ಮೆಕ್ಸಿಕೋದಲ್ಲಿ ಡ್ರಗ್ ಲಾರ್ಡ್ ಎಲ್ ಮೆಂಚೊ ಹತ್ಯೆ, ಭುಗಿಲೆದ್ದ ಹಿಂಸಾಚಾರ – Kannada News | Cartel Turmoil Erupts After Reported Death of El Mencho in Military Operation
ಮೆಕ್ಸಿಕೋ, ಫೆಬ್ರವರಿ 23: ವಿಶ್ವದ ಮೋಸ್ಟ್ ವಾಂಟೆಡ್ ಮಾದಕವಸ್ತು ಕಳ್ಳಸಾಗಣೆದಾರರಲ್ಲಿ ಎಲ್ ಮೆಂಚೊ ಕೂಡ ಒಬ್ಬ. ಆತನ ನಿಜವಾದ ಹೆಸರು ನೆಮೆಸಿಯೊ ರುಬೆನ್ ಒಸೆಗುರಾ ಸೆರ್ವಾಂಟೆಸ್ ಮಿಲಿಟರಿ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದಾನೆ. ಒಸೆಗುರಾ ಸಾವು ಮೆಕ್ಸಿಕೊದಾದ್ಯಂತ ಹಿಂಸಾಚಾರ ಭುಗಿಲೆದ್ದಿಗೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜಲಿಸ್ಕೊದಲ್ಲಿ ಮೆಕ್ಸಿಕನ್ ಭದ್ರತಾ ಪಡೆಗಳು ಈ ಕಾರ್ಯಾಚರಣೆಯನ್ನು ನಡೆಸಿವೆ. 59 ವರ್ಷದ ಪರಾರಿಯಾಗಿದ್ದ ಡ್ರಗ್ ಲಾರ್ಡ್ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. ಆತನನ್ನು ಹಿಡಿದುಕೊಟ್ಟವರಿಗೆ 15 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ…