ಕಂಟೆಂಟ್ ಕ್ರಿಯೇಟರ್ಸ್ಗೆ ಸರಿಯಾಗಿ ಆದಾಯ ಹಂಚಿಕೆ ಮಾಡಿ: ಡಿಜಿಟಲ್ ಪ್ಲಾಟ್ಫಾರ್ಮ್ಗಳಿಗೆ ಸಚಿವ ವೈಷ್ಣವ್ ಸೂಚನೆ – Kannada News | Content creators should get fair revenue share from digital platforms, says Ashwini Vaishnaw
ನವದೆಹಲಿ, ಫೆಬ್ರುವರಿ 28: ಕುಗ್ರಾಮದಲ್ಲಿ ಕೂತು ತಮಾಷೆಯ ವಿಡಿಯೋಗಳನ್ನು ಮಾಡುವವರಿಂದ ಹಿಡಿದು ಸೃಜನಶೀಲ ಕಲಾವಿದರವರೆಗೂ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಕಂಟೆಂಟ್ ಹಾಕುವ ಜನರಿಗೆ ಖುಷಿಯ ಸುದ್ದಿ ಇದೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ಕಂಟೆಂಟ್ ಕ್ರಿಯೇಟರ್ಗಳಿಗೆ ತಮ್ಮ ಆದಾಯದಲ್ಲಿ ನ್ಯಾಯಯುತ ಹಂಚಿಕೆ ಮಾಡಬೇಕು ಎಂದು ಕೇಂದ್ರ ಸಚಿವ ಡಾ. ಅಶ್ವಿನಿ ವೈಷ್ಣವ್ ಒತ್ತಾಯಿಸಿದ್ದಾರೆ. ಡಿಜಿಟಲ್ ನ್ಯೂಸ್ ಪಬ್ಲಿಶನ್ಸ್ ಅಸೋಸಿಯೇಶನ್ (ಡಿಎನ್ಪಿಎ) ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ‘ಮಾಧ್ಯಮ ವೃತ್ತಿಪರರು, ಸೃಜನಶೀಲ ಕಲಾವಿದರು, ಇನ್ಫ್ಲುಯೆನ್ಸರ್ಗಳು, ಬರಹಗಾರರು, ಸಂಶೋಧಕರು ಮೊದಲಾದವರು ಈ…