ರೇಲ್ ರಕ್ಷಣಾ ಪಡೆಗಳು (IDF) ತಮ್ಮ ಸೈನಿಕರು ಹಾಗೂ ಅಧಿಕಾರಿಗಳ ಎಲ್ಲಾ ರಜೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿವೆ. ಯಾವುದೇ ಕ್ಷಣದಲ್ಲಾದರೂ ಎದುರಾಗಬಹುದಾದ ತುರ್ತು ಪರಿಸ್ಥಿತಿಗೆ ಸಿದ್ಧವಾಗಿರಲು ಸೇನೆಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಮೊಜ್ತಬಾ ಖಮೇನಿ ಮೃತಪಟ್ಟರೆ ಯಾರಾಗಲಿದ್ದಾರೆ ಇರಾನ್ ಸುಪ್ರೀಂ ನಾಯಕ?

ನೆತನ್ಯಾಹು ಎಚ್ಚರಿಕೆ: ಅಮೆರಿಕವು ಇರಾನ್ ಜೊತೆ ರಾಜತಾಂತ್ರಿಕ ಸಂಧಾನಕ್ಕೆ ಯತ್ನಿಸುತ್ತಿದ್ದರೂ, ಇರಾನ್‌ನ ಪರಮಾಣು ಯೋಜನೆಗಳು ಹಾಗೂ ಸಶಸ್ತ್ರ ಗುಂಪುಗಳ ಚಟುವಟಿಕೆಗಳು ತಮ್ಮ ದೇಶದ ಭದ್ರತೆಗೆ ಬೆದರಿಕೆಯಾಗಿವೆ ಎಂದು ಇಸ್ರೇಲ್ ಭಾವಿಸಿದೆ. ಇರಾನ್ ಮೇಲಿನ ತೀವ್ರ ದಾಳಿಗೆ ಇಸ್ರೇಲ್ ಸಿದ್ಧವಾಗಿದೆ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಜೊತೆಗಿನ ಮಾತುಕತೆ ಮತ್ತು ಭಿನ್ನಾಭಿಪ್ರಾಯ

ಅಮೆರಿಕವು ವಲಯದಲ್ಲಿ ಶಾಂತಿ ಸ್ಥಾಪಿಸಲು ಮತ್ತು ಸಂಘರ್ಷ ಶಮನಗೊಳಿಸಲು ಪ್ರಯತ್ನಿಸುತ್ತಿದ್ದರೂ, ಇಸ್ರೇಲ್ ನಾಯಕತ್ವವು ಇರಾನ್‌ಗೆ ಕಟ್ಟುನಿಟ್ಟಿನ ನಿಯಮ ವಿಧಿಸಬೇಕು ಎಂದು ಪಟ್ಟು ಹಿಡಿದಿದೆ.

ಇದನ್ನೂ ಓದಿ: ರಷ್ಯಾದ ದಾಳಿಗೆ ಕೈವ್​​ನಲ್ಲಿ ಮಗು ಸೇರಿ ನಾಲ್ವರು ಬಲಿ

ಇರಾನ್ ಹಾಗೂ ಪ್ರಾಕ್ಸಿ ಗುಂಪುಗಳ ಭೀತಿ: ಇಸ್ರೇಲಿ ಪಡೆಗಳು ಕೇವಲ ಇರಾನ್ ಮಾತ್ರವಲ್ಲದೆ, ಲೆಬನಾನ್‌ನ ಹಿಜ್ಬುಲ್ಲಾ ಸೇರಿದಂತೆ ಇತರ ಪ್ರಾದೇಶಿಕ ಸಂಘಟನೆಗಳಿಂದ ಎದುರಾಗಬಹುದಾದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಎದುರಿಸಲು ವಾಯು ರಕ್ಷಣಾ ವ್ಯವಸ್ಥೆಯನ್ನು (Air Defence Systems) ಸಜ್ಜುಗೊಳಿಸಿವೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Sleeping While Travelling: ಪ್ರಯಾಣ ಮಾಡುವಾಗ ಸಿಕ್ಕಾಪಟ್ಟೆ ನಿದ್ರೆ ಬರಲು ಕಾರಣವೇನು ಗೊತ್ತೇ? – Kannada News | Do you know what causes you to fall asleep while traveling?

ಮಧ್ಯಾಹ್ನ ಊಟ ಮಾಡಿದ ನಂತರ ಕಣ್ಣು ತೂಕಡಿಸುವಂತೆ, ಬಸ್ಸು, ಕಾರ್‌, ರೈಲಿನಲ್ಲಿ ಎಲ್ಲಿಗಾದರೂ ಪ್ರಯಾಣಿಸುವಾಗ (traveling) ಹೆಚ್ಚಿನವರಿಗೆ ನಿದ್ರೆ ಬಂದಂತಾಗುತ್ತದೆ. ಕೆಲವರಂತೂ ವಾಹನ ಹೊರಟ 10-15 ನಿಮಿಷದೊಳಗೆ ನಿದ್ರೆಗೆ ಜಾರಿ ಬಿಡುತ್ತಾರೆ. ನಿಮಗೂ ಕೂಡ ಇದೇ ರೀತಿ ಪ್ರಯಾಣಿಸುವಾಗ ನಿದ್ರೆ ಬರುತ್ತಾ? ಇದಕ್ಕೆ ಮುಖ್ಯ ಕಾರಣ ವಾಹನದ ಸೌಮ್ಯ ಕಂಪನ, ಎಂಜಿನ್‌ನ ನಿರಂತರ ಶಬ್ದ, ಆರಾಮದಾಯಕ ಆಸನ ಮತ್ತು ಮೆದುಳಿನ ಮೇಲೆ  ಒತ್ತಡ ಬೀರದಿರುವುದು. ಈ ಎಲ್ಲಾ ಅಂಶಗಳು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತವೆ, ಇದರಿಂದಾಗಿ ಹೆಚ್ಚಿನವರು ಪ್ರಯಾಣಿಸುವಾಗ ಬಹು ಬೇಗನೆ ನಿದ್ರೆಗೆ ಜಾರುತ್ತಾರೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.

