ಜೈಸ್ವಾಲ್ ಜೊತೆ ಡೇಟಿಂಗ್ ಎಂದವರಿಗೆ ಮೃಣಾಲ್ ಠಾಕೂರ್ ಖಡಕ್ ಉತ್ತರ – Kannada News | Mrunal thakur slams dating rumours with cricketer yashasvi jaiswal

ನಟಿ ಮೃಣಾಲ್ ಠಾಕೂರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಡೇಟಿಂಗ್ ವಿಷಯದಲ್ಲಿ ಅವರ ಹೆಸರು ವಿವಿಧ ವ್ಯಕ್ತಿಗಳ ಜೊತೆ ತಳುಕು ಹಾಕಿಕೊಳ್ಳುತ್ತಿದೆ. ಈ ಬಾರಿ ಅವರ ಹೆಸರು ಭಾರತೀಯ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಜೊತೆ ಕೇಳಿಬರುತ್ತಿದೆ. ಒಂದೇ ಕೆಫೆಯಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದಕ್ಕೆ ಡೇಟಿಂಗ್ ವದಂತಿ ಹಬ್ಬಿತ್ತು. ಇದಕ್ಕೆ ಮೃಣಾಲ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಸತ್ಯಾಂಶವಿಲ್ಲದ ಸುದ್ದಿಗೆ ಗಾಸಿಪ್‌ ಪ್ರಿಯರು ಸೃಷ್ಟಿಸಿದ ಕಥೆಗೆ ಈಗ ತೆರೆಬಿದ್ದಿದೆ. ಸುಳ್ಳು ವದಂತಿ ಹಬ್ಬಿಸುವವರಿಗೆ ನಟಿ ಸರಿಯಾದ ಪಾಠ ಕಲಿಸಿದ್ದಾರೆ.

ಒಂದೇ ದಿನ ಒಂದೇ ಉಪಹಾರ ಗೃಹದಲ್ಲಿ ಇದ್ದಿದ್ದನ್ನೇ ನೆಪ ಮಾಡಿಕೊಂಡು ಜಾಲತಾಣಗಳಲ್ಲಿ ವೀಡಿಯೋ ಹಂಚಿಕೊಳ್ಳಲಾಗಿತ್ತು. ಇದನ್ನು ಕಂಡ ಮೃಣಾಲ್ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸ್ವಲ್ಪ ಶಾಂತರಾಗಿ. ನಾವು ಒಟ್ಟಿಗೆ ಎಲ್ಲಿದ್ದೇವೆ ಎಂದು ತೋರಿಸಿ? ವಿದ್ಯಾವಂತರಾಗಿದ್ದುಕೊಂಡು ಇಂತಹ ವದಂತಿಗಳನ್ನು ಹೇಗೆ ನಂಬುತ್ತೀರಿ?’ ಎಂದು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಚರ್ಚಿಸಬೇಕಾದ ವಿಷಯಗಳು ಸಾಕಷ್ಟು ಇವೆ. ಯುವ ಪೀಳಿಗೆಯಿಂದ ಒಳ್ಳೆಯ ವಿಷಯಗಳನ್ನು ಕಲಿಯಿರಿ. ಉಪಯುಕ್ತ ಸಂಗತಿಗಳ ಬಗ್ಗೆ ಧ್ವನಿ ಎತ್ತಿ ಎಂದು ಕಿವಿಮಾತು ಹೇಳಿದ್ದಾರೆ. ಈ ಕಾಮೆಂಟ್ ಅನ್ನು ನಂತರ ಅವರು ತೆಗೆದುಹಾಕಿದ್ದಾರೆ. ಆದರೆ ಅಷ್ಟರಲ್ಲಾಗಲೇ ಇದರ ಸ್ಕ್ರೀನ್‌ಶಾಟ್ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್‌ಸ್ಟಾಂಟ್ ಬಾಲಿವುಡ್ ಹಂಚಿಕೊಂಡಿದ್ದ ವೀಡಿಯೋ ಈ ಗೊಂದಲಕ್ಕೆ ಕಾರಣವಾಗಿತ್ತು. 24 ವರ್ಷದ ಕ್ರಿಕೆಟಿಗ ಮತ್ತು 34 ವರ್ಷದ ನಟಿಯ ನಡುವೆ ಪ್ರೇಮ ಬೆಳೆದಿದೆ ಎಂದು ಬಿಂಬಿಸಲಾಗಿತ್ತು. ಆದರೆ ಇಬ್ಬರೂ ಒಟ್ಟಿಗೆ ಬಂದಿದ್ದಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ. ಈ ಹಿಂದೆಯೂ ನಟ ಧನುಷ್ ಜೊತೆ ಮೃಣಾಲ್ ಮದುವೆಯಾಗಲಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತ್ತು.

ಇದನ್ನೂ ಓದಿ: ತನಗಿಂತ ಹತ್ತು ವರ್ಷ ಕಿರಿಯ ಕ್ರಿಕೆಟಿಗನ ಜೊತೆ ಮೃಣಾಲ್ ಡೇಟಿಂಗ್? ನಟಿ ಹೇಳಿದ್ದೇನು?

ಬರಹಗಾರ ಶರದ್ ಚಂದ್ರ ತ್ರಿಪಾಠಿ ಜೊತೆಗಿನ ಸಂಬಂಧದ ಬಗ್ಗೆ ಮೃಣಾಲ್ ಹಿಂದೆ ಬಹಿರಂಗವಾಗಿ ಮಾತನಾಡಿದ್ದರು. ಇಬ್ಬರೂ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆದರೆ ಕುಟುಂಬದ ವಿರೋಧದ ಕಾರಣ 2015 ರಲ್ಲಿ ಇಬ್ಬರೂ ಬೇರ್ಪಟ್ಟಿದ್ದರು. ಇದೀಗ ಯಶಸ್ವಿ ಜೈಸ್ವಾಲ್ ವಿಚಾರದಲ್ಲೂ ಸುಳ್ಳು ಸುದ್ದಿ ಹರಡಿದವರಿಗೆ ಮೃಣಾಲ್ ಕಟ್ಟುನಿಟ್ಟಾಗಿ ಉತ್ತರ ನೀಡಿದ್ದಾರೆ.ಈ ಮೊದಲು ತಮಿಳು ನಟ ಧನುಶ್ ಜೊತೆ ಅವರು ಹೆಸರು ತಳುಕು ಹಾಕಿಕೊಂಡಿತ್ತು. ಕೊನೆಗೂ ಅದು ಸುಳ್ಳಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾಂಗ್ರೆಸ್​​ಗೆ ಹತ್ತಿರವಾಗುತ್ತಿದ್ದಾರಾ ಬಿಜೆಪಿಯ ಪ್ರೀತಂಗೌಡ? ಚರ್ಚೆಗೆ ಗ್ರಾಸವಾಯ್ತು ಪಿಸು ಮಾತು – Kannada News | BJP Leader preetham gowda Likely to Join Congress, Talks wit MP Shreyas patel at Hassan

