SRH vs PBKS IPL 2026 Live Score: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ – Kannada News | Sunrisers Hyderabad vs Punjab Kings IPL 2026 Live Cricket Score SRH vs PBKS Match on 6th May latest news in Kannada

ಐಪಿಎಲ್ 2026 ರ 49 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು, ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇದು ಹೈದರಾಬಾದ್‌ನ 11 ನೇ ಪಂದ್ಯವಾಗಿದ್ದರೆ, ಪಂಜಾಬ್‌ಗೆ 10 ನೇ ಪಂದ್ಯವಾಗಿದೆ. ಎರಡೂ ತಂಡಗಳು ತಲಾ 6 ಪಂದ್ಯಗಳನ್ನು ಗೆದ್ದಿವೆ.

Source link

ಕರ್ನಾಟಕ ಹವಾಮಾನ ವರದಿ: ಮುಂದಿನ 7 ದಿನ ರಾಜ್ಯದಲ್ಲಿ ಬಿಸಿಲಿನ ನಡುವೆ ಅಲ್ಲಲ್ಲಿ ಮಳೆ ಸಾಧ್ಯತೆ – Kannada News | Karnataka Weather Report: Rain Forecast in Parts of the State Till May 12; Dry Conditions Elsewhere

ಬೆಂಗಳೂರು, ಮೇ 06: ಮುಂದಿನ 7 ದಿನಗಳ ಕಾಲ ಕರ್ನಾಟಕದಾದ್ಯಂತ (karnataka) ಒಣ ಹವೆ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಮಧ್ಯಾಹ್ನ ನಂತರ, ಅಲ್ಲಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ. ಜೊತೆಗೆ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿವೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ಇಂದಿನಿಂದ ಮೇ 12ರವರೆಗೆ ಕೆಲವೆಡೆ ಮಳೆ ಮುನ್ಸೂಚನೆ
  • ಕರ್ನಾಟಕದಾದ್ಯಂತ ಒಣ ಹವೆ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆ
  • ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ

ಕರಾವಳಿ ಕರ್ನಾಟಕದಲ್ಲಿ ಇಂದಿನಿಂ ಮೇ 12ರವರೆಗೆ ಕರಾವಳಿ ಕರ್ನಾಟಕದ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಗಂಟೆಗೆ 30-40 ಕಿಮೀ ವೇಗದಲ್ಲಿ ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಟ್ವೀಟ್​

ಉತ್ತರ ಒಳನಾಡು ಕರ್ನಾಟಕದ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಗಂಟೆಗೆ 40-50 ಕಿಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದು ಸಂಜೆ ಭಾರೀ ಮಳೆ: ಬಿಸಿಯಲ್ಲಿ ಬೆಂದು ಹೋಗಿದ್ದ ಮಂಗಳೂರಿಗೆ ವರುಣನ ಸಿಂಚನ

ಇನ್ನು ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ಮೇ 9ರಿಂದ 12ರವರೆಗೆ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗಂಟೆಗೆ 40-50 ಕಿಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮೇ 7 ಮತ್ತು 8ರಂದು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು, ಬಲವಾದ ಗಾಳಿ (40-50 ಕಿಮೀ ವೇಗ) ಮತ್ತು ಭಾರೀ ಮಳೆಯಾಗುವ ಸಾಧ್ಯತೆಯಿದೆ.

ತಾಪಮಾನದಲ್ಲಿ ಬದಲಾವಣೆ ಇಲ್ಲ

ಮುಂದಿನ 5 ದಿನಗಳವರೆಗೆ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:46 pm, Wed, 6 May 26

Source link

ಮಕ್ಕಳ ಆರೋಗ್ಯ ಪದೇ ಪದೇ ಹದಗೆಡುತ್ತಾ? ಹಾಗಿದ್ರೆ ಈ ರೀತಿ ಆರೈಕೆ ಮಾಡಿ! – Kannada News | How Seasonal Shifts Affect Children: Cold, Flu, and Allergy Guide

ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಆಗುತ್ತಿರುವ ನಿರಂತರ ಬದಲಾವಣೆಗಳು ಮಕ್ಕಳ ಆರೋಗ್ಯದ (Kids’ Health) ಮೇಲೆ ನೇರ ಪರಿಣಾಮ ಬೀರುತ್ತಿವೆ. ಹೆಚ್ಚು ಬಿಸಿಲು, ಸಂಜೆಯ ಸಮಯ ಬೀಸುವ ತಣ್ಣನೆಯ ಗಾಳಿ ಹಾಗೂ ತಾಪಮಾನದಲ್ಲಿ ಆಗುವ ಏರುಪೇರು ಮಕ್ಕಳಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಿರಿಯರಿಗಿಂತ ಮಕ್ಕಳ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ, ಇಂತಹ ಬದಲಾವಣೆಗಳಿಗೆ ಅವರು ಬೇಗ ತುತ್ತಾಗುತ್ತಾರೆ. ಹಾಗಾದರೆ ಮಕ್ಕಳಲ್ಲಿ ಕಂಡುಬರುವ ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು, ಈ ಸಮಯದಲ್ಲಿ ಅವರ ಆರೈಕೆ ಹೇಗೆ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?

ಹವಾಮಾನ ಬದಲಾವಣೆಯ ಸಮಯದಲ್ಲಿ ಮಕ್ಕಳಲ್ಲಿ ಪದೇಪದೇ ಜ್ವರ, ಕೆಮ್ಮು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ಜೊತೆಗೆ ದೌರ್ಬಲ್ಯ, ಊಟ, ತಿಂಡಿ ಸರಿಯಾಗಿ ಮಾಡದಿರುವುದು, ಹೆಚ್ಚು ನಿದ್ರೆ ಅಥವಾ ಚಿಡಿಚಿಡಿ ಇತ್ಯಾದಿ ಲಕ್ಷಣಗಳು ಕಾಣಿಸಬಹುದು. ಕೆಲವು ಮಕ್ಕಳಲ್ಲಿ ಅಲರ್ಜಿ, ಉಸಿರಾಟದ ತೊಂದರೆ ಮತ್ತು ಚರ್ಮದ ಮೇಲೆ ರಾಶ್‌ಗಳು ಕಾಣಿಸಬಹುದು. ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ.

ಇದನ್ನೂ ಓದಿ: ಮಕ್ಕಳು ಪದೇಪದೇ ಬೀಳುವುದರಿಂದ ಮೆದುಳಿಗೆ ಅಪಾಯವಾಗುತ್ತದೆಯೇ? ವೈದ್ಯರನ್ನು ಯಾವಾಗ ಸಂಪರ್ಕ ಮಾಡಬೇಕು?

ಮಕ್ಕಳ ಆರೈಕೆ ಹೇಗೆ ಮಾಡಬೇಕು?

ಮಕ್ಕಳಿಗೆ ಸಮತೋಲನ ಮತ್ತು ಪೌಷ್ಟಿಕ ಆಹಾರ ನೀಡುವುದು ಬಹಳ ಮುಖ್ಯ. ಹಣ್ಣು, ತರಕಾರಿ ಮತ್ತು ವಿಟಮಿನ್‌ಗಳುಳ್ಳ ಆಹಾರವನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮಕ್ಕಳಿಗೆ ಸಾಕಷ್ಟು ನೀರು ಕುಡಿಸುವುದು ಮತ್ತು ಹವಾಮಾನಕ್ಕೆ ಅನುಗುಣವಾದ ಉಡುಪುಗಳನ್ನು ಧರಿಸುವುದು ಅಗತ್ಯ. ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಹರಿಸಿ, ಕೈ ತೊಳೆಯುವ ಅಭ್ಯಾಸವನ್ನು ಬೆಳೆಸಬೇಕು. ಅದರ ಜೊತೆಗೆ ಮಕ್ಕಳಿಗೆ ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ಸಿಗುವಂತೆ ನೋಡಿಕೊಳ್ಳಬೇಕು. ತುಂಬಾ ಬಿಸಿ ಅಥವಾ ತಣ್ಣನೆಯ ಆಹಾರಗಳನ್ನು ತಪ್ಪಿಸುವುದು ಉತ್ತಮ. ಹೊರಗಡೆ ಆಟವಾಡುವಾಗ ಧೂಳು, ತೀವ್ರ ಬಿಸಿಲು ಅಥವಾ ತಣ್ಣನೆಯ ಗಾಳಿಯಿಂದ ರಕ್ಷಿಸಬೇಕು. ಮನೆಗೆ ಬಂದ ನಂತರ ಕೈ- ಕಾಲುಗಳನ್ನು ಸ್ವಚ್ಛಗೊಳಿಸುವ ಅಭ್ಯಾಸ ಮಾಡಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ಯಾಂಕ್​ಗಳಲ್ಲಿ ಕೆಟ್ಟ ಸಾಲಗಳು; ಆರ್​ಬಿಐನಿಂದ ಹೊಸ ನಿಯಮಗಳ ಪ್ರಸ್ತಾಪ; ಏನಿವು ರೂಲ್ಸ್? – Kannada News | RBI’s New NPA Rules 2027: Major Bank & Borrower Impact, ECL Model Explained

