ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ವಿಜಯ್ ಕನಸು ಭಗ್ನ; ಶಾಕ್ ಕೊಟ್ಟ ರಾಜ್ಯಪಾಲರು – Kannada News | TVK Chief Vijays Oath taking Ceremony In Doubt Governor Not Convinced with majority Numbers

ಚೆನ್ನೈ, ಮೇ 6: ಹೊಸ ಪಕ್ಷವಾದ ಟಿವಿಕೆ ಕಟ್ಟಿ, ಮೊದಲ ಬಾರಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) ಸ್ಪರ್ಧಿಸಿದ್ದ ನಟ ಜೋಸೆಫ್ ವಿಜಯ್ (Vijay) ಯಾರೂ ನಿರೀಕ್ಷೆಯೂ ಮಾಡಿರದ ರೀತಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ತಮಿಳುನಾಡಿನ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಟಿವಿಕೆಗೆ ಸರ್ಕಾರ ರಚನೆಗೆ ಬೇಕಾದ ಬಹುಮತವಾದ 118 ಸ್ಥಾನಗಳು ಸಿಕ್ಕಿರಲಿಲ್ಲ. ಹೀಗಾಗಿ, ಅನಿವಾರ್ಯವಾಗಿ ವಿಜಯ್ ಬೇರೆ ಪಕ್ಷಗಳ ಬೆಂಬಲ ಕೋರಿದ್ದರು. ಕಾಂಗ್ರೆಸ್​​ನ ಬೆಂಬಲದಿಂದ ವಿಜಯ್ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿದ್ದರು. ಆದರೆ, ತಮಿಳುನಾಡಿನ ರಾಜ್ಯಪಾಲರು ವಿಜಯ್ ನೀಡಿದ ಬಹುಮತದ ಲೆಕ್ಕಾಚಾರದಿಂದ ತೃಪ್ತರಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಕಾರಣದಿಂದ ವಿಜಯ್ ನಾಳೆ ಪ್ರಮಾಣವಚನ ಸ್ವೀಕರಿಸುವುದು ಅನುಮಾನ ಎನ್ನಲಾಗುತ್ತಿದೆ.


ಸುದ್ದಿ ಅಪ್​ಡೇಟ್ ಆಗುತ್ತಿದೆ….

Published On – 6:30 pm, Wed, 6 May 26

Source link

ಕಾಗ್ನಿಜೆಂಟ್​ನಲ್ಲಿ 15,000 ಮಂದಿ ಲೇ ಆಫ್ ಸಾಧ್ಯತೆ; ಫ್ರೆಷ್​ವರ್ಕ್ಸ್​ನಲ್ಲಿ ಶೇ. 11 ಮಂದಿಗೆ ಕಾದಿದೆ ಶಾಕ್ – Kannada News | IT Job Crisis: AI Automation Leads to Massive Layoffs at Cognizant, Freshworks

ಕಾಗ್ನಿಜೆಂಟ್ ಲೇಆಫ್Image Credit source: AI/Mediaforge/TV9

ಬೆಂಗಳೂರು/ನವದೆಹಲಿ, ಮೇ 6: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಜನರೇಟಿವ್ ಎಐ (GenAI) ತಂತ್ರಜ್ಞಾನಗಳ ತ್ವರಿತ ಬೆಳವಣಿಗೆಯು ಜಾಗತಿಕ ಮಾಹಿತಿ ತಂತ್ರಜ್ಞಾನ (IT) ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಇದರ ನೇರ ಪರಿಣಾಮವಾಗಿ, ಪ್ರಮುಖ ಐಟಿ ದೈತ್ಯ ಸಂಸ್ಥೆಯಾದ ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ (Cognizant) ಸಂಸ್ಥೆ ತನ್ನ ಒಟ್ಟು ಉದ್ಯೋಗಿಗಳಲ್ಲಿ ಬರೋಬ್ಬರಿ 12,000 ದಿಂದ 15,000 ಉದ್ಯೋಗಗಳನ್ನು ಕಡಿತಗೊಳಿಸಲು ಗಂಭೀರ ಚಿಂತನೆ ನಡೆಸಿದೆ. ಅತ್ಯಂತ ಕಳವಳಕಾರಿ ಸಂಗತಿಯೆಂದರೆ, ಈ ಲೇ-ಆಫ್‌ (Job Cuts) ಪ್ರಕ್ರಿಯೆಯಲ್ಲಿ ಸಿಂಹಪಾಲು, ಅಂದರೆ ಬಹುಪಾಲು ಉದ್ಯೋಗ ನಷ್ಟವು ಭಾರತದಲ್ಲಿರುವ ಕಾಗ್ನಿಜೆಂಟ್ ಕಚೇರಿಗಳಲ್ಲೇ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

ಇನ್ನೊಂದೆಡೆ, ಭಾರತದ ಸಾಸ್ (SaaS) ಸಾಫ್ಟ್​ವೇರ್ ಸಂಸ್ಥೆ ಫ್ರೆಷ್​ವರ್ಕ್ಸ್ (FreshWorks) ಶೇ. 11ಕ್ಕೂ ಹೆಚ್ಚು ಉದ್ಯೋಗಿಗಳನ್ನು ಲೇ ಆಫ್ ಮಾಡಲು ಯೋಜಿಸಿದೆ. ಅಂದರೆ, ಈ ಕಂಪನಿಯ 500ಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಈ ವಿಚಾರವನ್ನು ಫ್ರೆಷ್​ವರ್ಕ್ಸ್ ಸಿಇಒ ಡೆನಿಸ್ ವುಡ್​ಸೈಡ್ (Denis Woodside) ಅವರೇ ಖಚಿತಪಡಿಸಿದ್ದಾರೆ. ಕಂಪನಿಯ ಹೆಚ್ಚಿನ ಕೋಡಿಂಗ್ ಕೆಲಸವನ್ನು ಎಐನಿಂದಲೇ ಮಾಡಲಾಗುತ್ತಿರುವುದರಿಂದ ಮಾನವ ಸಂಪನ್ಮೂಲಗಳನ್ನು ಕಡಿತಗೊಳಿಸಲಾಗುತ್ತಿದೆ.

ಕಾಗ್ನಿಜೆಂಟ್​ನಲ್ಲಿ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣಗಳೇನು?

ಎಐ ಮತ್ತು ಆಟೊಮೇಷನ್ ಹೂಡಿಕೆ: ಸಾಂಪ್ರದಾಯಿಕ ಐಟಿ ಕೆಲಸಗಳನ್ನು ಈಗ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳು ಅತ್ಯಂತ ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಮಾಡುತ್ತಿವೆ. ಹೀಗಾಗಿ ಕಂಪನಿಯು ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಎಐ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಇದನ್ನೂ ಓದಿ: ಅನುವಾದಿನಿ ಎಐ ಮ್ಯಾಥ್​ಜೋರೋ ಮ್ಯಾಜಿಕ್; ಕುಣಿಕುಣಿಯುತಾ ಕಲಿಯಿರಿ ಗಣಿತ; 22 ಭಾಷೆಗಳಲ್ಲಿ ನಲಿ-ಕಲಿ

ವೆಚ್ಚ ಮರುಹಂಚಿಕೆ (Cost Realignment): ಕಂಪನಿಯು ತನ್ನ ಸಾಂಪ್ರದಾಯಿಕ ಸೇವೆಗಳ ವಿಭಾಗದಲ್ಲಾಗುವ ವೆಚ್ಚವನ್ನು ಉಳಿಸಿ, ಆ ಹಣವನ್ನು ಉನ್ನತ ಮಟ್ಟದ ಎಐ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಡಿಜಿಟಲ್ ಮೂಲಸೌಕರ್ಯಗಳ ಅಭಿವೃದ್ಧಿಗೆ ಮರುಹೂಡಿಕೆ ಮಾಡಲು ಈ ಕಠಿಣ ನಿರ್ಧಾರಕ್ಕೆ ಮುಂದಾಗಿದೆ.

ಬದಲಾಗುತ್ತಿರುವ ಜಾಗತಿಕ ಬೇಡಿಕೆ: ಜಾಗತಿಕ ಮಾರುಕಟ್ಟೆಯಲ್ಲಿ ಗ್ರಾಹಕರು ಈಗ ಸಾಂಪ್ರದಾಯಿಕ ಸಾಫ್ಟ್‌ವೇರ್ ಕೋಡಿಂಗ್ ಮತ್ತು ನಿರ್ವಹಣೆಗಿಂತ ಹೆಚ್ಚಾಗಿ ಎಐ ಆಧಾರಿತ ಪರಿಹಾರಗಳನ್ನು (AI-driven solutions) ಬಯಸುತ್ತಿದ್ದಾರೆ.

ಭಾರತದ ಮೇಲಾಗುವ ಪರಿಣಾಮ ಎಷ್ಟು?