ಹಾಸನ, (ಆಗಸ್ಟ್ 09): ಜೆಡಿಎಸ್–ಬಿಜೆಪಿ ಮೈತ್ರಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೇ ಇರುವ ಆತಂಕದಲ್ಲಿ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಇದ್ದಾರೆ. ಹೀಗಾಗಿ ಅವರು ಸ್ಥಳೀಯವಾಗಿ ಜೆಡಿಎಸ್​​​ ಜೊತೆ ಮೈತ್ರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಪ್ರೀತಂಗೌಡ ಅವರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರ ಮಧ್ಯೆ ಇಂದು (ಆಗಸ್ಟ್ 09) ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಬಾಬು ಜಗಜೀವನ್ ರಾಂ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ​​​​​​ಕಾಂಗ್ರೆಸ್ ಸಂಸದ ಶ್ರೇಯಸ್‌ ಪಟೇಲ್ ಜೊತೆ ಪಿಸು ಪಿಸು ಮಾತನಾಡಿದ್ದು, ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಇದೇ ಕಾರ್ಯಕ್ರಮದಲ್ಲಿ ಶ್ರೇಯಸ್‌ ಪಟೇಲ್, ಪ್ರೀತಂಗೌಡ ಅವರನ್ನು ಹಾಡಿ ಹೊಗಳಿದ್ದಾರೆ. ಹೀಗಾಗಿ ಪ್ರೀತಂಗೌಡ ಕಾಂಗ್ರೆಸ್ ನತ್ತ ಮುಖ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಡದಿ ಟೌನ್​ಶಿಪ್​​ ಕಿಚ್ಚು: ಮೊದಲ ದಿನದ ಜೆಡಿಎಸ್ ಪಾದಯಾತ್ರೆ ಅಂತ್ಯ; ಎಲ್ಲರಿಗೂ ಧನ್ಯವಾದ ಹೇಳಿದ ನಿಖಿಲ್​ – Kannada News | Bidadi Township Row: Day 1 of JDS Padayatra Ends; Nikhil Kumaraswamy Thanks everyone

ಜೆಡಿಎಸ್ ಪಾದಯಾತ್ರೆImage Credit source: x.com/hd_kumaraswamy

ರಾಮನಗರ, ಆಗಸ್ಟ್​​ 09: ಸದ್ಯ ರಾಜ್ಯ ರಾಜಕಾರಣದಲ್ಲಿ ಬಿಡದಿ ಟೌನ್​ಶಿಪ್ (Bidadi Township Project) ಸಮರ ಮತ್ತೊಂದು ಹಂತಕ್ಕೆ ಹೋಗಿದೆ. ಯೋಜನೆ ವಿರೋಧಿಸಿ ‘ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಘೋಷಣೆಯಡಿ ಜೆಡಿಎಸ್ ಕೈಗೊಂಡಿರುವ ಪಾದಯಾತ್ರೆ (Padayatra) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿಯಲ್ಲಿ ಮುಕ್ತಾಯಗೊಂಡಿದೆ. ಮೊದಲ ದಿನದ ಪಾದಯಾತ್ರೆ ಯಶಸ್ವಿಯಾಗಿದ್ದು, ನಾಳೆ ಬಿಡದಿಯಿಂದ ನೈಸ್ ರಸ್ತೆಯವರೆಗೆ ಪಾದಯಾತ್ರೆ ಮುಂದುವರಿಯಲಿದೆ.

ಡಿ.ಕೆ ಶಿವಕುಮಾರ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಬಿಡದಿ ಟೌನ್‌ಶಿಪ್ ವಿರೋಧಿಸಿ ಬಿಜೆಪಿ-ಜೆಡಿಎಸ್ ಜಂಟಿ ಪಾದಯಾತ್ರೆ ಆರಂಭಿಸಿದೆ. ಬಿಡದಿಯ ಬೈರ ಮಂಗಲದಿಂದಲೇ ತೆಂಗಿನ ಸಸಿ ನೆಡುವ ಮೂಲಕ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಆರ್‌.ಅಶೋಕ್ ಪಾದಯಾತ್ರೆಗೆ ಚಾಲನೆ ನೀಡಿದರು. ಪಾದಯಾತ್ರೆಯಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಸಾವಿರಾರು ರೈತರು ಭಾಗಿಯಾಗಿದ್ದು, ಇಂದು 7 ಕಿಲೋ ಮೀಟರ್ ಪಾದಯಾತ್ರೆ ಮಾಡಲಾಗಿದೆ.

ಪಾದಯಾತ್ರೆಗೆ ಬಂದಿದ್ದ ಎಲ್ಲರಿಗೂ ಧನ್ಯವಾದ ಹೇಳಿದ ನಿಖಿಲ್ ಕುಮಾರಸ್ವಾಮಿ

ಮೊದಲ ದಿನದ ಪಾದಯಾತ್ರೆ ಬಳಿಕ ಬಿಡದಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ‘ಮೊದಲ ದಿನದ ಪಾದಯಾತ್ರೆಗೆ ಬಂದಿದ್ದ ಎಲ್ಲರಿಗೂ ಧನ್ಯವಾದಗಳು. ಮಳೆ, ಬಿಸಿಲಿನಲ್ಲಿ ಎಲ್ಲರೂ ಹೆಜ್ಜೆ ಹಾಕಿದ್ದೀರಿ. ನಮ್ಮ ಜಿಲ್ಲೆಯ ರೈತರ ಪರವಾಗಿ ನೀವೆಲ್ಲರೂ ಬಂದಿದ್ದೀರಿ. ಯಾವುದೇ ರಾಜಕೀಯಕ್ಕಾಗಿ ಪಾದಯಾತ್ರೆ ಹಮ್ಮಿಕೊಂಡಿಲ್ಲ. ನಿಮ್ಮ ಪಿತ್ರಾರ್ಜಿತ ಆಸ್ತಿಯನ್ನು ಉಳಿಸಿಕೊಳ್ಳಲು ಪಾದಯಾತ್ರೆ ಮಾಡಲಾಗುತ್ತಿದೆ’ ಎಂದರು.

ಇದನ್ನೂ ಓದಿ: ಬಿಡದಿ ಟೌನ್‌ಶಿಪ್‌ ವಿರೋಧಿಸಿ ಪ್ರತಿಭಟನೆ: ವಿಪಕ್ಷಗಳಿಗೆ ಡಿಕೆ ಶಿವಕುಮಾರ್ ಮೆಗಾ ಕೌಂಟರ್

ದೇವೇಗೌಡರಿಂದ 2ನೇ ದಿನದ ಪಾದಯಾತ್ರೆಗೆ ಚಾಲನೆ 

‘ನಾಳೆ 2ನೇ ದಿನದ ಪಾದಯಾತ್ರೆಗೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಚಾಲನೆ ನೀಡಲಿದ್ದಾರೆ. ಎರಡನೇ ದಿನವಾದ ನಾಳೆ ಪಾದಯಾತ್ರೆ 15 ಕಿ.ಮೀ ಸಾಗಲಿದೆ’ ಎಂದು ನಿಖಿಲ್ ಕುಮಾರಸ್ವಾಮಿ ಮಾಹಿತಿ ನೀಡಿದರು.

ವಿಧಾನಸೌಧದಲ್ಲಿ ಕುಳಿತಿರುವವರು ಹೊರಗೆ ತಿರುಗಿ ನೋಡಿದ್ದಾರೆ: ಎ.ಮಂಜುನಾಥ

ಮಾಜಿ ಶಾಸಕ ಎ.ಮಂಜುನಾಥ ಪ್ರತಿಕ್ರಿಯಿಸಿದ್ದು, ‘ಇದು ಪಾದಯಾತ್ರೆ ಅಲ್ಲ, ಸಂಘರ್ಷದ ಯಾತ್ರೆ ಶುರುವಾಗಿದೆ. ಮೊದಲ ದಿನದ ಜೆಡಿಎಸ್ ಪಾದಯಾತ್ರೆ ಯಶಸ್ವಿಯಾಗಿ ನೆರವೇರಿದೆ. ಬಿಡದಿ ಟೌನ್​ಶಿಪ್ ವಿರುದ್ಧ 514 ದಿನಗಳಿಂದ ಹೋರಾಡುತ್ತಿರುವ ನನ್ನ ಎಲ್ಲಾ ತಾಯಂದಿರಿಗೆ ನಮಸ್ಕಾರ. ವಿಧಾನಸೌಧದಲ್ಲಿ ಕುಳಿತಿರುವವರು ಹೊರಗೆ ತಿರುಗಿ ನೋಡಿದ್ದಾರೆ’ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನೆಲದ ಮೇಲೆ ಕುಳಿತು ಊಟ ಮಾಡೋದು ಕೇವಲ ಸಂಪ್ರದಾಯವಲ್ಲ, ಇದರಿಂದ ಆರೋಗ್ಯಕ್ಕೂ ಇದೇ ಸಾಕಷ್ಟು ಪ್ರಯೋಜನ – Kannada News | Benefits Of Sitting On The Floor While Eating