ಮುಂಬೈ, ಮೇ 6: ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಬಲಪಡಿಸಲು ಮತ್ತು ಸಾಲದ ಅಪಾಯಗಳನ್ನು ಮುಂಚಿತವಾಗಿಯೇ ನಿರ್ವಹಿಸಲು ಅನುತ್ಪಾದಕ ಆಸ್ತಿ (Bad Loans/NPA) ವರ್ಗೀಕರಣ ಹಾಗೂ ಪ್ರಾವಿಷನಿಂಗ್ (Provisions) ನಿಯಮಗಳಲ್ಲಿ ಭಾರಿ ಬದಲಾವಣೆಗಳನ್ನು ತಂದಿದೆ. ಆರ್‌ಬಿಐ ಬಿಡುಗಡೆ ಮಾಡಿರುವ ಹೊಸ ನಿರ್ದೇಶನಗಳು (Master Directions) ಬ್ಯಾಂಕುಗಳು ಹಾಗೂ ಸಾಲ ಪಡೆದ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿವೆ. ಈ ಹೊಸ ನಿಯಮಗಳು ಏಪ್ರಿಲ್ 1, 2027 ರಿಂದ ಜಾರಿಗೆ ಬರಲಿದ್ದು, ಬ್ಯಾಂಕುಗಳು ಮತ್ತು ಸಾಲಗಾರರು ತಿಳಿದುಕೊಳ್ಳಬೇಕಾದ 5 ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:

ಒಂದು ಸಾಲ ಮಿಸ್ ಆದರೂ ಎಲ್ಲಾ ಸಾಲಗಳೂ NPA

ಹೊಸ ನಿಯಮಗಳ ಪ್ರಕಾರ, ಒಬ್ಬನೇ ಸಾಲಗಾರ (Borrower) ಒಂದು ಬ್ಯಾಂಕಿನಲ್ಲಿ ಒಂದಕ್ಕಿಂತ ಹೆಚ್ಚು ಸಾಲಗಳನ್ನು (ಉದಾಹರಣೆಗೆ: ಬಿಸಿನೆಸ್ ಲೋನ್, ಹೋಮ್ ಲೋನ್ ಮತ್ತು ಕಾರ್ ಲೋನ್) ಪಡೆದಿದ್ದು, ಅದರಲ್ಲಿ ಯಾವುದಾದರೂ ಒಂದು ಲೋನ್ ಅಕೌಂಟ್ ನಿಗದಿತ 90 ದಿನಗಳ ಅವಧಿಯಲ್ಲಿ ಮರುಪಾವತಿಯಾಗದೆ NPA ಎಂದು ಘೋಷಿಸಲ್ಪಟ್ಟರೆ, ಆತನ ಉಳಿದೆಲ್ಲಾ ಸಾಲದ ಖಾತೆಗಳನ್ನೂ ಬ್ಯಾಂಕುಗಳು ಸ್ವಯಂಚಾಲಿತವಾಗಿ NPA ಎಂದೇ ಪರಿಗಣಿಸಬೇಕಾಗುತ್ತದೆ. ಸಾಲಗಾರರನ್ನು ಹೆಚ್ಚು ಶಿಸ್ತುಬದ್ಧಗೊಳಿಸಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಕಾಗ್ನಿಜೆಂಟ್​ನಲ್ಲಿ 15,000 ಮಂದಿ ಲೇ ಆಫ್ ಸಾಧ್ಯತೆ; ಫ್ರೆಷ್​ವರ್ಕ್ಸ್​ನಲ್ಲಿ ಶೇ. 11 ಮಂದಿಗೆ ಕಾದಿದೆ ಶಾಕ್

‘ಎಕ್ಸ್‌ಪೆಕ್ಟೆಡ್ ಕ್ರೆಡಿಟ್ ಲಾಸ್’ (ECL) ಮಾದರಿ ಅಳವಡಿಕೆ

ಇಲ್ಲಿಯವರೆಗೆ ಬ್ಯಾಂಕುಗಳು ಸಾಲಗಾರರು ಸುಸ್ತಿ (Default) ಮಾಡಿದ 90 ದಿನಗಳ ನಂತರವಷ್ಟೇ ಆ ನಷ್ಟವನ್ನು ಭರಿಸಲು ಹಣವನ್ನು ಪಕ್ಕಕ್ಕೆ ಎತ್ತಿಡುತ್ತಿದ್ದವು (Incurred Loss Method). ಆದರೆ ಈಗ ಆರ್‌ಬಿಐ ‘ಎಕ್ಸ್‌ಪೆಕ್ಟೆಡ್ ಕ್ರೆಡಿಟ್ ಲಾಸ್’ (ECL) ಎಂಬ ಮುನ್ಸೂಚನಾ ಮಾದರಿಯನ್ನು ಕಡ್ಡಾಯಗೊಳಿಸಿದೆ. ಇದರ ಅಡಿಯಲ್ಲಿ, ಬ್ಯಾಂಕುಗಳು ಗಣಿತದ ಮಾದರಿಗಳನ್ನು (Mathematical model) ಬಳಸಿ ಗ್ರಾಹಕರು ಭವಿಷ್ಯದಲ್ಲಿ ಸಾಲ ಸುಸ್ತಿ ಮಾಡಬಹುದಾದ ಅಪಾಯವನ್ನು ಮುಂಚಿತವಾಗಿಯೇ ಊಹಿಸಿ, ಅದಕ್ಕೆ ತಕ್ಕಂತೆ ಹಣವನ್ನು ಕಾಯ್ದಿರಿಸಬೇಕಾಗುತ್ತದೆ (Provisioning).

ಭದ್ರತೆ (Strong Collateral) ಅಥವಾ ಅಡಮಾನ ಇರುವ ಸಾಲಗಳಿಗೆ ವಿನಾಯಿತಿ

ಲೋನ್ ಪ್ರಾವಿಷನಿಂಗ್ ನಿಯಮಗಳನ್ನು ಕಠಿಣಗೊಳಿಸಿದ್ದರೂ, ಸುರಕ್ಷಿತ ಸಾಲಗಳಿಗೆ ಆರ್‌ಬಿಐ ಸಲ್ಪ ಸಮಾಧಾನಕರ ನಿಯಮ ತಂದಿದೆ. ನಗದು (Cash), ಚಿನ್ನ (Gold) ಅಥವಾ ಸರ್ಕಾರಿ ಸೆಕ್ಯೂರಿಟಿಗಳಂತಹ ಬಲವಾದ ಮತ್ತು ಸುಲಭವಾಗಿ ನಗದೀಕರಿಸಬಹುದಾದ ಭದ್ರತೆಗಳನ್ನು (Collateral) ನೀಡಿ ಪಡೆದಿರುವ ಸಾಲಗಳ ಮೇಲೆ ಬ್ಯಾಂಕುಗಳು ಕಡಿಮೆ ಮೊತ್ತದ ಹಣವನ್ನು ಕಾಯ್ದಿರಿಸಿದರೆ ಸಾಕಾಗುತ್ತದೆ. ಇದರಿಂದಾಗಿ ಇಂತಹ ಸಾಲಗಳ ಮೇಲಿನ ಬ್ಯಾಂಕುಗಳ ವೆಚ್ಚ ಕಡಿಮೆಯಾಗಲಿದೆ.

