ಕಲಬುರಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ! – Kannada News | Kalaburagi Police Record Achievement: 785 Lost Mobiles Worth Rs 1.44 Crore Recovered and Returned

ಕಲಬುರಗಿ, ಮೇ 07: ಕಳೆದುಹೋದ ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ಕಲಬುರಗಿ ನಗರ ಪೊಲೀಸರು ದಾಖಲೆ ಬರೆದಿದ್ದಾರೆ. ಕೇವಲ ಎರಡು ತಿಂಗಳ ವಿಶೇಷ ಕಾರ್ಯಾಚರಣೆಯಲ್ಲಿ ಬರೋಬ್ಬರಿ 1,44,90,000 ರೂ. ಮೌಲ್ಯದ 785 ಮೊಬೈಲ್ ಪೋನ್‌ಗಳನ್ನು ಪತ್ತೆ ಹಚ್ಚುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ.

ಸಿಇಐಆರ್ (CEIR) ಪೋರ್ಟಲ್ ಬಳಸಿಕೊಂಡು ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ವಿವಿಧ ಕಂಪನಿಗಳ ಬೆಲೆಬಾಳುವ ಮೊಬೈಲ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಅವರು ಪತ್ತೆಯಾದ ಮೊಬೈಲ್‌ಗಳನ್ನು ಅವುಗಳ ಅಸಲಿ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಕಳೆದುಕೊಂಡಿದ್ದ ಫೋನ್ ಮರಳಿ ಪಡೆದ ನೂರಾರು ಸಾರ್ವಜನಿಕರು ಪೊಲೀಸರ ಕ್ಷಿಪ್ರ ಕಾರ್ಯಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್​ಗೆ ಶುಭಸುದ್ದಿ ಸಿಗುತ್ತೆ ಎಂಬ ಬೆಂಬಲಿಗರ ಮಾತಿಗೆ ಮಾಜಿ ಸಚಿವ ರಾಜಣ್ಣ ಏನಂದ್ರು ನೋಡಿ! – Kannada News | Karnataka Politics: A Dozen Leaders Fit for CM Post, Says KN Rajanna Amid Siddaramaiah DK Shivakumar Tussle

ಮೈಸೂರು, ಮೇ 7: ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಗೊಂದಲ ಮುಂದುವರಿಯುತ್ತಿರುವ ಬೆನ್ನಲ್ಲೇ, ಮಾಜಿ ಸಚಿವ ಕೆಎನ್ ರಾಜಣ್ಣ ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದೆ. ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ‘ನಮ್ಮ ಪಕ್ಷದಲ್ಲಿ ಸಿಎಂ ಆಗುವ ಅರ್ಹತೆಯುಳ್ಳ ಒಂದು ಡಜನ್ ನಾಯಕರಿದ್ದಾರೆ’ ಎಂದು ಹೇಳಿದ್ದಾರೆ. ‘ಸಿಎಂ ಬದಲಾಗುತ್ತಾರೆ ಎಂದು ನಾನು ಹೇಳಲ್ಲ, ಇರುತ್ತಾರೆ ಅಂತಾನೂ ಹೇಳಲ್ಲ. ಆದರೆ ಹೈಕಮಾಂಡ್ ಅತಿ ಬೇಗ ಈ ಬಗ್ಗೆ ಜಾಗರೂಕ ನಿರ್ಧಾರ ಕೈಗೊಳ್ಳಲಿ. ಈ ಗೊಂದಲ ಮುಂದುವರಿದಷ್ಟು ಪಕ್ಷ ಮತ್ತು ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ. ಸಿದ್ದರಾಮಯ್ಯ ಅವರಿಗೆ ಪರಿಪೂರ್ಣ ಅಧಿಕಾರ ಮುಂದುವರಿಸಿ ಅಂತಾದರೂ ಹೇಳಲಿ ಅಥವಾ ಬದಲಾವಣೆ ಮಾಡುವುದಿದ್ದರೆ ಅದನ್ನಾದರೂ ವರಿಷ್ಠರು ಸ್ಪಷ್ಟಪಡಿಸಲಿ’ ಎಂದು ರಾಜಣ್ಣ ಆಗ್ರಹಿಸಿದರು.

ಇದೇ ವೇಳೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಶೀಘ್ರವೇ ಶುಭಸುದ್ದಿ ಸಿಗಲಿದೆ ಎಂಬ ಅವರ ಬೆಂಬಲಿಗರ ಮಾತಿಗೆ ಪ್ರತಿಕ್ರಿಯಿಸಿದ ರಾಜಣ್ಣ, ‘ಜೀವನದಲ್ಲಿ ಆಶಾಭಾವನೆ ಇಟ್ಟುಕೊಳ್ಳುವುದು ಸಹಜ. ಡಿಕೆ ಶಿವಕುಮಾರ್ ಅವರು ನಮ್ಮ ಪಕ್ಷದ ಅಧ್ಯಕ್ಷರು, ಅವರಿಗೆ ಸಿಎಂ ಕುರ್ಚಿ ಮೇಲೆ ಆಸೆ ಇರುವುದು ಸಹಜ ಮತ್ತು ಜಾಸ್ತಿಯೇ ಇದೆ. ಆದರೆ ನಮ್ಮಲ್ಲಿ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್ ಸೇರಿದಂತೆ ಬಹಳ ಜನ ಸಮರ್ಥ ನಾಯಕರಿದ್ದಾರೆ’ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನಗೆ ಯಾಕೆ ಈ ಪ್ರಶಸ್ತಿ ನೀಡ್ತಿದ್ದೀರಾ? ಪ್ಯಾಟ್ ಕಮ್ಮಿನ್ಸ್ ಅಚ್ಚರಿ! – Kannada News | Pat Cummins Surprised by Player of the Match Award vs PBKS

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಈ ಗೆಲುವುಗಳೊಂದಿಗೆ ಎಸ್​ಆರ್​ಹೆಚ್ ಪಡೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅದು ಕೂಡ ಅಗ್ರಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ. ಹೈದರಾಬಾದ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಹೆಚ್ ತಂಡ 20 ಓವರ್​ಗಳಲ್ಲಿ 235 ರನ್ ಕಲೆಹಾಕಿದ್ದರು.

ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 20 ಓವರ್​ಗಳಲ್ಲಿ 202 ರನ್​ಗಳಿಸಿ 33 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ಈ ಗೆಲುವಿನೊಂದಿಗೆ ಸನ್​ರೈಸರ್ಸ್ ಹೈದರಾಬಾದ್ ತಂಡವು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಇನ್ನು ಈ ಪಂದ್ಯದ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿಗಾಗಿ ಎಸ್​ಆರ್​ಹೆಚ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಕರೆಯಲಾಯಿತು. ಈ ಆಹ್ವಾನ ನೋಡಿ ಖುದ್ದು ಕಮಿನ್ಸ್ ಅಚ್ಚರಿಗೊಂಡರು. ಏಕೆಂದರೆ ಈ ಮ್ಯಾಚ್​ನಲ್ಲಿ ಪ್ಯಾಟ್ ಕಮಿನ್ಸ್ ಬ್ಯಾಟ್ ಮಾಡಿರಲಿಲ್ಲ. ಇನ್ನು ಪಡೆದಿರುವುದು ಕೇವಲ 2 ವಿಕೆಟ್ ಮಾತ್ರ.

ಇದಾಗ್ಯೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದ ಪ್ಯಾಟ್ ಕಮಿನ್ಸ್ “ನನಗೆ ಈ ಪ್ರಶಸ್ತಿ ಏಕೆ ನೀಡಲಾಗುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪಂಜಾಬ್ ಕಿಂಗ್ಸ್ ತಂಡದ ಕೂಪರ್ ಕೊನೊಲಿ ಈ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು/ ಬಹುಶಃ ಅದು ಅವರಿಗೆ ಸಲ್ಲಬೇಕಿತ್ತು, ಎಂದು ಹೇಳುವ ಮೂಲಕ ಕ್ರೀಡಾ ಸ್ಫೂರ್ತಿ ಮೆರೆದರು.

ಆದರೆ ಇಲ್ಲಿ ಪ್ಯಾಟ್ ಕಮಿನ್ಸ್ ಅವರನ್ನು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡಲು ಮುಖ್ಯ ಕಾರಣ ಅವರು ಪವರ್​ಪ್ಲೇನಲ್ಲಿ ಎಸೆದ ಓವರ್​ಗಳು. ಮೊದಲ ಓವರ್​ನಲ್ಲೇ ಡೇಂಜರಸ್ ಪ್ರಿಯಾಂಶ್ ಆರ್ಯ ವಿಕೆಟ್ ಪಡೆದಿದ್ದ ಕಮಿನ್ಸ್, ಆ ಬಳಿಕ ಸುರ್ಯಾಂಶ್ ಶೆಡ್ಗೆ ಅವರನ್ನು ಔಟ್ ಮಾಡಿದ್ದರು.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಮುಖಭಂಗ: IPL ಆಡ್ತೀವಿ ಎಂದ ಆಸ್ಟ್ರೇಲಿಯಾ ಆಟಗಾರರು!

ಅಲ್ಲದೆ 4 ಓವರ್​ಗಳಲ್ಲಿ ಕೇವಲ 34 ರನ್ ನೀಡಿ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರ ನಡುವೆ ಎರಡು ಅದ್ಭುತ ಕ್ಯಾಚ್​ಗಳನ್ನು ಸಹ ಹಿಡಿದಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಪ್ಯಾಟ್ ಕಮಿನ್ಸ್ ಅವರನ್ನು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ಇದಾಗ್ಯೂ ಈ ಮ್ಯಾಚ್​ನಲ್ಲಿ ಭರ್ಜರಿ ಶತಕ ಸಿಡಿಸಿದ್ದ 22 ವರ್ಷದ ಕೂಪರ್ ಕೊನೊಲಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಅರ್ಹರು ಎಂಬುದನ್ನು ಖುದ್ದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ. ಆದರೆ ಸೋತ ಪಂದ್ಯಗಳಲ್ಲಿ ಮಿಂಚಿದ ಆಟಗಾರರಿಗೆ ಐಪಿಎಲ್​ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಗುವುದು ವಿರಳ. ಈ ಸಂಪ್ರದಾಯ ಮುಂದೆಯಾದರೂ ಬದಲಾಗಲಿದೆಯಾ ಕಾದು ನೋಡಬೇಕಿದೆ.

SRH ತಂಡದ ‘ಸ್ಪೆಷಲ್ 7’:

ಈ ಬಾರಿಯ ಐಪಿಎಲ್‌ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಗೆಲುವಿನ ಹಿಂದೆ ಒಬ್ಬರೇ ಆಟಗಾರನಿಲ್ಲ. ತಂಡ ಸಾಧಿಸಿದ 7 ಗೆಲುವುಗಳಲ್ಲಿ 7 ಬೇರೆ ಬೇರೆ ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವುದು ಈ ತಂಡದ ಬಲವನ್ನು ತೋರಿಸುತ್ತದೆ. ಹೀಗೆ ಎಸ್​ಆರ್​ಹೆಚ್ ಪರ ಪ್ಲೇಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

  • ಅಭಿಷೇಕ್ ಶರ್ಮಾ
  •  ಟ್ರಾವಿಸ್ ಹೆಡ್
  • ಹೆನ್ರಿಕ್ ಕ್ಲಾಸನ್
  • ಇಶಾನ್ ಕಿಶನ್
  • ನಿತೀಶ್ ಕುಮಾರ್ ರೆಡ್ಡಿ
  • ಈಶಾನ್ ಮಾಲಿಂಗ
  •  ಪ್ಯಾಟ್ ಕಮ್ಮಿನ್ಸ್

Source link

ವಿಜಯ್‌ಗೆ ಬಹುಮತ ಸಾಬೀತಿನ ಸವಾಲು ಹಾಕಿದ ರಾಜ್ಯಪಾಲರು, ಕೋರ್ಟ್ ಮೆಟ್ಟಿಲೇರಲು ಟಿವಿಕೆ ಸಿದ್ಧತೆ – Kannada News | Vijay’s TVK Tamil Nadu Majority Test: Governor Demands Proof Amidst Coalition Hurdles