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನೆಲದ ಮೇಲೆಯೇ ಕುಳಿತು (sitting on the floor) ಊಟ ಮಾಡುವ ಸಂಪ್ರದಾಯವಿದೆ. ಹಿಂದೆಲ್ಲಾ ಪ್ರತಿಯೊಬ್ಬರೂ ಅಚ್ಚುಕಟ್ಟಾಗಿ ನೆಲದ ಮೇಲೇ ಕುಳಿತೇ ಊಟ ಮಾಡುತ್ತಿದ್ದರು. ಆದರೆ ಇಂದು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಅನೇಕರು ಡೈನಿಂಗ್‌ ಟೇಬಲ್‌ ಮೇಲೆಯೇ ಕುಳಿತು ಊಟ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಇದರಿಂದ ಏನು ಪ್ರಯೋಜನವಿದೆಯೋ ಗೊತ್ತಿಲ್ಲ, ಆದರೆ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಂತಹ ಊಟ ಮಾಡುವಾಗ ನೆಲದ ಮೇಲೆ ಕೂರುವ ಸಂಪ್ರದಾಯ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹೌದು ಹೌದು ನೆಲದ ಮೇಲೆ ಪದ್ಮಾಸನ ಅಥವಾ ಸುಖಾಸನ ಹಾಕಿ ಕುಳಿತು ಊಟ ಮಾಡುವುದು ಜೀರ್ಣಕ್ರಿಯೆಯೆನ್ನು ಸುಧಾರಿಸಲು, ಬೆನ್ನು ಮತ್ತು ಸೊಂಟದ ಸ್ನಾಯುಗಳನ್ನು ಬಲವಾಗಿರಿಸಲು ಸಹಕಾರಿ.

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದಾಗುವ ಪ್ರಯೋಜನಗಳೇನು?

ಉತ್ತಮ ಜೀರ್ಣಕ್ರಿಯೆ: ನೆಲದ ಮೇಲೆ ಕುಳಿತು ಊಟ ಮಾಡುವ ಸಂದರ್ಭದಲ್ಲಿ ತಟ್ಟೆಯಲ್ಲಿರುವ ಅನ್ನವನ್ನು ಬಾಯಿಗೆ ಹಾಕುವಾಗ ನಾವು ತಟ್ಟೆಯ ಕಡೆಗೆ ಬಾಗುತ್ತೇವೆ. ಹೀಗೆ ನಿರಂತರವಾಗಿ ಮುಂದಕ್ಕೆ ಮತ್ತು ಹಿಂದಕ್ಕೆ ಬಾಗುವುದು  ಕಿಬ್ಬೊಟ್ಟೆಯ ಸ್ನಾಯುಗಳಿಗೆ ವ್ಯಾಯಾಮವಾದಂತೆ ಆಗುತ್ತದೆ.  ಇದು  ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಆಹಾರವನ್ನು ವೇಗವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

ರಕ್ತ ಪರಿಚಲನೆ ಸುಧಾರಿಸುತ್ತದೆ: ಪದ್ಮಾಸನ ಅಥವಾ ಸುಖಾಸನದಲ್ಲಿ ಕುಳಿತು ಊಟ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ರಕ್ತನಾಳಗಳಲ್ಲಿನ ಒತ್ತಡವನ್ನು ನಿವಾರಿಸುತ್ತದೆ. ಇದಲ್ಲದೆ ಕುರ್ಚಿಯಲ್ಲಿ ಕುಳಿತಾಗ, ಗುರುತ್ವಾಕರ್ಷಣೆಯಿಂದಾಗಿ ರಕ್ತದ ಹರಿವು ಹೆಚ್ಚಾಗಿ  ಕಾಲುಗಳಿಗೆ ಹರಿಯುತ್ತದೆ. ಅದೇ, ನೆಲದ ಮೇಲೆ ಕಾಲುಗಳನ್ನು ಮಡಚಿ ಕುಳಿತಾಗ, ಕೆಳಮುಖ ರಕ್ತದ ಹರಿವು ಕಡಿಮೆಯಾಗುತ್ತದೆ ಮತ್ತು ಹೊಟ್ಟೆ ಮತ್ತು ಹೃದಯದ ಕಡೆಗೆ ರಕ್ತದ ಹರಿವು ಹೆಚ್ಚುತ್ತದೆ. ಹೀಗೆ ಹೊಟ್ಟೆಯ ಕಡೆಗೆ ರಕ್ತದ ಹರಿವು ಹೆಚ್ಚಾದಾಗ  ಜೀರ್ಣಾಂಗ ವ್ಯವಸ್ಥೆಯು ಅದರ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ತೂಕ ನಿರ್ವಹಣೆ: ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ತೂಕ ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ಲದ ಮೇಲೆ ಕುಳಿತು ಊಟ ಮಾಡುವುದರಿಂದ ಮೆದುಳಿಗೆ ಹೊಟ್ಟೆ ತುಂಬಿದೆ ಮತ್ತು ಕಡಿಮೆ ತಿನ್ನಬೇಕು ಎಂಬ ಸಂಕೇತ ಬರುತ್ತದೆ ಎಂದು ಹೇಳಲಾಗುತ್ತದೆ. ಪರಿಣಾಮವಾಗಿ, ನಾವು ಕಡಿಮೆ ತಿನ್ನುತ್ತೇವೆ ಮತ್ತು ನಮ್ಮ ತೂಕ ನಿಯಂತ್ರಣದಲ್ಲಿರುತ್ತದೆ.

ಕೀಲು ನೋವನ್ನು ತಡೆಯುತ್ತದೆ: ನೆಲದ ಮೇಲೆ ಕುಳಿತು ಊಟ ಮಾಡುವಾಗ, ಮೊಣಕಾಲುಗಳನ್ನು ಬಾಗಿಸಿ ಕುಳಿತುಕೊಳ್ಳಬೇಕಾಗುತ್ತದೆ. ಇದು ಮೊಣಕಾಲುಗಳಿಗೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ. ಅಲ್ಲದೆ ಸೊಂಟ, ಮೊಣಕಾಲು ಮತ್ತು ಪಾದದ ಕೀಲುಗಳಿಗೆ ನಮ್ಯತೆಯನ್ನು ಒದಗಿಸುತ್ತದೆ. ಇದು ಕೀಲು ನೋವನ್ನು ತಡೆಯಲು ಸಹಾಯ ಮಾಡುತ್ತದೆ, ಬೆನ್ನುಮೂಳೆಯನ್ನು ಬಲಪಡಿಸುತ್ತದೆ, ಕೀಲು ನೋವು ಮತ್ತು ಸಂಧಿವಾತದಂತಹ ಸಮಸ್ಯೆಗಳನ್ನು ತಡೆಯುತ್ತದೆ.

