Horoscope Today: ಇಂದು ಕಾಮಿಕಾ ಏಕಾದಶಿ; ಉಪವಾಸ ವೃತ ಆಚರಿಸುವುದರಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ – Kannada News | Horoscope Today 09th August​ 2026: Dr. Basavaraj Gurujis Predictions for Zodiac Signs

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಆಗಸ್ಟ್ 09, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಆಷಾಢ ಮಾಸದ ಕೃಷ್ಣ ಪಕ್ಷದ ಏಕಾದಶಿ, ಮೃಗಶಿರಾ ನಕ್ಷತ್ರ ಇರತಕ್ಕಂತ ದಿನ. ಭಾನುವಾರವು ಸೂರ್ಯನಿಗೆ ಪ್ರಿಯವಾದ ದಿನವಾಗಿದ್ದು, ಭಾಸ್ಕರನ ಆರಾಧನೆಗೆ ಪ್ರಶಸ್ತವಾಗಿದೆ. ಇಂದು ಕಾಮಿಕಾ ಏಕಾದಶಿ ಕೂಡ ಆಗಿದ್ದು, ಉಪವಾಸ ವೃತ ಆಚರಿಸುವುದರಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ.

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳಾದ ಮೇಷದಿಂದ ಮೀನದವರೆಗೆ, ಪ್ರತಿಯೊಂದು ರಾಶಿಯ ರಾಶ್ಯಾಧಿಪತಿಗಳ ಸ್ಥಾನ, ಚಂದ್ರನ ಸಂಚಾರ, ಗ್ರಹಗಳ ಶುಭಫಲಗಳು, ಉದ್ಯೋಗ, ಆರ್ಥಿಕ ಸ್ಥಿತಿ, ಆರೋಗ್ಯ, ಕುಟುಂಬ ಸಂಬಂಧಗಳು, ಪ್ರಯಾಣ, ವಿವಾಹ ವಿಚಾರಗಳು, ಹಾಗೂ ಅದೃಷ್ಟ ಸಂಖ್ಯೆ, ಬಣ್ಣ, ದಿಕ್ಕು ಮತ್ತು ಪಠಿಸಬೇಕಾದ ಮಂತ್ರಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದ್ದಾರೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಆಗುಹೋಗುಗಳಿಗೆ ಪಶ್ಚಾತ್ತಾಪ ಹಾಗೂ ಪರಿಹಾರ – Kannada News | Daily Horoscope for August 9, 2026: Ashada Krishna Paksha, Dakshinayana, Greeshma Ritu Astrology

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ವಜ್ರ, ಕರಣ : ಕೌಲವ, ಸೂರ್ಯೋದಯ – 06 – 07 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:08 – 18:42, ಯಮಗಂಡ ಕಾಲ 12:25 – 13:59, ಗುಳಿಕ ಕಾಲ 15:34 – 17:08

ಮೇಷ ರಾಶಿ: ದುರಭ್ಯಾಸದಿಂದ ಹಣವನ್ನು ಕಳೆದುಕೊಳ್ಳುವಿರಿ. ವ್ಯಾಪರದಲ್ಲಿ ಲಾಭವಾಗಲಿದೆ. ಅಪರಿಚಿತರ ಜೊತೆ ಮಾತನಾಡಲು ನಿಮಗೆ ಮುಜಗರವಾದೀತು. ಒಬ್ಬರೇ ಯಾವ ರಿಸ್ಕ್ ನ್ನೂ ತೆಗೆದುಕೊಳ್ಳಲಾರಿರಿ. ಹಣಕಾಸಿನಲ್ಲಿ ಸುಧಾರಣೆಯ ಸೂಚನೆಗಳು ಇದ್ದರೂ ಖರ್ಚಿನ ತೀವ್ರತೆಯನ್ನು ನಿಯಂತ್ರಿಸಿ. ಸಹೋದರರ ಸಂಬಂಧವು ಇಂದು ಸ್ವಲ್ಪ ಸುಧಾರಿಸಬಹುದು. ನೂತನ ಅನ್ವೇಷಣೆಯ ಕಡೆ ನಿಮ್ಮ ಮನಸ್ಸು ಹೋಗುವುದು. ಹಿರಿಯರ ಸೇವೆಯಲ್ಲಿ ನೀವು ಇರುವಿರಿ.

ವೃಷಭ ರಾಶಿ: ಇಂದು ನೀವು ಒತ್ತಡಗಳಿಗೆ ಸಿಲುಕದೇ ಎಚ್ಚರಿಕೆಯಿಂದ ಕಾರ್ಯವನ್ನು ನಿಭಾಯಿಸಲು ಕಲಿಯಬೇಕಾಗಬಹುದು. ಸಮಯವನ್ನು ವ್ಯರ್ಥವಾಗಿ ಮಾಡಿಕೊಳ್ಳಲು ಅನೇಕ ಮಾರ್ಗಗಳು ತೆರೆದುಕೊಳ್ಳಬಹುದು. ಚಟುವಟಿಕೆಗಳಲ್ಲಿ ಬದಲಾವಣೆ ತರಬೇಕೆಂಬ ಆಲೋಚನೆ ಬಲವಾಗಿರುತ್ತದೆ. ಯಾರಾದರೂ ನಿಮ್ಮನ್ನು ಕಂಡು ಅವಮಾನಿಸುವರು. ಉತ್ತರಿಸಿ ಇನ್ನಷ್ಟು ಹತಾಶರಾಗಬೇಡಿ. ಪ್ರಭಾವಿಗಳ ಭೇಟಿಯಿಂದ ಸಂತೋಷವಾಗಲಿದೆ.

