ಕಲಬುರಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ! – Kannada News | Kalaburagi Police Record Achievement: 785 Lost Mobiles Worth Rs 1.44 Crore Recovered and Returned
ಕಲಬುರಗಿ, ಮೇ 07: ಕಳೆದುಹೋದ ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ಕಲಬುರಗಿ ನಗರ ಪೊಲೀಸರು ದಾಖಲೆ ಬರೆದಿದ್ದಾರೆ. ಕೇವಲ ಎರಡು ತಿಂಗಳ ವಿಶೇಷ ಕಾರ್ಯಾಚರಣೆಯಲ್ಲಿ ಬರೋಬ್ಬರಿ 1,44,90,000 ರೂ. ಮೌಲ್ಯದ 785 ಮೊಬೈಲ್ ಪೋನ್‌ಗಳನ್ನು ಪತ್ತೆ ಹಚ್ಚುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ. ಸಿಇಐಆರ್ (CEIR) ಪೋರ್ಟಲ್ ಬಳಸಿಕೊಂಡು ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ವಿವಿಧ ಕಂಪನಿಗಳ ಬೆಲೆಬಾಳುವ ಮೊಬೈಲ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಅವರು ಪತ್ತೆಯಾದ ಮೊಬೈಲ್‌ಗಳನ್ನು ಅವುಗಳ ಅಸಲಿ ಮಾಲೀಕರಿಗೆ…