‘ಟಾಕ್ಸಿಕ್’ ಸಿನಿಮಾಕ್ಕೆ ರಾಧಿಕಾ ಪಂಡಿತ್ ಕೊಟ್ಟಿರುವ ಕೊಡುಗೆ ಏನು? – Kannada News | Yash and others praised Radhika Pandith for her scarifies for Toxic movie

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ನಿನ್ನೆ (ಆಗಸ್ಟ್ 8) ಬಿಡುಗಡೆ ಆಗಿದೆ. ಬೆಂಗಳೂರಿನ ಎಎಂಬಿ ಮಾಲ್​​​ನಲ್ಲಿ ನಿನ್ನೆ ಅದ್ಧೂರಿಯಾಗಿ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ‘ಟಾಕ್ಸಿಕ್’ ಸಿನಿಮಾ ಎಲ್ಲ ಪ್ರಮುಖ ತಾರೆಯರು, ತಂತ್ರಜ್ಞರು ಭಾಗಿ ಆಗಿದ್ದರು. ಪ್ರತಿಯೊಬ್ಬರೂ ಸಹ ಇತರೆ ಕಲಾವಿದರು, ತಂತ್ರಜ್ಞರು ಸಿನಿಮಾಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ಪರಸ್ಪರ ಕೊಂಡಾಡಿದರು. ಇದರ ಜೊತೆಗೆ ನಟಿ ರಾಧಿಕಾ ಪಂಡಿತ್ ನೀಡಿರುವ ಕೊಡುಗೆಯನ್ನೂ ಸಹ ಹಲವರು ಮೆಚ್ಚಿಕೊಂಡರು. ‘ಟಾಕ್ಸಿಕ್’ ಸಿನಿಮಾಕ್ಕೆ ರಾಧಿಕಾ ಪಂಡಿತ್​​ ನೀಡಿರುವ ಕೊಡುಗೆಯೇನು?

ನಿರ್ಮಾಪಕ ಕೆವಿಎನ್ ವೆಂಕಟ್ ಅವರು ಮೊದಲು ರಾಧಿಕಾ ಪಂಡಿತ್ ಅವರಿಗೆ ಧನ್ಯವಾದ ಹೇಳಿದರು. ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿಯೇ ಅಂತೆ ವೆಂಕಟ್ ಅವರು ಮೊದಲ ಬಾರಿಗೆ ಯಶ್ ಅವರನ್ನು ಭೇಟಿ ಆಗಿದ್ದು. ಆ ನಂತರ ನಟಿ ನಯನತಾರಾ, ರುಕ್ಮಿಣಿ ವಸಂತ್, ನಿರ್ದೇಶಕಿ ಗೀತು ಮೋಹನ್​​ದಾಸ್ ಕೊನೆಗೆ ನಟ ಯಶ್ ಸಹ ರಾಧಿಕಾ ಪಂಡಿತ್ ಅವರಿಗೆ ವಿಶೇಷವಾದ ಧನ್ಯವಾದ ಹೇಳಿದರು. ಇದಕ್ಕೆ ಕಾರಣವೂ ಇದೆ.

‘ಟಾಕ್ಸಿಕ್’ ಸಿನಿಮಾದ ಪ್ರೀ ಪ್ರೊಡಕ್ಷನ್, ಚಿತ್ರೀಕರಣ ಎಲ್ಲವೂ ಸೇರಿ ಸುಮಾರು ನಾಲ್ಕೂವರೆ ವರ್ಷ ಹಿಡಿದೆ. ಇಷ್ಟೂ ಅವಧಿಯಲ್ಲಿ ಯಶ್, ಪ್ರತಿಯೊಂದು ವಿಭಾಗದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ನಾಲ್ಕೂವರೆ ವರ್ಷದಲ್ಲಿ ಯಶ್, ತಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ಸಮಯ ಕಳೆದಿರವುದು ಬಹು ಕಡಿಮೆಯಂತೆ. ಪತಿಯನ್ನು ಹೀಗೆ ಒಂದು ಸಿನಿಮಾಕ್ಕಾಗಿ ಬಿಟ್ಟುಕೊಡುವುದು ಸಾಮಾನ್ಯ ಕೊಡುಗೆಯಲ್ಲ ಎಂಬ ಕಾರಣಕ್ಕೆ ಚಿತ್ರತಂಡದ ಹಲವರು ರಾಧಿಕಾ ಪಂಡಿತ್ ಅವರಿಗೆ ವಿಶೇಷ ಧನ್ಯವಾದಗಳನ್ನು ಹೇಳಿದರು.

ಇದನ್ನೂ ಓದಿಯಶ್​ ‘ಟಾಕ್ಸಿಕ್’ ಟ್ರೇಲರ್​ ನೋಡಿ ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ

ನಯನತಾರಾ ಅಂತೂ ರಾಧಿಕಾ ಅವರ ತ್ಯಾಗವನ್ನು ಕೊಂಡಾಡಿದರು. ಗೀತೂ ಮೋಹನ್​​ದಾಸ್ ಸಹ ರಾಧಿಕಾ ಅವರ ತ್ಯಾಗವನ್ನು, ಸಹಿಷ್ಣುತೆಯನ್ನು ಹೊಗಳಿದರು. ಕೊನೆಯಲ್ಲಿ ಮಾತನಾಡಿದ ನಟ ಯಶ್ ಸಹ ಪತ್ನಿಯನ್ನು ಕೊಂಡಾಡಿದರು. ‘ನನ್ನಂಥಹ ವ್ಯಕ್ತಿಯ ಜೊತೆಗೆ ಜೀವನ ಸಾಗಿಸುವುದು ಸುಲಭದ ಕೆಲಸವಲ್ಲ. ನನ್ನೊಟ್ಟಿಗೆ ಸ್ನೇಹವೇ ಕಷ್ಟ, ನನ್ನೊಟ್ಟಿಗೆ ಗುರುತಿಸಿಕೊಳ್ಳುವುದು ಸಹ ಎಷ್ಟೋ ಜನರಿಗೆ ಕಷ್ಟ ಅಂಥಹುದರಲ್ಲಿ ನನ್ನೊಂದಿಗೆ ಅನುಕಾಲ ಇರುವುದು ಸಾಮಾನ್ಯವಾದ ಸ್ಟ್ರೆಸ್ ಅಲ್ಲ, ಆದರೆ ರಾಧಿಕಾ ಅದನ್ನು ಮಾಡುತ್ತಿದ್ದಾರೆ’ ಎಂದರು ಯಶ್.

