ಯೋಗಾಸನಕ್ಕೆ ಜಾಗತಿಕ ವೇದಿಕೆ; ಭಾರತದಲ್ಲಿ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್‌ – Kannada News | World Yogasana Championship 2026: Ahmedabad Hosts Global Yoga Sports Event

2026ರ ಜೂನ್ 4 ರಿಂದ 8 ರವರೆಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ‘ಟ್ರಾನ್ಸ್‌ಸ್ಟೇಡಿಯಾ’ದಲ್ಲಿ ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಆವೃತ್ತಿ ನಡೆಯಲಿದೆ. ಈ ಪ್ರತಿಷ್ಠಿತ ಕೂಟದಲ್ಲಿ ವಿಶ್ವದ 40ಕ್ಕೂ ಹೆಚ್ಚು ದೇಶಗಳು ಭಾಗವಹಿಸಲಿವೆ. ‘ವಿಶ್ವ ಯೋಗಾಸನ’ (World Yogasana) ಸಂಸ್ಥೆಯ ಆಶ್ರಯದಲ್ಲಿ ಈ ಚಾಂಪಿಯನ್‌ಶಿಪ್ ನಡೆಯಲಿದ್ದು, ‘ಯೋಗಾಸನ ಭಾರತ್’ ಇದರ ಆತಿಥ್ಯ ವಹಿಸಿದೆ. ಇದು ಜಗತ್ತಿನಾದ್ಯಂತದ ಪ್ರಮುಖ ಕ್ರೀಡಾಪಟುಗಳನ್ನು ಒಂದು ವೇದಿಕೆಗೆ ತರಲಿದ್ದು, ಯೋಗಾಸನವನ್ನು ಒಂದು ಸ್ಪರ್ಧಾತ್ಮಕ ಕ್ರೀಡೆಯಾಗಿ ಉತ್ತೇಜಿಸುವಲ್ಲಿ ಭಾರತದ ಮುಂಚೂಣಿ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ.

ರಾಷ್ಟ್ರೀಯ ತರಬೇತಿ ಶಿಬಿರ

ಈ ಕ್ರೀಡಾಕೂಟದ ಸಿದ್ಧತೆಯ ಭಾಗವಾಗಿ, ಭಾರತೀಯ ರಾಷ್ಟ್ರೀಯ ಯೋಗಾಸನ ತಂಡದ ಅಧಿಕೃತ ಆಯ್ಕೆ ಪ್ರಕ್ರಿಯೆಯು ಮೇ 1 ಮತ್ತು 2 ರಂದು ಹರಿಯಾಣದ ಸೋನೆಪತ್‌ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಯಿತು. ಕ್ರೀಡಾಪಟುಗಳು ಸಾಂಪ್ರದಾಯಿಕ, ಕಲಾತ್ಮಕ, ಲಯಬದ್ಧ ಮತ್ತು ಅಥ್ಲೆಟಿಕ್ ಯೋಗಾಸನ ವಿಭಾಗಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಆಯ್ಕೆಯಾದ ಕ್ರೀಡಾಪಟುಗಳು ಮೇ 10 ರಿಂದ ಜೂನ್ 2 ರವರೆಗೆ ಅಹಮದಾಬಾದ್‌ನ ನಾರನ್‌ಪುರ ಕ್ರೀಡಾ ಸಂಕೀರ್ಣದಲ್ಲಿ (SAI NCOE) ನಡೆಯಲಿರುವ ವಿಶೇಷ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಒಂದು ಐತಿಹಾಸಿಕ ಕ್ಷಣವಾಗಿದೆ

ಈ ಸಂದರ್ಭದಲ್ಲಿ ಮಾತನಾಡಿದ ಯೋಗಾಸನ ಭಾರತ್ ಅಧ್ಯಕ್ಷರಾದ ಉದಿತ್ ಶೇತ್, “ಮೊದಲ ಬಾರಿಗೆ ವಿಶ್ವ ಯೋಗಾಸನ ಕ್ರೀಡಾ ಚಾಂಪಿಯನ್‌ಶಿಪ್ ಆಯೋಜಿಸುತ್ತಿರುವುದು ಕ್ರೀಡಾ ವಲಯದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿಯವರ ಮಾರ್ಗದರ್ಶನದಲ್ಲಿ, ಯೋಗಾಸನ ಕ್ರೀಡೆಯ ಮೂಲಕ ಜಾಗತಿಕ ಯುವಜನತೆಗೆ ಯೋಗದ ಮಹತ್ವವನ್ನು ತಲುಪಿಸುವುದು ನಮ್ಮ ಗುರಿಯಾಗಿದೆ. ಬಲವಾದ ಸ್ಪರ್ಧಾತ್ಮಕ ವ್ಯವಸ್ಥೆಯೊಂದಿಗೆ ಯೋಗಾಸನವು ಈಗ ಜಾಗತಿಕ ವೇದಿಕೆಗೆ ಸಿದ್ಧವಾಗಿದೆ. ಈ ಚಳವಳಿಯ ನೇತೃತ್ವ ವಹಿಸಲು ಭಾರತ ಹೆಮ್ಮೆಪಡುತ್ತದೆ,” ಎಂದರು.

ವಿಶ್ವ ಯೋಗಾಸನ ಮತ್ತು ಯೋಗಾಸನ ಭಾರತ್‌ನ ಪ್ರಧಾನ ಕಾರ್ಯದರ್ಶಿ ಡಾ. ಜೈದೀಪ್ ಆರ್ಯ ಮಾತನಾಡಿ, “ಸೋನೆಪತ್‌ನಲ್ಲಿ ನಡೆದ ರಾಷ್ಟ್ರೀಯ ಆಯ್ಕೆ ಪ್ರಕ್ರಿಯೆಯಲ್ಲಿ ಕಂಡುಬಂದ ಉತ್ಸಾಹ ಮತ್ತು ಪ್ರತಿಭೆಯು ಭಾರತದಾದ್ಯಂತ ಯೋಗಾಸನ ಬೆಳೆದುಬಂದಿರುವ ಹಾದಿಯನ್ನು ತೋರಿಸುತ್ತದೆ. ಈ ಚಾಂಪಿಯನ್‌ಶಿಪ್ ಕ್ರೀಡಾಪಟುಗಳಿಗೆ ಅಂತರಾಷ್ಟ್ರೀಯ ವೇದಿಕೆಯನ್ನು ಒದಗಿಸುವುದಲ್ಲದೆ, ಕ್ರೀಡೆಯ ಜಾಗತಿಕ ಮಾನ್ಯತೆ ಮತ್ತು ಅಭಿವೃದ್ಧಿಯನ್ನು ವೇಗಗೊಳಿಸಲಿದೆ,” ಎಂದು ತಿಳಿಸಿದರು.

ಯೂರಿಕ್ ಆ್ಯಸಿಡ್​ನಿಂದ ಕೀಲು ನೋವಾಗುತ್ತಿರಬಹುದು; ಈ 4 ಯೋಗಾಸನಗಳಿಂದ ಸಿಗುತ್ತೆ ಪರಿಹಾರ

ವಿಶ್ವ ಯೋಗಾಸನ ಸಂಸ್ಥೆಯಿಂದ ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ಈ ಕ್ರೀಡೆಯು ಯೋಗದ ಶಿಸ್ತು ಮತ್ತು ಕ್ರೀಡಾ ಮನೋಭಾವದ ಅದ್ಭುತ ಸಂಯೋಜನೆಯಾಗಿದೆ. ಜೂನ್‌ನಲ್ಲಿ ಅಹಮದಾಬಾದ್‌ನಲ್ಲಿ ಜಗತ್ತಿನಾದ್ಯಂತದ ಕ್ರೀಡಾಪಟುಗಳು ಒಂದಾಗಲಿದ್ದು, ಈ ಚಾಂಪಿಯನ್‌ಶಿಪ್ ಭಾರತದ ಯೋಗ ಪರಂಪರೆ ಮತ್ತು ಕ್ರೀಡಾ ಶ್ರೇಷ್ಠತೆಯ ಐತಿಹಾಸಿಕ ಸಂಭ್ರಮವಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:02 pm, Thu, 7 May 26

Source link

ಆನ್ ಲೈನ್ ಗೇಮಿಂಗ್ ಕಂಪನಿ ಮೇಲೆ ಬೆಂಗಳೂರು ಇಡಿ ಅಧಿಕಾರಿಗಳಿಂದ ದಾಳಿ, ಕೋಟ್ಯಾಂತರ ಮೌಲ್ಯದ ಆಸ್ತಿ ವಶಕ್ಕೆ – Kannada News | Bengaluru ED raids On online gaming company Games Kraft

