ಸ್ಟೀಲ್ ಪಾತ್ರೆ ಮುಖಕ್ಕೆ ಮೆತ್ತಿಕೊಂಡ ಆರ್​​ಸಿಬಿ ಮಾಲಕಿ ಅನನ್ಯಾ ಬಿರ್ಲಾ: ಚಿತ್ರಗಳ ನೋಡಿ – Kannada News | Ananya Birla at Metgala 2026 here is some pics of Ananya Birla

ಆರ್​​ಸಿಬಿಯ ಹೊಸ ಮಾಲಕಿ ಅನನ್ಯಾ ಬಿರ್ಲಾ, ಉದ್ಯಮಿ ಮಾತ್ರವಲ್ಲ, ಫ್ಯಾಷನ್ ಎಂತೂಸಿಯಾಸ್ಟ್ ಸಹ. ಜೊತೆಗೆ ಖುದ್ದು ಮಾಡೆಲ್ ಸಹ ಆಗಿದ್ದಾರೆ ಅನನ್ಯಾ ಬಿರ್ಲಾ.

Source link

ವಿಚಾರಣೆ ವೇಳೆ ಲಾಕರ್ ಕೀ ನುಂಗಿ ಹೈಡ್ರಾಮಾ: ಆರೋಪಿಯ ವಿಚಿತ್ರ ವರ್ತನೆಗೆ ಪೊಲೀಸರೇ ಶಾಕ್! – Kannada News | Nelamangala: Accused Swallows Key During Interrogation, Police Shocked

ಮಾದನಾಯಕನಹಳ್ಳಿ ಪೊಲೀಸ್ ಠಾಣೆImage Credit source: tv9 kannada

ನೆಲಮಂಗಲ, ಮೇ 06: ಆರೋಪಿ (Accused) ಓರ್ವ ವಿಚಾರಣೆ ವೇಳೆ ಲಾಕರ್ ಕೀ (Key) ನುಂಗಿ ಹೈಡ್ರಾಮಾ ಸೃಷ್ಟಿಸಿದ ಘಟನೆಯೊಂದು ಬೆಂಗಳೂರು ಉತ್ತರದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಬಳ್ಳಾರಿ ಮೂಲದ ಕಾರ್ತಿಕ್ ಅಲಿಯಾಸ್​​ ರಾಮು ಎಂಬಾತನೇ ಈ ವಿಚಿತ್ರ ಕೃತ್ಯ ಎಸಗಿದ ಆರೋಪಿ. ಕೀ ನುಂಗುವ ಮೂಲಕ ಪೊಲೀಸರಿಗೆ ಟೆನ್ಷನ್​ ಕೊಟ್ಟಿದ್ದ. ಆದರೆ ಮಲದ ಮೂಲಕ ಕೀ ಹೊರಬಂದ ಬಳಿಕ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ಪೋಕ್ಸೋ ಕೇಸ್​​ ಭಯಕ್ಕೆ ಕೀ ನುಂಗಿದ ಯುವಕ
  • 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋದ ಆರೋಪ
  • ಏಪ್ರಿಲ್ 24ರಂದು ಪೊಲೀಸ್​ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದ ಬಾಲಕಿ ಪೋಷಕರು
  • ಮಲದ ಮೂಲಕ ಕೀ ಹೊರಬಂದ ಬಳಿಕ ನಿಟ್ಟುಸಿರು ಬಿಟ್ಟ ಪೊಲೀಸರು

ನಡೆದಿದ್ದೇನು?

ಏಪ್ರಿಲ್ 24ರಂದು ಮಾದನಾಯಕನಹಳ್ಳಿ ಪೊಲೀಸ್​ ಠಾಣೆಗೆ ಬಾಲಕಿ ಪೋಷಕರು ನಾಪತ್ತೆ ದೂರು ದಾಖಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋದ ಆರೋಪ ಹಿನ್ನೆಲೆ ಯುವಕ ಕಾರ್ತಿಕ್ ಅಲಿಯಾಸ್​​ ರಾಮು ನನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು.

ಇದನ್ನೂ ಓದಿ: ಕುತೂಹಲಕ್ಕೆ ಹೋಗಿ ನೋಡಿದಾಗ ಎದುರಾಗಿದ್ದು ಶಾಕ್​! ಬಾಲ್ಯ ವಿವಾಹ ತಡೆದ ಅಕ್ಕ ಪಡೆ

ಕಾರ್ತಿಕ್ ಅಲಿಯಾಸ್​​ ರಾಮು ನನ್ನು ಪತ್ತೆ ಹಚ್ಚಿ ಕರೆತಂದ ಪೊಲೀಸರು ಠಾಣೆಯಲ್ಲಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ಪೋಕ್ಸೋ ಕೇಸ್​​ ಭಯಕ್ಕೆ ಲಾಕರ್ ಕೀ ನುಂಗಿದ್ದಾನೆ. ಆ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಈ ಅನಿರೀಕ್ಷಿತ ಘಟನೆಯಿಂದ ಪೊಲೀಸ್ ಸಿಬ್ಬಂದಿ ಬೆಚ್ಚಿಬಿದ್ದರು.

10 ಕೆಜಿ ಬಾಳೆಹಣ್ಣು ತಿನ್ನಿಸಿದ ಪೊಲೀಸರು 

ಘಟನೆ ನಡೆಯುತ್ತಿದ್ದಂತೆ ತಕ್ಷಣ ಆರೋಪಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ 3 ದಿನಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಆರೋಪಿಗೆ 10 ಕೆಜಿ ಬಾಳೆಹಣ್ಣು ತಿನ್ನಿಸಿ ಕೀ ಹೊರ ಬರುವ ಪ್ರಯತ್ನದಲ್ಲಿದ್ದರು. ಮೂರು ದಿನದ ನಂತರ ಮಲದ ಮೂಲಕ ಕೀ ಹೊರಬಂದ ಬಳಿಕ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

ವರದಿ: ಮಂಜುನಾಥ್​​, ಟಿವಿ9, ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದಾವಣಗೆರೆ ಗೊಂದಲ ಸರಿಪಡಿಸದಿದ್ರೆ ‌ಮತ್ತೆ ಅನಾಹುತಗಳಾಗುತ್ತೆ: ಕೈಗೆ ಜಬ್ಬಾರ್ ಎಚ್ಚರಿಕೆ – Kannada News | Suspended MLC abdul Jabbar Warns to Congress If Not resolve the Davanagere Problems

ಬೆಂಗಳೂರು, (ಮೇ 06): ಸಾಕಷ್ಟು ಗೊಂದಲ, ಸವಾಲುಗಳ ನಡುವೆಯೂ ದಾವಣಗೆರೆ ದಕ್ಷಿಣ (Davanagere South) ಕ್ಷೇತ್ರವನ್ನು ಮರಳಿ ತೆಕ್ಕೆಗೆ ಪಡೆಯುವಲ್ಲಿ ಆಡಳಿತಾರೂಢ ಕಾಂಗ್ರೆಸ್​​ (Congress) ಯಶಸ್ವಿಯಾಗಿದೆ. ಆದರೂ ಅಸಮಾಧಾನ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಉಪಚುನಾವಣೆ ಟಿಕೆಟ್ ಸಂಬಂಧ ಕಾಂಗ್ರೆಸ್ ನಲ್ಲಿ ಸಾಕಷ್ಟು ಹೈಡ್ರಾಮಾಗಳು ನಡೆದಿದ್ದು, ಕೊನೆಗೆ ಅಲ್ಪಸಂಖ್ಯಾತ ನಾಯಕರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದೆ. ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನ ಪಕ್ಷದಿಂದ ಅಮಾನತು ಮಾಡಲಾಗಿದ್ದು, ಇದೀಗ ಅದನ್ನು ವಾಪಸ್ ಪಡೆಯುವಂತೆ ಕೆಲ ನಾಯಕರು ಸಲಹೆ ನೀಡಿದ್ದಾರೆ.

