ಯಶ್​​ಗಾಗಿ ರೂಲ್ ಬ್ರೇಕ್ ಮಾಡಿದೆ: ಕೊಂಡಾಡಿದ ನಟಿ ನಯನತಾರಾ – Kannada News | Nayanathara talks highly about Yash and Geethu Mohandas

ನಯನತಾರಾ (Nayanthara), ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್, ಬಹಳ ಶಿಸ್ತು, ನಿಷ್ಠುರವಾದಿ ಎಂದು ಸಹ ನಯನತಾರಾ ಹೆಸರಾಗಿದ್ದಾರೆ. ಎಷ್ಟೇ ದೊಡ್ಡ ಸ್ಟಾರ್ ಆಗಿರಲಿ, ಹಿಂದು-ಮುಂದು ನೋಡದೆ ತಮಗನಿಸಿದ್ದು ಹೇಳುತ್ತಾರೆ (ನಟ ಧನುಶ್​ ಜೊತೆಗಿನ ವಿವಾದ ನೆನಪಿರಬೇಕು). ನಯನತಾರಾ ಯಾವುದೇ ಸಿನಿಮಾ ಪ್ರೊಮೋಷನ್ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ. ವೇದಿಕೆಗಳ ಮೇಲೆ ಮಾನತಾಡುವುದಿಲ್ಲ. ಯಾರನ್ನೂ ಅನವಶ್ಯಕವಾಗಿ ಹೊಗಳುವುದಿಲ್ಲ. ಆದರೆ ಇಂದು (ಆಗಸ್ಟ್ 08) ‘ಟಾಕ್ಸಿಕ್’ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಯಶ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಅವರನ್ನು ಮಾತ್ರವಲ್ಲ, ನಿರ್ದೇಶಕಿ ಗೀತು ಮೋಹನ್​​ದಾಸ್ ಅವರನ್ನೂ ಸಹ ಬಹುವಾಗಿ ಮೆಚ್ಚಿ ಮಾತನಾಡಿದರು.

‘ನಾನು ಹಾಗೂ ಗೀತು ಮೋಹನ್​​ದಾಸ್ 20 ವರ್ಷಗಳ ಹಿಂದೆ ಒಂದು ಸಿನಿಮಾನಲ್ಲಿ ನಟಿಸಿದ್ದೆವು, ಆಗ ಇದ್ದ ಗೀತೂಗೂ ಈಗಿರುವ ಗೀತೂಗು ಸಾಕಷ್ಟು ಅಂತರ ಇದೆ. ನಾನು ಹೆಚ್ಚು ಜನ ನಟ-ನಟಿಯರು ಇರುವ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ನನಗೆ ಅಂಥಹಾ ಸಿನಿಮಾಗಳಲ್ಲಿ ನಟಿಸುವುದಕ್ಕೆ ತುಸು ಹಿಂಜರಿಕೆ. ಹಾಗಾಗಿ ಗೀತೂ ಮೊದಲು ಕರೆ ಮಾಡಿದಾಗ ನಾನು ನಟಿಸುವುದಿಲ್ಲ ಎಂದೇ ಹೇಳಿದ್ದೆ. ಆದರೆ ಗೀತೂ ನನಗೆ 10 ಮಿಲಿಯನ್ ಪ್ರಶ್ನೆಗಳು ಕೇಳಿದರು. ನಾನು ಸರಿ ಒಮ್ಮೆ ಬಂದು ಕತೆ ಹೇಳಿ ಅಂದೆ. ಆಕೆ ಕತೆ ಹೇಳಿದಾಗ ನನಗೆ ಶಾಕ್ ಆಗಿಬಿಟ್ಟಿತು, ಯಾರು ಈ ಮಹಿಳೆ, ನಾವು ನೋಡೇ ಇಲ್ಲವಲ್ಲ ಎನಿಸಿತು. ನಾನು ಕೂಡಲೇ ಸಿನಿಮಾ ಒಪ್ಪಿಕೊಂಡೆ’ ಎಂದಿದ್ದಾರೆ ನಯನತಾರಾ.

‘ಗೀತೂ ಮಾಡಿರುವ ಮೋಡಿ ಸಾಮಾನ್ಯದ್ದಲ್ಲ. ನೀವು ಟ್ರೈಲರ್ ನೋಡಿದ್ದೀರಿ, ಅದು ಅದ್ಭುತವಾಗಿದೆ. ಆದರೆ ಸಿನಿಮಾ ಇದಕ್ಕಿಂತಲೂ ಬಹಳ ದೊಡ್ಡ ಮಟ್ಟದಲ್ಲಿರುತ್ತದೆ. ಇದು ಸಾಮಾನ್ಯ ಸಿನಿಮಾ ಅಲ್ಲವೇ ಅಲ್ಲ. ಗೀತೂ ಒಬ್ಬ ನಿರ್ದೇಶಕಿಯಾಗಿ ಅದ್ಭುತವಾಗಿದ್ದಾರೆ, ಆದರೆ ಒಬ್ಬ ಮಹಿಳೆಯಾಗಿ ಇನ್ನೂ ಅದ್ಭುತವಾದ ವ್ಯಕ್ತಿ ಅವರು. ನಾನು ಎಷ್ಟು ಹೊತ್ತು ಬೇಕಾದರೂ ಗೀತೂ ಬಗ್ಗೆ ಮಾತನಾಡಬಲ್ಲೆ’ ಎಂದರು ನಯನತಾರಾ. ನಟಿ ನಯನತಾರಾ ತಮ್ಮ ಸಹ ನಟರನ್ನು, ತಂತ್ರಜ್ಞರನ್ನು ಇಷ್ಟೋಂದು ಹೊಗಳುವುದು ಬಹಳ ಅಪರೂಪ.

ಇದನ್ನೂ ಓದಿ:ಒಂದು ಪಾರ್ಟಿಯಿಂದ ಹುಟ್ಟಿತು ‘ಟಾಕ್ಸಿಕ್’ ಸಿನಿಮಾ: ನಿರ್ಮಾಪಕ ಹೇಳಿದ್ದೇನು?

