ದಾವಣಗೆರೆ ಗೊಂದಲ ಸರಿಪಡಿಸದಿದ್ರೆ ಮತ್ತೆ ಅನಾಹುತಗಳಾಗುತ್ತೆ: ಕೈಗೆ ಜಬ್ಬಾರ್ ಎಚ್ಚರಿಕೆ – Kannada News | Suspended MLC abdul Jabbar Warns to Congress If Not resolve the Davanagere Problems
ಬೆಂಗಳೂರು, (ಮೇ 06): ಸಾಕಷ್ಟು ಗೊಂದಲ, ಸವಾಲುಗಳ ನಡುವೆಯೂ ದಾವಣಗೆರೆ ದಕ್ಷಿಣ (Davanagere South) ಕ್ಷೇತ್ರವನ್ನು ಮರಳಿ ತೆಕ್ಕೆಗೆ ಪಡೆಯುವಲ್ಲಿ ಆಡಳಿತಾರೂಢ ಕಾಂಗ್ರೆಸ್ (Congress) ಯಶಸ್ವಿಯಾಗಿದೆ. ಆದರೂ ಅಸಮಾಧಾನ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಉಪಚುನಾವಣೆ ಟಿಕೆಟ್ ಸಂಬಂಧ ಕಾಂಗ್ರೆಸ್ ನಲ್ಲಿ ಸಾಕಷ್ಟು ಹೈಡ್ರಾಮಾಗಳು ನಡೆದಿದ್ದು, ಕೊನೆಗೆ ಅಲ್ಪಸಂಖ್ಯಾತ ನಾಯಕರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದೆ. ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನ ಪಕ್ಷದಿಂದ ಅಮಾನತು ಮಾಡಲಾಗಿದ್ದು, ಇದೀಗ ಅದನ್ನು ವಾಪಸ್ ಪಡೆಯುವಂತೆ ಕೆಲ ನಾಯಕರು ಸಲಹೆ ನೀಡಿದ್ದಾರೆ….