ಈ ಸಂಬಂಧ ಖುದ್ದು ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಪ್ರತಿಕ್ರಿಯಿಸಿದ್ದು, ಎಸ್ ಡಿ ಪಿಐ ಪಡೆದಿದ್ದು 100% ಕಾಂಗ್ರೆಸ್ ಮತಗಳು.ಶಾಮನೂರು ಇದ್ದಾಗಲೇ ನಾವು ಟಿಕೆಟ್ ಕೇಳಿದ್ದೆವು. ಅವರು ಇಲ್ಲದಾಗೂ ಟಿಕೆಟ್ ಕೇಳಿದ್ದೇವೆ. ಅದಕ್ಕೆ ಇಷ್ಟೆಲ್ಲಾ ಆಯ್ತು. ಮುಂದೆ ಎಲ್ಲ ಸರಿ ಹೋಗಬಹುದು. ಸರಿ ಮಾಡಲು ಅವಕಾಶ ಇದೆ. ತಪ್ಪು ಸರಿಪಡಿಸದೆ ಹೋದ್ರೆ ‌ಮತ್ತೆ ಅನಾಹುತಗಳಾಗುತ್ತೆ ಎಂದು ಕಾಂಗ್ರೆಸ್​​​​​​ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ನೋಡಿ: ದಾವಣಗೆರೆ ದಕ್ಷಿಣ ಉಪ ಚುನಾವಣೆ ಗೆದ್ದರೂ ಕಾಂಗ್ರೆಸ್​​ಗೆ ತಪ್ಪದ ಚಿಂತೆ: ಕಾರಣ ಇಲ್ಲಿದೆ

Source link

ಮಗಳ ಮದುವೆಗೆ ಖರೀದಿಸಿದ್ದ ಚಿನ್ನವನ್ನು ಹೋಟೆಲ್​​ನಲ್ಲಿ ಮರೆತುಹೋದ ತಾಯಿ: ಮುಂದಾಗಿದ್ದು ಭಾವುಕ ಕ್ಷಣ – Kannada News | Bagalkote Hotel Owner Returns 1.5 Lakh Worth Forgotten Gold to Woman; Honesty Wins Praise

ಮಹಿಳೆಗೆ ಬಂಗಾರ ಹಸ್ತಾಂತರImage Credit source: Tv9 Kannada

ಬಾಗಲಕೋಟೆ, ಮೇ 06:  ಮಗಳ ಮದುವೆಗೆಂದು ಖರೀದಿಸಿದ್ದ ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಅಭರಣವನ್ನು ಮಹಿಳೆಯೋರ್ವರು ಹೋಟೆಲ್​​ನಲ್ಲಿಯೇ ಮರೆತು ಬಿಟ್ಟು ಹೋಗಿದ್ದು, ಇದನ್ನು ಹೋಟೆಲ್​​ ಮಾಲೀಕರು ಮರಳಿ ಆಕೆಗೆ ಹಸ್ತಾಂತರಿಸಿರುವ ಘಟನೆಗೆ ಬಾಗಲಕೋಟೆ ಸಾಕ್ಷಿಯಾಗಿದೆ. ಸಿಕ್ಕ ಬಂಗಾರವನ್ನು ಇಟ್ಟುಕೊಳ್ಳದೆ ಅದರ ನಿಜ ವಾರಸುದಾರರಿಗೆ ಹಸ್ತಾಂತರಿಸಿದ ಹೋಟೆಲ್​​ ಮಾಲೀಕನ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಮರಳಿ ಬಂಗಾರ ಸಿಕ್ಕ ಹಿನ್ನೆಲೆ ಮಹಿಳೆ ಕೆಲ ಕಾಲ ಭಾವುಕರಾದ ಪ್ರಸಂಗವೂ ನಡೆದಿದೆ.

  • ಮಗಳ ಮದುವೆಗೆ ಖರೀದಿಸಿದ್ದ ಚಿನ್ನವನ್ನು ಹೋಟೆಲ್​​ನಲ್ಲಿ ಮರೆತ ತಾಯಿ
  • ಆಭರಣವನ್ನು ಮರಳಿ ಹಿಂದಿರುಗಿಸಿ ಹೋಟೆಲ್​​ ಮಾಲೀಕರ ಮಾನವೀಯತೆ
  • ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಹೋಟೆಲ್​​ ಒಂದರಲ್ಲಿ ಘಟನೆ

ಇದನ್ನೂ ಓದಿ: ಬಾಗಲಕೋಟೆ ಕಾರ್ಮಿಕರ ಖಾತೆಗೆ ಕೋಟಿ ಕೋಟಿ ಹಣ; ಮುಂದಾಗಿದ್ದೇನು ಗೊತ್ತಾ?

ಬಾಗಲಕೋಟೆ ಜಿಲ್ಲೆಯ ಬೆಳ್ಳಿಖಿಂಡಿ ಗ್ರಾಮದ ಲಕ್ಷ್ಮವ್ವ ಮುದನೂರು ಎಂಬ ಮಹಿಳೆ ಮಗಳ ಮದುವೆಗೆಂದು ಖರೀದಿಸಿದ್ದ ಚಿನ್ನದ ಜೊತೆ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಹೋಟೆಲ್​​ ಒಂದಕ್ಕೆ ಟಿಫಿನ್​​ ತಿನ್ನಲೆಂದು ತೆರಳಿದ್ದರು. ತಿಂಡಿ ತಿಂದ ಬಳಿಕ ತಾವು ಖರೀದಿಸಿ ತಂದಿದ್ದ ಚಿನ್ನದ ಗೋರಮಾಳ ಸರವನ್ನ ಮರೆತು ಹೋಟೆಲ್​​ನಲ್ಲಿಯೇ ಬಿಟ್ಟು ತೆರಳಿದ್ದರು. ಯಾರೋ ಚಿನ್ನವನ್ನು ಬಿಟ್ಟು ಹೋಗಿರುವ ವಿಷಯ ತಿಳಿಯುತ್ತಿದ್ದಂತೆ ಹೊಟೇಲ್ ಮಾಲೀಕ ಹುಸೇನಸಾಬ್ ಹಾಗೂ ಆತನ ತಾಯಿ ಮಾಸಾಬಿ ಅದನ್ನು ಭದ್ರವಾಗಿ ಎತ್ತಿಟ್ಟಿದ್ದರು. ಇದಾದ ಮೂರು ದಿನಗಳ ಬಳಿಕ ಲಕ್ಷ್ಮವ್ವ ತಾನು ಮರೆತು ಬಿಟ್ಟು ಹೋಗಿದ್ದ ಆಭರಣದ ಬಗ್ಗೆ ವಿಚಾರಿಸಿಕೊಂಡು ಬಂದಿದ್ದಾರೆ. ಈ ವೇಳೆ ಆಕೆಯ ಬಳಿ ಆಭರಣದ ಕುರುಹು ಕೇಳಿರುವ ಹೋಟೆಲ್​​ ಮಾಲೀಕರು ಚಿನ್ನ ಲಕ್ಷ್ಮವ್ವಗ್ಗೇ ಸೇರಿದ್ದೆಂದು ಖಚಿತಪಡಿಸಿಕೊಂಡು ಅದನ್ನು ಅವರಿಗೆ ಹಿಂದಿರುಗಿಸಿದ್ದಾರೆ.

