ಪಶ್ಚಿಮ ಬಂಗಾಳದಿಂದ ಕೇರಳ ವರೆಗೆ… ಶಾಸಕರಾಗಿ ಆಯ್ಕೆಯಾದ ಮುಸ್ಲಿಮರೆಷ್ಟು ಗೊತ್ತೇ? ಅಚ್ಚರಿಯ ಅಂಕಿಅಂಖ್ಯೆ ಇಲ್ಲಿದೆ ನೋಡಿ – Kannada News | Assembly Election 2026: Statistics of Muslim MLAs Won in West Bengal, Assam, Kerala, and Tamil Nadu

ನವದೆಹಲಿ, ಮೇ 5: ದೇಶದ ರಾಜಕೀಯ ದಿಕ್ಸೂಚಿ ಎಂದೇ ಪರಿಣಮಿಸಿದ್ದ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ (Assembly Election Result 2026) ಹೊರಬಿದ್ದಿದೆ. ಈ ಬಾರಿಯ ಫಲಿತಾಂಶದಲ್ಲಿ ಮುಸ್ಲಿಂ ಸಮುದಾಯದ ಶಾಸಕರ ಸಂಖ್ಯಾಬಲಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಅಂಕಿಅಂಖ್ಯೆಗಳು ಲಭ್ಯವಾಗಿವೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಶಾಸಕರ ಪ್ರಭಾವ ತಗ್ಗಿದರೆ, ಕೇರಳದಲ್ಲಿ ಅವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

ಬಂಗಾಳ ಮತ್ತು ಅಸ್ಸಾಂನಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ ಇಳಿಕೆ

ಜಮ್ಮು ಮತ್ತು ಕಾಶ್ಮೀರದ ನಂತರ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಈ ಬಾರಿ ಶಾಸಕರ ಸಂಖ್ಯೆ ಗಮನಾರ್ಹವಾಗಿ ಇಳಿಕೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ (ಒಟ್ಟು 294 ಸ್ಥಾನಗಳು) ಕಳೆದ ಬಾರಿ 42 ಮುಸ್ಲಿಂ ಶಾಸಕರಿದ್ದರೆ, ಈ ಬಾರಿ ಆ ಸಂಖ್ಯೆ 36ಕ್ಕೆ ಕುಸಿದಿದೆ. ಇವರಲ್ಲಿ 31 ಮಂದಿ ಟಿಎಂಸಿಯಿಂದ ಹಾಗೂ 5 ಮಂದಿ ಕಾಂಗ್ರೆಸ್-ಸಿಪಿಎಂ ಮೈತ್ರಿಯಿಂದ ಗೆದ್ದಿದ್ದಾರೆ.

ಅದೇ ರೀತಿ, ಅಸ್ಸಾಂನಲ್ಲಿ (ಒಟ್ಟು 126 ಸ್ಥಾನಗಳು) ಈ ಬಾರಿ 22 ಮುಸ್ಲಿಂ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಅಸ್ಸಾಂ ಮತ್ತು ಬಂಗಾಳದಲ್ಲಿ ಒಟ್ಟಾರೆಯಾಗಿ 15 ಮುಸ್ಲಿಂ ಶಾಸಕರು ಕಡಿಮೆಯಾಗಿದ್ದಾರೆ. ಅಸ್ಸಾಂನಲ್ಲಿ ಕಾಂಗ್ರೆಸ್‌ನಿಂದ 18, ಬದ್ರುದ್ದೀನ್ ಅಜ್ಮಲ್ ಪಕ್ಷದಿಂದ 2 ಹಾಗೂ ಅಖಿಲ್ ಗೋಗೊಯ್ ಪಕ್ಷದಿಂದ ಒಬ್ಬರು ಗೆದ್ದಿದ್ದಾರೆ.

ಕೇರಳ, ತಮಿಳುನಾಡಿನಲ್ಲಿ ಹೇಗಿದೆ ಮುಸ್ಲಿಂ ಶಾಸಕಸ ಸಂಖ್ಯೆ?

ಬಂಗಾಳಕ್ಕೆ ವ್ಯತಿರಿಕ್ತವಾಗಿ ಕೇರಳದಲ್ಲಿ (ಒಟ್ಟು 140 ಸ್ಥಾನಗಳು) ಮುಸ್ಲಿಂ ಶಾಸಕರ ಸಂಖ್ಯೆ 32 ರಿಂದ 35ಕ್ಕೆ ಏರಿಕೆಯಾಗಿದೆ. ಇಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ನಿಂದ ಅತಿ ಹೆಚ್ಚು ಅಂದರೆ 22 ಶಾಸಕರು ಮತ್ತು ಕಾಂಗ್ರೆಸ್‌ನಿಂದ 8 ಶಾಸಕರು ಆಯ್ಕೆಯಾಗಿದ್ದಾರೆ. ತಮಿಳುನಾಡಿನಲ್ಲಿ ಈ ಬಾರಿ ಒಟ್ಟು 9 ಮುಸ್ಲಿಂ ಶಾಸಕರು ವಿಧಾನಸಭೆ ಪ್ರವೇಶಿಸಿದ್ದಾರೆ.