ಬೆಂಗಳೂರು, (ಮೇ 07): ಆನ್ ಲೈನ್ ಗೇಮಿಂಗ್ ಕಂಪನಿಯ (online gaming company )ಮೇಲೆ ಬೆಂಗಳೂರು ಘಟಕದ ಇಡಿ ಅಧಿಕಾರಿಗಳು ದಾಳಿ (Bengaluru ED raids) ಮಾಡಿದ್ದಾರೆ. ರಮ್ಮಿ ಕಲ್ಚರ್ ಆ್ಯಪ್ ಮೂಲಕ ವಂಚನೆ ಪ್ರಕರಣದ ಸಂಬಂಧ Games Kraft ಕಂಪನಿಯ ಮೇಲೆ ದೆಹಲಿ ಹಾಗೂ ಬೆಂಗಳೂರಿನಲ್ಲಿ 16 ಕಡೆ ದಾಳಿ ನಡೆದಿದೆ. ಅಲ್ಲದೇ ರಮ್ಮಿ ಕಲ್ಚರ್ ಆ್ಯಪ್ ಮೂಲಕ ಜನರಿಗೆ ವಂಚನೆ ಮಾಡುತ್ತಿದ್ದವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿಯಾಗಿದ್ದು, ದಾಳಿಯಲ್ಲಿ ಇಡಿ ಅಧಿಕಾರಿಗಳು ಕೋಟ್ಯಾಂತರ ಮೌಲ್ಯದ ಆಸ್ತಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಮ್ಮಿ ಕಲ್ಚರ್ ಆ್ಯಪ್ ಮೂಲಕ ವಂಚನೆ ಸಂಬಂಧ ದೆಹಲಿಯಲ್ಲಿ ಎಫ್ಐಆರ್ ಗಳು ದಾಖಲಾಗಿದ್ದು, ಇದನ್ನು ಆಧರಿಸಿ ಬೆಂಗಳೂರು ಘಟಕದ ಇಡಿ ಅಧಿಕಾರಿಗಳು Games Kraft ಕಂಪನಿಯ ಮೇಲೆ ದಾಳಿ ಮಾಡಿದ್ದಾರೆ.  ಇನ್ನು ರಮ್ಮಿ ಕಲ್ಚರ್ ಆ್ಯಪ್ ಮೂಲಕ ಜನರಿಗೆ ವಂಚನೆ ಮಾಡುತ್ತಿದ್ದವರ ಮನೆ ಮತ್ತು ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಕೋಟ್ಯಾಂತರ ಮೌಲ್ಯದ ಆಸ್ತಿ ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: OMG! ಆನ್​ಲೈನ್ ಮನಿ ಗೇಮಿಂಗ್ ನಿಷೇಧ – ನೈತಿಕತೆ ಎತ್ತಿಹಿಡಿಯುವ ಕಾನೂನೋ ಅಥವಾ ಗದಾ ಪ್ರಹಾರವೋ?

ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿಗೆ ತಂದಿದ್ದು, ಆನ್‌ಲೈನ್ ಬೆಟ್ಟಿಂಗ್ ಶಿಕ್ಷಾರ್ಹ ಅಪರಾಧವಾಗಿದೆ. ಆನ್‌ಲೈನ್ ಮನಿ ಗೇಮ್‌ಗಳನ್ನು ನೀಡುವುದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿ ರೂ,ವರೆಗೂದಂಡ ವಿಧಿಸಬಹುದು. ಆದರೆ ಅಂತಹ ಆಟಗಳನ್ನು ಜಾಹೀರಾತು ಮಾಡಿದರೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಲಕ್ಷದವರೆಗೆ ದಂಡ ವಿಧಿಸಬಹುದು.

ಕರ್ನಾಟದಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಳ್ಳಂದೂರಿನಿಂದ ಏರ್​​ಪೋರ್ಟ್​​ಗೆ ತೆರಳಲು ಮೂರುವರೆ ಗಂಟೆ!: ಬೆಂಗಳೂರು ಟ್ರಾಫಿಕ್​​ ಭೀಕರತೆ ತೆರೆದಿಟ್ಟ ಯುವತಿಯ ವಿಡಿಯೋ ವೈರಲ್​​ – Kannada News | Airport Commute Nightmare: Bengaluru Woman’s 3.5 Hour Traffic Struggle Sparks Debate Online

ಬೆಂಗಳೂರು, ಮೇ 07: ಸಿಲಿಕಾನ್​​ ಸಿಟಿ ಬೆಂಗಳೂರಲ್ಲಿ (Bengaluru) ಟ್ರಾಫಿಕ್​​ ಸಮಸ್ಯೆ ಮಾಮೂಲು. ಅದರಲ್ಲೂ ಮಳೆ ಬಂತೆಂದರಂತೂ ಮುಗಿದೇ ಹೋಯಿತು. ಕಿಲೋ ಮೀಟರ್​​ಗಟ್ಟಲೆ ವಾಹನಗಗಳು ಸರತಿ ಸಾಲಲ್ಲಿ ನಿಂತುಬಿಡುತ್ತವೆ. ಈ ನಡುವೆ ಬೆಳ್ಳಂದೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲು ಟ್ರಾಫಿಕ್​​ ಕಾರಣ ತನಗೆ ಬರೋಬ್ಬರಿ 3 ಗಂಟೆ ತಗುಲಿದೆ ಎಂದು ಯುವತಿ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವತಿ ಹೇಳಿದ್ದೇನು?

ಸಾಕ್ಷಿ ಎಂಬ ಯುವತಿ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದು, ನನ್ನ ಜೀವನದ ಅತ್ಯಂತ ಕೆಟ್ಟ ಏರ್‌ಪೋರ್ಟ್ ಪ್ರಯಾಣ ಇದಾಗಿತ್ತು. ಬೆಳ್ಳಂದೂರಿನಿಂದ ಏರ್‌ಪೋರ್ಟ್ ತಲುಪಲು 3.5 ಗಂಟೆ ಹಿಡಿಯಿತು. ತಲೆನೋವು, ಹಸಿವು ಎಲ್ಲವೂ ಸೇರಿ ಇದು ಪ್ರಯಾಣಕ್ಕಿಂತ ಬದುಕುಳಿಯುವ ಹೋರಾಟದಂತೆ ಅನಿಸಿತು ಎಂದು ಹೇಳಿದ್ದಾರೆ. ಸಂಜೆ 6 ಗಂಟೆಗೆ ಮನೆಯಿಂದ ಹೊರಟಿದ್ದ ತಾನು ರಾತ್ರಿ 9.30ರವರೆಗೂ ಬ್ಯಾಗೇಜ್ ಡ್ರಾಪ್ ಮುಗಿಯುವ ಮುನ್ನ ವಿಮಾನ ನಿಲ್ದಾಣ ತಲುಪಬಹುದೇ ಎಂಬ ಆತಂಕದಲ್ಲೇ ಇದ್ದುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಳೆ ವೇಳೆ 15 ಕಿಮೀ ಪ್ರಯಾಣಿಸಲು ಬೆಂಗಳೂರಲ್ಲಿ ಆಟೋ ದರ 1,200 ರೂ.!; ಈ ಹಣದಲ್ಲಿ ಏರ್‌ಪೋರ್ಟ್‌ಗೇ ಹೋಗಬಹುದು ಎಂದ ನೆಟ್ಟಿಗರು

ಮಾರ್ಗ ಮಧ್ಯೆ ಹಲವು ಕಡೆ ಟ್ರಾಫಿಕ್ ಜಾಮ್​​ ಉಂಟಾಗಿದ್ದು, ಅದೃಷ್ಟವಶಾತ್ ಇಂಡಿಗೋ ವಿಮಾನ ವಿಳಂಬವಾಗಿದ್ದರಿಂದಲೇ ಸಮಯಕ್ಕೆ ತಲುಪಲು ಸಾಧ್ಯವಾಯಿತು. ಈ ಬಾರಿ ಇಂಡಿಗೋವೇ ರಕ್ಷಕನಾಯಿತು ಎಂದು ಅವರು ಬರೆದುಕೊಂಡಿದ್ದಾರೆ. ಮುಂದಿನ ಕೆಲವು ವಾರಗಳಲ್ಲಿ ಮಳೆ ಸಾಧ್ಯತೆ ಇರುವುದರಿಂದ ಕಚೇರಿ ಸಮಯದ ಬಳಿಕ ಏರ್‌ಪೋರ್ಟ್‌ಗೆ ತೆರಳುವವರು ಕನಿಷ್ಠ ಒಂದೂವರೆ ಗಂಟೆ ಹೆಚ್ಚುವರಿ ಸಮಯ ಮೀಸಲಿಡಬೇಕು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ. ಈ ವಿಡಿಯೋಗೆ ಅನೇಕರು ಪ್ರತಿಕ್ರಿಯಿಸಿದ್ದು, ಏರ್‌ಪೋರ್ಟ್‌ಗೆ ಹೋಗಲು 3.5 ಗಂಟೆ ಬೇಕಾದರೆ ಅದು ಭಯಾನಕ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ವಿಮಾನ ವಿಳಂಬವೇ ಈಗ ಪ್ರಯಾಣಿಕರಿಗೆ ಟ್ರಾಫಿಕ್ ನಿರ್ವಹಣೆಗೆ ಹೋಲಿಸಿದರೆ ಹೆಚ್ಚು ಸಹಾಯ ಮಾಡುತ್ತಿದೆ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:26 pm, Thu, 7 May 26

