‘ನಾನಿನ್ನೂ ಆ ಕ್ಷಣವನ್ನೇ ಜೀವಿಸುತ್ತಿದ್ದೇನೆ’; ಫೆಮಿನಾ ಮಿಸ್ ಇಂಡಿಯಾ ಸಾಧ್ವಿ ಸೈಲ್

ಕಾರವಾರ ಶಾಸಕ ಸತೀಶ್ ಸೈಲ್ ಮಗಳು ಸಾಧ್ವಿ ಅವರು 2026ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಗೆದ್ದಿದ್ದಾರೆ. ಅವರು ಟಿವಿ9 ಪಾಡ್​​ಕಾಸ್ಟ್​​ ಅಲ್ಲಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ‘ನಾನು ಇನ್ನೂ ಆ ಕ್ಷಣವನ್ನೇ ಜೀವಿಸುತ್ತೇನೆ’ ಎಂದು ಹೇಳಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರು ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದರು. ಅಲ್ಲಿತೂ ಅವರಿಗೆ ಭಾರೀ ಸ್ವಾಗತ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026 Orange Cap: ಆರೆಂಜ್ ಕ್ಯಾಪ್ ರೇಸ್‌ನಲ್ಲಿ ದೊಡ್ಡ ಬದಲಾವಣೆ: ಕೊಹ್ಲಿಗೆ ಶಾಕ್ ನೀಡಿದ ಸಾಯಿ ಸುದರ್ಶನ್ – Kannada News | Big change in IPL 2026 Orange Cap race Sai Sudarshan gives Virat Kohli a shock

ಬೆಂಗಳೂರು (ಮೇ. 04): ಐಪಿಎಲ್ 2026 ಸೀಸನ್ ರೋಚಕ ಘಟ್ಟದತ್ತ ತಲುಪುತ್ತಿದೆ. ಮೈದಾನದಲ್ಲಿ ತಂಡಗಳ ನಡುವಿನ ಹೋರಾಟ ಒಂದು ವಿಷಯವಾದರೆ, ಆಟಗಾರರಲ್ಲಿ ವೈಯಕ್ತಿಕ ದಾಖಲೆಗಳ ಹುಡುಕಾಟ ಇನ್ನೊಂದು ವಿಷಯ. ವಿಶೇಷವಾಗಿ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್‌ಗಾಗಿ ಓಟವು ಪ್ರತಿ ಪಂದ್ಯದಿಂದ ಪಂದ್ಯಕ್ಕೆ ಬದಲಾಗುತ್ತಿದೆ. ಇತ್ತೀಚೆಗೆ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ನಂತರ, ಈ ರೇಸ್‌ನಲ್ಲಿ ಭಾರಿ ಬದಲಾವಣೆಗಳಾಗಿವೆ. ಯುವ ಆಟಗಾರ ಸಾಯಿ ಸುದರ್ಶನ್ (Sai Sudharshan) ಮಿಂಚಿನ ಅರ್ಧಶತಕದೊಂದಿಗೆ ಮುನ್ನಡೆ ಸಾಧಿಸಿದ್ದು, ಇದು ಕಿಂಗ್ ಕೊಹ್ಲಿಗೆ ತಲೆನೋವು ಮೂಡಿಸಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಪ್ರಸಕ್ತ ಐಪಿಎಲ್ ಋತುವಿನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭದಲ್ಲಿ ಔಟಾಗಿದ್ದರೂ, ಅವರು ತಮ್ಮ ಹಿಂದಿನ ರನ್‌ಗಳೊಂದಿಗೆ ಕೆಎಲ್ ರಾಹುಲ್ ಅವರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಅಭಿಷೇಕ್ ಪ್ರಸ್ತುತ 440 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ, ಕೆಎಲ್ ರಾಹುಲ್ 433 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಬ್ಬರ ನಡುವೆ ಕೇವಲ 7 ರನ್‌ಗಳಿರುವುದರಿಂದ, ಮುಂಬರುವ ಪಂದ್ಯಗಳಲ್ಲಿ ಇವರಿಬ್ಬರ ನಡುವಣ ಫೈಟ್ ಹೆಚ್ಚು ಆಸಕ್ತಿದಾಯಕವಾಗಿದೆ.

ಗುಜರಾತ್ ಟೈಟಾನ್ಸ್ ತಂಡದ ಯುವ ಆಟಗಾರ ಸಾಯಿ ಸುದರ್ಶನ್ ಪಂಜಾಬ್ ಕಿಂಗ್ಸ್ ವಿರುದ್ಧ 57 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಅರ್ಧಶತಕದೊಂದಿಗೆ, ಅವರು ಈ ಋತುವಿನಲ್ಲಿ ತಮ್ಮ ರನ್‌ಗಳ ಸಂಖ್ಯೆಯನ್ನು 385 (10 ಪಂದ್ಯಗಳಲ್ಲಿ) ಕ್ಕೆ ಏರಿಸಿದರು ಮತ್ತು ಅಗ್ರ -5 ರಲ್ಲಿ ಸ್ಥಾನ ಪಡೆದರು. ಪರಿಣಾಮವಾಗಿ, ಅಲ್ಲಿಯವರೆಗೆ 5 ನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (379 ರನ್) 6 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಎಸ್‌ಆರ್‌ಎಚ್‌ಕೆ ತಂಡದ ಹೆನ್ರಿಕ್ ಕ್ಲಾಸೆನ್ (425 ರನ್) ಮೂರನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್‌ನ ವೈಭವ್ ಸೂರ್ಯವಂಶಿ (404) ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.

MI vs LSG, IPL 2026: ರೋಚಕತೆ ಸೃಷ್ಟಿಸಿದ ಇಂದಿನ ಮುಂಬೈ-ಲಕ್ನೋ ಐಪಿಎಲ್ ಪಂದ್ಯ: ಸೋತ ತಂಡ ಟೂರ್ನಿಯಿಂದ ಔಟ್

ಆರ್‌ಸಿಬಿಯ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ವಿಕೆಟ್ ಟೇಕಿಂಗ್ ವಿಭಾಗದಲ್ಲಿ ಪರ್ಪಲ್ ಕ್ಯಾಪ್ ಅನ್ನು ಉಳಿಸಿಕೊಂಡಿದ್ದಾರೆ. ಈ ಋತುವಿನಲ್ಲಿ ಇದುವರೆಗೆ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಭುವನೇಶ್ವರ್ ಅಗ್ರ ಸ್ಥಾನದಲ್ಲಿದ್ದಾರೆ (17). ಅದೇ ಸಂಖ್ಯೆಯ ವಿಕೆಟ್‌ಗಳನ್ನು ಪಡೆದಿದ್ದರೂ, ಸಿಎಸ್‌ಕೆ ಬೌಲರ್ ಅನ್ಶುಲ್ ಕಾಂಬೋಜ್ ಅವರ ಎಕಾನಮಿ ರೇಟ್‌ನಿಂದಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ವಿರುದ್ಧ 2 ವಿಕೆಟ್‌ಗಳನ್ನು ಪಡೆದ ಕಗಿಸೊ ರಬಾಡ (16 ವಿಕೆಟ್‌ಗಳು) ಮೂರನೇ ಸ್ಥಾನಕ್ಕೆ ಏರಿದ್ದಾರೆ, ಜೋಫ್ರಾ ಆರ್ಚರ್ (15) ಮತ್ತು ಇಶಾನ್ ಮಾಲಿಂಗ (15) ಟಾಪ್ -5 ರಲ್ಲಿ ಉಳಿದ ಸ್ಥಾನಗಳನ್ನು ಪಡೆದಿದ್ದಾರೆ.

