ಮಳೆ ವೇಳೆ 15 ಕಿಮೀ ಪ್ರಯಾಣಿಸಲು ಬೆಂಗಳೂರಲ್ಲಿ ಆಟೋ ದರ 1,200 ರೂ.!: ಈ ಹಣದಲ್ಲಿ ಏರ್‌ಪೋರ್ಟ್‌ಗೇ ಹೋಗಬಹುದು ಎಂದ ನೆಟ್ಟಿಗರು – Kannada News | Bengaluru Auto Fare Shock: Woman Pays 1,200 for 15 km Ride During Rain

15 ಕಿಮೀ ಪ್ರಯಾಣಿಸಲು ಬೆಂಗಳೂರಲ್ಲಿ ಅಟೋ ದರ 1,200 ರೂ.!

ಬೆಂಗಳೂರು, ಮೇ 06: ನಗರದಲ್ಲಿ ಮಳೆ ಬಂತೆಂದರೆ ಸಾಕು ರಸ್ತೆ ತುಂಬ ನೀರು ನಿಂತು ಹಳ್ಳಗಳಂತೆ ಕಾಣತೊಡಗುತ್ತವೆ. ವಾಹನ ಸವಾರರು ಸಂಚರಿಸೋದೇ ಕಷ್ಟ ಎಂಬ ಸ್ಥಿತಿ ನಿರ್ಮಾಣ ಆಗೋದು ಮಾಮೂಲು ಎಂಬಂತಾಗಿದೆ. ಈ ನಡುವೆ ಬಸ್​​, ಮೆಟೋ ರೈಲುಗಳಲ್ಲಿ ತೆರಳಬೇಕಿರುವ ಕಾರಣಕ್ಕೋ ಅಥವಾ ಮನೆಗೆ ಹೋಗಲೆಂದೋ ಆಟೋ ಅಥವಾ ಕ್ಯಾಬ್​​ಗಳನ್ನು ಬುಕ್​​ ಮಾಡಿದರೆ ಅವು ಸಿಗೋದು ಕೂಡ ಬಹಳ ಕಷ್ಟಸಾಧ್ಯ. ಅಪ್ಪಿತಪ್ಪಿ ಸಿಕ್ಕಿದರೂ ಅವುಗಳ ದರ ಮಾಮೂಲಿಗಿಂತ ದುಪ್ಪಟ್ಟು ಅನ್ನೋದು ಬೆಂಗಳೂರಿಗರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಇಂತಹುದ್ದೇ ವಿಚಾರವೊಂದನ್ನು ಯುವತಿಯೋರ್ವಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಯುವತಿ ಹೇಳಿದ್ದೇನು?

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಯುವತಿಯೊಬ್ಬರು ಮಳೆ ಸಂದರ್ಭ ತಮ್ಮ ಸ್ನೇಹಿತೆ 15 ಕಿಮೀ ಪ್ರಯಾಣಕ್ಕೆ 1,200 ರೂಪಾಯಿ ಹಣ ನೀಡಿ ಆಟೋದಲ್ಲಿ ತೆರಳಿರೋದಾಗಿ ತಿಳಿಸಿದ್ದಾರೆ. ಬೆಂಗಳೂರಿನ ಕೆಲ ಆಟೋ ಮತ್ತು ಕ್ಯಾಬ್​​ಗಳ ಚಾಲಕರಿಂದಾಗುತ್ತಿರುವ ಸುಲಿಗೆಯ ಬಗ್ಗೆ ತೀವ್ರವಾಗಿ ಟೀಕಿಸಿರುವ ಆಕೆ, ಈ ದರಗಳು ಸಾಮಾನ್ಯ ಜನರಿಗೆ ಬಹಳ ಭಾರವಾಗುತ್ತವೆ ಎಂದು ದೂರಿದ್ದಾರೆ. ಸಾನ್ಯಾ ಸಿಂಗ್​​ ಎಂಬ ಹೆಸರಿನ ​​ ಖಾತೆಯಿಂದ ಪೋಸ್ಟ್​​ ಆಗಿರುವ ಈ ವಿಡಿಯೋ ಭಾರಿ ವೈರಲ್​​ ಆಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ಚಾಲಕನ ರೌಡಿಸಂ; ಪೊಲೀಸ್ ಮುಂದೆಯೇ ಆಟೋ ಗ್ಲಾಸ್ ಒಡೆದು ಪುಂಡಾಟ!

ಇನ್ನು ಯುವತಿಯ ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು 1,200 ದರ ಅತಿಯಾಗಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಬೆಂಗಳೂರಿನಲ್ಲಿ ಇಂತಹ ದರಗಳು ಹೇಗೆ ಸಾಧ್ಯ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು 1,200 ರೂಪಾಯಿಗಳಿಗೆ ಏರ್‌ಪೋರ್ಟ್‌ಗೆ ಕ್ಯಾಬ್ ಬುಕ್ ಮಾಡಬಹುದು ಎಂದಿದ್ದಾರೆ. ಇನ್ನು ಕೆಲವರು ಈ ದರ ಒಬ್ಬರ ದಿನದ ಸಂಬಳದಷ್ಟಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಮಳೆ ಸಂದರ್ಭ ಆಟೋ ಮತ್ತು ಕ್ಯಾಬ್​​ ದರಗಳ ದಿಢೀರ್​​ ಅತಿ ಏರಿಕೆ ಬಗ್ಗೆ ಆಕ್ರೋಶ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜ್ಯಪಾಲರನ್ನು ಭೇಟಿಯಾಗಿ ತಮಿಳುನಾಡು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಟಿವಿಕೆ ಮುಖ್ಯಸ್ಥ ವಿಜಯ್ – Kannada News | TVK chief Vijay meets Governor stakes claim to form Tamil Nadu government with Congress support

ಚೆನ್ನೈ, ಮೇ 6: ಟಿವಿಕೆ ಮುಖ್ಯಸ್ಥ ವಿಜಯ್ (Vijay) ಇಂದು ತಮಿಳುನಾಡಿನ ಲೋಕಭವನದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿ, ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಟಿವಿಕೆ ರಾಜ್ಯದ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತ ಇಲ್ಲದ ಕಾರಣದಿಂದ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಟಿವಿಕೆಗೆ ಸಾಧ್ಯವಾಗಿರಲಿಲ್ಲ. ಇದೀಗ ಕಾಂಗ್ರೆಸ್ ಬೆಂಬಲ ನೀಡಿರುವುದರಿಂದ ವಿಜಯ್ ತಮ್ಮ ಪಕ್ಷ ಸರ್ಕಾರ ರಚಿಸಲು ಅವಕಾಶ ನೀಡಲು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

234 ಸದಸ್ಯರನ್ನು ಹೊಂದಿರುವ ತಮಿಳುನಾಡು ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಟಿವಿಕೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಸರ್ಕಾರ ರಚಿಸಲು 118 ಸ್ಥಾನಗಳ ಬಹುಮತದ ಅಗತ್ಯವಿತ್ತು. ಆ ಬಹುಮತ ಲಭಿಸದ ಹಿನ್ನೆಲೆಯಲ್ಲಿ ವಿಜಯ್ ಇತರೆ ಪಕ್ಷಗಳ ಬೆಂಬಲ ಕೋರಿದ್ದರು.

ಇದನ್ನೂ ಓದಿ: ತಾಯಿ ಹಿಂದೂ, ತಂದೆ ಕ್ರಿಶ್ಚಿಯನ್… ದಳಪತಿ ವಿಜಯ್ ಯಾವ ಧರ್ಮವನ್ನು ಅನುಸರಿಸುತ್ತಾರೆ?

ಕಾಂಗ್ರೆಸ್ ಪಕ್ಷವು ಟಿವಿಕೆಗೆ ತನ್ನ ಬೆಂಬಲವನ್ನು ಸಾರ್ವಜನಿಕವಾಗಿ ಘೋಷಿಸಿದ್ದರೂ ವಿಜಯ್ ಅವರ ಪಕ್ಷಕ್ಕೆ ಯಾರೆಲ್ಲಾ ಬೆಂಬಲ ನೀಡಿದ್ದಾರೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಡಿಎಂಕೆಯ ದೀರ್ಘಕಾಲದ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು ಇಂದು ನಟ-ರಾಜಕಾರಣಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿತು. ಈ ಮೂಲಕ 55 ವರ್ಷದ ಡಿಎಂಕೆ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿತು. ಇದರ ಜೊತೆಗೆ ಭಾರತದ ಸಂವಿಧಾನದಲ್ಲಿ ನಂಬಿಕೆಯಿಲ್ಲದ ಕೋಮುವಾದಿ ಶಕ್ತಿಗಳನ್ನು ಮೈತ್ರಿಕೂಟದಿಂದ ಹೊರಗಿಡುವಂತೆ ಟಿವಿಕೆಗೆ ಕಾಂಗ್ರೆಸ್ ಷರತ್ತು ಹಾಕಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ‘ದಳಪತಿ’ ಸರ್ಕಾರಕ್ಕೆ ಕೈ ಬಲ: ಟಿವಿಕೆ ಕಚೇರಿಯಲ್ಲಿ ವಿಜಯ್ ಭೇಟಿ ಮಾಡಿದ ಕಾಂಗ್ರೆಸ್ ನಾಯಕರು

ವಿಜಯ್ ಗುರುವಾರ ಬೆಳಿಗ್ಗೆ (ಮೇ 7) ತಮಿಳುನಾಡಿನ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶುಭ ಮುಹೂರ್ತದ ಪ್ರಕಾರ ಬೆಳಿಗ್ಗೆ 10ರಿಂದ 11.15ರ ನಡುವೆ ಪ್ರಮಾಣವಚನ ಸಮಾರಂಭವನ್ನು ನಿಗದಿಪಡಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:30 pm, Wed, 6 May 26

Source link

ಮದುವೆಯ ಬಳಿಕ ನವದಂಪತಿಗಳು ಹನಿಮೂನ್‌ಗೆ ಹೋಗೋ ಹಿಂದಿನ ಕಾರಣ ತಿಳಿಯಿರಿ – Kannada News | Do you know why newlyweds go on a honeymoon after getting married?

ಮದುವೆಯ ನಂತರ ನವ ಜೋಡಿಗಳು (newlyweds) ಹೋಗುವ ಪ್ರವಾಸಕ್ಕೆ ಹನಿಮೂನ್‌ ಎಂದು ಕರೆಯುತ್ತಾರೆ. ಮದುವೆಯ ಬಳಿಕ ಬಹುತೇಕ ಹೆಚ್ಚಿನ ಜೋಡಿಗಳು ಮಧುಚಂದ್ರಕ್ಕೆ ಹೋಗುತ್ತಾರೆ. ಕೆಲವರು ವಿದೇಶಗಳಿಗೆ ಟ್ರಿಪ್‌ ಹೋದ್ರೆ ಇನ್ನೂ ಕೆಲವರು ತಮ್ಮ ದೇಶದಲ್ಲೇ ಇರುವ ರೊಮ್ಯಾಂಟಿಕ್‌ ತಾಣಗಳಿಗೆ ಹಾನಿಮೂನ್‌ ಪ್ಲಾನ್‌ ಮಾಡ್ತಾರೆ. ಹನಿಮೂನ್‌ ನವ ದಂಪತಿಗಳಿಗೆ ತುಂಬಾನೇ ವಿಶೇಷವಾದದ್ದು, ಅದಕ್ಕಾಗಿಯೇ ಪತಿ ಪತ್ನಿಯರು ಸುಂದರವಾದ ಕ್ಷಣಗಳನ್ನು ಕಳೆಯಲು ರೊಮ್ಯಾಂಟಿಕ್‌ ತಾಣಗಳಿಗೆ ಪ್ರವಾಸ ಹೋಗುತ್ತಾರೆ. ಅಷ್ಟಕ್ಕೂ  ಮದುವೆಯಾದ ಬಳಿಕ ಹನಿಮೂನ್‌ಗೆ ಹೋಗೋದು ಏಕೆ, ಇದರ ಹಿಂದಿನ ಕಾರಣವಾದರೂ ಏನು ಎಂಬುದನ್ನು ತಿಳಿದುಕೊಳ್ಳಿ.

ನವ ದಂಪತಿಗಳಿಗೆ ಹನಿಮೂನ್‌ ಏಕೆ ವಿಶೇಷ?

