ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್​ಗೆ ಭರ್ಜರಿ ಮುನ್ನಡೆ: ಕೋಝಿಕ್ಕೋಡ್​ಗೆ ಧಾವಿಸಿದ ಸಚಿವ ಜಮೀರ್ ಅಹ್ಮದ್ – Kannada News | Kerala Election Results 2026: Zameer Ahmed Khan Rushes to Kozhikode as Congress led UDF Maintains Massive Lead

ಬೆಂಗಳೂರು, ಮೇ 4: ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಯುಡಿಎಫ್ (ಕಾಂಗ್ರೆಸ್ ಮೈತ್ರಿಕೂಟ) ಭಾರಿ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಸಚಿವ ಜಮೀರ್ ಅಹ್ಮದ್ ಖಾನ್ ಕ್ಯಾಲಿಕಟ್ (ಕೋಝಿಕ್ಕೋಡ್) ನಗರಕ್ಕೆ ತೆರಳಿದ್ದಾರೆ. ಇದು ಯುಡಿಎಫ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದಿದೆ. ಜಮೀರ್ ಅಹ್ಮದ್ ಖಾನ್ ಅವರು ಕೇರಳದಲ್ಲಿ ಯುಡಿಎಫ್ ಪರವಾಗಿ ವ್ಯಾಪಕವಾಗಿ ಪ್ರಚಾರ ನಡೆಸಿದ್ದರು. ಪಕ್ಷದ ಹಿರಿಯ ನಾಯಕ ವೇಣುಗೋಪಾಲ್ ಅವರ ಸೂಚನೆಯ ಮೇರೆಗೆ ಅವರು ಕೇರಳಕ್ಕೆ ತೆರಳಿದ್ದರು. ಯುಡಿಎಫ್ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದ್ದ ಜಮೀರ್ ಅಹ್ಮದ್, ಈಗ ಪಕ್ಷದ ಯಶಸ್ಸನ್ನು ಸಂಭ್ರಮಿಸಲು ಅಲ್ಲಿಗೆ ತಲುಪಿದ್ದಾರೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಡಿಗೆ ರಾಜನೊಬ್ಬನೇ, ಅವನು ಒಂಟಿಯಾಗಿದ್ದರೂ ಸರಿ! ಟಿವಿಕೆ ವಿಜಯ್ ಹಳೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್!

ಒಂದು ದಟ್ಟವಾದ ಕಾಡಿನಲ್ಲಿ ನೂರಾರು ನರಿಗಳು ಮತ್ತು ಚಿರತೆಗಳಿದ್ದವು. ಅವೆಲ್ಲವೂ ಕಾಡಿನ ಮೇಲೆ ತಮ್ಮದೇ ಅಧಿಕಾರವೆಂದು ಮೆರೆಯುತ್ತಿದ್ದವು. ಒಂದು ದಿನ ಪ್ರಾಣಿಗಳೆಲ್ಲ ಸೇರಿ ತಮ್ಮಲ್ಲಿ ಯಾರು ಶಕ್ತಿಶಾಲಿ ಎಂದು ಚರ್ಚಿಸುತ್ತಿದ್ದಾಗ, ನರಿಯೊಂದು ಹೇಳಿತು, “ನಾವೇ ಅತಿ ಹೆಚ್ಚು ಸಂಖ್ಯೆಯಲ್ಲಿದ್ದೇವೆ, ಹಾಗಾಗಿ ಕಾಡು ನಮ್ಮದು!” ಎಂದು. ಆದರೆ, ಅದೇ ಸಮಯದಲ್ಲಿ ಅಲ್ಲಿಗೆ ಒಂದು ಸಿಂಹ ಆಗಮಿಸಿತು. ಅದರ ಹೆಜ್ಜೆಗಳ ಸದ್ದಿಗೆ ಇಡೀ ಕಾಡೇ ಸ್ತಬ್ಧವಾಯಿತು. ಸಿಂಹವು ವೇದಿಕೆಯ ಮೇಲೆ ನಿಂತಂತೆ ಒಂದು ಎತ್ತರದ ಬಂಡೆಯ ಮೇಲೆ ನಿಂತು ಹೇಳಿತು. “ಕಾಡಿನಲ್ಲಿ ಎಷ್ಟೇ ನರಿಗಳಿರಲಿ ಅಥವಾ ಬೇರೆ ಪ್ರಾಣಿಗಳಿರಲಿ, ಅಲ್ಲಿ ಇರುವುದು ಒಂದೇ ಸಿಂಹ! ಆ ಸಿಂಹ ಒಂಟಿಯಾಗಿದ್ದರೂ ಸಹ, ಅದುವೇ ಕಾಡಿನ ನಿಜವಾದ ರಾಜ.” ಇದು ಕೇವಲ ಮಾತಲ್ಲ, ಇದೊಂದು ಘೋಷಣೆ. ಸಿಂಹದ ಈ ಮಾತುಗಳು ಅದರ ಆಕರ್ಷಕ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವನ್ನು ತೋರಿಸುತ್ತಿದ್ದವು. ಅದರ ಮುಂದೆ ನಿಂತಿದ್ದ ನೂರಾರು ಪ್ರಾಣಿಗಳು ಅದರ ಗಾಂಭೀರ್ಯಕ್ಕೆ ಮಣಿದವು. ಸಿಂಹವು ತನ್ನ ಎರಡು ಕೈಗಳನ್ನು ಎತ್ತಿ, ಜನಸಾಗರದಂತೆ ಕಾಣುವ ತನ್ನ ಪ್ರಾಣಿ ಸಂಕುಲದ ಮುಂದೆ ಹೆಮ್ಮೆಯಿಂದ ನಿಂತಿತು. ಅದರ ಒಂದು ಸಣ್ಣ ಗರ್ಜನೆ ಕಾಡಿನ ಪ್ರತಿಯೊಂದು ಮೂಲೆಗೂ ತಲುಪಿತು. ಇದು ನಾಯಕತ್ವದ ನಿಜವಾದ ಶಕ್ತಿ. ಗುಂಪಿನಲ್ಲಿ ಬರುವುದಕ್ಕಿಂತ, ಒಂಟಿಯಾಗಿ ನಿಂತು ಗುಂಪನ್ನು ಮುನ್ನಡೆಸುವವನೇ ನಿಜವಾದ “ಕಾಡಿನ ರಾಜ” ಎಂದು ಚುನಾವಣಾ ಪ್ರಚಾರದಲ್ಲಿ ಟಿವಿಕೆ ನಾಯಕ ವಿಜಯ್​​ ಅವರು ಹೇಳಿರುವ ಮಾತು ಇದೀಗ ಎಕ್ಸ್​​ನಲ್ಲಿ ಮತ್ತೆ ವೈರಲ್​ ಆಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆ ಉಪ ಚುನಾವಣೆ​: ಕಾಂಗ್ರೆಸ್​​ಗೆ ಮುನ್ನಡೆ; ಕಾರ್ಯಕರ್ತರ ಸಂಭ್ರಮ – Kannada News | Bagalkot By election: Congress Leads, Workers Celebrate Umesh Metis Initial Success

