ಐಷಾರಾಮಿ ಕಾರಿನೊಳಗೆ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ – Kannada News | Bhopal crime news Minor girl raped in luxury car thrashed and blackmailed SIT to probe

ಭೋಪಾಲ್, ಫೆಬ್ರವರಿ 13: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ (Bhopal) ಪಿಯುಸಿ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಥಾರ್ ಎಸ್‌ಯುವಿಯಲ್ಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಈ ಪ್ರಕರಣವು ಬ್ಲ್ಯಾಕ್‌ಮೇಲ್ ಮತ್ತು ಸುಲಿಗೆಯನ್ನೂ ಒಳಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಮುಖ ಆರೋಪಿಯನ್ನು ಫೆಬ್ರವರಿ 3ರಂದು ವಶಕ್ಕೆ ಪಡೆಯಲಾಯಿತು. ಆತನನ್ನು ಜೈಲಿನಲ್ಲಿ ಇರಿಸಲಾಗಿದೆ. ನಗರದಲ್ಲಿ ಜಿಮ್ ನಡೆಸುತ್ತಿರುವ ಅವನ ಗೆಳೆಯ ಮೇಜ್ ಖಾನ್​ನನ್ನು ಫೆಬ್ರವರಿ 8ರಂದು ಬಂಧಿಸಲಾಯಿತು. ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ಪೊಲೀಸ್ ಆಯುಕ್ತರು ವಿವರವಾದ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ. ಎಸಿಪಿ ಅಂಕಿತಾ ಖತ್ರಕರ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ.

ಇದನ್ನೂ ಓದಿ: Bengaluru: ಸೊಸೆ ಮೇಲೆ ಮಾವನಿಂದಲೇ ಲೈಂಗಿಕ ದೌರ್ಜನ್ಯ; ಆಸೆ ಈಡೇರಿಸು ಎಂದು ಪೀಡನೆ

4 ಪ್ರತ್ಯೇಕ ಕಾರುಗಳಲ್ಲಿ ವಿವಿಧ ಸ್ಥಳಗಳಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಪ್ರಮುಖ ಆರೋಪಿಗಳು ಆ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ತನ್ನ ಐಫೋನ್‌ನಲ್ಲಿ ಆತ ಇಡೀ ಘಟನೆಯನ್ನು ರೆಕಾರ್ಡ್ ಮಾಡಿದ್ದಾನೆ. ಅಪ್ರಾಪ್ತ ಬಾಲಕಿಗೆ ಬೆದರಿಕೆ ಹಾಕಲು ಈ ವೀಡಿಯೊವನ್ನು ಬಳಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆ ವಿಡಿಯೋವನ್ನು ಆನ್​​ಲೈನ್​ನಲ್ಲಿ ಹಾಕಬಾರದು ಎಂದಾದರೆ 40,000 ರೂ.ಗಳನ್ನು ನೀಡಲು ಡಿಮ್ಯಾಂಡ್ ಮಾಡಿದ್ದಾರೆ.

ಅತ್ಯಾಚಾರಕ್ಕೆ ಬಳಸಲಾದ ಥಾರ್ ಎಸ್‌ಯುವಿಯನ್ನು ಸೆಹೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮುಚ್ಚಿಡಲಾಗಿತ್ತು. ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ವಿಡಿಯೋ ಇರುವ ಮೊಬೈಲ್ ಫೋನ್ ಇನ್ನೂ ಪತ್ತೆಯಾಗಿಲ್ಲ.

ಇದನ್ನೂ ಓದಿ: ಅಪ್ರಾಪ್ತ ಹುಡುಗರಿಂದ ದೆಹಲಿಯಲ್ಲಿ 17 ವರ್ಷದ ಬಾಲಕನ ಕಗ್ಗೊಲೆ

ತನಿಖೆಯ ಸಮಯದಲ್ಲಿ ಮೇಜ್ ಖಾನ್ ಮತ್ತು ಕೊಹೆಫಿಜಾ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಹೆಡ್ ಕಾನ್‌ಸ್ಟೆಬಲ್ ನಡುವಿನ ಸಂಬಂಧವನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪ ಅಧಿಕಾರಿಯ ಮೇಲಿದೆ. ಹೀಗಾಗಿ ಹೆಡ್ ಕಾನ್‌ಸ್ಟೆಬಲ್ ಅನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Breaking: ಫಿಲಂ ಚೇಂಬರ್​​ನಲ್ಲೇ ಹೃದಯಾಘಾತ: ಹಿರಿಯ ನಿರ್ದೇಶಕ ಜೋ ಸೈಮನ್ ನಿಧನ – Kannada News | Senior movie director from Kannada Movie industry Joe Simon passed away

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್ ಅವರು ಹಠಾತ್ತನೆ ನಿಧನ ಹೊಂದಿದ್ದಾರೆ. ಫಿಲಂ ಚೇಂಬರ್​​ನಲ್ಲಿ ಆಯೋಜಿಸಲಾಗಿದ್ದ ಸಭೆಯೊಂದರಲ್ಲಿ ಭಾಗಿ ಆಗಿದ್ದಾಗಲೇ ಜೋ ಸೈಮನ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಸಮೀಪದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಜೋ ಸೈಮನ್ ಅವರು ಕೊನೆ ಉಸಿರೆಳೆದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಜೋ ಸೈಮನ್ ಅವರು ಕನ್ನಡದ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ನಿರ್ದೇಶಕ, ನಟ, ಗೀತರಚನೆಕಾರನಾಗಿ ಅವರು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ.

Published On – 5:29 pm, Fri, 13 February 26

Source link

Valentine’s 2026 Date: ಫೆಬ್ರವರಿ 14 ರಂದೇ ಪ್ರೇಮಿಗಳ ದಿನ ಆಚರಿಸುವುದು ಏಕೆ? ಇಲ್ಲಿದೆ ಕಾರಣ – Kannada News | Valentine’s Week 2026 Valentine’s Day Date, History, Significance, Importance, Celebration details in Kannada

ನಾಳೆ ಪ್ರೇಮಿಗಳ ದಿನ (Valentine’s Day). ಪ್ರೀತಿಸುವ ವ್ಯಕ್ತಿಗಳ ಪಾಲಿಗೆ ಫೆಬ್ರವರಿ 14 ಸಂಭ್ರಮದ ದಿನ. ತಮ್ಮನ್ನು ಇಷ್ಟ ಪಡುವ ಮನಸ್ಸುಗಳನ್ನು ಖುಷಿ ಪಡಿಸಲು ಯುವಕ ಯುವತಿಯರು ಕಾಯುವ ದಿನವಿದು. ತಮ್ಮ ಪ್ರೀತಿಯನ್ನು ಪ್ರೇಮಿಗಳು ಕಾರ್ಡ್‌ಗಳು, ಹೂವುಗಳು ಅಥವಾ ಚಾಕೊಲೇಟ್‌ಗಳನ್ನು ನೀಡಿ ವ್ಯಕ್ತಪಡಿಸುತ್ತಾರೆ. ಹೆಚ್ಚಿನವರು ದುಬಾರಿ ಬೆಲೆಯ ಗಿಫ್ಟ್, ಡಿನ್ನರ್, ಟ್ರಿಪ್ ಎಂದೆಲ್ಲಾ ಪ್ಲಾನ್ ಮಾಡಿಕೊಂಡು ಪ್ರೇಮಿಗಳ ದಿನವನ್ನು ವಿಭಿನ್ನವಾಗಿ ಸೆಲೆಬ್ರೇಟ್ ಮಾಡುತ್ತಾರೆ. ಪ್ರೇಮಿಗಳ ದಿನ ಆಚರಿಸುವ ಮುನ್ನ ಈ ದಿನದ ಇತಿಹಾಸ, ಮಹತ್ವ ತಿಳಿದುಕೊಳ್ಳಿ.

ಪ್ರೇಮಿಗಳ ದಿನದ ಇತಿಹಾಸವೇನು?

ಪ್ರೇಮಿಗಳ ದಿನದ ಇತಿಹಾಸ ಬಗ್ಗೆ ಹೇಳುವುದಾದರೆ, ಈ ದಿನದ ಒಂದೊಂದು ಕಥೆಗಳು ಅಡಗಿವೆ. ವ್ಯಾಲೆಂಟೈನ್ಸ್ ಡೇ ಲುಪರ್ಕಾಲಿಯಾ ಹಬ್ಬದೊಂದಿಗೆ ಪ್ರಾರಂಭವಾಯಿತು ಎನ್ನಲಾಗುತ್ತದೆ. ಈ ದಿನವು ವಸಂತಕಾಲದ ಬರುವಿಕೆಯನ್ನು ಆಚರಿಸುತ್ತದೆ. ಐದನೇ ಶತಮಾನದಲ್ಲಿ ಪೋಪ್ ಗೆಲಾಸಿಯಸ್ ಈ ಪ್ರೇಮಿಗಳ ದಿನದ ಆಚರಣೆಯನ್ನು ನಿಷೇಧಿಸಲಾಯಿತು. ಆ ಬಳಿಕ ಅದನ್ನು ಸೇಂಟ್ ವ್ಯಾಲೆಂಟೈನ್ಸ್ ಡೇಗೆ ಬದಲಾಯಿಸಲಾಯಿತು. ಫೆಬ್ರವರಿ 14 ನ್ನು ಪ್ರಣಯದ ದಿನವಾಗಿ ಆಚರಿಸುವ ಸಂಪ್ರದಾಯ ಸುಮಾರು 14ನೇ ಶತಮಾನದವರೆಗೆ ಪ್ರಾರಂಭವಾಗಲಿಲ್ಲ. ಫೆಬ್ರವರಿ 14 270 AD ರಂದು ಚಕ್ರವರ್ತಿ ಕ್ಲಾಡಿಯಸ್ II ಗೋಥಿಕಸ್​ನಿಂದ ಮರಣದಂಡನೆಗೆ ಗುರಿಯಾದ ನಂತರದಲ್ಲಿ ಮರಣದಂಡನೆಗೊಳಗಾದ. ಈ ಪ್ರಸಿದ್ಧ ಸಂತ ವ್ಯಾಲೆಂಟೈನ್​ನ ಗೌರವಾರ್ಥವಾಗಿ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ.

ಹೌದು, ಸೇಂಟ್ ವ್ಯಾಲೆಂಟೈನ್ ತನ್ನ ಸೈನ್ಯದಲ್ಲಿ ಪುರುಷರನ್ನು ನೇಮಿಸಿಕೊಳ್ಳಲು ಮದುವೆಗಳನ್ನು ನಿಷೇಧಿಸಿದ ರೋಮನ್ ರಾಜನ ನಿಯಮವನ್ನು ಉಲ್ಲಂಘಿಸಿದ ಕಾರಣ ಅವನಿಗೆ ಮರಣದಂಡನೆ ವಿಧಿಸಲಾಯಿತು. ಸೇಂಟ್ ವ್ಯಾಲೆಂಟೈನ್ ಈ ಕ್ರಮವು ಅನ್ಯಾಯವೆಂದು ಭಾವಿಸಿದ್ದರು. ಆದ್ದರಿಂದ ಅವರು ನಿಯಮಗಳನ್ನು ಮುರಿದು ರಹಸ್ಯವಾಗಿ ಮದುವೆಗಳನ್ನು ಏರ್ಪಡಿಸಿದರು. ಸೇಂಟ್ ವ್ಯಾಲೆಂಟೈನ್ ಜೈಲರ್‌ನ ಮಗಳನ್ನು ಪ್ರೀತಿಸುತ್ತಿದ್ದರು. ಫೆಬ್ರವರಿ 14ರಂದು ಅವರನ್ನು ಕೊಲ್ಲಲು ಕರೆದೊಯ್ಯುವಾಗ, “ನಿಮ್ಮ ವ್ಯಾಲೆಂಟೈನ್‌” ಎಂದು ಸಹಿ ಮಾಡಿದ ಪ್ರೇಮ ಪತ್ರವನ್ನು ತನ್ನ ಪ್ರೇಯಸಿಗೆ ಕಳುಹಿಸಿದರು. ಈ ವೇಳೆಯ್ಲಲಿ ಚಕ್ರವರ್ತಿಯ ಆದೇಶವನ್ನು ಧಿಕ್ಕರಿಸಿದ್ದರಿಂದ ಮರಣದಂಡನೆ ನೀಡಲಾಯಿತು. ಅಂದಿನಿಂದ ಈ ದಿನದ ಆಚರಣೆ ಶುರುವಾಯಿತು.

ಇದನ್ನೂ ಓದಿ: Valentine Day 2026: ಪ್ರೇಮಿಗಳ ದಿನದಂದು ಯಾವ ಬಣ್ಣದ ಬಟ್ಟೆಯನ್ನು ಧರಿಸಿದರೆ ಸೂಕ್ತ?

ಪ್ರೇಮಿಗಳ ದಿನದ ಮಹತ್ವ ಹಾಗೂ ಆಚರಣೆ ಹೇಗೆ?

ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇರುವ ದಿನವೇ ಈ ಪ್ರೇಮಿಗಳ ದಿನ. ಹೀಗಾಗಿ ಪ್ರೀತಿಯಲ್ಲಿ ಬಿದ್ದವರು ವಿಭಿನ್ನವಾಗಿ ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುತ್ತಾರೆ. ಗ್ರೀಟಿಂಗ್ ಕಾರ್ಡ್‌ಗಳು, ಚಾಕೊಲೇಟ್‌ಗಳ ಬಾಕ್ಸ್, ಗುಲಾಬಿ ಹೂವುಗಳು, ನೈಟ್ ಡಿನ್ನರ್ ಹೀಗೆ ವಿಭಿನ್ನ ರೀತಿ ಸೆಲೆಬ್ರೇಟ್ ಮಾಡುತ್ತಾರೆ.

ಇನ್ನಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ, ಟಿವಿಕೆಗೆ ಪೂರ್ಣ ಬಹಮತ ಸಿಗಲಿದೆ: ವಿಜಯ್ – Kannada News | Vijay Rules Out Alliances, Says TVK Aiming for Solo Mandate in Tamil Nadu

ಸೇಲಂ, ಫೆಬ್ರವರಿ 13: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಸ್ಪರ್ಧಿಸಲಿದೆ ಆದರೆ ಯಾವ ಪಕ್ಷದ ಜತೆಯೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ತಮಿಳು ನಟ ಹಾಗೂ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ದಳಪತಿ ವಿಜಯ್ ಸೇಲಂನಲ್ಲಿ ಹೇಳಿಕೆ ನೀಡಿದ್ದಾರೆ.ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇಂಡಿ ಬಣ ಅಥವಾ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ . ಪಕ್ಷವು ತನ್ನದೇ ಬಲದ ಮೇಲೆ ಬಹುಮತ ಪಡೆಯಲಿದೆ ಎಂದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಾಂಗ್ಲಾದೇಶಕ್ಕೆ ಸಿಕ್ಕ ರೀತಿಯಲ್ಲೇ ಭಾರತದ ಜವಳಿಗೂ ಅಮೆರಿಕದಿಂದ ಸುಂಕ ವಿನಾಯಿತಿ: ಪೀಯೂಶ್ ಗೋಯಲ್ – Kannada News | India will also get zero import duty facility from US, as given to Bangladesh, says Piyush Goyal

ನವದೆಹಲಿ, ಫೆಬ್ರುವರಿ 13: ಅಮೆರಿಕವು ಬಾಂಗ್ಲಾದೇಶದ ಕೆಲ ಸರಕುಗಳಿಗೆ ಸುಂಕ ವಿನಾಯಿತಿ ಕೊಟ್ಟಂತೆ ಭಾರತಕ್ಕೂ ನೀಡಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಹೇಳಿದ್ದಾರೆ. ಅಮೆರಿಕ ಮತ್ತು ಬಾಂಗ್ಲಾದೇಶ ನಡುವೆ ಇತ್ತೀಚೆಗೆ ಆಗಿರುವ ವ್ಯಾಪಾರ ಒಪ್ಪಂದದಲ್ಲಿ ಬಾಂಗ್ಲಾದ ಕೆಲ ಜವಳಿ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ಕೊಡಲಾಗಿದೆ. ಇದರಿಂದ ಭಾರತದ ಜವಳಿ ಉದ್ಯಮಕ್ಕೆ ಹೊಡೆತ ಬೀಳುತ್ತದೆ. ಶೇ. 18ರಷ್ಟು ಟ್ಯಾರಿಫ್ ಹೊಂದಿರುವ ಭಾರತದ ಜವಳಿ ಉತ್ಪನ್ನಗಳು, ಶೇ. 0 ಟ್ಯಾರಿಫ್ ಇರುವ ಬಾಂಗ್ಲಾದೇಶದ ಜವಳಿ ರಫ್ತಿನೊಂದಿಗೆ ಪೈಪೋಟಿ ನಡೆಸಲು ಆಗುವುದಿಲ್ಲ ಎನ್ನುವ ಆತಂಕಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.

