Headlines

ದಾವಣಗೆರೆ ದಕ್ಷಿಣ ಉಪ ಚುನಾವಣೆ ಗೆದ್ದರೂ ಕಾಂಗ್ರೆಸ್​​ಗೆ ತಪ್ಪದ ಚಿಂತೆ: ಕಾರಣ ಇಲ್ಲಿದೆ – Kannada News | Davangere By election: Congress Wins but Margin Sparks Concern Over Muslim Vote Shift

ದಾವಣಗೆರೆ, ಮೇ 05: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಜಯಗಳಿಸಿದೆ. ಆದರೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಫಲಿತಾಂಶ ಕಾಂಗ್ರೆಸ್‌ಗೆ ಆತಂಕ ಮೂಡಿಸಿದೆ. ಕಾಂಗ್ರೆಸ್ ಗೆದ್ದಿದ್ದರೂ, ವಿಜಯದ ಅಂತರ ಬಹಳ ಕಡಿಮೆಯಾಗಿದೆ. ಇದು ಮುಸ್ಲಿಂ ಮತದಾರರು ಕಾಂಗ್ರೆಸ್‌ನಿಂದ ದೂರ ಸರಿದಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಎಸ್ಡಿಪಿಐ ಅಭ್ಯರ್ಥಿಗೆ ದಾಖಲೆಯ ಸುಮಾರು 19,000 ಮತಗಳು ಬಂದಿದ್ದು, ಇತರೆ ಮುಸ್ಲಿಂ ಅಭ್ಯರ್ಥಿಗಳಿಗೆ 2-3 ಸಾವಿರ ಮತಗಳು ಲಭಿಸಿವೆ. ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ 40-50 ಕ್ಷೇತ್ರಗಳಲ್ಲಿ…

Read More

TV9 Kannada News Live: ಪಶ್ಚಿಮ ಬಂಗಾಳ, ತಮಿಳುನಾಡು ಸರ್ಕಾರ ರಚನೆ ಕಸರತ್ತು; ನೇರ ಪ್ರಸಾರ – Kannada News | Government Formation Efforts Intensify in West Bengal and Tamil Nadu; Thalapathy Vijay’s TVK Eyes Power

ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಪುದುಚೇರಿ, ಕೇರಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದ್ದು ಪಶ್ಚಿಮ ಬಂಗಾಳ, ಪುದುಚೇರಿ ಮತ್ತು ಅಸ್ಸಾಂನಲ್ಲಿ ಬಿಜೆಪಿ ಭರ್ಜರಿ ಬಹುಮತ ಗಳಿಸಿದೆ. ಮತ್ತೊಂದೆಡೆ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬಹುಮತ ಗಳಿಸಿದ್ದರೆ, ತಮಿಳುನಾಡಿನಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಸರಳ ಬಹುಮತಕ್ಕೆ ಸನಿಹದಲ್ಲಿದೆ. ಸದ್ಯ ಟಿವಿಕೆ 107 ಸ್ಥಾನ ಗಳಿಸಿದ್ದು, ಸರ್ಕಾರ ರಚನೆಗೆ 11 ಸದಸ್ಯರ ಬೆಂಬಲ ಟಿವಿಕೆಗೆ ಅಗತ್ಯವಿದೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚನೆಯ ಕಸರತ್ತು ಜೋರಾಗಿದೆ. ಪಶ್ಚಿಮ…

Read More

Rishabh Pant: ಹೆಚ್ಚುತ್ತಿದೆ ವಿವಾದ.. ಲಕ್ನೋ ತಂಡದ ನಾಯಕ ಸ್ಥಾನದಿಂದ ಪಂತ್ ವಜಾ?, ಮುಂದಿನ ಕ್ಯಾಪ್ಟರ್ ಯಾರು? – Kannada News | IPL 2026 Consecutive defeats, poor form Rishabh Pant sacked as captain of LSG team?

ಬೆಂಗಳೂರು (ಮೇ. 05): ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಐಪಿಎಲ್ 2026 ಸೀಸನ್ ಅದ್ಭುತವಾಗಿಲ್ಲ. ಸತತ ಸೋಲುಗಳಿಂದ ಕಂಗೆಟ್ಟಿರುವ ತಂಡದ ಪ್ಲೇಆಫ್ ಭರವಸೆ ಬಹುತೇಕ ಕಮರಿಹೋಗಿದೆ. ಇದರ ಜೊತೆಗೆ, ತಂಡದ ಪ್ರದರ್ಶನದ ಬಗ್ಗೆಯೂ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಮಾಜಿ ಕ್ರಿಕೆಟಿಗರು ನಾಯಕ ರಿಷಭ್ ಪಂತ್ (Rishabh Pant) ನಾಯಕತ್ವವನ್ನು ಟೀಕಿಸುತ್ತಿದ್ದಾರೆ. ಮಾಜಿ ಆಟಗಾರರಾದ ಮನೋಜ್ ತಿವಾರಿ ಮತ್ತು ರೋಹನ್ ಗವಾಸ್ಕರ್ ಪಂತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಮುಕ್ತವಾಗಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್…

Read More

ತಮಿಳುನಾಡಲ್ಲಿ ಸರ್ಕಾರ ರಚನೆಗೆ ಟಿವಿಕೆಗಿಲ್ಲ ಬಹುಮತ: ವಿಜಯ್​ ಮುಂದಿರುವ ಆಯ್ಕೆಗಳೇನು? – Kannada News | Vijays Three Options for Tamil Nadu Government Formation

ಚೆನ್ನೈ, ಮೇ 05: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ 108 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ಸಂಖ್ಯೆ 118 ತಲುಪಲು ಟಿವಿಕೆ ಪಕ್ಷಕ್ಕೆ ಇನ್ನೂ 10 ಸ್ಥಾನಗಳ ಕೊರತೆಯಿದೆ. ಈ ನಿಟ್ಟಿನಲ್ಲಿ ವಿಜಯ್ ಅವರು ತಮ್ಮ ನೂತನ ಶಾಸಕರೊಂದಿಗೆ ಸಭೆ ನಡೆಸಿ, ರಾಜ್ಯಪಾಲರಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿ ಎರಡು ವಾರಗಳ ಕಾಲಾವಕಾಶ ಕೋರಿದ್ದಾರೆ. ಸರ್ಕಾರ ರಚನೆಗೆ ವಿಜಯ್ ಅವರು…

Read More

Video: ಎರಡೂವರೆ ತಾಸಿಂದ ನೋಡ್ತಿದ್ದೀನಿ ಗುರಾಯ್ಸೋದ್ಯಾಕೆ ಎಂದು ಕೇಳಿದ್ದಕ್ಕೆ ಯುವತಿಗೆ ಕಪಾಳಮೋಕ್ಷ ಮಾಡಿದ ಯುವಕ – Kannada News | Train Altercation Video Sparks Outrage After Woman Assaulted

ರೈಲು ಪ್ರಯಾಣವೆಂದರೆ ನೂರಾರು ಅಪರಿಚಿತರ ನಡುವೆ ಸಾಗುವ ಪಯಣ, ಎಲ್ಲಾ ರೀತಿಯ ಜನರೂ ಇರ್ತಾರೆ. ಸುಮಾರು ಎರಡೂವರೆ ಗಂಟೆಯಿಂದ ಯುವತಿಯನ್ನು ದಿಟ್ಟಿಸಿ ನೋಡುತ್ತಿದ್ದ ಯುವಕನ ಬಳಿ ಪ್ರಶ್ನೆ ಮಾಡಿದಾಗ ಆತ ಕೂಡಲೇ ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ. ರೈಲಿನಲ್ಲಿ ನೂರಾರು ಪ್ರಯಾಣಿಕರು ಇದ್ದರೂ, ಈ ಹಲ್ಲೆಯನ್ನು ತಡೆಯಲು ಯಾರೂ ಮುಂದೆ ಬಂದಿಲ್ಲದಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ರೈಲುಗಳಲ್ಲಿ ಮಹಿಳೆಯರ ಸುರಕ್ಷತೆ ಎಷ್ಟರ ಮಟ್ಟಿಗಿದೆ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.ಪ್ರಸ್ತುತ ರೈಲ್ವೆ ಅಧಿಕಾರಿಗಳು ಈ ವಿಡಿಯೋ ಯಾವ ಮಾರ್ಗದ ರೈಲಿನಲ್ಲಿ…

Read More

ಲೈವ್ ವೆದರ್​ನಿಂದ ಹಿಡಿದು ವಿವಿಧ ಅಲರ್ಟ್​ಗಳವರೆಗೆ ಹಲವು ಫೀಚರ್​ಗಳನ್ನು ಹೊಂದಿರುವ ಮೌಸಮ್ ಆ್ಯಪ್ – Kannada News | Mausam App: Accurate IMD Weather Forecasts & Real Time Alerts for Farmers and common people

