Bengaluru Vegetable Price Hike: ಬೆಂಗಳೂರಿನಲ್ಲಿ ತರಕಾರಿ ಭಾರಿ ಏರಿಕೆ! ಕಂಗಾಲಾದ ಗ್ರಾಹಕರು – Kannada News | Bengaluru Vegetable Price Hike: Beans Touches Rs 160 Per KG, Rates Double Within 15 Days Due to Rain and Heat

ಬೆಂಗಳೂರು, ಮೇ 4: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಜನರಿಗೆ ಒಂದಾದ ಮೇಲೊಂದರಂತೆ ಬೆಲೆ ಏರಿಕೆಯ ಶಾಕ್ ಎದುರಾಗುತ್ತಿದೆ. ಹೋಟೆಲ್ ತಿಂಡಿಗಳ ಬೆಲೆ ಏರಿಕೆಯ ಬೆನ್ನಲ್ಲೇ, ಈಗ ತರಕಾರಿ ದರಗಳು (Vegetable Price Hike) ಕೂಡ ಗಗನಕ್ಕೇರಿದ್ದು ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ಕಳೆದ ಕೇವಲ 15 ದಿನಗಳ ಅಂತರದಲ್ಲಿ ಬಹುತೇಕ ಎಲ್ಲಾ ತರಕಾರಿಗಳ ಬೆಲೆ ಎರಡು ಪಟ್ಟು ಹೆಚ್ಚಾಗಿದ್ದು, ಮನೆಯಲ್ಲಿ ಅಡುಗೆ ಮಾಡುವುದು ಕೂಡ ದುಬಾರಿಯಾಗಿದೆ.

ಬೀನ್ಸ್​ಗೆ ಬಂಗಾರದ ಬೆಲೆ

ಸದ್ಯ ಮಾರುಕಟ್ಟೆಯಲ್ಲಿ ಬೀನ್ಸ್ ದರ ಕೇಳಿದರೆ ಗ್ರಾಹಕರು ಬೆಚ್ಚಿಬೀಳುತ್ತಿದ್ದಾರೆ. ಎರಡು ವಾರಗಳ ಹಿಂದೆ ಕೆಜಿಗೆ 60 ರೂಪಾಯಿ ಇದ್ದ ಬೀನ್ಸ್ ಬೆಲೆ ಈಗ 160 ರೂಪಾಯಿಗೆ ತಲುಪಿದೆ. ಈ ಹಿಂದೆ ಚೀಲ ತುಂಬಾ ತರಕಾರಿ ತರುತ್ತಿದ್ದ ಜನ, ಈಗ 500 ರೂಪಾಯಿ ನೀಡಿದರೂ ಎರಡು ಬ್ಯಾಗ್ ತರಕಾರಿ ತುಂಬಿಸಲು ಪರದಾಡುವಂತಾಗಿದೆ.

ತರಕಾರಿ ಬೆಲೆ ಏರಿಕೆಗೆ ಕಾರಣಗಳೇನು?

ರಾಜ್ಯದಲ್ಲಿ ತೀವ್ರವಾಗಿ ಸುಡುತ್ತಿರುವ ಬಿಸಿಲಿನ ತಾಪಮಾನ ಮತ್ತು ಅಕಾಲಿಕವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತರಕಾರಿ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಇದರೊಂದಿಗೆ ಸಾಲು ಸಾಲು ಶುಭ ಸಮಾರಂಭಗಳು ಮತ್ತು ಫಂಕ್ಷನ್‌ಗಳು ಇರುವುದರಿಂದ ತರಕಾರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾದ ಕಾರಣ ಬೆಲೆಗಳು ಏರಿಕೆಯಾಗುತ್ತಿವೆ.

ರಾಜ್ಯದ ಪ್ರಮುಖ ತರಕಾರಿ ಬೆಳೆಯುವ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದಲ್ಲಿ ಈ ಬಾರಿ ತೀವ್ರವಾದ ಬಿಸಿಲು ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆಗಳಿಗೆ ಭಾರಿ ಹಾನಿಯಾಗಿದೆ. ಅತಿಯಾದ ಶಾಖದಿಂದಾಗಿ ಹೂವುಗಳು ಉದುರಿ ಇಳುವರಿ ಕಡಿಮೆಯಾಗಿದ್ದರೆ, ಇತ್ತೀಚೆಗೆ ಸುರಿದ ಗುಡುಗು ಸಹಿತ ಮಳೆಯಿಂದ ತರಕಾರಿ ಬೆಳೆ ನಾಶವಾಗಿದೆ. ಇದರಿಂದ ಮಾರುಕಟ್ಟೆಗೆ ಬರುವ ತರಕಾರಿಗಳ ಪ್ರಮಾಣ ಶೇ 30 ರಿಂದ 40ರಷ್ಟು ಕುಸಿದಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ.

ಕೇವಲ ಹವಾಮಾನವಷ್ಟೇ ಅಲ್ಲದೆ, ಪ್ರಸ್ತುತ ಮದುವೆ ಮತ್ತು ಸಾಲು ಸಾಲು ಹಬ್ಬಗಳ ಸೀಸನ್ ಇರುವುದರಿಂದ ತರಕಾರಿಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಿದೆ. ಇದರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಸ್ಥಿರತೆಯ ನಡುವೆಯೂ, ಹೊರ ರಾಜ್ಯಗಳಿಂದ (ಆಂಧ್ರಪ್ರದೇಶ ಮತ್ತು ತಮಿಳುನಾಡು) ಬರುವ ತರಕಾರಿಗಳ ಸಾರಿಗೆ ವೆಚ್ಚವು ದರ ಏರಿಕೆಗೆ ಮತ್ತೊಂದು ಕಾರಣವಾಗಿದೆ.

ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಬರೋಬ್ಬರಿ 993 ರೂ. ಏರಿಕೆ

ಒಂದೆಡೆ ಎಲ್ಪಿಜಿ ದರ ಭಾರಿ ಏರಿಕೆಯಾಗಿದ್ದು, ಹೋಟೆಲ್ ಉದ್ಯಮ ಈಗಾಲೇ ಸಂಕಷ್ಟಕ್ಕೆ ಸಿಲುಕಿದೆ. ಅದರೊಂದಿಗೆ ಇದೀಗ ತರಕಾರಿ ಬೆಲೆಯೂ ಗಗನ್ಕೇರಿದ್ದು ಮತ್ತಷ್ಟು ಹೊಡೆತ ನೀಡಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಈ ಬೆಲೆಗಳಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ವರದಿ: ಅರುಣ್​ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಜರಾತ್ ಟೈಟಾನ್ಸ್​ ಬೆಂಕಿ ಬೌಲಿಂಗ್: ಎಲ್ಲರ ಲೆಕ್ಕಾಚಾರ ಉಲ್ಟಾ ಪಲ್ಟಾ! – Kannada News | GT’s Bowling Masterclass: Three Matches, Three Total Shutdowns!

ಐಪಿಎಲ್ 2026ರ ಸೀಸನ್‌ನಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವು ತನ್ನ ಬೌಲಿಂಗ್ ಶಕ್ತಿಯ ಮೂಲಕ ಪಂದ್ಯಾವಳಿಯಲ್ಲಿ ಹೊಸ ಸಂಚಲನ ಮೂಡಿಸಿದೆ. ಬ್ಯಾಟಿಂಗ್‌ ಸ್ನೇಹಿ ಪಿಚ್‌ಗಳ ನಡುವೆಯೂ, ಜಿಟಿ ಬೌಲರ್‌ಗಳು ಶಿಸ್ತುಬದ್ಧ ದಾಳಿ ನಡೆಸಿ ಬಲಿಷ್ಠ ತಂಡಗಳನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಸಾಕ್ಷಿ ಕಳೆದ ಮೂರು ಪಂದ್ಯಗಳಲ್ಲಿನ ಫಲಿತಾಂಶ.

  •  ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಜಯ: ಚೆನ್ನೈನ ತವರು ನೆಲದಲ್ಲೇ ನಡೆದ ಈ ಪಂದ್ಯದಲ್ಲಿ ಸಿಎಸ್‌ಕೆ ಬ್ಯಾಟರ್‌ಗಳನ್ನು ಕಟ್ಟಿಹಾಕಿದ ಜಿಟಿ ಬೌಲರ್‌ಗಳು, ಅವರನ್ನು ಕೇವಲ 158/7 ರನ್‌ಗಳಿಗೆ ನಿಯಂತ್ರಿಸಿದರು. ಈ ಮೊತ್ತವನ್ನು ಬೆನ್ನಟ್ಟಿದ ಗುಜರಾತ್, 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.
  •  ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಜಯ: ಆರ್​ಸಿಬಿ ಸ್ಫೋಟಕ ಬ್ಯಾಟಿಂಗ್ ಪಡೆಯನ್ನು ಗುಜರಾತ್ ಟೈಟಾನ್ಸ್​ ಬೌಲರ್‌ಗಳು ಸಂಪೂರ್ಣವಾಗಿ ಕಟ್ಟಿ ಹಾಕಿದ್ದರು. ಅರ್ಶದ್ ಖಾನ್ (3/22) ಮತ್ತು ರಶೀದ್ ಖಾನ್ (2/19) ಅವರ ಮಾರಕ ದಾಳಿಗೆ ತತ್ತರಿಸಿದ ಆರ್‌ಸಿಬಿ ಕೇವಲ 155 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್​ 4 ವಿಕೆಟ್‌ಗಳ ಜಯ ಸಾಧಿಸಿತು.
  • ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಜಯ: ನಿನ್ನೆ ನಡೆದ ಪಂದ್ಯದಲ್ಲೂ ತನ್ನ ಬೌಲಿಂಗ್ ವೈಭವವನ್ನು ಮುಂದುವರಿಸಿದ ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್ ತಂಡವನ್ನು 163/9 ರನ್‌ಗಳಿಗೆ ನಿಯಂತ್ರಿಸಿತು. ಪಂಜಾಬ್ ಪಡೆಯ ಪ್ರಮುಖ ವಿಕೆಟ್‌ಗಳನ್ನು ನಿಯಮಿತವಾಗಿ ಪಡೆಯುವ ಮೂಲಕ ದೊಡ್ಡ ಮೊತ್ತ ಗಳಿಸಲು ಅವಕಾಶ ನೀಡಲಿಲ್ಲ. ಈ ಪಂದ್ಯವನ್ನು ಗುಜರಾತ್ ಟೈಟಾನ್ಸ್ 4 ವಿಕೆಟ್​ಗಳಿಂದ ಗೆದ್ದುಕೊಂಡಿತು.

ಗುಜರಾತ್ ಟೈಟಾನ್ಸ್​ ಪಡೆಯ ಶಕ್ತಿ ಏನು?