ಇನ್ನು, ಯಶ್​​ ಬಗ್ಗೆ ಮಾತನಾಡುತ್ತಾ, ‘ನಾನು ಪ್ರಚಾರ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ ಏಕೆಂದರೆ ನನಗೆ ಪ್ರಚಾರ ಮಾಡುವುದು, ಭಾಷಣ ಮಾಡುವುದು ತುಸು ಕಷ್ಟದ ಕೆಲಸ. ಆದರೆ ಇಲ್ಲಿಗೆ ಕೇವಲ ಯಶ್​​ಗಾಗಿ ಮಾತ್ರ ಬಂದಿದ್ದೇನೆ. ಯಶ್ ಒಂದು ಕರೆ ಮಾಡಿ ಬರಬೇಕು ಎಂದರು ಹಾಗಾಗಿ ನಾನು ಇಲ್ಲಿಗೆ ಬಂದೆ. ನಾನು ಸಾಕಷ್ಟು ಸ್ಟಾರ್ ನಟರುಗಳ ಜೊತೆಗೆ ಕೆಲಸ ಮಾಡಿದ್ದೇನೆ. ಆದರೆ ಯಶ್ ಎಲ್ಲರಿಗಿಂತಲೂ ಭಿನ್ನ. ಅವರು ತೆರೆಯ ಮೇಲೆ ಕಾಣಿಸುವಂಥೆಯೇ ‘ಲಾರ್ಜರ್ ದ್ಯಾನ್ ಲೈಫ್’. ಅವರಷ್ಟು ಕಷ್ಟಪಟ್ಟು ಕೆಲಸ ಮಾಡುವ ಇನ್ನೊಬ್ಬ ವ್ಯಕ್ತಿಯನ್ನು ನಾನು ನೋಡಿಲ್ಲ. ಆತ ನಿಜಕ್ಕೂ ಮಾನ್​​ಸ್ಟರ್’ ಎಂದು ಕೊಂಡಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:02 pm, Sat, 8 August 26

Source link

ಕರ್ನಾಟಕ ಸಂಪುಟದಲ್ಲಿ ಮಹಿಳಾ ಸಚಿವರಿಲ್ಲ ಎಂದ ಕಿರಣ್ ರಿಜಿಜುಗೆ ಸಿಎಂ ಡಿಕೆ ಶಿವಕುಮಾರ್ ತಿರುಗೇಟು – Kannada News | CM DK Sivakumar hits back at Union Minister Kiren Rijiju over no woman in Karnataka cabinet remark

ಬೆಂಗಳೂರು, ಆಗಸ್ಟ್ 8: ಕರ್ನಾಟಕದ ಸಚಿವ ಸಂಪುಟದಲ್ಲಿ ಯಾವುದೇ ಮಹಿಳಾ ಸಚಿವರಿಲ್ಲ ಎಂಬ ವಿಷಯವಾಗಿ ಕೇಂದ್ರ ಸಚಿವ ಕಿರಣ್ ರಿಜಿಜು ಮಾಡಿದ ಟೀಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ (CM DK Shivakumar), “ಕಾಂಗ್ರೆಸ್ ಪಕ್ಷವು ಮಹಿಳಾ ಪ್ರಾತಿನಿಧ್ಯಕ್ಕೆ ಬದ್ಧವಾಗಿದೆ. ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು. ಸಂಸತ್ ಚುನಾವಣೆಯಲ್ಲಿ ನಾವು ಮಹಿಳೆಯರಿಗೆ ಎಷ್ಟು ಸೀಟುಗಳನ್ನು ನೀಡಿದ್ದೇವೆ ಎಂಬುದು ಬಿಜೆಪಿಯವರಿಗೆ ನೆನಪಿದೆ ಎಂದು ಭಾವಿಸುತ್ತೇನೆ. ಹಾಗಾಗಿ, ಕರ್ನಾಟಕದಲ್ಲಿ ನಾವು ಈ ಸಮಸ್ಯೆಯನ್ನು ಖಂಡಿತವಾಗಿಯೂ ಬಗೆಹರಿಸಲಿದ್ದೇವೆ. ಕೇಂದ್ರ ಸಚಿವರಾದ ಕಿರಣ್ ರಿಜಿಜು ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ” ಎಂದಿದ್ದಾರೆ. ಕರ್ನಾಟಕದ ಸಂಪುಟದಲ್ಲಿ 33 ಸಚಿವರಿದ್ದು, ಅವರಲ್ಲಿ ಒಬ್ಬರೂ ಮಹಿಳಾ ಸಚಿವರಿಲ್ಲ. ಇದಕ್ಕೆ ಬಿಜೆಪಿ ಟೀಕೆ ವ್ಯಕ್ತಪಡಿಸಿತ್ತು.

ಮಹಿಳಾ ಪ್ರಾಧಾನ್ಯತೆ ಮತ್ತು ಮೀಸಲಾತಿಯ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ್ದ ರಾಹುಲ್ ಗಾಂಧಿಗೆ ಲೇವಡಿ ಮಾಡಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು “ಮಹಿಳಾ ಮೀಸಲಾತಿ ವಿಧೇಯಕ್ಕೆ ಕಾಂಗ್ರೆಸ್ ಏಕೆ ವಿರೋಧಿಸುತ್ತಿದೆ? ಈಗ ಕಾಂಗ್ರೆಸ್​ನ ಮನಸು ಬದಲಾಗಿರಬಹುದು” ಎಂದಿದ್ದರು. ಹಾಗೇ, ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದ ಸಂಪುಟದಲ್ಲಿ ಯಾವುದೇ ಮಹಿಳಾ ಸಚಿವರಿಗೆ ಅವಕಾಶ ನೀಡಿಲ್ಲ ಎಂದು ಕೂಡ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ವಿಧೇಯಕದ ಕುರಿತು ರಾಹುಲ್ ಗಾಂಧಿ- ಸಚಿವ ಕಿರಣ್ ರಿಜಿಜು ನಡುವೆ ತೀವ್ರ ವಾಕ್ಸಮರ

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, “ಮಹಿಳಾ ಮೀಸಲಾತಿ ವಿಧೇಯಕವನ್ನು ತಂದವರು ನಾವು, ಅದನ್ನು ಅಂಗೀಕರಿಸಿದವರೂ ನಾವೇ. ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಆದ್ಯತೆ ನೀಡುವುದರಲ್ಲಿ ನಂಬಿಕೆ ಹೊಂದಿದೆ. ಖಂಡಿತವಾಗಿಯೂ ಸಂಪುಟದಲ್ಲಿ ಮಹಿಳೆಗೆ ಅವಕಾಶ ಸಿಗಲಿದೆ. ನಾವು ಮಹಿಳೆಯರಿಗೆ ಇನ್ನಷ್ಟು ಶಕ್ತಿ ತುಂಬಲಿದ್ದೇವೆ” ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಶ್​ ‘ಟಾಕ್ಸಿಕ್’ ಟ್ರೇಲರ್​ ನೋಡಿ ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ – Kannada News | Felt Like I Made the Film Myself: Shivarajkumar Praises Yash and ‘Toxic’ Trailer