ಈ ಋತುವಿನಲ್ಲಿ, ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಹಿರಿಯ ಆಟಗಾರರಿಗಿಂತ ಯುವ ಆಟಗಾರರು ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹ. ಮೊಹಮ್ಮದ್ ಸಿರಾಜ್ ಮತ್ತು ರಶೀದ್ ಖಾನ್ ಅವರಂತಹ ಸ್ಟಾರ್ ಬೌಲರ್‌ಗಳು 11 ವಿಕೆಟ್‌ಗಳೊಂದಿಗೆ 8 ಮತ್ತು 9 ನೇ ಸ್ಥಾನಗಳಿಗೆ ಕುಸಿದಿದ್ದಾರೆ. ಪಂದ್ಯಾವಳಿ ಪ್ಲೇಆಫ್ ಹಂತವನ್ನು ಸಮೀಪಿಸುತ್ತಿದ್ದಂತೆ ಈ ಕ್ಯಾಪ್‌ಗಳಿಗಾಗಿ ಸ್ಪರ್ಧೆ ತೀವ್ರಗೊಳ್ಳಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MI vs LSG, IPL 2026: ರೋಚಕತೆ ಸೃಷ್ಟಿಸಿದ ಇಂದಿನ ಮುಂಬೈ-ಲಕ್ನೋ ಐಪಿಎಲ್ ಪಂದ್ಯ: ಸೋತ ತಂಡ ಟೂರ್ನಿಯಿಂದ ಔಟ್ – Kannada News | MI vs LSG, IPL 2026 Today’s thrilling Match between Mumbai vs Lucknow The losing team is out of the tournament

ಬೆಂಗಳೂರು (ಮೇ. 04): ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 47 ನೇ ಪಂದ್ಯ ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಲಿದೆ. ಎರಡೂ ತಂಡಗಳು ಪ್ಲೇಆಫ್ ತಲುಪುವ ತಮ್ಮ ಮರೆಯಾಗುತ್ತಿರುವ ಆಸೆಯನ್ನು ಪುನರುಜ್ಜೀವನಗೊಳಿಸಲು ಹೋರಾಡಲಿದೆ. ಈ ಪಂದ್ಯವು ಋತುವಿನಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ತಂಡಗಳ ನಡುವೆ ನಡೆಯುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ 2026 ರಲ್ಲಿ 8 ಪಂದ್ಯಗಳಲ್ಲಿ 6 ರಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಅವರು ಸತತ ಐದು ಸೋಲುಗಳಿಂದ ತತ್ತರಿಸುತ್ತಿದ್ದಾರೆ. ಅತ್ತ ಮುಂಬೈ ಸ್ಥಿತಿ ಕೂಡ ತೀರಾ ಕಳಪೆಯಲ್ಲಿದೆ.

ರಿಷಭ್ ಪಂತ್ ನೇತೃತ್ವದ ಎಲ್​ಎಸ್​ಜಿ ತಂಡವು ಬ್ಯಾಟಿಂಗ್ ವೈಫಲ್ಯಗಳಿಂದಾಗಿ ಸಂಕಷ್ಟದಲ್ಲಿದೆ, ಆದರೆ ಅವರ ಬೌಲರ್‌ಗಳು ತಂಡದ ಗೆಲುವಿಗೆ ಹೋರಾಡುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ, ಮೊಹ್ಸಿನ್ ಖಾನ್ ಅವರ ಅದ್ಭುತ ಬೌಲಿಂಗ್ ವ್ಯರ್ಥವಾಯಿತು, ಆದರೆ ನಿಕೋಲಸ್ ಪೂರನ್ ಒಳಗೊಂಡ ವಿವಾದಾತ್ಮಕ ಸೂಪರ್ ಓವರ್ ನಿರ್ಧಾರವು ತಂಡಕ್ಕೆ ಭಾರಿ ನಷ್ಟವನ್ನುಂಟು ಮಾಡಿತು.

ಮುಂಬೈ 7 ಪಂದ್ಯಗಳಲ್ಲಿ ಸೋತಿದೆ

ಮುಂಬೈ ಇಂಡಿಯನ್ಸ್ ತಂಡ ಆಡಿದ ಒಂಬತ್ತು ಪಂದ್ಯಗಳಲ್ಲಿ ಏಳರಲ್ಲಿ ಸೋತು ಒಂಬತ್ತನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಇತ್ತೀಚಿನ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಹೀನಾಯ ಸೋಲು ಸೇರಿದಂತೆ ಸತತ ಮೂರು ಸೋಲುಗಳ ನಂತರ ಮುಂಬೈಯ ಇಂದಿನ ಪಂದ್ಯ ಕುತೂಹಲ ಮೂಡಿಸಿದೆ. ಇಂದಿನ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬಿದ್ದಂತೆ ಲೆಕ್ಕ.

ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಅವರಂತಹ ಪ್ರಮುಖ ಸ್ಟಾರ್ ಆಟಗಾರರ ಅಸಮಂಜಸ ಪ್ರದರ್ಶನದಿಂದ ಮುಂಬೈ ತಂಡದ ಗೆಲುವಿಗೆ ಅಡ್ಡಿಯಾಗಿದೆ. ಹಾರ್ದಿಕ್ ಅವರ ನಾಯಕತ್ವವೂ ಈಗ ತೂಗುಯ್ಯಾಲೆಯಲ್ಲಿದೆ. ಹ್ಯಾಮ್ ಸ್ಟ್ರಿಂಗ್ ಗಾಯದಿಂದಾಗಿ ರೋಹಿತ್ ಶರ್ಮಾ ಅನುಪಸ್ಥಿತಿಯು ತಂಡವನ್ನು ದುರ್ಬಲಗೊಳಿಸಿದೆ.

KKR: ಕೆಕೆಆರ್​ನಿಂದ ಹೀಗೊಂದು ಕಮ್​ಬ್ಯಾಕ್: ಪ್ಲೇಆಫ್ ರೇಸ್‌ಗೆ ಮತ್ತೆ ಪ್ರವೇಶ?

ಲಕ್ನೋ ಉತ್ತಮ ದಾಖಲೆ

ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಉಭಯ ತಂಡಗಳ ನಡುವೆ ಒಟ್ಟು 8 ಪಂದ್ಯಗಳು ನಡೆದಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಎರಡು ಪಂದ್ಯಗಳು ಸೇರಿದಂತೆ ಎಲ್‌ಎಸ್‌ಜಿ ಈ ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದಿದೆ.

ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ರಾಬಿನ್ ಮಿಂಜ್, ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ಶ್ರೀಜಿತ್ ಕೃಷ್ಣನ್ (ವಿಕೆಟ್ ಕೀಪರ್), ಬೆವೊನ್ ಜೇಕಬ್ಸ್, ತಿಲಕ್ ವರ್ಮಾ, ನಮನ್ ಧೀರ್, ವಿಲ್ ಜಾಕ್ಸ್, ಕೇಶವ್ ಮಹಾರಾಜ್, ರಾಜ್ ಅಂಗದ್ ಬಾವಾ, ವಿಘ್ನೇಶ್ ಪುತ್ತೂರ್, ಕಾರ್ಬಿನ್ ಬಾಷ್, ಟ್ರೆಂಟ್ ಬೌಲ್ಟ್, ಕರ್ಣ್ ಶರ್ಮಾ, ದೀಪಕ್ ಚಾಹರ್, ಅಶ್ವಿನಿ ಕುಮಾರ್, ರೀಸ್ ಟೋಪ್ಲಿ, ವಿಎಸ್ ಪೆನ್ಮೆಟ್ಸಾ, ಅರ್ಜುನ್ ತೆಂಡೂಲ್ಕರ್, ಮುಜೀಬ್ ಉರ್ ರೆಹಮಾನ್, ಜಸ್ಪ್ರಿತ್ ಬುಮ್ರಾ.