ಹೋಟೆಲ್​​ ಮಾಲೀಕರ ಮಾನವೀಯತೆಗೆ ಬಹುಪರಾಕ್​​

ಮಾನವೀಯತೆಯ ದೃಷ್ಟಿಯಿಂದ ತಮಗೆ ಸಿಕ್ಕಿದ್ದ ಚಿನ್ನಾಭರಣವನ್ನು ವಾರಸುದಾರರಿಗೆ ಮರಳಿ ಹಸ್ತಾಂತರಿಸಿರುವ ಹೊಟೇಲ್ ಮಾಲೀಕ ಹುಸೇನ್ ಸಾಬ್ ಮತ್ತು ಅವರ ತಾಯಿ ಮಾಸಾಬಿ ಅವರ ಕಾರ್ಯಕ್ಕೆ ಲಕ್ಷ್ಮವ್ವ ಮೆಚ್ಚುಗೆ ವ್ಯಕ್ತಪಡಿಸಿದ್ದು, ನೀನು ಸಹ ಒಬ್ಬ ನನ್ನ ಮನೆಯ ಮಗಳು ಎಂದು ಮಾಸಾಬಿ ಅವರಿಗೆ ಸೀರೆ ನೀಡಿ ಧನ್ಯವಾದ ಅರ್ಪಿಸಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವೊಡಾಫೋನ್ ಐಡಿಯಾ ಸಾರಥ್ಯ ವಹಿಸಿಕೊಂಡ ಕುಮಾರ್ ಮಂಗಳಂ ಬಿರ್ಲಾ; ಕಂಪನಿಯ ಷೇರು ಮೌಲ್ಯ ಶೇ. 5ರಷ್ಟು ಜಿಗಿತ! – Kannada News | Vodafone Idea: Kumar Mangalam Birla Appointed non executive Chairman, Shares Soar 5pc

ಕುಮಾರ್ ಮಂಗಳಂ ಬಿರ್ಲಾImage Credit source: Gemini AI

ಮುಂಬೈ, ಮೇ 6: ಸಾಲದ ಸುಳಿಯಲ್ಲಿ ಸಿಲುಕಿರುವ ದೇಶದ ಪ್ರಮುಖ ಟೆಲಿಕಾಂ ಸಂಸ್ಥೆ ‘ವೊಡಾಫೋನ್ ಐಡಿಯಾ ಲಿಮಿಟೆಡ್’ (Vi), ತನ್ನ ಆಡಳಿತ ಮಂಡಳಿಯಲ್ಲಿ ಅತ್ಯಂತ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಆದಿತ್ಯ ಬಿರ್ಲಾ ಗ್ರೂಪ್‌ನ ಮುಖ್ಯಸ್ಥರಾದ ಕುಮಾರ್ ಮಂಗಳಂ ಬಿರ್ಲಾ (Kumar Mangalam Birla) ಅವರನ್ನು ವೊಡಾಫೋನ್ ಐಡಿಯಾ ಮಂಡಳಿಯ ನೂತನ ನಾನ್-ಎಕ್ಸಿಕ್ಯೂಟಿವ್ ಚೇರ್ಮನ್ (Non-Executive Chairman) ಆಗಿ ನೇಮಕ ಮಾಡಲಾಗಿದೆ.

ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿದ್ದು, ಷೇರು ಮಾರುಕಟ್ಟೆಯಲ್ಲಿ ವೊಡಾಫೋನ್ ಐಡಿಯಾದ ಷೇರುಗಳ ಮೌಲ್ಯವು ಶೇಕಡಾ 5 ರಷ್ಟು ಭಾರಿ ಏರಿಕೆಯನ್ನು ಕಂಡಿದೆ.

ರವೀಂದರ್ ಟಕ್ಕರ್ ರಾಜೀನಾಮೆ – ಹೊಸ ಜವಾಬ್ದಾರಿ

ಇಲ್ಲಿಯವರೆಗೆ ವೊಡಾಫೋನ್ ಐಡಿಯಾದ ನಾನ್-ಎಕ್ಸಿಕ್ಯೂಟಿವ್ ಚೇರ್ಮನ್ ಆಗಿ ಸೇವೆ ಸಲ್ಲಿಸುತ್ತಿದ್ದ ರವೀಂದರ್ ಟಕ್ಕರ್ (Ravinder Takkar) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಸ್ವಯಂ ವಿನಂತಿಯ ಮೇರೆಗೆ ಆಡಳಿತ ಮಂಡಳಿಯು ಅವರ ರಾಜೀನಾಮೆಯನ್ನು ಅಂಗೀಕರಿಸಿದೆ. ಆದರೆ, ಅವರು ಕಂಪನಿಯಿಂದ ಸಂಪೂರ್ಣವಾಗಿ ಹೊರಹೋಗುತ್ತಿಲ್ಲ. ಬದಲಿಗೆ, ಅವರನ್ನು ಮಂಡಳಿಯ ನಾನ್-ಎಕ್ಸಿಕ್ಯೂಟಿವ್ ವೈಸ್ ಚೇರ್ಮನ್ (Vice Chairman) ಆಗಿ ಮರುನಾಮಕರಣ ಮಾಡಲಾಗಿದ್ದು, ಅವರು ಬಿರ್ಲಾ ಅವರಿಗೆ ಬೆಂಬಲವಾಗಿ ಮುಂದುವರಿಯಲಿದ್ದಾರೆ. ಈ ಎಲ್ಲಾ ಬದಲಾವಣೆಗಳು ಮೇ 5, 2026 ರಿಂದಲೇ ಜಾರಿಗೆ ಬಂದಿವೆ ಎಂದು ಕಂಪನಿಯು ಷೇರು ಮಾರುಕಟ್ಟೆಗಳಿಗೆ (NSE ಮತ್ತು BSE) ಸಲ್ಲಿಸಿದ ನಿಯಂತ್ರಕ ವರದಿಯಲ್ಲಿ (ರೆಗ್ಯುಲೇಟರಿ ಫೈಲಿಂಗ್) ತಿಳಿಸಿದೆ.

ಇದನ್ನೂ ಓದಿ: ಕ್ಲೋಡ್​ನ ಈ ಎಐ ಮಾಡಲ್​ಗೆ ಬೆಚ್ಚಿಬಿದ್ದ ಬ್ಯಾಂಕುಗಳು; ಉನ್ನತ ಮಟ್ಟದ ಸಭೆ ಕರೆದ ನಿರ್ಮಲಾ ಸೀತಾರಾಮನ್

ಬಿರ್ಲಾ ಅವರ ಪುನರಾಗಮನ

ಕುಮಾರ್ ಮಂಗಳಂ ಬಿರ್ಲಾ ಅವರು ಈ ಹಿಂದೆ ಆಗಸ್ಟ್ 2018 ರಿಂದ ಸುಮಾರು ನಾಲ್ಕು ವರ್ಷಗಳ ಕಾಲ ವೊಡಾಫೋನ್ ಐಡಿಯಾದ ಚೇರ್ಮನ್ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ ಕಂಪನಿಯು ತೀವ್ರ ಆರ್ಥಿಕ ಬಿಕ್ಕಟ್ಟು ಹಾಗೂ ಹೊಂದಾಣಿಕೆಯ ಒಟ್ಟು ಆದಾಯ (AGR) ಬಾಕಿಯ ಹೊರೆಯಿಂದ ಕಂಗಾಲಾಗಿದ್ದಾಗ, ಅವರು ಆಗಸ್ಟ್ 2021 ರಲ್ಲಿ ಮಂಡಳಿಗೆ ರಾಜೀನಾಮೆ ನೀಡಿದ್ದರು. ನಂತರ ಏಪ್ರಿಲ್ 2023 ರಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಮಂಡಳಿಯನ್ನು ಮರುಪ್ರವೇಶಿಸಿದ್ದ ಬಿರ್ಲಾ, ಈಗ ಮತ್ತೆ ಕಂಪನಿಯ ಸರ್ವೋಚ್ಚ ಸ್ಥಾನಕ್ಕೆ ಮರಳಿದ್ದಾರೆ.