ಪ್ರಯಾಣ ಮಾಡುವಾಗ ನಿದ್ದೆ ಬರೋದೇಕೆ?

ವಾಹನ ಅಲುಗಾಟ: ಪ್ರಯಾಣಿಸು ಸಂದರ್ಭದಲ್ಲಿ ವಾಹನ ಸಣ್ಣದಾಗಿ ಅಲುಗಾಡುತ್ತಿರುತ್ತದೆ. ಈ ನಿರಂತರ ಅಲುಗಾಟ ಮಗುವನ್ನು ತೊಟ್ಟಿಲಿನಲ್ಲಿ ತೂಗಿದಂತಾಗುತ್ತದೆ, ಮಗುವನ್ನು ಕಾಲಿನಲ್ಲಿ ಕೂರಿಸಿ ಅಲುಗಾಡಿಸುತ್ತಾ ನಿದ್ದೆ ಮಾಡಿಸಿದಂತಾಗುತ್ತದೆ. ಪ್ರಯಾಣಿಸುವಾಗ ಆಗುವ ಈ ಅಲುಗಾಟದ ಸಂವೇದನೆಯಿಂದಾಗಿ ಹೆಚ್ಚಿನವರಿಗೆ ಪ್ರಯಾಣಿಸುವಾಗ ನಿದ್ರೆ ಬರೋದು.

ನೈಸರ್ಗಿಕ ಬೆಳಕಿನ ಕೊರತೆ: ಕಾರು ಅಥವಾ ರೈಲಿನ ಸುತ್ತುವರಿದ ಪರಿಸರದಲ್ಲಿ, ನೈಸರ್ಗಿಕ ಬೆಳಕು ಸೀಮಿತವಾಗಿರುತ್ತದೆ ಮತ್ತು ನಾವು ವಾಹನದ ಆಂತರಿಕ ಬೆಳಕಿನ ಮೇಲೆ ಮಾತ್ರ ಅವಲಂಬಿತರಾಗುತ್ತೇವೆ. ಇದು ಆಗಾಗ್ಗೆ ನಮ್ಮ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ ಮತ್ತು ನಮ್ಮ ಮೆದುಳು ಮಲಗುವ ಸಮಯ ಎಂದು ಭಾವಿಸುತ್ತದೆ, ಇದು ನಮಗೆ ನಿದ್ರೆಯ ಅನುಭವವನ್ನು ನೀಡುತ್ತದೆ.

ಏಕತಾನತೆ: ಬಸ್‌, ಕಾರಿನಲ್ಲಿ ಪ್ರಯಾಣಿಸುವಾಗ ಒಂದೇ ಕಡೆ ಹೆಚ್ಚು ಹೊತ್ತು ಕುಳಿತಿರುತ್ತೇವೆ ಮತ್ತು ಯಾವುದೇ ರೀತಿಯ ದೈಹಿಕ ಚಟುವಟಿಕೆ ಇರೋದಿಲ್ಲ, ಈ ಚಟುವಟಿಕೆಗಳ ಕೊರತೆ, ಏಕತಾನತೆ ಮೆದುಳನ್ನು ನಿದ್ರೆಯ ಸ್ಥಿತಿಗೆ ತಳ್ಳುತ್ತದೆ. ಯಾವುದೇ ನಿರ್ದಿಷ್ಟ ಕೆಲಸದ ಮೇಲೆ ಗಮನಹರಿಸಬೇಕಾಗಿಲ್ಲದಿದ್ದರೆ, ದೇಹ ಮತ್ತು ಮನಸ್ಸು ಶಾಂತವಾಗುತ್ತದೆ. ಪರಿಣಾಮವಾಗಿ, ಪ್ರಯಾಣ ಮಾಡುವಾಗ ನಿದ್ರೆ ಬರುವುದು ಸಹಜ.

ಸೌಮ್ಯ ಶಬ್ಧ: ಪ್ರಯಾಣಿಸುವಾಗ ಕಾರು, ಬಸ್ ಅಥವಾ ರೈಲಿನ ಎಂಜಿನ್ ಮತ್ತು ಟೈರ್‌ಗಳ ನಿರಂತರ ಮೃದುವಾದ ಶಬ್ದವು ಮನಸ್ಸನ್ನು ಶಾಂತಗೊಳಿಸುತ್ತದೆ. ಇದರಿಂದ ವಿಶ್ರಾಂತಿಯ ಭಾವನೆ ಹೆಚ್ಚಾಗುತ್ತದೆ ಮತ್ತು ನಾವು ಸೀದಾ ನಿದ್ರೆಗೆ ಜಾರುತ್ತೇವೆ.

ಆಯಾಸ ಮತ್ತು ನಿದ್ರೆಯ ಕೊರತೆ: ಮನುಷ್ಯನಿಗೆ 7 ರಿಂದ 8 ಗಂಟೆಯ ನಿದ್ರೆ ಅವಶ್ಯಕ. ಆದರೆ ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ ಅಥವಾ ನೀವು ಕೆಲಸ ಮಾಡಿ ದಣಿಸಿದ್ದರೆ, ಪ್ರಯಾಣಿಸುವ ಸಂದರ್ಭದಲ್ಲಿನ ಸುತ್ತಮುತ್ತಲಿನ ಶಾಂತ ನೋಟ, ಸೌಮ್ಯವಾದ ಕಂಪನಗಳು ನಿಮ್ಮನ್ನು ನಿದ್ರೆಗೆ ಜಾರುವಂತೆ ಮಾಡುತ್ತದೆ.

