ಕನ್ನಡದಲ್ಲಿ ಪ್ರಾಪರ್ಟಿ ಕಾಮಿಡಿ ಮೊದಲು ಶುರು ಮಾಡಿದ್ದು ಗಿಲ್ಲಿ ಅಲ್ಲ, ಹಾಗಿದ್ರೆ? – Kannada News | Not Gilli Nata Vishnuvardhan Is The first Person to Do a Property Comedy

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ (Gilli Nata) ಅವರು ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅವರು ಈ ಮೊದಲು ಪ್ರಾಪರ್ಟಿ ಕಾಮಿಡಿ ಮೂಲಕ ಗಮನ ಸೆಳೆದರು. ಬಿಗ್ ಬಾಸ್​​ ಅಲ್ಲಿ ಅವರು ಈ ಬಗ್ಗೆ ಅಷ್ಟಾಗಿ ಮಾತನಾಡಿಲ್ಲ. ಪ್ರಾಪರ್ಟಿ ಕಾಮಿಡಿ ಮಾಡಿಯೇ ಇಲ್ಲ ಎಂದರೂ ತಪ್ಪಾಗಲಾರದು. ಈಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪ್ರಾಪರ್ಟಿ ಕಾಮಿಡಿ ಮೊದಲು ಮಾಡಿದವರು ಯಾರು ಎಂಬುದನ್ನು ಹೇಳಲಾಗಿದೆ. ಹಾಗಾದರೆ, ಗಿಲ್ಲಿ ನಟ ಅವರಿಗಿಂತ ಮೊದಲು ಪ್ರಾಪರ್ಟಿ ಕಾಮಿಡಿ ಮಾಡಿದ್ದು ಯಾರು ಎಂಬುದನ್ನು ತಿಳಿಯೋಣ.

ಬಿಗ್ ಬಾಸ್​​ಗಿಂತ ಮೊದಲು ಗಿಲ್ಲಿ ನಟ ಅವರು ಪ್ರಾಪರ್ಟಿ ಕಾಮಿಡಿ ಮಾಡುತ್ತಿದ್ದರು. ಅವರು ಜೀ ಕನ್ನಡದ ವೇದಿಕೆ ಮೇಲೆ ಅನೇಕ ಬಾರಿ ಪ್ರಾಪರ್ಟಿ ಕಾಮಿಡಿ ಮಾಡಿದ್ದರು. ಪ್ರಾಪರ್ಟಿ ಕಾಮಿಡಿ ಎಂದರೆ ಎರಡು ವಸ್ತುಗಳನ್ನು ಇಟ್ಟುಕೊಂಡು ಅಥವಾ ಎರಡು ಶಬ್ದ ಇಟ್ಟುಕೊಂಡು ಅದಕ್ಕೆ ಹೊಸ ಅರ್ಥವನ್ನು ನೀಡೋದು. ಈ ರೀತಿಯ ಕಾಮಿಡಿಯನ್ನು ಗಿಲ್ಲಿ ಸಾಕಷ್ಟು ಬಾರಿ ಮಾಡಿದ್ದಾರೆ. ಈ ರೀತಿ ಮೊದಲು ಮಾಡಿದ್ದು ವಿಷ್ಣುವರ್ಧನ್ ಅವರು.

ವೈರಲ್ ವಿಡಿಯೋದಲ್ಲಿ ಗಿಲ್ಲಿಯ ಪ್ರಾಪರ್ಟಿ ಕಾಮಿಡಿಯನ್ನು ತೋರಿಸಲಾಗಿದೆ. ಅವರಿಗಿಂತ ಮೊದಲು ಈ ರೀತಿ ಕಾಮಿಡಿ ಮಾಡಿದ್ದು ವಿಷ್ಣುವರ್ಧನ್ ಎಂದು ತೋರಿಸಲಾಗಿದೆ. ಸಿನಿಮಾ ಒಂದರಲ್ಲಿ ದೋಸೆ ಹಾಗೂ ಈರುಳ್ಳಿಯನ್ನು ತಂದಿಟ್ಟು ಅದರಲ್ಲಿಯೇ ಅವರು ಪ್ರಾಪರ್ಟಿ ಕಾಮಿಡಿ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿತ್ತು. ಅನೇಕರು ಇದನ್ನು ಒಪ್ಪಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಪ್ರಾಪರ್ಟಿ ಕಾಮಿಡಿ ಸಾಕಷ್ಟು ಬಳಕೆ ಆಗುತ್ತಿತ್ತು.

ಇದನ್ನೂ ಓದಿ: ರಘು ಅವಕಾಶವಾದಿನಾ? ಇನ್​​ಸ್ಟಾ ಅನ್​ಫಾಲೋ ಮಾಡಿದ ಹಿಂದಿನ ಕಾರಣ ಹೇಳಿದ ಗಿಲ್ಲಿ ನಟ

ಗಿಲ್ಲಿ ನಟ ಅವರು ಸದ್ಯ ವಿವಿಧ ಉತ್ಸವಗಳಲ್ಲಿ ಭಾಗಿ ಆಗುತ್ತಿದ್ದಾರೆ. ಸಿನಿಮಾ ನಿರ್ದೇಶನ ಮಾಡುವ ಆಲೋಚನೆ ಅವರಿಗೆ ಇದೆ. ಈ ವಿಷಯದಲ್ಲಿ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅವರು ಇನ್​​ಸ್ಟಾದಲ್ಲಿ 2 ಮಿಲಿಯನ್​ಗೂ ಅಧಿಕ ಹಿಂಬಾಲಕರನ್ನು ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ನಾನು ಸಾವಿಗಾಗಿ ಕೋರಿದೆ’; ಡಾರ್ಲಿಂಗ್ ಕೃಷ್ಣ ಸಿನಿಮಾ ನಟಿಯ ತಿಹಾರ್ ಜೈಲು ಅನುಭವ – Kannada News | Sandeepa Virk Tihar Jail Nightmare: I Prayed for Death Actress’s Ordeal Recounted

ನಟಿ ಹಾಗೂ ಸೋಶಿಯಲ್ ಮೀಡಿಯಾ ಇನ್​​ಫ್ಲುಯೆನ್ಸರ್ ಸಂದೀಪಾ ವಿರ್ಕ್ ಅವರು ಇತ್ತೀಚೆಗೆ ನಾಲ್ಕು ತಿಂಗಳು ತಿಹಾರ್ ಜೈಲಿನಲ್ಲಿ ಕಳೆದು ಬಂದಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಅವರಿಗೆ ಸಾಕಷ್ಟು ತೊಂದರೆಯನ್ನುಂಟು ಮಾಡಿದೆ. ದೆಹಲಿ ಹೈಕೋರ್ಟ್ 2025ರ ಡಿಸೆಂಬರ್​ ಅಲ್ಲಿ ಜಾಮೀನು ನೀಡಿತು. ಈಗ ಅವರು ತಿಹಾರ್ ಜೈಲಿನ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

‘ನನ್ನ ಶತ್ರುವಿಗೂ ತಿಹಾರ್ ಜೈಲಿಗೆ ಹೋಗಲಿ ಎಂದು ನಾನು ಬಯಸುವುದಿಲ್ಲ. ನಾನು ಮೊದಲ ಬಾರಿಗೆ ಅಲ್ಲಿಗೆ ಹೋದಾಗ, ನಾನು ಈ ಸ್ಥಳಕ್ಕೆ ಅರ್ಹನಲ್ಲ ಎಂದು ಹೇಳಿಕೊಂಡೆ. ಜೀವನದಲ್ಲಿ ಏನಾದರೂ ಸಂಭವಿಸಿದರೆ ಕರ್ಮ ಎನ್ನುತ್ತಾರೆ. ಬಹುಶಃ ನಾನು ಹಿಂದಿನ ಜನ್ಮದಲ್ಲಿ ತಿಳಿದೋ ಅಥವಾ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡಿರಬಹುದು. ಅದಕ್ಕೆ ಹೀಗೆ ಆಗುತ್ತಿದೆ ಎಂದು ಮೊದಲ ದಿನ ನಾನು ಶೌಚಾಲಯಕ್ಕೆ ಹೋದಾಗ ನನಗೆ ಅನಿಸಿತು’ ಎಂದು ಅವರು ಹೇಳಿದ್ದಾರೆ.

‘ಸಾವು ಬಂದು ನನ್ನನ್ನು ಕರೆದುಕೊಂಡು ಹೋಗಲಿ ಎಂದು ನಾನು ಪ್ರಾರ್ಥಿಸುತ್ತಿದ್ದೆ. ನಾನು ಜೈಲಿನಲ್ಲಿರುವಾಗ ಪಾಲಕರು ನಮ್ಮನ್ನು ನೋಡಲು ಬರೋದು ನಿಜಕ್ಕೂ ಕೆಟ್ಟ ಭಾವನೆ . ನನ್ನಿಂದಾಗಿ ಅವರು ಅಲ್ಲಿಗೆ ಬರಬೇಕಾಗಿ ಬಂದಿದ್ದಕ್ಕಾಗಿ ನಾನು ಅವರಲ್ಲಿ ಕ್ಷಮೆಯಾಚಿಸಿದೆ. ನಾನು ಹೇಗೆ ಎಂದು ಅವರಿಗೆ ತಿಳಿದಿದ್ದರಿಂದ ಪೋಷಕರು ಮತ್ತು ಒಡಹುಟ್ಟಿದವರು ನನ್ನ ಬೆಂಬಲಕ್ಕೆ ನಿಂತರು’ ಎಂದು ಅವರು ಹೇಳಿದರು.

ಸೆರೆವಾಸದ ಸಮಯದಲ್ಲಿ ಎದುರಿಸಿದ ದೈಹಿಕ ಮತ್ತು ಮಾನಸಿಕ ಒತ್ತಡದ ಬಗ್ಗೆ ಅವರು ವಿವರಿಸಿದರು.
‘ತಿಹಾರ್ ಜೈಲಿನ ಒಳಗೆ 500 ಜನರೊಂದಿಗೆ ವಾಸಿಸುವುದು ಎಷ್ಟು ಕಷ್ಟ ಎಂದು ಊಹಿಸಿ. ಅದು ದೇಶದ ಒಳಗಿನ ರಾಜಕೀಯದಂತೆ. ನನ್ನ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ಒತ್ತಡದಿಂದಾಗಿ ನಾನು ಸೊರಗಿಹೋದೆ.
ಮತ್ತೊಬ್ಬರ ಸಹಾಯ ಇಲ್ಲದೆ ನಿಲ್ಲಲು ಸಹ ಸಾಧ್ಯವಾಗಲಿಲ್ಲ. ಇಂದಿಗೂ, ನಾನು ಅದರ ಬಗ್ಗೆ ಯೋಚಿಸಿದಾಗ, ನಾನು ಅಳುತ್ತೇನೆ’ ಎಂದು ಅವರು ವಿವರಿಸಿದರು.

ಇದನ್ನೂ ಓದಿ: ಈ ಬಾರಿ ನಾನು ಡಾರ್ಲಿಂಗ್ ಕೃಷ್ಣನ ಬಿಟ್ಟು ಹೋಗಲ್ಲ: ಅಮೃತಾ ಅಯ್ಯಂಗಾರ್

ಲೋಕಲ್ ಟ್ರೇನ್ ಹೆಸರಿನ ಸಿನಿಮಾ 2022ರಲ್ಲಿ ಬಂತು. ಡಾರ್ಲಿಂಗ್ ಕೃಷ್ಣ ಇದಕ್ಕೆ ಹೀರೋ. ಈ ಚಿತ್ರದಲ್ಲಿ ಸಂದೀಪಾ ನಟಿಸಿದ್ದರು. ‘ಅಂಬಾಸಿಡರ್’ ಹೆಸರಿನ ಕನ್ನಡ ಸಿನಿಮಾದಲ್ಲಿಯೂ ಅವರು ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಡಲಿಯಿಂದ ತಂದೆಯನ್ನೇ ಕಡಿದು ಕೊಂದು, ಟ್ಯಾಂಕ್​ಗೆ ಎಸೆದು ನೆಮ್ಮದಿಯಿಂದ ಕುಳಿತು ಬಿರಿಯಾನಿ ತಿಂದ ಮಗ – Kannada News | Chhattisgarh Axe Murder: Son Kills Father, Dumps Body in Tank, Eats Biryani Peacefully

ಛತ್ತೀಸ್​ಗಢ, ಮಾರ್ಚ್​ 04: ಹೋಳಿ(Holi)ಯ ಹಬ್ಬದ ಅಂಗವಾಗಿ ನಡೆಸುವ ಹೋಳಿ ಕಾ ದಹನ್ ಹಬ್ಬದ ರಾತ್ರಿ ನಡೆದ ಕೌಟುಂಬಿಕ ಕಲಹ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಛತ್ತೀಸ್​ಗಢದ ಅಂಬಿಕಾಪುರದಲ್ಲಿ ನಡೆದಿದೆ. ಅಲ್ಲಿ ವ್ಯಕ್ತಿಯೊಬ್ಬ ತಂದೆಯನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿ, ಮನೆಯ ಪಕ್ಕದಲ್ಲಿರುವ ನೀರಿನ ತೊಟ್ಟಿಯಲ್ಲಿ ಎಸೆದು ನಂತರ ಶಾಂತವಾಗಿ ಬಿರಿಯಾನಿ ತಿಂದು ಮಲಗಿದ್ದಾನೆ ಎನ್ನಲಾಗಿದೆ.

ಪೊಲೀಸರು ಅದೇ ರಾತ್ರಿ ಆರೋಪಿ ಮಗನನ್ನು ಬಂಧಿಸಿದ್ದಾರೆ.ಮೃತ ಪರಾಸ್ ಕರ್ಕೆಟ್ಟಾ ಬೇರೆ ಮನೆಯಲ್ಲಿ ವಾಸವಾಗಿದ್ದರು, ಅವರ ಮಗ ಪ್ರಭಾತ್ ಅಲಿಯಾಸ್ ಲೆಡಾ ಮನೆ ಕೆಲವೇ ಕೆಲವು ಮೀಟರ್ ದೂರದಲ್ಲಿತ್ತು. ಇಬ್ಬರ ಮನೆಗಳ ಮಧ್ಯೆ ಕೇವಲ ಎರಡು ಮನೆಗಳಿದ್ದವು.

ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಕಾರ, ಹೋಳಿಕಾ ದಹನ್ ದಿನ ರಾತ್ರಿ 11 ಗಂಟೆ ಸುಮಾರಿಗೆ ಪ್ರಭಾತ್ ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದ, ಅವರ ತಂದೆ ಬೈದಿದ್ದರು. ಬಳಿಕ ಇದು ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಕೋಪದ ಭರದಲ್ಲಿ ಪ್ರಭಾತ್ ಮನೆಯೊಳಗೆ ಇಟ್ಟಿದ್ದ ಕೊಡಲಿಯನ್ನು ಎತ್ತಿಕೊಂಡು ತಂದೆಯ ತಲೆಗೆ ಹಲವು ಬಾರಿ ಹೊಡೆದಿದ್ದಾನೆ. ಪರಾಸ್​ಗೆ ತೀವ್ರ ಗಾಯಗಳಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೊಲೆ ಮಾಡಿದ ನಂತರ ಆರೋಪಿಯು ಶವವನ್ನು ಎಳೆದುಕೊಂಡು ಹೋಗಿ ಮನೆಯ ಪಕ್ಕದಲ್ಲಿರುವ ಸಣ್ಣ ನೀರಿನ ಟ್ಯಾಂಕ್​​ಗೆ ಎಸೆದಿದ್ದಾನೆ ಎಂದು ಹೇಳಲಾಗಿದೆ. ಶವವನ್ನು ವಿಲೇವಾರಿ ಮಾಡಿದ ನಂತರ ಹತ್ತಿರದ ಅಂಗಡಿಗೆ ಹೋಗಿ ಬಿರಿಯಾನಿ ಕೊಂಡು ಮನೆಗೆ ಬಂದು ತಿಂದು ಕಂಬಳಿ ಹೊದ್ದು ನೆಮ್ಮದಿಯಿಂದ ನಿದ್ರಿಸಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಮತ್ತಷ್ಟು ಓದಿ: ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿಯ ಗೋಪುರದ ಮೇಲೆ ನಡೆದ ಕಲಿಯುಗದ ಪ್ರಹ್ಲಾದ

ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಸಮಯದಲ್ಲಿ ಕೋಪದಲ್ಲಿ ಹಲ್ಲೆ ನಡೆಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಮಗ ತನ್ನ ತಂದೆಯ ತಲೆಗೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ತಂದೆ ಮೃತಪಟ್ಟಿದ್ದಾರೆ. ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಅಪರಾಧಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸ್ಥಳದಿಂದ ತೆಗೆದ ಛಾಯಾಚಿತ್ರಗಳು ಅಪರಾಧ ಸ್ಥಳ, ಪೊಲೀಸರು ಪ್ರದೇಶವನ್ನು ಪರಿಶೀಲಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

T20 World Cup 2026: ಸೆಮಿಫೈನಲ್ ಪಂದ್ಯಕ್ಕೆ ಹೆಚ್ಚುವರಿ 90 ನಿಮಿಷ! – Kannada News | T20 World Cup 2026 Semi final have Extra 90 Minutes

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್ ಕಾದಾಟಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು (ಮಾ.4) ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲಿದೆ. ಇನ್ನು ನಾಳೆ (ಮಾ.5) ಜರುಗಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಸೆಣಸಲಿದೆ. ಈ ನಿರ್ಣಾಯಕ ಪಂದ್ಯಗಳಿಗೆ ಮೀಸಲು ದಿನವನ್ನು ಘೋಷಿಸಲಾಗಿದೆ.

ಅಂದರೆ ಸೆಮಿಫೈನಲ್ ಪಂದ್ಯವು ಕಾರಣಾಂತರಗಳಿಂದ ರದ್ದಾದರೆ ಈ ಮ್ಯಾಚ್​ ಅನ್ನು ಮರು ದಿನ ಮುಂದುವರೆಸಲಾಗುತ್ತದೆ. ಆದರೆ ಅದಕ್ಕೂ ಮುನ್ನ ನಿಗದಿತ ದಿನದಂದೇ ಪಂದ್ಯವನ್ನು ಆಯೋಜಿಸಲು ಕೆಲ ವಿಶೇಷ ನಿಯಮಗಳನ್ನು ರೂಪಿಸಲಾಗಿದೆ.  ಆ ನಿಯಮವೆಂದರೆ…

ಹೆಚ್ಚುವರಿ ಸಮಯ: ಪಂದ್ಯದ ನಿಗದಿತ ದಿನದಂದು ಪಂದ್ಯವನ್ನು ಪೂರ್ಣಗೊಳಿಸಲು ಹೆಚ್ಚುವರಿ 90 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಅಂದರೆ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ ಅಥವಾ ಕಾರಣಾಂತರಗಳಿಂದ ಮ್ಯಾಚ್ ವಿಳಂಬವಾದರೆ ಹೆಚ್ಚುವರಿ 90 ನಿಮಿಷಗಳನ್ನು ಬಳಸಲಾಗುತ್ತದೆ.

ಉದಾಹರಣೆಗೆ: 7 ಗಂಟೆಗೆ ಶುರುವಾಗಬೇಕಿರುವ ಪಂದ್ಯವು ಕಾರಣಾಂತರಗಳಿಂದ 8 ಗಂಟೆಗೆ ಆರಂಭವಾದರೆ ಯಾವುದೇ ಓವರ್​ ಕಡಿತ ಮಾಡಲಾಗುವುದಿಲ್ಲ. ಬದಲಾಗಿ ಹೆಚ್ಚುವರಿ 90 ನಿಮಿಷಗಳಲ್ಲಿನ 60 ನಿಮಿಷಗಳನ್ನು ಬಳಸಲಾಗುತ್ತದೆ. ಅಂದರೆ 11 ಗಂಟೆಗೆ ಮುಗಿಯುವ ಪಂದ್ಯವನ್ನು 12 ಗಂಟೆಯವರೆಗೆ ನಡೆಸಲಾಗುತ್ತದೆ.

ಹೆಚ್ಚುವರಿ 90 ನಿಮಿಷಗಳನ್ನು ಬಳಸುವ ಮೂಲಕ ಸಂಪೂರ್ಣ 20 ಓವರ್​ ಪಂದ್ಯಗಳ ಪಂದ್ಯವನ್ನು ಆಯೋಜಿಸಲು ಈ ನಿಯಮವನ್ನು ಪರಿಚಯಿಸಲಾಗಿದೆ. ಅದರಂತೆ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ ಅಥವಾ ಇನ್ನಿತರೆ ಸಮಸ್ಯೆ ಎದುರಾದರೆ 90 ನಿಮಿಷಗಳನ್ನು ಬಳಸುವ ಮೂಲಕ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ.

ಮೀಸಲು ದಿನ: ಒಂದು ವೇಳೆ ನಿಗದಿತ ದಿನದಂದು ಪಂದ್ಯ ಸಾಧ್ಯವಾಗದಿದ್ದರೆ, ಮೀಸಲು ದಿನದಂದು ಆಟ ಮುಂದುವರಿಯಲಿದೆ. ಅಲ್ಲದೆ ಮೀಸಲು ದಿನದಂದು 90 ನಿಮಿಷಗಳ ಬದಲಿಗೆ 120 ನಿಮಿಷಗಳ ಹೆಚ್ಚುವರಿ ಸಮಯ ಲಭ್ಯವಿರುತ್ತದೆ. ಅಂದರೆ ಇಲ್ಲಿ ಹೆಚ್ಚುವರಿ 2 ಗಂಟೆಗಳನ್ನು ನೀಡುವ ಮೂಲಕ ಮೀಸಲು ದಿನದಲ್ಲಿ ಪಂದ್ಯವನ್ನು ಪೂರ್ಣಗೊಳಿಸಲಿದ್ದಾರೆ.

ಪಂದ್ಯ ರದ್ದು: ಮೀಸಲು ದಿನದಂದು ಹೆಚ್ಚುವರಿ 120 ನಿಮಿಷಗಳನ್ನು ಬಳಸಿ ಕೂಡ ಪಂದ್ಯ ಪೂರ್ಣಗೊಳಿಸಲು ಅಥವಾ ಆಯೋಜಿಸಲು ಸಾಧ್ಯವಾಗದೇ ಇದ್ದರೆ ಮಾತ್ರ ಮ್ಯಾಚ್ ಅನ್ನು ರದ್ದುಗೊಳಿಸಲಾಗುತ್ತದೆ. ಈ ರದ್ದುಗೊಳಿಸುವ ಮುನ್ನ ಉಭಯ ತಂಡಗಳಿಗೆ 10 ಓವರ್​ಗಳ ಮ್ಯಾಚ್ ಆಡಿಸಲು ಸಾಧ್ಯವೇ ಎಂಬುದನ್ನು ನೋಡಲಿದ್ದಾರೆ.

ಕನಿಷ್ಠ ಓವರ್‌ಗಳು: ಸೆಮಿಫೈನಲ್ ಫಲಿತಾಂಶ ಬರಬೇಕಾದರೆ ಎರಡೂ ತಂಡಗಳು ಕನಿಷ್ಠ 10 ಓವರ್‌ಗಳನ್ನಾದರೂ ಆಡುವುದು ಕಡ್ಡಾಯ. ಹೀಗೆ 10 ಓವರ್​ಗಳನ್ನು ಆಡಿದರೆ ಮಾತ್ರ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ವಿಜಯಿಯನ್ನು ನಿರ್ಧರಿಸಲಿದ್ದಾರೆ.

ಫೈನಲ್​ ಅರ್ಹತೆ: ಮೀಸಲು ದಿನವೂ ಮಳೆಯಿಂದಾಗಿ ಪಂದ್ಯ ನಡೆಯದಿದ್ದರೆ, 10 ಓವರ್​ಗಳ ಮ್ಯಾಚ್ ಆಯೋಜಿಸಲು ಸಾಧ್ಯವಾಗದೇ ಇದ್ದರೆ ಸೆಮಿಫೈನಲ್ ಪಂದ್ಯವನ್ನು ರದ್ದು ಮಾಡಲಾಗುತ್ತದೆ. ಹೀಗೆ ಪಂದ್ಯ ರದ್ದಾದರೆ ‘ಸೂಪರ್ 8’ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡವು ಫೈನಲ್‌ಗೆ ಅರ್ಹತೆ ಪಡೆಯುತ್ತದೆ.