ಮಿಥುನ ರಾಶಿ: ಅನಿವಾರ್ಯ ಕಾರಣಗಳಿಂದ ಖರ್ಚಿಗೆ ನಾನಾ ಮಾರ್ಗಗಳು ತೆರದುಕೊಳ್ಳಬಹುದು. ನಿಮಗೆ ಹೇಳಬೇಕಾದ ವಿಷಯವನ್ನು ನೇರವಾಗಿ ಹೇಳಲು ಕಷ್ಟವಾದೀತು. ಉದ್ಯೋಗದಲ್ಲಿ ಉನ್ನತ ಸ್ಥಾನದ ಲಕ್ಷಣ ಗೋಚರಿಸುವುದು. ಕುಟುಂಬದಲ್ಲಿ ನಿಮ್ಮ ಸಲಹೆ ಮತ್ತು ಮಾರ್ಗದರ್ಶನಕ್ಕೆ ಎಲ್ಲರೂ ಬೆಂಬಲಿಸುತ್ತಾರೆ. ಸಜ್ಜನರ ಸಹವಾಸವು ನಿಮ್ಮ ಅಹಂಕಾರದಿಂದ ಸಿಗದೇಹೋಗಬಹುದು. ಅಲಂಕಾರಕ್ಕೆ ಹೆಚ್ಚು ಸಮಯವನ್ನು ಕೊಡುವಿರಿ.

ಕರ್ಕಾಟಕ ರಾಶಿ: ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ಸ್ವತಂತ್ರವಾಗಿರುವ ನಿಮಗೆ ಏನನ್ನೋ ಕಳೆದುಕೊಂಡಿದ್ದೀರಿ ಎಂದು ಅನ್ನಿಸಬಹುದು.‌ ನಿಮ್ಮ ಪ್ರಯತ್ನಗಳ ಫಲ ಇಂದೇ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಯಾವುದಕ್ಕೂ ಕೊನೆಯ ಕ್ಷಣದವರೆಗೆ ಕಾಯುವುದು ಬೇಡ. ವಿದ್ಯಾರ್ಥಿಗಳಿಗೆ ಶ್ರಮದ ಫಲ ಇಂದು ಸಿಗಬಹುದು. ನಿಮಗೆ ಬೇಕಾಗಿರುವ ಪರಿಹಾರ ಸ್ನೇಹಿತರಿಂದ ಸಿಗುತ್ತದೆ. ತೋರಿಕೆಗೆ ಮಾಡುವ ಕೆಲಸದಲ್ಲಿ ನಿಮಗೆ ಸಂತೋಷ ಸಿಗದು. ‌ಕಳೆದಕೊಂಡ ವಸ್ತುವಿಗೆ ತೀವ್ರ ಹುಡುಕಾಟ ಇರುವುದು.‌

ಸಿಂಹ ರಾಶಿ: ಇಂದು ಕುಟುಂಬದ ಸದಸ್ಯ ನಿಮ್ಮ ಜೊತೆ ಸಮಯವನ್ನು ಕಳೆಯಲು ಒತ್ತಾಯಿಸಬಹುದು. ನಿಮ್ಮ ಯೋಜನೆಯನ್ನು ಮುಂದುವರಿಸಲು ನಿಮಗೆ ಆತಂಕವು ಬರಬಹುದು. ಮುಖ್ಯ ವಿಚಾರವನ್ನು ನೀವು ಮರೆಯುವ ಸಂಭವವಿದೆ. ವ್ಯವಹಾರದಲ್ಲಿ ನಿಷ್ಠೆಯಿಂದ ನಡೆದುಕೊಂಡರೆ ಉತ್ತಮ ಫಲ ಸಿಗುವುದು ಖಚಿತ. ಉದ್ಯೋಗದಲ್ಲಿ ಮೇಲುಗೈ ಸಾಧನೆ ಸಾಧ್ಯತೆ. ನಿಮ್ಮ ಆಲೋಚನೆಗಳಿಂದ‌ ನಕಾರಾತ್ಮಕತೆಯು ಉಂಟಾಗಬಹುದು. ಸಮಯವನ್ನು ನೋಡಿಕೊಂಡು ನೀವು ಮುಂದುವರಿಯುವುದು ಯೋಗ್ಯವಿದೆ.

ಕನ್ಯಾ ರಾಶಿ: ಇಂದು ನೀವು ಕೋಪವು ಹತೋಟಯಲ್ಲಿ ಇರಲಿ. ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ಸ್ನೇಹಿತನ ಸಹಾಯದಿಂದ ಸಮಸ್ಯೆಗೆ ಪರಿಹಾರ ಕಂಡುಬರುವುದು. ನಿಮ್ಮ ಬುದ್ಧಿವಂತಿಕೆ ಹಾಗೂ ಶಾಂತ ಸ್ವಭಾವ ಇತರರಿಗೆ ಆಕರ್ಷಣೆಯಾಗಲಿದೆ. ನ್ಯಾಯ ಸಮ್ಮತವಾದ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಯಾರದೋ ಸಿಟ್ಟನ್ನು ಮತ್ಯಾರದೋ ಮೇಲೆ ತೀರಿಸಿಕೊಳ್ಳುವಿರಿ.

ತುಲಾ ರಾಶಿ: ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿರುವ ನಿಮಗೆ ಪ್ರೇಮ ಜೀವನವು ಒಳ್ಳೆಯ ತಿರುವು ಕೊಡಬಹುದು. ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ನಿಮ್ಮ ಸ್ವಭಾವಕ್ಕೆ ಹೊಂದಿಕೆಯಾಗುವ ಸಂಗಾತಿಯು ಸಿಗುವರು. ಹಳೆಯ ಸಾಲ ತೀರುವವರೆಗೆ ಹೊಸದಕ್ಕೆ ಅವಕಾಶ ಬೇಡ. ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ‌ಮಾಡಿ. ಸ್ನೇಹಿತರ ಅಸಹಕಾರವು ನಿಮಗೆ ಬೇಸರ ಕೊಡಬಹುದು. ಇದು ಜಾಣತನವೂ ಹೌದು. ಇಂದು ಹಣದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವುದು.