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ವಿಶೇಷವಾಗಿದೆ. ಆದ್ದರಿಂದ, ಕೆಲವು ದಂಪತಿಗಳು ತಮ್ಮ ಮದುವೆಯ ಆರಂಭಿಕ ದಿನಗಳನ್ನು ಇನ್ನಷ್ಟು ವಿಶೇಷವಾಗಿಸಲು ಹನಿಮೂನ್‌ಗೆ ಹೋಗುತ್ತಾರೆ. ಮದುವೆಯ ನಂತರ ದಂಪತಿಗಳು ನಿಜವಾಗಿಯೂ ಒಟ್ಟಿಗೆ ಸಮಯವನ್ನು ಆನಂದಿಸಬಹುದಾದ ಸಮಯವೆಂದರೆ ಹನಿಮೂನ್.  ಈ ಹನಿಮೂನ್‌ ಸಂಸ್ಕೃತಿ ಹುಟ್ಟಿದ್ದು ಯುರೋಪಿನಲ್ಲಿ, ಆದರೆ  ಇಂದು ಪ್ರಪಂಚದಾದ್ಯಂತ ಇದು ಆಚರಣೆಯಲ್ಲಿದೆ. ಹನಿಮೂನ್ ಕೇವಲ ಪ್ರವಾಸವಲ್ಲ, ಇದು ದಂಪತಿಗಳು ತಮ್ಮ ಸಂಬಂಧವನ್ನು ಬಲಪಡಿಸಲು ಮತ್ತು ಪರಸ್ಪರ ಉತ್ತಮ ತಿಳುವಳಿಕೆಯನ್ನು ಪಡೆಯಲು ಒಂದು ಅವಕಾಶವಾಗಿದೆ. ಅಲ್ಲದೆ ಮಧುಚಂದ್ರವು ನವದಂಪತಿಗಳಿಗೆ ತುಂಬಾನೇ ವಿಶೇಷವಾದದ್ದು, ಇದು ಸುಂದರ ಸಂಬಂಧದ ಆರಂಭವನ್ನು ಸೂಚಿಸುತ್ತದೆ

ಹಿಂದೆಲ್ಲಾ ಫೋನ್‌ ಇರದ ಕಾಲದಲ್ಲಿ ಹೆಚ್ಚಿನ ವಧು-ವರರು ತಮ್ಮ ಮದುವೆಯ ದಿನದಂದೇ ಮೊದಲ ಬಾರಿಗೆ ಭೇಟಿಯಾಗುತ್ತಿದ್ದರು. ಹಾಗಾಗಿ ದಂಪತಿಗಳಿಬ್ಬರಿಗೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಹನಿಮೂನ್‌ಗೆ ಕಳುಹಿಸಲಾಗುತ್ತಿತ್ತು. ಇದಲ್ಲದೆ ಮದುವೆಯ ಗಡಿಬಿಡಿಯಲ್ಲಿ ವಧು ವರರಿಗೆ ವಿಶ್ರಾಂತಿ ಅನ್ನೋದೆ ಸಿಗೋದಿಲ್ಲ. ಹೀಗಿರುವಾಗ ಮದುವೆಯ ನಂತರದ ಮಧುಚಂದ್ರವು  ವಧು-ವರರಿಗೆ ಅಪಾರ ವಿಶ್ರಾಂತಿಯನ್ನು ಒದಗಿಸುತ್ತದೆ, ಗಡಿಬಿಡಿ, ಟೆನ್ಷನ್‌ಗಳಿಂದ  ದೂರವಾಗಿ, ದಂಪತಿಗಳು ಪರಸ್ಪರ ಸುಂದರ ಸಮಯ ಕಳೆಯಲು ಅವಕಾಶವನ್ನು ಒದಗಿಸುತ್ತದೆ. ಹೀಗೆ ಮಧುಚಂದ್ರವು ದಂಪತಿಗಳನ್ನು ಪರಸ್ಪರ ಅರ್ಥಮಾಡಿಕೊಳ್ಳಲು, ಪ್ರೀತಿ, ನಂಬಿಕೆ ಮತ್ತು ಸಂಬಂಧದ ಮಾಧುರ್ಯವನ್ನು ಹೆಚ್ಚು ಮಾಡಲು ಇರುವಂತಹ ಕೀಲಿಯಾಗಿದೆ.

ಇದನ್ನೂ ಓದಿ: ಸುಡು ಬಿಸಿಲಿನಲ್ಲಿ ದ್ವಿಚಕ್ರ ವಾಹನ ಚಲಾಯಿಸುವಾಗ ವಿಚಾರಗಳನ್ನು ನೆನಪಿನಲ್ಲಿಡಿ

ನವ ದಂಪತಿಗಳು ಹನಿಮೂನ್‌ಗೆ ಹೋಗೋದೇಕೆ?

ದಂಪತಿಗಳು ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯಲು, ಪರಸ್ಪರ ಪ್ರೀತಿಯನ್ನು ಹಂಚಲು ಹನಿಮೂನ್‌ಗೆ ಹೋಗುತ್ತಾರೆ.  ಅಲ್ಲದೆ ಈ ರೀತಿ ಸುಂದರ ಸ್ಥಳಗಳಿಗೆ ಪ್ರಯಾಣಿಸುವುದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ ಮತ್ತು ದಂಪತಿಗಳಿಗೆ  ಪರಸ್ಪರ ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು, ಭವಿಷ್ಯದ ಬಗ್ಗೆ ಯೋಚಿಸಲು ಅವಕಾಶ ಸಿಗುತ್ತದೆ. ಹನಿಮೂನ್ ಮೂಲಕ ದಂಪತಿಗಳು ಸುಂದರವಾದ ನೆನಪುಗಳನ್ನು ಸೃಷ್ಟಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆಯಲ್ಲಿ ಕಾಂಗ್ರೆಸ್​​ ಗೆಲುವಿಗೆ ಕಾರಣ ಯಾರು? ಜಬ್ಬಾರ್​ ಸ್ಫೋಟಕ ಹೇಳಿಕೆ – Kannada News | Davangere By election: Who Led Congress to Victory; Jabbar Makes Explosive Statement