ನೆರವಾದ ಸರ್ಕಾರದ ನಿರ್ಧಾರ (AGR Relief)

ಇತ್ತೀಚೆಗಷ್ಟೇ ಭಾರತ ಸರ್ಕಾರವು ವೊಡಾಫೋನ್ ಐಡಿಯಾದ ಎಜಿಆರ್ (AGR) ಬಾಕಿ ಮೊತ್ತವನ್ನು ಶೇಕಡಾ 27 ರಷ್ಟು ಕಡಿತಗೊಳಿಸಿ, 64,046 ಕೋಟಿ ರೂಗೆ ಇಳಿಸುವ ಮಹತ್ವದ ತೀರ್ಮಾನ ಕೈಗೊಂಡಿತ್ತು. ಈ ಪರಿಹಾರದ ಬೆನ್ನಲ್ಲೇ ಬಿರ್ಲಾ ಅವರ ನೇಮಕಾತಿ ನಡೆದಿರುವುದು ಗಮನಾರ್ಹವಾಗಿದೆ. ಸರ್ಕಾರದ ಈ ಕ್ರಮದಿಂದಾಗಿ ಕಂಪನಿಗೆ ಬ್ಯಾಂಕುಗಳಿಂದ ಸಾಲ ಪಡೆಯಲು ಮತ್ತು ಹೊಸ ನಿಧಿ ಸಂಗ್ರಹಿಸಲು ಹಾದಿ ಸುಲಭವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಯೋಜನೆ ಮತ್ತು ಹೂಡಿಕೆ

ವೊಡಾಫೋನ್ ಐಡಿಯಾ ಮುಂದಿನ ಮೂರು ವರ್ಷಗಳಲ್ಲಿ ಸುಮಾರು 45,000 ಕೋಟಿ ರೂ ಬಂಡವಾಳ ಹೂಡಿಕೆ (Capital Expenditure) ಮಾಡಲು ಯೋಜಿಸಿದೆ. ಇದಕ್ಕಾಗಿ ವಿವಿಧ ಬ್ಯಾಂಕುಗಳಿಂದ 25,000 ಕೋಟಿ ರೂ ಸಾಲ ಪಡೆಯಲು ಹಾಗೂ ಇನ್ನುಳಿದ ಹಣವನ್ನು ಇತರ ಮೂಲಗಳಿಂದ ಸಂಗ್ರಹಿಸಲು ಕಂಪನಿ ಸಜ್ಜಾಗುತ್ತಿದೆ. ನೆಟ್‌ವರ್ಕ್ ವಿಸ್ತರಣೆ ಮಾಡುವುದು, 5G ಸೇವೆಗಳನ್ನು ಬಲಪಡಿಸುವುದು ಮತ್ತು ಗ್ರಾಹಕರನ್ನು ಉಳಿಸಿಕೊಳ್ಳುವುದು ಬಿರ್ಲಾ ಅವರ ನೇತೃತ್ವದ ನೂತನ ಮಂಡಳಿಯ ಪ್ರಮುಖ ಆದ್ಯತೆಯಾಗಲಿದೆ.

ಇದನ್ನೂ ಓದಿ: ಏರ್​ಲೈನ್ಸ್, ಎಂಎಸ್​ಎಂಇಗಳಿಗೆ ಬೆಂಬಲಿಸುವ ಇಸಿಎಲ್​ಜಿಎಸ್ 5.0 ಸ್ಕೀಮ್​ಗೆ ಅನುಮೋದನೆ

ಮಾರುಕಟ್ಟೆಯಲ್ಲಿ ಸಂಚಲನ

ಬಿರ್ಲಾ ಅವರಂತಹ ಹಿರಿಯ ಮತ್ತು ಪ್ರಭಾವಿ ಉದ್ಯಮಿ ಮತ್ತೆ ಕಂಪನಿಯ ಚುಕ್ಕಾಣಿ ಹಿಡಿದಿರುವುದು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದೆ. ಇದರಿಂದಾಗಿ ಬಿಎಸ್ಇ (BSE) ಮತ್ತು ಎನ್ಎಸ್ಇ (NSE) ಮಾರುಕಟ್ಟೆಗಳಲ್ಲಿ ಬುಧವಾರದ ವಹಿವಾಟಿನ ಅವಧಿಯಲ್ಲಿ ವೊಡಾಫೋನ್ ಐಡಿಯಾ ಷೇರುಗಳು ಶೇಕಡಾ 5 ರಷ್ಟು ಪ್ರಗತಿ ಸಾಧಿಸಿ, ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಗೆಲುವಿಗೆ ಕೇವಲ ‘ಸ್ಟಾರ್ ಗಿರಿ’ ಕಾರಣವೇ? ನಿಜ ಏನೆಂದು ಇಲ್ಲಿ ತಿಳಿಯಿರಿ – Kannada News | Did Thalapathy Vijay win only because of his stardom see his social works

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದಳಪತಿ ವಿಜಯ್ (Thalapathy Vijay) ಅಭೂತಪೂರ್ವ ಗೆಲುವು ಕಂಡಿದ್ದಾರೆ. ವಿಜಯ್ ಅವರ ಗೆಲುವು ಅದೆಷ್ಟು ಸದ್ದು ಮಾಡಿದೆಯೆಂದರೆ ಇತರೆ ರಾಜ್ಯಗಳ ಫಲಿತಾಂಶಗಳು ಹಿನ್ನೆಲೆಗೆ ಸರಿದು ಬಿಟ್ಟಿವೆ. ಪಕ್ಷ ಕಟ್ಟಿದ ಎರಡೇ ವರ್ಷದಲ್ಲಿ ವಿಜಯ್ ಚುನಾವಣೆ ಗೆದ್ದು ಸಿಎಂ ಆಗಲಿದ್ದಾರೆ. ಆದರೆ ವಿಜಯ್ ಗೆಲುವನ್ನು ವಿಶ್ಲೇಷಿಸುತ್ತಿರುವವರು ಅವರು ಸ್ಟಾರ್ ಗಿರಿಯ ಬಲದಿಂದ ಗೆದ್ದಿದ್ದಾರೆ. ಸಿನಿಮಾ ಸ್ಟಾರ್ ಆಗಿ ಧಕ್ಕಿಸಿಕೊಂಡಿರುವ ಜನಪ್ರಿಯತೆಯೇ ಅವರನ್ನು ಗೆಲ್ಲಿಸಿದೆ ಎನ್ನುತ್ತಿದ್ದಾರೆ. ಅವರ ಗೆಲುವಿಗೆ ಸ್ಟಾರ್ ಗಿರಿ ಸಹಾಯ ಮಾಡಿದೆಯಾದರೂ ಅದೊಂದರಿಂದಲೇ ವಿಜಯ್ ಗೆದ್ದಿದ್ದಾರೆ ಎಂಬುದು ಅಪ್ಪಟ ಸುಳ್ಳು. ವಿಜಯ್ ರಾಜಕೀಯ ಪಕ್ಷ ಸ್ಥಾಪಿಸಿ ಎರಡು ವರ್ಷವೇ ಆಗಿರಬಹುದು ಆದರೆ ಸಮಾಜ ಸೇವೆಯನ್ನು ಸುಮಾರು ಎರಡು ದಶಕಕ್ಕೂ ಹೆಚ್ಚು ಸಮಯದಿಂದಲೂ ಮಾಡುತ್ತಿದ್ದಾರೆ. ಅದರ ಪಟ್ಟಿ ಇಲ್ಲಿದೆ ನೋಡಿ…