ಕಾಗ್ನಿಜೆಂಟ್ ಸಂಸ್ಥೆಯು ಜಾಗತಿಕವಾಗಿ ಸುಮಾರು 3,40,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ ಶೇಕಡಾ 70 ಕ್ಕಿಂತ ಹೆಚ್ಚು ಅಂದರೆ ಸುಮಾರು 2,50,000 ಕ್ಕೂ ಅಧಿಕ ಉದ್ಯೋಗಿಗಳು ಭಾರತದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಕಂಪನಿಯು ಕೈಗೊಳ್ಳಲಿರುವ ಉದ್ಯೋಗ ಕಡಿತವು ಪ್ರಮುಖವಾಗಿ ಮಧ್ಯಮ ಹಂತದ (Middle-level) ವ್ಯವಸ್ಥಾಪಕರು, ಸಾಂಪ್ರದಾಯಿಕ ಅಪ್ಲಿಕೇಶನ್ ಡೆವಲಪ್‌ಮೆಂಟ್ ಮತ್ತು ನಿರ್ವಹಣಾ ವಿಭಾಗಗಳಲ್ಲಿರುವ ಉದ್ಯೋಗಿಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಭಾರತದಲ್ಲಿ ಈ ವಿಭಾಗಗಳಲ್ಲಿ ದೊಡ್ಡ ಸಂಖ್ಯೆಯ ಉದ್ಯೋಗಿಗಳು ಇರುವುದರಿಂದ, ಪ್ರಸ್ತಾವಿತ 15,000 ಉದ್ಯೋಗ ಕಡಿತದಲ್ಲಿ ಬಹುತೇಕ ಉದ್ಯೋಗ ನಷ್ಟ ಭಾರತೀಯ ಐಟಿ ವೃತ್ತಿಪರರಿಗೇ ಆಗಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ಕಂಪನಿಯ ಮುಂದಿನ ಹೆಜ್ಜೆ ಮತ್ತು ಮರುತರಬೇತಿ (Reskilling)

ಉದ್ಯೋಗ ಕಡಿತದ ಆತಂಕದ ನಡುವೆಯೂ, ಕಾಗ್ನಿಜೆಂಟ್ ತನ್ನ ಪ್ರಸ್ತುತ ಉದ್ಯೋಗಿಗಳಿಗೆ ಹೊಸ ತಂತ್ರಜ್ಞಾನದ ಮರುತರಬೇತಿ (Reskilling) ನೀಡಲು ಮುಂದಾಗಿದೆ. ಕಂಪನಿಯು ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಅಗತ್ಯವಿರುವ ಡೇಟಾ ಸೈನ್ಸ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಜನರೇಟಿವ್ ಎಐ ಕ್ಷೇತ್ರಗಳಲ್ಲಿ ಉದ್ಯೋಗಿಗಳನ್ನು ಸಜ್ಜುಗೊಳಿಸಲು ದೊಡ್ಡ ಮಟ್ಟದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ, ಈ ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳದ ಉದ್ಯೋಗಿಗಳಿಗೆ ಮುಂಬರುವ ದಿನಗಳಲ್ಲಿ ಕಠಿಣ ಸವಾಲು ಎದುರಾಗಲಿದೆ.

ಇದನ್ನೂ ಓದಿ: ಕ್ಲೋಡ್​ನ ಈ ಎಐ ಮಾಡಲ್​ಗೆ ಬೆಚ್ಚಿಬಿದ್ದ ಬ್ಯಾಂಕುಗಳು; ಉನ್ನತ ಮಟ್ಟದ ಸಭೆ ಕರೆದ ನಿರ್ಮಲಾ ಸೀತಾರಾಮನ್

ಐಟಿ ವಲಯದಲ್ಲಿ ಮೂಡಿರುವ ಆತಂಕ

ಕಾಗ್ನಿಜೆಂಟ್ ಸಂಸ್ಥೆಯ ಈ ಬೃಹತ್ ಉದ್ಯೋಗ ಕಡಿತದ ನಿರ್ಧಾರವು ಕೇವಲ ಒಂದು ಕಂಪನಿಗೆ ಸೀಮಿತವಾಗಿರದೆ, ಇಡೀ ಭಾರತೀಯ ಐಟಿ ವಲಯಕ್ಕೆ ಒಂದು ಮುನ್ಸೂಚನೆಯಾಗಿದೆ. ಮುಂಬರುವ ದಿನಗಳಲ್ಲಿ ಇತರ ಪ್ರಮುಖ ಐಟಿ ಕಂಪನಿಗಳೂ ಸಹ ಎಐ ತಂತ್ರಜ್ಞಾನದ ಅಳವಡಿಕೆಯಿಂದಾಗಿ ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಮರುಪರಿಶೀಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಇದು ಐಟಿ ಉದ್ಯೋಗಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಮುಂಬೈ ತಂಡದಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯ ಗೆಳತಿಯೊಂದಿಗೆ ಸುತ್ತಾಟ – Kannada News | Hardik Pandya Out? MI Captaincy Crisis Ahead of RCB Clash IPL 2026

ಐಪಿಎಲ್ 2026 (IPL 2026) ರಲ್ಲಿ ಮುಂಬೈ ಇಂಡಿಯನ್ಸ್ ತಂಡವು, ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ವಿರುದ್ಧ ರಾಯ್‌ಪುರದಲ್ಲಿ ತಮ್ಮ ಮುಂದಿನ ಪಂದ್ಯವನ್ನು ಆಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಭಾಗವಹಿಸುವ ಸಾಧ್ಯತೆ ಕಡಿಮೆ ಇದ್ದು, ಇದಕ್ಕೆ ಪೂರಕವಾಗಿ ಅವರು ಮುಂಬೈ ಇಂಡಿಯನ್ಸ್ ತಂಡದೊಂದಿಗೆ ರಾಯ್‌ಪುರಕ್ಕೆ ಪ್ರಯಾಣಿಸಿಲ್ಲ ಎಂದು ವರದಿಯಾಗಿದೆ. ಆರ್​​ಸಿಬಿ ವಿರುದ್ಧದ ಈ ಪಂದ್ಯ ಮೇ 10 ರಂದು ನಡೆಯಲಿದ್ದು, ಮುಂಬೈ ತಂಡವು ಮೇ 6 ರ ಮಧ್ಯಾಹ್ನ ರಾಯ್‌ಪುರಕ್ಕೆ ತೆರಳಿದೆ. ಆದರೆ ನಾಯಕ ಹಾರ್ದಿಕ್ ಪಾಂಡ್ಯ ತಂಡದೊಂದಿಗೆ ಕಾಣಿಸಿಕೊಂಡಿಲ್ಲ. ಪಾಂಡ್ಯ ಶೀಘ್ರದಲ್ಲೇ ತಂಡವನ್ನು ಸೇರುವ ಯಾವುದೇ ಸೂಚನೆ ಇನ್ನೂ ಇಲ್ಲ.

ಹಾರ್ದಿಕ್ ಪಾಂಡ್ಯ ಆಟ ಮುಗಿಯಿತೇ?

ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕತ್ವ ವಹಿಸಿದ್ದರು. ತಂಡವು ಏಕಪಕ್ಷೀಯವಾಗಿ ಆ ಪಂದ್ಯವನ್ನು ಗೆದ್ದುಕೊಂಡಿತು. ಪಂದ್ಯದ ಸಮಯದಲ್ಲಿ ಪಾಂಡ್ಯ ಅಲಭ್ಯತೆಯ ಬಗ್ಗೆ ಮಾತನಾಡಿದ್ದ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಗಾಯದಿಂದಾಗಿ ಆಡುತ್ತಿಲ್ಲ ಎಂದು ಹೇಳಿದ್ದರು. ಆದಾಗ್ಯೂ, ಪಾಂಡ್ಯ ಅವರ ಅಲಭ್ಯತೆಯನ್ನು ಬೇರೆ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಪಾಂಡ್ಯ ಅವರ ನಾಯಕತ್ವ ಮತ್ತು ಪ್ರದರ್ಶನದ ಬಗ್ಗೆ ತಂಡದ ಆಡಳಿತ ಮಂಡಳಿ ಅತೃಪ್ತವಾಗಿದ್ದು, ಅದಕ್ಕಾಗಿಯೇ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂಬ ಊಹಾಪೋಹಗಳಿವೆ.

