‘ಜನರ ತೀರ್ಪಿಗೆ ಗೌರವ ಸಿಗಲೇಬೇಕು’; ವಿಜಯ್ ಪರ ಬ್ಯಾಟ್ ಬೀಸಿದ ಕಮಲ್ ಹಾಸನ್ – Kannada News | Tamil Nadu Hung Assembly: Kamal Haasan Demands Vijay’s TVK Form Govt Amidst Deadlock

ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಮೂರು ದಿನ ಕಳೆದರೂ ಸರ್ಕಾರ ರಚನೆಯ ಕಸರತ್ತು ಇನ್ನೂ ಮುಗಿದಿಲ್ಲ. ಈ ಬಾರಿಯ ತಮಿಳುನಾಡು ವಿಧಾನಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಆಗ್ರಹಿಸಿದ್ದಾರೆ.

1.ತಮಿಳುನಾಡಿನಲ್ಲಿ ಯಾವುದೇ ಪಕ್ಷಕ್ಕೆ ಸಿಗದ ಸ್ಪಷ್ಟ ಬಹುಮತ

2. ವಿಜಯ್ ಪಕ್ಷಕ್ಕೆ ಚುನಾವಣೆಯಲ್ಲಿ ಸಿಕ್ಕಿದೆ 108 ಸ್ಥಾನ

3. ವಿಜಯ್‌ರನ್ನು ಸರ್ಕಾರ ರಚನೆಗೆ ಕರೆಯುವಂತೆ ಕಮಲ್ ಹಾಸನ್ ಒತ್ತಾಯ

ತಮಿಳುನಾಡು ರಾಜಕೀಯದ ಈ ಬಿಕ್ಕಟ್ಟಿನ ಕುರಿತು ಟ್ವಿಟರ್​ನಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಕಮಲ್ ಹಾಸನ್, ವಿಜಯ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ‘ತಮಿಳಗ ವೆಟ್ರಿ ಕಳಗಂ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅತಿ ದೊಡ್ಡ ಪಕ್ಷವಾಗಿರುವ ವಿಜಯ್ ಅವರನ್ನು ಸರ್ಕಾರ ರಚಿಸಲು ಕರೆಯದಿರುವುದು ತಮಿಳುನಾಡು ಜನತೆ ನೀಡಿದ ತೀರ್ಪಿಗೆ ಮಾಡುವ ಅವಮಾನ’ ಎಂದು ಅವರು ಕಿಡಿಕಾರಿದ್ದಾರೆ.

‘ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ ಆಡಳಿತ ನಡೆಸುವ ಅಧಿಕಾರವನ್ನು ಜನತೆ ನೀಡಿಲ್ಲ. ತಮಿಳುನಾಡಿನ ಇತಿಹಾಸದಲ್ಲೇ ಇಂತಹ ತೀರ್ಪು ಹಿಂದೆಂದೂ ಬಂದಿರಲಿಲ್ಲ. ನನ್ನ ಸಹೋದರ ಎಂ.ಕೆ. ಸ್ಟಾಲಿನ್ ಅವರು, ನಾವು ಜನರ ತೀರ್ಪನ್ನು ಗೌರವಿಸುತ್ತೇವೆ ಮತ್ತು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಘೋಷಿಸಿದ್ದಾರೆ. ಅವರ ಈ ರಾಜಕೀಯ ಮುತ್ಸದ್ದಿತನವನ್ನು ನಾನು ಗೌರವಿಸುತ್ತೇನೆ’ ಎಂದು ಕಮಲ್ ಹಾಸನ್ ಹೇಳಿದ್ದಾರೆ.

‘ಈಗ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಸಹ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕಿದೆ. ಈಗಾಗಲೇ ಆಯ್ಕೆಯಾಗಿರುವ 233 ಸದಸ್ಯರು ಇನ್ನೂ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗದಿರುವುದು ರಾಜ್ಯಕ್ಕೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಗುತ್ತಿರುವ ದೊಡ್ಡ ಹಾನಿ’ ಎಂದು ಅವರು ಕಳವಳ ಹೊರಹಾಕಿದರು.

‘ಬಹುಮತ ಎಂಬುದು ವಿಧಾನಸಭೆಯ ಒಳಗೆ ಸಾಬೀತಾಗಬೇಕೇ ಹೊರತು, ರಾಜ್ ಭವನದ ಒಳಗಲ್ಲ ಎಂದು ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ನಾನು ಮಾತನಾಡುತ್ತಿರುವುದು ಕೇವಲ ಪಕ್ಷದ ಪರವಾಗಿ ಅಲ್ಲ, ಬದಲಿಗೆ ಒಬ್ಬ ಭಾರತೀಯ ಪ್ರಜೆಯಾಗಿ ಸಾಂವಿಧಾನಿಕ ಆಶಯದ ಧ್ವನಿಯಾಗಿ. ತಮಿಳುನಾಡು ಜನರ ತೀರ್ಪಿಗೆ ಸರಿಯಾದ ಗೌರವ ಸಿಗಲೇಬೇಕು’ ಎಂದು ಅವರು ಆಶಿಸಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್ ಹಾದಿಯಲ್ಲಿ ಮುಂದುವರೆಯುತ್ತಾರಾ ಶಿವಣ್ಣ? ರಾಜಕೀಯ ನಿಲುವಿನ ಬಗ್ಗೆ ಸಿಕ್ತು ಉತ್ತರ

ಪಕ್ಷ ಸ್ಥಾಪಿಸಿದ ಎರಡೇ ವರ್ಷಗಳಲ್ಲಿ 107 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಜಯ್ ದೊಡ್ಡ ಸಾಧನೆ ಮಾಡಿದ್ದಾರೆ. ಕಾಂಗ್ರೆಸ್ ಇವರಿಗೆ ಬೆಂಬಲ ನೀಡಿದ್ದು, 112 ಆಗಿದೆ. ಆದರೆ, ಮ್ಯಾಜಿಕ್ ನಂಬರ್ (118) ತಲುಪಲು ಇನ್ನೂ 6 ಸ್ಥಾನಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ನಡೆ ಏನು ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೈಲಿನಲ್ಲಿ ಜ್ಞಾನ ಜ್ಯೋತಿ: ಪರಪ್ಪನ ಅಗ್ರಹಾರದಲ್ಲಿ ದೇಶದ ಮೊದಲ ಶಿಶುಪಾಲನಾ ಕೇಂದ್ರ ಆರಂಭ! – Kannada News | Nation’s First: Parappana Agrahara Jail Launches Special Child Care Unit for Inmates’ Children

ಪರಪ್ಪನ ಅಗ್ರಹಾರದಲ್ಲಿ ದೇಶದ ಮೊದಲ ಶಿಶುಪಾಲನಾ ಕೇಂದ್ರ ಆರಂಭ!
Image Credit source: The New Indian Express

ಬೆಂಗಳೂರು, ಮೇ 07: ಪರಪ್ಪನ ಅಗ್ರಹಾರ (Parappana Agrahara) ತನ್ನಲ್ಲಿ ನಡೆಯುವ ಅಕ್ರಮಗಳ ಕಾರಣಕ್ಕೆ ಯಾವಗಲೂ ಸುದ್ದಿಯಲ್ಲಿರುತ್ತದೆ. ಈಗ ಮತ್ತೊಮ್ಮೆ ಕೇಂದ್ರ ಕಾರಾಗೃಹ ಸುದ್ದಿ ಮಾಡಿದೆ. ಆದರೆ ಅಲ್ಲಿ ನಡೆಯುವ ಅಕ್ರಮದಿಂದಲ್ಲ; ಬದಲಾಗಿ ದೇಶದ ಮೊದಲ ವಿಶೇಷ ಶಿಶುಪಾಲನಾ ಕೇಂದ್ರ ಆರಂಭಿಸುತ್ತಿರುವ ಕಾರಣದಿಂದಾಗಿ. ಹೌದು, ತಾಯಂದಿರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಾಗ, ಅವರನ್ನೇ ಅವಲಂಬಿಸಿರುವ ಹಸುಗೂಸುಗಳು ಮತ್ತು ಆರು ವರ್ಷದೊಳಗಿನ ಮಕ್ಕಳು ಯಾವುದೇ ಅಪರಾಧ ಮಾಡದಿದ್ದರೂ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಬೆಳೆಯಬೇಕಾದ ಅನಿವಾರ್ಯತೆ ಇರುತ್ತದೆ. ಇಂತಹ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯವು (DCP) ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಶುಪಾಲನಾ ಕೇಂದ್ರ ಆರಂಭಿಸಿದೆ.

ಮುಖ್ಯಾಂಶಗಳು

  • ಪರಪ್ಪನ ಅಗ್ರಹಾರದಲ್ಲಿ ದೇಶದ ಮೊದಲ ಶಿಶುಪಾಲನಾ ಕೇಂದ್ರ ಆರಂಭ
  • ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಒತ್ತು, ಇಬ್ಬರು ಶಿಕ್ಷಕರ ನೇಮಕ
  • ಮೂವರು ವಿದೇಶಿ ಪ್ರಜೆಗಳ ಮಕ್ಕಳು ಸೇರಿ ಒಂಭತ್ತು ಮಕ್ಕಳಿಗೆ ಈಗಾಗಲೇ ಆಶ್ರಯ

ಶೈಕ್ಷಣಿಕ ಮತ್ತು ಮಾನಸಿಕ ವಿಕಸನಕ್ಕೆ ಒತ್ತು

ಜೈಲಿನ ವಾತಾವರಣವು ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರಬಾರದು ಎಂಬ ಉದ್ದೇಶದಿಂದ ಈ ಘಟಕವನ್ನು ಸ್ಥಾಪಿಸಲಾಗಿದೆ. ಇಲ್ಲಿ ಮಕ್ಕಳಿಗೆ ಕೇವಲ ಅಕ್ಷರಭ್ಯಾಸ ಮಾತ್ರವಲ್ಲದೆ, ಅವರ ಭಾವನಾತ್ಮಕ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಲಾಗಿದೆ. ಇಬ್ಬರು ವಿಶೇಷ ಶಿಕ್ಷಕರು ಇಲ್ಲಿ ಮಕ್ಕಳಿಗೆ ವರ್ಣಮಾಲೆ, ಅಂಕಿಅಂಶಗಳು, ಪ್ರಾಸಬದ್ಧ ಹಾಡುಗಳು ಮತ್ತು ಸೃಜನಶೀಲ ಕಲೆಗಳನ್ನು ಕಲಿಸುತ್ತಿದ್ದಾರೆ. ಜೊತೆಗೆ ಇಂದಿನ ಜಗತ್ತಿನಲ್ಲಿ ಸುರಕ್ಷಿತವಾಗಿರಲು ಗುಡ್ ಟಷ್, ಬ್ಯಾಡ್​ ಟಚ್ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ.

ಮಕ್ಕಳ ಸರ್ವಾಂಗೀಣ ಅಭಿವೃದ್ಧಿ

ಮಕ್ಕಳಲ್ಲಿ ಶಿಸ್ತು ಮತ್ತು ವ್ಯಕ್ತಿತ್ವ ವಿಕಸನ ಬೆಳೆಸಲು ಊಟದ ಕ್ರಮಗಳು (Table Manners), ಹಿರಿಯರಿಗೆ ಗೌರವ ನೀಡುವುದು ಮುಂತಾದ ಸಾಮಾಜಿಕ ಕೌಶಲಗಳನ್ನು ಕಲಿಸಲಾಗುತ್ತಿದೆ. ಜೈಲು ಕೈಪಿಡಿ ಮತ್ತು ಸುಪ್ರೀಂ ಕೋರ್ಟ್ ನಿಯಮದಂತೆ 6 ವರ್ಷದೊಳಗಿನ ಮಕ್ಕಳಿಗೆ ತಾಯಿಯೊಂದಿಗೆ ಇರಲು ಅವಕಾಶವಿದ್ದು, ಅವರ ರಕ್ಷಣೆ ಮತ್ತು ಶಾಲಾ ಸಿದ್ಧತೆಯ ಜವಾಬ್ದಾರಿಯನ್ನು ಈ ಕೇಂದ್ರ ಹೊತ್ತಿದೆ. ಒಂದು ವೇಳೆ ಮಗುವಿಗೆ ಆರು ವರ್ಷ ತುಂಬಿದ ನಂತರ ಕುಟುಂಬದವರು ಜವಾಬ್ದಾರಿ ವಹಿಸಿಕೊಳ್ಳದಿದ್ದರೆ, ಎನ್‌.ಜಿ.ಒಗಳ ಮೂಲಕ ಶಿಕ್ಷಣ ನೀಡಲು ಕ್ರಮ ವಹಿಸಲಾಗುತ್ತದೆ.

ಇದನ್ನೂ ಓದಿ ‘ನಮಗೆ ಡಿಜಿಪಿನೇ ಮೊಬೈಲ್ ಕೊಟ್ಟಿದ್ದು’: ಜೈಲಲ್ಲೇ ಕೂತು ವಿಡಿಯೋ ಮಾಡಿದ ಕೈದಿಗಳು!

ವಿಶೇಷ ಸೌಲಭ್ಯಗಳು ಮತ್ತು ಮೂಲಸೌಕರ್ಯ

ಪ್ರಸ್ತುತ ಒಂಬತ್ತು ಮಕ್ಕಳು ಇಲ್ಲಿ ಆಶ್ರಯ ಪಡೆದಿದ್ದು, ಅವರಲ್ಲಿ ಮೂವರು ವಿದೇಶಿ ಪ್ರಜೆಗಳ ಮಕ್ಕಳಾಗಿದ್ದಾರೆ. ಜೈಲಿನ ಕಠಿಣ ವಾತಾವರಣವನ್ನು ‘ಕಲಿಕೆಯ ತಾಣ’ವನ್ನಾಗಿ ಬದಲಿಸಲು ಗೋಡೆಗಳ ಮೇಲೆ ಸುಂದರವಾದ ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ಆಧುನಿಕ ಶೌಚಾಲಯ, ಕೈ ತೊಳೆಯುವ ವ್ಯವಸ್ಥೆ ಮತ್ತು ಆಟವಾಡುವ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೇಂದ್ರ ಸರ್ಕಾರದ ‘ಮಿಷನ್ ವಾತ್ಸಲ್ಯ’ ಮತ್ತು ಬಾಲನ್ಯಾಯ ಕಾಯ್ದೆಯಡಿ ಈ ಸೌಲಭ್ಯಗಳನ್ನು ಒದಗಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುವೇಂದು ಆಪ್ತ ಸಹಾಯಕ ಚಂದ್ರನಾಥ್ ರಥ್ ಕೊಲೆಯಾಗಿದ್ದು ಹೇಗೆ? ಭೀಕರ ಕೃತ್ಯದ ವಿವರ ಇಲ್ಲಿದೆ – Kannada News | Suvendu Adhikari’s Aide Chandranath Rath Murdered: West Bengal Political Killing Shocks State

ಕೋಲ್ಕತ್ತಾ, ಮೇ 07: ಪಶ್ಚಿಮ ಬಂಗಾಳ(West Bengal)ದ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮ್ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದ ಆ ಒಂದು ಘಟನೆ ಇಡೀ ರಾಜ್ಯವನ್ನೇ ನಡುಗಿಸಿದೆ. ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ (41) ಅವರನ್ನು ಹಂತಕರು ಅಟ್ಟಾಡಿಸಿ ಕೊಂದ ರೀತಿ ತನಿಖಾಧಿಕಾರಿಗಳನ್ನೂ ಬೆಚ್ಚಿಬೀಳಿಸಿದೆ.

ಮೂರು ದಿನಗಳ ಕಾಲ ಬೆನ್ನೇರಿದ್ದ ‘ನೆರಳು’
ಚಂದ್ರನಾಥ್ ರಥ್ ಹಂತಕರ ಕಣ್ಣಿಗೂ ಬಿದ್ದಿದ್ದರು. ಅಧಿಕಾರಿಗಳು ನೀಡುವ ಮಾಹಿತಿಯ ಪ್ರಕಾರ, ಹಂತಕರು ಕಳೆದ 2-3 ದಿನಗಳಿಂದ ಚಂದ್ರನಾಥ್ ಅವರ ಓಡಾಟದ ಮೇಲೆ ನಿರಂತರ ನಿಗಾ ಇಟ್ಟಿದ್ದರು. ಅವರು ಯಾವಾಗ ಎಸ್‌ಯುವಿ ಹತ್ತುತ್ತಾರೆ, ಯಾವ ರಸ್ತೆಯಲ್ಲಿ ಸಂಚರಿಸುತ್ತಾರೆ ಎಂಬುದನ್ನು ಮೊದಲೇ ಪತ್ತೆ ಹಚ್ಚಿ ರೆಕ್ಕಿ ನಡೆಸಲಾಗಿತ್ತು.

ಬುಧವಾರ ರಾತ್ರಿ ಚಂದ್ರನಾಥ್ ಅವರು ತಮ್ಮ ಎಸ್‌ಯುವಿಯಲ್ಲಿ ದೊಹರಿಯಾ ಪ್ರದೇಶದ ಸಾರ್ವಜನಿಕ ರಸ್ತೆಯಲ್ಲಿ ಸಾಗುತ್ತಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಹಂತಕರು ತಮ್ಮ ಕಾರನ್ನು ಚಂದ್ರನಾಥ್ ಅವರ ಎಸ್‌ಯುವಿಗೆ ಅಡ್ಡಲಾಗಿ ನಿಲ್ಲಿಸಿದರು. ವಾಹನ ಮುಂದೆ ಹೋಗಲು ದಾರಿಯಿಲ್ಲದೆ ಚಂದ್ರನಾಥ್ ಅಲ್ಲಿಯೇ ಸಿಕ್ಕಿಬಿದ್ದರು.

ಎಸ್‌ಯುವಿ ನಿಲ್ಲುತ್ತಿದ್ದಂತೆಯೇ, ಕಾರಿನ ಹಿಂದೆ ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದ ಇಬ್ಬರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾದರು. ಎಸ್‌ಯುವಿ ವಿಂಡೋ ಬಳಿ ಬಂದ ಹಂತಕರು ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಚಂದ್ರನಾಥ್ ಮೇಲೆ ಗುಂಡಿನ ಮಳೆಗರೆದರು. ಸುತ್ತಮುತ್ತಲಿನ ಜನರು ಚೇತರಿಸಿಕೊಳ್ಳುವಷ್ಟರಲ್ಲೇ ಹಂತಕರು ಅಲ್ಲಿಂದ ಪರಾರಿಯಾಗಿದ್ದರು.