ನನ್ನ ಪ್ರತಿ ಸಿನಿಮಾಕ್ಕೂ ನಾನು ನೂರರಷ್ಟು ಶ್ರಮ ಹಾಕುತ್ತೇನೆ. ಆದರೆ ಈ ಸಿನಿಮಾದ ಪರಿಸ್ಥಿತಿ ಭಿನ್ನವಾಗಿತ್ತು. ನಾನು ಸಂಪೂರ್ಣವಾಗಿ ಇದರಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಪ್ರತಿದಿನವೂ ಹೋರಾಟದಂತೆ ಇರುತ್ತಿತ್ತು. ನಾನು ಬಹಳಷ್ಟು ಸಮಯವನ್ನು ಇದಕ್ಕಾಗಿ ಕೊಡಬೇಕಿತ್ತು. ನ್ನ ಗೈರು ಹಾಜರಿಯಲ್ಲಿ ಅವರು ಎಲ್ಲವನ್ನೂ ಮ್ಯಾನೇಜ್ ಮಾಡಿದ್ದಾರೆ. ಸಾಕಷ್ಟು ತ್ಯಾಗ ಮಾಡಿದ್ದಾರೆ. ನನ್ನ ನಂಬಿಕೆ ಏನೆಂದರೆ ಯಾರ ತ್ಯಾಗವೂ ವ್ಯರ್ಥ ಆಗುವುದಿಲ್ಲ. ಎಲ್ಲದರ ಪ್ರತಿಫಲ ಸಿಕ್ಕೆ ಸಿಗುತ್ತದೆ. ಕೆಲಸ, ಸಂಬಂಧ ಯಾವುದೇ ಆಗಿರಲಿ, ಪ್ರಾಮಾಣಿಕವಾಗಿರಬೇಕು, ಸತ್ಯವಂತರಾಗಿರಬೇಕು ಅಷ್ಟೆ’ ಎಂದು ಪತ್ನಿಯನ್ನು ಕೊಂಡಾಡಿದರು ನಟ ಯಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Weekly Horoscope: ಆಗಸ್ಟ್ 10 ರಿಂದ 16 ರವರೆಗಿನ ದ್ವಾದಶ ರಾಶಿಗಳ ಸಂಪೂರ್ಣ ವಾರ ಭವಿಷ್ಯ ಇಲ್ಲಿದೆ – Kannada News | Dr. Basavaraj Gurujis Weekly Horoscope: Predictions for 10 16 August 2026

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಅವರು ಆಗಸ್ಟ್ 10 ರಿಂದ 16 ರವರೆಗಿನ ವಾರ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಈ ವಾರದಲ್ಲಿ ಗ್ರಹಗಳ ಸಂಚಾರ, ವಿಶೇಷ ದಿನಗಳು ಮತ್ತು ದ್ವಾದಶ ರಾಶಿಗಳ ಮೇಲಿನ ಅವುಗಳ ಪರಿಣಾಮಗಳನ್ನು ವಿಶ್ಲೇಷಿಸಿದ್ದಾರೆ. ಮೀನ ರಾಶಿಯಲ್ಲಿ ಶನಿ, ಮಿಥುನ ರಾಶಿಯಲ್ಲಿ ಕುಜ, ಹಾಗೂ ಗುರು, ರವಿ, ಬುಧ ತ್ರಿಗ್ರಹ ಕೂಟವು ಕರ್ಕಾಟಕದಲ್ಲಿ ಸಂಚಾರ ಮಾಡಲಿದ್ದು, ಕೇತು ಸಿಂಹ ರಾಶಿಯಲ್ಲಿ ಹಾಗೂ ಶುಕ್ರ ಕನ್ಯಾ ರಾಶಿಯಲ್ಲಿ ನೀಚನಾಗಿ ಸಂಚರಿಸಲಿದ್ದಾನೆ ಎಂದು ಗುರೂಜಿ ವಿವರಿಸಿದರು. ಈ ವಾರದಲ್ಲಿ ಆಷಾಢ ಮಾಸ ಅಂತ್ಯಗೊಂಡು ಶ್ರಾವಣ ಮಾಸ ಪ್ರಾರಂಭವಾಗಲಿದೆ. ಅಲ್ಲದೆ, ಸೋಮ ಪ್ರದೋಷ, ಭೀಮನ ಅಮಾವಾಸ್ಯೆ, ವಿನಾಯಕಿ ಚತುರ್ಥಿ ಮತ್ತು ಸ್ವಾತಂತ್ರ್ಯ ದಿನಾಚರಣೆಗಳಂತಹ ಪ್ರಮುಖ ಘಟನೆಗಳು ನಡೆಯಲಿವೆ. ಗ್ರಹಣವಿದ್ದರೂ ಭಾರತದಲ್ಲಿ ಗೋಚಾರವಿಲ್ಲದ ಕಾರಣ ಆಚಾರ-ವಿಧಿ ವಿಧಾನಗಳು ಇರುವುದಿಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬರೋಬ್ಬರಿ 8 ವಿಕೆಟ್​… ಆಸ್ಟ್ರೇಲಿಯಾದ ಯುವ ವೇಗಿಯ ಮಿಂಚಿನ ದಾಳಿ! – Kannada News | Aussie Pacer Campbell Thompson’s Lethal 8 Wicket Haul Demolishes Bangladesh

ಬಾಂಗ್ಲಾದೇಶ್ ಕ್ರಿಕೆಟ್ ತಂಡಕ್ಕೆ ಆಸ್ಟ್ರೇಲಿಯಾದ ಯುವ ವೇಗಿಯೊಬ್ಬ ಅಕ್ಷರಶಃ ನಡುಕ ಹುಟ್ಟಿಸಿದ್ದಾನೆ. ಕೇವಲ 22 ವರ್ಷದ ಆಸ್ಟ್ರೇಲಿಯಾದ ಯುವ ಎಡಗೈ ವೇಗದ ಬೌಲರ್ ಕ್ಯಾಂಪ್​ಬೆಲ್ ಥಾಂಪ್ಸನ್, ಬಾಂಗ್ಲಾದೇಶ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ ಬರೋಬ್ಬರಿ 8 ವಿಕೆಟ್ ಕಬಳಿಸಿದ್ದಾರೆ. ಇವರ ಈ ಕರಾರುವಾಕ್ ದಾಳಿಗೆ ಧೂಳೀಪಟವಾದ ಬಾಂಗ್ಲಾದೇಶ್, ತನ್ನ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 54 ರನ್‌ಗಳಿಗೆ ಆಲೌಟ್ ಆಗಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ಡಾರ್ವಿನ್‌ನ ಮರಾರಾ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಕ್ಯಾಂಪ್​ಬೆಲ್ ಥಾಂಪ್ಸನ್ ಮಿಂಚಿನ ದಾಳಿ ಸಂಘಟಿಸಿದ್ದಾರೆ. ಕೇವಲ ಎರಡನೇ ಪ್ರಥಮ ದರ್ಜೆ ಪಂದ್ಯವಾಡುತ್ತಿರುವ ಸೌತ್ ಆಸ್ಟ್ರೇಲಿಯಾದ ಈ ಯುವ ಪ್ರತಿಭೆ, ಇಡೀ ಬಾಂಗ್ಲಾ ಬ್ಯಾಟಿಂಗ್ ಲೈನಪ್ ಅನ್ನು ಧ್ವಂಸಗೊಳಿಸಿದರು. ಥಾಂಪ್ಸನ್ ಕೇವಲ 25 ರನ್ ನೀಡಿ 8 ವಿಕೆಟ್ ಕಬಳಿಸುವ ಮೂಲಕ ಪಂದ್ಯದ ಹೀರೊ ಆಗಿ ಹೊರಹೊಮ್ಮಿದ್ದಾರೆ.

ಪಂದ್ಯದ ವಿವರ:

ಮೊದಲ ಇನಿಂಗ್ಸ್‌ನಲ್ಲಿ ಮೆಹಿದಿ ಹಸನ್ ಮಿರಾಝ್ ಅವರ ಶತಕದ (109*) ನೆರವಿನಿಂದ ಬಾಂಗ್ಲಾದೇಶ್ ತಂಡ 263 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್, ಟೇಗ್ ವೈಲಿ ಅವರ ಅದ್ಭುತ 130 ರನ್‌ಗಳ ನೆರವಿನಿಂದ 355 ರನ್ ಕಲೆಹಾಕಿ 92 ರನ್‌ಗಳ ಮುನ್ನಡೆ ಪಡೆದುಕೊಂಡಿತು.