1996 ಮತ್ತು 98 ರಲ್ಲಿ ರಲ್ಲಿ ಚೆನ್ನೈನಲ್ಲಿ ನೆರೆ ಪರಿಸ್ಥಿತಿ ಉಂಟಾದಾಗ ಆಗಿನ ಸಮಯದಲ್ಲಿ ಭಾರಿ ಪ್ರಮಾಣದ ಹಣ ಸಹಾಯವನ್ನು ಸಂತ್ರಸ್ಥರಿಗಾಗಿ ವಿಜಯ್ ಮಾಡಿದ್ದರು. ಬಳಿಕ ಕಾರ್ಗಿಲ್ ಯುದ್ಧದ ಸಮಯದಲ್ಲಿ ಬೀದಿಗಿಳಿದು ದೇಣಿಗೆ ಸಂಗ್ರಹಿಸಿದ್ದು ಮಾತ್ರವೇ ಅಲ್ಲದೆ ಖುದ್ದು ಲಕ್ಷಾಂತರ ರೂಪಾಯಿ ಹಣವನ್ನು ಸೈನಿಕರ ನಿಧಿಗೆ ನೀಡಿದ್ದರು. 2001 ರ ಗುಜರಾತ್ ಭೂಪಂಕದ ಸಂದರ್ಭದಲ್ಲಿಯೂ ಸಹ ದೇಣಿಗೆ ಸಂಗ್ರಹಿಸಿದ್ದರು, ದೇಣಿಗೆ ನೀಡಿದ್ದರು ಸಹ.

2004 ರ ಸುನಾಮಿ ಸಮಯದಲ್ಲಿ ಭಾರಿ ಮೊತ್ತದ ಹಣಕಾಸು ದೇಣಿಗೆ ನೀಡುವ ಜೊತೆಗೆ ಸಂತ್ರಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. 2007 ರಲ್ಲಿ ವಿಜಯ್ ಉಚಿತ ಶಾಲೆಯೊಂದನ್ನು ಪ್ರಾರಂಭಿಸಿದರು. ಕೆಲ ವರ್ಷಗಳ ಬಳಿಕ ಮತ್ತೊಂದು ಶಾಲೆಯಲ್ಲಿ ಪ್ರಾರಂಭ ಮಾಡಿದರು. ಫ್ರೀ ಕಂಪ್ಯೂಟರ್ ಸೆಂಟರ್​​ ಅನ್ನು 2010 ರ ಸಮಯದಲ್ಲಿ ಪ್ರಾರಂಭಿಸಿದರು. 2010 ರಲ್ಲಿ 300 ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದರು. 2011 ರಲ್ಲಿ ಶಾಲಾ ಮಕ್ಕಳಿಗೆ ಸೈಕಲ್, ಅಂಗವಿಲಕರಿಗೆ ವಾಹನಗಳನ್ನು ಸ್ವಂತ ಹಣದಲ್ಲಿ ನೀಡಿದ್ದರು.

ಇದನ್ನೂ ಓದಿ:ದಳಪತಿ ವಿಜಯ್ ಪಕ್ಷದಿಂದ ಗೆದ್ದು ಶಾಸಕರಾದ ತುಮಕೂರು ಮೂಲದ ಸುನೀಲ್ ಆನಂದ್ ಬಗ್ಗೆ ನಿಮಗೆ ಗೊತ್ತೇ!

ಅದೇ ಸಮಯದಲ್ಲಿ, ತಮ್ಮ ಹುಟ್ಟುಹಬ್ಬದಂದು ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಚಿನ್ನದ ಉಂಗುರಗಳನ್ನು ನೀಡಿದರು. ಇದನ್ನು ಅವರು ಹಲವು ವರ್ಷಗಳ ಕಾಲ ಮಾಡಿದರು. ಹಲವು ವರ್ಷಗಳಿಂದ ಪ್ರತಿ ವರ್ಷವೂ ಉಚಿತ ಮದುವೆಗಳನ್ನು ಮಾಡಿಸುತ್ತಿದ್ದಾರೆ. ವಧು-ವರರಿಗೆ ಉಡುಗೊರೆಗಳನ್ನು ಸಹ ವಿಜಯ್ ನೀಡುತ್ತಾರೆ. ಪ್ರತಿ ವರ್ಷವೂ ಐ ಡೊನೇಷನ್, ಬ್ಲಡ್ ಡೊನೇಷನ್ ಕ್ಯಾಂಪ್ ಮಾಡಿಸುತ್ತಾರೆ. ಬ್ಲಡ್ ಡೊನೇಷನ್​​ಗಾಗಿ ಪ್ರತ್ಯೇಕವಾಗಿ ಅಪ್ಲಿಕೇಶನ್ ಒಂದನ್ನು ಸಹ ವಿಜಯ್ ಪ್ರಾರಂಭ ಮಾಡಿದ್ದರು.

ತಮ್ಮ ಫೌಂಡೇಷನ್ ಮೂಲಕ ಹಲವಾರು ಮಕ್ಕಳಿಗೆ ಆಪರೇಷನ್​​ಗಳನ್ನು ಮಾಡಿಸಿದ್ದಾರೆ. 2012 ರಿಂದ ಪ್ರತಿ ವರ್ಷ ಎಜುಕೇಶನಲ್ ಅವಾರ್ಡ್ಸ್ ನೀಡುತ್ತಾ ಬರುತ್ತಿದ್ದಾರೆ. ಅತ್ಯುತ್ತಮ ದರ್ಜೆಯಲ್ಲಿ ಪಾಸಾದ ಸರ್ಕಾರಿ ಶಾಲೆ ಮಕ್ಕಳಿಗೆ ವಿಜಯ್ ನಗದು ಬಹುಮಾನಗಳನ್ನು ನೀಡುತ್ತಾ ಬಂದಿದ್ದಾರೆ. ಪ್ರತಿ ವರ್ಷವೂ ತಪ್ಪದೇ ಈ ಕಾರ್ಯ ಮಾಡುತ್ತಾರೆ. ಕೇರಳ ಪ್ರವಾಹ, ನೇಪಾಳ ಪ್ರವಾಹ ಇನ್ನೂ ಅನೇಕ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ವಿಜಯ್ ಸಹಾಯ ಮಾಡಿದ್ದಾರೆ.

ಕೇವಲ ಸಮಾಜ ಸೇವೆ ಮಾತ್ರವೇ ಅಲ್ಲದೆ, ಹಲವು ತಮಿಳುನಾಡು ಪರ ಪ್ರತಿಭಟನೆಗಳಲ್ಲಿಯೂ ಸಹ ವಿಜಯ್ ಪಾಲ್ಗೊಂಡಿದ್ದಾರೆ. ಸಿನಿಮಾ ರಂಗದ ಜೊತೆಗೆ ನೀರಿಗಾಗಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ‘ತಮಿಳ್ ಇಲಂ’ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 2018 ರಲ್ಲಿ ದಲಿತ ಯುವತಿಯೊಬ್ಬಾಕೆ ಶಿಕ್ಷಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಾಗ ಖುದ್ದಾಗಿ ಮೃತ ಯುವತಿಯ ಮನೆಗೆ ಹೋಗಿ ಅವರ ಪೋಷಕರನ್ನು ಭೇಟಿ ಆಗಿ ಬಂದಿದ್ದರು ವಿಜಯ್. 2017 ರಲ್ಲಿ ನಡೆದ ಜಲ್ಲಿಕಟ್ಟು ಹೋರಾಟಕ್ಕೆ ಬೆಂಬಲ ನೀಡಿದ್ದು ಮಾತ್ರವಲ್ಲದೆ, ಹೋರಾಟದ ಹಿಂದೆ ಇದ್ದ ಪ್ರಮುಖ ವ್ಯಕ್ತಿಗಳಲ್ಲಿ ವಿಜಯ್ ಸಹ ಒಬ್ಬರಾಗಿದ್ದರು ಎನ್ನಲಾಗುತ್ತದೆ. ಹೀಗೆ ಅನೇಕ ಕಾರ್ಯಗಳನ್ನು ವಿಜಯ್ ವರ್ಷಗಳಿಂದಲೂ ಮಾಡುತ್ತಲೇ ಬಂದಿದ್ದಾರೆ. ಹಾಗಾಗಿ ವಿಜಯ್ ಗೆಲುವು ಕೇವಲ ಜನಪ್ರಿಯತೆಯಿಂದ ಧಕ್ಕಿದ್ದು ಮಾತ್ರವಲ್ಲ, ಅದರ ಹಿಂದೆ ಹಲವು ವರ್ಷಗಳ ಸೇವೆಯೂ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮದುವೆ ಬಗ್ಗೆ ನೂತನ ಶಾಸಕ ಸಮರ್ಥ್ ಶಾಮನೂರು ಹೇಳಿದ್ದೇನು? – Kannada News | Davanagere South Newly Congress MLA Samarth Talks about His marriage