  •  ಸಿರಾಜ್, ರಬಾಡ ಮಿಂಚಿಂಗ್: ಈ ಸೀಸನ್​ನಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಕಗಿಸೊ ರಬಾಡ ಪವರ್‌ಪ್ಲೇನಲ್ಲಿ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಆರಂಭಿಕ ಯಶಸ್ಸು ತಂದುಕೊಡುತ್ತಿದ್ದಾರೆ.
  • ರಶೀದ್ ಖಾನ್ ಮ್ಯಾಜಿಕ್: ಮಧ್ಯದ ಓವರ್‌ಗಳಲ್ಲಿ ರಶೀದ್ ಖಾನ್ ರನ್ ವೇಗಕ್ಕೆ ಬ್ರೇಕ್ ಹಾಕುವುದಲ್ಲದೆ, ಎದುರಾಳಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
  • ಜೇಸನ್ ಹೋಲ್ಡರ್ ಅನುಭವ: ಡೆತ್ ಓವರ್‌ಗಳಲ್ಲಿ ಜೇಸನ್ ಹೋಲ್ಡರ್ ಅವರ ವೈವಿಧ್ಯಮಯ ಬೌಲಿಂಗ್ ಎದುರಾಳಿಗಳಿಗೆ ರನ್ ಗಳಿಸಲು ಕಷ್ಟವಾಗುವಂತೆ ಮಾಡುತ್ತಿದೆ.

ಇದನ್ನೂ ಓದಿ: 15,660 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್​ನ 3 ತಂಡಗಳು ಮಾರಾಟ..!

ಫಲಿತಾಂಶ ಮತ್ತು ಅಂಕಪಟ್ಟಿ:

ಈ ಸತತ ಮೂರು ಜಯಗಳೊಂದಿಗೆ ಗುಜರಾತ್ ಟೈಟಾನ್ಸ್ ಪ್ಲೇ-ಆಫ್ ರೇಸ್‌ನಲ್ಲಿ ಬಲಿಷ್ಠವಾಗಿ ಗುರುತಿಸಿಕೊಂಡಿದೆ. ಬೌಲರ್‌ಗಳ ಈ ಸಾಂಘಿಕ ಪ್ರದರ್ಶನವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಮುಂಬರುವ ಪಂದ್ಯಗಳಲ್ಲಿ ಎದುರಾಳಿಗಳಿಗೆ ನಡುಕ ಹುಟ್ಟಿಸಿದೆ. ಇದೇ ಸಾಂಘಿಕ ಪ್ರದರ್ಶನವನ್ನು ಮುಂದುವರೆಸಿದರೆ ಗುಜರಾತ್ ಟೈಟಾನ್ಸ್ ತಂಡವು ಪ್ಲೇಆಫ್​ಗೇರುವುದನ್ನು ಎದುರು ನೋಡಬಹುದು.

Source link

Horoscope Today: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 4, ಸೋಮವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣ ಪಕ್ಷದ ತದಿಗೆ ಮತ್ತು ಅನುರಾಧ ನಕ್ಷತ್ರದ ಈ ದಿನದ ಮಹತ್ವವನ್ನು ವಿವರಿಸಿದ್ದಾರೆ.

ರಾಹುಕಾಲವು ಬೆಳಗ್ಗೆ 7:29 ರಿಂದ 9:07 ರವರೆಗೆ ಇರುತ್ತದೆ. ಸರ್ವಸಿದ್ಧಿಕಾಲ ಹಾಗೂ ಶುಭಕಾಲವು ಬೆಳಗ್ಗೆ 9:07 ರಿಂದ 10:41 ರವರೆಗೆ ಇರುತ್ತದೆ. ಇಂದು ರವಿ ಮೇಷ ರಾಶಿಯಲ್ಲಿದ್ದು, ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ ಎಂದು ಗುರೂಜಿ ತಿಳಿಸಿದ್ದಾರೆ.

 

 

 

Source link

Assembly Election Results 2026 Live: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಲೈವ್ ವಿಡಿಯೋ – Kannada News | Assembly Election Results 2026 Live Streaming on 5 State Vidhan Sabha poll Result Online in Kannada

ಪಂಚ ರಾಜ್ಯಗಳ ಚುನಾವಣೆಗಳ ಫಲಿತಾಂಶ ಆರಂಭವಾಗಿದೆ, ಅಸ್ಸಾಂ, ಕೇರಳ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಪಟ್ಟಕ್ಕಾಗಿ ಬಿಗ್ ಫೈಟ್​​ ನಡೆಲಿದೆ. ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು, ಕ್ಷಣ ಕ್ಷಣದ ಲೈವ್ ವಿಡಿಯೋ ಇಲ್ಲಿದೆ ನೋಡಿ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಅಬ್ಬಬ್ಬಾ! ಬೆಂಗಳೂರಿನ ಏರ್ ಕ್ವಾಲಿಟಿ ಇಂದು ಎಲ್ಲದಕ್ಕಿಂತ ಉತ್ತಮ! – Kannada News | Bangalore Air Pollution Crisis: Bengaluru Air quality gets better along with all places

ಬೆಂಗಳೂರಿನ ಏರ್ ಕ್ವಾಲಿಟಿ ಇಂದು ಎಲ್ಲದಕ್ಕಿಂತ ಉತ್ತಮ!