ಅಮೆರಿಕದ ಹತ್ತಿ ಹಾಗೂ ಕೃತಕ ಫೈಬರ್ ಕಚ್ಚಾ ಪದಾರ್ಥಗಳನ್ನು ಬಳಸಿ ಬಾಂಗ್ಲಾದೇಶದಲ್ಲಿ ತಯಾರಿಸಲಾದ ಜವಳಿ ಉತ್ಪನ್ನಗಳಿಗೆ ಅಮೆರಿಕವು ಟ್ಯಾರಿಫ್ ಅನ್ನು ಶೂನ್ಯಕ್ಕೆ ಇಳಿಸಿದೆ. ಫೆಬ್ರುವರಿ 9ರಂದು ಆದ ಟ್ರೇಡ್ ಡೀಲ್​ನಲ್ಲಿ ಈ ಕ್ರಮ ಪ್ರಕಟಿಸಲಾಗಿದೆ. ಉಳಿದಂತೆ, ಇತರ ಬಾಂಗ್ಲಾ ಉತ್ಪನ್ನಗಳಿಗೆ ಅಮೆರಿಕ ವಿಧಿಸುವ ಟ್ಯಾರಿಫ್ ಶೇ. 20ರಿಂದ ಶೇ. 19ಕ್ಕೆ ಇಳಿಸಲಾಗಿದೆ.

ಇದನ್ನೂ ಓದಿ: ಎಐ ಕಲಿಯಿರಿ, ಇಲ್ಲವಾ ಕೆಲಸ ಬಿಟ್ಟುಹೋಗಿ; ಉದ್ಯೋಗಿಗಳಿಗೆ ಗೂಗಲ್​ನಿಂದ ವಾಲಂಟರಿ ಎಕ್ಸಿಟ್ ಪ್ಯಾಕೇಜ್​ಗಳ ಆಫರ್

‘ಭಾರತಕ್ಕೂ ಕೂಡ ಇದೇ ಸೌಲಭ್ಯ ಕೊಡಲಾಗುತ್ತದೆ. ಸದ್ಯಕ್ಕೆ ನಮ್ಮ ಫ್ರೇಮ್​ವರ್ಕ್ ಅಗ್ರೀಮೆಂಟ್ ಮಾಡಲಾಗುತ್ತಿದೆ. ಮಧ್ಯಂತರ ಒಪ್ಪಂದ ಅಂತಿಮಗೊಂಡಾಗ ಈ ಅಂಶ ಇರುವುದನ್ನು ಪ್ರತ್ಯಕ್ಷವಾಗಿ ಕಾಣಬಹುದು’ ಎಂದು ಹೇಳಿದ ಪೀಯೂಶ್ ಗೋಯಲ್, ಬಾಂಗ್ಲಾ ವಿಚಾರದಲ್ಲಿ ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆಂದು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಭಾರತಕ್ಕೆ ಬಾಂಗ್ಲಾದೇಶ ಹೆಚ್ಚು ಅನುಕೂಲ ಪಡೆದಿದೆ ಎಂದು ಸಂಸತ್ತಿನಲ್ಲಿ ರಾಹುಲ್ ಗಾಂಧಿ ಮತ್ತೊಂದು ಸುಳ್ಳು ಹೇಳಿದ್ದಾರೆ. ಅಮೆರಿಕದಿಂದ ಕಚ್ಚಾ ವಸ್ತು ಖರೀದಿಸಿ, ಅದನ್ನು ಬಳಸಿ ಬಟ್ಟೆ ತಯಾರಿಸಿ, ರಫ್ತು ಮಾಡಿದಾಗ, ಅದಕ್ಕೆ ಶೂನ್ಯ ಪ್ರತಿಸುಂಕ ಹಾಕಲಾಗುತ್ತದೆ. ಬಾಂಗ್ಲಾಗೆ ನೀಡಿರುವ ಈ ಸೌಲಭ್ಯ ಭಾರತಕ್ಕೂ ಸಿಗುತ್ತದೆ’ ಎಂದು ವಾಣಿಜ್ಯ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಮೂರೂವರೆ ಲಕ್ಷ ಕೋಟಿ ರೂ ಮೌಲ್ಯದ ಕ್ಷಿಪಣಿ, ಯುದ್ಧ ವಿಮಾನಗಳ ಖರೀದಿಗೆ ಅನುಮೋದನೆ

ಎಸ್​ಬಿಐ ರಿಸರ್ಚ್ ಪ್ರಕಾರ, ಬಾಂಗ್ಲಾದೇಶದಿಂದ ಅಮೆರಿಕ 7.5 ಬಿಲಿಯನ್ ಡಾಲರ್ ಮೌಲ್ಯದ ಜವಳಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ. ಭಾರತದಿಂದಲೂ ಇಷ್ಟೇ ಪ್ರಮಾಣದ ಜವಳಿ ಉತ್ಪನ್ನಗಳು ಅಮೆರಿಕಕ್ಕೆ ರಫ್ತಾಗುತ್ತವೆ. ಬಾಂಗ್ಲಾದೇಶದ ಆರ್ಥಿಕತೆಗೆ ಅದರ ಜವಳಿ ಕ್ಷೇತ್ರದ ಕೊಡುಗೆ ಅತ್ಯಧಿಕ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆರೋಗ್ಯ ಇಲಾಖೆ ಅಧಿಕಾರಿ ಅಬಕಾರಿ ಇಲಾಖೆಗೆ ವರ್ಗಾವಣೆ! ಸಿಎಂ ಹೆಸರಲ್ಲಿ ಬರೆದ ಪತ್ರ ವೈರಲ್​​ – Kannada News | CM Siddaramaiah’s Letter over transfer of Health Officer to Excise creates political row in karnataka