ಲಕ್ನೋ ಸೂಪರ್ ಜೈಂಟ್ಸ್ ತಂಡ: ರಿಷಭ್ ಪಂತ್ (ನಾಯಕ/ವಿಕೆಟ್ ಕೀಪರ್), ಏಡೆನ್ ಮರ್ಕ್ರಾಮ್, ಹಿಮ್ಮತ್ ಸಿಂಗ್, ಮ್ಯಾಥ್ಯೂ ಬ್ರೀಟ್ಜ್ಕೆ, ಮುಕುಲ್ ಚೌಧರಿ, ಅಕ್ಷತ್ ರಘುವಂಶಿ, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಅರ್ಶಿನ್, ಹನಿ ಕುಲ್ದುಕರ್, ಅರ್ಶಿನ್ ಕುಲ್ದುಕರ್ ಮೊಹಮ್ಮದ್ ಶಮಿ, ಅವೇಶ್ ಖಾನ್, ಎಂ. ಸಿದ್ಧಾರ್ಥ್, ದಿಗ್ವೇಶ್ ಸಿಂಗ್, ಆಕಾಶ್ ಸಿಂಗ್, ಪ್ರಿನ್ಸ್ ಯಾದವ್, ಅರ್ಜುನ್ ತೆಂಡೂಲ್ಕರ್, ಅನ್ರಿಚ್ ನೋರ್ಟ್ಜೆ, ನಮನ್ ತಿವಾರಿ, ಮಯಾಂಕ್ ಯಾದವ್ ಮತ್ತು ಮೊಹ್ಸಿನ್ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:41 am, Mon, 4 May 26

Source link

ಒಂದೇ ಒಂದು ರನ್​ನಿಂದ ಸಾರ್ವಕಾಲಿಕ ದಾಖಲೆ ತಪ್ಪಿಸಿಕೊಂಡ ಬಾಬರ್ ಆಝಂ – Kannada News | Babar Azam one run short of breaking PSL record

ಇದಾಗ್ಯೂ ಈ ಬಾರಿ ಬಾರಿಸಿದ 588 ರನ್​ಗಳೊಂದಿಗೆ ಬಾಬರ್ ಆಝಂ ಟಿ20 ಕ್ರಿಕೆಟ್​ನಲ್ಲಿ 12 ಸಾವಿರ ರನ್​ಗಳನ್ನು ಪೂರೈಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಇನಿಂಗ್ಸ್​ಗಳ ಮೂಲಕ 12000 ರನ್​ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಗೇಲ್ 343 ಇನಿಂಗ್ಸ್​ಗಳ ಮೂಲಕ 12 ಸಾವಿರ ರನ್​ ಪೂರೈಸಿದ್ದರೆ, ಬಾಬರ್ ಆಝಂ 338 ಇನಿಂಗ್ಸ್​ಗಳ ಮೂಲಕ ಈ ಸಾಧನೆ ಮಾಡಿದ್ದಾರೆ.

Source link

Money Attraction Vastu: ಮನೆಯಲ್ಲಿ ಹಣ ಶಾಶ್ವತವಾಗಿ ನೆಲೆಸಲು ಈ ಸರಳ ತಂತ್ರ ಪ್ರಯತ್ನಿಸಿ; ತಿಂಗಳಲ್ಲೇ ಫಲಿತಾಂಶ ಪಡೆಯುವಿರಿ – Kannada News | Achieving Permanent Financial Stability: A Traditional Method for Your Home

ಪ್ರತಿಯೊಂದು ಕುಟುಂಬಕ್ಕೂ ಆರ್ಥಿಕ ಸ್ಥಿರತೆ ಅತ್ಯಗತ್ಯ. ಮನೆಯನ್ನು ಕಟ್ಟಲು, ಮದುವೆ ಮಾಡಲು, ಮಕ್ಕಳ ಶಿಕ್ಷಣ ಶುಲ್ಕ ಪಾವತಿಸಲು, ಕುಟುಂಬ ನಿರ್ವಹಣೆಗೆ, ಮಾಸಿಕ ಇಎಂಐಗಳನ್ನು ತುಂಬಲು ಹಣದ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ, ಮನೆಯಲ್ಲಿ ಹಣದ ಕೊರತೆ ಆಗದಂತೆ ನೋಡಿಕೊಳ್ಳಲು ಒಂದು ಸರಳ ಮತ್ತು ಪರಿಣಾಮಕಾರಿ ವಿಧಾನದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಸಂಪತ್ತು ಆಕರ್ಷಿಸುವ ಈ ವಿಧಾನವು ಹಣವನ್ನು ಭದ್ರವಾಗಿಡುವ ಕಬ್ಬಿಣದ ಪೆಟ್ಟಿಗೆಗಳು, ಬೀರುಗಳು ಅಥವಾ ಆಧುನಿಕ ಲಾಕರ್‌ಗಳಿಗಿಂತಲೂ ಹೆಚ್ಚು ಶಕ್ತಿಶಾಲಿಯೆಂದು ನಂಬಲಾಗಿದೆ.

ಮಣ್ಣಿನ ಹುಂಡಿಯ ಮಹತ್ವ ಮತ್ತು ಆಚರಣೆ:

ಮನೆಯಲ್ಲಿ ಶಾಶ್ವತವಾಗಿ ಹಣ ನಿಲ್ಲಲು ಇರುವ ತಂತ್ರ ಬೇರೆ ಯಾವುದೂ ಅಲ್ಲ, ಮಣ್ಣಿನಿಂದ ಮಾಡಿದ ಒಂದು ಹುಂಡಿ (ಕುಡಿಕೆ). ಈ ಹುಂಡಿಯನ್ನು ಮನೆಯ ನೈರುತ್ಯ ಭಾಗದಲ್ಲಿ (South-West direction) ಇಡಬೇಕು. ಇದನ್ನು ಸ್ಥಾಪಿಸುವ ಮೊದಲು, ಹುಂಡಿಗೆ ಅರಿಶಿನ ಮತ್ತು ಕುಂಕುಮವನ್ನು ಹಚ್ಚಿ ಪೂಜಿಸಬೇಕು. ನಂತರ ಅದರ ಮೇಲೆ ಮಂಗಳಕರವಾದ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು. ಬಳಿಕ, ಒಂದು ತಾಮ್ರದ ನಾಣ್ಯವನ್ನು (copper coin) ಹುಂಡಿಯೊಳಗೆ ಹಾಕಿ, ಅದರ ಜೊತೆಗೆ ಇನ್ನು ಕೆಲವು ನಾಣ್ಯಗಳನ್ನು ಸೇರಿಸಬಹುದು.