ಬೆಂಗಳೂರು, ಮೇ 04: ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿಯ ಏರ್ ಕ್ವಾಲಿಟಿ  (Bengaluru Air Quality) ಭಾರಿ ಸುಧಾರಣೆ ಕಂಡಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿಯೇ ಇದೆ ಎಂದು ತಜ್ಞರು ಹೇಳುತ್ತಾರೆ. ಹುಬ್ಬಳ್ಳಿಯ ವಾಯು ಗುಣಮಟ್ಟ ಇಂದು ಭಾರೀ ಸುಧಾರಣೆ ಕಂಡಿದ್ದು, ಉಳಿದೆಡೆಗಿಂತ ಎಷ್ಟೋ ಉತ್ತಮವಾಗಿದೆ ಎನ್ನಲಾಗಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರಿನ ಏರ್ ಕ್ವಾಲಿಟಿ ಇಂದು ಕೇವಲ 88ರಷ್ಟಿದ್ದು, ಅತ್ಯಂತ ಒಳ್ಳೆಯ ಗುಣಮಟ್ಟದಲ್ಲಿದೆ. ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ಹಲವು ಬಾರಿ 200ರ ಗಡಿ ತಲುಪಿತ್ತು. ಆದರೆ ಇತ್ತೀಚೆಗೆ AQI ಸುಧಾರಣೆ ಕಂಡುಬಂದಿತ್ತು. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಹುಬ್ಬಳ್ಳಿ ಏರ್ ಕ್ವಾಲಿಟಿ ಇಂದು 68ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 88
  • ಮಂಗಳೂರು-122
  • ಮೈಸೂರು – 104
  • ಬೆಳಗಾವಿ – 50
  • ಕಲಬುರ್ಗಿ-93
  • ಶಿವಮೊಗ್ಗ –100
  • ಬಳ್ಳಾರಿ – 110
  • ಹುಬ್ಬಳ್ಳಿ- 68
  • ಉಡುಪಿ –110
  • ವಿಜಯಪುರ – 75

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ಇತಿಹಾಸದಲ್ಲಿ ಸಿಎಂ ಆದ ಚಿತ್ರರಂಗದ ತಾರೆಯರಿವರು – Kannada News | Vijay’s TVK: Can Dalapathi Redefine Tamil Nadu Politics Amid Election Counting?

ತಮಿಳುನಾಡು ಮತ್ತು ಸಿನಿಮಾ ರಾಜಕಾರಣಕ್ಕೆ ಬಿಡಿಸಲಾಗದ ನಂಟಿದೆ. ಬೆಳ್ಳಿಪರದೆಯ ಮೇಲೆ ಮಿಂಚಿದ ತಾರೆಗಳು ಜನನಾಯಕರಾಗಿ ಹೊರಹೊಮ್ಮುವ ಇಲ್ಲಿನ ಸಂಪ್ರದಾಯ ಈಗ ಹೊಸ ಹಂತಕ್ಕೆ ಬಂದು ನಿಂತಿದೆ. ರಾಜ್ಯದಲ್ಲಿ ಚುನಾವಣಾ ಕಣ ಸಿದ್ಧವಾಗಿ, ಮತ ಎಣಿಕೆಯ ಕ್ಷಣಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ, ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಪ್ರಭಾವ ಎಷ್ಟಿರಬಹುದು ಎಂಬ ಚರ್ಚೆ ಜೋರಾಗಿದೆ.

ಈ ಹಿಂದೆ ಎಂ.ಜಿ. ರಾಮಚಂದ್ರನ್ (MGR) ಅವರು ತಮ್ಮ ಸಿನೆಮಾ ವರ್ಚಸ್ಸಿನಿಂದ ಎಐಎಡಿಎಂಕೆ ಕಟ್ಟಿ ಸತತ ಮೂರು ಬಾರಿ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ್ದರು. ಅವರ ಹಾದಿಯಲ್ಲೇ ಬಂದ ಜಯಲಲಿತಾ ಅವರು ‘ಅಮ್ಮ’ನಾಗಿ ರಾಜ್ಯವಾಳಿದರು. ಚಿತ್ರಕಥೆಗಾರರಾಗಿದ್ದ ಎಂ. ಕರುಣಾನಿಧಿ ಅವರು ದಶಕಗಳ ಕಾಲ ಡಿಎಂಕೆ ಪಕ್ಷದ ಭದ್ರಕೋಟೆಯನ್ನು ಕಾಯ್ದುಕೊಂಡಿದ್ದರು. ಇದೀಗ ಮತ ಎಣಿಕೆಯ ಈ ಸಂದರ್ಭದಲ್ಲಿ ವಿಜಯ್ ಅವರು ಈ ದಿಗ್ಗಜರ ಸಾಲಿಗೆ ಸೇರಬಲ್ಲರೇ ಎಂಬುದು ಸದ್ಯದ ಕುತೂಹಲ.