ಇದನ್ನೂ ಓದಿ: ಸದಾ ‘ಗಂಭೀರ’ವಾಗಿರುವ ಗಂಭೀರ್‌ಗೆ ನಗು ತರಿಸಿದ ಜಡೇಜಾ!

92 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿದ ಬಾಂಗ್ಲಾದೇಶ್ ತಂಡಕ್ಕೆ ಕ್ಯಾಂಪ್​ಬೆಲ್ ಥಾಂಪ್ಸನ್ ಆಘಾತದ ಮೇಲೆ ಆಘಾತ ನೀಡಿದರು. ಪರಿಣಾಮ ಬಾಂಗ್ಲಾ ಪಡೆ ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 54 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ತಂಡವು ಇನಿಂಗ್ಸ್ ಹಾಗೂ 38 ರನ್​ಗಳ ಭರ್ಜರಿ ಜಯ ದಾಖಲಿಸಿತು. ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 25 ರನ್ ನೀಡಿ 8 ವಿಕೆಟ್​ ಕಬಳಿಸುವ ಕ್ಯಾಂಪ್​ಬೆಲ್ ಥಾಂಪ್ಸನ್ ಭರ್ಜರಿ ಗೆಲುವಿನ ರೂವಾರಿ ಎನಿಸಿಕೊಂಡರು.

ಟೆಸ್ಟ್ ಸರಣಿಗೂ ಮುನ್ನ ಎಚ್ಚರಿಕೆ:

ಆಗಸ್ಟ್ 13 ರಿಂದ ಡಾರ್ವಿನ್‌ನಲ್ಲಿ ಆಸ್ಟ್ರೇಲಿಯಾದ ಪ್ರಮುಖ ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಅಲ್ಲಿ ಬಾಂಗ್ಲಾದೇಶ್ ತಂಡವು ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಝಲ್​ವುಡ್​ ಅವರಂತಹ ವಿಶ್ವದ ನಂಬರ್ ಒನ್ ವೇಗಿಗಳನ್ನು ಎದುರಿಸಬೇಕಾಗಿದೆ. ಅದಕ್ಕೂ ಮುನ್ನ ಕೇವಲ 22 ವರ್ಷದ ಯುವ ಆಟಗಾರನ ಎದುರೇ 54 ರನ್‌ಗಳಿಗೆ ಧೂಳೀಪಟವಾಗಿರುವುದ ಬಾಂಗ್ಲಾದೇಶ್ ತಂಡಕ್ಕೆ ತೀವ್ರ ಆತಂಕವನ್ನುಂಟು ಮಾಡಿದೆ.

Source link

ಚಾಮುಂಡೇಶ್ವರಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ – Kannada News | Union Minister HD Kumaraswamy Offers Special Prayers at Mysurus Chamundi Temple

ಮೈಸೂರು, ಆಗಸ್ಟ್​​ 09: ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿದ್ದು, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. H.D.ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಶಾಸಕರು ಈ ವೇಳೆ ಸಾಥ್ ನೀಡಿದ್ದು, ಬಿಡದಿ ಪಾದಯಾತ್ರೆಗೆ ಚಾಲನೆಗೂ ಮುನ್ನ ಅವರು ದೇಗುಲಕ್ಕೆ ಭೇಟಿ ನೀಡಿರುವುದು ಗಮನ ಸೆಳೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Weak Venus: ಜಾತಕದಲ್ಲಿ ಶುಕ್ರ ಗ್ರಹ ದುರ್ಬಲವಾಗಿದ್ದರೆ ಕಾಣಿಸಿಕೊಳ್ಳುವ ಲಕ್ಷಣಗಳಿವು! – Kannada News | Signs of a Weak Venus in Your Horoscope and Simple Remedies

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಪ್ರಾಮುಖ್ಯತೆಯಿದೆ. ಅವುಗಳಲ್ಲಿ ಶುಕ್ರ (Venus) ಗ್ರಹವನ್ನು ಪ್ರೀತಿ, ಸೌಂದರ್ಯ, ಕಲೆ, ಸಂಪತ್ತು, ಐಷಾರಾಮಿ ಜೀವನ ಮತ್ತು ಭೌತಿಕ ಸುಖಗಳ ಕಾರಕ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶುಕ್ರನು ಬಲವಾಗಿದ್ದಾಗ ವ್ಯಕ್ತಿಯ ಜೀವನದಲ್ಲಿ ಸೌಕರ್ಯ, ಆಕರ್ಷಣೆ ಮತ್ತು ಸಮೃದ್ಧಿ ನೆಲೆಸುತ್ತದೆ. ಆದರೆ, ಶುಕ್ರನು ದುರ್ಬಲನಾಗಿದ್ದರೆ ಅಥವಾ ಅಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಯ ಸ್ವಭಾವ, ದಿನಚರಿ ಮತ್ತು ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜಾತಕದಲ್ಲಿ ಶುಕ್ರ ಗ್ರಹ ದುರ್ಬಲವಾಗಿದ್ದಾಗ ಎದುರಾಗುವ ಮುಖ್ಯ ಲಕ್ಷಣಗಳು ಮತ್ತು ಅವುಗಳನ್ನು ಸರಿಪಡಿಸಿಕೊಳ್ಳುವ ವಿಧಾನ ಇಲ್ಲಿದೆ.

ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ:

ಶುಕ್ರನು ಸುಂದರತೆ, ಶಿಸ್ತು ಮತ್ತು ಸ್ವಚ್ಛತೆಯ ಸಂಕೇತವಾಗಿದ್ದಾನೆ. ಜಾತಕದಲ್ಲಿ ಶುಕ್ರ ದುರ್ಬಲವಾದಾಗ, ವ್ಯಕ್ತಿಗೆ ತನ್ನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮನಸ್ಸಿರುವುದಿಲ್ಲ. ಅಂತಹ ವ್ಯಕ್ತಿಯ ಮನೆ, ಕೋಣೆ ಅಥವಾ ಕೆಲಸದ ಸ್ಥಳವು ಹೆಚ್ಚಾಗಿ ಅಸ್ತವ್ಯಸ್ತವಾಗಿರುತ್ತದೆ. ವಸ್ತುಗಳನ್ನು ಸರಿಯಾದ ಜಾಗದಲ್ಲಿಡಲು ಸೋಮಾರಿತನ ಉಂಟಾಗುತ್ತದೆ. ಈ ಅಭ್ಯಾಸವು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಅವರ ದಿನಚರಿ ಮತ್ತು ಆಲೋಚನಾ ಶಕ್ತಿಯ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಅತಿಯಾದ ಸೋಮಾರಿತನ ಮತ್ತು ಕೆಲಸ ಮುಂದೂಡುವುದು:

ದೈನಂದಿನ ಕೆಲಸಗಳಲ್ಲಿ ನಿರಾಸಕ್ತಿ ಮತ್ತು ಸೋಮಾರಿತನ ದುರ್ಬಲ ಶುಕ್ರನ ಸ್ಪಷ್ಟ ಸಂಕೇತವಾಗಿದೆ. ಇಂತಹ ವ್ಯಕ್ತಿಗಳಿಗೆ ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಏಳಲು ಮತ್ತು ದಿನನಿತ್ಯದ ಜವಾಬ್ದಾರಿಗಳನ್ನು ಪೂರೈಸಲು ಕಷ್ಟವಾಗುತ್ತದೆ. ಪ್ರಮುಖ ಕೆಲಸಗಳನ್ನು ಕಷ್ಟಪಟ್ಟು ಪೂರ್ಣಗೊಳಿಸುವ ಬದಲು ವಿಶ್ರಾಂತಿ ಪಡೆಯಲು ಅಥವಾ ಮುಂದೂಡಲು ಬಯಸುತ್ತಾರೆ. ಇದು ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ.