ಕಾಂಗ್ರೆಸ್ ಮೈತ್ರಿಕೂಟದಲ್ಲಿ ಮುಸ್ಲಿಂ ಅಭ್ಯರ್ಥಿಗಳ ಭರ್ಜರಿ ಯಶಸ್ಸು: ಅಂಕಿಅಂಖ್ಯೆಗಳು ಇಲ್ಲಿವೆ

  • ಅಸ್ಸಾಂ: ಅಸ್ಸಾಂನಲ್ಲಿ ಕಾಂಗ್ರೆಸ್ ಗೆದ್ದಿರುವ ಒಟ್ಟು 19 ಸ್ಥಾನಗಳ ಪೈಕಿ ಬರೋಬ್ಬರಿ 18 ಸ್ಥಾನಗಳಲ್ಲಿ ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಕಣಕ್ಕಿಳಿಸಿದ್ದ 20 ಮುಸ್ಲಿಂ ಅಭ್ಯರ್ಥಿಗಳಲ್ಲಿ 18 ಮಂದಿ ಗೆಲುವು ಸಾಧಿಸಿದ್ದಾರೆ. ಆದರೆ, ಕಾಂಗ್ರೆಸ್ ಟಿಕೆಟ್ ನೀಡಿದ್ದ ಇತರ 79 ಮುಸ್ಲಿಮೇತರ ಅಭ್ಯರ್ಥಿಗಳಲ್ಲಿ ಗೆದ್ದಿರುವುದು ಕೇವಲ ಒಬ್ಬರು ಮಾತ್ರ.
  • ರಾಯ್​ಜೋರ್ ದಳ: ಕಾಂಗ್ರೆಸ್ ಮಿತ್ರಪಕ್ಷವಾದ ರೈಜೋರ್ ದಳ 2 ಸ್ಥಾನಗಳನ್ನು ಗೆದ್ದಿದ್ದು, ಅದರಲ್ಲಿ ಒಬ್ಬರು ಮುಸ್ಲಿಂ ಅಭ್ಯರ್ಥಿ. ಮತ್ತೊಬ್ಬರು ಅಖಿಲ್ ಗೋಗೊಯ್.
  • ಕೇರಳ: ಕೇರಳ ವಿಧಾನಸಭೆಯ 140 ಸ್ಥಾನಗಳ ಪೈಕಿ ಈ ಬಾರಿ 35 ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದಾರೆ. ಇವರಲ್ಲಿ 30 ಶಾಸಕರು ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟದವರು. ಕಾಂಗ್ರೆಸ್‌ನ 8 ಮುಸ್ಲಿಂ ಶಾಸಕರು ಮತ್ತು ಮಿತ್ರಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ (IUML) ಎಲ್ಲಾ 22 ಶಾಸಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
  • ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಗೆದ್ದಿದ್ದು, ಇಬ್ಬರೂ ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳ ಮುಸ್ಲಿಂ ಅಭ್ಯರ್ಥಿಗಳಾಗಿದ್ದಾರೆ. ವಿಶೇಷವೆಂದರೆ, ಟಿಎಂಸಿ (47) ಗಿಂತಲೂ ಹೆಚ್ಚು, ಅಂದರೆ 63 ಮುಸ್ಲಿಂ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು.
  • ತಮಿಳುನಾಡು: ತಮಿಳುನಾಡಿನಲ್ಲಿ ಕಾಂಗ್ರೆಸ್ ಇಬ್ಬರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಅವರಲ್ಲಿ ಒಬ್ಬರು ಗೆದ್ದಿದ್ದಾರೆ.
  • ಗಮನಾರ್ಹ ಅಂಶ: ಕೇರಳ ಮತ್ತು ಅಸ್ಸಾಂ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟದಿಂದ ಸ್ಪರ್ಧಿಸಿದ್ದ ಮುಸ್ಲಿಂ ಅಭ್ಯರ್ಥಿಗಳ ಗೆಲುವಿನ ಪ್ರಮಾಣ ಶೇಕಡಾ 80ಕ್ಕಿಂತ ಹೆಚ್ಚಿದೆ.

ಇದನ್ನೂ ಓದಿ: ಮನೆ ಕೆಲಸದಾಕೆ ಈಗ ಪಶ್ಚಿಮ ಬಂಗಾಳದ ಶಾಸಕಿ: ಅತ್ಯಾಚಾರ, ಕೊಲೆ ಸಂತ್ರಸ್ತೆಯ ತಾಯಿಯೂ ಆದ್ರು MLA!

ರಾಷ್ಟ್ರ ಮಟ್ಟದಲ್ಲಿ ಮುಸ್ಲಿಂ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ಬಾರಿಯ ವಿಧಾನಸಭಾ ಫಲಿತಾಂಶಗಳು ಮಿಶ್ರ ಪ್ರತಿಕ್ರಿಯೆಯನ್ನು ನೀಡಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸೋತು ಸುಣ್ಣವಾಗಿರುವ LSG ತಂಡಕ್ಕೆ ಪ್ಲೇಆಫ್​ಗೇರಲು ಇನ್ನೂ ಇದೆ ಚಾನ್ಸ್​!

Source link

ದಾವಣಗೆರೆ ದಕ್ಷಿಣ ಉಪ ಚುನಾವಣೆ ಗೆದ್ದರೂ ಕಾಂಗ್ರೆಸ್​​ಗೆ ತಪ್ಪದ ಚಿಂತೆ: ಕಾರಣ ಇಲ್ಲಿದೆ – Kannada News | Davangere By election: Congress Wins but Margin Sparks Concern Over Muslim Vote Shift

ದಾವಣಗೆರೆ, ಮೇ 05: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಜಯಗಳಿಸಿದೆ. ಆದರೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಫಲಿತಾಂಶ ಕಾಂಗ್ರೆಸ್‌ಗೆ ಆತಂಕ ಮೂಡಿಸಿದೆ. ಕಾಂಗ್ರೆಸ್ ಗೆದ್ದಿದ್ದರೂ, ವಿಜಯದ ಅಂತರ ಬಹಳ ಕಡಿಮೆಯಾಗಿದೆ. ಇದು ಮುಸ್ಲಿಂ ಮತದಾರರು ಕಾಂಗ್ರೆಸ್‌ನಿಂದ ದೂರ ಸರಿದಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಎಸ್ಡಿಪಿಐ ಅಭ್ಯರ್ಥಿಗೆ ದಾಖಲೆಯ ಸುಮಾರು 19,000 ಮತಗಳು ಬಂದಿದ್ದು, ಇತರೆ ಮುಸ್ಲಿಂ ಅಭ್ಯರ್ಥಿಗಳಿಗೆ 2-3 ಸಾವಿರ ಮತಗಳು ಲಭಿಸಿವೆ. ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ 40-50 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಹಾನಿಯನ್ನುಂಟು ಮಾಡಬಹುದು ಎಂದು ವಿಶ್ಲೇಷಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ಅಸಮಾಧಾನವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎನ್ನಲಾಗ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