Source link

‘ಸೆರಗು ಸರಿದಿದ್ದಕ್ಕೆ’ ನೋರಾ ಕ್ಷಮೆ: ಜೊತೆಗೊಂದು ಮಹತ್ವದ ನಿರ್ಧಾರ – Kannada News | Nora Fatehi apologises to National Commission for Women over KD Movie song controversy

ಕೆಡಿ’ (KD) ಸಿನಿಮಾದ ‘ಸರ್ಸೆ ಸೆರಗು’ ಹಾಡು ಉತ್ತರ ಭಾರತದಲ್ಲಿ ಭಾರಿ ವಿವಾದ ಹುಟ್ಟು ಹಾಕಿತ್ತು. ‘ಸರ್ಕೆ ಚುನರಿ’ ಹೆಸರಿನಲ್ಲಿ ಹಿಂದಿಯಲ್ಲಿ ಬಿಡುಗಡೆ ಆಗಿದ್ದ ಈ ಹಾಡಿನ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು. ಹಾಡಿನಲ್ಲಿ ಕುಣಿದಿದ್ದ ನಟಿ ನೋರಾ ಫತೇಹಿ, ನಿರ್ದೇಶಕ ಪ್ರೇಮ್ ಇನ್ನಿತರೆ ವ್ಯಕ್ತಿಗಳ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ದೂರು ದಾಖಲಿಸಿಕೊಂಡಿತ್ತು. ಪ್ರೇಮ್ ಸೇರಿದಂತೆ ಇನ್ನಿತರರು ಕ್ಷಮೆ ಕೇಳಿ ವಿವಾದಕ್ಕೆ ಅಂತ್ಯ ಹಾಡಿದ್ದರು. ಆದರೆ ನೋರಾ, ವಿಚಾರಣೆಯನ್ನು ಮುಂದೂಡುತ್ತಾ ಬಂದಿದ್ದರು. ಆದರೆ ಇಂದು ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾದ ನಟಿ ನೋರಾ ಫತೇಹಿ, ಲಿಖಿತ ಕ್ಷಮೆ ಕೇಳಿದ್ದಲ್ಲದೆ, ಒಂದು ಮಹತ್ವದ ನಿರ್ಧಾರವನ್ನು ಸಹ ಪ್ರಕಟಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನೋರಾ, ತಾವು ಲಿಖಿತ ರೂಪದಲ್ಲಿ ಕ್ಷಮೆಯಾಚಿಸಿರುವುದಾಗಿ ತಿಳಿಸಿದರು. ‘ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ. ಅನಿವಾರ್ಯವಾಗಿ ಅಂತಹ ಸಂದರ್ಭ ಎದುರಾಗಿತ್ತು. ಆದರೆ ಒಬ್ಬ ಕಲಾವಿದೆಯಾಗಿ ನಾನು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ನಾನು ನಂಬುತ್ತೇನೆ, ಹಾಗಾಗಿ ಈಗ ಆಯೋಗದ ಮುಂದೆ ಕ್ಷಮೆ ಕೇಳಿದ್ದೇನೆ, ಎಲ್ಲವೂ ಲಿಖಿತ ರೂಪದಲ್ಲಿ ನಡೆಯಿತು, ಆಯೋಗದ ಸದಸ್ಯರು ಸಹ ಆತ್ಮೀಯವಾಗಿ ಸಹಕರಿಸಿದರು’ ಎಂದು ಅವರು ಹೇಳಿದರು.

ಅಲ್ಲದೆ, ವಿವಾದಕ್ಕೆ ಪ್ರಾಯಶ್ಚಿತ್ತವಾಗಿ ನೋರಾ ಫತೇಹಿ ಒಂದು ಪ್ರಮುಖ ನಿರ್ಧಾರವನ್ನು ಪ್ರಕಟಿಸಿದರು, ತಾವು ಕೆಲವು ಅನಾಥ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಅವರು ಈ ಸಂದರ್ಭದಲ್ಲಿ ಘೋಷಣೆ ಮಾಡಿದರು. ಸಮಾಜಕ್ಕೆ ಏನನ್ನಾದರೂ ಮರಳಿ ನೀಡುವುದು ಮುಖ್ಯ ಎಂಬ ಉದ್ದೇಶದಿಂದ ಈ ಹೆಜ್ಜೆ ಇಟ್ಟಿರುವುದಾಗಿ ಅವರು ತಿಳಿಸಿದರು. ಇದೇ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ಕೂಡ ಆಯೋಗದ ಮುಂದೆ ಹಾಜರಾಗಿ ಕ್ಷಮೆಯಾಚಿಸಿದ್ದರು. ಸಂಜಯ್ ದತ್ ಅವರು 50 ಬುಡಕಟ್ಟು ಹೆಣ್ಣು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಹೊರುವುದಾಗಿ ಭರವಸೆ ನೀಡಿದ್ದರು.

‘ಸರ್ಕೆ ಚುನರಿ’ ಹಾಡಿನ ಹಿಂದಿ ಆವೃತ್ತಿಯು ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದಾಗ ಭಾರಿ ಟೀಕೆಗಳನ್ನು ಎದುರಿಸಿತ್ತು. ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು ಆಕ್ಷೇಪಾರ್ಹವಾಗಿವೆ ಎಂದು ಅನೇಕರು ದೂರಿದ್ದರು. ನಂತರ ಈ ಹಾಡನ್ನು ಯೂಟ್ಯೂಬ್​​ನಿಂದ ತೆಗೆದು ಹಾಕಲಾಯ್ತು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಕೂಡ ಈ ಹಾಡನ್ನು ನಿಷೇಧಿಸಲಾಗಿದೆ ಎಂದು ಸಂಸತ್ತಿನಲ್ಲಿ ತಿಳಿಸಿದ್ದರು. ಇದೀಗ ‘ಕೆಡಿ’ ಸಿನಿಮಾ ಬಿಡುಗಡೆ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾನಲ್ಲಿ ಆ ವಿವಾದಾತ್ಮಕ ಹಾಡನ್ನು ತೆಗೆದು ಹಾಕಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬುಧ‌ನ ಪ್ರಸ್ತುತ ಸಂಚಾರದಿಂದ ಯಾವ ರಾಶಿಗೆ ಕಾದಿದೆ ಶುಭಾಶುಭ – Kannada News | Mercury in Aries: Astrological Impact and Predictions for All Zodiac Signs

ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಗ್ರಹ ಮಂಡಲದ ರಾಜಕುಮಾರ ಹಾಗೂ ಬುದ್ಧಿಕಾರಕ ಎಂದು ಪ್ರಸಿದ್ಧ. ಬುಧನು ಮಂಗಳನ ಅಧಿಪತ್ಯದ ಮೇಷ ರಾಶಿಯಲ್ಲಿದ್ದಾಗ ಚುರುಕುತನ ಮತ್ತು ವೇಗವನ್ನು ಪಡೆಯುತ್ತಾನೆ. ಆದರೆ, ಕೇವಲ ರಾಶಿ ಸ್ಥಿತಿಯಿಂದ ಫಲ ನಿರ್ಣಯ ಮಾಡುವುದು ಅಪೂರ್ಣ. ​​ಮೇಷ ರಾಶಿಯಲ್ಲಿರುವ ಬುಧನು ಈ ಕೆಳಗಿನ ವರ್ಗಗಳಲ್ಲಿ ಸ್ಥಿತನಾದಾಗ ವ್ಯಕ್ತಿತ್ವದ ಮೇಲೆ ವಿಶೇಷ ಪ್ರಭಾವ ಬೀರುತ್ತಾನೆ.

​ಬುಧನು ರವಿಯ ಪ್ರಭಾವಕ್ಕೆ ಒಳಗಾಗಿದ್ದು ಮಾತುಗಳಲ್ಲಿ ಅಧಿಕಾರಯುತ ಧೋರಣೆ ಮತ್ತು ಸ್ಪಷ್ಟತೆ ಇರುತ್ತದೆ. ಆಡಳಿತಾತ್ಮಕ ಕೌಶಲಗಳು ವೃದ್ಧಿಯಾಗುತ್ತವೆ. ಇದು ವ್ಯಕ್ತಿಯನ್ನು ತೀಕ್ಷ್ಣಮತಿಯನ್ನಾಗಿ ಮಾಡುವುದಲ್ಲದೆ, ನಾಯಕತ್ವದ ಗುಣಗಳನ್ನು ನೀಡುತ್ತದೆ.