ಇದನ್ನೂ ಓದಿ:  ಬಹುತೇಕ ವಸ್ತುಗಳ ಬೆಲೆ 499, 999 ರೂ. ಏಕಿರುತ್ತವೆ, ಏನಿದು ಮಾರ್ಕೆಟಿಂಗ್ ಗಿಮಿಕ್‌?

ವಿಶ್ರಾಂತಿ ಭಾವನೆ: ಕಾರು, ಬಸ್ ಅಥವಾ ರೈಲು ಸ್ಥಿರವಾದ ವೇಗದಲ್ಲಿ ಚಲಿಸಿದಾಗ, ದೇಹವು ಕ್ರಮೇಣ ಶಾಂತ ಮತ್ತು ವಿಶ್ರಾಂತಿಯನ್ನು ಅನುಭವಿಸಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೇಹದ ಪ್ರಕ್ರಿಯೆಗಳು ಸಕ್ರಿಯಗೊಳ್ಳುತ್ತವೆ, ಇದು ಒತ್ತಡವನ್ನು ಕಡಿಮೆ ಮಾಡಲು ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಮನಸ್ಸು ಶಾಂತವಾಗುತ್ತದೆ ಮತ್ತು ಪ್ರಯಾಣದ ಸಮಯದಲ್ಲಿ ಸುಲಭವಾಗಿ ನಿದ್ರಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಮನಸ್ಥಿತಿಯ ಸುಧಾರಣೆ: ಪ್ರಯಾಣದ ಸಮಯದಲ್ಲಿ, ನೀವು ಕಿಟಕಿಯ ಹೊರಗೆ ವೇಗವಾಗಿ ಹಾದುಹೋಗುವ ರಸ್ತೆಗಳು, ಮರಗಳು, ಹೊಲಗಳು ಅಥವಾ ಕಟ್ಟಡಗಳನ್ನು ನೋಡಿರುತ್ತೇವೆ. ಹೀಗೆ ಪ್ರಕೃತಿಯನ್ನು ನೋಡುತ್ತಾ ಕುಳಿತಾಗ ಒತ್ತಡ ಕಡಿಮೆಯಾಗಿ ಮನಸ್ಸಿನ ಮೇಲಿನ ಹೊರೆ ಕಡಿಮೆಯಾಗಿ, ಮನಸ್ಥಿತಿ ಸುಧಾರಿಸುತ್ತದೆ. ಜೊತೆಗೆ ದೇಹವು ವಿಶ್ರಾಂತಿ ಪಡೆಯುತ್ತದೆ. ಇದು ವೇಗವಾಗಿ ನಿದ್ರೆ ಬರುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಹ್ಯಾಟ್ರಿಕ್ ಸಿಕ್ಸ್ ಬಾರಿಸಿ ತಂಡಕ್ಕೆ ಗೆಲುವು ತಂದ ಸಿರಾಜ್ – Kannada News | Team India Wins Thriller: Mohammed Siraj Smashes Hat trick Sixes vs SL XI

ಕೊಲಂಬೊದ ನಾನ್‌ಡಿಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ XI (India vs Sri Lanka XI) ನಡುವಿನ 3 ದಿನಗಳ ಅಭ್ಯಾಸ ಪಂದ್ಯದ ಕೊನೆಯ ದಿನದ ಕೊನೆಯ ಓವರ್​ನಲ್ಲಿ ಪಂದ್ಯವನ್ನು ಗೆದ್ದಿಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು. ಗೆಲುವಿನ ಶ್ರೀಲಂಕಾ ತಂಡದ ನೀಡಿದ 207 ರನ್​ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಸುಲಭವಾಗಿ ಗುರಿ ಬೆನ್ನಟ್ಟುವಂತೆ ತೋರುತ್ತಿತ್ತು. ಆದರೆ ತಂಡದ ಆಟಗಾರರು ಕ್ರೀಸ್​ನಲ್ಲಿ ಸಮಯ ಕಳೆಯುವ ಸಲುವಾಗಿ ಸಾಕಷ್ಟು ಎಸೆತಗಳನ್ನು ಡಾಟ್ ಮಾಡಿದರು. ಹೀಗಾಗಿ ಪಂದ್ಯ ಕೊನೆಯ ಓವರ್​ವರೆಗೂ ಸಾಗಿತು. ಕೊನೆ ಕೊನೆಗೆ ಟೀಂ ಇಂಡಿಯಾ ಈ ಗುರಿಯನ್ನು ಬೆನ್ನಟ್ಟದೆ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸುವಂತೆ ತೋರುತ್ತಿತ್ತು. ಆದರೆ ದಿನದಾಟದ ಕೊನೆಯ ಓವರ್​ನಲ್ಲಿ ಮೊಹಮ್ಮದ್ ಸಿರಾಜ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು ತಂದರು.

Source link

ವೈರಲ್ ಆಗುತ್ತಿದೆ ಯಶ್ ಬೆತ್ತಲೇ ಸೀನ್​​, ರಣ್​​ಬೀರ್ ಕಪೂರ್ ಜೊತೆ ಹೋಲಿಕೆ ಏಕೆ? – Kannada News | Yash’s Toxic movie nude scene sparks debate comparison to Animal

ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ (Toxic) ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ (ಆಗಸ್ಟ್ 08) ಬಿಡುಗಡೆ ಆಗಿದೆ. ನಾಲ್ಕು ನಿಮಿಷಗಳ ಈ ಟ್ರೈಲರ್ ಹಾಲಿವುಡ್​​ ಲೆವೆಲ್​​ನಲ್ಲಿದೆ. ಈ ಹಿಂದೆ ಬಿಡುಗಡೆ ಆಗಿದ್ದ ‘ಟಾಕ್ಸಿಕ್’ ಸಿನಿಮಾದ ಹಾಡು, ಪ್ರೋಮೊ ಸಖತ್ ರೊಮ್ಯಾಂಟಿಕ್ ಆಗಿ ಹಸಿ-ಬಿಸಿ ದೃಶ್ಯಗಳಿಂದ ಕೂಡಿತ್ತು. ಆದರೆ ನಿನ್ನೆ ಬಿಡುಗಡೆ ಆದ ಟ್ರೈಲರ್ ಆಕ್ಷನ್ ಭರಿತವಾಗಿದೆ. ಜೊತೆಗೆ ಯಶ್ ಅವರ ಹಲವು ಮಾಸ್, ಎಲಿವೇಷನ್ ದೃಶ್ಯಗಳನ್ನು ಒಳಗೊಂಡಿದೆ. ಆದರೆ ಟ್ರೈಲರ್​​ನಲ್ಲಿ ಇದ್ದ ಒಂದು ದೃಶ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆ ಆಗುತ್ತಿದೆ. ಅದುವೇ ಯಶ್ ಅವರ ಬೆತ್ತಲೆ ದೃಶ್ಯ.

ಟ್ರೈಲರ್​​ನಲ್ಲಿ ಬರುವ ಒಂದು ದೃಶ್ಯದಲ್ಲಿ ಯಶ್, ಬೆತ್ತಲೆಯಾಗಿ ನಿಂತಿದ್ದಾರೆ, ಅವರ ಎದುರು ನಟಿ ರುಕ್ಮಿಣಿ ವಸಂತ್ ಇದ್ದಾರೆ. ಯಶ್ ಮೈಮೇಲೆ ಬಟ್ಟೆ ಇಲ್ಲ, ಕೈಯಲ್ಲಿ ಮದ್ಯದ ಬಾಟಲಿ ಹಿಡಿದಿದ್ದಾರೆ. ‘ನಾಗರೀಕತೆಯಿಂದ ಚರ್ಚೆ ನಡೆಯುತ್ತೆ ಅನ್ನೋ ಉದ್ದೇಶದಿಂದ ಬಂದೆ ಎಂದು ರುಕ್ಮಿಣಿ ವಸಂತ್ ಹೇಳಿದರೆ, ‘ನಾನು ನಾಗರೀಕನ ಥರ ಕಾಣ್ತೀನ?’ ಎಂದು ಯಶ್ ಕೇಳುತ್ತಾರೆ. ಯಶ್ ಅವರು ಬೆತ್ತಲೆ ನಿಂತಿರುವ ದೃಶ್ಯದ ಸ್ಕ್ರೀನ್ ಶಾಟ್​​ ತೆಗೆದುಕೊಂಡು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ಸೀನ್​​ನಲ್ಲಿ ಪಾಪ ರುಕ್ಮಿಣಿ ಪಾತ್ರದ ಜೊತೆ ಏನೇನಾಗುತ್ತದೆಯೋ ಎಂದು ಆತಂಕ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು, ‘ನಮ್ಮ ರುಕ್ಮಿಣಿಗೆ ಏನೂ ಮಾಡಬೇಡ ರಾಯ’ ಎಂದಿದ್ದಾರೆ. ಇನ್ನು ಕೆಲವರು ಯಶ್ ಫಿಸೀಕ್ ಅನ್ನು ಕೊಂಡಾಡಿದ್ದಾರೆ. ಇನ್ನು ಕೆಲವರು ರುಕ್ಮಿಣಿ ವಸಂತ್ ಎದುರು ಯಶ್ ಹೀಗೆ ನಿಂತಿದ್ದಾರಾಲ್ಲ ಎಂದು ಬೇಸರ ಸಹ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್​’ನಲ್ಲಿ ಕಡಿಮೆ ಇದ್ದ ತಾರಾ ಸೀನ್​​ಗಳು ಬಳಿಕ ಹೆಚ್ಚಾಗಿದ್ದು ಏಕೆ?

ಇನ್ನು ಕೆಲವರು ಯಶ್ ಅವರ ಬೆತ್ತಲೆ ಚಿತ್ರವನ್ನು, ‘ಅನಿಮಲ್’ ಸಿನಿಮಾನಲ್ಲಿ ರಣ್​ಬೀರ್ ಕಪೂರ್ ಅವರ ಬೆತ್ತಲೆ ಚಿತ್ರಕ್ಕೆ ಹೋಲಿಸಿದ್ದಾರೆ. ‘ಟಾಕ್ಸಿಕ್’ ಟ್ರೈಲರ್ ಸೀನ್ ನೋಡಿದಾಗ ನನಗೆ ‘ಅನಿಮಲ್’ ಸಿನಿಮಾದ ಸೀನ್ ನೆನಪು ಬಂತು ಎಂದಿದ್ದಾರೆ. ಕೆಲವರು ‘ಇದು ‘ಅನಿಮಲ್’ ಸಿನಿಮಾದ ದೃಶ್ಯದ ಕಾಪಿ ಎಂದಿದ್ದಾರೆ. ಆದರೆ ಇನ್ನು ಕೆಲವರು, ‘ಅಸಲಿ ‘ಅನಿಮಲ್’ ಎಂದರೆ ಏನು ಎಂಬುದನ್ನು ಯಶ್ ರಣಬೀರ್‌ಗೆ ತೋರಿಸಿಕೊಡಲಿದ್ದಾರೆ’ ಎಂದು ಬರೆದಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಯಶ್ ಅವರ ಬೆತ್ತಲೆ ದೃಶ್ಯವನ್ನು ಜಾಣತನದಿಂದ ಸೆರೆ ಹಿಡಿಯಲಾಗಿದೆ. ಟ್ರೈಲರ್​​ನಲ್ಲಿ ಕೇವಲ ಒಂದು ಸೆಕೆಂಡ್​​ಗೆ ಈ ದೃಶ್ಯ ಬಂದು ಹೋಗುತ್ತದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈಗ ಅದೇ ದೃಶ್ಯದ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ರಾಯ ಮತ್ತು ಟಿಕೆಟ್ ಹೆಸರಿನ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಗೀತೂ ಮೋಹನ್​​ದಾಸ್ ಸಿನಿಮಾದ ನಿರ್ದೇಶಕಿ. ಸಿನಿಮಾವನ್ನು ಕೆವಿಎನ್ ಹಾಗೂ ಮಾನ್​​ಸ್ಟರ್ ಮೈಂಡ್ಸ್ ನಿರ್ಮಾಣ ಮಾಡಿದೆ. ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನೆಲಮಂಗಲ: ಹೀಗೆ ಹೋಗಿ ಹಾಗೆ​ ಬರುವಷ್ಟರಲ್ಲಿ ಮನೆಯಲ್ಲಿದ್ದ 100 ಗ್ರಾಂ ಚಿನ್ನಾಭರಣ ಮಾಯ! – Kannada News | Gold Theft in Dasapura: Wedding Jewellery Worth 8 Lakh Stolen