TV9 Kannada News Live: ಪಶ್ಚಿಮ ಬಂಗಾಳ, ತಮಿಳುನಾಡು ಸರ್ಕಾರ ರಚನೆ ಕಸರತ್ತು; ನೇರ ಪ್ರಸಾರ – Kannada News | Government Formation Efforts Intensify in West Bengal and Tamil Nadu; Thalapathy Vijay’s TVK Eyes Power

ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಪುದುಚೇರಿ, ಕೇರಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದ್ದು ಪಶ್ಚಿಮ ಬಂಗಾಳ, ಪುದುಚೇರಿ ಮತ್ತು ಅಸ್ಸಾಂನಲ್ಲಿ ಬಿಜೆಪಿ ಭರ್ಜರಿ ಬಹುಮತ ಗಳಿಸಿದೆ. ಮತ್ತೊಂದೆಡೆ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬಹುಮತ ಗಳಿಸಿದ್ದರೆ, ತಮಿಳುನಾಡಿನಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಸರಳ ಬಹುಮತಕ್ಕೆ ಸನಿಹದಲ್ಲಿದೆ. ಸದ್ಯ ಟಿವಿಕೆ 107 ಸ್ಥಾನ ಗಳಿಸಿದ್ದು, ಸರ್ಕಾರ ರಚನೆಗೆ 11 ಸದಸ್ಯರ ಬೆಂಬಲ ಟಿವಿಕೆಗೆ ಅಗತ್ಯವಿದೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚನೆಯ ಕಸರತ್ತು ಜೋರಾಗಿದೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ರಾಜಕೀಯ ವಿದ್ಯಮಾನಗಳ ಮತ್ತು ಸರ್ಕಾರ ರಚನೆ ಕಸರತ್ತಿನ ನೇರ ಪ್ರಸಾರ ಇಲ್ಲಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Rishabh Pant: ಹೆಚ್ಚುತ್ತಿದೆ ವಿವಾದ.. ಲಕ್ನೋ ತಂಡದ ನಾಯಕ ಸ್ಥಾನದಿಂದ ಪಂತ್ ವಜಾ?, ಮುಂದಿನ ಕ್ಯಾಪ್ಟರ್ ಯಾರು? – Kannada News | IPL 2026 Consecutive defeats, poor form Rishabh Pant sacked as captain of LSG team?

ಬೆಂಗಳೂರು (ಮೇ. 05): ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಐಪಿಎಲ್ 2026 ಸೀಸನ್ ಅದ್ಭುತವಾಗಿಲ್ಲ. ಸತತ ಸೋಲುಗಳಿಂದ ಕಂಗೆಟ್ಟಿರುವ ತಂಡದ ಪ್ಲೇಆಫ್ ಭರವಸೆ ಬಹುತೇಕ ಕಮರಿಹೋಗಿದೆ. ಇದರ ಜೊತೆಗೆ, ತಂಡದ ಪ್ರದರ್ಶನದ ಬಗ್ಗೆಯೂ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಮಾಜಿ ಕ್ರಿಕೆಟಿಗರು ನಾಯಕ ರಿಷಭ್ ಪಂತ್ (Rishabh Pant) ನಾಯಕತ್ವವನ್ನು ಟೀಕಿಸುತ್ತಿದ್ದಾರೆ. ಮಾಜಿ ಆಟಗಾರರಾದ ಮನೋಜ್ ತಿವಾರಿ ಮತ್ತು ರೋಹನ್ ಗವಾಸ್ಕರ್ ಪಂತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಮುಕ್ತವಾಗಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡವು ಹೀನಾಯ ಸೋಲು ಅನುಭವಿಸಿದ ನಂತರ ಈ ಚರ್ಚೆ ತೀವ್ರಗೊಂಡಿದೆ. ಕಳೆದ ವರ್ಷ ಪಂತ್ ಅವರನ್ನು ಭಾರಿ ಬೆಲೆಗೆ ಖರೀದಿಸಿದ ಲಕ್ನೋ ಆಡಳಿತ ಮಂಡಳಿ, ಅವರನ್ನು ತಮ್ಮ ತಂಡದ ಭವಿಷ್ಯವೆಂದು ಪರಿಗಣಿಸಿತು. ಆದರೆ ಕಳೆದ ವರ್ಷ 14 ಇನ್ನಿಂಗ್ಸ್‌ಗಳಲ್ಲಿ ಕೇವಲ 269 ರನ್ ಗಳಿಸಿದ್ದ ಪಂತ್, ಈ ಋತುವಿನಲ್ಲಿ 9 ಪಂದ್ಯಗಳಲ್ಲಿ 204 ರನ್‌ಗಳಿಗೆ ಸೀಮಿತರಾಗಿದ್ದಾರೆ. ಅವರ ಸ್ಟ್ರೈಕ್ ರೇಟ್ (128.30) ತುಂಬಾ ಚಿಂತಾಜನಕವಾಗಿದೆ. ನಾಯಕತ್ವದ ಒತ್ತಡದಿಂದಾಗಿ ಪಂತ್ ತಮ್ಮ ವಿನಾಶಕಾರಿ ಬ್ಯಾಟಿಂಗ್ ಅನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ರೋಹನ್ ಗವಾಸ್ಕರ್ ಹೇಳಿದ್ದಾರೆ.

“ಪಂತ್ ಒಬ್ಬ ಅದ್ಭುತ ಪ್ರತಿಭೆ ಹೊಂದಿರುವ ಆಟಗಾರ. ಆದರೆ ನಾಯಕತ್ವದ ಹೊರೆ ಅವರನ್ನು ವಿಫಲಗೊಳಿಸುತ್ತಿದೆ. ತಂಡ ಸೋತಾಗ, ಒತ್ತಡ ನಾಯಕನ ಮೇಲೆ ಬೀಳುತ್ತದೆ. ಅದಕ್ಕಾಗಿಯೇ ಅವರನ್ನು ಆ ಜವಾಬ್ದಾರಿಯಿಂದ ಮುಕ್ತಗೊಳಿಸಿ ಬ್ಯಾಟ್ಸ್‌ಮನ್ ಆಗಿ ಮಾತ್ರ ಆಡಿಸಬೇಕು” ಎಂದು ರೋಹನ್ ಗವಾಸ್ಕರ್ ಹೇಳಿದರು. ಮನೋಜ್ ತಿವಾರಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಪಂತ್‌ರಂತಹ ಅಂತರರಾಷ್ಟ್ರೀಯ ಮಟ್ಟದ ಆಟಗಾರನನ್ನು ನಾವು ಕಳೆದುಕೊಳ್ಳಬಾರದು ಮತ್ತು ಅವರಿಗೆ ಸ್ವಾತಂತ್ರ್ಯ ನೀಡುವುದು ತಂಡಕ್ಕೆ ಮತ್ತು ಅವರಿಗೆ ಒಳ್ಳೆಯದು ಎಂದು ಅವರು ಸಲಹೆ ನೀಡಿದರು.