ಈ ಹುಂಡಿಯನ್ನು ನೈರುತ್ಯ ದಿಕ್ಕಿನಲ್ಲಿ ಸ್ಥಾಪಿಸಿದ ನಂತರ, ಅದು ಬಾಡಿಗೆ ಮನೆಯಾಗಿರಲಿ ಅಥವಾ ಸ್ವಂತ ಮನೆಯಾಗಿರಲಿ, ನಿಯಮಿತವಾಗಿ ಅದನ್ನು ನಿರ್ವಹಿಸಬೇಕು. ವಾರಕ್ಕೊಮ್ಮೆಯಾದರೂ, ಕನಿಷ್ಠ ಪಕ್ಷ ಶುಕ್ರವಾರದಂದು, ಒಂದು ನಾಣ್ಯ ಅಥವಾ ನೋಟನ್ನು ಭಕ್ತಿಯಿಂದ ಹುಂಡಿಗೆ ಹಾಕಬೇಕು. ಹಣವನ್ನು ಹಾಕುವಾಗ ನಿಮ್ಮ ಕುಲದೇವರನ್ನು ನೆನಪಿಸಿಕೊಂಡು ಹುಂಡಿಯನ್ನು ಮುಟ್ಟುವುದರಿಂದ ಹಣದ ಕೊರತೆ ಬರುವುದಿಲ್ಲ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ವಾರ್ಷಿಕ ಆಚರಣೆ ಮತ್ತು ಹಣದ ಸದ್ಬಳಕೆ:

ವರ್ಷಕ್ಕೊಮ್ಮೆ ಈ ಮಣ್ಣಿನ ಹುಂಡಿಯನ್ನು ತೆರೆಯಬೇಕು ಅಥವಾ ಒಡೆಯಬೇಕು. ಅದರಲ್ಲಿ ಸಂಗ್ರಹವಾದ ಹಣವನ್ನು ನಿಮ್ಮ ಮನೆಯಲ್ಲಿರುವ ಮಕ್ಕಳಿಗೆ, ಅವರನ್ನು ದೇವತಾ ಸ್ವರೂಪರು ಎಂದು ಭಾವಿಸಿ, ಅವರ ಶಿಕ್ಷಣ ಶುಲ್ಕಕ್ಕಾಗಿ, ಬಟ್ಟೆಗಾಗಿ ಅಥವಾ ಅವರ ಅಗತ್ಯಗಳಿಗೆ ಬಳಸಬೇಕು. ಇದಲ್ಲದೆ, ಈ ಹಣವನ್ನು ದೇವತಾ ಕಾರ್ಯಗಳಿಗೆ, ಕ್ಷೇತ್ರಗಳಿಗೆ ಅಥವಾ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವಾಗ ಬಳಸಬಹುದು. ಇದು ನಿಮ್ಮ ಪುಣ್ಯವನ್ನು ಹೆಚ್ಚಿಸುತ್ತದೆ.

ಒಂದು ಹುಂಡಿಯನ್ನು ಒಡೆದ ತಕ್ಷಣವೇ ಮತ್ತೊಂದು ಹೊಸ ಮಣ್ಣಿನ ಹುಂಡಿಯನ್ನು ಅದೇ ನೈರುತ್ಯ ದಿಕ್ಕಿನಲ್ಲಿ ಸ್ಥಾಪಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಹರಿವು ನಿರಂತರವಾಗಿರುತ್ತದೆ ಮತ್ತು ಹಣದ ಕೊರತೆ ಎಂದಿಗೂ ಕಾಡುವುದಿಲ್ಲ ಎಂದು ನಂಬಲಾಗಿದೆ. ಈ ವಿಧಾನವು ಯಾವುದೇ ದೊಡ್ಡ ಖರ್ಚು ಅಥವಾ ಸಂಕೀರ್ಣ ವಸ್ತುಗಳನ್ನು ಒಳಗೊಂಡಿಲ್ಲ. ಕೇವಲ ಮಣ್ಣಿನಿಂದ ಮಾಡಿದ ಒಂದು ಹುಂಡಿ ಮತ್ತು ನಿಮ್ಮ ಭಕ್ತಿ ಸಾಕು. ಭೂಮಿಯಲ್ಲಿರುವ ನಿಧಿಗಳು ಅದೃಷ್ಟವಂತರಿಗೆ ಮಾತ್ರ ಸಿಗುವಂತೆ, ಈ ಸರಳ ತಂತ್ರವನ್ನು ನಂಬಿಕೆಯಿಟ್ಟು ಪಾಲಿಸುವವರಿಗೆ ಸಂಪತ್ತು ವೃದ್ಧಿಯಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವಾರಣಾಸಿ’ ಶೂಟಿಂಗ್​​ಗೆ 150 ಟ್ಯಾಂಕರ್ ನೀರು ಕೇಳಿದ ರಾಜಮೌಳಿ; ಶಾಕ್ ಕೊಟ್ಟ ಅಧಿಕಾರಿಗಳು

ಎಸ್​​ಎಸ್​ ರಾಜಮೌಳಿ ಅವರು (Rajamouli) ‘ವಾರಣಾಸಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ವಿದೇಶದಲ್ಲಿ ಶೂಟಿಂಗ್ ಮಾಡಲಾಗಿದೆ. ಈಗ ಯುದ್ಧದ ಭೀತಿ ಹಿನ್ನೆಲೆಯಲ್ಲಿ ಹೈದರಾಬಾದ್​​ನ ರಾಮೋಜಿ ಫಿಲ್ಮ್​ ಸಿಟಿಗೆ ತಂಡ ಶಿಫ್ಟ್ ಆಗಿದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಸಿನಿಮಾ ಶೂಟ್​​ಗೆ ನೀರಿನ ಕೊರತೆ ಉಂಟಾಗಿದೆ. ಇದರಿಂದ ಸಿನಿಮಾ ಶೂಟ್ ಮುಂದಕ್ಕೆ ಹೋಗುವ ಭೀತಿ ಎದುರಾಗಿದೆ.

ರಾಜಮೌಳಿ ಅವರ ‘ವಾರಣಾಸಿ’ ಸಿನಿಮಾ ಸಾಕಷ್ಟು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ 7ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಹಲವು ಹಂತಗಳಲ್ಲಿ ಶೂಟಿಂಗ್ ನಡೆಯಬೇಕಿದೆ. ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಸಿನಿಮಾದ ಶೂಟ್ ನಡೆಯುತ್ತಿದೆ. ಆದರೆ, ಇದನ್ನು ತಾತ್ಕಾಲಿಕವಾಗಿ ನಿಲ್ಲಿಸೋ ಪರಿಸ್ಥಿತಿ ಬಂದಿದೆ.

ಸಮುದ್ರದ ಸೆಟ್ ಹಾಕಿ ಸಿನಿಮಾ ಶೂಟ್ ಮಾಡಲು ರಾಜಮೌಳಿ ನಿರ್ಧರಿಸಿದ್ದರು. ಇದಕ್ಕಾಗಿ 150 ನೀರಿನ ಟ್ಯಾಂಕರ್​ಗಳು ಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ, ಈ ಬೇಡಿಕೆಯನ್ನು ಹೈದರಾಬಾದ್ ಮಹಾನಗರ ಪಾಲಿಕೆಯ ಜಲ ಮಂಡಳಿ ಇದನ್ನು ನಿರಾಕರಿಸಿದೆ. ಬೇಸಿಗೆ ಸಮಯ ಆಗಿರುವುದರಿಂದ ಜನರಿಗೆ ಕುಡಿಯಲು ಹಾಗೂ ದಿನ ನಿತ್ಯ ಬಳಕೆಗೆ ನೀರು ಶಾರ್ಟೇಜ್ ಆಗುತ್ತಿದೆ. ಹೀಗಿರುವಾಗ ಸಿನಿಮಾ ಶೂಟ್​​ಗೆ ಇಷ್ಟು ನೀರು ಪೋಲು ಮಾಡಲು ಅವರು ರೆಡಿ ಇಲ್ಲ. ಈ ಕಾರಣದಿಂದ ಮನವಿ ತಿರಸ್ಕಾರಗೊಂಡಿದೆ.