ದಾವಣಗೆರೆ, (ಮೇ 06): ಅಜ್ಜ ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ (Davanagere South) ವಿಧಾಸಭೆಗೆ ನಡೆದ ಉಪಚುನಾವಣೆಯಲ್ಲಿ ಮೊಮ್ಮಗ ಸಮರ್ಥ ಶಾಮನೂರು (Samarth Shamanur) ಗೆದ್ದು ಬೀಗಿದ್ದು, ಇದರೊಂದಿಗೆ ಶಾಮನೂರು ಮನೆತನದ ಮೂರನೇ ಪೀಳಿಗೆ ವಿಧಾನಸಭೆ ಪ್ರವೇಶ ಮಾಡಿದೆ. ಇನ್ನು ತಂದೆ ಮಲ್ಲಿಕಾರ್ಜುನ ರೀತಿ ಪುತ್ರ ಸಮರ್ಥ ಸಹ ಚಿಕ್ಕ ವಯಸ್ಸಿನಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಲಿ ಸಚಿವರಾಗಿರುವ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್​​ಎಸ್​​ ಮಲ್ಲಿಕಾರ್ಜುನ ಅವರು 28ನೇ ವಯಸ್ಸಿನಲ್ಲಿ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು. ಅದರಂತೆ ಇದೀಗ ಪುತ್ರ ಸಮರ್ಥ ಸಹ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ತಂದೆ ರೀತಿಯಲ್ಲೇ ಚಿಕ್ಕ ವಯಸ್ಸಿನಲ್ಲೇ ಅಂದರೆ 27ನೇ ವಯಸ್ಸಿಗೆ ಗೆದ್ದು ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಇನ್ನು ಇದೇ ಖುಷಿಯಲ್ಲಿ ಅವರು ತಮ್ಮ ಮದುವೆ (marriage) ಬಗ್ಗೆ ಮಾತನಾಡಿ, ಸದ್ಯಕ್ಕೆ ಮದ್ವೆ ಮಾಡಿಕೊಳ್ಳಲ್ಲ ಎಂದಿದ್ದಾರೆ.

ಇನ್ನು ಬೈ ಎಲೆಕ್ಷನ್​​ನಲ್ಲಿ ಗೆದ್ದು ಶಾಸಕರಾದ ಬಳಿಕ ಮೊದಲ ಬಾರಿಗೆ ದಾವಣಗೆರೆಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮರ್ಥ್ ಶಾಮನೂರು, ನಾನು‌ ನನ್ನ ಅಜ್ಜನ ರೀತಿಯಲ್ಲಿ ಅಜಾತಶತ್ರು ಆಗುತ್ತೇನೆ. ಅದೇ ನನ್ನ ಉದ್ದೇಶ. ಜನತೆ ಪಾಲಿಗೆ ನಮ್ಮ ಮನೆ ಮತ್ತು ಮನಸ್ಸಿನ ಬಾಗಿಲು ತೆರೆದಿರುತ್ತದೆ. ನಮಗೆ ಅಭಿವೃದ್ಧಿ ಮಾಡುವ ಸಾಮರ್ಥ್ಯ ಇದೇ ಎಂಬ ಕಾರಣಕ್ಕಾಗಿಯೇ ನಮ್ಮನ್ನ ದಾವಣಗೆರೆ ದಕ್ಷಿಣ ಕ್ಷೇತ್ರದ ಜನ ಗೆಲ್ಲಿಸಿದ್ದಾರೆ. ನಮ್ಮ ಮನೆಗೆ ಯಾಗಲು ಬಂದರು ಬಾಗಿಲು ತೆರೆದಿರುತ್ತದೆ. ಜೊತೆಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರ ಜನ ಸಂಪರ್ಕ ಕಚೇರಿ ಆರಂಭಿಸುತ್ತೇವೆ ಎಂದರು.

ಇನ್ನು ಇದೇ ವೇಳೆ ಮದುವೆ ಬಗ್ಗೆ ಕೇಳಿದ ಪ್ರಶ್ನಿಗೆ ಪ್ರತಿಕ್ರಿಯಿಸಿದ ಸಮರ್ಥ್, ಸದ್ಯಕ್ಕೆ ಮದ್ವೆ ವಿಚಾರ ಇಲ್ಲ, ಜನರು ಈಗ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಮದ್ವೆ ರೀತಿಯಲ್ಲಿ ಆಯ್ಕೆ ಮಾಡಿದ್ದಾರೆ. ಸದ್ಯಕ್ಕೆ ಮದುವೆ ಏನಿಲ್ಲ ಎಂದು ತಿಳಿಸಿದರು.

ಇದನ್ನೂ ನೋಡಿ: ದಾವಣಗೆರೆ ದಕ್ಷಿಣ ಉಪ ಚುನಾವಣೆ ಗೆದ್ದರೂ ಕಾಂಗ್ರೆಸ್​​ಗೆ ತಪ್ಪದ ಚಿಂತೆ: ಕಾರಣ ಇಲ್ಲಿದೆ

 

Source link

Divya Sasha: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ – Kannada News | Thalapathy Vijay’s Daughter Divya Sasha: Education, Film Debut and Future Plans Amidst CM Buzz

ವಿಜಯ್ ಪುತ್ರಿ ದಿವ್ಯಾ ಸಾಶಾImage Credit source: Facebook

ಸುಮಾರು ಮೂರು ದಶಕಗಳಿಂದ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ದಳಪತಿ ವಿಜಯ್ ಅವರು ಆಕ್ಷನ್, ಡ್ಯಾನ್ಸ್ ಮತ್ತು ನಟನೆಯ ಮೂಲಕ ದಕ್ಷಿಣ ಭಾರತದಾದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಹಲವಾರು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿರುವ ಇವರು, ಇತ್ತೀಚೆಗೆ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ಸದ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವುದು ಬಹುತೇಕ ನಿಶ್ಚಿತವಾಗಿದೆ. ಈ ಐತಿಹಾಸಿಕ ಬದಲಾವಣೆಯ ನಡುವೆ ವಿಜಯ್ ಮತ್ತು ಸಂಗೀತಾ ದಂಪತಿಯ ಪುತ್ರಿ ದಿವ್ಯಾ ಸಾಶಾ ಅವರ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಹೆಚ್ಚಾಗಿದ್ದು, ಜನರು ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹುಡುಕುತ್ತಿದ್ದಾರೆ.