ಡಿಎಚ್‌ಓ ಮೋಹನ್ ಮತ್ತು ವೈರಲ್​​ ಆಗಿರುವ ಪತ್ರImage Credit source: Tv9 Kannada

ಬೆಂಗಳೂರು, ಫೆಬ್ರವರಿ 13: ಮಂಡ್ಯ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರನ್ನು ಅಬಕಾರಿ ಇಲಾಖೆಗೆ ವರ್ಗಾಯಿಸುವಂತೆ  ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಬರೆದಿರುವ ಪತ್ರ ವೈರಲ್​​ ಆಗಿರೋದು ಈಗ ವಿವಾದವಾಗಿ ಮಾರ್ಪಟ್ಟಿದೆ. ನಿಯಮಾವಳಿಗಳನ್ನು ಗಾಳಿಗೆ ತೂರಿ, ಆರೋಗ್ಯ ಇಲಾಖೆಯ ಡಿಎಚ್‌ಓ ಮೋಹನ್ ಅವರನ್ನು ಅಬಕಾರಿ ಉಪ ಆಯುಕ್ತರನ್ನಾಗಿ ನೇಮಿಸಲು ಶಿಫಾರಸ್ಸು ಮಾಡಿರುವ ಪತ್ರದ ಬಗ್ಗೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.

ಸಿಎಂ ಸ್ಪಷ್ಟನೆಗೆ ಬಿಜೆಪಿ ಪಟ್ಟು

ವೈರಲ್ ಆಗಿರುವ ಮುಖ್ಯಮಂತ್ರಿಗಳದ್ದು ಎನ್ನಲಾದ ಶಿಫಾರಸ್ಸು ಪತ್ರದಲ್ಲಿ ಪತ್ರದ ಸಂಖ್ಯೆಯಾಗಲಿ ಅಥವಾ ದಿನಾಂಕವಾಗಲಿ ನಮೂದಾಗಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಅವರ ಸಹಿ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ವರ್ಗಾವಣೆ ದಂಧೆಯ ಹಿಂದೆ ಕುಟುಂಬದ ವ್ಯಕ್ತಿಯೊಬ್ಬರ ಕೈವಾಡವಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಮಾಡಿದ್ದು, ಸಿಎಂ ಈ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದಿದೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ತಾರಕಕ್ಕೇರಲಿದೆ ಕುರ್ಚಿ ಕದನ; ಟೂರ್ ಪಾಲಿಟಿಕ್ಸ್ Vs ರೆಸಾರ್ಟ್ ಪಾಲಿಟಿಕ್ಸ್​ಗೆ ಬಣಗಳ ಸಿದ್ಧತೆ

‘ಸಾರಾಯಿ ಮಾರೋಕೆ ಡಾಕ್ಟರ್ ಯಾಕೆ?’

ಪತ್ರದ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸುನಿಲ್ ಕುಮಾರ್, ವರ್ಗಾವಣೆ ದಂಧೆಯಲ್ಲಿ ಎಲ್ಲಾ ಇಲಾಖೆಗಳು ಮುಳುಗಿವೆ. ಸರ್ಕಾರದ ಆಡಳಿತ ಹಳಿ ತಪ್ಪಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ವೈದ್ಯಾಧಿಕಾರಿಯನ್ನು ಅಬಕಾರಿ ಇಲಾಖೆಗೆ ಹಾಕುವುದು ಅತ್ಯಂತ ಅನುಚಿತ. ಇದು ತುಘಲಕ್ ದರ್ಬಾರ್ ಎಂದು ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿರುವ ಶಾಸಕ ಅಭಯ್ ಪಾಟೀಲ್ , ಸಾರಾಯಿ ಮಾರೋಕೆ ಡಾಕ್ಟರ್ ಯಾಕೆ? ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ? ಸಿಎಂಗೆ ಅರಳು ಮರಳಾಗಿದ್ದು, ಚಿಕಿತ್ಸೆಯ ಅಗತ್ಯವಿದೆ ಎಂದು ಲೇವಡಿ ಮಾಡಿದ್ದಾರೆ.

ಆರೋಗ್ಯ ಸಚಿವರ ಸ್ಪಷ್ಟನೆ

ಈ ನಡುವೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಿದ್ದು, ವರ್ಗಾವಣೆ ಪತ್ರ ಅಧಿಕೃತವೋ? ಅಲ್ಲವೋ? ಎಂಬುದು ತಮಗೆ ತಿಳಿದಿಲ್ಲ. ಆದರೆ ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ ಹೋಗಲು ನಿಯಮಗಳಲ್ಲಿ ಅವಕಾಶವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ಕೇವಲ ಟ್ವೀಟ್ ಮಾಡಿ ದಿಕ್ಕು ತಪ್ಪಿಸುತ್ತಿದ್ದಾರೆ. ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು ಚರ್ಚೆಯಾಗಬಾರದು ಎಂಬುದು ಅವರ ಉದ್ದೇಶ ಎಂದು ತಿರುಗೇಟು ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಗಂಡಂದಿರು ಮತ್ತು ಚೆಕ್ ಬೌನ್ಸ್: ಚೈತ್ರಾ-ಅಶ್ವಿನಿ ಗೌಡ ನಡುವೆ ವಾಕ್ಸಮರ – Kannada News | Bigg Boss Kannada 12 contestant Chaithra Kundapura vs Ashwini Gowda