‘ಸ್ಟ್ಯಾಂಡರ್ಡ್ ಅಸೆಟ್’ ಆಗಲು ಸಂಪೂರ್ಣ ಬಾಕಿ ಪಾವತಿ ಕಡ್ಡಾಯ

ಒಮ್ಮೆ ಸಾಲಗಾರನ ಖಾತೆಯು NPA ಎಂದು ವರ್ಗೀಕರಿಸಲ್ಪಟ್ಟರೆ, ಅದನ್ನು ಮತ್ತೆ ಮೊದಲಿನಂತೆ ಸಾಮಾನ್ಯ ಅಥವಾ ‘ಸ್ಟ್ಯಾಂಡರ್ಡ್ ಅಸೆಟ್’ (Standard Asset) ಎಂದು ಪರಿಗಣಿಸಬೇಕಾದರೆ, ಸಾಲಗಾರನು ಆ ಬ್ಯಾಂಕಿನಲ್ಲಿ ತನಗಿರುವ ಎಲ್ಲಾ ಸಾಲದ ಖಾತೆಗಳ ಸಂಪೂರ್ಣ ಅಸಲು ಮತ್ತು ಬಡ್ಡಿಯ ಬಾಕಿ ಮೊತ್ತವನ್ನು (Entire Arrears) ಪೂರ್ತಿಯಾಗಿ ಪಾವತಿಸಬೇಕಾಗುತ್ತದೆ. ಭಾಗಶಃ ಪಾವತಿಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ.

ಇದನ್ನೂ ಓದಿ: ಅನುವಾದಿನಿ ಎಐ ಮ್ಯಾಥ್​ಜೋರೋ ಮ್ಯಾಜಿಕ್; ಕುಣಿಕುಣಿಯುತಾ ಕಲಿಯಿರಿ ಗಣಿತ; 22 ಭಾಷೆಗಳಲ್ಲಿ ನಲಿ-ಕಲಿ

ಸ್ವಯಂಚಾಲಿತ ಎನ್‌ಪಿಎ ಪತ್ತೆ ವ್ಯವಸ್ಥೆ (Automated NPA Identification)

ಬ್ಯಾಂಕುಗಳು ತಮಗೆ ಇಷ್ಟಬಂದಂತೆ ಅಥವಾ ಮ್ಯಾನುಯಲ್ ಆಗಿ ಸಾಲಗಳನ್ನು NPA ಎಂದು ಗುರುತಿಸುವುದನ್ನು ತಡೆಯಲು ಆರ್‌ಬಿಐ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಎಲ್ಲಾ ಬ್ಯಾಂಕುಗಳು ತಮ್ಮ ಐಟಿ ವ್ಯವಸ್ಥೆಯಲ್ಲಿ ಸ್ವಯಂಚಾಲಿತ ವ್ಯವಸ್ಥೆಯನ್ನು (Automated System) ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇದು ಸಾಲದ ಮರುಪಾವತಿ ತಪ್ಪಿದ ತಕ್ಷಣ ಯಾವುದೇ ಹಸ್ತಕ್ಷೇಪವಿಲ್ಲದೆ ರಿಸ್ಕ್ ಅನ್ನು ಪತ್ತೆ ಮಾಡುತ್ತದೆ.

ಹೊಸ ಸಾಲಗಳಿಗೆ ಈ ನಿಯಮಗಳು ಏಪ್ರಿಲ್ 1, 2027 ರಿಂದ ಅನ್ವಯವಾಗಲಿದ್ದು, ಬ್ಯಾಂಕುಗಳು ತಮ್ಮ ಹಳೆಯ ಸಾಲಗಳನ್ನು (Legacy Loans) ಈ ಹೊಸ ಬಡ್ಡಿ ಮತ್ತು ನಷ್ಟ ಲೆಕ್ಕಾಚಾರದ ಮಾದರಿಗೆ ಬದಲಾಯಿಸಲು ಮಾರ್ಚ್ 31, 2030 ರವರೆಗೆ ಕಾಲಾವಕಾಶ ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ವಿಜಯ್ ಕನಸು ಭಗ್ನ; ಶಾಕ್ ಕೊಟ್ಟ ರಾಜ್ಯಪಾಲರು – Kannada News | TVK Chief Vijays Oath taking Ceremony In Doubt Governor Not Convinced with majority Numbers

ಚೆನ್ನೈ, ಮೇ 6: ಹೊಸ ಪಕ್ಷವಾದ ಟಿವಿಕೆ ಕಟ್ಟಿ, ಮೊದಲ ಬಾರಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) ಸ್ಪರ್ಧಿಸಿದ್ದ ನಟ ಜೋಸೆಫ್ ವಿಜಯ್ (Vijay) ಯಾರೂ ನಿರೀಕ್ಷೆಯೂ ಮಾಡಿರದ ರೀತಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ತಮಿಳುನಾಡಿನ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಟಿವಿಕೆಗೆ ಸರ್ಕಾರ ರಚನೆಗೆ ಬೇಕಾದ ಬಹುಮತವಾದ 118 ಸ್ಥಾನಗಳು ಸಿಕ್ಕಿರಲಿಲ್ಲ. ಹೀಗಾಗಿ, ಅನಿವಾರ್ಯವಾಗಿ ವಿಜಯ್ ಬೇರೆ ಪಕ್ಷಗಳ ಬೆಂಬಲ ಕೋರಿದ್ದರು. ಕಾಂಗ್ರೆಸ್​​ನ ಬೆಂಬಲದಿಂದ ವಿಜಯ್ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿದ್ದರು. ಆದರೆ, ತಮಿಳುನಾಡಿನ ರಾಜ್ಯಪಾಲರು ವಿಜಯ್ ನೀಡಿದ ಬಹುಮತದ ಲೆಕ್ಕಾಚಾರದಿಂದ ತೃಪ್ತರಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಕಾರಣದಿಂದ ವಿಜಯ್ ನಾಳೆ ಪ್ರಮಾಣವಚನ ಸ್ವೀಕರಿಸುವುದು ಅನುಮಾನ ಎನ್ನಲಾಗುತ್ತಿದೆ.


ಸುದ್ದಿ ಅಪ್​ಡೇಟ್ ಆಗುತ್ತಿದೆ….

Published On – 6:30 pm, Wed, 6 May 26

Source link

ಕಾಗ್ನಿಜೆಂಟ್​ನಲ್ಲಿ 15,000 ಮಂದಿ ಲೇ ಆಫ್ ಸಾಧ್ಯತೆ; ಫ್ರೆಷ್​ವರ್ಕ್ಸ್​ನಲ್ಲಿ ಶೇ. 11 ಮಂದಿಗೆ ಕಾದಿದೆ ಶಾಕ್ – Kannada News | IT Job Crisis: AI Automation Leads to Massive Layoffs at Cognizant, Freshworks

ಕಾಗ್ನಿಜೆಂಟ್ ಲೇಆಫ್Image Credit source: AI/Mediaforge/TV9

ಬೆಂಗಳೂರು/ನವದೆಹಲಿ, ಮೇ 6: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಜನರೇಟಿವ್ ಎಐ (GenAI) ತಂತ್ರಜ್ಞಾನಗಳ ತ್ವರಿತ ಬೆಳವಣಿಗೆಯು ಜಾಗತಿಕ ಮಾಹಿತಿ ತಂತ್ರಜ್ಞಾನ (IT) ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಇದರ ನೇರ ಪರಿಣಾಮವಾಗಿ, ಪ್ರಮುಖ ಐಟಿ ದೈತ್ಯ ಸಂಸ್ಥೆಯಾದ ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ (Cognizant) ಸಂಸ್ಥೆ ತನ್ನ ಒಟ್ಟು ಉದ್ಯೋಗಿಗಳಲ್ಲಿ ಬರೋಬ್ಬರಿ 12,000 ದಿಂದ 15,000 ಉದ್ಯೋಗಗಳನ್ನು ಕಡಿತಗೊಳಿಸಲು ಗಂಭೀರ ಚಿಂತನೆ ನಡೆಸಿದೆ. ಅತ್ಯಂತ ಕಳವಳಕಾರಿ ಸಂಗತಿಯೆಂದರೆ, ಈ ಲೇ-ಆಫ್‌ (Job Cuts) ಪ್ರಕ್ರಿಯೆಯಲ್ಲಿ ಸಿಂಹಪಾಲು, ಅಂದರೆ ಬಹುಪಾಲು ಉದ್ಯೋಗ ನಷ್ಟವು ಭಾರತದಲ್ಲಿರುವ ಕಾಗ್ನಿಜೆಂಟ್ ಕಚೇರಿಗಳಲ್ಲೇ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