ಬಾಗಲಕೋಟೆ, ಮೇ 04: ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಆರಂಭಿಕ ಸುತ್ತಿನಿಂದಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಮುನ್ನಡೆ ಸಾಧಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರಲ್ಲಿ ಹರ್ಷೋದ್ಗಾರ ಮೂಡಿದೆ. ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಸಂಭ್ರಮಾಚರಣೆ ನಡೆಸಿದ್ದು, ಕಾಂಗ್ರೆಸ್ ಬಾವುಟಗಳನ್ನು ಹಿಡಿದು, ಜೈಕಾರಗಳನ್ನು ಕೂಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆಟೋ ಸೀಟ್​​ ವಿಚಾರಕ್ಕೆ ಮಾರಾಮಾರಿ: ಕುಸಿದು ಬಿದ್ದಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು – Kannada News | Padarayanapura: Auto Seat Fight Turns Fatal, Man Dies from Assault Injuries

ಬೆಂಗಳೂರು, ಮೇ 04: ಆಟೋ ಸೀಟ್​​ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ತೀವ್ರ ಹಲ್ಲೆಗೊಳಗಾಗಿದ್ದ ಚಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬೆಂಗಳೂರಿನ (Bengaluru) ಪಾದರಾಯನಪುರದಲ್ಲಿ ನಡೆದಿದೆ. ಮೃತನನ್ನು ಪರಿಚಿತನಿಂದ ಹಲ್ಲೆಗೊಳಗಾಗಿದ್ದ ಮುಬಾರಕ್​​ (26) ಎಂದು ಗುರುತಿಸಲಾಗಿದೆ. ಆರೋಪಿಯನ್ನು ತಬ್ರೇಜ್ (46) ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಮೇ 1ರಂದು ಮುಬಾರಕ್ ತನ್ನ ಆಟೋ ಸೀಟ್ ತೆಗೆದುಕೊಂಡಿದ್ದಾನೆ ಎಂದು ತಬ್ರೇಜ್ ಮೇಲೆ ಆರೋಪಿಸಿದ್ದ. ಇದೇ ವಿಚಾರವಾಗಿ ಬೆಳಗ್ಗೆ 10ಗಂಟೆ ಸುಮಾರಿಗೆ ಇಬ್ಬರ ನಡುವೆ ಜಗಳ ನಡೆದಿದ್ದು, ಪರಸ್ಪರ ಹಲ್ಲೆ ಮಾಡಿಕೊಂಡಿದ್ದರು. ಗಲಾಟೆ ಜೋರಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ್ದ ಸ್ಥಳೀಯರು, ಇಬ್ಬರನ್ನೂ ಬೇರ್ಪಡಿಸಿದ್ದರು. ಹೀಗಿದ್ದರೂ ಮತ್ತೆ ಮಧ್ಯಾಹ್ನ ಸುಮಾರು 12.30ರ ಹೊತ್ತಿಗೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದ್ದು, ಈ ವೇಳೆ ತಬ್ರೇಜ್ ಮರದ ತುಂಡಿನಿಂದ ಮುಬಾರಕ್ ಮೇಲೆ ದಾಳಿ ನಡೆಸಿದ್ದ. ಭೀಕರ ದಾಳಿ ವೇಳೆ ತಲೆ ಭಾಗಕ್ಕೆ ಗಂಭೀರ ಗಾಯಗೊಂಡ ಪರಿಣಾಮ ಮುಬಾರಕ್ ಕುಸಿದು ಬಿದ್ದಿದ್ದ. ತಕ್ಷಣವೇ ಈತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮುಬಾರಕ್​​ ಕೋಮಾಗೆ ತಲುಪಿದ್ದು, ಚಿಕಿತ್ಸೆ ಫಲಿಸದೆ ಅಂತಿಮವಾಗಿ ಪ್ರಾಣಬಿಟ್ಟಿದ್ದಾನೆ.

