ವಿಜಯ್ನ ಪೋರ್ಟ್ಫೋಲಿಯೋ ಇಂಟರೆಸ್ಟಿಂಗ್; ಹೂಡಿಕೆಯಲ್ಲಿ ಸಂಪ್ರದಾಯವಾದಿ; ಎಲ್ಲೆಲ್ಲಿದೆ ಅವರ 624 ಕೋಟಿ ರೂ ಹಣ? – Kannada News | Actor turned politician Vijay’s Wealth Revealed: Rs 624 Crore Assets & Traditional Investments
ಚೆನ್ನೈ, ಮೇ 5: ನಟ ವಿಜಯ್ (Vijay) ತಮಿಳುನಾಡು ರಾಜಕೀಯವನ್ನೇ ಅಲುಗಾಡಿಸಿಬಿಟ್ಟಿದ್ದಾರೆ. ವಿಧಾನಸಭೆಯಲ್ಲಿ ಇಡೀ ರಾಜ್ಯವೇ ಸಂಚಲನಗೊಳ್ಳುವಂತೆ ಅವರ ಟಿವಿಕೆ ಪಕ್ಷ (TVK- Tamilaga Vetri Kazhagam) ದಿಗ್ವಿಜಯ ಸಾಧಿಸಿದೆ. ಏಕವ್ಯಕ್ತಿ ಈ ಮಹಾನ್ ಕ್ರಾಂತಿ ಮಾಡಿರುವುದು ಸಾಮಾನ್ಯದ ಸಂಗತಿಯಲ್ಲ. ಅಂತೆಯೇ, ಬಹಳ ಜನರು ವಿಜಯ್ ಅವರ ಹಣಕಾಸು ಶಕ್ತಿ ಮತ್ತು ಹಿನ್ನೆಲೆ ಬಗ್ಗೆ ಮಾಹಿತಿ ತಿಳಿಯಲು ಆಸಕ್ತರಾಗಿದ್ದಾರೆ. ಅವರ ಆಸ್ತಿಪಾಸ್ತಿ, ಹೂಡಿಕೆಯ ವಿವರ ನಿಜಕ್ಕೂ ಕುತೂಹಲಕಾರಿ ಎನಿಸಿದೆ. ಹೊಸ ತಲೆಮಾರಿನ ಜನರನ್ನು ಮತಪೆಟ್ಟಿಗೆಗೆ ಆಕರ್ಷಿಸಿದ ವಿಜಯ್…