7 ರಾಜ್ಯಗಳಿಂದ 22 ರಾಜ್ಯಗಳಿಗೆ ಅಧಿಕಾರ ವ್ಯಾಪಿಸಿದ್ಹೇಗೆ? 2014 ರಿಂದ 2026ರ ವರೆಗಿನ ಬಿಜೆಪಿಯ ರಾಜಕೀಯ ರಣತಂತ್ರ – Kannada News | With BJP set to win Bengal, how India’s political map has changed

ನವದೆಹಲಿ, (ಮೇ 05): ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ (Five State Election) ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ. ಅಸ್ಸಾಂ (Assam), ಪುದುಚೇರಿಯಲ್ಲಿಯಲ್ಲೂ ಬಿಜೆಪಿ ತನ್ನ ಹಿಡಿತವನ್ನು ಉಳಿಸಿಕೊಂಡಿದೆ. ವಿಶೇಷವಾಗಿ ಪಶ್ಚಿಮ ಬಂಗಾಳ (West Bengal) ಭರ್ಜರಿ ವಿಜಯ ಪತಾಕೆ ಹಾರಿಸಿದ್ದು, 15 ವರ್ಷಗಳ ದೀದಿ ಆಡಳಿತಕ್ಕೆ ಬಿಜೆಪಿ ಬ್ರೇಕ್ ಹಾಕಿದೆ. ಇದರೊಂದಿಗೆ ಬಿಜೆಪಿ ತನ್ನ ಅಧಿಕಾರ ವಿವಿಧ ರಾಜ್ಯಗಳಿಗೆ ವಿಸ್ತರಿಸಿದೆ. 2014 ರಿಂದ 2026ರ ವರೆಗಿನ ಬಿಜೆಪಿಯ ರಾಜಕೀಯ ರಣತಂತ್ರದೊಂದಿಗೆ 7 ರಾಜ್ಯಗಳಿಂದ 22 ರಾಜ್ಯಗಳಿಗೆ ಅಧಿಕಾರ ವ್ಯಾಪಿಸಿಕೊಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೆರಿಯಾಟ್ರಿಕ್ ಕಿಟ್ ಎಂದರೇನು? 60 ವರ್ಷ ಮೇಲ್ಪಟ್ಟವರು ಮನೆಯಲ್ಲಿದ್ದರೆ ಈ ಕಿಟ್ ಯಾಕೆ ಮುಖ್ಯ? – Kannada News | What Is a Geriatric Kit? Senior Health & Safety Checklist

ಇಂದಿನ ವೇಗದ ಜೀವನಶೈಲಿಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯವಾಗಿದೆ. ವಿಶೇಷವಾಗಿ 60 ವರ್ಷ ಮೇಲ್ಪಟ್ಟವರಲ್ಲಿ ದೈಹಿಕ ಸಾಮರ್ಥ್ಯ ನಿಧಾನವಾಗಿ ಕುಗ್ಗುವುದು ಸಹಜ, ಅದರಲ್ಲಿಯೂ ಕೆಲವೊಮ್ಮೆ ಸಣ್ಣ ಆರೋಗ್ಯ ಸಮಸ್ಯೆಗಳೂ ಗಂಭೀರವಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ತಕ್ಷಣದ ಸಹಾಯ ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಜೆರಿಯಾಟ್ರಿಕ್ ಕಿಟ್ (Geriatric Kit) ಇದ್ದರೆ ಬಹಳ ಒಳ್ಳೆಯದು. ಇದನ್ನು ನಾವು ಸುಲಭವಾಗಿ ಹಿರಿಯ ನಾಗರಿಕರ ಆರೈಕೆ ಕಿಟ್ ಎನ್ನಬಹುದು. ಹಾಗಾದರೆ ಇದರಲ್ಲಿ ಏನೇನಿರುತ್ತದೆ, ಹಿರಿಯರು ಇರುವ ಮನೆಯಲ್ಲಿ ಇದು ಯಾಕೆ ಮುಖ್ಯವಾಗಿ ಇರಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಜೆರಿಯಾಟ್ರಿಕ್ ಕಿಟ್ ಎಂದರೇನು?

ಹಿರಿಯ ನಾಗರಿಕರ ಆರೈಕೆ ಕಿಟ್ ಎಂಬುದು ಅವರ ಆರೋಗ್ಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾದ ಒಂದು ವಿಶೇಷ ಮೆಡಿಕಲ್ ಕಿಟ್. ಇದು ತುರ್ತು ಪರಿಸ್ಥಿತಿಯಲ್ಲಿ ತಕ್ಷಣದ ಪ್ರಾಥಮಿಕ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಆಸ್ಪತ್ರೆ ತಲುಪುವವರೆಗೆ ಅಗತ್ಯ ಸಹಾಯವನ್ನು ನೀಡಲು ಇದು ಉಪಯುಕ್ತವಾಗುತ್ತದೆ. ತಜ್ಞರ ಪ್ರಕಾರ, ಈ ಕಿಟ್‌ನಲ್ಲಿ ದಿನನಿತ್ಯ ಬಳಕೆಯ ಔಷಧಿಗಳು, ಫಸ್ಟ್ ಏಡ್ ಸಾಮಗ್ರಿಗಳು ಮತ್ತು ಕೆಲವು ಪ್ರಮುಖ ವೈದ್ಯಕೀಯ ಉಪಕರಣಗಳು ಇರಬೇಕು. ಉದಾಹರಣೆಗೆ ರಕ್ತದೊತ್ತಡ ಮಾಪಕ (BP ಯಂತ್ರ), ಥರ್ಮಾಮೀಟರ್, ಸ್ಟೆತಸ್ಕೋಪ್, ತೂಕದ ಯಂತ್ರ, ನಾಡಿ ಮಾಪಕ, ಶ್ರವಣ ಸಾಧನ, ಶುಗರ್ ಲೆವೆಲ್ ಪರೀಕ್ಷಾ ಸಾಧನಗಳು ಇತ್ಯಾದಿ. ಜೊತೆಗೆ ಪೇನ್ ಕಿಲರ್, ಬ್ಯಾಂಡೆಜ್, ಆಂಟಿಸೆಪ್ಟಿಕ್ ಕ್ರೀಮ್ ಮತ್ತು ಇತರ ಮೂಲಭೂತ ಔಷಧಿಗಳನ್ನು ಸೇರಿಸಬಹುದು. ಎಲ್ಲಾ ಔಷಧಿಗಳನ್ನು ವೈದ್ಯರ ಸಲಹೆಯಂತೆ ಇಡುವುದು ಮತ್ತು ಅವುಗಳ ಅವಧಿಯನ್ನು ನಿಯಮಿತವಾಗಿ ಪರಿಶೀಲಿಸುವುದು ಅಗತ್ಯ.