ಇದನ್ನೂ ಓದಿ: ಮೆಜೆಸ್ಟಿಕ್​ನಲ್ಲಿ ತನ್ನ 2 ವರ್ಷದ ಮಗುವನ್ನೇ ಮಾರಿದಳಾ ತಾಯಿ? ತಂದೆಯಿಂದಲೇ ಗಂಭೀರ ಆರೋಪ

ಹಲ್ಲೆಗೊಳಗಾಗಿ ಮೃತಪಟ್ಟಿರುವ ಮುಬಾರಕ್​​ಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದು, ಪತ್ನಿಯೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದ ಎನ್ನಲಾಗಿದೆ. ಇನ್ನಯ ಘಟನೆ ಸಂಬಂಧ ಜಗಜೀವನರಾಮನಗರ ಪೊಲೀಸರು ಮೊದಲು ಕೊಲೆ ಯತ್ನ ಪ್ರಕರಣ ದಾಖಲಿಸಿ ತಬ್ರೇಜ್‌ನ್ನು ಬಂಧಿಸಿದ್ದರು. ಇದೀಗ ಮುಬಾರಕ್ ಸಾವಿನ ಹಿನ್ನೆಲೆ ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆ ಮುಂದುವರಿಸಿದ್ದಾರೆ. ಕ್ಷುಲ್ಕ ವಿಚಾರಕ್ಕೆ ಶುರುವಾದ ಜಗಳ ಓರ್ವನ ಸಾವಿನಲ್ಲಿ ಅಂತ್ಯವಾಗಿರೋದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರೋವ್‌ಮನ್ ಪೊವೆಲ್ ಹಿಡಿದ ‘ಅಸಾಧ್ಯ’ ಕ್ಯಾಚ್‌ಗೆ ಕ್ರಿಕೆಟ್ ಲೋಕ ಫಿದಾ! – Kannada News | Ipl 2026: rovman powell catch

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಎಂದಿಗೂ ಅದ್ಭುತಗಳಿಗೆ ಹೆಸರುವಾಸಿ. ಆದರೆ 2026ರ ಮೇ 3ರಂದು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ನಡುವೆ ನಡೆದ ಪಂದ್ಯದಲ್ಲಿ ರೋವ್‌ಮನ್ ಪೊವೆಲ್ ಹಿಡಿದ ಕ್ಯಾಚ್ ಐಪಿಎಲ್ ಇತಿಹಾಸದ ಶ್ರೇಷ್ಠ ಕ್ಯಾಚ್‌ಗಳಲ್ಲಿ ಒಂದಾಗಿ ದಾಖಲಾಗಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡವು ಸ್ಫೋಟಕ ಬ್ಯಾಟಿಂಗ್ ನಡೆಸುತ್ತಾ ಬೃಹತ್ ಮೊತ್ತದತ್ತ ಸಾಗುತ್ತಿತ್ತು. ಕ್ರೀಸ್‌ನಲ್ಲಿ ಅಪಾಯಕಾರಿ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಅಬ್ಬರಿಸುತ್ತಿದ್ದರು. ಕ್ಯಾಮರೋನ್ ಗ್ರೀನ್ ಎಸೆದ 11ನೇ ಓವರ್‌ನಲ್ಲಿ ಕ್ಲಾಸೆನ್ ಬಲವಾಗಿ ಪುಲ್ ಶಾಟ್ ಬಾರಿಸಿದರು. ಚೆಂಡು ಗಾಳಿಯಲ್ಲಿ ಅತಿ ವೇಗವಾಗಿ ಬೌಂಡರಿ ಗೆರೆಯತ್ತ ನುಗ್ಗುತ್ತಿತ್ತು.

ಆದರೆ ಡೀಪ್ ಮಿಡ್-ವಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರೋವ್‌ಮನ್ ಪೊವೆಲ್, ಸುಮಾರು 15 ಮೀಟರ್‌ಗಳಷ್ಟು ವೇಗವಾಗಿ ಓಡಿ ಬಂದು, ಗಾಳಿಯಲ್ಲಿ ಹಾರುತ್ತಾ ಕೇವಲ ಒಂದು ಕೈಯಿಂದ ಚೆಂಡನ್ನು ಹಿಡಿದರು. ನೆಲಕ್ಕೆ ಬಿದ್ದ ರಭಸಕ್ಕೆ ಅವರು ಧರಿಸಿದ್ದ ಸನ್ ಗ್ಲಾಸ್ (ಕನ್ನಡಕ) ಕೂಡ ತುಂಡಾಯಿತು! ಆದರೂ ಚೆಂಡನ್ನು ಬಿಡದೆ ಹಿಡಿದಿದ್ದ ಪೊವೆಲ್ ಅವರ ಸಮರ್ಪಣಾ ಮನೋಭಾವಕ್ಕೆ ಇಡೀ ಕ್ರೀಡಾಂಗಣ ಎದ್ದು ನಿಂತು ಚಪ್ಪಾಳೆ ತಟ್ಟಿತು.