ಬೆಂಗಳೂರು, ಮೇ 06: ನಾನು ರಿಸಲ್ಟ್ ಬರುವ ಮುಂಚೆಯೇ ಕಾಂಗ್ರೆಸ್ ಗೆಲ್ಲುತ್ತದೆ ಅಂತಾ ಹೇಳಿದ್ದೆ. ಮುಖ್ಯಮಂತ್ರಿಗಳ ಐದು ಗ್ಯಾರಂಟಿ ಯೋಜನೆಗಳು ಮತ್ತು ಸಚಿವ ಜಮೀರ್ ಅಹ್ಮದ್ ಅವರ ಭೇಟಿ ಕೂಡ ಕಾಂಗ್ರೆಸ್ ಗೆಲ್ಲುವುದಕ್ಕೆ ಪ್ರಮುಖ ಕಾರಣ ಎಂದು ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಹೇಳಿದ್ದಾರೆ. ಆ ಮೂಲಕ  ಕಾಂಗ್ರೆಸ್​ನಲ್ಲಿ ಈಗ ಕ್ರೆಡಿಟ್ ವಾರ್ ಶುರುವಾಗಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಡಬಾರದು ಅಂತ ಜನ ತೀರ್ಮಾನ ಮಾಡಿದ್ರೆ ಕೊಡಲ್ಲ. ಜಮೀರ್ ಬಂದು ಹೋದ ಕಾರಣ ಅಸಮಾಧಾನ ಸರಿ ಹೋಗಿತ್ತು ಎಂದಿದ್ದಾರೆ. ಸಿಎಂ ಜೊತೆಗೆ ನಸೀರ್ ಅಹ್ಮದ್ ಹೋಗಿ ಪ್ರಚಾರ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಹೆಂಗೋ ಗೆದ್ದಿದ್ದೇವೆ, ಈಗಾಗಲೇ ಸಿಎಂ ನೂರು ಕೋಟಿ ಕೊಟ್ಟಿದ್ದಾರೆ. ಶಾಸಕರು ದಾವಣಗೆರೆ ದಕ್ಷಿಣ ಅಭಿವೃದ್ಧಿ ಮಾಡಲಿ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

‘ಅದೇ ಕಣ್ಣು’ ಖ್ಯಾತಿಯ ಸತೀಶ್ ಈಗೇನು ಮಾಡುತ್ತಿದ್ದಾರೆ? ಪುನೀತ್ ಭೇಟಿಯೂ ಸಾಧ್ಯವಾಗಲಿಲ್ಲ – Kannada News | Actor Satish from ‘Ade Kannu’: Where is the Rajkumar co star now

1985ರಲ್ಲಿ ರಿಲೀಸ್ ಆದ ‘ಅದೇ ಕಣ್ಣು’ ಸಿನಿಮಾ ಸಾಕಷ್ಟು ಗಮನ ಸೆಳೆಯಿತು. ಈ ಚಿತ್ರದಲ್ಲಿ ರಾಜ್​​ಕುಮಾರ್, ಗಾಯತ್ರಿ ಮೊದಲಾದವರು ನಟಿಸಿದ್ದರು. ಗಾಯತ್ರಿ ಜೊತೆಗೆ ರಾಜ್​​ಕುಮಾರ್ ನಟಿಸಿದ ಕೊನೆಯ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಸತೀಶ್ ಅವರು ಪೊಲೀಸ್ ಇನ್​​ಸ್ಪೆಕ್ಟರ್ ಪಾತ್ರ ಮಾಡಿದ್ದರು. ಅವರು ಇತ್ತೀಚೆಗೆ ಸ್ಯಾಂಡಲ್​ವುಡ್​​ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹಾಗಾದರೆ ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಈ ಬಗ್ಗೆ ನಿರ್ದೇಶಕ ರಘುರಾಮ್ ಅವರು ವಿಡಿಯೋ ಮಾಡಿ ಹಾಕಿದ್ದಾರೆ. ಸತೀಶ್​ ಬಗೆಗಿನ ವಿವರವನ್ನು ಅವರು ನೀಡಿದ್ದಾರೆ.

1.ಅಪರೂಪದ ನಟ ಸತೀಶ್

2.‘ಅದೇ ಕಣ್ಣು’ ಚಿತ್ರದಲ್ಲಿ ಪೊಲೀಸ್ ಪಾತ್ರ

3.ಕನ್ನಡ ಚಿತ್ರರಂಗದಿಂದ ದೂರ ಇರೋ ಸತೀಶ್

ಚೆನ್ನೈನ ‘ಸ್ವಾಗತ್’ ಹೋಟೆಲ್​ನಲ್ಲಿ ಸತೀಶ್ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಆಗ ನಿರ್ದೇಶಕ ಭಾರ್ಗವ್ ಅವರು ಇದೇ ಹೋಟೆಲ್​​ನಲ್ಲಿ ತಂಗುತ್ತಿದ್ದರು. ಆಗ ಸತೀಶ್ ಪರಿಚಯ ಆಯಿತು. ‘ಒಲವು ಗೆಲುವು’ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಭಾರ್ಗವ್ ಅವರು ಸತೀಶ್​​ಗೆ ನೀಡಿದರು. ಈ ಸಿನಿಮಾದಲ್ಲಿ ಭಾರ್ಗವ್ ನೆಗೆಟಿವ್ ಶೇಡ್ ಪಾತ್ರ ಮಾಡಿದ್ದರು. ಅಲ್ಲಿಂದ ಅವರ ಕನ್ನಡ ಸಿನಿಮಾ ಜರ್ನಿ ಆರಂಭ ಆಯಿತು. ಅದಕ್ಕೂ ಮೊದಲೇ ನಟನೆಯನ್ನು ಸತೀಶ್ ಕಲಿತಿದ್ದರು. ‘ಮದುವೆ ಮಾಡು ತಮಾಷೆ ನೋಡು’ ಸೇರಿದಂತೆ ಅನೇಕ ಕನ್ನಡ ಸಿನಿಮಾ ಮಾಡಿದರು. ಆ ಬಳಿಕ ಅವರು ಕನ್ನಡ ಸಿನಿಮಾ ಮಾಡಿಲ್ಲ.