ಇದನ್ನೂ ಓದಿ: ಕಿವಿ ಕೇಳಿಸದಿರುವುದು ಕೇವಲ ವೃದ್ಧಾಪ್ಯದ ಸಮಸ್ಯೆಯಲ್ಲ; ಚಿಕ್ಕ ವಯಸ್ಸಿನಲ್ಲಿ ಹೀಗಾಗುವುದಕ್ಕೆ ಕಾರಣವೇನು?

ಹಿರಿಯರಿಗೆ ಇದು ಏಕೆ ಮುಖ್ಯ?

ಆರೋಗ್ಯ ಸಮಸ್ಯೆಗಳು ಹಿರಿಯರಲ್ಲಿ ಅಚಾನಕ್ ಉಂಟಾಗುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಸಣ್ಣ ತೊಂದರೆಗಳು ಕೂಡ ತ್ವರಿತವಾಗಿ ಗಂಭೀರವಾಗಬಹುದು. ಇಂತಹ ಸಂದರ್ಭಗಳಲ್ಲಿ ಜೆರಿಯಾಟ್ರಿಕ್ ಕಿಟ್ ಅಥವಾ ಈ ಆರೈಕೆ ಕಿಟ್ ತಕ್ಷಣದ ನೆರವನ್ನು ಒದಗಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ಮನೆಯಲ್ಲಿ ಸಿದ್ಧಪಡಿಸಿಕೊಳ್ಳುವಾಗ, ಮೊದಲು ವೈದ್ಯರ ಸಲಹೆ ಪಡೆದು ಹಿರಿಯರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಬೇಕು. ಅವನ್ನು ಸ್ವಚ್ಛವಾದ ಡಬ್ಬಿಯಲ್ಲಿ ಸರಿಯಾಗಿ ವ್ಯವಸ್ಥೆ ಮಾಡಿ, ಎಲ್ಲರಿಗೂ ಸುಲಭವಾಗಿ ಸಿಗುವ ಸ್ಥಳದಲ್ಲಿ ಇಡಬೇಕು. ಸಮಯಕ್ಕೆ ತಕ್ಕಂತೆ ಕಿಟ್ ಅನ್ನು ನವೀಕರಿಸುವುದೂ ಕೂಡ ಮುಖ್ಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆ, ದಾವಣಗೆರೆ ಉಪಸಮರದಲ್ಲಿ ಬಿಜೆಪಿಗೆ ಹಿನ್ನಡೆ; ಆಡಳಿತ ಪಕ್ಷದ ಪ್ರಭಾವಕ್ಕೆ ಗೆಲುವು ಎಂದ ವಿಜಯೇಂದ್ರ – Kannada News | Vijayendra Reflects on BJPs By election Defeat in Davangere South and Bagalkot

ದಾವಣಗೆರೆ, ಏ.5: ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶಗಳ ಕುರಿತು ಬಿ. ವೈ. ವಿಜಯೇಂದ್ರರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಕಂಡಿದ್ದು, ಗೆಲುವಿನ ನಿರೀಕ್ಷೆಗಳಿದ್ದವು ಎಂದು ಅವರು ತಿಳಿಸಿದರು. ಉಪಚುನಾವಣೆಗಳಲ್ಲಿ ಆಡಳಿತ ಪಕ್ಷದ ಪರವಾಗಿ ಮತದಾರರ ಒಲವು ಇರುವುದು ಸಹಜ ಎಂದು ಅವರು ಒಪ್ಪಿಕೊಂಡರು. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಅನುಕಂಪ ಹಾಗೂ ಆಡಳಿತ ಪಕ್ಷದ ವ್ಯವಸ್ಥೆಗಳು, ಮುಖ್ಯಮಂತ್ರಿಗಳು ಮತ್ತು ಸಚಿವರ ಪ್ರಚಾರ ಪರಿಣಾಮ ಬೀರಿದೆ ಎಂದು ವಿಜಯೇಂದ್ರ ವಿಶ್ಲೇಷಿಸಿದರು. ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ, 17 ಉಪಚುನಾವಣೆ ಕ್ಷೇತ್ರಗಳಲ್ಲಿ 15 ಕ್ಷೇತ್ರಗಳನ್ನು ಬಿಜೆಪಿ ಗೆದ್ದ ಉದಾಹರಣೆಯನ್ನು ವಿಜಯೇಂದ್ರ ನೀಡಿದರು. ಈ ಬಾರಿ ಬಾಗಲಕೋಟೆಯಲ್ಲಿ ಮತ್ತು ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸದಾಸ್ ಕರಿಯಪ್ಪನವರು ಗೆಲ್ಲಲು ಉತ್ತಮ ವಾತಾವರಣವಿತ್ತು ಎಂದರು. ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಹಗಲು ರಾತ್ರಿ ಶ್ರಮಿಸಿದ್ದರು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಮತಗಳು ಬಂದಿಲ್ಲ. ಶ್ರೀನಿವಾಸದಾಸ್ ಕರಿಯಪ್ಪನವರು ಸುಮಾರು 64,000 ಮತಗಳನ್ನು ಪಡೆದಿದ್ದು, 70,000 ಮತಗಳ ಗುರಿ ಇತ್ತು. ವಿಜಯೇಂದ್ರರವರು, ಭವಿಷ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ಉತ್ತಮ ದಿನಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಾರ್ಖಂಡ್ ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬಳಸಿ ಹೆರಿಗೆ; ತಾಯಿ, ಮಗು ಸಾವು – Kannada News | Jharkhand hospital staff used mobile torch light for delivery mother and newborn died