ಗಾಯದ ಕಾರಣದಿಂದಾಗಿ ಐಪಿಎಲ್​ನಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯ, ತಂಡದಿಂದ ಹೊರಗಿದ್ದು, ತಮ್ಮ ಗೆಳತಿ ಮಹಿಕಾ ಅವರೊಂದಿಗೆ ಸುತ್ತಾಟ ನಡೆಸುತ್ತಿದ್ದಾರೆ. ಪಾಂಡ್ಯ ತಮ್ಮ ಗೆಳತಿಯೊಂದಿಗೆ ಫೆರಾರಿ ಕಾರಿನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ರಸ್ತುತ ಹಾರ್ದಿಕ್ ಪ್ರದರ್ಶನ

ಐಪಿಎಲ್ 2026 ರಲ್ಲಿ ಹಾರ್ದಿಕ್ ಪಾಂಡ್ಯ ಇದುವರೆಗೆ ಒಟ್ಟು ಎಂಟು ಪಂದ್ಯಗಳನ್ನಾಡಿದ್ದು, 20.8 ಸರಾಸರಿಯಲ್ಲಿ ಕೇವಲ 146 ರನ್ ಗಳಿಸಿದ್ದಾರೆ. ಕೇವಲ ನಾಲ್ಕು ಸಿಕ್ಸರ್‌ಗಳನ್ನು ಮಾತ್ರ ಹೊಡೆದಿದ್ದಾರೆ. ಬೌಲಿಂಗ್​ನಲ್ಲೂ ಪರಿಣಾಮ ಬೀರದ ಪಾಂಡ್ಯ ಎಂಟು ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದು, ಅವರ ಎಕಾನಮಿ ರೇಟ್ ಪ್ರತಿ ಓವರ್‌ಗೆ 11.9 ರನ್‌ಗಳಾಗಿದೆ. ಇದಲ್ಲದೆ, ಅವರ ನಾಯಕತ್ವವನ್ನು ಟೀಕಿಸಲಾಗುತ್ತಿದೆ. ಬುಮ್ರಾ ಅವರಂತಹ ಬೌಲರ್‌ಗಳನ್ನು ಅವರು ಸರಿಯಾಗಿ ಬಳಸಿಕೊಂಡಿಲ್ಲ ಎಂಬ ಆರೋಪಗಳು ಇವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘3 ಇಡಿಯಟ್ಸ್’ ಸೀಕ್ವೆಲ್‌: ಆಮಿರ್ ಖಾನ್ ತಂಡ ಸೇರಲಿರುವ ‘4ನೇ ಇಡಿಯಟ್’ – Kannada News | Vicky Kaushal to join Aamir Khan’s 3 Idiots movie sequel

‘3 ಇಡಿಯಟ್ಸ್’ (3 Idiots) ಬಾಲಿವುಡ್‌ನ (Bollywood) ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಒಂದು. ಕೆಲವು ಸಿನಿಮಾಗಳು ಹಣ ಮಾಡುತ್ತವೆ, ಕೆಲವು ಸಿನಿಮಾಗಳು ಜನ ಮೆಚ್ಚುಗೆ ಗಳಿಸುತ್ತವೆ. ‘3 ಇಡಿಯಟ್ಸ್’ ಎರಡನ್ನೂ ಹೇರಳವಾಗಿ ಪಡೆದ ಸಿನಿಮಾ. ರಾಜ್​ಕುಮಾರ್ ಹಿರಾನಿ ನಿರ್ದೇಶಿಸಿ, ಆಮಿರ್ ಖಾನ್, ಮಾಧವನ್, ಶರ್ಮನ್ ಜೋಶಿ ಒಟ್ಟಿಗೆ ನಟಿಸಿದ್ದ ಈ ಸಿನಿಮಾ ಬ್ಲಾಕ್ ಬಸ್ಟರ್ ಆದ ಜೊತೆಗೆ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿದೆ. ಇತ್ತೀಚೆಗೆ ‘3 ಇಡಿಯಟ್ಸ್’ ಸಿನಿಮಾದ ಸೀಕ್ವೆಲ್ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿವೆ. ಆಮಿರ್ ಖಾನ್ ಖುದ್ದು, ತಾವು ‘3 ಇಡಿಯಟ್ಸ್’ ಸೀಕ್ವೆಲ್ ಮಾಡುವುದಾಗಿ ಹೇಳಿದ್ದಾರೆ. ಇದೀಗ ‘3 ಇಡಿಯಟ್ಸ್’ ತಂಡಕ್ಕೆ ನಾಲ್ನೇ ಇಡಿಯಟ್ ಸೇರ್ಪಡೆ ಆಗಲಿರುವ ಸುದ್ದಿ ಹೊರಬಿದ್ದಿದೆ.

ನಾಲ್ಕು ಜನ ಗೆಳೆಯರ ಕತೆಯನ್ನು ರಾಜ್​ಕುಮಾರ್ ಹಿರಾನಿ ಈ ಬಾರಿ ನಿರ್ದೇಶಿಸಲಿದ್ದು ಈ ಸಿನಿಮಾಕ್ಕೆ ‘4 ಇಡಿಯಟ್ಸ್’ ಎಂದು ಹೆಸರಿಡಲಾಗುತ್ತಿದೆ. ಈ ಚಿತ್ರದಲ್ಲಿ ಅಮೀರ್ ಖಾನ್, ಆರ್. ಮಾಧವನ್ ಮತ್ತು ಶರ್ಮನ್ ಜೋಶಿ ಅವರ ಜೊತೆ ನಾಲ್ಕನೇ ಇಡಿಯಟ್ ಆಗಿ ಬಾಲಿವುಡ್​ನ ಸ್ಟಾರ್ ನಟ ಸೇರಿಕೊಳ್ಳಲಿದ್ದಾರೆ. ಅವರೇ ವಿಕ್ಕಿ ಕೌಶಲ್. ಈ ಪಾತ್ರಕ್ಕಾಗಿ ವಿಕ್ಕಿ ಅವರೊಂದಿಗೆ ರಾಜ್​ಕುಮಾರ್ ಹಿರಾನಿ ಚರ್ಚೆ ನಡೆಸಿದ್ದು, ವಿಕ್ಕಿ ಸಹ ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ.

ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರಿಗೆ ವಿಕ್ಕಿ ಕೌಶಲ್ ಮೆಚ್ಚಿನ ನಟ. ವಿಕ್ಕಿ ಕೌಶಲ್ ಅವರಿಗೆ ಇದು ಮೂರನೇ ರಾಜ್ಕುಮಾರ್ ಹಿರಾನಿ ಸಿನಿಮಾ. ರಾಜ್​ಕುಮಾರ್ ಹಿರಾನಿ ನಿರ್ದೇಶನದ ‘ಸಂಜು’ ಮತ್ತು ‘ಡಂಕಿ’ ಚಿತ್ರಗಳಲ್ಲಿ ವಿಕ್ಕಿ ಕೌಶಲ್ ಕೆಲಸ ಮಾಡಿದ್ದರು. ಹಿರಾನಿ ಅವರ ಶೈಲಿ ಮತ್ತು ಕಥೆ ಹೇಳುವ ವಿಧಾನದ ಮೇಲೆ ಅಪಾರ ನಂಬಿಕೆ ಹೊಂದಿರುವ ವಿಕ್ಕಿ, ಈ ಪ್ರತಿಷ್ಠಿತ ಫ್ರಾಂಚೈಸಿಯ ಭಾಗವಾಗಲು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ:ಬಾಲಿವುಡ್​​ನಲ್ಲಿ ನಡೆಯದ ಸಾಯಿ ಪಲ್ಲವಿ ಕಮಾಲ್; ತಪ್ಪು ಮಾಡಿದ್ರಾ ಆಮಿರ್ ಖಾನ್?

ಪ್ರಸ್ತುತ ರಾಜ್‌ಕುಮಾರ್ ಹಿರಾನಿ ಮತ್ತು ಅವರ ಆಪ್ತ ಲೇಖಕ ಅಭಿಜಾತ್ ಜೋಶಿ ಚಿತ್ರದ ಚಿತ್ರಕಥೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ‘3 ಇಡಿಯಟ್ಸ್’ ಚಿತ್ರದ ಘನತೆಗೆ ತಕ್ಕಂತೆ ಸೀಕ್ವೆಲ್ ಅನ್ನು ರೂಪಿಸಲು ಅವರು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ, ಈ ಚಿತ್ರವು 2027ರ ಆರಂಭದಲ್ಲಿ ಚಿತ್ರೀಕರಣ ಆರಂಭಿಸಲಿದೆ. ನಟ ಆಮೀರ್ ಖಾನ್ ಇತ್ತೀಚೆಗೆ ಈ ಚಿತ್ರದ ಸುದ್ದಿಗಳನ್ನು ಖಚಿತಪಡಿಸಿದ್ದು, ‘4 ಇಡಿಯಟ್ಸ್’ ಸಿನಿಮಾದ ಕಥೆಯು ‘3 ಇಡಿಯಟ್ಸ್’ ಮುಗಿದ ಹತ್ತು ವರ್ಷಗಳ ನಂತರದ ಘಟನೆಗಳನ್ನು ಆಧರಿಸಿರಲಿದೆ ಎಂದು ಸುಳಿವು ನೀಡಿದ್ದಾರೆ. ಪಾತ್ರಗಳ ಜೀವನದಲ್ಲಿ ಆಗಿರುವ ಬದಲಾವಣೆಗಳು ಮತ್ತು ಹೊಸ ಸಂಘರ್ಷಗಳನ್ನು ಈ ಚಿತ್ರದಲ್ಲಿ ತೋರಿಸಲಾಗುವುದು.