ಇದನ್ನೂ ಓದಿ: ‘ಧುರಂಧರ್ 2’ ಹಣ ಮಾಡಿದ್ದು ನೋಡಿ ಬದಲಾದ ರಾಜಮೌಳಿ; ಎರಡು ಭಾಗದಲ್ಲಿ ‘ವಾರಣಾಸಿ’

ಒಂದು ಹಂತದ ಶೂಟ್ ವಿಳಂಬ ಆಯಿತು ಎಂದರೆ, ಮುಂದಿನ ಹಂತದ ಶೂಟ್​ ಕೂಡ ತಡವಾಗುತ್ತವೆ. ಇದು ಮಹೇಶ್ ಬಾಬೂ ಹಾಗೂ ರಾಜಮೌಳಿ ಅಭಿಮಾನಿಗಳಿಗೆ ಆತಂಕ ತಂದಿದೆ. ಹೀಗೆ ಸಾಗಿದರೆ ಸಿನಿಮಾ ರಿಲೀಸ್ ವಿಳಂಬ ಆಗಬಹುದು ಎಂದು ಆತಂಕ ಹೊರಹಾಕಲಾಗುತ್ತಿದೆ. ರಾಜಮೌಳಿ ಹಲವು ವರ್ಷಗಳಿಂದ ಸಿನಿಮಾ ಮಾಡಿಕೊಂಡು ಬರುತ್ತಿದ್ದಾರೆ. ಅವರಿಗೆ ಈ ರೀತಿಯ ಸಣ್ಣಪುಟ್ಟ ಅಡೆತಡೆ ಬಗ್ಗೆ ಅರಿವಿರುತ್ತದೆ. ಹೀಗಾಗಿ, ಸ್ವಲ್ಪ ಹೆಚ್ಚಿನ ಸಮಯವನ್ನು ಅವರು ಮೀಸಲಿಟ್ಟುಕೊಂಡಿರುತ್ತಾರೆ. ಹೀಗಾಗಿ, ಅಂದುಕೊಂಡ ಸಮಯಕ್ಕೆ ‘ವಾರಣಾಸಿ’ ರಿಲೀಸ್ ಆಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೆಜೆಸ್ಟಿಕ್​ನಲ್ಲಿ ತನ್ನ 2 ವರ್ಷದ ಮಗುವನ್ನೇ ಮಾರಿದಳಾ ತಾಯಿ! ತಂದೆಯಿಂದಲೇ ಗಂಭೀರ ಆರೋಪ – Kannada News | Bengaluru Shocker: Man Accuses Wife of Selling 2 Year Old Son for Rs. 5 Lakh After Dispute

ಬೆಂಗಳೂರು, ಮೇ 04: ಗಂಡ ಹೆಂಡತಿಯ ಜಗಳದ ನಡುವೆ ಕೂಸು ಬಡವಾಯ್ತು ಎನ್ನುವ ಹಾಗೆ ಪತಿ ಪತ್ನಿ ಕಲಹದಲ್ಲಿ ತಾಯಿಯೇ ಮಗು ಮಾರಾಟ (Child Sale) ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಪತಿಯೊಂದಿಗೆ ಜಗಳ ಆಡಿ ಮೂರು ಮಕ್ಕಳೊಂದಿಗೆ ಮನೆ ಬಿಟ್ಟ ಪತ್ನಿ,ಇಬ್ಬರು ಮಕ್ಕಳನ್ನ ಮೆಜೆಸ್ಟಿಕ್​ನಲ್ಲಿ ಬಿಟ್ಟು ಇನ್ನೊಂದು ಮಗುವನ್ನು ಮಾರಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ.

ಮೂವರು ಮಕ್ಕಳ ಜೊತೆ ಮನೆ ಬಿಟ್ಟ ಪತ್ನಿ

ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸ ಮಾಡ್ತಿದ್ದ ರವಿ ಬಾಬು ದಂಪತಿ ಮದುವೆಯಾಗಿ 16 ವರ್ಷಗಳಾಗಿತ್ತು. ಆಗಾಗ ಗಂಡ ಹೆಂಡತಿ ನಡುವೆ ನಡೆಯುತ್ತಿದ್ದ ಜಗಳದ ಕಾರಣಕ್ಕೆ ಗಂಡನ ಮೇಲಿನ ಕೋಪದಿಂದ ಹೆಂಡತಿ ಮೂರು ಮಕ್ಕಳೊಂದಿಗೆ ಮನೆ ಬಿಟ್ಟು ಪರಾರಿಯಾಗಿದ್ದಳು.

ಮಕ್ಕಳೊಂದಿಗೆ ಮನೆ ಬಿಟ್ಟ ಪತ್ನಿ ಇಬ್ಬರು ಮಕ್ಕಳನ್ನು ಮೆಜೆಸ್ಟಿಕ್​ನಲ್ಲಿ ಬಿಟ್ಟು ಇನ್ನೊಂದು ಮಗುವನ್ನು ಕರೆದೊಯ್ದಿದ್ದಳು ಎನ್ನಲಾಗಿದೆ. ಮೆಜೆಸ್ಟಿಕ್​ನಲ್ಲಿ ಬಿಟ್ಟಿದ್ದ ಇಬ್ಬರು ಮಕ್ಕಳು ಹೇಗೋ ಮನೆ ಹುಡುಕಿಕೊಂಡು ತಂದೆ ಬಳಿಗೆ ವಾಪಾಸ್ ಬಂದಿದ್ದಾರೆ. ಆದರೆ ಪತ್ನಿ ಕರೆದೊಯ್ದಿದ್ದ ಎರಡೂವರೆ ವರ್ಷದ ಗಂಡು ಮಗುವನ್ನು ಆಕೆಯೇ 5 ಲಕ್ಷ ರೂ.ಗೆ ಮಾರಾಟ ಮಾಡಿದ್ದಾಳೆಂದು ಪತಿ ರವಿ ಬಾಬು ಆರೋಪಿಸಿದ್ದಾರೆ. ತನ್ನ ಪತ್ನಿ ಜಗಳದ ನಂತರ ಬೇರೊಬ್ಬ ಮಹಿಳೆಯ ಮಾತು ಕೇಳಿ ಈ ರೀತಿ ಮಾಡಿದ್ದಾಳೆ ಎಂದು ರವಿ ಆರೋಪಿಸಿದ್ದಾರೆ.

ಮಗು ಮಾರಾಟಕ್ಕೆ ಕುಟುಂಬದವರ ಸಾಥ್!

ಮಗುವನ್ನ ಮಾರಾಟ ಮಾಡುವ ಬಗ್ಗೆ ಪತ್ನಿ ಎಲ್ಲರಿಗೂ ಹೇಳಿಕೊಂಡಿದ್ದಾಳೆ ಎಂದು ಆರೋಪಿಸಿರುವ ರವಿ ಬಾಬು, ಪತ್ನಿಯ ಪೋಷಕರು ಕೂಡ ಮಗು ಮಾರಾಟಕ್ಕೆ ಸಾಥ್ ನೀಡಿದ್ದಾರೆ ಎಂದು ಹೇಳಿದ್ದಾರೆ. ತನ್ನಿಬ್ಬರು ಮಕ್ಕಳು ಮನೆಗೆ ವಾಪಸಾಗುವ ಮುನ್ನ ಅವರ ಅಜ್ಜಿ ಹಾಗೂ ಮಗು ಮಾರಾಟಕ್ಕೆ ಸಹಾಯ ಮಾಡಿದ ಮಹಿಳೆ ಬಳಿ ನಮ್ಮ ಅಮ್ಮನನ್ನು ಕಳುಹಿಸಿಕೊಡಿ ಎಂದು ಮಕ್ಕಳು ಕೇಳಿಕೊಂಟಿದ್ದರು. ಆದರೂ ಅವರಿಬ್ಬರನ್ನು ಗದರಿಸಿ ಕಳುಹಿಸಿದ್ದಾರೆ ಎಂದು ರವಿ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ ಗಂಡನ ಎರಡನೇ ಮದುವೆ ತಡೆಯಲು ಮಂಟಪಕ್ಕೆ ಗರ್ಭಿಣಿ ಪತ್ನಿ ಎಂಟ್ರಿ! ಮುಂದೇನಾಯ್ತು ಗೊತ್ತಾ?

