Video: ಬಿಎಸ್‌ಎಫ್ ನೆಲೆಗಳ ಮೇಲೆ ದಾಳಿ ಸಂಚು? ಜಲಂಧರ್ ಮತ್ತು ಅಮೃತಸರದಲ್ಲಿ ಸ್ಫೋಟ, ರಾಜ್ಯಾದ್ಯಂತ ಹೈ ಅಲರ್ಟ್

ಜಲಂಧರ್, ಮೇ 06: ಜಲಂಧರ್‌ನ ಬಿಎಸ್‌ಎಫ್ ಪ್ರಧಾನ ಕಚೇರಿ ಸಮೀಪದ ಬಿಎಸ್‌ಎಫ್ ಚೌಕ್ ಪ್ರದೇಶದಲ್ಲಿ ಸ್ಕೂಟರ್‌ ಒಂದರಲ್ಲಿ ಸಂಭವಿಸಿದ ಸ್ಫೋಟವು ಇಡೀ ನಗರವನ್ನು ಭೀತಿಗೀಡುಮಾಡಿದೆ. ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡು ಬೆಂಕಿಗೆ ಆಹುತಿಯಾಯಿತು.

ಇಂಡಿಯಾ ಟುಡೇಗೆ ಲಭ್ಯವಾಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ, ಸ್ಫೋಟದ ತೀವ್ರತೆಗೆ ಗಾಬರಿಗೊಂಡ ವ್ಯಕ್ತಿಯೊಬ್ಬ ಜೀವ ಉಳಿಸಿಕೊಳ್ಳಲು ಓಡುತ್ತಿರುವುದು ದಾಖಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಕೂಟರ್ ಹೊತ್ತಿ ಉರಿಯುವ ಕೆಲವೇ ಕ್ಷಣಗಳ ಮೊದಲು ಗುಡುಗಿನಂತಹ ಭೀಕರ ಶಬ್ದ ಕೇಳಿಸಿತು.

ಘಟನೆ ಸಂಭವಿಸಿದ ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಅದೃಷ್ಟವಶಾತ್, ಈ ಸ್ಫೋಟದಲ್ಲಿ ಯಾವುದೇ ಸಾವುನೋವುಗಳು ಅಥವಾ ಗಾಯಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಬಿಎಸ್‌ಎಫ್ ಪ್ರಧಾನ ಕಚೇರಿಯ ಅತಿ ಸಮೀಪದಲ್ಲೇ ಈ ಘಟನೆ ನಡೆದಿರುವುದರಿಂದ ಪೊಲೀಸರು ಇಡೀ ಪ್ರದೇಶವನ್ನು ಬಿಗಿ ಭದ್ರತೆಯೊಳಗೆ ತಂದಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಸ್ಫೋಟದ ಹಿಂದಿನ ಅಸಲಿ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರೆದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿವಾಹಕ್ಕೆ ವಯಸ್ಸಿನ ಅಂತರ ಅಡ್ಡಿಯಲ್ಲ: ಪ್ರಬುದ್ಧ ಸಂಗಾತಿಯಿಂದ ಕುಟುಂಬಕ್ಕೆ ಶ್ರೇಯಸ್ಸು – Kannada News | Beyond Convention: Examining Age Differences in Marriages Through Ancient Texts and Modern Examples

ಬೆಂಗಳೂರು, ಮೇ.6: ವಿವಾಹವು ಮನುಷ್ಯನ ಜೀವನದಲ್ಲಿ ಒಂದು ಪ್ರಮುಖ ಘಟ್ಟ. ಅನಾದಿ ಕಾಲದಿಂದಲೂ ಗಂಡನ ವಯಸ್ಸು ಹೆಚ್ಚಿದ್ದು, ಹೆಣ್ಣಿನ ವಯಸ್ಸು ಕಡಿಮೆಯಿರುವುದು ಸಾಮಾನ್ಯವಾಗಿದೆ. ಆದರೆ, ಕಾಲ ಬದಲಾದಂತೆ, ಪುರುಷರು ತಮ್ಮಿಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರನ್ನು ಮದುವೆಯಾಗುವುದು ಶುಭವೇ ಅಥವಾ ಅಶುಭವೇ ಎಂಬ ಪ್ರಶ್ನೆ ಉದ್ಭವಿಸಿದೆ. ಶಾಸ್ತ್ರೀಯವಾಗಿ ಪರಿಶೀಲಿಸಿದಾಗ, ಯಾವುದೇ ಧರ್ಮಗ್ರಂಥಗಳಲ್ಲಿ ಗಂಡಿಗಿಂತ ಹೆಣ್ಣು ವಯಸ್ಸಿನಲ್ಲಿ ಹೆಚ್ಚಿದ್ದರೆ ಮದುವೆಯಾಗಬಾರದು ಎಂದು ಹೇಳಿಲ್ಲ. ಬದಲಾಗಿ, ಕಾಲಾಂತರದಲ್ಲಿ ಸಮಾಜದ ಚಿಂತನೆಗಳು ಬದಲಾಗಿವೆ. ಪುರಾಣಗಳನ್ನು ಗಮನಿಸಿದರೆ, ವಸಿಷ್ಠ ಋಷಿ-ಅರುಂಧತಿ, ಚಂದ್ರ-ತಾರೆ, ಅರ್ಜುನ-ಉಲೂಪಿ ಮತ್ತು ಶ್ರೀಕೃಷ್ಣ-ಸತ್ಯಭಾಮಾ ಅವರ ವಿವಾಹಗಳಲ್ಲಿ ಹೆಣ್ಣಿನ ವಯಸ್ಸು ಹೆಚ್ಚಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಇಂದಿಗೂ ಸಚಿನ್ ತೆಂಡೂಲ್ಕರ್, ಅಭಿಷೇಕ್ ಬಚ್ಚನ್, ನಟಿ ಜಯಂತಿ ಮತ್ತು ಸೈಫ್ ಅಲಿ ಖಾನ್ ಅವರಂತಹ ಅನೇಕ ವ್ಯಕ್ತಿಗಳು ತಮ್ಮಿಗಿಂತ ವಯಸ್ಸಾದ ಸಂಗಾತಿಗಳನ್ನು ಮದುವೆಯಾಗಿದ್ದಾರೆ. ಹಿರಿಯ ವಯಸ್ಸಿನ ಹೆಣ್ಣು ತನ್ನ ಅನುಭವ, ಪ್ರಬುದ್ಧ ಆಲೋಚನೆಗಳಿಂದ ಕುಟುಂಬಕ್ಕೆ ಮತ್ತು ಗಂಡನಿಗೆ ಪೂರಕವಾಗಿ ನಿಲ್ಲುತ್ತಾಳೆ. ಇದು ಕುಟುಂಬದಲ್ಲಿ ಶ್ರೇಯಸ್ಸು, ಪ್ರಗತಿ ಮತ್ತು ಅಭಿವೃದ್ಧಿಗೆ ಕಾರಣವಾಗುತ್ತದೆ. ವಿವಾಹವು ದೈವ ಸಂಕಲ್ಪವಾಗಿದ್ದು, ವಯಸ್ಸಿನ ಅಂತರವು ಕುಟುಂಬದ ಸುಖಮಯ ಜೀವನಕ್ಕೆ ಅಡ್ಡಿಯಾಗುವುದಿಲ್ಲ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TMC ವಿರುದ್ಧ ಗಂಭೀರ ಆರೋಪ ಮಾಡಿ ಪಕ್ಷ ತೊರೆದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ! – Kannada News | Manoj Tiwary Quits TMC: Former Cricketer Alleges Corruption

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ (BJP) ಅಭೂತಪೂರ್ವ ಗೆಲುವು ಸಾಧಿಸಿದ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಸ್ಫೋಟಗೊಂಡಿದೆ. ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಕ್ರೀಡಾ ರಾಜ್ಯ ಸಚಿವರಾಗಿದ್ದ ಮನೋಜ್ ತಿವಾರಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಟಿಕೆಟ್‌ಗಾಗಿ 5 ಕೋಟಿ ಬೇಡಿಕೆ?

ಪಕ್ಷ ತೊರೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮನೋಜ್ ತಿವಾರಿ, ಟಿಎಂಸಿ ನಾಯಕತ್ವದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಈ ಬಾರಿ ನನಗೆ ಶಿಬ್‌ಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲಾಯಿತು. ಇದಕ್ಕೆ ಕಾರಣ ನಾನು ಪಕ್ಷ ಕೇಳಿದ 5 ಕೋಟಿ ರೂಪಾಯಿ ಹಣವನ್ನು ನೀಡಲು ನಿರಾಕರಿಸಿದ್ದು. ನನ್ನಂತೆ ಸುಮಾರು 70 ರಿಂದ 72 ಅಭ್ಯರ್ಥಿಗಳು ಟಿಕೆಟ್‌ಗಾಗಿ ಇಷ್ಟೇ ಪ್ರಮಾಣದ ಹಣ ನೀಡಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

ಹಿರಿಯ ಸಚಿವರ ವಿರುದ್ಧ ಕಿಡಿ:

ನಿರ್ಗಮಿತ ಹಿರಿಯ ಕ್ರೀಡಾ ಸಚಿವ ಮನೋಜ್ ತಿವಾರಿ, ತೃಣಮೂಲ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಅರೂಪ್ ಬಿಸ್ವಾಸ್ ಅವರ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಬಂಗಾಳದಲ್ಲಿ ಸರಿಯಾದ ಕ್ರೀಡಾ ನೀತಿಯನ್ನು ಜಾರಿಗೆ ತರುವಲ್ಲಿ ಬಿಸ್ವಾಸ್ ವಿಫಲರಾಗಿದ್ದಾರೆ ಮತ್ತು ಕ್ರೀಡಾ ಇಲಾಖೆಯ ಬಜೆಟ್ ಬಳಕೆಯಲ್ಲೂ ಪಾರದರ್ಶಕತೆ ಇಲ್ಲ ಎಂದು ಅವರು ದೂರಿದ್ದಾರೆ.

ಮೆಸ್ಸಿ ಕಾರ್ಯಕ್ರಮದ ವಿವಾದ:

ಇತ್ತೀಚೆಗೆ ನಡೆದ ಲಿಯೋನೆಲ್ ಮೆಸ್ಸಿ ಅವರ ಕೋಲ್ಕತ್ತಾ ಭೇಟಿಯ ಕಾರ್ಯಕ್ರಮವು “ಸಂಪೂರ್ಣ ಅವ್ಯವಸ್ಥೆ”ಯಿಂದ ಕೂಡಿತ್ತು ಎಂದು ಅವರು ಬಣ್ಣಿಸಿದ್ದಾರೆ. ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಳ್ಳಲಾದ ಆ ಕಾರ್ಯಕ್ರಮದಿಂದ ತಾವು ಉದ್ದೇಶಪೂರ್ವಕವಾಗಿಯೇ ದೂರ ಉಳಿದಿದ್ದಾಗಿ ಇದೇ ವೇಳೆ ಮನೋಜ್ ತಿವಾರಿ ಸ್ಪಷ್ಟಪಡಿಸಿದ್ದಾರೆ.

ಮುಂದಿನ ನಡೆ ಏನು?

ಪಕ್ಷದ ಸೋಲಿಗೆ ಭ್ರಷ್ಟಾಚಾರವೇ ಮುಖ್ಯ ಕಾರಣ ಎಂದಿರುವ ಮನೋಜ್ ತಿವಾರಿ, ಸದ್ಯಕ್ಕೆ ಯಾವುದೇ ರಾಜಕೀಯ ಪಕ್ಷವನ್ನು ಸೇರುವ ಉದ್ದೇಶ ತಮಗಿಲ್ಲ ಎಂದು ಹೇಳಿದ್ದಾರೆ. ರಾಜಕೀಯದಿಂದ ಬ್ರೇಕ್ ಪಡೆದು, ಕ್ರಿಕೆಟ್ ಕೋಚಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ.

ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವರಾಗಿದ್ದ ಮನೋಜ್ ತಿವಾರಿ ಅವರ ಈ ಬಹಿರಂಗ ಹೇಳಿಕೆಯು 15 ವರ್ಷಗಳ ಕಾಲ ಆಡಳಿತ ನಡೆಸಿದ ಟಿಎಂಸಿ ಪಕ್ಷಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಅದರಲ್ಲೂ ನೋಟಿಗೆ ಸೀಟು ಎಂಬ ಗಂಭೀರ ಆರೋಪವು ರಾಜಕೀಯ ಚರ್ಚೆಯನ್ನು ಹುಟ್ಟು ಹಾಕಿದೆ.

ಮನೋಜ್ ತಿವಾರಿ ವೃತ್ತಿಜೀವನ:

ಟೀಮ್ ಇಂಡಿಯಾ ಪರ 15 ಏಕದಿನ ಪಂದ್ಯಗಳನ್ನಾಡಿರುವ ಮನೋಜ್ ತಿವಾರಿ ಒಟ್ಟು 287 ರನ್​ ಕಲೆಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 1 ಅರ್ಧಶತಕಗಳನ್ನು ಬಾರಿಸಿದ್ದರು. ಇನ್ನು 3 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅವರು 1 ಇನಿಂಗ್ಸ್​ನಲ್ಲಿ ಮಾತ್ರ ಬ್ಯಾಟ್ ಮಾಡಿದ್ದರು. ಈ ವೇಳೆ 15 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

ಇದನ್ನೂ ಓದಿ: RCB ಅಭಿಮಾನಿಗಳಿಗೆ ಬಿಸಿಸಿಐ ಕಡೆಯಿಂದ ಶೀಘ್ರದಲ್ಲೇ ಕಹಿ ಸುದ್ದಿ!

ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮನೋಜ್ ತಿವಾರಿ ಕೊಲ್ಕತ್ತಾ ನೈಟ್ ರೈಡರ್ಸ್​, ರೈಸಿಂಗ್ ಪುಣೆ ಸೂಪರ್​ಜೈಂಟ್ಸ್ ಪರ ಕಣಕ್ಕಿಳಿದಿದ್ದರು. ಈ ವೇಳೆ ಒಟ್ಟು 98 ಪಂದ್ಯಗಳನ್ನಾಡಿರುವ ಅವರು ಒಟ್ಟು 1686 ರನ್​ ಬಾರಿಸಿದ್ದಾರೆ. ಇದೇ ವೇಳೆ ಅವರ ಬ್ಯಾಟ್​ನಿಂದ 7 ಅರ್ಧಶತಕಗಳು ಮೂಡಿಬಂದಿದ್ದವು.

Published On – 7:27 am, Wed, 6 May 26

Source link

ತಮಿಳುನಾಡಿನಲ್ಲಿ ಹೊಸ ಮೈತ್ರಿ ಪರ್ವ: ವಿಜಯ್ ನೇತೃತ್ವದ ಟಿವಿಕೆಗೆ ಕಾಂಗ್ರೆಸ್ ‘ಕೈ’ ಬಲ, ಸಂಪುಟದಲ್ಲಿ 2 ಸ್ಥಾನಕ್ಕೆ ಬೇಡಿಕೆ – Kannada News | Vijay’s TVK Congress Alliance Forms New Tamil Nadu Govt: 2 Cabinet Berths Demanded

ಚೆನ್ನೈ, ಮೇ 06: ತಮಿಳುನಾಡು ವಿಧಾನಸಭಾ ಚುನಾವಣೆ(Tamil Nadu Assembly Election)ಯಲ್ಲಿ ಭರ್ಜರಿ ಜಯ ಗಳಿಸಿರುವ ನಟ-ರಾಜಕಾರಣಿ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವನ್ನು ಬೆಂಬಲಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಈ ಮೈತ್ರಿಯೊಂದಿಗೆ ರಾಜ್ಯದಲ್ಲಿ ಹೊಸ ರಾಜಕೀಯ ಸಮೀಕರಣಗಳು ಸೃಷ್ಟಿಯಾಗಿದ್ದು, ವಿಜಯ್ ಅವರು ಶೀಘ್ರದಲ್ಲೇ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ.

ಮೈತ್ರಿ ಮಾತುಕತೆ ಮತ್ತು ಸಚಿವ ಸ್ಥಾನ
ಮೂಲಗಳ ಪ್ರಕಾರ, ವಿಜಯ್ ನೇತೃತ್ವದ ನೂತನ ಸರ್ಕಾರದಲ್ಲಿ ಕಾಂಗ್ರೆಸ್ ಎರಡು ಸಚಿವ ಸ್ಥಾನಗಳನ್ನು ನಿರೀಕ್ಷಿಸುತ್ತಿದೆ.ಕಾಂಗ್ರೆಸ್ ನಾಯಕರಾದ ಗಿರೀಶ್ ಚೋಡಂಕರ್ ಮತ್ತು ಪ್ರವೀಣ್ ಚಕ್ರವರ್ತಿ ಅವರು ಟಿವಿಕೆ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ರಾಹುಲ್ ಗಾಂಧಿ ಅವರು ಮೊದಲೇ ಬೆಂಬಲದ ಒಲವು ಹೊಂದಿದ್ದರು, ಆದರೆ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಶಯದಂತೆ ತಮಿಳುನಾಡು ಹಿರಿಯ ಕಾಂಗ್ರೆಸ್ ನಾಯಕರ ಆನ್‌ಲೈನ್ ಸಭೆಯ ನಂತರ ಈ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮತ್ತಷ್ಟು ಓದಿ: Assembly Elections 2026: ಪಶ್ಚಿಮ ಬಂಗಾಳ, ತಮಿಳುನಾಡು ವಿಧಾನಸಭಾ ಚುನಾವಣೆ, ಮತದಾನ ಶುರು, ಯಾರ್ಯಾರ ನಡುವೆ ಪೈಪೋಟಿ

ಸಂಖ್ಯಾಬಲದ ಲೆಕ್ಕಾಚಾರ
234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅವಶ್ಯಕತೆಯಿದೆ. 108 ಸ್ಥಾನಗಳನ್ನು ಗೆದ್ದಿರುವ ಟಿವಿಕೆಗೆ ಬಹುಮತಕ್ಕೆ 10 ಸ್ಥಾನಗಳ ಕೊರತೆಯಿತ್ತು. ಐದು ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಬೆಂಬಲದೊಂದಿಗೆ ಟಿವಿಕೆ ಬಲ ಈಗ 113ಕ್ಕೆ ಏರಿದೆ. ಬಹುಮತ ಸಾಬೀತುಪಡಿಸಲು ಡಿಎಂಕೆ ಮೈತ್ರಿಕೂಟದಲ್ಲಿದ್ದ ಸಿಪಿಐ (2 ಸ್ಥಾನ), ಸಿಪಿಎಂ (2 ಸ್ಥಾನ) ಮತ್ತು ವಿಸಿಕೆ (2 ಸ್ಥಾನ) ಪಕ್ಷಗಳ ಬೆಂಬಲವನ್ನು ಟಿವಿಕೆ ನಿರೀಕ್ಷಿಸುತ್ತಿದೆ.

ಸಂವಿಧಾನ ರಕ್ಷಣೆ ಮತ್ತು ಬಿಜೆಪಿ ವಿರೋಧ
ಬಿಜೆಪಿಯನ್ನು ರಾಜ್ಯದಿಂದ ದೂರವಿಡಲು ಮತ್ತು ಸಂವಿಧಾನವನ್ನು ರಕ್ಷಿಸಲು ಜಾತ್ಯತೀತ ಸರ್ಕಾರದ ಅಗತ್ಯವಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ತಮಿಳುನಾಡಿನ ಮಾಜಿ ಸಿಎಂ ಕಾಮರಾಜ್ ಅವರಿಂದ ಸ್ಫೂರ್ತಿ ಪಡೆಯುವ ಬಗ್ಗೆ ವಿಜಯ್ ಮಾತನಾಡಿರುವುದು ಮೈತ್ರಿಗೆ ಪೂರಕವಾಗಿದೆ.