ವೃಶ್ಚಿಕ ರಾಶಿ: ಇಂದು ಒತ್ತಡದಿಂದ ಕಾರ್ಯದ ವೇಗವನ್ನು ಹೆಚ್ಚಿಸುವಿರಿ. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ನಿಮಗೆ ನಿಮ್ಮ ಸಾಮರ್ಥ್ಯ ಗೊತ್ತಿದ್ದರೂ ಹಿಂದೆಟು ಹಾಕಬಹುದು. ನಾಯಕತ್ವದ ಗುಣ ನಿಮ್ಮ ಕೆಲಸದಲ್ಲಿ ಸ್ಪಷ್ಟವಾಗುತ್ತದೆ. ಹೇಗಾದರೂ ಅದನ್ನು ಹೆಚ್ಚಿಸಿಕೊಳ್ಳುವ ದಾರಿ ಹುಡುಕುವಿರಿ. ವಿಧೇಯಯತೆಯು ನಿಮ್ಮ ಗೌರವವನ್ನು ಹೆಚ್ಚಿಸುವುದು. ಯಾರದೋ ಮಾತಿನಿಂದ ನಿಮ್ಮ ನೆಮ್ಮದಿಯನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ಯಾರದೋ ಮಾತಿಗೆ ವಶವಾಗುವ ಸಾಧ್ಯತೆ ಇದೆ.

ಧನು ರಾಶಿ: ಇಂದು ನೀವು ಉದ್ಯಮದ ಕಾರಣಕ್ಕೆ ಕೈಗೊಂಡ ಪ್ರಯಾಣವು ಪ್ರಯೋಜನಕಾರಿಯಾಗಲಿದೆ. ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿದೆ. ಅಧಿಕೃತ ಕೆಲಸವನ್ನು ಬಿಟ್ಟು ಅನ್ಯ ಕೆಲಸವನ್ನು ಮಾಡಬೇಕಾಗಬಹುದು. ಕುಟುಂಬದ ಜೊತೆ ಬದುಕುವ ಆನಂದವನ್ನು ಅನುಭವಿಸುವಿರಿ. ಸಂಗಾತಿಯ ಮಾತುಗಳನ್ನು ನೀವು ತಳ್ಳಿಹಾಕುವಿರಿ. ನಿಮಗೆ ವಹಿಸಿದ ಕೆಲಸವು ವಿಳಂಬವಾಗಬಹುದು.

ಮಕರ ರಾಶಿ: ಸುತ್ತಲೂ ನಿಮ್ಮ ಪ್ರಿಯತಮೆಯ ಪ್ರೀತಿಯನ್ನು ಅನುಭವಿಸುತ್ತೀರಿ.‌ ಕಛೇರಿಯಲ್ಲಿ ಅಧಿಕಾರಿಯ ಜೊತೆ ವಾದಕ್ಕೆ ಇಳಿಯಬಹುದು. ನಿಮ್ಮ ಬದ್ಧತೆ ಇತರರನ್ನು ಪ್ರೇರೇಪಿಸಬಹುದು. ಧೈರ್ಯದಿಂದ ದಿನ ಮುಗಿಯುತ್ತದೆ. ಕುಟುಂಬದಲ್ಲಿ ನಿರೀಕ್ಷಿತ ಪ್ರಗತಿ ಕಾಣಬಹುದು. ಒತ್ತಡದ ನಡುವೆಯೂ ನಿಮ್ಮ ಸೃಜನಾತ್ಮಕತೆ ಮೆರೆದೀತು. ಇಂದು ನೆರೆ ಹೊರೆಯವರ ಭಿನ್ನಾಭಿಪ್ರಾಯವು ಬೆಳಕಿಗೆ ಬರಬಹುದು. ನಿಮ್ಮ ಇಚ್ಛೆಗೆ ವಿರುದ್ಧವಾಗಿದ್ದರೆ ಕೋಪಗೊಳ್ಳುವುದು ಬೇಡ.

ಕುಂಭ ರಾಶಿ: ನೀವು ಸಂಗಾತಿಯ ಜೊತೆ ಸಂತೋಷವನ್ನು ಹಂಚಿಕೊಳ್ಳುವಿರಿ. ತಾವು ಉಳಿದುಕೊಳ್ಳಲು ಯಾರ ಮೇಲೂ ಅನಗತ್ಯ ಆರೋಪ ಮಡಿಯಾರು. ಮಕ್ಕಳಿಗಸ ಸಂಬಂಧಿತ ವಿಚಾರದಲ್ಲಿ ಚಿಂತೆ ಬಗೆಹರಿಯುವ ಸಾಧ್ಯತೆ. ದಿನದ ಕೊನೆಗೆ ಮನಸ್ಸು ತೃಪ್ತಿ ಪಡಬಹುದು. ತಪ್ಪಾದ ವ್ಯಯದಿಂದ ಅನಂತರ ಬೇಸರವಾಗಲಿದೆ. ಕುಟುಂಬದಲ್ಲಿ ಕೆಲ ಮನಸ್ತಾಪಗಳಿದ್ದರೂ ನೀವು ಸಮತೋಲನ ಸಾಧಿಸುತ್ತೀರಿ. ತೊಂದರೆಯಾಗುವುದು ಗೊತ್ತಿದ್ದರೂ ಬೇಕೆಂದೇ ಸಿಕ್ಕಿಹಾಕಿಕೊಳ್ಳುವಿರಿ.

ಮೀನ ರಾಶಿ: ನಿಮ್ಮ ಒರಟುತನದಿಂದ ದಾಂಪತ್ಯದಲ್ಲಿ ಕಲಹವಾಗುವ ಸಾಧ್ಯತೆ ಇದೆ. ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ವಿದ್ಯಾಭ್ಯಾಸದಲ್ಲಿ ನೂರಕ್ಕೆ ನೂರು ಇದ್ದರೂ ಫಲಿತಾಂಶವು ಕೈಕೊಡಬಹುದು. ಹಿರಿಯರ ಸಲಹೆ ಕೇಳಿ ಮುಂದೆ ನಡೆಯುವುದು ಒಳಿತು. ಹಣಕಾಸು ವಿಚಾರದಲ್ಲಿ ಖರ್ಚಿನ ಮೇಲೆ ನಿಯಂತ್ರಣ ಇರಲಿ. ಮೋಸಹೋಗುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕ ಪರಿಸ್ಥಿತಿಯು ಮೊದಲಿಗಿಂತ ಉತ್ತಮವಾಗಿದ್ದು, ಹೂಡಿಕೆಯ ಕಡೆ ಗಮನವಿರುವುದು.