MI vs LSG: ಪೋಸ್ಟ್ ಮ್ಯಾಚ್​ನಲ್ಲಿ ಉಲ್ಟಾ ಹೊಡೆದ ರಿಷಭ್ ಪಂತ್: ಸೋಲಿಗೆ ಬೌಲರ್ಸ್ ಅಲ್ಲ ಬ್ಯಾಟರ್ಸ್ ಕಾರಣವಂತೆ

ಪಂತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿದರೆ, ದಕ್ಷಿಣ ಆಫ್ರಿಕಾದ ಟಿ20 ನಾಯಕ ಐಡೆನ್ ಮಾರ್ಕ್ರಾಮ್ ಅವರ ಸ್ಥಾನಕ್ಕೆ ಬರಲು ಸಿದ್ಧರಿದ್ದಾರೆ. ಮಾರ್ಕ್ರಾಮ್ ನಾಯಕತ್ವದಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಸತತ ಎರಡು SA20 ಪ್ರಶಸ್ತಿಗಳನ್ನು ಗೆದ್ದಿದೆ. ವಾಸಿಮ್ ಜಾಫರ್‌ರಂತಹ ಮಾಜಿ ಆಟಗಾರರು ಕೂಡ ಮಾರ್ಕ್ರಾಮ್ ತುಂಬಾ ಶಾಂತ ಮತ್ತು ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಮಾರ್ಕ್ರಾಮ್ ಅತ್ಯುತ್ತಮ ಟಾಪ್-ಆರ್ಡರ್ ಬ್ಯಾಟ್ಸ್‌ಮನ್ ಮಾತ್ರವಲ್ಲ, ತಂತ್ರಗಳನ್ನು ಕಾರ್ಯಗತಗೊಳಿಸುವಲ್ಲಿಯೂ ನಿಪುಣರು ಎಂದಿದ್ದಾರೆ.

ಆದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರಿಗೆ ಪಂತ್ ಮೇಲೆ ಸಾಕಷ್ಟು ಭರವಸೆ ಇದೆ. ಪಂತ್ ಈ ತಂಡದಲ್ಲಿ ಇನ್ನೂ 10-15 ವರ್ಷಗಳ ಕಾಲ ಮುಂದುವರಿಯಲಿದ್ದಾರೆ ಎಂದು ಅವರು ಆಶಿಸಿದ್ದಾರೆ. ಆದರೆ ಪ್ರಸ್ತುತ ಫಲಿತಾಂಶಗಳು ಮತ್ತು ಆಟಗಾರನ ವೈಯಕ್ತಿಕ ಫಾರ್ಮ್ ಅನ್ನು ಗಮನದಲ್ಲಿಟ್ಟುಕೊಂಡು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಲಕ್ನೋ ತಂಡವನ್ನು ಮತ್ತೆ ಹಳಿಗೆ ತರಲು ನಾಯಕತ್ವದಲ್ಲಿ ಬದಲಾವಣೆ ಅಗತ್ಯವಿದೆ ಎಂದು ವಿಶ್ಲೇಷಕರು ನಂಬಿದ್ದಾರೆ. ಪಂತ್ ಮುಂದಿನ ಋತುವಿನಲ್ಲಿ ಅಥವಾ ಈ ಋತುವಿನ ಕೊನೆಯಲ್ಲಿ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಯುತ್ತಾರೋ ಅಥವಾ ತಮ್ಮ ಆಟದ ಮೂಲಕ ಟೀಕೆಗಳಿಗೆ ಉತ್ತರಿಸುತ್ತಾರೋ ಎಂಬುದನ್ನು ನೋಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಲ್ಲಿ ಸರ್ಕಾರ ರಚನೆಗೆ ಟಿವಿಕೆಗಿಲ್ಲ ಬಹುಮತ: ವಿಜಯ್​ ಮುಂದಿರುವ ಆಯ್ಕೆಗಳೇನು? – Kannada News | Vijays Three Options for Tamil Nadu Government Formation

ಚೆನ್ನೈ, ಮೇ 05: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ 108 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ಸಂಖ್ಯೆ 118 ತಲುಪಲು ಟಿವಿಕೆ ಪಕ್ಷಕ್ಕೆ ಇನ್ನೂ 10 ಸ್ಥಾನಗಳ ಕೊರತೆಯಿದೆ. ಈ ನಿಟ್ಟಿನಲ್ಲಿ ವಿಜಯ್ ಅವರು ತಮ್ಮ ನೂತನ ಶಾಸಕರೊಂದಿಗೆ ಸಭೆ ನಡೆಸಿ, ರಾಜ್ಯಪಾಲರಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿ ಎರಡು ವಾರಗಳ ಕಾಲಾವಕಾಶ ಕೋರಿದ್ದಾರೆ. ಸರ್ಕಾರ ರಚನೆಗೆ ವಿಜಯ್ ಅವರು ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದಾರೆ. ಕಾಂಗ್ರೆಸ್ (5 ಸ್ಥಾನಗಳು) ಈಗಾಗಲೇ ಬೆಂಬಲ ಸೂಚಿಸಿರುವ ನಡುವೆ  ಇತರ ಸಣ್ಣ ಪ್ರಾದೇಶಿಕ ಪಕ್ಷಗಳಾದ ಮುಸ್ಲಿಂ ಲೀಗ್ (2), ವಿಸಿಕೆ (2), ಸಿಪಿಐ (2), ಸಿಪಿಐ-ಎಂ (2) ಮತ್ತು ಪಿಎಂಕೆ (4) ಪಕ್ಷಗಳ ಬೆಂಬಲ ಪಡೆಯುವ ಸಾಧ್ಯತೆ ಇದೆ.  ಅಥವಾ 47 ಸ್ಥಾನಗಳನ್ನು ಗೆದ್ದಿರುವ ಎಐಎಡಿಎಂಕೆ ಪಕ್ಷದ ಬೆಂಬಲ ಪಡೆಯುವುದು. ಇದು ಸುಲಭ ಬಹುಮತ ಒದಗಿಸಿದರೂ, ಎಐಎಡಿಎಂಕೆ ಇಡುವ ಷರತ್ತುಗಳಿಗೆ ಟಿವಿಕೆ ಒಪ್ಪಿಕೊಳ್ಳಬೇಕಾಗಬಹುದು ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಎರಡೂವರೆ ತಾಸಿಂದ ನೋಡ್ತಿದ್ದೀನಿ ಗುರಾಯ್ಸೋದ್ಯಾಕೆ ಎಂದು ಕೇಳಿದ್ದಕ್ಕೆ ಯುವತಿಗೆ ಕಪಾಳಮೋಕ್ಷ ಮಾಡಿದ ಯುವಕ – Kannada News | Train Altercation Video Sparks Outrage After Woman Assaulted