ಜಾರ್ಖಂಡ್, ಮೇ 5: ಜಾರ್ಖಂಡ್‌ನಲ್ಲಿ (Jharkhand) ಅಮಾನವೀಯ ಘಟನೆಯೊಂದು ನಡೆದಿದೆ. ಇಲ್ಲಿನ ಸೆರೈಕೆಲಾ-ಖರ್ಸವಾನ್ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿಎಚ್‌ಸಿ) ವಿದ್ಯುತ್ ಕಡಿತದಿಂದಾಗಿ ಆಸ್ಪತ್ರೆಯ ಸಿಬ್ಬಂದಿ ಮೊಬೈಲ್ ಟಾರ್ಚ್ ಹಾಕಿಕೊಂಡು ಡೆಲಿವರಿ ಮಾಡಿಸಿದ್ದಾರೆ. ಇದಾದ ಬಳಿಕ ಮಹಿಳೆ ಮತ್ತು ಅವರ ನವಜಾತ ಶಿಶು ಸಾವನ್ನಪ್ಪಿದೆ. ಆಸ್ಪತ್ರೆ ಸಿಬ್ಬಂದಿ ಮೊಬೈಲ್ ಫೋನ್ ಬೆಳಕನ್ನು ಬಳಸಿ ಹೆರಿಗೆಗೆ ಪ್ರಯತ್ನಿಸಿದ್ದರಿಂದಲೇ ಈ ಸಾವು ಸಂಭವಿಸಿದೆ ಎಂದು ಮೃತ ಮಹಿಳೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

  • ಜಾರ್ಖಂಡ್​​ ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬಳಸಿ ಹೆರಿಗೆ
  • ವೈದ್ಯರ ನಿರ್ಲಕ್ಷ್ಯದಿಂದ ತಾಯಿ-ಮಗು ಸಾವು
  • ಜಾರ್ಖಂಡ್ ಸರ್ಕಾರದ ವಿರುದ್ಧ ವಿಪಕ್ಷಗಳ ಅಸಮಾಧಾನ

ಮೃತರನ್ನು ಹತಿಸಿರಿಂಗ್ ಗ್ರಾಮದ ನಿವಾಸಿ ಮತ್ತು ಆರೋಗ್ಯ ಸಹಾಯಕಿ ಬಿನಿತಾ ಬನ್ರಾ ಎಂದು ಗುರುತಿಸಲಾಗಿದೆ. ರಾಜನಗರ ಸಿಎಚ್‌ಸಿಯಲ್ಲಿ ಹೆರಿಗೆಯ ಸಮಯದಲ್ಲಿ ವಿದ್ಯುತ್ ಕಡಿತವಾಗಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಆ ಆಸ್ಪತ್ರೆಯಲ್ಲಿ ವಿದ್ಯುತ್ ಬ್ಯಾಕಪ್ ಇರಲಿಲ್ಲ. ಬಳಿಕ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ಮೊಬೈಲ್ ಟಾರ್ಚ್‌ಲೈಟ್ ಬಳಸಿ ಹೆರಿಗೆ ಮಾಡಿದ್ದಾರೆ. ಈ ಪ್ರಕ್ರಿಯೆಯ ಸಮಯದಲ್ಲಿ ಮಹಿಳೆಯ ಸ್ಥಿತಿ ಹದಗೆಟ್ಟಿತು. ಆಕೆಗೆ ಸರಿಯಾದ ಚಿಕಿತ್ಸೆ ನೀಡಲಾಗಲಿಲ್ಲ. ಆಕೆಗೆ ಸಕಾಲದಲ್ಲಿ ಉನ್ನತ ವೈದ್ಯಕೀಯ ಸೌಲಭ್ಯ ಕೂಡ ಸಿಗಲಿಲ್ಲ.

ಇದನ್ನೂ ಓದಿ: ಮನೆ ಬಾಗಿಲು ಹಾಕಲು ಮರೆತು ಹೋದ ಯುವತಿ, ಪಾರ್ಸೆಲ್ ಡೆಲಿವರಿಗೆಂದು ಬಂದ ವ್ಯಕ್ತಿ ಮಾಡಿದ್ದೇನು?

ಇದರಿಂದಾಗಿ ತಾಯಿ ಮತ್ತು ನವಜಾತ ಶಿಶು ಇಬ್ಬರೂ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದರ ನಡುವೆ, ಮಹಿಳೆ ಮತ್ತು ಆಕೆಯ ಮಗುವಿನ ಸಾವು ಜಾರ್ಖಂಡ್‌ನಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಯಿತು. ಇದನ್ನು ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಆದಿತ್ಯ ಸಾಹು ರಾಜ್ಯದ ಆರೋಗ್ಯ ವ್ಯವಸ್ಥೆಯ ಕುಸಿತ ಎಂದು ಆರೋಪಿಸಿದ್ದಾರೆ. ಆರೋಗ್ಯ ಸಚಿವರು ಈ ಘಟನೆಯನ್ನು ನಾಚಿಕೆಗೇಡಿನ ಸಂಗತಿ ಎಂದು ಕರೆದಿದ್ದಾರೆ.

ಈ ಘಟನೆಯ ಬಳಿಕ ಪ್ರಭಾರಿ ವೈದ್ಯಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್ ಕುಮಾರ್ ಸಿಂಗ್ ಅವರನ್ನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾತ್ರಿ ಮಲಗೋ ಮುನ್ನ ಪಾದಗಳನ್ನು ತೊಳೆಯೋದು ಎಷ್ಟು ಮುಖ್ಯ ಗೊತ್ತಾ? – Kannada News | Benefits of washing feet before going to bed