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿದು ತಿಂಗಳಾಗುತ್ತಾ ಬಂದಿದೆ. ಆದರೆ ಬಿಗ್​​ಬಾಸ್ ಮನೆಯ ಒಳಗೆ ಶುರುವಾಗಿದ್ದ ಕೆಲ ಜಗಳಗಳು ಮನೆಯ ಹೊರಗೂ ಮುಂದುವರೆದಿವೆ. ಗಿಲ್ಲಿ ಬಿಗ್​​ಬಾಸ್ ಕನ್ನಡ 12ರ ವಿನ್ನರ್ ಆಗಿದ್ದಾರೆ. ಅಶ್ವಿನಿ ಚೆನ್ನಾಗಿ ಆಡಿದ್ದರಾದರೂ ಗೆಲುವು ಅವರ ಕೈತಪ್ಪಿದೆ. ಬಿಗ್​​ಬಾಸ್ ಮನೆಗೆ ಕಳೆದ ಸೀಸನ್​​ನ ಚೈತ್ರಾ ಕುಂದಾಪುರ ಅತಿಥಿಯಾಗಿ ಹೋಗಿ ಇದ್ದು ಬಂದಿದ್ದರು. ಬಿಗ್​​ಬಾಸ್ ಮನೆಯಲ್ಲಿ ಚೈತ್ರಾ ಮತ್ತು ಅಶ್ವಿನಿ ಅವರ ನಡುವೆ ಸಾಕಷ್ಟು ಜಗಳಗಳು ನಡೆದಿದ್ದವು. ಆದರೆ ಆ ಜಗಳ ಮನೆಯಿಂದ ಹೊರಬಂದ ಮೇಲೂ ಮುಂದುವರೆದಿವೆ. ಯಾವ ಮಟ್ಟಿಗೆ ಜಗಳ ಮುಂದುವರೆದಿದೆಯೆಂದರೆ ಮಾತುಗಳು ವೈಯಕ್ತಿಕ ಮಟ್ಟಕ್ಕೆ ಇಳಿದಿವೆ.

ಮೊದಲಿಗೆ ಅಶ್ವಿನಿ ಅವರು ಇನ್​​ಸ್ಟಾಗ್ರಾಂನಲ್ಲಿ ತಮಗೆ ಆಗಿದ್ದ ತರಚಿದ ಗಾಯಗಳ ಫೋಟೊವನ್ನು ಹಂಚಿಕೊಂಡಿದ್ದರು. ಆದರೆ ಅವರು ಯಾರಿಂದ ಗಾಯ ಆಗಿದೆ ಎಂದೆಲ್ಲ ಹೇಳಿರಲಿಲ್ಲ. ಆದರೆ ಅದಕ್ಕೆ ಪ್ರತಿಕ್ರಿಯಿಸಿದ್ದ ಚೈತ್ರಾ ಕುಂದಾಪುರ, ‘ನನಗೂ ಗಾಯಗಳಾಗಿದೆ ಆದರೆ ಅದನ್ನು ತೋರಿಸಿ ಸಿಂಪತಿ ಗಿಟ್ಟಿಸಿಕೊಳ್ಳಲು ಪಿಆರ್ ಟೀಂ ಇಲ್ಲ ಎಂದಿದ್ದರು. ಅಲ್ಲಿಂದ ಇಬ್ಬರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಣ್ಣ ವಾಗ್ವಾದ ಶುರುವಾಗಿತ್ತು.

ಆದರೆ ಇದೀಗ ಬೇರೆ ರೂಪ ಪಡೆದುಕೊಂಡಿದ್ದು ವೈಯಕ್ತಿಕ ವಾಗ್ದಾಳಿಗೆ ಇಳಿದಿದೆ. ಅಶ್ವಿನಿ ಅವರ ಖಾಸಗಿ ಜೀವನದ ಬಗ್ಗೆ ಚೈತ್ರಾ ಇತ್ತೀಚೆಗೆ ಆರೋಪ ಮಾಡಿದ್ದರು. ಅಶ್ವಿನಿ ಅವರ ವಿಚ್ಛೇದನ ಮತ್ತು ಅವರ ಮೇಲಿರುವ ಪ್ರಕರಣಗಳ ಬಗ್ಗೆ ಮಾತನಾಡಿದ್ದರು. ಇದೀಗ ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅಶ್ವಿನಿ ಗೌಡ, ‘ಮೂವರು ಗಂಡಂದಿರು ಚೆಕ್ ಬೌನ್ಸ್ ಪ್ರಕರಣ ಇವೆಲ್ಲ ಚೈತ್ರಾ ಅವರ ಅನುಭವ ಆಗಿರಬಹುದು ಅದಕ್ಕೆ ಹಾಗೆಲ್ಲ ಮಾತನಾಡುತ್ತಿದ್ದಾರೆ’ ಎಂದಿದ್ದಾರೆ.

ಇದನ್ನೂ ಓದಿ:ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ

‘ನಾನು ಗಾಯಗಳ ಚಿತ್ರಗಳನ್ನಷ್ಟೆ ಹಂಚಿಕೊಂಡಿದ್ದೆ, ಅದು ಯಾರು ಮಾಡಿದ್ದು ಎಲ್ಲಿ ಆಗಿದ್ದು ಎಂದೆಲ್ಲ ಹೇಳಿಯೇ ಇರಲಿಲ್ಲ, ಆದರೆ ಕುಂಬಳ ಕಾಯಿ ಕಳ್ಳಿಯ ರೀತಿ ಚೈತ್ರಾ ಅವರೇ ಮೊದಲು ಪ್ರತಿಕ್ರಿಯೆ ನೀಡಿದರು, ಚೈತ್ರಾ ಅವರು ಅವರ ಮಿತಿಯಲ್ಲಿ ಇದ್ದರೆ ಒಳ್ಳೆಯದು’ ಎಂದು ಅಶ್ವಿನಿ ಅವರು ಹೇಳಿದ್ದಾರೆ.