ಸೂಪರ್-8 ಅಂಕ ಪಟ್ಟಿ: ಸೂಪರ್-8 ಸುತ್ತಿನ ಗ್ರೂಪ್-1 ಅಂಕ ಪಟ್ಟಿಯಲ್ಲಿ ಸೌತ್ ಆಫ್ರಿಕಾ ತಂಡವು ಅಗ್ರಸ್ಥಾನದಲ್ಲಿದ್ದರೆ, ಭಾರತ ತಂಡ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಗ್ರೂಪ್-2 ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, ನ್ಯೂಝಿಲೆಂಡ್ ದ್ವಿತೀಯ ಸ್ಥಾನದಲ್ಲಿದೆ.

ಇಂಗ್ಲೆಂಡ್ vs ಸೌತ್ ಆಫ್ರಿಕಾ: ಒಂದು ವೇಳೆ ಸೆಮಿಫೈನಲ್ ಪಂದ್ಯಗಳು ಕಾರಣಾಂತರಗಳಿಂದ ರದ್ದಾದರೆ ಸೂಪರ್-8 ಅಂಕಪಟ್ಟಿಯಲ್ಲಿ ಅಗ್ರಸ್ಥಾನಗಳಲ್ಲಿರುವ ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್​ಗೆ ಅರ್ಹತೆ ಪಡೆಯಲಿದೆ.

ಇದನ್ನೂ ಓದಿ: T20 World Cup 2028: ಮುಂದಿನ ಟಿ20 ವಿಶ್ವಕಪ್​ಗೆ 12 ತಂಡಗಳು ಆಯ್ಕೆ

ಸೆಮಿಫೈನಲ್ ವೇಳಾಪಟ್ಟಿ:

  • ಸೆಮಿಫೈನಲ್ 1: ಸೌತ್ ಆಫ್ರಿಕಾ vs ನ್ಯೂಝಿಲೆಂಡ್ (ಮಾರ್ಚ್ 4) – ಈಡನ್ ಗಾರ್ಡನ್ಸ್ ಸ್ಟೇಡಿಯಂ​, ಕೊಲ್ಕತ್ತಾ
  • ಸೆಮಿಫೈನಲ್ 2: ಭಾರತ vs ಇಂಗ್ಲೆಂಡ್ (ಮಾರ್ಚ್ 5)- ವಾಂಖೆಡೆ ಸ್ಟೇಡಿಯಂ, ಮುಂಬೈ

Published On – 7:33 am, Wed, 4 March 26

Source link

Daily Devotional: ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ? – Kannada News | Lunar Eclipse March 04: Can Women Embrace Sanyasa According to Scriptures?

ಬೆಂಗಳೂರು, ಮಾರ್ಚ್​​ 04: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸನ್ಯಾಸಿಗಳು ಮತ್ತು ಸನ್ಯಾಸಿನಿಯರನ್ನು ಗೌರವಯುತವಾಗಿ ದೇವತಾ ಸ್ವರೂಪಿಗಳೆಂದು ಕಾಣಲಾಗುತ್ತದೆ. ಸನ್ಯಾಸ ಎಂದರೆ ತಲೆ ಬೋಳಿಸಿಕೊಂಡು, ಕಾಷಾಯ ವಸ್ತ್ರ ಧರಿಸಿ, ರುದ್ರಾಕ್ಷಿ ಮಾಲೆಗಳನ್ನು ಧರಿಸಿ, ಬ್ರಾಹ್ಮೀ ಮುಹೂರ್ತದಲ್ಲಿ ಜಪತಪಗಳನ್ನು ಮಾಡಿ, ಹೋಮಹವನಗಳನ್ನು ನಿರ್ವಹಿಸಿ, ಭಿಕ್ಷೆಯಿಂದ ಪಡೆದ ಆಹಾರವನ್ನು ಸ್ವೀಕರಿಸುವುದು. ಸನ್ಯಾಸಿನಿಯರ ಪ್ರಥಮ ಕರ್ತವ್ಯ ಧರ್ಮಜಾಗೃತಿ, ಸಂಸ್ಕೃತಿಯ ಉದ್ಧಾರ ಮತ್ತು ಲೋಕಕ್ಷೇಮವನ್ನು ಬಯಸುವುದು.

ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ಅಪಾರ ಗೌರವವಿದೆ; “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ”. ಮಹಿಳೆಯರನ್ನು ಮನೆಯ ಮಹಾಲಕ್ಷ್ಮಿ, ಜಗತ್ತಿನ ಶಿಕ್ಷಕಿ ಎಂದೂ ಬಣ್ಣಿಸಲಾಗಿದೆ. ಈ ಕಾಲಮಾನಕ್ಕೆ ತಕ್ಕಂತೆ, ಮಹಿಳೆಯರು ಸನ್ಯಾಸಿನಿಯರಾಗುವುದು ಸಮಂಜಸ. ಆತ್ಮರಕ್ಷಣೆ, ತಾಳ್ಮೆ, ಸಹನೆ ಮತ್ತು ನಿಷ್ಠೆಯಂತಹ ಗುಣಗಳು ಮಹಿಳೆಯರಲ್ಲಿ ಅಂತರ್ಗತವಾಗಿವೆ. ರಾಮಕೃಷ್ಣ ಮಠದಂತಹ ಸಂಸ್ಥೆಗಳಲ್ಲಿ ಅನೇಕ ಮಹಿಳೆಯರು ಧರ್ಮಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದ್ದರಿಂದ, ಮಹಿಳೆಯರು ಸನ್ಯಾಸಿನಿಯರಾಗುವುದು ಸಮಕಾಲೀನ ಸನ್ನಿವೇಶದಲ್ಲಿ ತಪ್ಪಲ್ಲ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

Source link

Horoscope Today 4th​​ March​: ಇಂದು ಈ ರಾಶಿಯವರು ಅಪರಿಚಿತರೊಂದಿಗೆ ವ್ಯವಹಾರಗಳಲ್ಲಿ ಜಾಗರೂಕರಾಗಿರಿ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 4, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣಪಕ್ಷ, ಪಾಡ್ಯ, ಪುಬ್ಬಾ ನಕ್ಷತ್ರ, ಧೃತಿ ಯೋಗ ಮತ್ತು ಕವಲವಕರಣ ಇರುತ್ತದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಸಿಂಹ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ.

ಇಂದು ಹೋಳಿ, ರಾಷ್ಟ್ರೀಯ ಸುರಕ್ಷತಾ ದಿನ ಹಾಗೂ ವಸಂತೋತ್ಸವದ ಆರಂಭವಾಗಿದೆ. ಬಾಗೂರು ಪ್ರಸನ್ನ ಚನ್ನಕೇಶವರಥ ಮತ್ತು ಹೊಳೆನರಸೀಪುರ ಲಕ್ಷ್ಮೀನರಸಿಂಹ ಸ್ವಾಮಿಗಳ ರಥೋತ್ಸವಗಳು ನಡೆಯಲಿವೆ. ಪ್ರತಿಯೊಂದು ರಾಶಿಗೂ ಗ್ರಹಗಳ ಶುಭಫಲ, ಆರೋಗ್ಯ, ಆರ್ಥಿಕ ಸ್ಥಿತಿ, ವೃತ್ತಿ ಪ್ರಗತಿ, ವೈವಾಹಿಕ ವಿಷಯಗಳು, ವಿದ್ಯಾರ್ಥಿಗಳಿಗೆ ಲಾಭ, ಹೂಡಿಕೆ ಹಾಗೂ ಕಾನೂನು ವಿಷಯಗಳಲ್ಲಿನ ಯೋಗದ ಕುರಿತು ಗುರೂಜಿ ವಿವರಣೆ ನೀಡಿದ್ದಾರೆ.

 

Source link

Mojtaba Khamenei: ಇರಾನ್​​ನ ನೂತನ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಖಮೇನಿ ಮಗ ಮೊಜ್ತಬಾ ನೇಮಕ – Kannada News | Mojtaba Khamenei: Iran’s New Supreme Leader Appointed After Father’s Death

ಟೆಹ್ರಾನ್, ಮಾರ್ಚ್​ 04: ಇರಾನ್(Iran)​​ನ ನೂತನ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಖಮೇನಿ ಪುತ್ರ ಮೊಜ್ತಬಾ ನೇಮಕಗೊಂಡಿದ್ದಾರೆ. ಇರಾನ್​​ನ ಸರ್ವೋಚ್ಚ ನಾಯಕರಾಗಿದ್ದ ಅಲಿ ಖಮೇನಿ ಇಸ್ರೇಲ್, ಅಮೆರಿಕ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದರು. ಈಗ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ದೇಶದ ಹೊಸ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
ಫೆಬ್ರವರಿ 28ರಂದು ಟೆಹ್ರಾನ್​​ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಲಿ ಖಮೇನಿ ಅವರ ಕಚೇರಿಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು.