ಲೋಹಿತ್ ಹೆಬ್ಬಾರ್-8762924271 (what’s app only)

Source link

ದೆಹಲಿಯಲ್ಲಿ ಭಾರೀ ಮಳೆ; ಪಾರ್ಕಿಂಗ್ ಗೋಡೆ ಕುಸಿದು 8 ಕಾರುಗಳು ಪೂರ್ತಿ ಜಖಂ – Kannada News | Delhi rain 8 cars damaged after parking lot wall collapsed Watch Video

ನವದೆಹಲಿ, ಆಗಸ್ಟ್ 8: ದೆಹಲಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯು ಜಲಪ್ರಳಯದ ವಾತಾವರಣವನ್ನು ಸೃಷ್ಟಿಸಿದೆ. ದಕ್ಷಿಣ ದೆಹಲಿಯ (Delhi Rains) ದೇವ್ಲಿ ಪ್ರದೇಶದಲ್ಲಿ ಭಾರೀ ಮಳೆಗೆ ಪಾರ್ಕಿಂಗ್ ಸ್ಥಳದ ತಡೆಗೋಡೆಯೊಂದು ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಗೋಡೆಯ ಬದಿ ನಿಲ್ಲಿಸಲಾಗಿದ್ದ 8 ಕಾರುಗಳು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ದೇವ್ಲಿ ಪ್ರದೇಶದಲ್ಲಿ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಪಾರ್ಕಿಂಗ್ ಆವರಣದ ತಡೆಗೋಡೆಯ ತಳಭಾಗ ನೀರು ತುಂಬಿ ದುರ್ಬಲಗೊಂಡಿತ್ತು. ಇಂದು ಮಧ್ಯಾಹ್ನ ಗೋಡೆ ದಿಢೀರನೆ ಕುಸಿದು ಬಿದ್ದು, ಪಕ್ಕದಲ್ಲಿ ಸಾಲಾಗಿ ನಿಲ್ಲಿಸಿದ್ದ ವಾಹನಗಳ ಮೇಲೆ ಬಿದ್ದಿದೆ.

ಕುಸಿದ ಗೋಡೆಯ ಇಟ್ಟಿಗೆ ಮತ್ತು ಕಾಂಕ್ರೀಟ್ ಚೂರುಗಳು ಬಿದ್ದ ರಭಸಕ್ಕೆ 8 ಕಾರುಗಳ ಮೇಲ್ಛಾವಣಿ ಹಾಗೂ ಮುಂಭಾಗ ನಜ್ಜುಗುಜ್ಜಾಗಿದ್ದು, ತೀವ್ರ ಹಾನಿ ಸಂಭವಿಸಿದೆ. ಘಟನೆ ನಡೆದ ಸಮಯದಲ್ಲಿ ಕಾರುಗಳ ಒಳಗೆ ಅಥವಾ ಗೋಡೆಯ ಪಕ್ಕದಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಅಥವಾ ಜನರಿಗೆ ಗಾಯಗಳಾದ ವರದಿಯಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೈದರಾಬಾದ್​ನ ರಸ್ತೆ ಮಧ್ಯೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ; ನಾಲ್ವರಿಗೆ ಗಂಭೀರ ಗಾಯ – Kannada News | Balloon gas cylinder blasts near GSM mall in Hyderabad 4 injured

ಹೈದರಾಬಾದ್, ಆಗಸ್ಟ್ 8: ಹೈದರಾಬಾದ್‌ನ ಮಿಯಾಪುರದಲ್ಲಿರುವ ಜಿಎಸ್‌ಎಂ ಮಾಲ್ ಬಳಿ ಇಂದು ಸಂಜೆ ಬಲೂನ್‌ಗಳಿಗೆ ಗ್ಯಾಸ್ ತುಂಬಲು ಬಳಸುತ್ತಿದ್ದ ಸಣ್ಣ ಹೀಲಿಯಂ ಸಿಲಿಂಡರ್‌ ಸ್ಫೋಟಗೊಂಡು (Blast ) ನಾಲ್ಕಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಬಲೂನ್‌ಗಳಿಗೆ ಗ್ಯಾಸ್ ತುಂಬಿಸುತ್ತಿದ್ದಾಗ ಸಿಲಿಂಡರ್ ದಿಢೀರನೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲ ಪ್ರದೇಶದಲ್ಲಿದ್ದ ಜನರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಪ್ರಾಣಭಯದಿಂದ ಸುರಕ್ಷಿತ ಸ್ಥಳಗಳಿಗೆ ಓಡಿದರು. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TNPL 2026: 40 ಎಸೆತಗಳಲ್ಲಿ ಅತಿ ವೇಗದ ಶತಕ; 9 ವರ್ಷಗಳ ಹಳೆಯ ದಾಖಲೆ ಉಡೀಸ್ – Kannada News | Madurai Panthers’ Record TNPL Run Chase: N.S. Chaturved Smashes Fastest Century vs Kovai Kings

N.s. Chaturved

ತಮಿಳುನಾಡಿನ ಟಿ20 ಲೀಗ್ ಟಿಎನ್‌ಪಿಎಲ್‌ನ (TNPL 2026) 10ನೇ ಸೀಸನ್ ಆಗಸ್ಟ್ 4 ರಿಂದ ಆರಂಭವಾಗಿದೆ. ಇಂದು ಟೂರ್ನಿಯ 7ನೇ ಪಂದ್ಯದಲ್ಲಿ ಕೋವೈ ಕಿಂಗ್ಸ್ ಮತ್ತು ಮಧುರೈ ಪ್ಯಾಂಥರ್ಸ್ (Kovai Kings vs Madurai Panthers) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಒಟ್ಟು 479 ರನ್‌ಗಳು ದಾಖಲಾದವು. ರನ್‌ಗಳ ಮಳೆಗೆ ಸಾಕ್ಷಿಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೋವೈ ಕಿಂಗ್ಸ್ 239 ರನ್ ಕಲೆಹಾಕಿದರೆ, ಈ ಗುರಿ ಬೆನ್ನಟ್ಟಿದ ಮಧುರೈ ಪ್ಯಾಂಥರ್ಸ್ ತಂಡ ಎನ್.ಎಸ್. ಚತುರ್ವೇದ್ ಬಾರಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಇನ್ನು 3 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು.

4 ವಿಕೆಟ್‌ಗಳ ನಷ್ಟಕ್ಕೆ 239 ರನ್

ದಿಂಡಿಗಲ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋವೈ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 239 ರನ್ ಗಳಿಸಿತು. ತಂಡದ ಪರ ಬಾಲಸುಬ್ರಮಣ್ಯಂ ಸಚಿನ್ 43 ಎಸೆತಗಳಲ್ಲಿ 84 ರನ್ ಗಳಿಸಿದರೆ, ಆಂಡ್ರೆ ಸಿದ್ಧಾರ್ಥ್ ಕೇವಲ 42 ಎಸೆತಗಳಲ್ಲಿ 87 ರನ್ ಗಳಿಸಿ ಅಜೇಯರಾಗಿ ಆಡಿದರು. ಈ ಅವಧಿಯಲ್ಲಿ ಕೋವೈ 13 ಸಿಕ್ಸರ್‌ಗಳನ್ನು ಬಾರಿಸಿತು. ಇತ್ತ ಬೌಲಿಂಗ್‌ನಲ್ಲಿ ಮಿಂಚಿದ ಗುರ್ಜಪ್ನೀತ್ ಸಿಂಗ್ 2 ವಿಕೆಟ್‌ಗಳನ್ನು ಪಡೆದರು.

40 ಎಸೆತಗಳಲ್ಲಿ ಶತಕ ಸಿಡಿಸಿದ ಚತುರ್ವೇದ್

239 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಮಧುರೈ ಪ್ಯಾಂಥರ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇನ್ನಿಂಗ್ಸ್‌ನ ಮೂರನೇ ಎಸೆತದಲ್ಲಿಯೇ ಮೊದಲ ವಿಕೆಟ್ ಪತನವಾಯಿತು. ಆದರೆ ಮೂರನೇ ಕ್ರಮಾಂಕದಲ್ಲಿ ಬಂದ 35 ವರ್ಷದ ಬ್ಯಾಟ್ಸ್‌ಮನ್ ಎನ್.ಎಸ್. ಚತುರ್ವೇದ್ ಸ್ಫೋಟಕ ಬ್ಯಾಟಿಂಗ್‌ ಮಾಡುವ ಮೂಲಕ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ನಂತರ 40 ಎಸೆತಗಳಲ್ಲಿ ಶತಕ ಸಿಡಿಸಿದರು.

TNPL ನಲ್ಲಿ ವೇಗದ ಶತಕ

13 ನೇ ಓವರ್‌ನಲ್ಲಿ ಅವರು ಔಟಾದಾಗ, ತಂಡದ ಸ್ಕೋರ್ 169 ರನ್‌ಗಳಾಗಿತ್ತು. ಅದರಲ್ಲಿ ಚತುರ್ವೇದ್ ಒಬ್ಬರೇ 121 ರನ್‌ ಕಲೆಹಾಕಿದ್ದರು. ಇದರ ಫಲವಾಗಿ ಮಧುರೈ ಪ್ಯಾಂಥರ್ಸ್ ತಂಡವು ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದು, ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ದಾಖಲೆಯನ್ನು ನಿರ್ಮಿಸಿತು. ತಂಡದ ಪರ ಅಬ್ಬರಿಸಿದ ಚತುರ್ವೇದ್ 47 ಎಸೆತಗಳಲ್ಲಿ 15 ಬೌಂಡರಿಗಳು ಮತ್ತು 7 ಸಿಕ್ಸರ್‌ಗಳು ಸೇರಿದಂತೆ 121 ರನ್‌ ಬಾರಿಸಿದರು. ಹಾಗೆಯೇ TNPL ನಲ್ಲಿ ವೇಗದ ಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು. ಚತುರ್ವೇದ್​ಗೆ ಮೊದಲು, ಈ ದಾಖಲೆ 2017 ರಲ್ಲಿ 46 ಎಸೆತಗಳಲ್ಲಿ ಶತಕ ಬಾರಿಸಿದ್ದ ರೋಹಿತ್ ಅವರ ಹೆಸರಿನಲ್ಲಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:56 pm, Sat, 8 August 26

Source link

ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ – Kannada News | Union Home Minister Amit Shah offers prayers at Tamil Nadus Arunachaleswara temple

ಚೆನ್ನೈ, ಆಗಸ್ಟ್ 8: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಐತಿಹಾಸಿಕ ಅರುಣಾಚಲೇಶ್ವರ ದೇವಾಲಯಕ್ಕೆ (Arunachaleswarar Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಆಗಮಿಸಿದ ಅಮಿತ್ ಶಾ ಅವರಿಗೆ ಅರ್ಚಕರು ಮತ್ತು ದೇವಾಲಯದ ಆಡಳಿತ ಮಂಡಳಿಯು ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ ಕೋರಿತು. ಬಳಿಕ ಅವರು ಲಿಂಗರೂಪಿ ಶಿವನಿಗೆ (ಅರುಣಾಚಲೇಶ್ವರ) ವಿಶೇಷ ಅಭಿಷೇಕ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಿದರು. ಪ್ರಾರ್ಥನೆಯ ನಂತರ ಅಮಿತ್ ಶಾ ಅವರು ಅರುಣಾಚಲೇಶ್ವರ ದೇಗುಲದ ಆವರಣದಲ್ಲಿ ಹಾಗೂ ಸುತ್ತಮುತ್ತಲ ಪವಿತ್ರ ಸ್ಥಳಗಳಲ್ಲಿ ದರ್ಶನ ಪಡೆದರು.