ಬದಲಾದ ರಾಜಕೀಯ ಚಿತ್ರಣ:

ಈ ಹಿಂದೆ ‘ಕ್ಯಾಪ್ಟನ್’ ವಿಜಯಕಾಂತ್ ಅವರು ಡಿಎಂಡಿಕೆ ಮೂಲಕ ಅಲ್ಪಾವಧಿಯಲ್ಲಿ ವಿರೋಧ ಪಕ್ಷದ ಸ್ಥಾನಕ್ಕೇರಿ ಅಚ್ಚರಿ ಮೂಡಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಕಮಲ್ ಹಾಸನ್ ಅವರ ‘ಮಕ್ಕಳ್ ನೀಧಿ ಮೈಯಂ’ ಆಡಳಿತ ಸುಧಾರಣೆಯ ಮಾತನಾಡುತ್ತಾ ಮತದಾರರ ಗಮನ ಸೆಳೆದಿತ್ತು. ಆದರೆ, ದಳಪತಿ ವಿಜಯ್ ಅವರ ಎಂಟ್ರಿ ಇವೆಲ್ಲಕ್ಕಿಂತ ಭಿನ್ನವಾಗಿದೆ. ಅಪಾರ ಯುವ ಸಮೂಹವನ್ನು ಹೊಂದಿರುವ ವಿಜಯ್, ಚುನಾವಣಾ ಕಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದಾರೆ.

ಇದನ್ನೂ ಓದಿ: ಮತ ಎಣಿಕೆ ದಿನ ತಿರುಪತಿಯಲ್ಲಿ ತ್ರಿಷಾ; ವಿಜಯ್​​ಗೋಸ್ಕರ ವಿಶೇಷ ಪೂಜೆ?

ಮತ ಎಣಿಕೆಯತ್ತ ಎಲ್ಲರ ಚಿತ್ತ:

ಚುನಾವಣೋತ್ತರ ಸಮೀಕ್ಷೆಗಳು ಮತ್ತು ರಾಜಕೀಯ ವಿಶ್ಲೇಷಕರು ವಿಜಯ್ ಅವರ ಪ್ರಭಾವದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಒಂದು ಕಾಲದಲ್ಲಿ ಸಿನಿಮಾ ತಾರೆಗಳೇ ಆಳುತ್ತಿದ್ದ ತಮಿಳುನಾಡಿನಲ್ಲಿ, ಈಗಿನ ಮತದಾರರು ನಟ ವಿಜಯ್ ಅವರಿಗೆ ‘ಪವರ್’ ನೀಡುತ್ತಾರಾ? ಅಥವಾ ಹಳೆಯ ದ್ರಾವಿಡ ಪಕ್ಷಗಳೇ ಅಧಿಪತ್ಯ ಮುಂದುವರಿಸುತ್ತವೆಯೇ? ಎಂಬ ಪ್ರಶ್ನೆಗೆ ಮತ ಎಣಿಕೆಯ ಅಂತ್ಯದಲ್ಲಿ ಉತ್ತರ ಸಿಗಲಿದೆ. ವಿಜಯ್ ಅವರ ಈ ಹೊಸ ಇನ್ನಿಂಗ್ಸ್ ತಮಿಳು ರಾಜಕೀಯದ ಭವಿಷ್ಯವನ್ನು ನಿರ್ಧರಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

15,660 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್​ನ 3 ತಂಡಗಳು ಮಾರಾಟ..! – Kannada News | Mittals, Poonawalla Buy Rajasthan Royals

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ (IPL) ಮತ್ತೊಂದು ಫ್ರಾಂಚೈಸಿ ಮಾರಾಟವಾಗಿದೆ. ಈ ಬಾರಿ ಮಾರಾಟವಾಗಿದ್ದು ರಾಜಸ್ಥಾನ್ ರಾಯಲ್ಸ್​. ವಿಶ್ವದ ಖ್ಯಾತ ಉಕ್ಕು ಉದ್ಯಮಿ ಲಕ್ಷ್ಮಿ ಎನ್. ಮಿತ್ತಲ್ ನೇತೃತ್ವದ ಮಿತ್ತಲ್ ಕುಟುಂಬ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಅವರು ಜಂಟಿಯಾಗಿ ‘ರಾಜಸ್ಥಾನ ರಾಯಲ್ಸ್’ ತಂಡವನ್ನು ಭರ್ಜರಿ 15,660 ಕೋಟಿ ರೂಪಾಯಿ ($1.65 ಬಿಲಿಯನ್) ಮೊತ್ತಕ್ಕೆ ಖರೀದಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್​ ಫ್ರಾಂಚೈಸಿಯ ಹಿಂದಿನ ಮಾಲೀಕರು ಯಾರು?

  • ಮನೋಜ್ ಬಡಾಲೆ ಅವರ ನೇತೃತ್ವದ ಎಮರ್ಜಿಂಗ್ ಮೀಡಿಯಾ  ರಾಜಸ್ಥಾನ್ ರಾಯಲ್ಸ್​ ತಂಡದ ಶೇ. 65 ರಷ್ಟು ಪಾಲನ್ನು ಹೊಂದಿದ್ದರು.
  • ಅಮೆರಿಕ ಮೂಲದ ಈ ಹೂಡಿಕೆ ಸಂಸ್ಥೆ ರೆಡ್‌ಬರ್ಡ್ ಕ್ಯಾಪಿಟಲ್ ಪಾರ್ಟ್ನರ್ಸ್ 2021 ರಲ್ಲಿ ಆರ್​ಆರ್ ಫ್ರಾಂಚೈಸಿಯ ಶೇ. 15 ರಷ್ಟು ಪಾಲನ್ನು ಖರೀದಿಸಿದ್ದರು.
  • ಲಚ್ಲನ್ ಮರ್ಡೋಕ್ ಅವರು ಸಹ ತಂಡದಲ್ಲಿ ಗಮನಾರ್ಹ ಹೂಡಿಕೆ ಹೊಂದಿದ್ದರು.

ಈಗ ಯಾರು ಪಾಲು ಎಷ್ಟು?

ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಇದೀಗ ಮಿತ್ತಲ್ ಫ್ಯಾಮಿಲಿ ಹಾಗೂ ಆದಾರ್ ಪೂನಾವಾಲಾ ಜಂಟಿಯಾಗಿ ಖರೀದಿಸಿದ್ದಾರೆ. ಈ ಖರೀದಿಯೊಂದಿಗೆ ಇದೀಗ ಆರ್​ಆರ್​ ಫ್ರಾಂಚೈಸಿಯಲ್ಲಿ ಮೂವರು ಮಾಲೀಕರು ರಚನೆಯಾಗಿದ್ದಾರೆ. ಅವರೆಂದರೆ…

  • ಮಿತ್ತಲ್ ಕುಟುಂಬ: ಶೇಕಡಾ 75 ರಷ್ಟು ಪಾಲು ಹೊಂದಲಿದ್ದು, ಬಹುಮತದ ಮಾಲೀಕರಾಗಿ ಹೊರಹೊಮ್ಮಿದ್ದಾರೆ.
  • ಆದಾರ್ ಪೂನಾವಾಲಾ: ಸುಮಾರು ಶೇಕಡಾ 18 ರಷ್ಟು ಪಾಲನ್ನು ಖರೀದಿಸಿದ್ದಾರೆ.
  • ಮನೋಜ್ ಬಡಾಲೆ ಮತ್ತು ತಂಡ: ಈ ಹಿಂದಿನ ಮಾಲೀಕರಾದ ಮನೋಜ್ ಬಡಾಲೆ ಮತ್ತು ಅವರ ಹೂಡಿಕೆದಾರರು ಉಳಿದ ಶೇಕಡಾ 7 ರಷ್ಟು ಪಾಲನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

 3 ತಂಡಗಳು ಮಾರಾಟ!

ಈ ಮಾರಾಟ ಪ್ರಕ್ರಿಯೆಯು ಕೇವಲ ಐಪಿಎಲ್ ತಂಡಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ರಾಜಸ್ಥಾನ್ ರಾಯಲ್ಸ್ ಒಡೆತನದ ಉಳಿದ ಎರಡು ಟೀಮ್​ಗಳನ್ನು ಸೇರಿ ಹೊಸ ಒಪ್ಪಂದ ಮಾಡಲಾಗಿದೆ. ಅದರಂತೆ ಆರ್​ಆರ್ ಫ್ರಾಂಚೈಸಿ ಮಾರಾಟ ಮಾಡಿದ 3 ತಂಡಗಳು ಈ ಕೆಳಗಿನಂತಿದೆ…

  • ರಾಜಸ್ಥಾನ್ ರಾಯಲ್ಸ್​ (ಇಂಡಿಯನ್ ಪ್ರೀಮಿಯರ್ ಲೀಗ್)
  • ಬಾರ್ಬಡೋಸ್ ರಾಯಲ್ಸ್​ (ಕೆರಿಬಿಯನ್ ಪ್ರೀಮಿಯರ್ ಲೀಗ್, ವೆಸ್ಟ್ ಇಂಡೀಸ್)
  • ಪಾರ್ಲ್ ರಾಯಲ್ಸ್​ (ಸೌತ್ ಆಫ್ರಿಕಾ ಟಿ20 ಲೀಗ್​).

ಈ ಮೂರು ತಂಡಗಳನ್ನು ಲಕ್ಷ್ಮಿ ಎನ್. ಮಿತ್ತಲ್ ನೇತೃತ್ವದ ಮಿತ್ತಲ್ ಕುಟುಂಬ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಅವರು ಜಂಟಿಯಾಗಿ 15,660 ಕೋಟಿ ರೂ.ಗೆ ಖರೀದಿಸಿದ್ದಾರೆ.

ಮನೋಜ್ ಬಡಾಲೆ ಮುಂದುವರಿಕೆ:

ತಂಡದ ಸುಗಮ ನಿರ್ವಹಣೆ ಮತ್ತು ಸ್ಥಿರತೆಗಾಗಿ, ಪ್ರಸ್ತುತ ಮಾಲೀಕ ಮನೋಜ್ ಬಡಾಲೆ ಅವರು ಬೋರ್ಡ್ ಸದಸ್ಯರಾಗಿ ಮುಂದುವರಿಯಲಿದ್ದಾರೆ. ಹಳೆಯ ಮತ್ತು ಹೊಸ ಆಡಳಿತದ ನಡುವೆ ಅವರು ಕೊಂಡಿಯಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ.

ಮುಂದಿನ ಹಂತವೇನು?

ಈ ವ್ಯವಹಾರವು 2026 ರ ಮೂರನೇ ತ್ರೈಮಾಸಿಕದ ವೇಳೆಗೆ ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಇದಕ್ಕೆ ಬಿಸಿಸಿಐ (BCCI), ಐಪಿಎಲ್ ಆಡಳಿತ ಮಂಡಳಿ ಮತ್ತು ಭಾರತೀಯ ಸ್ಪರ್ಧಾ ಆಯೋಗದ (CCI) ಅಂತಿಮ ಅನುಮೋದನೆ ಬಾಕಿ ಇದೆ. ಅದರಂತೆ ಐಪಿಎಲ್ 2027 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಹೊಸ ಮಾಲೀಕರ ಅಧೀನದಲ್ಲಿ ಕಣಕ್ಕಿಳಿಯಲಿದೆ.