ಇನ್ನೊಂದೆಡೆ, ಭಾರತದ ಸಾಸ್ (SaaS) ಸಾಫ್ಟ್​ವೇರ್ ಸಂಸ್ಥೆ ಫ್ರೆಷ್​ವರ್ಕ್ಸ್ (FreshWorks) ಶೇ. 11ಕ್ಕೂ ಹೆಚ್ಚು ಉದ್ಯೋಗಿಗಳನ್ನು ಲೇ ಆಫ್ ಮಾಡಲು ಯೋಜಿಸಿದೆ. ಅಂದರೆ, ಈ ಕಂಪನಿಯ 500ಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಈ ವಿಚಾರವನ್ನು ಫ್ರೆಷ್​ವರ್ಕ್ಸ್ ಸಿಇಒ ಡೆನಿಸ್ ವುಡ್​ಸೈಡ್ (Denis Woodside) ಅವರೇ ಖಚಿತಪಡಿಸಿದ್ದಾರೆ. ಕಂಪನಿಯ ಹೆಚ್ಚಿನ ಕೋಡಿಂಗ್ ಕೆಲಸವನ್ನು ಎಐನಿಂದಲೇ ಮಾಡಲಾಗುತ್ತಿರುವುದರಿಂದ ಮಾನವ ಸಂಪನ್ಮೂಲಗಳನ್ನು ಕಡಿತಗೊಳಿಸಲಾಗುತ್ತಿದೆ.

ಕಾಗ್ನಿಜೆಂಟ್​ನಲ್ಲಿ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣಗಳೇನು?

ಎಐ ಮತ್ತು ಆಟೊಮೇಷನ್ ಹೂಡಿಕೆ: ಸಾಂಪ್ರದಾಯಿಕ ಐಟಿ ಕೆಲಸಗಳನ್ನು ಈಗ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳು ಅತ್ಯಂತ ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಮಾಡುತ್ತಿವೆ. ಹೀಗಾಗಿ ಕಂಪನಿಯು ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಎಐ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಇದನ್ನೂ ಓದಿ: ಅನುವಾದಿನಿ ಎಐ ಮ್ಯಾಥ್​ಜೋರೋ ಮ್ಯಾಜಿಕ್; ಕುಣಿಕುಣಿಯುತಾ ಕಲಿಯಿರಿ ಗಣಿತ; 22 ಭಾಷೆಗಳಲ್ಲಿ ನಲಿ-ಕಲಿ

ವೆಚ್ಚ ಮರುಹಂಚಿಕೆ (Cost Realignment): ಕಂಪನಿಯು ತನ್ನ ಸಾಂಪ್ರದಾಯಿಕ ಸೇವೆಗಳ ವಿಭಾಗದಲ್ಲಾಗುವ ವೆಚ್ಚವನ್ನು ಉಳಿಸಿ, ಆ ಹಣವನ್ನು ಉನ್ನತ ಮಟ್ಟದ ಎಐ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಡಿಜಿಟಲ್ ಮೂಲಸೌಕರ್ಯಗಳ ಅಭಿವೃದ್ಧಿಗೆ ಮರುಹೂಡಿಕೆ ಮಾಡಲು ಈ ಕಠಿಣ ನಿರ್ಧಾರಕ್ಕೆ ಮುಂದಾಗಿದೆ.

ಬದಲಾಗುತ್ತಿರುವ ಜಾಗತಿಕ ಬೇಡಿಕೆ: ಜಾಗತಿಕ ಮಾರುಕಟ್ಟೆಯಲ್ಲಿ ಗ್ರಾಹಕರು ಈಗ ಸಾಂಪ್ರದಾಯಿಕ ಸಾಫ್ಟ್‌ವೇರ್ ಕೋಡಿಂಗ್ ಮತ್ತು ನಿರ್ವಹಣೆಗಿಂತ ಹೆಚ್ಚಾಗಿ ಎಐ ಆಧಾರಿತ ಪರಿಹಾರಗಳನ್ನು (AI-driven solutions) ಬಯಸುತ್ತಿದ್ದಾರೆ.

ಭಾರತದ ಮೇಲಾಗುವ ಪರಿಣಾಮ ಎಷ್ಟು?

ಕಾಗ್ನಿಜೆಂಟ್ ಸಂಸ್ಥೆಯು ಜಾಗತಿಕವಾಗಿ ಸುಮಾರು 3,40,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ ಶೇಕಡಾ 70 ಕ್ಕಿಂತ ಹೆಚ್ಚು ಅಂದರೆ ಸುಮಾರು 2,50,000 ಕ್ಕೂ ಅಧಿಕ ಉದ್ಯೋಗಿಗಳು ಭಾರತದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಕಂಪನಿಯು ಕೈಗೊಳ್ಳಲಿರುವ ಉದ್ಯೋಗ ಕಡಿತವು ಪ್ರಮುಖವಾಗಿ ಮಧ್ಯಮ ಹಂತದ (Middle-level) ವ್ಯವಸ್ಥಾಪಕರು, ಸಾಂಪ್ರದಾಯಿಕ ಅಪ್ಲಿಕೇಶನ್ ಡೆವಲಪ್‌ಮೆಂಟ್ ಮತ್ತು ನಿರ್ವಹಣಾ ವಿಭಾಗಗಳಲ್ಲಿರುವ ಉದ್ಯೋಗಿಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಭಾರತದಲ್ಲಿ ಈ ವಿಭಾಗಗಳಲ್ಲಿ ದೊಡ್ಡ ಸಂಖ್ಯೆಯ ಉದ್ಯೋಗಿಗಳು ಇರುವುದರಿಂದ, ಪ್ರಸ್ತಾವಿತ 15,000 ಉದ್ಯೋಗ ಕಡಿತದಲ್ಲಿ ಬಹುತೇಕ ಉದ್ಯೋಗ ನಷ್ಟ ಭಾರತೀಯ ಐಟಿ ವೃತ್ತಿಪರರಿಗೇ ಆಗಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ಕಂಪನಿಯ ಮುಂದಿನ ಹೆಜ್ಜೆ ಮತ್ತು ಮರುತರಬೇತಿ (Reskilling)

ಉದ್ಯೋಗ ಕಡಿತದ ಆತಂಕದ ನಡುವೆಯೂ, ಕಾಗ್ನಿಜೆಂಟ್ ತನ್ನ ಪ್ರಸ್ತುತ ಉದ್ಯೋಗಿಗಳಿಗೆ ಹೊಸ ತಂತ್ರಜ್ಞಾನದ ಮರುತರಬೇತಿ (Reskilling) ನೀಡಲು ಮುಂದಾಗಿದೆ. ಕಂಪನಿಯು ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಅಗತ್ಯವಿರುವ ಡೇಟಾ ಸೈನ್ಸ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಜನರೇಟಿವ್ ಎಐ ಕ್ಷೇತ್ರಗಳಲ್ಲಿ ಉದ್ಯೋಗಿಗಳನ್ನು ಸಜ್ಜುಗೊಳಿಸಲು ದೊಡ್ಡ ಮಟ್ಟದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ, ಈ ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳದ ಉದ್ಯೋಗಿಗಳಿಗೆ ಮುಂಬರುವ ದಿನಗಳಲ್ಲಿ ಕಠಿಣ ಸವಾಲು ಎದುರಾಗಲಿದೆ.