ಇದನ್ನೂ ಓದಿ: ಮನೆ ಕ್ಲೀನ್‌ ಮಾಡೋದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಖತ್‌ ಪ್ರಯೋಜನಕಾರಿಯಂತೆ

ಒತ್ತಡವನ್ನು ಕಡಿಮೆ ಮಾಡುತ್ತದೆ: ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ಊಟ ಮಾಡುವಾಗ ಸುಖಾಸನ ಅಥವಾ ಪದ್ಮಾಸನ ಭಂಗಿಯಲ್ಲಿ ಕುಳಿತುಕೊಳ್ಳುತ್ತೇವೆ. ಈ ಎರಡೂ ಭಂಗಿಗಳು ಏಕಾಗ್ರತೆಯನ್ನು ಹೆಚ್ಚಿಸುತ್ತವೆ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸುತ್ತವೆ. ಈ ರೀತಿ ತಿನ್ನುವುದರಿಂದ ಆಹಾರದ ಸಂಪೂರ್ಣ ಪ್ರಯೋಜನ ದೇಹಕ್ಕೆ ದೊರೆಯುತ್ತವೆ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ.

ಇದಲ್ಲದೆ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಿಧಾನವಾಗಿ ಮತ್ತು ಮನಸ್ಸಿನಿಂದ ತಿನ್ನುವ ಅಭ್ಯಾಸ ಬೆಳೆಯುವ ಸಾಧ್ಯತೆ ಹೆಚ್ಚು. ಇದು ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಮತ್ತು ಸರಿಯಾದ ಸಮಯದಲ್ಲಿ ಹೊಟ್ಟೆ ತುಂಬಿದ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಕೊನೆಯ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್; ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಸಿರಾಜ್ – Kannada News | Mohammed Siraj’s 3 Consecutive Sixes in India’s Practice Match Thriller

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ (Team India) ಆಡಿದ ಏಕೈಕ ಅಭ್ಯಾಸ ಪಂದ್ಯ ಮುಕ್ತಾಯಗೊಂಡಿದೆ. ಈ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ, ಭಾರತೀಯ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅಲ್ಲಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಆಡುವುದರಲ್ಲಿ ಯಶಸ್ವಿಯಾದರು. ಎರಡೂ ಇನ್ನಿಂಗ್ಸ್‌ಗಳಲ್ಲಿ, ಬಹುತೇಕ ಪ್ರತಿಯೊಬ್ಬ ಬ್ಯಾಟ್ಸ್‌ಮನ್ ರನ್ ಗಳಿಸಿದರೆ, ಬಹುತೇಕ ಬೌಲರ್ ವಿಕೆಟ್ ಪಡೆದರು. ಇದರ ಪರಿಣಾಮವಾಗಿ ಈ ಪಂದ್ಯದ ಫಲಿತಾಂಶ ಟೀಂ ಇಂಡಿಯಾ ಪರ ವಾಲಿತು. ಅಂತಿಮ ಓವರ್‌ನಲ್ಲಿ, ಟೀಂ ಇಂಡಿಯಾ ಗೆಲ್ಲಲು 16 ರನ್‌ಗಳು ಬೇಕಾಗಿದ್ದವು. ಸ್ಟ್ರೈಕ್​ನಲ್ಲಿದ್ದ ಮೊಹಮ್ಮದ್ ಸಿರಾಜ್ (Mohammed Siraj) ಹ್ಯಾಟ್ರಿಕ್ ಸಿಕ್ಸರ್‌ಗಳನ್ನು ಬಾರಿಸಿ ತಂಡಕ್ಕೆ 6 ವಿಕೆಟ್‌ಗಳ ಗೆಲುವು ತಂದುಕೊಟ್ಟರು.

ಕೊನೆಯ ಓವರ್‌ನಲ್ಲಿ 15 ರನ್‌ಗಳ ಅಗತ್ಯ

ಈ ಪಂದ್ಯವನ್ನು ಗೆಲ್ಲಲು ಭಾರತಕ್ಕೆ 45 ಓವರ್​ಗಳಲ್ಲಿ 207 ರನ್‌ಗಳ ಗುರಿ ಇತ್ತು. ಭಾರತ ತಂಡ ಆರಂಭದಿಂದಲೂ ಗೆಲುವಿಗಾಗಿ ಬ್ಯಾಟಿಂಗ್ ಮಾಡುತ್ತಿರುವಂತೆ ತೋರುತ್ತಿತ್ತು. ಆದರೆ ರಿಷಭ್ ಪಂತ್ ಅವರ ತಾಳ್ಮೆಯ ಆಟ ಪಂದ್ಯವನ್ನು ಡ್ರಾದತ್ತ ತಿರುಗಿಸಿತು. ಇದರ ಪರಿಣಾಮವಾಗಿ ಭಾರತಕ್ಕೆ ಕೊನೆಯ ಓವರ್‌ನಲ್ಲಿ ಒಟ್ಟು 15 ರನ್‌ಗಳ ಅಗತ್ಯವಿತ್ತು. ಇದರರ್ಥ ಭಾರತಕ್ಕೆ ಗೆಲ್ಲಲು ಆರು ಎಸೆತಗಳಲ್ಲಿ 15 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಸಿರಾಜ್ ಸತತ ಸಿಕ್ಸರ್‌ಗಳನ್ನು ಬಾರಿಸಿ ಹ್ಯಾಟ್ರಿಕ್ ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದರು. ಆದಾಗ್ಯೂ, ಇದು ಅಭ್ಯಾಸ ಪಂದ್ಯವಾದ್ದರಿಂದ, ಭಾರತವು ಕೊನೆಯ ಓವರ್ ಅನ್ನು ಆಡಲು ನಿರ್ಧರಿಸಿತು.

15 ಎಸೆತಗಳಲ್ಲಿ ಅಜೇಯ 32 ರನ್

ಕೊನೆಯ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿದ ಸಿರಾಜ್, ನಾಲ್ಕನೇ ಎಸೆತದಲ್ಲಿ ಒಂದು ರನ್ ಗಳಿಸಲಿಲ್ಲ ಆದರೆ ಐದನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಬಾರಿಸಿದರು. ನಂತರ ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸಿದರು, ಆರು ಎಸೆತಗಳಲ್ಲಿ ಮೂರು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಸೇರಿದಂತೆ 23 ರನ್‌ ಕಲೆಹಾಕಿದರು. ತಮ್ಮ ಇನ್ನಿಂಗ್ಸ್‌ನಲ್ಲಿ ಸಿರಾಜ್ 15 ಎಸೆತಗಳನ್ನು ಎದುರಿಸಿ ಅಜೇಯ 32 ರನ್ ಗಳಿಸಿದರು. 213.33 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಸಿರಾಜ್ ತಮ್ಮ ಇನ್ನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಕೂಡ ಬಾರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸದ್ಯದಲ್ಲೇ ದೇಶದಲ್ಲಿ ಹೊಸ 5,000 ಮೆಡಿಕಲ್ ಪಿಜಿ, 5,023 ಎಂಬಿಬಿಎಸ್ ಸೀಟುಗಳ ಸೇರ್ಪಡೆಗೆ ಕೇಂದ್ರ ಸರ್ಕಾರ ನಿರ್ಧಾರ – Kannada News | Central govt to allow for additional 5,000 medical PG seats in next 2 years

ಮೆಡಿಕಲ್ ನೀಟ್ ಪರೀಕ್ಷೆಗೆ ಹೊರಟಿರುವ ವಿದ್ಯಾರ್ಥಿನಿಯರುImage Credit source: PTI

ನವದೆಹಲಿ, ಆಗಸ್ಟ್ 9: ದೇಶದಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸಲು ಮತ್ತು ವೈದ್ಯಕೀಯ ಶಿಕ್ಷಣ ಬಲಪಡಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 2028-29ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ 5,000 ಹೆಚ್ಚುವರಿ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು (Medical PG seats) ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವ ಜೆ. ಪಿ. ನಡ್ಡಾ ಅವರು ಲೋಕಸಭೆಗೆ ನೀಡಿದ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ ಪ್ರಸ್ತುತ ಇರುವ ಸೀಟುಗಳ ಸಂಖ್ಯೆ?

