TV9 Kannada News Live: ತಮಿಳುನಾಡಲ್ಲಿ ಸರ್ಕಾರ ರಚನೆಗೆ ಟಿವಿಕೆಗೆ ಸಂಖ್ಯಾಬಲದ ಹೋರಾಟ, ಅತ್ತ ಬಿಹಾರ ರಾಜಕಾರಣದಲ್ಲಿ ಹೊಸ ಚದುರಂಗದಾಟ! – Kannada News | TV9 Kannada News Live: TVK Struggles for Majority in Tamil Nadu as Bihar Cabinet Expansion Takes Place

ಬೆಂಗಳೂರು, ಮೇ 07: ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿಯೇ ನಟ ದಳಪತಿ ವಿಜಯ್​​ ನೇತೃತ್ವದ ‘ತಮಿಳುಗ ವೆಟ್ರಿ ಕಳಗಂ’ (TVK) ಪಕ್ಷ ತಮಿಳುನಾಡಲ್ಲಿ ಭರ್ಜರಿ ಯಶಸ್ಸು ಕಂಡಿದೆ. ರಾಜ್ಯದ ದೊಡ್ಡ ಪಕ್ಷವಾಗಿ ಟಿವಿಕೆ ಹೊರಹೊಮ್ಮಿದ್ದರೂ ಕೂಡ ಸರ್ಕಾರ ರಚನೆಗೆ ಬಹುಮತದ ಸಮಸ್ಯೆ ಕಾಡತೊಡಗಿದೆ. ಇಂದು (ಮೇ 7) ಬೆಳಿಗ್ಗೆ ವಿಜಯ್ ಅವರನ್ನು ರಾಜಭವನಕ್ಕೆ ಕರೆಸಿಕೊಂಡ ರಾಜ್ಯಪಾಲ ಆರ್‌ವಿ ಅರ್ಲೇಕರ್, ಮೊದಲು 118 ಶಾಸಕರ ಬೆಂಬಲವಿರುವ ಅಧಿಕೃತ ಪತ್ರ ತನ್ನಿ ಎಂದು ಕಠಿಣ ಷರತ್ತು ವಿಧಿಸಿದ್ದಾರೆ. ಎರಡು ದಿನಗಳಲ್ಲಿ ರಾಜ್ಯಪಾಲರನ್ನು ವಿಜಯ್​​ ಎರಡನೇ ಬಾರಿ ಭೇಟಿಯಾಗಿದ್ದು, ಸಂವಿಧಾನದ ಚೌಕಟ್ಟಿನೊಳಗೆ ಹಲವು ಪ್ರಶ್ನೆಗಳನ್ನ ಎದುರಿಸಿದ್ದಾರೆ. ಕೇವಲ 113 ಶಾಸಕರನ್ನು (ಟಿವಿಕೆ 108 + ಕಾಂಗ್ರೆಸ್ 5) ಇಟ್ಟುಕೊಂಡು ಸರ್ಕಾರ ಹೇಗೆ ನಡೆಸುತ್ತೀರಿ? ಎಂಬ ಪ್ರಶ್ನೆಯೂ ಬಂದಿದೆಯಂತೆ. ಹೀಗಿದ್ದರೂ ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಪಿಎಂಕೆ ಪಕ್ಷಗಳ ಬೆಂಬಲದೊಂದಿಗೆ ನಮ್ಮ ಸಂಖ್ಯಾಬಲ 123 ಕ್ಕೆ ಏರಲಿದೆ. ಬಹುಮತ ಸಾಬೀತುಪಡಿಸಲು ನಾನು ಸಿದ್ಧ ಎಂದು ವಿಜಯ್ ಹೇಳಿದ್ದಾರೆ. ಆದರೆ ಬಾಯಿಮಾತಿನ ಭರವಸೆಗೆ ರಾಜ್ಯಪಾಲರು ಒಪ್ಪುತ್ತಿಲ್ಲ ಎನ್ನಲಾಗಿದೆ.

ಸಚಿವನಾಗಿ ನಿತೀಶ್ ಕುಮಾರ್ ಪುತ್ರ ನಿಶಾಂತ್ ಪ್ರಮಾಣ

ಬಿಹಾರ ರಾಜ್ಯ ರಾಜಕಾರಣದಲ್ಲಿ ಹೊಸ ಶಕೆ ಆರಂಭವಾಗಿದ್ದು, ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಸಾಮ್ರಾಟ್ ಚೌಧರಿ ನೇತೃತ್ವದ ಎನ್‌ಡಿಎ ಸರ್ಕಾರವು ತನ್ನ ಸಚಿವ ಸಂಪುಟವನ್ನು ವಿಸ್ತರಿಸಿದೆ. ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರು ನಿಶಾಂತ್ ಕುಮಾರ್ ಸೇರಿದಂತೆ ಒಟ್ಟು 31 ನಾಯಕರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನಿತೀಶ್ ಕುಮಾರ್ ಸಾಕ್ಷಿಯಾಗಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರೆಲ್ಲರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮುಂಬರುವ ಚುನಾವಣೆಗೆ ತಮ್ಮ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ.

ಇದನ್ನೂ ಓದಿ: ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆ, ಆಪರೇಷನ್ ಸಿಂಧೂರ್​ಗೆ ಒಂದು ವರ್ಷ! 

ಕೇರಳಕ್ಕೆ ಯಾರಾಗ್ತಾರೆ ಕಿಂಗ್​​?

ಕೇರಳದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ತೀವ್ರ ಪೈಪೋಟಿ ಉಂಟಾಗಿದೆ. ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಕೆ.ಸಿ. ವೇಣುಗೋಪಾಲ್, ವಿ.ಡಿ. ಸತೀಶನ್ ಮತ್ತು ರಮೇಶ್ ಚೆನ್ನಿತಲ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಮೂವರ ನಡುವೆ ಸ್ಪರ್ಧೆ ಹಿನ್ನೆಲೆ ಹೈಕಮಾಂಡ್ ಶಾಸಕರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಈ ಪ್ರಕ್ರಿಯೆಗಾಗಿ ಎಐಸಿಸಿ ವೀಕ್ಷಕರಾದ ಮುಕುಲ್ ವಾಸನಿಕ್ ಮತ್ತು ಅಜಯ್ ಮಾಕೇನ್ ಅವರು ಕೇರಳದ ತಿರುವನಂತಪುರಂನ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದಾರೆ. 63 ಕಾಂಗ್ರೆಸ್ ಶಾಸಕರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಆರಂಭಿಕ ಮಾಹಿತಿಗಳ ಪ್ರಕಾರ, ಕೆ.ಸಿ. ವೇಣುಗೋಪಾಲ್ ಅವರಿಗೆ 47 ಶಾಸಕರ, ವಿ.ಡಿ. ಸತೀಶನ್ ಅವರಿಗೆ 35 ಶಾಸಕರ ಮತ್ತು ರಮೇಶ್ ಚೆನ್ನಿತಲ ಅವರಿಗೆ 16 ಶಾಸಕರ ಬೆಂಬಲವಿದೆ ಎಂದು ತಿಳಿದುಬಂದಿದೆ. ಈ ವರದಿಗಳನ್ನು ಆಧರಿಸಿ ಹೈಕಮಾಂಡ್ ಅಂತಿಮ ನಿರ್ಧಾರ ಪ್ರಕಟಿಸಲಿದೆ. ಮೇ 10ರೊಳಗೆ ಕೇರಳದಲ್ಲಿ ಹೊಸ ಕಾಂಗ್ರೆಸ್ ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಮಾಡುವ ನಿರೀಕ್ಷೆಯಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL ಫೈನಲ್ ಪಂದ್ಯ ಬೆಂಗಳೂರಿನಿಂದ ಅಹಮದಾಬಾದ್​ಗೆ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಪರಮೇಶ್ವರ್ – Kannada News | Why IPL Final Shifted from Bengaluru to Ahmedabad? G. Parameshwar Reveals Real Commercial Reasons