ವಿಜಯ್ ಭಾವನಾತ್ಮಕ ಸಂದೇಶ
ಐತಿಹಾಸಿಕ ಜಯದ ನಂತರ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ವಿಜಯ್, ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ. ಪಕ್ಷ ಪ್ರಾರಂಭಿಸಿದಾಗ ನಮ್ಮ ವಿರುದ್ಧ ಮಾತನಾಡಿದವರನ್ನು ಜಯಿಸಿ, ಜನರನ್ನು ನಂಬಿ ಏಕಾಂಗಿಯಾಗಿ ನಿಂತು ಈ ಹಂತ ತಲುಪಿದ್ದೇವೆ ಎಂದು ಅವರು ಹೇಳಿದ್ದಾರೆ.
ನಮ್ಮನ್ನು ಯಾವಾಗಲೂ ತಾಯಿಯಂತೆ ಬೆಂಬಲಿಸಿದ ತಮಿಳುನಾಡಿನ ಜನರಿಗೆ ನಾನು ಜೀವಮಾನದ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.

ಈ ಭರ್ಜರಿ ಜಯವು ಕೇವಲ ಪಕ್ಷದ ಗೆಲುವಲ್ಲ, ಇದು ಪ್ರಜಾಪ್ರಭುತ್ವದ ಗೆಲುವು ಎಂದು ವಿಜಯ್ ಅಭಿಪ್ರಾಯಪಟ್ಟಿದ್ದಾರೆ. ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಲಿರುವ ವಿಜಯ್, ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:28 am, Wed, 6 May 26

Source link

ಬೀದಿ ಪಾಲಾಯ್ತು ಜೆಡಿ ಜೀವನ; ಗೂಡಂಗಡಿಯಲ್ಲಿ ಊಟ – Kannada News | Amruthadhare Serial Update Jayadev In Big trouble

‘ಅಮೃತಧಾರೆ’ ಧಾರಾವಾಹಿಯಲ್ಲಿ ಜೆಡಿ ಹಾಯಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದ ವ್ಯಕ್ತಿ. ಅಣ್ಣನ ಆಸ್ತಿಯನ್ನೆಲ್ಲ ಕಬಳಿಸಿ, ಬೇರೆಯದೇ ರೀತಿಯಲ್ಲಿ ಬದುಕಲು ಆರಂಭಿಸಿದ. ಆದರೆ, ಈಗ ಆತನ ಪಾಪದ ಕೊಡ ತುಂಬಿ ತುಳುಕುತ್ತಿದೆ. ಹೀಗಾಗಿ, ಆತನಿಗೆ ಕೆಟ್ಟ ದಿನಗಳು ಆರಂಭವಾದವೂ ಎಂದರೂ ತಪ್ಪಾಗಲಾರದು. ಆ ಬಗ್ಗೆ ಇಲ್ಲಿದೆ ವಿವರ.

‘ಅಮೃತಧಾರೆ’ ಧಾರಾವಾಹಿಯಲ್ಲಿ ಬೆಟ್ಟಿಂಗ್ ಆ್ಯಪ್ ಮಾಡಿಕೊಂಡ ಜಯದೇವ್ ನಂತರ ಅದರಿಂದ ಸಾಕಷ್ಟು ನಷ್ಟ ಅನುಭವಿಸಿದೆ. ಈ ನಷ್ಟದಿಂದ ಹೊರಬರುವ ಮೊದಲೇ ಆತನ ಮನೆ, ಕಚೇರಿ ಎಲ್ಲವೂ ಸೀಝ್ ಆಯಿತು. ಈಗ ಗೌತಮ್ ಮರಳಿ ಮನೆ, ಕಂಪನಿ ಎಲ್ಲವನ್ನೂ ಮರಳಿ ಪಡೆದಿದ್ದಾನೆ.

ಇದನ್ನೂ ಓದಿ: ‘ಅಮೃತಧಾರೆ’: ಮೋಸ ಮಾಡಿ ಕಾಲ್ಕಿತ್ತ ಜೆಡಿ ಪತ್ನಿ ದಿಯಾ; ಬೀದಿಗೆ ಬಂದ ಜಯದೇವ್

ಒಂದು ಕಡೆ ಅಮ್ಮನನ್ನು ಜಯದೇವ್ ದೂರ ಮಾಡಿಕೊಂಡ. ಅಣ್ಣನಿಗಂತೂ ಮುಖ ತೋರಿಸುವ ಸ್ಥಿತಿಯಲ್ಲಿ ಆತ ಇಲ್ಲ. ಇದರ ಜೊತೆಗೆ ಮತ್ತೊಂದು ಅಚ್ಚರಿಯ ಘಟನೆ ಎಂದರೆ ಈತನ ಪತ್ನಿ ದಿಯಾ ಎನಿಸಿಕೊಂಡವಳು ಮೋಸ ಮಾಡಿ ಓಡಿ ಹೋಗಿದ್ದಾಳೆ. ಇದೆಲ್ಲವೂ ಜಯದೇವ್​​ಗೆ ಶಾಕಿಂಗ್ ಎನಿಸಿದೆ. ಈಗ ಆತನು ಬೀದಿ ಬದಿಯಲ್ಲೇ ಮಲಗುವಂತಾಗಿದೆ. ಈ ಸಮಯದಲ್ಲಿ ಆತನ ಕೈ ಬೆರಳಲ್ಲಿ ಇದ್ದ ಚಿನ್ನದ ಉಂಗುರುವನ್ನು ವ್ಯಕ್ತಿಯೋರ್ವ ಕದ್ದು ಓಡಿದ್ದಾನೆ. ಇದರಿಂದ ಜಯದೇವ್ ಶಾಕ್​ಗೆ ಒಳಗಾಗಿದ್ದಾನೆ. ಮುಂದಿನ ದಿನಗಳಲ್ಲಿ ಧಾರಾವಾಹಿ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