ಆರೋಗ್ಯ ಸಚಿವರು ನೀಡಿರುವ ಮಾಹಿತಿ ಪ್ರಕಾರ, ಪ್ರಸ್ತುತ ಭಾರತದಲ್ಲಿ ಒಟ್ಟು 86,360 ಪಿಜಿ ವೈದ್ಯಕೀಯ ಸೀಟುಗಳು ಲಭ್ಯವಿವೆ. ಇವುಗಳ ಜೊತೆ ಇನ್ನೆರಡು ವರ್ಷದಲ್ಲಿ ಮತ್ತಷ್ಟು 5,000 ಸೀಟುಗಳು ಸೇರ್ಪಡೆಯಾಗಲಿವೆ. ಇದರೊಂದಿಗೆ ಒಟ್ಟು ಮೆಡಿಕಲ್ ಪಿಜಿ ಸೀಟುಗಳ ಸಂಖ್ಯೆ ಇನ್ನೆರಡು ವರ್ಷದಲ್ಲಿ 90 ಸಾವಿರ ದಾಟಲಿದೆ.

ಸರ್ಕಾರಿ ವೈದ್ಯಕೀಯ ಕಾಲೇಜುಗಳು, ಪಿಜಿ ಸಂಸ್ಥೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವ ‘ಕೇಂದ್ರ ಪ್ರಾಯೋಜಿತ ಯೋಜನೆ’ಯ 3ನೇ ಹಂತದಡಿ (Phase-III) ಈ ಹೊಸ ಸೀಟುಗಳನ್ನು ಸೃಷ್ಟಿಸಲಾಗುತ್ತಿದೆ.

ಇದನ್ನೂ ಓದಿ: ಜಾರ್ಖಂಡ್ ಪರೀಕ್ಷಾ ಅಕ್ರಮಗಳ ವಿರುದ್ಧ ಹೋರಾಟ; ಸರ್ಕಾರ-ವಿದ್ಯಾರ್ಥಿಗಳ ಮಾತುಕತೆ 2ನೇ ಸುತ್ತಿಗೆ; ವಿದ್ಯಾರ್ಥಿಗಳಿಗೆ ಸರ್ಕಾರದ ಭರವಸೆಗಳು

ಆರ್ಥಿಕ ನೆರವು ಹೆಚ್ಚಳ: ಹೊಸ ಸೀಟುಗಳ ನಿರ್ಮಾಣಕ್ಕೆ ನೀಡುವ ಆರ್ಥಿಕ ಅನುದಾನವನ್ನು ಸರ್ಕಾರ ಹೆಚ್ಚಿಸಿದ್ದು, ಪ್ರತಿ ಸೀಟಿಗೆ ಗರಿಷ್ಠ ₹1.50 ಕೋಟಿ ವೆಚ್ಚದ ಸೀಲಿಂಗ್‌ಗೆ ಏರಿಸಿದೆ.

ಕರ್ನಾಟಕದಲ್ಲೇ ಅತಿಹೆಚ್ಚು ಪಿಜಿ ಸೀಟುಗಳು

ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿರುವ 86,360 ಮೆಡಿಕಲ್ ಪಿಜಿ ಸೀಟುಗಳ ಪೈಕಿ ಅತಿಹೆಚ್ಚು ಸೀಟುಗಳಿರುವುದು ಕರ್ನಾಟಕದಲ್ಲೇ. ಈ ರಾಜ್ಯದಲ್ಲಿ 10,092 ಸೀಟುಗಳಿವೆ ಎನ್ನಲಾಗಿದೆ. ಇದರಲ್ಲಿ ಸರ್ಕಾರಿ ಸೀಟುಗಳು 2,805 ಇದ್ದರೆ, ಖಾಸಗಿ ಸೀಟುಗಳು 7,287 ಇದೆ. ಅತಿಹೆಚ್ಚು ವೈದ್ಯಕೀಯ ಸ್ನಾತಕೋತ್ತರ ಸೀಟುಗಳನ್ನು ಹೊಂದಿರುವ ಟಾಪ್-3 ರಾಜ್ಯಗಳು ಈ ಕೆಳಕಂಡಂತಿವೆ:

  1. ಕರ್ನಾಟಕ: 10,092 ಸೀಟುಗಳು
  2. ಮಹಾರಾಷ್ಟ್ರ: 9,216 ಸೀಟುಗಳು
  3. ತಮಿಳುನಾಡು: 8,023 ಸೀಟುಗಳು

ಈ ಯೋಜನೆಯು ನೀಟ್-ಪಿಜಿ (NEET-PG) ಆಕಾಂಕ್ಷಿಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಿದ್ದು, ಗ್ರಾಮೀಣ ಹಾಗೂ ಸಣ್ಣ ನಗರಗಳಲ್ಲಿ ತಜ್ಞ ವೈದ್ಯರ ಲಭ್ಯತೆಯನ್ನು ಹೆಚ್ಚಿಸಲಿದೆ.

ಇದನ್ನೂ ಓದಿ: ಹೈದರಾಬಾದ್ ನಲ್ಸಾರ್ ಕಾನೂನು ವಿವಿ ಘಟಿಕೋತ್ಸವ ಕಾರ್ಯಕ್ರಮಕ್ಕೆ ಸಿಜೆಐ ಮುಖ್ಯ ಅತಿಥಿಯಾಗಲು ವಿದ್ಯಾರ್ಥಿಗಳಿಂದ ವಿರೋಧ

ಎಂಬಿಬಿಎಸ್ (MBBS) ಸೀಟುಗಳೂ ಹೆಚ್ಚಳ: ಪಿಜಿ ಸೀಟುಗಳ ಜೊತೆಗೆ ಯೋಜನೆ ಭಾಗವಾಗಿ 5,023 ಹೊಸ ಎಂಬಿಬಿಎಸ್ ಸೀಟುಗಳನ್ನು ಸಹ ಹಂತ ಹಂತವಾಗಿ ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ. ಸದ್ಯ ಭಾರತದಾದ್ಯಂತ ಇರುವ 823 ಮೆಡಿಕಲ್ ಕಾಲೇಜುಗಳಲ್ಲಿ ಒಟ್ಟು 1,36,939 ಎಂಬಿಬಿಎಸ್ ಪದವಿ ಸೀಟುಗಳಿವೆ. ಇದರಲ್ಲಿ ಸರ್ಕಾರಿ ಸೀಟುಗಳ ಸಂಖ್ಯೆ 63,296 ಇದೆ. ಎಂಬಿಬಿಎಸ್ ಸೀಟುಗಳ ಸಂಖ್ಯೆಯಲ್ಲೂ ಕರ್ನಾಟಕ ನಂಬರ್ ಒನ್ ಇದೆ. ಉತ್ತರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ನಂತರದ ಸ್ಥಾನದಲ್ಲಿ ಬರುತ್ತವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:40 pm, Sun, 9 August 26

Source link

Karnataka Weather Forecast: ಆ 13ರವರೆಗೆ ರಾಜ್ಯದಲ್ಲಿ ಮಳೆ; ಯಾವ ದಿನದಂದು ಎಲ್ಲೆಲ್ಲಿ ಮಳೆ; ಇಲ್ಲಿದೆ ಮಾಹಿತಿ – Kannada News | Karnataka Rain Forecast: Monsoon Alert Issued Till August 13

ಪ್ರಾತಿನಿಧಿಕ ಚಿತ್ರ Image Credit source: tv9 kannada

ಬೆಂಗಳೂರು, ಆಗಸ್ಟ್​ 09: ಜುಲೈನಲ್ಲಿ ಬರಬೇಕಿದ್ದ ಮಳೆ (Rain) ಆಗಸ್ಟ್​ನಲ್ಲಿ ಎಂಟ್ರಿಕೊಟ್ಟಿದೆ. ಹೀಗಾಗಿ ಕರ್ನಾಟಕದ್ಯಂತ (karnataka) ಮುಂಗಾರು ಮಳೆ ಚುರುಕುಗೊಂಡಿದೆ. ಆಗಸ್ಟ್ 13ರವರೆಗೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ.