ವೈಯಕ್ತಿಕ ನೈರ್ಮಲ್ಯದ (Hygiene) ಬಗ್ಗೆ ಪ್ರತಿಯೊಬ್ಬರೂ ಸಹ ಕಾಳಜಿ ವಹಿಸಬೇಕು. ಇದು ಸೋಂಕುಗಳನ್ನು ತಡೆಗಟ್ಟಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನೈರ್ಮಲ್ಯದ ದೃಷ್ಟಿಯಿಂದ ನಾವು ಪ್ರತಿನಿತ್ಯ ಸ್ನಾನ ಮಾಡುತ್ತೇವೆ ಮತ್ತು ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುತ್ತೇವೆ. ಕಾಲುಗಳ ಆರೈಕೆಯ ಬಗ್ಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಅದರಲ್ಲೂ ಮಲಗುವ ಮುನ್ನ ಕಡ್ಡಾಯವಾಗಿ ಪಾದಗಳನ್ನು ತೊಳೆದೇ ಮಲಗಬೇಕು ಎಂಬುದು ಅನೇಕರಿಗೆ ಗೊತ್ತೇ ಇಲ್ಲ. ತಜ್ಞರು ಹೇಳುವಂತೆ, ವಿಶೇಷವಾಗಿ ಮಲಗುವ ಮೊದಲು, ಪಾದಗಳನ್ನು ತೊಳೆಯದಿದ್ದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಿದ್ದರೆ ಪಾದಗಳನ್ನು ತೊಳೆಯುವುದು ಏಕೆ ಅಷ್ಟು ಮುಖ್ಯ ಎಂಬುದನ್ನು ನೋಡೋಣ ಬನ್ನಿ.

ರಾತ್ರಿ ಮಲಗುವ ಮುನ್ನ ಪಾದಗಳನ್ನು ತೊಳೆಯುವುದು ಏಕೆ ಮುಖ್ಯ?

ತಜ್ಞರ ಪ್ರಕಾರ, ಪ್ರತಿಯೊಬ್ಬರೂ ಮಲಗುವ ಮೊದಲು ತಮ್ಮ ಪಾದಗಳನ್ನು ತೊಳೆಯಬೇಕು. ನಮ್ಮ ಪಾದಗಳು ಆಗಾಗ್ಗೆ ನೆಲವನ್ನು ಸ್ಪರ್ಶಿಸುವುದರಿಂದ, ಧೂಳು ಮತ್ತು ಸೂಕ್ಷ್ಮಜೀವಿಗಳು ಅವುಗಳಿಗೆ ಅಂಟಿಕೊಳ್ಳಬಹುದು. ಹಾಗಾಗಿ ಪಾದಗಳನ್ನು ತೊಳೆಯದೆ ಮಲಗುವುದರಿಂದ, ಈ ಧೂಳು ಮತ್ತು ಸೂಕ್ಷ್ಮಜೀವಿಗಳು  ಮೂಗು, ಬಾಯಿ ಮತ್ತು ಚರ್ಮವನ್ನು ಸುಲಭವಾಗಿ ತಲುಪಬಹುದು, ಇದರಿಂದಾಗಿ ಸೋಂಕು ಉಂಟಾಗುತ್ತದೆ. ಹೀಗಿರುವಾಗ ನಿಮ್ಮ ಪಾದಗಳನ್ನು ತೊಳೆಯುವುದರಿಂದ ಸೋಂಕಿನ ಅಪಾಯ ಕಡಿಮೆಯಾಗುತ್ತದೆ. ಅಲ್ಲದೆ ರಾತ್ರಿ ಮಲಗುವ ಮುನ್ನ ಪಾದಗಳನ್ನು ತೊಳೆಯುವುದು ಕೊಳಕು ಮತ್ತು ಸೂಕ್ಷ್ಮಜೀವಿಗಳು ನಿಮ್ಮ ಹಾಸಿಗೆಯ ಮೇಲೆ ಬರದಂತೆ ತಡೆಯಲು ಇರುವಂತಹ  ಆರೋಗ್ಯಕರ ಮಾರ್ಗವಾಗಿದೆ.

ಮಲಗುವ ಮುನ್ನ ಪಾದಗಳನ್ನು ತೊಳೆಯದಿದ್ದರೆ ಏನೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ?

ಕಾಲು ತೊಳೆಯದೆ ಮಲಗುವುದರಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕು ಉಂಟಾಗುತ್ತದೆ. ಇದು ಪಾದಗಳ ಮೇಲೆ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು ಹೌದು ತುರಿಕೆ, ಕೆಂಪು, ಬಿರುಕು ಬಿಟ್ಟ ಹಿಮ್ಮಡಿಗಳು, ಗುಳ್ಳೆಗಳು ಮತ್ತು ಊತ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳು ವಿಶೇಷವಾಗಿ ಕ್ರೀಡಾಪಟುಗಳು ಮತ್ತು ವಿದ್ಯಾರ್ಥಿಗಳಲ್ಲಿ, ದೀರ್ಘಕಾಲದವರೆಗೆ ಬೂಟುಗಳನ್ನು ಧರಿಸುವಲ್ಲಿ ಕಂಡುಬರುತ್ತವೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಬೆವರಿನ ದುರ್ವಾಸನೆಯನ್ನು ಹೋಗಲಾಡಿಸಲು ಸ್ನಾನದ ನೀರಿಗೆ ವಸ್ತುವನ್ನು ಸೇರಿಸಿ

ಜನರು ಮಲಗುವ ಮೊದಲು ತಮ್ಮ ಪಾದಗಳನ್ನು ಕಡ್ಡಾಯವಾಗಿ ತೊಳೆಯಲೇಬೇಕು?

ವೈದ್ಯರ ಪ್ರಕಾರ, ಎಲ್ಲರೂ ಮಲಗುವ ಮುನ್ನ ತಮ್ಮ ಪಾದಗಳನ್ನು ತೊಳೆಯಬೇಕು, ಆದರೆ ಮಧುಮೇಹಿಗಳು ವಿಶೇಷವಾಗಿ ಜಾಗರೂಕರಾಗಿರಬೇಕು. ಅವರು ಪಾದಗಳ ನೈರ್ಮಲ್ಯದ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಬೇಕು. ಏಕೆಂದರೆ ಮಧುಮೇಹಿಗಳು ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ಸೋಂಕುಗಳಿಗೆ ಹೆಚ್ಚು ಒಳಗಾಗುತ್ತಾರೆ. ಆದ್ದರಿಂದ, ಅವರು ಜಾಗರೂಕರಾಗಿರಬೇಕು ಮತ್ತು ಮಲಗುವ ಮುನ್ನ ತಮ್ಮ ಪಾದಗಳನ್ನು ತೊಳೆಯಲೇಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:49 pm, Tue, 5 May 26