​ಚಂದ್ರನ ನವಾಂಶದಲ್ಲಿ ಬುಧನು ಚಂದ್ರನ ಪ್ರಭಾವಕ್ಕೆ ಒಳಗಾದಾಗ ಬುದ್ಧಿಶಕ್ತಿಯೊಂದಿಗೆ ಸೃಜನಶೀಲತೆ ಮತ್ತು ಕಲ್ಪನಾಶಕ್ತಿ ಬೆರೆಯುತ್ತದೆ. ಇದು ಕಲೆ, ಸಾಹಿತ್ಯ ಮತ್ತು ಸಂವಹನ ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ವರದಾನವಾಗಲಿದೆ. ​ಗುರುವಿನ ತ್ರಿಂಶಾಂಶದಲ್ಲಿ ಅತ್ಯಂತ ಸಕಾರಾತ್ಮಕ ಅಂಶ. ಗುರುವಿನ ಪ್ರಭಾವವು ಬುಧನ ಚಂಚಲತೆಯನ್ನು ಕಡಿಮೆ ಮಾಡಿ, ವಿವೇಕ ಮತ್ತು ಧಾರ್ಮಿಕ ಅರಿವನ್ನು ಮೂಡಿಸುತ್ತದೆ. ಇದು ವ್ಯಕ್ತಿಯು ತಪ್ಪು ದಾರಿಗೆ ಹೋಗದಂತೆ ತಡೆದು, ಜ್ಞಾನಾರ್ಜನೆಯಲ್ಲಿ ಆಸಕ್ತಿ ಮೂಡಿಸುತ್ತದೆ.

​ರಾಶಿಗಳ ಮೇಲೆ ಸಾಮಾನ್ಯ ಫಲಗಳು:

  • ​ಶುಭ ಫಲ ಪಡೆಯುವ ರಾಶಿಗಳು: ಮಿಥುನ, ಕನ್ಯಾ, ಧನು ಮತ್ತು ಮೀನ ರಾಶಿಯವರಿಗೆ ಇದು ಸುವರ್ಣ ಕಾಲವೆನ್ನಬಹುದು. ವಿದ್ಯಾಭ್ಯಾಸದಲ್ಲಿ ಪ್ರಗತಿ, ಹೊಸ ವ್ಯವಹಾರದ ಆರಂಭ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಗಳಾಗುವ ಅವಕಾಶ ಸಿಗುತ್ತದೆ.
  • ​ಮಿಶ್ರ ಫಲ ಪಡೆಯುವ ರಾಶಿಗಳು: ಮೇಷ, ವೃಷಭ, ಸಿಂಹ ಮತ್ತು ತುಲಾ ರಾಶಿಯವರು ಆರ್ಥಿಕವಾಗಿ ಲಾಭ ಪಡೆದರೂ, ಮಾನಸಿಕವಾಗಿ ಸ್ವಲ್ಪ ಒತ್ತಡ ಅನುಭವಿಸಬಹುದು. ಮಾತು ನಿಯಂತ್ರಣದಲ್ಲಿರುವುದು ಅತ್ಯಗತ್ಯ.
  • ಅಧಮ ರಾಶಿಗಳು: ಕರ್ಕಾಟಕ, ವೃಶ್ಚಿಕ, ಮಕರ ಮತ್ತು ಕುಂಭ ರಾಶಿಯವರು ಆರೋಗ್ಯ ಮತ್ತು ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಬೇಕು. ಕೆಲಸದಲ್ಲಿ ಅಡೆತಡೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಗ್ರಹಗಳ ನಾಯಕ ಸೂರ್ಯ…. ಅವನ ಅನುಗ್ರಹದಿಂದ ಆಗಲಿದೆ ಯಾವೆಲ್ಲ ಕಾರ್ಯ..

​ಬುಧ ದಶೆಯಲ್ಲಿ :

​ಬುಧ ದಶೆಯು ಒಬ್ಬ ವ್ಯಕ್ತಿಗೆ ಯಾವ ರೀತಿ ಫಲ ನೀಡುತ್ತದೆ ಎಂಬುದು ಅವರ ಜನ್ಮ ಲಗ್ನ ಮತ್ತು ಬುಧನ ಸ್ಥಾನವನ್ನು ಅವಲಂಬಿಸಿರುತ್ತದೆ. ವಿಶೇಷವಾಗಿ ಮಿಥುನ ಮತ್ತು ಕನ್ಯಾ ಲಗ್ನದವರಿಗೆ ಬುಧನು ಲಗ್ನಾಧಿಪತಿಯಾಗಿರುವುದರಿಂದ ಅತ್ಯಂತ ಶುಭ ಫಲ ನೀಡುತ್ತಾನೆ. ಅದರೊಂದಿಗೆ ವೃಷಭ ಮತ್ತು ತುಲಾ ಲಗ್ನದವರಿಗೂ ಬುಧನು ಮಿತ್ರ ಗ್ರಹವಾಗಿರುವುದರಿಂದ ಯಶಸ್ಸು, ಸಂಪತ್ತು ಮತ್ತು ಕೀರ್ತಿಯನ್ನು ತಂದುಕೊಡುತ್ತಾನೆ.

​ಮಧ್ಯಮ ಬುಧ ದಶೆ :

ಧನು ಮತ್ತು ಮೀನ ಲಗ್ನದವರಿಗೆ ಬುಧನು ಕೇಂದ್ರ ಸ್ಥಾನಗಳ ಅಧಿಪತಿಯಾಗಿದ್ದರೂ ಸಹ ಕೇಂದ್ರಾಧಿಪತ್ಯ ದೋಷದ ಕಾರಣದಿಂದ ಮಧ್ಯಮ ಫಲಗಳನ್ನು ನೀಡುತ್ತಾನೆ. ಇವರು ಶ್ರಮಕ್ಕೆ ತಕ್ಕ ಪ್ರತಿಫಲವನ್ನು ನಿರೀಕ್ಷಿಸಬಹುದು. ಮೇಷ ಮತ್ತು ಸಿಂಹ ಲಗ್ನದವರಿಗೂ ಫಲಿತಾಂಶಗಳು ಮಿಶ್ರವಾಗಿರುತ್ತವೆ.

​ಅಧಮ ಬುಧ ದಶೆ :

ಕರ್ಕಾಟಕ ಮತ್ತು ವೃಶ್ಚಿಕ ಲಗ್ನದವರಿಗೆ ಬುಧನು ಅಶುಭ ಸ್ಥಾನಗಳ ಆಧಿಪತ್ಯದಿಂದ ದಶೆಯ ಅವಧಿಯಲ್ಲಿ ಅನಗತ್ಯ ಅಲೆದಾಟ, ದೌರ್ಬಲ್ಯ ಅಥವಾ ವಾಗ್ವಾದಗಳು ಉಂಟಾಗಬಹುದು. ಇಂತಹ ಸಮಯದಲ್ಲಿ ವಿಷ್ಣು ಸಹಸ್ರನಾಮದ ಪಠನ ಅವಶ್ಯಕ.

​ಒಟ್ಟಾರೆಯಾಗಿ ಹೇಳುವುದಾದರೆ, ಮೇಷ ರಾಶಿಯಲ್ಲಿರುವ ಬುಧನು ಗುರುವಿನ ತ್ರಿಂಶಾಂಶ ಮತ್ತು ಚಂದ್ರನ ನವಾಂಶದಿಂದ ನಕಾರಾತ್ಮಕತೆಗಿಂತ ಸಕಾರಾತ್ಮಕತೆಯೇ ಹೆಚ್ಚಾಗಿರುತ್ತದೆ. ವಿವೇಕಯುತ ಮಾತು ಮತ್ತು ಧರ್ಮಬದ್ಧ ಆಚರಣೆಯು ಈ ದಶೆಯ ಅವಧಿಯಲ್ಲಿ ಹೆಚ್ಚಿನ ಯಶಸ್ಸು.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:13 pm, Thu, 7 May 26

Source link

ಜೊತೆಯಲ್ಲಿ ಕ್ರಿಕೆಟ್ ಆಡಿದ್ದ ಗೆಳೆಯನ ಅಕಾಲಿಕ ನಿಧನಕ್ಕೆ ಕಣ್ಣೀರಾದ ವಿರಾಟ್ ಕೊಹ್ಲಿ – Kannada News | Virat Kohli Mourns Amanpreet Gill: U19 India Cricketer Passes Away at 36

ಭಾರತದ ಪರ 19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಆಡಿದ್ದ ಪಂಜಾಬ್ ಮೂಲದ ಅಮನ್‌ಪ್ರೀತ್ ಗಿಲ್ (Amanpreet Gill) ಕೇವಲ 36 ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಅಸುನೀಗಿದ್ದಾರೆ. ಚಂಡೀಗಢದಲ್ಲಿ ಜನಿಸಿದ ಅಮನ್‌ಪ್ರೀತ್ ಸಿಂಗ್ ಗಿಲ್ ಪಂಜಾಬ್ ಕ್ರಿಕೆಟ್ ತಂಡಕ್ಕಾಗಿ ದೇಶೀಯ ಕ್ರಿಕೆಟ್ ಆಡಿದ್ದರು. 2007 ರಲ್ಲಿ ಶ್ರೀಲಂಕಾದಲ್ಲಿ ನಡೆದ 19 ವರ್ಷದೊಳಗಿನವರ ತ್ರಿಕೋನ ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆ ಸರಣಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು ಮನೀಶ್ ಪಾಂಡೆ ಕೂಡ ಆಡಿದ್ದರು. ಇದೀಗ ಗೆಳೆಯ ಅಕಾಲಿಕ ಮರಣದಿಂದ ಆಘಾತಕ್ಕೊಳಗಾಗಿರುವ ವಿರಾಟ್ ಕೊಹ್ಲಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅಮನ್‌ಪ್ರೀತ್ ಅವರ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಕ್ಕೊಳಗಾಗಿದ್ದೇನೆ ಎಂದಿರುವ ವಿರಾಟ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಸ್ನೇಹಿತನ ಸಾವಿನಿಂದ ಆಘಾತಕ್ಕೊಳಗಾದ ಕೊಹ್ಲಿ