ಯಾವ ದಿನಾಂಕದಂದು ಎಲ್ಲೆಲ್ಲಿ ಮಳೆ?

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಆಗಸ್ಟ್ 10 ಮತ್ತು 11 ರಂದು ಹಗುರ ಮಳೆಯಾಗುವ ಸಾಧ್ಯತೆಯಿದೆ. ಅದೇ ರೀತಿಯಾಗಿ ಆಗಸ್ಟ್ 12 ಮತ್ತು 13 ರಂದು ಈ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಕರ್ನಾಟಕದ ಉತ್ತರ ಒಳನಾಡು

ಉತ್ತರ ಒಳನಾಡಿನ ಬೆಳಗಾವಿ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಆಗಸ್ಟ್ 10 ರಿಂದ 13 ರವರೆಗೆ ಒಂದು ಅಥವಾ ಎರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಅದೇ ರೀತಿ ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Karnataka Weather Forecast: ಉತ್ತರ ಕನ್ನಡ, ಉಡುಪಿ ಸೇರಿ ಆರು ಜಿಲ್ಲೆಗಳಲ್ಲಿ ಇಂದು ವರುಣನ ಅಬ್ಬರ

ಇನ್ನು ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಆಗಸ್ಟ್ 10 ರಿಂದ 13 ರವರೆಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆ

ಸಂಜೆ ಆಗುತ್ತಿದ್ದಂತೆ ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಏಕಾಏಕಿ ಧಾರಾಕಾರ ಮಳೆ ಸುರಿದಿದೆ. ವೀಕೆಂಡ್ ಮೋಜು-ಮಸ್ತಿಯಲ್ಲಿದ್ದ ಜನರಿಗೆ ಅಡ್ಡಿ ಉಂಟಾಗಿದೆ. ನಗರದ ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ಮಲ್ಲೇಶ್ವರಂ ಸೇರಿದಂತೆ ಐಟಿ ಕಾರಿಡಾರ್ ಎಂದೇ ಪ್ರಸಿದ್ಧವಾಗಿರುವ ವೈಟ್​​ಫೀಲ್ಡ್ ಭಾಗದಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ದಿಢೀರ್ ಮಳೆಯಿಂದಾಗಿ ರಸ್ತೆ ಸಂಚಾರಕ್ಕೂ ಅಡ್ಡಿ ಉಂಟಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs SL: 22 ಎಸೆತಗಳ ನಂತರ ಖಾತೆ ತೆರೆದು ಬಾಲ್ ಕಳೆದು ಹಾಕಿದ ಪಂತ್ – Kannada News | Rishabh Pant’s New Batting Mantra: Patience for Sri Lanka Test Series Preparations

ರಿಷಭ್ ಪಂತ್ (Rishabh Pant) ಎಂದರೆ ನಮಗೆ ತಟ್ಟನೆ ನೆನಪಾಗುವುದು ಅವರ ಹೊಡಿಬಡಿ ಆಟ. ವೃತ್ತಿಜೀವನದ ಆರಂಭದಲ್ಲಿ ಯಾವುದೇ ಮಾದರಿಯಾಗಿರಲಿ ನಾನು ಆಡುವುದು ಹೀಗೆ ಎಂದು ತೋರಿಸಿಕೊಟ್ಟಿದ್ದ ಪಂತ್ ಕ್ರೀಸ್‌ನಲ್ಲಿ ಇರುವವರೆಗೆ ತಂಡದ ಸ್ಕೋರ್ ಬೋರ್ಡ್​ ಶರವೇಗದಲ್ಲಿ ಓಡುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪಂತ್ ಅವರ ಆ ಹಳೆಯ ಆಟ ಕಣ್ಮರೆಯಾಗಿದೆ. ಐಪಿಎಲ್‌ನಲ್ಲೂ ಪಂತ್ ಆರ್ಭಟ ಅಷ್ಟಿರಲಿಲ್ಲ. ಇದೀಗ ಟೀಂ ಇಂಡಿಯಾದಲ್ಲೂ ರನ್ ಬರ ಎದುರಿಸುತ್ತಿರುವ ಪಂತ್ ಶ್ರೀಲಂಕಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಪ್ರಾರಂಭವಾಗುವ ಮೊದಲು ಹಿಂದೆಂದೂ ಕಾಣದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

ಶ್ರೀಲಂಕಾ ಕ್ರಿಕೆಟ್ XI ವಿರುದ್ಧದ ಅಭ್ಯಾಸ ಪಂದ್ಯದ ಅಂತಿಮ ದಿನದಂದು, ಪಂತ್ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಬದಲಾಗಿ ರಕ್ಷಣಾತ್ಮಕ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಇದರ ಪರಿಣಾಮವಾಗಿ ಪಂತ್ ತಮ್ಮ ಖಾತೆ ತೆರೆಯಲು ಬರೋಬ್ಬರಿ 22 ಎಸೆತಗಳನ್ನು ತೆಗೆದುಕೊಂಡರು.

3ನೇ ಕ್ರಮಾಂಕದಲ್ಲಿ ಬಂದ ಪಂತ್

ಕೊಲಂಬೊದಲ್ಲಿ ನಡೆದ ಅಭ್ಯಾಸ ಪಂದ್ಯದ ಕೊನೆಯ ದಿನದಂದು, ಟೀಂ ಇಂಡಿಯಾ 207 ರನ್‌ಗಳ ಗುರಿ ಬೆನ್ನಟ್ಟಬೇಕಾಯಿತು. ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿ ಶತಕದ ಜೊತೆಯಾಟವಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ವಿಫಲರಾಗಿದ್ದ ಜೈಸ್ವಾಲ್ ಈ ಬಾರಿ ಅರ್ಧಶತಕ ಗಳಿಸಿ 61 ರನ್ ಗಳಿಸಿ ನಿವೃತ್ತರಾದರು. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 3 ರನ್‌ಗಳಿಗೆ ಔಟಾಗಿದ್ದ ರಿಷಭ್ ಪಂತ್​ಗೆ ಮೂರನೇ ಕ್ರಮಾಂಕಕ್ಕೆ ಬಡ್ತಿ ನೀಡಲಾಯಿತು.

ಸಿಕ್ಸರ್ ಮೂಲಕ ಖಾತೆ ತೆರೆದ ಪಂತ್

ಶ್ರೀಲಂಕಾದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಪಂದ್ಯದ ಅಭ್ಯಾಸವನ್ನು ಪಡೆಯಲು ಪಂತ್‌ಗೆ ಇದು ಕೊನೆಯ ಅವಕಾಶವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಅವರನ್ನು ಔಟ್ ಮಾಡಿದ ರೀತಿ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಹೀಗಾಗಿ ಪಂತ್ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದ ತಕ್ಷಣ, ನೋಡುಗರು ಆಶ್ಚರ್ಯಚಕಿತರಾದರು. ಹಿಂದಿನ ಇನ್ನಿಂಗ್ಸ್‌ನ ಐದನೇ ಎಸೆತದಲ್ಲಿ ಸಿಕ್ಸರ್ ಹೊಡೆಯಲು ಪ್ರಯತ್ನಿಸುವಾಗ ಔಟಾಗಿದ್ದ ಪಂತ್, ಎರಡನೇ ಇನ್ನಿಂಗ್ಸ್​ನ ಆರಂಭದಲ್ಲಿ ಒಂದೇ ಒಂದು ದೊಡ್ಡ ಹೊಡೆತವನ್ನು ಪ್ರಯತ್ನಿಸಲಿಲ್ಲ.