ಪೊಲೀಸರ ನಿರ್ಲಕ್ಷ್ಯ

ಅದಲ್ಲದೆ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಪತಿ, ಮಗುವಿನ ಮಾರಾಟವಾಗಿದೆ ಎಂದು ಹೇಳಿದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆಂಬುದು ಆತನ ಆರೋಪ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಬ್ಬಲ್​​ ಡೆಕ್ಕರ್​​ ಫ್ಲೈಓವರ್​ ಮೇಲೆ ಪ್ರತಿನಿತ್ಯ ಅಪಘಾತ: ಅವೈಜ್ಞಾನಿಕ ಕಾಮಗಾರಿಯ ಆರೋಪ – Kannada News | Bengaluru Double Decker Flyover: Daily Accidents Blamed on Unscientific Construction

ಬೆಂಗಳೂರು, ಮೇ 04: ನಗರದಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಆಗುವ ಸ್ಥಳಗಳಲ್ಲೊಂದಾದ ಸಿಲ್ಕ್ ಬೋರ್ಡ್​​ನ ಟ್ರಾಫಿಕ್​​ಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ, ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್​​ವರೆಗೆ ಡಬ್ಬಲ್​​ ಡೆಕ್ಕರ್​​ ಫ್ಲೈಓವರ್​​ ನಿರ್ಮಾಣದ ಬಗ್ಗೆ ಘೋಷಣೆ ಮಾಡಿತ್ತು. ಇದರ ಕಾಮಗಾರಿ ಮುಗಿದು ಸಂಪುರ್ಣವಾಗಿ ವಾಹನಗಳ ಸಂಚಾರಕ್ಕೂ ಮುಕ್ತವಾಗಿದೆ. ಹೀಗಾಗಿ ಸುಗಮ ಸಂಚಾರದ ನಿರೀಕ್ಷೆಯಲ್ಲಿದ್ದ ಬೆಂಗಳೂರಿನ ವಾಹನಸವಾರರು ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ಲೈ ಓವರ್​​ ಮೇಲೆ ವಾಹನಗಳು ಸ್ಕಿಡ್​​ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಫ್ಲೈ ಓವರ್ ‌ಮೇಲೆ ಪಾದಚಾರಿಗಳು ಹೋಗಲು ಸಣ್ಣದಾಗಿ ಕಟ್ಟೆ ಕಟ್ಟಿದ್ದು, ಇದರಿಂದ ವಾಹನಗಳು ಸಂಚಾರ ಮಾಡುವ ವೇಳೆ ಗೊತ್ತಾಗದೆ ಇದರ ಮೇಲೆ ಹತ್ತಿ ಸ್ಕಿಡ್​ ಆಗುತ್ತಿದೆಯಂತೆ. ಹೀಗಾಗಿ ವಾಹನ ಸವಾರರು ಡಬಲ್ ಡೆಕ್ಕರ್ ಸಹವಾಸವೇ ಬೇಡಪ್ಪಾ ಬೇಡ ಅಂತಿದ್ದಾರೆ. ಫುಟ್​​ ಪಾತ್​​ ಇರುವ ಬಗ್ಗೆ ಒಂದು ಸೂಚನಾ ಫಲಕವನ್ನಾದರೂ ಹಾಕಬೇಕು, ಅಥವಾ ರೇಡಿಯಂ ಸ್ಟೀಕರ್, ವೈಟ್ ಪೈಂಟ್ ಬಳಿದು ಫುಟ್​​ ಪಾತ್​​ ಇರುವ ಬಗ್ಗೆ ವಾಹನ ಸವಾರರಿಗೆ ಅರಿವು ಮೂಡಿಸಬೇಕು. ಆದರೆ ಅದ್ಯಾವುದೂ ಇಲ್ಲಿ ಇರದ ಕಾರಣ ಪ್ರತಿದಿನ ಒಂದಲ್ಲ ಒಂದು ಅಪಘಾತಗಳು ಇಲ್ಲಿ ಆಗುತ್ತಲೇ ಇವೆ ಎಂಬ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ: ಬೆಂಗಳೂರಿನ ಆರ್‌ವಿ ರಸ್ತೆ-ಸಿಲ್ಕ್ ಬೋರ್ಡ್ ನಡುವಿನ ಡಬಲ್‌ ಡೆಕ್ಕರ್‌ ಫ್ಲೈಓವರ್‌ ಹೇಗಿದೆ ನೋಡಿ

ಇನ್ನು ಟ್ರಾಫಿಕ್ ಕಡಿಮೆ ಆಗುತ್ತೆ ಎಂದು ಡಬಲ್ ಡೆಕ್ಕರ್ ನಿರ್ಮಾಣ ಮಾಡಿದ್ದಾರೆ. ಆದರೆ ರಾಗಿಗುಡ್ಡ ಬಳಿ ಆಗುತ್ತಿರುವ ಟ್ರಾಫಿಕ್ ನಿಂದ ವಾಹನ ಸವಾರರು ಬೇಸತ್ತಿದ್ದಾರೆ. ಬೆಳಗ್ಗೆ ಹಾಗೂ ಸಂಜೆ ಡಬಲ್ ಡೆಕ್ಕರ್ ಕಡೆ ಬರಲೇಬೇಡಿ ಎಂಬ‌ ರೀತಿ ಆಗಿದೆ. ಫ್ಲೈ ಓವರ್ ಮೇಲೆಯೇ ಟ್ರಾಫಿಕ್ ಆಗುತ್ತಿದೆ ಎಂದು ವಾಹನ ಸವಾರರು ಅಲವತ್ತುಕೊಂಡಿದ್ದಾರೆ. 449 ಕೋಟಿ ರೂಪಾಯಿ ವೆಚ್ಚದಲ್ಲಿ 3.36 ಕಿಮೀ ವಿಸ್ತೀರ್ಣವಿರುವ ಈ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಿಸಲಾಗಿದೆ. ಲೂಪ್ ಮತ್ತು ಇಳಿಜಾರು ಸೇರಿ 5.12 ಕಿಮೀ ವಿಸ್ತೀರ್ಣವನ್ನು ಇದು ಹೊಂದಿದೆ. ಕಳೆದ ವರ್ಷ ರಾಗಿಗುಡ್ಡದಿಂದ ಕೆ.ಆರ್. ಪುರ ಮತ್ತು ಹೊಸೂರು ಭಾಗದ ಕಡೆಗಿನ ಫ್ಲೈಓವರ್​​ ಮಾರ್ಗ ವಾಹನ ಸಂಚಾರಕ್ಕೆ ಮುಕ್ತವಾಗಿದ್ದರೆ, ವಾರದ ಹಿಂದೆ ಸಿಲ್ಕ್​​ಬೋರ್ಡ್ ಮತ್ತು ಕೆ.ಆರ್. ಪುರ ಭಾಗದಿಂದ ರಾಗಿಗುಡ್ಡ ಕಡೆ ಬರುವ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ತಿಳಿಯಿರಿ – Kannada News | Weekly Horoscope May 3 9, 2026: Your Astrological Predictions and Fortunes

2026ರ ಮೇ ೦೩ರಿಂದ ೦೯ರವರೆಗೆ ಮೊದಲ ವಾರದಲ್ಲಿ ಮನಸ್ತಾಪ, ಪ್ರೀತಿಪಾತ್ರರ ಜೊತೆ ಮಾತುಕತೆ, ಪ್ರಯತ್ನಕ್ಕೆ ಫಲ, ಸಂವಹನದಿಂದ ಲಾಭ, ಪ್ರವಾಸಕ್ಕೆ ಒತ್ತಾಯ, ಹಿರಿಯರಲ್ಲಿ ಗೌರವ, ಕಾರ್ಯಕ್ಕಾಗಿ ಓಡಾಟ ಇವೆಲ್ಲ ಇರಲಿದೆ.