ಅಮನ್‌ಪ್ರೀತ್ ಗಿಲ್ ಅವರ ನಿಧನದ ಸುದ್ದಿಗೆ ವಿರಾಟ್ ಕೊಹ್ಲಿ ಸಂತಾಪ ಸೂಚಿಸಿದ್ದು, “ಅಮನ್‌ಪ್ರೀತ್ ಗಿಲ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ಅವರ ಕುಟುಂಬ ಮತ್ತು ಪ್ರೀತಿಪಾತ್ರರು ಈ ನಷ್ಟವನ್ನು ಭರಿಸುವ ಶಕ್ತಿಯನ್ನು ಪಡೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ.” ಎಂದು ಬರೆದಿದ್ದಾರೆ.

ಅಮನ್ಪ್ರೀತ್ ಗಿಲ್ ಸಾವಿಗೆ ಕಾರಣವೇನು?

ಅಮನ್‌ಪ್ರೀತ್ ಗಿಲ್ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅಮನ್‌ಪ್ರೀತ್ ರೋಗದ ವಿರುದ್ಧದ ಹೋರಾಟದಲ್ಲಿ ಸೋತು ಇಹಲೋಕ ತ್ಯಜಿಸಿದ್ದಾರೆ. ಮೇಲೆ ಹೇಳಿದಂತೆ ಗಿಲ್, ಶ್ರೀಲಂಕಾದಲ್ಲಿ ನಡೆದ ಅಂಡರ್-19 ತ್ರಿಕೋನ ಸರಣಿಯಲ್ಲಿ ಭಾರತ ಪರ ಆಡಿದ್ದರು. ಈ ಸರಣಿಯಲ್ಲಿ ಫೈನಲ್​ನಲ್ಲಿ ಬಾಂಗ್ಲಾದೇಶದ ವಿರುದ್ಧ ಗಿಲ್ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಮನ್‌ಪ್ರೀತ್ ಈ ಸರಣಿಯಲ್ಲಿ ಆಡಿದ್ದ ಐದು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದರು.

ಅಮನ್‌ಪ್ರೀತ್ ವೃತ್ತಿಜೀವನ

ಪಂಜಾಬ್ ಪರ ರಣಜಿ ಟ್ರೋಫಿಯಲ್ಲಿಯೂ ಆಡಿದ ಅಮನ್‌ಪ್ರೀತ್ ಆರು ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದರು. 2008 ರಲ್ಲಿ ಮುಂಬೈ ವಿರುದ್ಧ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದ ಗಿಲ್ ಅದರ ನಂತರ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಮುಂಬೈ ವಿರುದ್ಧ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ್ದ ಗಿಲ್, ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದ್ದರು. ಮಾತ್ರವಲ್ಲದೆ ತನ್ನ ಮೊದಲ ಪಂದ್ಯದಲ್ಲಿಯೇ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ಯಾಂಕ್ ಸಾಲಗಾರರ ಗಮನಕ್ಕೆ; ಅಡಮಾನ ಆಸ್ತಿ ವಿಚಾರದಲ್ಲಿ ಆರ್​ಬಿಐ ಕರಡು ನಿಯಮಗಳಿವು… – Kannada News | RBI issues draft rules for acquiring immovable assets against loans

ನವದೆಹಲಿ, ಮೇ 7: ಭಾರತೀಯ ರಿಸರ್ವ್ ಬ್ಯಾಂಕ್ (RBI), ಬ್ಯಾಂಕುಗಳು ಸಾಲಕ್ಕೆ ಅಡಮಾನವಾಗಿ ಪಡೆದುಕೊಳ್ಳುವ ಸ್ಥಿರಾಸ್ತಿಗಳ (Immovable Assets) ನಿರ್ವಹಣೆಗೆ ಸಂಬಂಧಿಸಿದಂತೆ ಹೊಸ ಕರಡು ನಿಯಮಗಳನ್ನು ಹೊರಡಿಸಿದೆ. ಇದರ ಮುಖ್ಯ ಉದ್ದೇಶ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಮತ್ತು ಸಾಲ ವಸೂಲಾತಿ ಪ್ರಕ್ರಿಯೆಯನ್ನು ಸುಗಮಗೊಳಿಸುವುದಾಗಿದೆ.

ಬ್ಯಾಂಕಿನಲ್ಲಿ ಅಥವಾ ಹಣಕಾಸು ಸಂಸ್ಥೆಯಲ್ಲಿ ಸಾಲ ಪಡೆಯಲು ನೀವು ಅಡವಾಗಿ ಇಡುವ ಮನೆ ಇತ್ಯಾದಿ ಆಸ್ತಿಯನ್ನು ಬ್ಯಾಂಕುಗಳು ಸಾಮಾನ್ಯವಾಗಿ ವಶಕ್ಕೆ ತೆಗೆದುಕೊಳ್ಳುವುದಿಲ್ಲ. ಸಾಲ ತೀರಿಸಲು ವಿಫಲರಾದಾಗ, ಮತ್ತು ಸಾಲ ವಸೂಲಿ ಮಾಡುವ ಇತರ ಎಲ್ಲಾ ಮಾರ್ಗೋಪಾಯಗಳು ಮುಗಿದ ನಂತರ ಕೊನೆಯ ಅಸ್ತ್ರವಾಗಿ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ಇಂತಹ ಆಸ್ತಿಗಳನ್ನು ಬ್ಯಾಂಕಿಂಗ್ ನಿಯಮಾವಳಿಗಳ ಅಡಿಯಲ್ಲಿ ಹೇಗೆ ನಿರ್ವಹಿಸಬೇಕು ಎಂಬುದಕ್ಕೆ ಆರ್‌ಬಿಐ ಈಗ ಸ್ಪಷ್ಟ ಚೌಕಟ್ಟು ನೀಡಿದೆ.

ಇದನ್ನೂ ಓದಿ: ಲಾಭದ ಹಳಿಗೆ ಬಂದ ಪೇಟಿಎಂ; 663 ಕೋಟಿ ರೂ ನಷ್ಟದಿಂದ 552 ಕೋಟಿ ರೂ ಲಾಭ ಕಂಡ ಒನ್97 ಕಮ್ಯೂನಿಕೇಶನ್ಸ್

ಆಸ್ತಿಗಳ ವಿಲೇವಾರಿಗೆ ನಿರ್ದಿಷ್ಟ ಕಾಲಮಿತಿ

ಬ್ಯಾಂಕುಗಳು ಅಂತಹ ಆಸ್ತಿಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವಂತಿಲ್ಲ. ಸಾಲವನ್ನು ಎನ್​ಪಿಎ ಎಂದು ವರ್ಗೀಕರಣ ಮಾಡಿದ ಬಳಿಕ 7 ವರ್ಷದವರೆಗೆ ಮಾತ್ರ ಅಡಮಾನ ಆಸ್ತಿಯನ್ನು ಇಟ್ಟುಕೊಳ್ಳಬಹುದು. ಅಷ್ಟರೊಳಗೆ ಈ ಆಸ್ತಿಯನ್ನು ಮಾರಿ, ಸಾಲದ ಹಣವನ್ನು ವಸೂಲಿ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಗದಿಪಡಿಸಿದ ಸಮಯದಲ್ಲಿ ಮಾರಾಟ ಮಾಡಲು ಸಾಧ್ಯವಾಗದಿದ್ದರೆ, ಅದಕ್ಕೆ ಬ್ಯಾಂಕುಗಳು ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ.

ಬ್ಯಾಂಕುಗಳ ಮೇಲಾಗುವ ಪರಿಣಾಮ

ಬ್ಯಾಂಕುಗಳು ಅಂತಹ ಆಸ್ತಿಗಳ ಮೌಲ್ಯವನ್ನು ಕಾಲಕಾಲಕ್ಕೆ ಮರುಮೌಲ್ಯೀಕರಣ (Revaluation) ಮಾಡಬೇಕು. ಇದರಿಂದ ಬ್ಯಾಂಕಿನ ಬ್ಯಾಲೆನ್ಸ್ ಶೀಟ್‌ನಲ್ಲಿ ಆಸ್ತಿಯ ನೈಜ ಮೌಲ್ಯ ಪ್ರತಿಫಲಿಸುತ್ತದೆ. ಇದು ಬ್ಯಾಂಕುಗಳ ಆರ್ಥಿಕ ಶಿಸ್ತನ್ನು ಕಾಪಾಡಲು ನೆರವಾಗುತ್ತದೆ.