ಬೆಂಗಳೂರು, ಆಗಸ್ಟ್​​ 08: ನಟ ಯಶ್ ಅಭಿನಯದ ಮತ್ತು ಗೀತು ಮೋಹನ್‌ದಾಸ್ ನಿರ್ದೇಶನದ ಬಹು ತಾರಾಗಣವಿರುವ ‘ಟಾಕ್ಸಿಕ್’ (Toxic) ಚಿತ್ರದ ಟ್ರೇಲರ್​ ಇಂದು ಬಿಡುಗಡೆ ಆಗಿದೆ. ಸ್ಯಾಂಡಲ್​ವುಡ್​ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಟ್ರೇಲರ್ ನೋಡಿ ಬಳಿಕ ಮಾತನಾಡಿದ ಶಿವಣ್ಣ, ‘ಅದ್ಭುತವಾಗಿ ಮೂಡಿಬಂದಿದೆ. ನಾನು ಕೂಡ ಸಿನಿಮಾ ನೋಡಲು ಕಾಯುತ್ತಿದ್ದೇನೆ. ನಾನೇ ಸಿನಿಮಾ ಮಾಡಿದಷ್ಟು ಸಂತೋಷವಾಯ್ತು. ಯಶ್​​ ಈ ಮಟ್ಟಕ್ಕೆ ಬೆಳೆದು ಇಷ್ಟು ದೊಡ್ಡ ಸಿನಿಮಾ ಮಾಡಿರುವುದು ಕನ್ನಡಿಗರಾಗಿ ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಯಶ್ ನನ್ನ ಸ್ವಂತ ಸಹೋದರ ಇದ್ದಂತೆ, ಅವರು ಬೆಳೆಯುತ್ತಿರುವುದನ್ನು ಕಂಡು ನನಗೆ ಸಂತೋಷವಾಯಿತು’ ಎಂದರು.

ಮತ್ತಷ್ಟು ಸಿನಿಮಾ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿಗೆ ಪಿತೃ ವಿಯೋಗ – Kannada News | Jorge Messi, Lionel Messi’s Father, Passes Away at 68: A Legacy of Support

ಫುಟ್ಬಾಲ್ ಜಗತ್ತಿನ ಶ್ರೇಷ್ಠ ಆಟಗಾರರ ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ ( Lionel Messi) ಅವರ ತಂದೆ ಜಾರ್ಜ್ ಮೆಸ್ಸಿ (Jorge Messi) 68 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಮೆಸ್ಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಜಾರ್ಜ್ ಮೆಸ್ಸಿ ಅವರ ನಿಧನವನ್ನು ಮೆಸ್ಸಿಯವರ ಬಾಲ್ಯದ ಕ್ಲಬ್, ನೆವೆಲ್ಸ್ ಓಲ್ಡ್ ಬಾಯ್ಸ್ ದೃಢಪಡಿಸಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಮೆಸ್ಸಿ

ಫಿಫಾ ವಿಶ್ವಕಪ್ ಸಮಯದಲ್ಲಿಯೇ ಮೆಸ್ಸಿ ತನ್ನ ತಂದೆಯ ಆರೋಗ್ಯದ ಬಗ್ಗೆ ತುಂಬಾ ಚಿಂತಿತರಾಗಿದ್ದರು. ವಿಶ್ವಕಪ್ ಸಮಯದಲ್ಲಿಯೇ ಮೆಸ್ಸಿ, ತಮ್ಮ ಕುಟುಂಬವು ಕಠಿಣ ಸಮಯವನ್ನು ಎದುರಿಸುತ್ತಿದೆ ಎಂಬುದನ್ನು ಉಲ್ಲೇಖಿಸಿದ್ದರು. ಆದರೆ ಅವರು ತಮ್ಮ ತಂದೆಯ ಸ್ಥಿತಿಯ ಬಗ್ಗೆ ಯಾವುದೇ ವಿವರಗಳನ್ನು ನೀಡಿರಲಿಲ್ಲ. ಇದಾದ ನಂತರ ಮೆಸ್ಸಿ ಕುಟುಂಬ ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ಜಾರ್ಜ್ ಮೆಸ್ಸಿ ಪ್ರಸ್ತುತ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿತ್ತು.

ಮಗನ ಯಶಸ್ಸಿನಲ್ಲಿ ಅಪ್ಪನ ಶ್ರಮ

ಮೆಸ್ಸಿಯನ್ನು ಯಶಸ್ವಿ ಫುಟ್ಬಾಲ್ ಆಟಗಾರನನ್ನಾಗಿ ಮಾಡುವಲ್ಲಿ ಅವರ ತಂದೆ ಜಾರ್ಜ್ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದರು. ಅಲ್ಲದೆ ಎರಡು ದಶಕಗಳಿಗೂ ಹೆಚ್ಚು ಕಾಲ ಮೆಸ್ಸಿ ಅವರ ಏಜೆಂಟ್ ಮತ್ತು ಸಲಹೆಗಾರರೂ ಆಗಿದ್ದರು, ಬಾರ್ಸಿಲೋನಾ, ಪಿಎಸ್‌ಜಿ ಮತ್ತು ಇಂಟರ್ ಮಿಯಾಮಿಗೆ ಪ್ರಮುಖ ಕ್ಲಬ್ ವರ್ಗಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅರ್ಜೆಂಟೀನಾದ ರೊಸಾರಿಯೋದಲ್ಲಿರುವ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಜಾರ್ಜ್, ಆರಂಭಿಕ ದಿನಗಳಲ್ಲಿ ಸ್ಥಳೀಯ ಕ್ಲಬ್‌ನಲ್ಲಿ ಮೆಸ್ಸಿಗೆ ತರಬೇತಿ ನೀಡಿಸಿದ್ದರು.