ನವದೆಹಲಿ, ಮೇ 5: ಜನಸಾಮಾನ್ಯರಿಗೆ, ಅದರಲ್ಲೂ ರೈತರಿಗೆ ಹವಾಮಾನದ ಸಮಸ್ಯೆ ಬಹಳ ಕಾಡುತ್ತದೆ. ಯಾವಾಗ ಮಳೆ ಬರುತ್ತೆ, ಯಾವಾಗ ಮಳೆ ನಿಲ್ಲುತ್ತೆ ಇತ್ಯಾದಿ ಸಂಗತಿಗಳು ಗೊತ್ತಾಗುವುದಿಲ್ಲ. ಹವಾಮಾನ ಮುನ್ಸೂಚನೆಗಳು ನಿಖರವಾಗಿರುವುದಿಲ್ಲ. ಕೇಂದ್ರದ ಹವಾಮಾನ ಇಲಾಖೆ (ಐಎಂಡಿ) ಅಭಿವೃದ್ಧಿಪಡಿಸಿದ ಮೌಸಮ್ ಎನ್ನುವ ಆ್ಯಪ್ (Mausam App) ಜನಪ್ರಿಯವಾಗುತ್ತಿದೆ. ಇದರಲ್ಲಿ ಮಳೆ, ಗಾಳಿ ಇತ್ಯಾದಿ ಹವಾಮಾನ ಮುನ್ಸೂಚನೆಗಳನ್ನು ಹೆಚ್ಚು ನಿಖರವಾಗಿ ನೀಡಬಲ್ಲುದು. ಇದೀಗ ಮೌಸಮ್ ಆ್ಯಪ್ ಇತರ ಆ್ಯಪ್​ಗಳಾದ ಮೇಘದೂತ್, ದಾಮಿನಿಯೊಂದಿಗೆ ಮಿಳಿತವಾಗಿ ಹೆಚ್ಚಿನ ಸೇವೆಗಳನ್ನು ನೀಡಬಲ್ಲುದು. ಮೌಸಮ್ ಆ್ಯಪ್​ನಲ್ಲಿ…

Read More

ಬೆಂಗಳೂರಿನ ಡ್ರಗ್ಸ್ ಮಾಫಿಯಾಗೆ ಪೊಲೀಸರ ಬಿಗ್ ಶಾಕ್: 13 ಕೆಜಿಗೂ ಹೆಚ್ಚು ಮಾದಕ ವಸ್ತುಗಳು ಸೀಜ್! – Kannada News | Bengaluru Drug Bust: Rs 14.75 Crore Worth Hydro Ganja and MDMA Seized; 6 Peddlers Arrested

ಬೆಂಗಳೂರು, ಮೇ 05: ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ನಡೆಯುವ, ಪೆಡ್ಲರ್​ಗಳು ಸಿಕ್ಕಿ ಬೀಳುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಇದೀಗ ಮತ್ತೊಮ್ಮೆ  ಮಾದಕ ವಸ್ತುಗಳ ವಿರುದ್ಧ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 14 ಕೋಟಿ 75 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ (Drugs) ವಶಪಡಿಸಿಕೊಳ್ಳಲಾಗಿದೆ. ನಂದಿನಿ ಲೇಔಟ್ ಮತ್ತು ಯಶವಂತಪುರ ಪೊಲೀಸರು ಒಟ್ಟು 13 ಕೆಜಿ 700 ಗ್ರಾಂ ತೂಕದ ಹೈಡ್ರೋ ಗಾಂಜಾ ಹಾಗೂ ಎಂಡಿಎಂಎ (MDMA) ಕ್ರಿಸ್ಟಲ್ ಅನ್ನು ಸೀಜ್ ಮಾಡಿದ್ದಾರೆ….

Read More

ಅಕ್ರಮ ಸಂಬಂಧಕ್ಕೆ ಇಬ್ಬರು ಬಲಿ: ಅತಿಥಿ ಉಪನ್ಯಾಸಕಿಯ ಕೊಂದು ಆರೋಪಿಯೂ ಆತ್ಮಹತ್ಯೆ – Kannada News | Illicit Relationship Claims Two Lives: Guest Lecturer Killed, Accused Dies in Doddaballapur