Source link

ಅಸ್ತಮಾ ರೋಗಿಗಳೇ ಹವಾಮಾನ ಬದಲಾವಣೆಯಿಂದ ಸಮಸ್ಯೆಗಳಾಗುತ್ತಿದ್ಯಾ? ಹಾಗಿದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಿ – Kannada News | Asthma Patients Beware: Seasonal Changes and Breathing Health Guide

Asthma Patients Beware: Seasonal Changes and Breathing Health GuideImage Credit source: Getty Images

ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಆಗುತ್ತಿರುವ ನಿರಂತರ ಬದಲಾವಣೆಗಳು ಅಸ್ತಮಾ (Asthma) ರೋಗಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ತಾಪಮಾನದಲ್ಲಿ ಏರುಪೇರು, ಗಾಳಿಯಲ್ಲಿನ ತೇವಾಂಶದ ಬದಲಾವಣೆ ಮತ್ತು ಧೂಳು, ಮಾಲಿನ್ಯದ ಪ್ರಮಾಣ ಹೆಚ್ಚಾಗಿರುವುದು ಸೇರಿದಂತೆ ನಾನಾ ರೀತಿಯ ಕಾರಣಗಳು ಉಸಿರಾಟ ಸಂಬಂಧಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಹವಾಮಾನ ಬದಲಾದಾಗ ದೇಹವು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಅಸ್ತಮಾ ಲಕ್ಷಣಗಳು ಸುಲಭವಾಗಿ ಟ್ರಿಗರ್ ಆಗುತ್ತವೆ. ವಿಶೇಷವಾಗಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿನ ಗಾಳಿ ಉಸಿರಾಟದ ತೊಂದರೆಯನ್ನು ಹೆಚ್ಚಿಸಬಹುದು. ಇದರಿಂದ ಕೆಮ್ಮು, ಉಸಿರಾಟದ ತೊಂದರೆ ಮತ್ತು ಎದೆ ಬಿಗಿತದ ಸಮಸ್ಯೆಗಳು ಕಾಣಿಸಬಹುದು. ಹಾಗಾದರೆ ಅಸ್ತಮಾ ರೋಗಿಗಳು ಈ ಸಮಯದಲ್ಲಿ ಯಾವ ರೀತಿ ಜಾಗ್ರತೆ ಮಾಡಬೇಕು, ಯಾವ ಲಕ್ಷಣಗಳನ್ನು ನಿರ್ಲಕ್ಸ್ಯ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಅಸ್ತಮಾ ರೋಗಿಗಳು ಹೇಗೆ ಜಾಗ್ರತೆ ವಹಿಸಬೇಕು?

ತಜ್ಞರ ಪ್ರಕಾರ, ವೈದ್ಯರು ಸೂಚಿಸಿದ ಔಷಧಿ ಮತ್ತು ಇನ್ಹೇಲರ್ ಅನ್ನು ನಿಯಮಿತವಾಗಿ ಬಳಸುವುದು ಅತ್ಯಂತ ಮುಖ್ಯ. ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಧೂಳು ಮತ್ತು ಮಾಲಿನ್ಯದಿಂದ ರಕ್ಷಣೆ ನೀಡುತ್ತದೆ. ಮನೆಯ ಒಳಗಡೆ ಸ್ವಚ್ಛತೆಯನ್ನು ಕಾಪಾಡಿ, ಧೂಳು ಜಮೆಯಾಗದಂತೆ ನೋಡಿಕೊಳ್ಳುವುದು ಅಗತ್ಯ. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ಮತ್ತು ದೇಹವನ್ನು ಹೈಡ್ರೇಟ್ ಆಗಿಡುವುದು ಉಸಿರಾಟದ ತೊಂದರೆ ಕಡಿಮೆ ಮಾಡಲು ಸಹಕಾರಿ. ಜೊತೆಗೆ ಲಘು ವ್ಯಾಯಾಮ ಮತ್ತು ಪ್ರಾಣಾಯಾಮ ಫೆಫ್ಸುಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಆದರೆ ಯಾವುದೇ ವ್ಯಾಯಾಮ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?

ಪದೇಪದೇ ಉಸಿರಾಟದ ತೊಂದರೆ, ಎದೆ ಬಿಗಿತ, ನಿರಂತರ ಕೆಮ್ಮು, ರಾತ್ರಿ ಸಮಯದಲ್ಲಿ ಉಸಿರಾಟ ಕಷ್ಟವಾಗುವುದು ಇತ್ಯಾದಿ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು. ಇನ್ಹೇಲರ್ ಬಳಕೆಯ ನಂತರವೂ ಲಕ್ಷಣಗಳು ಕಡಿಮೆಯಾಗದಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ತೀವ್ರ ತಣ್ಣನೆಯ ಗಾಳಿ ಅಥವಾ ಧೂಳಿನ ಪ್ರದೇಶಗಳಲ್ಲಿ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸಿ. ಮನೆಗಳಲ್ಲಿ ಸರಿಯಾದ ಗಾಳಿಯ ಹರಿವು ಇರಲಿ. ಧೂಳು, ಧೂಮಪಾನ ಮತ್ತು ತೀವ್ರ ವಾಸನೆಗಳಿಂದ ದೂರವಿರಿ. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯನ್ನು ಪಾಲಿಸುವುದು ಮುಖ್ಯ. ಹವಾಮಾನ ಬದಲಾವಣೆ ಅಸ್ತಮಾ ರೋಗಿಗಳಿಗೆ ಸವಾಲಾಗಿದ್ದರೂ, ಸರಿಯಾದ ಜಾಗ್ರತೆ ಮತ್ತು ನಿಯಮಿತ ಚಿಕಿತ್ಸೆ ಮೂಲಕ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

20ರ ಯುವತಿ-46ರ ಅಂಕಲ್ ಲವ್: ಪ್ರೇಯಸಿ ಬೇಕು ಹೆಂಡ್ತಿನೂ ಬೇಕೆಂದ ಟೇಲರ್ – Kannada News | A 46 Year Old Man Cheating to 20 old Young Woman in Love Name