ನೆಲಮಂಗಲ, ಆಗಸ್ಟ್​​ 09: ಮನೆಯವರೆಲ್ಲ ಕೆಲಸದ ನಿಮಿತ್ತ ಹೊರಹೋಗಿದ್ದ ಕೇವಲ ಒಂದೇ ಗಂಟೆಯ ಅವಧಿಯಲ್ಲಿ ಖತರ್ನಾಕ್ ಕಳ್ಳನೊಬ್ಬ ಮನೆಯ ಬೀಗ ಮುರಿದು 8 ಲಕ್ಷ ರೂ ಮೌಲ್ಯದ 100 ಗ್ರಾಂ ಚಿನ್ನಾಭರಣ ದೋಚಿ (gold theft) ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ದಾಸರಪುರದಲ್ಲಿ ನಡೆದಿದೆ. ಸದ್ಯ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಬೆಂಗಳೂರು ಉತ್ತರ ತಾಲೂಕಿನ ದಾಸರಪುರ ನಿವಾಸಿಗಳಾದ ಕೃಷ್ಣಪ್ಪ ಹಾಗೂ ಮಂಜಮ್ಮ ದಂಪತಿಯ ಮನೆಯಲ್ಲಿ ಕಳ್ಳತನ ನಡೆದಿದೆ. ಈ ದಂಪತಿಯ ಮಗ ಮೋಹನ್​​ಗೆ ಒಂದು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಮದುವೆಗಾಗಿ ಮಾಡಿಸಿದ್ದ ಸುಮಾರು 100 ಗ್ರಾಂ ತೂಕದ ಚಿನ್ನಾಭರಣಗಳನ್ನು ಮನೆಯ ಬೀರುವಿನಲ್ಲಿಯೇ ಇಡಲಾಗಿತ್ತು. ಘಟನಾ ದಿನದಂದು ತಾಯಿ ಮಂಜಮ್ಮ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳಿದ್ದರೆ, ತಂದೆ ಕೃಷ್ಣಪ್ಪ ಹಾಗೂ ಮಗ ಮೋಹನ್ ತಮ್ಮ ಕೆಲಸದ ನಿಮಿತ್ತ ಹೊರಹೋಗಿದ್ದರು.

ಕೇವಲ ಒಂದು ಗಂಟೆಯಲ್ಲೇ ಕೈಚಳಕ ತೋರಿದ ಖದೀಮ

ಇತ್ತ ಇದೇ ಸಮಯಕ್ಕಾಗಿ ಕಾದುಕುಳಿತಿದ್ದ ಖದೀಮ, ಒಬ್ಬನೇ ಮನೆಗೆ ನುಗ್ಗಿ ಬೀರುವಿನ ಬೀಗ ಒಡೆದು ಅದರಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಆಭರಣಗಳನ್ನು ಕದ್ದು ಎಸ್ಕೇಪ್ ಆಗಿದ್ದಾನೆ. ಕೇವಲ ಒಂದು ಗಂಟೆಯಲ್ಲೇ ಖದೀಮ ತನ್ನ ಕೈಚಳಕ ತೋರಿಸಿದ್ದಾನೆ. ಇನ್ನು ಕಳ್ಳ ಒಡವೆಗಳನ್ನು ದೋಚಿಕೊಂಡು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಳ್ಳನ ಪತ್ತೆಗೆ ಬಲೆ ಬೀಸಿದ ಪೊಲೀಸ್​

ಕೆಲಸ ಮುಗಿಸಿ ಮನೆಗೆ ಬಂದಾಗ ಬೀರು ಒಡೆದಿರುವುದು ಹಾಗೂ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದ್ದು, ಸಂತ್ರಸ್ತ ಕುಟುಂಬಸ್ಥರು ತಕ್ಷಣವೇ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಶಾಪ್​​ ದರೋಡೆಗೆ ಯತ್ನ: ಮಾಲೀಕನ ಮೇಲೆ ಗುಂಡಿನ ದಾಳಿ

ಇನ್ನು ಚಿನ್ನಾಭರಣ ಕಳೆದುಕೊಂಡಿರುವ ಮಾಲೀಕರು ಆದಷ್ಟು ಬೇಗ ಒಡವೆಗಳನ್ನ ಹುಡುಕಿ ಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಚಿವರ ಪಟ್ಟಿ ಬದಲಾಗಿದ್ದು ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಮೊದಲು: ರಾಜಣ್ಣ ಕಿಡಿ – Kannada News | Cabinet Expansion Row: Minister List Change first Time In Congress History Says KN rajanna