ಮತ್ತಷ್ಟು ಓದಿ: ಪಶ್ಚಿಮ ಬಂಗಾಳ: ಬಿಜೆಪಿ-ಟಿಎಂಸಿ ಕಾರ್ಯಕರ್ತರ ಮಧ್ಯೆ ಭಾರೀ ಸಂಘರ್ಷ, ನಾಲ್ವರು ಸಾವು, ಉದ್ವಿಗ್ನ ಪರಿಸ್ಥಿತಿ

ಹತ್ಯೆಯ ಹಿಂದೆ ರಾಜಕೀಯ ಸಂಚು?
ಈ ಘಟನೆಯನ್ನು ಪೂರ್ವ ಯೋಜಿತ ನಿರ್ದಯ ಕೊಲೆ ಎಂದು ಸುವೇಂದು ಅಧಿಕಾರಿ ಬಣ್ಣಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಿದ್ಧತೆ ನಡೆಸುತ್ತಿರುವ ಈ ಸಂದರ್ಭದಲ್ಲೇ, ಅತ್ಯಂತ ಆಪ್ತ ವ್ಯಕ್ತಿಯನ್ನು ಕಳೆದುಕೊಂಡಿರುವುದು ಬಿಜೆಪಿಗೆ ದೊಡ್ಡ ಆಘಾತ ತಂದಿದೆ. ಇದು ಟಿಎಂಸಿಯ ಮಹಾಜಂಗಲ್ ರಾಜ್‌ನ ಪರಿಣಾಮ ಎಂದು ಕಿಡಿಕಾರಿರುವ ಅಧಿಕಾರಿ, ಹಂತಕರು ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಬಂಗಾಳ ಡಿಜಿಪಿ ಸಿದ್ಧ್ ನಾಥ್ ಗುಪ್ತಾ ಅವರು ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ತನಿಖೆಗೆ ಆದೇಶಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹಂತಕರು ಎಸ್‌ಯುವಿಯನ್ನು ಲಾಕ್ ಮಾಡಿದ್ದ ಸ್ಥಳದಲ್ಲಿ ಕೆಲವು ಪ್ರಮುಖ ಪುರಾವೆಗಳು ಲಭ್ಯವಾಗಿವೆ. ಇದೊಂದು ರಾಜಕೀಯ ಪ್ರೇರಿತ ಹತ್ಯೆಯೋ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಮಾಫಿಯಾದ ಕೈವಾಡವಿದೆಯೇ ಎಂಬುದು ಪೊಲೀಸರ ಮುಂದಿರುವ ಸವಾಲು. ಒಬ್ಬ ಸಾಮಾನ್ಯ ಸಹಾಯಕನ ಹತ್ಯೆಯು ಈಗ ಬಂಗಾಳದ ರಾಜಕೀಯ ಬಿಸಿಯನ್ನು ಮತ್ತಷ್ಟು ಏರಿಸಿದ್ದು, ಅಧಿಕಾರ ಹಸ್ತಾಂತರದ ಈ ಸುಡುವ ಸಮಯದಲ್ಲಿ ಈ ರಕ್ತಪಾತ ಎಲ್ಲೆಡೆ ಆತಂಕ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೇರಳ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ: ಈ ಮೂವರಲ್ಲೇ ಒಬ್ಬರು ಮುಖ್ಯಮಂತ್ರಿ ಆಗೋದು ಪಕ್ಕಾ? – Kannada News | Kerala CM Race: Intense Competition Among Three Leaders as Congress Collects MLA Opinions

ತಿರುವನಂತಪುರಂ, ಮೇ 07: ಕೇರಳದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ತೀವ್ರ ಪೈಪೋಟಿ ಉಂಟಾಗಿದೆ. ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಕೆ.ಸಿ. ವೇಣುಗೋಪಾಲ್, ವಿ.ಡಿ. ಸತೀಶನ್ ಮತ್ತು ರಮೇಶ್ ಚೆನ್ನಿತಲ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಮೂವರ ನಡುವೆ ಸ್ಪರ್ಧೆ ಹಿನ್ನೆಲೆ ಹೈಕಮಾಂಡ್ ಶಾಸಕರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಈ ಪ್ರಕ್ರಿಯೆಗಾಗಿ ಎಐಸಿಸಿ ವೀಕ್ಷಕರಾದ ಮುಕುಲ್ ವಾಸನಿಕ್ ಮತ್ತು ಅಜಯ್ ಮಾಕೇನ್ ಅವರು ಕೇರಳದ ತಿರುವನಂತಪುರಂನ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದಾರೆ. 63 ಕಾಂಗ್ರೆಸ್ ಶಾಸಕರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಆರಂಭಿಕ ಮಾಹಿತಿಗಳ ಪ್ರಕಾರ, ಕೆ.ಸಿ. ವೇಣುಗೋಪಾಲ್ ಅವರಿಗೆ 47 ಶಾಸಕರ, ವಿ.ಡಿ. ಸತೀಶನ್ ಅವರಿಗೆ 35 ಶಾಸಕರ ಮತ್ತು ರಮೇಶ್ ಚೆನ್ನಿತಲ ಅವರಿಗೆ 16 ಶಾಸಕರ ಬೆಂಬಲವಿದೆ ಎಂದು ತಿಳಿದುಬಂದಿದೆ. ಈ ವರದಿಗಳನ್ನು ಆಧರಿಸಿ ಹೈಕಮಾಂಡ್ ಅಂತಿಮ ನಿರ್ಧಾರ ಪ್ರಕಟಿಸಲಿದೆ. ಮೇ 10ರೊಳಗೆ ಕೇರಳದಲ್ಲಿ ಹೊಸ ಕಾಂಗ್ರೆಸ್ ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಮಾಡುವ ನಿರೀಕ್ಷೆಯಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಟ್ರಂಪ್ ವಿರುದ್ಧ ಸುಂಕದ ಕೇಸ್ ಗೆದ್ದ ಭಾರತೀಯ ಮೂಲದ ವ್ಯಕ್ತಿಯ ಅಚ್ಚರಿಯ ನಿಜ ಜೀವನದ ಕಥೆ ಇದು – Kannada News | Neal Katyal who won case against Trump tariffs in US Supreme Court, explains the real story behind this

ನೀಲ್ ಕುಮಾರ್ ಕತ್ಯಾಲ್Image Credit source: Getty Images

ನವದೆಹಲಿ, ಮೇ 7: ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಒಂದು ಐತಿಹಾಸಿಕ ಹೋರಾಟ ನಡೆಯುತ್ತಿತ್ತು. ಅದು ದೇಶದ ಅಧ್ಯಕ್ಷರು ವಿಧಿಸಿದ್ದ 4 ಟ್ರಿಲಿಯನ್ ಡಾಲರ್ ಸುಂಕದ ವಿರುದ್ಧದ ಸಮರ. ಪ್ರಬಲ ದೇಶದ ಪ್ರಬಲ ಅಧ್ಯಕ್ಷರ ವಿರುದ್ಧ ಕೇಸ್ ನಡೆಸುತ್ತಿದ್ದವರು ಭಾರತ ಮೂಲದ ನೀಲ್ ಕುಮಾರ್ ಕತ್ಯಾಲ್ (Neal Katyal) ಎನ್ನುವ ವಕೀಲ. 237 ವರ್ಷಗಳ ಇತಿಹಾಸದಲ್ಲಿ ಸುಪ್ರೀಂ ಕೋರ್ಟ್ ಯಾವತ್ತೂ ಒಬ್ಬ ಅಧ್ಯಕ್ಷನ ಪ್ರಮುಖ ನಿರ್ಧಾರವನ್ನು ರದ್ದುಗೊಳಿಸಿರಲಿಲ್ಲ. ದೊಡ್ಡ ದೊಡ್ಡ ಕಾನೂನು ಪಂಡಿತರು, “ಇದು ಅಸಾಧ್ಯ, ನೀಲ್ ಸೋಲುವುದು ಖಚಿತ,” ಎಂದು ಭವಿಷ್ಯ ನುಡಿದಿದ್ದರು. ಆದರೆ, ಟ್ರಂಪ್ ಸುಂಕ ಕ್ರಮ ವಿರುದ್ಧ ಕೋರ್ಟ್ 6-3 ಅಂತರದಿಂದ ತೀರ್ಪು ಕೊಟ್ಟಿತು. ನೀಲ್ ಗೆಲುವು ಎಲ್ಲರಲ್ಲೂ ಅಚ್ಚರಿ ಮೂಡಿಸಿತು.

ಆದರೆ ನೀಲ್ ಕುಮಾರ್ ಕತ್ಯಾಲ್ ಈ ಕೇಸ್ ವೇಳೆ ಆತ್ಮವಿಶ್ವಾಸದಿಂದ ಇದ್ದರು. ಅದು ಮೊಂಡುತನವಾಗಿರಲಿಲ್ಲ. ಕೋರ್ಟ್​ನಲ್ಲಿ ನೀಲ್ ವಾದಕ್ಕೆ ನ್ಯಾಯಾಧೀಶರು ಅಸ್ತು ಎಂದರು. ಟ್ರಂಪ್ ಆಡಳಿತದ ವಿರುದ್ಧ ಕೋರ್ಟ್​ನಿಂದ ತೀರ್ಪು ಬರಿಸುವುದು ಎಂದರೆ ಸಾಮಾನ್ಯ ವಿಷಯವಲ್ಲ. ಟ್ರಂಪ್ ವಿರುದ್ಧ ನೀಲ್ ಪ್ರಯತ್ನ ಫಲ ಕೊಡಲ್ಲ ಎಂದಿದ್ದ ಸಹೋದ್ಯೋಗಿಗಳಿಗೆಯೇ ಅಚ್ಚರಿ ಆಗಿತ್ತು. ನೀಲ್ ಅವರು ಈ ಕೇಸ್ ಗೆದ್ದ ಕಥೆ ನಿಜಕ್ಕೂ ಅಚ್ಚರಿ ತರುವಂಥದ್ದು. ತೀರ್ಪು ಬರುವ ಕೆಲ ತಿಂಗಳ ಹಿಂದೆಯೇ ಆರಂಭವಾದ ಕಥೆ ಅದು.