ಆರ್​ಸಿಬಿ ಹೆಸರಿನಲ್ಲೇ ಉಳಿದ ದಾಖಲೆ:

ಐಪಿಎಲ್​ ಇತಿಹಾಸದಲ್ಲೇ ಅತೀ ದುಬಾರಿ ಮೊತ್ತಕ್ಕೆ ಮಾರಾಟವಾದ ಫ್ರಾಂಚೈಸಿ ಎಂಬ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದೆ.

ಕೆಲ ತಿಂಗಳುಗಳ ಹಿಂದೆಯಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ (Aditya Birla Group) ನೇತೃತ್ವದ ಒಕ್ಕೂಟವು ಸುಮಾರು 16,660 ಕೋಟಿ ರೂಪಾಯಿಗಳಿಗೆ ($1.78 ಬಿಲಿಯನ್) ಖರೀದಿಸಿತ್ತು. ಈ ಒಕ್ಕೂಟದಲ್ಲಿ ಟೈಮ್ಸ್ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲ್ಯಾಕ್‌ಸ್ಟೋನ್ ಕಂಪನಿಗಳು ಪಾಲುದಾರಿಕೆಯನ್ನು ಹೊಂದಿವೆ.

ಇದನ್ನೂ ಓದಿ: IPL 2026: RCB ತಂಡದ ಪ್ಲೇಆಫ್ ಲೆಕ್ಕಾಚಾರ ಹೀಗಿದೆ

ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾದ ಫ್ರಾಂಚೈಸಿ ಎಂಬ ದಾಖಲೆಯನ್ನು ಆರ್​ಸಿಬಿ ನಿರ್ಮಿಸಿತ್ತು. ಇದೀಗ 15,660 ಕೋಟಿ ರೂ.ಗೆ ರಾಜಸ್ಥಾನf ರಾಯಲ್ಸ್​ನ ಫ್ರಾಂಚೈಸಿಯ ತಂಡಗಳನ್ನು ಮಾರಾಟ ಮಾಡಲಾಗಿದೆ.

Source link

ಮತ ಎಣಿಕೆ ದಿನ ತಿರುಪತಿಯಲ್ಲಿ ತ್ರಿಷಾ; ವಿಜಯ್​​ಗೋಸ್ಕರ ವಿಶೇಷ ಪೂಜೆ? – Kannada News | Trisha Krishnan Visits Tirupati on TN Election Result Day; Special Pooja for Thalapathy Vijay?

ದಳಪತಿ ವಿಜಯ್​​ಗೆ ಇಂದು (ಮೇ 4) ಪ್ರಮುಖ ದಿನ. ಏಕೆಂದರೆ, ಇಂದು ತಮಿಳುನಾಡು ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ. ವಿಜಯ್ ಅವರು ಟಿವಿಕೆ ಪಕ್ಷದ ಮೂಲಕ ಚುನಾವಣೆ ಸ್ಪರ್ಧಿಸಿದ್ದಾರೆ. ಮತ ಎಣಿಕೆ ಆರಂಭಕ್ಕೂ ಮೊದಲು ತ್ರಿಷಾ ಅವರು ತಿರುಪತಿಗೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ವಿಶೇಷ ಪೂಜೆ ದಳಪತಿ ವಿಜಯ್​​ಗೋಸ್ಕರವೇ ಎನ್ನುವ ಪ್ರಶ್ನೆ ಮೂಡಿದೆ. ಈ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಸಾಹಸವೋ ಅಥವಾ ಸಾವಿನೊಂದಿಗೆ ಆಟವೋ, ಟ್ರಾಫಿಕ್ ಎಂದು ಟ್ರಕ್​ ಅಡಿ ಗಾಡಿ ಸಮೇತ ನುಗ್ಗುತ್ತಿರುವ ಬೈಕ್ ಸವಾರರು – Kannada News | Risky Bike Maneuver Near Moving Truck Raises Road Safety Concerns

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಲು ಮತ್ತು ಕ್ಷಣಿಕ ಸಾಹಸ ಪ್ರದರ್ಶಿಸಲು ಜನರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಚಲಿಸುವ ಬೃಹತ್ ವಾಹನಗಳ ಬಳಿ ಬೈಕ್ ಸವಾರರು ಮಾಡುವ ಇಂತಹ ಅಪಾಯಕಾರಿ ಸಾಹಸಗಳು ಮತ್ತು ನಂತರ ಚಾಲಕರ ಮೇಲೆ ಗೂಬೆ ಕೂರಿಸುವ ಪ್ರವೃತ್ತಿಯ ಕುರಿತಾದ ವಿಡಿಯೋ ಇಲ್ಲಿದೆ. ರಸ್ತೆ ಸುರಕ್ಷತೆಯ ನಿಯಮಗಳನ್ನು ಗಾಳಿಗೆ ತೂರಿ, ಚಲಿಸುವ ಟ್ರಕ್‌ಗಳ ಅಡಿಯಲ್ಲಿ ಅಥವಾ ಅತ್ಯಂತ ಸಮೀಪದಲ್ಲಿ ಬೈಕ್ ನುಗ್ಗಿಸುವ ‘ಸ್ಟಂಟ್’ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಘಟನೆಗಳು ಕೇವಲ ಅಪಘಾತಗಳಿಗೆ ಕಾರಣವಾಗುವುದಲ್ಲದೆ,ಟ್ರಕ್ ಚಾಲಕರ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿವೆ. ಟ್ರಾಫಿಕ್ ಇದೆ ಎಂದು ಬೈಕ್ ಸವಾರರು ಟ್ರಕ್ ಅಡಿ ಗಾಡಿಯೊಂದಿಗೆ ನುಸುಳುತ್ತಿರುವ ವಿಡಿಯೋ ವೈರಲ್ ಆಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