ಬೆಂಗಳೂರು, ಮೇ 7: ಐಪಿಎಲ್ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಗಳು ಬೆಂಗಳೂರಿನಿಂಂದ ಸ್ಥಳಾಂತರಗೊಂಡಿದ್ದರ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ ಭದ್ರತೆ ಅಥವಾ ಆಡಳಿತಾತ್ಮಕವಾಗಿ ಯಾವುದೇ ಲೋಪದೋಷಗಳಿಲ್ಲ. ಪಂದ್ಯಗಳು ಸ್ಥಳಾಂತರಗೊಳ್ಳಲು ಮುಖ್ಯವಾಗಿ ‘ವಾಣಿಜ್ಯ ಉದ್ದೇಶ’ ಕಾರಣ ಎಂದು ಅವರು ವಿವರಿಸಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸರಿಸುಮಾರು 32,000 ಆಸನಗಳ ಸಾಮರ್ಥ್ಯವಿದೆ. ಇದರಲ್ಲಿ ಸುಮಾರು 7,000 ರಿಂದ 8,000 ಸೀಟುಗಳನ್ನು ವಿಐಪಿಗಳು, ಸ್ಪಾನ್ಸರ್‌ಗಳು ಮತ್ತು ಆರ್‌ಸಿಬಿ ತಂಡಕ್ಕಾಗಿ ಬ್ಲಾಕ್ ಮಾಡಬೇಕಾಗುತ್ತದೆ. ಇಷ್ಟು ಪಾಸುಗಳನ್ನು ಹಂಚಿದ ಮೇಲೆ ಕೇವಲ 25,000 ಸೀಟುಗಳು ಮಾತ್ರ ಟಿಕೆಟ್ ಮಾರಾಟಕ್ಕೆ ಉಳಿಯುತ್ತವೆ. ಇದು ಆರ್ಥಿಕವಾಗಿ ಅಷ್ಟೊಂದು ಲಾಭದಾಯಕವಲ್ಲ ಎಂಬುದು ಆಯೋಜಕರ ಅಭಿಪ್ರಾಯ. ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಇರುವುದರಿಂದ ಅಲ್ಲಿ ಕಮರ್ಷಿಯಲಿ ಹೆಚ್ಚು ಲಾಭವಾಗುತ್ತದೆ ಎಂಬ ಚರ್ಚೆ ಮೊದಲಿನಿಂದಲೂ ಇತ್ತು ಎಂದು ಪರಮೇಶ್ವರ್ ಹೇಳಿದ್ದಾರೆ.

ಶಾಸಕರಿಗೆ ನೀಡುವ ಟಿಕೆಟ್‌ಗಳು ದುರ್ಬಳಕೆ ಆಗಿವೆ ಅಥವಾ ಅದರಿಂದಲೇ ಪಂದ್ಯ ಸ್ಥಳಾಂತರಗೊಂಡಿದೆ ಎಂಬ ಮಾತಿನಲ್ಲಿ ಸತ್ಯವಿಲ್ಲ. ಶಾಸಕರಿಗೆ ನೀಡುವ ಅಲ್ಪ ಪ್ರಮಾಣದ ಪಾಸುಗಳಿಂದ ಇಂತಹ ದೊಡ್ಡ ನಿರ್ಧಾರಗಳು ಬದಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ತಮಿಳುನಾಡು ರಾಜಕೀಯದಲ್ಲಿ ಅಚ್ಚರಿಯ ತಿರುವು: ಡಿಎಂಕೆ ಕಚೇರಿಗೆ ಭೇಟಿ ನೀಡಿದ ಪನ್ನೀರ್​​ಸೆಲ್ವಂ

ಚೆನ್ನೈ, ಮೇ 07: ತಮಿಳುನಾಡು ರಾಜಕೀಯದ ಹೈ-ಡ್ರಾಮಾ ಈಗ ಮತ್ತೊಂದು ರೋಚಕ ಘಟ್ಟಕ್ಕೆ ತಲುಪಿದೆ. ಮಾಜಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ (OPS) ಅವರು ಇಂದು ದಿಢೀರನೆ ಚೆನ್ನೈನ ಅಣ್ಣಾ ಅರಿವಾಲಯಂನಲ್ಲಿರುವ ಡಿಎಂಕೆ ಪ್ರಧಾನ ಕಚೇರಿಗೆ ಆಗಮಿಸುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.

ರಾಜ್ಯದಲ್ಲಿ ಸರ್ಕಾರ ರಚನೆಯ ಕಸರತ್ತು ತೀವ್ರಗೊಂಡಿರುವ ಬೆನ್ನಲ್ಲೇ, ಓಪಿಎಸ್ ಅವರು ಡಿಎಂಕೆ ಶಾಸಕರ ಸಭೆಯಲ್ಲಿ ಭಾಗಿಯಾಗುತ್ತಿರುವುದು ಹೊಸ ಮೈತ್ರಿಯ ಮುನ್ಸೂಚನೆ ನೀಡುತ್ತಿದೆ. ಎಐಎಡಿಎಂಕೆಯಿಂದ ದೂರವಾಗಿರುವ ಓಪಿಎಸ್, ಈಗ ವಿಜಯ್ ಅವರ ಟಿವಿಕೆ ಅಥವಾ ಸ್ಟಾಲಿನ್ ಅವರ ಡಿಎಂಕೆ ಪಾಳಯಕ್ಕೆ ಬೆಂಬಲ ನೀಡಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.