ತಮಿಳುನಾಡು ಪ್ರವಾಸದ ಭಾಗವಾಗಿ ಆಗಮಿಸಿದ್ದ ಸಚಿವ ಅಮಿತ್ ಶಾ, ದೇವಾಲಯ ಭೇಟಿಯ ನಂತರ ಸ್ಥಳೀಯ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿ, ರಾಜ್ಯದ ರಾಜಕೀಯ ಮತ್ತು ಭದ್ರತಾ ಪರಿಸ್ಥಿತಿಗಳ ಕುರಿತು ಚರ್ಚಿಸಿದರು. ಕೇಂದ್ರ ಗೃಹ ಸಚಿವರ ಭೇಟಿಯ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ ಹಾಗೂ ತಿರುವಣ್ಣಾಮಲೈ ನಗರದಲ್ಲಿ ತಮಿಳುನಾಡು ಪೊಲೀಸರು ಮತ್ತು ಕೇಂದ್ರ ಭದ್ರತಾ ಪಡೆಗಳು ಅತ್ಯಂತ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಿದ್ದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಳೆಗೆ ಕುಸಿದ ಲಕ್ನೋ-ಕಾನ್ಪುರ ಎಕ್ಸ್​ಪ್ರೆಸ್​ವೇ; ಫ್ಯಾನ್ ಹಾಕಿ ರಸ್ತೆಯ ಪ್ಯಾಚ್ ಒಣಗಿಸುವ ವಿಡಿಯೋ ವೈರಲ್ – Kannada News | Lucknow Kanpur Expressway fallen into disrepair weeks after its completion 10 fans have been placed near the patchwork to dry it

ಲಕ್ನೋ, ಆಗಸ್ಟ್ 8: 4,700 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಲಕ್ನೋ-ಕಾನ್ಪುರ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಹಾಳಾಗಿದೆ. ಉತ್ತರ ಪ್ರದೇಶದ 4,700 ಕೋಟಿ ವೆಚ್ಚದ ಲಕ್ನೋ-ಕಾನ್ಪುರ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಮುಗಿದು ಕೆಲವೇ ದಿನಗಳಲ್ಲಿ ಮಳೆಯಿಂದಾಗಿ (Rain Effect) 200 ಮೀಟರ್ ಭಾಗ ಕುಸಿದಿದೆ. ರಸ್ತೆಗೆ ಪ್ಯಾಚ್‌ವರ್ಕ್ ಹಾಕಲು ಆ ಸ್ಥಳದಲ್ಲಿ ನೀರನ್ನು ಒಣಗಿಸಲು 10 ಫ್ಯಾನ್‌ಗಳನ್ನು ಇಡಲಾಗಿದ್ದು, ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

4,700 ಕೋಟಿ ವೆಚ್ಚದ ಕಾನ್ಪುರ-ಲಕ್ನೋ ಎಕ್ಸ್‌ಪ್ರೆಸ್‌ವೇ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿ ಮೂರು ವಾರಗಳು ಕಳೆಯುವುದರೊಳಗಾಗಿ, ಅದರ ಹಲವು ಭಾಗಗಳು ತೀವ್ರವಾಗಿ ಹಾನಿಗೊಳಗಾಗಿ ಬಿರುಕು ಬಿಟ್ಟಿದ್ದವು. ಇದರಿಂದಾಗಿ ಅಧಿಕಾರಿಗಳು ಹಾನಿಗೊಳಗಾದ ರಸ್ತೆಗಳನ್ನು ಅಗೆದು ಮತ್ತೆ ನಿರ್ಮಿಸುವಂತಾಯಿತು. ಎಕ್ಸ್‌ಪ್ರೆಸ್‌ವೇನಲ್ಲಿ ಪದೇ ಪದೇ ಕಂಡುಬಂದ ಕಳಪೆ ಗುಣಮಟ್ಟದ ಸಮಸ್ಯೆಗಳ ಹಿನ್ನೆಲೆಯಲ್ಲಿ ಎನ್‌ಎಚ್‌ಎಐ ಸಂಸ್ಥೆಯ ವಿರುದ್ಧ ಕ್ರಮ ಕೈಗೊಂಡಿದ್ದು, ಅದನ್ನು “ಕಳಪೆ ಕಾಮಗಾರಿಯ ಸಂಸ್ಥೆ” ಎಂದು ಘೋಷಿಸಿದೆ ಹಾಗೂ ಕಪ್ಪುಪಟ್ಟಿಗೆ ಸೇರಿಸುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಹಸ್ಯವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಭಾರತದ ಯುವ ಕ್ರಿಕೆಟಿಗ – Kannada News | Ramandeep Singh’s Secret Wedding Revealed: KKR All Rounder Marries TV Actress Charlie Chauhan

ಭಾರತದ ಯುವ ಕ್ರಿಕೆಟಿಗ ಹಾಗೂ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ (KKR) ತಂಡವನ್ನು ಪ್ರತಿನಿಧಿಸುವ ಆಲ್‌ರೌಂಡರ್ ರಮಣದೀಪ್ ಸಿಂಗ್ (Ramandeep Singh) ರಹಸ್ಯವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ರಮಣದೀಪ್ ವಿವಾಹದ ವಿಚಾರ ಅವರ ಮಡದಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ಬಳಿಕ ಬಯಲಾಗಿದೆ. ರಮಣದೀಪ್ ತೀರ ಖಾಸಗಿಯಾಗಿ ವಿವಾಹವಾಗಿದ್ದು, ಈ ಸಮಾರಂಭದಲ್ಲಿ ಅವರ ಕುಟುಂಬ ಹಾಗೂ ಆಯ್ದ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು ಎಂದು ವರದಿಯಾಗಿದೆ.

ದೇಶೀಯ ಕ್ರಿಕೆಟ್​ನಲ್ಲಿ ಪಂಜಾಬ್ ಪರ ಆಡುವ ರಮಣದೀಪ್, ಟಿವಿ ನಟಿ ಚಾರ್ಲಿ ಚೌಹಾಣ್ ಅವರನ್ನು ವಿವಾಹವಾಗಿದ್ದಾರೆ. ಆಗಸ್ಟ್ 7 ರಂದು ಈ ಜೋಡಿ ಹೊಸ ಜೀವನಕ್ಕೆ ಕಾಲಿರಿಸಿದ್ದು, ಹೊರಗಿನವರಾಗಿ ಆಪ್ತ ಸ್ನೇಹಿತರು ಮಾತ್ರ ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಕುಟುಂಬದ ಹೊರಗಿನ ಯಾರಿಗೂ ಇದರ ಬಗ್ಗೆ ತಿಳಿದಿರಲಿಲ್ಲ ಎಂದು ವರದಿಯಾಗಿದೆ.