ನೀಲ್ ಕತ್ಯಾಲ್ ಅವರು ಟೆಡ್​ನಲ್ಲಿ ಈ ಎಲ್ಲವನ್ನೂ ಸವಿವರವಾಗಿ ಹಂಚಿಕೊಂಡಿದ್ದಾರೆ. ಇವತ್ತು (ಮೇ 7) ಟೆಡ್​ನಲ್ಲಿ ಅವರ ಮಾತುಗಳು ಪ್ರಕಟವಾಗುತ್ತವೆ. ನಿನ್ನೆ ಅವರು ಈ ಸಂಬಂಧ ಟ್ವೀಟ್ ಮಾಡಿ, ಮುನ್ನೋಟ ನೀಡಿದ್ದಾರೆ. ತಮಗೆ ಕೇಸ್ ಗೆಲ್ಲಲು ಹೇಗೆ ಸಾಧ್ಯವಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ. ಎಐ ಕಾಲಘಟ್ಟದಲ್ಲಿ ಜಾಣ ಮನುಷ್ಯ ಜಾಣ ಯಂತ್ರವನ್ನು ಹೇಗೆಲ್ಲಾ ಉಪಯೋಗಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮಾನವೀಯ ಸ್ಪರ್ಶ ಬೇಕೇ ಬೇಕು ಎಂದೆನ್ನುವ ಕೋರ್ಟ್ ಕಲಾಪದಲ್ಲಿ ಎಐ ಸ್ಪರ್ಶ ಇದ್ದರೆ ಹೇಗಿದ್ದೀತು ಎಂಬುದನ್ನು ನೀಲ್ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆಯ ಜಯಭೇರಿ: ದೇಶದ ಜಿಡಿಪಿ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಮೂಡೀಸ್ ಮತ್ತು ಎಡಿಬಿ

ನೀಲ್ ಬಳಿ ಹಾರ್ವೆ ಶಕ್ತಿ

ನೀಲ್ ಈ ಕೇಸ್ ಗೆಲ್ಲಲು ತಮಗೆ ಸಹಾಯ ಮಾಡಿದವರನ್ನು ನೆನಪಿಸಿಕೊಂಡಿದ್ದಾರೆ. ಸಹೋದ್ಯೋಗಿಗಳು, ಕಾನೂನು ಪರಿಣಿತರು, ಮಾನಸಿಕ ತಜ್ಞರು, ಮೆಡಿಟೇಶನ್ ತಜ್ಞರು ಮೊದಲಾದವರಿದ್ದಾರೆ. ಅವರ ಜೊತೆಗೆ ಹಾರ್ವೆ ಎನ್ನುವ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ಅವರ ಬಳಿ ಇದ್ದ ಗುಪ್ತ ಅಸ್ತ್ರ ಹಾರ್ವೆ.

ಹಾರ್ವೆ ಒಬ್ಬ ಮನುಷ್ಯನಲ್ಲ, ಅದೊಂದು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI). ಒಂದು ವರ್ಷದಲ್ಲಿ ಅಗಾಧ ದತ್ತಾಂಶದಿಂದ ಟ್ರೇನ್ ಆಗಿ ಪರಿಪಕ್ವಗೊಂಡ ಎಐ ಮಾಡಲ್ ಅದು. ಕಳೆದ 25 ವರ್ಷಗಳಲ್ಲಿ ಕೋರ್ಟ್​ಗಳಲ್ಲಿ ನ್ಯಾಯಾಧೀಶರು ಕೇಳಿದ ಪ್ರತಿಯೊಂದು ಪ್ರಶ್ನೆ, ಅವರು ಬರೆದ ಪ್ರತಿಯೊಂದು ತೀರ್ಪನ್ನು ಹಾರ್ವೆಗೆ ಕಲಿಸಲಾಗಿತ್ತು. ವಾದ ಮಂಡನೆಗೂ ಮುನ್ನ ಹಾರ್ವೆ, ನ್ಯಾಯಾಧೀಶರು ಕೇಳಬಹುದಾದ ಪ್ರಶ್ನೆಗಳನ್ನು ನಿಖರವಾಗಿ ಊಹಿಸಿತ್ತು. ಅದು ದಣಿವಿಲ್ಲದ ಸಾಟಿಯಿಲ್ಲದ ಬುದ್ಧಿವಂತಿಕೆಯನ್ನು ಪ್ರದರ್ಶಿಸಿತ್ತು.

ಎಐನಿಂದ ಸಾಧ್ಯವಾಗದು ಈ ಒಂದು ಕೆಲಸ

ನ್ಯಾಯಾಲಯದಲ್ಲಿ ವಾದ ಮಂಡಿಸುವ ಸಮಯ ಬಂದಾಗ, ನ್ಯಾಯಾಧೀಶರು ಹಾರ್ವೆ ಊಹಿಸಿದ ಪ್ರಶ್ನೆಗಳನ್ನೇ ಕೇಳಿದರು. ಆದರೆ, ಅಲ್ಲಿ ಒಂದು ವಿಷಯ ಮಾತ್ರ ಹಾರ್ವೆಗೆ ಮಾಡಲು ಸಾಧ್ಯವಾಗಲಿಲ್ಲ. ಅದುವೇ ‘ಭಾವನಾತ್ಮಕ ಸಂಬಂಧ’ (Connection).

ನ್ಯಾಯಾಧೀಶರು ಕೇಳುವ ಪದಗಳ ಹಿಂದೆ ಅವರದೊಂದು ಆತಂಕವಿರುತ್ತದೆ, ಒಂದು ಕಾಳಜಿಯಿರುತ್ತದೆ. ಆ ಆತಂಕವನ್ನು ಅರ್ಥಮಾಡಿಕೊಳ್ಳುವುದು, ಅವರ ಕಣ್ಣುಗಳನ್ನು ನೋಡಿ ಪರಿಸ್ಥಿತಿಯನ್ನು ಅರಿಯುವುದು ಮತ್ತು ಆ ಕ್ಷಣಕ್ಕೆ ಸ್ಪಂದಿಸುವುದು ಕೇವಲ ಒಬ್ಬ ಮನುಷ್ಯನಿಗೆ ಮಾತ್ರ ಸಾಧ್ಯ. ನೀಲ್ ಅವರು ನ್ಯಾಯಾಧೀಶರ ಪ್ರಶ್ನೆ ಮಾತ್ರವನ್ನು ಉತ್ತರಿಸಲಿಲ್ಲ, ಅವರ ಮನಸ್ಸಿನಲ್ಲಿದ್ದ ಆತಂಕಕ್ಕೆ ಸಮಾಧಾನ ನೀಡಿದರು. ನ್ಯಾಯಾಧೀಶರಿಗಿದ್ದ ಅನುಮಾನಗಳನ್ನು ನಿವಾರಿಸಿದರು. ಪರಿಣಾಮವಾಗಿ ಕೇಸ್ ಅನ್ನು 6-3 ಅಂತರದಿಂದ ಗೆಲ್ಲಲು ಸಾಧ್ಯವಾಯಿತು.

ಇದನ್ನೂ ಓದಿ: ಬ್ಯಾಂಕ್​ಗಳಲ್ಲಿ ಕೆಟ್ಟ ಸಾಲಗಳು; ಆರ್​ಬಿಐನಿಂದ ಹೊಸ ನಿಯಮಗಳ ಪ್ರಸ್ತಾಪ; ಏನಿವು ರೂಲ್ಸ್?

AI ಮಾಹಿತಿಯನ್ನು ವಿಶ್ಲೇಷಿಸಬಹುದು, ಭವಿಷ್ಯವನ್ನು ಊಹಿಸಬಹುದು. ಆದರೆ ಅದು ಮನುಷ್ಯನ ಸಂವೇದನೆ, ಸಹಾನುಭೂತಿ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಮಿಡಿಯುವ ಗುಣವನ್ನು (Human Touch) ಎಂದಿಗೂ ಮೀರಲಾರದು.

ತಂತ್ರಜ್ಞಾನದ ಈ ಯುಗದಲ್ಲಿ ನಾವು ಯಂತ್ರಗಳಿಗಿಂತ ವೇಗವಾಗಿ ಓಡುವುದಕ್ಕಿಂತ ಹೆಚ್ಚಾಗಿ, ಯಂತ್ರಗಳಿಗೆ ಸಾಧ್ಯವಿಲ್ಲದ ‘ಮಾನವೀಯ ಕೌಶಲ’ಗಳನ್ನು (Empathy and Connection) ಬೆಳೆಸಿಕೊಳ್ಳುವುದೇ ನಮ್ಮ ನಿಜವಾದ ಶಕ್ತಿ. ನೀಲ್ ಕುಮಾರ್ ಕತ್ಯಾಲ್ ಅವರು ಟೆಡ್ ಟಾಕ್​ನಲ್ಲಿ ಈ ಅಂಶದ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಅದು ಇವತ್ತೇ ಪ್ರಸಾರವಾಗಲಿದೆ. ಇವತ್ತು ಗುರುವಾರ ರಾತ್ರಿ 8:30-9:00 ಸಮಯದಲ್ಲಿ ಇದು ಪ್ರಕಟವಾಗಬಹುದು, ಗಮನಿಸುತ್ತಿರಿ. ಅದರ ಲಿಂಕ್ ಇಲ್ಲಿದೆ: www.ted.com/talks/178367

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Personality Test: ‘T’ ಅಕ್ಷರದಿಂದ ಹೆಸರು ಶುರುವಾಗುವವರ ವ್ಯಕ್ತಿತ್ವ ಹೇಗಿರುತ್ತೆ? ಭವಿಷ್ಯದ ರಹಸ್ಯ ಇಲ್ಲಿದೆ – Kannada News | T Letter Name Astrology: Personality and Career Insights Rahu Effect

ಹೆಸರಿನ ಮೊದಲ ಅಕ್ಷರ ‘T’ Image Credit source: Pinterest

ಪ್ರಸಿದ್ಧ ಜ್ಯೋತಿಷಿ, ವಾಸ್ತು ತಜ್ಞೆ ರಾಶಿ ಗೌರ್ ಅವರ ಪ್ರಕಾರ, ವ್ಯಕ್ತಿಯ ಹೆಸರಿನ ಮೊದಲ ಅಕ್ಷರವು ಅವರ ಭವಿಷ್ಯದಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಪ್ರತಿಯೊಂದು ಅಕ್ಷರವು ತನ್ನದೇ ಆದ ವಿಶಿಷ್ಟ ಶಕ್ತಿ ಮತ್ತು ಗುಣಲಕ್ಷಣಗಳನ್ನು ಹೊಂದಿರುತ್ತದೆ. ಅದರಂತೆ, ‘T’ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರ ವ್ಯಕ್ತಿತ್ವ ಮತ್ತು ವೃತ್ತಿಜೀವನದ ಕುರಿತು ಆಸಕ್ತಿದಾಯಕ ಭವಿಷ್ಯವಾಣಿ ಇಲ್ಲಿದೆ.

ಚಾಲ್ಡಿಯನ್ ಸಂಖ್ಯಾಶಾಸ್ತ್ರದ ಪ್ರಕಾರ, ‘T’ ಅಕ್ಷರದಿಂದ ಹೆಸರು ಶುರುವಾಗುವವರು ಉತ್ತಮ ಗುಣಗಳನ್ನು ಹೊಂದಿರುತ್ತಾರೆ. ಈ ಅಕ್ಷರವು ಸಂಖ್ಯೆ 4ಕ್ಕೆ ಸಂಬಂಧಿಸಿದ್ದು, ಇದನ್ನು ನೆರಳು ಗ್ರಹ ಎಂದೇ ಕರೆಯಲ್ಪಡುವ ‘ರಾಹು’ ಆಳುತ್ತಾನೆ. ರಾಹುವಿನ ಪ್ರಭಾವವು ಇವರಲ್ಲಿ ಒಂದು ಅದ್ಭುತವಾದ ಕಾಲ್ಪನಿಕ ಜಗತ್ತನ್ನು ಸೃಷ್ಟಿಸುತ್ತದೆ. ಇದು ಕೇವಲ ಕಲ್ಪನೆಗೆ ಸೀಮಿತವಾಗದೆ, ಇವರ ವೃತ್ತಿಜೀವನಕ್ಕೆ ಒಂದು ದೊಡ್ಡ ತಿರುವು ನೀಡುವ ಶಕ್ತಿಯನ್ನೂ ಹೊಂದಿದೆ ಎಂದು ಹೇಳಲಾಗುತ್ತದೆ.

‘T’ ಅಕ್ಷರದವರ ಮೇಲೆ ರಾಹುವಿನ ಪ್ರಭಾವ:

‘T’ ಅಕ್ಷರದವರು ರಾಹುವಿನ ಪ್ರಭಾವಕ್ಕೆ ಹೆಚ್ಚು ಒಳಗಾಗುವುದರಿಂದ ಸ್ವಾಭಾವಿಕವಾಗಿಯೇ ಧೈರ್ಯಶಾಲಿಗಳಾಗಿರುತ್ತಾರೆ. ಎಂತಹ ಕಷ್ಟದ ಸನ್ನಿವೇಶ ಎದುರಾದರೂ ಇವರು ಬಹಳ ತಾಳ್ಮೆಯಿಂದ ವರ್ತಿಸುತ್ತಾರೆ. ಯಾವುದೇ ಜಟಿಲವಾದ ಕೆಲಸವನ್ನು ಬಹಳ ಸುಲಭವಾಗಿ ಮತ್ತು ಚಾಕಚಕ್ಯತೆಯಿಂದ ಪೂರ್ಣಗೊಳಿಸುವ ಸಾಮರ್ಥ್ಯ ಇವರಿಗಿರುತ್ತದೆ. ಶಾಂತವಾಗಿರುವ ಸಮಯದಲ್ಲಿ ಇವರು ಜೀವನದಲ್ಲಿ ಅತಿ ವೇಗವಾಗಿ ಯಶಸ್ಸನ್ನು ಸಾಧಿಸುತ್ತಾರೆ. ಆದರೆ, ಇವರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಅಥವಾ ಸವಾಲುಗಳನ್ನು ಇತರರೊಂದಿಗೆ ಚರ್ಚಿಸಲು ಇಷ್ಟಪಡುವುದಿಲ್ಲ ಮತ್ತು ಸ್ವಭಾವತಃ ಸ್ವಲ್ಪ ಹಠಮಾರಿಗಳಾಗಿರುತ್ತಾರೆ.

ವೃತ್ತಿಜೀವನ:

ವೃತ್ತಿಜೀವನದ ವಿಷಯಕ್ಕೆ ಬಂದರೆ, ಇವರು ಜೀವನದಲ್ಲಿ ಬಹಳ ಬೇಗನೆ ನೆಲೆಗೊಳ್ಳುತ್ತಾರೆ. ಯಾವುದೇ ಸವಾಲಿನ ಕೆಲಸವನ್ನು ಸಮರ್ಪಣಾಭಾವ ಮತ್ತು ತಮ್ಮಲ್ಲಿರುವ ಅತ್ಯುತ್ತಮ ಪ್ರತಿಭೆಯ ಮೂಲಕ ಪೂರ್ಣಗೊಳಿಸುವ ಸ್ವಭಾವ ಇವರದ್ದು. ಇವರ ಕಾರ್ಯದಕ್ಷತೆಯಿಂದಾಗಿ ಕೆಲಸದ ಸ್ಥಳದಲ್ಲಿ ಎಲ್ಲರಿಂದಲೂ ಒಳ್ಳೆಯ ಹೆಸರು ಮತ್ತು ಗೌರವವನ್ನು ಗಳಿಸುತ್ತಾರೆ. ಇವರ ಬುದ್ಧಿವಂತಿಕೆ ಮತ್ತು ಆಲೋಚನೆಗಳಲ್ಲಿ ಸ್ಪಷ್ಟತೆ ಇರುವುದರಿಂದ ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ. ಅಲ್ಲದೆ, ಇವರ ಆಕರ್ಷಕ ವ್ಯಕ್ತಿತ್ವವು ಎಲ್ಲರನ್ನೂ ಸೆಳೆಯುವಂತಿರುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಸಾಮಾಜಿಕ ಮತ್ತು ಕೌಟುಂಬಿಕ ಜೀವನ:

ಇನ್ನು ಸಾಮಾಜಿಕ ಮತ್ತು ಕೌಟುಂಬಿಕ ಜೀವನದಲ್ಲಿ ‘T’ ಅಕ್ಷರದವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಸಮಯ ಕಳೆಯಲು ಬಯಸುತ್ತಾರೆ. ಇವರಿಗೆ ಸ್ನೇಹಿತರೆಂದರೆ ಪ್ರಾಣ ಮತ್ತು ಸ್ನೇಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ವಿಶೇಷವಾಗಿ ಇವರು ವಿಶಾಖ ನಕ್ಷತ್ರಕ್ಕೆ ಸೇರಿದವರಾಗಿರುವುದರಿಂದ, ಇವರ ಮನಸ್ಸು ಮತ್ತು ಆಲೋಚನೆಗಳು ಉನ್ನತ ಮಟ್ಟದಲ್ಲಿರುತ್ತವೆ. ದಯಾಳು ಸ್ವಭಾವದವರಾದ ಇವರು ಇತರರಿಗೆ ಸಹಾಯ ಮಾಡುವ ಕೆಲಸದಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ.