‘ಅಮೃತಧಾರೆ’ ಧಾರಾವಾಹಿ ಕೊನೆಯ ಹಂತಕ್ಕೆ ತಲುಪಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಏಕೆಂದರೆ, ಈಗಾಗಲೇ ಜಯದೇವ್​​ಗೆ ಕೆಟ್ಟ ಪರಿಸ್ಥಿತಿ ಬಂದಿದೆ. ಅವನ ತಾಯಿ ಬದಲಾಗಿದ್ದಾಳೆ. ಇನ್ನು, ಗೌತಮ್​​ಗೂ ಮನೆ ಮರಳಿ ಸಿಕ್ಕಿದೆ. ಈಗ ಅವರ ಜಾತಕದಲ್ಲಿ ಮಗಳಿಂದ ಕೆಟ್ಟದಾಗುತ್ತದೆ ಎಂಬುದು ಬಂದಿದೆ. ಈ ಆ್ಯಂಗಲ್​​ನಲ್ಲಿ ಕಥೆ ಹೋಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಶೀಘ್ರವೇ ‘ಜಗದ್ಧಾತ್ರಿ’ ಸಿನಿಮಾ ಬರಲಿದೆ. ಈ ಧಾರಾವಾಹಿ ಯಾವಾಗ ಪ್ರಸಾರ ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಿರಿಯ ನಿರ್ಮಾಪಕ ಆರ್‌.ಬಿ. ಚೌಧರಿ ನಿಧನ: ರಜನಿಕಾಂತ್, ಪವನ್ ಕಲ್ಯಾಣ್, ಚಿರಂಜೀವಿ ಕಂಬನಿ – Kannada News | Producer RB Choudary passes away in Road Accident tributes pour in

ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ‘ಸೂಪರ್ ಗುಡ್ ಫಿಲ್ಮ್ಸ್’ ಸಂಸ್ಥಾಪಕ ಹಾಗೂ ಹಿರಿಯ ನಿರ್ಮಾಪಕ ಆರ್‌.ಬಿ. ಚೌಧರಿ (RB Choudary) ಅವರು ಮಂಗಳವಾರ (ಮೇ 5) ರಾಜಸ್ಥಾನದ ಉದಯಪುರ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಇಂದು (ಮೇ 6) ಚೆನ್ನೈಗೆ ತರಲಾಗುವುದು ಎಂದು ತಿಳಿದುಬಂದಿದೆ. ಅನೇಕ ಯುವ ಪ್ರತಿಭೆಗಳಿಗೆ ಹಾಗೂ ಖ್ಯಾತ ನಟರಿಗೆ ಬ್ರೇಕ್ ನೀಡಿದ್ದ ಚೌಧರಿ ಅವರ ಹಠಾತ್ ನಿಧನ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಆಘಾತ ಮೂಡಿಸಿದೆ. ಚಿತ್ರರಂಗದ ದಿಗ್ಗಜರಾದ ರಜನಿಕಾಂತ್, ಚಿರಂಜೀವಿ (Chiranjeevi), ಪವನ್ ಕಲ್ಯಾಣ್ ಸೇರಿದಂತೆ ಹಲವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

1. ರಾಜಸ್ಥಾನದ ಉದಯಪುರ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತ.

2. ದಕ್ಷಿಣ ಭಾರತದ ಹಿರಿಯ ನಿರ್ಮಾಪಕ ಆರ್​.ಬಿ. ಚೌಧರಿ ನಿಧನ.

3. ಚೌಧರಿ ನಿಧನಕ್ಕೆ ಚಿತ್ರರಂಗದ ಹಲವರು ಕಂಬನಿ ಮಿಡಿಯುತ್ತಿದ್ದಾರೆ.

ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಅವರು ಎಕ್ಸ್ (X) ಖಾತೆಯಲ್ಲಿ ಸಂತಾಪ ಸೂಚಿಸಿದ್ದು, ‘ಖ್ಯಾತ ನಿರ್ಮಾಪಕ ಆರ್‌.ಬಿ. ಚೌಧರಿ ಅವರ ಅಗಲಿಕೆ ನನ್ನನ್ನು ಸ್ತಬ್ಧಗೊಳಿಸಿದೆ. ಉದಯಪುರದಲ್ಲಿ ನಡೆದ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಅಭಿನಯದ ‘ಸುಸ್ವಾಗತಂ’ ಚಿತ್ರವನ್ನು ಅವರೇ ನಿರ್ಮಿಸಿದ್ದರು. ಕುಟುಂಬ ಸಮೇತ ನೋಡಬಹುದಾದ ಕಥೆಗಳನ್ನು ಆಯ್ಕೆ ಮಾಡುವಲ್ಲಿ ಅವರು ಎತ್ತಿದ ಕೈ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಬರೆದುಕೊಂಡಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಕಂಬನಿ ಮಿಡಿದಿದ್ದಾರೆ. ‘ನನ್ನ ಆತ್ಮೀಯ ಗೆಳೆಯ ಆರ್‌.ಬಿ. ಚೌಧರಿ ಅದ್ಭುತ ಮನುಷ್ಯ ಮತ್ತು ಶ್ರೇಷ್ಠ ನಿರ್ಮಾಪಕ. ಅದೆಷ್ಟೋ ಯುವ ನಿರ್ದೇಶಕರಿಗೆ ಅವರು ಅವಕಾಶ ನೀಡಿದ್ದರು. ಅವರ ಅಕಾಲಿಕ ಮರಣ ನನಗೆ ತೀವ್ರ ದುಃಖ ತಂದಿದೆ’ ಎಂದು ಅವರು ಪೋಸ್ಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

‘ಲೆಜೆಂಡರಿ ನಿರ್ಮಾಪಕರಾದ ಆರ್.ಬಿ. ಚೌಧರಿ ಅವರ ಹಠಾತ್ ಮತ್ತು ದುರಂತ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ಆಘಾತವಾಗಿದೆ. ನನಗೆ ಅವರು ಹಲವು ವರ್ಷಗಳಿಂದ ಪರಿಚಯವಿದ್ದರು ಮತ್ತು ಇತ್ತೀಚೆಗೆ ಸೂಪರ್ ಗುಡ್ ಫಿಲ್ಮ್ಸ್ ಸಂಸ್ಥೆಯ ಮೂಲಕ ನನ್ನ ‘ಗಾಡ್ ಫಾದರ್’ ಚಿತ್ರದಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೆ. ಅವರು ಅದೆಷ್ಟೋ ಪ್ರತಿಭಾವಂತ ನಿರ್ದೇಶಕರು ಮತ್ತು ನಟರ ವೃತ್ತಿಜೀವನವನ್ನು ರೂಪಿಸಿದ್ದಾರೆ ಹಾಗೂ ಅಸಂಖ್ಯಾತ ಕಥೆಗಳಿಗೆ ಜೀವ ತುಂಬಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಪದಗಳಿಗೆ ಮೀರಿದ್ದು. ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಈ ಊಹಿಸಲೂ ಸಾಧ್ಯವಾಗದ ನಷ್ಟವನ್ನು ಭರಿಸುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ’ ಎಂದು ಚಿರಂಜೀವಿ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಖ್ಯಾತ ನಿರ್ಮಾಪಕ ಆರ್.ಬಿ. ಚೌಧರಿ ನಿಧನ; ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ

‘ಆರ್.ಬಿ. ಚೌಧರಿ ಸರ್ ಇನ್ನು ನಮ್ಮೊಂದಿಗಿಲ್ಲ ಎಂದು ತಿಳಿಯಲು ತುಂಬಾ ಬೇಸರವಾಗುತ್ತಿದೆ. ಅವರ ಅಕಾಲಿಕ ನಿಧನವು ಆಘಾತಕಾರಿಯಾಗಿದೆ. ಅವರ ಬ್ಯಾನರ್ ಅಡಿಯಲ್ಲಿ ನಾನು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇನೆ. ಅವರು ಚಿತ್ರರಂಗದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಯಾವಾಗಲೂ ನಗುಮುಖದ ಮತ್ತು ಆತ್ಮವಿಶ್ವಾಸದ ಹಸ್ತಲಾಘವ ನೀಡುತ್ತಿದ್ದ ವ್ಯಕ್ತಿಯಾಗಿ ನಾನು ಅವರನ್ನು ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ’ ಎಂದು ನಟಿ ಖುಷ್ಬೂ ಸಂತಾಪ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೋಟೆಲ್, ಆಟೋ ಬೆನ್ನಲ್ಲೇ ಈಗ ಪಿಜಿ ಸರದಿ: ಬೆಂಗಳೂರಿನಲ್ಲಿ ಶೇ 10ರಷ್ಟು ದುಬಾರಿಯಾಗಲಿದೆ ಪಿಜಿ ಬಾಡಿಗೆ – Kannada News | Bengaluru PG Rent Hike: Paying Guest Accommodation to Get 10 percent Dearer After Commercial LPG Cylinder Price Surge

ಬೆಂಗಳೂರು, ಮೇ 6: ಪಂಚ ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ ಕೇಂದ್ರ ಸರ್ಕಾರ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ. ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ ಏಕಾಏಕಿ ಭಾರಿ ಏರಿಕೆ ಮಾಡಿರುವುದು ಈಗ ಹೋಟೆಲ್ ಉದ್ಯಮ ಮತ್ತು ಆಟೋ ಚಾಲಕರ ನಂತರ ನೇರವಾಗಿ ಪೇಯಿಂಗ್ ಗೆಸ್ಟ್ (PG) ನಿವಾಸಿಗಳ ಮೇಲೆ ಪರಿಣಾಮ ಬೀರಲಿದೆ. ಸಿಲಿಂಡರ್ ದರ ಏರಿಕೆಯ ಭೀತಿಯಿಂದಾಗಿ ಬೆಂಗಳೂರಿನಲ್ಲಿ (Bengaluru) ಪಿಜಿ ಬಾಡಿಗೆ ದರಗಳು ಇನ್ನಷ್ಟು ದುಬಾರಿಯಾಗಲಿವೆ.

ಮುಖ್ಯಾಂಶಗಳು

  • ಕಮರ್ಷಿಯಲ್ ಸಿಲಿಂಡರ್ ದರ ಏರಿಕೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಪಿಜಿ ಬಾಡಿಗೆ ಹೆಚ್ಚಳಕ್ಕೆ ಮಾಲೀಕರ ಚಿಂತನೆ.
  • ಪಿಜಿ ಬಾಡಿಗೆ ದರವನ್ನು ಶೇಕಡಾ 5% ರಿಂದ 10% ರಷ್ಟು ಹೆಚ್ಚಿಸಲು ಪಿಜಿ ಅಸೋಸಿಯೇಷನ್ ಚಿಂತನೆ.
  • ಯುದ್ಧದ ಪರಿಣಾಮ ಸಿಲಿಂಡರ್ ಪೂರೈಕೆ ವ್ಯತ್ಯಯ; ಸೌದೆ ಒಲೆ ಬಳಸಿ ಅಡುಗೆ ಮಾಡುತ್ತಿರುವ ಹಲವು ಪಿಜಿಗಳು.

ಸಿಲಿಂಡರ್ ದರ ಏರಿಕೆಯ ಬಿಸಿ

ಕೇಂದ್ರ ಸರ್ಕಾರ ಕಮರ್ಷಿಯಲ್ ಸಿಲಿಂಡರ್ ಬೆಲೆಯನ್ನು ಏಕಾಏಕಿ 993 ರೂಪಾಯಿಗಳಷ್ಟು ಏರಿಕೆ ಮಾಡಿದೆ. ಇದರ ನೇರ ಪರಿಣಾಮವಾಗಿ ಈಗಾಗಲೇ ಬೆಂಗಳೂರಿನ ಹೋಟೆಲ್‌ಗಳಲ್ಲಿ ತಿಂಡಿ ಮತ್ತು ಊಟದ ಬೆಲೆಗಳು ಹೆಚ್ಚಾಗಿವೆ. ಇದರ ಬೆನ್ನಲ್ಲೇ ಆಟೋ ಎಲ್‌ಪಿಜಿ ಗ್ಯಾಸ್ ಬೆಲೆಯೂ ಲೀಟರ್‌ಗೆ 5.73 ಪೈಸೆ ಏರಿಕೆಯಾಗಿದ್ದು, ಆಟೋ ಚಾಲಕರು ಮೀಟರ್ ದರ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ. ಈಗ ಈ ಸಾಲಿಗೆ ಪಿಜಿ ಮಾಲೀಕರೂ ಸೇರಿದ್ದು, ಬಾಡಿಗೆ ಹೆಚ್ಚಳ ಅನಿವಾರ್ಯ ಎಂದು ವಾದಿಸುತ್ತಿದ್ದಾರೆ.

ಅನಿವಾರ್ಯವಾಯಿತೇ ಬಾಡಿಗೆ ಹೆಚ್ಚಳ?

ಈ ಕುರಿತು ಪ್ರತಿಕ್ರಿಯಿಸಿರುವ ಪಿಜಿ ಅಸೋಸಿಯೇಷನ್ ಅಧ್ಯಕ್ಷರಾದ ಅರುಣ್ ಕುಮಾರ್ ಅವರು, ‘ದಿಢೀರ್ ಆಗಿ ಕಮರ್ಷಿಯಲ್ ಗ್ಯಾಸ್ ಬೆಲೆ 993 ರೂಪಾಯಿ ಜಾಸ್ತಿಯಾಗಿರುವುದು ಪಿಜಿ ಮಾಲೀಕರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಅಗತ್ಯ ಆಹಾರ ಪೂರೈಕೆ ಮಾಡಲು ಪಿಜಿ ಮಾಲೀಕರು ಹರಸಾಹಸ ಪಡುತ್ತಿದ್ದಾರೆ. ಕೆಲವು ಪಿಜಿಗಳಲ್ಲಿ ಅನಿವಾರ್ಯವಾಗಿ ಸೌದೆ ಒಲೆ ಬಳಸಿ ಅಡುಗೆ ಮಾಡಲಾಗುತ್ತಿದೆ ಮತ್ತು ಮೆನ್ಯುನಲ್ಲಿ ಕಡಿತ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗ್ಯಾಸ್ ಬೆಲೆ ಏರಿಕೆಯ ಹೊರೆಯನ್ನು ಹೊರಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.