ಅನಗತ್ಯ ಖರ್ಚು ಮತ್ತು ಐಷಾರಾಮಿ ಜೀವನದ ವ್ಯಾಮೋಹ:

ಶುಕ್ರನು ಭೌತಿಕ ಸುಖಗಳ ಗ್ರಹವಾದ್ದರಿಂದ, ಅದು ದುರ್ಬಲವಾದಾಗ ವ್ಯಕ್ತಿಯು ಅತಿಯಾದ ಪ್ರದರ್ಶನಪ್ರಿಯನಾಗುತ್ತಾನೆ. ಅಗತ್ಯವಿಲ್ಲದಿದ್ದರೂ ಮತ್ತು ಕೈಯಲ್ಲಿ ಸಾಕಷ್ಟು ಹಣವಿಲ್ಲದಿದ್ದರೂ ಸಹ, ಸೌಕರ್ಯ ಮತ್ತು ಪ್ರದರ್ಶನಕ್ಕಾಗಿ ದುಬಾರಿ ವಸ್ತುಗಳನ್ನು ಖರೀದಿಸುವ ಆಸೆ ಉಂಟಾಗುತ್ತದೆ. ಇದರಿಂದಾಗಿ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗದೆ ಹಣಕಾಸಿನ ಮುಗ್ಗಟ್ಟು ಎದುರಾಗುತ್ತದೆ.

ಸಂಬಂಧಗಳಲ್ಲಿ ಬಿರುಕು ಮತ್ತು ತಪ್ಪು ತಿಳುವಳಿಕೆ:

ಜ್ಯೋತಿಷ್ಯದಲ್ಲಿ ಶುಕ್ರನನ್ನು ಪ್ರೀತಿ, ಆಕರ್ಷಣೆ ಮತ್ತು ವೈವಾಹಿಕ ಜೀವನದ ಮುಖ್ಯ ಕಾರಕ ಎಂದು ಪರಿಗಣಿಸಲಾಗುತ್ತದೆ. ಶುಕ್ರ ದುರ್ಬಲಗೊಂಡಾಗ ದಾಂಪತ್ಯ ಅಥವಾ ಪ್ರೇಮ ಸಂಬಂಧಗಳಲ್ಲಿ ಉದ್ವಿಗ್ನತೆ, ತಪ್ಪು ತಿಳುವಳಿಕೆಗಳು ಮತ್ತು ಭಾವನಾತ್ಮಕ ಅಂತರ ಹೆಚ್ಚಾಗುತ್ತದೆ. ವ್ಯಕ್ತಿಯು ತನ್ನ ಸಂಗಾತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ವಿಫಲನಾಗಬಹುದು ಅಥವಾ ಸಣ್ಣ ಸಣ್ಣ ವಿಷಯಗಳಿಗೂ ಭಿನ್ನಾಭಿಪ್ರಾಯ ತಲೆದೋರಬಹುದು.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ವ್ಯಕ್ತಿತ್ವ ಮತ್ತು ಸೌಂದರ್ಯದ ಬಗ್ಗೆ ನಿರ್ಲಕ್ಷ್ಯ:

ಶುಕ್ರ ದುರ್ಬಲಗೊಂಡಾಗ ವ್ಯಕ್ತಿಯು ತನ್ನ ಸ್ವಂತ ಆಕರ್ಷಣೆ, ಸೌಂದರ್ಯ ಮತ್ತು ಅಂದಗೊಳಿಸುವಿಕೆಯ (Personal Grooming) ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾನೆ. ಸ್ವ-ಆರೈಕೆ (Self-care) ಮತ್ತು ಉತ್ತಮ ಉಡುಪು ಧರಿಸುವುದರಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ವ್ಯಕ್ತಿಯಲ್ಲಿ ಧನಾತ್ಮಕ ಆಕರ್ಷಣೆ ಕಡಿಮೆಯಾಗಿ, ಆತ್ಮವಿಶ್ವಾಸ ಕುಸಿಯಲು ಇದು ಕಾರಣವಾಗುತ್ತದೆ.

ದುರ್ಬಲ ಶುಕ್ರನನ್ನು ಬಲಪಡಿಸಿಕೊಳ್ಳುವುದು ಹೇಗೆ?

ಶುಕ್ರ ಗ್ರಹವನ್ನು ಬಲಪಡಿಸಲು ಕೇವಲ ಜ್ಯೋತಿಷ್ಯದ ಪೂಜೆ ಅಥವಾ ಪರಿಹಾರಗಳನ್ನು ಮಾತ್ರ ನಂಬಿದರೆ ಸಾಲದು, ನಿಮ್ಮ ದೈನಂದಿನ ಜೀವನಶೈಲಿಯಲ್ಲಿ ಕೆಲವೊಂದು ಧನಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಂತ ಅಗತ್ಯ. ಮೊದಲನೆಯದಾಗಿ, ನಿಮ್ಮ ಮನೆ, ಕೋಣೆ ಹಾಗೂ ಕಾರ್ಯಸ್ಥಳವನ್ನು ಸದಾ ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿಡಿ. ದಿನನಿತ್ಯ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಿ, ಉತ್ತಮ ಉಡುಪು ಧರಿಸುವುದು ಹಾಗೂ ಸುಗಂಧದ್ರವ್ಯಗಳನ್ನು (Perfume) ಬಳಸುವುದು ಶುಕ್ರನ ಕೃಪೆಗೆ ಕಾರಣವಾಗುತ್ತದೆ. ಹಣಕಾಸಿನ ವಿಷಯದಲ್ಲಿ ಅತಿಯಾದ ಪ್ರದರ್ಶನಕ್ಕಾಗಿ ಖರ್ಚು ಮಾಡುವುದನ್ನು ತಡೆದು ಬಜೆಟ್ ರೂಪಿಸಿಕೊಳ್ಳಿ. ಅಂತಿಮವಾಗಿ, ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸುತ್ತಾ ಉತ್ತಮ ಸಂವಹನ ಇಟ್ಟುಕೊಂಡರೆ ಶುಕ್ರ ಗ್ರಹದ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಿ ಜೀವನದಲ್ಲಿ ನೆಮ್ಮದಿ ಕಾಣಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Dharmendra Pradhan Resignation: ರಾಜೀನಾಮೆ ನೀಡಿದ ರಹಸ್ಯ ಬಿಚ್ಚಿಟ್ಟ ಧರ್ಮೇಂದ್ರ ಪ್ರಧಾನ್! – Kannada News | Dharmendra Pradhan Explains Resignation: Former Education Minister Reveals Why He Quit Amid NEET Protests

ಭುವನೇಶ್ವರ, ಆಗಸ್ಟ್ 09: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ (NEET) ಪೇಪರ್ ಲೀಕ್ ಹಗರಣ ಹಾಗೂ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್, ಶನಿವಾರ ತಮ್ಮ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಒಡಿಶಾದ ಜಿಎಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ನೀಟ್ ಪೇಪರ್ ಲೀಕ್ ಪ್ರತಿಭಟನೆಯ ಸಂದರ್ಭದಲ್ಲಿ ದೇಶದ ಯುವ ಪೀಳಿಗೆಯನ್ನು (Gen Z) ದಾರಿ ತಪ್ಪಿಸಲು ಕೆಲವು ಶಕ್ತಿಗಳು ವ್ಯವಸ್ಥಿತ ಸಂಚು ರೂಪಿಸಿದ್ದವು. ಈ ಕಾರಣಕ್ಕಾಗಿಯೇ ನಾನು ಸಚಿವ ಸ್ಥಾನ ತೊರೆಯಲು ನಿರ್ಧರಿಸಿದೆ” ಎಂದು ತಮ್ಮ ಮೌನ ಮುರಿದಿದ್ದಾರೆ.