ಇವರ ಮಹತ್ವಾಕಾಂಕ್ಷೆಗಳು ಬಹಳ ದೊಡ್ಡದಾಗಿರುತ್ತವೆ ಮತ್ತು ಸಾಧಿಸುವ ಹಸಿವು ಇವರಲ್ಲಿ ಹೆಚ್ಚಾಗಿರುತ್ತದೆ. ಆದರೆ, ಈ ದೊಡ್ಡ ಕನಸುಗಳನ್ನು ಬೇಗನೆ ನನಸಾಗಿಸಿಕೊಳ್ಳುವ ಹಂಬಲದಲ್ಲಿ ಕೆಲವೊಮ್ಮೆ ತಪ್ಪು ಮಾರ್ಗಗಳನ್ನು ಅನುಸರಿಸುವ ಸಾಧ್ಯತೆ ಇರುತ್ತದೆ. ಇಂತಹ ಸಮಯದಲ್ಲಿ ಇವರ ನಕ್ಷತ್ರದ ಅಧಿಪತಿಯಾದ ‘ಗುರು’ವು ಇವರ ನೆರವಿಗೆ ಬರುತ್ತಾನೆ. ಗುರುವು ಇವರಿಗೆ ಸರಿಯಾದ ಜ್ಞಾನವನ್ನು ನೀಡಿ, ಕನಸುಗಳನ್ನು ಧರ್ಮದ ಹಾದಿಯಲ್ಲಿಯೇ ನನಸಾಗಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:48 pm, Thu, 7 May 26

Source link

ಪಾಕಿಸ್ತಾನಕ್ಕೆ ಮುಖಭಂಗ: IPL ಆಡ್ತೀವಿ ಎಂದ ಆಸ್ಟ್ರೇಲಿಯಾ ಆಟಗಾರರು! – Kannada News | Australia players not to leave IPL 2026 for Pakistan ODIs

ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳಿಗಿಂತ ಐಪಿಎಲ್ ಎಷ್ಟು ಶಕ್ತಿಶಾಲಿ ಎಂಬುದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಪಾಕಿಸ್ತಾನದ ವಿರುದ್ಧದ ಏಕದಿನ ಸರಣಿಯನ್ನು ಆಡಲು ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ನಿರಾಕರಿಸಿದ್ದು, ಐಪಿಎಲ್ 2026ರ ಪ್ಲೇ-ಆಫ್ ಪಂದ್ಯಗಳಲ್ಲೇ ಮುಂದುವರಿಯಲು ನಿರ್ಧರಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡವು ತನ್ನ ನೆಲದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಟ್ರಾವಿಸ್ ಹೆಡ್ ಅವರಂತಹ ದಿಗ್ಗಜರನ್ನು ಎದುರಿಸಲು ಕಾತರದಿಂದ ಕಾಯುತ್ತಿತ್ತು. ಆದರೆ, ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಆಟಗಾರರಿಗೆ ಐಪಿಎಲ್ ಒಪ್ಪಂದ ಪೂರ್ಣಗೊಳಿಸಲು ಹಸಿರು ನಿಶಾನೆ ತೋರಿದ್ದರಿಂದ, ಪಾಕಿಸ್ತಾನ ಈಗ ಎರಡನೇ ದರ್ಜೆಯ ಆಸ್ಟ್ರೇಲಿಯಾ ತಂಡಕ್ಕೆ ಆತಿಥ್ಯ ವಹಿಸುವ ಅನಿವಾರ್ಯತೆಗೆ ಸಿಲುಕಿದೆ. ವಿಶ್ವ ಕ್ರಿಕೆಟ್‌ನ ದೊಡ್ಡ ತಂಡವೊಂದು ತನ್ನ ಸರಣಿಗಿಂತ ಐಪಿಎಲ್‌ಗೆ ಹೆಚ್ಚು ಒತ್ತು ನೀಡಿದ್ದು ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮುಖಭಂಗ ಉಂಟುಮಾಡಿದೆ.

ಸರಣಿ ಮತ್ತು ಐಪಿಎಲ್ ನಡುವಿನ ಸಂಘರ್ಷ:

ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಮೇ 30ರಿಂದ ಜೂನ್ 4ರವರೆಗೆ ನಡೆಯಲಿದೆ. ಇದೇ ಸಮಯದಲ್ಲಿ ಐಪಿಎಲ್‌ನ ಅಂತಿಮ ಹಂತದ ಪಂದ್ಯಗಳು (ಪ್ಲೇ-ಆಫ್ ಮತ್ತು ಫೈನಲ್) ನಡೆಯಲಿರುವುದರಿಂದ ಆಟಗಾರರ ಲಭ್ಯತೆಯ ಬಗ್ಗೆ ಗೊಂದಲವಿತ್ತು. ಆದರೆ, ಈಗ ಕ್ರಿಕೆಟ್ ಆಸ್ಟ್ರೇಲಿಯಾ (CA) ತನ್ನ ಆಟಗಾರರಿಗೆ ಐಪಿಎಲ್ ಒಪ್ಪಂದವನ್ನು ಪೂರ್ಣಗೊಳಿಸಲು ಅನುಮತಿ ನೀಡಿದೆ.

ಯಾರು ಉಳಿಯಲಿದ್ದಾರೆ? ಯಾರು ಹೋಗಲಿದ್ದಾರೆ?

  • ಸನ್‌ರೈಸರ್ಸ್ ಹೈದರಾಬಾದ್ (SRH): ಪ್ಯಾಟ್ ಕಮಿನ್ಸ್ (ನಾಯಕ) ಟ್ರಾವಿಸ್ ಹೆಡ್
  • ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಜೋಶ್ ಹೇಝಲ್ವುಡ್, ಟಿಮ್ ಡೇವಿಡ್
  • ಕೊಲ್ಕತ್ತಾ ನೈಟ್ ರೈಡರ್ಸ್ (KKR): ಕ್ಯಾಮರೋನ್ ಗ್ರೀನ್
  • ಡೆಲ್ಲಿ ಕ್ಯಾಪಿಟಲ್ಸ್ (DC): ಮಿಚೆಲ್ ಸ್ಟಾರ್ಕ್​​.
  • ಲಕ್ನೋ ಸೂಪರ್ ಜೈಂಟ್ಸ್ (LSG): ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್.
  • ಪಂಜಾಬ್ ಕಿಂಗ್ಸ್ (PBKS): ಮಾರ್ಕಸ್ ಸ್ಟೊಯಿನಿಸ್, ಕೂಪರ್ ಕೊನೊಲಿ,  ಕ್ಸೇವಿಯರ್ ಬಾರ್ಟ್ಲೆಟ್.
  • ಚೆನ್ನೈ ಸೂಪರ್ ಕಿಂಗ್ಸ್ (CSK): ಮ್ಯಾಥ್ಯೂ ಶಾರ್ಟ್, ಸ್ಪೆನ್ಸರ್ ಜಾನ್ಸನ್.

ಇದನ್ನೂ ಓದಿ: ದಾಖಲೆ ಮೊತ್ತದ ಒಪ್ಪಂದ: ಪ್ಯಾಟ್ ಕಮ್ಮಿನ್ಸ್‌ಗೆ 27.43 ಕೋಟಿ ರೂ. ಆಫರ್!

  •  ಪಾಕಿಸ್ತಾನಕ್ಕೆ ತೆರಳುವವರು: ಈ ಬಾರಿಯ ಐಪಿಎಲ್​ನಲ್ಲಿ ಕಾಣಿಸಿಕೊಳ್ಳದ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ. ಅದರಂತೆ ಆ್ಯಡಂ ಝಂಪಾ, ಅಲೆಕ್ಸ್ ಕ್ಯಾರಿ ಮತ್ತು ಮಾರ್ನಸ್ ಲಾಬುಶೇನ್ ಸೇರಿದಂತೆ ಕೆಲ ಸ್ಟಾರ್ ಆಟಗಾರರು ಮಾತ್ರ ಪಾಕಿಸ್ತಾನ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಯುವ ಪಡೆಗೆ ಅವಕಾಶ:

ಪ್ರಮುಖ ಆಟಗಾರರು ಐಪಿಎಲ್‌ನಲ್ಲಿ ಕಾರ್ಯನಿರತರಾಗಿರುವುದರಿಂದ, ಪಾಕಿಸ್ತಾನ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ‘ದ್ವಿತೀಯ ದರ್ಜೆ’ಯ ಅಥವಾ ಯುವ ಪಡೆಯನ್ನು ಕಳುಹಿಸಿಕೊಡಲು ನಿರ್ಧರಿಸಿದೆ. ಇದು ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಯುವ ಆಟಗಾರರ ಸಾಮರ್ಥ್ಯ ಪರೀಕ್ಷಿಸಲು ಆಸ್ಟ್ರೇಲಿಯಾ ಮಂಡಳಿಗೆ ಒಂದು ಉತ್ತಮ ವೇದಿಕೆಯಾಗಲಿದೆ.

ಫ್ರಾಂಚೈಸಿಗಳಿಗೆ ನೆಮ್ಮದಿ:

ಟೂರ್ನಿಯ ಅತ್ಯಂತ ಪ್ರಮುಖ ಪಂದ್ಯಗಳ ವೇಳೆ ತಮ್ಮ ಪ್ರಮುಖ ವಿದೇಶಿ ಆಟಗಾರರು ಲಭ್ಯವಿರುತ್ತಾರೆ ಎಂಬ ಸುದ್ದಿ ಐಪಿಎಲ್ ಫ್ರಾಂಚೈಸಿಗಳಿಗೆ ದೊಡ್ಡ ಸಮಾಧಾನ ತಂದಿದೆ. ವಿಶೇಷವಾಗಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್‌ನಂತಹ ತಂಡಗಳಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಬೆಂಬಲದಿಂದ ಆನೆ ಬಲ ಬಂದಂತಾಗಿದೆ.

Published On – 12:43 pm, Thu, 7 May 26

Source link

ತಮಿಳುನಾಡು ರಾಜಕೀಯದಲ್ಲಿ ಹೈ-ಡ್ರಾಮಾ: ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್, ಸಿಪಿಐ ಅಚ್ಚರಿಯ ಬೆಂಬಲ – Kannada News | TN Politics: Vijay’s CM Bid Gains CPI Support; Governor Seeks Clarity on Majority

ಚೆನ್ನೈ, ಮೇ 07: ತಮಿಳುನಾಡು(Tamil Nadu) ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ದಿನಗಳೇ ಕಳೆದರೂ ಸರ್ಕಾರ ರಚನೆಯ ಕಗ್ಗಂಟು ಮಾತ್ರ ಇನ್ನೂ ಮುಂದುವರಿದಿದೆ. ಈ ನಡುವೆ, ಟಿವಿಕೆ ಅಧ್ಯಕ್ಷ ವಿಜಯ್ ಅವರು ಗುರುವಾರ ಬೆಳಗ್ಗೆ ರಾಜ್ಯಪಾಲ ಆರ್‌ವಿ ಅರ್ಲೇಕರ್ ಅವರನ್ನು ಭೇಟಿಯಾಗಿ ಸರ್ಕಾರ ರಚಿಸಲು ತಮಗೆ ಅವಕಾಶ ನೀಡಬೇಕೆಂದು ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ. ಎರಡು ದಿನಗಳಲ್ಲಿ ಇದು ರಾಜ್ಯಪಾಲರೊಂದಿಗೆ ವಿಜಯ್ ನಡೆಸುತ್ತಿರುವ ಎರಡನೇ ಮಹತ್ವದ ಸಭೆಯಾಗಿದೆ.