ಚೆನ್ನೈ, ಮೇ 07: ತಮಿಳುನಾಡು(Tamil Nadu) ವಿಧಾನಸಭಾ ಚುನಾವಣೆಯಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಭರ್ಜರಿ ಜಯ ದಾಖಲಿಸಿರುವ ನಟ ವಿಜಯ್ ಅವರ ‘ತಮಿಳುಗ ವೆಟ್ರಿ ಕಳಗಂ’ (TVK) ಅಧಿಕಾರದ ಗದ್ದುಗೆ ಏರಲು ಕೊನೆಯ ಹಂತದ ಕಾನೂನು ಮತ್ತು ಸಂಖ್ಯಾಬಲದ ಹೋರಾಟ ನಡೆಸುತ್ತಿದೆ. ಗುರುವಾರ ಬೆಳಿಗ್ಗೆ ವಿಜಯ್ ಅವರನ್ನು ರಾಜಭವನಕ್ಕೆ ಕರೆಸಿಕೊಂಡ ರಾಜ್ಯಪಾಲ ಆರ್‌ವಿ ಅರ್ಲೇಕರ್, ಮೊದಲು 118 ಶಾಸಕರ ಬೆಂಬಲವಿರುವ ಅಧಿಕೃತ ಪತ್ರ ತನ್ನಿ ಎಂದು ಕಠಿಣ ಷರತ್ತು ವಿಧಿಸಿದ್ದಾರೆ.

ಸುಮಾರು ಎರಡು ದಿನಗಳಲ್ಲಿ ಎರಡನೇ ಬಾರಿಗೆ ರಾಜ್ಯಪಾಲರನ್ನು ಭೇಟಿಯಾದ ವಿಜಯ್ ಅವರಿಗೆ ಸಂವಿಧಾನದ ಚೌಕಟ್ಟಿನೊಳಗೆ ಹಲವು ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಕೇವಲ 113 ಶಾಸಕರನ್ನು (ಟಿವಿಕೆ 108 + ಕಾಂಗ್ರೆಸ್ 5) ಇಟ್ಟುಕೊಂಡು ಸರ್ಕಾರ ಹೇಗೆ ನಡೆಸುತ್ತೀರಿ? ಎನ್ನುವ ಪ್ರಶ್ನೆ ಕೇಳಲಾಗಿದೆ.

ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಪಿಎಂಕೆ ಪಕ್ಷಗಳ ಬೆಂಬಲದೊಂದಿಗೆ ನಮ್ಮ ಸಂಖ್ಯಾಬಲ 123 ಕ್ಕೆ ಏರಲಿದೆ. ಬಹುಮತ ಸಾಬೀತುಪಡಿಸಲು ನಾನು ಸಿದ್ಧ ಎಂದು ವಿಜಯ್ ಹೇಳಿದ್ದಾರೆ.

ಮತ್ತಷ್ಟು ಓದಿ: ತಮಿಳುನಾಡು ರಾಜಕೀಯದಲ್ಲಿ ಹೈ-ಡ್ರಾಮಾ: ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್, ಸಿಪಿಐ ಅಚ್ಚರಿಯ ಬೆಂಬಲ

ರಾಜ್ಯಪಾಲರು ಮಾತ್ರ ಕೇವಲ ಬಾಯಿಮಾತಿನ ಭರವಸೆಗೆ ಒಪ್ಪುತ್ತಿಲ್ಲ. ಮೇಜಿನ ಮೇಲೆ ಭೌತಿಕವಾಗಿ ಬೆಂಬಲ ಪತ್ರಗಳಿಲ್ಲದ ಹೊರತು ಪ್ರಮಾಣವಚನಕ್ಕೆ ಅವಕಾಶ ನೀಡುವುದಿಲ್ಲ ಎಂದು ಅರ್ಲೇಕರ್ ಪಟ್ಟು ಹಿಡಿದಿದ್ದಾರೆ. ವಿಜಯ್ ಅವರ ಮುಂದಿರುವ ಅತಿದೊಡ್ಡ ಸವಾಲೆಂದರೆ ತಮ್ಮ ಮೈತ್ರಿಕೂಟದ ಪಕ್ಷಗಳನ್ನು ಒಗ್ಗೂಡಿಸುವುದು. ಬಿಜೆಪಿ ಜೊತೆ ಟಿವಿಕೆ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು ಎಂಬ ಷರತ್ತಿನ ಮೇಲೆ ಕಾಂಗ್ರೆಸ್ ಬೆಂಬಲ ನೀಡಿದೆ.

ವಿಸಿಕೆ ಮತ್ತು ಪಿಎಂಕೆ ಗೊಂದಲ: ವಿಸಿಕೆ ಸದ್ಯ ಡಿಎಂಕೆ ಜೊತೆಗಿದ್ದರೆ, ಪಿಎಂಕೆ ಬಿಜೆಪಿಯ ಮಿತ್ರಪಕ್ಷವಾಗಿದೆ. ವಿಜಯ್ ಜೊತೆ ಸೇರಬೇಕೆಂದರೆ ಈ ಎರಡೂ ಪಕ್ಷಗಳು ತಮ್ಮ ಹಾಲಿ ಮೈತ್ರಿಕೂಟದಿಂದ ಹೊರಬರಬೇಕಿದೆ. ಒಂದು ವೇಳೆ ಈ ಎಲ್ಲಾ ಪಕ್ಷಗಳು ಒಂದಾದರೆ ವಿಜಯ್ ಅವರ ಸಂಖ್ಯಾಬಲ 122 (ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ನಂತರ) ತಲುಪಲಿದೆ.