‘ನನಗೆ ಸಚಿವ ಸ್ಥಾನ ಮುಖ್ಯವಲ್ಲ, ಯುವಕರ ಭವಿಷ್ಯ ಮುಖ್ಯ’: ಧರ್ಮೇಂದ್ರ ಪ್ರಧಾನ್

ತಮ್ಮ ರಾಜೀನಾಮೆಯ ಕುರಿತು ಸ್ಪಷ್ಟನೆ ನೀಡಿದ ಧರ್ಮೇಂದ್ರ ಪ್ರಧಾನ್, “ದೇಶದ ಯುವ ಪೀಳಿಗೆ ನಮ್ಮ ಮಕ್ಕಳು. ಆದರೆ ಕೆಲವು ಹಿತಾಸಕ್ತಿಗಳು ಅವರನ್ನು ರಾಜಕೀಯವಾಗಿ ಬಳಸಿಕೊಂಡು ದಾರಿ ತಪ್ಪಿಸಲು ಯತ್ನಿಸಿದವು. ನನಗೆ ವೈಯಕ್ತಿಕವಾಗಿ ಯಾವುದೇ ಅಧಿಕಾರದ ಹಪಹಪಿತನ ಇಲ್ಲ. ಭಾರತದಲ್ಲಿ ಪ್ರತಿ ವರ್ಷ ಕನಿಷ್ಠ 2 ಕೋಟಿ ಮಕ್ಕಳು ಜನಿಸುತ್ತಾರೆ. ಕಳೆದ 10 ವರ್ಷಗಳಲ್ಲಿ 20 ಕೋಟಿ ಯುವ ಜನಾಂಗ ಸೃಷ್ಟಿಯಾಗಿದೆ. ದೇಶವನ್ನು ‘ವಿಶ್ವಗುರು’ ಮಾಡುವ ಮಹದಾಸೆ ಅವರಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಸಚಿವ ಸ್ಥಾನ ನನಗೇನು ಮುಖ್ಯವಾಗಿರಲಿಲ್ಲ” ಎಂದು ಭಾವುಕರಾಗಿ ನುಡಿದರು.

ಜುಲೈ 25 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ತೀವ್ರಗೊಂಡಾಗ, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಾವೇ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ.

ನವೀನ್ ಪಟ್ನಾಯಕ್ ವಿರುದ್ಧ ವಾಗ್ದಾಳಿ

ಇದೇ ವೇಳೆ ಒಡಿಶಾದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಡಿ (BJD) ಅಧ್ಯಕ್ಷ ನವೀನ್ ಪಟ್ನಾಯಕ್ ವಿರುದ್ಧ ಧರ್ಮೇಂದ್ರ ಪ್ರಧಾನ್ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಡಿ ಕಾರ್ಯಕರ್ತರು ತಮಗೆ ಕಪ್ಪು ಬಾವುಟ ಪ್ರದರ್ಶಿಸಿ ‘ಗೋ ಬ್ಯಾಕ್’ ಘೋಷಣೆ ಕೂಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, “ನಾನು ಒಬ್ಬ ರೈತನ ಮಗ. ನೀವು ನನ್ನನ್ನು ವಾಪಸ್ ಹೋಗಲು ಹೇಳಿದರೂ, ನಾನು ಮತ್ತೆ ಜನರ ಸೇವೆಗಾಗಿ ಮರಳಿ ಬರುತ್ತೇನೆ. ನವೀನ್ ಬಾಬು ನನ್ನನ್ನು ಒಡಿಶಾದ ಜನತೆಗೆ ಅವಮಾನ ತಂದವರು ಎಂದು ಬಿಂಬಿಸುತ್ತಿದ್ದಾರೆ. ಆದರೆ ನಾನು ಒಡಿಶಾದ ಕೀರ್ತಿಗೆ ಧಕ್ಕೆ ತರುವ ಯಾವುದೇ ಕೆಲಸವನ್ನು ಮಾಡಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ ಯಾರೀ ಧರ್ಮೇಂದ್ರ ಪ್ರಧಾನ್?

ಧರ್ಮೇಂದ್ರ ಪ್ರಧಾನ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಡಿ ನಾಯಕರು, “ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ನಡೆಸಿದ ಯತ್ನ ಹಾಗೂ ಪೇಪರ್ ಲೀಕ್‌ನಿಂದಾಗಿ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಅನುಭವಿಸಿದ ಮಾನಸಿಕ ಒತ್ತಡವೇ ಅವರ ರಾಜೀನಾಮೆಗೆ ಮುಖ್ಯ ಕಾರಣ, ಬೇರೆಯವರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ” ಎಂದು ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೈಲಿನಲ್ಲಿದ್ದ ಲವರ್​​ ಭೇಟಿಯಾಗಲು 10 ಜೀವಂತ ಗುಂಡುಗಳ ಸಮೇತ ಬಂದ ಅಪ್ರಾಪ್ತೆ: ಮುಂದಾಗಿದ್ದೇನು? – Kannada News | Minor Girl Caught with 10 Live Bullets and Fake Aadhaar While Visiting Jailed Boyfriend

ಜೈಲಿನಲ್ಲಿದ್ದ ಲವರ್​​ ಭೇಟಿಯಾಗಲು 10 ಜೀವಂತ ಗುಂಡುಗಳ ಸಮೇತ ಬಂದ ಅಪ್ರಾಪ್ತೆImage Credit source: NDTV

ಲಖನೌ, ಆಗಸ್ಟ್​​ 09: ಜೈಲಿನಲ್ಲಿದ್ದ ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಬಳಿ 10 ಜೀವಂತ ಗುಂಡುಗಳು ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಗೋಂಡಾದಲ್ಲಿ ನಡೆದಿದೆ. ಬಾಲಕಿಯ ಬಳಿ ನಕಲಿ ಆಧಾರ್‌ ಕಾರ್ಡ್‌ ಹಾಗೂ ನಗದು ಹಣವೂ ಪತ್ತೆಯಾಗಿದ್ದು, ಆಕೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಗೋಂಡಾ ವಿಭಾಗೀಯ ಜೈಲಿನಲ್ಲಿರುವ ಹರಷು ಕಶ್ಯಪ್‌ ಎಂಬ ಕೈದಿಯನ್ನು ಭೇಟಿಯಾಗಲು ಬಾಲಕಿ ಬಂದಿದ್ದಳು ಎಂದು ಜೈಲರ್‌ ಅಫ್ತಾಬ್‌ ಆಲಂ ಅನ್ಸಾರಿ ತಿಳಿಸಿದ್ದಾರೆ.