ಇದನ್ನೂ ಓದಿ: ಕ್ಲೋಡ್​ನ ಈ ಎಐ ಮಾಡಲ್​ಗೆ ಬೆಚ್ಚಿಬಿದ್ದ ಬ್ಯಾಂಕುಗಳು; ಉನ್ನತ ಮಟ್ಟದ ಸಭೆ ಕರೆದ ನಿರ್ಮಲಾ ಸೀತಾರಾಮನ್

ಐಟಿ ವಲಯದಲ್ಲಿ ಮೂಡಿರುವ ಆತಂಕ

ಕಾಗ್ನಿಜೆಂಟ್ ಸಂಸ್ಥೆಯ ಈ ಬೃಹತ್ ಉದ್ಯೋಗ ಕಡಿತದ ನಿರ್ಧಾರವು ಕೇವಲ ಒಂದು ಕಂಪನಿಗೆ ಸೀಮಿತವಾಗಿರದೆ, ಇಡೀ ಭಾರತೀಯ ಐಟಿ ವಲಯಕ್ಕೆ ಒಂದು ಮುನ್ಸೂಚನೆಯಾಗಿದೆ. ಮುಂಬರುವ ದಿನಗಳಲ್ಲಿ ಇತರ ಪ್ರಮುಖ ಐಟಿ ಕಂಪನಿಗಳೂ ಸಹ ಎಐ ತಂತ್ರಜ್ಞಾನದ ಅಳವಡಿಕೆಯಿಂದಾಗಿ ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಮರುಪರಿಶೀಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಇದು ಐಟಿ ಉದ್ಯೋಗಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಮುಂಬೈ ತಂಡದಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯ ಗೆಳತಿಯೊಂದಿಗೆ ಸುತ್ತಾಟ – Kannada News | Hardik Pandya Out? MI Captaincy Crisis Ahead of RCB Clash IPL 2026

ಐಪಿಎಲ್ 2026 (IPL 2026) ರಲ್ಲಿ ಮುಂಬೈ ಇಂಡಿಯನ್ಸ್ ತಂಡವು, ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ವಿರುದ್ಧ ರಾಯ್‌ಪುರದಲ್ಲಿ ತಮ್ಮ ಮುಂದಿನ ಪಂದ್ಯವನ್ನು ಆಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಭಾಗವಹಿಸುವ ಸಾಧ್ಯತೆ ಕಡಿಮೆ ಇದ್ದು, ಇದಕ್ಕೆ ಪೂರಕವಾಗಿ ಅವರು ಮುಂಬೈ ಇಂಡಿಯನ್ಸ್ ತಂಡದೊಂದಿಗೆ ರಾಯ್‌ಪುರಕ್ಕೆ ಪ್ರಯಾಣಿಸಿಲ್ಲ ಎಂದು ವರದಿಯಾಗಿದೆ. ಆರ್​​ಸಿಬಿ ವಿರುದ್ಧದ ಈ ಪಂದ್ಯ ಮೇ 10 ರಂದು ನಡೆಯಲಿದ್ದು, ಮುಂಬೈ ತಂಡವು ಮೇ 6 ರ ಮಧ್ಯಾಹ್ನ ರಾಯ್‌ಪುರಕ್ಕೆ ತೆರಳಿದೆ. ಆದರೆ ನಾಯಕ ಹಾರ್ದಿಕ್ ಪಾಂಡ್ಯ ತಂಡದೊಂದಿಗೆ ಕಾಣಿಸಿಕೊಂಡಿಲ್ಲ. ಪಾಂಡ್ಯ ಶೀಘ್ರದಲ್ಲೇ ತಂಡವನ್ನು ಸೇರುವ ಯಾವುದೇ ಸೂಚನೆ ಇನ್ನೂ ಇಲ್ಲ.

ಹಾರ್ದಿಕ್ ಪಾಂಡ್ಯ ಆಟ ಮುಗಿಯಿತೇ?

ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕತ್ವ ವಹಿಸಿದ್ದರು. ತಂಡವು ಏಕಪಕ್ಷೀಯವಾಗಿ ಆ ಪಂದ್ಯವನ್ನು ಗೆದ್ದುಕೊಂಡಿತು. ಪಂದ್ಯದ ಸಮಯದಲ್ಲಿ ಪಾಂಡ್ಯ ಅಲಭ್ಯತೆಯ ಬಗ್ಗೆ ಮಾತನಾಡಿದ್ದ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಗಾಯದಿಂದಾಗಿ ಆಡುತ್ತಿಲ್ಲ ಎಂದು ಹೇಳಿದ್ದರು. ಆದಾಗ್ಯೂ, ಪಾಂಡ್ಯ ಅವರ ಅಲಭ್ಯತೆಯನ್ನು ಬೇರೆ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಪಾಂಡ್ಯ ಅವರ ನಾಯಕತ್ವ ಮತ್ತು ಪ್ರದರ್ಶನದ ಬಗ್ಗೆ ತಂಡದ ಆಡಳಿತ ಮಂಡಳಿ ಅತೃಪ್ತವಾಗಿದ್ದು, ಅದಕ್ಕಾಗಿಯೇ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂಬ ಊಹಾಪೋಹಗಳಿವೆ.

ಗಾಯದ ಕಾರಣದಿಂದಾಗಿ ಐಪಿಎಲ್​ನಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯ, ತಂಡದಿಂದ ಹೊರಗಿದ್ದು, ತಮ್ಮ ಗೆಳತಿ ಮಹಿಕಾ ಅವರೊಂದಿಗೆ ಸುತ್ತಾಟ ನಡೆಸುತ್ತಿದ್ದಾರೆ. ಪಾಂಡ್ಯ ತಮ್ಮ ಗೆಳತಿಯೊಂದಿಗೆ ಫೆರಾರಿ ಕಾರಿನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ರಸ್ತುತ ಹಾರ್ದಿಕ್ ಪ್ರದರ್ಶನ

ಐಪಿಎಲ್ 2026 ರಲ್ಲಿ ಹಾರ್ದಿಕ್ ಪಾಂಡ್ಯ ಇದುವರೆಗೆ ಒಟ್ಟು ಎಂಟು ಪಂದ್ಯಗಳನ್ನಾಡಿದ್ದು, 20.8 ಸರಾಸರಿಯಲ್ಲಿ ಕೇವಲ 146 ರನ್ ಗಳಿಸಿದ್ದಾರೆ. ಕೇವಲ ನಾಲ್ಕು ಸಿಕ್ಸರ್‌ಗಳನ್ನು ಮಾತ್ರ ಹೊಡೆದಿದ್ದಾರೆ. ಬೌಲಿಂಗ್​ನಲ್ಲೂ ಪರಿಣಾಮ ಬೀರದ ಪಾಂಡ್ಯ ಎಂಟು ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದು, ಅವರ ಎಕಾನಮಿ ರೇಟ್ ಪ್ರತಿ ಓವರ್‌ಗೆ 11.9 ರನ್‌ಗಳಾಗಿದೆ. ಇದಲ್ಲದೆ, ಅವರ ನಾಯಕತ್ವವನ್ನು ಟೀಕಿಸಲಾಗುತ್ತಿದೆ. ಬುಮ್ರಾ ಅವರಂತಹ ಬೌಲರ್‌ಗಳನ್ನು ಅವರು ಸರಿಯಾಗಿ ಬಳಸಿಕೊಂಡಿಲ್ಲ ಎಂಬ ಆರೋಪಗಳು ಇವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘3 ಇಡಿಯಟ್ಸ್’ ಸೀಕ್ವೆಲ್‌: ಆಮಿರ್ ಖಾನ್ ತಂಡ ಸೇರಲಿರುವ ‘4ನೇ ಇಡಿಯಟ್’ – Kannada News | Vicky Kaushal to join Aamir Khan’s 3 Idiots movie sequel

‘3 ಇಡಿಯಟ್ಸ್’ (3 Idiots) ಬಾಲಿವುಡ್‌ನ (Bollywood) ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಒಂದು. ಕೆಲವು ಸಿನಿಮಾಗಳು ಹಣ ಮಾಡುತ್ತವೆ, ಕೆಲವು ಸಿನಿಮಾಗಳು ಜನ ಮೆಚ್ಚುಗೆ ಗಳಿಸುತ್ತವೆ. ‘3 ಇಡಿಯಟ್ಸ್’ ಎರಡನ್ನೂ ಹೇರಳವಾಗಿ ಪಡೆದ ಸಿನಿಮಾ. ರಾಜ್​ಕುಮಾರ್ ಹಿರಾನಿ ನಿರ್ದೇಶಿಸಿ, ಆಮಿರ್ ಖಾನ್, ಮಾಧವನ್, ಶರ್ಮನ್ ಜೋಶಿ ಒಟ್ಟಿಗೆ ನಟಿಸಿದ್ದ ಈ ಸಿನಿಮಾ ಬ್ಲಾಕ್ ಬಸ್ಟರ್ ಆದ ಜೊತೆಗೆ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿದೆ. ಇತ್ತೀಚೆಗೆ ‘3 ಇಡಿಯಟ್ಸ್’ ಸಿನಿಮಾದ ಸೀಕ್ವೆಲ್ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿವೆ. ಆಮಿರ್ ಖಾನ್ ಖುದ್ದು, ತಾವು ‘3 ಇಡಿಯಟ್ಸ್’ ಸೀಕ್ವೆಲ್ ಮಾಡುವುದಾಗಿ ಹೇಳಿದ್ದಾರೆ. ಇದೀಗ ‘3 ಇಡಿಯಟ್ಸ್’ ತಂಡಕ್ಕೆ ನಾಲ್ನೇ ಇಡಿಯಟ್ ಸೇರ್ಪಡೆ ಆಗಲಿರುವ ಸುದ್ದಿ ಹೊರಬಿದ್ದಿದೆ.