ತುಮಕೂರು, (ಆಗಸ್ಟ್ 09): ಡಿಕೆ ಶಿವಕುಮಾರ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮುನ್ನ ಕಾಂಗ್ರೆಸ್​​​​ನಲ್ಲಿ ಉದ್ಭವಿಸಿದ ಕೆಲ ಗೊಂದಲಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೌದು…ಹೈಕಮಾಂಡ್ ನಿಂದ ಬಂದ ಪಟ್ಟಿಯನ್ನು ಬೆಂಗಳೂರಿನಲ್ಲಿ ಬದಲಾವಣೆ ಮಾಡಲಾಗಿತ್ತು. ಎಂಎಲ್​​ಸಿ ಗಾಯತ್ರಿ ಅವರನ್ನು ಹೊರಗಿಡಲಾಯ್ತು. ಇನ್ನು ಪಟ್ಟಿಯಲ್ಲಿ ಮಂಕಾಳ ವೈದ್ಯರನ್ನು ಕೈಬಿಟ್ಟು ಏಕಾಏಕಿ ಎಸ್​​ಎಸ್​​ ಮಲ್ಲಿಕಾರ್ಜುನ ಅವರನ್ನು ಸಚಿವರನ್ನಾಗಿ ಆಯ್ಕೆ ಮಾಡಲಾಯ್ತು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಕೆಎನ್ ರಾಜಣ್ಣ, ಪಟ್ಟಿ ಬದಲಾಗಿದ್ದು ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಮೊದಲು. ಪಟ್ಟಿ ಬದಲಿಸಿದ್ದನ್ನು ಹಿಂದೆಂದೂ ನೋಡಿಲ್ಲ, ಕೇಳಿಯೂ ಇಲ್ಲ ಎಂದಿದ್ದಾರೆ.

ತಮಕೂರಿನಲ್ಲಿ ಮಾತನಾಡಿದ ರಾಜಣ್ಣ, ಸಂಪುಟ ಪುನಾರಚನೆ ವೇಳೆ ಅಲ್ಪಸ್ವಲ್ಪ ಅಸಮಾಧಾನ ಬರುತ್ತೆ. ಯಾವುದೇ ಸರ್ಕಾರವಿದ್ದರೂ ಅಸಮಾಧಾನ ಬಂದೇ ಬರುತ್ತೆ.ಅಸಮಾಧಾನವನ್ನು ನಮ್ಮ ಪಕ್ಷದ ನಾಯಕರು ಬಗೆಹರಿಸುತ್ತಾರೆ. ಅಸಮಾಧಾನದಿಂದ ಪಕ್ಷಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಗಂಭೀರ್, ಗಿಲ್ ತಲೆನೋವ ಶಮನಗೊಳಿಸಿದ ಜೈಸ್ವಾಲ್

Source link

ಜಾರ್ಖಂಡ್ ಪರೀಕ್ಷಾ ಅಕ್ರಮಗಳ ವಿರುದ್ಧ ಹೋರಾಟ; ಸರ್ಕಾರ-ವಿದ್ಯಾರ್ಥಿಗಳ ಮಾತುಕತೆ 2ನೇ ಸುತ್ತಿಗೆ; ವಿದ್ಯಾರ್ಥಿಗಳಿಗೆ ಸರ್ಕಾರದ ಭರವಸೆಗಳು – Kannada News | Protest against exam irregularities, students and Jharkhand govt talks enter second round

ವಿದ್ಯಾರ್ಥಿ ಮುಖಂಡ ದೇವೇಂದ್ರನಾಥ್ ಮಹತೋ ಉಪವಾಸ ಸತ್ಯಾಗ್ರಹImage Credit source: PTI

ನವದೆಹಲಿ, ಆಗಸ್ಟ್ 9: ಜಾರ್ಖಂಡ್ ಪಬ್ಲಿಕ್ ಸರ್ವಿಸ್ ಕಮಿಷನ್ (JPSC) ಮತ್ತು ಜಾರ್ಖಂಡ್ ಸ್ಟಾಫ್ ಸೆಲೆಕ್ಷನ್ ಕಮಿಷನ್ (JSSC) ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳನ್ನು ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಮಸ್ಯೆ ಬಗೆಹರಿಸಲು ಜಾರ್ಖಂಡ್ ಸರ್ಕಾರವು ವಿದ್ಯಾರ್ಥಿಗಳ ನಿಯೋಗದೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸಿದೆ.

ವಿದ್ಯಾರ್ಥಿಗಳ ಬೇಡಿಕೆ ಮತ್ತು ಸರ್ಕಾರದ ಸ್ಪಂದನೆ

JPSC ಮತ್ತು JSSC ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಿಬಿಐ (CBI) ತನಿಖೆಯಾಗಬೇಕು ಮತ್ತು ಇತ್ತೀಚೆಗೆ ನಡೆದ 14ನೇ ಜೆಪಿಎಸ್‌ಸಿ ಸಿವಿಲ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಸರ್ಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಕೆಲ ಪ್ರಮುಖ ಭರವಸೆಗಳನ್ನು ವಿದ್ಯಾರ್ಥಿಗಳಿಗೆ ನೀಡಿದೆ:

  1. ಸಿಐಡಿ ತನಿಖೆ 90 ದಿನದೊಳಗೆ ಪೂರ್ಣಗೊಳ್ಳುತ್ತದೆ.
  2. ಅಕ್ರಮಗಳ ಬಗ್ಗೆ ಇಡಿಯಿಂದ ಪರಿಶೀಲನೆ
  3. 14ನೇ ಜೆಪಿಎಸ್​ಸಿ ಪರೀಕ್ಷೆ ಹಾಗೂ 2023ರಿಂದ 2025ರವರೆಗಿನ ಬ್ಯಾಕ್​ಲಾಗ್ ಪರೀಕ್ಷೆಗಳನ್ನು ರದ್ದುಗೊಳಿಸಲಾಗುವುದು.
  4. ಟಿಡಿಪಿಎಲ್ ಮೂಲಕ ನಡೆಸಲಾದ ಎಲ್ಲಾ ಪರೀಕ್ಷೆಗಳನ್ನೂ ತನಿಖೆಗೆ ಒಳಪಡಿಸಲಾಗುವುದು
  5. ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಎಲ್ಲಾ ಸುಧಾರಣೆಗಳನ್ನು ಅಂತಿಮಗೊಳಿಸಲಾಗುವುದು.
  6. ಹಿರಿಯ ಸರ್ಕಾರಿ ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರನ್ನೊಳಗೊಂಡ ಸಮಿತಿಯನ್ನು ಸುಧಾರಣಾ ಪ್ರಕ್ರಿಯೆಯಲ್ಲಿ ಬಳಸಲಾಗುವುದು.
  7. ಸಿಬಿಐ ತನಿಖೆ ನಡೆಸಲಾಗುವುದಿಲ್ಲ.