ರೈಲು ಪ್ರಯಾಣವೆಂದರೆ ನೂರಾರು ಅಪರಿಚಿತರ ನಡುವೆ ಸಾಗುವ ಪಯಣ, ಎಲ್ಲಾ ರೀತಿಯ ಜನರೂ ಇರ್ತಾರೆ. ಸುಮಾರು ಎರಡೂವರೆ ಗಂಟೆಯಿಂದ ಯುವತಿಯನ್ನು ದಿಟ್ಟಿಸಿ ನೋಡುತ್ತಿದ್ದ ಯುವಕನ ಬಳಿ ಪ್ರಶ್ನೆ ಮಾಡಿದಾಗ ಆತ ಕೂಡಲೇ ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ. ರೈಲಿನಲ್ಲಿ ನೂರಾರು ಪ್ರಯಾಣಿಕರು ಇದ್ದರೂ, ಈ ಹಲ್ಲೆಯನ್ನು ತಡೆಯಲು ಯಾರೂ ಮುಂದೆ ಬಂದಿಲ್ಲದಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ರೈಲುಗಳಲ್ಲಿ ಮಹಿಳೆಯರ ಸುರಕ್ಷತೆ ಎಷ್ಟರ ಮಟ್ಟಿಗಿದೆ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.ಪ್ರಸ್ತುತ ರೈಲ್ವೆ ಅಧಿಕಾರಿಗಳು ಈ ವಿಡಿಯೋ ಯಾವ ಮಾರ್ಗದ ರೈಲಿನಲ್ಲಿ ನಡೆದಿದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಲೈವ್ ವೆದರ್​ನಿಂದ ಹಿಡಿದು ವಿವಿಧ ಅಲರ್ಟ್​ಗಳವರೆಗೆ ಹಲವು ಫೀಚರ್​ಗಳನ್ನು ಹೊಂದಿರುವ ಮೌಸಮ್ ಆ್ಯಪ್ – Kannada News | Mausam App: Accurate IMD Weather Forecasts & Real Time Alerts for Farmers and common people

ನವದೆಹಲಿ, ಮೇ 5: ಜನಸಾಮಾನ್ಯರಿಗೆ, ಅದರಲ್ಲೂ ರೈತರಿಗೆ ಹವಾಮಾನದ ಸಮಸ್ಯೆ ಬಹಳ ಕಾಡುತ್ತದೆ. ಯಾವಾಗ ಮಳೆ ಬರುತ್ತೆ, ಯಾವಾಗ ಮಳೆ ನಿಲ್ಲುತ್ತೆ ಇತ್ಯಾದಿ ಸಂಗತಿಗಳು ಗೊತ್ತಾಗುವುದಿಲ್ಲ. ಹವಾಮಾನ ಮುನ್ಸೂಚನೆಗಳು ನಿಖರವಾಗಿರುವುದಿಲ್ಲ. ಕೇಂದ್ರದ ಹವಾಮಾನ ಇಲಾಖೆ (ಐಎಂಡಿ) ಅಭಿವೃದ್ಧಿಪಡಿಸಿದ ಮೌಸಮ್ ಎನ್ನುವ ಆ್ಯಪ್ (Mausam App) ಜನಪ್ರಿಯವಾಗುತ್ತಿದೆ. ಇದರಲ್ಲಿ ಮಳೆ, ಗಾಳಿ ಇತ್ಯಾದಿ ಹವಾಮಾನ ಮುನ್ಸೂಚನೆಗಳನ್ನು ಹೆಚ್ಚು ನಿಖರವಾಗಿ ನೀಡಬಲ್ಲುದು. ಇದೀಗ ಮೌಸಮ್ ಆ್ಯಪ್ ಇತರ ಆ್ಯಪ್​ಗಳಾದ ಮೇಘದೂತ್, ದಾಮಿನಿಯೊಂದಿಗೆ ಮಿಳಿತವಾಗಿ ಹೆಚ್ಚಿನ ಸೇವೆಗಳನ್ನು ನೀಡಬಲ್ಲುದು.

ಮೌಸಮ್ ಆ್ಯಪ್​ನಲ್ಲಿ ಹವಾಮಾನ ಮುನ್ಸೂಚನೆ ಮಾತ್ರವಲ್ಲ, ಗುಡುಗು, ಮಿಂಚು, ಸಿಡಿಲು ಇತ್ಯಾದಿ ಮಳೆ ಸಂಬಂಧಿ ಹವಾಮಾನ ವೈಪರೀತ್ಯಗಳ ಮುನ್ಸೂಚನೆ ನೀಡಬಲ್ಲುದು. ಹಾಗೆಯೇ ಕೃಷಿ ಮಾರ್ಗದರ್ಶಕನಾಗಿಯೂ ನೆರವಾಗಬಲ್ಲುದು.