ಹೀಗಾಗಿ ಪಂತ್ 21 ಎಸೆತಗಳಾದರೂ ತಮ್ಮ ಖಾತೆ ತೆರೆದಿರಲಿಲ್ಲ. ಇದರಿಂದ ಒತ್ತಡಕ್ಕೊಳಗಾಗದ ನಾಯಕ ಗಿಲ್ ಸಿಕ್ಸರ್ ಬಾರಿಸುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ಪಂತ್ ಮಾತ್ರ ತಮ್ಮ ತಾಳ್ಮೆಯ ಆಟವನ್ನು ಮುಂದುವರೆಸಿದರು. ಪರಿಣಾಮವಾಗಿ, ಪಂತ್ ಬರೋಬ್ಬರಿ 21 ಎಸೆತಗಳಲ್ಲಿ ಯಾವುದೇ ರನ್ ಗಳಿಸಲಿಲ್ಲ. ಆದರೆ 22 ನೇ ಎಸೆತದಲ್ಲಿ ಆಫ್-ಸ್ಪಿನ್ನರ್ ವಿರುದ್ಧ ನೇರ ಬೌಂಡರಿಯ ಮೇಲೆ ಸಿಕ್ಸರ್ ಬಾರಿಸಿ ತಮ್ಮ ರನ್ ಖಾತೆ ತೆರೆದರು. ಅವರ ಶಾಟ್ ಎಷ್ಟು ಶಕ್ತಿಶಾಲಿಯಾಗಿತ್ತೆಂದರೆ ಚೆಂಡು ಮೈದಾನದಿಂದ ಹೊರಗೆ ಹೋಯಿತು. ಇದರಂದ ಅಂಪೈರ್ ಹೊಸ ಚೆಂಡನ್ನು ತರಿಸಬೇಕಾಯಿತು.

Rishabh Pant: ಅತಿ ಹೆಚ್ಚು ತೆರಿಗೆ ಪಾವತಿ; ಅಗ್ರಸ್ಥಾನಕ್ಕೇರಿದ ರಿಷಭ್ ಪಂತ್

ಪಂತ್ ತಾಳ್ಮೆಯ ಆಟಕ್ಕೆ ಕಾರಣವೇನು?

ಈ ಸಿಕ್ಸರ್ ನಂತರವೂ ಪಂತ್ ಅದೇ ಶೈಲಿಯಲ್ಲಿ ಬ್ಯಾಟಿಂಗ್ ಮುಂದುವರಿಸಿದರು. ಸಾಂದರ್ಭಿಕವಾಗಿ ಸಿಕ್ಸರ್‌ಗಳನ್ನು ಬಾರಿಸಿದರೂ ಪಂತ್ 67 ಎಸೆತಗಳನ್ನು ಎದುರಿಸಿ ಮತ್ತೊಂದು ದೊಡ್ಡ ಹೊಡೆತವನ್ನು ಪ್ರಯತ್ನಿಸುವ ಮೂಲಕ ಔಟಾದರು. ಒಟ್ಟಾರೆಯಾಗಿ, ಪಂತ್ ತಮ್ಮ 68 ಎಸೆತಗಳ ಇನ್ನಿಂಗ್ಸ್‌ನಲ್ಲಿ ಮೂರು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿಯೊಂದಿಗೆ 28 ​​ರನ್ ಗಳಿಸಿ ಔಟಾದರು. ಅಷ್ಟಕ್ಕೂ ಪಂತ್ ಇಷ್ಟು ತಾಳ್ಮೆಯ ಬ್ಯಾಟಿಂಗ್ ಮಾಡಲು ಪ್ರಮುಖ ಕಾರಣ, ಮುಂಬರುವ ಸರಣಿಯಲ್ಲಿ ಶ್ರೀಲಂಕಾ ಸ್ಪಿನ್ನರ್‌ಗಳನ್ನು ಎದುರಿಸಬೇಕಾದ ಪ್ರಮುಖ ಸವಾಲು. ಲಂಕಾ ನೆಲದಲ್ಲಿ ಸ್ಪಿನ್ನರ್‌ಗಳನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಪಂತ್ ಲಂಕಾ ಸ್ಪಿನ್ನರ್‌ಗಳನ್ನು ಎದುರಿಸುವ ಸಲುವಾಗಿ ಹೆಚ್ಚು ಹೆಚ್ಚು ಎಸೆತಗಳನ್ನು ಆಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:23 pm, Sun, 9 August 26

Source link

NTA ಉನ್ನತ ಅಧಿಕಾರಿಗಳ ಜತೆ ಜೋಶಿ ಸಭೆ: ಪ್ರತಿಯೊಬ್ಬ ವಿದ್ಯಾರ್ಥಿಯ ಆಕಾಂಕ್ಷೆ ಆಲಿಸಲು ಸೂಚನೆ – Kannada News | Education Minister Pralhad Joshi Meeting With Department Secretary and senior officials on matters concerning the National Testing Agenc

ನವದೆಹಲಿ, (ಆಗಸ್ಟ್ 09): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಬಳಿಕ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ಬಿಗಿ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಪೂರಕವೆಂಬಂತೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರು ಇಂದು (ಆಗಸ್ಟ್ 09) ನವದೆಹಲಿಯಲ್ಲಿ NTA ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದರು. ಸಭೆಯಲ್ಲಿ ಪರೀಕ್ಷಾ ಪ್ರಕ್ರಿಯೆ ಸರಳೀಕರಣಗೊಳಿಸುವ ಕುರಿತು ಸುದೀರ್ಘ ಚರ್ಚೆ ಮಾಡಿದ್ದಾರೆ. ಅಲ್ಲದೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವಂತೆ. ವಿದ್ಯಾರ್ಥಿಗಳ ದೂರುಗಳಿಗೆ ತಕ್ಷಣವೇ ಸ್ಪಂದಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಆಕಾಂಕ್ಷೆಗಳನ್ನು ಆಲಿಸಬೇಕು. ಇದರ ಜೊತೆಗೆ ಪಾರದರ್ಶಕ ಮತ್ತು ವಿಶ್ವಾಸಾರ್ಹತೆ ಮತ್ತಷ್ಟು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಮಹಿಳೆಯರು ವಯಸ್ಸು, ಪುರುಷರು ಸಂಬಳದ ಬಗ್ಗೆ ನಿಖರವಾಗಿ ಹೇಳೋದಿಲ್ಲ ಏಕೆ ಗೊತ್ತಾ? – Kannada News | Chanakya Niti: Why do women hide their age and men their salary?