ಆಪ್ತ ಸ್ನೇಹಿತರು ಭಾಗಿ

ಗುರುದ್ವಾರದಲ್ಲಿ ನಡೆದ ಸಾಂಪ್ರದಾಯಿಕ ಪಂಜಾಬಿ ಸಮಾರಂಭದಲ್ಲಿ ದಂಪತಿಗಳು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ರಮಣದೀಪ್ ಮದುವೆಯಲ್ಲಿ ಟೀಂ ಇಂಡಿಯಾದ ಕೆಲವು ಆಟಗಾರರು ಕೂಡ ಭಾಗಿಯಾಗಿದ್ದಾರೆ. ಅವರಲ್ಲಿ ಅರ್ಷದೀಪ್ ಸಿಂಗ್, ಮುಂಬೈ ಇಂಡಿಯನ್ಸ್ ಆಟಗಾರ ನಮನ್ ಧೀರ್, ಅಶ್ವಿನಿ ಕುಮಾರ್ ಮತ್ತು ಪಂಜಾಬ್ ಕ್ರಿಕೆಟಿಗ ಜಸಿಂದರ್ ಸಿಂಗ್ ಸೇರಿದ್ದಾರೆ. ರಮಣದೀಪ್ ಮಡದಿ ಚಾರ್ಲಿ ಚೌಹಾಣ್, ವಿವಾಹದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ ನಂತರವೇ ಈ ಸುದ್ದಿ ಬಹಿರಂಗವಾಗಿದೆ.

ರಮಣದೀಪ್ ವೃತ್ತಿಜೀವನ

ಮೇಲೆ ಹೇಳಿದಂತೆ ರಮಣದೀಪ್ ಸಿಂಗ್ ಪಂಜಾಬ್ ಪರ ದೇಶೀಯ ಕ್ರಿಕೆಟ್ ಆಡುತ್ತಾರೆ ಮತ್ತು ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ. 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ರಮಣದೀಪ್ 2024 ರಲ್ಲಿ ಕೆಕೆಆರ್ ಪ್ರಶಸ್ತಿ ವಿಜೇತ ತಂಡದ ಭಾಗವಾಗಿದ್ದರು. ರಮಣದೀಪ್ 38 ಐಪಿಎಲ್ ಪಂದ್ಯಗಳಲ್ಲಿ 299 ರನ್ ಗಳಿಸಿದ್ದು, ಏಳು ವಿಕೆಟ್‌ಗಳನ್ನು ಪಡೆದಿದ್ದಾರೆ. ಟೀಂ ಇಂಡಿಯಾ ಪರ ಎರಡು ಟಿ20 ಪಂದ್ಯಗಳನ್ನು ಸಹ ಆಡಿದ್ದಾರೆ. ಈ ಎರಡು ಪಂದ್ಯಗಳಲ್ಲಿ 15 ರನ್ ಮತ್ತು ಒಂದು ವಿಕೆಟ್ ಕೂಡ ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಳ್ಳೆಯ ಸಿನಿಮಾಕ್ಕಾಗಿ ನನ್ನ ಬಳಿ ಸಾಕಷ್ಟು ಹಣ ಇದೆ: ನಿರ್ಮಾಪಕ ವೆಂಕಟ್ – Kannada News | Producer Venkat said he have lot of money for good films

ಟಾಕ್ಸಿಕ್’ (Toxic) ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ವೆಂಕಟ್ ಅವರು ಸಿನಿಮಾದ ಬಗ್ಗೆ ಸಿನಿಮಾದ ಪಾತ್ರಧಾರಿಗಳು ತಂತ್ರಜ್ಞರ ಬಗ್ಗೆ ಸಾಕಷ್ಟು ವಿಷಯ ಮಾತನಾಡಿದರು. ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ದಾನಿಶ್ ಸೇಠ್, ವೆಂಕಟ್ ಅವರಿಗೆ ಹಣದ ಬಗ್ಗೆ ತಮಾಷೆಯ ಪ್ರಶ್ನೆ ಕೇಳಿದರು. ಆ ಪ್ರಶ್ನೆಗೆ ಗಂಭೀರವಾಗಿಯೇ ಉತ್ತರಿಸಿದ ವೆಂಕಟ್, ದೇವರ ದಯೆಯಿಂದ ನನ್ನ ಜೇಬು ದೊಡ್ಡದಾಗಿದೆ. ಒಳ್ಳೆಯ ಸಿನಿಮಾಕ್ಕಾಗಿ ಎಂದಿಗೂ ನನ್ನ ಬಳಿ ಹಣ ಇಲ್ಲದಾಗಿಲ್ಲ. ಒಳ್ಳೆಯ ಸಿನಿಮಾಗಳಿಗಾಗಿ ಸಾಕಷ್ಟು ಹಣ ಇದೆ’ ಎಂದರು. ನಿರ್ಮಾಪಕ ವೆಂಕಟ್ ಹೇಳಿದ್ದೇನು? ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಹೊಸ ರೂಲ್ಸ್‌: ಗ್ರಾಹಕರು ಮಾಡಬೇಕಾಗಿದ್ದಿಷ್ಟೇ!