2026 ರ ಫಿಫಾ ವಿಶ್ವಕಪ್‌ನಲ್ಲಿ, ಲಿಯೋನೆಲ್ ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ ಫೈನಲ್ ತಲುಪುವಲ್ಲಿ ಯಶಸ್ವಿಯಾಯಿತು, ಆದರೆ ಪ್ರಶಸ್ತಿ ಪಂದ್ಯದಲ್ಲಿ ಸ್ಪೇನ್ ವಿರುದ್ಧ 1-0 ಅಂತರದಿಂದ ಸೋತಿತು. ವಿಶ್ವಕಪ್‌ನಲ್ಲಿ ಅಲ್ಜೀರಿಯಾ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಗೋಲು ಗಳಿಸಿದ ನಂತರ ಲಿಯೋನೆಲ್ ಮೆಸ್ಸಿ ತುಂಬಾ ಭಾವುಕರಾದರು. ಪಂದ್ಯದ ನಂತರ ಅಳುವುದಕ್ಕೆ ಕಾರಣವೇನೆಂದು ಕೇಳಿದಾಗ, ಮೆಸ್ಸಿ ನನ್ನ ಕಣ್ಣೀರಿಗೂ ಫುಟ್‌ಬಾಲ್‌ಗೂ ಯಾವುದೇ ಸಂಬಂಧವಿಲ್ಲ. ಆದರೆ, ಕಳೆದ ಕೆಲವು ದಿನಗಳು ನನಗೆ ತುಂಬಾ ಕಷ್ಟಕರವಾಗಿತ್ತು ಎಂದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:32 pm, Sat, 8 August 26

Source link

ಒಂದು ಪಾರ್ಟಿಯಿಂದ ಹುಟ್ಟಿತು ‘ಟಾಕ್ಸಿಕ್’ ಸಿನಿಮಾ: ನಿರ್ಮಾಪಕ ಹೇಳಿದ್ದೇನು? – Kannada News | Producer KVN Venkat talks about How did Toxic movie started

ಟಾಕ್ಸಿಕ್’ (Toxic) ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಯಶ್ ಸೇರಿದಂತೆ ಹಲವಾರು ಮಂದಿ ಚಿತ್ರತಂಡದ ಪ್ರಮುಖರು ಭಾಗವಹಿಸಿದ್ದರು. ಆರಂಭದಲ್ಲಿಯೇ ಸಿನಿಮಾದ ಬಗ್ಗೆ ಮಾತನಾಡಿದ ನಿರ್ಮಾಪಕ ಕೆವಿಎನ್​​ ಮಾಲೀಕ ವೆಂಕಟ್ ಅವರು ಚಿತ್ರತಂಡದ ಎಲ್ಲರಿಗೂ ಧನ್ಯವಾದ ಹೇಳಿದರು. ‘ಟಾಕ್ಸಿಕ್’ ಸಿನಿಮಾ ಆರಂಭ ಹೇಗಾಯ್ತು, ಯಶ್ ಅವರ ಗೆಳೆತನ ಸಿಕ್ಕಿದ್ದು ಹೇಗೆ ಇನ್ನೂ ಹಲವು ವಿಷಯಗಳ ಬಗ್ಗೆ ನಿರ್ಮಾಪಕ ವೆಂಕಟ್ ಮಾತನಾಡಿದರು.

ವೆಂಕಟ್ ಅವರು ಹೇಳಿದಂತೆ ‘ಟಾಕ್ಸಿಕ್’ ಸಿನಿಮಾ ಶುರುವಾಗಿದ್ದು ಒಂದು ಪಾರ್ಟಿಯಿಂದ ಅಂತೆ. ಪಾರ್ಟಿಯೊಂದಕ್ಕೆ ವೆಂಕಟ್ ಅವರು ಕರೆಯದೇ ಹೋಗಿದ್ದರಂತೆ. ಅಲ್ಲಿ ಯಶ್ ಅವರ ಪರಿಚಯ ಆಯ್ತಂತೆ. ವಿಶೇಷವೆಂದರೆ ವೆಂಕಟ್ ಅವರು ಕರೆಯದೇ ಹೋಗಿದ್ದ ಪಾರ್ಟಿ, ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬದ ಪಾರ್ಟಿ.

ರಾಧಿಕಾ ಅವರ ಹುಟ್ಟುಹಬ್ಬದ ಪಾರ್ಟಿಗೆ ಯಾರೋ ಗೆಳೆಯರನ್ನು ಭೇಟಿ ಮಾಡಲೆಂದು ವೆಂಕಟ್ ಹೋಗಿದ್ದರಂತೆ. ಆಗ ಕೆಲ ಸಮಯ ಯಶ್ ಅವರೊಟ್ಟಿಗೆ ವೆಂಕಟ್ ಅವರು ಮಾತನಾಡಿದ್ದು, ಅದೇ ಅವರಿಬ್ಬರ ಮೊದಲ ಭೇಟಿಯಂತೆ. ಮೊದಲ ಮಾತು-ಕತೆಯಲ್ಲೇ ಕನೆಕ್ಟ್ ಆದೆ ಎಂದ ವೆಂಕಟ್ ಅವರು. ಆ ನಂತರ ಹಲವು ಭಾರಿ ಭೇಟಿ ಆದೆವು, ಈಗ ಸಿನಿಮಾ ಮಾತ್ರವೇ ಅಲ್ಲದೆ, ಇನ್ನೂ ಬೇರೆ ಬೇರೆ ವಿಷಯಗಳನ್ನು ಒಟ್ಟಿಗೆ ಪಾರ್ಟರ್​​ ಆಗಿ ಮಾಡುತ್ತಿದ್ದೇವೆ’ ಎಂದರು ವೆಂಕಟ್.