ಈ ಚಿತ್ರದ ಕೆಲಸಗಳು ಆರಂಭವಾಗುವ ಮುನ್ನ ವಿಕ್ಕಿ ಕೌಶಲ್ ಅವರು ತಮ್ಮ ಬಹುನಿರೀಕ್ಷಿತ ‘ಮಹಾವತಾರ್’ ಮತ್ತು ‘ಲವ್ ಆಂಡ್ ವಾರ್’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರೆ. ಆಮೀರ್ ಖಾನ್ ಕೂಡ ಈ ಮಧ್ಯೆ ಮತ್ತೊಂದು ಚಿತ್ರವನ್ನು ಮುಗಿಸಲು ಯೋಜಿಸಿದ್ದು, ನಂತರ ಎಲ್ಲರೂ ಒಟ್ಟಾಗಿ ‘4 ಇಡಿಯಟ್ಸ್’ ಚಿತ್ರದ ಸೆಟ್ ಸೇರಿಕೊಳ್ಳಲಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ‘3 ಇಡಿಯಟ್ಸ್’ ಚಿತ್ರದಲ್ಲಿ ಕರೀನಾ ಕಪೂರ್, ಬೊಮನ್ ಇರಾನಿ, ಓಮಿ ವೈದ್ಯ ಮತ್ತು ಮೋನಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈಗ ಹಳೆಯ ತಾರಾಗಣದೊಂದಿಗೆ ಹೊಸದಾಗಿ ವಿಕ್ಕಿ ಕೌಶಲ್ ಸೇರ್ಪಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೆಲಸ ಮಾಡಿತು ದಳಪತಿ ವಿಜಯ್ ಮಾಡಿದ ಆ ಸೀಕ್ರೆಟ್ ಪ್ಲ್ಯಾನ್; ಭರ್ಜರಿ ಗೆಲುವಿಗೆ ಇದೇ ಕಾರಣ – Kannada News | Vijay’s TVK Victory: How Fan Power and Strategic Planning Won Tamil Nadu Elections

ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಮೂಲಕ ಭಾರತೀಯ ರಾಜಕೀಯದಲ್ಲೇ ಹೊಸ ಸಂಚಲನ ಮೂಡಿಸಿದೆ. ಟಿವಿಕೆ ಅಬ್ಬರಕ್ಕೆ ಆಡಳಿತಾರೂಢ ಎಐಎಡಿಎಂಕೆ ಪಕ್ಷವೇ ನೆಲಕಚ್ಚಿದೆ. ಈ ಐತಿಹಾಸಿಕ ಜಯದ ಹಿಂದೆ ವಿಜಯ್ ಅವರ ದಶಕಗಳ ಕಾಲದ ವ್ಯವಸ್ಥಿತ ಸಂಘಟನೆ ಮತ್ತು ಅಭಿಮಾನಿಗಳನ್ನು ಕಾರ್ಯಕರ್ತರನ್ನಾಗಿ ಬದಲಿಸಿದ ಚಾತುರ್ಯ ಅಡಗಿದೆ. ಆ ಬಗ್ಗೆ ಇಲ್ಲಿದೆ ವಿವರ.

1.ವಿಜಯ್ ಗೆಲುವಿನ ತಂತ್ರ ಬಯಲು

2.ಸಹಾಯ ಮಾಡಿತು ಅಭಿಮಾನಿ ಸಂಘಟನೆ 

3. ಚಾಣಾಕ್ಷತೆಯಿಂದ ವಿಜಯ್​ಗೆ ಗೆಲುವು 

ವಿಜಯ್ ಅವರ ರಾಜಕೀಯಕ್ಕೆ ಕಾಲಿಡುವ ಘೋಷಣೆ ಮಾಡಿದ್ದು ಕೆಲ ವರ್ಷಗಳ ಹಿಂದೆ. 2024ರ ಫೆಬ್ರವರಿ 2ರಂದು ಪಕ್ಷ ಘೋಷಣೆ ಮಾಡಿದರು. ಹಲವು ವರ್ಷ ಸೈಕಲ್ ಹೊಡೆದರೂ ಸಿಗದ ಗೆಲುವು ಎರಡೇ ವರ್ಷಗಳಲ್ಲಿ ಸಿಗಲು ಹೇಗೆ ಸಾಧ್ಯ ಎಂಬುದು ಅನೇಕರ ಪ್ರಶ್ನೆ. ಆದರೆ, ಇದರ ಹಿಂದಿನ ಕಥೆ ಬೇರೆಯದೇ ಇದೆ.

ವಿಜಯ್ ಅವರ ದೊಡ್ಡ ಬಲ ಎಂದರೆ ಅಭಿಮಾನಿಗಳು. ಹಲವು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಮಿಂಚಿದ ವಿಜಯ್​​ಗೆ ಹುಚ್ಚು ಅಭಿಮಾನಿಗಳಿದ್ದಾರೆ. ಅವರು ಹೇಳಿದ್ದನ್ನು ಶಿರಸಾ ಪಾಲಿಸುತ್ತಾರೆ. ಇದು ಅವರಿಗೆ ಬಲ ತಂದಿತ್ತು. 2009ರಲ್ಲಿ ಅವರು ಆರಂಭಿಸಿದ ‘ವಿಜಯ್ ಮಕ್ಕಳ ಇಯಕ್ಕಂ’ (VMI) ಫೌಂಡೇಷನ್ ವಿಜಯ್ ಗೆಲುವಿನ ಹಿಂದಿರೋ ದೊಡ್ಡ ಬಲ.

ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದಾಗಲೇ ವಿಜಯ್ ತಮ್ಮ ಅಭಿಮಾನಿಗಳನ್ನು ಕೇವಲ ಸಿನಿಮಾ ಪ್ರಚಾರಕ್ಕೆ ಸೀಮಿತಗೊಳಿಸಲಿಲ್ಲ. ತಮ್ಮ ಫೌಂಡೇಷನ್ ಮೂಲಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿದ್ದರು. ರಕ್ತದಾನ, ಉಚಿತ ಆಹಾರ ವಿತರಣೆ ಮತ್ತು ಶಿಕ್ಷಣಕ್ಕೆ ನೆರವು ನೀಡುವ ಮೂಲಕ ಈ ಸಂಘಟನೆಯು ರಾಜ್ಯದ ಮೂಲೆ ಮೂಲೆಗಳಲ್ಲಿ ಬೇರೂರಿತ್ತು. ವಿಜಯ್ ಕೇವಲ ನಟನಾಗಿ ಮಾತ್ರ ಕಾಣದೆ, ಕಷ್ಟದಲ್ಲಿರುವ ವ್ಯಕ್ತಿಗಳಿಗೆ ನೆರವಾಗಿ ಹಾಗೂ ವಿಜಯ್ ಮಕ್ಕಳ ಇಯಕ್ಕಂ ಮೂಲಕ ಸಹಾಯ ಮಾಡುವ ವ್ಯಕ್ತಿಯಾಗಿ ಕಂಡರು. ಚುನಾವಣೆ ಸಮೀಪಿಸುತ್ತಿದ್ದಂತೆ, ಪ್ರತಿಯೊಂದು ಬೂತ್ ಮಟ್ಟದಲ್ಲೂ ಭದ್ರವಾದ ನೆಟ್‌ವರ್ಕ್ ರೂಪಿಸಿದರು.

ವ್ಯವಸ್ಥಿತ ಪಕ್ಷ ಸಂಘಟನೆ:

ರಾಜಕೀಯ ಪ್ರವೇಶಕ್ಕೂ ಮುನ್ನವೇ ವಿಜಯ್ ಅತ್ಯಂತ ಯೋಜಿತವಾಗಿ ಹೆಜ್ಜೆ ಇಟ್ಟಿದ್ದರು. ಕೆಳಹಂತದ ಕಾರ್ಯಕರ್ತರಿಗೆ ಜವಾಬ್ದಾರಿ ಹಂಚುವುದು, ಯುವಜನತೆಯನ್ನು ಆಕರ್ಷಿಸುವುದು ಮತ್ತು ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಅವರ ಸಂಘಟನಾ ಶಕ್ತಿ ಯಶಸ್ವಿಯಾಯಿತು. ಅವರ ಸಿನಿಮಾ ಇಮೇಜ್ ಅನ್ನು ರಾಜಕೀಯ ಉದ್ದೇಶಗಳಿಗೆ ಪೂರಕವಾಗಿ ಬಳಸಿಕೊಂಡಿದ್ದರು. ಸಿನಿಮಾಗಳ ಮೂಲಕ ಅವರ ರಾಜಕೀಯ ಸಿದ್ಧಾಂತವನ್ನು ಜನರಿಗೆ ತಲುಪಿಸಿದರು.

ಐಷಾರಾಮಿ ಜೀವನ ಮತ್ತು ಸರಳ ನಾಯಕತ್ವ:

ಚೆನ್ನೈನ ಸಮುದ್ರ ತೀರದಲ್ಲಿರುವ ಸುಮಾರು 80 ಕೋಟಿ ರೂಪಾಯಿ ಬೆಲೆಯ, ಹಾಲಿವುಡ್ ನಟ ಟಾಮ್ ಕ್ರ್ಯೂಸ್ ಅವರ ಮನೆಯಿಂದ ಸ್ಫೂರ್ತಿ ಪಡೆದ ಐಷಾರಾಮಿ ಬಂಗಲೆಯಲ್ಲಿ ವಿಜಯ್ ವಾಸವಿದ್ದರೂ, ಅಭಿಮಾನಿಗಳ ಪಾಲಿಗೆ ಅವರು ಎಂದಿಗೂ ಕೈಗೆಟುಕುವ ನಾಯಕನಾಗಿದ್ದರು. ಈ ನಿಕಟ ಸಂಪರ್ಕವೇ ಅವರ ಪಕ್ಷಕ್ಕೆ ಚುನಾವಣಾ ಸುನಾಮಿ ಎಬ್ಬಿಸಲು ಬೇಕಾದ ಶಕ್ತಿಯನ್ನು ನೀಡಿತು.