ಬೆಂಗಳೂರು, (ಆಗಸ್ಟ್ 08): ಆಗಸ್ಟ್ 15ರೊಳಗೆ e-KYC ಪೂರ್ಣಗೊಳಿಸುವಂತೆ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಸೂಚನೆ ನೀಡಲಾಗಿದೆ. ಗೃಹ ಬಳಕೆಯ LPG ಸಂಪರ್ಕ (gas cylinder)ಹೊಂದಿರುವ ಪ್ರತಿಯೊಬ್ಬ ಗ್ರಾಹಕರೂ e-KYC ಪೂರ್ಣಗೊಳಿಸಿಕೊಳ್ಳುವಂತೆ ತೈಲ ಕಂಪನಿಗಳು ಹಾಗೂ ಗ್ಯಾಸ್ ವಿತರಕರು ಮನವಿ ಮಾಡುತ್ತಿದ್ದಾರೆ. ಗ್ರಾಹಕರ ಮಾಹಿತಿ ಪರಿಶೀಲನೆ, ದಾಖಲೆಗಳ ಅಪ್‌ಡೇಟ್, ನಿಜವಾದ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ e-KYC ಪ್ರಕ್ರಿಯೆ ನಡೆಸಲಾಗ್ತಿದೆ. ಆದ್ರೆ e-KYC ಮಾಡಿಸದಿದ್ರೆ ಗೃಹ ಬಳಕೆಯ ಸಿಲಿಂಡರ್ ಸಿಗೋದಿಲ್ಲ. ವಾಣಿಜ್ಯ ದರದಲ್ಲಿ ಸಿಲಿಂಡರ್ ಖರೀದಿಸಬೇಕಾಗುತ್ತೆ. 2108 ರೂಪಾಯಿ ಕೊಟ್ಟು ಕಮರ್ಷಿಯಲ್ ಸಿಲಿಂಡರ್ ಖರೀದಿಸಬೇಕಾಗುತ್ತೆ ಅಂತ ಬೆಂಗಳೂರಿನ ಗ್ಯಾಸ್ ವಿತರಕರು ಮನವಿ ಮಾಡುತ್ತಿದ್ದಾರೆ.

ಕೆವೈಸಿ ಎಲ್ಲಿ ಮಾಡಿಸಬೇಕು?

ಕೇಂದ್ರ ಸರ್ಕಾರದ ಸ್ಪಷ್ಟನೆ ಪ್ರಕಾರ, e-KYC ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದು ಗ್ರಾಹಕರು ಪರಿಶೀಲಿಸಿಕೊಳ್ಳಬೇಕು. ಅಧಿಕೃತ ಮಾಹಿತಿ ಆಧರಿಸಿಯೇ ಮುಂದಿನ ಕ್ರಮ ಕೈಗೊಳ್ಳಬೇಕು. ಹಾಗಾಗಿ ಕೊನೆಯ ಕ್ಷಣದವರೆಗೆ ಕಾಯದೇ ಹತ್ತಿರದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ e-KYC ಸ್ಟೇಟಸ್ ಪರಿಶೀಲಿಸಿಕೊಳ್ಳಬೇಕಿದೆ. ಅಥವಾ ಸಂಬಂಧಪಟ್ಟ ಅಧಿಕೃತ ವ್ಯವಸ್ಥೆಯ ಮೂಲಕ e-KYC ಪೂರ್ಣಗೊಳಿಸಬೇಕು. ಗ್ಯಾಸ್ ಸಂಪರ್ಕ ನಿಮ್ಮ ಹೆಸರಲ್ಲಿದ್ರೆ, e-KYC ಆಗಿದೆಯಾ ಇಲ್ಲವಾ ಅನ್ನೋದನ್ನ ಒಮ್ಮೆ ಚೆಕ್ ಮಾಡಿಕೊಳ್ಳಬೇಕು.

e-KYC ಅಗತ್ಯವಿದ್ದರೆ ಕೂಡಲೇ ಪೂರ್ಣಗೊಳಿಸಿ. ಮುಂದೆ ಸಿಲಿಂಡರ್ ಪಡೆಯುವಾಗ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸಿ ಅನ್ನೋದು ತೈಲ ಕಂಪನಿಗಳು ಹಾಗೂ ಗ್ಯಾಸ್ ವಿತರಕರ ಮನವಿಯಾಗಿದೆ.

ಕೆವೈಸಿ ಅನ್ನು ಪೂರ್ಣಗೊಳಿಸದಿದ್ದರೆ ನಿರ್ಬಧ!

ನೀವು ದೀರ್ಘಕಾಲದವರೆಗೆ KYC ಅನ್ನು ಪೂರ್ಣಗೊಳಿಸದಿದ್ದರೆ, ನಿಮ್ಮ ಗ್ಯಾಸ್ ಸಂಪರ್ಕವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು. ನೀವು ಗ್ಯಾಸ್ ಏಜೆನ್ಸಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಮೊಬೈಲ್ ಅಪ್ಲಿಕೇಶನ್ ಮೂಲಕ ನೀವು ಮನೆಯಿಂದಲೇ ಕೆಲವೇ ನಿಮಿಷಗಳಲ್ಲಿ ಇ-ಕೆವೈಸಿಯನ್ನು ಪೂರ್ಣಗೊಳಿಸಬಹುದು.

ಮಾಡಬೇಕಾಗಿದ್ದೇನು?

ನೀವು ಗ್ಯಾಸ್ ಹೊಂದಿರುವ ಕಂಪನಿಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ (ಉದಾ. ಇಂಡೇನ್, ಭಾರತ್ ಗ್ಯಾಸ್, ಅಥವಾ HP ಗ್ಯಾಸ್). ನಿಮ್ಮ ಗ್ಯಾಸ್ ಸಂಪರ್ಕಕ್ಕೆ ಲಿಂಕ್ ಮಾಡಲಾದ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ. ಅಪ್ಲಿಕೇಶನ್‌ನಲ್ಲಿರುವ ಹೋಮ್‌ಗೆ ಹೋಗಿ ‘ಇ-ಕೆವೈಸಿ’ ಅಥವಾ ‘ಆಧಾರ್ ಪರಿಶೀಲನೆ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮೊಬೈಲ್ ಕ್ಯಾಮೆರಾ ಬಳಸಿ ಮುಖ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ. ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಕೆಲವೇ ನಿಮಿಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ಗ್ರಾಹಕರು ಹೆಚ್ಚಿನ ತೊಡಕುಗಳು ಮತ್ತು ಸಬ್ಸಿಡಿ ವಿಳಂಬವನ್ನು ತಪ್ಪಿಸಲು ಈ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version