ಬಾಲಕಿ, ಮತ್ತೋರ್ವ ವಶಕ್ಕೆ

ಜೈಲಿನ ಮುಖ್ಯ ದ್ವಾರದಲ್ಲಿ ಕಡ್ಡಾಯ ಭದ್ರತಾ ತಪಾಸಣೆ ನಡೆಸುವ ವೇಳೆ ಬಾಲಕಿ ನೀಡಿದ ಗುರುತಿನ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಆಕೆ ತನ್ನ ಆಧಾರ್‌ ಕಾರ್ಡ್‌ನಲ್ಲಿದ್ದ ಹೆಸರಿಗಿಂತ ಭಿನ್ನವಾದ ಹೆಸರನ್ನು ಅಧಿಕಾರಿಗಳಿಗೆ ತಿಳಿಸಿದ್ದಳು. ಇದರಿಂದ ಅನುಮಾನಗೊಂಡ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಬಾಲಕಿಯ ಜೇಬಿನಲ್ಲಿ 10 ಜೀವಂತ ಗುಂಡುಗಳು ಪತ್ತೆಯಾಗಿವೆ ಎಂದು ಜೈಲರ್‌ ತಿಳಿಸಿದ್ದಾರೆ. ಬಳಿಕ ಜೈಲು ಪೊಲೀಸ್‌ ಹೊರಠಾಣೆಯ ಉಸ್ತುವಾರಿಯನ್ನು ಸ್ಥಳಕ್ಕೆ ಕರೆಸಲಾಗಿದ್ದು, ಬಾಲಕಿ ಹಾಗೂ ಆಕೆಯೊಂದಿಗೆ ಬಂದಿದ್ದ ವ್ಯಕ್ತಿಯನ್ನು ವಶಪಡಿಸಿಕೊಂಡ ವಸ್ತುಗಳ ಸಮೇತ ಪೊಲೀಸರಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ವಿದೇಶಿ ಉದ್ಯೋಗದ ಆಮಿಷ; ಪೋರ್ಚುಗಲ್‌ನಲ್ಲಿ ಭಾರತೀಯ ಯುವತಿಯನ್ನು ಬಿಯರ್ ಶಾಪ್ ಮಾಲೀಕನಿಗೆ ಮಾರಿದ ಏಜೆನ್ಸಿ!

ವಿಚಾರಣೆ ವೇಳೆ ಬಾಲಕಿ ತನ್ನ ನಿಜವಾದ ಗುರುತನ್ನು ಬಹಿರಂಗಪಡಿಸಿದ್ದಾಳೆ. ಪತ್ತೆಯಾದ ಗುಂಡುಗಳು ತನ್ನ ತಂದೆಯ ಪರವಾನಗಿ ಹೊಂದಿರುವ ಪಿಸ್ತೂಲ್‌ಗೆ ಸೇರಿದ್ದವು ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ತಂದೆಗೆ ಬೇಗ ಕೋಪ ಬರುತ್ತದೆ. ತಾನು ಜೈಲಿನಲ್ಲಿರುವ ಪ್ರಿಯಕರನನ್ನು ಭೇಟಿಯಾಗಲು ಬಂದಿರುವ ವಿಷಯ ತಿಳಿದರೆ ಅವರು ಯಾವುದಾದರೂ ಅಪಾಯಕಾರಿ ನಿರ್ಧಾರ ಕೈಗೊಳ್ಳಬಹುದು ಎಂಬ ಭಯದಿಂದ ಪಿಸ್ತೂಲ್‌ನಲ್ಲಿದ್ದ ಗುಂಡುಗಳನ್ನು ತೆಗೆದುಕೊಂಡು ಬಂದಿದ್ದಾಗಿ ಬಾಲಕಿ ಹೇಳಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಜೈಲರ್‌ ತಿಳಿಸಿದ್ದಾರೆ. ಗುಂಡುಗಳು ನಿಜವಾಗಿಯೂ ಆಕೆಯ ತಂದೆಯ ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಕ್ಕೆ ಸೇರಿದ್ದವೇ ಹಾಗೂ ನಕಲಿ ಗುರುತಿನ ದಾಖಲೆ ಆಕೆಗೆ ಹೇಗೆ ದೊರೆಯಿತು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ (Arms Act) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:45 am, Sun, 9 August 26

Source link

ಸದಾ ‘ಗಂಭೀರ’ವಾಗಿರುವ ಗಂಭೀರ್‌ಗೆ ನಗು ತರಿಸಿದ ಜಡೇಜಾ! – Kannada News | Ravindra Jadeja Does a ‘Kuldeep’, Gautam Gambhir Can’t Stop Laughing

ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಮೈದಾನದ ಒಳಗೆ ಹಾಗೂ ಹೊರಗೆ ಸದಾ ಗಂಭೀರ ಮುಖಭಾವದಲ್ಲೇ ಕಾಣಿಸಿಕೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಇದೀಗ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಸಹ ಆಟಗಾರ, ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ಬೌಲಿಂಗ್ ಶೈಲಿಯನ್ನು ತಮಾಷೆಯಾಗಿ ಅನುಕರಿಸುವ ಮೂಲಕ, ಸದಾ ಗಂಭೀರವಾಗಿರುವ ಗಂಭೀರ್ ಮುಖದಲ್ಲೂ ದೊಡ್ಡ ನಗು ಮೂಡುವಂತೆ ಮಾಡಿದ್ದಾರೆ!

ಏನಿದು ಘಟನೆ?

ಕೊಲಂಬೊದಲ್ಲಿ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ವಿರುದ್ಧ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದ ಎರಡನೇ ದಿನದಂದು ಗಂಭೀರ್ ಹಾಗೂ ಜಡೇಜಾ ಡ್ರೆಸ್ಸಿಂಗ ರೂಮ್​ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಜಡೇಜಾ ಅವರು ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ವಿಶಿಷ್ಟವಾದ ರನ್-ಅಪ್, ಆಕ್ಷನ್ ಹಾಗೂ ಚೆಂಡನ್ನು ರಿಲೀಸ್ ಮಾಡುವ ವಿಚಿತ್ರ ಶೈಲಿಯನ್ನು ಮೈದಾನದ ಹೊರಗಡೆ ನಿಂತು ಅನುಕರಣೆ ಮಾಡಿದ್ದಾರೆ.

ಕುಲ್ದೀಪ್ ಯಾದವ್ ಬೌಲಿಂಗ್ ಮಾಡುವಾಗ ಕೈಗಳನ್ನು ತಿರುಗಿಸುವ ರೀತಿಯನ್ನು ನೋಡಿ, “ಅವರು ಗಾಳಿಯಲ್ಲಿ ಈಜಿದಂತೆ ಕಾಣುತ್ತದೆ” ಎಂದು ಜಡೇಜಾ ತಮಾಷೆ ಮಾಡಿದ್ದಾರೆ.

ಗಂಭೀರ್ ‘ಪ್ರೈಸ್‌ಲೆಸ್’ ರಿಯಾಕ್ಷನ್:

ಸಾಮಾನ್ಯವಾಗಿ ಸದಾ ಗಂಭೀರವಾಗಿರುವ ಗೌತಮ್ ಗಂಭೀರ್, ಜಡೇಜಾ ಅವರ ಈ ಆಕ್ಟಿಂಗ್ ಮತ್ತು ಮುಖದ ಹಾವಭಾವಗಳನ್ನು ನೋಡಿ ತಡೆದುಕೊಳ್ಳಲಾರದೆ ಜೋರಾಗಿ ನಕ್ಕಿದ್ದಾರೆ. ಗಂಭೀರ್ ಅವರ ಈ ಅಪರೂಪದ ನಗುವಿನ ವಿಡಿಯೋ ತುಣುಕು ಇದೀಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಕೇವಲ ಕೋಚ್ ಮಾತ್ರವಲ್ಲದೆ, ಪಂದ್ಯದ ಕಾಮೆಂಟೇಟರ್‌ಗಳು ಕೂಡ ಜಡೇಜಾ ಅವರ ಈ ಕ್ರಿಯೇಟಿವಿಟಿಗೆ ಮನಸಾರೆ ನಕ್ಕಿದ್ದಾರೆ.