ಸಂಖ್ಯಾಬಲದ ಆಟದಲ್ಲಿ ಪ್ರತಿ ಶಾಸಕನ ಬೆಂಬಲವೂ ಮುಖ್ಯವಾಗಿರುವ ಈ ಹೊತ್ತಿನಲ್ಲಿ, ಪನ್ನೀರ್​ಸೆಲ್ವಂ ಅವರ ಈ ನಡೆ ತಮಿಳುನಾಡು ರಾಜಕೀಯದ ಚಿತ್ರಣವನ್ನೇ ಬದಲಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಚೆನ್ನೈನ ರಾಜಕೀಯ ರಣರಂಗ ಈಗ ಹತ್ತು ಹಲವು ಸಾಧ್ಯತೆಗಳಿಗೆ ಸಾಕ್ಷಿಯಾಗುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಪುಷ್ಪ 2’ ಸಂತ್ರಸ್ತನ ಭೇಟಿ ಮಾಡಿದ ಅಲ್ಲು ಕುಟುಂಬ; ಹಲವು ಭರವಸೆ – Kannada News | Allu Family Visits Pushpa 2 Stampede Victim Sritej, Offers Full Support 2 Cr Aid

ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರದ ಪ್ರೀಮಿಯರ್ ವೇಳೆ ಸಂಭವಿಸಿದ ಕಾಲ್ತುಳಿತದಿಂದ ಸಾಕಷ್ಟು ನೋವು ಅನುಭವಿಸಿದರು. ವೈಯಕ್ತಿಕವಾಗಿಯೂ ಈ ಘಟನೆ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿತು. ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಶ್ರೀತೇಜ್ ಮನೆಗೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹಾಗೂ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಭೇಟಿ ನೀಡಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು, ಚಿಕಿತ್ಸೆ ಮತ್ತು ಮುಂದಿನ ಭವಿಷ್ಯಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.

2024ರ ಡಿಸೆಂಬರ್ 4ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಅಲ್ಲಿ ಕೇವಲ ಸಿನಿಮಾ ಮಾತ್ರ ಪ್ರದರ್ಶನ ಕಾಣುತ್ತಾ ಇರಲಿಲ್ಲ, ಅಲ್ಲಿ ಅಲ್ಲು ಅರ್ಜುನ್ ಕೂಡ ಬಂದಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನರು ನೆರೆದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಶ್ರೀತೇಜ್ ತೀವ್ರವಾಗಿ ಗಾಯಗೊಂಡಿದ್ದನು. ಆತನ ತಾಯಿ ಮೃತಪಟ್ಟಿದ್ದರು. ಮೆದುಳಿಗೆ ಪೆಟ್ಟು ಬಿದ್ದಿದ್ದರಿಂದ ಶ್ರೀತೇಜ್ ಹಲವು ತಿಂಗಳುಗಳ ಕಾಲ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆದಿದ್ದನು. ಸದ್ಯ ಆತ ಚೇತರಿಸಿಕೊಳ್ಳುತ್ತಿದ್ದರೂ, ಸಂಪೂರ್ಣ ಗುಣಮುಖನಾಗಲು ಇನ್ನೂ ಕಾಲಾವಕಾಶ ಬೇಕಿದೆ.

ಅಲ್ಲು ಕುಟುಂಬದ ಭರವಸೆ:

ಶ್ರೀತೇಜ್ ಮನೆಗೆ ಭೇಟಿ ನೀಡಿದ ಸ್ನೇಹಾ ರೆಡ್ಡಿ ಮತ್ತು ಅಲ್ಲು ಅರವಿಂದ್, ಬಾಲಕನ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ಶ್ರೀತೇಜ್‌ನ ತಂಗಿಯ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಅಲ್ಲು ಅರವಿಂದ್ ವಹಿಸಿಕೊಂಡಿದ್ದಾರೆ. ‘ಚೆನ್ನಾಗಿ ಓದು ಮಗಳೇ, ನಿನ್ನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ’ ಎಂದು ಅವರು ಭರವಸೆ ನೀಡಿದ್ದಾರೆ.

ಘಟನೆ ನಡೆದ ದಿನದಿಂದಲೂ ಅಲ್ಲು ಅರ್ಜುನ್ ಕುಟುಂಬ ಮತ್ತು ‘ಪುಷ್ಪ’ ಚಿತ್ರದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಶ್ರೀತೇಜ್‌ನ ವೈದ್ಯಕೀಯ ವೆಚ್ಚವನ್ನು ಭರಿಸುತ್ತಿದೆ. ಏಪ್ರಿಲ್ 2025ರಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರವೂ ಆತನಿಗೆ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗನ ಚೇತರಿಕೆ ನಿಧಾನವಾಗಿದ್ದರೂ, ಸತತ ಚಿಕಿತ್ಸೆಯಿಂದಾಗಿ ಸುಧಾರಣೆ ಕಾಣುತ್ತಿದೆ ಎಂಬುದು ಬಾಲಕನ ತಂದೆ ಭಾಸ್ಕರ್ ಅಭಿಪ್ರಾಯ.

ಇದನ್ನೂ ಓದಿ: 200 ದಿನ: ಚಿತ್ರಮಂದಿರಗಳ ಉಳಿಸಲು ಅಲ್ಲು ಅರ್ಜುನ್ ದಿಟ್ಟ ನಿರ್ಧಾರ

ಶ್ರೀತೇಜ್ ಭವಿಷ್ಯದ ದೃಷ್ಟಿಯಿಂದ ಆತನ ಹೆಸರಿನಲ್ಲಿ 2 ಕೋಟಿ ರೂಪಾಯಿ ಠೇವಣಿ ಇಡಲಾಗಿದೆ. ಇದರಿಂದ ಪ್ರತಿ ತಿಂಗಳು ಆತನಿಗೆ ಸುಮಾರು 1.5 ಲಕ್ಷ ರೂಪಾಯಿ ಬಡ್ಡಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಲಬುರಗಿಯಲ್ಲಿ ಸರ್ಕಾರಿ ಕೆಲಸದ ಆಮಿಷವೊಡ್ಡಿ ಯುವಕ-ಯುವತಿಯರಿಗೆ ಲಕ್ಷಾಂತರ ರೂ ಮೋಸ – Kannada News | Government Job Scam: people Lost lakhs of rupees for Nursing Job Fraud

ಇಎಸ್​ಐ ಆಸ್ಪತ್ರೆ, ವಂಚಿಸಿರುವ ವ್ಯಕ್ತಿ ಪ್ರದೀಪ್Image Credit source: tv9 kannada

ಕಲಬುರಗಿ, ಮೇ 07: ಸರ್ಕಾರಿ ಕೆಲಸ‌ ಸಿಗುತ್ತೆ ಅಂದರೆ ಸಾಕು ಜನ ಅದನ್ನ ಪಡೆಯಲೇಬೆಕು ಅಂತ ಕಾದು ಕುಳಿತಿರುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಭೂಪನೊಬ್ಬ ಕಲಬುರಗಿಯಲ್ಲಿ (kalaburagi) ಹತ್ತಾರು ಯುವಕ, ಯುವತಿಯರಿಂದ ಲಕ್ಷ ಲಕ್ಷ ರೂ ಹಣ ಪಡೆದು ಮೋಸ (Job Scam) ಮಾಡಿದ್ದಾನೆ. ನರ್ಸಿಂಗ್ ಕೆಲಸ ಕೊಡಿಸುತ್ತನೆಂದು ಮೋಸ ಮಾಡಿದ್ದಲ್ಲದೆ ಹಣವು ಕೊಡದೇ ಸತಾಯಿಸುತ್ತಿದ್ದಾನೆ.