ಆ ದಾಳಿಯಲ್ಲಿ ಖಮೇನಿ ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಇರಾನ್ ಏಳು ದಿನಗಳ ಸಾರ್ವಜನಿಕ ರಜೆಯೊಂದಿಗೆ 40 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ದೇಶಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪ್ರಮುಖ ನಗರಗಳು ಮತ್ತು ಸರ್ಕಾರಿ ಕಟ್ಟಡಗಳ ಹೊರಗೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಮೊಜ್ತಬಾ ಖಮೇನಿ ಯಾರು?
ಮೊಜ್ತಬಾ ಖಮೇನಿ 1969ರಲ್ಲಿ ಮಶಾದ್ ನಗರದಲ್ಲಿ ಜನಿಸಿದರು, ಧಾರ್ಮಿಕ ಶಿಕ್ಷಣವನ್ನು ಪಡೆದರು. ಇರಾನ್-ಇರಾಕ್ ಯುದ್ಧದ ಅಂತಿಮ ಹಂತಗಳಲ್ಲಿ ಅವರು ಕ್ರಾಂತಿಕಾರಿ ಗಾರ್ಡ್​​ನಲ್ಲಿಯೂ ಸೇವೆ ಸಲ್ಲಿಸಿದ್ದರು. ಅವರನ್ನು ಬಹಳ ಹಿಂದಿನಿಂದಲೂ ತಂದೆ ತೆಗೆದುಕೊಳ್ಳುವ ನಿರ್ಧಾರಗಳ ಹಿಂದೆ ಇವರು ನಿಂತಿದ್ದರು, ಅವರಿಗೆ ತುಂಬಾ ಹತ್ತಿರವಾಗಿದ್ದರು ಎನ್ನಲಾಗಿದೆ. ಅವರು ಎಂದೂ ಸರ್ಕಾರಿ ಹುದ್ದೆಗಳನ್ನು ಹೊಂದಿಲ್ಲವಾದರೂ ಅವರು ತಮ್ಮ ತಂದೆಗೆ ವಿಶ್ವಾಸಾರ್ಹ ಸಲಹೆಗಾರರಾಗಿದ್ದರು. ಅವರು ಮಿಲಿಟರಿ ಮತ್ತು ಅರೆಸೈನಿಕ ಪಡೆಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು.

ಇರಾನ್‌ನ ಶಿಯಾ ದೇವಪ್ರಭುತ್ವ ವ್ಯವಸ್ಥೆಯಲ್ಲಿ ಸುಪ್ರೀಂ ಲೀಡರ್ ಅತ್ಯಂತ ಶಕ್ತಿಶಾಲಿ ಸ್ಥಾನವಾಗಿದೆ. ಈ ಹುದ್ದೆಯನ್ನು ಹೊಂದಿರುವ ವ್ಯಕ್ತಿ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿರುತ್ತಾರೆ ಮತ್ತು ದೇಶದ ಪ್ರಮುಖ ರಾಜಕೀಯ, ಮಿಲಿಟರಿ ಮತ್ತು ಕಾರ್ಯತಂತ್ರದ ನಿರ್ಧಾರಗಳ ಮೇಲೆ ಅಂತಿಮ ನಿರ್ಧಾರವನ್ನು ಹೊಂದಿರುತ್ತಾರೆ.

ಇರಾನ್ ಪ್ರಸ್ತುತ ಮಿಲಿಟರಿ ಮತ್ತು ರಾಜಕೀಯ ಉದ್ವಿಗ್ನತೆಯ ಅವಧಿಯನ್ನು ಎದುರಿಸುತ್ತಿದೆ. ಮೊಜ್ತಾಬಾ ಅವರನ್ನು ಸುಪ್ರೀಂ ಲೀಡರ್ ಆಗಿ ಬಡ್ತಿ ನೀಡಿರುವುದು ದೇಶವು ತನ್ನ ಪ್ರಸ್ತುತ ನೀತಿಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವುದಿಲ್ಲ ಎಂದು ಸೂಚಿಸುತ್ತದೆ. ಆದಾಗ್ಯೂ, ಅಧಿಕೃತ ಘೋಷಣೆ ಮತ್ತು ಆಂತರಿಕ ಪ್ರತಿಕ್ರಿಯೆಗಳ ನಂತರವೇ ಈ ನಾಯಕತ್ವ ಬದಲಾವಣೆಯು ಇರಾನಿನ ರಾಜಕೀಯ ಮತ್ತು ಪ್ರಾದೇಶಿಕ ಚಲನಶೀಲತೆಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ಇನ್ನಷ್ಟೆ ಸ್ಪಷ್ಟವಾಗಬೇಕಿದೆ.

ಮತ್ತಷ್ಟು ಓದಿ: ಇರಾನ್​ ಜೊತೆಗಿನ ಸಂಘರ್ಷದಲ್ಲಿ ಇಸ್ರೇಲ್ ಜೊತೆ ನಿಂತಿದ್ದಕ್ಕೆ ಪ್ರಧಾನಿ ಮೋದಿಗೆ ನೆತನ್ಯಾಹು ಧನ್ಯವಾದ

2009ರಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಅವರ ಹೆಸರು ಕೇಳಿಬಂದಿತ್ತು, ಪ್ರತಿಭಟನೆಗಳನ್ನು ಕಠಿಣವಾಗಿ ಹತ್ತಿಕ್ಕುವಲ್ಲಿ ಅವರ ಪಾತ್ರವಿದೆ. ಈಗ ಅವರನ್ನು ಸರ್ವೋಚ್ಚ ನಾಯಕನನ್ನಾಗಿ ನೇಮಿಸಿರುವುದು ದೇಶದಲ್ಲಿ ಹೊಸ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ. 1979ರ ಕ್ರಾಂತಿಯ ಸಮಯದಲ್ಲಿ ವಂಶಾವಳಿಯ ಆಧಾರದ ಮೇಲೆ ಅಧಿಕಾರ ವರ್ಗಾವಣೆಗೆ ವಿರೋಧವಿತ್ತು. ಆದ್ದರಿಂದ ಕೆಲವರು ಅವರ ಆಯ್ಕೆಯನ್ನು ಪ್ರಶ್ನಿಸುತ್ತಿದ್ದಾರೆ.

ಪ್ರಸ್ತುತ ಮಿಲಿಟರಿ ಬೆಂಬಲದಿಂದಾಗಿ ಮೊಜ್ತಬಾ ಖಮೇನಿ ಅವರನ್ನು ಬಲಿಷ್ಠ ನಾಯಕ ಎಂದು ಪರಿಗಣಿಸಲಾಗಿದೆ. ಮುಂಬರುವ ದಿನಗಳು ಅವರ ನಾಯಕತ್ವ ದೇಶವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತದೆ ಎಂಬುದನ್ನು ನೋಡಬೇಕಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ನಾನು ಮೀಟರ್ ಇರೋವ್ನು, ಸಿಎಂ ಹೇಳಿದ್ರೂ ವಿಡಿಯೋ ಡಿಲೀಟ್ ಮಾಡಲ್ಲ’; ಸತೀಶ್ – Kannada News | Satish Cadabam’s Controversial Video: Won’t Delete Even if CM Asks

ಸತೀಶ್ ಕ್ಯಾಡಬಾಮ್ (Satish) ಅವರು ಸದಾ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಾರೆ. ಒಂದಲ್ಲಾ ಒಂದು ವಿಷಯದ ಮೂಲಕ ಅವರು ವಿವಾದ ಸೃಷ್ಟಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಸತೀಶ್ ಅವರು ಮೂತ್ರ ಮಾಡುವ ವಿಡಿಯೋ ಪೋಸ್ಟ್ ಮಾಡಿ ಅದಕ್ಕೆ, ‘ದಾದ ಯಾರ್ ಗೊತ್ತ..’ ಹಾಡನ್ನು ಹಾಕಿದ್ದರು. ಈ ವಿಷಯದಲ್ಲಿ ಸುದೀಪ್ ಅಭಿಮಾನಿಗಳು ಸಿಟ್ಟಾಗಿದ್ದರು. ಸುದೀಪ್ ಆಪ್ತ ಬಳಗದಲ್ಲಿರೋ ರಜತ್ ಹಾಗೂ ಸುದೀಪ್ ಕೂಡ ಸಿಟ್ಟಾಗಿದ್ದರು. ಈಗ ಈ ಬಗ್ಗೆ ಸತೀಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಚಾಲೆಂಜ್ ಕೂಡ ಹಾಕಿದ್ದಾರೆ.