ಇವರಿಬ್ಬರ ಜಗಳದ ನಡುವೆ, ಗಿಲ್ಲಿ ಬಿಗ್​​ಬಾಸ್ ಮನೆಯಲ್ಲಿ ಹೇಳಿದ್ದ ಹಳೆಯ ಡೈಲಾಗ್ ಒಂದು ವೈರಲ್ ಆಗುತ್ತಿದೆ. ‘ಹುಡುಗರು ಕಿತ್ತಾಡಿಕೊಂಡರು ಕೆಲವೇ ನಿಮಿಷಕ್ಕೆ ಕಾಂಪ್ರೊಮೈಸ್ ಆಗಿ ಬಿಡುತ್ತಾರೆ. ಆದರೆ ಹೆಣ್ಣುಮಕ್ಕಳು ಬಿಗ್​​ಬಾಸ್ ಹೊರಗೂ ಜಗಳ ಮುಂದುವರೆಸುತ್ತಾರೆ’ ಎಂದಿದ್ದರು ಅದು ಹಾಗೆಯೇ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

T20 World Cup: ಭಾರತವನ್ನು ದುಃಸ್ವಪ್ನದಂತೆ ಕಾಡಿದ ಪಾಕ್ ವಿರುದ್ಧದ ಸೋಲು ಯಾವುದು ಗೊತ್ತಾ?

Source link

ಮಹಿಳೆಯರು, ರೈತರು, ಯುವಕರಿಗೆ ಗುಡ್ ನ್ಯೂಸ್; ಸೇವಾ ತೀರ್ಥ ಕಚೇರಿಯಲ್ಲಿ ಪ್ರಧಾನಿ ಮೋದಿ ಮೊದಲ ನಿರ್ಧಾರ – Kannada News | PM Narendra Modi’s First Decisions From Seva Teerth Office Farmers, Women, youth welfare on focus

ನವದೆಹಲಿ, ಫೆಬ್ರವರಿ 13: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ತಮ್ಮ ಹೊಸ ಕಚೇರಿಯಾದ ಸೇವಾ ತೀರ್ಥದಲ್ಲಿ (Seva Teerth) ತಮ್ಮ ಮೊದಲ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂದು ಪ್ರಧಾನಿ ಮೋದಿ ಸಹಿ ಹಾಕಿದ 4 ನಿರ್ಧಾರಗಳು ರೈತರು, ಮಹಿಳೆಯರು, ಯುವಕರ ಮೇಲೆ ಕೇಂದ್ರೀಕೃತವಾಗಿದೆ. ಇಂದು ಮೋದಿ ರಾಹತ್ ಯೋಜನೆಯನ್ನು ಪ್ರಾರಂಭಿಸಲು ಅನುಮೋದನೆ ನೀಡಿದರು, ಲಖಪತಿ ದೀದಿಯ ಯೋಜನೆಯ ಮಿತಿಯನ್ನು ದ್ವಿಗುಣಗೊಳಿಸಿದರು ಮತ್ತು ಕೃಷಿ ಮೂಲಸೌಕರ್ಯ ನಿಧಿಯ ವೆಚ್ಚವನ್ನು ಹೆಚ್ಚಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಲುಟಿಯೆನ್‌ನ ದೆಹಲಿಯ ದಕ್ಷಿಣ ಬ್ಲಾಕ್‌ನಲ್ಲಿರುವ ತಮ್ಮ ಬ್ರಿಟಿಷ್ ಯುಗದ ಕಚೇರಿಯಿಂದ “ಸೇವಾ ತೀರ್ಥ” ಎಂಬ ಹೊಸ ಕಚೇರಿಗೆ ಸ್ಥಳಾಂತರಗೊಂಡಿದ್ದಾರೆ. ಇದೇ ವೇಳೆ ಅವರು ಮಹಿಳೆಯರು, ಯುವಕರು ಮತ್ತು ದುರ್ಬಲ ನಾಗರಿಕರಿಗೆ ಸಂಬಂಧಿಸಿದ ಪ್ರಮುಖ ಫೈಲ್‌ಗಳಿಗೆ ಸಹಿ ಹಾಕಿದರು.

ಇದನ್ನೂ ಓದಿ: ಭಯದಿಂದ ಪ್ರಧಾನಿ ಮೋದಿ ಸದನಕ್ಕೆ ಗೈರು; ಕಾಂಗ್ರೆಸ್ ಮಹಿಳಾ ಸಂಸದರಿಂದ ಲೋಕಸಭಾ ಸ್ಪೀಕರ್‌ಗೆ ಪತ್ರ

ಪಿಎಂ ರಾಹತ್ ಯೋಜನೆ:

ಪ್ರಧಾನ ಮಂತ್ರಿ ಮೋದಿ ಪಿಎಂ ರಾಹತ್ ಯೋಜನೆಯನ್ನು ಪ್ರಾರಂಭಿಸಲು ಅನುಮೋದನೆ ನೀಡಿದರು. ಈ ಉಪಕ್ರಮದ ಅಡಿಯಲ್ಲಿ ಅಪಘಾತಕ್ಕೊಳಗಾದವರಿಗೆ 1.5 ಲಕ್ಷ ರೂ.ಗಳವರೆಗೆ ನಗದು ರಹಿತ ಚಿಕಿತ್ಸೆ ದೊರೆಯಲಿದ್ದು, ತಕ್ಷಣದ ವೈದ್ಯಕೀಯ ಸಹಾಯದ ಕೊರತೆಯಿಂದಾಗಿ ಯಾವುದೇ ಪ್ರಾಣಹಾನಿ ಆಗದಂತೆ ತಡೆಯುತ್ತದೆ.

ಲಕ್ಷಪತಿ ದೀದಿ ಗುರಿ ಹೆಚ್ಚಳ:

ಕೇಂದ್ರ ಸರ್ಕಾರವು 3 ಕೋಟಿ ಲಕ್ಷಪತಿ ದೀದಿಗಳ ಮೈಲಿಗಲ್ಲನ್ನು ದಾಟಿದೆ. ಪ್ರಧಾನಿ ಮೋದಿ ಈಗ ಮಾರ್ಚ್ 2029ರ ವೇಳೆಗೆ 6 ಕೋಟಿ ಲಕ್ಷಪತಿ ದೀದಿಗಳ ಹೊಸ ಗುರಿಯನ್ನು ಹೊಂದಿದ್ದು, ಇದು ಪ್ರಮಾಣ ಮತ್ತು ಆಕಾಂಕ್ಷೆ ಎರಡನ್ನೂ ದ್ವಿಗುಣಗೊಳಿಸುತ್ತದೆ.