ಇದನ್ನೂ ಓದಿ:‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ

ಅವರಷ್ಟು ಸಿನಿಮಾ ಬಗ್ಗೆ ಫ್ಯಾಷನ್ ಇರುವ, ಕಷ್ಟ ಪಟ್ಟು ಕೆಲಸ ಮಾಡುವ, ಶಿಸ್ತಿನಿಂದ ಕೆಲಸ ಮಾಡುವ, ದೂರಾಲೋಚನೆಯುಳ್ಳ ವ್ಯಕ್ತಿಯನ್ನು ನಾನು ಕಂಡಿಲ್ಲ. ಅವರಿಲ್ಲದೆ ಈ ಸಿನಿಮಾ ಆಗುತ್ತಿರಲಿಲ್ಲ. ಅವರ ವೃತ್ತಿಪರತೆ, ಮೌಲ್ಯಗಳು, ಎಲ್ಲವನ್ನೂ ಅದ್ಭುತವಾಗಿ ಮತ್ತು ಅತ್ಯದ್ಭುತವಾಗಿಯೇ ಮಾಡಬೇಕು ಎಂಬ ಅವರ ಹಂಬಲ ನನ್ನನ್ನು ವಿಸ್ಮಿತಗೊಳಿಸಿತು. ಈ ಸಿನಿಮಾಕ್ಕೆ ಕತೆ ಬರೆಯುವ ಜೊತೆಗೆ ಸಹ ನಿರ್ಮಾಣ ಮಾಡಿದ್ದಾರೆ. ಅವರು ಸೆಟ್​​ನಲ್ಲಿ ಇದ್ದಾಗ ಎಲ್ಲವೂ ಸರಿಯಾಗಿ ಹೋಗುತ್ತದೆ. ಏನಾದರೂ ಸರಿಯಿಲ್ಲ ಎಂದರೆ ಅವರು ಅದನ್ನು ಸರಿ ಮಾಡುತ್ತಾರೆ. ಒಬ್ಬ ನಿರ್ಮಾಪಕನಿಗೆ ಇದಕ್ಕಿಂತಲೂ ಇನ್ನೇನು ಬೇಕು. ಇದೊಂದು ನೆನಪಿಟ್ಟಿಕೊಳ್ಳುವಂಥಾ ಜರ್ನಿ ನನ್ನ ಪಾಲಿಗೆ. ‘ಟಾಕ್ಸಿಕ್’ ಜನರೇಷನ್​​ಗಳ ಕಾಲ ನೆನಪುಳಿಯುವ ಸಿನಿಮಾ ಆಗಲಿದೆ ಎಂಬ ನಂಬಿಕೆ ನನಗೆ ಇದೆ. ಇದು ಕೇವಲ ಎಂಗೇಜಿಂಗ್ ಮತ್ತು ಎಂಟರ್ಟೈನ್​​ ಮಾಡುವ ಸಿನಿಮಾ ಅಲ್ಲ ಇದು ನಿಮ್ಮ ನಾಡಿ ಮಿಡಿತವನ್ನೇ ಬದಲಾಯಿಸುತ್ತದೆ’ ಎಂದಿದ್ದಾರೆ ವೆಂಕಟ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಏಷ್ಯಾಕಪ್ ಸಮೀಪಿಸುತ್ತಿರುವ ಬೆನ್ನಲ್ಲೇ ಗಾಯಕ್ಕೆ ತುತ್ತಾದ ಜೆಮಿಮಾ ರೊಡ್ರಿಗಸ್

Source link

ಬಿಡದಿ ಟೌನ್‌ಶಿಪ್‌ ವಿವಾದಕ್ಕೆ ಮತ್ತೊಂದು ತಿರುವು: ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆ – Kannada News | Committee Formed Under the Leadership of Justice Guhanathan Narendar for Comprehensive Review of Bidadi Township Opinions

ಬೆಂಗಳೂರು, (ಆಗಸ್ಟ್ 08): ಬಿಡದಿ ಟೌನ್‌ಶಿಪ್‌ ವಿವಾದ (Bidadi Township) ಮತ್ತೊಂದು ತಿರುವು ಪಡೆದುಕೊಂಡಿದೆ. ಟೌನ್ ಶಿಪ್ ಗೆ ಬಿಜೆಪಿ (BJP) ಹಾಗೂ ಜೆಡಿಎಸ್  (JDS)ಬಲವಾಗಿ ವಿರೋಧಿಸಿದ್ದು, ಆಗಸ್ಟ್ 9 ಮತ್ತು 10ರಂದು ಪಾದಯಾತ್ರೆ ನಡೆಸಲು ತೀರ್ಮಾನಿಸಿವೆ. ಇದರ ಮಧ್ಯೆ ಇದೀಗ ಡಿಕೆ ಶಿವಕುಮಾರ್ (Dk Shivakumar) ಸರ್ಕಾರ, ಬಿಡದಿ ಟೌನ್‌ಶಿಪ್‌ ಬಗ್ಗೆ ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆ ಮಾಡಿದ್ದು, 30 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಈ ಯೋಜನೆಗೆ ಯಾರಿಂದಲೂ ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಿಎಂ ಡಿಕೆ ಶಿವಕುಮಾರ್, ಸಮಿತಿಯು ಸದರಿ ಯೋಜನೆಯನ್ನು ಕಾನೂನಾತ್ಮಕ, ಮಾನವೀಯತೆ ಹಾಗೂ ಸಮಗ್ರ ಅಭಿವೃದ್ದಿಯ ಚೌಕಟ್ಟಿನಲ್ಲಿ ವಿಶ್ಲೇಷಣೆಗೊಳಪಡಿಸಿ ತನ್ನ ಶಿಫಾರಸ್ಸನ್ನು ನೀಡಲಿದೆ ಎಂದಿದ್ದಾರೆ. ಈ ಮೂಲಕ ರೈತರ ವಿರೋಧ ಹಾಗೂ ವಿಪಕ್ಷಗಳ ಪಾದಯಾತ್ರೆ ನಡುವೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಸಮಿತಿಯಲ್ಲಿ ಯಾರ್ಯಾರು ಇದ್ದಾರೆ?

ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿಯಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಪ್ರಸನ್ನಕುಮಾರ್ ಸದಸ್ಯರಾಗಿದ್ದು, ಈ ಸಮತಿ 30 ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ.

ಇದನ್ನೂ ನೋಡಿ: ಬಿಡದಿ ಟೌನ್‌ಶಿಪ್ ವಿರುದ್ಧ ಸಮರಕ್ಕೆ ಬಿಜೆಪಿ, ಜೆಡಿಎಸ್ ಸಜ್ಜು: ಬೃಹತ್ ಪಾದಯಾತ್ರೆ ನಡೆಸಲು ನಿರ್ಧಾರ