ಇನ್ನೊಂದೆಡೆ, ಎಐಎಡಿಎಂಕೆಯ ಒಂದು ಬಣ ವಿಜಯ್ ಅವರಿಗೆ ಬೆಂಬಲ ನೀಡಲು ಉತ್ಸುಕವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸುಮಾರು ಒಂದು ಡಜನ್ ಎಐಎಡಿಎಂಕೆ ಶಾಸಕರು ಪುದುಚೇರಿಯ ರೆಸಾರ್ಟ್‌ಗೆ ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ. ಆದರೆ, ಪಕ್ಷದ ಹಿರಿಯ ನಾಯಕರಾದ ಇಪಿಎಸ್ ಮತ್ತು ಕೆಪಿ ಮುನುಸಾಮಿ ಅವರು ಮೈತ್ರಿಯ ಸಾಧ್ಯತೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಈ ಅನಿಶ್ಚಿತತೆಯ ನಡುವೆ, ಯಾವುದೇ ಆಪರೇಷನ್ ನಡೆಯಬಾರದೆಂಬ ಮುನ್ನೆಚ್ಚರಿಕೆಯಿಂದ ವಿಜಯ್ ತಮ್ಮ 107 ಶಾಸಕರನ್ನು ಮಾಮಲ್ಲಪುರಂನ ರೆಸಾರ್ಟ್‌ನಲ್ಲಿ ಸುರಕ್ಷಿತವಾಗಿ ಇರಿಸಿದ್ದಾರೆ.

ಮುಂದೇನು? ರಾಷ್ಟ್ರಪತಿ ಆಳ್ವಿಕೆಯ ಭೀತಿ
ಸದ್ಯಕ್ಕೆ ಟಿವಿಕೆ ನ್ಯಾಯಾಲಯದ ಮೊರೆ ಹೋಗುವ ನಿರ್ಧಾರ ಮಾಡಿಲ್ಲ. ಬದಲಾಗಿ ರಾಜಕೀಯವಾಗಿ ಸಂಖ್ಯಾಬಲ ಸಾಬೀತುಪಡಿಸಲು ಪ್ರಯತ್ನಿಸುತ್ತಿದೆ. ಒಂದು ವೇಳೆ ವಿಜಯ್ ಅವರಿಗೆ ಮೈತ್ರಿಕೂಟವನ್ನು ಭದ್ರಪಡಿಸಲು ಸಾಧ್ಯವಾಗದಿದ್ದರೆ, ರಾಜ್ಯಪಾಲರು ಅನಿವಾರ್ಯವಾಗಿ ವಿಧಾನಸಭೆಯನ್ನು ಅಮಾನತುಗೊಳಿಸಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು. ಇದು ರಾಜ್ಯವನ್ನು ಮತ್ತೆ ಚುನಾವಣೆಯತ್ತ ತಳ್ಳುವ ಸಾಧ್ಯತೆಯಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: BJP ಶಾಸಕಿ ರತ್ನ ದೇವನಾಥ್ ಮನೆ ಬಳಿಯೇ ಬಾಂಬ್​​ ಸ್ಫೋಟ – Kannada News | West Bengal Post Poll Violence: Bomb Blast Near BJP MLA Ratna Debnath’s House, 5 Workers Injured

ಕೋಲ್ಕತ್ತಾ, ಮೇ 07: ಚುನಾವಣಾ ಫಲಿತಾಂಶದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ತೀವ್ರಗೊಂಡಿದ್ದು, ಪಾನಿಹಾಟಿ ಕ್ಷೇತ್ರದ ಬಿಜೆಪಿ ಶಾಸಕಿ ರತ್ನ ದೇವನಾಥ್ ನಿವಾಸದ ಬಳಿ ಬಾಂಬ್ ಸ್ಫೋಟಗೊಂಡಿದೆ. ಆರ್​.ಜಿ ಕರ್ ಆಸ್ಪತ್ರೆಯಲ್ಲಿನ ಅತ್ಯಾಚಾರ ಸಂತ್ರಸ್ತೆ ತಾಯಿ ರತ್ನ ದೇವನಾಥ್​ ಮನೆ ಸಮೀಪ ನಡೆದ ಈ ಘಟನೆಯಲ್ಲಿ ಬಿಜೆಪಿಯ ಐವರು ಕಾರ್ಯಕರ್ತರಿಗೆ ಗಾಯಗಳಾಗಿವೆ. ಬಿಜೆಪಿ ನಾಯಕ ಹಾಗೂ ಸಿಎಂ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿರುವ ವಿಚಾರ ದೇಶಾದ್ಯಂತ ಸುದ್ದಿಯಾಗಿರುವ ನಡುವೆ, ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಂತಾರಾಷ್ಟ್ರೀಯ ಮ್ಯಾಗಜಿನ್ ಅಲ್ಲಿ ಯಶ್ ಫೋಟೋ; ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣ – Kannada News | Yash on Variety Cover: ‘The Yash Effect’ and Toxic Film’s Global Impact

‘ಕೆಜಿಎಫ್’ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ. ಅವರ ನಟನೆಯ ‘ಟಾಕ್ಸಿಕ್’ ಸಿನಿಮಾ ವಿಶ್ವ ಮಟ್ಟದಲ್ಲಿ ತೆರೆಗೆ ಬರಲು ರೆಡಿ ಆಗಿದೆ. ಹೀಗಿರುವಾಗಲೇ ಅಂತಾರಾಷ್ಟ್ರೀಯ ನಿಯತಕಾಲಿಕೆ ‘ವೆರೈಟಿ’ ತನ್ನ ಕವರ್ ಪೇಜ್ ಮೇಲೆ ಯಶ್ ಅವರ ಫೋಟೋವನ್ನು ಫೀಚರ್ ಮಾಡಿದೆ. ‘ಇದು ಯಶ್ ಎಫೆಕ್ಟ್’ ಎಂದು ಬರೆದಿದೆ.