ಇದನ್ನೂ ಓದಿ: ವಿಜಯ್ ಗೆಲುವಿಗೆ ಕೇವಲ ‘ಸ್ಟಾರ್ ಗಿರಿ’ ಕಾರಣವೇ? ನಿಜ ಏನೆಂದು ಇಲ್ಲಿ ತಿಳಿಯಿರಿ

ಸಿನಿಮಾ ನಟನೊಬ್ಬ ಕೇವಲ ವರ್ಚಸ್ಸಿನಿಂದ ಮಾತ್ರವಲ್ಲದೆ, ಬಲಿಷ್ಠವಾದ ಸಂಘಟನಾ ಚಾಣಾಕ್ಷತೆಯಿಂದ ಹೇಗೆ ಅಧಿಕಾರ ಹಿಡಿಯಬಹುದು ಎಂಬುದನ್ನು ವಿಜಯ್ ಸಾಬೀತುಪಡಿಸಿದ್ದಾರೆ. ದಶಕಗಳ ಕಾಲದ ಅಭಿಮಾನಿಗಳ ಪ್ರೀತಿಯನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ಅವರ ಕಾರ್ಯತಂತ್ರ ಸಂಪೂರ್ಣ ಯಶಸ್ವಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Vibhuti Benefits: ಮಕ್ಕಳ ಹಣೆಗೆ ವಿಭೂತಿ, ಕುಂಕುಮ, ಗಂಧ ಹಚ್ಚುವುದರ ಹಿಂದಿನ ರಹಸ್ಯ ಮತ್ತು ಪ್ರಯೋಜನ – Kannada News | The Significance and Benefits of Applying Vibhuti, Kumkum, and Gandha on Childrens Foreheads

ಮಕ್ಕಳಿಗೆ ವಿಭೂತಿ, ಕುಂಕುಮ, ಅಥವಾ ಗಂಧ ಹಚ್ಚುವುದರ ಹಿಂದಿರುವ ರಹಸ್ಯಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಬೆಳಗ್ಗೆ 10 ಗಂಟೆಯ ತನಕದ ಸಮಯವು ಅತ್ಯಂತ ಪ್ರಶಾಂತ ಮತ್ತು ಅದ್ಭುತವಾದ ಕಾಲವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮನೆಯಲ್ಲಿನ ಮಕ್ಕಳು ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಹಣೆಗೆ ಪವಿತ್ರ ತಿಲಕವನ್ನು ಧರಿಸುವುದು ಸಂಪ್ರದಾಯ.

ಮಕ್ಕಳಿಗೆ, ಅದರಲ್ಲೂ ಪುಟ್ಟ ಹೆಣ್ಣುಮಕ್ಕಳು ಅಥವಾ ಗಂಡುಮಕ್ಕಳು, ಸ್ನಾನವಾದ ನಂತರ ಅಥವಾ ಬೆಳಗ್ಗೆ ಎದ್ದ ತಕ್ಷಣ ಗಂಧ, ಕುಂಕುಮ, ವಿಭೂತಿ ಅಥವಾ ಅಕ್ಷತೆ ಹಚ್ಚುವುದು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಮಠಮಾನ್ಯಗಳಲ್ಲಿ ಮತ್ತು ಗುರುಕುಲಗಳಲ್ಲಿ ಮಕ್ಕಳು ಸ್ನಾನದ ನಂತರ ವಿಭೂತಿ ಹಚ್ಚಿಕೊಂಡು ಪ್ರಾರ್ಥನೆ ಮತ್ತು ವಿದ್ಯಾಭ್ಯಾಸದಲ್ಲಿ ತೊಡಗುವುದು ಸಾಮಾನ್ಯ ಅಭ್ಯಾಸ. ಮನೆಯು ಕೂಡ ಒಂದು ಮಂತ್ರಾಲಯ, ದೇವಾಲಯ ಅಥವಾ ಭಗವಂತನ ಆವಾಸ ಸ್ಥಾನ ಎಂಬ ನಂಬಿಕೆ ನಮ್ಮಲ್ಲಿದೆ. ಹಾಗಾಗಿ, ಮನೆಯಲ್ಲಿ ದೇವರ ಫೋಟೋ ಅಥವಾ ವಿಗ್ರಹದ ಎದುರು ನಿಲ್ಲಿಸಿ ಮಕ್ಕಳಿಗೆ ತಿಲಕವನ್ನು ಹಚ್ಚುವುದು ಪೋಷಕರ ಜವಾಬ್ದಾರಿಯಾಗಿದೆ.

ಹಣೆಯ ಮಧ್ಯಭಾಗದಲ್ಲಿ, ಹುಬ್ಬುಗಳ ನಡುವೆ ಆಜ್ಞಾ ಚಕ್ರ ಎಂಬ ಶಕ್ತಿ ಕೇಂದ್ರವಿದೆ. ಮಕ್ಕಳಿಗೆ ವಿಭೂತಿ, ಕುಂಕುಮ ಅಥವಾ ಗಂಧ ಹಚ್ಚುವುದರಿಂದ ಈ ಆಜ್ಞಾ ಚಕ್ರವು ಜಾಗೃತಗೊಳ್ಳುತ್ತದೆ. ಇದರಿಂದ ಮಕ್ಕಳ ಜ್ಞಾಪಕ ಶಕ್ತಿ (ಮೆಮರಿ ಪವರ್) ಹೆಚ್ಚುತ್ತದೆ. ತಾಳ್ಮೆ ಮತ್ತು ಸಹನೆ ಗುಣಗಳು ವೃದ್ಧಿಯಾಗುತ್ತವೆ. ಅಲ್ಲದೆ, ಅವರ ಆಲೋಚನಾ ಶಕ್ತಿ ಕೂಡ ವಿಕಸಿತವಾಗುತ್ತದೆ. ಇಂದಿನ ದಿನಗಳಲ್ಲಿ ಅನೇಕ ಪೋಷಕರು ತಮ್ಮ ಮಕ್ಕಳು ಓದಿನಲ್ಲಿ ಹಿಂದೆ ಬೀಳುತ್ತಿದ್ದಾರೆ, ನೆನಪಿನ ಶಕ್ತಿ ಕಡಿಮೆಯಾಗಿದೆ, ಅಥವಾ ಕೋಪ ಮತ್ತು ಆವೇಶ ಹೆಚ್ಚಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ಮೊಬೈಲ್ ಬಳಕೆಯ ಅತಿಯಾದ ರೂಢಿ. ಈ ಸಂಪ್ರದಾಯವನ್ನು ಅನುಸರಿಸುವುದರಿಂದ ಮೊಬೈಲ್ ನೋಡುವ ಅಭ್ಯಾಸದಿಂದ ಮಕ್ಕಳನ್ನು ವಿಮುಖಗೊಳಿಸಿ ಅವರಲ್ಲಿ ಏಕಾಗ್ರತೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ತಿಲಕಕ್ಕೆ ಬಳಸುವ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ವಿಶಿಷ್ಟ ಪ್ರಯೋಜನಗಳಿವೆ. ಶ್ರೀಗಂಧವು ತಂಪನ್ನು ನೀಡುತ್ತದೆ ಮತ್ತು ನರಮಂಡಲವನ್ನು ಗಟ್ಟಿಗೊಳಿಸುತ್ತದೆ. ಗಂಧವನ್ನು ಹಚ್ಚಿದ ಮಕ್ಕಳ ಮುಖವು ನಿರ್ಮಲವಾಗಿ, ಆಕರ್ಷಕವಾಗಿ ಕಾಣುತ್ತದೆ. ವಿಭೂತಿಯನ್ನು ಹಚ್ಚುವುದರಿಂದ ಚರ್ಮದ ಕಾಯಿಲೆಗಳು ದೂರಾಗಿ, ಚರ್ಮದಲ್ಲಿನ ತೇವಾಂಶವನ್ನು ಹೀರಿಕೊಂಡು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಅರಿಶಿಣ ಮತ್ತು ಸುಣ್ಣದಿಂದ ತಯಾರಿಸಿದ ಕುಂಕುಮವು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಆಲೋಚನಾ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿ ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ.