ಮುಖ್ಯಾಂಶಯಗಳು

  • ಕಲಬುರಗಿಯ ESI ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಲಸದ ಹೆಸರಿನಲ್ಲಿ ವಂಚನೆ
  • ಸರ್ಕಾರಿ ಕೆಲಸದ ಆಮಿಷವೊಡ್ಡಿ ಯುವಕ-ಯುವತಿಯರಿಗೆ ಮೋಸ
  • ಸರ್ಕಾರಿ ಕೆಲಸವು ಇಲ್ಲದೆ, ಹಣ ಕಳೆದುಕೊಂಡು ಗೋಳಾಟ

ನಸ್೯ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ

ಹೈದರಾಬಾದ್ ಮೂಲದ ಖಾಸಗಿ ಕಂಪನಿಯೊಂದರ ವ್ಯಕ್ತಿ ಪ್ರದೀಪ್​​ ಎಂಬಾತ ಸಾಕಷ್ಟು ಜನರಿಗೆ ವಂಚಿಸಿದ್ದಾನೆ. ರಾಜ್ಯದ ಅತೀ ದೊಡ್ಡ ಮೆಡಿಕಲ್ ಕಾಲೇಜು ಕಂ ಆಸ್ಪತ್ರೆಯಾಗಿರುವ ಇಎಸ್​​ಐ ಆಸ್ಪತ್ರೆಯಲ್ಲಿ ನಸ್೯ ಕೆಲಸ ಕೊಡಿಸುತ್ತೆನೆಂದು ಹತ್ತಾರು ಯುವಕರನ್ನ ನಂಬಿಸಿ ಹಣ ವಸೂಲಿ ಮಾಡಿಸಿದ್ದ. ಅಷ್ಟೇ ಅಲ್ಲದೆ  ಈಗಾಗಲೇ ಹಲವರಿಗೆ ಕೆಲಸ ಕೊಡಿಸಿದ್ದಾಗಿ ಹೇಳಿ ನಂಬಿಸಿದ್ದ. ಹೀಗಾಗಿ ಆತನ ನಂಬಿದ್ದ ಜನ ತಮಗೂ ಕೆಲಸ ಸಿಗುತ್ತೆ, ತಮ್ಮ ಭವಿಷ್ಯಕ್ಕೂ ಒಳ್ಳೆಯದಾಗುತ್ತೆ ಅಂತ ನಂಬಿಕೊಂಡಿದ್ದರು. ಅಲ್ಲದೇ ಆತ ಕೇಳಿದಷ್ಟು ಹಣವನ್ನ ಕೊಟ್ಟಿದ್ದರು.

ಇದನ್ನೂ ಓದಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ರೈತನಿಗೆ ವಂಚನೆ: ಕೋಲ್ಡ್ ಸ್ಟೋರೇಜ್‌ನಲ್ಲಿದ್ದ ಲಕ್ಷಾಂತರ ಮೌಲ್ಯದ ಮೆಣಸಿನಕಾಯಿ ಮಾಯ!

ಒಂದೊಂದು ಹುದ್ದೆಗೆ ಒಬ್ಬೊರಿಂದ 2 ಲಕ್ಷದಿಂದ 4 ಲಕ್ಷ ರೂಪಾಯಿವರಿಗೂ ವಸೂಲಿ ಮಾಡಿದ್ದ. ಸುಮಾರು 10ಕ್ಕೂ ಜನರ ಬಳಿ ಹಣ ವಸೂಲಿ ಮಾಡಿ ವರ್ಷವೇ ಕಳೆದರು ಕೂಡ ಕೆಲಸವು ಇಲ್ಲ, ಹಣವು ವಾಪಸ್​​ ನೀಡದೇ ಸತಾಯಿಸುತ್ತಿದ್ದಾನಂತೆ. ಕೇಳಿದರೆ ಇನ್ನು ಸ್ವಲ್ಪ ದಿನ ಕಾಯುವಂತೆ ಹೇಳುತ್ತಿದ್ದಾನಂತೆ. ಇದರಿಂದ ಆಕ್ರೋಶಗೊಂಡ ಜನರು ಆತನನ್ನ ರೆಡ್ ಹ್ಯಾಂಡ್ ಆಗಿ ಹಿಡಿಯಲು ಬಂದಾಗ ಪರಾರಿಯಾಗಿದ್ದಾನೆ.

ಸದ್ಯ ಇದೇ ವಿಚಾರಕ್ಕಾಗಿ ಹಣ ಕಳೆದುಕೊಂಡವರು ಪೊಲೀಸ್ ಠಾಣೆ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಇನ್ನು ಈ ನೌಟಂಕಿ ಪ್ರದೀಪ್​​ ಒಟ್ಟಿಗೆ ಇಎಸ್​ಐ ಆಸ್ಪತ್ರೆಯ ಆಡಳಿತ‌ ಮಂಡಳಿ ಕೂಡ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ. ಏಕೆಂದರೆ ಪ್ರತಿನಿತ್ಯ ಈತ ಕೆಲವರಿಗೆ ಆಮಿಷವೊಡ್ಡಿ ಇಎಸ್​​ಐ ಆಸ್ಪತ್ರೆಯ ಮುಂಭಾಗ ಪರೀಕ್ಷೆ ಬರೆಯಿಸಿ, ಹಣಕಾಸಿನ ವ್ಯವಹಾರ ಕೂಡ ಮಾಡಿದ್ದನಂತೆ.

ಹಣ ಕೇಳಲು ಹೋದರೆ ಕಾಲ್ಕಿತ ಐನಾತಿ

ಇಷ್ಟೆಲ್ಲಾ ಆದರೂ ಪ್ರದೀಪ್​​ ವಿರುದ್ಧ ಇಲ್ಲಿಯವರೆಗೆ ಯಾವುದೇ ದೂರು ದಾಖಲಾಗಿಲ್ಲ. ಅಲ್ಲದೆ ಇಂದು ಕೂಡ ಆತ ಅದೇ ಸ್ಥಳದಲ್ಲಿ ಕೆಲ ಮಹಿಳೆಯರು ಮತ್ತು ಪುರುಷರಿಗೆ ಪರೀಕ್ಷೆ ಇದೆ ಬನ್ನಿ ಅಂತ ಹೇಳಿದ್ದ.‌ ಅತ್ತ ಹಣ ಕಳೆದುಕೊಂಡು, ಕೆಲಸವೂ ಸಿಗದೇ ಆತನಿಂದ ವಂಚನೆಗೊಳಗಾಗಿದ್ದವರು ಕೂಡ ಆಗಮಿಸಿದ್ದಾರೆ. ಹೀಗೆ ಬಂದವರು ಟಿವಿ9 ವಾಹಿನಿಯನ್ನ ಸಂರ್ಪಕ‌ ಮಾಡಿದ್ದರು.‌ ನಮ್ಮ‌ ತಂಡ ಆತನನ್ನ ಹಿಡಿದು ವಿಚಾರಣೆ ಮಾಡುತ್ತಿರುವಾಗಲೇ ಆತ ಉತ್ತರ ನೀಡುತ್ತೇನೆ ಎನ್ನುತಲೇ‌ ಅಲ್ಲಿಂದ ಏಸ್ಕೇಪ್‌ ಆಗಿದ್ದಾನೆ.