1.ಪ್ರತಿಷ್ಠಿತ ‘ವೆರೈಟಿ’ ಮ್ಯಾಗಜೀನ್ ಕವರ್ ಪುಟದಲ್ಲಿ ಯಶ್

2. The Yash Effect’ ಹೆಸರಿನಲ್ಲಿ ರಾಕಿಂಗ್ ಸ್ಟಾರ್ ಅಬ್ಬರ

3. ಅಂತಾರಾಷ್ಟ್ರೀಯ ಮಟ್ಟದ ಮಾರ್ಕೆಟಿಂಗ್‌ನಿಂದ ಸಿನಿಪ್ರಿಯರು ಫಿದಾ

ಬಿಳಿ ಬಣ್ಣದ ಸೂಟ್ ಹಾಗೂ ಹ್ಯಾಟ್ ಧರಿಸಿ, ಐಷಾರಾಮಿ ಕಾರಿನ ಒಳಗೆ ಕುಳಿತಿರುವ ಯಶ್ ಅವರ ಸ್ಟೈಲಿಶ್ ಫೋಟೋ ಈಗ ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಈ ಕವರ್ ಸ್ಟೋರಿಯು ಕೇವಲ ಒಬ್ಬ ನಟನಾಗಿ ಮಾತ್ರವಲ್ಲದೆ, ಒಬ್ಬ ಪ್ರಭಾವಿ ನಿರ್ಮಾಪಕನಾಗಿಯೂ ಯಶ್ ಹೇಗೆ ಬೆಳೆಯುತ್ತಿದ್ದಾರೆ ಎಂಬುದನ್ನು ವಿವರಿಸಿದೆ. ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಚಿತ್ರದ ಪ್ರಚಾರದ ಭಾಗವಾಗಿ ಈ ವಿಶೇಷ ಫೀಚರ್ ಹೊರಬಂದಿದ್ದು, ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ದುಪ್ಪಟ್ಟು ಮಾಡಿದೆ. ಕನ್ನಡದ ನಟನ ಫೋಟೋ ಹಾಲಿವುಡ್ ಮ್ಯಾಗಜಿನ್​​ ಅಲ್ಲಿ ಫೀಚರ್ ಆಗಿರೋದು ನಿಜಕ್ಕೂ ಹೆಮ್ಮೆಯ ವಿಷಯ.

ಇದನ್ನೂ ಓದಿ: ಆ ಸ್ಟಾರ್ ನಟನ ಸಿನಿಮಾ ನೋಡುವುದೇ ಬಿಟ್ಟ ಯಶ್: ವಿಡಿಯೋ

ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಟಾಕ್ಸಿಕ್’ ಸಿನಿಮಾ ಭಿನ್ನ ಅನುಭವ ನೀಡಲಿದೆ ಎಂದು ತಂಡ ಹೇಳಿದೆ. ಇದು ಮಾಮೂಲಿ ಮಾಸ್ ಎಂಟರ್‌ಟೈನರ್ ಸಿನಿಮಾ ಆಗಿರದೆ ಭಿನ್ನ ರೀತಿಯಲ್ಲಿ ಮೂಡಿ ಬರಲಿದೆಯಂತೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ಯಶ್ ಅವರ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಕೂಡ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ವಿಶೇಷ.

ವೆರೈಟಿ ಕವರ್ ಪೇಜ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ #YashBOSS ಮತ್ತು #ToxicTheMovie ಹ್ಯಾಶ್‌ಟ್ಯಾಗ್‌ಗಳು ಟ್ರೆಂಡಿಂಗ್‌ನಲ್ಲಿ ಬಂದಿವೆ. ಯಶ್ ತಮ್ಮ ಹಳೆಯ ‘ಲಾರ್ಜರ್ ದ್ಯಾನ್ ಲೈಫ್’ ಇಮೇಜ್‌ನಿಂದ ಹೊರಬಂದು, ಹೊಸ ರೀತಿಯ ಪ್ರಯೋಗಗಳಿಗೆ ಕೈ ಹಾಕುತ್ತಿರುವುದನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕಲಾತ್ಮಕ ಸಿನಿಮಾಗಳಿಗೆ ಹೆಸರಾದ ಗೀತು ಮೋಹನ್ ದಾಸ್ ಮತ್ತು ಮಾಸ್ ಹೀರೋ ಯಶ್ ಅವರ ಈ ಅಪರೂಪದ ಸಮಾಗಮವು ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಮುನ್ಸೂಚನೆ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಹಾರ ರಾಜಕೀಯದಲ್ಲಿ ಹೊಸ ಪರ್ವ: ಸಂಪುಟ ಸೇರಿದ ನಿತೀಶ್ ಪುತ್ರ ನಿಶಾಂತ್, 31 ನಾಯಕರಿಂದ ಮಂತ್ರಿಗಳಾಗಿ ಪ್ರಮಾಣ ವಚನ – Kannada News | Bihar Cabinet Expansion: Nitish Kumar’s Son Nishant Takes Oath, 31 New Ministers Sworn In

ಪಾಟ್ನಾ, ಮೇ 07: ಬಿಹಾರ(Bihar)ದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.  ಬಿಹಾರ ರಾಜಕೀಯದ ಚದುರಂಗದಾಟದಲ್ಲಿ ಗುರುವಾರ ಮತ್ತೊಂದು ದೊಡ್ಡ ನಡೆ ಕಂಡುಬಂದಿದೆ. ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಸಾಮ್ರಾಟ್ ಚೌಧರಿ ನೇತೃತ್ವದ ಬಿಜೆಪಿ-ಎನ್‌ಡಿಎ ಸರ್ಕಾರವು ತನ್ನ ಸಚಿವ ಸಂಪುಟವನ್ನು ವಿಸ್ತರಿಸಿದೆ. ಈ ವಿಸ್ತರಣೆಯ ಅತ್ಯಂತ ಗಮನಾರ್ಹ ಅಂಶವೆಂದರೆ, ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಧಿಕೃತವಾಗಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿರುವುದು.

ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರು ನಿಶಾಂತ್ ಕುಮಾರ್ ಸೇರಿದಂತೆ ಒಟ್ಟು 31 ನಾಯಕರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನಿತೀಶ್ ಕುಮಾರ್ ಸಾಕ್ಷಿಯಾದರು. ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರೆಲ್ಲರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮುಂಬರುವ ಚುನಾವಣೆಗೆ ತಮ್ಮ ಒಗ್ಗಟ್ಟಿನ ಸಂದೇಶ ರವಾನಿಸಿದರು.