ಚಿಕ್ಕಬಳ್ಳಾಪುರ, (ಮೇ 05): 46ರ ಅಂಕಲ್ 20 ವರ್ಷದ ಯುವತಿಯನ್ನು ಪ್ರೀತಿಸಿ  (Love) ಕೈಕೊಟ್ಟ ಆರೋಪ ಕೇಳಿಬಂದಿದೆ.  ಚಿಕ್ಕಬಳ್ಳಾಪುರದ (Chikkaballapur) ಬಾಗೇಪಲ್ಲಿ ಮೂಲದ ಟೈಲರ್ ರಮೇಶ ಎನ್ನುವಾತನಿಗೆ ಈಗಾಗಲೇ ಮದುವೆಯಾಗಿದೆ. ಆದರೂ ಸಹ ತನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದಾನೆ. ಸಾಲದಕ್ಕೆ ಮದುವೆ ಮಾಡಿಕೊಳ್ಳೊದಾಗಿ ನಂಬಿಸಿ ಆಕೆಯೊಂದಿಗೆ 2 ತಿಂಗಳ ಸಂಸಾರ ಸಹ ನಡೆಸಿದ್ದಾನೆ.

ಚಿಕ್ಕಮ್ಮನ ಮನೆಗೆ ಹೋಗಿ ಬರ್ತಿದ್ದಾಗ ಯುವತಿಯನ್ನು ರಮೇಶ್ ಪರಿಚಯ ಮಾಡಿಕೊಂಡಿದ್ದ. ಬಳಿಕ ಯುವತಿಯ ಪೋನ್ ನಂಬರ್ ಪಡೆದು ಚಿನ್ನ ರನ್ನ ಗಿನ್ನ ಅಂತ ಪುಸಲಾಯಿಸಿ ಲವ್ ಮಾಡಿದ್ದ. ಆದ್ರೆ, ಇದೀಗ ಕೈಕೊಟ್ಟಿದ್ದಾನೆ. ಇದರಿಂದ ಕಂಗಾಲಾದ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಗೆಲುವಿನ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದ ಪೂಜಾ ಹೆಗ್ಡೆ: ವಿಡಿಯೋ ವೈರಲ್ – Kannada News | Jana Nayagan actor Pooja Hegde prediction on TVK Thalapathy Vijay Election Win comes true

ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಫಲಿತಾಂಶ ಹೊರಬಿದ್ದಿದ್ದು, ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಯಾರೂ ಊಹಿಸದ ರೀತಿಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ವಿಜಯ್ (Thalapathy Vijay) ಅವರದ್ದೇ ಹವಾ. ಈ ನಡುವೆ, ವಿಜಯ್ ಅವರ ಈ ಭರ್ಜರಿ ಗೆಲುವಿನ ಬಗ್ಗೆ ನಟಿ ಪೂಜಾ ಹೆಗ್ಡೆ (Pooja Hegde) ಅವರು ಬಹಳ ಹಿಂದೆಯೇ ನುಡಿದಿದ್ದ ಭವಿಷ್ಯ ಈಗ ಅಕ್ಷರಶಃ ನಿಜವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

1. ವೈರಲ್ ಆದ ಹಳೆಯ ವಿಡಿಯೋದಲ್ಲಿದೆ ಪೂಜಾ ಹೆಗ್ಡೆ ಭವಿಷ್ಯವಾಣಿ.

2. ಯಾರು ಚುನಾವಣೆ ಗೆಲ್ತಾರೆ ಎನ್ನೋದನ್ನು ಮೊದಲೇ ಹೇಳಿದ್ದ ನಟಿ.

3. ವಿಜಯ್ ಜತೆ ‘ಬೀಸ್ಟ್’, ‘ಜನ ನಾಯಗನ್’ ಚಿತ್ರದಲ್ಲಿ ಪೂಜಾ ನಟನೆ.

ವಿಜಯ್ ಮತ್ತು ಪೂಜಾ ಹೆಗ್ಡೆ ಅಭಿನಯದ ‘ಜನ ನಾಯಗನ್’ ಚಿತ್ರದ ಶೂಟಿಂಗ್ ಸೆಟ್‌ನ ಹಳೆಯ ವಿಡಿಯೋವೊಂದನ್ನು ಪೂಜಾ ಅವರು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಅಲ್ಲಿನ ಬೋರ್ಡ್ ಒಂದರ ಮೇಲೆ ‘ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ?’ ಎಂದು ಬರೆಯಲಾಗಿತ್ತು. ಆಗ ಪೂಜಾ ಹೆಗ್ಡೆ ಅವರು ತಮಾಷೆಯಾಗಿ ತಮ್ಮ ಪಕ್ಕದಲ್ಲೇ ನಿಂತಿದ್ದ ವಿಜಯ್ ಅವರತ್ತ ಬೆರಳು ಮಾಡಿ ತೋರಿಸಿದ್ದರು. ಪೂಜಾ ಅವರ ಈ ಮಾತಿಗೆ ವಿಜಯ್ ಅವರು ಮುಗುಳ್ನಗುತ್ತಾ ನಾಚಿಕೊಂಡಿದ್ದರು.

ಅಂದು ಪೂಜಾ ಹೆಗ್ಡೆ ತಮಾಷೆಯಾಗಿ ನುಡಿದಿದ್ದ ಈ ಭವಿಷ್ಯವಾಣಿ ಇಂದು ನಿಜವಾಗಿದೆ. ವಿಜಯ್ ಅವರ ಟಿವಿಕೆ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಸರ್ಕಾರ ರಚಿಸಲು ಸಜ್ಜಾಗಿದೆ. ವಿಜಯ್ ಅವರಿಗೆ ರಾಜಕೀಯದ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಅದಕ್ಕಾಗಿ ಅವರು ತೆರೆಮರೆಯಲ್ಲಿ ತಯಾರಿ ಮಾಡಿಕೊಂಡಿದ್ದರು. ಈಗ ಫಲ ಸಿಕ್ಕಿದೆ.