ಇದನ್ನೂ ಓದಿ: ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ 2.1 ಕೋಟಿ ದೋಖಾ: ವಂಚಕರ ಮಾತು ನಂಬಿ ಹಣ ಕೊಟ್ಟು ಕೆಟ್ಟ 78 ವರ್ಷದ ಮಹಿಳೆ!

ಒಟ್ಟಿನಲ್ಲಿ ಸರ್ಕಾರಿ ಕೆಲಸದ ಆಸೆಗೆ ಬಿದ್ದ ಕೆಲ ಯುವಜನಾಂಗ ಹಣ ಕಳೆದುಕೊಂಡು ಗೋಳಾಡುವಂತ ಪರಿಸ್ಥಿತಿ ನಿರ್ಮಾಣವಾದರೆ, ಅತ್ತ ಇದನ್ನೆ ಬಂಡವಾಳ ಮಾಡಿಕೊಂಡಿರುವ ಇಂತಹ ಮೋಸಗಾರರು ಲಕ್ಷ ಲಕ್ಷ ಹಣ ಪಡೆದುಕೊಂಡು ಚಳ್ಳೆ ತಿನ್ನಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಷ್ಣುವರ್ಧನ್ ಗೆಳೆತನದ ಬಗ್ಗೆ ಎಸ್​ಪಿ ಬಾಲಸುಬ್ರಹ್ಮಣ್ಯಂ ಹೀಗೆ ಹೇಳಿದ್ದರು – Kannada News | SP Balasubrahmanyam once talked about his bonding with Vishnuvardhan

ಎಸ್​​ಪಿ ಬಾಲಸುಬ್ರಹ್ಮಣ್ಯಂ (sp balasubrahmanyam) ಭಾರತ ಕಂಡ ಅತ್ಯದ್ಭುತ ಗಾಯಕ. ಅವರಷ್ಟು ಅದ್ಭುತವಾಗಿ, ಭಾವಪರವಶರಾಗಿ ಹಾಡುವ ಹಾಡುಗಗಾರು ಇಂದಿಲ್ಲ. ಎಸ್​ಪಿ ಬಾಲಸುಬ್ರಹ್ಮಣ್ಯಂ ಮೂಲತಃ ತಮಿಳುನಾಡಿನವರಾಗಿದ್ದರು ಅವರಿಗೆ ಕರ್ನಾಟಕದಲ್ಲಿ ಸಿಕ್ಕಷ್ಟು, ಪ್ರೀತಿ, ಆದರ, ಗೌರವ ಇನ್ನೆಲ್ಲೂ ಅಗಾಧವಾದುದು. ‘ನನ್ನ ಮುಂದಿನ ಜನ್ಮ ಕರ್ನಾಟಕದಲ್ಲೇ’ ಎಂದಿದ್ದರು ಎಸ್​​ಪಿಬಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡ ಚಿತ್ರರಂಗದ ನಟರು, ತಂತ್ರಜ್ಞರೊಟ್ಟಿಗೆ ಬಲು ಆಪ್ತ ನಂಟಿತ್ತು. ಎಸ್​​ಪಿಬಿ ಅವರಿಗಾಗಿ ಅಣ್ಣಾವ್ರು ಹಾಡಿದ್ದನ್ನು ಹಲವು ವರ್ಷ ಬಲು ಪ್ರೀತಿಯಿಂದ, ಭಕ್ತಿಯಿಂದ ನೆನಪಿಸಿಕೊಳ್ಳುತ್ತಿದ್ದರು ಎಸ್​​ಪಿಬಿ. ಅದು ಮಾತ್ರವೇ ಅಲ್ಲದೆ, ವಿಷ್ಣುವರ್ಧನ್ ಅವರೊಟ್ಟಿಗೂ ಸಹ ಎಸ್​​ಪಿಬಿ ಅವರಿಗೆ ಬಲು ಆಪ್ತ ಬಂಧವಿತ್ತು.

ಎಸ್​​ಪಿಬಿ ಈಗಿಲ್ಲವಾದರೂ, ಅವರು ಹಳೆಯ ಸಂದರ್ಶನವೊಂದರಲ್ಲಿ ವಿಷ್ಣುವರ್ಧನ್ ಹಾಗೂ ತಮ್ಮ ಗೆಳೆತನದ ಬಗ್ಗೆ ಮಾತನಾಡಿದ್ದಾರೆ. ‘ಕನ್ನಡದ ಮಹಾನ್ ನಟ ವಿಷ್ಣುವರ್ಧನ್ ಅವರು ಯಾವುದೇ ಸಿನಿಮಾ ಒಪ್ಪಿಕೊಳ್ಳುವಾಗ ಆ ಒಪ್ಪಂದದಲ್ಲಿಯೇ ನನಗೆ ಎಸ್​​ಪಿಬಿಯೇ ಹಾಡಬೇಕು ಎಂದು ಷರತ್ತು ಹಾಕುತ್ತಿದ್ದರು’ ಎಂದು ಎಸ್​ಪಿಬಿ ಹೇಳಿದ್ದಾರೆ. ‘ಎಸ್​ಪಿಬಿ ಹೊರತಾಗಿ ಇನ್ಯಾರಿಂದಲೂ ತಮ್ಮ ಸಿನಿಮಾದ, ವಿಶೇಷವಾಗಿ ನಾನು ನಟಿಸುವ ಹಾಡುಗಳನ್ನು ಹಾಡಿಸುವಂತಿಲ್ಲ’ ಎನ್ನುತ್ತಿದ್ದರಂತೆ ವಿಷ್ಣು.