ಈ ಬಗ್ಗೆ ಟ್ವೀಟ್ ಮಾಡಿರುವ ಡಿಕೆ ಶಿವಕುಮಾರ್, ಸಮಿತಿಯು ಸದರಿ ಯೋಜನೆಯನ್ನು ಕಾನೂನಾತ್ಮಕ, ಮಾನವೀಯತೆ ಹಾಗೂ ಸಮಗ್ರ ಅಭಿವೃದ್ದಿಯ ಚೌಕಟ್ಟಿನಲ್ಲಿ ವಿಶ್ಲೇಷಣೆಗೊಳಪಡಿಸಿ ತನ್ನ ಶಿಫಾರಸ್ಸನ್ನು ನೀಡಲಿದೆ. 2006ನೇ ಸಾಲಿನಲ್ಲಿ ಬಿಡದಿ ಬಳಿ ಸಮಗ್ರ ಉಪ ನಗರವನ್ನು ಅಭಿವೃದ್ಧಪಡಿಸಲು ತೀರ್ಮಾನಿಸಲಾಗಿತ್ತು. ಇತ್ತೀಚೆಗೆ ಬೆಂಗಳೂರಿನ ಸಮೀಪ ಬಂಡವಾಳ ಹೂಡಿಕೆಗೆ ಬೇಡಿಕೆ ಹೆಚ್ಚಾಗಿದ್ದು, ನನೆಗುದಿಗೆ ಬಿದ್ದಿದ್ದ ಬಿಡದಿ ಸಮಗ್ರ ಉಪನಗರ ಯೋಜನೆಯನ್ನು ಜನವಸತಿ ಪ್ರದೇಶಗಳ ಕನಿಷ್ಟ ಸ್ಥಳಾಂತರ ಮತ್ತು ಭೂಮಾಲೀಕರಿಗೆ ಉತ್ತಮ ಮೌಲ್ಯ ಒದಗಿಸುವ ಆಶಯದೊಂದಿಗೆ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯನ್ನು ಮುಂದುವರೆಸಲು ಸರ್ಕಾರದ ತೀರ್ಮಾನ ಎಂದಿದ್ದಾರೆ.

ಯೋಜನೆಯನ್ನು ಜನಸ್ನೇಹಿಯಾಗಿ ಜಾರಿಗೊಳಿಸಲು ಸಾರ್ವಜನಿಕರ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಮನ್ನಣೆ ನೀಡುವುದಾಗಿ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಜನರ ಆಶೋತ್ತರಗಳನ್ನು ಗೌರವಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆಯನ್ನು ಮತ್ತಷ್ಟು ಉತ್ತಮವಾಗಿ ರೂಪಿಸುವುದು ಸರ್ಕಾರದ ಆಶಯವಾಗಿದ್ದು, ಈ ಹಿನ್ನೆಲೆಯಲ್ಲಿ ಸಮಿತಿ ರಚನೆಯನ್ನು ಮಾಡಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’: ತಲೆ ತಗ್ಗಿಸೋಕೆ ಬಿಡಲ್ಲ, ಹೆಮ್ಮೆಯಿಂದ ಸಿನಿಮಾ ನೋಡಿ ಎಂದ ಯಶ್ – Kannada News | Yash speech at Toxic movie trailer release event is here

ನಾನು ಹಾಗೂ ಈ ‘ಟಾಕ್ಸಿಕ್’ (Toxic) ಸಿನಿಮಾ ಇಂದು ಈ ಹಂತಕ್ಕೆ ಬಂದಿರುವುದಕ್ಕೆ ಕರ್ನಾಟಕದ ಜನ ಕಾರಣ. ‘ಟಾಕ್ಸಿಕ್’ ಸಿನಿಮಾದ ನಿರ್ಮಾಣಕ್ಕೆ ನೇರ ಕಾರಣವೇ ಅವರು. ನಾನು ಪ್ರತಿ ಬಾರಿ ಸಿನಿಮಾ ಮಾಡಿದಾಗಲೂ ನನ್ನ ಬೆನ್ನು ತಟ್ಟಿ, ಯಶಸ್ಸು ನೀಡಿದಾಗೆಲ್ಲ, ನಾನು ಇನ್ನೂ ಒಳ್ಳೆಯ ಸಿನಿಮಾ ಮಾಡಬೇಕು ಎಂದು ಮುನ್ನಡೆಯುತ್ತಿದ್ದೆ. ಹಾಗೆಯೇ ಮುನ್ನಡೆದು ಮುನ್ನಡೆದು ಈಗ ‘ಟಾಕ್ಸಿಕ್’ ವರೆಗೂ ಬಂದಿದ್ದೀನಿ. ಇದು ನನ್ನ ಹೊಸ ಸಿನಿಮಾ ಆದರೆ ಇದರ ಇಂಧನ ನನ್ನ ಈ ಹಿಂದಿನ ಸಿನಿಮಾಗಳಿಗೆ ನೀವು ನೀಡಿರುವ ಪ್ರೀತಿ’ ಎಂದು ನಟ ಯಶ್ ಹೇಳಿದರು.

ಎಎಂಬಿ ಮಾಲ್​​ನಲ್ಲಿ ಇಂದು (ಆಗಸ್ಟ್ 08) ನಡೆದ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇವೆಂಟ್​​ನಲ್ಲಿ ಸುದೀರ್ಘವಾಗಿ ಮಾತನಾಡಿದ ಯಶ್, ಸಿನಿಮಾದ ಬಗ್ಗೆ, ಸಿನಿಮಾ ತಂಡದ ಬಗ್ಗೆ, ತಂತ್ರಜ್ಞರ ಬಗ್ಗೆ ಹಾಗೂ ಒಟ್ಟಾರೆ ಸಿನಿಮಾ ಮಾಡುವಾಗ ಎದುರಿಸಿದ ಸಮಸ್ಯೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಮಾತನಾಡಿದರು.

ನಿಮ್ಮ ಆಶೀರ್ವಾದ ಇರಲಿ, ಯಶ್ ಮೇಲೆ ನಂಬಿಕೆ ಇರಲಿ. ನಿಮ್ಮ ತಲೆ ತಗ್ಗಿಸೋಕೆ ಬಿಡಲ್ಲ. ಹೆಮ್ಮೆಯಿಂದ ಸಿನಿಮಾ ನೋಡಿ. ಹೆಮ್ಮೆಯಿಂದ ನೋಡುವಂಥಹ ಸಿನಿಮಾ ಮಾಡಿದ್ದೀವಿ ಎಂದ ಯಶ್, ಇಷ್ಟೋಂದು ಕಲಾವಿದರು ಈ ಸಿನಿಮಾಕ್ಕೆ ಒಂದಾಗಿದ್ದಾರೆ. ಇವರೆಲ್ಲ ಒಂದಾಗಿರುವುದು ಭಾರತೀಯ ಸಿನಿಮಾವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದು. ನಾವು ಕನ್ನಡ ಮತ್ತಿಉ ಇಂಗ್ಲೀಷ್​​ನಲ್ಲಿ ಸಿನಿಮಾ ಶೂಟ್ ಮಾಡಿದ್ದೇವೆ, ನಾನು ಹಳ್ಳಿಯವನು, ನನ್ನ ಇಂಗ್ಲೀಷ್ ಎಷ್ಟು ಕೆಟ್ಟದಾಗಿತ್ತು ಎಂದು ಎಲ್ಲರಿಗೂ ಗೊತ್ತು, ಆದರೆ ಅಂದುಕೊಂಡರೆ ಸಾಧಿಸಲು ಸಾಧ್ಯ, ಅದನ್ನೇ ಈಗ ಮಾಡಿದ್ದೇವೆ’ ಎಂದರು ಯಶ್.