ಸರ್ಕಾರ ರಚಿಸಲು 118 ಸದಸ್ಯರ ಬಲದ ಅಗತ್ಯವಿದ್ದು, ವಿಜಯ್ ಅವರ ಹಾದಿ ಸವಾಲಿನಿಂದ ಕೂಡಿದೆ.ವಿಜಯ್ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ಬಳಿಕ ಟಿವಿಕೆ ಬಲ 107 ಆಗಲಿದೆ. ಕಾಂಗ್ರೆಸ್​ನ 5 ಶಾಸಕರು ಈಗಾಗಲೇ ಬೆಂಬಲ ಪತ್ರ ನೀಡಿದ್ದಾರೆ.

ಸಿಪಿಐ ಎಂಟ್ರಿ: ಈಗ ಭಾರತೀಯ ಕಮ್ಯುನಿಸ್ಟ್ ಪಕ್ಷ (CPI) ಕೂಡ ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಲು ಮುಂದಾಗಿದ್ದು, ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಹೊಸ ಬೆಂಬಲದೊಂದಿಗೆ ವಿಜಯ್ ಪಾಳಯದ ಬಲ ಮತ್ತಷ್ಟು ಹೆಚ್ಚಿದ್ದು, ಬಹುಮತದ ಗಡಿಯನ್ನು ತಲುಪಲು ಕೇವಲ ಕೆಲವೇ ಸ್ಥಾನಗಳ ಅವಶ್ಯಕತೆ ಇದೆ.

ರಾಜ್ಯಪಾಲರ ಕಠಿಣ ನಿಲುವು ಮತ್ತು ಪದಗ್ರಹಣ ವಿಳಂಬ
ಸಂಖ್ಯೆಗಳ ಲೆಕ್ಕಾಚಾರದಲ್ಲಿ ಸಣ್ಣ ವ್ಯತ್ಯಾಸವಿದ್ದರೂ, ವಿಜಯ್ ಅವರು ತಾವೇ ಅತಿದೊಡ್ಡ ಪಕ್ಷದ ನಾಯಕನಾಗಿರುವುದರಿಂದ ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ರಾಜ್ಯಪಾಲ ಆರ್‌ವಿ ಅರ್ಲೇಕರ್ ಅವರು ಅಧಿಕೃತ ಸಂಖ್ಯೆಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಕೋರಿದ್ದಾರೆ. ಶಾಸಕರ ಬೆಂಬಲದ ಬಗ್ಗೆ ಸಂಪೂರ್ಣ ಮನವರಿಕೆಯಾಗದ ಹೊರತು ಪ್ರಮಾಣ ವಚನಕ್ಕೆ ಅವಕಾಶ ನೀಡಲಾಗದು ಎಂದು ರಾಜ್ಯಪಾಲರು ಸೂಚಿಸಿರುವುದರಿಂದ ವಿಜಯ್ ಅವರ ಪದಗ್ರಹಣ ಸಮಾರಂಭ ವಿಳಂಬವಾಗುತ್ತಿದೆ.

ಮತ್ತಷ್ಟು ಓದಿ: ದಳಪತಿ ವಿಜಯ್ ಪಕ್ಷದಿಂದ ಗೆದ್ದು ಶಾಸಕರಾದ ತುಮಕೂರು ಮೂಲದ ಸುನೀಲ್ ಆನಂದ್ ಬಗ್ಗೆ ನಿಮಗೆ ಗೊತ್ತೇ!

ಒಂದೆಡೆ ಎಐಎಡಿಎಂಕೆ ನಾಯಕ ಕೆ.ಪಿ. ಮುನುಸ್ವಾಮಿ ಅವರು ಪರಿಸ್ಥಿತಿ ಏನೇ ಇರಲಿ, ನಾವು ವಿಜಯ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಇನ್ನೊಂದೆಡೆ, ಡಿಎಂಕೆ ಮೈತ್ರಿಕೂಟದಲ್ಲಿದ್ದ ಕಾಂಗ್ರೆಸ್ ಹಾಗೂ ಸಿಪಿಐ ಈಗ ವಿಜಯ್ ಅವರ ಬೆನ್ನಿಗೆ ನಿಂತಿರುವುದು ತಮಿಳುನಾಡು ರಾಜಕೀಯದ ಬದಲಾದ ಗಾಳಿಗೆ ಸಾಕ್ಷಿಯಾಗಿದೆ.

ಚಲನಚಿತ್ರೋದ್ಯಮದ ಜನಪ್ರಿಯತೆಯ ಬೆನ್ನಲ್ಲೇ ರಾಜಕೀಯಕ್ಕೆ ಬಂದ ವಿಜಯ್, ತಿರುಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರು ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಈಗ ರಾಜಕೀಯದ ‘ಕ್ಲೈಮ್ಯಾಕ್ಸ್’ ಹಂತದಲ್ಲಿರುವ ಅವರು, ವಿರೋಧಿಗಳ ತಂತ್ರವನ್ನು ಮೆಟ್ಟಿ ನಿಂತು ಮುಖ್ಯಮಂತ್ರಿ ಪೀಠ ಅಲಂಕರಿಸುತ್ತಾರಾ ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ. ರಾಜಭವನದಿಂದ ಸಿಗುವ ಮುಂದಿನ ಸೂಚನೆಯೇ ತಮಿಳುನಾಡಿನ ಮುಂದಿನ ಭವಿಷ್ಯವನ್ನು ನಿರ್ಧರಿಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಂಗಾಳದಲ್ಲಿ ಪ್ರತ್ಯೇಕತೆಯ ಕಿಡಿ: ಪಶ್ಚಿಮ ಬಂಗಾಳವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿ, ಮಮತಾಗೆ ವಿದೇಶಿ ವ್ಯಕ್ತಿಯಿಂದ ಬೇಡಿಕೆ – Kannada News | West Bengal Independence Call: Bangladeshi Leader Urges Mamata to Declare Separate Nation

ಕೋಲ್ಕತ್ತಾ, ಮೇ 07: ಪಶ್ಚಿಮ ಬಂಗಾಳ(West Bengal) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ, ಅತ್ಯಂತ ಅಪಾಯಕಾರಿ ಹೇಳಿಕೆಯೊಂದು ಹೊರಬಿದ್ದಿದೆ. ಬಾಂಗ್ಲಾದೇಶದ ನಾಯಕ ಮುಹಮ್ಮದ್ ನೂರುಲ್ ಹುಡಾ ಎಂಬುವವರು ಮಮತಾ ಬ್ಯಾನರ್ಜಿ ಅವರಿಗೆ ಪಶ್ಚಿಮ ಬಂಗಾಳವನ್ನು ಭಾರತದಿಂದ ಪ್ರತ್ಯೇಕಿಸಿ ಸ್ವತಂತ್ರ ದೇಶ ಎಂದು ಘೋಷಿಸಲು ಮತ್ತು ದೆಹಲಿ ಸರ್ಕಾರದ ವಿರುದ್ಧ ಯುದ್ಧ ಸಾರಲು ಪ್ರಚೋದನೆ ನೀಡಿರುವ ವಿಡಿಯೋವೊಂದು ಸಂಚಲನ ಮೂಡಿಸಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ನೂರುಲ್ ಹುಡಾ ಅವರು ಮಮತಾ ಬ್ಯಾನರ್ಜಿ ಅವರನ್ನು ಉದ್ದೇಶಿಸಿ ಮಾತನಾಡುತ್ತಾ, ನೀವು ಯಾವುದೇ ಕಾರಣಕ್ಕೂ ಸೋಲೊಪ್ಪಬಾರದು. ಪಶ್ಚಿಮ ಬಂಗಾಳವನ್ನು ಸ್ವತಂತ್ರ ಎಂದು ಘೋಷಿಸಿ. ಭಾರತ ಸರ್ಕಾರದ ವಿರುದ್ಧ ಯುದ್ಧ ಆರಂಭಿಸಿ. ನಿಮ್ಮ ಬೆನ್ನಿಗೆ 17 ಕೋಟಿ ಬಾಂಗ್ಲಾದೇಶಿ ಮುಸ್ಲಿಮರು ನಿಲ್ಲುತ್ತಾರೆ,ಎಂಬ ಮಾತುಗಳನ್ನು ಆಡಿದ್ದಾರೆ. ಈ ಹೇಳಿಕೆಯು ಭಾರತದ ಸಾರ್ವಭೌಮತ್ವಕ್ಕೆ ನೇರ ಸವಾಲಾಗಿದ್ದು, ಭದ್ರತಾ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಈ ವಿಡಿಯೋದಲ್ಲಿರುವ ವ್ಯಕ್ತಿ ತನ್ನನ್ನು ಬಾಂಗ್ಲಾದೇಶದ ನಾಯಕನೆಂದು ಬಿಂಬಿಸಿಕೊಂಡಿದ್ದರೂ, ಆತನ ನಿಜವಾದ ಗುರುತಿನ ಬಗ್ಗೆ ಗೊಂದಲಗಳಿವೆ. ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಗಳ ವೇಳೆ ಸುದ್ದಿಯಲ್ಲಿದ್ದರು. ಆದರೆ, ಈ ವಿಡಿಯೋದಲ್ಲಿರುವ ವ್ಯಕ್ತಿ ಉಗ್ರಗಾಮಿ ಅಥವಾ ತೀವ್ರಗಾಮಿ ಸಂಘಟನೆಗಳ ಜೊತೆ ಸಂಬಂಧ ಹೊಂದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಈತ ಜಮಾತ್-ಇ-ಇಸ್ಲಾಮಿ ಅಥವಾ ಇತರ ಪ್ರತ್ಯೇಕತಾವಾದಿ ಗುಂಪುಗಳ ಬೆಂಬಲಿಗನಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಮತ್ತಷ್ಟು ಓದಿ: ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಲ್ಲ, ಚುನಾವಣಾ ಆಯೋಗದ ಗೆಲುವೆಂದ ಪ್ರಿಯಾಂಕ್ ಖರ್ಗೆ!