ಐಎಂಡಿ ಟ್ವೀಟ್

2020ರ ಜುಲೈ 27ರಂದು ಭೂ ವಿಜ್ಞಾನ ಸಚಿವಾಲಯ (Ministry of Earth Sciences) ಮತ್ತು ಭಾರತೀಯ ಹವಾಮಾನ ಇಲಾಖೆ (IMD) ಸೇರಿ, ‘ಮೌಸಮ್’ (Mausam) ಆ್ಯಪ್ ಅನ್ನು ಲೋಕಾರ್ಪಣೆ ಮಾಡಿದವು. ಅದರಲ್ಲಿ ಹಲವು ಫೀಚರ್​ಗಳಿವೆ. ‘ನೌಕಾಸ್ಟ್’ (Nowcast) ಎಂಬ ವೈಶಿಷ್ಟ್ಯವು ಮುಂದಿನ 3 ಗಂಟೆಗಳಲ್ಲಿ ಒಂದು ಪ್ರದೇಶದ ಸುತ್ತಮುತ್ತ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡುತ್ತದೆ. ಅಷ್ಟೇ ಅಲ್ಲದೆ, ಆ್ಯಪ್‌ನಲ್ಲಿ ಮಳೆ ಸಾಧ್ಯತೆ ಆಧರಿಸಿ ವಿವಿಧ ಬಣ್ಣದ ಅಲರ್ಟ್​ಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಎಐ ಹೆಸರಲ್ಲಿ ಲೇ ಆಫ್; ಉದ್ಯೋಗಿಗಳಿಗೆ ಆಶಾಕಿರಣವಾದ ಚೀನೀ ಕೋರ್ಟ್ ತೀರ್ಪು

‘ಮೌಸಮ್’ ಆ್ಯಪ್‌ನ ಸಂಪೂರ್ಣ ವಿವರಗಳು ಮತ್ತು ವೈಶಿಷ್ಟ್ಯಗಳು

ಈ ಆ್ಯಪ್ ಅನ್ನು IMD (ಭಾರತೀಯ ಹವಾಮಾನ ಇಲಾಖೆ), ಪುಣೆಯ IITM ಮತ್ತು ICRISAT ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ತಾಂತ್ರಿಕ ಭಾಷೆ ತಿಳಿಯದ ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಆ್ಯಪ್​ನ ಕೆಲ ಪ್ರಮುಖ ಫೀಚರ್​ಗಳು ಮತ್ತು ಯುಟಿಲಿಟಿಗಳ ಮಾಹಿತಿ ಇಲ್ಲಿದೆ:

  1. ಪ್ರಸ್ತುತ ಹವಾಮಾನ (Current Weather): ಭಾರತದ ಸುಮಾರು 200 ನಗರಗಳ ಪ್ರಸ್ತುತ ತಾಪಮಾನ, ಗಾಳಿಯ ವೇಗ, ದಿಕ್ಕು ಮತ್ತು ತೇವಾಂಶದ (Humidity) ಮಾಹಿತಿಯನ್ನು ದಿನಕ್ಕೆ 8 ಬಾರಿ ಅಪ್‌ಡೇಟ್ ಮಾಡಲಾಗುತ್ತದೆ. ಇದರೊಂದಿಗೆ ಸೂರ್ಯೋದಯ/ಸೂರ್ಯಾಸ್ತ ಮತ್ತು ಚಂದ್ರೋದಯ/ಚಂದ್ರಾಸ್ತದ ಸಮಯವನ್ನೂ ತಿಳಿಯಬಹುದು.
  2. ನೌಕಾಸ್ಟ್ (Nowcast): ಇದು ಅತ್ಯಂತ ಉಪಯುಕ್ತ ಫೀಚರ್. ಭಾರತದಾದ್ಯಂತ ಇರುವ ಸುಮಾರು 800 ಕೇಂದ್ರಗಳಿಂದ ಸ್ಥಳೀಯ ಹವಾಮಾನದ ತೀವ್ರತೆ ಮತ್ತು ಮುನ್ಸೂಚನೆಯನ್ನು ಪ್ರತಿ 3 ಗಂಟೆಗೊಮ್ಮೆ ಇಲ್ಲಿ ನೀಡಲಾಗುತ್ತದೆ. ಹಠಾತ್ ಮಳೆ ಅಥವಾ ಚಂಡಮಾರುತದ ಮುನ್ಸೂಚನೆ ಪಡೆಯಲು ಇದು ಸಹಕಾರಿ.
  3. ನಗರದ ಮುನ್ಸೂಚನೆ (City Forecast): ದೇಶದ ಸುಮಾರು 450 ನಗರಗಳ ಕಳೆದ 24 ಗಂಟೆಗಳ ಹವಾಮಾನ ವರದಿ ಮತ್ತು ಮುಂದಿನ 7 ದಿನಗಳ ಸುದೀರ್ಘ ಮುನ್ಸೂಚನೆಯನ್ನು ಇದು ಒದಗಿಸುತ್ತದೆ.
  4. ಎಚ್ಚರಿಕೆಗಳು (Alerts): ಅಪಾಯಕಾರಿ ಹವಾಮಾನದ ಬಗ್ಗೆ ಜನರನ್ನು ಮುನ್ನೆಚ್ಚರಿಸಲು ದಿನಕ್ಕೆ ಎರಡು ಬಾರಿ, ಮುಂದಿನ 5 ದಿನಗಳವರೆಗೆ ಬಣ್ಣದ ಕೋಡ್ (Colour Code) ಆಧಾರಿತ ಎಚ್ಚರಿಕೆಗಳನ್ನು ನೀಡಲಾಗುತ್ತದೆ:
  • ಹಳದಿ (Yellow): ಹವಾಮಾನದ ಅಪ್‌ಡೇಟ್ ಗಮನಿಸುತ್ತಿರಿ.
  • ಕಿತ್ತಳೆ (Orange): ಜಾಗರೂಕರಾಗಿರಿ ಮತ್ತು ಸಿದ್ಧರಾಗಿರಿ.
  • ಕೆಂಪು (Red): ಅತ್ಯಂತ ಅಪಾಯಕಾರಿ ಹವಾಮಾನ, ತಕ್ಷಣ ಕ್ರಮ ಕೈಗೊಳ್ಳಿ.