ನೂತನ ಸಂಪುಟದಲ್ಲಿ ಅನುಭವ ಮತ್ತು ಯುವ ಉತ್ಸಾಹಕ್ಕೆ ಆದ್ಯತೆ ನೀಡಲಾಗಿದೆ, ನಿಶಾಂತ್ ಕುಮಾರ್ ನಿತೀಶ್ ಕುಮಾರ್ ಅವರ ಪುತ್ರನಾಗಿ ಸಂಪುಟ ಸೇರಿರುವುದು ಬಿಹಾರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಮಾಜಿ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ, ಅನುಭವಿಗಳಾದ ಶ್ರಾವಣ್ ಕುಮಾರ್ ಮತ್ತು ಅಶೋಕ್ ಚೌಧರಿ ಅವರು ಮತ್ತೆ ಸಂಪುಟ ಸೇರಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಐದೂ ಪಕ್ಷಗಳಾದ ಬಿಜೆಪಿ, ಜೆಡಿ(ಯು), ಎಲ್‌ಜೆಪಿ (ರಾಮ್ ವಿಲಾಸ್), ಹ್ಯಾಮ್ (HAM) ಮತ್ತು ಆರ್‌ಎಲ್‌ಎಂ ನಾಯಕರಿಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗಿದೆ.

ಮತ್ತಷ್ಟು ಓದಿ: ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?

ನಿತೀಶ್ ಕುಮಾರ್ ಅವರು ರಾಜ್ಯಸಭೆಗೆ ಆಯ್ಕೆಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಕಳೆದ ತಿಂಗಳು ಬಿಹಾರದಲ್ಲಿ ದೊಡ್ಡ ಬದಲಾವಣೆ ಸಂಭವಿಸಿತ್ತು. ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರು ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಈಗ ಈ ವಿಸ್ತರಣೆಯ ಮೂಲಕ ಸರ್ಕಾರವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಜ್ಜಾಗಿದೆ.

ಚಿರಾಗ್ ಪಾಸ್ವಾನ್ ಮತ್ತು ಜಿತನ್ ರಾಮ್ ಮಾಂಝಿ ಅವರಂತಹ ಪ್ರಭಾವಿ ನಾಯಕರ ಪಕ್ಷಗಳನ್ನು ಒಳಗೊಂಡಿರುವ ಈ ಮೈತ್ರಿಕೂಟವು ಮುಂಬರುವ ಚುನಾವಣಾ ಸವಾಲುಗಳನ್ನು ಎದುರಿಸಲು ಈ ಸಂಪುಟ ವಿಸ್ತರಣೆಯನ್ನು ಒಂದು ತಂತ್ರವಾಗಿ ಬಳಸಿಕೊಂಡಿದೆ.

ಎಲ್ಲಾ ಸಮುದಾಯ ಮತ್ತು ಮಿತ್ರಪಕ್ಷಗಳನ್ನು ಸಮಾಧಾನಪಡಿಸುವ ಮೂಲಕ ಬಿಹಾರದಲ್ಲಿ ತನ್ನ ಹಿಡಿತವನ್ನು ಗಟ್ಟಿಗೊಳಿಸಲು ಎನ್‌ಡಿಎ ಮುಂದಾಗಿದೆ. ಒಟ್ಟಾರೆಯಾಗಿ, ನಿತೀಶ್ ಕುಮಾರ್ ಅವರ ಪುತ್ರನ ರಾಜಕೀಯ ಪ್ರವೇಶ ಮತ್ತು ಬಿಜೆಪಿ ನೇತೃತ್ವದ ಸರ್ಕಾರದ ಈ ವಿಸ್ತರಣೆಯು ಬಿಹಾರದ ಮುಂದಿನ ರಾಜಕೀಯ ಭವಿಷ್ಯಕ್ಕೆ ಹೊಸ ದಿಕ್ಸೂಚಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:24 pm, Thu, 7 May 26

Source link

ಬಿಆರ್​​ಎಸ್​ ಶಾಸಕನ ಕಚೇರಿ ಮೇಲೆ ಬಿಜೆಪಿಗರ ದಾಳಿ: ಪೀಠೋಪಕರಣ ಧ್ವಂಸ, ಕಾರಿನ ಗಾಜು ಪುಡಿಗೈದು ಅಟ್ಟಹಾಸ – Kannada News | BRS MLA Office Attack in Karimnagar: BJP Workers Vandalize Property Over Controversial Remarks

ಹೈದರಾಬಾದ್​​, ಮೇ 07: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್​​ ಕುಮಾರ್​​ ಅವರ ವಿರುದ್ಧ ಬಿಆರ್‌ಎಸ್ ಶಾಸಕ ಕೌಶಿಕ್ ರೆಡ್ಡಿ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಕರೀಂನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಜಿ ಸಚಿವ ಹಾಗೂ ಶಾಸಕ ಗಂಗುಲ ಕಮಲಾಕರ್ ಅವರ ಕ್ಯಾಂಪ್​​​ ಕಚೇರಿಗೆ ನುಗ್ಗಿ ಬಿಜೆಪಿಗರು ದಾಂಧಲೆ ನಡೆಸಿದ್ದಾರೆ. ಬಿಆರ್​ಎಸ್ ಶಾಸಕ ಕೌಶಿಕ್ ರೆಡ್ಡಿ ಒಳಗೆ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಬಿಜೆಪಿ ಬೆಂಬಲಿತರು ಧ್ವಂಸಗೊಳಿಸಿದ್ದು, ಕೂಡಲೇ ಲಘು ಲಾಠಿ ಪ್ರಹಾರ ನಡೆಸಿ ಪೊಲೀಸರು ಗುಂಪು ಚದುರಿಸಿದ ಪ್ರಸಂಗ ನಡೆದಿದೆ.

ಬಿಜೆಪಿಗರ ಆಕ್ರೋಶಕ್ಕೆ ಕಾರಣ ಏನು?