ಪಶ್ಚಿಮ ಬಂಗಾಳದ 294 ಕ್ಷೇತ್ರಗಳ ಪೈಕಿ ಬಿಜೆಪಿ 207 ಸ್ಥಾನ ಗೆದ್ದು ಸರ್ಕಾರ ರಚಿಸಲು ಸಜ್ಜಾಗಿದೆ. ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೇವಲ 80 ಸ್ಥಾನಕ್ಕೆ ಕುಸಿದಿದೆ. ಮಮತಾ ಬ್ಯಾನರ್ಜಿ ಅವರು ಸ್ವತಃ ಸೋಲನುಭವಿಸಿದರೂ ಅಧಿಕಾರ ಬಿಡಲು ನಿರಾಕರಿಸುತ್ತಿರುವ ಈ ಸಂಕೀರ್ಣ ಸಮಯದಲ್ಲಿ, ಗಡಿಯಾಚೆಯಿಂದ ಇಂತಹ ‘ಸ್ವತಂತ್ರ ಬಂಗಾಳ’ದ ಕೂಗು ಕೇಳಿಬಂದಿರುವುದು ವ್ಯವಸ್ಥಿತ ಸಂಚಿನ ಭಾಗವೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಭಾರತದ ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲು ಮತ್ತು ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಲು ಬಾಂಗ್ಲಾದೇಶದ ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ ಎಂಬುದು ಈ ವಿಡಿಯೋದಿಂದ ಸ್ಪಷ್ಟವಾಗಿದೆ. ಕೇಂದ್ರ ಗೃಹ ಸಚಿವಾಲಯ ಮತ್ತು ಗುಪ್ತಚರ ಇಲಾಖೆ ಈ ವಿಡಿಯೋದ ಮೂಲ ಮತ್ತು ಅದರ ಹಿಂದಿರುವ ಶಕ್ತಿಗಳ ಬಗ್ಗೆ ತನಿಖೆ ಆರಂಭಿಸಿದೆ.

ಚುನಾವಣಾ ಸೋಲನ್ನು ಪ್ರಜಾಪ್ರಭುತ್ವದ ರೀತಿಯಲ್ಲಿ ಸ್ವೀಕರಿಸುವ ಬದಲು, ಇಂತಹ ದೇಶದ್ರೋಹಿ ಕರೆಗಳಿಗೆ ಕಿವಿಗೊಡುವುದು ರಾಜ್ಯ ಮತ್ತು ದೇಶದ ಭದ್ರತೆಗೆ ಮಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಜಯ್ ಹಾಗೂ ಸಂಗೀತಾ ಭೇಟಿಗೆ ಕಾರಣವಾಗಿತ್ತು ಆ ಒಂದು ಸಿನಿಮಾ – Kannada News | Thalapathy Vijay CM: Political Triumph and Personal Storm The Sangeetha Divorce Saga

ದಳಪತಿ ವಿಜಯ್ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ. ಅವರು ಟಿವಿಕೆ ಪಕ್ಷವನ್ನು ಸ್ಥಾಪಿಸಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 108 ಸ್ಥಾನಗಳನ್ನು ಗೆದ್ದಿದ್ದಾರೆ. ಈಗ, ತಮಿಳುನಾಡು ಹೊಸ ಸರ್ಕಾರ ರಚಿಸಲು ಸರ್ಕಸ್ ಮಾಡುತ್ತಿದ್ದಾರೆ. ಪಕ್ಷ ಸ್ಥಾಪನೆಯಾದ ಕೇವಲ ಎರಡು ವರ್ಷಗಳ ನಂತರ ವಿಜಯ್ ಮುಖ್ಯಮಂತ್ರಿಯಾಗಲಿದ್ದಾರೆ. ಇದರೊಂದಿಗೆ, ಇಡೀ ದೇಶವು ವಿಜಯ್ ಬಗ್ಗೆ.. ಅವರ ಚಲನಚಿತ್ರಗಳು ಮತ್ತು ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ತೋರಿಸುತ್ತಿದೆ.

ಕಳೆದ ಎರಡು ದಿನಗಳಿಂದ ನೆಟ್ಟಿಗರು ವಿಜಯ್ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಸಾಮಾಜಿಕ ಮಾಧ್ಯಮದಲ್ಲಿ ಹುಡುಕುತ್ತಿದ್ದಾರೆ. ಆದರೆ, ವಿಜಯ್ ಅವರ ವೈಯಕ್ತಿಕ ಜೀವನವು ಸವಾಲುಗಳಿಂದ ತುಂಬಿದೆ. ವಿಜಯ್ ಅವರ ಪತ್ನಿ ಸಂಗೀತಾ ಅವರು ಚುನಾವಣೆಗೆ ಮುನ್ನ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ದೊಡ್ಡ ಆಘಾತವನ್ನು ನೀಡಿದರು. ಈ ಸುದ್ದಿ ತಮಿಳು ರಾಜಕೀಯದಲ್ಲಿ ಕೋಲಾಹಲವನ್ನು ಸೃಷ್ಟಿಸಿತು.

ಪ್ರಸ್ತುತ ವಿಜಯ್ ಅವರ ಲವ್​ಸ್ಟೋರಿ ವೈರಲ್ ಆಗುತ್ತಿದೆ. ಲಂಡನ್‌ನಲ್ಲಿ ಬೆಳೆದ ಶ್ರೀಲಂಕಾದ ಉದ್ಯಮಿಯ ಮಗಳು ಸಂಗೀತಾ ಸ್ವರ್ಣಲಿಂಗಂ. ದೊಡ್ಡ ವ್ಯಾಪಾರ ಸಾಮ್ರಾಜ್ಯದ ಮಗಳು. ವಿಜಯ್ ಅವರ ‘ಪೂವೆ ಉನಕ್ಕಾಗ’ ಚಿತ್ರವನ್ನು ನೋಡಿದ ನಂತರ, ಅವರು ವಿಜಯ್ ಅವರ ದೊಡ್ಡ ಅಭಿಮಾನಿಯಾದರು. ಇದರೊಂದಿಗೆ, ಅವರು ಯಾರಿಗೂ ತಿಳಿಯದೆ ಭಾರತಕ್ಕೆ ಬಂದು ವಿಜಯ್ ಅವರನ್ನು ಅಭಿನಂದಿಸಿದರು. ‘ಪೂವೆ ಉನಕ್ಕಾಗ’ ಎಂದರೆ ‘ಈ ಹೂವು ನಿಮಗಾಗಿ’ ಎಂದರ್ಥ. ಇದು ವಿಜಯ್ ನಾಯಕನಾಗಿ ನಟಿಸಿದ 1996 ರ ತಮಿಳು ಚಿತ್ರ. ಇದು ಪ್ರಣಯ ಹಾಸ್ಯ ಚಿತ್ರ. ಇದನ್ನು ಆರ್.ಬಿ. ಚೌಧರಿ ನಿರ್ಮಿಸಿದ್ದರು.

ಇದನ್ನೂ ಓದಿ: ದಳಪತಿ ವಿಜಯ್ ಹಾದಿಯಲ್ಲಿ ಮುಂದುವರೆಯುತ್ತಾರಾ ಶಿವಣ್ಣ? ರಾಜಕೀಯ ನಿಲುವಿನ ಬಗ್ಗೆ ಸಿಕ್ತು ಉತ್ತರ

ವಿಜಯ್ ಅವರ ಸಿನಿಮಾಗಳನ್ನು ನೋಡಿ ಅಭಿಮಾನಿಯಾಗಿದ್ದ ಸಂಗೀತಾ ಸ್ವರ್ಣಲಿಂಗಂ, ಲಂಡನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ವಿಜಯ್‌ಗೆ ನಿಯಮಿತವಾಗಿ ಪತ್ರ ಬರೆಯುತ್ತಿದ್ದರು. ಇಬ್ಬರೂ ಭೇಟಿಯಾದರು, ಸ್ನೇಹಿತರಾದರು ಮತ್ತು ಕೊನೆಗೆ ಮದುವೆಯಾದರು. ಅವರಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ವಿಜಯ್ ಅವರ ಮಗ ಪ್ರಸ್ತುತ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು ಎರಡು ದಶಕಗಳ ವೈವಾಹಿಕ ಸಂಬಂಧದ ನಂತರ, ಇಬ್ಬರೂ ಭಿನ್ನಾಭಿಪ್ರಾಯಗಳಿಂದಾಗಿ ವಿಚ್ಛೇದನಕ್ಕೆ ಸಿದ್ಧರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:09 pm, Thu, 7 May 26

Source link

Exit mobile version