ಸತೀಶ್ ಅವರು ಕೆಲ ದಿನಗಳ ಹಿಂದೆ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ಮೂತ್ರ ಮಾಡುತ್ತಿರೋದು ಕಂಡು ಬಂದಿದೆ. ಇಷ್ಟೇ ಆಗಿದ್ದರೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಅವರು ಇದಕ್ಕೆ, ‘ದಾದ ಯಾರ್ ಗೊತ್ತ..’ ಹಾಡನ್ನು ಹಾಕಿರೋದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ರಜತ್ ಹಾಗೂ ವಿನಯ್ ಗೌಡ ಅವರು ಇದನ್ನು ಪ್ರಶ್ನೆ ಮಾಡಿದ್ದಾರೆ. ಅವರಿಗೆ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಕಿಚ್ಚನ ಕಿಚಾಯಿಸಿದ ಡಾಗ್ ಸತೀಶ್​​ಗೆ ವಿನಯ್-ರಜತ್ ಖಡಕ್ ವಾರ್ನಿಂಗ್

ಎಸ್​​ಎಸ್​ ಟಿವಿ ಯೂಟ್ಯೂಬ್​ ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸತೀಶ್ ಮಾತನಾಡಿದರು. ‘ನಾನು ಮೂತ್ರ ಮಾಡಿದ್ರೂ ಸುದ್ದಿ ಆಗುತ್ತೆ ಅಂತ ಹೇಳಿದ್ದೆ. ಅದನ್ನ ತೋರಿಸೋಕೆ ವಿಡಿಯೋ ಮಾಡಿದ್ದು. ಆ ವಿಡಿಯೋಗೆ ಹಾಡು ಹೆಚ್ಚು ಸೂಕ್ತ ಅನಿಸುತ್ತಿತ್ತು. ಅದಕ್ಕೆ ಹಾಕಿದೆ’ ಎಂದು ಅವರು ಹೇಳಿದ್ದಾರೆ. ಇನ್ನು, ಯಾವುದೇ ಕಾರಣಕ್ಕೂ ವಿಡಿಯೋನ ತೆಗೆಯಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

‘ನಾನು ಕಮೆಂಟ್ಸ್ ನೋಡಿಲ್ಲ. ಹೀಗಾಗಿ, ಯಾರು ಏನು ಹೇಳಿದ್ರೋ ಗೊತ್ತಿಲ್ಲ. ನಾನು ಮೀಟರ್​​​ಲೆಸ್ ಆಗಿದ್ರೆ ವಿಡಿಯೋ ತೆಗೆಯುತ್ತಿದ್ದೆ. ನಾನು ಮೀಟರ್ ಇರುವವನು. ಹೀಗಾಗಿ, ವಿಡಿಯೋನ ಹಾಗೆಯೇ ಇಟ್ಟಿದ್ದೇನೆ. ಸಿಎಂ ಬಂದು ಹೇಳಿದ್ರೂ ವಿಡಿಯೋ ತೆಗೆಯಲ್ಲ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:06 am, Wed, 4 March 26

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಇಷ್ಟಪಟ್ಟವರ ಜೊತೆ ಸಮಯ ಕಳೆಯಲು ಕಷ್ಟವಾಗುವುದು – Kannada News | Horoscope March 04 Wednesday 2026; Dina Rashi Bhavishya Today, Checkout the details here

ಮೇಷ ರಾಶಿ:

ಉದ್ಯಮಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಹೊಸ ಅವಕಾಶಗಳನ್ನು ಪಡೆಯುತ್ತಾರೆ. ರೋಮ್ಯಾಂಟಿಕ್ ಜೀವನ ಉತ್ತಮವಾಗಿರುತ್ತದೆ. ಆದಾಯಕ್ಕೆ ಮೂಲವಾದುದನ್ನು ಹುಡುಕಿಕೊಳ್ಳುವುದು ಭವಿಷ್ಯ ದೃಷ್ಟಿಯಿಂದ ಉತ್ತಮ. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವುದು ಕಷ್ಟವಾಗಬಹುದು. ನಿಮ್ಮ ಮನೋಬಲವು ಹೆಚ್ಚಾಗಿ ಉತ್ಸಾಹದಿಂದ ಇರುವಿರಿ. ಇನ್ನೊಬ್ಬರ ಅನುಭವವನ್ನು ನೀವು ಪಾಠವಾಗಿಸಿಕೊಳ್ಳಿ. ನಿಮ್ಮ‌ ತಾಳ್ಮೆಯನ್ನು ಪರೀಕ್ಷಿಸಲು ಸಂದರ್ಭವು ಬರಬಹುದು.

ವೃಷಭ ರಾಶಿ:

ಸತ್ಪಾತ್ರರಿಗೆ ಸುವಸ್ತುವನ್ನು ದಾನ ಕೊಡಲು ಇಚ್ಛಿಸುವಿರಿ. ಕೆಲವೊಮ್ಮೆ ನಿಮ್ಮ ಸ್ವಭಾವವು ನಾಟಕೀಯದಂತೆ ತೋರುವುದು. ಕಲ್ಪನೆಯಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ಶರೀರಪೋಷಣೆಗೆ ಬೇಕಾದ ಮಾರ್ಗವನ್ನು ಕಂಡುಕೊಳ್ಳುವಿರಿ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಒಬ್ಬರ ಬಳಿಯೇ ಎಲ್ಲವನ್ನೂ ಹೇಳಿಕೊಳ್ಳಿ. ಯಾರದೋ ಮಾತಿನಿಂದ ಹೂಡಿಕೆ ಮಾಡುವಿರಿ. ಹೃದ್ಯವಾದ ವಿಚಾರಗಳ ಕಡೆ ಗಮನವಿರಲಿ. ಯಾರ ವಿರುದ್ಧವೂ ನಷ್ಟು ಸುಲಭವಾಗಿ ಹೋಗಲಾಗದು.

ಮಿಥುನ ರಾಶಿ:

ಸಂಗಾತಿಯನ್ನು ವಿಧವಾಗಿ ಪರೀಕ್ಷಿಸುವಿರಿ. ಸುಮ್ಮನೇ ದೇಹಾಯಾಸವನ್ನು ಮಾಡಿಕೊಳ್ಳುವಿರಿ. ನಿಮ್ಮ ಮನಸ್ಸು ಮಿಂಚಿನಂತೆ ಕೆಲಸಮಾಡಬಹುದು. ನೆರೆಯವರ ಜೊತೆ ಕಲಹವು ಬೇಡ. ಕುಟುಂಬ ಸದಸ್ಯರ ಮೇಲೆ ವಿನಾಕಾರಣ ಸಿಟ್ಟಾಗುವಿರಿ. ಮಕ್ಕಳ ಮೇಲೇ ಅಕ್ಕರೆ ಇರುವುದು. ಹೇಗಾದರೂ ಮಾಡಿ ಬೆಳೆಯಬೇಕು ಎನ್ನುವ ಬಯಕೆ ಅತಿಯಾಗಿರುವುದು. ಅಸಹಾಯಕತೆಯು ಸಿಟ್ಟಾಗಿ ಪರಿಣಮಿಸಬಹುದು.