ಮೇಷ:

ವೃತ್ತಿಜೀವನದಲ್ಲಿ ಸಣ್ಣಪುಟ್ಟ ಅಡೆತಡೆಗಳಿದ್ದರೂ ಆರ್ಥಿಕ ಲಾಭ ಕಂಡುಬರಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಹೊಸ ಹೂಡಿಕೆಗೆ ಈ ವಾರ ಪೂರಕವಾಗಿದೆ.

​ವೃಷಭ:

ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಂಗಾತಿಯೊಂದಿಗೆ ಸಣ್ಣ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಸಂಯಮದಿಂದ ವರ್ತಿಸಿ. ಹಳೆಯ ಸಾಲಗಳಿಂದ ಮುಕ್ತಿ ಸಿಗಬಹುದು.

​ಮಿಥುನ:

​ನಿಮ್ಮ ಕ್ರಿಯಾಶೀಲತೆಗೆ ಹೊಸ ವೇದಿಕೆ ಸಿಗಲಿದೆ. ದೂರದ ಪ್ರಯಾಣದ ಯೋಗವಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಬಹುದು. ವ್ಯಾಪಾರದಲ್ಲಿ ಲಾಭಾಂಶ ಹೆಚ್ಚಾಗಲಿದ್ದು, ಮಿತ್ರರ ಸಹಕಾರ ದೊರೆಯಲಿದೆ.

​ಕರ್ಕಾಟಕ:

​ಆತ್ಮವಿಶ್ವಾಸದಿಂದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಸ್ಥಿರಾಸ್ತಿ ಖರೀದಿಯ ಆಲೋಚನೆ ಫಲಪ್ರದವಾಗಲಿದೆ. ಮಕ್ಕಳ ಶಿಕ್ಷಣದ ಬಗ್ಗೆ ಶುಭ ಸುದ್ದಿ ಕೇಳುವಿರಿ. ಕೋಪದ ಮೇಲೆ ನಿಯಂತ್ರಣವಿರಲಿ, ಮಾನಸಿಕ ನೆಮ್ಮದಿ ಮುಖ್ಯ.

​ಸಿಂಹ:

ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಉದ್ಯೋಗ ಬದಲಾವಣೆಗೆ ಇದು ಸಕಾಲ. ಪ್ರೀತಿಪಾತ್ರರ ಜೊತೆ ಪ್ರವಾಸ ಹೋಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ.

​ಕನ್ಯಾ:

ಆರ್ಥಿಕವಾಗಿ ಏರಿಳಿತಗಳಿದ್ದರೂ ಖರ್ಚಿನ ಮೇಲೆ ಹಿಡಿತ ಸಾಧಿಸುವಿರಿ. ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿ ಬರಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಲಭಿಸುವ ವಾರವಿದು.

​ತುಲಾ:

​ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಸಂಗಾತಿಯ ಬೆಂಬಲದಿಂದ ದೊಡ್ಡ ಕಾರ್ಯವೊಂದನ್ನು ಸಾಧಿಸುವಿರಿ. ಹಣಕಾಸಿನ ವಹಿವಾಟಿನಲ್ಲಿ ಎಚ್ಚರಿಕೆ ಇರಲಿ. ನಿಮ್ಮ ತಾಳ್ಮೆ ಈ ವಾರ ನಿಮಗೆ ಗೆಲುವು ತಂದುಕೊಡಲಿದೆ.

​ವೃಶ್ಚಿಕ:

​ಶತ್ರುಗಳ ಪಿತೂರಿ ಫಲಿಸದು, ವಿಜಯ ನಿಮ್ಮದಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಅನಿರೀಕ್ಷಿತ ಧನಾಗಮನವಾಗುವ ಸಂಭವವಿದೆ. ದೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳುವಿರಿ.

​ಧನು:

ಗುರುಬಲದ ಪ್ರಭಾವದಿಂದ ಶುಭ ಕಾರ್ಯಗಳು ನೆರವೇರಲಿವೆ. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ. ಹೂಡಿಕೆಯಲ್ಲಿ ಲಾಭ ಕಂಡುಬರುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಹೊಸ ಅವಕಾಶಗಳು ದೊರೆಯಲಿವೆ. ವಿನಮ್ರತೆ ಕಾಪಾಡಿಕೊಳ್ಳಿ.

​ಮಕರ:

ಕೆಲಸದಲ್ಲಿ ಅತಿಯಾದ ಆತುರ ಬೇಡ. ಸಣ್ಣಪುಟ್ಟ ಹೂಡಿಕೆಗಳು ಭವಿಷ್ಯದಲ್ಲಿ ಲಾಭ ನೀಡುತ್ತವೆ. ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗದಂತೆ ನೋಡಿಕೊಳ್ಳಿ. ಪ್ರವಾಸದಿಂದ ಮನಸ್ಸಿಗೆ ಉಲ್ಲಾಸ ದೊರೆಯಲಿದೆ.

​ಕುಂಭ:

​ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ. ನ್ಯಾಯಾಲಯದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಪ್ರೀತಿಯ ವಿಷಯದಲ್ಲಿ ಗೊಂದಲವಿರಬಹುದು, ಸ್ಪಷ್ಟ ಸಂವಹನ ನಡೆಸಿ. ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಇರುತ್ತದೆ.

​ಮೀನ:

ಆಧ್ಯಾತ್ಮಿಕ ಚಿಂತನೆ ಹೆಚ್ಚಾಗಲಿದೆ. ದಾನಧರ್ಮಗಳಲ್ಲಿ ಪಾಲ್ಗೊಳ್ಳುವಿರಿ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಮಾತಿಗೆ ಮನ್ನಣೆ ಸಿಗಲಿದೆ. ಮನೆಯಲ್ಲಿ ಮಂಗಳ ಕಾರ್ಯದ ಮಾತುಕತೆ ನಡೆಯಬಹುದು. ಹೊಸ ಮಿತ್ರರ ಪರಿಚಯವಾಗಲಿದೆ.

– ಲೋಹಿತ ಹೆಬ್ಬಾರ್

Source link

KKR: ಕೆಕೆಆರ್​ನಿಂದ ಹೀಗೊಂದು ಕಮ್​ಬ್ಯಾಕ್: ಪ್ಲೇಆಫ್ ರೇಸ್‌ಗೆ ಮತ್ತೆ ಪ್ರವೇಶ? – Kannada News | KKR Greate comeback from Kolkata Knight Riders: Back in the playoff race?