ಕೆಟಿಆರ್ ಡ್ರಗ್ ಟೆಸ್ಟ್ ಮಾಡಿಸಬೇಕು ಎಂಬ ಬಂಡಿ ಸಂಜಯ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕೌಶಿಕ್ ರೆಡ್ಡಿ, ಬಂಡಿ ಸಂಜಯ್ ಕೂಡ ಡ್ರಗ್ ಟೆಸ್ಟ್ ಮಾಡಿಸಿಕೊಳ್ಳಲಿ ಎಂದು ಸವಾಲು ಹಾಕಿದ್ದರು. ಅಲ್ಲದೆ, ಮಾದಕ ವಸ್ತು ಮಿಶ್ರಿತ ತಂಬಾಕು ಸೇವನೆಯ ಪರಿಣಾಮದಿಂದಲೇ ಬಂಡಿ ಸಂಜಯ್ ಅವರ ಕೂದಲು ಉದುರಿದೆ ಎಂದು ಟೀಕಿಸಿದ್ದರು. ಈ ಹೇಳಿಕೆ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಬಿಹಾರ ರಾಜಕೀಯದಲ್ಲಿ ಹೊಸ ಪರ್ವ; ಸಂಪುಟ ಸೇರಿದ ನಿತೀಶ್ ಪುತ್ರ ನಿಶಾಂತ್, 31 ನಾಯಕರಿಂದ ಮಂತ್ರಿಗಳಾಗಿ ಪ್ರಮಾಣ ವಚನ

ಘಟನೆಗೆ ಬಿಆರ್​​ಎಸ್​​ ಕಿಡಿ

ಇನ್ನು ಘಟನೆ ಬಗ್ಗೆ ಎಕ್ಸ್​​ ಪೋಸ್ಟ್​​ ಮಾಡಿ ಬಿಆರ್​​ಎಸ್​​ ಕಿಡಿ ಕಾರಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಸ್ವತಃ ದಾಳಿಗೆ ಸಂಚು ರೂಪಿಸಿರುವುದು ಅತ್ಯಂತ ಖಂಡನೀಯ. ಬಿಜೆಪಿ ಗೂಂಡಾಗಳು ಕರೀಂನಗರ ಶಾಸಕರ ಕ್ಯಾಂಪ್ ಕಚೇರಿಯ ಮೇಲೆ ದಾಳಿ ನಡೆಸಿ ಫೋಠೋಪಕರಣಗಳು, ಬಾಗಿಲುಗಳು ಹಾಗೂ ಕಾರನ್ನು ಧ್ವಂಸಗೊಳಿಸಿದ್ದಾರೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಸ್ಥಾನದಲ್ಲಿರುವ ಬಂಡಿ ಸಂಜಯ್ ಸ್ವತಃ ಬಿಜೆಪಿ ಕಾರ್ಯಕರ್ತರನ್ನು ಪ್ರೇರೇಪಿಸಿ ಈ ದಾಳಿ ನಡೆಸಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವಾಗಿದೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದು, ಸರಿಯಾದ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:35 pm, Thu, 7 May 26

Source link

ಹಿಡಿಯಲು ಸಾಧ್ಯವಾದ್ರೆ ಹಿಡಿಯಿರಿ: ಪಂಜಾಬ್ ಕಿಂಗ್ಸ್ ಕಾಲೆಳೆದ ಇಶಾನ್ ಕಿಶನ್! – Kannada News | Ishan Kishan mocks PBKS after fielding nightmare

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 49ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮಾಡಿದ ಫೀಲ್ಡಿಂಗ್ ಪ್ರಮಾದಗಳು ತಂಡಕ್ಕೆ ಭಾರೀ ಹೊಡೆತ ನೀಡಿವೆ. ಸನ್​ರೈಸರ್ಸ್​ ಹೈದರಾಬಾದ್ ತಂಡದ ಸ್ಫೋಟಕ ಓಪನರ್ ಇಶಾನ್ ಕಿಶನ್ ಅವರಿಗೆ ನೀಡಿದ ಸರಣಿ ಜೀವದಾನಗಳು ಪಂದ್ಯದ ಗತಿಯನ್ನೇ ಬದಲಿಸಿದವು. ಅಷ್ಟೇ ಅಲ್ಲದೆ, ಈ ಘಟನೆಯನ್ನು ಹಾಸ್ಯಮಯವಾಗಿ ಬಳಸಿಕೊಂಡ ಕಿಶನ್, ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷವಾಗಿ ಪಂಜಾಬ್ ತಂಡದ ಕಾಲೆಳೆದಿದ್ದಾರೆ.

ಜೀವದಾನಗಳ ಲಾಭ ಪಡೆದ ಕಿಶನ್:

ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟರ್ ಇಶಾನ್ ಕಿಶನ್ ಈ ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ 55 ರನ್ ಚಚ್ಚಿದರು. ಆದರೆ ಈ ಇನ್ನಿಂಗ್ಸ್‌ನಲ್ಲಿ ಕಿಶನ್ ಅವರಿಗೆ ಪಂಜಾಬ್ ಕಿಂಗ್ಸ್​ ಫೀಲ್ಡರ್‌ಗಳು ಬರೋಬ್ಬರಿ ಮೂರು ಬಾರಿ ಜೀವದಾನ ನೀಡಿದ್ದರು ಎಂಬುದು ವಿಶೇಷ.

  • ಇಶಾನ್ ಕಿಶನ್ ಕೇವಲ 9 ರನ್ ಗಳಿಸಿದ್ದಾಗ ಕೂಪರ್ ಕೊನೊಲಿ ಕ್ಯಾಚ್ ನೀಡಿದ್ದರು. ಆದರೆ ಈ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದ್ದರು.
  • ಇದಾದ ಬಳಿಕ 18 ರನ್ ಗಳಿಸಿದ್ದಾಗ ಲಾಕಿ ಫರ್ಗುಸನ್ ಕೂಡ ಇಶಾನ್ ಕಿಶನ್ ನೀಡಿದ ಸುಲಭ ಕ್ಯಾಚ್ ಕೈಬಿಟ್ಟರು.
  • ಇದರ ಬೆನ್ನಲ್ಲೇ ಇಶಾನ್ ಕಿಶನ್ ಅವರನ್ನು ಸ್ಟಂಪಿಂಗ್ ಅವಕಾಶವನ್ನೂ ವಿಕೆಟ್ ಕೀಪರ್ ಪ್ರಭ್‌ಸಿಮ್ರಾನ್ ಸಿಂಗ್ ಮಿಸ್ ಮಾಡಿಕೊಂಡರು.