ತಾಯಿ ಮನೆಯಲ್ಲಿ ಕುಂಕುಮ ಅಥವಾ ವಿಭೂತಿ ಹಚ್ಚಿಕೊಂಡಾಗ ಸಾಕ್ಷಾತ್ ದೇವಿಯಂತೆ ಕಾಣಿಸುತ್ತಾಳೆ ಎಂಬ ನಂಬಿಕೆಯಿದೆ. ಮನೆಯಲ್ಲಿ ಗೃಹಿಣಿಯ ಉಪಸ್ಥಿತಿ ಮತ್ತು ಅವರು ಧರಿಸುವ ಈ ಪವಿತ್ರ ಚಿಹ್ನೆಗಳು ಮನೆಯ ವಾತಾವರಣಕ್ಕೆ ಶುಭವನ್ನು ತರುತ್ತವೆ. ಈ ಅಭ್ಯಾಸಗಳು ವಿನಯ, ತಾಳ್ಮೆ ಮತ್ತು ಸಹನೆಯಂತಹ ಗುಣಗಳನ್ನು ಮಕ್ಕಳಲ್ಲಿ ಬೆಳೆಸುತ್ತವೆ. ಇವುಗಳು ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಮಕ್ಕಳ ಆಯುಸ್ಸು ಮತ್ತು ಶ್ರೇಯಸ್ಸಿಗೆ ಮೂಲಭೂತ ಅಂಶಗಳಾಗಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅನುವಾದಿನಿ ಎಐ ಮ್ಯಾಥ್​ಜೋರೋ ಮ್ಯಾಜಿಕ್; ಕುಣಿಕುಣಿಯುತಾ ಕಲಿಯಿರಿ ಗಣಿತ; 22 ಭಾಷೆಗಳಲ್ಲಿ ನಲಿ-ಕಲಿ – Kannada News | Anuvadini AI & MathZoro Transform Math Learning in 22 Indian Languages with Gamification

ಮ್ಯಾಥ್‌ಜೋರೋImage Credit source: Education Ministry X account

ನವದೆಹಲಿ, ಮೇ 6: ಭಾರತದ ಕೋಟ್ಯಂತರ ಶಾಲಾ ವಿದ್ಯಾರ್ಥಿಗಳಲ್ಲಿ ಗಣಿತ (Mathematics) ಎಂದರೆ ಒಂದು ರೀತಿಯ ಭಯ ಅಥವಾ ಆತಂಕ ಇದ್ದೇ ಇರುತ್ತದೆ. ಈ ಗಣಿತದ ಭಯವನ್ನು ಸಂಪೂರ್ಣವಾಗಿ ಹೋಗಲಾಡಿಸಿ, ವಿಷಯವನ್ನು ಆಟದಂತೆ ಸುಲಭವಾಗಿಸಲು ಕೇಂದ್ರ ಶಿಕ್ಷಣ ಸಚಿವಾಲಯದ AICTE ಅಡಿಯಲ್ಲಿನ ‘ಅನುವಾದಿನಿ ಎಐ’ (Anuvadini AI) ಮತ್ತು ದೇಶದ ಮೊದಲ ಗೇಮ್-ಆಧಾರಿತ ಗಣಿತ ಕಲಿಕಾ ವೇದಿಕೆಯಾದ ‘ಮ್ಯಾಥ್‌ಜೋರೋ’ (MathZoro) ಸಂಸ್ಥೆಗಳು ಐತಿಹಾಸಿಕ ಒಪ್ಪಂದವನ್ನು ಮಾಡಿಕೊಂಡಿವೆ.

ದೆಹಲಿಯ AICTE ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅನುವಾದಿನಿ ಎಐ ಸಂಸ್ಥೆಯ ಸಿಇಒ ಮತ್ತು AICTE ಮುಖ್ಯ ಸಮನ್ವಯ ಅಧಿಕಾರಿ ಡಾ. ಬುದ್ಧ ಚಂದ್ರಶೇಖರ್ ಅವರು ಈ ಮಹತ್ವದ ಸಹಭಾಗಿತ್ವವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಭಾಷೆ ಇನ್ನು ಅಡ್ಡಿಯಲ್ಲ – 22 ಭಾಷೆಗಳಲ್ಲಿ ಕಲಿಕೆ

ಈ ಸಹಭಾಗಿತ್ವದ ಅತಿ ದೊಡ್ಡ ವಿಶೇಷತೆಯೆಂದರೆ, ವಿದ್ಯಾರ್ಥಿಗಳಿಗೆ ಭಾಷೆ ಎಂಬುದು ಗಣಿತ ಕಲಿಯಲು ಇನ್ನು ಮುಂದೆ ಅಡ್ಡಿಯಾಗುವುದಿಲ್ಲ. ಅನುವಾದಿನಿ ಎಐನ ಶಕ್ತಿಶಾಲಿ ತಂತ್ರಜ್ಞಾನದ ನೆರವೇರಿಕೆಯಿಂದಾಗಿ, ಮ್ಯಾಥ್‌ಜೋರೋ ಪ್ಲಾಟ್​ಫಾರ್ಮ್ ದೇಶದ ಎಲ್ಲಾ 22 ಅಧಿಕೃತ ಭಾರತೀಯ ಭಾಷೆಗಳಲ್ಲಿ (ಕನ್ನಡ ಸೇರಿದಂತೆ) ಲಭ್ಯವಿರಲಿದೆ. ವಿದ್ಯಾರ್ಥಿಗಳು ತಮ್ಮದೇ ಮಾತೃಭಾಷೆಯಲ್ಲಿ ಗಣಿತದ ಸೂತ್ರ ಹಾಗೂ ಪರಿಕಲ್ಪನೆಗಳನ್ನು ಅತ್ಯಂತ ಸರಳವಾಗಿ ಅರ್ಥಮಾಡಿಕೊಳ್ಳಲು ಇದು ನೆರವಾಗಲಿದೆ.

ಇದನ್ನೂ ಓದಿ: ಕ್ಲೋಡ್​ನ ಈ ಎಐ ಮಾಡಲ್​ಗೆ ಬೆಚ್ಚಿಬಿದ್ದ ಬ್ಯಾಂಕುಗಳು; ಉನ್ನತ ಮಟ್ಟದ ಸಭೆ ಕರೆದ ನಿರ್ಮಲಾ ಸೀತಾರಾಮನ್

ಆಟದ ಮೂಲಕ ಗಣಿತದ ಪಾಠ (Gamified Learning)

ಗಣಿತವನ್ನು ಕೇವಲ ಬಾಯಿಪಾಠ (Rote Learning) ಮಾಡುವುದರ ಬದಲಾಗಿ, ಡಿಜಿಟಲ್ ಆಟಗಳ ಮೂಲಕ ಕಲಿಯುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಸಿದ್ಧಪಡಿಸಲಾಗಿದ್ದು, ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ದೃಶ್ಯ ಪ್ರಯಾಣದ ಮೂಲಕ ವಿಭಿನ್ನ ಥೀಮ್ ವಲಯಗಳನ್ನು ದಾಟುತ್ತಾ ಗಣಿತ ಕಲಿಯಬಹುದು:

  • ಅಲ್ಜೀಬ್ರಾ ಐಲ್ಯಾಂಡ್ (ಬೀಜಗಣಿತ ದ್ವೀಪ)
  • ಜಿಯೋಮೆಟ್ರಿ ಐಲ್ಯಾಂಡ್ (ರೇಖಾಗಣಿತ ದ್ವೀಪ)
  • ಟ್ರಿಗನೋಮೆಟ್ರಿ ಐಲ್ಯಾಂಡ್ (ತ್ರಿಕೋನಮಿತಿ ದ್ವೀಪ)
  • ಪ್ರಾಬಬಿಲಿಟಿ ಐಲ್ಯಾಂಡ್ (ಸಂಭವನೀಯತೆ ದ್ವೀಪ)

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬುನಾದಿ

ಮ್ಯಾಥ್‌ಜೋರೋ ಮೂಲಕ 6 ರಿಂದ 10ನೇ ತರಗತಿಯಲ್ಲಿ ಗಣಿತದ ಭದ್ರ ಬುನಾದಿ (Foundation) ಪಡೆದುಕೊಳ್ಳುವ ವಿದ್ಯಾರ್ಥಿಗಳು, ಮುಂದಿನ ದಿನಗಳಲ್ಲಿ ಕಾಗ್ನಿಜೆಂಟ್ ಹಾಗೂ ಅನುವಾದಿನಿ ಎಐನ ‘ಅನುವಾದಿನಿ ಪರೀಕ್ಷಾ’ ಪ್ಲಾಟ್​​ಫಾರ್ಮ್ ಮೂಲಕ ಐಐಟಿ-ಜೀ (IIT-JEE) ಮತ್ತು ನೀಟ್ (NEET) ನಂತಹ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಮ್ಮದೇ ಸ್ವಂತ ಭಾಷೆಯಲ್ಲಿ ಉಚಿತವಾಗಿ ಅಥವಾ ಸುಲಭವಾಗಿ ಸಿದ್ಧರಾಗಬಹುದು.