ದಿನೇ ದಿನೇ ದುಬಾರಿಯಾಗುತ್ತಿರುವ ಬೆಂಗಳೂರಿನಲ್ಲಿ ಪಿಜಿಗಳನ್ನು ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ ಎಂದು ಪಿಜಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಹಾಗಾಗಿ, ಅನಿವಾರ್ಯವಾಗಿ ಈ ಹೊರೆಯನ್ನು ಪಿಜಿ ನಿವಾಸಿಗಳ ಮೇಲೆ ಹಾಕಲು ನಿರ್ಧರಿಸಲಾಗಿದ್ದು, ಪಿಜಿ ಬಾಡಿಗೆಯನ್ನು ಶೇಕಡಾ 5% ರಿಂದ 10% ರಷ್ಟು ಹೆಚ್ಚಿಸಲು ಚಿಂತನೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ದರ ಏರಿಕೆಗೆ ಗ್ರೀನ್ ಸಿಗ್ನಲ್, ಎಷ್ಟು ಹೆಚ್ಚಾಗಲಿದೆ? ಇಲ್ಲಿದೆ ವಿವರ

ಕೇಂದ್ರ ಸರ್ಕಾರ ಕಳೆದ ಮೂರು ತಿಂಗಳಲ್ಲಿ ಸಿಲಿಂಡರ್ ಬೆಲೆಯನ್ನು ಸುಮಾರು 1200 ರೂಪಾಯಿಗಳವರೆಗೆ ಹೆಚ್ಚಿಸಿದೆ, ಇದು ಬೀದಿಬದಿ ವ್ಯಾಪಾರಿಗಳು, ಮಧ್ಯಮ ಗಾತ್ರದ ಹೋಟೆಲ್‌ಗಳು ಮತ್ತು ಪಿಜಿ ಉದ್ಯಮವನ್ನು ಸಂಕಷ್ಟಕ್ಕೆ ದೂಡಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Horoscope: ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಆಸ್ತಿ ಯೋಗ

ಬೆಂಗಳೂರು, ಮೇ.6: 2026ರ ಮೇ 6ರ ಬುಧವಾರದ ದೈನಿಕ ರಾಶಿಫಲವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಇಲ್ಲಿದೆ ಹೇಳಿದ್ದಾರೆ . ಈ ದಿನವು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣ ಪಕ್ಷದ ಪಂಚಮಿ ತಿಥಿಯನ್ನು ಒಳಗೊಂಡಿದೆ. ಮೂಲಾ ನಕ್ಷತ್ರದಲ್ಲಿ ಚಂದ್ರನ ಸಂಚಾರವು ದ್ವಾದಶ ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರಲಿದೆ ಎಂದು ಗುರೂಜಿ ವಿವರಿಸಿದ್ದಾರೆ. ಮೇಷ ರಾಶಿಯವರಿಗೆ ಆರ್ಥಿಕವಾಗಿ ಶುಭವಾಗಿದ್ದು, ವೃತ್ತಿ ಜೀವನ ಉತ್ತಮವಾಗಿರುತ್ತದೆ. ವೃಷಭ ರಾಶಿಯವರು ಖರ್ಚುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಿಥುನ ರಾಶಿಯವರಿಗೆ ಅಧಿಕ ಆದಾಯ ಮತ್ತು ಹೊಸ ಆಸ್ತಿ ಖರೀದಿಸುವ ಯೋಗವಿದೆ. ಕರ್ಕಾಟಕ ರಾಶಿಯವರಿಗೆ ಗುರಿ ನಿರ್ಧಾರ ಮತ್ತು ಹಳೆಯ ಆಸ್ತಿ ಕಲಹ ಇತ್ಯರ್ಥವಾಗುವ ಸಾಧ್ಯತೆ ಇದೆ. ಸಿಂಹ ರಾಶಿಯವರಿಗೆ ಆದಾಯದಲ್ಲಿ ಏರಿಕೆ ಮತ್ತು ಉದ್ಯೋಗದಲ್ಲಿ ಬಡ್ತಿ ಯೋಗವಿದೆ. ಕನ್ಯಾ ರಾಶಿಯವರಿಗೆ ಯೋಜನೆಗಳಿಗೆ ಮನ್ನಣೆ ದೊರೆಯಲಿದೆ. ತುಲಾ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಸುಧಾರಣೆ ಕಂಡರೆ, ವೃಶ್ಚಿಕ ರಾಶಿಯವರಿಗೆ ಮಾತಿನಿಂದ ಲಾಭ ಮತ್ತು ಧನ ಯೋಗವಿದೆ. ಧನುಸ್ಸು ರಾಶಿಯವರಿಗೆ ಹಣಕಾಸು ಉತ್ತಮವಾಗಿದ್ದು, ಮಕರ ರಾಶಿಯವರಿಗೆ ಶುಭ ಸುದ್ದಿ ಮತ್ತು ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವ ಯೋಗವಿದೆ. ಕುಂಭ ರಾಶಿಯವರು ಆರ್ಥಿಕ ನಿರೀಕ್ಷೆಗಳಲ್ಲಿ ಎಚ್ಚರಿಕೆ ವಹಿಸಬೇಕು. ಮೀನ ರಾಶಿಯವರಿಗೆ ನಿರೀಕ್ಷಿತ ಫಲಗಳು ಮತ್ತು ಭೂ ವ್ಯವಹಾರ ಯೋಗವಿದೆ. ಪ್ರತಿಯೊಂದು ರಾಶಿಗೂ ನಿರ್ದಿಷ್ಟ ಅದೃಷ್ಟದ ಬಣ್ಣ, ಸಂಖ್ಯೆ ಮತ್ತು ದೇವತಾ ಮಂತ್ರಗಳನ್ನು ಸೂಚಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka AQI Update: ರಾಜ್ಯದ ವಾಯು ಗುಣಮಟ್ಟದಲ್ಲಿ ಸುಧಾರಣೆ: ಬೆಂಗಳೂರಿನಲ್ಲಿ ಮಳೆ ತಂದ ತಂಪು, ಶಿವಮೊಗ್ಗದ ಗಾಳಿ ಅತ್ಯಂತ ಸ್ವಚ್ಛ! – Kannada News | Karnataka Air Quality Update: Bengaluru Sees AQI Improvement, Mysuru Excellent