ಇದನ್ನೂ ಓದಿ: ಹೈದರಾಬಾದ್: ನಲ್ಸಾರ್ ಕಾನೂನು ವಿವಿ ಘಟಿಕೋತ್ಸವ ಕಾರ್ಯಕ್ರಮಕ್ಕೆ ಸಿಜೆಐ ಮುಖ್ಯ ಅತಿಥಿಯಾಗಲು ವಿದ್ಯಾರ್ಥಿಗಳಿಂದ ವಿರೋಧ?

ಸರ್ಕಾರದ ಪ್ರತಿಕ್ರಿಯೆ ಮತ್ತು ಕ್ರಮಗಳು: ಸಚಿವರಾದ ಸುದಿವ್ಯ ಕುಮಾರ್ ಮತ್ತು ದೀಪಿಕಾ ಪಾಂಡೆ ಸಿಂಗ್ ಅವರನ್ನೊಳಗೊಂಡ ನಿಯೋಗವು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದೆ. ಆದರೆ, ಈವರೆಗಿನ ಮಾತುಕತೆಗಳು ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ನೇಮಕಾತಿ ಪರೀಕ್ಷೆಗಳಲ್ಲಿ ಪಾರದರ್ಶಕತೆ ತರುವ ಬಗ್ಗೆ ಸಲಹೆಗಳನ್ನು ನೀಡಲು ಸರ್ಕಾರವು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಇಮೇಲ್ ಐಡಿ (Email ID) ಬಿಡುಗಡೆ ಮಾಡಿದೆ.

ಭಯಪಡದೆ ಬನ್ನಿ ಎಂದ ಸಿಎಂ: ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಯಾವ ರಾಜಕೀಯ ಪಕ್ಷದ ನೆರವು ಬಯಸಬಾರದು. ನಿರ್ಭೀತಿಯಿಂದ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಮುಂದೆ ಬರಬೇಕು ಎಂದು ಝಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಹೇಳಿದ್ದಾರೆ.

ಇದನ್ನೂ ಓದಿ: 90ರ ದಶಕದ ಕರಾಳ ಕಾಶ್ಮೀರಿ ಉಗ್ರ ಇತಿಹಾಸ ಮರುಕಳಿಸುತ್ತಿದೆಯೇ? ಪಂಡಿತರಿಗೆ ಶುರುವಾಗಿವೆ ಉಗ್ರ ಬೆದರಿಕೆಗಳು

ಹದಗೆಟ್ಟ ವಿದ್ಯಾರ್ಥಿ ನಾಯಕನ ಆರೋಗ್ಯ: ಆಗಸ್ಟ್ 3 ರಿಂದ ಜೈಪಾಲ್ ಸಿಂಗ್ ಕ್ರೀಡಾಂಗಣದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಮುಖ ವಿದ್ಯಾರ್ಥಿ ನಾಯಕ ದೇವೇಂದ್ರ ನಾಥ್ ಮಹತೋ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಮುಂದಿನ ಹೆಜ್ಜೆ: ಭಾನುವಾರ ಮಧ್ಯಾಹ್ನ ಮತ್ತೊಂದು ಸುತ್ತಿನ ನಿರ್ಣಾಯಕ ಮಾತುಕತೆಗೆ ಸರ್ಕಾರ ಕರೆ ನೀಡಿದೆ. ಒಂದು ವೇಳೆ ತಮ್ಮ ಬೇಡಿಕೆಗಳು ಈಡೇರದಿದ್ದರೆ ಆಗಸ್ಟ್ 10 ರಂದು ಜಾರ್ಖಂಡ್ ವಿಧಾನಸಭೆಗೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:03 pm, Sun, 9 August 26

Source link

Vastu Tips: ಮನೆಯಲ್ಲಿ ಮನಿ ಪ್ಲಾಂಟ್ ನೆಡುವಾಗ ಈ ವಾಸ್ತು ತಪ್ಪು ಎಂದಿಗೂ ಮಾಡಬೇಡಿ! – Kannada News | Vastu Tips for Money Plant: Common Mistakes to Avoid at Home

ಸಾಮಾನ್ಯವಾಗಿ ಜನರು ತಮ್ಮ ಮನೆಗಳ ಸೌಂದರ್ಯವನ್ನು ಹೆಚ್ಚಿಸಲು ಹಾಗೂ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಅತ್ಯಂತ ಉತ್ಸಾಹದಿಂದ ಮನಿ ಪ್ಲಾಂಟ್ (Money Plant) ನೆಡುತ್ತಾರೆ. ಆದರೆ, ಈ ಗಿಡವನ್ನು ಮನೆಯಲ್ಲಿ ಇಡುವಾಗ ಕೆಲವು ಪ್ರಮುಖ ವಾಸ್ತು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂಬುದು ಅನೇಕರಿಗೆ ತಿಳಿದಿರುವುದಿಲ್ಲ. ತಿಳಿದೋ ತಿಳಿಯದೆಯೋ ಮಾಡುವ ಸಣ್ಣ ತಪ್ಪುಗಳು ಮನೆಯ ಸಂಪತ್ತು ಮತ್ತು ಶಾಂತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಮನಿ ಪ್ಲಾಂಟ್ ಇಡುವಾಗ ವಹಿಸಬೇಕಾದ ಪ್ರಮುಖ ವಾಸ್ತು ಎಚ್ಚರಿಕೆಗಳು ಇಲ್ಲಿವೆ.