ಹೆನ್ರಿಕ್ ಕ್ಲಾಸೆನ್  (11 ರನ್) ಔಟ್ ಆಗುತ್ತಿದ್ದಂತೆ ಸನ್ ರೈಸರ್ಸ್ ತಂಡ ದಿಕ್ಕೆಟ್ಟಿತು. 105ಕ್ಕೆ 1 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಹೈದರಾಬಾದ್, ಅಂತಿಮವಾಗಿ 165 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ ತಂಡವು 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮುಖ್ಯ ಕಾರಣ ರೋವ್​ಮನ್ ಪೊವೆಲ್ ಎಂದರೆ ತಪ್ಪಾಗಲಾರದು. ಏಕೆಂದರೆ ಪೊವೆಲ್ ಅವರ ಈ ಒಂದು ಕ್ಯಾಚ್ ಪಂದ್ಯದ ಸಂಪೂರ್ಣ ಚಿತ್ರಣವನ್ನೇ ಬದಲಿಸಿತ್ತು. ಹೀಗಾಗಿಯೇ ಇದೀಗ ಪೊವೆಲ್ ಅವರ ಅಸಾಧರಣ ಕ್ಯಾಚ್​​ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

Source link

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರ ಸ್ಥಾಪನೆಯತ್ತ ಬಿಜೆಪಿ; ನಿಚ್ಚಳ ಬಹುಮತ ಬಹುತೇಕ ನಿಶ್ಚಿತ – Kannada News | BJP set to form govt in West Bengal for first time, TMC losing the ground

ಕೋಲ್ಕತಾ, ಮೇ 4: ಪಶ್ಚಿಮ ಬಂಗಾಳದ ಒಟ್ಟು 294 ವಿಧಾನಸಭಾ ಕ್ಷೇತ್ರಗಳ (West Bengal assembly elections) ಪೈಕಿ ಚುನಾವಣೆ ಪೂರ್ಣಗೊಂಡ 293 ಕ್ಷೇತ್ರಗಳಲ್ಲಿ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಬಂಗಾಳದಲ್ಲಿ ಮೊತ್ತಮೊದಲ ಬಾರಿಗೆ ಬಿಜೆಪಿ ಅಧಿಕಾರ ಸ್ಥಾಪಿಸುವ ಸನ್ನಾಹದಲ್ಲಿದೆ. ಕಳೆದ ಎರಡು ಚುನಾವಣೆಗಳಿಂದ ಬಂಗಾಳದಲ್ಲಿ ಸಾಕಷ್ಟು ಇದ್ದ ಕೇಸರಿ ಹವಾ ಈ ಬಾರಿ ಬಿಜೆಪಿಯನ್ನು ಗದ್ದುಗೆಗೆ ಏರಿಸುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ ಆದ 148 ಅನ್ನು ಬಿಜೆಪಿ ದಾಟುವ ಸಾಧ್ಯತೆ ದಟ್ಟವಾಗಿದೆ. ಸುಮಾರು 160ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ದೀದಿ ನೇತೃತ್ವದ ಟಿಎಂಸಿಗೆ ಹಿನ್ನಡೆ

ಕಳೆದ ಒಂದು ದಶಕದಿಂದ ಅಧಿಕಾರದಲ್ಲಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸದ್ಯ 100ರ ಆಸುಪಾಸಿನಲ್ಲಿ ಸ್ಥಾನಗಳಲ್ಲಿ ಮುನ್ನಡೆ ಪಡೆದು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಭವಾನಿಪುರ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ, ನಂತರದ ಸುತ್ತುಗಳಲ್ಲಿ ಅಲ್ಪ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಈ ಒಂದು ಕ್ಷೇತ್ರಕ್ಕೆ ಮಾತ್ರ ಫಲಿತಾಂಶ ಇಂದು ಇಲ್ಲ; ಮೇ 21ಕ್ಕೆ ಮರುಮತದಾನ, ಮೇ 24ಕ್ಕೆ ಮತ ಎಣಿಕೆ

ಬಂಗಾಳದಲ್ಲಿ ಟಿಎಂಸಿ ಅಲೆ ಎದ್ದು ದೀದಿಯನ್ನು ಮುಖ್ಯಮಂತ್ರಿ ಗದ್ದುಗೆಗೆ ಕೂರಿಸುವಂತೆ ಮಾಡಿದ ನಂದಿಗ್ರಾಮದಲ್ಲಿ ಈಗ ಬಿಜೆಪಿಯ ಸುವೇಂದು ಹವಾ ಇದೆ. ಮಾಜಿ ಟಿಎಂಸಿ ನೇತಾರರಾದ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಕ್ಷೇತ್ರದಲ್ಲಿ ತಮ್ಮ ಮುನ್ನಡೆಯನ್ನು ಮುಂದುವರಿಸಿದ್ದಾರೆ.

ಹ್ಯುಮಾಯೂನ್ ಕಬೀರ್ ಅವರ ಹೊಸ ಪಕ್ಷ ಮತ್ತು ಎಡರಂಗ-ಕಾಂಗ್ರೆಸ್ ಮೈತ್ರಿಕೂಟ ಬಹುತೇಕ ನೆಲಕಚ್ಚಿವೆ. ಕಾಂಗ್ರೆಸ್ ಮೈತ್ರಿಕೂಟ ಕೇವಲ 1 ಸ್ಥಾನದಲ್ಲಿ ಮುನ್ನಡೆ ಹೊಂದಿದೆ.

ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ವಿವರ

ಒಟ್ಟು ವಿಧಾನಸಭಾ ಕ್ಷೇತ್ರಗಳು: 294

ಮತ ಎಣಿಕೆ ಆಗುತ್ತಿರುವುದು: 293

ಬಹುಮತಕ್ಕೆ ಬೇಕಾಗಿರುವುದು: 148 ಸ್ಥಾನ

  • ಎನ್​ಡಿಎ: 166 ಕ್ಷೇತ್ರಗಳಲ್ಲಿ ಮುನ್ನಡೆ
  • ಟಿಎಂಸಿ: 101 ಕ್ಷೇತ್ರಗಳಲ್ಲಿ ಮುನ್ನಡೆ
  • ಕಾಂಗ್ರೆಸ್-ಎಡರಂಗ: 0

ಬದಲಾವಣೆಗೆ ಕಾರಣವಾದ ಅಂಶಗಳು?