ಕರ್ಕಾಟಕ ರಾಶಿ:

ಸಂಗಾತಿಯ ಆಯ್ಕೆಯಲ್ಲಿ ಗೊಂದಲ ಇರುವುದು. ಇಂದಿನ ಶಕ್ತಿಯು ನಿಮ್ಮ ಕನಸುಗಳ ಕಡೆಗೆ ಮುಂದುವರಿಯಲು ನಿಮ್ಮನ್ನು ಪ್ರೋತ್ಸಾಹಿಸುತ್ತಿದೆ. ನಿಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸಿ. ಯಾರಿಗಾದರೂ ನಿಜವನ್ನು ತಿಳಿಸಬೇಕಾದರೆ ಮನಸ್ಸಿಗೆ ನೋವಾಗದಂತೆ ತಿಳಿಸಿ. ಅಧಿಕಾರಿಗಳಿಂದ ಆರ್ಥಿಕತೆಯ ಪರಿಶೀಲನೆ ನಡೆಯುವುದು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ‌ ಮಾಡಿ. ಯಾರ ಮಾತನ್ನೂ ನಂಬದ ಸ್ಥಿತಿಯನ್ನು ನೀವೇ ತಂದುಕೊಳ್ಳುವಿರಿ.

ಸಿಂಹ ರಾಶಿ:

ವಿಶೇಷ ವ್ಯಕ್ತಿಯ ಬಗ್ಗೆ ಜನರ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಒತ್ತಡವನ್ನು ಸಹೋದ್ಯೋಗಿಗಳ ಮೇಲೆ‌ಹಾಕಿ ಸ್ವಲ್ಪ ಹಗುರಾಗಬಹುದು. ಉದ್ಯೋಗದ ಕಾರಣಕ್ಕೆ ಪ್ರವಾಸ ಮಾಡಬೇಕಾಗಬಹುದು. ನೀವೇ ಆಶ್ಚರ್ಯವಾಗುವಂತೆ ಆಕರ್ಷಕವಾಗಿ‌ ನೀವು ಇಂದು ಕಾಣಲಿದ್ದೀರಿ. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ಪಿತೂರಿಯಿಂದ ಅರ್ಧಕ್ಕೆ ಸ್ಥಗಿತವಾಗಬಹುದು. ನಿಮ್ಮ ದೌರ್ಬಲ್ಯವು ಶತ್ರುಗಳು ಬಳಸಿಕೊಳ್ಳುವರು. ಎಂದೋ ಬಯಸಿದ ವಸ್ತುವುದು ಇಂದು ನಿಮಗೆ ಅನಿರೀಕ್ಷಿತವಾಗಿ ಸಿಗುವುದು.

ಕನ್ಯಾ ರಾಶಿ:

ಆರ್ಥಿಕ ಪರಿಸ್ಥಿತಿ ಸದೃಢವಾಗಿ ಉಳಿಯುತ್ತದೆ. ಕೆಲಸದ ಸ್ಥಳದಲ್ಲಿ ಹೊಸ ಬದಲಾವಣೆಗಳಾಗಲಿವೆ. ಕೆಲಸದ ಒತ್ತಡ ಹೆಚ್ಚಾಗಲಿದೆ. ವೃತ್ತಿ ಸಮಸ್ಯೆಗಳನ್ನು ಪರಿಹರಿಸಲು ಹಿರಿಯರ ಸಹಾಯ ಪಡೆಯಿರಿ. ವಿದೇಶೀಯ ವಸ್ತುಗಳ ಬಳಕೆಯನ್ನು ಮಾಡುವುದು ಕಾರಣಾಂತರಗಳಿಂದ ಇಷ್ಟವಾಗದು. ನಿಮ್ಮ ಅಸಹಾಯಕತೆಯನ್ನು ಮನೆಯವರ ಮುಂದೆ ಹೇಳಿಕೊಳ್ಳುವಿರಿ. ಬಂಧುಗಳ ಜೊತೆ ನಿಮ್ಮ ಬಾಂಧವ್ಯವು ಗಟ್ಟಿಯಾಗಿ ಇರುವುದು. ನಿಮ್ಮ ಆದಾಯಕ್ಕೆ ತಕ್ಕಂತೆ ಜೀವನವಿರಲಿದೆ.

ತುಲಾ ರಾಶಿ:

ಹೊಸ ಆಸ್ತಿ ಅಥವಾ ಮನೆಯನ್ನು ಖರೀದಿಸುವುದು ಇಂದು ಸಾಧ್ಯ. ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ಮನೋವಿಕಾರವನ್ನು ಕಡಿಮೆ‌ ಮಾಡಿಕೊಳ್ಳಿ. ವಿದ್ಯಾರ್ಥಿಗಳು ತಮಗೆ ಬರುವ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬಹುದು. ಎಲ್ಲ ಕೆಲಸಕ್ಕೂ ಬೇರೆಯವರನ್ನು ಅವಲಂಬಿಸಿ ಆರ್ಥಿಕ ನಷ್ಟವನ್ನು ಕಾಣಬೇಕಾಗಬಹುದು. ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಯಾರಿಗೂ ಬಿಡುವುದಿಲ್ಲ. ನಿಮ್ಮ ಸಹಕಾರವನ್ನು ಬಂಧುಗಳು ಮರೆಯಬಹುದು.

ವೃಶ್ಚಿಕ ರಾಶಿ:

ಹೇಳಿಕೊಳ್ಳುವಷ್ಟು ಆದಾಯವಿಲ್ಲದಿದ್ದರೂ ಅಹಂಕಾರಕ್ಕೇನು ಕೊರತೆ ಇರದು. ನಿಮ್ಮ ಮಾತಿನಿಂದ‌ ಶತ್ರುಗಳು ಹುಟ್ಟಿಕೊಳ್ಳಬಹುದು. ಇಂದು ಕೆಲಸದ ಮೇಲೆ ಗಮನಹರಿಸಲು ನಿಮಗೆ ಸೂಚಿಸಲಾಗಿದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಶತ್ರುವನ್ನು ಉಪಾಯದಿಂದ ಗೆಲ್ಲುವ ತಂತ್ರ ಬಳಸಿ. ಅಳತೆಯನ್ನು ಅರಿತು ವ್ಯವಹರಿಸುವುದು ಎಲ್ಲ ದೃಷ್ಟಿಯಿಂದ ಉತ್ತಮ. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು.

ಧನು ರಾಶಿ:

ಸ್ನೇಹಿತರ ನಿರೀಕ್ಷೆಯಲ್ಲಿ ಹೆಚ್ಚಿನ‌ ಸಮಯವು ಕಳೆದುಹೋಗುವುದು. ಅಪರಿಚಿತರ ಮೂಲಕ ನಿಮ್ಮ ಹಣವನ್ನು ಕಳೆದುಕೊಳ್ಳಲಿದ್ದೀರಿ. ಮನೆಯ ನಿರ್ವಹಣೆಯನ್ನೂ ಮಾಡಲಾಗದು. ವೃತ್ತಿಯಲ್ಲಿ ನಿಮಗೆ ವಿರಾಮವು ಇಂದು ಸಿಗದೇ ನಿಮ್ಮ ಸ್ವಂತ ಕಾರ್ಯವನ್ನು ಕೈ ಬಿಡಬೇಕಾಗುವುದು. ಗೃಹ ನಿರ್ಮಾಣದ ಕಾರ್ಯವನ್ನು ಕೆಲವು ದಿನ ಮುಂದೂಡುವುದು ಉತ್ತಮ. ಮಕ್ಕಳಿಂದ ದೂರಾಗಬಹುದು. ಹಣದ ಕೊರೆತೆ ಇಲ್ಲದಿದ್ದರೂ ಹಳೆಯ ಮನೆಯನ್ನೇ ಅವಶ್ಯಕತೆಗೆ ಸರಿಯಾಗಿ ಗಟ್ಟಿ ಮಾಡಿಕೊಳ್ಳಿ.

ಮಕರ ರಾಶಿ:

ಸಂಗಾತಿಯ ಸಂಪತ್ತಿನಿಂದ ನಿಮಗೆ ಬೇಕಾದುದನ್ನು ಪಡೆಯುವಿರಿ. ಅತಿಯಾದ ಬಾಯಾರಿಕೆ ಆಗಬಹುದು. ಯಾರ ಮಾತನ್ನು ಒಪ್ಪಿಕೊಳ್ಳದೇ ನಿಮ್ಮದೇ ಆದ ದಾರಿಯಲ್ಲಿ ನಡೆಯುವಿರಿ. ಕಛೇರಿಯ ಕೆಲಸದಲ್ಲಿ ನಿಮ್ಮ ಮಧ್ಯೆ ಅನಗತ್ಯ ಪ್ರವೇಶದಿಂದ ಕೋಪಗೊಳ್ಳುವಿರಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಉತ್ತಮ. ನಿಮ್ಮ ವಿನ್ಯಾಸಗಳಿಗೆ ಅನುಮೋದನೆ ಸಿಗದೇ ಇರಬಹುದು. ವಿದ್ಯಾರ್ಥಿಗಳ ಉತ್ಸಾಹವನ್ನು ಕುಗ್ಗಸುವುದು ಬೇಡ. ಸರಿಯಾದ ಮಾರ್ಗವನ್ನು ತೋರಿಸಿ. ನಿಮ್ಮ ಮಕ್ಕಳ ವರ್ತನೆಯಿಂದ ಬೇಸರ ಆಗುವುದು.