ದೇವನಹಳ್ಳಿ, ಮೇ 05: ಮದುವೆ ಆಗಲು ನಿರಾಕರಿಸಿದ ಕಾರಣಕ್ಕೆ ತನ್ನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಭೀಕರವಾಗಿ ಕೊಲಗೈದ ಬಳಿಕ ವ್ಯಕ್ತಿಯೋರ್ವ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದ ಬಳಿ ನಡೆದಿದೆ. ಸರೋಜಾ (40) ಕೊಲೆಯಾದ ಮಹಿಳೆಯಾಗಿದ್ದು, ಬಳಿಕ ರೈಲಿಗೆ ತಲೆಕೊಟ್ಟು ಪ್ರಾಣಬಿಟ್ಟಿರುವ ವ್ಯಕ್ತಿಯನ್ನು ರಾಮಾಂಜಿ(45) ಎಂದು ಗುರುತಿಸಲಾಗಿದೆ. ಕೊಲೆ ಮಾಡಿ ಕಾರಿಗೆ ಬೆಂಕಿ ದೇವನಹಳ್ಳಿ ಬಳಿಯ ಖಾಸಗಿ ಕಾಲೇಜೊಂದರ ಅತಿಥಿ ಉಪನ್ಯಾಸಕಿಯಾಗಿದ್ದ ಸರೋಜಾ ಮತ್ತು ರಾಮಾಂಜಿ…

Read More

ಪ್ರತಿ ಮತವೂ ಅಮೂಲ್ಯ: ತಿರುಪ್ಪತ್ತೂರಿನಲ್ಲಿ ಒಂದೇ ಒಂದು ಮತದಿಂದ ಡಿಎಂಕೆ ಸಚಿವರನ್ನು ಸೋಲಿಸಿದ ಶ್ರೀನಿವಾಸ ಸೇತುಪತಿ – Kannada News | Tamil Nadu Results: Tiruppattur Shock: DMK Minister Loses by Single Vote, Highlights Power of Every Vote

ಪೆರಿಯಕರುಪ್ಪನ್ -ಶ್ರೀನಿವಾಸImage Credit source: Patrika ಚೆನ್ನೈ, ಮೇ 05: ಪ್ರಜಾಪ್ರಭುತ್ವದಲ್ಲಿ ಪ್ರತಿ ಮತವೂ ಎಷ್ಟು ನಿರ್ಣಾಯಕ ಎಂಬುದಕ್ಕೆ ತಮಿಳುನಾಡಿ(Tamil Nadu)ನ ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದ ಫಲಿತಾಂಶವು ಒಂದು ಜೀವಂತ ಸಾಕ್ಷಿಯಾಗಿದೆ. ದಶಕಗಳ ಕಾಲದ ರಾಜಕೀಯ ಅನುಭವವಿರುವ ಡಿಎಂಕೆ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರು ನಟ ವಿಜಯ್ ನೇತೃತ್ವದ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷದ ಅಭ್ಯರ್ಥಿ  ಶ್ರೀನಿವಾಸ ಸೇತುಪತಿ ವಿರುದ್ಧ ಕೇವಲ ಒಂದೇ ಒಂದು ಮತದ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ. ಉಸಿರು ಬಿಗಿಹಿಡಿಯುವಂತಿದ್ದ ಮತ ಎಣಿಕೆ ಮತ…

Read More

‘ದಳಪತಿ ವಿಜಯ್ ಅವರಿಗೆ ಸಿಕ್ಕಿದ್ದು ಅರ್ಹ ಗೆಲುವು’; ಶುಭ ಹಾರೈಸಿದ ಶಿವರಾಜ್​​ಕುಮಾರ್ – Kannada News | Thalapathy Vijay’s TVK Wins 108 Seats: Shivarajkumar Congratulates TN’s New Political Force

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ.ಮೊದಲ ಚುನಾವಣೆಯಲ್ಲೇ ಇಷ್ಟು ದೊಡ್ಡ ಗೆಲುವು ದಾಖಲಿಸಿದ್ದು ನಿಜಕ್ಕೂ ಸಾಧನೆಯೇ ಸರಿ. ವಿಜಯ್ ಅವರ ರಾಜಕೀಯ ಯಶಸ್ಸಿಗೆ ಭಾರತೀಯ ಚಿತ್ರರಂಗದ ಅನೇಕ ಗಣ್ಯರು ಶುಭ ಹಾರೈಸುತ್ತಿದ್ದಾರೆ. ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್ ಕೂಡ ವಿಜಯ್​ಗೆ ವಿಶ್ ಮಾಡಿದ್ದಾರೆ. ಈ ಗೆಲುವಿಗೆ ನೀವು ಅರ್ಹರು ಎಂದು ಹೇಳಿದ್ದಾರೆ. ಶಿವರಾಜ್​​ಕುಮಾರ್ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು…

Read More