ಬೆಂಗಳೂರು (ಮೇ. 04): ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡವು ಐಪಿಎಲ್ 2026 ರ ಪ್ಲೇಆಫ್ ರೇಸ್‌ನಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವತ್ತ ಚಿತ್ತನೆಟ್ಟಿದೆ. ಆರಂಭದಲ್ಲಿ ಸೋಲಿನಿಂದ ಕಂಗೆಟ್ಟಿದ್ದ ರಹಾನೆ ಪಡೆ ಈಗ ಭರ್ಜರಿ ಕಮ್​ಬ್ಯಾಕ್ ಮಾಡಿದೆ. ನಿನ್ನೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಅವರ ತವರು ಮೈದಾನದಲ್ಲಿ 7 ವಿಕೆಟ್‌ಗಳಿಂದ ಸೋಲಿಸಿತು. ಟಾಸ್ ಗೆದ್ದ ನಂತರ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸನ್‌ರೈಸರ್ಸ್ ತಂಡವು ಟ್ರಾವಿಸ್ ಹೆಡ್ ಅವರ ನೆರವಿನಿಂದ ಭರ್ಜರಿ ಆರಂಭ ಪಡೆಯಿತು, ಆದರೆ ಕೆಕೆಆರ್‌ನ ಬೌಲರ್‌ಗಳು ಮಧ್ಯಮ ಓವರ್‌ಗಳಲ್ಲಿ ಬಲವಾದ ಬೌಲಿಂಗ್ ಪ್ರದರ್ಶಿಸಿದರು. ಹೈದರಾಬಾದ್ ತಂಡವು 19 ಓವರ್‌ಗಳಲ್ಲಿ ಕೇವಲ 165 ರನ್‌ಗಳಿಗೆ ಆಲೌಟ್ ಆಯಿತು.

ವರುಣ್ ಮತ್ತು ನರೈನ್ ಸ್ಪಿನ್‌ಗೆ ಸಿಲುಕಿದ ಸನ್‌ರೈಸರ್ಸ್

ಸನ್‌ರೈಸರ್ಸ್ ತಂಡವನ್ನು ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸಿದ ಕೀರ್ತಿ ಕೆಕೆಆರ್ ಬೌಲರ್‌ಗಳಿಗೆ ಸಲ್ಲುತ್ತದೆ, ವರುಣ್ ಚಕ್ರವರ್ತಿ ಮತ್ತೊಮ್ಮೆ ಪರಿಣಾಮಕಾರಿ ಎಂದು ಸಾಬೀತುಪಡಿಸಿದರು. ವರುಣ್ 36 ರನ್‌ಗಳಿಗೆ ಮೂರು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರೆ, ಅನುಭವಿ ಸುನಿಲ್ ನರೈನ್ ಮತ್ತು ಕಾರ್ತಿಕ್ ತ್ಯಾಗಿ ತಲಾ ಎರಡು ವಿಕೆಟ್‌ಗಳನ್ನು ಪಡೆದು ಹೈದರಾಬಾದ್‌ನ ಮಧ್ಯಮ ಕ್ರಮಾಂಕವನ್ನು ಮುರಿದರು. ಟ್ರಾವಿಸ್ ಹೆಡ್ 28 ಎಸೆತಗಳಲ್ಲಿ 61 ರನ್‌ಗಳ ಇನ್ನಿಂಗ್ಸ್ ಆಡಿದರೂ, ಅವರ ಔಟಾದ ನಂತರ ಇತರ ಬ್ಯಾಟ್ಸ್‌ಮನ್‌ಗಳಿಗೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಪಂದ್ಯದ ನಂತರ ನಾಯಕ ರಹಾನೆ ಅವರು ತಮ್ಮ ಬೌಲಿಂಗ್ ಘಟಕ ಮತ್ತು ಕೋಚ್ ಡ್ವೇನ್ ಬ್ರಾವೋ ಅವರ ತಂತ್ರಗಳನ್ನು ಶ್ಲಾಘಿಸಿದರು.

ಗೆಲುವಿನ ಹಾದಿಯನ್ನು ಸುಲಭಗೊಳಿಸಿದ ರಘುವಂಶಿ ಮತ್ತು ರಹಾನೆ

166 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಆರಂಭದಿಂದಲೇ ತಮ್ಮ ನಿಯಂತ್ರಣವನ್ನು ಕಾಯ್ದುಕೊಂಡಿತು. ಯುವ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ ಮೈದಾನದಾದ್ಯಂತ ಹೊಡೆತಗಳನ್ನು ಬಾರಿಸಿ ಅದ್ಭುತ ಅರ್ಧಶತಕ ಗಳಿಸಿದರು ಮತ್ತು ಅನುಭವಿ ಅಜಿಂಕ್ಯ ರಹಾನೆ ಅವರೊಂದಿಗೆ ಎರಡನೇ ವಿಕೆಟ್‌ಗೆ 84 ರನ್‌ಗಳ ನಿರ್ಣಾಯಕ ಜೊತೆಯಾಟ ಹಂಚಿಕೊಂಡರು. ರಹಾನೆ ಕೂಡ ತಮ್ಮ ಜವಾಬ್ದಾರಿಯನ್ನು ಅದ್ಭುತವಾಗಿ ಪೂರೈಸಿದರು, 43 ರನ್‌ಗಳ ಸಂಯೋಜಿತ ಇನ್ನಿಂಗ್ಸ್ ಆಡಿ ತಂಡವು ಒತ್ತಡಕ್ಕೊಳಗಾಗದಂತೆ ನೋಡಿಕೊಂಡರು. ಕೆಕೆಆರ್ ಕೇವಲ 18.2 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು.

GT vs PBKS: ಪಂಜಾಬ್ ವಿರುದ್ಧ ಕೊನೆಯ ಓವರ್​ನಲ್ಲಿ ಗೆದ್ದ ಗುಜರಾತ್

ಪ್ಲೇಆಫ್ ರೇಸ್‌ನಲ್ಲಿ ಕೆಕೆಆರ್ ಬಲಿಷ್ಠ ಕಮ್​ಬ್ಯಾಕ್

ಸತತ ಮೂರನೇ ಗೆಲುವಿನೊಂದಿಗೆ, ಕೆಕೆಆರ್ ಪ್ಲೇಆಫ್ ಓಟವನ್ನು ರೋಮಾಂಚಕಾರಿಯನ್ನಾಗಿ ಮಾಡಿದೆ. 9 ಪಂದ್ಯಗಳಿಂದ 7 ಅಂಕಗಳೊಂದಿಗೆ, ತಂಡವು ಅಗ್ರ 4 ಸ್ಥಾನಕ್ಕಾಗಿ ಸ್ಪರ್ಧಿಯಾಗಿ ಉಳಿದಿದೆ. ಮುಂದಿನ ಸುತ್ತಿಗೆ ಮುನ್ನಡೆಯಲು ಅವರು ತಮ್ಮ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದ್ದರೂ, ತಂಡದ ಪ್ರಸ್ತುತ ಫಾರ್ಮ್ ಮತ್ತು ಡ್ರೆಸ್ಸಿಂಗ್ ರೂಮ್ ವಾತಾವರಣವು ಪುನರಾಗಮನಕ್ಕೆ ಬಲವಾದ ಭರವಸೆಯನ್ನು ನೀಡುತ್ತದೆ ಎಂದು ರಹಾನೆ ಹೇಳಿದ್ದಾರೆ. ಮೊದಲ ಐದು ಪಂದ್ಯಗಳನ್ನು ಸೋತ ನಂತರವೂ ತಂಡದ ನೈತಿಕ ಸ್ಥೈರ್ಯವು ಹಾಗೆಯೇ ಉಳಿದಿದೆ ಮತ್ತು ನಾವು ಕೊನೆಯವರೆಗೂ ಆ ಆವೇಗವನ್ನು ಕಾಯ್ದುಕೊಳ್ಳಲು ಬಯಸುತ್ತೇವೆ ಎಂದು ನಾಯಕ ರಹಾನೆ ಸ್ಪಷ್ಟಪಡಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version