ಶಿಕ್ಷಕರಿಗೂ ವರದಾನ – ಪ್ರಶ್ನೆ ಪತ್ರಿಕೆ ಸಿದ್ಧತೆ ಸುಲಭ

ಈ ಪ್ಲಾಟ್‌ಫಾರ್ಮ್ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಕರಿಗೂ ಸಹಕಾರಿಯಾಗಿದೆ. ಶಿಕ್ಷಕರು ಕೇವಲ ಕೆಲವೇ ಸೆಕೆಂಡುಗಳಲ್ಲಿ ತಮಗೆ ಬೇಕಾದ ಅಧ್ಯಾಯದ (Chapter) ಮೇಲೆ, ತಮಗೆ ಬೇಕಾದ ಯಾವುದೇ ಭಾರತೀಯ ಭಾಷೆಯಲ್ಲಿ ಆಟೋಮೇಟೆಡ್ ಪ್ರಶ್ನೆ ಪತ್ರಿಕೆಗಳನ್ನು (Automated Question Papers) ಸೃಷ್ಟಿಸಿಕೊಳ್ಳುವ ಅತ್ಯಾಧುನಿಕ ಸೌಲಭ್ಯವನ್ನು ಇದು ಒಳಗೊಂಡಿದೆ.

ಇದನ್ನೂ ಓದಿ: ಏರ್​ಲೈನ್ಸ್, ಎಂಎಸ್​ಎಂಇಗಳಿಗೆ ಬೆಂಬಲಿಸುವ ಇಸಿಎಲ್​ಜಿಎಸ್ 5.0 ಸ್ಕೀಮ್​ಗೆ ಅನುಮೋದನೆ

ರಾಷ್ಟ್ರೀಯ ಶಿಕ್ಷಣ ನೀತಿಗೆ (NEP 2020) ಪೂರಕ

ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಹಾಗೂ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಬೇಕು ಎಂಬ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ನಿಯಮಗಳಿಗೆ ಈ ಸಹಭಾಗಿತ್ವವು ಸಂಪೂರ್ಣವಾಗಿ ಪೂರಕವಾಗಿದೆ. ಇಂಟರ್ನೆಟ್ ಸಂಪರ್ಕ ಕಡಿಮೆ ಇರುವ ಗ್ರಾಮೀಣ ಭಾಗಗಳಲ್ಲೂ ಅನುವಾದಿನಿ ಎಐನ ‘ಚುಟುಕಿ 2.0’ (Chutki 2.0) ನಂತಹ ಆಫ್‌ಲೈನ್ ಪರಿಕರಗಳ ಮೂಲಕ ಈ ತಂತ್ರಜ್ಞಾನವನ್ನು ತಲುಪಿಸಲು ಯೋಜನೆ ರೂಪಿಸಲಾಗಿದೆ ಎಂದು ಮ್ಯಾಥ್‌ಜೋರೋ ಸಂಸ್ಥೆಯ ಸಂಸ್ಥಾಪಕ ರಾಮದೇವು ರಾಮಕುಮಾರ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಮೂವರು ಹಿರಿಯ IPS, ನಾಲ್ವರು IAS ಅಧಿಕಾರಿಗಳ ವರ್ಗಾವಣೆ: ಯಾರು ಎಲ್ಲಿಗೆ? ಇಲ್ಲಿದೆ ವಿವರ – Kannada News | Four IAS And 3 IPS Officer Transferred By Karnataka Governmnet, here Is List

ಬೆಂಗಳೂರು, (ಮೇ 06): ಕರ್ನಾಟಕ ಸರ್ಕಾರ, (Karnataka Governmnet)  ಐಎಎಸ್‌ ಹಾಗೂ ಐಪಿಎಸ್ ಅಧಿಕಾರಿಗಳ ವರ್ಗಾವಣೆ (IAS And IPS Officers Transffer) ಮಾಡಿ ಆದೇಶ ಹೊರಡಿಸಿದೆ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ 4 ಐಎಎಸ್‌ ಮತ್ತು ಮೂವರು ಐಪಿಎಸ್ ಹಿರಿಯ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಪ್ರಮುಖವಾಗಿ ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಹಿರಿಯ ಐಪಿಎಸ್​ ಅಧಿಕಾರಿಗಳಾದ ಚೇತನ್ ಸಿಂಗ್ ರಾಥೋಡ್, ಸಂದೀಪ್ ಪಾಟೀಲ್ ಮತ್ತು ಅನುಪಮ್ ಅಗರ್ವಾಲ್ ಅವರನ್ನ ವರ್ಗಾವಣೆ ಮಾಡಲಾಗಿದೆ.

  • ಕರ್ನಾಟಕದಲ್ಲಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ವರ್ಗಾವಣೆ
  • ಕಲಬುರಗಿ ಹಾಗೂ ರಾಯಚೂರು ಡಿಜಿ ವರ್ಗಾವಣೆ ರಾಜ್ಯ ಸರ್ಕಾರ ಆದೇಶ
  • ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಸಹ ವರ್ಗಾವಣೆ

ಕಲಬುರಗಿಗೆ ಹೊಸ ಜಿಲ್ಲಾಧಿಕಾರಿ

ಕಲಬುರಗಿ ಜಿಲ್ಲಾಧಿಕಾರಿಯಾಗಿ ಫೌಝಿಯಾ ತರನ್ನುಮ್ ಅವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆಯ ಆಯಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಇನ್ನು ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದ ಮುಹಮ್ಮದ್ ಇಕ್ರಾಮುಲ್ಲಾ ಶರೀಫ್ ಅವರನ್ನು ಕಲಬುರಗಿಗೆ ಹೊಸ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಅಭಾವ: ಬಂಕ್‌ಗಳ ಮುಂದೆ ವಾಹನ ಸವಾರರ ಸಾಲು, ತೀವ್ರಗೊಂಡ ಇಂಧನ ಆತಂಕ

ರಾಯಚೂರು ಡಿಸಿ ವರ್ಗಾವಣೆ

ರಾಯಚೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ (ಡಿಸಿ) 2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಪೂವಿತಾ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ರಾಯಚೂರಿನ ಹಾಲಿ ಜಿಲ್ಲಾಧಿಕಾರಿಯಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ನಿತಿಶ್ ಕೆ ಅವರನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿದೆ. ಆದರೆ, ಅವರಿಗೆ ಮುಂದಿನ ಹುದ್ದೆ ಮತ್ತು ಸ್ಥಳದ ಕುರಿತು ಸರ್ಕಾರದಿಂದ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಮುಂದಿನ ಆದೇಶದವರೆಗೆ ಅವರು ಸ್ಥಳ ನಿರೀಕ್ಷೆಯಲ್ಲಿದ್ದಾರೆ.

ಆರ್ಥಿಕ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ-3 ಡಾ.ಗೋಪಾಲ್ ಕೃಷ್ಣ ಬಿ. ಅವರನ್ನು ಆರ್ಥಿಕ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ(ಬಜೆಟ್ ಮತ್ತು ಸಂಪನ್ಮೂಲ)ಯಾಗಿ ಹಾಗೂ ಹಾವೇರಿ ಜಿಲ್ಲಾ ಪಂಚಾಯತಿಯ ಸಿಇಒ ರುಚಿ ಬಂದಲ್ ಅವರನ್ನು ಆರ್ಥಿಕ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ-3 ಎಂದು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

14 ತಿಂಗಳಲ್ಲೇ ಹಾವೇರಿ ಸಿಇಒ ಟ್ರಾನ್ಸ್​ಫರ್

ಹಾವೇರಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡು 14 ತಿಂಗಳಿನಲ್ಲಿಯೇ ರುಚಿ ಬಿಂದಲ್ ಅವರನ್ನು ಏಕಾಏಕಿ, ಬೆಂಗಳೂರಿನ ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ–3 ಆಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮೂವರು ಹಿರಿಯ IPS ಅಧಿಕಾರಿಗಳ ವರ್ಗಾವಣೆ

  1. ಸಂದೀಪ್ ಪಾಟೀಲ್, IGP, ಉತ್ತರ ವಲಯ, ಬೆಳಗಾವಿ.
  2. ಚೇತನ್ ಸಿಂಗ್ ರಾಥೋಡ್, IGP, ಸಿಐಡಿ
  3. ಅನುಪಮ್ ಅಗರವಾಲ್, IGP, KSRPಗೆ ವರ್ಗಾವಣೆ

ಕರ್ನಾಟಕದ ಮತ್ತಷ್ಟು  ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಳೆ ವೇಳೆ 15 ಕಿಮೀ ಪ್ರಯಾಣಿಸಲು ಬೆಂಗಳೂರಲ್ಲಿ ಆಟೋ ದರ 1,200 ರೂ.!: ಈ ಹಣದಲ್ಲಿ ಏರ್‌ಪೋರ್ಟ್‌ಗೇ ಹೋಗಬಹುದು ಎಂದ ನೆಟ್ಟಿಗರು – Kannada News | Bengaluru Auto Fare Shock: Woman Pays 1,200 for 15 km Ride During Rain

15 ಕಿಮೀ ಪ್ರಯಾಣಿಸಲು ಬೆಂಗಳೂರಲ್ಲಿ ಅಟೋ ದರ 1,200 ರೂ.!

ಬೆಂಗಳೂರು, ಮೇ 06: ನಗರದಲ್ಲಿ ಮಳೆ ಬಂತೆಂದರೆ ಸಾಕು ರಸ್ತೆ ತುಂಬ ನೀರು ನಿಂತು ಹಳ್ಳಗಳಂತೆ ಕಾಣತೊಡಗುತ್ತವೆ. ವಾಹನ ಸವಾರರು ಸಂಚರಿಸೋದೇ ಕಷ್ಟ ಎಂಬ ಸ್ಥಿತಿ ನಿರ್ಮಾಣ ಆಗೋದು ಮಾಮೂಲು ಎಂಬಂತಾಗಿದೆ. ಈ ನಡುವೆ ಬಸ್​​, ಮೆಟೋ ರೈಲುಗಳಲ್ಲಿ ತೆರಳಬೇಕಿರುವ ಕಾರಣಕ್ಕೋ ಅಥವಾ ಮನೆಗೆ ಹೋಗಲೆಂದೋ ಆಟೋ ಅಥವಾ ಕ್ಯಾಬ್​​ಗಳನ್ನು ಬುಕ್​​ ಮಾಡಿದರೆ ಅವು ಸಿಗೋದು ಕೂಡ ಬಹಳ ಕಷ್ಟಸಾಧ್ಯ. ಅಪ್ಪಿತಪ್ಪಿ ಸಿಕ್ಕಿದರೂ ಅವುಗಳ ದರ ಮಾಮೂಲಿಗಿಂತ ದುಪ್ಪಟ್ಟು ಅನ್ನೋದು ಬೆಂಗಳೂರಿಗರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಇಂತಹುದ್ದೇ ವಿಚಾರವೊಂದನ್ನು ಯುವತಿಯೋರ್ವಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಯುವತಿ ಹೇಳಿದ್ದೇನು?

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಯುವತಿಯೊಬ್ಬರು ಮಳೆ ಸಂದರ್ಭ ತಮ್ಮ ಸ್ನೇಹಿತೆ 15 ಕಿಮೀ ಪ್ರಯಾಣಕ್ಕೆ 1,200 ರೂಪಾಯಿ ಹಣ ನೀಡಿ ಆಟೋದಲ್ಲಿ ತೆರಳಿರೋದಾಗಿ ತಿಳಿಸಿದ್ದಾರೆ. ಬೆಂಗಳೂರಿನ ಕೆಲ ಆಟೋ ಮತ್ತು ಕ್ಯಾಬ್​​ಗಳ ಚಾಲಕರಿಂದಾಗುತ್ತಿರುವ ಸುಲಿಗೆಯ ಬಗ್ಗೆ ತೀವ್ರವಾಗಿ ಟೀಕಿಸಿರುವ ಆಕೆ, ಈ ದರಗಳು ಸಾಮಾನ್ಯ ಜನರಿಗೆ ಬಹಳ ಭಾರವಾಗುತ್ತವೆ ಎಂದು ದೂರಿದ್ದಾರೆ. ಸಾನ್ಯಾ ಸಿಂಗ್​​ ಎಂಬ ಹೆಸರಿನ ​​ ಖಾತೆಯಿಂದ ಪೋಸ್ಟ್​​ ಆಗಿರುವ ಈ ವಿಡಿಯೋ ಭಾರಿ ವೈರಲ್​​ ಆಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ಚಾಲಕನ ರೌಡಿಸಂ; ಪೊಲೀಸ್ ಮುಂದೆಯೇ ಆಟೋ ಗ್ಲಾಸ್ ಒಡೆದು ಪುಂಡಾಟ!

ಇನ್ನು ಯುವತಿಯ ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು 1,200 ದರ ಅತಿಯಾಗಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಬೆಂಗಳೂರಿನಲ್ಲಿ ಇಂತಹ ದರಗಳು ಹೇಗೆ ಸಾಧ್ಯ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು 1,200 ರೂಪಾಯಿಗಳಿಗೆ ಏರ್‌ಪೋರ್ಟ್‌ಗೆ ಕ್ಯಾಬ್ ಬುಕ್ ಮಾಡಬಹುದು ಎಂದಿದ್ದಾರೆ. ಇನ್ನು ಕೆಲವರು ಈ ದರ ಒಬ್ಬರ ದಿನದ ಸಂಬಳದಷ್ಟಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಮಳೆ ಸಂದರ್ಭ ಆಟೋ ಮತ್ತು ಕ್ಯಾಬ್​​ ದರಗಳ ದಿಢೀರ್​​ ಅತಿ ಏರಿಕೆ ಬಗ್ಗೆ ಆಕ್ರೋಶ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜ್ಯಪಾಲರನ್ನು ಭೇಟಿಯಾಗಿ ತಮಿಳುನಾಡು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಟಿವಿಕೆ ಮುಖ್ಯಸ್ಥ ವಿಜಯ್ – Kannada News | TVK chief Vijay meets Governor stakes claim to form Tamil Nadu government with Congress support

ಚೆನ್ನೈ, ಮೇ 6: ಟಿವಿಕೆ ಮುಖ್ಯಸ್ಥ ವಿಜಯ್ (Vijay) ಇಂದು ತಮಿಳುನಾಡಿನ ಲೋಕಭವನದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿ, ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಟಿವಿಕೆ ರಾಜ್ಯದ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತ ಇಲ್ಲದ ಕಾರಣದಿಂದ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಟಿವಿಕೆಗೆ ಸಾಧ್ಯವಾಗಿರಲಿಲ್ಲ. ಇದೀಗ ಕಾಂಗ್ರೆಸ್ ಬೆಂಬಲ ನೀಡಿರುವುದರಿಂದ ವಿಜಯ್ ತಮ್ಮ ಪಕ್ಷ ಸರ್ಕಾರ ರಚಿಸಲು ಅವಕಾಶ ನೀಡಲು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

234 ಸದಸ್ಯರನ್ನು ಹೊಂದಿರುವ ತಮಿಳುನಾಡು ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಟಿವಿಕೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಸರ್ಕಾರ ರಚಿಸಲು 118 ಸ್ಥಾನಗಳ ಬಹುಮತದ ಅಗತ್ಯವಿತ್ತು. ಆ ಬಹುಮತ ಲಭಿಸದ ಹಿನ್ನೆಲೆಯಲ್ಲಿ ವಿಜಯ್ ಇತರೆ ಪಕ್ಷಗಳ ಬೆಂಬಲ ಕೋರಿದ್ದರು.

ಇದನ್ನೂ ಓದಿ: ತಾಯಿ ಹಿಂದೂ, ತಂದೆ ಕ್ರಿಶ್ಚಿಯನ್… ದಳಪತಿ ವಿಜಯ್ ಯಾವ ಧರ್ಮವನ್ನು ಅನುಸರಿಸುತ್ತಾರೆ?

ಕಾಂಗ್ರೆಸ್ ಪಕ್ಷವು ಟಿವಿಕೆಗೆ ತನ್ನ ಬೆಂಬಲವನ್ನು ಸಾರ್ವಜನಿಕವಾಗಿ ಘೋಷಿಸಿದ್ದರೂ ವಿಜಯ್ ಅವರ ಪಕ್ಷಕ್ಕೆ ಯಾರೆಲ್ಲಾ ಬೆಂಬಲ ನೀಡಿದ್ದಾರೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಡಿಎಂಕೆಯ ದೀರ್ಘಕಾಲದ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು ಇಂದು ನಟ-ರಾಜಕಾರಣಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿತು. ಈ ಮೂಲಕ 55 ವರ್ಷದ ಡಿಎಂಕೆ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿತು. ಇದರ ಜೊತೆಗೆ ಭಾರತದ ಸಂವಿಧಾನದಲ್ಲಿ ನಂಬಿಕೆಯಿಲ್ಲದ ಕೋಮುವಾದಿ ಶಕ್ತಿಗಳನ್ನು ಮೈತ್ರಿಕೂಟದಿಂದ ಹೊರಗಿಡುವಂತೆ ಟಿವಿಕೆಗೆ ಕಾಂಗ್ರೆಸ್ ಷರತ್ತು ಹಾಕಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ‘ದಳಪತಿ’ ಸರ್ಕಾರಕ್ಕೆ ಕೈ ಬಲ: ಟಿವಿಕೆ ಕಚೇರಿಯಲ್ಲಿ ವಿಜಯ್ ಭೇಟಿ ಮಾಡಿದ ಕಾಂಗ್ರೆಸ್ ನಾಯಕರು

ವಿಜಯ್ ಗುರುವಾರ ಬೆಳಿಗ್ಗೆ (ಮೇ 7) ತಮಿಳುನಾಡಿನ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶುಭ ಮುಹೂರ್ತದ ಪ್ರಕಾರ ಬೆಳಿಗ್ಗೆ 10ರಿಂದ 11.15ರ ನಡುವೆ ಪ್ರಮಾಣವಚನ ಸಮಾರಂಭವನ್ನು ನಿಗದಿಪಡಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:30 pm, Wed, 6 May 26

Source link

Exit mobile version