ಹೀಗೆ ಮೂರು ಜೀವದಾನ ಪಡೆದ ಇಶಾನ್ ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಕೇವಲ 32 ಎಸೆತಗಳಲ್ಲಿ 55 ರನ್​​ ಚಚ್ಚಿ ಸನ್​ರೈಸರ್ಸ್ ಹೈದರಾಬಾದ್ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಹಿಡಿಯಲು ಸಾಧ್ಯವಾದರೆ ಹಿಡಿಯಿರಿ!

ಈ ಪಂದ್ಯ ಮುಗಿದ ನಂತರ ಇಶಾನ್ ಕಿಶನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪಂದ್ಯದ ಕೆಲವು ಫೋಟೋಗಳನ್ನು ಹಂಚಿಕೊಂಡು, “Catch me, if you can” (ಸಾಧ್ಯವಾದರೆ ನನ್ನನ್ನು ಹಿಡಿಯಿರಿ) ಎಂದು ಕ್ಯಾಪ್ಷನ್ ನೀಡಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಮುಖಭಂಗ: IPL ಆಡ್ತೀವಿ ಎಂದ ಆಸ್ಟ್ರೇಲಿಯಾ ಆಟಗಾರರು!

ಇದು ಪರೋಕ್ಷವಾಗಿ ಪಂಜಾಬ್ ಕಿಂಗ್ಸ್​ ತಂಡದವರು ಕೈಬಿಟ್ಟ ಕ್ಯಾಚ್‌ಗಳನ್ನು ಲೇವಡಿ ಮಾಡಿದಂತಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಅಂದರೆ ಇಶಾನ್ ಕಿಶನ್ ಇಲ್ಲಿ ಕ್ಯಾಚ್ ಮಿ ಇಫ್ ಯು ಕ್ಯಾನ್ ಡೈಲಾಗ್​ ಬಳಸಿರುವುದು ಕ್ಯಾಚ್ ಬಿಟ್ಟಿರುವುದನ್ನು ಉಲ್ಲೇಖಿಸಿ ಎಂದು ಅಭಿಮಾನಿಗಳು ಪಂಜಾಬ್ ಕಿಂಗ್ಸ್ ತಂಡವನ್ನು ಟ್ರೋಲ್ ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ, ಪಂಜಾಬ್ ಕಿಂಗ್ಸ್ ತಂಡದ ಈ ಫೀಲ್ಡಿಂಗ್ ಪ್ರಮಾದಗಳು ಟಿ20 ಕ್ರಿಕೆಟ್‌ನಲ್ಲಿ ‘ಕ್ಯಾಚಸ್ ವಿನ್ ಮ್ಯಾಚಸ್’  ಎಂಬ ಹಳೆಯ ಮಾತನ್ನು ಮತ್ತೊಮ್ಮೆ ಸಾಬೀತುಪಡಿಸಿವೆ. ಇಶಾನ್ ಕಿಶನ್ ಅವರಿಗೆ ಸಿಕ್ಕ ಜೀವದಾನಗಳು ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದವು. ಮುಂಬರುವ ಪಂದ್ಯಗಳಲ್ಲಿ ಪಂಜಾಬ್ ಈ ತಪ್ಪುಗಳಿಂದ ಪಾಠ ಕಲಿಯುತ್ತದೆಯೇ ಅಥವಾ ಇಂತಹ ಪ್ರಮಾದಗಳು ತಂಡದ ಪ್ಲೇ-ಆಫ್ ಹಾದಿಗೆ ಅಡ್ಡಿಯಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

Source link

ಮೈಸೂರು: ಮೈಲಾರಿ ಹೋಟೆಲ್‌ನಲ್ಲಿ ರಾಜಣ್ಣ ಜತೆ ಕುಳಿತು ದೋಸೆ ಸವಿದ ಸಿಎಂ ಸಿದ್ದರಾಮಯ್ಯ – Kannada News | Siddaramaiah Visits Mylari Hotel in Mysuru; Eat dosa with Rajanna and Launches Free Ambulances in Memory of Late Son Rakesh

ಮೈಸೂರು, ಮೇ 7: ಸಾಂಸ್ಕೃತಿಕ ನಗರಿ ಮೈಸೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮೇ 7) ಬೆಳಗ್ಗೆ ನಗರದ ಸುಪ್ರಸಿದ್ಧ ಮೈಲಾರಿ ಹೋಟೆಲ್​ಗೆ ಭೇಟಿ ನೀಡಿ ದೋಸೆ, ಇಡ್ಲಿ ಸವಿದರು. ಈ ವೇಳೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಸ್ಥಳೀಯ ನಾಯಕರು ಸಿಎಂಗೆ ಸಾಥ್ ನೀಡಿದರು. ಹೋಟೆಲ್‌ನಲ್ಲಿ ದೋಸೆ ಹಾಗೂ ಇಡ್ಲಿ ಸವಿದ ಸಿದ್ದರಾಮಯ್ಯ, ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಮುಖ್ಯಮಂತ್ರಿಗಳು ತಮ್ಮ ಹಿರಿಯ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯ ಅವರ ಸ್ಮರಣಾರ್ಥ ಮಹತ್ವದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದರು. ಮೈಸೂರಿನ ಟಿ.ಕೆ. ಬಡಾವಣೆಯಲ್ಲಿರುವ ತಮ್ಮ ನಿವಾಸದ ಮುಂಭಾಗದಲ್ಲಿ ‘ಸಮತಾ ಟ್ರಸ್ಟ್’ ವತಿಯಿಂದ ಉಚಿತ ಸೇವೆಗಾಗಿ ಮೀಸಲಿಡಲಾದ ಎರಡು ಆಂಬುಲೆನ್ಸ್‌ಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version