ಇದನ್ನೂ ಓದಿ: ದೆಹಲಿಯಲ್ಲಿ 9 ಮಂದಿ ಬಲಿತೆಗೆದ ಎಸಿ ಸ್ಫೋಟ; ಏರ್ ಕಂಡೀಷನರ್ ಸ್ಫೋಟಕ್ಕೆ ಕಾರಣವೇನು, ನಿಯಂತ್ರಣ ಹೇಗೆ?

ರಾಡಾರ್ ಚಿತ್ರಗಳು (Radar Products): ಹವಾಮಾನ ಇಲಾಖೆಯ ಅತ್ಯಾಧುನಿಕ ರಾಡಾರ್‌ಗಳು ಸೆರೆಹಿಡಿಯುವ ಚಿತ್ರಗಳನ್ನು ಪ್ರತಿ 10 ನಿಮಿಷಕ್ಕೊಮ್ಮೆ ಇಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ. ಇದರಿಂದ ಮೋಡಗಳ ಚಲನೆಯನ್ನು ನಾವೇ ನೇರವಾಗಿ ನಕ್ಷೆಯಲ್ಲಿ ನೋಡಬಹುದು.

ಮೌಸಮ್ ಆ್ಯಪ್ ಆಂಡ್ರಾಯ್ಡ್ (Google Play Store) ಮತ್ತು ಐಫೋನ್ (Apple App Store) ಎರಡರಲ್ಲೂ ಉಚಿತವಾಗಿ ಲಭ್ಯವಿದೆ. ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ಜೀವ ಮತ್ತು ಆಸ್ತಿ ಪಾಸ್ತಿ ನಷ್ಟವನ್ನು ತಡೆಯುವುದು ಮತ್ತು ರೈತರು, ಮೀನುಗಾರರು ಹಾಗೂ ಸಾರ್ವಜನಿಕರಿಗೆ ನಿಖರ ಮಾಹಿತಿ ನೀಡುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಡ್ರಗ್ಸ್ ಮಾಫಿಯಾಗೆ ಪೊಲೀಸರ ಬಿಗ್ ಶಾಕ್: 13 ಕೆಜಿಗೂ ಹೆಚ್ಚು ಮಾದಕ ವಸ್ತುಗಳು ಸೀಜ್! – Kannada News | Bengaluru Drug Bust: Rs 14.75 Crore Worth Hydro Ganja and MDMA Seized; 6 Peddlers Arrested

ಬೆಂಗಳೂರು, ಮೇ 05: ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ನಡೆಯುವ, ಪೆಡ್ಲರ್​ಗಳು ಸಿಕ್ಕಿ ಬೀಳುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಇದೀಗ ಮತ್ತೊಮ್ಮೆ  ಮಾದಕ ವಸ್ತುಗಳ ವಿರುದ್ಧ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 14 ಕೋಟಿ 75 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ (Drugs) ವಶಪಡಿಸಿಕೊಳ್ಳಲಾಗಿದೆ. ನಂದಿನಿ ಲೇಔಟ್ ಮತ್ತು ಯಶವಂತಪುರ ಪೊಲೀಸರು ಒಟ್ಟು 13 ಕೆಜಿ 700 ಗ್ರಾಂ ತೂಕದ ಹೈಡ್ರೋ ಗಾಂಜಾ ಹಾಗೂ ಎಂಡಿಎಂಎ (MDMA) ಕ್ರಿಸ್ಟಲ್ ಅನ್ನು ಸೀಜ್ ಮಾಡಿದ್ದಾರೆ.

ನಂದಿನಿ ಲೇಔಟ್: 5.75 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶ

ನಂದಿನಿ ಲೇಔಟ್ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕೇರಳ ಮೂಲದ ಇಬ್ಬರು ಡ್ರಗ್ ಪೆಡ್ಲರ್​ಗಳನ್ನು ಬಂಧಿಸಿದ್ದಾರೆ. ಸೌಗೇಶ್ ಮತ್ತು ಅಲ್ತಾಫ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 5.75 ಕೋಟಿ ರೂ.ಮೌಲ್ಯದ 5 ಕೆಜಿ 700 ಗ್ರಾಂ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ವಿದೇಶದಿಂದ ಈ ಹೈಡ್ರೋ ಗಾಂಜಾವನ್ನು ತರಿಸಿ ಸ್ಥಳೀಯರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ. ಕೇರಳದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಇವರ ಮೇಲೆ ಈ ಹಿಂದೆಯೇ ಅಲ್ಲಿನ ಎನ್​ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ನಂದಿನಿ ಲೇಔಟ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಯಶವಂತಪುರ: 9 ಕೋಟಿ ಮೌಲ್ಯದ ಎಂಡಿಎಂಎ ಸೀಜ್, ನಾಲ್ವರು ಲಾಕ್

ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಯಶವಂತಪುರ ಪೊಲೀಸರು ಅಂತರರಾಷ್ಟ್ರೀಯ ಮಟ್ಟದ ಡ್ರಗ್ ಜಾಲವನ್ನು ಬೇಧಿಸಿದ್ದಾರೆ. ಮಾದಕ ವಸ್ತುಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಗಳಾದ ಸೈಯದ್ ಸುಹೇಲ್, ಮೊಹಮ್ಮದ್ ಸಮೀರ್, ಸಾದಿಕ್ ಪಾಷಾ ಮತ್ತು ಮೊಹಮ್ಮದ್ ಹಕ್​ರನ್ನು ಬಂಧಿಸಲಾಗಿದ್ದು, ಈ ನಾಲ್ವರಿಂದ 9 ಕೋಟಿ ರೂಪಾಯಿ ಮೌಲ್ಯದ 8 ಕೆಜಿ ಎಂಡಿಎಂಎ (MDMA) ಸೀಜ್ ಮಾಡಲಾಗಿದೆ.