ಸಾಲಗಾರರಿಗೆ ಏನು ಲಾಭ?

ಈ ನಿಯಮಗಳಿಂದ ಸಾಲಗಾರರಿಗೂ ಅನುಕೂಲವಿದೆ. ಆಸ್ತಿ ಮಾರಾಟದ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರುವುದರಿಂದ, ಆಸ್ತಿಯು ಸರಿಯಾದ ಮಾರುಕಟ್ಟೆ ಬೆಲೆಗೆ ಮಾರಾಟವಾಗುವ ಸಾಧ್ಯತೆ ಹೆಚ್ಚು. ಸಾಲದ ಮೊತ್ತಕ್ಕಿಂತ ಹೆಚ್ಚಿನ ಹಣಕ್ಕೆ ಆಸ್ತಿ ಮಾರಾಟವಾದರೆ, ಉಳಿದ ಹಣವನ್ನು ಸಾಲಗಾರನಿಗೆ ಮರಳಿಸುವುದು ಸುಲಭವಾಗುತ್ತದೆ.

ಇದನ್ನೂ ಓದಿ: ಟ್ರಂಪ್ ವಿರುದ್ಧ ಸುಂಕದ ಕೇಸ್ ಗೆದ್ದ ಭಾರತೀಯ ಮೂಲದ ವ್ಯಕ್ತಿಯ ಅಚ್ಚರಿಯ ನಿಜ ಜೀವನದ ಕಥೆ ಇದು

ಒಂದಕ್ಕೆ ಸುಸ್ತಿದಾರನಾದರೆ ಎಲ್ಲದಕ್ಕೂ ಸುಸ್ತಿದಾರನೇ…

ಒಬ್ಬ ವ್ಯಕ್ತಿ ಒಂದು ಬ್ಯಾಂಕ್​ನಲ್ಲಿ ವಿವಿಧ ಸಾಲ ಮಾಡಿದ್ದು, ಅವುಗಳ ಪೈಕಿ ಯಾವುದೇ ಒಂದು ಸಾಲವನ್ನು ತೀರಿಸಲು ವಿಫಲನಾದರೆ, ಸುಸ್ತಿದಾರ ಎನಿಸುತ್ತಾರೆ. ಒಂದು ಸಾಲಕ್ಕೆ ಸುಸ್ತಿದಾರನೆನಿಸಿದರೆ, ಆತ ಮಾಡಿದ ಇತರ ಸಾಲವನ್ನೂ ಎನ್​ಪಿಎ ಎಂದೇ ಪರಿಗಣಿಸಿ ಕ್ರಮ ತೆಗೆದುಕೊಳ್ಳಬಹುದು.

ಸಾರ್ವಜನಿಕರ ಅಭಿಪ್ರಾಯಕ್ಕೆ ಮುಕ್ತ ಅವಕಾಶ

ಇದು ಸದ್ಯಕ್ಕೆ ‘ಕರಡು’ (Draft) ಹಂತದಲ್ಲಿದೆ. ಆರ್‌ಬಿಐ ಇದರ ಬಗ್ಗೆ ಬ್ಯಾಂಕಿಂಗ್ ತಜ್ಞರು ಮತ್ತು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಎಲ್ಲರ ಸಲಹೆಗಳನ್ನು ಪರಿಗಣಿಸಿದ ನಂತರ ಅಂತಿಮ ಆದೇಶ ಹೊರಬೀಳಲಿದೆ.

ಒಟ್ಟಿನಲ್ಲಿ, ಬ್ಯಾಂಕುಗಳು ಸುಸ್ತಿದಾರರ ಆಸ್ತಿಯನ್ನು ವಶಪಡಿಸಿಕೊಂಡ ನಂತರ ಅದನ್ನು ಎಷ್ಟು ದಿನ ಇಟ್ಟುಕೊಳ್ಳಬಹುದು ಮತ್ತು ಹೇಗೆ ವಿಲೇವಾರಿ ಮಾಡಬೇಕು ಎಂಬ ಗೊಂದಲಗಳಿಗೆ ಈ ಹೊಸ ನಿಯಮಗಳು ತೆರೆ ಎಳೆಯಲಿವೆ. ಇದರಿಂದ ಬ್ಯಾಂಕುಗಳ ವಸೂಲಾತಿ ಪ್ರಕ್ರಿಯೆ ವೇಗಗೊಳ್ಳಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅನುದಾನ ಕೊರತೆ ಮಧ್ಯೆ ಕಾರವಾರದಲ್ಲಿ ಕಾಂಕ್ರೀಟ್ ರಸ್ತೆ ಮೇಲೆ ಡಾಂಬರೀಕರಣ: ಏನಿದು ವಿವಾದ? – Kannada News | Karwar Concrete Road Project Faces Controversy Amid Funding Shortage

ಕಾಂಕ್ರೀಟ್ ರಸ್ತೆ ಮೇಲೆ ಡಾಂಬರೀಕರಣ Image Credit source: tv9 kannada

ಕಾರವಾರ, ಮೇ 07: ರಾಜ್ಯದ ಹಲವೆಡೆ ಅನುದಾನದ ಕೊರತೆ ಹಾಗೂ ಬಿಟುಮಿನ್ (ಡಾಂಬರು) ಅಭಾವದಿಂದ ರಸ್ತೆ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿದ್ದರೆ, ಉತ್ತರ ಕನ್ನಡ ಜಿಲ್ಲೆಯ (uttara-kannada) ಕಾರವಾರದಲ್ಲಿ ಮಾತ್ರ ಸುಸ್ಥಿತಿಯಲ್ಲಿರುವ ಕಾಂಕ್ರೀಟ್ ರಸ್ತೆಯ (Concrete Road) ಮೇಲೆ ಡಾಂಬರು ಹಾಕುವ ಮೂಲಕ ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.

ಮುಖ್ಯಾಂಶಗಳು 

  • ಸುಸಜ್ಜಿತ ಕಾಂಕ್ರೀಟ್ ರಸ್ತೆ ಮೇಲೆ ಡಾಂಬರೀಕರಣ
  • ಸಾರ್ವಜನಿಕರ ಆಕ್ರೋಶಕ್ಕೆ ಕಾಮಗಾರಿ ಸ್ಥಗಿತ
  • ಬಿಟುಮಿನ್ ಕೊರತೆ ನಡುವೆ ಉತ್ತಮ ರಸ್ತೆ ಹಾಳು

ಸಾರ್ವಜನಿಕರು ಆಕ್ರೋಶ

ಕಾರವಾರ ಬಸ್ ನಿಲ್ದಾಣದಿಂದ ಕೈಗಾ ಅಣುಸ್ಥಾವರಕ್ಕೆ ಸಂಪರ್ಕ ಕಲ್ಪಿಸುವ ಸುಸಜ್ಜಿತ ಕಾಂಕ್ರೀಟ್ ರಸ್ತೆಯ ಮೇಲೆ ನಿನ್ನೆ ಏಕಾಏಕಿ ಡಾಂಬರೀಕರಣ ಆರಂಭಿಸಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು, ರಸ್ತೆ ಚೆನ್ನಾಗಿದ್ದರೂ ಅನಗತ್ಯವಾಗಿ ಡಾಂಬರು ಹಾಕುತ್ತಿರುವುದನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಪ್ರತಿರೋಧಕ್ಕೆ ಹೆದರಿದ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಸ್ಥಳದಿಂದ ನಿರ್ಗಮಿಸಿದ್ದು, ಇಂದು ಹಾಕಲಾಗಿದ್ದ ಡಾಂಬರನ್ನು ಜೆಸಿಬಿ ಮೂಲಕ ಕಿತ್ತು ಹಾಕಲಾಗಿದೆ. ಈ ಅವಾಂತರದಿಂದಾಗಿ ಇದ್ದ ಕಾಂಕ್ರೀಟ್ ರಸ್ತೆಯೂ ಹಾಳಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ನೂರಾರು ಜೀವ ಉಳಿಸಿದ್ದ ವೈದ್ಯನಿಗೆ ಸಿಗಲಿಲ್ಲ ಚಿಕಿತ್ಸೆ; ಡಾಕ್ಟರ್ ದುರಂತ ಸಾವು

ಅಸಲಿ ವಿಚಾರ ಏನೆಂದರೆ ಕೆಶಿಪ್ ಯೋಜನೆಯಡಿ ಈ ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿದೆ. ರಸ್ತೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರ ವಿಜಯಪುರ ಜಿಲ್ಲೆಯವರಾಗಿದ್ದರಿಂದ ಕಾಮಗಾರಿ ಆರಂಭಕ್ಕೂ ಮುನ್ನ ಈ ರಸ್ತೆಯ ಬಗ್ಗೆ ಮಾಹಿತಿ ಪಡೆದುಕೊಂಡಿಲ್ಲ. ಇನ್ನೂ ಈ ಬಗ್ಗೆ ಸ್ಥಳಿಯ ಲೊಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರದೆ ಕಾಮಗಾರಿ ಮಾಡಲಾಗುತ್ತಿದೆ ಎನ್ನಲಾಗಿದೆ. ಆದರೆ ರಾಜ್ಯದ ಹಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ರಸ್ತೆ ಅಭಿವೃದ್ಧಿಗೆ ಹಣವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ, ಈಗಾಗಲೇ ಸುಸ್ಥಿತಿಯಲ್ಲಿರುವ ರಸ್ತೆಗೆ ಲಕ್ಷಾಂತರ ರೂಪಾಯಿ ಅನುದಾನ ಮಂಜೂರಾಗಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ.

ಲಾಭದ ಉದ್ದೇಶದಿಂದ ಅವೈಜ್ಞಾನಿಕವಾಗಿ ಡಾಂಬರು ಹಾಕಲು ಮುಂದಾದ ಗುತ್ತಿಗೆದಾರರು, ಈಗ ಅದನ್ನು ಕಿತ್ತು ತೆಗೆಯುವ ನೆಪದಲ್ಲಿ ಭದ್ರವಾಗಿದ್ದ ಕಾಂಕ್ರೀಟ್ ರಸ್ತೆಯ ಮೇಲ್ಪದರವನ್ನೂ ಹಾಳುಗೆಡವುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದು ಸಾರ್ವಜನಿಕರ ಆಕ್ರೋಶವಾಗಿದೆ.

ಇದನ್ನೂ ಓದಿ: ಇದು ರಾಷ್ಟ್ರೀಯ ಹೆದ್ದಾರಿಯೋ ಅಥವಾ ಕೆಸರು ಗದ್ದೆಯೋ? ಶಿರಸಿ-ಹಾವೇರಿ ರಸ್ತೆಯಲ್ಲಿ ನರಕಯಾತನೆ

ಒಟ್ಟಾರೆ ಬಿಟುಮಿನ್ ಅಭಾವದಿಂದ ಅದೆಷ್ಟೋ ರಸ್ತೆ ಕಾಮಗಾರಿಗಳು ನಿಂತಿವೆ. ಇನ್ನೂ ಕೆಲವು ಕಡೆ ಅನುದಾನ ಸಿಗುತ್ತಿಲ್ಲ ಅಂತ ಸ್ವಪಕ್ಷಿಯ ಶಾಸಕರೇ ಆಕ್ರೋಶ ಹೊರಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚೆನ್ನಾಗಿರುವ ರಸ್ತೆಗೆ ಡಾಂಬರು ಹಾಕಿ ಹಾಳು ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜೂ ಎನ್​​ಟಿಆರ್-ಪ್ರಶಾಂತ್ ನೀಲ್ ಸಿನಿಮಾಕ್ಕೆ ಮತ್ತೊಬ್ಬ ಕನ್ನಡದ ನಟ ಸೇರ್ಪಡೆ – Kannada News | Prakash Raj joined Jr NTR and Prashanth Neel movie

ಜೂ ಎನ್​​ಟಿಆರ್ ಮತ್ತು ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್​ನ ಸಿನಿಮಾ ಪ್ರಸ್ತುತ ಭಾರತೀಯ ಚಿತ್ರರಂಗದ ಕೆಲವೇ ಕೆಲವು ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಸಿನಿಮಾಕ್ಕೆ ಇನ್ನೂ ಅಧಿಕೃತವಾಗಿ ಯಾವುದೇ ಹೆಸರಿಟ್ಟಿಲ್ಲವಾದರೂ ಅಭಿಮಾನಿಗಳು ಸಿನಿಮಾವನ್ನು ‘ಡ್ರ್ಯಾಗನ್’ ಎಂದು ಕರೆಯುತ್ತಿದ್ದಾರೆ. ಪ್ರಶಾಂತ್ ನೀಲ್, ತಮ್ಮ ಸಿನಿಮಾಗಳಲ್ಲಿ ಎಲ್ಲ ಭಾಷೆಯ ಕಲಾವಿದರನ್ನು ಬಳಸಿಕೊಳ್ಳುತ್ತಾರೆ. ‘ಕೆಜಿಎಫ್’ ಸಿನಿಮಾಕ್ಕೂ ಅವರು ಕನ್ನಡದ ಮಾತ್ರವಲ್ಲದೆ ಪರ ಭಾಷೆ ಕಲಾವಿದರನ್ನೂ ಬಳಸಿಕೊಂಡಿದ್ದರು. ‘ಸಲಾರ್’ನಲ್ಲಿ ಕನ್ನಡದ ನಟ ನವೀನ್ ಶಂಕರ್ ನಟಿಸಿದ್ದರು. ಇದೀಗ ಈ ಸಿನಿಮಾನಲ್ಲಿಯೂ ಕನ್ನಡದ ನಟ-ನಟಿಯರಿಗೆ ಸಾಕಷ್ಟು ಅವಕಾಶ ನೀಡಿದ್ದಾರೆ.

ಜೂ ಎನ್​​ಟಿಆರ್ ಅವರ ಸಿನಿಮಾನಲ್ಲಿ ಕನ್ನಡದ ನಟಿ ರುಕ್ಮಿಣಿ ವಸಂತ್ ಅವರನ್ನು ನಾಯಕಿಯನ್ನಾಗಿ ಹಾಕಿಕೊಳ್ಳಲಾಗಿದೆ. ಅವರ ಹೊರತಾಗಿ ಇನ್ನೂ ಕೆಲವು ಕನ್ನಡದ ನಟರು ಮತ್ತು ತಂತ್ರಜ್ಞರು ಈ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಮಲಯಾಳಂನ ಸ್ಟಾರ್ ನಟರಲ್ಲಿ ಒಬ್ಬರಾದ ಟೊವಿನೋ ಥಾಮಸ್ ಅವರನ್ನು ಪ್ರಶಾಂತ್ ನೀಲ್ ಸಂಪರ್ಕಿಸಿ, ಪಾತ್ರವೊಂದರಲ್ಲಿ ನಟಿಸುವಂತೆ ಕೇಳಿದ್ದರು. ಆದರೆ ಟೊವಿನೋ ಆಫರ್ ಅನ್ನು ನಿರಾಕರಿಸಿದ್ದರು. ಅದರ ಬೆನ್ನಲ್ಲೆ ಇದೀಗ ಕನ್ನಡ ಮೂಲದ ನಟರೊಬ್ಬರು ಈ ಸಿನಿಮಾ ತಂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ:ಹಾರರ್ ಚಿತ್ರಕ್ಕಾಗಿ ‘ಮೈತ್ರಿ ಮೂವೀ ಮೇಕರ್ಸ್’ ಜೊತೆ ಕೈ ಜೋಡಿಸಿದ ಪ್ರಶಾಂತ್ ನೀಲ್

ನಟ ಪ್ರಕಾಶ್ ರಾಜ್ ಅವರು ಇದೀಗ ಜೂ ಎನ್​​ಟಿಆರ್-ಪ್ರಶಾಂತ್ ನೀಲ್ ಸಿನಿಮಾ ತಂಡ ಸೇರಿಕೊಂಡಿದ್ದು, ಒಂದು ಪವರ್​​ಫುಲ್ ಪಾತ್ರದಲ್ಲಿ ಪ್ರಕಾಶ್ ರಾಜ್ ನಟಿಸಲಿದ್ದಾರೆ. ಪ್ರಕಾಶ್ ಅವರು ಕನ್ನಡದ ನಟರಾದರೂ ಹಲವು ಭಾಷೆಗಳ ಸಿನಿಮಾಗಳಲ್ಲಿ ದಶಕಗಳಿಂದಲೂ ಅವರು ನಟಿಸುತ್ತಲೇ ಬಂದಿದ್ದಾರೆ. ಯಾವುದೇ ಪಾತ್ರವಿದ್ದರೂ ಅದನ್ನು ಲೀಲಾಜಾಲವಾಗಿ ನಿರ್ವಹಿಸುವುದು ಅವರ ಪ್ರತಿಭೆ. ಈ ಹಿಂದೆ ಪ್ರಶಾಂತ್ ನೀಲ್ ಅವರ ‘ಕೆಜಿಎಫ್ 2’ ಸಿನಿಮಾನಲ್ಲಿ ಪ್ರಕಾಶ್ ನಟಿಸಿದ್ದರು. ಈಗ ಈ ಹೊಸ ಸಿನಿಮಾನಲ್ಲೂ ನಟಿಸಲಿದ್ದಾರೆ.