ಮನಿ ಪ್ಲಾಂಟ್ ಬಳ್ಳಿ ಎಂದಿಗೂ ನೆಲ ಮುಟ್ಟಬಾರದು:

ವಾಸ್ತು ಶಾಸ್ತ್ರದ ನಂಬಿಕೆಗಳ ಪ್ರಕಾರ, ಮನಿ ಪ್ಲಾಂಟ್‌ನ ಬಳ್ಳಿಯನ್ನು ಎಂದಿಗೂ ನೆಲದ ಮೇಲೆ ಹರಡಲು ಬಿಡಬಾರದು. ಅದರ ಎಲೆಗಳು ಮತ್ತು ಬಳ್ಳಿಗಳು ಯಾವಾಗಲೂ ಮೇಲ್ಮುಖವಾಗಿ (ಮೇಲಕ್ಕೆ) ಬೆಳೆಯುವಂತೆ ದಾರ ಅಥವಾ ಕೋಲಿನ ಸಹಾಯದಿಂದ ಆಧಾರ ನೀಡಬೇಕು. ಬಳ್ಳಿ ಕೆಳಗೆ ಹರಡಿದ್ದರೆ ಅಥವಾ ನೆಲವನ್ನು ಮುಟ್ಟುತ್ತಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಮನೆಯ ಸಂತೋಷ, ಅಭಿವೃದ್ಧಿ ಹಾಗೂ ಆರ್ಥಿಕ ಸಮೃದ್ಧಿಗೆ ಅಡ್ಡಿಯುಂಟುಮಾಡುತ್ತದೆ.

ಗಿಡ ಒಣಗುವುದು ಅಥವಾ ಎಲೆ ಹಳದಿ ಬಣ್ಣಕ್ಕೆ ತಿರುಗುವುದು ಅಶುಭವೇ?

ಮನೆಯಲ್ಲಿ ನೆಟ್ಟಿರುವ ಹಸಿರಾದ ಮನಿ ಪ್ಲಾಂಟ್ ಇದ್ದಕ್ಕಿದ್ದಂತೆ ಒಣಗಲು ಪ್ರಾರಂಭಿಸಿದರೆ ಅಥವಾ ಅದರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದರೆ ಅದನ್ನು ಜ್ಯೋತಿಷ್ಯದಲ್ಲಿ ಅಶುಭ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಮನಿ ಪ್ಲಾಂಟ್ ಒಣಗುವುದು ಮನೆಯಲ್ಲಿ ಹೆಚ್ಚಾಗಲಿರುವ ಅನಗತ್ಯ ಖರ್ಚುಗಳು ಅಥವಾ ಆರ್ಥಿಕ ಮುಗ್ಗಟ್ಟಿನ ಮುನ್ಸೂಚನೆಯಾಗಿದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಒಣಗಿದ ಎಲೆಗಳನ್ನು ತಕ್ಷಣವೇ ತೆರವುಗೊಳಿಸಿ:

ಮನಿ ಪ್ಲಾಂಟ್‌ನಲ್ಲಿ ಒಣಗಿದ ಅಥವಾ ಹಳದಿ ಬಣ್ಣಕ್ಕೆ ತಿರುಗಿದ ಎಲೆಗಳು ಕಂಡುಬಂದರೆ, ಅವುಗಳನ್ನು ತಕ್ಷಣವೇ ಕತ್ತರಿಸಿ ವಿಲೇವಾರಿ ಮಾಡಬೇಕು. ಒಣಗಿದ ಎಲೆಗಳನ್ನು ಗಿಡದಲ್ಲೇ ಬಿಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಗಿಡವನ್ನು ಸದಾ ಹಸಿರಾಗಿ ಮತ್ತು ಸಕ್ರಿಯವಾಗಿಡುವುದು ಬಹಳ ಮುಖ್ಯ.

ವೈಜ್ಞಾನಿಕ ಕಾರಣಗಳು ಮತ್ತು ಗಿಡದ ಸರಿಯಾದ ಆರೈಕೆ:

ಧಾರ್ಮಿಕ ಹಾಗೂ ವಾಸ್ತು ನಂಬಿಕೆಗಳ ಜೊತೆಗೆ, ಮನಿ ಪ್ಲಾಂಟ್ ಒಣಗಲು ಅಥವಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗಲು ಕೆಲವು ನೈಸರ್ಗಿಕ ಕಾರಣಗಳೂ ಇರುತ್ತವೆ. ಗಿಡಕ್ಕೆ ಅತಿಯಾಗಿ ನೀರು ಹಾಕುವುದು, ನೀರಿನ ಅಭಾವ, ಸರಿಯಾದ ಸೂರ್ಯನ ಬೆಳಕು ಸಿಗದಿರುವುದು ಅಥವಾ ಪೋಷಕಾಂಶಗಳ ಕೊರತೆಯಿಂದಲೂ ಹೀಗಾಗಬಹುದು. ಆದ್ದರಿಂದ ಗಿಡಕ್ಕೆ ಅಗತ್ಯವಿರುವಷ್ಟು ಮಾತ್ರ ನೀರು ನೀಡಿ, ಸ್ವಲ್ಪ ಸೂರ್ಯನ ಬೆಳಕು ಬೀಳುವ ಸೂಕ್ತ ಜಾಗದಲ್ಲಿಟ್ಟು ಆರೈಕೆ ಮಾಡುವುದು ಸೂಕ್ತ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version