ಅದು ಮಾತ್ರವಲ್ಲ, ಒಮ್ಮೊಮ್ಮೆ ಹಾಡು ರೆಕಾರ್ಡ್ ಆಗುವ ಮುಂಚೆ ಶೂಟಿಂಗ್​​ಗಾಗಿ ಟ್ರ್ಯಾಕ್ ಹಾಡುಗಳನ್ನು ಹಾಡಿಸಲಾಗುತ್ತದೆ. ಆಗ ಬೇರೆ ಹಾಡುಗಾರರು ಹಾಡುಗಳನ್ನು ಹಾಡಿರುತ್ತಾರೆ. ಹಾಗಿದ್ದರೂ ಸಹ ವಿಷ್ಣು ನಟಿಸಲು ಒಲ್ಲೆ ಎಂದು ಬಿಡುತ್ತಿದ್ದರಂತೆ. ಅವರು ಹಾಡಿನ ಶೂಟಿಂಗ್​​ಗೆ ಬರುವ ಮುಂಚೆಯೇ ಎಸ್​​ಪಿಬಿ ಅವರು ಹಾಡಿದ ಹಾಡು ರೆಕಾರ್ಡ್ ಆಗಿದ್ದು, ಅದು ಶೂಟಿಂಗ್ ಸ್ಪಾಟ್​​ನಲ್ಲಿ ಪ್ಲೇ ಆದರೆ ಮಾತ್ರವೇ ವಿಷ್ಣುವರ್ಧನ್ ಆ ಹಾಡಿನಲ್ಲಿ ನಟಿಸುತ್ತಿದ್ದರಂತೆ. ಒಂದೊಮ್ಮೆ ಆ ನಂತರ ಎಸ್​ಪಿಬಿ ಸಿಗಲಿಲ್ಲ, ಬ್ಯುಸಿ ಇದ್ದರು ಎಂದು ಅದೇ ಹಾಡನ್ನು ನಿರ್ಮಾಪಕ-ನಿರ್ದೇಶಕ ಉಳಿಸಿಕೊಂಡು ಬಿಟ್ಟರೆ ಎಂಬುದು ವಿಷ್ಣುವರ್ಧನ್ ಅವರಿಗೆ ಇದ್ದ ಆತಂಕ.

ಇದನ್ನೂ ಓದಿ:10 ಸಾವಿರ ಜನರಿಗೆ ವಿಷ್ಣುವರ್ಧನ್ ಅಭಿಮಾನಿಗಳಿಂದ ವೆಜ್, ನಾನ್-ವೆಜ್ ಊಟ

ಅದೇ ಸಂದರ್ಶನದಲ್ಲಿ ವಿಷ್ಣುವರ್ಧನ್ ಅವರು ಮುಂದೆ ಮಾತನಾಡುತ್ತಾ, ಬಹಳ ಸುಂದರವಾದ ಮಾತು ಹೇಳಿದ್ದಾರೆ. ಹಾಡುಗಾರ ತೆರೆಯ ಹಿಂದೆ ಇರುತ್ತಾನೆ, ಜನ ಸಿನಿಮಾ ನೋಡುವಾಗ ನೋಡುವುದು ನಟರನ್ನು, ಅದರಲ್ಲೂ ತಮ್ಮ ಮೆಚ್ಚಿನ ನಟ ತೆರೆಯ ಮೇಲಿರುವಾಗ ಹಾಡುಗಾರನನ್ನು ಜನ ಗಮನಿಸುವುದೇ ಇಲ್ಲ. ಅಸಲಿಗೆ ಒಂದು ಹಾಡಿಗೆ ಹೆಚ್ಚು ಅಂದ, ಮೆರುಗು ನೀಡುವುದು ಕಲಾವಿದ. ನಮ್ಮದು 20% ಆದರೆ ಅವರದ್ದು 80% ಹಾಗಿದ್ದರೂ ಸಹ ವಿಷ್ಣು ನನ್ನ ಗಾಯನದಿಂದಲೇ ಅವರ ಹಾಡು ಕಳೆ ಕಟ್ಟುತ್ತದೆ ಎಂದು ನಂಬಿದ್ದರು. ಅದು ನನ್ನ ಭಾಗ್ಯ’ ಎಂದಿದ್ದರು ಎಸ್​​ಪಿಬಿ.

ಇಂದು ಆ ಇಬ್ಬರೂ ಮಹನೀಯರು ನಮ್ಮ ನಡುವೆ ಇಲ್ಲ. ಎಸ್​​ಪಿ ಬಾಲಸುಬ್ರಹ್ಮಣ್ಯಂ ಅವರು ಕೊರೊನಾ ಸಮಯದಲ್ಲಿ ಉಸಿರು ಬಿಟ್ಟರು. ವಿಷ್ಣುವರ್ಧನ್ ಅವರು 2009 ರಲ್ಲಿ ಅಭಿಮಾನಿಗಳನ್ನು ಬಿಟ್ಟು ಇಹಲೋಕ ತ್ಯಜಿಸಿದರು. ಆದರೆ ಇಂದಿಗೂ ಈ ಜೋಡಿ ನೀಡಿರುವ ಹಾಡುಗಳು ಜನಮಾನಸದಲ್ಲಿ ಹಸಿರಾಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಲಾಭದ ಹಳಿಗೆ ಬಂದ ಪೇಟಿಎಂ; 663 ಕೋಟಿ ರೂ ನಷ್ಟದಿಂದ 552 ಕೋಟಿ ರೂ ಲಾಭ ಕಂಡ ಒನ್97 ಕಮ್ಯೂನಿಕೇಶನ್ಸ್ – Kannada News | Paytm parent One97 Communications show profit in 26fy, a first since its listing

ಬೆಂಗಳೂರು, ಮೇ 7: ಪೇಟಿಎಂ ಸ್ಥಾಪನೆಯಾದಾಗಿನಿಂದ ಈ ಸಂಸ್ಥೆ ಇದೇ ಮೊದಲ ಬಾರಿಗೆ ವಾರ್ಷಿಕ ಲಾಭದ ಮುಖ ಕಂಡಿದೆ. ಪೇಟಿಎಂನ ಮಾತೃಸಂಸ್ಥೆಯಾದ ಒನ್97 ಕಮ್ಯೂನಿಕೇಶನ್ಸ್ (One97 Communications) ತನ್ನ ವಾರ್ಷಿಕ ವರದಿಯಲ್ಲಿ ಲಾಭ ತೋರಿಸಿದೆ. 2025-26ರ ಹಣಕಾಸು ವರ್ಷದಲ್ಲಿ 552 ಕೋಟಿ ಲಾಭ ಮಾಡಿರುವುದು ಅದು ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬರುತ್ತದೆ. ಹಿಂದಿನ ವರ್ಷದಲ್ಲಿ (2024-25) ಈ ಸಂಸ್ಥೆ 663 ಕೋಟಿ ರೂ ನಷ್ಟ ಅನುಭವಿಸಿತ್ತು. ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ ಷೇರು ಮಾರುಕಟ್ಟೆಯಲ್ಲಿ (Stock Market) ಲಿಸ್ಟ್ ಆದಾಗಿನಿಂದ ಪೂರ್ಣ ವರ್ಷವೊಂದರಲ್ಲಿ ಲಾಭ ಕಂಡಿರುವುದು ಇದೇ ಮೊದಲು.