ಇನ್ನು ಜೂ ಎನ್​​ಟಿಆರ್ ಅವರೊಟ್ಟಿಗೆ ಹಲವು ಸಿನಿಮಾಗಳಲ್ಲಿ ಪ್ರಕಾಶ್ ರಾಜ್ ನಟಿಸಿದ್ದಾರೆ. ‘ಸಾಂಬಾ’, ‘ಅಶೋಕ್’, ‘ಊಸರವಲ್ಲಿ’, ‘ಟೆಂಪರ್’, ‘ಬೃಂದಾವನಂ’ ಇನ್ನೂ ಕೆಲ ಸಿನಿಮಾಗಳಲ್ಲಿ ಇವರು ಒಟ್ಟಿಗೆ ನಟಿಸಿದ್ದಿದೆ. ಅದರಲ್ಲೂ ‘ಟೆಂಪರ್’ ಸಿನಿಮಾನಲ್ಲಿ ಇವರಿಬ್ಬರ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿತ್ತು. ಇದೀಗ ‘ಡ್ರ್ಯಾಗನ್’ ಸಿನಿಮಾನಲ್ಲೂ ಅದೇ ಮ್ಯಾಜಿಕ್ ಮುಂದುವರೆಯುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಮಾನದಲ್ಲಿ ಪವರ್ ಬ್ಯಾಂಕ್ ತೆಗೆದುಕೊಂಡು ಹೋಗಬಹುದಾ? ಇಂಡಿಗೋ ಬೆಂಕಿ ಅವಘಡದ ಬಳಿಕ ಹೊಸ ನಿಯಮ ಜಾರಿ – Kannada News | DGCA issues new power bank rules for passengers after Chandigarh IndiGo flight fire incident

ನವದೆಹಲಿ, ಮೇ 7: ಚಂಡೀಗಢ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಇಂಡಿಗೋ ವಿಮಾನದಲ್ಲಿನ (IndiGo Flight) ಬೆಂಕಿ ದುರಂತದ ಘಟನೆಯು ನಾಗರಿಕ ವಿಮಾನಯಾನದ ಇತ್ತೀಚಿನ ಪವರ್ ಬ್ಯಾಂಕ್ ನಿಯಮಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ವಿಮಾನದ ಲ್ಯಾಂಡಿಂಗ್ ನಂತರ ಕ್ಯಾಬಿನ್ ಒಳಗೆ ಪವರ್ ಬ್ಯಾಂಕ್ ಬೆಂಕಿ ಹೊತ್ತಿಕೊಂಡ ನಂತರ ವಿಮಾನವನ್ನು ಸ್ಥಳಾಂತರಿಸಲಾಯಿತು. ಇದರಿಂದ ದೊಡ್ಡ ದುರಂತ ತಪ್ಪಿತ್ತು.

ಲಿಥಿಯಂ ಬ್ಯಾಟರಿ ಸಂಬಂಧಿತ ಬೆಂಕಿ ಅವಘಡಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳು ಮತ್ತು ವಿಶ್ವಾದ್ಯಂತ ವಿಮಾನಯಾನ ಸಂಸ್ಥೆಗಳು ಮತ್ತು ನಿಯಂತ್ರಕರಿಂದ ಹೆಚ್ಚುತ್ತಿರುವ ನಿರ್ಬಂಧಗಳ ನಡುವೆ, ಭಾರತದ ವಾಯುಯಾನ ನಿಯಂತ್ರಕವು (ಡಿಜಿಸಿಎ) ವಿಮಾನಗಳಲ್ಲಿ ಪವರ್ ಬ್ಯಾಂಕ್‌ಗಳನ್ನು ಸಾಗಿಸುವ ಮತ್ತು ಬಳಸುವ ಜಾಗತಿಕ ಮಾನದಂಡಗಳನ್ನು ಪರಿಶೀಲಿಸುತ್ತಿದೆ.

ಇದನ್ನೂ ಓದಿ: ಪ್ರಯಾಣಿಕರ ಪವರ್ ಬ್ಯಾಂಕ್​ನಿಂದ ಬೆಂಕಿ; ಇಂಡಿಗೋ ವಿಮಾನದಲ್ಲಿ ತಪ್ಪಿದ ಭಾರೀ ದುರಂತ

ವಿಮಾನ ಲ್ಯಾಂಡ್ ಆಗುವ ಸ್ವಲ್ಪ ಸಮಯದ ನಂತರ ವಿಮಾನದೊಳಗೆ ಪವರ್ ಬ್ಯಾಂಕ್​ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವನ್ನು ಸ್ಥಳಾಂತರಿಸಲಾಗಿತ್ತು. ಈ ವೇಳೆ ಕ್ಯಾಬಿನ್‌ನಲ್ಲಿ ಹೊಗೆ ತುಂಬಿ, ವಿಮಾನದಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದರು. 6 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇತರರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು.

ಈ ಘಟನೆಯು ವಿಮಾನದ ಕ್ಯಾಬಿನ್‌ಗಳ ಒಳಗೆ ಲಿಥಿಯಂ-ಐಯಾನ್ ಬ್ಯಾಟರಿಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಹೆಚ್ಚಿನ ಕಳವಳವನ್ನು ಉಂಟುಮಾಡಿದೆ. ಅಲ್ಲಿ ಹೆಚ್ಚು ಬಿಸಿಯಾಗುವ ಸಾಧನಗಳು ಸುರಕ್ಷತಾ ಅಪಾಯಗಳನ್ನು ತಂದೊಡ್ಡಬಹುದು.

ಇದನ್ನೂ ಓದಿ: ಆಂಬ್ಯುಲೆನ್ಸ್ ಸಿಗದೆ ಮೃತ ಮಗನ ಶವವನ್ನು ತಳ್ಳುವ ಗಾಡಿಯಲ್ಲಿ ಹೊತ್ತೊಯ್ದ ಪೋಷಕರು

ಡಿಜಿಸಿಎ ನಿಯಮಗಳೇನು?:

ಡಿಜಿಸಿಎ ನಿಯಮಗಳ ಪ್ರಕಾರ ವಿಮಾನದಲ್ಲಿ ಪವರ್ ಬ್ಯಾಂಕ್ ತೆಗೆದುಕೊಂಡು ಹೋಗಲೇಬಾರದು ಎಂಬ ನಿಯಮಗಳನ್ನು ಜಾರಿಗೊಳಿಸಿಲ್ಲ. ಆದರೆ, ಲಗೇಜ್​ ಬ್ಯಾಗ್​ಗಳಲ್ಲಿ ಪವರ್ ಬ್ಯಾಂಕ್ ಇಡುವಂತಿಲ್ಲ. ಹ್ಯಾಂಡ್ ಬ್ಯಾಗ್​​ಗಳಲ್ಲಿ ಮಾತ್ರ ಪವರ್ ಬ್ಯಾಂಕ್ ಕೊಂಡೊಯ್ಯಬಹುದು. ಹಾಗೇ, ಆ ಹ್ಯಾಂಡ್​ ಬ್ಯಾಗ್​ಗಳನ್ನು ವಿಮಾನದ ಸೀಟುಗಳ ಮೇಲಿರುವ ಕಂಪಾರ್ಟ್​ಮೆಂಟ್​​ಗಳಲ್ಲಿ ಇಡುವಂತಿಲ್ಲ. ಅದನ್ನು ಕೈನಲ್ಲೇ ಇಟ್ಟುಕೊಂಡು ಕುಳಿತುಕೊಳ್ಳಬೇಕು. ಏಕೆಂದರೆ ವಿಮಾನದ ಸೀಟಿನ ಮೇಲ್ಭಾಗದಲ್ಲಿ ಮತ್ತು ಲಗೇಜ್ ಹಾಕುವ ಕ್ಯಾಬಿನ್​ಗಳಲ್ಲಿ ಬಿಸಿ ಹೆಚ್ಚಾಗಿರುವುದರಿಂದ ಇಂತಹ ಸಾಧನಗಳು ಸ್ಫೋಟಗೊಳ್ಳುವ ಅಪಾಯ ಹೆಚ್ಚಿರುತ್ತದೆ. ಅಲ್ಲದೆ, ಒಂದುವೇಳೆ ಬೆಂಕಿ ಹೊತ್ತಿಕೊಂಡರೂ ಯಾವ ಬ್ಯಾಗ್​ನಿಂದ ಈ ರೀತಿಯಾಗಿದೆ ಎಂದು ಪತ್ತೆಹಚ್ಚಲು ಸಮಯ ಬೇಕಾಗುತ್ತದೆ. ಹೀಗಾಗಿ, ಅಂತಹ ಯಾವುದೇ ವಸ್ತುಗಳನ್ನು ಸೀಟಿನ ಮೇಲ್ಭಾಗದಲ್ಲಿ ಇಡುವಂತಿಲ್ಲ. ಪವರ್ ಬ್ಯಾಂಕ್‌ಗಳು, ಪೋರ್ಟಬಲ್ ಚಾರ್ಜರ್‌ಗಳು ಮತ್ತು ಲಿಥಿಯಂ ಬ್ಯಾಟರಿಗಳನ್ನು ಹೊಂದಿರುವ ಅಂತಹುದೇ ಸಾಧನಗಳು ಇಗ್ನಿಷನ್ ಮೂಲಗಳಾಗಿ ಕಾರ್ಯನಿರ್ವಹಿಸಬಹುದು. ಇದು ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಬಹುದು ಎಂದು DGCA ತನ್ನ ಸಲಹೆಯಲ್ಲಿ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version