ಪೂಜಾ ಹೆಗ್ಡೆ ಹಂಚಿಕೊಂಡ ವಿಡಿಯೋ ಇಲ್ಲಿದೆ:

ತಮಿಳುನಾಡು ರಾಜಕೀಯದಲ್ಲಿ ದಶಕಗಳಿಂದ ಪ್ರಾಬಲ್ಯ ಹೊಂದಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಭದ್ರಕೋಟೆಯನ್ನು ವಿಜಯ್ ಪುಡಿಪುಡಿ ಮಾಡಿದ್ದಾರೆ. ‘ಬೀಸ್ಟ್’ ಸಿನಿಮಾ ನಂತರ ಪೂಜಾ ಮತ್ತು ವಿಜಯ್ ಜೋಡಿಯಾಗಿ ನಟಿಸುತ್ತಿರುವ ಎರಡನೇ ಸಿನಿಮಾ ‘ಜನ ನಾಯಗನ್’. ಈ ಸಿನಿಮಾದ ಶೀರ್ಷಿಕೆಗೆ ತಕ್ಕಂತೆಯೇ ವಿಜಯ್ ಇಂದು ನಿಜವಾದ ಜನನಾಯಕನಾಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: ಟಿವಿಕೆ ಜಯಭೇರಿ: ದಳಪತಿ ವಿಜಯ್ ಗೆಲುವಿಗೆ ರಿಷಬ್ ಶೆಟ್ಟಿ ಅಭಿನಂದನೆ

ವಿಜಯ್ ಅವರ ಈ ಅಪ್ರತಿಮ ಸಾಧನೆಗೆ ಭಾರತೀಯ ಚಿತ್ರರಂಗದ ಘಟಾನುಘಟಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು, ನಯನತಾರಾ, ಹೇಮಾ ಮಾಲಿನಿ, ಟೈಗರ್ ಶ್ರಾಫ್, ನಾನಿ, ರಜನಿಕಾಂತ್, ರಿಷಬ್ ಶೆಟ್ಟಿ, ಶಿವರಾಜ್​ಕುಮಾರ್ ಸೇರಿದಂತೆ ಹಲವು ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ವಿಜಯ್ ಅವರ ರಾಜಕೀಯ ಯಶಸ್ಸನ್ನು ಕೊಂಡಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಯಾಣಿಕರ ಪವರ್ ಬ್ಯಾಂಕ್​ನಿಂದ ಬೆಂಕಿ; ಇಂಡಿಗೋ ವಿಮಾನದಲ್ಲಿ ತಪ್ಪಿದ ಭಾರೀ ದುರಂತ – Kannada News | IndiGo plane evacuated in Chandigarh Airport after passengers power bank catches fire

ಚಂಡೀಗಢ, ಮೇ 5: ಚಂಡೀಗಢಕ್ಕೆ ಬಂದಿಳಿದ ಇಂಡಿಗೋ (IndiGo) ವಿಮಾನದೊಳಗೆ ಹೊಗೆ ಕಾಣಿಸಿಕೊಂಡಿದೆ. ಇಂಡಿಗೋ ಪ್ರಯಾಣಿಕರೊಬ್ಬರು ತಮ್ಮ ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವಿಮಾನದ ಸಿಬ್ಬಂದಿಗೆ ತಿಳಿಸಿದ ನಂತರ ತುರ್ತು ಸ್ಥಳಾಂತರಕ್ಕೆ ಆದೇಶಿಸಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಲು ತುರ್ತು ಸ್ಲೈಡ್‌ಗಳನ್ನು ಸಹ ನಿಯೋಜಿಸಲಾಯಿತು.

ಸ್ಥಳಾಂತರಿಸುವ ಪ್ರಕ್ರಿಯೆಯ ಸಮಯದಲ್ಲಿ ಪ್ರಯಾಣಿಕರಲ್ಲಿ ಒಬ್ಬರು ಗಾಯಗೊಂಡರು. 198 ಪ್ರಯಾಣಿಕರು ಮತ್ತು 6 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಹೈದರಾಬಾದ್‌ನಿಂದ ಹೊರಟು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸುಮಾರು ಮಧ್ಯಾಹ್ನ 3.29ಕ್ಕೆ ಇಳಿಯಿತು. ಈ ವೇಳೆ ಹೊಗೆ ಕಾಣಿಸಿತು.

ಇದನ್ನೂ ಓದಿ: ಬೆಂಗಳೂರು-ದೆಹಲಿ ಇಂಡಿಗೋ ಫ್ಲೈಟ್‌ನಲ್ಲಿ ಹುಸಿ ಬಾಂಬ್ ಬೆದರಿಕೆ!

ಪ್ರಯಾಣಿಕರ ಪವರ್ ಬ್ಯಾಂಕ್ ಬೆಂಕಿಗೆ ಆಹುತಿಯಾದ ನಂತರ ಇಂದು ಚಂಡೀಗಢ ವಿಮಾನ ನಿಲ್ದಾಣದಲ್ಲಿ ತುರ್ತು ಸ್ಥಳಾಂತರವನ್ನು ಪ್ರಾರಂಭಿಸಲಾಯಿತು. ಅಧಿಕಾರಿಗಳ ಪ್ರಕಾರ, ಹೈದರಾಬಾದ್‌ನಿಂದ ಚಂಡೀಗಢಕ್ಕೆ ಹೋಗುವ ಇಂಡಿಗೋ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ.

“ಸುರಕ್ಷತೆಯ ಹಿತದೃಷ್ಟಿಯಿಂದ ತಕ್ಷಣದ ಸ್ಥಳಾಂತರಿಸುವಿಕೆಯನ್ನು ಕೈಗೊಳ್ಳಲಾಯಿತು. ಎಲ್ಲ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ತಿಳಿಸಲಾಯಿತು. ಎಲ್ಲಾ ಗ್ರಾಹಕರನ್ನು ಸುರಕ್ಷಿತವಾಗಿ ಟರ್ಮಿನಲ್‌ಗೆ ಸ್ಥಳಾಂತರಿಸಲಾಗಿದೆ. ಇಂಡಿಗೋ ವಿಮಾನವು ಕಾರ್ಯಾಚರಣೆಯನ್ನು ಪುನರಾರಂಭಿಸುವ ಮೊದಲು ಅಗತ್ಯ ತಪಾಸಣೆಗಳಿಗೆ ಒಳಗಾಗುತ್ತದೆ. ಇಂಡಿಗೋದಲ್ಲಿ ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ” ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಲಿಸುತ್ತಿರುವ ವಿಮಾನದ ಎಕ್ಸಿಟ್ ಡೋರ್ ತೆರೆದು ಹಾರಿದ ಪ್ರಯಾಣಿಕ