2021ರ ಅಕ್ಟೋಬರ್ 29ರಂದು ಸತೀಶ್ ಅವರು ಪಿಆರ್​ಕೆ ಕಚೇರಿಯಲ್ಲಿ ಇದ್ದರು. ತಮ್ಮನ್ನು ಭೇಟಿ ಮಾಡುವಂತೆ ಸತೀಶ್​ ಅವರಿಗೆ ಅಪ್ಪು ಸೂಚಿಸಿದ್ದರು. ಹೊಸ ಸಿನಿಮಾ ಒಂದರ ಚರ್ಚೆಗೆ ಇವರ ಭೇಟಿ ನಡೆದಿತ್ತು ಎನ್ನಲಾಗಿದೆಯಾದರೂ ಈ ಬಗ್ಗೆ ಸ್ಪಷ್ಟನೆ ಇಲ್ಲ. ಅಂದು ಪುನೀತ್​​ಗೆ ಹೃದಯಘಾತ ಆಯಿತು. ಅವರು ನಿಧನರಾದರು. ಹೀಗಾಗಿ, ಸತೀಶ್-ಪುನೀತ್ ಅವರ ಭೇಟಿ ನಡೆಯಲೇ ಇಲ್ಲ.

ಇದನ್ನೂ ಓದಿ: ಕೊನೆಗೂ ಸೆಟ್ಟೇರಲೇ ಇಲ್ಲ ರಾಜ್​​ಕುಮಾರ್ ನಟಿಸಬೇಕಿದ್ದ ಆ ಸಿನಿಮಾ

ಸದ್ಯ ಸತೀಶ್ ಅವರು ತಮಿಳು ಸಿನಿಮಾಗಳಿಗೆ ಡಬ್ ಮಾಡುವ ಕೆಲಸ ಮಾಡುತ್ತಿದ್ದಾರಂತೆ. ಈ ಮೂಲಕ ಅವರು ಕನ್ನಡ ಚಿತ್ರರಂಗದಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದ್ದಾರೆ. ಅವರು ಕನ್ನಡಕ್ಕೆ ಕಂಬ್ಯಾಕ್ ಮಾಡಲಿ ಎಂಬುದು ಅನೇಕರ ಕೋರಿಕೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

LSG vs RCB Live Streaming: ವಾರದ ಬಳಿಕ ಕಣಕ್ಕಿಳಿಯುತ್ತಿದೆ ಆರ್​ಸಿಬಿ; ಪಂದ್ಯ ಎಷ್ಟು ಗಂಟೆಗೆ ಆರಂಭ? – Kannada News | LSG vs RCB IPL 2026 Live Streaming When and Where to Watch Lucknow Super Giants vs Royal Challengers Bengaluru IPL Today Cricket Match Score in Kannada

ಐಪಿಎಲ್ 2026 (IPL 2026) ರ 50 ನೇ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವೆ ನಡೆಯಲಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿದೆ. ಇದಕ್ಕೂ ಮುನ್ನ ನಡೆದಿದ್ದ ಪಂದ್ಯದಲ್ಲಿ ಆರ್​ಸಿಬಿ ಭರ್ಜರಿ ಜಯ ದಾಖಲಿಸಿತ್ತು. ರಜತ್ ಪಟಿದಾರ್ ನಾಯಕತ್ವದಲ್ಲಿ, ಆರ್‌ಸಿಬಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಆಡಿರುವ ಒಂಬತ್ತು ಪಂದ್ಯಗಳಿಂದ ಆರು ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇತ್ತ ಲಕ್ನೋ ಸೂಪರ್​ಜೈಂಟ್ಸ್ ತಂಡ ಆಡಿರುವ 9 ಪಂದ್ಯಗಳಲ್ಲಿ 7 ರಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದರರ್ಥ ಲಕ್ನೋ ತಂಡ ಪ್ಲೇಆಫ್ ರೇಸ್​​ನಿಂದ ಭಾಗಶಃ ಹೊರಬಿದ್ದಿದೆ. ಹೀಗಾಗಿ ಲಕ್ನೋ ತಂಡಕ್ಕೆ ಉಳಿದ ಪಂದ್ಯಗಳು ಕೇವಲ ಔಪಚಾರಿಕವಾಗಿದ್ದರೆ, ಇತ್ತ ಆರ್​ಸಿಬಿಗೆ ಮೊದಲ ಎರಡು ಸ್ಥಾನಗಳನ್ನು ಪಡೆಯಲು ನಿರ್ಣಾಯಕವಾಗಿವೆ.

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಯಾವಾಗ ನಡೆಯಲಿದೆ?

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಮೇ 6 ರಂದು ನಡೆಯಲಿದೆ.

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಎಲ್ಲಿ ನಡೆಯಲಿದೆ?

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಸಂಜೆ 7:30 ಕ್ಕೆ ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ನ ವಿವಿದ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಹಾಟ್ ಸ್ಟಾರ್​​ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ಉಭಯ ತಂಡಗಳು

ಲಕ್ನೋ ತಂಡ: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ/ ವಿಕೆಟ್ ಕೀಪರ್), ನಿಕೋಲಸ್ ಪೂರನ್, ಆಯುಷ್ ಬಡೋನಿ, ಮುಕುಲ್ ಚೌಧರಿ, ಹಿಮ್ಮತ್ ಸಿಂಗ್, ಜಾರ್ಜ್ ಲಿಂಡೆ, ಮೊಹಮ್ಮದ್ ಶಮಿ, ಪ್ರಿನ್ಸ್ ಯಾದವ್, ದಿಗ್ವೇಶ್ ಸಿಂಗ್ ರಾಠಿ, ಮೊಹ್ಸಿನ್ ಖಾನ್, ಅಕ್ಷತ್ ರಘುವಂಶಿ, ಅಬ್ದುಲ್ ಖಾನ್, ಸಿದ್ಧ್ ಜೊಮಾ, ಅವೇಶ್ ಜೊಮಾ, ಅವೇಶ್ ಜೊಮಾ ನಾರ್ಟ್ಜೆ, ಮ್ಯಾಥ್ಯೂ ಬ್ರೀಟ್ಜ್ಕೆ, ಅರ್ಜುನ್ ತೆಂಡೂಲ್ಕರ್, ಶಹಬಾಜ್ ಅಹ್ಮದ್, ಆಕಾಶ್ ಮಹಾರಾಜ್ ಸಿಂಗ್, ಮಯಾಂಕ್ ಯಾದವ್, ಅರ್ಶಿನ್ ಕುಲಕರ್ಣಿ, ನಮನ್ ತಿವಾರಿ