ಕುಂಭ ರಾಶಿ:

ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗಲಿದೆ. ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕರವಿದ್ದರೂ ಅದನ್ನು ಬಳಸಿಕೊಳ್ಳುವ ಜಾಣತನವೂ ಅಗತ್ಯವಿದೆ. ನಿಮ್ಮ ಬದುಕಿನ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ಸಹೋದ್ಯೋಗಿಗಳಿಗೆ ಸಹಕರಿಸುವ ಮನಸ್ಸಾಗುವುದು. ಮೋಜಿನ ಕಾರಣಕ್ಕೆ ಸುತ್ತಾಟ ಮಾಡುವಿರಿ. ಬಂಧುಗಳ ಜೊತೆ ಅನಗತ್ಯ ವಾಗ್ವಾದ ಬೇಡ.

ಮೀನ ರಾಶಿ:

ಹಳೆಯ ದಾಂಪತ್ಯವಾದರೂ ಸಂತೋಷಕ್ಕೆ ಕೊರತೆ ಇಲ್ಲದಂತೆ ಇರುವಿರಿ. ಸಾಮಾಜಿಕ ಕಾರ್ಯಕ್ಕೆ ನಿಮ್ಮ ಕೊಡುಗೆಯನ್ನು ನೀಡುವಿರಿ. ಕಛೇರಿಯ ಕೆಲಸಗಳನ್ನು ವೇಗವಾಗಿ ಮಾಡಿ ಜವಾಬ್ದಾರಿಯನ್ನು ಮುಗಿಸುವಿರಿ. ಕಾರ್ಯನಿರ್ವಹಣೆ ಅಸಾಧ್ಯವೆನಿಸಬಹುದು. ಕೆಲವು ಸಂಗತಿಗಳನ್ನು ನಿರೀಕ್ಷಿಸದೇ ಬರಬಹುದು.ವವ್ಯವಹಾರದಲ್ಲಿ ಹೆಚ್ಚಿನ ಲಾಭವು ಬರಬಹುದು. ಪ್ರಸಾರ ಮಾಧ್ಯಮದವರು ದೂರ ಹೀಗಬೇಕಾಗಬಹುದು. ಸಾಹಿತ್ಯ ಕ್ಷೇತ್ರದಲ್ಲಿ ಇರುವವರಿಗೆ ಸಮ್ಮಾನ ಸಿಗುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಶತಭಿಷಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಪೂರ್ವಾಫಲ್ಗುಣಿ, ಯೋಗ : ಧೃತಿ, ಕರಣ : ಕೌಲವ, ಸೂರ್ಯೋದಯ – 06 – 40 am, ಸೂರ್ಯಾಸ್ತ – 06 – 31 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:36 – 14:05, ಯಮಗಂಡ ಕಾಲ 08:09 – 09:38, ಗುಳಿಕ ಕಾಲ 11:07 – 12:36

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 4ರ ದಿನಭವಿಷ್ಯ

ಸಂಜೆ ಸೂರ್ಯಾಸ್ತದ ನಂತರ ಮನೆಯ ಹೊಸ್ತಿಲಲ್ಲಿ ಅಥವಾ ದೇವರ ಮನೆಯಲ್ಲಿ ಎಳ್ಳೆಣ್ಣೆಯ ದೀಪ ಹಚ್ಚಿ. ಎಳ್ಳೆಣ್ಣೆಯ ದೀಪವು ಶನಿ ಮತ್ತು ಕುಜ ದೋಷಗಳನ್ನು ಕಡಿಮೆ ಮಾಡಿ, ಮೈಗ್ರೇನ್‌ನಂತಹ ನೋವುಗಳಿಂದ ಮುಕ್ತಿ ನೀಡಲು ಸಹಕಾರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ಕೆಲಸ- ಜವಾಬ್ದಾರಿ ಅಷ್ಟಕ್ಕೆ ಮಾತ್ರ ಸೀಮಿತ ಮಾಡಿಕೊಳ್ಳಿ. ಸ್ನೇಹ- ಕರುಣೆ ಹೀಗೆ ಭಾವನಾತ್ಮಕವಾಗಿ ತಳುಕು ಹಾಕಿಕೊಂಡು, ಇತರರಿಗೆ ನೆರವು ನೀಡಲು ಮುಂದಾದಲ್ಲಿ ಆ ನಂತರ ಪಡಿಪಾಟಲು ಪಡುವಂತೆ ಆಗುತ್ತದೆ. ಉಳಿತಾಯದ ಉದ್ದೇಶಕ್ಕೆ ಖರೀದಿ ಮಾಡಿಟ್ಟಿದ್ದ ಚಿನ್ನ ಅಥವಾ ಬೆಳ್ಳಿಯನ್ನು ಮಾರಾಟ ಮಾಡಿ, ಸದ್ಯದ ಹಣಕಾಸಿನ ಅಗತ್ಯವನ್ನು ಪೂರೈಸಿಕೊಳ್ಳಲು ಚಿಂತನೆ ಮಾಡುತ್ತೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದವರಿಗೆ ಲಾಭ ಸಿಗಲಿದೆ. ಪ್ರಾಫಿಟ್ ಬುಕ್ಕಿಂಗ್ ಗೆ ನಿರ್ಧಾರ ಮಾಡುತ್ತೀರಿ. ತಾಯಿ ಜೊತೆಗೆ ಅಭಿಪ್ರಾಯ ಭೇದ- ಮನಸ್ತಪ ಇದ್ದಲ್ಲಿ ಅದನ್ನು ನಿವಾರಿಸಿಕೊಳ್ಳಲು ಅವಕಾಶ ದೊರೆಯಲಿದೆ. ನೀರಿನ ಮಾರಾಟ ವ್ಯವಹಾರದಲ್ಲಿ ತೊಡಗಿರುವವರು ವಿಸ್ತರಣೆಗೆ ಆಲೋಚಿಸಿ, ಅಗತ್ಯ ಸಿದ್ಧತೆಯಲ್ಲಿ ಬಿಡುವಿಲ್ಲದಷ್ಟು ತನ್ಮಯರಾಗುತ್ತೀರಿ. ಹಲ್ಲು ನೋವಿನ ಸಮಸ್ಯೆ ತೀವ್ರವಾಗಿದ್ದಲ್ಲಿ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಸಿನಿಮಾ ರಂಗದಲ್ಲಿ ಅವಕಾಶಕ್ಕಾಗಿ ಪ್ರಯತ್ನ ಮಾಡುತ್ತಾ ಇರುವವರಿಗೆ ಆತ್ಮವಿಶ್ವಾಸ ಹೆಚ್ಚಾಗುವಂಥ ದಿನ ಇದಾಗಿರಲಿದೆ. ನಿಮ್ಮ ಸ್ನೇಹಿತರು ಬಹಳ ದೊಡ್ಡ ಸಹಾಯವನ್ನು ಮಾಡಲಿದ್ದಾರೆ. ಈ ದಿನ ಯಾವುದೇ ಕೆಲಸದಲ್ಲಿ ಮನಸಾರೆ ತೊಡಗಿಕೊಳ್ಳಿ; ನಿಮಗೆ ಎದುರಾಗುವ ಸ್ಪರ್ಧೆ ಬಗ್ಗೆ ಆಲೋಚನೆಯನ್ನೇ ಮಾಡುವುದಕ್ಕೆ ಹೋಗಬೇಡಿ. ಮೈಗ್ರೇನ್ ಸಮಸ್ಯೆ ಇರುವಂಥವರು ಸರಿಯಾದ ಔಷಧೋಪಚಾರದ ಬಗ್ಗೆ ಲಕ್ಷ್ಯವನ್ನು ನೀಡಿ.

ಲೇಖನ- ಸ್ವಾತಿ ಎನ್.ಕೆ.

Source link

Exit mobile version