ಬೆಂಗಳೂರು, ಮೇ.6: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಳಿಯ ಮಟ್ಟದಲ್ಲಿ ಸುಧಾರಣೆಯನ್ನು ಕಂಡಿದೆ. ಬೆಂಗಳೂರಿನಲ್ಲಿ ಮಳೆ ಹಾಗೂ ತಂಪು ವಾತಾವರಣ ಇರುವ ಕಾರಣ ಧೂಳಿನ ಮಟ್ಟ ಕಡಿಮೆ ಇರುತ್ತದೆ. ನಗರದ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು (AQI) 96 ರಿಂದ 118 ರ ಆಸುಪಾಸಿನಲ್ಲಿ ದಾಖಲಾಗಿದೆ. ಕೆಲವೊಂದು ಕಡೆ ರಸ್ತೆ ಕಾಮಗಾರಿಗಳು ಆಗುತ್ತಿರುವ ಕಾರಣ ಹಾಗೂ ವಾಹನ ದಟಣೆ ಇರುವ ಕಾರಣ ಗಾಳಿ ಮಟ್ಟದಲ್ಲಿ ಸ್ವಲ್ಪ ಬದಲಾವಣೆ ಕಾಣಬಹುದು.

ನಗರದ ಬಹುತೇಕ ಭಾಗಗಳಲ್ಲಿ AQI ಮಟ್ಟವು ಸಾಧಾರಣವಾಗಿದ್ದರೂ, ಸಿಲ್ಕ್ ಬೋರ್ಡ್ ಮತ್ತು ಬಿಟಿಎಂ ಲೇಔಟ್‌ನಂತಹ ದಟ್ಟಣೆಯ ಪ್ರದೇಶಗಳಲ್ಲಿ ಮಾಲಿನ್ಯ ತುಸು ಹೆಚ್ಚಿದೆ. ಇಲ್ಲಿನ ಪ್ರಮುಖ ಮಾಲಿನ್ಯಕಾರಕ PM2.5 ಕಣಗಳ ಪ್ರಮಾಣವು ಪ್ರತಿ ಘನ ಮೀಟರ್‌ಗೆ 33 ಮೈಕ್ರೋಗ್ರಾಂ ನಷ್ಟಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಾಯು ಗುಣಮಟ್ಟವು ಅತ್ಯುತ್ತಮವಾಗಿದ್ದು, ಅಂದಾಜು 74 ರಿಂದ 86 (ಸಾಧಾರಣ/ತೃಪ್ತಿಕರ) ಮಟ್ಟದಲ್ಲಿ ದಾಖಲಾಗಿದೆ. ಹೆಬ್ಬಾಳದಂತಹ ಕೆಲವು ಭಾಗಗಳಲ್ಲಿ AQI ಅತ್ಯಂತ ಕಡಿಮೆ ಅಂದರೆ 27 (ಉತ್ತಮ) ಮಟ್ಟದಲ್ಲಿದೆ.

ಉತ್ತರ ಕರ್ನಾಟಕ ಈ ಭಾಗಗಳಲ್ಲಿ ತಾಪಮಾನ ಹೆಚ್ಚಿರುವುದರಿಂದ ಗಾಳಿಯಲ್ಲಿ ಧೂಳಿನ ಕಣಗಳ ಪ್ರಮಾಣ ಸ್ವಲ್ಪ ಹೆಚ್ಚಾಗಿದ್ದು, AQI ಮಟ್ಟವು 80 ರಿಂದ 100 ರ ನಡುವೆ ಇರುವ ಸಾಧ್ಯತೆಯಿದೆ. ಇನ್ನು ಶಿವಮೊಗ್ಗ ಜಿಲ್ಲೆಯು ಪಟ್ಟಿಯಲ್ಲಿರುವ ಇತರ ಜಿಲ್ಲೆಗಳಿಗಿಂತ ಉತ್ತಮವಾದ ಗಾಳಿಯ ಗುಣಮಟ್ಟವನ್ನು ಹೊಂದಿದೆ.ರಾಯಚೂರು ಜಿಲ್ಲೆಯ ಬಗ್ಗೆ ಇತ್ತೀಚಿನ ನಿಖರವಾದ AQI ಅಂಕಿಅಂಶಗಳು ಲಭ್ಯವಿಲ್ಲದಿದ್ದರೂ, ಅಲ್ಲಿನ ಹೆಚ್ಚಿನ ತಾಪಮಾನ ಮತ್ತು ಒಣಹವೆಯ ಕಾರಣದಿಂದ ಧೂಳಿನ ಕಣಗಳ ಪ್ರಮಾಣ ಸಾಧಾರಣದಿಂದ ತುಸು ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಮಂಗಳೂರು, ಉಡುಪಿ, ಮಡಿಕೇರಿ, ಹಾಸನ, ಚಿಕ್ಕಮಗಳೂರಿನಲ್ಲಿ ಗಾಳಿಮಟ್ಟ ಸಾಧಾರಣವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದು ಸಂಜೆ ಭಾರೀ ಮಳೆ: ಬಿಸಿಯಲ್ಲಿ ಬೆಂದು ಹೋಗಿದ್ದ ಮಂಗಳೂರಿಗೆ ವರುಣನ ಸಿಂಚನ

ಬೆಂಗಳೂರಿನಂತಹ ನಗರಗಳಲ್ಲಿ ಉಸಿರಾಟದ ಸಮಸ್ಯೆ ಇರುವವರು ಮತ್ತು ಮಕ್ಕಳು ದೀರ್ಘಕಾಲ ಹೊರಗಡೆ ಓಡಾಡುವುದನ್ನು ಕಡಿಮೆ ಮಾಡುವುದು ಉತ್ತಮ. ಮಾಲಿನ್ಯ ಹೆಚ್ಚಿರುವ ಟ್ರಾಫಿಕ್ ಸಿಗ್ನಲ್‌ಗಳಲ್ಲಿ N95 ಮಾಸ್ಕ್ ಬಳಸುವುದು ಸೂಕ್ತ. ಇಂದು ಸಂಜೆ ಮಳೆಯಾಗುವ ಸಾಧ್ಯತೆ ಇರುವುದರಿಂದ, ಮಳೆಯ ನಂತರ ಗಾಳಿಯಲ್ಲಿನ ಮಾಲಿನ್ಯದ ಮಟ್ಟ ಕುಸಿಯುವ ನಿರೀಕ್ಷೆಯಿದೆ.

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:43 am, Wed, 6 May 26

Source link

Exit mobile version