ಮೂರೂವರೆ ಲಕ್ಷ ಕೋಟಿ ರೂ ಮೌಲ್ಯದ ಕ್ಷಿಪಣಿ, ಯುದ್ಧ ವಿಮಾನಗಳ ಖರೀದಿಗೆ ಅನುಮೋದನೆ – Kannada News | India to buy fighter jets missiles and other war items worth over rs 3 6 crore
ನವದೆಹಲಿ, ಫೆಬ್ರುವರಿ 13: ರಷ್ಯಾದಿಂದ ಸುಮಾರು 10,000 ಕೋಟಿ ರೂ ಮೌಲ್ಯದ 288 ಎಸ್-400 ಕ್ಷಿಪಣಿಗಳನ್ನು ಖರೀದಿಸಲು ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಅನುಮೋದನೆ ನೀಡಿದೆ. ಮೊನ್ನೆಯಷ್ಟೇ ಸರ್ಕಾರವು 114 ರಫೇಲ್ ಯುದ್ಧವಿಮಾನಗಳನ್ನು ಖರೀದಿಸುತ್ತಿರುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಇದೀಗ 3.6 ಲಕ್ಷ ಕೋಟಿ ರೂ ಮೌಲ್ಯದ ವಿವಿಧ ಯುದ್ಧ ಸಾಮಗ್ರಿಗಳನ್ನು ಭಾರತ ಖರೀದಿಸಲು ಹೊರಟಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಡಿಎಸಿ ನಿನ್ನೆ ಗುರುವಾರ (ಫೆ. 12) ವಿವಿಧ ಖರೀದಿಗಳಿಗೆ ಎಒಎನ್ (ಅವಶ್ಯಕವೆಂದು ಮಾನ್ಯತೆ)…