ಪಶ್ಚಿಮ ಬಂಗಾಳದಲ್ಲಿ ದೀದಿ ವಿರೋಧಿ ಅಲೆ ಏಳಲು ಮೂರು ಕಾರಣಗಳಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಮೊದಲನೆಯದು ಮತದಾರರ ಪಟ್ಟಿ ಪರಿಷ್ಕರಣೆ (SIR) ವಿಚಾರ. ಎರಡನೆಯದು ಹಿಂದೂ ಮತಗಳ ಧ್ರುವೀಕರಣ. ಮೂರನೆಯದು, ಆಡಳಿತ ವಿರೋಧಿ ಅಲೆ.

ಚುನಾವಣಾ ಆಯೋಗ ನಡೆಸಿದ ವಿಶೇಷ ತೀವ್ರ ಪರಿಷ್ಕರಣೆಯಿಂದ ಸುಮಾರು 89 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಇದು ಚುನಾವಣಾ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.

ಪಂಚರಾಜ್ಯಗಳು ಚುನಾವಣಾ ಫಲಿತಾಂಶ ನೇರ ವೀಕ್ಷಣೆ

ಸುವೇಂದು ಅಧಿಕಾರಿ ಹೇಳಿರುವಂತೆ, ಈ ಬಾರಿ ಹಿಂದೂ ಮತಗಳ ಧ್ರುವೀಕರಣ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ. ಸುದೀರ್ಘ ಕಾಲದ ಟಿಎಂಸಿ ಆಡಳಿತದ ವಿರುದ್ಧದ ಅಸಮಾಧಾನ ಮತ್ತು ಭ್ರಷ್ಟಾಚಾರದ ಆರೋಪಗಳು ಬಿಜೆಪಿಗೆ ವರದಾನವಾಗಿವೆ.

ಸಂಜೆ ವೇಳೆಗೆ ಪೂರ್ಣ ಪ್ರಮಾಣದ ಫಲಿತಾಂಶ ಹೊರಬೀಳಲಿದ್ದು, ಬಿಜೆಪಿ ಅಧಿಕೃತವಾಗಿ ಬಹುಮತ ಪಡೆದರೆ ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ತಂತ್ರಗಾರಿಕೆ ಬಂಗಾಳದ ಮಣ್ಣಿನಲ್ಲಿ ಈ ಬಾರಿ ಕೆಲಸ ಮಾಡಿದಂತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತ್ರಿಷಾ ಹುಟ್ಟುಹಬ್ಬದಂದೇ ವಿಜಯ್‌ಗೆ ರಾಜಕೀಯ ಪಟ್ಟ? ತಮಿಳುನಾಡಿನಲ್ಲಿ ‘ಟಿವಿಕೆ’ ಅಬ್ಬರ – Kannada News | Trisha’s Birthday Joy: Vijay’s TVK in A way to Sweeps TN Elections 2026

ಇಂದು (ಮೇ 4) ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಅವರ ಜನ್ಮದಿನ. ಆದರೆ ಈ ವರ್ಷದ ಹುಟ್ಟುಹಬ್ಬ ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ, ಇಡೀ ತಮಿಳುನಾಡು ರಾಜಕೀಯ ಇತಿಹಾಸದಲ್ಲೇ ಅತ್ಯಂತ ವಿಶೇಷವಾದ ದಿನವಾಗಿ ಮಾರ್ಪಟ್ಟಿದೆ. ಒಂದು ಕಡೆ ತ್ರಿಷಾ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ಅವರ ಆಪ್ತ ಎನಿಸಿಕೊಂಡಿರುವ ದಳಪತಿ ವಿಜಯ್ ನೇತೃತ್ವದ ಟಿವಿಕೆ (Tamilaga Vettri Kazhagam) ಪಕ್ಷವು ಚುನಾವಣಾ ಫಲಿತಾಂಶದಲ್ಲಿ ಭರ್ಜರಿ ಮುನ್ನಡೆ ಸಾಧಿಸಿ ಅಧಿಕಾರದ ಗದ್ದುಗೆಯತ್ತ ಹೆಜ್ಜೆ ಹಾಕುತ್ತಿದೆ.

ಇಂದು 43ನೇ ವಸಂತಕ್ಕೆ ಕಾಲಿಟ್ಟಿರುವ ತ್ರಿಷಾ, ತಮ್ಮ ಜನ್ಮದಿನದ ಅಂಗವಾಗಿ ಇಂದು ಮುಂಜಾನೆಯೇ ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ ಆಶೀರ್ವಾದ ಪಡೆದಿದ್ದಾರೆ. ಈ ಭೇಟಿಯು ಕೇವಲ ವೈಯಕ್ತಿಕ ಪ್ರಾರ್ಥನೆಯಾಗಿರದೆ, ಚುನಾವಣಾ ಫಲಿತಾಂಶದ ದಿನವೇ ಆಗಿರುವುದರಿಂದ ಭಾರೀ ಕುತೂಹಲ ಮೂಡಿಸಿತ್ತು. ವಿಜಯ್ ಅವರ ರಾಜಕೀಯ ಜೀವನದ ಈ ಅತಿ ದೊಡ್ಡ ಪರೀಕ್ಷೆಯಲ್ಲಿ ಅವರು ಗೆದ್ದು ಬರಲಿ ಎಂದು ತ್ರಿಷಾ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂಬ ಮಾತುಗಳು ಅಭಿಮಾನಿ ವಲಯದಲ್ಲಿ ಕೇಳಿಬರುತ್ತಿವೆ.