ಮಹಿಳೆಯರ ವಯಸ್ಸು (age) ಕೇಳಬಾರದು, ಪುರುಷರ ಸಂಬಳ ಕೇಳಬಾರದು ಎಂಬ ಮಾತನ್ನು ಕೇಳಿರಬಹುದಲ್ವಾ. ಈ ಪರ್ಸನಲ್‌  ಬಗ್ಗೆ ಅವರುಗಳು ಕೂಡ ರಿವೀಲ್‌ ಕೂಡ ಮಾಡುವುದಿಲ್ಲ. ಹೌದು ಹೆಣ್ಣು ಮಕ್ಕಳು ಯಾವಾಗಲೂ ತಮ್ಮ ವಯಸ್ಸನ್ನು ಕಡಿಮೆ ಹೇಳುತ್ತಾರೆ, ಇಲ್ಲವೇ ನಿಜವಾದ ವಯಸ್ಸನ್ನು ಮರೆ ಮಾಚಲು ಇಷ್ಟಪಡುತ್ತಾರೆ. ಅದೇ ರೀತಿ ಗಂಡು ಮಕ್ಕಳು ಕೂಡ ತಾವೆಷ್ಟು ಸಂಪಾದನೆ ಮಾಡುತ್ತಿದ್ದೇವೆ ಎಂಬ ಬಗ್ಗೆ ನಿಖರವಾದ ಮಾಹಿತಿಯನ್ನು ಹೇಳುವುದಿಲ್ಲ. ಆಚಾರ್ಯ ಚಾಣಕ್ಯರು ಗಂಡು ಮತ್ತು ಹೆಣ್ಣಿನ ಈ ನಡವಳಿಕೆಯ ಹಿಂದಿನ ಕಾರಣವನ್ನು ಬಹಳ ಹಿಂದೆಯೇ ವಿವರಿಸಿದ್ದಾರೆ. ಅದೇ ರೀತಿ ಆದಾಯ ಮತ್ತು ವಯಸ್ಸು ಒಬ್ಬರ ಗೌಪ್ಯ ವಿಷಯವಾಗಿದ್ದು, ಅದನ್ನು ಕೇಳುವುದು ಕೂಡ ಸರಿಯಲ್ಲ ಎಂದು ಹೇಳಿದ್ದಾರೆ.  ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.

ಹೆಣ್ಣಿನ  ವಯಸ್ಸು, ಗಂಡಿನ ಸಂಬಳವನ್ನು ಏಕೆ ಕೇಳಬಾರದು?

ಆಚಾರ್ಯ ಚಾಣಕ್ಯರ ಪ್ರಕಾರ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಹ ಸ್ವಾರ್ಥವನ್ನು ಮೀರಿ ಇತರರಿಗಾಗಿ ಬದುಕುತ್ತಾರೆ. ಮಹಿಳೆಯರು ತಮ್ಮ ಕುಟುಂಬಕ್ಕಾಗಿ ತ್ಯಾಗ ಮಾಡುತ್ತಾರೆ ಮತ್ತು ಪುರುಷರು ತಮ್ಮ ಕುಟುಂಬದ ಏಳಿಗೆಗಾಗಿ ಹೋರಾಡುತ್ತಾರೆ. ಆದ್ದರಿಂದ, ಅವರ ವಯಸ್ಸು ಮತ್ತು ಆದಾಯದ ಬಗ್ಗೆ ಕೇಳುವುದು ಅವರ ಕೊಡುಗೆಗಳು ಮತ್ತು ಸಮರ್ಪಣೆಗೆ ಅಗೌರವ ತೋರಿದಂತಾಗುತ್ತದೆ.

ಮಹಿಳೆಯರು ತಮ್ಮ ವಯಸ್ಸನ್ನು ಮರೆಮಾಡಲು ಕಾರಣಗಳೇನು?

ಚಾಣಕ್ಯ ನೀತಿಯ ಪ್ರಕಾರ, ಸಮಾಜದಲ್ಲಿ ಗೌರವ ಮತ್ತು ವೈಯಕ್ತಿಕ ಸ್ಥಾನಮಾನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸಮಾಜದಲ್ಲಿನ ವಿಭಿನ್ನ ದೃಷ್ಟಿಕೋನದಿಂದಾಗಿ ಮಹಿಳೆಯರು ತಮ್ಮ ವಯಸ್ಸನ್ನು ಬಹಿರಂಗಪಡಿಸುವುದಿಲ್ಲ. ವಯಸ್ಸನ್ನು ಮರೆ ಮಾಡುವುದು ಮದುವೆ ಇತ್ಯಾದಿಗೆ ಸಂಬಂಧಿಸಿ ಸಾಮಾಜಿಕ ಒತ್ತಡ ಅಥವಾ ನೋಟಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ ಭದ್ರತೆ ಮತ್ತು ಅವಕಾಶಗಳನ್ನು ಕಾಪಾಡಿಕೊಳ್ಳುವುದು ಆಗಿದೆ. ಮಹಿಳೆಯರು ತಮ್ಮ ನಿಜವಾದ ವಯಸ್ಸನ್ನು ಮರೆಮಾಚುವ ಮೂಲಕ ಸಮಾಜದಲ್ಲಿ ತಮ್ಮ ಮೌಲ್ಯ ಮತ್ತು ಸ್ಥಾನವನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಅಲ್ಲದೆ ಮಹಿಳೆಯರ ಜೀವನ ಕುಟುಂಬಕ್ಕೆ ಮೀಸಲಾಗಿರುತ್ತದೆ. ಅವರು ತಮ್ಮ ಮಕ್ಕಳು, ಗಂಡ ಮತ್ತು ಕುಟುಂಬದ ಸಂತೋಷಕ್ಕಾಗಿ ಬದುಕುತ್ತಾರೆ, ತಮ್ಮ ವಯಸ್ಸಿನ ಬಗ್ಗೆ ಯೋಚಿಸುವುದಿಲ್ಲ. ಹಾಗಾಗಿ  ಅವರು ವಯಸ್ಸಲ್ಲ ತಮ್ಮ ಕುಟುಂಬದ ಸಂತೋಷದಿಂದ ತಮ್ಮನ್ನು ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ.

ಇದನ್ನೂ ಓದಿ: ಮಹಿಳೆಯರು ಅಡುಗೆ ಮಾಡುವಾಗ ತಪ್ಪುಗಳನ್ನು ಮಾಡಬಾರದು ಎನ್ನುತ್ತಾರೆ ಚಾಣಕ್ಯ

ಪುರುಷರು ತಮ್ಮ ಆದಾಯವನ್ನು ಏಕೆ ಬಹಿರಂಗಪಡಿಸುವುದಿಲ್ಲ?

ಸಂಪತ್ತು ಮತ್ತು ಹಣಕಾಸಿನ ವಿಚಾರವನ್ನು  ಬಹಿರಂಗಪಡಿಸುವುದರಿಂದ ಸಂಭಾವ್ಯ ಅಪಾಯ ಮತ್ತು ಸ್ಪರ್ಧೆ ಉಂಟಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆದ್ದರಿಂದ ಪುರುಷರು ತಮ್ಮ ಆದಾಯವನ್ನು ಮರೆಮಾಡುತ್ತಾರೆ. ತಮ್ಮ ನಿಜವಾದ ಆರ್ಥಿಕ ಸ್ಥಿತಿಯನ್ನು ಖಾಸಗಿಯಾಗಿ ಇಟ್ಟುಕೊಳ್ಳುವುದು ಪುರುಷರು ಸಾಮಾಜಿಕ ಅಥವಾ ಆರ್ಥಿಕ ಹಾನಿಯನ್ನು ತಪ್ಪಿಸಲು ಒಂದು ತಂತ್ರವಾಗಿದೆ. ಇದಲ್ಲದೆ  ಪುರುಷರು ತಮಗಾಗಿ ಮಾತ್ರ ಸಂಪಾದಿಸುವುದಿಲ್ಲ, ಅವರು ತಮ್ಮ ಗಳಿಕೆಯಿಂದ ತಮ್ಮ ಕುಟುಂಬವನ್ನು ಸಹ ಪೋಷಿಸುತ್ತಾರೆ. ಜೊತೆಗೆ ಪುರುಷರ ಗೌರವ ಮತ್ತು ಘನತೆ ಅವರ ಸಂಬಳವನ್ನು ಅವಲಂಬಿಸಿರುತ್ತದೆ. ಇದರಿಂದಾಗಿ ಅವರ ಮೇಲೆ ಮಾನಸಿಕ ಒತ್ತಡವಿರುತ್ತದೆ. ಈ ಒತ್ತಡದಿಂದಾಗಿ ಪುರುಷರು ತಮ್ಮ ಸಂಬಳವನ್ನು ಬಹಿರಂಗಪಡಿಸುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version