ಎಕ್ಸ್​ಚೇಂಜ್ ಫೈಲಿಂಗ್​ಗೆ ಅದು ಸಲ್ಲಿಸಿದ ಮಾಹಿತಿ ಪ್ರಕಾರ 2025-26ರ ಹಣಕಾಸು ವರ್ಷದಲ್ಲಿ 9,291 ಕೋಟಿ ರೂ ಆದಾಯ ಹಾಗೂ 552 ಕೋಟಿ ರೂ ಲಾಭ ಮಾಡಿದೆ. ಹಿಂದಿನ ಹಣಕಾಸು ವರ್ಷದಲ್ಲಿ 7,625 ಕೋಟಿ ರೂ ಆದಾಯದಲ್ಲಿ 663 ಕೋಟಿ ರೂ ನಷ್ಟವಾಗಿತ್ತು. ಈಗ ನಷ್ಟಕ್ಕೆ ಕತ್ತರಿ ಹಾಕಿ ಲಾಭದ ದಾರಿ ಹುಡುಕಲು ಪೇಟಿಎಂ ಯಶಸ್ವಿಯಾಗಿರುವುದು ಗಮನಾರ್ಹ.

ಇದನ್ನೂ ಓದಿ: ಟ್ರಂಪ್ ವಿರುದ್ಧ ಸುಂಕದ ಕೇಸ್ ಗೆದ್ದ ಭಾರತೀಯ ಮೂಲದ ವ್ಯಕ್ತಿಯ ಅಚ್ಚರಿಯ ನಿಜ ಜೀವನದ ಕಥೆ ಇದು

ಲಾಭಕ್ಕಾಗಿ ಪೇಟಿಎಂ ಮಾಡಿದ್ದೇನು?

ಕಳೆದ ಒಂದು ವರ್ಷದಿಂದ ಪೇಟಿಎಂ ತನ್ನ ಕಾರ್ಯತಂತ್ರದಲ್ಲಿ ತುಸು ಬದಲಾವಣೆ ಮಾಡಿಕೊಂಡಿದಂತಿದೆ. ಪೇಮೆಂಟ್ಸ್ ಪ್ರೋಸಸಿಂಗ್, ವ್ಯಾಪಾರಿಗಳಿಗೆ ಸಬ್​ಸ್ಕ್ರಿಪ್ಷನ್​ಗಳತ್ತ ಹೆಚ್ಚು ಗಮನ ಹರಿಸಿದೆ. ಹಾಗೆಯೇ, ಸಾಲ ಹಾಗೂ ಇತರ ಹಣಕಾಸು ಉತ್ಪನ್ನಗಳ ವಿತರಣೆಯ ಬ್ಯುಸಿನೆಸ್ ಮೇಲೂ ಸಂಸ್ಥೆ ಗಮನ ಹರಿಸುತ್ತಿದೆ. ಈ ಹಣಕಾಸು ಉತ್ಪನ್ನಗಳ ವಿತರಣೆಯ ಬ್ಯುಸಿನೆಸ್​ನಿಂದ ಅದಕ್ಕೆ ಒಂದು ವರ್ಷದಲ್ಲಿ 2,594 ಕೋಟಿ ರೂ ಆದಾಯ ಸಿಕ್ಕಿದೆ.

ಈ ಮೇಲಿನ ಬ್ಯುಸಿನೆಸ್ ತಂತ್ರ ಬದಲಾವಣೆಯ ಜೊತೆಗೆ ಎಐ ಅಳವಡಿಕೆಯೂ ಕೂಡ ಸಂಸ್ಥೆಯ ಕ್ಷಮತೆಯನ್ನು ಹೆಚ್ಚಿಸಿ, ಲಾಭ ಬರಲು ಸಹಕಾರಿಯಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆಯ ಜಯಭೇರಿ: ದೇಶದ ಜಿಡಿಪಿ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಮೂಡೀಸ್ ಮತ್ತು ಎಡಿಬಿ

ಪೆಟಿಎಂ ಷೇರುಬೆಲೆ ಝರ್ಜೆಂದು ಏರಿಕೆ

ಐದು ವರ್ಷದ ಹಿಂದೆ ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ಇದು ಇಡೀ ವರ್ಷವೊಂದರಲ್ಲಿ ಲಾಭದ ಮುಖ ನೋಡಿದ್ದು ಇದೇ ಮೊದಲು. 2021ರ ನವೆಂಬರ್ 18ರಂದು ಇದು ಲಿಸ್ಟ್ ಆದಾಗ ಇದ್ದ ಬೆಲೆ 1,950 ರೂ. ಐಪಿಒದಲ್ಲಿ ಪಡೆದಿದ್ದ 2,150 ರೂ ಬೆಲೆಗಿಂತಲೂ ಕಡಿಮೆ. 2024ರಲ್ಲಿ ಒಂದು ಹಂತದಲ್ಲಿ ಇದರ ಬೆಲೆ 350 ರೂಗಿಂತಲೂ ಕೆಳಗೆ ಇಳಿದುಹೋಗಿತ್ತು.

ಇದೀಗ ಚೇತರಿಸಿಕೊಂಡು 1,196 ರೂ ಮುಟ್ಟಿದೆ. ಪೂರ್ಣ ವರ್ಷದಲ್ಲಿ ಲಾಭ ಪಡೆದಿರುವ ವರದಿ ಬಂದ ಹಿನ್ನೆಲೆಯಲ್ಲಿ ಇವತ್ತು ಗುರುವಾರ ಇದರ ಷೇರುಬೆಲೆಯಲ್ಲಿ ಶೇ. 7ರಷ್ಟು ಹೆಚ್ಚಳ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನನ್ನ ಮಕ್ಕಳು ಸಹ ಸ್ಪರ್ಧಿಸಲ್ಲ: ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ – Kannada News | BJP MLC H Vishwanath retires from electoral politics

ಮೈಸೂರು, (ಮೇ,7): ಕರ್ನಾಟಕದ ಹಿರಿಯ ರಾಜಕಾರಣಿ, ರಾಜಕೀಯ ವಲಯದಲ್ಲಿ ಹಳ್ಳಿಹಕ್ಕಿ ಎಂದೇ ಗುರುತಿಸಿಕೊಂಡಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್​ ವಿಶ್ವನಾಥ್ (H Vishwanath)​ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ವಿಶ್ವನಾಥ್ ಅವರು ಸಕ್ರೀಯ ರಾಜಕಾರಣದಲ್ಲಿ ಇರುತ್ತಾರೆ. ಆದ್ರೆ,ಇನ್ಮುಂದೆ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುವುದಿಲ್ಲ. ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಚುನಾವಣೆಗೆ ಸ್ಪರ್ಧಿಸಿದಾಗ ಜನರೇ ಹಣ ನೀಡಿ ಆಶೀರ್ವದಿಸಿದ್ದರು ಈಗ ಹಣ ನೀಡಿ ಚುನಾವಣೆ ಎದುರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಲು 50 ಕೋಟಿ ರೂಪಾಯಿ ಹಣ ಬೇಕು. 50 ಕೋಟಿ ರೂ. ಖರ್ಚು ಮಾಡಿ ಚುನಾವಣೆ ಎದುರಿಸುವಷ್ಟು ಶಕ್ತಿ ನನಗಿಲ್ಲ. ನನ್ನ ಮಕ್ಕಳು ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ರಾಜಕೀಯದಲ್ಲಿ ಮುಂದುವರಿಯುತ್ತೇನೆ. ಆದರೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಬಂಗಾರ ಕದ್ದ ಮಹಿಳಾ ಸಿಬ್ಬಂದಿ: ದೋಚಿದ್ದು 9.7 ಲಕ್ಷ ಮೌಲ್ಯದ ಆಭರಣ – Kannada News | Bengaluru Hospital Staff Steals Patient’s 9.7 Lakh Gold Jewelry