‘ಸೂರ್ಯವಂಶ’ ಸ್ಟೈಲ್​​ನಲ್ಲಿ ಬಂತು ‘ಕ್ವಾಟ್ಲೆ ಕಿಚನ್ 2’ ಪ್ರೋಮೋ – Kannada News | Kwatle Kitchen 2 Promo Goes Viral! Colors Kannada Show Returns in Suryavamsha Style

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಿಭಿನ್ನ ಹಾಗೂ ಹಾಸ್ಯಭರಿತ ಅಡುಗೆ ಕಾರ್ಯಕ್ರಮ ‘ಕ್ವಾಟ್ಲೆ ಕಿಚನ್’ ಈಗ ಮತ್ತೆ ಸುದ್ದಿಯಲ್ಲಿದೆ. ಈ ಹಿಂದೆ ವೀಕ್ಷಕರಿಗೆ ಭರಪೂರ ಮನರಂಜನೆ ನೀಡಿದ್ದ ಈ ಶೋ, ಇದೀಗ ಹೊಸ ರೂಪದಲ್ಲಿ ಹಾಗೂ ಹೊಸ ಸೀಸನ್‌ನೊಂದಿಗೆ ಮರಳಿ ಬರಲು ರೆಡಿ ಆಗಿದೆ. ಇದರ ಪ್ರೋಮೋ ಗಮನ ಸೆಳೆದಿದೆ. ‘ಸೂರ್ಯವಂಶ’ ಸ್ಟೈಲ್​​​ನಲ್ಲಿ ಪ್ರೋಮೋ ಮೂಡಿ ಬಂದಿದೆ.

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ಗಮನ ಸೆಳೆದಿದೆ. ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಹಾಗೂ ಹೊಸ ಆರಂಭದ ಮುನ್ಸೂಚನೆ ನೀಡುವಂತೆ ಈ ಪೋಸ್ಟ್ ಕಂಡುಬರುತ್ತಿದೆ. ‘ಕ್ವಾಟ್ಲೆ ಕಿಚನ್’ ಎಂದರೆ ಕೇವಲ ಅಡುಗೆಯಷ್ಟೇ ಅಲ್ಲ, ಅಲ್ಲಿನ ಕಿಚಾಯಿಸುವಿಕೆ, ಹಾಸ್ಯದ ತುಣುಕುಗಳು ಮತ್ತು ಅತಿಥಿಗಳ ಕಾಲೆಳೆಯುವ ಗುಣ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಅದು ಈಗಲೂ ಮುಂದುವರಿಯಲಿದೆ.

ಇದನ್ನೂ ಓದಿ: ಮಾರ್ಚ್​​9ರಿಂದ ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ರಾಣಿ’

ಆಲೂಗಡ್ಡೆ -ಬೆಂಡೆಕಾಯಿ ವಿವಾಹ ಆಗುತ್ತದೆ. ಆ ಬಳಿಕ ಆಲೂಗಡ್ಡೆ ಅಪ್ಪ ನವಜೋಡಿಗಳಾದ ಆಲೂಗಡ್ಡೆ-ಬೆಂಡೆಕಾಯಿಯನ್ನು ಹೊರಹಾಕುತ್ತಾರೆ. ಆಗ ಈ ಜೋಡಿ ತೆರಳೋದು ಕ್ವಾಟ್ಲೆ ಕಿಚನ್​ಗೆ.

ಈ ಹಿಂದೆ ಪ್ರಸಾರವಾದಾಗ, ಸಿನೆಮಾ ತಾರೆಯರು ಹಾಗೂ ಕಿರುತೆರೆಯ ಕಲಾವಿದರು ಈ ಶೋನಲ್ಲಿ ಭಾಗವಹಿಸಿ ತಮ್ಮ ಅಡುಗೆ ಕೌಶಲ್ಯದ ಜೊತೆಗೆ ವೈಯಕ್ತಿಕ ಜೀವನದ ತಮಾಷೆಯ ಪ್ರಸಂಗಗಳನ್ನು ಹಂಚಿಕೊಳ್ಳುತ್ತಿದ್ದರು. ಅಡುಗೆ ಮಾಡುವ ಗಡಿಬಿಡಿಯಲ್ಲಿ ನಡೆಯುವ ಎಡವಟ್ಟುಗಳು ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದವು.
ಪ್ರಸ್ತುತ ವೈರಲ್ ಆಗಿರುವ ವಿಡಿಯೋದಲ್ಲಿ ಅದೇ ಹಳೆಯ ಲವಲವಿಕೆ ಕಂಡುಬರುತ್ತಿದ್ದು, ಕಮೆಂಟ್ ವಿಭಾಗದಲ್ಲಿ ಅಭಿಮಾನಿಗಳು “ಬೇಗ ಈ ಶೋ ಶುರು ಮಾಡಿ, ಕಾಲೆಳೆಯುವ ಆಟ ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ಬರೆದುಕೊಳ್ಳುತ್ತಿದ್ದಾರೆ. ಪ್ರಸಾರ ದಿನಾಂಕ ವಾಹಿನಿಯಿಂದ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version