2026ರ ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು, ಆರಂಭಿಕ ಪ್ರವೃತ್ತಿಗಳಲ್ಲೇ ವಿಜಯ್ ಅವರ ಟಿವಿಕೆ ಪಕ್ಷವು ಮ್ಯಾಜಿಕ್ ನಂಬರ್ ದಾಟುವ ಮುನ್ಸೂಚನೆ ನೀಡಿದೆ. ಡಿಎಂಕೆ ಮತ್ತು ಎಐಎಡಿಎಂಕೆಯಂತಹ ದಶಕಗಳ ಹಳೆಯ ದ್ರಾವಿಡ ಪಕ್ಷಗಳನ್ನು ಹಿಂದಿಕ್ಕಿ, ವಿಜಯ್ ರಾಜಕೀಯದ ಹೊಸ ‘ದಳಪತಿ’ಯಾಗಿ ಹೊರಹೊಮ್ಮುತ್ತಿದ್ದಾರೆ. “ಹೊಸ ಬದಲಾವಣೆ”ಯ ನಿರೀಕ್ಷೆಯಲ್ಲಿದ್ದ ತಮಿಳು ಜನತೆ ವಿಜಯ್ ಕೈ ಹಿಡಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇದನ್ನೂ ಓದಿ: ಮತ ಎಣಿಕೆ ದಿನ ತಿರುಪತಿಯಲ್ಲಿ ತ್ರಿಷಾ; ವಿಜಯ್​​ಗೋಸ್ಕರ ವಿಶೇಷ ಪೂಜೆ?

ವಿಜಯ್ ಮತ್ತು ತ್ರಿಷಾ ದಶಕಗಳಿಂದಲೂ ತೆರೆಯ ಮೇಲೆ ಅದ್ಭುತ ಜೋಡಿಯಾಗಿ ಮಿಂಚಿದವರು. ‘ಗಿಲ್ಲಿ’ಯಿಂದ ‘ಲಿಯೋ’ವರೆಗೆ ಇವರ ಕೆಮಿಸ್ಟ್ರಿ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಇತ್ತೀಚಿನ ದಿನಗಳಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ನೂರಾರು ವದಂತಿಗಳು ಹರಿದಾಡುತ್ತಿದ್ದರೂ, ಅವೆಲ್ಲವನ್ನೂ ಮೀರಿ ತ್ರಿಷಾ ಅವರು ವಿಜಯ್ ಅವರ ರಾಜಕೀಯ ಹಾದಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ತ್ರಿಷಾ ಅವರ ಜನ್ಮದಿನದಂದೇ ವಿಜಯ್ ಅಧಿಕಾರಕ್ಕೆ ಬರುತ್ತಿರುವುದು ಕಾಕತಾಳೀಯವಾದರೂ, ಇಬ್ಬರ ಅಭಿಮಾನಿಗಳಿಗೆ ಇದು “ಡಬಲ್ ಧಮಾಕಾ” ನೀಡಿದಂತಾಗಿದೆ.

ಒಟ್ಟಾರೆಯಾಗಿ, ತ್ರಿಷಾ ಹುಟ್ಟುಹಬ್ಬದ ಸಂಭ್ರಮದ ನಡುವೆ ವಿಜಯ್ ಸಾಧಿಸುತ್ತಿರುವ ಈ ಐತಿಹಾಸಿಕ ಜಯವು ದಕ್ಷಿಣ ಭಾರತದ ಚಿತ್ರರಂಗ ಮತ್ತು ರಾಜಕೀಯದ ಹೊಸ ಯುಗಕ್ಕೆ ನಾಂದಿ ಹಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

NEET-UG 2026: ನೀಟ್ ಯುಜಿ ಪರೀಕ್ಷೆ; ಹೇಳಿಕೆ ಆಧಾರಿತ ಉದ್ದನೆಯ ಪ್ರಶ್ನೆಗಳಿಂದ ವಿದ್ಯಾರ್ಥಿಗಳು ಹೈರಾಣು! – Kannada News | NEET UG 2026 Karnataka: Statement Questions Challenge Students; Cut Off May Rise

ಬೆಂಗಳೂರು: ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG 2026) ಭಾನುವಾರ ಮುಕ್ತಾಯಗೊಂಡಿದೆ. ಈ ಬಾರಿ ಕರ್ನಾಟಕದ ಸುಮಾರು 1.45 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಪ್ರಶ್ನೆ ಪತ್ರಿಕೆಯಲ್ಲಿದ್ದ ಸುದೀರ್ಘವಾದ ‘ಹೇಳಿಕೆ ಆಧಾರಿತ’ ಪ್ರಶ್ನೆಗಳು ಅಭ್ಯರ್ಥಿಗಳ ಬೆವರಿಸುವಂತೆ ಮಾಡಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಈ ಸ್ಪರ್ಧಾತ್ಮಕ ಪರೀಕ್ಷೆಯು ಒಟ್ಟು 720 ಅಂಕಗಳಿಗೆ ನಡೆದಿದ್ದು, ಬಹುತೇಕ ಪ್ರಶ್ನೆಗಳು ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮಕ್ಕೆ ಅನುಗುಣವಾಗಿಯೇ ಇತ್ತು. ಆದರೆ, ಪ್ರಶ್ನೆಗಳ ಸ್ವರೂಪವು ಸಮಯ ನಿರ್ವಹಣೆಗೆ ಅಡ್ಡಿಯುಂಟುಮಾಡಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಸಮಯ ಕಿತ್ತುಕೊಂಡ ‘ಸ್ಟೇಟ್‌ಮೆಂಟ್’ ಪ್ರಶ್ನೆಗಳು:

ಈ ವರ್ಷದ ಪರೀಕ್ಷೆಯಲ್ಲಿ ನೇರ ಪ್ರಶ್ನೆಗಳಿಗಿಂತ ಹೆಚ್ಚಾಗಿ ‘ಹೇಳಿಕೆ ಆಧಾರಿತ’ (Statement-based), ‘ಸರಿ-ತಪ್ಪು ಪತ್ತೆಹಚ್ಚುವಿಕೆ’ ಮತ್ತು ‘ಹೊಂದಿಸಿ ಬರೆಯಿರಿ’ ಮಾದರಿಯ ಪ್ರಶ್ನೆಗಳು ಅತಿ ಹೆಚ್ಚಾಗಿದ್ದವು. ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರತಿಯೊಂದು ಆಯ್ಕೆಯನ್ನು ಕೂಲಂಕಷವಾಗಿ ಓದಿ ಅರ್ಥೈಸಿಕೊಳ್ಳಲು ಹೆಚ್ಚಿನ ಸಮಯ ವ್ಯಯವಾಗಿದ್ದರಿಂದ, ಭೌತಶಾಸ್ತ್ರದ ಲೆಕ್ಕಾಚಾರಗಳನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳು ಪರದಾಡುವಂತಾಯಿತು.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ತಡವಾಗಿ ಬಂದವರಿಗೆ ನಿರಾಕರಣೆ:

ಬೆಂಗಳೂರಿನ ಶೇಷಾದ್ರಿ ರಸ್ತೆಯ ಆರ್‌ಸಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ವಿದ್ಯಾರ್ಥಿಗಳು ನಿಗದಿತ ಸಮಯಕ್ಕಿಂತ ಕೇವಲ 5-10 ನಿಮಿಷ ತಡವಾಗಿ ಬಂದ ಕಾರಣ ಅವರಿಗೆ ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ನಿರಾಕರಿಸಲಾಯಿತು. ಸಂಚಾರ ದಟ್ಟಣೆ ಮತ್ತು ಅಗತ್ಯ ದಾಖಲೆಗಳನ್ನು ಮರೆತು ಬಂದಿದ್ದರಿಂದ ವಿಳಂಬವಾಗಿದ್ದು, ಪರೀಕ್ಷೆ ಬರೆಯಲಾಗದೆ ವಿದ್ಯಾರ್ಥಿಗಳು ಕಣ್ಣೀರಿಡುತ್ತಾ ಮರಳಿದ ದೃಶ್ಯ ಕಂಡುಬಂದಿತು.

ಒಟ್ಟಾರೆಯಾಗಿ, ಈ ಬಾರಿಯ ಕಟ್-ಆಫ್ ಅಂಕಗಳು ಕಳೆದ ವರ್ಷಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಪರೀಕ್ಷೆ ಬರೆದ ಬಹುತೇಕರು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ತಾಂತ್ರಿಕ ದೋಷದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ತಾತ್ಕಾಲಿಕ ಬಂದ್, ಪ್ರಯಾಣಿಕರಿಗೆ ಸಂಕಷ್ಟ – Kannada News | Bengaluru Metro Alert: Cubbon Park Metro Station Temporarily Closed Due to Power Disruption; Trains Won’t Stop

ನಮ್ಮ ಮೆಟ್ರೋ ರೈಲು (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಮೇ 4: ನಮ್ಮ ಮೆಟ್ರೋ (Namma Metro) ನೇರಳೆ ಮಾರ್ಗದಲ್ಲಿರುವ ಪ್ರಮುಖ ನಿಲ್ದಾಣಗಳಲ್ಲಿ ಒಂದಾದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು (Cubbon Park Metro Station) ಸೋಮವಾರ ಬೆಳಿಗ್ಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ (BMRCL) ತಿಳಿಸಿದೆ. ವಿದ್ಯುತ್ ವ್ಯತ್ಯಯದಿಂದಾಗಿ ಮೆಟ್ರೋ ನಿಲ್ದಾಣದ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಪ್ರಯಾಣಿಕರಿಗೆ ಸೂಚನೆ

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ, ರೈಲುಗಳು ಸದ್ಯಕ್ಕೆ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಹೀಗಾಗಿ, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಅದಕ್ಕೆ ತಕ್ಕಂತೆ ಯೋಜಿಸಿಕೊಳ್ಳಬೇಕು ಎಂದು ಬಿಎಂಆರ್‌ಸಿಎಲ್ ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯ ಮೂಲಕ ಮಾಹಿತಿ ನೀಡಿದೆ. ವಿದ್ಯುತ್ ಪೂರೈಕೆ ಸಹಜ ಸ್ಥಿತಿಗೆ ಬಂದ ತಕ್ಷಣ ನಿಲ್ದಾಣದ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ತಿಳಿಸಲಾಗಿದೆ.

ಬಿಎಂಆರ್​ಸಿಎಲ್ ಎಕ್ಸ್ ಸಂದೇಶ

ವಾರದ ಮೊದಲ ದಿನವೇ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ರೈಲು ನಿಲುಗಡೆ ಸ್ಥಗಿತಗೊಂಡಿರುವುದು ಕಚೇರಿಗೆ ತೆರಳುವ ಉದ್ಯೋಗಿಗಳು ಮತ್ತು ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿನ ಅನಾನುಕೂಲತೆಯನ್ನುಂಟು ಮಾಡಿದೆ. ಈ ಅನಿವಾರ್ಯ ತೊಂದರೆಗೆ ಬಿಎಂಆರ್‌ಸಿಎಲ್ ವಿಷಾದ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ: ಕಣ್ಣೀರು ತರಿಸುತ್ತೆ ಈ  ಮೌನ ಹೋರಾಟಗಾರನ ಕಥೆ!