ಬೆಂಕಿಯಿಂದಾಗಿ ವಿಮಾನದ ಕ್ಯಾಬಿನ್ ಹೊಗೆಯಿಂದ ತುಂಬಿತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಪವರ್ ಬ್ಯಾಂಕ್‌ಗಳನ್ನು ವಿಮಾನಗಳಲ್ಲಿ ಕ್ಯಾರಿ-ಆನ್ ಲಗೇಜ್‌ನಲ್ಲಿ ಮಾತ್ರ ಅನುಮತಿಸಲಾಗುತ್ತದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) 2026ರಲ್ಲಿ ಹೊರಡಿಸಿದ ಹೊಸ ನಿಯಮಗಳ ಆಧಾರದ ಮೇಲೆ ಪ್ರಯಾಣಿಕರು ಫೋನ್‌ಗಳು ಮತ್ತು ಇತರ ಸಾಧನಗಳನ್ನು ಚಾರ್ಜ್ ಮಾಡಲು ವಿಮಾನಗಳಲ್ಲಿ ಪವರ್ ಬ್ಯಾಂಕ್‌ಗಳನ್ನು ಬಳಸಲು ಅನುಮತಿ ಇರುವುದಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:31 pm, Tue, 5 May 26

Source link

ನಮ್ಮ ಮೆಟ್ರೋ ನೇರಳೆ ಮಾರ್ಗದ ಸೇವೆಯಲ್ಲಿ ವ್ಯತ್ಯಯ: 15 ನಿಮಿಷ ನಿಂತಲ್ಲೇ ನಿಂತ ರೈಲುಗಳು – Kannada News | Namma Metro Disruption: Purple Line Service Halts, Technical Issues Affect Commuters

ಬೆಂಗಳೂರು, ಮೇ 05: ಇವತ್ತೂ ಕೂಡ ನಮ್ಮ ಮೆಟ್ರೋ ನೇರಳೆ ಮಾರ್ಗದ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಸುಮಾರು 15 ನಿಮಿಷಗಳ ಕಾಲ ನೇರಳೆ ಮಾರ್ಗದ ಕುಂದಲಹಳ್ಳಿ ಸ್ಟೇಷನ್​ನಲ್ಲಿ ಮೆಟ್ರೋ ರೈಲುಗಳು ನಿಂತಲ್ಲೇ ನಿಂತಿರುವ ಬಗ್ಗೆ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದರೆ ಈ ಬಗ್ಗೆ ಬಿಎಂಆರ್​​ಸಿಎಲ್​​ ಈವರೆಗೂ ಮೆಟ್ರೋ ಸೇವೆಯಲ್ಲಿನ ವ್ಯತ್ಯಯದ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.

  • ನಮ್ಮ ಮೆಟ್ರೋ ನೇರಳೆ ಮಾರ್ಗದ ಕಾರ್ಯಾಚರಣೆಯಲ್ಲಿ ವ್ಯತ್ಯಯ
  • 15 ನಿಮಿಷಗಳ ಕಾಲ ನಿಂತಲ್ಲೇ ನಿಂತ ಮೆಟ್ರೋ ರೈಲುಗಳು
  • ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡ ಪ್ರಯಾಣಿಕರು

ಇದನ್ನೂ ಓದಿ: ತಾಂತ್ರಿಕ ದೋಷದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಬಂದ್ ಆಗಿ ಪ್ರಯಾಣಿಕರ ಪರದಾಟ

ಪ್ರಯಾಣಿಕರ ಆಕ್ರೋಶ

ನಮ್ಮ ಮೆಟ್ರೋ ಸೇವೆಯಲ್ಲಿನ ವ್ಯತ್ಯಯದ ಬಗ್ಗೆ ಎಕ್ಸ್​​ ಪೋಸ್ಟ್​​ ಮಾಡಿ ಮಾಹಿತಿ ಹಂಚಿಕೊಂಡಿರುವ ಕೆಲ ಪ್ರಯಾಣಿಕರು ಈ ಬಗ್ಗೆ ಯಾವುದೇ ಮಾಹಿತಿಯನ್ನು ಸರಿಯಾಗಿ ನೀಡದ ಬಿಎಂಆರ್​​ಸಿಎಲ್​​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದ ವ್ಯತ್ಯಯ

ಸುಮಾರು 10-15 ನಿಮಿಷಗಳ ಕಾಲ ತಾಂತ್ರಿಕ ಕಾರಣದಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಆದರೆ
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ರೈಲುಗಳ ಸಂಚಾರವೀಗ ಸಹಜಸ್ಥಿತಿಗೆ ಮರಳಿದೆ. ಸಮಸ್ಯೆ ಬಗೆಹರಿದಿರುವ ಕಾರಣ ಮೆಟ್ರೋ ರೈಲುಗಳ ಸಂಚಾರ ಪುನಾರಂಭ ಆಗಿದೆ.

ನಿನ್ನೆ ಕೆಲ ಕಾಲ ಬಂದ್​​ ಆಗಿದ್ದ ಕಬ್ಬನ್ ಪಾರ್ಕ್ ನಿಲ್ದಾಣ

ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿರುವ ಪ್ರಮುಖ ನಿಲ್ದಾಣಗಳಲ್ಲಿ ಒಂದಾದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ನಿನ್ನೆ (ಮೇ 4) ಬೆಳಿಗ್ಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.ವಿದ್ಯುತ್ ವ್ಯತ್ಯಯದಿಂದಾಗಿ ಮೆಟ್ರೋ ನಿಲ್ದಾಣದ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿತ್ತು. ಆ ಬಳಿಕ ಬೆಳಿಗ್ಗೆ 11 ಗಂಟೆಯಿಂದ ಮೆಟ್ರೋ ಸೇವೆಗಳು ಪುರರಾರಂಭಗೊಂಡಿತ್ತು.

ವರದಿ: ಲಕ್ಷ್ಮೀ ನರಸಿಂಗ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:24 pm, Tue, 5 May 26

Source link

Exit mobile version