ಆಗಸ್ಟ್ 15 ರಿಂದ ಗಾಲೆನಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮುನ್ನ ಭಾರತ ತಂಡದ ಆಟಗಾರರು ಸಖತ್ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ದೇವದತ್ ಪಡಿಕ್ಕಲ್ ಅವರ ಭರ್ಜರಿ ಶತಕ (142*) ಹಾಗೂ ರವೀಂದ್ರ ಜಡೇಜಾ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ 2ನೇ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿದೆ.

ಇದನ್ನೂ ಓದಿ: ಭಾರತ ಟೆಸ್ಟ್ ತಂಡದ ಐವರು ಆಟಗಾರರು ಗಾಯಾಳು!

ಇದು ಮೂರು ದಿನಗಳ ಅಭ್ಯಾಸ ಪಂದ್ಯವಾಗಿರುವುದರಿಂದ ಇಂದು ಟೀಮ್ ಇಂಡಿಯಾ ಕೆಲ ಹೊತ್ತು ಬ್ಯಾಟಿಂಗ್ ಮುಂದುವರೆಸಿ ಡಿಕ್ಲೇರ್ ಘೋಷಿಸುವ ಸಾಧ್ಯತೆಯಿದೆ. ಅಲ್ಲದೆ ಬೌಲಿಂಗ್ ಅಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬಹುದು. ಈ ಮೂಲಕ ಲಂಕಾ ವಿರುದ್ಧದ ಸರಣಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದಾರೆ.

Source link

7 ಕಿ.ಮೀ ಆಟೋ ಪ್ರಯಾಣಕ್ಕೆ 800 ರೂ. ದರ!: ಮಹಿಳೆಯ ಆಕ್ರೋಶದ ವಿಡಿಯೋ ವೈರಲ್​​ – Kannada News | 800 Rupees for a 7 km Auto Ride! Gurugram Woman’s Viral Video Sparks Outrage Over Rain Surge Pricing

7 ಕಿ.ಮೀ ಆಟೋ ಪ್ರಯಾಣಕ್ಕೆ ದುಬಾರಿ ಬೆಲೆ ತೆತ್ತ ಮಹಿಳೆImage Credit source: Astha Goyal Instagram Page

ಗುರುಗ್ರಾಮ್​​, ಆಗಸ್ಟ್​​ 09: ಭಾರಿ ಮಳೆ ಹಾಗೂ ತೀವ್ರ ಸಂಚಾರ ದಟ್ಟಣೆಯ ನಡುವೆ ಗುರುಗ್ರಾಮ್‌ನಲ್ಲಿ ಕೇವಲ ಏಳು ಕಿಲೋಮೀಟರ್‌ ಆಟೋ ಪ್ರಯಾಣಕ್ಕೆ 800 ರೂ. ಶುಲ್ಕ ವಿಧಿಸಲಾಗಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಈ ಘಟನೆ ನಗರದಲ್ಲಿ ಹೆಚ್ಚುತ್ತಿರುವ ಸರ್ಜ್‌ ಪ್ರೈಸಿಂಗ್‌ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. 7 ಕಿ.ಮೀಗೆ 800 ರೂಪಾಯಿ? ಎಂಬ ಶೀರ್ಷಿಕೆಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಆಸ್ಥಾ ಗೋಯಲ್‌ ಎಂಬುವವರು ದುಬಾರಿ ದರದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ವಿಡಿಯೋ ವೈರಲ್​

ವೈರಲ್‌ ಆಗಿರುವ ವಿಡಿಯೋದಲ್ಲಿ ಗೋಯಲ್‌ ಅವರು, ಏಳು ಕಿಲೋಮೀಟರ್‌ ಪ್ರಯಾಣಕ್ಕೆ 800 ರೂ. ಶುಲ್ಕ ವಿಧಿಸಿರುವುದು ಅತಿರೇಕವಾಗಿದೆ. ಗುರುಗ್ರಾಮ್‌ನಲ್ಲಿ ಮಳೆ ಬಂದಾಗ ಪರಿಸ್ಥಿತಿ ಹೇಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ನನಗೇ ಇಂತಹ ಅನುಭವವಾಗಿದೆ. ಬೆಂಗಳೂರಿನಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಮಳೆಯ ಸಂದರ್ಭದಲ್ಲಿ ಪ್ರಯಾಣ ದರಗಳು ಭಾರಿ ಪ್ರಮಾಣದಲ್ಲಿ ಅಲ್ಲಿ ಏರಿಕೆಯಾಗುತ್ತವೆ ಎನ್ನುವ ಮೂಲಕ ಘಟನೆಯನ್ನು ಬೆಂಗಳೂರಿನ ಸ್ಥಿತಿಗೆ ಅವರು ಹೋಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ದುಡಿಮೆಯಲ್ಲಿ ಆಟೋ ಡ್ರೈವರ್‌ಗೆ ಜತೆಯಾಗುವ ಶ್ವಾನ, ವೈರಲ್‌ ಆಯ್ತು ದೃಶ್ಯ

ಮಹಿಳೆ ಆರೋಪಕ್ಕೆ ಹಲವರ ಸಹಮತ

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮಂದಿ ಗೋಯಲ್‌ ಅವರ ಅನುಭವಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಮಳೆಯ ಸಂದರ್ಭದಲ್ಲಿ ಗುರುಗ್ರಾಮ್‌ನಲ್ಲಿ ಪ್ರಯಾಣ ಮಾಡುವುದು ಒತ್ತಡ, ದುಬಾರಿ ಮತ್ತು ಸಮಯ ತೆಗೆದುಕೊಳ್ಳುವ ಸಂಗತಿಯಾಗುತ್ತದೆ ಎಂದು ಹಲವರು ಹೇಳಿದ್ದಾರೆ. ಪೀಕ್‌ ಅವರ್‌ಗಳಲ್ಲಿ ಆಟೋ ಅಥವಾ ಕ್ಯಾಬ್‌ ಬುಕ್‌ ಮಾಡುವಾಗ ತಮಗೂ ಇದೇ ರೀತಿಯ ಅನುಭವವಾಗಿದೆ ಎಂದು ಕೆಲವರು ತಿಳಿಸಿದ್ದಾರೆ. ನಿನ್ನೆ ಕೇವಲ 3-4 ಕಿ.ಮೀ ಕ್ಯಾಬ್‌ ಪ್ರಯಾಣಕ್ಕೆ 500 ರೂ. ಪಾವತಿಸಬೇಕಾಯಿತು ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಗುರುಗ್ರಾಮ್‌ನಲ್ಲಿ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಗಳು ಕಡಿಮೆ ಇರುವಾಗ ಆಟೋ ಚಾಲಕರು ಅದರ ಲಾಭ ಪಡೆದು ಹೆಚ್ಚಿನ ದರ ವಸೂಲಿ ಮಾಡುತ್ತಾರೆ ಎಂದು ಮಗದೊಬ್ಬರು ಅಭಿಪ್ರಾಯಪಟ್ಟಿರೋದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಾಕ್​ ಮಾಧ್ಯಮಗಳ ಸುಳ್ಳು ಸುದ್ದಿಯನ್ನು ಬಯಲಿಗೆಳೆದ ಇರ್ಫಾನ್ ಪಠಾಣ್ – Kannada News | Irfan Pathan Slams Pak Media for Photoshopping His Face Over Babar Azam Rumour

ಭಾರತ ತಂಡದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಅವರು ಪಾಕಿಸ್ತಾನಿ ಮಾಧ್ಯಮಗಳು ಹರಡಿದ ಸುಳ್ಳು ಸುದ್ದಿಯೊಂದನ್ನು ಸಾರ್ವಜನಿಕವಾಗಿ ಬಯಲಿಗೆಳೆದಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಅವರು ತಮಗೆ ಸಂದರ್ಶನ ನೀಡಲು ನಿರಾಕರಿಸಿದ್ದಾರೆ ಎಂಬ ಕಟ್ಟು ಕಥೆಯನ್ನು ಸೃಷ್ಟಿಸಲು, ಪಾಕ್ ಮಾಧ್ಯಮಗಳು ಬಾಂಗ್ಲಾದೇಶದ ವರದಿಗಾರನೊಬ್ಬನ ದೇಹಕ್ಕೆ ನನ್ನ ಮುಖವನ್ನು ಡಿಜಿಟಲ್ ಆಗಿ ಫೋಟೋಶಾಪ್ ಮಾಡಿರುವುದಾಗಿ ಇರ್ಫಾನ್ ಬಹಿರಂಗಪಡಿಸಿದ್ದಾರೆ.

ಜಿಯೋಹಾಟ್‌ಸ್ಟಾರ್‌ನ ‘ಚೀಕಿ ಸಿಂಗಲ್ಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, ಆಧುನಿಕ ಕ್ರೀಡಾ ಜಗತ್ತಿನಲ್ಲಿ ಸೆಲೆಬ್ರಿಟಿಗಳನ್ನು ಗುರಿಯಾಗಿಸಲು ಮತ್ತು ಅವರ ಹೆಸರನ್ನು ಕೆಡಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಹೇಗೆ ನಕಲಿ ಸುದ್ದಿಗಳನ್ನು ಬಳಸಲಾಗುತ್ತಿದೆ ಎಂಬುದನ್ನು ವಿವರವಾಗಿ ಹಂಚಿಕೊಂಡಿದ್ದಾರೆ.

ವೈರಲ್ ಸುಳ್ಳು ಸುದ್ದಿ ಮತ್ತು ಅಸಲಿಯತ್ತು:

2023 ರ ಏಕದಿನ ವಿಶ್ವಕಪ್ ವೇಳೆ ಇರ್ಫಾನ್ ಪಠಾಣ್ ಅವರು ಬಾಬರ್ ಆಝಂ ಅವರನ್ನು ಸಂದರ್ಶನ ಮಾಡಲು ಹೋದಾಗ, “ಇವರು ನಮ್ಮ ದೇಶವನ್ನು ಸದಾ ಟ್ರೋಲ್ ಮಾಡುತ್ತಾರೆ, ಹಾಗಾಗಿ ನಾನು ಇವರಿಗೆ ಇಂಟರ್ವ್ಯೂ ನೀಡುವುದಿಲ್ಲ” ಎಂದು ಬಾಬರ್ ನಿರಾಕರಿಸಿದರು ಎಂಬ ಸುಳ್ಳು ಸುದ್ದಿಯನ್ನು ಪಾಕಿಸ್ತಾನಿ ಪತ್ರಕರ್ತರು ಹರಡಿದ್ದರು.

ಈ ನಕಲಿ ಸುದ್ದಿಗೆ ವಿಶ್ವಾಸಾರ್ಹತೆ ನೀಡಲು, ಮೈದಾನದಲ್ಲಿ ನಿಜವಾಗಿ ಸಂದರ್ಶನ ನಿರಾಕರಿಸಲ್ಪಟ್ಟಿದ್ದ ಬಾಂಗ್ಲಾದೇಶದ ಯುವ ವರದಿಗಾರನ ಫೋಟೋವನ್ನು ಬಳಸಲಾಗಿತ್ತು. ಆ ವರದಿಗಾರನ ದೇಹದ ಮೇಲೆ ಇರ್ಫಾನ್ ಪಠಾಣ್ ಅವರ ಮುಖವನ್ನು ಎಡಿಟ್ ಮಾಡಿ ಸುಳ್ಳು ಚಿತ್ರವನ್ನು ಸೃಷ್ಟಿಸಲಾಗಿತ್ತು.

ಈ ನಕಲಿ ಫೋಟೋ ಮತ್ತು ಸುದ್ದಿ ನಿಜವೆಂದು ನಂಬಿದ ಲಕ್ಷಾಂತರ ಜನ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಶೇರ್ ಮಾಡಿದ್ದರು. ಕೇವಲ ಕೆಲವೇ ದಿನಗಳಲ್ಲಿ ಈ ಪೋಸ್ಟ್ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿತ್ತು.

ಇರ್ಫಾನ್ ಪಠಾಣ್ ಪ್ರತಿಕ್ರಿಯೆ:

ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸದ ಇರ್ಫಾನ್ ಪಠಾಣ್, ಅತ್ಯಂತ ಸಂಯಮದಿಂದಲೇ ತಿರುಗೇಟು ನೀಡಿದ್ದಾರೆ.

“ಇಂತಹ ಟ್ರೋಲ್‌ಗಳು ಮತ್ತು ನಮ್ಮ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದು ಪ್ರತಿದಿನ ನಡೆಯುತ್ತಿರುತ್ತದೆ. ಆ ಫೋಟೋ ಸಂಪೂರ್ಣ ಸುಳ್ಳಾಗಿತ್ತು. ಪ್ರತಿದಿನ ಯಾರಾದರೂ ಒಬ್ಬ ಆಟಗಾರನ ಹೆಸರಿನಲ್ಲಿ ಇಂತಹ ಸುಳ್ಳುಗಳನ್ನು ಸೃಷ್ಟಿಸಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಪ್ರತಿಯೊಬ್ಬರ ಸುಳ್ಳುಗಳಿಗೂ ನಾವು ಪ್ರತಿಕ್ರಿಯಿಸಲು ಹೋದರೆ, ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವೇ ಇಲ್ಲ. ಹಾಗಾಗಿ ನಾನು ಇದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ,” ಎಂದು ಪಠಾಣ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತ ಟೆಸ್ಟ್ ತಂಡದ ಐವರು ಆಟಗಾರರು ಗಾಯಾಳು!

ಇರ್ಫಾನ್ ಪಠಾಣ್ ಅವರ ನೇರ ಕ್ರಿಕೆಟ್ ವಿಶ್ಲೇಷಣೆಗಳು ಮತ್ತು ಭಾರತ-ಪಾಕ್ ಕ್ರಿಕೆಟ್ ಪೈಪೋಟಿಯ ಹಿನ್ನೆಲೆಯಲ್ಲಿ, ಅವರು ಆಗಾಗ್ಗೆ ಪಾಕಿಸ್ತಾನಿ ನೆಟ್ಟಿಗರ ಟ್ರೋಲ್‌ಗಳಿಗೆ ಗುರಿಯಾಗುತ್ತಿರುತ್ತಾರೆ. ಆದರೆ, ಈ ಬಾರಿ ಫೋಟೋಶಾಪ್ ಹಂತಕ್ಕೆ ಇಳಿದ ಮಾಧ್ಯಮಗಳ ಕೃತ್ಯವನ್ನು ಬಯಲಿಗೆಳೆಯುವ ಮೂಲಕ ಇರ್ಫಾನ್ ಪಠಾಣ್ ನಕಲಿ ಸುದ್ದಿಗಳ ಜಾಲಕ್ಕೆ ದೊಡ್ಡ ಬ್ರೇಕ್ ಹಾಕಿದ್ದಾರೆ.

Published On – 8:02 am, Sun, 9 August 26

Source link

Exit mobile version