ನಾಲ್ಕು ಜನ ಗೆಳೆಯರ ಕತೆಯನ್ನು ರಾಜ್​ಕುಮಾರ್ ಹಿರಾನಿ ಈ ಬಾರಿ ನಿರ್ದೇಶಿಸಲಿದ್ದು ಈ ಸಿನಿಮಾಕ್ಕೆ ‘4 ಇಡಿಯಟ್ಸ್’ ಎಂದು ಹೆಸರಿಡಲಾಗುತ್ತಿದೆ. ಈ ಚಿತ್ರದಲ್ಲಿ ಅಮೀರ್ ಖಾನ್, ಆರ್. ಮಾಧವನ್ ಮತ್ತು ಶರ್ಮನ್ ಜೋಶಿ ಅವರ ಜೊತೆ ನಾಲ್ಕನೇ ಇಡಿಯಟ್ ಆಗಿ ಬಾಲಿವುಡ್​ನ ಸ್ಟಾರ್ ನಟ ಸೇರಿಕೊಳ್ಳಲಿದ್ದಾರೆ. ಅವರೇ ವಿಕ್ಕಿ ಕೌಶಲ್. ಈ ಪಾತ್ರಕ್ಕಾಗಿ ವಿಕ್ಕಿ ಅವರೊಂದಿಗೆ ರಾಜ್​ಕುಮಾರ್ ಹಿರಾನಿ ಚರ್ಚೆ ನಡೆಸಿದ್ದು, ವಿಕ್ಕಿ ಸಹ ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ.

ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರಿಗೆ ವಿಕ್ಕಿ ಕೌಶಲ್ ಮೆಚ್ಚಿನ ನಟ. ವಿಕ್ಕಿ ಕೌಶಲ್ ಅವರಿಗೆ ಇದು ಮೂರನೇ ರಾಜ್ಕುಮಾರ್ ಹಿರಾನಿ ಸಿನಿಮಾ. ರಾಜ್​ಕುಮಾರ್ ಹಿರಾನಿ ನಿರ್ದೇಶನದ ‘ಸಂಜು’ ಮತ್ತು ‘ಡಂಕಿ’ ಚಿತ್ರಗಳಲ್ಲಿ ವಿಕ್ಕಿ ಕೌಶಲ್ ಕೆಲಸ ಮಾಡಿದ್ದರು. ಹಿರಾನಿ ಅವರ ಶೈಲಿ ಮತ್ತು ಕಥೆ ಹೇಳುವ ವಿಧಾನದ ಮೇಲೆ ಅಪಾರ ನಂಬಿಕೆ ಹೊಂದಿರುವ ವಿಕ್ಕಿ, ಈ ಪ್ರತಿಷ್ಠಿತ ಫ್ರಾಂಚೈಸಿಯ ಭಾಗವಾಗಲು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ:ಬಾಲಿವುಡ್​​ನಲ್ಲಿ ನಡೆಯದ ಸಾಯಿ ಪಲ್ಲವಿ ಕಮಾಲ್; ತಪ್ಪು ಮಾಡಿದ್ರಾ ಆಮಿರ್ ಖಾನ್?

ಪ್ರಸ್ತುತ ರಾಜ್‌ಕುಮಾರ್ ಹಿರಾನಿ ಮತ್ತು ಅವರ ಆಪ್ತ ಲೇಖಕ ಅಭಿಜಾತ್ ಜೋಶಿ ಚಿತ್ರದ ಚಿತ್ರಕಥೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ‘3 ಇಡಿಯಟ್ಸ್’ ಚಿತ್ರದ ಘನತೆಗೆ ತಕ್ಕಂತೆ ಸೀಕ್ವೆಲ್ ಅನ್ನು ರೂಪಿಸಲು ಅವರು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ, ಈ ಚಿತ್ರವು 2027ರ ಆರಂಭದಲ್ಲಿ ಚಿತ್ರೀಕರಣ ಆರಂಭಿಸಲಿದೆ. ನಟ ಆಮೀರ್ ಖಾನ್ ಇತ್ತೀಚೆಗೆ ಈ ಚಿತ್ರದ ಸುದ್ದಿಗಳನ್ನು ಖಚಿತಪಡಿಸಿದ್ದು, ‘4 ಇಡಿಯಟ್ಸ್’ ಸಿನಿಮಾದ ಕಥೆಯು ‘3 ಇಡಿಯಟ್ಸ್’ ಮುಗಿದ ಹತ್ತು ವರ್ಷಗಳ ನಂತರದ ಘಟನೆಗಳನ್ನು ಆಧರಿಸಿರಲಿದೆ ಎಂದು ಸುಳಿವು ನೀಡಿದ್ದಾರೆ. ಪಾತ್ರಗಳ ಜೀವನದಲ್ಲಿ ಆಗಿರುವ ಬದಲಾವಣೆಗಳು ಮತ್ತು ಹೊಸ ಸಂಘರ್ಷಗಳನ್ನು ಈ ಚಿತ್ರದಲ್ಲಿ ತೋರಿಸಲಾಗುವುದು.

ಈ ಚಿತ್ರದ ಕೆಲಸಗಳು ಆರಂಭವಾಗುವ ಮುನ್ನ ವಿಕ್ಕಿ ಕೌಶಲ್ ಅವರು ತಮ್ಮ ಬಹುನಿರೀಕ್ಷಿತ ‘ಮಹಾವತಾರ್’ ಮತ್ತು ‘ಲವ್ ಆಂಡ್ ವಾರ್’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರೆ. ಆಮೀರ್ ಖಾನ್ ಕೂಡ ಈ ಮಧ್ಯೆ ಮತ್ತೊಂದು ಚಿತ್ರವನ್ನು ಮುಗಿಸಲು ಯೋಜಿಸಿದ್ದು, ನಂತರ ಎಲ್ಲರೂ ಒಟ್ಟಾಗಿ ‘4 ಇಡಿಯಟ್ಸ್’ ಚಿತ್ರದ ಸೆಟ್ ಸೇರಿಕೊಳ್ಳಲಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ‘3 ಇಡಿಯಟ್ಸ್’ ಚಿತ್ರದಲ್ಲಿ ಕರೀನಾ ಕಪೂರ್, ಬೊಮನ್ ಇರಾನಿ, ಓಮಿ ವೈದ್ಯ ಮತ್ತು ಮೋನಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈಗ ಹಳೆಯ ತಾರಾಗಣದೊಂದಿಗೆ ಹೊಸದಾಗಿ ವಿಕ್ಕಿ ಕೌಶಲ್ ಸೇರ್ಪಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೆಲಸ ಮಾಡಿತು ದಳಪತಿ ವಿಜಯ್ ಮಾಡಿದ ಆ ಸೀಕ್ರೆಟ್ ಪ್ಲ್ಯಾನ್; ಭರ್ಜರಿ ಗೆಲುವಿಗೆ ಇದೇ ಕಾರಣ – Kannada News | Vijay’s TVK Victory: How Fan Power and Strategic Planning Won Tamil Nadu Elections

ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಮೂಲಕ ಭಾರತೀಯ ರಾಜಕೀಯದಲ್ಲೇ ಹೊಸ ಸಂಚಲನ ಮೂಡಿಸಿದೆ. ಟಿವಿಕೆ ಅಬ್ಬರಕ್ಕೆ ಆಡಳಿತಾರೂಢ ಎಐಎಡಿಎಂಕೆ ಪಕ್ಷವೇ ನೆಲಕಚ್ಚಿದೆ. ಈ ಐತಿಹಾಸಿಕ ಜಯದ ಹಿಂದೆ ವಿಜಯ್ ಅವರ ದಶಕಗಳ ಕಾಲದ ವ್ಯವಸ್ಥಿತ ಸಂಘಟನೆ ಮತ್ತು ಅಭಿಮಾನಿಗಳನ್ನು ಕಾರ್ಯಕರ್ತರನ್ನಾಗಿ ಬದಲಿಸಿದ ಚಾತುರ್ಯ ಅಡಗಿದೆ. ಆ ಬಗ್ಗೆ ಇಲ್ಲಿದೆ ವಿವರ.