ಬೆಂಗಳೂರು, ಮೇ 07: ಶಸ್ತ್ರಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಸೇರಿದ ಬಂಗಾರವನ್ನು ಅಲ್ಲಿನ ಸಿಬ್ಬಂದಿಯೇ ಕದ್ದಿರುವ ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಒಟ್ಟು 9.7 ಲಕ್ಷ ರೂಪಾಯಿ ಮೌಲ್ಯದ ಆಭರಣವನ್ನು ವಾರ್ಡ್​​ನ ಕಪಾಟಿನಿಂದ ಎಗರಿಸಿದ್ದ ಮಹಿಳಾ ಸಿಬ್ಬಂದಿಯನ್ನು ಹೆಣ್ಣೂರು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ.

  • ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಬಂಗಾರ ಕದ್ದ ಮಹಿಳಾ ಸಿಬ್ಬಂದಿ
  • ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ಆಸ್ಪತ್ರೆಯೊಂದರಲ್ಲಿ ಘಟನೆ
  • ಒಟ್ಟು 9.7 ಲಕ್ಷ ರೂಪಾಯಿ ಮೌಲ್ಯದ ವಿವಿಧ ಆಭರಣಗಳು ಕಳ್ಳತನ

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲೊಂದು ಅಚ್ಚರಿಯ ಘಟನೆ; ಕಳುವಾಗಿದ್ದ ಮಹಿಳೆಯ ಬಂಗಾರದ ಸರ 2 ದಿನಗಳ ಬಳಿಕ ಮನೆ ಬಳಿಯೇ ಪ್ರತ್ಯಕ್ಷ!

ಯಲಹಂಕ ನಿವಾಸಿಯಾದ 41 ವರ್ಷದ ವ್ಯಕ್ತಿಯೊಬ್ಬರು ನೀಡಿದ ದೂರಿನ ಪ್ರಕಾರ, ಮೇ 1ರಂದು ಶಸ್ತ್ರಚಿಕಿತ್ಸೆಗಾಗಿ ಪತ್ನಿಯನ್ನು ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಮೇ 2ರ ಬೆಳಗ್ಗೆ ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯುವ ಮೊದಲು ನರ್ಸಿಂಗ್ ಸಿಬ್ಬಂದಿ ಎಲ್ಲಾ ಆಭರಣಗಳನ್ನು ತೆಗೆಯುವಂತೆ ಸೂಚಿಸಿದ್ದರು. ಅದಾದ ಬಳಿಕ ಮಹಿಳೆ 65 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 9 ಗ್ರಾಂ ತೂಕದ ಕಿವಿಯೋಲೆಗಳು ಹಾಗೂ 10 ಗ್ರಾಂ ತೂಕದ ಬೆಳ್ಳಿ ಕಾಲುಗಜ್ಜೆಗಳನ್ನು ಹ್ಯಾಂಡ್‌ಬ್ಯಾಗ್‌ನಲ್ಲಿ ಇಟ್ಟು ವಾರ್ಡ್‌ನ ಕಪಾಟಿನೊಳಗೆ ಇರಿಸಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಮಧ್ಯಾಹ್ನ ಸುಮಾರು 2.45ಕ್ಕೆ ಕಪಾಟು ಪರಿಶೀಲಿಸಿದಾಗ ಆಭರಣಗಳು ಕಾಣೆಯಾಗಿರುವುದು ಗೊತ್ತಾಗಿ ದಂಪತಿ ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ.

ಇನ್ನು ಕಪಾಟಿನ ಬಾಗಿಲು ಒಡೆದ ಗುರುತುಗಳಿಲ್ಲದ ಹಿನ್ನೆಲೆ ವಾರ್ಡ್‌ಗೆ ಪ್ರವೇಶವಿದ್ದವರ ಮೇಲೆ ಅನುಮಾನ ವ್ಯಕ್ತವಾಗಿದೆ. ತಕ್ಷಣವೇ ಆಸ್ಪತ್ರೆ ಆಡಳಿತಕ್ಕೆ ಮಾಹಿತಿ ನೀಡಿದ ಬಳಿಕ, ಘಟನೆ ಬಗ್ಗರ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ವೇಳೆ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದ ಮಹಿಳಾ ಸಿಬ್ಬಂದಿಯೇ ಕಳ್ಳತನ ನಡೆಸಿರೋ ವಿಷಯ ಬಹಿರಂಗವಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ – Kannada News | BJP MLC H Vishwanath Oppressed to celebrate BS yediyurappa Abhimanotsava

ಮೈಸೂರು, (ಮೇ 07): ಜನಸೇವೆಯಲ್ಲಿ 50 ವರ್ಷ ಪೂರೈಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವವು (yediyurappa Abhimanotsava) ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿದೆ. . ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸನ್ಮಾನಿಸಲಿದ್ದಾರೆ. ಆದ್ರೆ, ಈ ಕಾರ್ಯಕ್ರಮಕ್ಕೆ ಸ್ವಪಕ್ಷದವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೌದು…ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಿರುವ ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಬಿಜೆಪಿ ಪರಿಷತ್ ಸದಸ್ಯ ಹೆಚ್​.ವಿಶ್ವನಾಥ್​  (BJP MLC H Vishwanath) ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಪೋಕ್ಸೋ ಪ್ರಕರಣದ ಆರೋಪಕ್ಕೆ ಯಡಿಯೂರಪ್ಪ ಗುರಿಯಾಗಿದ್ದಾರೆ. ಇದು ಗಂಭೀರ ಪ್ರಕರಣವಾಗಿದೆ. ಇದೀಗ ಅವರ ಅಭಿಮಾನೋತ್ಸವಕ್ಕೆ ಮುಂದಾಗಿರುವುದು ಸರಿಯಲ್ಲ. ಈ ಎರಡೂ ಪ್ರಕರಣಗಳು ರಾಜ್ಯಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿವೆ. ವಕೀಲ ಸಿದ್ದರಾಮಯ್ಯಗೆ ಇದೆಲ್ಲಾ ಗೊತ್ತಿಲ್ಲವೇ ಎಂದು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version