ವಿಜಯ್ ಪುತ್ರಿ ದಿವ್ಯಾ ಸಾಶಾ ಶೈಕ್ಷಣಿಕ ಹಿನ್ನೆಲೆ (Education):

2005 ರಲ್ಲಿ ಜನಿಸಿದ ದಿವ್ಯಾ, ಬಾಲ್ಯದಿಂದಲೇ ಶಿಸ್ತು ಮತ್ತು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬೆಳೆದವರು. ಈಕೆ ಚೆನ್ನೈನ ಪ್ರತಿಷ್ಠಿತ ಅಮೇರಿಕನ್ ಇಂಟರ್ನ್ಯಾಷನಲ್ ಸ್ಕೂಲ್ (AISC) ನಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿದ್ದಾರೆ. ಕೇವಲ ಓದಿನಲ್ಲಿ ಮಾತ್ರವಲ್ಲದೆ, ಕ್ರೀಡೆಯಲ್ಲೂ ದಿವ್ಯಾ ಸೈ ಎನಿಸಿಕೊಂಡಿದ್ದಾರೆ. ಇವರು ಒಬ್ಬ ಅದ್ಭುತ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದು, ತಮ್ಮ ಶಾಲಾ ತಂಡವನ್ನು ಪ್ರತಿನಿಧಿಸಿ ಹಲವು ಪಂದ್ಯಾವಳಿಗಳಲ್ಲಿ ಜಯಗಳಿಸಿದ್ದಾರೆ.

ಇದನ್ನೂ ಓದಿ: ವಿಜಯದ ಬೆನ್ನಲ್ಲೇ ವಿಜಯ್​ ನಿವಾಸಕ್ಕೆ ನಟಿ ತ್ರಿಷಾ ಆಗಮನ

ಬೆಳ್ಳಿಪರದೆಗೆ ಪದಾರ್ಪಣೆ (Film Career):

ಅನೇಕ ಸ್ಟಾರ್ ಕಿಡ್‌ಗಳಂತೆ ದಿವ್ಯಾ ಕೂಡ ಅತಿ ಸಣ್ಣ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. 2016 ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾ ‘ತೆರಿ’ (Theri) ಈಕೆಯ ಮೊದಲ ಚಿತ್ರ. ಈ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ವಿಜಯ್ ಅವರ ಮಗಳ ಪಾತ್ರದಲ್ಲೇ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಭವಿಷ್ಯದ ಯೋಜನೆಗಳು:

ತಂದೆ ವಿಜಯ್ ಚಿತ್ರರಂಗದ ದೊಡ್ಡ ನಟನಾಗಿದ್ದರೂ ಮತ್ತು ಸಹೋದರ ಜೇಸನ್ ಸಂಜಯ್ ಸಿನಿಮಾ ನಿರ್ದೇಶನದತ್ತ ಆಸಕ್ತಿ ತೋರಿದ್ದರೂ, ದಿವ್ಯಾ ಸಾಶಾ ಮಾತ್ರ ಪ್ರಸ್ತುತ ತಮ್ಮ ಉನ್ನತ ಶಿಕ್ಷಣದತ್ತ ಸಂಪೂರ್ಣ ಗಮನ ಹರಿಸಿದ್ದಾರೆ. ಅವರು ಪೂರ್ಣಪ್ರಮಾಣದ ನಾಯಕಿಯಾಗಿ ಚಿತ್ರರಂಗಕ್ಕೆ ಬರುತ್ತಾರೆಯೇ ಎಂಬುದು ಸದ್ಯಕ್ಕೆ ಕುತೂಹಲವಾಗಿಯೇ ಉಳಿದಿದೆ. ಸಾಮಾಜಿಕ ಜಾಲತಾಣಗಳಿಂದ ಮತ್ತು ಗಾಸಿಪ್‌ಗಳಿಂದ ದೂರವಿರುವ ದಿವ್ಯಾ, ತಮ್ಮ ಸರಳತೆಯಿಂದಲೇ ವಿಜಯ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:09 pm, Wed, 6 May 26

Source link

IPL 2026: ಆರ್​ಸಿಬಿ ಫ್ಯಾನ್ಸ್​ಗೆ ಬಿಗ್​ ಶಾಕ್; ಐಪಿಎಲ್ ಫೈನಲ್ ಬೆಂಗಳೂರಿನಿಂದ ಅಹಮದಾಬಾದಿಗೆ ಶಿಫ್ಟ್ – Kannada News | BCCI Shifts IPL 2026 Final from Bengaluru to Ahmedabad: Ticket Demands Cited

ಎದುರಾಗಿದ್ದ ಅಡೆತಡೆಗಳೆಲ್ಲವನ್ನು ಮೆಟ್ಟಿ ನಿಂತು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026 ರ ಐಪಿಎಲ್​ನ (IPL 2026) ಉದ್ಘಾಟನಾ ಪಂದ್ಯವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಆ ಬಳಿಕ ನಡೆದ ಉಳಿದ ನಾಲ್ಕು ಲೀಗ್ ಪಂದ್ಯಗಳು ಕೂಡ ಯಾವುದೇ ಲೋಪದೋಷಗಳಿಲ್ಲದೆ ಮುಗಿದಿದ್ದವು. ಹೀಗಾಗಿ ಈ ಮೊದಲು ವರದಿಯಾದ ಪ್ರಕಾರ, ಈ ಆವೃತ್ತಿಯ ಫೈನಲ್ ಪಂದ್ಯಕ್ಕೂ ಬೆಂಗಳೂರು ಆತಿಥ್ಯವಹಿಸುವುದು ಖಚಿತ ಎನ್ನಲಾಗುತಿತ್ತು. ಆದರೆ ಲೀಗ್ ಹಂತ ಮುಗಿಯುವ ಹಂತದಲ್ಲಿರುವಾಗ ಪ್ಲೇ ಆಫ್ ಸುತ್ತಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಸಿಸಿಐ, ಕನ್ನಡಿಗರಿಗೆ ಹಾಗೂ ಆರ್​ಸಿಬಿ ಫ್ಯಾನ್ಸ್​ಗೆ ಬಿಗ್ ಶಾಕ್ ನೀಡಿದೆ. ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನ ಬದಲಿಗೆ ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ (Narendra Modi Stadium Ahmedabad) ನಡೆಸಲು ತೀರ್ಮಾನಿಸಲಾಗಿದೆ. ತನ್ನ ನಿರ್ಧಾರದ ಹಿಂದಿರುವ ಕಾರಣವನ್ನು ಸಹ ಬಿಸಿಸಿಐ ಬಹಿರಂಗಪಡಿಸಿದೆ.

ಹೇಳಿಕೆ ಬಿಡುಗಡೆ ಮಾಡಿದ ಬಿಸಿಸಿಐ

ಪ್ಲೇಆಫ್ ಸುತ್ತಿನ ವೇಳಾಪಟ್ಟಿಯನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಬಿಸಿಸಿಐ, 2026ರ ಐಪಿಎಲ್​ನ ಪ್ಲೇಆಫ್ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, 70 ಲೀಗ್ ಪಂದ್ಯಗಳು ಮುಗಿದ ಬಳಿಕ ಈ ಸುತ್ತು ಆರಂಭವಾಗಲಿದೆ. ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ತಂಡಗಳು ಮೇ 26 ರಂದು ಧರ್ಮಶಾಲಾದ HPCA ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್​ಗೇರಲಿದೆ.

ಆ ನಂತರ ಮೇ 27 ರಂದು ಅಂಕಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ಎಲಿಮಿನೇಟರ್ ಪಂದ್ಯವನ್ನು ಆಡಲಿದ್ದು, ಈ ಪಂದ್ಯ ನ್ಯೂ ಚಂಡೀಗಢದ ನ್ಯೂ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಇದೇ ಮೈದಾನದಲ್ಲಿ ಎಲಿಮಿನೇಟರ್ 2 ಪಂದ್ಯ ನಡೆಯಲಿದ್ದು, ಕ್ವಾಲಿಫೈಯರ್ 1ರಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್​ನಲ್ಲಿ ಗೆದ್ದ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ಮೇ 31 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕ್ವಾಲಿಫೈಯರ್ 1 ಗೆದ್ದ ತಂಡದೊಂದಿಗೆ ಪ್ರಶಸ್ತಿಗಾಗಿ ಸೆಣಸಲಿದೆ ಎಂದಿದೆ.