ಇದನ್ನೂ ಓದಿ:ಬಿಡುಗಡೆ ಆಯ್ತು ‘ಟಾಕ್ಸಿಕ್’ ಟ್ರೈಲರ್, ಇದು ಸಾಮಾನ್ಯ ಸಿನಿಮಾ ಅಲ್ಲ ಬಿಡಿ

‘ದಾರಿ ಯಾವುದಾದರೂ ಆಗಬಹುದು ಗುರಿ ಮುಟ್ಟಬೇಕು, ಹೋರಾಟಕ್ಕೆ ಹೆದರಬಾರದು, ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು. ಯುವಪೀಳಿಗೆಗೆ ಈಗ ಸಾಕಷ್ಟು ಗೊಂದಲಗಳು ಇವೆ, ಅದೆಲ್ಲದರ ಪ್ರತಿನಿಧಿತ್ವ ಈ ಸಿನಿಮಾನಲ್ಲಿ ಇರಲಿದೆ. ಇದು ಸಾಮಾನ್ಯ ಕಮರ್ಶಿಯಲ್ ಸಿನಿಮಾ ಅಲ್ಲ. ಇದು ಮನುಷ್ಯರಿಗೆ ಬೇಕಾದ ಸಿನಿಮಾ, ಮನುಷ್ಯರನ್ನು ಬಾಳ್ವೆಯಲ್ಲಿ ಬೇಕಾದ ಹಲವು ಅಂಶಗಳು ಈ ಸಿನಿಮಾನಲ್ಲಿವೆ’ ಎಂದರು ಯಶ್.

‘ಟಾಕ್ಸಿಕ್’ ಸಿನಿಮಾ ಒಂದು ಕಮರ್ಶಿಯಲ್ ಪ್ಯಾಕೇಜ್ ಅಲ್ಲ, ಇದೊಂದು ಬಹಳ ಭಿನ್ನವಾದ ಕಾಂಬಿನೇಷನ್. ‘ಕೆಜಿಎಫ್’ ಬಳಿಕ ಕಮರ್ಶಿಯಲ್ ಹಾದಿ ಹಿಡಿಯುವ ಅವಕಾಶ ಇತ್ತು. ಆದರೆ ಭಿನ್ನವಾದುದನ್ನು ಮಾಡಬೇಕು ಎಂದು ನಿರ್ಧರಿಸಿದ್ದೆ. ಅದೇ ಸಮಯದಲ್ಲಿ ಗೀತು ಮೋಹನ್​​ದಾಸ್ ಸಿಕ್ಕರು. ಅವರಲ್ಲಿ ಅದ್ಭುತ ಫ್ಯಾಷನ್ ಇತ್ತು, ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಬೇಕು ಎಂಬ ಹಠ ಇತ್ತು. ಅವರು ತಮ್ಮ ಅಮೂಲ್ಯ ಸಮಯ, ಕುಟುಂಬವನ್ನು ತ್ಯಾಗ ಮಾಡಿದ್ದಾರೆ. ಆದರೆ ಅವರ ಪ್ರತಿಭೆ ಎಂಥಹದ್ದು, ಅವರ ತ್ಯಾಗ ಎಂಥಹದ್ದು ಎಂಬುದನ್ನು ನೀವೆಲ್ಲ ತೆರೆಯ ಮೇಲೆ ನೋಡುತ್ತೀರ’ ಎಂದರು ಯಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾಯ್ ಮಾತು – Kannada News | Akshay Oberoi Talks About ‘Toxic’, Yash and Geetu Mohandas at Trailer Launch Event

ಬೆಂಗಳೂರು, ಆಗಸ್ಟ್​ 08: ನಟ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಅಕ್ಷಯ್ ಒಬೆರಾಯ್ (Akshay Oberoi), ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ವೇಳೆ ಮಾತನಾಡಿದ ಅವರು, ‘ಟಾಕ್ಸಿಕ್ ಟ್ರೈಲರ್ ಅದ್ಭುತ. ಇಂತಹ ದೊಡ್ಡ ತಾರಾಗಣವಿರುವ ಪ್ರಾಜೆಕ್ಟ್‌ನ ಭಾಗವಾಗಿರುವುದು ಹೆಮ್ಮೆಯ ಸಂಗತಿ’ ಎಂದರು. ಇನ್ನು ‘ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಕಾರ್ಯವೈಖರಿ ಮತ್ತು ನಟ ಯಶ್ ಅವರ ನಟನಾ ಶಕ್ತಿಯಿಂದ ತಮಗೆ ವೈಯಕ್ತಿಕವಾಗಿ ಹಾಗೂ ವೃತ್ತಿಜೀವನದಲ್ಲಿ ಸಾಕಷ್ಟು ಕಲಿಯಲು ಸಿಕ್ಕಿದೆ. ಈ ಚಿತ್ರದಲ್ಲಿ ನಟಿಸಿರುವುದು ನನ್ನ ಜೀವನದ ಅತ್ಯಂತ ಸ್ಮರಣೀಯ ಅನುಭವಗಳಲ್ಲಿ ಒಂದು’ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಸಿನಿಮಾ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಯುಪಿಐ ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ – Kannada News | UPI Payments to Remain Free for Consumers Government Clarifies

ನವದೆಹಲಿ, ಆಗಸ್ಟ್ 8: ಗ್ರಾಹಕರಿಗೆ ಯುಪಿಐ (UPI) ಪಾವತಿ ಸಂಪೂರ್ಣ ಉಚಿತವಾಗಿರಲಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಎಲ್ಲಾ ವಹಿವಾಟುಗಳು ಉಚಿತವಾಗಿಯೇ ಮುಂದುವರಿಯಲಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಯುಪಿಐ ಮೂಲಕ ಪಾವತಿ ಮಾಡುವಾಗ ಗ್ರಾಹಕರು ಯಾವುದೇ ವಹಿವಾಟು ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಬಹುತೇಕ ವರ್ತಕರ ವಹಿವಾಟುಗಳು ಸಹ ಸಂಪೂರ್ಣ ಉಚಿತವಾಗಿ ಉಳಿಯಲಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಒಂದು ವೇಳೆ ಎಂಡಿಆರ್ (MDR) ಶುಲ್ಕವನ್ನು ವಿಧಿಸಿದರೂ, ಅದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸುವ ಸಣ್ಣ ಪ್ರಮಾಣದ ವರ್ತಕರಿಗೆ ಮಾತ್ರ ಅನ್ವಯಿಸಲಿದೆ. ಆ ಮೊತ್ತವೂ ಬಹಳ ಕಡಿಮೆ ಇರಲಿದೆ ಎಂದು ಸರ್ಕಾರ ಖಚಿತಪಡಿಸಿದೆ.

ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆಗೆ ತರಲಾದ ತಿದ್ದುಪಡಿಯು ಯುಪಿಐ ವ್ಯವಸ್ಥೆಯ ದೀರ್ಘಕಾಲೀನ ಸುಸ್ಥಿರತೆ, ತಾಂತ್ರಿಕ ಪ್ರಗತಿ ಮತ್ತು ಹೊಸ ಮಾದರಿಯ ಸೈಬರ್ ಅಪಾಯಗಳನ್ನು ಎದುರಿಸುವ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ವಹಿವಾಟುಗಳ ಪ್ರಮಾಣ ಬೆಳೆದಂತೆ ಸೈಬರ್ ಭದ್ರತೆ, ವಂಚನೆ ತಡೆಗಟ್ಟುವಿಕೆ, ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳಲ್ಲಿ ನಿರಂತರ ಹೂಡಿಕೆ ಅಗತ್ಯವಾಗಿದೆ. ಭಾರತದ ಡಿಜಿಟಲ್ ಪಾವತಿ ಮೂಲಸೌಕರ್ಯದ ಪ್ರಮುಖ ಭಾಗವಾಗಿ ಯುಪಿಐ ಬೆಳೆಯುತ್ತಿರುವ ಮಹತ್ವವನ್ನು ಸರ್ಕಾರ ಎತ್ತಿಹಿಡಿದಿದೆ. ಕಳೆದ ತಿಂಗಳು ಒಂದರಲ್ಲೇ ಯುಪಿಐ ಮೂಲಕ 2,366 ಕೋಟಿ ವಹಿವಾಟುಗಳ ನಡೆದು, 29.9 ಲಕ್ಷ ಕೋಟಿ ರೂ. ಮೊತ್ತದ ಪಾವತಿಯಾಗಿದೆ. ಪ್ರಸ್ತುತ ಯುಪಿಐ ಜಗತ್ತಿನ 11 ವಿದೇಶಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ಯುಪಿಐ ಬಳಸಲು ಶುಲ್ಕ ಪಾವತಿಸಬೇಕೇ? ಹಲವು ವದಂತಿಗಳಿಗೆ ಇಲ್ಲಿದೆ ಸ್ಪಷ್ಟನೆ

ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹಣ ವರ್ಗಾವಣೆ ಮಾಡುವ ಎಲ್ಲಾ ವಹಿವಾಟುಗಳು ಎಂದಿನಂತೆ ಉಚಿತವಾಗಿಯೇ ಇರಲಿವೆ. ಹೆಚ್ಚಿನ ಪ್ರಮಾಣದ ವರ್ತಕರ ವಹಿವಾಟುಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಒಂದು ವೇಳೆ ಎಂಡಿಆರ್ ಶುಲ್ಕವನ್ನು ವಿಧಿಸಿದರೂ, ಅದು ನಿರ್ದಿಷ್ಟ ಪರಿಮಿತಿಗಿಂತ ಹೆಚ್ಚಿನ ವಹಿವಾಟು ನಡೆಸುವ ಶೇಕಡಾವಾರು ತೀರ ಕಡಿಮೆ ಪ್ರಮಾಣದ ದೊಡ್ಡ ವರ್ತಕರಿಗೆ ಮಾತ್ರ ಅನ್ವಯಿಸಲಿದೆ. ಈ ಶುಲ್ಕವೂ ಸಹ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಎಂಡಿಆರ್‌ಗಿಂತ ಅತ್ಯಂತ ಕಡಿಮೆಯಿರಲಿದೆ.

ಇದನ್ನೂ ಓದಿ: ಯುಪಿಐ ಪೇಮೆಂಟ್​ಗೆ ಎಂಡಿಆರ್ ಶುಲ್ಕ ಇದ್ದರೆ ಯಾರು ಭರಿಸಬೇಕು? ಆರ್​ಬಿಐ ಗವರ್ನರ್ ಹೇಳಿದ್ದಿದು

ಪಿಎಸ್‌ಎಸ್ ಕಾಯ್ದೆ ತಿದ್ದುಪಡಿ ಏಕೆ?:

ಯುಪಿಐ ದಿನೇ ದಿನೇ ತೀವ್ರವಾಗಿ ಬೆಳೆಯುತ್ತಿದ್ದು, ಜುಲೈ 2026 ಒಂದರಲ್ಲೇ 2,366 ಕೋಟಿ ವಹಿವಾಟುಗಳ ಮೂಲಕ 29.9 ಲಕ್ಷ ಕೋಟಿ ರೂಪಾಯಿಗಳ ಪಾವತಿ ನಡೆದಿದೆ. ಇಷ್ಟೊಂದು ಬೃಹತ್ ಮಟ್ಟದ ವ್ಯವಸ್ಥೆಗೆ ಸೈಬರ್ ಭದ್ರತೆ, ವಂಚನೆ ತಡೆಗಟ್ಟುವಿಕೆ ಮತ್ತು ತಾಂತ್ರಿಕ ಮೂಲಸೌಕರ್ಯಗಳನ್ನು ಆಧುನಿಕಗೊಳಿಸಲು ಖಾಸಗಿ ಕಂಪನಿಗಳ ಹೂಡಿಕೆ ಹಾಗೂ ಸ್ವಯಂ-ಸುಸ್ಥಿರ ಆದಾಯ ಮಾದರಿಯ ಅಗತ್ಯವಿದೆ. ಕೇವಲ ಸರ್ಕಾರಿ ಸಬ್ಸಿಡಿಗಳ ಮೇಲೆ ಆಧರಿಸುವುದು ಭವಿಷ್ಯದ ಬೆಳವಣಿಗೆಗೆ ಸಾಲದು ಎಂಬ ಕಾರಣಕ್ಕೆ ಈ ತಿದ್ದುಪಡಿ ತರಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version