1.ವಿಜಯ್ ಗೆಲುವಿನ ತಂತ್ರ ಬಯಲು

2.ಸಹಾಯ ಮಾಡಿತು ಅಭಿಮಾನಿ ಸಂಘಟನೆ 

3. ಚಾಣಾಕ್ಷತೆಯಿಂದ ವಿಜಯ್​ಗೆ ಗೆಲುವು 

ವಿಜಯ್ ಅವರ ರಾಜಕೀಯಕ್ಕೆ ಕಾಲಿಡುವ ಘೋಷಣೆ ಮಾಡಿದ್ದು ಕೆಲ ವರ್ಷಗಳ ಹಿಂದೆ. 2024ರ ಫೆಬ್ರವರಿ 2ರಂದು ಪಕ್ಷ ಘೋಷಣೆ ಮಾಡಿದರು. ಹಲವು ವರ್ಷ ಸೈಕಲ್ ಹೊಡೆದರೂ ಸಿಗದ ಗೆಲುವು ಎರಡೇ ವರ್ಷಗಳಲ್ಲಿ ಸಿಗಲು ಹೇಗೆ ಸಾಧ್ಯ ಎಂಬುದು ಅನೇಕರ ಪ್ರಶ್ನೆ. ಆದರೆ, ಇದರ ಹಿಂದಿನ ಕಥೆ ಬೇರೆಯದೇ ಇದೆ.

ವಿಜಯ್ ಅವರ ದೊಡ್ಡ ಬಲ ಎಂದರೆ ಅಭಿಮಾನಿಗಳು. ಹಲವು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಮಿಂಚಿದ ವಿಜಯ್​​ಗೆ ಹುಚ್ಚು ಅಭಿಮಾನಿಗಳಿದ್ದಾರೆ. ಅವರು ಹೇಳಿದ್ದನ್ನು ಶಿರಸಾ ಪಾಲಿಸುತ್ತಾರೆ. ಇದು ಅವರಿಗೆ ಬಲ ತಂದಿತ್ತು. 2009ರಲ್ಲಿ ಅವರು ಆರಂಭಿಸಿದ ‘ವಿಜಯ್ ಮಕ್ಕಳ ಇಯಕ್ಕಂ’ (VMI) ಫೌಂಡೇಷನ್ ವಿಜಯ್ ಗೆಲುವಿನ ಹಿಂದಿರೋ ದೊಡ್ಡ ಬಲ.

ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದಾಗಲೇ ವಿಜಯ್ ತಮ್ಮ ಅಭಿಮಾನಿಗಳನ್ನು ಕೇವಲ ಸಿನಿಮಾ ಪ್ರಚಾರಕ್ಕೆ ಸೀಮಿತಗೊಳಿಸಲಿಲ್ಲ. ತಮ್ಮ ಫೌಂಡೇಷನ್ ಮೂಲಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿದ್ದರು. ರಕ್ತದಾನ, ಉಚಿತ ಆಹಾರ ವಿತರಣೆ ಮತ್ತು ಶಿಕ್ಷಣಕ್ಕೆ ನೆರವು ನೀಡುವ ಮೂಲಕ ಈ ಸಂಘಟನೆಯು ರಾಜ್ಯದ ಮೂಲೆ ಮೂಲೆಗಳಲ್ಲಿ ಬೇರೂರಿತ್ತು. ವಿಜಯ್ ಕೇವಲ ನಟನಾಗಿ ಮಾತ್ರ ಕಾಣದೆ, ಕಷ್ಟದಲ್ಲಿರುವ ವ್ಯಕ್ತಿಗಳಿಗೆ ನೆರವಾಗಿ ಹಾಗೂ ವಿಜಯ್ ಮಕ್ಕಳ ಇಯಕ್ಕಂ ಮೂಲಕ ಸಹಾಯ ಮಾಡುವ ವ್ಯಕ್ತಿಯಾಗಿ ಕಂಡರು. ಚುನಾವಣೆ ಸಮೀಪಿಸುತ್ತಿದ್ದಂತೆ, ಪ್ರತಿಯೊಂದು ಬೂತ್ ಮಟ್ಟದಲ್ಲೂ ಭದ್ರವಾದ ನೆಟ್‌ವರ್ಕ್ ರೂಪಿಸಿದರು.

ವ್ಯವಸ್ಥಿತ ಪಕ್ಷ ಸಂಘಟನೆ:

ರಾಜಕೀಯ ಪ್ರವೇಶಕ್ಕೂ ಮುನ್ನವೇ ವಿಜಯ್ ಅತ್ಯಂತ ಯೋಜಿತವಾಗಿ ಹೆಜ್ಜೆ ಇಟ್ಟಿದ್ದರು. ಕೆಳಹಂತದ ಕಾರ್ಯಕರ್ತರಿಗೆ ಜವಾಬ್ದಾರಿ ಹಂಚುವುದು, ಯುವಜನತೆಯನ್ನು ಆಕರ್ಷಿಸುವುದು ಮತ್ತು ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಅವರ ಸಂಘಟನಾ ಶಕ್ತಿ ಯಶಸ್ವಿಯಾಯಿತು. ಅವರ ಸಿನಿಮಾ ಇಮೇಜ್ ಅನ್ನು ರಾಜಕೀಯ ಉದ್ದೇಶಗಳಿಗೆ ಪೂರಕವಾಗಿ ಬಳಸಿಕೊಂಡಿದ್ದರು. ಸಿನಿಮಾಗಳ ಮೂಲಕ ಅವರ ರಾಜಕೀಯ ಸಿದ್ಧಾಂತವನ್ನು ಜನರಿಗೆ ತಲುಪಿಸಿದರು.

ಐಷಾರಾಮಿ ಜೀವನ ಮತ್ತು ಸರಳ ನಾಯಕತ್ವ:

ಚೆನ್ನೈನ ಸಮುದ್ರ ತೀರದಲ್ಲಿರುವ ಸುಮಾರು 80 ಕೋಟಿ ರೂಪಾಯಿ ಬೆಲೆಯ, ಹಾಲಿವುಡ್ ನಟ ಟಾಮ್ ಕ್ರ್ಯೂಸ್ ಅವರ ಮನೆಯಿಂದ ಸ್ಫೂರ್ತಿ ಪಡೆದ ಐಷಾರಾಮಿ ಬಂಗಲೆಯಲ್ಲಿ ವಿಜಯ್ ವಾಸವಿದ್ದರೂ, ಅಭಿಮಾನಿಗಳ ಪಾಲಿಗೆ ಅವರು ಎಂದಿಗೂ ಕೈಗೆಟುಕುವ ನಾಯಕನಾಗಿದ್ದರು. ಈ ನಿಕಟ ಸಂಪರ್ಕವೇ ಅವರ ಪಕ್ಷಕ್ಕೆ ಚುನಾವಣಾ ಸುನಾಮಿ ಎಬ್ಬಿಸಲು ಬೇಕಾದ ಶಕ್ತಿಯನ್ನು ನೀಡಿತು.