ಆರ್​ಸಿಬಿ ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ಜೋಶ್ ಹೇಜಲ್​ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್, ಜಾಕೋಬ್ ಡಫಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಧಿಕಾರಕ್ಕಾಗಿ ಬ್ರೇಕಪ್; ಕಾಂಗ್ರೆಸ್-ಡಿಎಂಕೆ, ಬಿಜೆಪಿ-ಶಿವಸೇನೆ… ದಶಕಗಳ ಮೈತ್ರಿ ಮುರಿದುಕೊಂಡ ಪಕ್ಷಗಳಿವು – Kannada News | Congress Breaks 55 years alliance with DMK to support TVK Timeline of the Political Parties Ditched Their Old Allies

ನವದೆಹಲಿ, ಮೇ 6: ತಮಿಳುನಾಡು (Tamil Nadu Politics) ರಾಜಕೀಯದಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ತಮಿಳುನಾಡು ವಿಕ್ಟರಿ ಪಾರ್ಟಿ (ಟಿವಿಕೆ) ತನ್ನ ಮೊದಲ ಚುನಾವಣೆಯಲ್ಲಿ 108 ಸ್ಥಾನಗಳಲ್ಲಿ ಭಾರಿ ಜಯ ಸಾಧಿಸಿದೆ. ಇದರೊಂದಿಗೆ, ಇದು ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಟಿವಿಕೆ ಮೊದಲ ಚುನಾವಣೆಯಲ್ಲಿಯೇ ಗೆದ್ದು ಅಧಿಕಾರ ವಹಿಸಿಕೊಳ್ಳಲಿದೆ. ಬಹುಮತ ಸಿಗದ ಹಿನ್ನೆಲೆಯಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಈ ಮೂಲಕ ತಮಿಳುನಾಡಿನಲ್ಲಿ 5 ದಶಕಗಳ ಕಾಲದ ಡಿಎಂಕೆ ಜೊತೆಗಿನ ಕಾಂಗ್ರೆಸ್ ಮೈತ್ರಿ ಮುರಿದುಬಿದ್ದಿದೆ.

ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಪಕ್ಷಕ್ಕೆ ಬಹುಮತಕ್ಕೆ 118 ಸ್ಥಾನಗಳು ಬೇಕಾಗುತ್ತವೆ. ಆದರೆ ಟಿವಿಕೆಗೆ ಇನ್ನೂ 11 ಸ್ಥಾನಗಳು ಬೇಕಾಗುತ್ತವೆ. ಈ ನಿಟ್ಟಿನಲ್ಲಿ, ವಿಜಯ್ ಸರ್ಕಾರ ರಚಿಸಲು ಇತರ ಪಕ್ಷಗಳಿಂದ ಬೆಂಬಲವನ್ನು ಕೋರಿದ್ದರು. ಅದಕ್ಕೆ ಕಾಂಗ್ರೆಸ್ ಮುಂದೆ ಬಂದು ಬೆಂಬಲ ನೀಡುವುದಾಗಿ ಘೋಷಿಸಿದೆ. ಭಾರತದ ಸಂವಿಧಾನದಲ್ಲಿ ನಂಬಿಕೆಯಿಲ್ಲದ ಯಾವುದೇ ಕೋಮು ಶಕ್ತಿಗಳನ್ನು ಟಿವಿಕೆ ಈ ಮೈತ್ರಿಕೂಟದಿಂದ ದೂರವಿಡಬೇಕು ಎಂಬ ಷರತ್ತನ್ನು ಹಾಕಿರುವ ಕಾಂಗ್ರೆಸ್ ತನ್ನ ಬೆಂಬಲ ಘೋಷಿಸಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಹೊಸ ಮೈತ್ರಿ ಪರ್ವ: ವಿಜಯ್ ನೇತೃತ್ವದ ಟಿವಿಕೆಗೆ ಕಾಂಗ್ರೆಸ್ ‘ಕೈ’ ಬಲ, ಸಂಪುಟದಲ್ಲಿ 2 ಸ್ಥಾನಕ್ಕೆ ಬೇಡಿಕೆ

ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅನ್ನು ಬೆಂಬಲಿಸಲು ಕಾಂಗ್ರೆಸ್ ಇಂದು ತನ್ನ 55 ವರ್ಷದ ಮಿತ್ರಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಜೊತೆಗಿನ ಸಂಬಂಧವನ್ನು ಕಡಿದುಕೊಂಡಿತು. ಹಾಗಂತ ಅಧಿಕಾರಕ್ಕಾಗಿ ಈ ರೀತಿ ಹಳೆಯ ಮೈತ್ರಿಯನ್ನು ರಾಜಕೀಯ ಪಕ್ಷಗಳು ಮುರಿದುಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ.

ಈ ಹಿಂದೆ ಮುರಿದುಬಿದ್ದ ಮಹಾಮೈತ್ರಿಗಳು:

ಬಿಜೆಪಿ ಮತ್ತು ಶಿವಸೇನೆ (2014 ಮತ್ತು 2019):

25 ವರ್ಷಗಳ ಮೈತ್ರಿಯ ನಂತರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆಯ ಕುರಿತು ವೈಮನಸ್ಸು ಉಂಟಾಗಿ 2014ರಲ್ಲಿ ಬಿಜೆಪಿ- ಶಿವಸೇನೆ ಮೈತ್ರಿ ಮೊದಲು ಮುರಿದುಬಿದ್ದಿತು. ಬಳಿಕ ಅವರು ರಾಜಿ ಮಾಡಿಕೊಂಡರೂ 2019ರಲ್ಲಿ ಮತ್ತೆ ಬೇರ್ಪಟ್ಟರು. ಶಿವಸೇನೆ ಕೊನೆಗೆ ತನ್ನ ಸೈದ್ಧಾಂತಿಕ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಸೇರಿಕೊಂಡು ಮಹಾ ವಿಕಾಸ್ ಅಘಾಡಿಯನ್ನು ರಚಿಸಿತು. ಇದರಿಂದಾಗಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು.

ಬಿಜೆಪಿ ಮತ್ತು ಜೆಡಿಯು (2013, 2017, ಮತ್ತು 2022):

ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪದೇ ಪದೇ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡಿದೆ. ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ನೇಮಿಸುವುದನ್ನು ಪ್ರತಿಭಟಿಸಲು ಅವರು ಮೊದಲು 2013ರಲ್ಲಿ ಎನ್‌ಡಿಎ ತೊರೆದರು. 2017ರಲ್ಲಿ ಮತ್ತೆ ಎನ್​ಡಿಎಗೆ ಸೇರಿದರು. 2022ರಲ್ಲಿ ಬಿಹಾರದಲ್ಲಿ ಆರ್‌ಜೆಡಿಯೊಂದಿಗೆ ಹೊಸ ಸರ್ಕಾರವನ್ನು ರಚಿಸಿದರು.

ಇದನ್ನೂ ಓದಿ: ತಮಿಳುನಾಡಲ್ಲಿ ಸರ್ಕಾರ ರಚನೆಗೆ ಟಿವಿಕೆಗಿಲ್ಲ ಬಹುಮತ: ವಿಜಯ್​ ಮುಂದಿರುವ ಆಯ್ಕೆಗಳೇನು?

ಕಾಂಗ್ರೆಸ್ ಮತ್ತು ಎನ್‌ಸಿಪಿ (2014):

ಸೀಟು ಹಂಚಿಕೆ ಮತ್ತು ಮುಖ್ಯಮಂತ್ರಿ ಹುದ್ದೆಯ ಕುರಿತಾದ ಭಿನ್ನಾಭಿಪ್ರಾಯಗಳಿಂದಾಗಿ ಮಹಾರಾಷ್ಟ್ರದಲ್ಲಿ 15 ವರ್ಷಗಳ ಆಡಳಿತ ಮೈತ್ರಿಕೂಟವು 2014ರ ಚುನಾವಣೆಗೆ ಕೆಲವೇ ವಾರಗಳ ಮೊದಲು ಮುರಿದಬಿದ್ದಿತು.

ಜನತಾ ಪಕ್ಷ (1979):

ಭಾರತದ ಮೊದಲ ಕಾಂಗ್ರೆಸ್ಸೇತರ ಸಮ್ಮಿಶ್ರ ಸರ್ಕಾರವು ಕೇವಲ 2 ವರ್ಷಗಳ ನಂತರ ವಿಭಜನೆಯಾಯಿತು. ಆಂತರಿಕ ಅಧಿಕಾರ ಹೋರಾಟಗಳು ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಚರಣ್ ಸಿಂಗ್ ಪಕ್ಷಾಂತರವಾಗಿ ಪ್ರಧಾನಿಯಾಗಲು ಕಾರಣವಾಯಿತು. ಅವರ ಹಿಂದಿನ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಅವರು ಭಾರತದ ಪ್ರಧಾನಿಯಾದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಟೀಲ್ ಪಾತ್ರೆ ಮುಖಕ್ಕೆ ಮೆತ್ತಿಕೊಂಡ ಆರ್​​ಸಿಬಿ ಮಾಲಕಿ ಅನನ್ಯಾ ಬಿರ್ಲಾ: ಚಿತ್ರಗಳ ನೋಡಿ – Kannada News | Ananya Birla at Metgala 2026 here is some pics of Ananya Birla

ಆರ್​​ಸಿಬಿಯ ಹೊಸ ಮಾಲಕಿ ಅನನ್ಯಾ ಬಿರ್ಲಾ, ಉದ್ಯಮಿ ಮಾತ್ರವಲ್ಲ, ಫ್ಯಾಷನ್ ಎಂತೂಸಿಯಾಸ್ಟ್ ಸಹ. ಜೊತೆಗೆ ಖುದ್ದು ಮಾಡೆಲ್ ಸಹ ಆಗಿದ್ದಾರೆ ಅನನ್ಯಾ ಬಿರ್ಲಾ.

Source link

ವಿಚಾರಣೆ ವೇಳೆ ಲಾಕರ್ ಕೀ ನುಂಗಿ ಹೈಡ್ರಾಮಾ: ಆರೋಪಿಯ ವಿಚಿತ್ರ ವರ್ತನೆಗೆ ಪೊಲೀಸರೇ ಶಾಕ್! – Kannada News | Nelamangala: Accused Swallows Key During Interrogation, Police Shocked

ಮಾದನಾಯಕನಹಳ್ಳಿ ಪೊಲೀಸ್ ಠಾಣೆImage Credit source: tv9 kannada

ನೆಲಮಂಗಲ, ಮೇ 06: ಆರೋಪಿ (Accused) ಓರ್ವ ವಿಚಾರಣೆ ವೇಳೆ ಲಾಕರ್ ಕೀ (Key) ನುಂಗಿ ಹೈಡ್ರಾಮಾ ಸೃಷ್ಟಿಸಿದ ಘಟನೆಯೊಂದು ಬೆಂಗಳೂರು ಉತ್ತರದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಬಳ್ಳಾರಿ ಮೂಲದ ಕಾರ್ತಿಕ್ ಅಲಿಯಾಸ್​​ ರಾಮು ಎಂಬಾತನೇ ಈ ವಿಚಿತ್ರ ಕೃತ್ಯ ಎಸಗಿದ ಆರೋಪಿ. ಕೀ ನುಂಗುವ ಮೂಲಕ ಪೊಲೀಸರಿಗೆ ಟೆನ್ಷನ್​ ಕೊಟ್ಟಿದ್ದ. ಆದರೆ ಮಲದ ಮೂಲಕ ಕೀ ಹೊರಬಂದ ಬಳಿಕ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ಪೋಕ್ಸೋ ಕೇಸ್​​ ಭಯಕ್ಕೆ ಕೀ ನುಂಗಿದ ಯುವಕ
  • 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋದ ಆರೋಪ
  • ಏಪ್ರಿಲ್ 24ರಂದು ಪೊಲೀಸ್​ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದ ಬಾಲಕಿ ಪೋಷಕರು
  • ಮಲದ ಮೂಲಕ ಕೀ ಹೊರಬಂದ ಬಳಿಕ ನಿಟ್ಟುಸಿರು ಬಿಟ್ಟ ಪೊಲೀಸರು

ನಡೆದಿದ್ದೇನು?