ಶಿಷ್ಟಾಚಾರದ ಉಲ್ಲಂಘನೆ

ಇದರ ಜೊತೆಗೆ ಫೈನಲ್ ಪಂದ್ಯವನ್ನು ಸ್ಥಳಾಂತರಿಸಿದ್ದು ಏಕೆ ಎಂಬುದನ್ನು ಬಹಿರಂಗಪಡಿಸಿರುವ ಬಿಸಿಸಿಐ, ‘ಈ ಮೊದಲು ಬೆಂಗಳೂರಿನಲ್ಲಿ ಫೈನಲ್ ಪಂದ್ಯವನ್ನು ಆಯೋಜಿಸಲು ಗೊತ್ತುಪಡಿಸಲಾಗಿತ್ತು. ಆದರೆ ಸ್ಥಳೀಯ ಸಂಘ ಮತ್ತು ಅಧಿಕಾರಿಗಳು ಬಿಸಿಸಿಐನ ಮಾರ್ಗಸೂಚಿಗಳು ಮತ್ತು ಶಿಷ್ಟಾಚಾರಗಳಿಗೆ ವಿರುದ್ಧವಾದ ಕೆಲವು ಅವಶ್ಯಕತೆಗಳನ್ನು ಹೊಂದಿದ್ದರು. ಆದ್ದರಿಂದ, ಫೈನಲ್ ಪಂದ್ಯವನ್ನು ಸ್ಥಳಾಂತರಿಸುವುದು ಏಕೈಕ ಆಯ್ಕೆಯಾಗಿತ್ತು’ ಎಂದಿದೆ.

LSG vs RCB Live Streaming: ವಾರದ ಬಳಿಕ ಕಣಕ್ಕಿಳಿಯುತ್ತಿದೆ ಆರ್​ಸಿಬಿ; ಪಂದ್ಯ ಎಷ್ಟು ಗಂಟೆಗೆ ಆರಂಭ?

ಟಿಕೆಟ್​ಗಳಿಗಾಗಿ ಶಾಸಕರ ಬೇಡಿಕೆ

ವಾಸ್ತವವಾಗಿ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ನಡುವಿನ ಐಪಿಎಲ್ 2026 ರ ಉದ್ಘಾಟನಾ ಪಂದ್ಯಕ್ಕೂ ಮುನ್ನ, ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು, ಶಾಸಕರು ಸಾರ್ವಜನಿಕರಂತೆ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬ ಶಾಸಕರಿಗೂ ಪಂದ್ಯಗಳಿಗೆ ಕನಿಷ್ಠ ಐದು ಟಿಕೆಟ್‌ಗಳನ್ನು ನೀಡಬೇಕೆಂಬ ಬೇಡಿಕೆಯನ್ನಿಟ್ಟಿದ್ದರು.

ಇದಾದ ನಂತರ, ಕೆಎಸ್​ಸಿಎ ಜೊತೆಗೆ ಸಭೆ ನಡೆಸಿದ್ದ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿ ಶಾಸಕರು ಮತ್ತು ಸಂಸದರಿಗೆ ಆರ್‌ಸಿಬಿ ಪಂದ್ಯಗಳಿಗೆ ಐದು ಟಿಕೆಟ್‌ಗಳ ಬದಲಿಗೆ ಮೂರು ಟಿಕೆಟ್‌ಗಳನ್ನು ನೀಡುವ ಒಪ್ಪಂದಕ್ಕೆ ಬರಲಾಗಿದೆ ಎಂದಿದ್ದರು. ಅದರಂತೆ ಬೆಂಗಳೂರಿನಲ್ಲಿ ನಡೆದ ಎಲ್ಲಾ ಪಂದ್ಯಗಳಿಗೂ ಶಾಸಕರು ಮತ್ತು ಸಂಸದರಿಗೆ ಮೂರು ಟಿಕೆಟ್‌ಗಳನ್ನು ನೀಡಲಾಗಿತ್ತು. ಇದನ್ನು ತನ್ನ ಹೇಳಿಕೆಯಲ್ಲಿ ಪರೋಕ್ಷವಾಗಿ ಉಲ್ಲೇಖಿಸಿರುವ ಬಿಸಿಸಿಐ ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಸ್ಥಳಾಂತರಿಸಲು ಪ್ರಮುಖ ಕಾರಣ ಎಂದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:01 pm, Wed, 6 May 26

Source link

IPL 2026: ಫೈನಲ್ ಪಂದ್ಯ ಬೆಂಗಳೂರಿನಿಂದ ಅಹಮದಾಬಾದ್ ಗೆ ಶಿಫ್ಟ್ ಮಾಡಿದ್ಯಾಕೆ? ಡಿಕೆಶಿ ಹೇಳಿದ್ದಿಷ್ಟು – Kannada News | DK Shivakumar Reacts On ipl 2026 final Match shifted to ahmedabad from Bengaluru

ಬೆಂಗಳೂರು, (ಮೇ 06): 2026ರ ಇಂಡಿಯನ್ ಪ್ರೀಮಿಯರ್ ಲೀಗ್‌ (IPL Season 2026) ಲೀಗ್ ಹಂತವು ಮುಕ್ತಾಯದ ಹಂತಕ್ಕೆ ತಲುಪಿದೆ. ಈಗ ಎಲ್ಲರೂ ಪ್ಲೇಆಫ್‌ಗಳು ಮತ್ತು ಫೈನಲ್‌ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಫೈನಲ್ ಪಂದ್ಯವನ್ನು ಸಾಮಾನ್ಯವಾಗಿ (RCB) ಹಾಲಿ ಚಾಂಪಿಯನ್‌ನ ತವರು ಮೈದಾನದಲ್ಲಿ ಆಡಲಾಗುತ್ತದೆ, ಅದರಂತೆ ಈ ಬಾರಿಯ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ (Bengaluru)  ಅಹಮದಾಬಾದ್ ಗೆ ಸ್ಥಳಾಂತರಿಸಲಾಗಿದೆ. ಆ ಮೂಲಕ ಬಿಸಿಸಿಐ ಆರ್‌ಸಿಬಿ ಸೇರಿ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ಬಿಗ್‌ಶಾಕ್ ನೀಡಿದೆ.

ಇನ್ನು ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಶಾಸಕರಿಗೆ ಐಪಿಎಲ್ ಟಿಕೆಟ್​ಗೂ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ. ಬೇರೆ ಕಡೆ ಶೇಕಡಾ 50ರಷ್ಟು ಸೀಟ್ ಕೊಡ್ತಾರೆ. ಅವರೇನೋ ಇನ್ಫ್ಲ್ಯೂಯೆನ್ಸ್ ಮಾಡಿ ಗುಜರಾತ್​ಗೆ ಸ್ಥಳಾಂತರಿಸಿದ್ದಾರೆ. ದೊಡ್ಡ ಸ್ಟೇಡಿಯಂ ಒಂದು ಲಕ್ಷ ಜನ ಸೇರಬಹುದು ಅಂತ ಮಾಡಿರಬಹುದು ಅಷ್ಟೇ. ಟಿಕೆಟ್ ಗೂ ಅದಕ್ಕೂ ಸಂಬಂಧ ಇಲ್ಲ. ಯಾರ ಹೇಳಿದ್ದು ಟಿಕೆಟ್ ವಿಚಾರವಾಗಿ ಶಿಫ್ಟ್ ಮಾಡ್ತಿದ್ದಾರೆ ಅಂತ? ಬಿಸಿಸಿಐ ಅವರು ಹೇಳಿಕೆ ಕೊಡಲಿ ಅವರಿಗೆ ಆಮೇಲೆ ಉತ್ತರ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: IPL 2026: ಐಪಿಎಲ್ ಪ್ಲೇಆಫ್ ವೇಳಾಪಟ್ಟಿ ಪ್ರಕಟ

Source link

Exit mobile version