ಇದನ್ನೂ ಓದಿ: ವಿಜಯ್ ಗೆಲುವಿಗೆ ಕೇವಲ ‘ಸ್ಟಾರ್ ಗಿರಿ’ ಕಾರಣವೇ? ನಿಜ ಏನೆಂದು ಇಲ್ಲಿ ತಿಳಿಯಿರಿ

ಸಿನಿಮಾ ನಟನೊಬ್ಬ ಕೇವಲ ವರ್ಚಸ್ಸಿನಿಂದ ಮಾತ್ರವಲ್ಲದೆ, ಬಲಿಷ್ಠವಾದ ಸಂಘಟನಾ ಚಾಣಾಕ್ಷತೆಯಿಂದ ಹೇಗೆ ಅಧಿಕಾರ ಹಿಡಿಯಬಹುದು ಎಂಬುದನ್ನು ವಿಜಯ್ ಸಾಬೀತುಪಡಿಸಿದ್ದಾರೆ. ದಶಕಗಳ ಕಾಲದ ಅಭಿಮಾನಿಗಳ ಪ್ರೀತಿಯನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ಅವರ ಕಾರ್ಯತಂತ್ರ ಸಂಪೂರ್ಣ ಯಶಸ್ವಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Vibhuti Benefits: ಮಕ್ಕಳ ಹಣೆಗೆ ವಿಭೂತಿ, ಕುಂಕುಮ, ಗಂಧ ಹಚ್ಚುವುದರ ಹಿಂದಿನ ರಹಸ್ಯ ಮತ್ತು ಪ್ರಯೋಜನ – Kannada News | The Significance and Benefits of Applying Vibhuti, Kumkum, and Gandha on Childrens Foreheads

ಮಕ್ಕಳಿಗೆ ವಿಭೂತಿ, ಕುಂಕುಮ, ಅಥವಾ ಗಂಧ ಹಚ್ಚುವುದರ ಹಿಂದಿರುವ ರಹಸ್ಯಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಬೆಳಗ್ಗೆ 10 ಗಂಟೆಯ ತನಕದ ಸಮಯವು ಅತ್ಯಂತ ಪ್ರಶಾಂತ ಮತ್ತು ಅದ್ಭುತವಾದ ಕಾಲವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮನೆಯಲ್ಲಿನ ಮಕ್ಕಳು ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಹಣೆಗೆ ಪವಿತ್ರ ತಿಲಕವನ್ನು ಧರಿಸುವುದು ಸಂಪ್ರದಾಯ.

ಮಕ್ಕಳಿಗೆ, ಅದರಲ್ಲೂ ಪುಟ್ಟ ಹೆಣ್ಣುಮಕ್ಕಳು ಅಥವಾ ಗಂಡುಮಕ್ಕಳು, ಸ್ನಾನವಾದ ನಂತರ ಅಥವಾ ಬೆಳಗ್ಗೆ ಎದ್ದ ತಕ್ಷಣ ಗಂಧ, ಕುಂಕುಮ, ವಿಭೂತಿ ಅಥವಾ ಅಕ್ಷತೆ ಹಚ್ಚುವುದು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಮಠಮಾನ್ಯಗಳಲ್ಲಿ ಮತ್ತು ಗುರುಕುಲಗಳಲ್ಲಿ ಮಕ್ಕಳು ಸ್ನಾನದ ನಂತರ ವಿಭೂತಿ ಹಚ್ಚಿಕೊಂಡು ಪ್ರಾರ್ಥನೆ ಮತ್ತು ವಿದ್ಯಾಭ್ಯಾಸದಲ್ಲಿ ತೊಡಗುವುದು ಸಾಮಾನ್ಯ ಅಭ್ಯಾಸ. ಮನೆಯು ಕೂಡ ಒಂದು ಮಂತ್ರಾಲಯ, ದೇವಾಲಯ ಅಥವಾ ಭಗವಂತನ ಆವಾಸ ಸ್ಥಾನ ಎಂಬ ನಂಬಿಕೆ ನಮ್ಮಲ್ಲಿದೆ. ಹಾಗಾಗಿ, ಮನೆಯಲ್ಲಿ ದೇವರ ಫೋಟೋ ಅಥವಾ ವಿಗ್ರಹದ ಎದುರು ನಿಲ್ಲಿಸಿ ಮಕ್ಕಳಿಗೆ ತಿಲಕವನ್ನು ಹಚ್ಚುವುದು ಪೋಷಕರ ಜವಾಬ್ದಾರಿಯಾಗಿದೆ.

ಹಣೆಯ ಮಧ್ಯಭಾಗದಲ್ಲಿ, ಹುಬ್ಬುಗಳ ನಡುವೆ ಆಜ್ಞಾ ಚಕ್ರ ಎಂಬ ಶಕ್ತಿ ಕೇಂದ್ರವಿದೆ. ಮಕ್ಕಳಿಗೆ ವಿಭೂತಿ, ಕುಂಕುಮ ಅಥವಾ ಗಂಧ ಹಚ್ಚುವುದರಿಂದ ಈ ಆಜ್ಞಾ ಚಕ್ರವು ಜಾಗೃತಗೊಳ್ಳುತ್ತದೆ. ಇದರಿಂದ ಮಕ್ಕಳ ಜ್ಞಾಪಕ ಶಕ್ತಿ (ಮೆಮರಿ ಪವರ್) ಹೆಚ್ಚುತ್ತದೆ. ತಾಳ್ಮೆ ಮತ್ತು ಸಹನೆ ಗುಣಗಳು ವೃದ್ಧಿಯಾಗುತ್ತವೆ. ಅಲ್ಲದೆ, ಅವರ ಆಲೋಚನಾ ಶಕ್ತಿ ಕೂಡ ವಿಕಸಿತವಾಗುತ್ತದೆ. ಇಂದಿನ ದಿನಗಳಲ್ಲಿ ಅನೇಕ ಪೋಷಕರು ತಮ್ಮ ಮಕ್ಕಳು ಓದಿನಲ್ಲಿ ಹಿಂದೆ ಬೀಳುತ್ತಿದ್ದಾರೆ, ನೆನಪಿನ ಶಕ್ತಿ ಕಡಿಮೆಯಾಗಿದೆ, ಅಥವಾ ಕೋಪ ಮತ್ತು ಆವೇಶ ಹೆಚ್ಚಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ಮೊಬೈಲ್ ಬಳಕೆಯ ಅತಿಯಾದ ರೂಢಿ. ಈ ಸಂಪ್ರದಾಯವನ್ನು ಅನುಸರಿಸುವುದರಿಂದ ಮೊಬೈಲ್ ನೋಡುವ ಅಭ್ಯಾಸದಿಂದ ಮಕ್ಕಳನ್ನು ವಿಮುಖಗೊಳಿಸಿ ಅವರಲ್ಲಿ ಏಕಾಗ್ರತೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ತಿಲಕಕ್ಕೆ ಬಳಸುವ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ವಿಶಿಷ್ಟ ಪ್ರಯೋಜನಗಳಿವೆ. ಶ್ರೀಗಂಧವು ತಂಪನ್ನು ನೀಡುತ್ತದೆ ಮತ್ತು ನರಮಂಡಲವನ್ನು ಗಟ್ಟಿಗೊಳಿಸುತ್ತದೆ. ಗಂಧವನ್ನು ಹಚ್ಚಿದ ಮಕ್ಕಳ ಮುಖವು ನಿರ್ಮಲವಾಗಿ, ಆಕರ್ಷಕವಾಗಿ ಕಾಣುತ್ತದೆ. ವಿಭೂತಿಯನ್ನು ಹಚ್ಚುವುದರಿಂದ ಚರ್ಮದ ಕಾಯಿಲೆಗಳು ದೂರಾಗಿ, ಚರ್ಮದಲ್ಲಿನ ತೇವಾಂಶವನ್ನು ಹೀರಿಕೊಂಡು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಅರಿಶಿಣ ಮತ್ತು ಸುಣ್ಣದಿಂದ ತಯಾರಿಸಿದ ಕುಂಕುಮವು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಆಲೋಚನಾ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿ ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ.

ತಾಯಿ ಮನೆಯಲ್ಲಿ ಕುಂಕುಮ ಅಥವಾ ವಿಭೂತಿ ಹಚ್ಚಿಕೊಂಡಾಗ ಸಾಕ್ಷಾತ್ ದೇವಿಯಂತೆ ಕಾಣಿಸುತ್ತಾಳೆ ಎಂಬ ನಂಬಿಕೆಯಿದೆ. ಮನೆಯಲ್ಲಿ ಗೃಹಿಣಿಯ ಉಪಸ್ಥಿತಿ ಮತ್ತು ಅವರು ಧರಿಸುವ ಈ ಪವಿತ್ರ ಚಿಹ್ನೆಗಳು ಮನೆಯ ವಾತಾವರಣಕ್ಕೆ ಶುಭವನ್ನು ತರುತ್ತವೆ. ಈ ಅಭ್ಯಾಸಗಳು ವಿನಯ, ತಾಳ್ಮೆ ಮತ್ತು ಸಹನೆಯಂತಹ ಗುಣಗಳನ್ನು ಮಕ್ಕಳಲ್ಲಿ ಬೆಳೆಸುತ್ತವೆ. ಇವುಗಳು ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಮಕ್ಕಳ ಆಯುಸ್ಸು ಮತ್ತು ಶ್ರೇಯಸ್ಸಿಗೆ ಮೂಲಭೂತ ಅಂಶಗಳಾಗಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version