ರೈತರಿಗೆ ಪ್ರೋತ್ಸಾಹ:

ಭಾರತದ ಸಂಪೂರ್ಣ ಕೃಷಿ ಸರಪಳಿಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರ ಕೃಷಿ ಮೂಲಸೌಕರ್ಯ ನಿಧಿಯನ್ನು 2 ಲಕ್ಷ ಕೋಟಿಗೆ ದ್ವಿಗುಣಗೊಳಿಸಿದೆ. ಭಾರತದ ಸಂಪೂರ್ಣ ಕೃಷಿ ಮೌಲ್ಯ ಸರಪಳಿಯನ್ನು ಬಲಪಡಿಸುವ ಗುರಿಯೊಂದಿಗೆ ಪ್ರಧಾನಿ ಮೋದಿ ಕೃಷಿ ಮೂಲಸೌಕರ್ಯ ನಿಧಿಯ ವೆಚ್ಚವನ್ನು ₹1 ಲಕ್ಷ ಕೋಟಿ ರೂ.ನಿಂದ 2 ಲಕ್ಷ ಕೋಟಿಗೆ ದ್ವಿಗುಣಗೊಳಿಸಲು ಅನುಮೋದಿಸಿದ್ದಾರೆ.

ಇದನ್ನೂ ಓದಿ: Budget 2026: ಲಖ್ಪತಿ ದೀದಿ ಯೋಜನೆ ವಿಸ್ತರಣೆ, ಮಹಿಳಾ ಉದ್ಯಮಶೀಲತೆ ಉತ್ತೇಜಿಸಲು ಶಿ-ಮಾರ್ಟ್ ಸ್ಥಾಪನೆ

ಸ್ಟಾರ್ಟ್ಅಪ್ ಇಂಡಿಯಾ ಅನುದಾನ ಹೆಚ್ಚಳ:

ಯುವಕರು ಉದ್ಯಮವನ್ನು ಆರಂಭಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಟಾರ್ಟ್ಅಪ್ ಇಂಡಿಯಾ ಯೋಜನೆ ಆರಂಭಿಸಲಾಗಿದೆ. ಭಾರತದ ತಂತ್ರಜ್ಞಾನ, ಉತ್ಪಾದನೆ ಮತ್ತು ತಂತ್ರಜ್ಞಾನಗಳಲ್ಲಿ ಪ್ರಧಾನ ಮಂತ್ರಿಗಳು 10,000 ಕೋಟಿ ರೂ.ಗಳ ನಿಧಿಯೊಂದಿಗೆ ಸ್ಟಾರ್ಟ್ಅಪ್ ಇಂಡಿಯಾ ನಿಧಿ 2.0 ಅನ್ನು ಅನುಮೋದಿಸಿದ್ದಾರೆ.

ಪ್ರಧಾನ ಮಂತ್ರಿ ಕಚೇರಿಯ ಹೊಸ ಕಟ್ಟಡವಾದ ಸೇವಾ ತೀರ್ಥ ಮತ್ತು ಇತರ 2 ಭವ್ಯ ಸರ್ಕಾರಿ ಕಟ್ಟಡಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಸೇವಾ ತೀರ್ಥವು ಪಿಎಂಒ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಕ್ಯಾಬಿನೆಟ್ ಸಚಿವಾಲಯವನ್ನು ಹೊಂದಿದೆ. ಇವೆಲ್ಲವೂ ಹಿಂದೆ ಸೆಂಟ್ರಲ್ ವಿಸ್ಟಾ ಪ್ರದೇಶದ ವಿವಿಧ ಸ್ಥಳಗಳಲ್ಲಿ ಇದ್ದವು. ಇದರಿಂದ ಸಮನ್ವಯದ ಸಮಸ್ಯೆ ಎದುರಾಗಿತ್ತು. ಹೊಸ ಕರ್ತವ್ಯ ಭವನ 1 ಮತ್ತು ಕರ್ತವ್ಯ ಭವನ 2 ಕಾನೂನು, ರಕ್ಷಣೆ, ಹಣಕಾಸು, ಆರೋಗ್ಯ, ಕೃಷಿ ಮತ್ತು ಇತರ ಹಲವಾರು ಪ್ರಮುಖ ಸಚಿವಾಲಯಗಳನ್ನು ಒಳಗೊಂಡಿರುತ್ತವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ: ಸರ್ಕಾರಿ ಬಸ್ – ಖಾಸಗಿ ಬಸ್​ ಮುಖಾಮುಖಿ ಡಿಕ್ಕಿ – Kannada News | Hanur: Over 20 Injured in Major Bus Collision Near Mahadeshwara Betta Festival Turn

ಚಾಮರಾಜನಗರ, ಫೆ.13: ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಒಂದು ಭೀಕರ ಅಪಘಾತ ನಡೆದಿದೆ. ಕೆಎಸ್​ಆರ್​ಟಿಸಿ ಬಸ ಮತ್ತು ಖಾಸಗಿ ಬಸ್​ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ 4ನೇ ತಿರುವಿನಲ್ಲಿ ಈ ಘಟನೆ ನಡೆದಿದೆ. ಮೈಸೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಬರ್ತಿದ್ದ ಸರ್ಕಾರಿ ಬಸ್ ಮುಂದೆಯಿಂದ ಬಂದ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಮಹದೇಶ್ವರ ಬೆಟ್ಟದ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version