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:28 am, Mon, 4 May 26

Source link

ಅಂಚೆ ಮತಗಳ ಮರು ಎಣಿಕೆಯಲ್ಲಿ ಗೆದ್ದ ಜೀವರಾಜ್​​ ಈಗ ಶೃಂಗೇರಿಗೆ ಹೊಸ ಶಾಸಕ: MLA ಪ್ರಮಾಣಪತ್ರ ಪಡೆದ ಬಿಜೆಪಿಗ – Kannada News | D.N. Jeevaraj Emerges Winner in Sringeri After Recount; Official Certificate Issued

MLA ಪ್ರಮಾಣಪತ್ರ ಪಡೆದ ಜೀವರಾಜ್​​Image Credit source: Tv9 Kannada

ಚಿಕ್ಕಮಗಳೂರು, ಮೇ 04: ಭಾರಿ ಕುತೂಹಲ ಮೂಡಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಡಿ.ಎನ್. ಜೀವರಾಜ್ ಚುನಾವಣಾ ಅಧಿಕಾರಿಗಳಿಂದ ಅಂತಿಮವಾಗಿ ಪ್ರಮಾಣಪತ್ರ ಸ್ವೀಕರಿಸಿದ್ದಾರೆ. ಆ ಮೂಲಕ ಮರುಎಣಿಕೆಯಲ್ಲಿಯೂ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್​​ನ ಟಿ.ಡಿ. ರಾಜೇಗೌಡಗೆ ಸೋಲಾಗಿದೆ. ಅಂಚೆ ಮತಗಳ ಮರು ಎಣಿಕೆ ವೇಳೆ 52 ಮತಗಳಿಂದ ಜೀವರಾಜ್​ ಗೆಲುವು ಸಾಧಿಸಿದ್ದು,  ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಒಂದೀಗ ಬಿಜೆಪಿ ತೆಕ್ಕೆಗೆ ಬಂದಂತಾಗಿದೆ.

ಪಟ್ಟು ಹಿಡಿದು ಪ್ರಮಾಣಪತ್ರ ಪಡೆದ ಜೀವರಾಜ್

ಇನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಅಂಚೆ ಮತಗಳ ಎಣಿಕೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ನಿನ್ನೆ ಚುನಾವಣಾ ಆಯೋಗದಿಂದ ಮೇಲ್ ಮೂಲಕ ಮಾಹಿತಿ ನೀಡಲಾಗಿತ್ತು. ಮಾಹಿತಿ ಬಂದ ಬೆನ್ನಲ್ಲೇ ನಗರದ ಬೇಲೂರು ರಸ್ತೆಯಲ್ಲಿರುವ ಚುನಾವಣಾಧಿಕಾರಿ ನಿವಾಸಕ್ಕೆ ಡಿ.ಎನ್. ಜೀವರಾಜ್ ಬಂದಿದ್ದು, ಶಾಸಕ ಸ್ಥಾನದ ಪ್ರಮಾಣಪತ್ರ ನೀಡುವಂತೆ ಕೇಳಿದ್ದಾರೆ. ಈ ವೇಳೆ ಕಚೇರಿಯಲ್ಲಿ ನೀಡೋದಾಗಿ ಚುನಾವಣಾಧಿಕಾರಿ ಹೇಳಿದರೂ, ಇಲ್ಲ ನಾನು ಬಂದಿದ್ದೇನೆ ಪ್ರಮಾಣ ಪತ್ರ ನೀಡಿ ಎಂದು ಹೇಳಿ ಕೊನೆಗೂ ಅದನ್ನು ಪಡೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಶೃಂಗೇರಿ ಅಂಚೆ ಮತ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸ್ಪಷ್ಟ; ಸಚಿವ ಪ್ರಲ್ಹಾದ ಜೋಶಿ

2023ರ ವಿಧಾನಸಭಾ ಚುನಾವಣೆ ಶೃಂಗೇರಿ ಕ್ಷೇತ್ರದ ಫಲಿತಾಂಶ ಭಾರಿ ಕುತೂಹಲ ಮೂಡಿಸಿತ್ತು. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಕಾಂಗ್ರೆಸ್​​ನ ಟಿ.ಡಿ. ರಾಜೇಗೌಡ ಅವರ ವಿರುದ್ಧ ಕೇವಲ 201 ಮತಗಳ ಅಂತರದಲ್ಲಿ ಸೋತಿದ್ದರು. ಚಲಾವಣೆಯಾಗಿದ್ದ ಒಟ್ಟು 1,822 ಅಂಚೆ ಮತಗಳ ಪೈಕಿ 279 ಮತಗಳು ತಿರಸ್ಕೃತಗೊಂಡಿದ್ದವು. ಹೀಗಾಗಿ ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಜೀವರಾಜ್, ಮರು ಎಣಿಕೆಗೆ ಮನವಿ ಮಾಡಿದ್ದರು. ಆದರೆ ಅಂದಿನ ಜಿಲ್ಲಾ ಚುನಾವಣಾಧಿಕಾರಿಗಳು ಮನವಿಯನ್ನು ಪರಿಗಣಿಸದೆ ರಾಜೇಗೌಡರನ್ನು ವಿಜೇತರೆಂದು ಘೋಷಿಸಿದ್ದರು. ಇದನ್ನು ಪ್ರಶ್ನಿಸಿ ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಅಂಚೆ ಮತಗಳ ಮರು ಎಣಿಕೆಗೆ ಆದೇಶ ಹೊರಡಿಸಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:08 am, Mon, 4 May 26

Source link

Exit mobile version