ಇದನ್ನೂ ಓದಿ ಬೆಂಗಳೂರಿನಲ್ಲಿ ಪೊಲೀಸರ ಮೆಗಾ ಡ್ರಗ್ ಬೇಟೆ: ಒಂದೇ ವಾರದಲ್ಲಿ 50 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

ಆರೋಪಿಗಳು ನೈಜೀರಿಯಾ ಪ್ರಜೆಗಳಿಂದ ಡ್ರಗ್ಸ್ ಖರೀದಿಸಿ ನಗರದಲ್ಲಿ ಸ್ಥಳೀಯರಿಗೆ ಪೂರೈಸುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಬಂಧಿತರಿಂದ ಒಂದು ಕಾರು ಹಾಗೂ ಐದು ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಲ್ಲಿ ಸೈಯದ್ ಸುಹೇಲ್ ಹೊಸಕೋಟೆ ಠಾಣೆಯ ರೌಡಿಶೀಟರ್ ಆಗಿದ್ದು, ಈ ಹಿಂದೆ ಪ್ರಕರಣವೊಂದರಲ್ಲಿ ಪೊಲೀಸರು ಈತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಸದ್ಯ ಈ ಜಾಲಕ್ಕೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ನೈಜೀರಿಯಾ ಪ್ರಜೆಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:56 pm, Tue, 5 May 26

Source link

ಅಕ್ರಮ ಸಂಬಂಧಕ್ಕೆ ಇಬ್ಬರು ಬಲಿ: ಅತಿಥಿ ಉಪನ್ಯಾಸಕಿಯ ಕೊಂದು ಆರೋಪಿಯೂ ಆತ್ಮಹತ್ಯೆ – Kannada News | Illicit Relationship Claims Two Lives: Guest Lecturer Killed, Accused Dies in Doddaballapur

ದೇವನಹಳ್ಳಿ, ಮೇ 05: ಮದುವೆ ಆಗಲು ನಿರಾಕರಿಸಿದ ಕಾರಣಕ್ಕೆ ತನ್ನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಭೀಕರವಾಗಿ ಕೊಲಗೈದ ಬಳಿಕ ವ್ಯಕ್ತಿಯೋರ್ವ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದ ಬಳಿ ನಡೆದಿದೆ. ಸರೋಜಾ (40) ಕೊಲೆಯಾದ ಮಹಿಳೆಯಾಗಿದ್ದು, ಬಳಿಕ ರೈಲಿಗೆ ತಲೆಕೊಟ್ಟು ಪ್ರಾಣಬಿಟ್ಟಿರುವ ವ್ಯಕ್ತಿಯನ್ನು ರಾಮಾಂಜಿ(45) ಎಂದು ಗುರುತಿಸಲಾಗಿದೆ.

ಕೊಲೆ ಮಾಡಿ ಕಾರಿಗೆ ಬೆಂಕಿ

ದೇವನಹಳ್ಳಿ ಬಳಿಯ ಖಾಸಗಿ ಕಾಲೇಜೊಂದರ ಅತಿಥಿ ಉಪನ್ಯಾಸಕಿಯಾಗಿದ್ದ ಸರೋಜಾ ಮತ್ತು ರಾಮಾಂಜಿ ಕಳೆದೊಂದು ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದರು. ಗಂಡನಿಗೆ ಡಿವೋರ್ಸ್ ಕೊಟ್ಟು ಸರೋಜಾ ರಾಮಾಂಜಿ ಸಂಪರ್ಕದಲ್ಲಿದ್ದಳು. ಈ ನಡುವೆ ಇಬ್ಬರೂ ಮದುವೆಯಾಗೋಣ ಎಂದು ಸರೋಜಾಗೆ ರಾಮಾಂಜಿ ಹೇಳಿದ್ದ. ಆದರೆ ಇದಕ್ಕೆ ಸರೋಜಾ ವಿರೋಧ ವ್ಯಕ್ತಪಡಿಸಿದ್ದಳು. ಈ ನಡುವೆ ಆಕೆಯನ್ನು ಲಾಂಗ್ ಡ್ರೈವ್​​ಗೆ ಎಂದು ಕರೆದುಕೊಂಡು ಬಂದಿದ್ದ ಆರೋಪಿ, ಸರೋಜಾಳನ್ನು ಕೊಂದು ಕಾರಿಗೂ ಬೆಂಕಿ ಹಚ್ಚಿದ್ದ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಗಂಡನ ಎರಡನೇ ಮದುವೆ ತಡೆಯಲು ಮಂಟಪಕ್ಕೆ ಗರ್ಭಿಣಿ ಪತ್ನಿ ಎಂಟ್ರಿ! ಮುಂದೇನಾಯ್ತು ಗೊತ್ತಾ?

ಪೂರ್ವಯೋಜಿತ ಕೊಲೆ

ಸೋಷಿಯಲ್ ಮೀಡಿಯಾ ಮೂಲಕ ಪರಿಚಿತವಾಗಿದ್ದ ಸರೋಜಾ ಮದುವೆಗೆ ನಿರಾಕರಿಸಿದ ಕಾರಣ ಆಕೆ ವಿರುದ್ಧ ರಾಮಾಂಜಿ ಸಿಟ್ಟುಗೊಂಡಿದ್ದ. ಹೀಗಾಗಿ ಕೊಲೆ ಬಗ್ಗೆ ಮೊದಲೇ ನಿರ್ಧಾರ ಮಾಡಿ ಆಕೆಯನ್ನು ತನ್ನ ಜೊತೆಗೆ ಕರೆದುಕೊಂಡು ಬಂದಿದ್ದ. ಮಹಿಳೆಯನ್ನು ಕೊಂದ ಬಳಿಕ ಆರೋಪಿ ಎಸ್ಕೇಪ್​​ ಆಗಿದ್ದ ಹಿನ್ನೆಲೆ, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಇಳಿದಿದ್ದರು. ಈ ವೇಳೆ ಮತ್ತೊಂದು ಶಾಕಿಂಗ್​​ ವಿಚಾರ ಬಯಲಾಗಿದ್ದು, ಸರೋಜಾ ಕೊಲೆ ಬಳಿಕ ಆರೋಪಿ ರಾಮಾಂಜಿ ಕೂಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಗೊತ್ತಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:48 pm, Tue, 5 May 26

Source link

Exit mobile version