ಏಪ್ರಿಲ್ 24ರಂದು ಮಾದನಾಯಕನಹಳ್ಳಿ ಪೊಲೀಸ್​ ಠಾಣೆಗೆ ಬಾಲಕಿ ಪೋಷಕರು ನಾಪತ್ತೆ ದೂರು ದಾಖಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋದ ಆರೋಪ ಹಿನ್ನೆಲೆ ಯುವಕ ಕಾರ್ತಿಕ್ ಅಲಿಯಾಸ್​​ ರಾಮು ನನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು.

ಇದನ್ನೂ ಓದಿ: ಕುತೂಹಲಕ್ಕೆ ಹೋಗಿ ನೋಡಿದಾಗ ಎದುರಾಗಿದ್ದು ಶಾಕ್​! ಬಾಲ್ಯ ವಿವಾಹ ತಡೆದ ಅಕ್ಕ ಪಡೆ

ಕಾರ್ತಿಕ್ ಅಲಿಯಾಸ್​​ ರಾಮು ನನ್ನು ಪತ್ತೆ ಹಚ್ಚಿ ಕರೆತಂದ ಪೊಲೀಸರು ಠಾಣೆಯಲ್ಲಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ಪೋಕ್ಸೋ ಕೇಸ್​​ ಭಯಕ್ಕೆ ಲಾಕರ್ ಕೀ ನುಂಗಿದ್ದಾನೆ. ಆ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಈ ಅನಿರೀಕ್ಷಿತ ಘಟನೆಯಿಂದ ಪೊಲೀಸ್ ಸಿಬ್ಬಂದಿ ಬೆಚ್ಚಿಬಿದ್ದರು.

10 ಕೆಜಿ ಬಾಳೆಹಣ್ಣು ತಿನ್ನಿಸಿದ ಪೊಲೀಸರು 

ಘಟನೆ ನಡೆಯುತ್ತಿದ್ದಂತೆ ತಕ್ಷಣ ಆರೋಪಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ 3 ದಿನಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಆರೋಪಿಗೆ 10 ಕೆಜಿ ಬಾಳೆಹಣ್ಣು ತಿನ್ನಿಸಿ ಕೀ ಹೊರ ಬರುವ ಪ್ರಯತ್ನದಲ್ಲಿದ್ದರು. ಮೂರು ದಿನದ ನಂತರ ಮಲದ ಮೂಲಕ ಕೀ ಹೊರಬಂದ ಬಳಿಕ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

ವರದಿ: ಮಂಜುನಾಥ್​​, ಟಿವಿ9, ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದಾವಣಗೆರೆ ಗೊಂದಲ ಸರಿಪಡಿಸದಿದ್ರೆ ‌ಮತ್ತೆ ಅನಾಹುತಗಳಾಗುತ್ತೆ: ಕೈಗೆ ಜಬ್ಬಾರ್ ಎಚ್ಚರಿಕೆ – Kannada News | Suspended MLC abdul Jabbar Warns to Congress If Not resolve the Davanagere Problems

ಬೆಂಗಳೂರು, (ಮೇ 06): ಸಾಕಷ್ಟು ಗೊಂದಲ, ಸವಾಲುಗಳ ನಡುವೆಯೂ ದಾವಣಗೆರೆ ದಕ್ಷಿಣ (Davanagere South) ಕ್ಷೇತ್ರವನ್ನು ಮರಳಿ ತೆಕ್ಕೆಗೆ ಪಡೆಯುವಲ್ಲಿ ಆಡಳಿತಾರೂಢ ಕಾಂಗ್ರೆಸ್​​ (Congress) ಯಶಸ್ವಿಯಾಗಿದೆ. ಆದರೂ ಅಸಮಾಧಾನ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಉಪಚುನಾವಣೆ ಟಿಕೆಟ್ ಸಂಬಂಧ ಕಾಂಗ್ರೆಸ್ ನಲ್ಲಿ ಸಾಕಷ್ಟು ಹೈಡ್ರಾಮಾಗಳು ನಡೆದಿದ್ದು, ಕೊನೆಗೆ ಅಲ್ಪಸಂಖ್ಯಾತ ನಾಯಕರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದೆ. ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನ ಪಕ್ಷದಿಂದ ಅಮಾನತು ಮಾಡಲಾಗಿದ್ದು, ಇದೀಗ ಅದನ್ನು ವಾಪಸ್ ಪಡೆಯುವಂತೆ ಕೆಲ ನಾಯಕರು ಸಲಹೆ ನೀಡಿದ್ದಾರೆ.

ಈ ಸಂಬಂಧ ಖುದ್ದು ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಪ್ರತಿಕ್ರಿಯಿಸಿದ್ದು, ಎಸ್ ಡಿ ಪಿಐ ಪಡೆದಿದ್ದು 100% ಕಾಂಗ್ರೆಸ್ ಮತಗಳು.ಶಾಮನೂರು ಇದ್ದಾಗಲೇ ನಾವು ಟಿಕೆಟ್ ಕೇಳಿದ್ದೆವು. ಅವರು ಇಲ್ಲದಾಗೂ ಟಿಕೆಟ್ ಕೇಳಿದ್ದೇವೆ. ಅದಕ್ಕೆ ಇಷ್ಟೆಲ್ಲಾ ಆಯ್ತು. ಮುಂದೆ ಎಲ್ಲ ಸರಿ ಹೋಗಬಹುದು. ಸರಿ ಮಾಡಲು ಅವಕಾಶ ಇದೆ. ತಪ್ಪು ಸರಿಪಡಿಸದೆ ಹೋದ್ರೆ ‌ಮತ್ತೆ ಅನಾಹುತಗಳಾಗುತ್ತೆ ಎಂದು ಕಾಂಗ್ರೆಸ್​​​​​​ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ನೋಡಿ: ದಾವಣಗೆರೆ ದಕ್ಷಿಣ ಉಪ ಚುನಾವಣೆ ಗೆದ್ದರೂ ಕಾಂಗ್ರೆಸ್​​ಗೆ ತಪ್ಪದ ಚಿಂತೆ: ಕಾರಣ ಇಲ್ಲಿದೆ

Source link

Exit mobile version